ಕರ್ -ನಾಟಕ ರಾಜಕೀಯ
ಭೂ
ಹಗರಣ ಕ್ಕೆ ಸಂಬಂದಿಸಿದಂತೆ ಕರ್ನಾಟಕದ ಬಿ ಜೆ ಪಿ ಸರ್ಕಾರದಲ್ಲಿ ಮುಖ್ಯ ಮಂತ್ರಿ ಯಾಗಿ ಮೂರೂವರೆ ವರ್ಷ
ಆಡಳಿತ ನಡೆಸಿದ್ದ ಯೆಡಿಯೂರಪ್ಪ ಕೋರ್ಟಿನ ಕಿರಿ -ಕಿರಿ ,ವಿರೋಧ ಪಕ್ಷದವರ ಆಟೋಟೊಪ ,ಬಿಜೆಪಿ ಹೈಕಮಾಂಡ್
ನ ಒತ್ತಡ ಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ಕುರ್ಚಿ ಇಂದ ಕೆಳಗೆ ಇಳಿಯಲೇ ಬೇಕಾಯಿತು . ಪುನ : ಹೇಗಾದರೂ
ಮಾಡಿ ಕುರ್ಚಿ ಏರಬೇಕು ಎಂಬ ಹಂಬಲದಿಂದ ಯೆಡಿಯೂರಪ್ಪ ಒಂದು ತಂತ್ರವನ್ನು ರೂಪಿಸಿಯೇ ಬಿಟ್ಟರು .ರಾಜೀನಾಮೆ
ಕೊಡಲು ಸಿದ್ದ ಆದರೆ ನಾನು ಬಯಸಿದ ವ್ಯಕ್ತಿಯನ್ನು ಮುಖ್ಯ ಮಂತ್ರಿಯನ್ನಾಗಿ ಮಾಡಬೇಕೆಂಬ ಒತ್ತಾಯವನ್ನು
ಹೈ ಕಮಾಂಡ್ ಮೇಲೆ ಇರಿಸಿದರು .ಅವರ ಅಪ್ಪಣೆಯಂತೆ ಸದಾನಂದ ಗೌಡರು ಮುಖ್ಯಮಂತ್ರಿಯಾದರು .
ಯಡಿಯೂರಪ್ಪನ
ಮೇಲೆ ಇದ್ದ ಒಂದು ಪುಟ್ಟ ಕೇಸು ಖುಲಾಸೆ ಗೊಂಡ ತಕ್ಷಣ ಸದಾನಂದಗೌಡರಿಗೆ ತಮ್ಮ ಸ್ಥಾನಕ್ಕೆ
ರಾಜಿನಾಮೆ ನೀಡಲು ಒತ್ತಾಯಿಸಿ ತಾನು ಮುಖ್ಯಮಂತ್ರಿ ಪಟ್ಟವನ್ನೆರಲು ಉಪಾಯವನ್ನು ಹೂಡಿದರು .ಯೆಡಿಯೂರಪ್ಪನ
ವಚನಕ್ಕೆ ಒಪ್ಪಿ ಮುಖ್ಯಮಂತ್ರಿ ಪದವಿಗೇರಿದ ಸದಾನಂದಗೌಡರು ಬಿಟ್ಟು ಕೊಡುವ ಪ್ರಮೇಯಕ್ಕೆ ಕೈ ಹಾಕಲೇ
ಇಲ್ಲ .ಕಾರಣ ಬಯಸದೇ ಬಂದ ಭಾಗ್ಯ ...!ಇದನ್ನು ಗಟ್ಟಿಮಾಡಿಕೊಳ್ಳುವ ಎನ್ನುವ ಲೆಕ್ಕಚಾರವೋ ? ಅಥವಾ
ಒಳ್ಳೆಯ ಆಡಳಿತವನ್ನು ನಡೆಸಬೇಕೆಂಬ ಆಕಾಂಕ್ಷೆಯೋ ಒಟ್ಟಾರೆ ಯೆಡಿಯೂರಪ್ಪನವರ ಮಾತಿಗೆ ಸೊಪ್ಪು ಹಾಕದೇ
ಹೈಕಮಾಂಡ್ ನ ಪಾದರವಿಂದದ ಕೆಳಗೆ ಇಟ್ಟರು.
ಹೈಕಮಾಂಡ್ ಹೇಳಿದರೆ ಮಾತ್ರ ರಾಜಿನಾಮೆ ನೀಡಲು ಸಿದ್ದ ಎಂದು
ಸಾರಸಗಟಾಗಿ ಸಾರಿ ಬಿಟ್ಟರು .ಸಿಟ್ಟಿಗೆದ್ದ ಯೆಡಿಯೂರಪ್ಪ ಬಹಳಷ್ಟು ಮಾಡಬಾರದಷ್ಟು ಕಸರತ್ತನ್ನು ಮಾಡಿ
ಬಿಟ್ಟರು .ರೆಸಾರ್ಟ್ ರಾಜಕೀಯ ,ಬಣ ರಾಜಕೀಯ ವನ್ನು ಸ್ರಷ್ಟಿಮಾಡಿ ಒಂದಷ್ಟು ಶಾಸಕರರನ್ನು ಒಟ್ಟು
ಗೂಡಿಸಿ ಸದಾನಂದಗೌಡರು ವಿರುದ್ಧ ತತ್ವವನ್ನು ಬೆಳೆಸಲು
ಸಕ್ರಿಯರಾದರು .ಎರಡು ಬಣ ಬಿ. ಜೆ. ಪಿ ಯಲ್ಲಿ ತಲೆದೂರಲಾರ೦ಭಿಸಿದವು.ಒಟ್ಟಾರೆ ಬಿ. ಜೆ. ಪಿ ಯನ್ನು
ದಕ್ಷಿಣ ಭಾರತದಲ್ಲಿ ಅದರಲ್ಲೂ ಮೊಟ್ಟ ಮೊದಲಾಗಿ ಕರ್ನಾಟಕದಲ್ಲಿ ಆಡಳಿತಕ್ಕೆತಂದಂತ ಕೀರ್ತಿ
ಗೆ ಯಡಿಯೂರಪ್ಪ ಭಾಜನರಾಗಿ ಎಲ್ಲರಿಂದ ಪ್ರಶಂಸೆಯ ಮಳೆಯನ್ನೂ ಅನುಭವಿಸಿದ್ದ ಇವರ
ಈ ಅಧಿಕಾರ ಹಂಬಲತನದಿಂದ ಈ ತರಹದ ಕಾರ್ಯಕ್ಕೆ ಕೈ ಹಾಕಿದ್ದು ಸಮಾಜದಲ್ಲಿ ಅಸಹಾಯಕತೆಯನ್ನು ನೀರಿಕ್ಷೆಗೂ
ಮೀರಿ ಉಂಟುಮಾಡಿತ್ತು. ಈ ನಡುವೆ ಉಡುಪಿ -ಚಿಕ್ಕಮಗಳೂರು ಲೋಕಸಭಾ ಮತ್ತು ಬಳ್ಳಾರಿಯ ಚುನಾವಣೆಯಲ್ಲಿ
ಬಿ. ಜೆ .ಪಿಗೆ ಬಾರಿ ಸೋಲು ಉಂಟಾಯಿತು .ಯೆಡಿಯೂರಪ್ಪನವರ ಅನುಪಸ್ಥಿತಿಯೇ ಇದಕ್ಕೆ ಕಾರಣ ಎಂದು ಬಿಂಬಿಸಲ್ಪಟ್ಟು
ಈ ವಿಚಾರದಲ್ಲಿ ಯೆಡಿಯೂರಪ್ಪ ಒಂದಿಷ್ಟು ಹೀರೋ ಕೂಡ ಆದರು. ಅನೀರಿಕ್ಷಿತ ಸೋಲನ್ನು ಕಂಡು ಸದಾನಂದ ಗೌಡರಿಗೆ
ತೀವ್ರ ಮುಖ ಭಂಗ ಉಂಟಾಯಿತು .ಒಟ್ಟಾರೆಯಾಗಿ ನಗುಮುಖದಿಂದ ಉತ್ತಮ ಆಡಳಿತವನ್ನೇ ನೀಡಿದ್ದರು
ಸದಾನಂದಗೌಡರು .ಆದರೆ ಯೆಡಿಯೂರಪ್ಪ ಬಣದ ಉಪಟಳವನ್ನು ಸಹಿಸದೇ ಕರ್ನಾಟಕದಲ್ಲಿ ಬಿ. ಜೆ. ಪಿ ಪೂರ್ಣ
ನಶಿಸಿ ಹೋಗುತ್ತದೇನೋ ಎಂಬ ಪರಿಸ್ಥಿತಿ ಎದುರಾದಾಗ
ಹೈಕಮಾಂಡ್ ಸದಾನಂದ ಗೌಡ್ರ ರಿಂದ ರಾಜೀನಾಮೆ ಕೊಡಿಸದೇ ಬೇರೆ ದಾರಿಯೇ ಇರಲಿಲ್ಲ .ಹೈ ಕಮಾಂಡ್
ನನ್ನನ್ನು ಕಾಪಾಡುತ್ತದೆ .ಉಳಿದ ಒಂದೂವರೆ ವರ್ಷತನಕ ಮುಖ್ಯ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತೇನೆ
ಎಂದು ಅಂದು ಕೊಂಡಿದ್ದ ಸದಾನಂದಗೌಡರಿಗೆ ಆಸೆ ಕನಸಾಗಿಯೇ ಉಳಿಯಿತು .ಯೆಡಿಯೂರಪ್ಪ ಬಣದ ಕೆಲವು
ಸೂತ್ರವನ್ನು ಪಾಲಿಸಿದ್ದರೆ,ಭವಿಷ್ಯ ಸದಾನಂದ ಗೌಡ್ರರು ಹುದ್ದೆಯಲ್ಲಿ ಮುಂದುವರಿಯ ಬಹುದಿತ್ತೇನೋ
? ಶಾಸಕಾಂಗ ಸಭೆ ಕರೆಯಬಹುದಿತ್ತು .ಹೊರಲಾರದಷ್ಟು ಸಚಿವ ಸ್ಥಾನವನ್ನು ತಾವೇ ಇಟ್ಟುಕೊಳ್ಳುವ
ಬದಲು ಸಚಿವ ಸಂಪುಟವನ್ನು ತೆರೆಯ ಬಹುದಿತ್ತು .ಮಾತಿಗೆ ಹೈಕಮಾಂಡ್ ,ಎಂದು ಹೈಕಮಾಂಡ್ ಎಂದು ಅತೀ ವಿಶ್ವಸವನ್ನಿಡಬಾರದಿತ್ತು.ಅಧಿಕಾರ
ಎನ್ನುದು ಕ್ಷಣಿಕ ಕಾಲವಷ್ಟೇ .ಪಕ್ಷದಲ್ಲಿ ಉತ್ತಮ ರಾಜಕೀಯ ಮೇದಾವಿಯಾಗಿ ,ಎಲ್ಲ ಸ್ನೇಹ -ಪ್ರೀತಿ ಸಂಪಾದಿಸಿದ್ದ
ಸದಾನಂದ ಗೌಡ್ರು ಮುಖ್ಯಮಂತ್ರಿ ಪಟ್ಟದ ಲಾಲಸೆ ಇಂದ ನಂಬಿಕೆ ಇಟ್ಟುಕೊಂಡಿದ್ದ ಖುದ್ದು ,ಯೆಡಿಯೂರಪ್ಪನವರಿಂದ
ಹಿಡಿದು ಕೆಲವು ಶಾಸಕ -ಸಚಿವರಿಂದ ಶತ್ರತ್ವವನ್ನು ಕಟ್ಟಿಕೊಳ್ಳಬೇಕಾಯಿತು .
ಹೈಕಮಾಂಡ್ ಗೆ ಬೇಕಾಗಿರುವದು
ಸದಾನಂದ ಗೌಡ್ರು ಮಾತ್ರ ಅಲ್ಲ .ಅವರ ನಿಲವು ಪಕ್ಷವನ್ನು ಒಟ್ಟಾಗಿ ಬೆಳೆಸಿ ಬಲಪಡಿಸವುದು..ಕರ್ನಾಟಕದಲ್ಲಿ
ಸದಾನಂದ ಗೌಡ್ರುರ ವಿರುದ್ದ ಉಂಟಾಗುತ್ತಿರುವ ಒಳ ಜಗಳ ,ಬಣ ನೀತಿಯನ್ನು ತಟಸ್ತಗೊಳಿಸಲು ಈ ಸದರ್ಭಕ್ಕೆ
ಸದಾನಂದ ಗೌಡ್ರು ರಾಜಿನಾಮೆ ಅನಿವಾರ್ಯವೇ ಆಗಿತ್ತು ಬದಲಿ ನಾಯಕತ್ವದ ಅವಶ್ಯಕತೆ ಎದ್ದು ಕಾಣುತ್ತಿತ್ತು
.
.ಏನೇ ಇರಲಿ ಒಟ್ಟಾರೆ 11 ತಿಂಗಳು ಉತ್ತಮ ಆಡಳಿತ ನೀಡಿದ ತೃಪ್ತಿ ಅವರಿಗಿದ್ದರೆ ,ಅನುಭವಿಸಿದ ಫಲಾನುಭವಿಗಳಿಗೆ ಸಂತೃಪ್ತಿ ತಂದರೆ ಅದೇ ಸಾಕು ಅಲ್ವೇ ?
.ಏನೇ ಇರಲಿ ಒಟ್ಟಾರೆ 11 ತಿಂಗಳು ಉತ್ತಮ ಆಡಳಿತ ನೀಡಿದ ತೃಪ್ತಿ ಅವರಿಗಿದ್ದರೆ ,ಅನುಭವಿಸಿದ ಫಲಾನುಭವಿಗಳಿಗೆ ಸಂತೃಪ್ತಿ ತಂದರೆ ಅದೇ ಸಾಕು ಅಲ್ವೇ ?



ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ