ಶನಿವಾರ, ಜುಲೈ 28, 2012

ಹಾಲಾಡಿ ಶ್ರೀನಿವಾಸ ಶೆಟ್ಟರ ಅಚಲ ನಿರ್ಧಾರಕ್ಕೆ ಹೆಂಡ್ಸಪ್ಹ್...


.
ಈ ಒಂದು ವಾಕ್ಯ ನನ್ನ ಒಡಲದ್ವನಿ ಇಂದ ಯಾಕೆ ಹೊರ ಹೊಮ್ಮಿತು ಎಂದರೆ ,ಖಂಡಿತವಾಗಿಯೂ ಇಂಥಹ ರಾಜಕಾರಣಿಗಳು ನಮ್ಮ ರಾಜಕೀಯದಲ್ಲಿ ಇದ್ದರಲ್ಲ ಎಂಬ  ಆಸೆ ಇಂದ.ಈ ಒಂದು ಸತ್ವ -ತತ್ವದ ಹಾದಿ ಇಂದ ಶ್ರೀನಿವಾಸ ಶೆಟ್ಟರು ಕೇವಲ ಅವರ ಕುಂದಾಪುರ ಕ್ಷೇತ್ರಕ್ಕೆ ಮಾತ್ರವಲ್ಲದೇ ಕರ್ನಾಟಕ ರಾಜ್ಯಾದ್ಯಂತ ಮನೆ ಮಾತಾಗಿದ್ದಾರೆ,ಪ್ರಶ೦ಸರ್ಹ ಮಳೆಯಲ್ಲಿ ಮೀಯುತ್ತಿದ್ದಾರೆ.ಕುಂದಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಸತತ 4 ಬಾರಿ ಶಾಸಕ ಸ್ಥಾನಕ್ಕೆ ಸ್ವರ್ಧಿಸಿ ಗೆದ್ದಿದ್ದರು .ಅಷ್ಟೇ ಸಮಾಜ ಸೇವೆ ,ಪ್ರಾಮಾಣಿಕ ನಿಷ್ಟಾವಂತ ವ್ಯಕ್ತಿ ಎಂದು ಗುರುತಿಸಿ ಕೊಂಡ್ಡಿದ್ದರು .ಯಡಿಯೂರಪ್ಪನವರ  ಸರ್ಕಾರದಲ್ಲಿ ಕೊಂಚ ಪ್ರಯತ್ನಪಟ್ಟಿದ್ದರೆ , ಆ ಸಮಯದಲ್ಲೇ ಮಂತ್ರಿಗಿರಿ ಯನ್ನು ಅಲ೦ಕರಿಸಬಹುದಿತ್ತು.
ಆದರೆ ಪಟ್ಟಕ್ಕಾಗಿ ಎಂದು ಪಟ್ಟು ಹಿಡಿದವರೇ ಅಲ್ಲ  ಎಂಬುದನ್ನು ಅವರ ಮನಸ್ಸಿನ ಆಳ- ಅಂತರಾಳವನ್ನು ಅರಸಿದಾಗ ಅರಿಯಲ್ಪಡುತ್ತದೆ.ಆದರೆ ಕರ್(?) -ನಾಟಕದ  ರಾಜಕೀಯ ಪರಿಸ್ಥಿತಿಯಲ್ಲಿ  ಇನ್ನು ಕೆಲವೇ ತಿಂಗಳುಗಳಿರುವ ಆಡಳಿತ ಪ್ರಕ್ರಿಯೆಯಲ್ಲಿ ಬದಲಾದ ನೂತನ ಬಿ .ಜೆ.ಪಿ ನಾಯಕನಾದ ಜಗದೀಶ್ ಶೆಟ್ಟರ್ ಸಚಿವ ಸಂಪುಟದಲ್ಲಿ ಇವರ ಹೆಸರು ಉನ್ನತ ಮಟ್ಟದಲ್ಲಿ ಗುರುತಿಸಿ ಕೊಂಡಿತು ಅವರಿಗಿದು ಎಳ್ಳಷ್ಟು ಅಪೇಕ್ಷೆ ಇಲ್ಲದಿದ್ದರೂ
ಕಾರ್ಯಕರ್ತರ ,ಅಭಿಮಾನಿಗಳ ,ಹಿತೈಷಿಗಳ ,ಆಪ್ತರ ಒತ್ತಾಯದ ಮೇರೆಗೆ ಅನಾರೋಗ್ಯದ ನಡುವೆಯೂ ಬೆಂಗಳೂರಿಗೆ ಧಾವಿಸಿದರು .ಆದರೆ ಅಲ್ಲಿ ನಡೆದ ಚಿತ್ರಣವೇ ಬೇರೆ .ಇನ್ನೇನು ಹಾಲಾಡಿ  ಪ್ರಮಾಣ ವಚನ ಸ್ವೀಕರಿಸುತ್ತಾರೆ  ಎಂದು ಎಲ್ಲರೂ ನ೦ಬಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಹೆಸರು ಬದಲಾವಣೆ ಗೊಂಡಿತು .ನಿಜಕ್ಕೂ ಹಾಲಾಡಿಯವರಿಗೆ ಸೇರಿದಂತೆ ಅವರ ಆಪ್ತರಿಗೆ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತ ಅನುಭವವಾಗಿರಬೇಕು
ಮಂತ್ರಿಗಿರಿ ಕೊಡುತ್ತೇನೆಂದು ಇವರನ್ನು ಕರೆಯಿಸಿ ಈ ರೀತಿ ಅವಮಾನ ಮಾಡಬಾರದಿತ್ತು ಎಂದು ನೆರದಿದ್ದ ಎಲ್ಲ ಸಭಿಕರು ಹೆಚ್ಚಾಗಿ ವಿರೋಧ ಪಕ್ಷದ ನಾಯಕರುಗಳೇ  ಉಸಿರಿದರು .ನನಗೆ ಅಗೌರವ ಕ್ಷೇತ್ರದ ಜನತೆಗೆ ಅವಮಾನ ಮಾಡಲಾಗಿದೆ ಎಂದು ಕಣ್ಣಿರು ಸುರಿಸಿದರು ತಟ್ಟನೆ  ರಾಜೀನಾಮೆ ಕೊಡುತ್ತೇನೆಂದು ಘೋಷಿಯೇ ಬಿಟ್ಟರು ಅಂತೆಯೇ ಪ್ರವಾಸದಲಿದ್ದ ಸ್ಪೀಕರ್ ಆಗಮನದ ನಂತರ ರಾಜೀನಾಮೆ ಪತ್ರವನ್ನು ಕೊಟ್ಟೆಬಿಟ್ಟರು .ಕರಾವಳಿಯ ಶಾಸಕರುಗಳಾದ ಬೈ೦ದೂರು ಲಕ್ಷ್ಮಿ ನಾರಾಯಣ ಶೇರಿಗಾರ ,ಮತ್ತು ಉಡುಪಿ ಯ ರಘುಪತಿ ಭಟ್ ರವರು ಬೆಂಗಳೂರಿನಲ್ಲಿ ಶ್ರೀನಿವಾಸರವರಿಗೆ ಮೋಸವಾಗಿದೆ  ತಾವು 
ರಾಜಿನಾಮೆ ಕೊಡುತ್ತೇನೆಂದು ಮಾದ್ಯಮದ ಮುಂದೆ ಬೊಗಳೆ ಬಿಟ್ಟಿದ್ದರು. ಈ ಘಟನೆಗೆ ಒಂದೆಡೆ ಕಾಲ್ ಡ್ಕ ಪ್ರಭಾಕರ ಭಟ್ ಒಂದು ಫೋನ್ ಕಾಲ್  ಇನ್ನೊಂದೆಡೆ ಜಾತಿ ಕೋಟ ದಡಿಯಲ್ಲಿ ಹಾಲಾಡಿ ಗೆ ಮಂತ್ರಿ ಪಟ್ಟ ತಪ್ಪಿ ಹೋಯಿತು ಎಂದು ರಾಜಕೀಯ ವಲಯದಲ್ಲಿ ಕೇಳಿಬಂದವು .ಅಂತೂ ಹಾಲಾಡಿ ಬೆ೦ಬಲಿಗರ ಆಕ್ರೋಶ ,ಹರತಾಳ ,ಘರ್ಷಣೆ ಮುಗಿಲು ಮುಟ್ಟಿತ್ತು. ಕುಂದಾಪುರ ತಾಲೂಕು ಬಂದ್ ಕೂಡ ಆಯಿತು .ಈ ಒಂದು ಹೋರಾಟದಲ್ಲಿ ಕೇವಲ ಅಭಿಮಾನಿಗಳ ಕಾರ್ಯಕರ್ತರು ,ಹಿತೈಶಿಗಳು ಮಾತ್ರ ಪಾಲ್ಗೊಳ್ಳದೆ ಮಹಿಳೆಯರು ,ವಿಧ್ಯಾರ್ಥಿಗಳು ,ಕೆಲವು ಸಂಘ ಸಂಸ್ಥೆಗಳು ಹೋರಾಟಕ್ಕೆ ಇಳಿದವು .ಹೋರಾಟ ಕೇವಲ ಕುಂದಾಪುರ ತಾಲೋಕು ಮಾತ್ರ ಅಲ್ಲದೇ ಮಂಗಳೂರು ,ಮುಂಬಯಿ ,ಬೆಂಗಳೂರುಗಳು ಪ್ರತಿಕ್ರಿಯಿಸಿದವುಯೆನ್ನುದಕ್ಕೆ  ಹಾಲಾಡಿಯವರು ಎಷ್ಟು ಪ್ರಾಮಾಣಿಕ ವ್ಯಕ್ತಿಯಾಗಿದ್ದರು ಎಂಬುದಕ್ಕೆ ಇದೆ ಸಾಕ್ಷಿ ಅಲ್ವೇ 
?ರಾಜೀನಾಮೆ ನೀಡಿ ತವರಿಗೆ ಬಂದರೂ ಬಿ ಜೆ ಪಿ ಪಾಳಯದಲ್ಲಿ ಮನವಲಿಸಲು ಸಾಕಷ್ಟು ಕಸರತ್ತು ನಡೆಸಿದ್ದರು .ಹಲವಾರು ಮುಖಂಡರು ಬೆಂಗಳೂರಿನಿಂದ ಹಿಡಿದು ಹಾಲಾಡಿ ಯವರ ಮನೆಯವರೆಗೆ ಬಂದರೂ ನಿರ್ಧಾರವನ್ನುವನ್ನು ಕೈ ಬಿಡಲೇ ಇಲ್ಲ ರಾಜಿನಾಮೆ ನೆಪ ಒಡ್ಡಿ ಸ್ಥಾನ -ಮಾನ ಕ್ಕಾಗಿ ತಂತ್ರ -ಮಂತ್ರ ದ ಹಾದಿ ಯನ್ನು ಹಿಡಿಯುವ  ಕೆಲವು ಹೆಚ್ಚಿನ ರಾಜಕಾರಣಿಗಳ ಮಧ್ಯ ಇಂತವರು ಸಿಗವುದು ಬಹಳ  ಅಪುರೂಪ .ಅಚಲ ನಿರ್ಧಾರವನ್ನು ಮೈಗೂಡಿಸಿ ಕೊಂಡು ಬಾಳುತ್ತಿರುವ ಇವರ ನಿಷ್ಠೆಗೆ  ಇಲ್ಲೊಮ್ಮೆ ಹೆಡ್ ಸಾಪ್ಹ್ ಎನ್ನೋಣವೇ ?


ಗುರುವಾರ, ಜುಲೈ 26, 2012

ಸದಾನಂದ ಗೌಡರು ಎಡವಿದ್ದೆಲ್ಲಿ ?


       ಕರ್ -ನಾಟಕ  ರಾಜಕೀಯ
ಭೂ ಹಗರಣ ಕ್ಕೆ ಸಂಬಂದಿಸಿದಂತೆ ಕರ್ನಾಟಕದ ಬಿ ಜೆ ಪಿ ಸರ್ಕಾರದಲ್ಲಿ ಮುಖ್ಯ ಮಂತ್ರಿ ಯಾಗಿ ಮೂರೂವರೆ ವರ್ಷ ಆಡಳಿತ ನಡೆಸಿದ್ದ ಯೆಡಿಯೂರಪ್ಪ ಕೋರ್ಟಿನ ಕಿರಿ -ಕಿರಿ ,ವಿರೋಧ ಪಕ್ಷದವರ ಆಟೋಟೊಪ ,ಬಿಜೆಪಿ ಹೈಕಮಾಂಡ್ ನ ಒತ್ತಡ ಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ಕುರ್ಚಿ ಇಂದ ಕೆಳಗೆ ಇಳಿಯಲೇ ಬೇಕಾಯಿತು . ಪುನ : ಹೇಗಾದರೂ ಮಾಡಿ ಕುರ್ಚಿ ಏರಬೇಕು ಎಂಬ ಹಂಬಲದಿಂದ ಯೆಡಿಯೂರಪ್ಪ ಒಂದು ತಂತ್ರವನ್ನು ರೂಪಿಸಿಯೇ ಬಿಟ್ಟರು .ರಾಜೀನಾಮೆ ಕೊಡಲು ಸಿದ್ದ ಆದರೆ ನಾನು ಬಯಸಿದ  ವ್ಯಕ್ತಿಯನ್ನು ಮುಖ್ಯ ಮಂತ್ರಿಯನ್ನಾಗಿ ಮಾಡಬೇಕೆಂಬ ಒತ್ತಾಯವನ್ನು ಹೈ ಕಮಾಂಡ್ ಮೇಲೆ ಇರಿಸಿದರು .ಅವರ ಅಪ್ಪಣೆಯಂತೆ ಸದಾನಂದ ಗೌಡರು ಮುಖ್ಯಮಂತ್ರಿಯಾದರು .
ಯಡಿಯೂರಪ್ಪನ ಮೇಲೆ ಇದ್ದ ಒಂದು ಪುಟ್ಟ ಕೇಸು ಖುಲಾಸೆ  ಗೊಂಡ ತಕ್ಷಣ  ಸದಾನಂದಗೌಡರಿಗೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲು ಒತ್ತಾಯಿಸಿ ತಾನು ಮುಖ್ಯಮಂತ್ರಿ ಪಟ್ಟವನ್ನೆರಲು ಉಪಾಯವನ್ನು ಹೂಡಿದರು .ಯೆಡಿಯೂರಪ್ಪನ ವಚನಕ್ಕೆ ಒಪ್ಪಿ ಮುಖ್ಯಮಂತ್ರಿ ಪದವಿಗೇರಿದ ಸದಾನಂದಗೌಡರು ಬಿಟ್ಟು ಕೊಡುವ ಪ್ರಮೇಯಕ್ಕೆ ಕೈ ಹಾಕಲೇ ಇಲ್ಲ .ಕಾರಣ ಬಯಸದೇ ಬಂದ ಭಾಗ್ಯ ...!ಇದನ್ನು ಗಟ್ಟಿಮಾಡಿಕೊಳ್ಳುವ ಎನ್ನುವ ಲೆಕ್ಕಚಾರವೋ ? ಅಥವಾ ಒಳ್ಳೆಯ ಆಡಳಿತವನ್ನು ನಡೆಸಬೇಕೆಂಬ ಆಕಾಂಕ್ಷೆಯೋ ಒಟ್ಟಾರೆ ಯೆಡಿಯೂರಪ್ಪನವರ ಮಾತಿಗೆ ಸೊಪ್ಪು ಹಾಕದೇ ಹೈಕಮಾಂಡ್ ನ ಪಾದರವಿಂದದ ಕೆಳಗೆ ಇಟ್ಟರು. 
 ಹೈಕಮಾಂಡ್ ಹೇಳಿದರೆ ಮಾತ್ರ ರಾಜಿನಾಮೆ ನೀಡಲು ಸಿದ್ದ ಎಂದು ಸಾರಸಗಟಾಗಿ ಸಾರಿ ಬಿಟ್ಟರು .ಸಿಟ್ಟಿಗೆದ್ದ ಯೆಡಿಯೂರಪ್ಪ ಬಹಳಷ್ಟು ಮಾಡಬಾರದಷ್ಟು ಕಸರತ್ತನ್ನು ಮಾಡಿ ಬಿಟ್ಟರು .ರೆಸಾರ್ಟ್ ರಾಜಕೀಯ ,ಬಣ ರಾಜಕೀಯ ವನ್ನು ಸ್ರಷ್ಟಿಮಾಡಿ  ಒಂದಷ್ಟು ಶಾಸಕರರನ್ನು ಒಟ್ಟು ಗೂಡಿಸಿ ಸದಾನಂದಗೌಡರು ವಿರುದ್ಧ  ತತ್ವವನ್ನು ಬೆಳೆಸಲು  ಸಕ್ರಿಯರಾದರು .ಎರಡು ಬಣ ಬಿ. ಜೆ. ಪಿ ಯಲ್ಲಿ ತಲೆದೂರಲಾರ೦ಭಿಸಿದವು.ಒಟ್ಟಾರೆ ಬಿ. ಜೆ. ಪಿ ಯನ್ನು ದಕ್ಷಿಣ ಭಾರತದಲ್ಲಿ  ಅದರಲ್ಲೂ ಮೊಟ್ಟ ಮೊದಲಾಗಿ ಕರ್ನಾಟಕದಲ್ಲಿ ಆಡಳಿತಕ್ಕೆತಂದಂತ ಕೀರ್ತಿ ಗೆ  ಯಡಿಯೂರಪ್ಪ ಭಾಜನರಾಗಿ ಎಲ್ಲರಿಂದ ಪ್ರಶಂಸೆಯ ಮಳೆಯನ್ನೂ  ಅನುಭವಿಸಿದ್ದ  ಇವರ ಈ ಅಧಿಕಾರ ಹಂಬಲತನದಿಂದ ಈ ತರಹದ ಕಾರ್ಯಕ್ಕೆ ಕೈ ಹಾಕಿದ್ದು ಸಮಾಜದಲ್ಲಿ ಅಸಹಾಯಕತೆಯನ್ನು ನೀರಿಕ್ಷೆಗೂ ಮೀರಿ ಉಂಟುಮಾಡಿತ್ತು. ಈ ನಡುವೆ  ಉಡುಪಿ -ಚಿಕ್ಕಮಗಳೂರು ಲೋಕಸಭಾ ಮತ್ತು ಬಳ್ಳಾರಿಯ ಚುನಾವಣೆಯಲ್ಲಿ ಬಿ. ಜೆ .ಪಿಗೆ ಬಾರಿ ಸೋಲು ಉಂಟಾಯಿತು .ಯೆಡಿಯೂರಪ್ಪನವರ ಅನುಪಸ್ಥಿತಿಯೇ ಇದಕ್ಕೆ ಕಾರಣ ಎಂದು ಬಿಂಬಿಸಲ್ಪಟ್ಟು ಈ ವಿಚಾರದಲ್ಲಿ ಯೆಡಿಯೂರಪ್ಪ ಒಂದಿಷ್ಟು ಹೀರೋ ಕೂಡ ಆದರು. ಅನೀರಿಕ್ಷಿತ ಸೋಲನ್ನು ಕಂಡು ಸದಾನಂದ ಗೌಡರಿಗೆ ತೀವ್ರ ಮುಖ ಭಂಗ ಉಂಟಾಯಿತು .ಒಟ್ಟಾರೆಯಾಗಿ ನಗುಮುಖದಿಂದ  ಉತ್ತಮ ಆಡಳಿತವನ್ನೇ ನೀಡಿದ್ದರು ಸದಾನಂದಗೌಡರು .ಆದರೆ ಯೆಡಿಯೂರಪ್ಪ ಬಣದ ಉಪಟಳವನ್ನು ಸಹಿಸದೇ ಕರ್ನಾಟಕದಲ್ಲಿ ಬಿ. ಜೆ. ಪಿ ಪೂರ್ಣ  ನಶಿಸಿ ಹೋಗುತ್ತದೇನೋ ಎಂಬ ಪರಿಸ್ಥಿತಿ ಎದುರಾದಾಗ ಹೈಕಮಾಂಡ್ ಸದಾನಂದ ಗೌಡ್ರ ರಿಂದ ರಾಜೀನಾಮೆ ಕೊಡಿಸದೇ ಬೇರೆ ದಾರಿಯೇ ಇರಲಿಲ್ಲ .ಹೈ ಕಮಾಂಡ್ ನನ್ನನ್ನು ಕಾಪಾಡುತ್ತದೆ .ಉಳಿದ ಒಂದೂವರೆ  ವರ್ಷತನಕ ಮುಖ್ಯ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಅಂದು ಕೊಂಡಿದ್ದ ಸದಾನಂದಗೌಡರಿಗೆ  ಆಸೆ ಕನಸಾಗಿಯೇ ಉಳಿಯಿತು .ಯೆಡಿಯೂರಪ್ಪ ಬಣದ ಕೆಲವು ಸೂತ್ರವನ್ನು ಪಾಲಿಸಿದ್ದರೆ,ಭವಿಷ್ಯ ಸದಾನಂದ ಗೌಡ್ರರು ಹುದ್ದೆಯಲ್ಲಿ ಮುಂದುವರಿಯ ಬಹುದಿತ್ತೇನೋ ? ಶಾಸಕಾಂಗ ಸಭೆ ಕರೆಯಬಹುದಿತ್ತು .ಹೊರಲಾರದಷ್ಟು ಸಚಿವ ಸ್ಥಾನವನ್ನು  ತಾವೇ ಇಟ್ಟುಕೊಳ್ಳುವ ಬದಲು ಸಚಿವ ಸಂಪುಟವನ್ನು ತೆರೆಯ ಬಹುದಿತ್ತು .ಮಾತಿಗೆ ಹೈಕಮಾಂಡ್ ,ಎಂದು ಹೈಕಮಾಂಡ್ ಎಂದು ಅತೀ ವಿಶ್ವಸವನ್ನಿಡಬಾರದಿತ್ತು.ಅಧಿಕಾರ ಎನ್ನುದು ಕ್ಷಣಿಕ ಕಾಲವಷ್ಟೇ .ಪಕ್ಷದಲ್ಲಿ ಉತ್ತಮ ರಾಜಕೀಯ ಮೇದಾವಿಯಾಗಿ ,ಎಲ್ಲ ಸ್ನೇಹ -ಪ್ರೀತಿ ಸಂಪಾದಿಸಿದ್ದ ಸದಾನಂದ ಗೌಡ್ರು ಮುಖ್ಯಮಂತ್ರಿ ಪಟ್ಟದ ಲಾಲಸೆ ಇಂದ ನಂಬಿಕೆ ಇಟ್ಟುಕೊಂಡಿದ್ದ ಖುದ್ದು ,ಯೆಡಿಯೂರಪ್ಪನವರಿಂದ ಹಿಡಿದು ಕೆಲವು ಶಾಸಕ -ಸಚಿವರಿಂದ ಶತ್ರತ್ವವನ್ನು ಕಟ್ಟಿಕೊಳ್ಳಬೇಕಾಯಿತು .

ಹೈಕಮಾಂಡ್ ಗೆ ಬೇಕಾಗಿರುವದು ಸದಾನಂದ ಗೌಡ್ರು ಮಾತ್ರ ಅಲ್ಲ .ಅವರ ನಿಲವು ಪಕ್ಷವನ್ನು ಒಟ್ಟಾಗಿ ಬೆಳೆಸಿ ಬಲಪಡಿಸವುದು..ಕರ್ನಾಟಕದಲ್ಲಿ ಸದಾನಂದ ಗೌಡ್ರುರ ವಿರುದ್ದ ಉಂಟಾಗುತ್ತಿರುವ ಒಳ ಜಗಳ ,ಬಣ ನೀತಿಯನ್ನು ತಟಸ್ತಗೊಳಿಸಲು ಈ ಸದರ್ಭಕ್ಕೆ ಸದಾನಂದ ಗೌಡ್ರು ರಾಜಿನಾಮೆ  ಅನಿವಾರ್ಯವೇ ಆಗಿತ್ತು ಬದಲಿ ನಾಯಕತ್ವದ ಅವಶ್ಯಕತೆ ಎದ್ದು ಕಾಣುತ್ತಿತ್ತು .
.ಏನೇ ಇರಲಿ ಒಟ್ಟಾರೆ 11 ತಿಂಗಳು ಉತ್ತಮ ಆಡಳಿತ ನೀಡಿದ ತೃಪ್ತಿ ಅವರಿಗಿದ್ದರೆ ,ಅನುಭವಿಸಿದ ಫಲಾನುಭವಿಗಳಿಗೆ ಸಂತೃಪ್ತಿ ತಂದರೆ ಅದೇ ಸಾಕು ಅಲ್ವೇ ?

ದೇಶಕ್ಕಾಗಿ ಪ್ರಾಣತೆತ್ತ ಭಾರತೀಯ ವೀರಪುತ್ರರಿಗೆ ಕೋಟಿ-ಕೋಟಿ ನಮನ

                   ಇಂದು ಕಾರ್ಗಿಲ್ ದಿನ 
ಭಾರತದ "ಕಾಶ್ಮೀರ್" ನಗರ  ನಮಗೆ ಸೇರಿದೆಂದು 1948 ರಿಂದ ಭಾರತದ ಬೆನ್ನುಬಿದ್ದಿದ್ದ ಪಾಕಿಸ್ಥಾನ  ತನ್ನ ಕೆಲವು ಮಿತ್ರ ರಾಷ್ಟ್ರಗಳೊಂದಿಗೆ  ದಂಡೆತ್ತಿ ಬಂದಿತ್ತು 1999 ಮೇ 3 ರಿಂದ  ಜುಲೈ 26  ರಂದು ಕಾರ್ಗಿಲ್ ನಲ್ಲಿ ಭಾರತದ ಸಿಪಾಯಿಗಳು ಹಿಗ್ಗದೆ -ಕುಗ್ಗದೆ -ಜಗ್ಗದೆ  ಎದೆಸೆಟೆದು ನಿಂತು ಭಾರತ ಮಾತೆಯ ರಕ್ಷಣೆಗೆ ಹೋರಾಡಿದರು ಅಂತೆಯೇ ವಿಜಯದ ಮಾಲೆಯನ್ನು ತಂದು ಕೊಟ್ಟಿದ್ದರು .ಈ ಒಂದು ಕದನದಲ್ಲಿ ಶತ್ರು ರಾಷ್ಟ್ರದ 6000ಕ್ಕೊ ಅಧಿಕ ಮಂದಿ ಸಾವಿ ಗಿಡಾದರೆ,ನಮ್ಮವರು ಸುಮಾರು 527 ಮಂದಿ ಜೀವದಾನ ಮಾಡಿದರು.ಸಾವಿರಾರು ಜನರು ಗಾಯ ಗೊಂಡರು.ದೇಶದ ಸುರಕ್ಷತೆಗಾಗಿ ನೆತ್ತರು ಹರಿಸಿ,ಪ್ರಾಣವನ್ನುಬಲಿದಾನ ಮಾಡಿದ, ವಿಜಯ ಪತಾಕೆಯನ್ನು ತಂದುಕೊಟ್ಟ ಈ ದಿನವನ್ನುಕಾರ್ಗಿಲ್ ವೆಂದು ಆಚರಿಸಲಾಗುತ್ತಿದೆ. 23 ದಿನಗಳ ಭೀಕರ ಕದನದಲ್ಲಿ ಹುತಾತ್ಮರಾದ  ವೀರಯೋಧರಿಗೆ ಕೋಟಿ -ಕೋಟಿ ನಮನ .

ಬುಧವಾರ, ಜುಲೈ 25, 2012

ಅನಾವ್ರಷ್ಟಿ ತಡೆಗೆ -ಕಪ್ಪೆಗಳ ಮದುವೆ,ಸೀಮಂತ ,ನಾಮಕರಣ ಮುಂದೆ ???

  ಅನಾವ್ರಷ್ಟಿ ತಡೆಗೆ -ಕಪ್ಪೆಗಳ ಮದುವೆ,ಸೀಮಂತ ,ನಾಮಕರಣ  ಮುಂದೆ ???

ಅನಾವ್ರಷ್ಟಿ ಯನ್ನು ತಡೆಯಲು ,ಅತಿವ್ರಷ್ಟಿಯನ್ನು ಬಿಳ್ಕೊಡಲು ಜನ ಸಾಮಾನ್ಯರು ಮಾಡುವ ಕಾರು-ಬಾರು ಒಂದೆರಡಲ್ಲ .ದೇವರಲ್ಲಿ ಹಲವಾರು ಬಗೆ ಗಳಲ್ಲಿ ಹರಕೆ -ಬಲಿ ಗಳನಿಟ್ಟು,ವರುಣ ನ ಆಗಮನಕ್ಕೆ ಮೇ ತಿಂಗಳಿಂದ ಕರೆಯೋಲೆ ಎಲ್ಲರ ಮನ -ಮನೆ ಗಳಲ್ಲಿ ,ದೇವಸ್ಥಾನ ,ಗುಡಿ -ಮಠ ಗಳ ಲ್ಲಿ ನಾನಾ ರೀತಿಯ ತಂತ್ರ -ಮಂತ್ರ ,ಪೂಜಾ -ಪುನಸ್ಕಾರ ನಡೆಯಲ್ಪಡುತ್ತದೆ. ಅದರಲ್ಲೂ ಅಳ ಲನ್ನು ಹೇಳ ತೀರದು .ಅದೆಷ್ಟೋ ಹರ ಸಾಹಸದಿಂದ ಮಳೆ ರಾಯನನ್ನು ವೆಲ್ ಕಂ ಮಾಡಲು ಹೆಣಗಾಡುತ್ತಾರೆ. ಸರ್ಕಾರವು ಸಹಾ ಕಣ್ಣೊರೆಸುವ ತಂತ್ರಕ್ಕೆ ಮಣಿ ಯಾಗುತ್ತದೆ ಆ ಬಜೆಟ್ ಏಎ ಬಜೆಟ್ ಎಂದು ಬರಗಾಲದಿಂದ ತೊಯ್ಯೋತ್ತಿರುವ ಕೆಲವು ಪ್ರದೇಶಗಳಿಗೆ ವಿವಿಧ ಯೋಜನೆಯನ್ನು ಹರಿಸುತ್ತದೆ .ಇನ್ನು ವಿಜ್ಞಾನವೂ ಸಹಾ ಒಂದು ಬದಿಯಲ್ಲಿ ನಾನಿದ್ದೇನೆ ಎಂದು ಬಾಯಿ ಬಿಡುತ್ತದೆ .ನಾವೇನೂ ಕಮ್ಮಿ ಇಲ್ಲ ಅಂತ ವಿಜ್ಞಾನಿಗಳು ಆಕಾಶಕ್ಕೆ ರಕ್ಕಸ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಉಪ್ಪು ಮತ್ತಿತ್ತರ ರಾಸಾಯನಿಕ ಪಧಾರ್ಥವನ್ನು ಸಿಂಪಡಿಸಿ ಮೋಡ ಬರಿಸಿ ಕ್ರತಕ ಮಳೆ ಬರಿಸುವದಕ್ಕೆ ಶ್ರಮ ಪಡುತ್ತಾರೆ ಅವರ ಅದೃಷ್ಟಕ್ಕೆ ಎಲ್ಲೊ ಒಂದು ನಾಲ್ಕು ಹನಿಯನ್ನು ಚೆಲ್ಲಿ ಮಂಗ -ಮಾಯವಾಗಿ ಬಿಡುತ್ತದೆ .
ಇನ್ನು ಬಯಲು ಸಿಮೆ .ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬಅಬ್ಬಾ ಎಂತೆಂತ ಕಸರತ್ತುಗಳನ್ನು ನಡೆಸುತ್ತಾರೆ ,ಎತ್ತನ್ನು ಓಡಿಸೋದು ,ಉಪ್ಪಿನ ಹೋಮವನ್ನು ಮಾದ್ವುದರಿಂದ ಹಿಡಿದು ,ಕಪ್ಪೆಗಳಿಗೆ ಮದುವೆ ,ಸೀಮಂತ ದವರೆಗೂ ಕೈ ಹಾಕಿದ್ದಾರೆ .ಅದೆಲ್ಲ ಅವರವರ ಭಕ್ತಿ -ಭಾವಗಳಿಗೆ ಬಿಟ್ಟ ವಿಚಾರ .ಆದರೆ ಮೊನ್ನೆ -ಮೊನ್ನೆ ಕರಾವಳಿಯ ಬುದ್ದಿವಂತರ ಜಿಲ್ಲೆಯೆಂದು ಹೆಸರು ಗಳಿಸಿದ ಉಡುಪಿಯಲ್ಲಿ ಈ ಒಂದು ಜಿಲ್ಲಿಗೆ ವಿರುದ್ಧವಾದ ಅಚ್ಚರಿಯ ಘಟನೆಯೊಂದು ನಡೆದು ಹೋಯಿತು .ಮಳೆ ರಾಯನ ಓಲೈಕೆಗೆ ಎಲ್ಲಾ ಕಡೆಗಳಿರುವಂತೆ ಇಲ್ಲಿಯೂ ಸಹಾ ಆ ಸಮಯದಲ್ಲಿ ದೇವತಾ ಕಾರ್ಯಗಳು ಆಚರಿಸಲ್ಪದುತ್ತವೆ..ಹೋಮ -ಹವಣ,ಸಿಯಾಳ ಅಭಿಷೇಕ .ಕ್ಷಿರಾಭಿಷೇಕ    ಹೀಗೆ ಭಕ್ತಿ ಪ್ರಧಾನ ವಾಗಿ ನಡೆಯುತ್ತದೆ .ಆದರೆ ಇಲ್ಲಿ ಮೊನ್ನೆ ನಡೆದಿದ್ದು ಮಾತ್ರ ವಿಚಿಧ್ರಿ ಕಾರಿ  ನಡೆದಿದಿದ್ದು ಇಷ್ಟೇ  ಕಪ್ಪೆ ನಾಮಕರಣ .ಅರ್ಥಾತ್ ತೊಟ್ಟಿಲನ್ನು ಕಟ್ಟುವ ಪದ್ಧತಿ .ಅಂದರೆ ಹಿಂದೂ ಸಂಪ್ರದಾಯದ ಪ್ರಕಾರ ಮಗು ಜನಿಸಿದ 11 ದಿಂದ ಬಳಿಕ ತೊಟ್ಟಿಲಿಗೆ ಹಾಕಿ ನಾಮಕರಣ ಮಾಡಲಾಗುತ್ತದೆ ಟೀಟ್ ಅದೇ ರೀತಿ ಮೊನ್ನೆ ಉಡುಪಿ ಯಕಿದಿಯೂರು ಸಭಾ೦ ಗ ಣ ಜಿಲ್ಲಾ ನಾಗರೀಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಅವರು ಈ ಕಾರ್ಯಕ್ರಮದ ರೂವಾರಿ ಯಾಗಿದ್ದರು .6 ಕಪ್ಪೆಗಳನ್ನು ಹಿಡಿದು ತಂದು ಹೆಂಗೆಳೆಯರ ಆರತಿ ತಟ್ಟೆ ,ವಾದ್ಯ ಘೋಷ ,ತಾಳ-ಮೇಳ ಗಳ ಸಂಯೋಜನೆ ಯೊಂದಿಗೆ 'ಮಳೆರಾಯ 'ಎಂದು ನಾಮಕರಣ ವನ್ನು ಮಾಡಿಸಿ ಬಿಟ್ಟರು ಇದೆಂತ ಆಚರಣೆ ಮರ್ರೆ ಕೇಳಿದರೆ ಅವರೇ ಹೇಳುವಂತೆ ಹಿಂದೆ ಬೇರೆ -ಬೇರೆ ಜಿಲ್ಲೆ ಗಳಲ್ಲಿ ಕಪ್ಪೆಗಳಿಗೆ ಮದುವೆ ,ಸಿಮಂತ ಮಾಡಿಸಿಲಾಗಿದೆ ಈಗ ನಾವು ನಾಮಕರಣ ಮಾಡುವ ಕಾರ್ಯಕ್ಕೆ ಕೈ ಹಾಕಿದ್ದೇವೆ ಕಪ್ಪೆಗಳು ವಟ ಗುಟ್ಟಿದರೆ ಮಳೆ ಬರುತ್ತದೆ ಎಂಬ ನಂಬಿಕೆ ತಲೆ -ತಲೆಯ೦ರದಿಂದ  ಬಂದಿದೆ .ನೆರದಿದ್ದವರ ಅಚ್ಚರಿಯ ಪ್ರಶ್ನೆಗೆ ಸಿದ್ದ ಉತ್ತರವನ್ನು ನೀಡಿದರು .ಏನೇ ಇರಲಿ ಬುದ್ದಿವಂತರ ನಾಡಿಗೆ ಈ ಒಂದು ಕಾರ್ಯ ಕರ್ಮ ಅವಶ್ಯ ವಿತ್ತೇ ಹಲವಾರು ಜನ ಮನಸ್ಸಿನಲ್ಲಿ ಹೇಳಿಕೊಂಡರೆ ,ಕಪ್ಪೆಗಳಿಗೆ ಮದುವೆ ಆಯಿತು ,ಸಿಮಂಥ ಆಯಿತು ,ನಾಮಕರಣವೂ ಆಯಿತು ಮುಂದೆ ಏನು ? ಎಂಬ ಪ್ರಶ್ನೆಯನ್ನು ಮೂಗಿನ ಮೇಲಿಟ್ಟು ಎಲ್ಲರೂ ಜಾಗ ಖಾಲಿ ಮಾಡಿದರು .

ಶನಿವಾರ, ಜೂನ್ 16, 2012

public tv ರಂಗನಾಥ್ ರಿಗೊಂದು public ಪತ್ರ


ಪ್ರಿಯ ಹೆಚ್ .ಆರ್ .ರಂಗನಾಥ್ ರವರೇ,
ನಿಮ್ಮ ಕನಸ್ಸಿನ ಕೂಸಾದ public tv  ಯಲ್ಲಿ ಇಂದು (10 .06 .2012 ) ಗಂಟೆ ಗಟ್ಟಲೆ ಗಳ ಕಾಲ ನಿತ್ಯಾನ೦ದ ಸ್ವಾಮಿಯ ವಿವಾದದ ಬಗ್ಗೆ ವಿಶೇಷ live ಕಾರ್ಯಕ್ರಮ ಪ್ರಸಾರವಾಗಿತ್ತು ನಿರೂಪಕ ರಾಘವ್ ಸೂರ್ಯರಾಗಿದ್ದರು .ಸ್ಟುಡಿಯೋದೊಳಗೆ ಮಹಿಳಸಂಘಟನೆಯ ಅಧ್ಯಕ್ಷರಾದ ಸುನಂದಾ,ನಿರ್ಮಾಪಕ ಮುನಿರತ್ನ ,ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .ಕಾರ್ಯಕ್ರಮದ ಉದ್ದೇಶ ನಿತ್ಯಾನ೦ದ ಸ್ವಾಮಿಯ ಕರ್ಮಕಾಂಡದ ಬಗ್ಗೆ ಇತರ ಕೆಲವು ಮಠ ,ಸ್ವಾಮಿಜಿಗಳ ಅಭಿಪ್ರಾಯವನ್ನು ಆಲಿಸುದಾಗಿತ್ತು ನಿಜಕ್ಕೂ ಉತ್ತಮ ಕಾರ್ಯಕ್ರಮವೇಯಾಗಿದ್ದರೂ, ಪೂರ್ವಗ್ರಹಪಿಡಿತವಾಗಿ ರೂಪುಗೊಳ್ಳಬಾರದಿತ್ತು . 
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ ಎಂಬ ಉಕ್ತಿಗೆ ಪೂರಕವಾಗಿತ್ತು .ಪ್ರಸ್ತುತವಲ್ಲದ ವಿಚಾರವನ್ನು ಎಳೆದು ಒಂದೊಂದು ಸ್ವಾಮಿಜಿಗೆ ವಿಚಾರಹೀನವಾದ ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದು , ಅದರಲ್ಲೂ ಮುಖ್ಯವಾಗಿ "ಪ್ರತಿಭಟನೆಯ ಮೂಲಕ ಕಠರಿವೀರ  ಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸಿ ,ಉಡುಪಿ -ಮ೦ಗಳೂರಿನಲ್ಲಿ ಕಲೆಕ್ಷನ್ ಕುಂಟಿತಗೊಳ್ಳಲಿಕ್ಕೆ ಕಾರಣಿಕರತರಾದ  ಉಡುಪಿಯ ಶಿರೂರು ಮಠದ ಶ್ರೀ ಲಕ್ಷ್ಮಿ ತೀರ್ಥ ಸ್ವಾಮೀಜಿಗಳು ಈಗ ಪರಿಸ್ತಿತಿ ಗೊತ್ತಿದ್ದೂ ಮಠದಲ್ಲಿ ಕುಳಿತುಕೊಂಡಿರುದು ಯಾಕೆ ?" ನಿತ್ಯಾನ೦ದ ಸ್ವಾಮಿಯ ಬಗ್ಗೆ ಯಾಕೆ ಪ್ರತಿಭಟನೆಗೆ ಮುಂದಾಗಿಲ್ಲ ಎಂಬ ಕಾರಣವನ್ನು ನೀಡಿ ,ಸಂಕ ಮುರಿದಲ್ಲೇ ಸ್ನಾನ ಎನ್ನುವಂತೆ ,ಪುಂಖಾನು -ಪುಂಖವಾಗಿ ರಾಘವ್ ಸೂರ್ಯ, ಸುನಂದಾ,ಮುನಿರತ್ನ ಅದೇ ಪ್ರಶ್ನೆಯನ್ನು ಬಾರಿ -ಬಾರಿ ಕೇಳುತ್ತಿದ್ದ ರೀತಿ ,ಇನ್ನು ತೀರ personal ಎನ್ನುವ ವಿಚಾರಕ್ಕೆ ಕೈ ಹಾಕಿದ್ದು  public tv ಯೋಗ್ಯತೆಗೆ ತಕ್ಕುದಾದ್ದಲ್ಲ ಎನ್ನುದು ನನ್ನ ಅಭಿವ್ಯಕ್ತಿ .ನಿಜಕ್ಕೂ ಪೂರ್ಣ ಕಾರ್ಯಕ್ರಮವನ್ನು ವಿಕ್ಷಿಸುತ್ತ ತೆರಳುತ್ತಿದ್ದರೆ ,ಈ ಕಾರ್ಯಕ್ರಮ ಪೂರ್ವಯೋಜಿತವಾಗಿ ಉಡುಪಿ ಶ್ರಿರು ಮಠದ ಶ್ರೀ ಲಕ್ಷ್ಮಿತೀರ್ಥ ಸ್ವಾಮೀಜಿಗಳನ್ನು ಬೊಟ್ಟುಮಾಡಿ ತೋರಿಸುವ ಸಲುವಾಗಿ ರೂಪಿಸಲಾಗಿದೆ ಎಂದು ಭಾಸವಾಗುತಿತ್ತು .ಅಷ್ಟಕ್ಕೂ ಸ್ಟು ಡಿಯೋದೊಳಗೆ ನಿರ್ಮಾಪಕ ಮುನಿರತ್ನರ ಅವಶ್ಯಕತೆ ಇತ್ತೇ ? "ಚಿತ್ರದಲ್ಲಿ ಹಿಂದೂ ದೇವತೆಗಳ ಅವಹೇಳಕಾರಿ ಸನ್ನಿವೇಶವನ್ನು ಇದೆ ಅದನ್ನು ತೆರವು ಮಾಡಬೇಕು ಎಂಬ ಉದ್ದೇಶದಿಂದ ಚಿತ್ರ ಪ್ರದರ್ಶನದ ವಿರುದ್ದ ಪ್ರತಿಭಟನೆ ಮಾಡಲಾಯಿತು .ಅದರಲ್ಲಿ ನಾನು ಮಾತ್ರ ಭಾಗಿಯಾಗಿರದೇ, ಬಜರಂಗದಳ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳು ಪಾಲ್ಗೊಂಡಿದ್ದವು .ಆದರೆ ನಿತ್ಯಾನ೦ದ ಸ್ವಾಮಿಯ ವಿಚಾರವೇ ಬೇರೆ ರೀತಿಯದ್ದು .ಮಹಿಳೆಯರಿಗೆ ಲೈಂಗಿಕ ಕ್ರಿಯಗೆ ಬಳಸಿಕೊಳ್ಳಲಾಗುತ್ತಿದೆ ಎಂಬುದು .ನಿತ್ಯಾನ೦ದ ಸ್ವಾಮಿಯ ವಿವಾದ ಇಂದು ಮಾಧ್ಯಮಗಳ ಮೂಲಕ ನಾನು ತಿಳಿದಿದ್ದೇನೆ .ಇದಕ್ಕೆ ಖಂಡಿತವಾಗಿಯೂ ನನ್ನ ವಿರೋಧವಿದೆ ,ಇದು ಅಪರಾಧ . ನಾನು ಸಹ  ಇದರ ವಿರುದ್ದ ಪ್ರತಿಭಟಿಸಲು ಸಿದ್ದ" ಎಂದು  ಎಷ್ಟೇ ಸ್ವಾಮೀಜಿ ಅವಲತ್ತು ಕೊಂಡರೂ ,ಮುನಿರತ್ನ,ಸುನಂದಾ, ಮೇಲಿನಿಂದ -ಮೇಲೆ ಕಠರಿವೀರ ಚಿತ್ರ ದ ಬಗ್ಗೆಯೇ ಪ್ರಶ್ನೆಗಳನ್ನು,  ಮುಸಿನಗುತ್ತ ತಾವು ಒಂದಷ್ಟು ಸಂಭಂದ ರಹಿತ ಪ್ರಶ್ನೆಗಳ ಸುರಿಮಳೆ ಗೈದು ಅವರುಗಳಿಗೆ ಸಾಥ ನೀಡುತ್ತಿರುವ  ನಿರೂಪಕ ರಾಘವ್ ಸೂರ್ಯ ನ ಈ ಒಂದು ನಡೆ ನಿಜಕ್ಕೂ ಖಂಡನೀಯ .ಅಸಂಜಸವಾದದ್ದು . ಸ್ವರ್ಧಾತ್ಮಕ ಯುಗದಲ್ಲಿ ಸಂಚರಿಸುತ್ತಿರುವ ಮಾಧ್ಯಮಗಳ ಮಧ್ಯೆ ಇತ್ತೀಚಿಗೆ ರೂಪುಗೊಂಡಿರುವ ನಿಮ್ಮ  ಚಾನಲ್ನ ಏಳಿಗೆಗೆ ಆರೋಗ್ಯಕಾರಿಯಲ್ಲ .ಕೊನೆಯದಾಗಿ ಮಾತು   ಒಂದು ಬಿಗ್ ಬುಲೆಟ್ ನಂತೆ   ಸ್ಚರಿತ್ರ್ಯ ,ಸನ್ನಡತೆ ,ನ್ಯಾಪರದಿಕ್ಕಿನಲ್ಲಿ  ಸಾಗುತ್ತಿರುವ ನಿಮ್ಮ ಆ ಶಿಸ್ತುಬದ್ದ ಡೈಲಾಗ್ ಡೆಲಿವರಿ ಸ್ ನ  ನಿಮ್ಮ ಸಹ ಉದ್ಯೋಗಿಗಳಿಗೂ  ಕೊಂಚ ಹೇಳಿ ಕೊಡಿ

ಅಧುನಿಕ ಕೆಲವು ಅನುಪಯುಕ್ತ ತಂತ್ರಜ್ಞಾನದ ನಡುವೆಯೂ ಉತ್ತಮ ಫಲಿತಾಂಶ ದಾಖಲಿಸಿದ ಎಲ್ಲ ವಿಧ್ಯಾರ್ಥಿಗಳಿಗೂ ಶುಭಾಶಯಗಳು ..


ಅಧುನಿಕ ಕೆಲವು ಅನುಪಯುಕ್ತ ತಂತ್ರಜ್ಞಾನದ  ನಡುವೆಯೂ ಉತ್ತಮ ಫಲಿತಾಂಶ ದಾಖಲಿಸಿದ ಎಲ್ಲ ವಿಧ್ಯಾರ್ಥಿಗಳಿಗೂ ಶುಭಾಶಯಗಳು ..
ಮೊನ್ನೆ sslc  ರಿಸಲ್ಟ್ ಬಂದು ಒಂದಷ್ಟು ದಿನಗಳ ಕಾಲ ವಿವಿಧ ಮಧ್ಯಮಗಳು ಉನ್ನತ ಫಲಿತಾಂಶ ವನ್ನು ಪಡೆದವರ ಸಂದರ್ಶನ .ಅವರುಗಳ ಪೂರ್ವ ,ಪರ ವಿಚಾರ -ವಿವರಗಳು ಪುಂಖಾನು -ಪುಂಖ ವಾಗಿ ಹರಿಸು ತ್ತಿತ್ತು.ಇದು ಒಂದು ತರಹದಲ್ಲಿ ಉಪಯುಕ್ತ ಕಾರ್ಯಕ್ರಮವೇ  ಸರಿ ಯಾಕೆಂದರೆ ಅವರುಗಳು ಹೇಗೆ ವಿಧ್ಯಾಭ್ಯಸ ವನ್ನು ಕೈಗೊಂಡಿದ್ದರು ,ಟಾಪ್ ಸ್ಕೋರೆರ್ ಆಗಿ ರೂಪು ಗೊಂಡಿರುದಕ್ಕೆ ಅನುಕೂಲಕರವಾದ ಅಂಶ ಗಳು ಈ ಒಂದು ಉಪಯುಕ್ತ ಸಂದರ್ಶನದ ಮೂಲಕ ಕೆಲವಂದು ಟಿಪ್ಸ್ ಗಳು ಇತತರರಿಗೂ ಒಂದು ಮಾರ್ಗದರ್ಶನವನ್ನು ನೀಡುತ್ತದೆ .ಒಟ್ಟಾರೆ ಇಂದಿನ ಎಲೆಕ್ಟ್ರೋನಿಕ್ ಮಾದ್ಯಮಗಳ ಈ ಒಂದು ಕಾರ್ಯಕ್ರಮ ಉತ್ತಮ ವಾದದ್ದೇ..ವರ್ಷ -ವರ್ಷ ರಿಸಲ್ಟ್ ಬರುದೇ,ಒಂದಷ್ಟು ಮಂದಿಯನ್ನು ಆಯ್ಕೆ ಮಾಡಿ ಸಂದರ್ಶನ  ಮಾಡುವದೇ ,ಇದರಲ್ಲಿ ಏನು ವಿಶೇಷ ವಿಲ್ಲದಿದ್ದರೂ ,ನಂಗೆ ಈ ವರ್ಷದ ರಿಸಲ್ಟ್ ನೋಡಿ ,ಅವರುಗಳ ಸಂದರ್ಶನ ಚಿತ್ತ್ಕರ್ಷಕವಾಗಿ ,ಈ ವರ್ಷದ  ಪೈಪೋಟಿಯಾಕರದಲ್ಲಿ ಬೆಳೆಯುತ್ತಿರುವ ಮಾದ್ಯಮಗಳ ಬರಾಟೆ ,ಅಧುನಿಕ ಅಂತರಜಾಲ ,ಮೊಬೈಲ್ ಯುಗದಲ್ಲೂ ,ಪ್ರಶ್ನೆ ಪತ್ರಿಕೆ ಬಹಿರಂಗ ಗೊಂಡು ಉದ್ವಿಗ್ನ ಪರಿಸ್ಥಿತಿ ಉಂಟಾದರೂ ಗ್ರಾಮೀಣ ವಿಧ್ಯಾರ್ಥಿಗಳೂ ಟೋಪರ್ ಆಗಿ ಒಟ್ಟಾರೆ ,10 ವರ್ಷಗಳಿಂದ ಈಚೆಗೆ ದಾಖಲೆ ಫಲಿತಾಂಶ ವನ್ನು ಗಳಿಸಿದ್ದು ವಿಶೇಷವಾಗಿ ಕಾಣಿಸಿತ್ತು .
623 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಬಂಟ್ವಳದ ನವ್ಯಶೆಟ್ಟಿ
ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದರೂ ,ಬಾಲಕರೂ ಸಹ ಪೈಪೋಟಿ ಯನ್ನು ಸಾಧಿಸಿದ್ದಾರೆ .ಗ್ರಾಮೀಣ ಪ್ರದೇಶದ ವಿಧ್ಯಾರ್ಥಿಗಳು ದಾಖಲೆಯನ್ನು ನಿರ್ಮಿಸುದೆಂದರೆ ಅದು ಹೆಗ್ಗಳಿಕೆಯ ಮಾತೆಂದರೆ ಅತಿಶಯೋಕ್ತಿಯಲ್ಲ .ಅವರ ಪ್ರಯತ್ನ ಶೀಲ ಕೌಶಲ್ಯಕ್ಕೆ ತಲೆಬಾಗಲೇ ಬೇಕು .ಗ್ರಾಮೀಣ ಪರಿಸರದಲ್ಲಿ ಮಕ್ಕಳನ್ನು ಶಾಲೆಗೆ ಕಳಿಸಲೂ ಅಸಾಧ್ಯ ಪರಿಸ್ತಿ ಒಂದೆಡೆ ಯಾದರೆ ,ಬಹಳಷ್ಟು ದೂರ ಶಾಲೆಯನ್ನು ಅವಲಂಭಿಸ ಬೇಕಾಗಿ ಬರುದು ಸಹ ಒಂದು ನೆಗಿಟಿವ್ ಪಾಯಿಂಟ್ .ಶಾಲೆ ಬಿಟ್ಟು ಮನೆಗೆ ಬಂದ ನಂತರವೂ ಸಹ ಮನೆಯಲ್ಲಿ ಗದ್ದೆ -ತೋಟ ಕೆಲಸ ಅನಿವಾರ್ಯ .ಟ್ಯೋಶನ್ ಅಂತೂ ಕನಸ್ಸಿನ ಮಾತೇ ಸರಿ .ಇಂತಹ ಪರಿಸ್ಥಿತಿಯಲ್ಲೂ 625 ಕ್ಕೆ 623 ಅಂಕ ಗಳಿಸುದೆಂದರೆ  ಸುಲಭದ ಮಾತೇ ?ಇನ್ನು ಪಟ್ಟಣ ಪ್ರದೇಶದ ವಿಧ್ಯಾರ್ಥಿಗಳಿಗೆ ಯಾವುದೇ ಒಂದು ದೊಡ್ಡ  ಕೆಲಸ -ಕಾರ್ಯವಿಲ್ಲದೇ ಉತ್ತಮ ಸ್ಕೋರ್ ಗಳಿಸಬಹುದು  ಎನ್ನುವ ವಿಚಾರ ವಿರಬಹುದು .ಮನೆಗೆ ಬಂದ ತಕ್ಷಣ ಟ್ಯೋಶನ್ ಸಿಗಬಹುದು ,ಮನೆಯಲ್ಲಿ ಉನ್ನತ ಶಿಕ್ಷಣ ಪಡೆದವರ ಒಂದು ಕ್ರಪೆ ಕೂಡ ಇರಬಹುದು. ಆದರೂ ಇಂದಿನ ಅಂತರ್ಜಲ ,ಮೊಬೈಲ್ ಯುಗಕ್ಕೆ ಹೆಚ್ಚಾಗಿ ಇವರುಗಳು ಅಂಟಿಕೊಂಡಿರುತ್ತಾರೆ .ಹಾಗಾಗಿ ಇಂಥ ಸಮಸ್ಯೆಗಳ ಮಧ್ಯೆಯೂ ಈ ಬಾರಿ ದಾಖಲೆ ಫಲಿತಾಂಶವನ್ನು ಗಳಿಸಿರುದು ಹೆಮ್ಮೆಯ ವಿಚಾರ .ಕಷ್ಟ -ಪಟ್ಟು ವಿಧ್ಯಾರ್ಜನೆ ಕಂಡು ಕೊಂಡು 10 ಗಳಿಂದ್ಚೆಗೆ ಉತ್ತಮ ಫಲಿತಾಂಶವನ್ನು ತಂದು ಕೊಟ್ಟ ಎಲ್ಲ ವಿಧ್ಯರ್ಥಿಗಳಿಗೂ ನೆಲ್ಮೆಯ ಹೃದಯಪೂರ್ವಕ ಅಭಿವಂದನೆಗಳು . 

ಶುಕ್ರವಾರ, ಜೂನ್ 15, 2012

ಕಠಾರಿವೀರ ಚಿತ್ರದ ವಿರುದ್ಧ ಹೋರಾಟ ಕರಾವಳಿ ಜಿಲ್ಲೆಯಲ್ಲಿ ಮಾತ್ರ ಸಿಮೀತವಾದದ್ದು ಯಾಕೆ ?

ಮುನಿರತ್ನ ಕನ್ನಡ ಚಿತ್ರ ರಂಗದ ಒಬ್ಬ ಪ್ರತಿಷ್ಟಿತ ನಿರ್ಮಾಪಕರಲ್ಲಿ ಒಬ್ಬರು .ಇವರ ಬ್ಯಾನರನಡಿಯಲ್ಲಿ ಹಲವಾರು ಚಿತ್ರಗಳು ಅರಳಿವೆ .ಯಾರೂ ಕೈಹಾಕದ ,ಕನ್ನಡ ಚಿತ್ರರ೦ಗದಲ್ಲಿ ಒಂದು ದಾಖಲೆ ಅನ್ನು ನಿರ್ಮಿಸಬೇಕು ಎನ್ನುವ ಆಶೆ ಇಂದ ಇತ್ತೀಚಿಗೆ ಸುಮಾರು 15 ಕೋಟಿ ರೂ .ವೆಚ್ಚದಲ್ಲಿ ಕಠಾರಿವೀರ ಸುರಸುಂದರಾಂಗಿ ಎನ್ನುವ ಉಪೇಂದ್ರ ,ರಮ್ಯ ,ವಿಶೇಷ ಪಾತ್ರದಲ್ಲಿ ಅಂಬರೀಶ್ ಅಬಿನಯದ 3 D, ಮತ್ತು 2D ತಂತ್ರಾಜನವನ್ನು ಒಳಗೊಂಡ ಚಿತ್ರವನ್ನು ರೂಪಿಸಿಬಿಟ್ಟರು .ಐತಿಹಾಸಿಕ ಟಚ್  ಕೊಟ್ಟು ಚಿತ್ರ ಪ್ರೇಮಿಗಳ ಮನಸನ್ನು ಗೆಲ್ಲುದರ ಜೊತೆ ಜೇಬನ್ನು ಭರ್ತಿ ಮಾಡಿಕೊಳ್ಳುವ ಉಪಾಯ ಅವರದಾಗಿತ್ತು .ಚಿತ್ರದ ಬಿಡುಗಡೆ ದಿನಾ೦ಕ ,ಚಿತ್ರದ ಕಥೆ ಕ್ರತಿ ಚವ್ರ್ಯಹೀಗೆ ಮುಂತಾದ ಸಮಸ್ಯೆಯನ್ನೋಲ್ಕೊಂಡಂತೆ ಚಿತ್ರ ಬಿಡುಗಡೆ ಯ ಮೊದಲೇ ವಿವಾದದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿತ್ತು .ಬಿಡುಗಡೆ ನಂತರವೂ ಸಹಾ, ಇನ್ನಷ್ಟು ಸಮಸ್ಯೆ ಯೊಂದಿಗೆ ವಿವಾದ ದುಪ್ಪಟ್ಆಯ್ತು .ಕೆಲವು ಚಿತ್ರ ಮಂದಿರದಲ್ಲಿ 3D  ಗೊಂದಲ ವೆರ್ಪಟ್ಟರೆ,ಮುಖ್ಯವಾದ ಮತ್ತೊಂದು ವಿಚಾರವೆಂದರೆ  ಹಿಂದೂ ದೇವತೆಗಳ ಬಗ್ಗೆ ಚಿತ್ರದಲ್ಲಿ ಅವಹೇಳನಕಾರಿ ಯಾಗಿ ಬಿಂಬಿಸಲಾಗಿದೆ ಎಂದು ಹಿಂದೂ ಸಂಘಟನೆಗಳು ಪ್ರತಿಭಟನೆ ನೆಡಿಸಿದವು.ಕೆಲವಂದು ಸ್ಥಳಗಳಲ್ಲಿ ತಣ್ಣಗಾದರೆ ,ಉಡುಪಿ ಮತ್ತು ಮಂಗಳೂರಿನಲ್ಲಿ ಮಾತ್ರ ಪ್ರತಿಭಟನೆಯ ಕಾವು ಬಹಳ ಬಿಗುವರಿದಿತ್ತು 
ಉಡುಪಿ ಶಿರೂರು ಮಠದ ಲಕ್ಷ್ಮಿ ವರ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಮೊಟ್ಟಮೊದಲನೆಯದಾಗಿ , ಉಡುಪಿ ಗೀತಾಂಜಲಿ ಚಿತ್ರಮಂದಿರದಲ್ಲಿನ ಬ್ಯಾನರ್ ಗಳನ್ನೂ ತೆರವು ಗೊಳಿಸಿ ಉಗ್ರ ರೂಪದ ಪ್ರತಿಭಟನೆಯೊಂದಿಗೆ  ಚಿತ್ರಪ್ರದರ್ಶನವನ್ನು ಸಮೂರ್ಣವಾಗಿ ತಡೆಹಿಡಿಯಲಯ್ತು. ಮಂಗಳೂರಿನ ಜ್ಯೋತಿ ಚಿತಮಂದಿರದಲ್ಲೂ ಸಹಾ ಇದೆ ತರಹದ ಬೆಳವಣಿಗೆ ಉಂಟಾಯ್ತು .ಚಿತ್ರದ ವಿರುದ್ಧದ ಹೋರಾಟದ ಕಾವು ಮಿತಿಮೀರಿದನ್ನು ಅರಿತ ನಿರ್ಮಾಪಕ ಮುನಿರತ್ನ ,ನಾಯಕ ಉಪೇಂದ್ರ ಉಡುಪಿ ಕೃಷ್ಣ ಮಠ ಕ್ಕೆ ಆಗಮಿಸಿ ತಪ್ಪುಕಾಣಿಕೆ ಯನ್ನು ಸಲ್ಲಿಸಿ ಚಿತ್ರದಲ್ಲಿ ಬಳಸಿ ಕೊಳ್ಳಲಾಗಿರುವ ಎಲ್ಲ ಸನ್ನಿವೇಶಕ್ಕೆ ಕತ್ತರಿ ಹಾಕಲಾಗುದು ಎಂದ ಆ ಸಂಧರ್ಭದಲ್ಲಿ ತೀರ್ಮಾನಕ್ಕೆ ಬರಲಾಗಿತ್ತದರೂ ,ಒಂದೆರಡು ಸನ್ನಿವೇಶವನ್ನು ತೆರವವು ಗೊಳಿಸಿ ಕೈ ತೊಳೆದು ಕೊಂಡಿದ್ದರು 
ಇದನ್ನು ಅರಿತ ಭಜರ೦ಗ ದಳ ಸೇರಿದಂತೆ ಇತರ ಕೆಲವು ಹಿಂದೂ ಸಂಘಟನೆಗಳು ತೀವ್ರ ರೂಪದ ಪ್ರತಿಭಟನೆಗೆ  ನಾಂದಿ ಹಾಡಿದವು .ಒಂದೆರಡು ದಿನಗಳ ಕಾಲ ಪೋಲಿಸ್ ಬಿಗು ಬಂದೊಬ್ಸ್ತನಲ್ಲಿ ಉಡುಪಿ ಗೀತಾಂಜಲಿ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ ಕಂಡಿತ್ತ್ದರೂ ,ಪ್ರೇಕ್ಷಕರ ಕೊರತೆ ಉಂಟಾಗಿ ಒಂದೇ ವಾರದಲ್ಲಿ ಉಭಯ ಜಿಲ್ಲೆಗಲಲ್ಲಿ ಚಿತ್ರ ಎತ್ತಂಗಡಿ ಯಾಯಿತು .ಈ ಪ್ರದೇಶದಲ್ಲಿನ ಬೆಳವಣಿಗೆ ರಾಜ್ಯಾದ್ಯಂತ ಉಂಟಾಗಿದ್ದರೆ ,ಮುಂದೆ ಇಂಥಹ ಅಹಿತಕಾರಿ ,ಸಮಾಜಕ್ಕೆ ತಪ್ಪು ಭಾವನೆಯನ್ನು ರವಾನಿಸುವ ಚಿತ್ರ ನಿರ್ಮಾಣಕ್ಕೆ ನಿರ್ನಾಮ ದ ಪಾಠ ವಾಗುತ್ತಿತ್ತು . ಆದರೆ ?? "ಸಿನಿಮ ವೆಂದ ಮೇಲೆ ಅದು ಕಾಲ್ಪನಿಕ ,ಇಂಥ ಹಲವರು ಚಿತ್ರಗಳು ಹಿಂದೆ ಬಂದಿವೆ" ಎನ್ನುವ ಚಿತ್ರ ಬಳಗಕ್ಕೆ ಹಿಂದೂ ಧರ್ಮದ ಅನುಯಯಿಯೂ ಆಗಿ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಚಿತ್ರಿಸಿರುವ ಚಿತ್ರಬಳಗ ಆಗ್ಗ್ಗದ ರೀತಿಯಲ್ಲಿ ದುಡ್ಡು ಮಾಡಲು ಹೊರಟ ಈ ಉದ್ದಟತನ ಕ್ಕೆ ಏನು ಹೇಳಬೇಕೋ ಗೊತ್ತಿಲ್ಲ .
 
ಭೂ ಲೋಕದಲ್ಲಿ ಸತ್ತ ಒಬ್ಬ ವೇಶ್ಯಯನ್ನು ಯಮಲೋಕದಲ್ಲಿ ಚಿತ್ರಗುಪ್ತ ಚುಮ್ಬಿಸುದು ,ದೇವಲೋಕದಲ್ಲಿ ಇಂದ್ರನ ಮಗಳಾದ ದೇವಕನ್ಯ ಇಂದ್ರೆಜೆ ಯನ್ನು ನಾಯಕ ವಿವಿದ ಸರಸ ಸಲ್ಲಾಪದಲ್ಲಿ ಬಳಸಿಕೊಳ್ಳುದು,ದೇವಲೋಕದಲ್ಲಿ ಗ್ಲಾಮರ್ ,ಕ್ಯಾಬರೆ ನ್ರತ್ಯ ,ದೇವತೆಗಳಿಗೆ  ಅನಿಷ್ಟ ,ಅಸಂಬದ್ದ ರೀತಿಯಲ್ಲಿ ಬಯ್ಯು ವ ವಿಧಾನ,ಯಮನನ್ನು ಆತನ ಆಸ್ತನದಿಂದ ಕೆಳಗಿಳಿಸಿ ಆತನ ಆಸನಕ್ಕೆ ಪದಜ್ಯುತಿ ತರುವ ಈ  ಕೆಲವು ದ್ರಶ್ಯಗಳು ಹಿಂದೂ ಧಾರ್ಮಿಕ ಸಂಸೃತಿಗೆ ಘಾಸಿ ಪಡಿಸುವಂತ ಸನ್ನಿವೇಶಗಳು ತಪ್ಪು ವಿಚಾರವಲ್ಲವೇ ?