ಒಬ್ಬ ಪೋಲಿಸ್ ಕಾನ್ಸ್ಟೇಬಲ್ ರ ಅಸಹಾಯಕತೆ,ವ್ಯಥೇಯ ನುಡಿ.
“ನನ್ನ ಹೆಂಡತಿಯ ರಕ್ಷಣೆಯನ್ನು ನನ್ನ ಕಣ್ಣ ಮುಂದೇನೆ ನಾನೊಬ್ಬ ಪೋಲಿಸ್ ಪೇದೆಯಾಗಿ ಪೋಲಿಸ್ ಪೇದೆ ಮಾಡಿಕೊಳ್ಳುವಲ್ಲಿ ಸಾದ್ಯವಾಗಲ್ಲಿಲ್ಲವೆಂದಾರೆ ಇನ್ನೂ ದೇಶ ರಕ್ಷಣೆಗೆ ಪಣ ತೊಡಲು ನನ್ನಿಂದ ಅಥವಾ ನನ್ನಂತಾ ಆರಕ್ಷಕ ಪಡೆಗೆ ಸಾದ್ಯವಾಗ ಬಲ್ಲದೇ ? ಇನ್ನು ಸಾಮಾನ್ಯ ನಾಗರಿಕರ ಕತೆ ಎಂತದ್ದು ?”ಎಂಬೀ ಅಸಹಾಯಕತೆ ಮಾತು ತನ್ನ ಹಿರಿಯ ಪೋಲಿಸ್ ಅಧಿಕಾರಿ ಜೊತೆ ಪೋನ್ ನಲ್ಲಿ ನಡೆಸಿದ ವೈರಲ್ ಸಂದೇಶವನ್ನು ಒಮ್ಮೆ ಆಲಿಸಿದರೆ ಎಂತಹ ಕಚಡಾ ರಾಜಕೀಯ ವ್ಯವಸ್ತೆ ಹಳ್ಳಿ- ಹಳ್ಳಿ ಗಲ್ಲಿ- ಗಲ್ಲಿ ಗಳಲ್ಲಿ ನಮ್ಮನ್ನು ಆಳುತ್ತಿದೆ ಎಂಬುದು ದಿಟವಾಗುತ್ತದೆ .
ಹೌದು ನಾ ಹೇಳ ಹೊರಟಿರುವ ವಿಷಯ ಬೇರೆಯಲ್ಲಿಯದ್ದೂ ಅಲ್ಲ , ಮೊನ್ನೆ ಮೊನ್ನೆ ನಮ್ಮ ಪರಿಸರದ ಘಟನೆ ಬಗ್ಗೆ ..ಉಡುಪಿ ಯಿಂದ ಅನತಿ ದೂರದಲ್ಲಿರುವ ಮಲ್ಪೆ ಪೋಲಿಸ್ ಥಾಣಾ ವ್ಯಾಪ್ತಿಗೆ ಒಳಪಡುವ ಒಂದು ಪ್ರದೇಶದಲ್ಲಿ ನಡೆದ ಘಟನೆ ... ಒಂತರ ವಿಚಿತ್ರ ,ಸಚಿತ್ರ ಥೇಟ್ ಸಿನಿಮಾ ಶೈಲಿ ...!!
ಮಲ್ಪೆಯ ಪೋಲಿಸ್ ಕಾನ್ಷ್ಟೇಬಲ್ ಒಬ್ಬರು ತಮ್ಮ ಮಡದಿಯ ಜೊತೆಗೆ ಬೈಕ್ ನಲ್ಲಿ ಆಸ್ಪತ್ರೆಗೆ ತೆರಳಿ ಮಡದಿಯ ಆರೋಗ್ಯ ಪರೀಕ್ಷಾ ಕಾರ್ಯ ಮುಗಿದ ಬಳಿಕ ಅಲ್ಲಿಂದ ತುಸು ದೂರದಲ್ಲಿರುವ ಅಂಗಡಿ ಒಂದರಲ್ಲಿ ತಮಗೆ ಅಗತ್ಯವಿರುವ ಸಾಮಾಗ್ರಿಯನ್ನು ಖರಿದಿಸುವುದರಲ್ಲಿ ಆ ಪೋಲಿಸ್ ಪೇದೆ ಮಗ್ನರಾಗಿರುತ್ತಾರೆ . ಅಲ್ಲೇ ಪಕ್ಕದಲ್ಲಿ ನಿಂತಿದ್ದ ಆತನ ಪತ್ನಿಗೆ ಒಂದಿಬ್ಬರು ಕಂಠ ಪೂರ್ತಿ ಕುಡಿದು ಕಿರುಕುಳ ಕೊಡಲು ಪ್ರಾರಂಬಿಸುತ್ತಾರೆ . ಸಾಯ್ಲಿ ಎಂದು ಹಿಡಿಶಾಪ ಹಾಕಿ ಸುಮ್ಮನಾದ ಆಕೆ ಗಂಡನಲ್ಲಿ ಇದ್ಯಾವುದನ್ನೂ ಹೇಳದೇ ಇಬ್ಬರು ಬೈಕ್ ಏರಿ ಹೊರಡುತ್ತಾರೆ . ತಮ್ಮ ಮನಸ್ಸಿನ ವಾಂಚೆ ಯನ್ನು ಬಿಡದ ಆ ಕುಡುಕ ಕಾಮುಕರು , ಇವರ ಬೈಕ್ ನನ್ನು ಪೋಲೊ ಮಾಡುತ್ತಾರೆ . ಬೈಕ್ ನ್ನು ಹತ್ತಿರ-ಹತ್ತಿರ ತಂದು ಮತ್ತಷ್ಟು ಕಿರುಕುಳ ಕೊಡುವುದಕ್ಕೆ ಅಣಿ ಯಾಗುತ್ತಾರೆ , ಬೈಕ್ ನ ಹಿಂಬದಿ ಸವಾರ ಒಂದು ಕಲ್ಲನ್ನು ಎತ್ತಿ ಪೋಲಿಸ್ ಪೇದೆಯ ಹೆಂಡತಿ ಮೇಲೆ ಎಸೆಯುತ್ತಾನೋ ಆಗ ಕೋಪ ಗೊಂಡ ಮಹಿಳೆ ತನ್ನ ಪತಿಯಲ್ಲಿ ಎಲ್ಲಾವನ್ನೂ ಉರ್ಸುರುತ್ತಾಳೆ ,ಈ ಸಂದರ್ಭದಲ್ಲಿ ಯಾರೇ ಆದರೂ ಆ ಕೆಲಸವನ್ನು ಮಾಡಿಯೇ ತೀರುತ್ತಾರೆ ಕೋಪ ನೆತ್ತಿಗೆ ಏರದೆ ಇರದು .ಅಂತೆಯೇ ತಡಮಾಡದ ಪೋಲಿಸ್ ಪೇದೆ ಬೈಕ್ ಸೈಡ್ ಗೆ ಸರಿಸಿ , ಅವರಿಬ್ಬರಿಗೂ ಎರಡು ಕಪಾಳಕ್ಕೆ ಬಾರಿಸುತ್ತಾರೆ ...ಜನಜಂಗುಳಿ ಒಟ್ಟಾಗುತ್ತದೆ .. ಇಷ್ಟಕ್ಕೆ ಬಿಡ ಬೇಡಿ ಸರ್ ಅವರನ್ನು ಒದ್ದು ಒಳಗೆ ಹಾಕಿ ಎಂದು ನೆರದಿದ್ದವರ ಅಭಿಪ್ರಾಯದಂತೆ ಕೂಡಲೇ ಪೋಲಿಸ್ ಟಾಣೆಗೆ ಪೋನ್ ಹಾಯಿಸಿ ಅವರನ್ನು ತಾಣೆಗೆ ಕರೆದೊಯ್ಯುಲಾಗುತ್ತದೆ . . ಮಹಿಳೆಯ ದೂರಿನ ಅನ್ವಯ ದೂರನ್ನು ದಖಲಿಸಿಕೊಂಡು ಅಲ್ಲಿ ಇನ್ನೆರಡು ಬಿಸಿ ಬಸಿ ಹೋಳಿಗೆ ಕೊಟ್ಟು ಬುದ್ದಿವಾದ ಹೇಳಿ ಫಟಿಂಗ ರನ್ನು ಮನೆಗೆ ಅವರನ್ನು ಕಳಿಸಲಾಗುತ್ತದೆ .
ನಂತರ ನಡೆದಿದ್ದೇ ಹೈಡ್ರಾಮ !!!
ಮಹಿಳೆಯನ್ನು ಕಿಚಾಯಿಸಿ ಪಬ್ಲಿಕ್ ಗಳಿಂದ ಉಗಿಸಿ ಕೊಂಡು ಪೋಲಿಸ್ ಪೇದೆಯಿಂದ ಏಟು ತಿಂದ ಮಾಹಾನುಭಾವರು ಉಡುಪಿ ಶಾಸಕ ,ಮಂತ್ರಿ ಪ್ರಮೋದ್ ಮದ್ವ್ರರಾಜ್ ರವರ ಕಾರ್ಖಾನೆಯಲ್ಲಿ ಟ್ಯಾಕ್ಟರ್ ಚಾಲಕರಂತೆ . ಅಂದ ಮಾತ್ರಕ್ಕೆ ಸರಳವಾಗಿ ಅರ್ತೈಸಿ ಕೊಂಡು ಬಿಡಬಹುದು ಇವರ ಆಟೋಟೋಪಕ್ಕೆ ಹಿಂಬದಿ ಪ್ರೇರಣಾ ಶಕ್ತಿ ಇನ್ನೇನು ಬೇಕು ? ಚುನಾವಾಣ ಪ್ರಚಾರ ಮುಗಿಸಿ ನಿವಾಸಕ್ಕೆ ಮದ್ವರಾಜ್ ಬಂದು ಒಂದು ದಿನದ ಬಳಿಕ ನಡೆದ ವಿಷಯ ಅವರ ಕಿವಿಗೆ ಸೋಕುತ್ತದೆ .
ಮಹಿಳೆಗೆ ಆದ ಅನ್ಯಾಯದ ವಿರುದ್ದ ಕ್ರಮ ಕೈಗೊಳ್ಳ ಬೇಕಿದ್ದ ಮಾನ್ಯ ಸಚಿವರು,ತಮ್ಮ ಕೆಲಸ ಆಳುಗಳು ಮಾಡಿದ್ದೆ ಸರಿ ಎಂಬ ನಿಲುವಿಗೆ ಬದ್ದರಾಗುತ್ತಾರೆ , ಅವರ ರಕ್ಷಣೆ ನಿಲ್ಲುವುದು ಬಿಡಿ ,ಪೋಲಿಸ್ ಪೇದೆ ಮಾಡಿದ್ದು ಸರಿ ಅಲ್ಲ ಎಂದು ತನ್ನ ಪವರ್ ಬಳಸಿ ಪೇದೆಯನ್ನು ವರ್ಗಾವಣೆಗೆ ಮಾಡುವುದಕ್ಕೆ ಮು೦ದಾಗುತ್ತಾರೆ ..
ನೆಡೆದ ಘಟನೆಯು ಸ್ಥಳಿಯರಲ್ಲಿ ಯಾರದ್ದು ತಪ್ಪು ಸರಿ ಎಂಬ ಜಡ್ಜ್ಮೆಂಟ್ ಇದ್ದರೂ ,ಮಂತ್ರಿ ಪಟಾಲಂ ಕಡೆಯವರು ಜನರಿಗೆ ಮಂಕು ಬೂದಿ ಅರಚಿ ಇದರಲ್ಲಿ ಪೋಲಿಸ್ನದ್ದು ಪೂರ್ಣ ತಪ್ಪು ಎಂದು ತೋರಿಸೋಲ್ಕರ ಒಂದು ನಾಟಕವನ್ನು ಹೂಡುತ್ತದೆ .
ಎಂದಿಂತೆ ಅರಾಮಾಗಿ ಬೈಕ್ ನಲ್ಲಿ ಸುತ್ತಾಡಿ ಮಧ್ಯೆ ಹೀರಿ ಇತರರಿಗೆ ಕಿಚಾಯಿಸುವ ತಮ್ಮ ಹವ್ಯಾಸ ವನ್ನು ಒತ್ತೆಯಲ್ಲಿಟ್ಟು ಕೊ೦ ಡಿದ್ದ ಫಟಿಂಗರು ,ಒಂದು ದಿನದ ನಂತರ ಆಸ್ಪತ್ರೆಗೆ ದಾಖಲಾಗುತ್ತಾರೆ .. ಪೊಲೀಸರು ಹೊಡೆದದ ಏಟು ತೀವ್ರ ಸ್ವರೂಪ ತಾಳಿ ಸೇರಿಯಸ್ ಆಗಿದೆ ಎಂದು ಜೊತೆಗೆ ಪೋಲಿಸ್ ದೂರು ದಾಖಲಾಗುತ್ತದೆ . ..ಸಿನಿಯರ್ ಪೋಲಿಸ್ ಅಧಿಕಾರಿಯೊಬ್ಬರು ಈ ಪೇದೆಗೆ ಕರೆ ಮಾಡಿ ನೀನು 15 ದಿನದ ಮಟ್ಟಿಗೆ ರಜೆಗೆ ಊರಿಗೆ ತೆರಳು ಇಲ್ಲದಿದ್ದರೆ ನಿನಗೆ ಬೇರೆಡೆ ವರ್ಗಾವಣೆ ಮಾಡ ಬೇಕೆಂಬ ಒತ್ತಡ ವಿದೆ ಎಂಬ ಮಾತು ಕೇಳಿ ಆತನಿಗೆ ಒಮ್ಮೆಲೇ ಬೆಚ್ಚಿಬೀಳಿಸಿತ್ತಾದರೂ, ಇದು ಇದೇ ಸ್ವರೂಪ ತಾಳುತ್ತದೆ ಎಂಬ ಅರಿವು ಅವರಿಗೆ ಮೊದಲೇ ಮನಸಿನಲ್ಲಿ ಮನೆ ಮಾಡಿತ್ತು . ಏನು ಮಾಡೋಣ ಹೇಳಿ ಇಂತಹ ಹೇಸಿಗೆ ಪ್ರಜಾಪ್ರಬುತ್ವದಲ್ಲಿ ನಾವಿದ್ದೇವೆ ಎಂಬ ಕಡು ಸತ್ಯವನ್ನು ಬಗಲಲ್ಲಿ ಇಟ್ಟು ಕೊಳ್ಳಲೇ ಬೇಕು . ದುರ೦ತವಲ್ಲದೇ ಮತ್ತಿನ್ನೇನು ? ಒಬ್ಬ ಪೋಲಿಸ್ ಅಧಿಕಾರಿಗೆ ತನ್ನ ಹೆಂಡತಿಗೆ ರಕ್ಷಣೆ ಕೊಟ್ಟು ,ಅನ್ಯಾಯ ವಿರುದ್ದ ಹೋರಾಡಿ ನ್ಯಾಯ ಬದಿಗಿರಲಿ ಸ್ವತ: ತಾನೇ ಶಿಕ್ಷೆಯನ್ನು ಅನುಭವಿಸಬೇಕಾದ ಸ್ತಿತಿ ಬಂತೆಂದರೆ ಇನ್ನೂ ಸಾಮಾನ್ಯ ಜನರ ಗತಿ ಏನು ? ಮುಂದೆ ಒಂದು ದಿನ ತಮ್ಮತಮ್ಮ ಮನೆಯ ಹೆಣ್ಮಕ್ಕನ್ನು ಎತ್ತಾಕಿ ಕೊಂಡು ಹೋದರೂ ಅಚ್ಚರಿ ಇಲ್ಲ...! ಇಂತವರುಗಳಿಗೆ ಸಾಥ್ ನೀಡುವರಿಗೆ ಹಾಗೂ ಇದರಲ್ಲಿ ಬಾಗಿಯಾಗುವವರಿಗೆ ಆ ಕ್ಷಣದಲ್ಲಿ ಯಾವುದೇ ಶಿಕ್ಷೆ ನೀಡುವ ಸಿನಿಮಾಗಳಂತೆ ಒಬ್ಬ ನಾಯಕ ಬರಲು ಅಸಾದ್ಯವಾದರೂ ,ಮುಂದೊಂದು ದಿನ ಇವರುಗಳಿಗೂ ಈ ಪರಿಸ್ತಿತಿ ಬಾರದೇ ಇರದು ಪರಿಣಾಮ ಖಂಡಿತವಾಗಿಯೂ ಎದುರಿಸಬೇಕಾಗುತ್ತದೆ .. ಅಧಿಕಾರ ಹಣ ಯಾವುದೂ ಶಾಶ್ವತ ಅಲ್ಲ ಅಲ್ಲವೇ ?!.
ಮಂಗಳವಾರ, ಜೂನ್ 20, 2017
ಸೋಮವಾರ, ಜನವರಿ 9, 2017
ಬ್ಲಾಕ್ ಮೆಲ್ ಎಂಬ ಕರಾಳ ದಂಧೆ
“ಹನಿಟ್ರ್ಯಾಪ್“.. ಸಿಂಪಲ್ಲಾಗಿ ಬ್ಲಾಕ್ ಮೆಲ್ ಅಂತ ಹೇಳಬಹುದು ಇದೊಂದು ಅಗ್ಗದ ರೀತಿಯಲ್ಲಿ ದುಡ್ಡು ಮಾಡಲು ಹೊರಟಿರುವವರ ದಂಧೆ .. ಇದಕ್ಕೆ ಸಾಕಷ್ಟು ವರ್ಷಗಳ ಇತಿಹಾಸ ಇದೆ ..ಇವತ್ತಿನ ನಿನ್ನೆಯ ವಿಚಾರವಂತೂ ಅಲ್ಲವೇ ಅಲ್ಲ .. ಇದರಲ್ಲಿ ಬಲಿಪಶು ವಾಗುವವರು ಹಾಗೂ ಈ ದಂಧೆಯ ಸೂತ್ರಧಾರರು ಅಷ್ಟೇ ಬಲಾಧ್ಯರು.
ಯಾರು ಯಾರು ಈ ಬ್ಲಾಕ್ ಮೇಲ್ ಪೆಡ೦ಬೂತಕ್ಕೆ ಒಳಗಾಗುತ್ತಾರೆ ?
ಸೆಲೆಬ್ರಿಟಿಗಳು , ರಾಜಕಾರಣಿಗಳು , ಪ್ರೀತಿ ಪ್ರೇಮ ಹೆಚ್ಚೀಕೆ ಪುಟಾಣಿ ಮಕ್ಕಳು ಸಹಾ ಅವರವರ ವಿಕ್ನೆಸ್ ಹಾಗೂ ಲಾಭಾಂಶ ಗೊಸ್ಕರ ಬ್ಲಾಕ್ ಮೆಲ್ ಗೆ ಒಳಪಡುತ್ತಾರೆ,
ಬ್ಲಾಕ್ ಮೆಲ್ ನ ಉದಯ ಹಾಗೂ ಧಂದೆಯ ಕಿರು ನೋಟ ನನ್ನ ಕಲ್ಪನೆಯಲ್ಲಿ :
ಈ ಧಂದೆ ಪ್ರಾರ೦ಭವಾಗಿದ್ದೆ ಹೀಗೆ .,ಅಲ್ಲೂ ನಡೆಯ ಬಾರದ ಘಟನೆ ಸಮಾಜದ ಸಮುಖದಲ್ಲಿ ರಾರಾಜಿಸಬಾರೆಂದು ಆ ವ್ಯಕ್ತಿ ಕಣ್ಣಾರೆ ಕಂಡ ವ್ಯಕ್ತಿಗೆ ಯಾವೊದೋ ಒಂದು ರೂಪದಲ್ಲಿ ಆಸೆ ತೋರಿಸಿದಾಗ, ಆ ಆಸೆ ಯೇ ಜೀವನದ ಕುಲ ಕಸಬು ಆಗಿ ನಿರ್ಮಾಣ ಗೊಂಡು ಒಂದು ಹಂತದಲ್ಲಿ ಇದರ ಕಬಂದ ಬಾಹು ದೊಡ್ಡ ಧಂಧೆಯಾಗಿ ಮಾರ್ಪಾಡು ಗೊಂಡಿದೆ ಎನ್ನ ಬಹುದೇನೋ ?!ಎಲ್ಲೋ ಆಗಾಗ ಅಲ್ಲೋ ಇಲ್ಲೋ ಕದ್ದು ಮುಚ್ಚಿ ನಡಿತಾ ಇದ್ದ ವಿಚಾರ ಬಹಿರಂಗವಾಗದೆ ಇರಲಿ ಅಂತ ಸಂತ್ರಸ್ತರು ಸ್ವಲ್ಪ ಯಾವೊದೋ ವಿಧದ ಲಾಬಾಂಶವನ್ನು ತೊರಿಸಿ ಆಲ್ಲಿಗೆ ಆ ಕಥೆಗೆ ಇತಿಶ್ರೀ ಹಾಡುತ್ತಿದ್ದರು .. ಅದನ್ನೇ ಬಂಡವಾಳ ಮಾಡಿಕೊಂಡ ಮಹಾನ್ ಪಟ0ಗರು ಅದನ್ನು ಒಂದು ಉದ್ಯೋಗವನ್ನಾಗಿ ,ದಂಧೆಯನ್ನಾಗಿ ಮಾಡಿರುವದು ವಿಚಿತ್ರವಾದರೂ ಸತ್ಯ ! ಹೆಚ್ಚಾಗಿ ಕೆಲವು ಟಿವಿ ಪತ್ರಿಕಾ ಮಾಧ್ಯಗಳೂ ಸಹಾ ಅಗ್ರ ಪಂತ್ಯಯಲ್ಲಿ ರಾರಾಜಿಸುತ್ತಿರುವುದು ಸುಳ್ಳಲ್ಲ .!
ಬ್ಲಾಕ್ ಮೆಲ್ ವಿಚಾರವನ್ನು ಒಳಗೊಂಡ ಸಿನಿಮಾ ಯಾರಿಗೆ ಪೂರಕ ವಾಗಿದೆ ?
ಇನ್ನು ಸಾಕಷ್ಟು ಸಿನಿಮಾಗಳು ಈ ಬ್ಲಾಕ್ ಮೇಲ್ ಗೆ ಸಂಬಂದ ಪಟ್ಟಂತೆ ಅದರ ನೈಜ ಒಳ ಹೂರಣ ತುಡಿತ ಮಿಡಿತಗಳ ಕಥಾ ಸಾರಾಂಶವನ್ನು ಇಟ್ಟು ತೆರೆ ಕಂಡಿವೆ .. ಚಿತ್ರದಲ್ಲಿ ಖಳ ನಾಯಕ ಮಾಡುವ ತಂತ್ರ ,ನಾಯಕನ ಕೌಶಲ್ಯ ಮುಂತಾದವುಗಳು ಇದರಲ್ಲಿ ಮೂಡಿ ಬರುತ್ತವೆ ..ಇದು ಸಮಾಜಕ್ಕೆ ಎಷ್ಟು ಉಪಯುಕ್ತವಾಗಿದೆ ..ಎಷ್ಟು ಪರಿಣಾಮಕಾರಿಯಾಗಿದೆ ಎಂಬ ವಿಚಾರ ಬದಿಗಿರಿಲಿ ಇದು ಯಾರಿಗೆ ಉಪಕಾರಿ ಆಗಿದ್ಯೋ ,ಪ್ರಚೋದನಕಾರಿ ಆಗಿದೆಯೋ ಗೊತ್ತಿಲ್ಲ .. ಅಂತ ಸಿನಿಮಾಗಳಿಂದ ಎಚ್ಚೆತ್ತ ಸಂತ್ರಸ್ತರಿಗಿಂತ , ಪಟಿ೦ಗರಿಗೆ ದಾರಿ ದೀಪ ಆಗಿದೆ ಎಬುವುದಕ್ಕೆ ಸಾಕಷ್ಟು ಪುರಾವೆಗಳು ಇವೆ ,,ಸಾಕ್ಷಾತ್ ಸಿಕ್ಕಿ ಬಿದ್ದ ಪಟಿಂಗ ರುಗಳೇ ಪೋಲಿಸ್ ರ ಮುಂದೆ ಬಾಯಿ ಬಿಟ್ಟಿದ್ದಾರೆ .
ಒಂದಷ್ಟು ಜಾಲಿ ಲೈಫೇಗೆ ಪುಟ್ಟ ಮಕ್ಕಳು ಕೂಡಾ ತಮ್ಮ ಪೋಷಕರುಗಳಿಗೂ ಸಹಾ ಬೇರೊಬ್ಬರ ಸಹಾಯ ಪಡೆದು ಪರ್ಸೆಂಟ್ ಲೆಕ್ಕದಲ್ಲಿ ಬ್ಲಾಕ್ ಮೆಲ್ ಮಾಡುವುದು, ಇದು ಸಿನಿಮಾ ಕಥೆ ಅಲ್ಲ ..ನಮ್ಮ ಮುಂದಿದೆ .,ಸಂಭವಿಸದ ರಿಯಲ್ ಸ್ಟೋರಿ ..!
ಪ್ರೀತಿ ಪ್ರೇಮವೆಂದು ನಾಟಕವಾಡಿ ಯಾವುದೋ ತಮ್ಮ ಲಾಭ ಕೊಸ್ಕರ ಮೋಸ ಮಾಡುವುದು ಬೇರೊಂದು ವಿಚಾರವಾದರೂ ,ಅದೂ ಕೂಡಾ ಬ್ಲಾಕ್ ಮೆಲ್ ಎಂದು ಕೆರೆಯಿಕೊಡುತ್ತದೆ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸಾಕಷ್ಟು ಸಂಗತಿಗಳು ಕಣ್ಣಿಗೆ ರಾಟುತ್ತವೆ. ಅದೇನೇ ಇರಲಿ
ಆಪ್ತರೇ ಮಾಡ್ತಾರೆ ಹನಿಟ್ರ್ಯಾಪ್:
ಹೌದು ! ‘ಹಣಕ್ಕೆ ಹೆಣ ಕೂಡ ಬಾಯಿ ಬಿಡತ್ತೆ’ ಅಂತ ಒಂದು ಗಾದೆ ಮಾತಿದೆ ...ಯಾರಿಗೆ ಹಣ ಬೇಡ ಹೇಳಿ ..? ಹೇಳಿ ಕೇಳಿ ಮೈ ಮುರಿಯದೇ ದುಡ್ಡು ಮಾಡಲು ಶೋಕಿ ಜೀವನ ನಡೆಸಲು ಯಾವ ಕಾರ್ಯಕ್ಕೂ ಸೈ ಎಂಬ ಮನಸ್ತಿತಿಯ ಮಹಾನುಭಾವರು ಕೂಡಾ ಇದ್ದಾರೆ ..ನಮ್ಮ ಎಷ್ಟೇ ಆಪ್ತರು ಎಂದು ಗುರುತಿಸಿ ಕೊಂಡರೂ, ಅವರ ಎದುರು ಯಾವುದೇ ರಹಸ್ಯ ವಿಚಾರವನ್ನು ಹಂಚಿಕೆ ಮಾಡುವುದು,ಬಿಚ್ಚಿ ಇಡುವುದು ಸರಿಯಲ್ಲ .. ನೇರವಾಗಿ ಅವರು ಬಾಗಿಯಾಗದೇ ಇದ್ದರೂ ಕುತಂತ್ರ ದಿಂದ ಅದನ್ನು ಇತರ ತಮ್ಮ ಸ್ನೇಹಿತರಿಗೆ ರವಾನಿಸಿ ತಮಗೆ ಏನೂ ಗೊತ್ತಿಲ್ಲದ ರೀತಿಯಲ್ಲಿ ಎರಡು ಕಡೆಯಿಂದ ಸಂಬಂದಗಟ್ಟಿ ಗೊಳಿಸಿ ಒಂದೇ ಕಲ್ಲಿನಲ್ಲಿ ಎರಡು ಹಣ್ಣು ಉದುರಿಸುವ ಛಾತಿ ಇರುವವರು ನಮ್ಮ ಹಿಂದೆ ಇದ್ದೆ ಇರುತ್ತಾರೆ. ಅಂತವರನ್ನು ಸಹಾ ಎಚ್ಚರಿಕೆ ಯಿಂದ ನೋಡಬೇಕಾದದ್ದು ಅನಿವಾರ್ಯ ಹಗಲು ಕಂಡ ಬಾವಿಗೆ ರಾತ್ರಿ ಬೀಳುವುದೇ ಇರುವುದು ಒಳ್ಳೇದು ಮೇಟಿ ಕಾಮ ಕಾಂಡ ಎಂದೆಲ್ಲಾ ಕೆರಿಸಿ ಕೊಂಡ ಇತ್ತೀಚಿಗೆ ಟಿವಿ ಮಾಧ್ಯಮಗಳ ಟೆಯಾರ್ಪಿ ಹೆಚ್ಚಸಿದ ಘಟನೆಯೂ ಸಹಾ ಇದೆ ಮಾದರಿಯದ್ದೇ .. ! ನಮ್ಮ ಎಚ್ಚರ ನಮ್ಮ ಕೈಲಲ್ಲಿ ಇರಬೇಕು ಅಷ್ಟೇ
ಬ್ಲಾಕ್ ಮೇಲ್ ಗೆ ಒಳಗಾದವವರಿಗೆ ಲಾಭಾ ಅಂಶವನ್ನು ದಯಪಾಲಿಸುವುದಕ್ಕಿಂತ ಅವರನ್ನು ನೇರವಾಗಿ ಪೋಲಿಸ್ ರಿಗೆ ಒಪ್ಪಿಸಿದರೆ ಮ್ಯಾಟರ್ ಕ್ಲೋಸ್ ಆಗುತ್ತೆ ಮುಂದೆ ಇಂತಹ ದಂಧೆಯನ್ನು ಯಾರೂ ಕೂಡಾ ಮಾಡಬಲ್ಲರು .. ಒಂದೊಮ್ಮೆ ಅವರುಗಳ ಬೇಡಿಕೆಗೆ ಮಣಿದರೆ ತಾವು ಅರ್ಧ ಸತ್ತಂತೆ ..ಅದನ್ನೇ ಹಿಡಿದು ಮೊದಲಿಗೆ ಇಂತಿಷ್ಟು ಪಡೆಯುವ ಅವರುಗಳು ನಂತರ ಮತ್ತೊಂದಿಷ್ಟಕ್ಕೆ ಬೇಡಿಕೆ ,ಕೊಟ್ಟು ಕೊಟ್ಟು ಕೋಡಂಗಿಯಾಗಿ ಅನಂತರ ತಮ್ಮ ಆ ನೈಜ ವಿಚಾರವೂ ಬೆಳಕಿಗೆ ಬರುತ್ತದೆ ಇತ್ತ ತಮ್ಮ ಖಜಾನೆಯೂ ಖಾಲಿಯಾಗಿರುತ್ತದೆ .ಅತ್ತ ಮರ್ಯಾದೆಯೂ ಸಹಾ ಬೀದಿಗೆ ಬಂದಿರುತ್ತದೆ ..ಎಲ್ಲಾಕ್ಕಿಂತ ಉತ್ತಮ ನೇರವಾಗಿ ಸಂಬದ ಪಟ್ಟವರಿಗೆ ತಿಳಿಸುವುದು.
ಮೊನ್ನೆಯ ವಿಚಾರವೂ ಹಾಗೆ ಆಗಿದೆ ಅನ್ನುವುದು ಮೆಲ್ನೋಟಕ್ಕೆ (ಬಲ್ಲ ಮೂಲಗಳಿಂದ ) ಸಾಬೀತು ಆಗುತ್ತಾ ಇದೆ ಸಚಿವ ಮೇಟಿ ವಿವಾದಲ್ಲಿ ಮೆಂದು ಸಾಕಾಗದ ಮಹಾನುಭಾವರು ಕೊನೆಗೂ ಸೀಡಿ ಬಿಡುಗಡೆ ಮಾಡಿದ್ರಂತೆ ..ಅತ್ತ ಹಣ ಇಲ್ಲ ಇತ್ತ ಮರ್ಯಾದೆ ಇಲ್ಲ .. ಇದು ಕೇವಲ ಮೇಟಿ ವಿಚಾರವಲ್ಲ ಇನ್ನೂ ಸಾಕಷ್ಟು ಜನ ಇದರಲ್ಲಿ ಮಾನ ಮರ್ಯಾದೆಗೆ ಅಂಜಿ ಬಲಿ ಪಶು ಆಗಿದ್ದಾರೆ .. ಪುಕ್ಕಟೆಯಾಗಿ ಹೆದರಿಸಿ ಬೆದರಿಸಿ ಲೂಟಿ ಕಾರರು ಆರಾಮಾಗಿ ಜೀವನ ಸಾಗಿಸುತ್ತಿದ್ದಾರೆ .. ಮೇಟಿ ವಿಚಾರ ದಿಂದ ಒಂದೊಂತು ಸತ್ಯ, ಸಮಾಜಕ್ಕೆ ಒಳ್ಳೆಯ ಪಾಠ ಸಿಕ್ಕಿದೆ ! ಬ್ಲಾಕ್ ಮೆಲ್ ದಂಧೆಯ ಕರಾಳ ಮುಖ ಬಯಲಾಗಿದೆ ..!
ಸೋಮವಾರ, ಡಿಸೆಂಬರ್ 19, 2016
ಬಂಡ ಬ್ರಷ್ಟಚಾರಿಗಳಿಂದಲೇ ಬಡವರು ಬರ್ಬಾದ್ !
ಎಲ್ಲಿಯವರೆಗೆ ಪೂರ್ಣ ಪ್ರಮಾಣದಲ್ಲಿ ಬ್ರಷ್ಟಚಾರಿಗಳು ನಮ್ಮ ಸಮಾಜದಿಂದ ನಿರ್ನಾಮವಾಗುವುದಿಲ್ಲವೋ ಅಲ್ಲಿಯವರಗೆ ದೇಶ ಉದ್ದಾರವಾಗಲು ಸಾಧ್ಯವಿಲ್ಲ, ಬಡವರ ಬರ್ಬಾದ್ ತನ ಮುಂದುವರಿಯತ್ತಲೇ ಇರುತ್ತದೆ . ಅದಿಲ್ಲವೆಂದರೆ ಹೀಗಾಗುತ್ತದೆಯೇ ? ದೇಶ ಕಂಡ ಅಪ್ರತಿಮ ಜನ ಸೇವಕ ಪ್ರಧಾನಿ ನರೇಂದ್ರ ಮೋದಿ ದೊಡ್ಡ ನೋಟುಗಳನ್ನು ನಿಷೇಧ ಮಾಡಿ ಕಾಳ ಧನ ಕರಗಿ ಹೋಗಿ ಮುಂದೊಂದು ದಿನ ಭಾರತ ಮಾದರಿ ದೇಶವಾಗಿ ಬಡಬಲ್ಲಿಗರಿಗೆ ಆಶ್ರಯವಾಗುತ್ತದೆ ಎಂದು ಅದ್ಭುತ ಸಾಹಸಕ್ಕೆ ಕೈ ಹಾಕಿದರೆ ಥೂ !ನಾಚಿಕೆ ಗೆಟ್ಟವರು ಹಣದ ಹಿಂದೆ ಅಂಡಿಲೆಯುವ ನೀಚ ಹೀನ ಮನಸ್ಥಿತಿಯ ರಕ್ತ ಬೀಜಾಸುರನ ಸಂತತಿ ಬ್ರಷ್ಟಾಚಾರಿಗಳು ಬಿಡಬಲ್ಲರೆ ?!.ಕಂತೆ ಕಂತೆ ಹೊಸ ಹೊಸ ನೋಟುಗಳು ಐಟಿ ದಾಳಿಯಲ್ಲಿ ದಿನ ನಿತ್ಯ ಸಿಗ್ತಾನೆ ಇವೆ . ಸಾಮಾನ್ಯ ಒಬ್ಬ ವ್ಯಕ್ತಿ ದಿನವೀಡಿ ಕ್ಯೂ ನಲ್ಲಿ ನಿ೦ತರೂ 2500 ರೂ ATM ನಲ್ಲಿ ದೊರಕುದು ಕಷ್ಟ . ವಾರಕ್ಕೆ 24000 ರೂ. ಕಿಂತ ಮೇಲೆ ಹಣ ಸಿಗೋಲ್ಲ .. ಇಂತಿರುವಾಗ ದಿನ ನಿತ್ಯ ಈ ಪರಿಯ ಕೋಟಿ ಕೋಟಿ ಹೊಸ ಹೊಸ ನೋಟು ಕಂತೆಗಳು ಸೀಜ್ ಆಗ್ತಾ ಇವೆಯಲ್ಲ ? ಇಷ್ಟೊಂದು ಪ್ರಮಾಣದ ಇಷ್ಟು ದಿನಗಳಲ್ಲಿ ಬ್ಯಾಂಕ್ ಮುಂದೆ ಕಾವಲು ಕಾಯದೇ ನೇರವಾಗಿ ಇವರ ಬಚ್ಚಲ ಮೆನೆಯಿ೦ದ ಹಿಡಿದು ಮಲಗುವ ಹಾಸಿಗೆ ಕೆಳಗೆ ಸಿಗೋದು ಅಂದ್ರೆ ತಮಾಷೆನಾ ?
ಬೆಂಕಿ ಇಲ್ಲದೇ ಹೋಗೆ ಯಾಡುತ್ತದೆಯೇ ? ಚಾಪೆಯಡಿಯಲ್ಲಿ ನುಸುಳುವ ಯೋಜನೆ ಜಾರಿಗೆ ತಂದರೂ ಕೆಲವರ ರಂಗೋಲಿ ಯಡಿ ನುಸುಳುವ ಜಾಯಮಾನದ ಜಾಣ್ಮೆಯನ್ನು ಮೆಚ್ಚಲೇ ಬೇಕು !! ಇವರುಗಳಿಂದ ಹೇಗೆ ದೇಶದ ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯ ? ಕೆಲವು ಬ್ಯಾಂಕ್ ಉದ್ಯೋಗಿಗಳು ಬ್ಯಾಂಕ್ ಮೇನೇಜರ್ ಗಳು ಹೊಡೆಯದೇ ಬಡಿಯದೇ ಕೂತಲ್ಲೇ (ಬೆವರು ಹರಿಸದೇ ) ಕಮಿಷನ್ ವ್ಯವಹಾರದಲ್ಲಿ ತಮ್ಮ ಚಾಕಚಕ್ಯತೆಯನ್ನು ತೋರಿದ್ದರಲ್ಲ ಶೇಮ್ ! ಕೊಂಚ ಮನಸಾಕ್ಷಿ ಇದ್ದರೆ ಅಬಲರಿಂದ ವ್ರದ್ದರರೂ ಬಿಸಿಲಿನಲ್ಲಿ ತಮ್ಮ ದೈನಂದಿನ ಕೆಲಸ ಕಾರ್ಯವನ್ನು ಬಿಟ್ಟು ಕ್ಯೂ ನಲ್ಲಿ ನಿಂತು ತಮ್ಮ ಹಣವನ್ನು ಎಕ್ಸ್ ಚೆ೦ಜ್ ಮಾಡುವ ಪರಿಯನ್ನು ಒಮ್ಮೆ ನೋಡಿ, ಕನಿಕರ ವಿದ್ದರೆ ಕಂಬನಿ ಖಂಡಿತವಾಗಿಯೂ ಉದುರುತ್ತವೆ .ಅವರುಗಳಿಗೆ ಸಾಧ್ಯವಾದರೆ ಸಹಕಾರ ನೀಡಿ ಅದನ್ನು ಬಿಟ್ಟು ಯಾವುದೇ ಕಷ್ಟವಿಲ್ಲದೇ ಪರ್ಸೆಂಟ್ ಲೆಕ್ಕದಲ್ಲಿ ದೊಡ್ಡ ಕುಳಗಳಿಗೆ ಹಣ ಅಡಗಿಸುವುದಕ್ಕೆ ಸಾಥ್ ನೀಡುತ್ತಿದ್ದಿರಲ್ಲ ? ಛೆ ! ನಾಚಿಕೆ ಆಗಬೇಕು.. ದಿಕ್ಕಾರವಿರಲಿ ಇಂತಹ ವ್ಯವಸ್ಥೆಗೆ !!!.ಇದು ಕೇವಲ ಮನಿಮಾಫಿಯಾದ ಬಗಗೆಗಿನ ವಿಚಾರವಲ್ಲ , ಯಾವುದೇ ಒಂದು ಯೋಜನೆ ಬಂದರೂ ಫಲಾನುಭವಿಗಳಿಗೆ ಸಿಗುವುದು ಎಳ್ಳು ಪ್ರಮಾಣ ಮಾತ್ರ .. ಉದಾಹರಣೆಗೆ ಒಂದು ರೂಪಯಿ ಅಕ್ಕಿ ಬಡವನಿಗೆ ಸೇರುವುದು ಎಲ್ಲೋ 30% ಮಾತ್ರ . ಲೋಡ್ ಗಟ್ಟಲೇ ಬೇರೆ ಗೋಡಾನ್ನಿಗೆ ಸರಬರಜಾಗುವುದು ಗುಟ್ಟೆನಲ್ಲ ..! ಒಂದು ರಸ್ತೆಯ ಗುತ್ತಿಗೆ ಕಾರ್ಯವೂ ಅಷ್ಟೇ 100% ಬಜೆಟ್ ನಲ್ಲಿ ಅವರಿವರ ಕೈ ಸೋಕಿ ಕೊನೆಗೆ ನಿರ್ಮಾಣವಾಗುವದು ಕೇವಲ ಹೆಚ್ಚೆಂದರೆ 25% ಮೊತ್ತದಲ್ಲಿ ಮಾತ್ರ ....ಸಿಂಹಪಾಲು ಸಂಬಂದ ಪಟ್ಟವರ ಖಜಾನೆಗೆ ಜಮಾವಣಯಾಗುತ್ತದೆ. ಇದೆಕ್ಕೆಲ್ಲಾ ಕೊನೆ ಎಂದು ? ಮಟ್ಟ ಹಾಕುವವರು ಯಾರು ? ಯಾವ ಕಾನೂನಿನಡಿ ಇದು ಸಾದ್ಯ ? ಮೋದಿ ಯಿಂದಲೇ ಸಾಧ್ಯವಿಲ್ಲ ಅಂದ ಮೇಲೆ ಇದನ್ನು ಇನ್ಯಾರಿಂದ ನಿರೀಕ್ಷಿಸಬಹುದು ? ಐಟಿ ದಾಳಿ ಆಗಿದೆ ..ಆಗ್ತಾನೂ ಇದೆ ಅಂದ ಮಾತ್ರಕ್ಕೆ ಒಂದಿಷ್ಟು ತಪ್ಪಿತಸ್ತರು ಬಲೆಗೆ ಬಿದ್ದಿದ್ದಾರೆ ಅಷ್ಟೇ !! ಇನ್ನು ಗುಟ್ಟಾಗಿ ಅದೆಷ್ಟೋ ತಿಮಿಂಗಿಲಗಳು ನಮ್ಮ ಸುತ್ತಾ ಮುತ್ತಾ ಮೂಲೆ ಮೂಲೆಗಳಲ್ಲಿ ಇದ್ದಾವೆ.. ಇದ್ದೆ ಇರುತ್ತವೆ . ಈ ರಹಸ್ಯವನ್ನು ಪೂರ್ಣ ಪ್ರಮಾಣದಲ್ಲಿ ಪತ್ತೆ ಹಚ್ಚುವುದು ಕಠಿಣವೇ ಸರಿ . ಎಲ್ಲಿಯವರೆಗೆ ಭಂಡ ಬಕಾಸುರ ವಂಶದ ಬ್ರಷ್ಟಚಾರಿಗಳು ನಿರ್ನಾಮವಾಗುತ್ತಾರೋ ಅಲ್ಲಿಯವರೆಗೆ ನಡಿತಾನೆ ಇರುತ್ತೆ .. ಏನೂ ಮಾಡಲು ಸಾಧ್ಯವಿಲ್ಲ ಕೊನೆಯಾದಾಗಿ ಒಂದು ಮಾತು ಬೆಂಕಿಯ ಪಕ್ಕ ಬೆಣ್ಣೆಯನ್ನು ಇಡಬಾರದು ಅಷ್ಟೇ !!!
ಶುಕ್ರವಾರ, ಡಿಸೆಂಬರ್ 16, 2016
ಮುಗಿಯಿತೇ ಜಯಮ್ಮ ನಿನ್ನ ಕಾಲ ?
ಯಾರೂ ಕೂಡಾ ಊಹಿಸಿರಲು ಸಾಧ್ಯವಿಲ್ಲ .ತಮಿಳುನಾಡಿನ ‘’ಪುರುಚ್ಚಿ ತಲೈವಿ’’ ಎಂದೇ ಖ್ಯಾತಿ ಪಡೆದ ಅಮ್ಮ ಅಂದೇ ದೇಶದಾದ್ಯಂತ ಜನಪ್ರೀಯರೂ ಆಗಿದ್ದ, ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಇನ್ನಿಲ್ಲ .ಎಲ್ಲವೂ ದಾಖಲೆಗಳು ! ಹುಟ್ಟಿನಿ೦ದ ಸಾವಿನ ತನಕವೂ ದಾಖಲೆಗಳ ಸರದಾರ್ತಿ. ಯಾರೂ ಕೂಡಾ ಅಂದಾಜಿಸಲಾಗದ ವಿಚಿತ್ರ ಸಂಗತಿಗಳು ಜಯಲಲಿತಾ ಸುತ್ತಾ ಇವೆ . ಕರ್ನಾಟಕದಲ್ಲಿ ಹುಟ್ಟಿ ತಮಿಳು ನಾಡಿನಲ್ಲಿ ಅನಭಿಷೆಕ್ತ ದೊರೆಯಾದ ಜಯಲಲಿತಾ ಬಾಲ್ಯ ಅಷ್ಟೊಂದು ಚೆನ್ನಾಗಿರಲಿಲ್ಲವಂತೆ .ಬಾಲ್ಯದಲ್ಲೇ ಸಾಕಷ್ಟು ಕಷ್ಟಪಟ್ಟು ಶಾಲಾ ಜೀವನದಲ್ಲಿಯೇ ಉತ್ತಮವಾಗಿ ವಿಧ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿದ್ದರೇ,ಯಾರೂ ಕೂಡಾ ಎಣಿಸಿರಲಿಕ್ಕಿಲ್ಲ ಜಯಲಲಿತ ಪೇಮಸ್ ಹಿರೋಯಿನ್ ಆಗ್ತಾಳೆ ಅಂತ , ಹೆಚ್ಚೇನು ಮುಖ್ಯಮಂತ್ರಿ ಸೀಟು ಸಹಾ ಅರಸಿಕೊಂಡು ಆರಿಸಿಕೊಂಡು ಬರಲಿಕ್ಕೆ ಜಾಸ್ತಿ ಸಮಯ ಬೇಕಾಗಿರಲಿಲ್ಲ. ತಾನು ಮುಟ್ಟಿದ್ದೆಲ್ಲಾ ಸಕ್ಸಸ್ ಆಗುತ್ತೆ ಅಂತ ಖುದ್ದು ಜಯಲಲಿತಾಗೂ ಕೂಡಾ ಗೊತ್ತಿರಲಿಕ್ಕಿಲ್ಲ .ರಾಜಕಾರಾಣಿಯಾಗಿ ಯಾರೂ ಮಾಡದ ಕಾರ್ಯದಲ್ಲಿ ಸಫಲರಾಗುತ್ತಾಳೆ . “ಜನ ಸೇವೆಯೇ ಜನಾರ್ಧನ ಸೇವೆ” ಎಂದು ಜನರನ್ನು ಪಾಲಿಸಿ ಪೋಷಿಸುತ್ತಾಳೆ , ಅಮ್ಮ ಎಂದೇ ಜನ ಜನಿ ಳಾಗುತ್ತಾಳೆ .ಎಲ್ಲಾ ದಾಖಲೆಯನ್ನು ತನ್ನ ಹೆಸರಲ್ಲಿ ಬರೆದು ಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ . ತನ್ನ ಸಾವು ಕೂಡಾ ಒಂದು ದಾಖಲೆ ಆಗುತ್ತದೆ ಎಂದು ಸ್ವರ್ಗದಲ್ಲಿರುವ ಜಯಲಲಿತಾಗೆ ಗೊತ್ತಿರಲಿಕ್ಕಿಲ್ಲ !. ಎಲ್ಲವೂ ಸಾರ್ವಕಾಲಿಕ ದಾಖಲೆ !!!.
74 ದಿನ ಆಸ್ಪತ್ರೆಯಲ್ಲಿದ್ದರೂ ಸಾಯುವಂತ ಕಾಯಿಲೆ ಖಂಡಿತವಾಗಿಯೂ ಬಾಧಿಸುತ್ತಿತ್ತೆ ?ಪ್ರಾಣಕ್ಕೆ ಕುತ್ತು ತರುತ್ತಿರುವ ಕಾಯಿಲೆ ಇದ್ದರೂ ಮೇಲ್ನೋಟಕ್ಕೆ ಪಬ್ಲಿಕ್ ಗೆ ಪಬ್ಲಿಕ್ ಆಗಿಲ್ಲ. ಸುಧಾರಿಸಿದ್ದಾರೆ ಅಂತದ್ದೇನೂ ಇಲ್ಲ ಎಂದು ವೈದ್ಯಕೀಯ ಮೂಲಗಳು ಹೇಳಿದ್ದೆ ಹೇಳಿದ್ದು ..ಇದು ನಿಜವೇ ? ಸಾವಿನ ದವದೆಯಲ್ಲಿದ್ದರೂ ವೈದ್ಯರು ಪ್ರಚಾರಿಸಿಲ್ಲ ಯಾಕೆ ? ಒಂದು ಪಕ್ಷದಲ್ಲಿ ಕಾಯಿಲೆ ಮಿತಿ ಮೀರಿದ್ದೆ ಯಾದರೇ ವಿದೇಶ ಆಸ್ಪತ್ರೆಯನ್ನು ಅವಲಂಬಿಸುವುದು ಸಾಮನ್ಯವಾಗಿ ಸೆಲೆಬ್ರೇಟ್ ಗಳು ಹಿಂದಿನಿಂದಲೂ ನಡೆದುಕೊಂಡು ಬಂದ ರೀತಿ ..ಆದರೆ ಅಲ್ಲಿಗೆ ರವಾನೆ ಆಗಿಲ್ಲ ಯಾಕೆ ? ಜಯ ಆಪ್ತರೇ ಜಯಲಿತರನ್ನು ಇಲ್ಲವಾಗಿಸಿ ಬಿಟ್ಟರೆ ?? ಎಲ್ಲವೂ ಪಿಸು ಪಿಸು !! ಒಟ್ಟಾರೆ ಗೊಂದಲದ ಗೂಡು ಆಷ್ಟೇ !..ಅನೀರಿಕ್ಷಿತವಾಗಿ ಅಮ್ಮ ಕಾಲವಾಗಿದ್ದಾರೆ . ಏನೇ ಇರಲಿ ಇಂತಹ ಅದ್ಭುತ ರಾಜಕಾರಣಿಯನ್ನು ದೇಶ ಅಗಲಿದೆ .
ಬಾಲ್ಯ ದಿಂದಲೂ ಹಿಡಿದ ಕಾರ್ಯವನ್ನೆಲ್ಲಾ ಸಕ್ಸಸ್ ನಲ್ಲಿ ಕಾಣುತ್ತಾ ಕಷ್ಟದಿಂದ ಬಂದು ಸುಖ ಸಂಸಾರ ಬೇಡ ವೆಂದು ಒಬ್ಬಂಟಿಯಾಗಿ ಜೀವನ ಸಾಗಿಸುತ್ತಾ ತಮಿಳ ಪಾಲಿಗೆ ಅಮ್ಮನಾದ ಜಯಲಲಿತಾ ರಂತಹ ರಾಜಕಾರಿಣಿ ಭಾರತಕ್ಕೆ ಸಿಗುವುದು ಬಹಳ ಅಪೂರೂಪ. ಹಿಂದಿಲ್ಲ ಮುಂದೆ ಕೂಡಾ ಇ೦ತವರು ಕಾಣಸಿಗರು ಎಂದು ಎದೆ ತಟ್ಟಿ ಹೇಳಬಹುದು. ತಮಗೆ ಮಾತ್ರವಲ್ಲದೇ ಮರಿ ಮಕ್ಕಳವರೆಗೆ ಆಗುವಷ್ಟು ಸoಪತ್ತನ್ನು ಕೂಡಿಟ್ಟು ಅನೈತಿಕವಾಗಿ ರಾಜಕಾರಣ ಮಾಡುವ ಜನಪ್ರತಿನಿಧಿಗಳು ನಮ್ಮ ಮುಂದೆ ಸಹಸಾರು ಜನ ಇದ್ದಾರೆ ಆದರೆ ಅದ್ಯಾವುದೂ ಗೊಡವೆ ಇಲ್ಲದೇ ಜನಗಳೇ ನನ್ನ ಕುಟುಂಬದವರು ರೆಂದು ಕೇವಲ ಬಾಯಿ ಮಾತಿಗೆ ವೋಟ್ ಬೇಡಿಕೆಗೆ ಉಪಯೋಗಿಸದೇ ಪ್ರತ್ಯಕ್ಷವಾಗಿ ತೋರಿಸಿದ ದಿಟ್ಟ ಮಹಿಳೆ ಈಕೆ . ಅದೆಷ್ಟು ಸೌಲಭ್ಯ ಅದೆಷ್ಟು ಯೊಜನೆಗಳ ಮೂಲಕ ಬಡವರ ನಿರಾಶ್ರಿತರ ಪರವಾಗಿ ನಿಂತಾಕೆ . ಸ್ವಂತ ನೆಲ ಕರ್ನಾಟಕವಾದರೂ ನೀರಿಗಾಗಿ , ತಮ್ಮ ನೆಲದ ಜನಗಳಿಗಾಗಿ , ಕರ್ನಾಟಕದ ವಿರುದ್ಧ ತೊಡೆ ತಟ್ಟಿ ಕಾವೇರಿ ನೀರಿಗಾಗಿ ಸುಪ್ರ್ರಿಂ ಕೋರ್ಟ್ ಮೆಟ್ಟಿಲೇರಿ ಕರುನಾಡ ಜನರ ಹೆಗೆಗೆ ಒಳಗಾಗಿ ಕಾವೇರಿ ನೀರನ್ನು ತಮಿಳರಿಗೆ ಕುಡಿಸಿದಾಕೆ !!
ಮಹಿಳೆಯರು ಮಕ್ಕಳು ವ್ರದ್ಧರು ನಡೆಯಲಿಕ್ಕೆ ಸಾಧ್ಯವಾಗದವರೂ ಕೂಡಾ ಅಮ್ಮ ಅಮ್ಮ ಎಂದು ಅಮ್ಮನಿಗಾಗಿ ಎಳೆ ಮಗು ಗೋಳಿಡುವ ರೀತಿಯಲ್ಲಿ ರೋಧಿಸುವ ದ್ರಶ್ಯವೇ ಸಾರಿ ಹೇಳುತ್ತಿದೆ, ಅಮ್ಮನ ಕೀರ್ತಿಯೆಲ್ಲಿಯರೆಗೆ ಕೊಂಡು ಒಯಿದಿದೆ ಎಂದು . ಈ ಚಿತ್ರಣ ನಾವು ನಿನಿಮಾಗಳಲ್ಲಿ ಅಲ್ಲ ನೈಜ ಜೀವನದಲ್ಲಿ ಅಂದರೆ ಅರ್ಥವಾಗುತ್ತದೆ ಜಯಲಲಿತಾರ ಪಾರದರ್ಶಕ ಆಡಳಿತ ವ್ಯವಸ್ಥೆ ಅದೆಷ್ಟು ಜನಪೋಯೋಗಿ ಆಗಿತ್ತು ಎಂದು . ಇಂತಹ ಚಿತ್ರಣವನ್ನು ದೇಶದ ಯಾವುದೇ ಮೂಲೆಯಲ್ಲಿ ಸಹಾ ಕಾಣಲಿಕ್ಕೆ ಸಾಧ್ಯವಿಲ್ಲ . ಒಟ್ಟಾರೆ ಇದನ್ನೆಲ್ಲಾ ಇಷ್ಟು ದಿನ ಅನುಭವಿಸಿದ ತಮಿಳುರು ಅದೃಷ್ಟವಂತರು ಎಂದರೂ ಅತಿಶಯೋಕ್ತಿಯಾಗಲಾರದು .
ಒಂದು ಕಾಲದಲ್ಲಿ ಅಂದ್ರ ಪ್ರದೇಶದ ಮುಖ್ಯ ಮಂತ್ರಿಯಾಗಿದ್ದ ವೈಎಸ್ ರಾಜಶೇಖರ್ ರೆಡ್ಡಿ ಕಾಲದಲ್ಲೂ ಸಹಾ ಇಂಥದ್ದೇ ಒಂದು ಅಭಿಮಾನವನ್ನು ಅವರು ಸಂಪಾದಿಸಿದ್ದರು .. ಹೆಲಿಕಾಪ್ಟರ್ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ್ದರು. ತದನಂತರದ ಅಲ್ಲಿನ ರಾಜಕೀಯ ಬೆಳವಣಿಗೆ ಎಷ್ಟು ಕುಲಗೆಟ್ಟು ಹೋಗಿತ್ತು ಎಂಬುದರ ಬಗ್ಗೆ ಬೆಳಕು ಚೆಲ್ಲುವುದರ ಅಗತ್ಯವಿಲ್ಲ ಅದೆಷ್ಟು ನೀಚ ಮಟ್ಟಕ್ಕೆ ರಾಜಕೀಯ ಹೋಯಿತು ಅಂದ್ರೆ ,ಒಂದೇ ರಾಜ್ಯ ಎರಡು ಹೋಳುಗಳಾಗಿ ಪರಿವರ್ತನೆ ಗೊಂಡಿತು ಅ೦ತದ್ದೆ ಪರಿಸ್ತಿತಿ ತಮಿಳು ನಾಡಿಗೂ ಕೂಡಾ ದೂರವಿಲ್ಲ . ಗಟ್ಟಿತನ ರಾಜಕೀಯ ವ್ಯವಸ್ಥೆ ಕೈಕೊಟ್ಟಂತೆ ಇದೆ . ಅಮ್ಮನ ಕಾಲದಲ್ಲಿ ಸುಖಿಗಳಾಗಿದ್ದ ಪ್ರಜೆಗಳಿಗೆ ದುಖದ ದಿನ ದೂರವಿಲ್ಲ ಎನ್ನಬಹುದೇನೋ ?! ಕಾಲವೇ ಉತ್ತರ ಹೇಳಬೇಕು !
ಕೊನೆಯಾದಾಗಿ ಒಂದೇ ಮಾತು
ಮುಗಿಯತೇ ಜಯಮ್ಮ ನಿನ್ನ ಕಾಲ?
ಹುಟ್ಟಿದ್ದು ಕರುನಾಡಿನಲ್ಲಿ
ಹೆಸರುಗಳಿಸಿದ್ದು ತಮಿಳು ನಾಡಿನಲ್ಲಿ
ಜಾಣೆಯಾಗಿ ವಿದ್ಯಾಭ್ಯಾಸದಲ್ಲಿ ಎತ್ತಿದ ಕೈ
ಅಭಿನೇತ್ರಿಯಾಗಿಯೂ ಚಿತ್ರರಂಗದಲ್ಲಿ ಸೈ
ಕಷ್ಟದಲ್ಲಿ ನೀ ಎದ್ದು ಬಂದೆ
ಸಂಸಾರ ಸುಖ ಬೇಡ ವೆಂದೆ
ಜನ ಸೇವೆಗೆ ಬದುಕು ಮುಡುಪಾಗಿಟ್ಟೆ
ಜನ ಮಾನಸದಲ್ಲಿ ಆರಾಧ್ಯ ದೈವ ಆಗಿಬಿಟ್ಟೆ
ಹೆಸರಲ್ಲೇ ಇತ್ತು ಜಯ
ಅದಕ್ಕೇನೋ ಹಿಡಿದ ಕಾರ್ಯವೆಲ್ಲ ವಿಜಯ
ತಮಿಳಿನ ಪುರುಚ್ಚಿ ತಲೈವಿ ನೀನಾದೆ
ದೇಶದಾದ್ಯಂತ ಅಮ್ಮನಿಗೆ ಅನ್ವರ್ಥಳಾದೆ
ಮುಗಿಯತೇ ಜಯಮ್ಮ ನಿನ್ನ ಕಾಲ?
ಇನ್ನ್ಯಾರು ತಮಿಳರಿಗೆ ಅಭಯದ ಬಲ ?
ಶನಿವಾರ, ಡಿಸೆಂಬರ್ 3, 2016
ದೇವರ ನಾಡಿನಲ್ಲಿ ದೇವಾಲಯದ ಸ್ಥಿತಿ ಎಲ್ಲಿಗೆ ಬಂದು ನಿಂತಿದೆ ?
ದೇವರ ಸ್ವಂತ ನಾಡು ಕೆರೆಯಿಸಿ ಕೊಳ್ಳುವ ಉತ್ತರ ಭಾರತದ ಪುಟ್ಟ ರಾಜ್ಯ ಕೇರಳ . ಹೌದು !ಹಲವು ಧರ್ಮೀಯರ ನಾಡು ಭಾರತದಲ್ಲಿ ಅತೀ ಹೆಚ್ಚು ಮಠ ಮಂದಿರ ಸೇರಿದಂತೆ ಹಲವಾರು ಧಾರ್ಮಿಕ ಸ್ಥಳವನ್ನು ಹೊoದಿರುವುದು ಕೇರಳ ಬಿಟ್ಟರೆ ಬೇರಾವುದೂ ಇಲ್ಲ ಅದಕ್ಕಾಗಿಯೇ ಏನೋ , ದೇವರ ಸ್ವಂತ ನಾಡು ಎಂದು ಪ್ರಖ್ಯಾತಿ ಪಡೆದಿದೆ .
ಕೇವಲ ಹಿಂದೂ ಧರ್ಮ ಮಾತ್ರವಲ್ಲದೇ ಮಾರಿಗೊಂದು ಚರ್ಚ್ ಮಸ್ಜಿದ್ ಗಳೂ ಕಾಣ ಸಿಗುತ್ತವೆ ಇದರರ್ಥ ಸಮಭಾವ ಸಮ್ಮಿಲನ ದೊಂದಿಗೆ ಧಾರ್ಮಿಕ ಚಟುವಟಿಕೆ ಅದರ ರೀತಿ ನೀತಿಯೇ ಎಂಬ ತಳ ಹದಿಯಲ್ಲಿ ನಡೆಯುತ್ತಿದೆ., ನಡೆಯಲ್ಪಡುತ್ತದೆ. ಅದು ಹಿಂದಿನಿಂದಲೂ ನಡೆದು ಕೊಂಡು ಬಂದ ಪದ್ಧತಿ. ಕೇರಳದಲ್ಲಿರುವ ಶಬರಿಮಲೈ ಸ್ವಾಮೀ ಅಯ್ಯಪ್ಪ ದೇವಸ್ಥಾನದ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ ಎಲ್ಲಾರಿಗೂ ಗೊತ್ತಿರುವ ವಿಚಾರ ಹನ್ನೆರಡು ವರ್ಷದ ದಾಟದ ಹಾಗೂ 40 ವರ್ಷಗಳ ಮೇಲಿನ ,ಮಹಿಳೆಯರಿಗೆ ಮಾತ್ರ ಶ್ರೀಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಪ್ರವೇಶ .ಇದು ಪರಂಪರಾಗತವಾಗಿ ನಡೆದು ಕೊಂಡು ಬಂದಿರುವ ಅಚಾರ ವಿಚಾರ . ಅದರ ಹಿಂದಿನ ಕಥೆಯನ್ನೂ ಇಲ್ಲಿ ಅರಹಬೇಕಾಗಿಲ್ಲ ಸಮಸ್ತ ಸಮಾಜವೂ ಅರಿತಿರುವ ಸಂಗತಿ ,ಆದರೆ ಅದ್ಯಾಕೋ ಗೊತ್ತಿಲ್ಲ ಇತ್ತೀಚಿಗಿನ ದಿನಗಳಲಿ ಕೇರಳ ರಾಜ್ಯವು ಹೈಕೋರ್ಟ್ ನಿಂದ ಹಿಡಿದು ಸುಪ್ರಿಂ ಕೋರ್ಟ್ ವರೆಗೂ ಸಹಾ ಮಹಿಳೆಯರ ಪ್ರವೇಶಕ್ಕೆ ಅನುವು ಮಾಡಿ ಕೊಡಬೇಕೆಂಬ ಅತಿಯಾಸೆಯಸಾಹಸಕ್ಕೆ ಕೈ ಹಾಕಿದೆ
ಇದರ ಪರ ವಾದ -ವಿವಾದ ಇನ್ನೂ ನಡೆಯುತ್ತಲೇ ಇದೆ . ಮುಂದೆ ಇದು ಯಾವ ದಿಕ್ಕಿನಲ್ಲಿ ತೀರ್ಪು ಪಡೆದು ಕೊಳ್ಳುತದೋ ಗೊತ್ತಿಲ್ಲ. ಸಾಮನ್ಯವಾಗಿ ಎಲ್ಲಾರಲ್ಲೂ ಮೂಡುವುದು ಒಂದೇ ಮಹಿಳೆಯರಿಗೆ ಪ್ರವೇಶ ಬೇಡ ತಲತಲಾಂತರ ದಿಂದ ಬಂದಿರುವ ಈ ಸುಸಂಸ್ಕ್ರತಿ ,ಸಂಪ್ರದಾಯವನ್ನು ಒಮ್ಮೆಲೇ ಮುರಿಯುವುದು ಸರಿಯಲ್ಲ ಎಂಬುದು.ಮುಂದೆ ಇದರ ವಿರುದ್ದವಾಗಿ ಸುಪ್ರಿಂ ಕೋರ್ಟ್ ನಿಂದ ತೀರ್ಪು ಬಂದರೂ ಅಚ್ಚರಿ ಇಲ್ಲ. ಯಾಕೆಂದರೆ ನಿನ್ನೆ ಇನ್ನoತ್ತದ್ದೆ ಒಂದು ಮಾಹಾನ್ ತೀರ್ಪು ಹೊರಬಂದಿತ್ತು . ಈ ಮೊದಲೇ ನಾನು ಹೇಳಿದಂತೆ ದೇವರ ಸ್ವಂತ ನಾಡು ಎಂದು ತನ್ನ ಅಸ್ತಿತ್ವವನ್ನು ಉಳಿಸಿ ಕೊಂಡ ಬಂದಿರುವುದಕ್ಕೆ ಅಲ್ಲಿನ ಭಕ್ತರ ಧಾರ್ಮಿಕ ಪ್ರಜ್ಞೆ ದೇವರ ಮೇಲಿಟ್ಟಿರುವ ನಂಬಿಕೆ ವಿಧಿವಿಧಾನಗಳು ಬೇರೆಲ್ಲೂ ಕಾಣ ಸಿಗದು .ಇಲ್ಲಿ ಯಾವುದೇ ಒಂದು ದೇವಸ್ಥಾನದ ಒಳ ಪ್ರವೇಶಾತಿಗೆ ಪುರುಷರು ಅಂಗಿ –ಬನಿಯಾನ್ ನ್ನು ತೆಗೆಯದೇ ಒಳ ಹೋಗುವಂತಿಲ್ಲ ಇನ್ನು ಕೆಲವೊಂದು ದೇವಸ್ಥಾನಗಳಲ್ಲಿ ಪುರುಷರು ಅಂಗಿಯನ್ನು ತೆಗೆಯುವುದರ ಜೊತೆಗೆ ಲುಂಗಿ-ಪಂಚೆಯನ್ನು ಧರಿಸಲೇ ಬೇಕು ಹಾಗೂ ಮಹಿಳೆಯರು ಕಟ್ಟುನಿಟ್ಟಾಗಿ ಸೀರೆಯನ್ನು ಧರಿಸಿರಬೇಕು ,ಚೂರಿದಾರ್ ಇದ್ದರೆ ಅದರ ಮೇಲೆ ಪಂಚೆ ಅಥವಾ ದೋತಿ- ಲುಂಗಿಯನ್ನು ಕಡ್ಡಾಯವಾಗಿಉಡಲೇ ಬೇಕು ಆಗ ಮಾತ್ರ ಪ್ರವೇಶ ಕಲ್ಪಿಸಲಾಗುತ್ತದೆ ಇದು ಇಂದಿನದಲ್ಲಾ ಸಾಕಷ್ಟು ದಶಕ ಗಳಿಂದ ನಡೆದು ಕೊಂಡು ಬಂದಿರುವ ಪದ್ಧತಿ . ನಿನ್ನೆ ಸುಪ್ರಿ ಕೋರ್ಟ್ ನಿಂದ ಒಂದು ತೀರ್ಪು ಹೊರಬಿದ್ದಿದೆ ಕೇರಳದ ರಾಜಧಾನಿ ತಿರುವನoತಪುರಂಲ್ಲಿರುವ ಅನಂತ ಪದ್ಮನಾಭ ದೇಗುಲದಲ್ಲಿ (ಚಿನ್ನ ಸಿಕ್ಕಿ ಜಗತಿನಾದ್ಯಂತ ಖ್ಯಾತಿ ಪಡೆದ ಮಂದಿರ ) ಮಹಿಳೆಯರು ಲುಂಗಿಯನ್ನು ಬಳಸದೇ ಚೂರಿದಾರ್ ರಿಂದಲೇ ನೇರವಾಗಿ ಪ್ರವೆಶಿಸಬಹುದೆಂದು , ಸುಪ್ರಿಂ ಕೋರ್ಟ್ ಗೆ ತೆಲೆಕೆಟ್ಟಿದೆ !! ,ಹಾಗಂತ ಭಕ್ತರೇ ನೀವೇಕೆ ಹೀಗೆ ? ಧಾರ್ಮಿಕತೆಯನ್ನು ಉನ್ನತ ಸ್ತರದಲ್ಲಿ ಮೇಳೈಸಿಕೊಂಡು ಬಂದಿರುವ ಭಾರತೀಯ ಅದರಲ್ಲೂ ಕೇರಳದಲ್ಲಿ ಈ ನೀತಿ ಜಾರಿಗೆ ಬಂದಿರುವುದು ಅಕ್ಷ್ಯಮ! ಸಹಿಸುವನ್ತದ್ದಲ್ಲ ಧಾರ್ಮಿಕತೆಗೆ ಪೆಟ್ಟು ನೀಡಿದಂತಾಗಿದೆ ತಲೆ ತಲಾಂತರ ದಿಂದ ನಡೆದು ಕೊಂಡು ಬಂದಿರುವ ಪದ್ದತಿಗೆ ಬೆಲೆ ಇಲ್ಲದಂತಾಗುತ್ತದೆ . ಸಮಾಧಾನ ಇಷ್ಟೇ ಈ ಬಗ್ಗೆ ಪ್ರಜ್ಞಾವಂತ ತಾಯಿ ಸಹೋದರಿಯರು ಈ ರೋಲ್ಸ್ ಗೆ ಒಗ್ಗಿ ಕೊಳ್ಳಲಿಲ್ಲ ಕೇರಳದಲ್ಲಿ ಹರತಾಳ ನಡೆಯುತ್ತಿದೆ ಆದಷ್ಟು ಬೇಗ ಈ ನೀತಿಯನ್ನು ಕೋರ್ಟು ಹಿಂತೆದುಕೊಳ್ಳಬೇಕು . ಅದಿಲ್ಲದಿದ್ದರೆ ದೇವರ ಸ್ವಂತ ನಾಡಿನಲ್ಲಿ ದೇವರಿಗೆ ಬೆಲೆ ನೆಲೆ ಇಲ್ಲದಂತಾಗುತ್ತದೆ ಇನ್ನು ಉಳಿದ ದೇಗುಲ ಸಹಾ ತೂಗುಯ್ಯಾಲೆಯಲ್ಲಿರುತ್ತವೆ ಕಲಿಯುಗದ ಬ್ರಹ್ಮಚಾರಿ ಮಾಣಿಕ೦ಟನಿಗೂ ಸಹಾ ಮುಂದೆ ಕಂಟಕ ತಪ್ಪಿದ್ದಲ್ಲ ಭಕ್ತರೆ ಎಚ್ಚೆತ್ತು ಕೊಳ್ಳಿ ಇದು ಕೇವಲ ಕೆರಳಿಗರಲ್ಲದೇ , ಭಾರತೀಯರಾದ ನಾವುಗಳು ದೇಗುಲದ ಸ್ಥಿತಿ ಅದೊಗತಿಗೆ ಬಾರದಂತೆ ಖಂಡಿಸಬೇಕು ,ಕೈ ಜೋಡಿಸಿ ದೇಗುಲಗಳ ಉದ್ದಾರಕ್ಕೆ ಪಣ ತೊಡಬೇಕಾಗಿದೆ .

ಶನಿವಾರ, ನವೆಂಬರ್ 19, 2016
ನಮೋ ನಮ:! ದೇಶ ಕಂಡ ಅದ್ಬುತ ಪ್ರಧಾನಿ : ನರೇಂದ್ರ ಮೋದಿ
ಮೂರುವರೆ ವರ್ಷಗಳಲ್ಲಿ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದ ಭಾರತದ ಪ್ರಥಮ ಪ್ರಧಾನ ಮಂತ್ರಿ....
ಮೂರು ವರ್ಷಗಳ ಕೆಳಗಿನ ಮಾತು ಆದಾಗಲೇ ಗುಜರಾತ್ ರಾಜ್ಯವನ್ನು ಅಭಿವೃದ್ದಿ ಪಡಿಸಿ ಉತ್ತುಂಗಕ್ಕೆ ಕೊಂಡು ಒಯ್ದಿದ್ದ ,ಸತತ ಮೂರನೇ ಬಾರಿಯೂ ಮುಖ್ಯಮಂತ್ರಿಯಾಗಿ ಗಮನ ಸೆಳೆದಿದ್ದ ಸರೆಂದ್ರ ಮೊದಿಯೆಂಬ ಎಂಬ ಸಾಮಾನ್ಯ ವ್ಯಕ್ತಿಯ ಹೆಸರು ಭವಿಷ್ಯದ ಬಾರತದ ಪ್ರಧಾನಿಯಾದರೆ ಹೇಗೆ ? ಎಂಬ ವಿಚಾರ ಗುನುಗಿತ್ತಿತ್ತು ಹೆಚ್ಚಿನ ಸಮಯ ಬೇಕಾಗಿರಲಿಲ್ಲ ಪ್ರಧಾನಿ ಕುರ್ಚಿ ಚಾಯಿವಾಲಾ ಮೋದಿಯನ್ನು ಅರಸಿ ಕೊಂಡು ಬರುವುದಕ್ಕೆ.. ತತ್ಸಮಯದ ಪ್ರಜ್ಞಾವಂತರಲ್ಲಿ ಸಾಕಷ್ಟು ಉತ್ತರ ವಿಲ್ಲದ ಪ್ರಶ್ನೆಗಳೇ ಹರಿದಾಡಿದ್ದವು ಕೇವಲ ಗುಜರಾತ್ ರಾಜ್ಯವನ್ನು ಅಭಿವುದ್ಧಿ ಪಡಿಸಿದಂತೆ ಅರ್ಥಾತ್ ಒಂದೇ ರಾಜ್ಯವನ್ನು ಆಳಿದಂತೆ ತಮ್ಮ ಕೈಯಲ್ಲಿ ಈಗ ಮೂವತ್ತು ರಾಜ್ಯದ ವಸ್ತುವಾರಿಯನ್ನು ನಿಭಾಯಿಸಲು ಸಾಧ್ಯವೇ ? ಎಂಬಿತ್ಯಾದಿ ವ್ಯಂಗ್ಯ ರೀತಿಯ ಪ್ರಶ್ನಾವಳಿ, ಆಲೋಚನೆಗಳು ಓಡಾಡಿದ್ದಮ್ತೂ ಸತ್ಯ .ಆದರೆ ಮೋದಿ ಎಲ್ಲವನ್ನೂ ಸುಳ್ಳು ಮಾಡಿ ಕೇವಲ ಮೂರುವರೆ ವರ್ಷಗಳಲ್ಲಿ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದ್ದಾರೆ. ಮೋದಿ ಮೊದಲು ಮಾಡಿದ ಕಾರ್ಯವೇ ದೇಶ ಪರ್ಯಟನೆ . ಹೌದು!, ಮೋದಿಗೇನು ದೇಶ ತಿರುಗಾಡ ಬೇಕೆಂಬ ಹಂಬಲ ,ವಾಂಛೆ ಇತ್ತೇ ? ಯಾಕೆ ಕಾಲಿಗೆ ಚಕ್ರ ಕಟ್ಟಿ ಕೊಂಡಂತೆ ದೇಶವನ್ನು ಸುತ್ತುತ್ತಿದ್ದರಲ್ಲ ಎಂಬಂತ ವ್ಯಂಗ್ಯ ನುಡಿ ಇದ್ದರೂ ಒಂದೇ ದಿನದಲ್ಲಿ ಮೂರು ದೇಶವನ್ನು ಸುತ್ತಿ ಬಂದದ್ದೂ ಎಲ್ಲವೂ ದಾಖಲೆ ಯಾದರೂ ಇದರ ಹಿಂದಿನ ಮರ್ಮ ಮೋದಿ ಗಲ್ಲದೇ ಬೇರೆ ಯಾರಿಗೂ ತಿಳಿಯದು . ಮೋದಿ ಆಲೋಚನೆಯೇ ಬೇರೆ ಶತ್ರುಗಳನ್ನೂ ಮಿತ್ರರನ್ನಾಗಿಸುವ ಕಾರ್ಯಕ್ಕೆ ಕೈಂಕರ್ಯ ತೊಟ್ಟಿದ್ದು ಶತ್ರು ದೇಶವನ್ನೂ ಬಿಡದೇ ಸ್ನೇಹ ಸಂಪಾದಿಸಿ ಅಲ್ಲಿನವರ ಅಭಿಮಾನದ ಜೊತೆಗೆ ಅಭಿರುದ್ಧಿಗೆ ಬೇಕಾದ ಟಿಪ್ಸ್ ಗಳನ್ನೂ ಆಯ್ದು ಕೊಂಡು ಬಂದ ಮೊದಲಿಗ ಮೋದಿ ಎಂದರೂ ತಪ್ಪಾಗಲಾರದು .
ಸ್ವಚ್ಹ ಬಾರತ ಎಂದು ಪೊರಕೆ ಹಿಡಿದಾಗ ಸೆಲೆಬ್ರೇಟಿ ಗಳಿಂದ ಹಿಡಿದು ಸಾಮನ್ಯ ನಾಗರಿಕನೂ ,ರಾಜಕೀಯ ಪಂಡಿತರೂ ಎ.ಸಿ ರೂಂ ಕಾರ್ಮಿಕರೂ ಅಲ್ಲದೇ , ಇನ್ನೂ ಪೊರಕೆಯನ್ನು ಕಾಣದ ಮಹಾನುಭಾವರು ಕೂಡ ಹಿಡಿ ಕಟ್ಟನ್ನು ಹಿಡಿಯುವಂತೆ ಮಾಡಿದ ಛಾತಿ ಕ್ರತು ಶಕ್ತಿ ಕೆವಲ ಮೋದಿಗಲ್ಲದೇ ಬೇರಾರಿ೦ದಲೂ ಸಾಧ್ಯವೇ ? ಮೋದಿಯ ಯೋಗ ದಿನದ ಆಚರಣೆಗೆ ಭಾರತ ಮಾತ್ರ ವಲ್ಲದೇ ಮೋದಿಯನ್ನು ದೂಷಿಸುವವ್ರಲ್ಲದೇ ಐಟಿ -ಬೀಟಿ ಕಂಪನಿಗಳೂ ಸೇರಿದಂತೆ ಜಗತ್ತಿನ 192 ದೇಶಗಳು ಪಾಲ್ಗೊಳ್ಳುವಂತೆ ಮಾಡಿದ್ದೂ ಪ್ರಶಂಸೆಯ ಮಹಾ ಪೂರವನ್ನು ಹರಿಯುವಂತೆ ಮಾಡಿದ ಡಿ ಗ್ರೇಟ್ ಮೋದಿ ಬುದ್ದಿಮತ್ತೆ ಅಲ್ಲದೇ ಮತ್ತಿನೇನು ?.
ಒಟ್ಟಾರೆ ವಿವರಿಸುತ್ತಾ ಹೋದರೆ ಅದೊಂದು ಧಾರಾವಾಹಿಯೇ ಆಗಬಹುದು ಸಿಂಪಲ್ ಆಗಿ ಮೂರುವರೆ ವರ್ಷಗಳಲ್ಲಿ ಭಾರತ ಕಂಡ ಅದ್ಬುತ ಜನ ಸೇವಕ ಮೋದಿ ತಂದ ಜನೋಪಯೋಗಿ ಯೋಜನೆಯ ಹೈಲೈಡ್ಸ್ ಗಮನಿಸುವುದಾದರೆ . ಕ್ಲೀನ್ ಇಂಡಿಯಾ , ಸಿಲ್ಕ್ ಇಂಡಿಯಾ , ಮೆಕ್ ಇಂಡಿಯಾ , ಜನಧನ ಯೋಜನೆ , ಡಿಜಿಟಲ್ ಇಂಡಿಯಾ , ಆದರ್ಶ ಗ್ರಾಮ ಯೋಜನೆ. ಒನ್ ಬ್ಯಾಂಕ್ , ಒನ್ ಪೆನ್ಶನ್ , ಫಸಲ್ ಬೀಮಾ ಯೋಜನೆ, ಅಟಲ್ ಪೆನ್ಶನ್ ಯೋಜನೆ, ದೀನ್ ದಯಾಳ್ ಯೋಜನೆ, ಸ್ಮಾರ್ಟ್ ಅಪ್ಹ್ ಇಂಡಿಯಾ, ಬೇಟಿ ಬಚಾವೋ , ಬೇಟಿ ಪಡಾವೋ ಯೋಜನೆ, ಬುಲೆಟ್ ಟ್ರೈನ್ ಎಲ್ಪಜಿ , ಮನೆ ಮನೆಗಳಲ್ಲೂ ಗ್ಯಾಸ್ ಒಲೆಯನ್ನು ಉಚಿತವಾಗಿ ಪರಿಚಯಿಸಿದ ಪುಣ್ಯಾತ್ಮ .ಇಷ್ಟೆಲ್ಲಾದ ನಡುವೆಯೂ ಏಟಿಗೆ ಎದುರೇಟು ನೀಡಿದ ಕ್ರಾಂತಿಕಾರಿ , ಬಾರತದ ಸಿಪಾಯಿಗಳ ಮೇಲೆ ಪಾಕಿಸ್ತಾನಿ ಉಗ್ರರು ನಡೆಸಿದ ಘೋರ ಹತ್ಯಾ ಕಾಂಡಕ್ಕೆ , ಬಂದೂಕಿಂದಲೇ ಉತ್ತರ ಕೊಟ್ಟದ್ದೂ ನಿಜಕ್ಕೂ ದಾಖಲೆಯೇ ಸರಿ ಕೇವಲ ರಾತ್ರಿ ಬೆಳಗು ಆಗುವಷ್ಟರಲ್ಲಿ ಸರ್ಜಿಕಲ್ ಸ್ಟ್ರೈಕ್ ಮುಖಾಂತರ ಪಾಕಿ ಸ್ತಾನಿ ನೆಲದಲ್ಲೇ ನಮ್ಮ ಸಿಪಾಯಿಗಳಿಂದ ಸುಮಾರು ಹದಿನೆಂಟಕ್ಕೂ ಅಧಿಕ ಉಗ್ರರ ಮಾರಣ ಹೋಮ ನಡೆಸಿ ಬಿಟ್ಟಿ ಎದೆಗಾರಿಕೆ ಈ ಹಿಂದಿನ ಯಾವ ಪ್ರಧಾನಿಯಲ್ಲಿತ್ತು ?
ಯಾವೊಬ್ಬ ಮಾಡದ ಊಹಿಸಲಾರದ ದೇಶವನ್ನೇ ಗಡ ಗಡ ನಡುಗಿಸಿದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಅoದ್ರೆ ಅದು ಬ್ಲಾಕ್ ಮನಿ ಉಳ್ಳವರ ನಿದ್ದೆ ಗೆಡಿಸಿದ್ದ, ಜಗತ್ತಿನಾದ್ಯಂತಸಂಚನ ಮೂಡಿಸಿದ ಮಹ್ಹಾನ್ ಕಾರ್ಯ .. ಕಾಳಾ ಧನ್ ವಾಪಸಾತಿ ! 500 1000 ಮುಖ ಬೆಲೆಯ ನೋಟುಗಳನ್ನು ತುರ್ತಾಗಿ ನಿಲ್ಲಿಸಿ ಹೊಸ ಬಗೆಯ ನೋಟುಗಳನ್ನೂ ಬಿಡುಗಡೆ ಯೋಚಿಸಿದ ರೀತಿ ನಿಜಕ್ಕೂ ಪ್ರಶಂಸನೀಯ ! ಇದು ಎಂದೂ ಆಗಬೇಕಿತ್ತು , ಭಾರತಾಂಬೆಯ ಮಡಿಲಿನಲ್ಲಿ ಇಂತಹ ದಿಟ್ಟ ಶೂರ ವೀರಾಧಿವೀರ ಒಬ್ಬ ಪ್ರಧಾನಿ ಇದ್ದನೇಯೇ ? ಈತ ಸಾಕಾಷ್ಟು ವರ್ಷಗಳ ಮೊದಲೇ ಪಟ್ಟವನ್ನು ಅಲಂಕರಿಸಬೇಕಿತ್ತು ,ಬಾರತ ಎಲ್ಲೋ ಹೋಗುತ್ತಿತ್ತು
ಇದೂವರೆಗೂ ಯಾವೊಬ್ಬ ಪ್ರಧಾನ ಮಂತ್ರಿ ಮಾಡದ ಕಾರ್ಯಕ್ಕೆ ಕೈ ಹಾಕಿ ಸಕ್ಸಸ್ ಹಾದಿಯಲ್ಲಿ ಮಿನುಗುತ್ತಿರುವ ನರೇಂದ್ರ ಮೋದಿ ಯ ಮಕುಟಕ್ಕೆ ಮತ್ತೊಂದು ಗರಿಬಂದಂತಾಗಿದೆ . ಒಂದೆರಡು ವಾರ ಸಾಮಾನ್ಯ ನಾಗರಿಕರಿಗೆ ಕೊಂಚ ಸಂಕಷ್ಟ ತಂದರೂ ಮುಂದಿನ ದಿನಗಳಲ್ಲಿ ಶ್ರೀಮಂತರೆನಿಸಿ ಕೊಂಡಿರುವವರಿಂದ ಜೀತ ಪದ್ಧತಿ ರಕ್ತ ಹೀರುವ ಬುದ್ದಿಗೆ ಕಡಿವಾಣ ಬೀಳುವುದು ವಿಪರ್ಯಾಸ ವಾದರೂ ವಾಸ್ತವ ! ಒಂದೆರಡು ವಾರ ಇದರಿಂದ ಸಾಮಾನ್ಯ ನಾಗರಿಕನಿಗೆ ನಿಜವಾಗಿಯೂ ಕಷ್ಟ ಇದ್ದೇ ಇರುತ್ತದೆ . ದೇಶದ ಮುಂದಿನ ಬವಿಷ್ಯಕಾಗಿ ನಾವು ಇದನ್ನು ಅರಗಿಸಿ ಕೊಳ್ಳಲೆ ಬೇಕು ..
ದಿನವೀಡಿ ಕೆಲಸ ಕಾರ್ಯವನ್ನು ಬಿಟ್ಟು ನೋಟ್ ಚೇಂಜ್ ಗೆ ಕಾಯಬೇಕಾ ದಾರೂ ಇದೊಂದು ನಮ್ಮಿಂದ ದೇಶಕ್ಕೆ ಸಲ್ಲುತ್ತಿರುವ ಸೇವೆ ಎಂದು ಆಲೋಚಿಸಿ ಈ ಒಂದು ಯೋಜನೆಯ ಜೊತೆಗೆ ಕೈ ಜೋಡಿಸ ಬೇಕಾಗಿದೆ . ಸಮಾಜ ಸೇವೆ ದೇಶ ಸೇವಕರೆದು ಹಣೆ ಪಟ್ಟಿಯಲ್ಲಿರುವವರು ಈಗ ಸಿಕ್ಕ ಅವಕಾಶವನ್ನು ಉಪಯೋಗಿಸಿ ಕೊಂಡು ,ವಯಸ್ಸುಆದವರಿಗೆ, ಮಹಿಳೆಯರಿಗೆ ,ಮಕ್ಕಳಿಗೆ ತಮ್ಮಿಂದ ಆದಷ್ಟು ಸಹಾಯವನ್ನು ನೀಡಬಹುದು ಇದು ನನ್ನ ದೇಶ ಸಲ್ಲಿಸುತ್ತಿರುವ ಕಿಂಚಿತ್ ಸೇವೆ ಎಂದು ಮನಗಾಣ ಬೇಕು .ಇಂತಹ ಅವಕಾಶ ಮುಂದೆಂದೂ ದೊರಕದು .ಹತ್ತುಹೆಗಲುಗಳು, ಹತ್ತುಮನಸುಗಳುಒಂದಾಗಬೇಕಷ್ಟೆ.
ಕೊನೆಯ ಮಾತು
ಮೋದಿ ನಿಮಗಿದೋ ಕೋಟಿ ಕೋಟಿ ನಮಸ್ಕಾರ
ಬೆಚ್ಚಿ ಬೀಳಿಸಿತ್ತು ಜಗತ್ತನ್ನು ಏಳರ ರಾತ್ರಿಯ ಆ ಸುದ್ದಿ
ಭಾರತಾ೦ಬೆಯ ಮಡಿಲಿನಲ್ಲಿತ್ತು ಮೋದಿ ಎಂಬ ಪ್ರಧಾನಿಯಲ್ಲಿ ಮಾತ್ರ ಆ ಬುದ್ದಿ!
ಜನಸೇವಕ ಭಾರತದ ಕುಲ ಪುತ್ರ ಒನ್ ಅಂಡ್ ಓನ್ಲಿ ಈ ಮ್ಯಾನ್
ಮಾಡಿಯೇ ಬಿಟ್ಟರು ಐತಿಹಾಸಿಕ ದಾಖಲೆ , ಕ್ಷಣಮಾತ್ರದಲ್ಲೇ ನೋಟ್ ಬ್ಯಾನ್ !
ದೇಶದಾದ್ಯಂತ ಕೇಳಿಬರುತ್ತಿತ್ತು ಶತಮಾನಗಳಿಂದ ಕಳಾಧನದ ಸದ್ದು
ಎದೆ ಗುಂದದೇ ನಿರ್ಬೀತಿಯಿಂದ ಕೊಟ್ಟೇಬಿಟ್ಟರು ದೊಡ್ಡವರ ಎದೆಗೆ ನೇರ ಗುದ್ದು !
ಪ್ರಸ್ತುತ ಪರಿಸ್ತಿತಿಯಲ್ಲಿ ಅರ್ಥವಾಗುತ್ತಿದೆ ಜನ ಸಾಮಾನ್ಯರೇ ನಿಮ್ಮ ಸಂಕಷ್ಟ ನಮಗಿಂದು
ಭವ್ಯ ಬಾರತದ ಕನಸ್ಸಿಗೆ ,ಅಭಿರುದ್ಧಿ ಪಥಕ್ಕೆ ಸಾಕು ಈ ಸೇವೆ ಮುಂದೆಂದೂ !
ಉಳ್ಳವರಿಂದ ಇಲ್ಲದವರಿಗೆ ಕಳಚಿ ಕೊಂಡಿತು ತಿರಸ್ಕಾರ ಭಾವ , ಧನಿಕರಿಂದ ಒದಗಿಸಿದ ಈ ಪುರಸ್ಕಾರ
ದೇಶ ಕಂಡ ಅದ್ಬುತ ಪ್ರಧಾನಿ ,ಯುಗಪುರುಷ ಮೋದಿ ನಿಮಗೆ ಕೋಟಿ ಕೋಟಿ ನಮಸ್ಕಾರ !
ಕೋಪ ಬಿಡಿ ಕ್ಯೂ ನಲ್ಲಿ ನಿಲ್ಲಿ ಇದು ನನ್ನ ದೇಶ ಸೇವೆ ಎಂದು ಸಹಿಸಿ
ಇದು ನಿಮ್ಮಿಂದ ಸಾಧ್ಯ ,ನೋಟು ದೊರೆಗಳನ್ನು ಅಳಿಸಿ ದೇಶವನ್ನು ಉಳಿಸಿ !

ಬುಧವಾರ, ನವೆಂಬರ್ 9, 2016
ಆಧುನಿಕ ತಂತ್ರಜ್ಞಾನಗಳ ನಡುವೆಯೂ ನಡೆಯಿತು ನಡೆಯಬಾರದ ಘಟನೆ : ಯೇ ವಿಧಿ ನೀನೆಷ್ಟು ಕ್ರೂರಿ
ಮಾಸ್ತಿಗುಡಿ ದುರಂತ : ಯಾರು ಹೊಣೆ ?
ಭಂಡ ದೈರ್ಯ ಪ್ರಾಣಕ್ಕೆ ಎರವಾಯಿತೆ ?
ನಿಮ್ಮ ಭಾರವನ್ನು ಸಹಿಸದಾದನೇ ವಿಧಿ ?
ಕಲಾವಿದರನ್ನು ದೂಡಿ ಆಳ ನೋಡುವ ನಿರ್ದೇಶಕರುಗಳೇ ನಿಮ್ಮ ಜನ್ಮಕ್ಕೆ ಇಷ್ಟು ಬೆಂಕಿ ಹಾಕ ! ಪ್ರಸ್ತುತ ವೈಜ್ಞಾನಿಕ ತಂತ್ರಜ್ಞಾನಗಳ ನಡುವೆಯೂ ಹೀಗೊಂದು ಘಟನೆ ನಡೆದಿರುವುದು ನಾಚಿಕೆ ಗೇಡು !ಹಾಸ್ಯಾಸ್ಪದ ! ನಿರ್ಲಕ್ಷವಲ್ಲದೆ ಮತ್ತಿನ್ನೇನು ? ಯಾರೂ ಮಾಡದ ಕಾರ್ಯಕ್ಕೆ ಕೈ ಹಾಕಿ ಗಿನ್ನಿಸ್ ಪುಸ್ತಕದಲ್ಲಿ ತಮ್ಮ ಹೆಸರು ನೊಂದಾಯಿಸಿ ದಾಖಲೆ ಮಾಡಬೇಕೆಂಬ ಹುಚ್ಚು ಹಂಬಲ ನಿರ್ದೇಶಕರದ್ದು ! ಪಾಪ ಏನೂ ಅರಿಯದ ಅಮಾಯಕ ನತದೃಷ್ಟ ಕಲಾವಿದರುಗಳ ಜೀವ ಮಾತ್ರ ತೂಗು ಗತ್ತಿ ಮೇಲೆ ತೇಲುತ್ತಿರುರುವುದು ಅಕ್ಷರಸ:ನಿಜ .ಅದೃಷ್ಟ ಇದ್ದರೆ ಬದುಕಿ ಉಳಿಯಬಹುದು ಇಲ್ಲದಿದ್ದರೆ ಕುಟುಂಬದಲ್ಲಿ ಸೂತಕ ವೇ ಗತಿ ! ಯಾರೂ ಬರಲಾರರು ನಮ್ಮ ರಕ್ಷಣೆಗೆ ಇವನ್ ಭಗವಂತನೂ ಕೂಡಾ ! ಹೌದು ನಿಮ್ಮಿಂದ ನೋಡ ನೋಡುತ್ತಲೇ ದೂರವಾದ ಉದಯೋನ್ಮುಖ ಬಡ ಕಲಾವಿದರಾದ ಉದಯ್ ಹಾಗು ಅನಿಲ್ ರ ಚಿತ್ರಣ ಕಣ್ಣ ಮುಂದೆ ಹಾಯುತ್ತಿದೆ .. ಎಂತಾ ಕಲ್ಲು ಮನಸ್ಸಿನವರಿಗೂ ಕೂಡಾ ತಮಗೆ ಅರಿವಿಲ್ಲ ದಂತೆ ಕಂಬನಿ ಜಾರದೇ ಇರಲಾರದು ನಿನಿಮಾ ಅವಕಾಶಕ್ಕಾಗಿ ಅದೆಷ್ಟೋ ವರ್ಷ ವ್ರತ ಮಾಡ್ಬೇಕು ತಮ್ಮಲ್ಲಿ ಕಲೆಯ ಆಳ –ಅಂತರಾಳ ಕರಗತವಾಗಿದ್ದರೂ ಕಲಾ ವಿದನೆನಸಿ ಕೊಳ್ಳುವುದು ಅಷ್ಟು ಸುಲಭದ ಮಾತಲ್ಲ . ತೆರೆಯಲ್ಲಿ ಮೀನುಗ ಬೇಕಾದರೆ ತೆರೆಯ ಹಿಂದೆ ಅದೆಷ್ಟೋ ಕಷ್ಟ ಕಾರ್ಪಣ್ಯ ವನ್ನು ಉಂಡಿರುತ್ತಾರೆ , ಅವಕಾಶಕ್ಕಾಗಿ ಅದೆಷ್ಟೋ ನಿರ್ದೇಶಕ ಮನೆ ಬಾಗಿಲು ಬಡಿದು, ಸಿಕ್ಕ ಅವಕಾಶ ಹೇಗೆ ಇರಲಿ ದ್ರತಿ ಗೆಡದೆ ಮಾಡಿ ಮುಗಿಸಿ ನಾಳೆ ಭವ್ಯ ಭವಿಷ್ಯಕ್ಕೆ ಬೆಳಕು ಆಗಬೇಕೆಂಬ ಮಹತ್ವಕಾ೦ಕ್ಷೆ ಯಿಂದ ಕ್ಷಣದಲ್ಲಿ ಎಷ್ಟೇ ಕಠಿಣ ಪರಿಸ್ತಿತಿ ಇದ್ದರೂ ,ತಮ್ಮ ವಯಕ್ತಿಕವಾದ ತೊಂದರೆ ತಾಪತ್ರೆ ಗಳಿದ್ದರೂ , ದಿಡೀರ್ ನಿರ್ಧಾರಕ್ಕೆ ಕೈ ಹಾಕಿ , ತಮ್ಮ ಪ್ರಾಣವನ್ನೇ ಪಣಕ್ಕೆ ಇಡುವ ಪ್ರಮೇಯವನ್ನೂ ಕೂಡ ಮೆಟ್ಟಿ ನಿಲ್ಲುತ್ತಾರೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ . ಅದನ್ನೇ ಬಂಡವಾಳ ಮಾಡಿ ಕೊಂಡು ಕಲಾವಿದರುಗಳ ಪ್ರಾಣದ ಜೊತೆ ಚೆಲ್ಲಾಟ ವಾಡುವ ಕೆಲ ನಿರ್ದೇಶಕರುಗಳ ಮನಸ್ಸಿಗೆ ಕೊಳ್ಳಿ ಇಡಬೇಕಾಗಿದೆ . ತಂತ್ರಜ್ಞಾನ ಮುಂದುವರಿದಂತೆ ಇಂಥಹ ಹುಚ್ಚು ಸಾಹಸಗಳು ಬೇಕೇ ? ಅವಶ್ಯಕತೆ ಇದ್ದರೇ ಮುಂದಾಗುವ ಅನಾಹುತಗಳನ್ನು ಅರಿತು ಸುರಕ್ಷತೆ ಕಡೆ ಗಮನ ಹರಿಸುವಲ್ಲಿ ಆಗುವ ಅಡ್ಡಿಯಾದರೂ ಏನು ? ಮೂರು ಅಮೂಲ್ಯ ಜೀವಗಳ ರಕ್ಷಣೆಗೆ ಕೇವಲ ಒಂದೇ ಒಂದು ಬೋಟು ..! ಅದೂ ಕೊಡಾ ಕೆರೆಯ ದಡದಲ್ಲಿ! ಅಪಘಾತ ಸಂಬವಿಸಿದ ಬಳಿಕ ನೀರಿಗಿಳಿಯುವ ಪ್ಲಾನ್ ! ಸ್ಪಾಟ್ ಟು ಬೊಟ್ ಹತ್ತು ನಿಮಿಷ ದಾರಿ , ಹತ್ತು ಸೆಕೆಂಡ್ ನೀರಲ್ಲಿ ಈಜು ಬಾರದವರಿಗೆ ಉಸಿರುಬಿಗಿಹಿಡಿಯುವುದು ಕಷ್ಟ ಅಂತದ್ರಲ್ಲಿ ಹತ್ತು ನಿಮಿಷ ಪ್ರಯಾಣ ಮಾಡಿ ಬೋಟು ಅವರನ್ನು ಕಾಪಾಡಬೇಕು ಎಂಥಾ ಮುಟ್ಟಳ ಐಡಿಯಾ ಇದು ?!“ ನನಗೆ ಆರೋಗ್ಯ ಸರಿ ಇಲ್ಲ ಎರಡು ದಿನಗಳಿಂದ ಜ್ವರದಲ್ಲಿ ಬಳಲುತ್ತಿದ್ದೇನೆ ಕೊನೆಯ ಚಿತ್ರೀಕರಣ ಕ್ಲೈ ಮೇಕ್ಸ್ ಉತ್ತಮವಾಗಿ ಬರಬೇಕು ನನ್ನಿಂದ ಇದು ನಿಲ್ಲಬಾರದು ಎಂಬ ಉದ್ದೇಶ ದಿಂದ ಪಾಲ್ಗೊಳ್ಳುತ್ತಾ ಇದ್ದೇವೆ 60 ಅಡಿ ಎಂದು ಇದೀಗ 100 ಅಡಿಗೆ ಡಿಕ್ಲೇರ್ ಮಾಡಿದ್ದಾರೆ ನಮ್ಮ ಪೈಟ್ ಮಾಸ್ತರ್ . ನಿಜಕ್ಕೂ ಭಯವಾಗುತ್ತದೆ . ಇದೆ ಪ್ರಥಮ ಬಾರಿಗೆ ಹೆಲಿಕಾಪ್ಟರ್ ನ್ನು ಏರುತ್ತಿರುವುದು . ಈಜು ಗೊತ್ತಿಲ್ಲ “ ಎಂದು ಉಭಯ ಕಲಾವಿದರು ಸಾಹಸಕ್ಕೆ ಮುನ್ನ ಮಾಧ್ಯಮಗಳ ಜೊತೆ ಹೇಳಿದ ಪರಿ ನೋಡಿದ್ದರೆ ನಿಜಕ್ಕೂ ಕರುಳು ಹಿಂಡಿ ಬರುತ್ತದೆ . ಇಷ್ಟಿದ್ದರೂ ಇದ್ಯಾವುದನ್ನೂ ಕಂಡೂ ,ಕೇಳದಂತೆ ಚಿತ್ರ ತಂಡ ಯಾವುದೇ ದೂಪ್ ಬಳಸದೇ ನೀರಿಗೆ ಧುಮುಕಿಸಿ ಪ್ರಾಣವನ್ನು ಕಸಿದು ಕೊಂಡು ಬಿಟ್ಟರಲ್ಲ ! ಛೆ .. ದಿಕ್ಕಾರ ವಿರಲಿ ! ಕೇಸು ಕಾನೂನು ಕಾಯ್ದೆ ಎಲ್ಲವೂ ಇದೆ ಎರಡು ದಿನ ತಪ್ಪಿತಸ್ತರು ಜೈಲ್ ಗೆ ಹೋಗಿ ಬರಬಹುದು ಆದರೆ ಆ ಅಮೂಲ್ಯವಾದ ಎರಡು ಜೀವಗಳು ಮರಳಿ ಬರಲು ಸಾದ್ಯವೇ ? ದೇವರ ಮೇಲೆ ಭಾರ ಹಾಕಿ ಅಪ್ಪ ಅಮ್ಮನ ನೆನೆದು ಕೊಂಡು ಹೆಲಿಪ್ಯಾಡ್ ಹತ್ತಿದ್ದ ಉದಯ ,ಅನಿಲ್ ರನ್ನು ಕೊನೆ ಪಕ್ಷ ಆ ಭಗವಂತನೂ ಕೂಡಾ ಕಾಪಾಡುವಲ್ಲಿ ವಿಫಲ ನಾದನೆ ? ವಿಧಿ ನೀನೆಷ್ಟು ಕ್ರೂರಿ ? ಇಷ್ಟೆಲ್ಲಾ ರಿಸ್ಕ್ ಅಂತ ಗೊತ್ತಿದ್ದರೂ , ಯಾಕೆ ಬೇಕಿತ್ತು ಆ ಭಂಡ ದೈರ್ಯ ? ಸಿನಿಮಾದಲ್ಲಿ ಚಾನ್ಸ್ ಸಿಗದಿದ್ದರೇನು ? ದುಡಿದು ತಿನ್ನುವುದಕ್ಕೆ ಸಾಕಷ್ಟು ಹಾದಿಗಳಿವೆ .. ತಮ್ಮನ್ನೇ ನಂಬಿ ಕೊಂಡಿರುವ ಕುಟುಂಬಸ್ತರ ಮನಸ್ಥಿತಿ ಅರ್ಥೈಸಿ ಕೊಳ್ಳುವವರು ಯಾರು ? ತಮ್ಮ ಪ್ರಾಣ ಕಾಪಾಡುವುದಕ್ಕೆ ಇತ್ತ ಗುರುವೂ ಇಲ್ಲ ಅತ್ತ ಸಾಹಸ ನಿರ್ದೇಶಕರೂ ಇಲ್ಲ ಇವರನ್ನೆಲ್ಲಾ ನಂಬಿ ಅಪಾಯಕಾರಿ ಯಾಗಿ ಸ್ಟಂಟ್ ಪ್ರದರ್ಶಿಸುವ ದರ್ದು ಏನಿತ್ತು ?ಹಾಗೆ ನೋಡಿದರೆ ನಿನಿಮಾ ಗಳಲ್ಲಿ ಸಾಹಸ ದ್ರಷ್ಯವನ್ನು ಮಾಡುವಾಗ ಅಪಘಾತ ,ಅಪಾಯ ಕಟ್ಟಿಟ್ಟ ಬುತ್ತಿಯೇ ಆದರೆ ಅದಕ್ಕೂ ಮೊದಲು ಸುರಕ್ಷತೆ ದ್ರಷ್ಟಿ ಇದ್ದೆ ಇರುತ್ತದೆ . 1996 ಲಾಕಪ್ ಡೆತ್ ಸಿನಿಮಾದ ಚೇಸಿಂಗ್ ಚಿತ್ರೀಕರಣದ ವೇಳೆ ಬೈಕ್ ಹಾರಿಸುವಾಗ ಇಬ್ಬರು ಸಾಹಸ ಕಲಾವಿದರುಗಳು ಸಾವನ್ನು ಅಪ್ಪಿತ್ತದ್ದರು ಅದನ್ನೊಂದು ಬಿಟ್ಟರೆ ಇನ್ಯಾಂದೂ ಇಂತಹ ಘಟನೆಗಳು ನಡೆದಿರಲಿಲ್ಲ ಕೂದಲೆಳೆಯ ಅಂತರದಲ್ಲಿ ಸಾವನ್ನು ಗೆದ್ದ ಬಂದದ್ದೂ ನೋವನ್ನೂ ಉಂಡದ್ದೂ ಉದಾಹರಣೆಯಾಗಿ ಸಿಕ್ಕರೂ ನಿಯಮಿತವಾಗ ರಕ್ಷಣಾ ಸರಕು ತಂತ್ರಗಳಿಂದ ಇಂತಹ ಘಟನೆ ನಡೆದಿರಲಿಲ್ಲ. ನಿನ್ನೆಯ ಘಟನೆಯಲ್ಲಿ ಪೂರ್ಣ ಪ್ರಮಾಣದ ನಿರ್ಲಕ್ಷತನ ಎದ್ದು ಕಾಣುತ್ತಿದೆ . ರೋಪ್ ,ಲೈಫ್ ಜಾಕೆಟ್, ಟ್ಯೂಬ್ ,ಬೊಟ್ ಗಳಿದ್ದಿದ್ದರೆ ಖಂಡಿತವಾಗಿಯೂ ಈ ಎರಡು ಜೀವಗಳನ್ನು ಮುಂದಿನ ಸಿನಿಮಾಗಳಲ್ಲಿ ನಾವು ಜೀವಂತವಾಗಿ ಕಣ್ತುಂಬಿಸಿ ಕೊಳ್ಳ ಬಹುದಿತ್ತು .. ಚಿತ್ರ ರಂಗದಲ್ಲಿ ಇನ್ನೆಂದೂ ಈ ತರಹದ ಘಟನೆಗಳು ಮರುಕಳಿಸದೇ ಇರಲಿ ,ಕಲಾವಿದರುಗಳೇ ತಮ್ಮ ಜೀವ ತಮ್ಮ ಕೈ ಯಲ್ಲಿ ! ಯಾರ ಮಾತಿಗೂ ಬಗ್ಗದೇ ರಿಸ್ಕ್ ಗೆ ಮುನ್ನುಗದಿರಿ ! ನಿರ್ದೇಶಕರುಗಳಿಗೆ ಎಕ್ಷ್ಕ್ಲೋಸಿವ್ ಫಿಲಂ ಮಾತ್ರ ಮುಖ್ಯ , ಕಲಾವಿದರುಗಳಲ್ಲ !! ಅಗಲಿದ ಕಲಾವಿದರುಗಳ ಆತ್ಮಕ್ಕೆ ಶಾಂತಿ ದೊರಕಲಿ , ಇನ್ನೊಮ್ಮೆ ಹುಟ್ಟಿ ಬನ್ನಿ ಎಂದೆಷ್ಟೇ ಕೇಳಬೇಕು !

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)