ಮುನಿರತ್ನ
ಕನ್ನಡ ಚಿತ್ರ ರಂಗದ ಒಬ್ಬ ಪ್ರತಿಷ್ಟಿತ ನಿರ್ಮಾಪಕರಲ್ಲಿ ಒಬ್ಬರು .ಇವರ ಬ್ಯಾನರನಡಿಯಲ್ಲಿ ಹಲವಾರು
ಚಿತ್ರಗಳು ಅರಳಿವೆ .ಯಾರೂ ಕೈಹಾಕದ ,ಕನ್ನಡ ಚಿತ್ರರ೦ಗದಲ್ಲಿ ಒಂದು ದಾಖಲೆ ಅನ್ನು ನಿರ್ಮಿಸಬೇಕು ಎನ್ನುವ
ಆಶೆ ಇಂದ ಇತ್ತೀಚಿಗೆ ಸುಮಾರು 15 ಕೋಟಿ ರೂ .ವೆಚ್ಚದಲ್ಲಿ ಕಠಾರಿವೀರ ಸುರಸುಂದರಾಂಗಿ ಎನ್ನುವ ಉಪೇಂದ್ರ
,ರಮ್ಯ ,ವಿಶೇಷ ಪಾತ್ರದಲ್ಲಿ ಅಂಬರೀಶ್ ಅಬಿನಯದ 3 D, ಮತ್ತು 2D ತಂತ್ರಾಜನವನ್ನು ಒಳಗೊಂಡ ಚಿತ್ರವನ್ನು
ರೂಪಿಸಿಬಿಟ್ಟರು .ಐತಿಹಾಸಿಕ ಟಚ್ ಕೊಟ್ಟು ಚಿತ್ರ ಪ್ರೇಮಿಗಳ ಮನಸನ್ನು ಗೆಲ್ಲುದರ ಜೊತೆ ಜೇಬನ್ನು
ಭರ್ತಿ ಮಾಡಿಕೊಳ್ಳುವ ಉಪಾಯ ಅವರದಾಗಿತ್ತು .ಚಿತ್ರದ ಬಿಡುಗಡೆ ದಿನಾ೦ಕ ,ಚಿತ್ರದ ಕಥೆ ಕ್ರತಿ ಚವ್ರ್ಯಹೀಗೆ
ಮುಂತಾದ ಸಮಸ್ಯೆಯನ್ನೋಲ್ಕೊಂಡಂತೆ ಚಿತ್ರ ಬಿಡುಗಡೆ ಯ ಮೊದಲೇ ವಿವಾದದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿತ್ತು
.ಬಿಡುಗಡೆ ನಂತರವೂ ಸಹಾ, ಇನ್ನಷ್ಟು ಸಮಸ್ಯೆ ಯೊಂದಿಗೆ ವಿವಾದ ದುಪ್ಪಟ್ಆಯ್ತು .ಕೆಲವು ಚಿತ್ರ ಮಂದಿರದಲ್ಲಿ
3D ಗೊಂದಲ ವೆರ್ಪಟ್ಟರೆ,ಮುಖ್ಯವಾದ ಮತ್ತೊಂದು ವಿಚಾರವೆಂದರೆ ಹಿಂದೂ ದೇವತೆಗಳ ಬಗ್ಗೆ
ಚಿತ್ರದಲ್ಲಿ ಅವಹೇಳನಕಾರಿ ಯಾಗಿ ಬಿಂಬಿಸಲಾಗಿದೆ ಎಂದು ಹಿಂದೂ ಸಂಘಟನೆಗಳು ಪ್ರತಿಭಟನೆ ನೆಡಿಸಿದವು.ಕೆಲವಂದು
ಸ್ಥಳಗಳಲ್ಲಿ ತಣ್ಣಗಾದರೆ ,ಉಡುಪಿ ಮತ್ತು ಮಂಗಳೂರಿನಲ್ಲಿ ಮಾತ್ರ ಪ್ರತಿಭಟನೆಯ ಕಾವು ಬಹಳ ಬಿಗುವರಿದಿತ್ತು
ಉಡುಪಿ ಶಿರೂರು ಮಠದ ಲಕ್ಷ್ಮಿ ವರ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಮೊಟ್ಟಮೊದಲನೆಯದಾಗಿ , ಉಡುಪಿ ಗೀತಾಂಜಲಿ ಚಿತ್ರಮಂದಿರದಲ್ಲಿನ ಬ್ಯಾನರ್ ಗಳನ್ನೂ ತೆರವು ಗೊಳಿಸಿ ಉಗ್ರ ರೂಪದ ಪ್ರತಿಭಟನೆಯೊಂದಿಗೆ ಚಿತ್ರಪ್ರದರ್ಶನವನ್ನು ಸಮೂರ್ಣವಾಗಿ ತಡೆಹಿಡಿಯಲಯ್ತು. ಮಂಗಳೂರಿನ ಜ್ಯೋತಿ ಚಿತಮಂದಿರದಲ್ಲೂ ಸಹಾ ಇದೆ ತರಹದ ಬೆಳವಣಿಗೆ ಉಂಟಾಯ್ತು .ಚಿತ್ರದ ವಿರುದ್ಧದ ಹೋರಾಟದ ಕಾವು ಮಿತಿಮೀರಿದನ್ನು ಅರಿತ ನಿರ್ಮಾಪಕ ಮುನಿರತ್ನ ,ನಾಯಕ ಉಪೇಂದ್ರ ಉಡುಪಿ ಕೃಷ್ಣ ಮಠ ಕ್ಕೆ ಆಗಮಿಸಿ ತಪ್ಪುಕಾಣಿಕೆ ಯನ್ನು ಸಲ್ಲಿಸಿ ಚಿತ್ರದಲ್ಲಿ ಬಳಸಿ ಕೊಳ್ಳಲಾಗಿರುವ ಎಲ್ಲ ಸನ್ನಿವೇಶಕ್ಕೆ ಕತ್ತರಿ ಹಾಕಲಾಗುದು ಎಂದ ಆ ಸಂಧರ್ಭದಲ್ಲಿ ತೀರ್ಮಾನಕ್ಕೆ ಬರಲಾಗಿತ್ತದರೂ ,ಒಂದೆರಡು ಸನ್ನಿವೇಶವನ್ನು ತೆರವವು ಗೊಳಿಸಿ ಕೈ ತೊಳೆದು ಕೊಂಡಿದ್ದರು

ಇದನ್ನು
ಅರಿತ ಭಜರ೦ಗ ದಳ ಸೇರಿದಂತೆ ಇತರ ಕೆಲವು ಹಿಂದೂ ಸಂಘಟನೆಗಳು ತೀವ್ರ ರೂಪದ ಪ್ರತಿಭಟನೆಗೆ ನಾಂದಿ
ಹಾಡಿದವು .ಒಂದೆರಡು ದಿನಗಳ ಕಾಲ ಪೋಲಿಸ್ ಬಿಗು ಬಂದೊಬ್ಸ್ತನಲ್ಲಿ ಉಡುಪಿ ಗೀತಾಂಜಲಿ ಚಿತ್ರಮಂದಿರದಲ್ಲಿ
ಚಿತ್ರ ಪ್ರದರ್ಶನ ಕಂಡಿತ್ತ್ದರೂ ,ಪ್ರೇಕ್ಷಕರ ಕೊರತೆ ಉಂಟಾಗಿ ಒಂದೇ ವಾರದಲ್ಲಿ ಉಭಯ ಜಿಲ್ಲೆಗಲಲ್ಲಿ
ಚಿತ್ರ ಎತ್ತಂಗಡಿ ಯಾಯಿತು .ಈ ಪ್ರದೇಶದಲ್ಲಿನ ಬೆಳವಣಿಗೆ ರಾಜ್ಯಾದ್ಯಂತ ಉಂಟಾಗಿದ್ದರೆ ,ಮುಂದೆ ಇಂಥಹ
ಅಹಿತಕಾರಿ ,ಸಮಾಜಕ್ಕೆ ತಪ್ಪು ಭಾವನೆಯನ್ನು ರವಾನಿಸುವ ಚಿತ್ರ ನಿರ್ಮಾಣಕ್ಕೆ ನಿರ್ನಾಮ ದ ಪಾಠ ವಾಗುತ್ತಿತ್ತು
. ಆದರೆ ?? "ಸಿನಿಮ ವೆಂದ ಮೇಲೆ ಅದು ಕಾಲ್ಪನಿಕ ,ಇಂಥ ಹಲವರು ಚಿತ್ರಗಳು ಹಿಂದೆ ಬಂದಿವೆ"
ಎನ್ನುವ ಚಿತ್ರ ಬಳಗಕ್ಕೆ ಹಿಂದೂ ಧರ್ಮದ ಅನುಯಯಿಯೂ ಆಗಿ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ
ಚಿತ್ರಿಸಿರುವ ಚಿತ್ರಬಳಗ ಆಗ್ಗ್ಗದ ರೀತಿಯಲ್ಲಿ ದುಡ್ಡು ಮಾಡಲು ಹೊರಟ ಈ ಉದ್ದಟತನ ಕ್ಕೆ ಏನು ಹೇಳಬೇಕೋ
ಗೊತ್ತಿಲ್ಲ .
ಭೂ
ಲೋಕದಲ್ಲಿ ಸತ್ತ ಒಬ್ಬ ವೇಶ್ಯಯನ್ನು ಯಮಲೋಕದಲ್ಲಿ ಚಿತ್ರಗುಪ್ತ ಚುಮ್ಬಿಸುದು ,ದೇವಲೋಕದಲ್ಲಿ ಇಂದ್ರನ
ಮಗಳಾದ ದೇವಕನ್ಯ ಇಂದ್ರೆಜೆ ಯನ್ನು ನಾಯಕ ವಿವಿದ ಸರಸ ಸಲ್ಲಾಪದಲ್ಲಿ ಬಳಸಿಕೊಳ್ಳುದು,ದೇವಲೋಕದಲ್ಲಿ
ಗ್ಲಾಮರ್ ,ಕ್ಯಾಬರೆ ನ್ರತ್ಯ ,ದೇವತೆಗಳಿಗೆ ಅನಿಷ್ಟ ,ಅಸಂಬದ್ದ ರೀತಿಯಲ್ಲಿ ಬಯ್ಯು ವ ವಿಧಾನ,ಯಮನನ್ನು
ಆತನ ಆಸ್ತನದಿಂದ ಕೆಳಗಿಳಿಸಿ ಆತನ ಆಸನಕ್ಕೆ ಪದಜ್ಯುತಿ ತರುವ ಈ ಕೆಲವು ದ್ರಶ್ಯಗಳು ಹಿಂದೂ
ಧಾರ್ಮಿಕ ಸಂಸೃತಿಗೆ ಘಾಸಿ ಪಡಿಸುವಂತ ಸನ್ನಿವೇಶಗಳು ತಪ್ಪು ವಿಚಾರವಲ್ಲವೇ ?

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ