ಶುಕ್ರವಾರ, ಏಪ್ರಿಲ್ 20, 2012

"ಇದು ಒಂದು ಸಿನಿಮಾನ ?"

"ಇದು ಒಂದು ಸಿನಿಮಾನ ?"
"ಧಾರಾವಾಹಿ ಯನ್ನಾದರೂ ನೋಡ್ಬಹುದು .ತಲೆ ಚಿಟ್ಟ್ ಹಿಡ್ದ್ ಹೋಗ್ತಿದೆ .ಯಾವ್ನ್ ಇದ್ದಂನ್ ತೆಗಿದ್ದ್ .ಒಳ್ಳೆ ಫಿಲಂ ಅಂತ ಬಂದ್ರೆ   ಒಳ್ಳೆ ಯಾಕಟ್ರಸ್ಸ್  ಇದ್ದರು ಅಂತ ಬಂದ್ರೆ ಛೆ ..ದೊಡ್ದು ,ಟೈಮ್ ಪೂರ್ತಿ ವೆಸ್ಟ್ ಆಯ್ತು ..ಕನ್ನಡ ಫಿಲಂ ಹಣೆಬರಹವೇ ಇಷ್ಟೇ ಮಾರಾಯ" .

ಇದು    ಮೊನ್ನೆ ಬಿಡುಗಡೆ ಯಾದ 'ದಶಮುಖ ' ಸಿನಿಮಾ ನೋಡಲು ಬಂದ ಟಾಕೀಸಿನ ಒಳಗೆ ಇದ್ದ ಕೇವಲ ದಶ ಮುಖ ಗಳಲ್ಲಿ 2 ಮುಖ ಗಳ ನಡುವೆ ಉಂಟಾದ ಸಿಟ್ಟಿನ ಮಾತುಕತೆ .ಒಂದು ಲೆಕ್ಕದಲ್ಲಿ ಈರ್ವ ರ ವಾಗ್ವೈಖರಿ  ಅರ್ಥಗರ್ಭಿತ ವಾಗಿದ್ದರೂ ,ಅವರುಗಳ ಒಂದು ಮಾತು ಮಾತ್ರ ಬಹಳ ಬೇಜಾರು ತರಿಸಿತ್ತು  ಕೇವಲ ಒಂದು ಚಿತ್ರ ಒಳ್ಳೆದಿಲ್ಲ ಎನ್ನುವ ಮಾತ್ರಕ್ಕೆ ಈಡೀ ಕನ್ನಡ ಚಿತ್ರ ರಂಗದ ಬಗ್ಗೆ ದೂರುದು ತರವಲ್ಲ .ಈ ಫಿಲಂ ಬಗ್ಗೆ ಅವರು ಗಳಂತೆ ಉದ್ದ ಕಾಮೆಂಟ್ ಡೈಲಾಗ್ ಡೆಲಿವರಿ ಮಾಡುದಕ್ಕೆ ಇಚ್ಛೆ ಪಡುದಿಲ್ಲ ಕೇವಲ ಒಂದೇ ಮಾತಿಲ್ಲಿ ನೋಡುಗರರನ್ನು ಗುತ್ತಿಗೆ ಪಡೆದಂತೆ ವರ್ತಿಸದೇ ,ಉತ್ತಮ ಚಿತ್ರ ಕೊಡಲು ಸಾಧ್ಯವಾದರೂ ,ಇಂಥ ಚಿತ್ರ  ಮಾತ್ರ ದಯವಿಟ್ಟು ಬಿಡುಗಡೆ ಮಾಡಬೇಡಿ ಅನ್ನ ಬಹುದು .ಡೆಡ್ಲಿ ಸೋಮ ಎನ್ನುವ  ಆದಿತ್ಯ -ರಕ್ಷಿತ ಅಭಿನಯದ ಸಕತ್ ಚಿತ್ರವನ್ನು ,ರಕ್ಷಿತ -ವಿಜಯರಾಘವೇಂದ್ರ ತಾರಾ ಗಣದ ರಾಜೀವ್ ಎನ್ನು ವ ಸಾಧಾರಣ ಚಿತ್ರವನ್ನು ಕೊಟ್ಟ ರವಿ ಶ್ರೀವತ್ಸ ಎನ್ನು ನಿರ್ದೇಶಕರ ಹೆಸರು ತೆರೆಮರೆಯಲ್ಲಿ ಪ್ರಸಿದ್ಧ ವಾಗಿತ್ತು . ಈ ನಿರ್ದೇಶಕರ ಚಿತ್ರ ,ಒಳ್ಳೆ -ಒಳ್ಳೆಯೇ ಸ್ಟಾರ್ ತಾರಾಗಣ ಬಣ, ನೋಡಿ ನನ್ನ ಸ್ನೇಹಿತ ನ ಮಾತಿನ ಮೇರೆಗೆ ಟಾಕೀಸಿನ ಕಡೆ ಹೆಜ್ಜೆ ಇಟ್ಟರೆ ನನ್ನ ನಿರೀಕ್ಷೆ ,ಆಶೆ ಹುಸಿ ಯಾಗಲೇ ಇಲ್ಲ .ಕೆಂಡದ ಮೇಲೆ ಕುಳಿ ತಂತ ಅನುಭವ ,ಎಷ್ಟು ಬೇಗ ಹೊರಗಡೆ ಬರುತ್ತೇನೆ ಯೆಮ್ಬುದರ್ಲ್ಲೇ ನಾನು ಆಲೋಚನಾ ಮಗ್ನನಾಗಿದ್ದೆ .ಶುಕ್ರವಾರ ಬಿಡುಗಡೆ ಯಾದ ಈ ಸಿನಿಮಾವನ್ನು ನಾವು ಭಾನುವಾರ ನೋಡುದಕ್ಕೆ ಹೋಗಿದ್ದೆವು. ಭಾನುವಾರ ಬೇರೆ ,ಜನ ತುಂಬ ಇರಬಹುದು  ಯಂಬ ನಮ್ಮ  ಲೆಕ್ಕಾಚಾರ ತಲೆ ಕೆಳಗಾಗಿತ್ತು .ಬಾಲ್ಕನಿ ಸೇರಿ ಅಲ್ಲಿ ಇದ್ದಿದ್ದು ಕೇವಲ 10 ರಿಂದ 12  ಮಂದಿ ಮಾತ್ರ.ಅದರಲ್ಲಿ ಕೊನೆಯಲ್ಲಿ ಉಳಿದಿದ್ದು ಕೇವಲ 5  ಮಂದಿ ಮಾತ್ರ .ತಾರಾಗಣದಲ್ಲಿ ದೊಡ್ಡ -ದೊಡ್ಡ ಜನಪ್ರಿಯರ ದಂಡೆ ಇದ್ದಿತ್ತು ,ಅನಂತನಾಗ್ ,ರವಿಚಂದ್ರನ್ ,ಅವಿನಾಶ್ ,ದೇವರಾಜ್ ,ಅಚ್ಯುತ್ ,ದತ್ತಣ್ಣ ,ಮೊಳವಿಕ ,ಸರಿತಾ ,ರವಿಕಳೆ,ಪ್ರವಿಣ್,ಅಮರ್ ನಂತಹ ಘಟಾನು ಘಟಿಗಳು ಗಳಿದ್ದರೆ ,ಒಂದೆರಡು ನಿಮಿಷಕ್ಕೆ ರಮೇಶ್ ಭಟ್ ,ಜೈಜಗದೀಶ್ ಬಂದು ಹೋಗುತ್ತಾರೆ .4 ನಿಮಿಷದ ಒಂದು ಹಾಡಿನಲ್ಲಿ ,ಟೋಟಲಿ 10 ನಿಮಿಷದಲ್ಲಿ ನಾಯಕ ಆ ದಿನಗಳು ಚಿತ್ರದ ನಾಯಕ ಚೇತನ್ ,ನಾಯಕಿ ಆಕಾಂಕ್ಷ ಮಿಂಚುತ್ತಾರೆ .
 ಕತೆ ಇಷ್ಟೇ ನಾಯಕ ಚೇತನ್ ತನ್ನ ತಂದೆಯನ್ನು ಕೊಂದ ಆರೋಪದ ಮೇಲೆ ಜೈಲು ಪಾಲಾಗುತ್ತಾನೆ .ಅವನ ಪರವಾಗಿ ವಾದ ಮಾಡಲು ಯಾವ ವಕೀಲರು ಮುಂದೆ ಬರುದಿಲ್ಲ .ಅವನೇ   ಅಪರಾಧಿ ಅನ್ನುದಕ್ಕೆ ಬಲವಾದ ಸಾಕ್ಷಿಗಲಿದ್ದುವು .ಕೋರ್ಟ್ನ ಜಡ್ಜ್  ಈ ಕೇಸ್ ನ್ನು ದಶ ಮುಖ ಗಳು ತೀರ್ಮಾನ ಮಾಡಲಿ ಎಂದು ಆದೇಶಿಸಿ ಕೋರ್ಟಿನ ಒಂದು ಕೋಣೆಯಲ್ಲಿ ಜಾಗ ಕೊಡುತ್ತಾರೆ .ಹತ್ತು ಜನರ ಆಗಮನ ವಾಗುತ್ತಾರೆ .9 ಜನ ಅಪರಾಧಿ ಎಂದರೆ ,ಒಬ್ಬರು ಮಾತ್ರ ನಿರಪರಾಧಿ ಎಂದು ವಾಧಿಸುತ್ತಾರೆ..ಇದೆ ಅವರುಗಳ ನಡುವೆ ವಾದ -ವಿವಧ ಹೇಗೆಲ್ಲ ಮಾಡಿ,ಅಂತೂ 3 ಗಂಟೆಯವರೆ ಎಲ್ಲರನ್ನು ಕನ್ವಿಸ್ ಆಗುತ್ತಾರೆ .ನಿರಪರಾಧಿ ಎಂದು ಒಪ್ಪುತ್ತಾರೆ  ಅಲ್ಲಿಗೆ  ಫಿಲಂ ದಿ ಎಂಡ್ .ಇಲ್ಲಿ ನಾಯಕ ನ ತಂದೆ ಹೇಗೆ ಸತ್ತರು ? ನಾಯಕ -ನಾಯಕಿ ಎಲ್ಲಿ ಹೋದರು ಎಂಬುದನ್ನು ರವಿ ಶ್ರೀವತ್ಸ ರವರು ಭಾಗ 2  ಮಾಡಬಹುದೇನೋ ?! 3  ಗಂಟೆ ಯವರೆಗೆ 10 ಜನರ ,ವರ್ತನೆ ,ಸಂಭಾಷಣೆ ನೋಡ್ತಾ ಇದ್ದರೆ ತಲೆ ಚಿಟ್ಟು ಹಿಡಿಯುದಂತೂ ಸತ್ಯ .ತುಸು  ಸಂಭಾಷಣೆ ಕಿವಿಗೆ ಇಂಪು -ತಂಪು ನೀಡುವಂತಿದ್ದರೆ, ಲೀಲಾ ಜಾಲವಾಗಿ ಉಸಿರು ಆಡುತ್ತಾ ಪೂರ್ಣ ಸಿನಿಮಾ ನೋಡಬಹುತ್ತಿತ್ತೇನೋ ?ಆದ್ರೆ ಇಲ್ಲಿ ವಸ್ತುಶ : ದನ ಮೇಯಿಸುವ  ಮಕ್ಕಳು ,ಗುಡ್ಡ -ಕಾಡಿನಲ್ಲಿ ಜಗಳ ಕಾಯುತ್ತ ಮಾತನಾಡುವ ಪರಿ ಯಂತೆಯೇ ಇತ್ತು ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ