ಗುರುವಾರ, ಡಿಸೆಂಬರ್ 31, 2020
ಎಲ್ಲಿಗೆ ಬಂತು ಡ್ರಗ್ಸ್ ಡ್ರಿಲ್ ?
ಹೌದು ! ಇತ್ತೀಚಿಗೆ ಡ್ರಗ್ಸ್ ಬಗೆಗಿನ ವಿಶ್ಲೇಷಣೆ ಕೇಳಿ ಬರುತ್ತಿಲ್ಲ. ಒಂದು ಹಂತದಲ್ಲಿ ಗಾಂಧೀನಗರವನ್ನು ನಡುಗಿಸಿದ್ದ ಸುದ್ದಿ. ಬೆಚ್ಚಿ ಬೀಳಿಸುತ್ತಿತ್ತು ದಿನಾ -ಕ್ಷಣ . ದೊಡ್ಡ ಪ್ರಚಾರದ ಕೇಂದ್ರ ಬಿಂದುವಾಗಿತ್ತು. ದಿನ ದಿಂದ ದಿನಕ್ಕೆ ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರುತ್ತಿತ್ತು . ಪ್ರಸ್ತುತ, ಪ್ರಕರಣದಲ್ಲಿನ ವೈವಿಧ್ಯತೆಯ ಕಳೆ ಕುಂದಿದೆ. ಅಷ್ಟಕ್ಕೂ, ಡ್ರಗ್ಸ್ ವಿಚಾರಣೆ ಎಲ್ಲಿಗೆ ಬಂತು ?ಹಳ್ಳ ಹಿಡಿಯಿತೇ ಎಂಬ ಪ್ರಶ್ನೆ ಮೂಡದೇ ಇರದು . ರೆಡ್ ಹ್ಯಾಂಡ್ ಆಗಿ ಡ್ರಗ್ಸ್ ಸಪ್ಲೆಯರ್ ಅನಿಕಾ ಸಿಕ್ಕಿ ಬಿದ್ದ ಬಳಿಕ ಮಾದಕ ಜಾಲವನ್ನು ಬಯಲಿಗೆ ತಂದ ಕೀರ್ತಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಯವರಿಗೆ ಸಲ್ಲಬೇಕು . ಮುನ್ನೆಲೆಗೆ ಬಂದು ಬಹಿರಂಗವಾಗಿ ಹೇಳಿಗೆ ಕೊಡಲು ಪ್ರಾರಂಭಿಸಿದ್ದರು .ಈರ್ವರ ಕೃಪಾಕಟಾಕ್ಷ ದಿಂದ ಸ್ಯಾಂಡಲ್ ವುಡ್ ನ ಕೆಲವು ತಾರೆಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು . ಇಬ್ಬರು ಹೀರೋಯಿನ್ ಹಾಗೂ ಕೆಲವು ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಲಾಯಿತು . ಇನ್ನಷ್ಟು ಮತ್ತಷ್ಟು ಮಿಕಗಳು ಬಲೆಗೆ ಬೀಳಲಿದೆ ಎಂದೇ ಭಾವಿಸಲಾಗಿತ್ತು. ಸಿಸಿಬಿ ಕೂಡಾ ಫುಲ್ ಪವರ್ ನೊಂದಿಗೆ ನೋಟಿಸ್ ಜಾರಿ ಮಾಡುವುದು ಹಾಗೂ ಮನೆ ಮೇಲೆ ರೈಡ್ ಮಾಡುವ ಕಾಯಕ ,ಕಾರ್ಯಕ್ರಮಗಳನ್ನು ರೂಪಿಸಿ ಬಿಟ್ಟಿದ್ದವು .ಹೊಸ ಮನ್ವಂತರ ಸ್ರಷ್ಟಿಯಾಗಿ ಬಿಡುತ್ತದೆ . ಕೆಲವು ಫೇಮಸ್ ಸಿನಿಮಾ ಮಂದಿ ಸೇರಿದಂತೆ ಕೆಲವು ರಾಜಕಾರಣಿಗೆ ಹಾಗೂ ಅವರ ಮಕ್ಕಳು,ಉದ್ಯಮಿಗಳು ಇನ್ನೇನು ಅರೆಸ್ಟ್ ಆಗ್ತಾರೆ ಎಂದೇ ನಂಬಲಾಗಿತ್ತು .ಹಾಗಾಗಲಿಲ್ಲ., ಕಾದ ಕುತೂಹಲಕ್ಕೆ ಉತ್ತರ ಸಿಕ್ಕಿಲ್ಲ .,ಸಿಗುತ್ತಿಲ್ಲ. ಡ್ರಗ್ಸ್ ಜಾಲದ ಬಗ್ಗೆ ಸಿನಿಮಾ ಕಲಾವಿದರರುಗಳ ಬಗ್ಗೆ ಬಾಂಬ್ ಸಿಡಿಸಿದ್ದ ಇಂದ್ರಜಿತ್ ಲಂಕೇಶ್ ಮುಖ್ಯವಾಹಿನಿಗೆ ಬಂದು ಒಂದೊಳ್ಳೆ ಹೇಳಿಕೆಯನ್ನು ಕೊಟ್ಟಿದ್ದರು."ಸಿಸಿಬಿ ತನಿಖೆ ಪಾರದರ್ಶಕ ವಾಗಿರುತ್ತದೆ ಎಂದೇ ಭಾವಿಸಿದ್ದೆ ನನ್ನಲ್ಲಿ ಇದ್ದ ಎಲ್ಲಾ ದಾಖಲೆಗಳನ್ನು ಕೊಟ್ಟಿದ್ದೆ. ಆದರೆ ನಾನು ಕೊಟ್ಟ ಲಿಸ್ಟ್ ನಲ್ಲಿರುವ ವ್ಯಕ್ತಿಗಳನ್ನ ಇದುವರೆಗೂ ತನಿಖೆ ನಡೆಸಿಲ್ಲ ,ಬಂಧಿಸಿಲ್ಲ" ಎಂದು ನಿರಾಶೆ ವ್ಯಕ್ತಪಡಿಸಿದ್ದರು , ನಿಜ ! ಇದಕ್ಕಿಂತ ಸರಳ ಉದಾಹರಣೆ ಬೇಕಿಲ್ಲ .ಕಾನೂನಾತ್ಮಕವಾಗಿ ಅದೆಷ್ಟು ಉತ್ತಮ ರೀತಿಯಲ್ಲಿ ತನಿಖೆ ನೆಡೆಯುತಿದೆ ಎಂಬುದನ್ನು ಇದು ರುಜುವಾತು ಗೊಳಿಸುತ್ತಿದೆ.
ತಾರಾ ಜೋಡಿ ದಿಗಂತ್ ಹಾಗೂ ಐಂದ್ರಿತಾ ರೈಯನ್ನು ವಿಚಾರಣೆ ಒಳಪಡಿಸಿ ಕಳಿಸಲಾಗಿತ್ತು . ಶೂಟಿಂಗ್ ಸಂದರ್ಭ ಕಣ್ಣು ಗಾಯಕ್ಕೊಳಕ್ಕಾಗಿ ಅದರ ನೋವು ನಿವಾರಣೆಗೆ ತುಸು ಡ್ರಗ್ಸ್ ಮೊರೆ ಹೋಗಿದ್ದು ಸತ್ಯ ಎಂದು ದಿಗಂತ್ ಹೇಳಿದ್ದರಂತೆ . ತಗೆದು ಕೊಂಡಿದ್ದನ್ನು ಒಪ್ಪಿಕೊಂಡ ನಂತರ ಅವರನ್ನು ಮನೆಗೆ ಕಳುಹಿಸಿ ಮತ್ತೆ ವಿಚಾರಣೆಗೆ ಒಳಪಡಿಸುತ್ತೇವೆ ಎಂದು ಮುಚ್ಚಳಿಕೆ ಬರೆಯಿಸಿ ಕೊಂಡು ಕಳುಹಿಸಿ ಕೊಟ್ಟಿದ್ದರಂತೆ ಸಿಸಿಬಿ . ಮತ್ತೆ ಆ ಗೌಜಿಗೆ ಹೋಗಿಲ್ಲ ತನಿಖಾಧಿಕಾರಿಗಳು !
ತನ್ಮಧ್ಯೆ ಡ್ಯಾನ್ಸ್ ಮಾಸ್ಟರ್ ಕಿಶೋರ್ ನ ಬಂಧನ ವಾಗುತ್ತದೆ . ವಿಚಾರಣೆ ವೇಳೆ ಸ್ಟಾರ್ ಆಂಕರ್ ಕಮ್ ನಟಿ ಮಂಗಳೂರು ಬೆಡಗಿ ಅನುಶ್ರೀ ಹೆಸರು ಹೇಳುತ್ತಾನೆ. ಅನುಶ್ರೀ ವಿಚಾರಣೆ ಕೂಡಾ ಆಗುತ್ತದೆ ವಿಚಾರಣೆ ಬಳಿಕ ದೊಡ್ಡ ಸುದ್ದಿ ಹರಡಲಾರಂಭಿಸುತ್ತದೆ . ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಅನುಶ್ರೀ ರಕ್ಷಣೆಗೆ ಶುಗರ್ ಡ್ಯಾಡಿ ಪಾತ್ರವಿದೆ ಎಂದು ಹೇಳಿಕೆ ಕೊಡುತ್ತಾರೆ. ಅನುಶ್ರೀಯನ್ನು ವಿಚಾರಣೆ ಮಾಡಿದ್ದ ಸಿಸಿಬಿ ಪೊಲೀಸ್ ಒಬ್ಬರನ್ನು ಎತ್ತಂಗಡಿ ಮಾಡಲಾಗಿತ್ತಂತೆ . ವಿಚಾರಣೆಗೆ ತೆರಳುವ ಮುನ್ನ ದಿನ ಅನುಶ್ರೀ ದೊಡ್ಡ ದೊಡ್ಡ ರಾಜಕಾರಣಿಗಳಿಗೆ ಫೋನ್ ಮಾಡಿದರಂತೆ ಕಾರಣ ಸಿಸಿಬಿ ಯವರ ಬಂಧನದಿಂದ ಬಚಾವಾಗಲು . ಇತ್ಯಾದಿ ಇತ್ಯಾದಿ ಸುದ್ದಿಗಳೆಲ್ಲಾ ಸುದ್ದಿ ಮನೆಯಲ್ಲಿ ಹರಿದಾಡಿದ್ದವು . ಬೆಂಕಿ ಇಲ್ಲದೇ ಹೊಗೆಯಾಡುತ್ತದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ! ಏನೇ ಇರಲಿ ಇತ್ತೀಚಿಗೆಗಂತೂ ಯಾರೊಬ್ಬರ ವಿಚಾರಣೆ ನಡೆಯಲಿಲ್ಲ ಎಂಬುದಂತೂ ದಿಟ . ಎಲ್ಲಿಗೆ ಬಂತು ವಿಚಾರಣೆ ಎಂಬ ಪ್ರಶ್ನೆಯನ್ನು ಇರಿಸಿಕೊಳ್ಳದೇ ವಿಧಿ ಇಲ್ಲ
ಕೊನೆಯದಾಗಿ ,ಜೈಲಿನಲ್ಲಿರುವ ರಾಗಿಣಿ ,ಸಂಜನಾಗೆ ಇನ್ನೂ ಬಿಡುಗಡೆ ಭಾಗ್ಯ ಮಾತ್ರ ಕಂಡು ಬಂದಿಲ್ಲ . ಇದೀಗ ಸಂಜನಾ ಆರೋಗ್ಯ ಸಮಸ್ಯೆ ನಿಮಿತ್ತ ಆಸ್ಪತ್ರೆ ಗೆ ದಾಖಲಾಗಿದ್ದಾರೆ ಅವರ ಬೆನ್ನಿಗೆ ನಟಿ ರಾಗಿಣಿ ಕೂಡಾ ಆಸ್ಪತ್ರೆಗೆ ಸೇರಿದ್ದಾರೆ ಎಂಬ ಸುದ್ದಿ ಬಂದಿದೆ. ಇದೊಂದು ಹೊಸ ನಮೂನೆಯ ನಾಟಕವು ಗೊತ್ತಿಲ್ಲ ಒಟ್ಟಾರೆ ಡ್ರಗ್ಸ್ ಮಾಫಿಯಾದಲ್ಲಿ ದೊಡ್ಡ ದೊಡ್ಡ ನಟ -ನಟಿಯರು ಸಿಲುಕಿದ್ದಾರೆ ಎಂಬಂತಿದ್ದ ಸ್ಥಿತಿ ಕೇವಲ ಇಬ್ಬರು ಹೀರೋಯಿನ್ ಗೆ ಮುಕ್ತಾಯ ಕಾಣತ್ತೋ ಗೊತ್ತಿಲ್ಲ . ಪಟ್ಟಭಧ್ರ ಹಿತಾಸಕ್ತಿಗಳು ಮುಚ್ಚಿ ಹಾಕಿದವೋ ಅದಕ್ಕೂ ಉತ್ತರ ಇಲ್ಲ .
ಗುರುವಾರ, ಡಿಸೆಂಬರ್ 17, 2020
ಕೊಡಚಾದ್ರಿಗೆ ಕೊಡಲಿ ?
ದೈವೀ ನಿಷ್ಠ ಪ್ರಕ್ರತಿ ಸೌಂದರ್ಯದ ಪಶ್ಚಿಮ ಘಟ್ಟದ ಕೊಡಚಾದ್ರಿಗೆ ಸದ್ದಿಲ್ಲದೇ ಕೊಡಲಿಯೇಟು ಹಾಕುವ ಹುನ್ನಾರ ರೂಪುಗೊಂಡಿದೆ . ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕೆಯ ಮೂಲ ಸ್ಥಾನ . ಆಧ್ಯಾತ್ಮಿಕ ಕ್ಷೇತ್ರ ಕೊಡಚಾದ್ರಿ ಶಿಖರಕ್ಕೆ ಇತ್ತೀಚಿಗೆ ಘನ ಸರ್ಕಾರ ಪ್ರವಾಸೋದ್ಯಮದ ಅಡಿಯಲ್ಲಿ ರೋಪ್ ವೇ (ಕೇಬಲ್ ಕಾರ್ ) ನಿರ್ಮಿಸುವ ಯೋಜನೆಯನ್ನು ಜಾರಿಗೆ ತಂದಿದ್ದೂ,ತೀವ್ರ ಆಕ್ಷೇಪ ,ಆಕ್ರೋಶಕ್ಕೆ ಗುರಿಯಾಗಿದೆ. ಪೂರ್ಣ ಪ್ರಮಾಣದಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ಕೊಟ್ಟಂತಿರುವ ಸರ್ಕಾರವು ಈ ಅನೀತಿ ಯಿಂದ ಹೊರಬರಬೇಕಾಗಿದೆ ಪ್ರಕ್ರತಿ ಸಂಪತ್ತಿನ ನೈಜ ಸೌಂದರ್ಯದಿಂದ ಕಂಗೊಳಿಸುವ ಕೊಡಚಾದ್ರಿ ಪರ್ವತವನ್ನು ಕೇವಲ ಟ್ರಕ್ಕಿಂಗ್ ಗಾಗಿ ಅವಲಂಬಿಸದೇ ಚಾರಣಿಗರಿಗಿಂತ ಅಧಿಕ ಪ್ರಮಾಣದಲ್ಲಿ ಆಸ್ತಿಕರು ಅಪ್ಪಿಕೊಂಡಿದ್ದಾರೆ,ಒಪ್ಪಿಕೊಂಡಿದ್ದಾರೆ . ಕೊಡಚಾದ್ರಿ ಕರ್ನಾಟಕದ ಎರಡನೇ ಅತೀ ದೊಡ್ಡ ಪರ್ವತವಾಗಿದೆ. ಚಿಕ್ಕ ಮಗಳೂರಿನ ಮುಳ್ಳೆಯನಗಿರಿಯನ್ನು ಹೊರತು ಪಡಿಸಿದರೇ ಕೊಡಚಾದ್ರಿಗೆ ಎರಡನೇ ಸ್ಥಾನ .ಕೊಡಚಾದ್ರಿ ಪ್ರವಾಸಿ ತಾಣವಲ್ಲ ಧಾರ್ಮಿಕ ನೆಲೆಬೀಡು .ಪ್ರವಾಸಿಗರಿಗಿಂತ ಧಾರ್ಮಿಕತೆಯನ್ನು ಮೇಳೈಸಿ ಕೊಂಡು ಬರುವ ಭಕ್ತ ಮಹಾಶಯರ ಸಂಖ್ಯೆಯೇ ಅಧಿಕ. ಕೊಡಚಾದ್ರಿ ಕೊಲ್ಲೂರಿನಿಂದ ೨೧ ಕೀಮಿ ದೂರದಲ್ಲಿದೆ ಸಮುದ್ರ ಮಟ್ಟದಿಂದ ಸುಮಾರು ೧೪೦೦ ಮೀ ಎತ್ತರವನ್ನು ಹೊಂದಿದೆ. ದೇವಿ ಮೂಕಾಂಬಿಕೆಯ ಆದಿ ಕ್ಷೇತ್ರ . ಶ್ರೀ ದೇವಿ ಕ್ರೂರ ರಾಕ್ಷಸ ಮೂಕಾಸುರನನ್ನು ವಧಿಸಿದ ಸ್ಥಳ . ಸೌಪರ್ಣಿಕಾ ನದಿಯ ಉಗಮ ಸ್ಥಾನ. ಆದಿ ಶಂಕರಾಚಾರ್ಯರು ತಪೋಗೈದ ಪುಣ್ಯ ಭೂಮಿ . ಸರ್ವಜ್ಞ ಪೀಠ ,ಗಣೇಶ ಗುಹಾಲಯವನ್ನು ಹೊಂದಿರುವ ದಿವ್ಯ ನೆಲೆ. ಎಲ್ಲಾಕ್ಕಿಂತ ಹೆಚ್ಚಾಗಿ ನಿಸರ್ಗ ಸುಂದರ ಭೂ ಲೋಕದ ಅಪ್ಸರೆ ಈ ಕೊಡಚಾದ್ರಿ !ಉಡುಪಿ ಜಿಲ್ಲೆಗೆ ಪ್ರಥಮ ರೋಪ್ ವೇ ಹಾಗೂ ಪ್ರವಾಸೋದ್ಯಮಕ್ಕೆ ಇಲ್ಲಿಗೆ ಹೆಚ್ಚಿನ ಬಲ ಬಂದರೂ, ಪಶ್ಚಿಮ ಘಟ್ಟದ ಕಣಜ ಕೊಡಚಾದ್ರಿ ಪರಿಸರಕ್ಕೆ ಹಾಗೂ ಶ್ರದ್ಧಾಭಕ್ತಿಯ ಕೇಂದ್ರ ವಾಗಿರುವ ಇಲ್ಲಿಗೆ ಇದು ಪೂರಕವಾಗಿಲ್ಲ . ಇಲ್ಲಿ ರೂಪ್ ವೇ ಪ್ರಾರಂಭ ಮಾಡಿದ್ದೇಯಾದರೇ ಇದು ಪೂರ್ಣ ಪ್ರಮಾಣದಲ್ಲಿ ಪ್ರವಾಸಿ ಕೇಂದ್ರವಾಗಿ ರೂಪು ಗೊಳ್ಳುತ್ತದೆ. ಮೋಜು -ಮಸ್ತಿಗೆ ದಾರಿ ಮಾಡಿಕೊಡುವುದರೊಂದಿಗೆ ಧಾರ್ಮಿಕ ಕ್ಷೇತ್ರವನ್ನು ಹಾಳುಗೆಡುವಂತಾಗುತ್ತದೆ . ಸರ್ಕಾರಕ್ಕೆ ಅಭಿವೃದ್ಧಿಪಡಿಸುವ ಆಲೋಚನೆ ಇದ್ದರೇ, ಕಡಿದಾದ ರಸ್ತೆ ದುರ್ಗಮ ಹಾದಿಯನ್ನು ದುರಸ್ತಿ ಗೊಳಿಸಲಿ ಕೊಲ್ಲೂರು ಕ್ಷೇತ್ರಕ್ಕೆ ಆಗಬಹುದಾದ ಸಾಕಷ್ಟು ಕಾಮಗಾರಿಗೆ ದ್ರಷ್ಟಿ ನೆಟ್ಟಬಹುದು ಅದನ್ನೆಲ್ಲವನ್ನು ಬದಿಗಿರಿಸಿ ,ಈ ರೋಪ್ ವೇ ಯೋಚನೆಗೆ ಮುಂದಾಗಿರುವುದು ನಿಜಕ್ಕೂ ಆಸಮಂಜಸ. ಪ್ರಕೃತಿಗೆ ಮಾರಕವಾಗಿರುವ ಈ ವ್ಯವಸ್ಥೆಯಲ್ಲಿ ಪ್ರಕ್ರತಿ ಮಾತೆಯೇ ಧರೆಗೆ ಇಳಿದಿರುವ ಕೊಡಚಾದ್ರಿಯಲ್ಲಿರುವ ಅರಣ್ಯ ನಾಶವಾಗುತ್ತದೆ., ಪ್ರಾಣಿ- ಪಕ್ಷಿ ಸಂಕುಲ ,ಕಣ್ಮರೆಯಾಗುತ್ತದೆ . ಅಪಾರ ಅಪರೂಪದ ಔಷಧೀಯ ಸಸ್ಯ ಸಂಪತ್ತು ಬರಿದಾಗುತ್ತದೆ . ಆಧ್ಯಾತ್ಮಿಕ ಕ್ಷೇತ್ರಕ್ಕೆ ದಕ್ಕೆ ಉಂಟಾಗುತ್ತದೆ . ಇವೆಲ್ಲವೂ ಒತ್ತಿಟ್ಟಿಗಿರಲಿ ,ಮಡಿಕೇರಿಯ ಘಟನೆಯನ್ನು ಒಮ್ಮೆ ಮನದಲ್ಲಿ ಇಳಿಸಿಕೊಂಡರೆ ಸಾಕು ಇತ್ತೀಚಿಗೆ ನಡೆದ ಅಂತಹ ಅಪಾಯಕಾರಿ ಘಟನೆ ಮರುಕಳಿಸಬಾರದು ಎಂದಾದರೇ ಈ ಯೋಜನೆಯಿಂದ ಹಿಂದೆ ಸರಿಯಬೇಕಾಗಿದೆ . ರಕ್ಷಿತಾರಣ್ಯದಲ್ಲಿರುವ ಪ್ರಾಚೀನ ವೃಕ್ಷಗಳು, ಜೀವ ವೈವಿಧ್ಯತೆ ಉಳಿಸಲು ಈ ಯೋಜನೆ ವಿರುದ್ಧ ಸಾಕಷ್ಟು ಮನಸ್ಸುಗಳು ವಿರೋಧ ವ್ಯಕ್ತ ಪಡಿಸುತ್ತಿದೆ ಸುತ್ತರ್ಯವೂ ಹೌದು. ಬ್ರಹತ್ ಗಾತ್ರದ ಟವರ್ ,ಪಿಲ್ಲರ್ ,ಬೀಮ್ ನಿರ್ಮಿಸಲು ಸಾಕಷ್ಟು ಪ್ರಮಾಣದ ಅರಣ್ಯ ನಾಶ ವಾಗುವುದರ ಜೊತೆಗೆ ಪುಣ್ಯ ದಿವ್ಯ ಕ್ಷೇತ್ರದ ಘನತೆಗೆ ಕುಂದು ಉಂಟಾಗುತ್ತದೆ . ಕೊಡಚಾದ್ರಿಯನ್ನು ಉಳಿಸಬೇಕು ,ಉಳಿಸಿಕೊಳ್ಳಲು ಹೋರಾಡಬೇಕಿದೆ. ಬೇಡಿಕೆಗೆ ಬೆದರದೇ ಸರ್ಕಾರ ಈ ಯೋಜನೆಯನ್ನು ಆರಂಭಿಸಿದ್ದೆಯಾದರೇ ಮೂಕಾಂಬಿಕೆ ಮುನಿಯದೇ ಇರಲಾರಳು ಅನಾಹುತ ನಡೆಯುದಕ್ಕಿಂತ ಮೊದಲು ಈ ಯೋಜನೆ ಯಿಂದ ಹಿಂದೆ ಸರಿಯುವುದೇ ಲೇಸು !
ಸೋಮವಾರ, ನವೆಂಬರ್ 9, 2020
ಕೊಹ್ಲಿ ಕೋ ಹಠಾವ್ ಆರ್ ಸಿ ಬಿ ಕೋ ಬಚಾವೋ !
ಹೀಗೊಂದು ಮಾತು ಸಾಮಾಜಿಕ ಜಾಲತಾಣಗಳಲ್ಲಿ ಬಿಗುಗೊಳ್ಳ್ಳುತ್ತಿದೆ . ಕೊಹ್ಲಿ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದ ಕಹಿ ಸತ್ಯವಾದರೂ, ಕ್ರಿಕೆಟ್ ಪಂಡಿತ ಲೆಕ್ಕಾಚಾರ ಮೇಲಿನ ಮಾತಿಗೆ ಸಹ ಮತ ನೀಡುತ್ತಿದೆ. ಬದಲಾವಣೆ ಜಗದ ನಿಯಮ ಬದಲಾವಣೆ ಅವಶ್ಯಕ ."ಈ ಸಲ ಕಪ್ ನಮ್ದೇ" ಎಂಬ ಆರ್ ಸಿ ಬಿ ಘೋಷ ವಾಕ್ಯ ಅದೆಷ್ಟೋ ವರ್ಷಗಳಿಂದ ಕೇಳಿ ಬರುತ್ತಿದೆ., ವರ್ಷಗಳಿಂದ ವರ್ಷಕ್ಕೂ ಸಹಾ ಅಭಿಮಾನಿಗಳ ಸಂಖ್ಯೆಯೂ ಬಲ ಗೊಳ್ಳುತ್ತಿದೆ . ಕಪ್ ಮಾತ್ರ ಇಂದಿಗೂ ದಕ್ಕಿಲ್ಲ . ಸಿಗುವ ಮಾತು ಕೂಡಾ ದೂರ. ಎಲ್ಲಿಯವರಿಗೆ ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗಿರುತ್ತಾನೋ ಅಲ್ಲಿಯವರಗೆ ಕಪ್ ಕನಸಿನ ಮಾತು ಎಂಬುದು ಕ್ರಿಕೆಟ್ ಪ್ರೇಮಿಗಳ ಉವಾಚ !
ಎಲ್ಲರ ಫೆವರೇಟ್ ತಂಡ ಆರ್ ಸಿ ಬಿ. ಘಟ -ಘಟಾನು ಆಟಗಾರರನ್ನು ಹೊಂದಿರುವ ಬಲಿಷ್ಠ ತಂಡ ಇದು. ಐಪಿಲ್ ಆರಂಭವಾದ ವರ್ಷ 2008ರಿಂದ ಇಂದಿನವರಿಗೆ ಯಾವ ಟೀಂ ಕೂಡಾ ನಿರ್ಮಿಸಿದ ದಾಖಲೆಯನ್ನು ಆರ್ ಸಿ ಬಿ ತನ್ನ ಹೆಸರಿನಲ್ಲಿ ಇರಿಸಿಕೊಂಡಿದೆ. ಆದರೆ ಕಪ್ ಮಾತ್ರ ಕನಸ್ಸಾಗಿಯೇ ಉಳಿದಿದೆ . ಕಳೆದ ಕೆಲವು ವರ್ಷಗಳಿಂದ ಆರ್ ಸಿ ಬಿ ಯಲ್ಲಿ ಕರ್ನಾಟಕದ ಆಟಗಾರರು ಬೆರಳೆಣಿಕೆ ಪ್ರಮಾಣದಲ್ಲಿ ಇದ್ದರೂ, ಕನ್ನಡಿಗರ ಪ್ರೀತಿ ಒಂದಿನಿತೂ ಕಡಿಮೆಯಾಗದೇ ಈ ಸಲವೂ ಕಪ್ ನಮ್ದೇ ಎಂಬ ಘೋಷ ವಾಕ್ಯವನ್ನು ಹೃದಯದಲ್ಲಿ ಅಚ್ಚೋತ್ತಿ ಕೊಂಡಿದ್ದರು .
ಈ ಬಾರಿ ಯಾದರೂ ಖಂಡಿತವಾಗಿಯೂ ಕಪ್ ನಮ್ದೇ ಎಂದು ಭಾವಿಸಿದ್ದರು ಹಲವಾರು ಮಂದಿ. ಪ್ರಥಮ ಪಂದ್ಯದಲ್ಲಿ ಗೆದ್ದು ಬೀಗಿತ್ತು ಎಲ್ಲರ ಮನಃಪಟಲವೂ ಸಹಾ ಸಂತಸದಿಂದ ಭರ್ತಿ ಆಗಿತ್ತು. ಬ್ಯಾಕ್ ಟು ಬ್ಯಾಕ್ ಗೆದ್ದಾಗ ಎಲ್ಲೋ ಈ ಸಲ ಕಪ್ ಮುಡಿಗೇರಿಸಲಿದೆ ಎಂಬಂತ ನೋಟ ಹರಿದಿತ್ತು. ಪಾಯಿಂಟ್ ಟೇಬಲ್ ನಲ್ಲಿ ಎರಡನೇ ಸ್ಥಾನವನ್ನೂ ಅಲಂಕರಿಸಿ ಕೊಂಡಿತ್ತು . ಈ ಸಂಭ್ರಮ ಬಹು ಕಾಲ ಉಳಿಯಲಿಲ್ಲ ಸತತ ನಾಲ್ಕು ಪಂದ್ಯದಲ್ಲಿ ಸೋಲನ್ನು ಒಪ್ಪಿಕೊಂಡಿತ್ತು . ಪ್ಲೇ ಆಪ್ ಪ್ರವೇಶಾತಿ ಕಷ್ಟ ವೆಂಬಂತ ಇದ್ದ ಸ್ಥಿತಿಯಲ್ಲಿ ನೆಟ್ ರನ್ ರೆಟ್ ಆಧಾರದ ಮೇಲೆ ಎಂಟ್ರಿ ಪಡೆದು ಕೊಂಡೇ ಬಿಟ್ಟಿತ್ತು. ಅಂತೂ ನಿರ್ಣಾಯಕ ಎಲಿಮಿಟರ್ ಪಂದ್ಯದಲ್ಲಿ ಸೋತು ಮನೆಯ ದಾರಿ ಹಿಡಿಯಿತು. ಕೋಟ್ಯಂತರ ಅಭಿಮಾನಿಗಳಿಗೆ ನಿರಾಶೆ ಉಂಟು ಮಾಡಿತ್ತು ಎಂದು ಒತ್ತಿ ಹೇಳಬೇಕಾಗಿಲ್ಲ .
ಎಲಿಮೇಟರ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಆರ್ ಸಿ ಬಿ Mr.360 ಡಿಗ್ರಿ ಖ್ಯಾತಿಯ ಎ ಬಿ ಡಿ ವಿಲಿಯರ್ಸ್ ಹಾಗೂ ಬೌಲರ್ ಗಳು ಆಸರೆ ಆಗಿ ಕೊನೆ ಹಂತದಲ್ಲಿ ಒಂದಷ್ಟು ಫೈಟ್ ಬಂದರೂ ಮ್ಯಾಚ್ ಕೈ ತಪ್ಪಿ ಹೋಗಿತ್ತು.
ಸೆಲ್ಫಿಶ್ ಕೊಹ್ಲಿ ಯಾವಾಗಲೂ ಅರ್ಥವಿಲ್ಲದ ವಿಭಿನ್ನ ಆಲೋಚನೆಗಳಿಗೆ ಹೆಸರು ಪಡೆದ ವ್ಯಕ್ತಿ . ಎಲೆಮೇಟರ್ ಮ್ಯಾಚ್ ಕೂಡಾ ಇದಕ್ಕೆ ಹೊರತಾಗಿಲ್ಲ ಒನ್ ಡೌನ್ ,ಸೆಕೆಂಡ್ ಡೌನ್ ಗೆ ಬರುವ ಕೊಹ್ಲಿ ಓಪನಿಂಗ್ ಗೆ ಬಂದು ಬಿಟ್ಟ,ಹೋದ ಪುಟ್ಟ ಬಂದ ಪುಟ್ಟ ಅಂತ ಎರಡಂಕಿಯ ರನ್ ಗಳಿಸದೇ ಪೆವಿಲಿಯನ್ ದಾರಿ ಹಿಡಿದು ಬಿಟ್ಟ. ಆರನ್ ಫಿಂಚ್ ಹಾಗೂ ಮೋಹಿನ್ ಆಲಿ ಒಪೆನರ್ ಆಗಿ ಬಂದಿದ್ದರೇ ಒಂದಷ್ಟು ರನ್ ಕಲೆ ಹಾಕುತ್ತಿದ್ದರು . ಅದು ಆಗಲೇ ಇಲ್ಲ . ಇನ್ನು ಬೌಲರ್ ಗಳಲ್ಲೂ ಬದಲಾವಣೆ .ಸಾಕಷ್ಟು ಪಾರ್ಮ್ನಲ್ಲಿದ್ದು, ವಿಕೆಟ್ ಕಿತ್ತು , ರನ್ ಮಳೆಗೆ ಬ್ರೇಕ್ ಹಾಕಿದ್ದ ಮಹಮ್ಮದ್ ಸಿರಾಜ್ ,ಚಂಪಾ ಹಾಗೂ ಮೋಹಿನ್ ಆಲಿ ಓವರ್ ಗಳನ್ನು ತಡೆ ಹಿಡಿದಿದ್ದು ಸೋಲಿಗೆ ಪ್ರಮುಖ ಕಾರಣವಾಯಿತು .,ಹಲವರ ಕೆಂಗಣ್ಣಿಗೆ ಕೊಹ್ಲಿ ಗುರಿಯಾಗಿದ್ದರು. ಒಂದೆಡೆ ಬಂಡೆಯಂತೆ ನಿಂತಿದ್ದ ಹೋಲ್ಡರ್ ಹಾಗೂ ವಿಲ್ಯಮ್ಸನ್ ಜೋಡಿಯಲ್ಲಿನ ಒಂದು ವಿಕೆಟ್ ಉರುಳಿದ್ದರೆ ಪಂದ್ಯ ಆರ್ ಸಿ ಬಿ ಪಾಲಾಗುತ್ತಿತ್ತು ಅದಾಗದಿರುವದಕ್ಕೆ ಮುಖ್ಯ ಕಾರಣ ಕ್ಯಾಪ್ಟನ್ ಕೊಹ್ಲಿ ! ಇದು ಕೇವಲ ಕೆಲವು ಸ್ಯಾಂಪಲ್ ಉದಾಹರಣೆ ಅಷ್ಟೇ .ಇಂತದ್ದೇ ಈ ಸೀಸನ್ ನಲ್ಲಿ ಬಹಳಷ್ಟು ತಪ್ಪು ನಿರ್ಧಾರಗಳನ್ನು ತೆಗೆದು ಕೊಂಡಿದ್ದರು. ಇದು ಕೊಹ್ಲಿಗೆ ಕ್ಯಾಪ್ಟನ್ ಪಟ್ಟ ಸಿಕ್ಕ ವರ್ಷದಿಂದಲೂ ಅದೇ ಹಾಡು ಅದೇ ರಾಗ.!
ವಿರಾಟ್ ಕೊಹ್ಲಿ ಟಿ-20,ಒನ್ ಡೇ ,ಟೆಸ್ಟ್ ಎಲ್ಲದರಲ್ಲೂ ಅಗ್ರ ಕ್ರಮಾಂಕದ ಆಟಗಾರ ಎಂಬುದನ್ನು ತಳ್ಳಿ ಹಾಕುವಂತಿಲ್ಲ ., ಆದರೆ ಐ ಪಿ ಎಲ್ ನಲ್ಲಿ ಮಾತ್ರ ತೀರಾ ಕಳಪೆ ಪ್ರದರ್ಶನ . ನಾಯಕತ್ವದಲ್ಲಿ ವೈಫಲ್ಯತೆ ಎದ್ದು ಕಾಣುತ್ತದೆ , 2013ರಲ್ಲಿ ಕೊಹ್ಲಿಗೆ ಆರ್ ಸಿ ಬಿ ಯ ಕ್ಯಾಪ್ಟನ್ ಪಟ್ಟ ದೊರಕಿತ್ತು . 2016ರಲ್ಲಿ ಫೈನಲ್ ಪ್ರೇವೇಶಿಸಿ ,ರನ್ನರ್ ಅಪ್ ಆಗಿದ್ದು ಹೊರತು ಪಡಿಸಿದರೆ, ಮತ್ತೆಂದೂ ತಲೆ ಎತ್ತವ ಗೌಜಿಗೆ ಹೋಗಿಲ್ಲ. ಸಿ ಎಸ್ ಕೆ ತಂಡದ ಕ್ಯಾಪ್ಟನ್ ಎಂ ಎಸ್ ದೋನಿ ಮೂರು ಬಾರಿ ಚಾಂಪಿಯನ್ ಆಗಿದ್ದರೇ , ರೋಹಿತ್ ಶರ್ಮ ಸಾರಥ್ಯದ ಮುಂಬಾಯಿ ಇಂಡಿಯನ್ಸ್ ನಾಲ್ಕು ಬಾರಿ ಕಪ್ ಎತ್ತಿದ್ದರು .ಕೊಹ್ಲಿಗೆ ಆ ಯೋಗ್ಯತೆ ಇನ್ನೂ ಬಂದಿಲ್ಲ . ಟೀಂ ಗಟ್ಟಿ ಇದ್ದರೇನು ನಿರ್ವಹಿಸುವ ಕೌಶಲ್ಯ ಮುಖ್ಯ . ಅದಕ್ಕೆ ದಿ ಗ್ರೇಟ್ ಕೊಹ್ಲಿ ಅನರ್ಹ .
ಟೀಮ್ ಇಂಡಿಯಾದಲ್ಲಿ ಕೊಹ್ಲಿ ನಾಯಕನಾಗಿ ಕೆಲವೊಂದು ಪಂದ್ಯ ಜಯಿಸಿದ್ದರೂ, ಅದರ ಫಲಶ್ರುತಿ ದೋನಿ ಎಂಬ ಮಾಂತ್ರಿಕನದ್ದು ಅಷ್ಟೇ ಎನ್ನುತ್ತಾರೆ ಲೆಂಜೆಡ್ ಕ್ರಿಕೆಟರ್ಸುಗಳು . ದೋನಿ ಇಲ್ಲದ ಭವಿಷ್ಯದ ಟೀಂ ಇಂಡಿಯಾ, ಕೊಹ್ಲಿ ನೇತೃತ್ವದಲ್ಲಿ ಮ್ಯಾಚ್ ಹೇಗೆ ದಡ ಸೇರತ್ತೋ ಕಾದು ನೋಡೋಣ ?!
ಭಾನುವಾರ, ಅಕ್ಟೋಬರ್ 18, 2020
ಪವರ್ ಟಿವಿಯನ್ನು ಬಂದ್ ಮಾಡಿಸಿದ್ದು ಯಾರು ?
ಪವರ್ ಟಿವಿಯನ್ನು ಸ್ಥಗಿತ ಗೊಳಿಸಲಾಗಿದೆ. ಸುಮಾರು ಎರಡು ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ರಾಜ್ಯ ಮಟ್ಟದ ಪವರ್ ಟಿವಿ ಮಂಗಳೂರು ಮೂಲದ ರಾಕೇಶ್ ಶೆಟ್ಟಿ ಎಂಬುವವರ ಒಡೆತನವನ್ನು ಹೊಂದಿತ್ತು . ಕಳೆದ ಒಂದಷ್ಟು ದಿನಗಳಿಂದ ಸಿಎಂ ಯಡಿಯೂರಪ್ಪನ ಮಗ ಬಿ.ಎಸ್ ವಿಜೇಯೇಂದ್ರರವರ ಭ್ರಷ್ಟಾಚಾರದ ವಿರುದ್ಧ ಗಂಟೆ ಗಟ್ಟಲೇ ನಿರಂತರ ಕಾರ್ಯಕ್ರಮವನ್ನು ಬಿತ್ತರಿಸುತ್ತಾ ಬಂದಿತ್ತು ಸಂಸತ್ ಅಧಿವೇಶದಲ್ಲಿ ಪ್ರತಿ ಪಕ್ಷಗಳು ಈ ವಿಚಾರವನ್ನು ಎಳೆದು ತಂದವು ಯಡಿಯೂರಪ್ಪನವರು ಸದನದಲ್ಲಿ ನೇರ ಸವಾಲು ಹಾಕಿದ್ದರು "ಭ್ರಷ್ಟಾಚಾರ ಆರೋಪ ಸಾಬೀತು ಆದರೆ ನಾನು ರಾಜೀನಾಮೆ ಕೊಡುತ್ತೇನೆ ಹಾಗೂ ಶಾಶ್ವತ ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ" ಎಂಬ ಮಾತು ಹೊರಹಾಕಿದ್ದರು . ಇತ್ತ ಪವರ್ ಟಿವಿಯೂ ತಮ್ಮೆಲ್ಲಾ ಪವರ್ ನೊಂದಿಗೆ ಕಾರ್ಯಕ್ರಮವನ್ನು ಸತತವಾಗಿ ಪ್ರಸಾರ ಮಾಡುತ್ತಾ ಬರುತ್ತಿತ್ತು . ವಿಜೇಂದ್ರ ಮುಖ್ಯವಾಹಿನಿಗೆ ಬಂದು ಯಾವುದೇ ಪ್ರತಿಕ್ರೀಯೆ ನೀಡಿರಲಿಲ್ಲ . ಟ್ವಿಟ್ಟರ್ ಮೂಲಕ ಒಂದೆರಡು ಪೋಸ್ಟ್ ಮಾಡಿದ್ದರು ."ಸತ್ಯಕ್ಕೆ ದೂರವಾದ ವಿಚಾರವನ್ನು ಪವರ್ ಟಿವಿಯಲ್ಲಿ ಬಿತ್ತರಿಸಲಾಗುತ್ತಿದೆ ನನ್ನ ತೇಜೋವಧೆ ಮಾಡಲಾಗುತ್ತದೆ. ಎಂದು ಮಾನನಷ್ಟ ಮೊಕದ್ದಮೆ ಯಡಿಯಲ್ಲಿ ಕೇಸು ದಾಖಲಿಸಿದ್ದೇನೆ "ಎಂದು ಬರೆದು ಕೊಂಡಿದ್ದರು. ಒಂದೆರಡು ದಿನ ಉರುಳಿಲ್ಲ ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿ ಮನೆ ಮೇಲೆ ಪೊಲೀಸರ ದಾಳಿ ಆಗುತ್ತದೆ.,ಪ್ರಿನ್ಸಿಪಲ್ ಎಡಿಟರ್ ರೆಹಮಾನ್ ಹಾಸನ್ ರವನ್ನು ಪೊಲೀಸರು ವಿಚಾರಣೆಗೆ ಠಾಣೆಗೆ ಕರೆಸಿಕೊಳ್ಳುತ್ತಾರೆ. ಇತ್ತ ಪವರ್ ಟಿವಿ ಕಚೇರಿ ಬಂದ ಪೊಲೀಸರು ಬೇಕಾದಷ್ಟು ಡೀಟೇಲ್ಸ್ ಜಪ್ತಿ ಮಾಡುತ್ತಾರೆ ಎಲ್ಲಾಕ್ಕಿಂತ ಹೆಚ್ಚಾಗಿ ಸರ್ವರ್ ಗೆ ಕೈ ಹಾಕಿ ಅದನ್ನು ಸ್ಥಗಿತ ಗೊಳಿಸುತ್ತಾರೆ . ಅಂದಿನಿಂದ ಇಂದಿನವರಿಗೆ ಪವರ್ ಟಿವಿ ಕ್ಲೋಸ್ ಆಗಿದೆ. ಆಂಕರ್ ಗಳು ತಮ್ಮ fb ಲೈವ್ ನಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ . ಆದಷ್ಟು ಬೇಗ ಮತ್ತೆ ನಾವು ಬರುತ್ತೇವೆ ಎಂದಿದ್ದಾರೆ ಹಾಗೆಯೇ ಸಂಪಾದಕೀಯ ಸಲಹೆಗಾರರಾದ ರವೀಂದ್ರ ರೇಷ್ಮೆಯವರು " ಒಂದೊಳ್ಳೆ ಲಾಯರ್ ನಮ್ಮ ಕೇಸನ್ನು ಎತ್ತಿ ಕೊಂಡಿದ್ದಾರೆ ಬೇಗ ಆನ್ ಏರ್ ನಲ್ಲಿ ಬರುತ್ತೇವೆ "ಎಂದು ಹೇಳಿದ್ದರು . ಎರಡು ವಾರ ಕಳೆದರೂ ಇನ್ನೂ ಪವರ್ ಟಿವಿಯ ಸುದ್ದಿಯೇ ಇಲ್ಲ . ಇದನ್ನೇ ನಂಬಿ ಕೊಂಡಿದ್ದ ೨೫೦ ಕ್ಕೂ ಅಧಿಕ ನೌಕರರ ಕೆಲಸಕ್ಕೆ ಕತ್ತರಿ ಬಿದ್ದಿದೆ . ಪವರ್ ಟಿವಿಯ ಪ್ರಕಾರ ನಮ್ಮ ಚಾನೆಲ್ ನ್ನು ಸರ್ಕಾರ ಸ್ಥಗಿತ ಗೊಳಿಸಿದೆ ಎಂದು ಬಿಜೆಪಿ ಸಾರಥ್ಯದ ಯಡಿಯೂರಪ್ಪರ ವಿರುದ್ಧ ದೂರುತ್ತಿದ್ದಾರೆ. ಇನ್ನೂ ಬಿಜೆಪಿ ಮುಖಂಡರು ಹೇಳುವುದೇ ಬೇರೆ ನಾವು ಯಾವುದೇ ಚಾನೆಲ್ ನ್ನು ಬಂದ್ ಮಾಡಿಸಿಲ್ಲ. ಹಾಗಾದರೆ ಬಂದ್ ಮಾಡಿಸಿದ್ದು ಯಾರು ಎಂಬ ಪ್ರಶ್ನೆಗೆ ಒಂದಷ್ಟು ಉತ್ತರ ಜೀವಂತವಾಗಿ ಮೇಲ್ನೋಟಕ್ಕೆ ಹೊಳೆಯುತ್ತಿದೆ.ಪವರ್ ಟಿವಿ ಆಫ್ ಆಗುವ ಒಂದೆರಡು ದಿನಗಳ ಹಿಂದೆ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ರವರು ಪವರ್ ಟಿವಿಯ ಬಗ್ಗೆ ಕಿಡಿಕಾರಿದ್ದರು . ಒಂದಷ್ಟು ಡಾಕ್ಯುಮೆಂಟ್ಸ್ ನ್ನು ತೋರಿಸಿ "ಇದನ್ನು ಹಿಡಿದು ಡೆಲ್ಲಿಗೆ ತೆರಳುತ್ತೇನೆ ಏನು ಮಾಡುತ್ತೇನೆ ನೋಡಿ ಕೊಳ್ಳಿ" ಎಂದು ಬಹಿರಂಗ ಸವಾಲು ಹಾಕಿದ್ದರು. ಇನ್ನೊಂದೆಡೆ ವಿಜೇಯೇಂದ್ರನ ಭ್ರಷ್ಟಾಚಾರಕ್ಕೆ ಸಂಬಂಧ ಪಟ್ಟಂತೆ ಕoಟ್ರಾಕ್ಟರ್ ಒಬ್ಬರಿಗೆ ಆಮಿಷ ಒಡ್ಡಿ ವಿಜೇಂದ್ರನ ಬಗ್ಗೆ ಸುಳ್ಳು ಹೇಳಬೇಕೆಂದು ಒತ್ತಡ ತಂದಿದ್ದರಂತೆ ಪವರ್ ಟಿವಿ ಎಂಡಿ . ಆ ಕಂಟ್ರಾಕ್ಟರ್ ಪೊಲೀಸರಿಗೆ ಕಂಪ್ಲೇಟ್ ಕೊಟ್ಟು ಎಫ್ ಐ ಆರ್ ರಿಜಿಸ್ಟರ್ ಮಾಡಿಸಿದ್ದರಂತೆ ಇದು ಸಹಾ ಪೊಲೀಸ ದಾಳಿಗೆ ಕಾರಣವಾಗಿರ ಬಹುದೇ ಗೊತ್ತಿಲ್ಲ .ಪವರ್ ಟಿವಿ ಎಂ ಡಿ ರಾಕೇಶ್ ಶೆಟ್ಟಿ ವಿಜೇಯೇಂದ್ರರವರಿಗೆ ಯಾವುದೋ ಬೇಡಿಕೆ ಒಡ್ಡಿದ್ದಾರಂತೆ ಅದು ಸಾಧ್ಯವಾಗದ ಹಿನ್ನಲೆಯಲ್ಲಿ ಕತೆ ಕಟ್ಟಿ ಕಾರ್ಯಕ್ರಮ ಮಾಡಲಾಗುತ್ತದೆ ಎಂದು ವಿಜೇಂದ್ರ ಹೇಳುತ್ತಿದ್ದಾರೆ ಇನ್ನು ಪವರ್ ಟಿವಿಯವರದ್ದು ಇದಕ್ಕೆ ಭಿನ್ನವಾದ ಅಪವಾದ . ಒಟ್ಟಾರೆ ಇದರಲ್ಲಿ ಯಾರದ್ದು ಸತ್ಯ ಯಾರದ್ದು ಮಿಥ್ಯ ಎಂಬುದು ಕಗ್ಗಂಟಾಗಿ ಉಳಿದಿದೆ. ಸೂಕ್ತ ತನಿಖೆಗೆ ಒಳಪಡಿಸಿ ಯಾರು ಅಪರಾಧಿಗಳೆಂದು ಬಯಲಿಗೆ ತರುವ ಬದಲು ಚಾನೆಲ್ ನ್ನು ಬಂದ್ ಮಾಡಿಸುವುದು ಸರಿಯಲ್ಲ . ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಅದನ್ನೇ ನಂಬಿಕೊಂಡ ಅದೆಷ್ಟು ಉದ್ಯೋಗಿಗಳ ಹೊಟ್ಟೆಗೆ ತಣ್ಣೀರು ಬಟ್ಟೆ ಕೊಟ್ಟದ್ದು ಸರಿಯಲ್ಲ . ಸರ್ಕಾರ ಆಲೋಚಿಸಬೇಕು. ಇನ್ನು ಸಾಕಷ್ಟು ಚಾನೆಲ್ ಗಳು ನಮ್ಮಲ್ಲಿ ವಿದೆ ಪತ್ರ ಕರ್ತರ ಸಂಘಟನೆಗಳೂ ,ಜನಪರ ಸಂಘಟನೆಗಳೂ ಸಹಾ ನಮ್ಮಲ್ಲಿ ಕಮ್ಮಿ ಇಲ್ಲ. ಎಲ್ಲರೂ ಸಹಾ ಒಕ್ಕಲೂರಿನಿಂದ ಖಂಡಿಸಬೇಕಿತ್ತು ಆ ಕಾರ್ಯವಾಗಿಲ್ಲ ವಯಕ್ತಿಕ ವಿಚಾರವೇನೇ ಇರಲಿ ಪವರ್ ಟಿವಿ ತಪ್ಪು ಮಾಡಿರಲಿ ಮಾಡದಿರಲಿ ಅವರು ಮಾಡಿದ್ದು ಸರಿ ಎಂದು ವಾದಿಸುವುದಲ್ಲ ಸೂಕ್ತ ನ್ಯಾಯಕ್ಕಾಗಿ ಧ್ವನಿ ಎತ್ತ ಬೇಕಾಗಿತ್ತು. ಕೊನೆಯದಾಗಿ ಒಂದು ಮಾತು ತಪ್ಪು ಯಾರದ್ದೇ ಇರಲಿ ತನಿಖೆ ಯಾಗಬೇಕು ನಿಜ ಬೆಳಕಿಗೆ ಬರಬೇಕು ಅಷ್ಟೇ !
ಬುಧವಾರ, ಅಕ್ಟೋಬರ್ 14, 2020
‘ವಿದ್ಯಾಗಮ’ ಯೋಜನೆಯನ್ನು ಸ್ಥಗಿತ ಗೊಳಿಸುವುದು ಸಮಂಜಸ ಅಲ್ಲ
ವಿದ್ಯಾಗಮ ಯೋಜನೆ ಆರಂಭವಾದ ನಂತರ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಕೋವಿಡ್-19 ಪಾಸಿಟಿವ್
ಮತ್ತು ಸಾವು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಒಡ್ಡಿ ಯೋಜನೆಯನ್ನು ಸ್ಥಗಿತ ಮಾಡಲು ಮಾಧ್ಯಮಗಳ
ಜೊತೆ ಕೆಲವು ವಿರೋಧ ಪಕ್ಷದ ಮುಖಂಡರುಗಳು ಸರ್ಕಾರದ ಮೇಲೆ ಒತ್ತಡ ತಂದೂ ಅಂತೂ ಸ್ಥಗಿತ ಗೊಂಡಿದೆ .
ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂಬುದು ಸರ್ಕಾರದ ಉವಾಚ . ನಿಜಕ್ಕೂ ಸಧ್ಯದ ಪರಿಸ್ಥಿತಿಗೆ ಇದು
ಯೋಗ್ಯವಾಗಿದೆ., ಆದರೆ ಇದನ್ನು ಸಂಪೂರ್ಣವಾಗಿ ಸ್ಥಗಿತ ಗೊಳಿಸಬಾರದು ಒಂದಷ್ಟು ಮಾರ್ಪಾಡುಗಳನ್ನು
ಮಾಡಿ ಪುನಃ ಪ್ರಾರಂಭಿಸಬೇಕು. ಉತ್ತಮ ಯೋಜನೆಗಳಲ್ಲಿ ಒಂದಾದ ಶಾಲಾ ಮಕ್ಕಳಿಗೆ ಸುರಕ್ಷಿತ
ಕ್ರಮಗಳೊಂದಿಗೆ ಕಲಿಕೆಯನ್ನು ಮುಂದುವರೆಸುವ ‘ವಿದ್ಯಾಗಮ’ಯೋಜನೆಯು ಬಡ ,ಮಾಧ್ಯಮ ಹಾಗೂ ಗ್ರಾಮೀಣ
ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಮಕ್ಕಳ ಸುರಕ್ಷತೆಗೆ ಹಾಗೂ ವಿದ್ಯಾರ್ಜನೆಗೆ ಇದು
ಅನುಕೂಲವಾಗಿತ್ತು .
ಏನೀದು ವಿದ್ಯಾಗಮ ಯೋಜನೆ : ತಿರಸ್ಕರಿಸುವ ಮೊದಲು ಯೋಜನೆ ಬಗ್ಗೆ ಅರಿಯಬೇಕಾಗಿದೆ .
ಶಾಲೆಗಳು ಪ್ರಾರಂಭವಾಗುವವರೆಗೂ ವಿದ್ಯಾರ್ಥಿಗಳು ವಿದ್ಯೆ ಕಲಿಕೆಯಿಂದ ದೂರವಾಗ ಬಾರದೆನ್ನುವ
ಕಾರಣಕ್ಕೆ ವಿದ್ಯಾಗಮ ಯೋಜನೆ ಜಾರಿ ಮಾಡಲಾಗಿತ್ತು. ಗ್ರಾಮೀಣ ಪ್ರದೇಶದ, ನಗರ ಪ್ರದೇಶದ ಸರ್ಕಾರಿ
ಮಕ್ಕಳನ್ನ ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಯೋಜನೆಯನ್ನು ಜಾರಿ ಮಾಡಿತ್ತು. ರಾಜ್ಯ ಸರ್ಕಾರವು
ಆಗಸ್ಟ್ 4ರಂದು ಅಧಿಕೃತ ಆದೇಶ ಜಾರಿಗೆ ತಂದಿತ್ತು. ಸುಮಾರು 47 ಲಕ್ಷ ಸರ್ಕಾರಿ ಶಾಲೆ
ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎಂಬುದು ಸರ್ಕಾರದ ಯೋಚನಾ ಯೋಜನೆ ಆಗಿತ್ತು . ಅಂತೆಯೇ
ವಿದ್ಯಾಗಮ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗದಂತೆ
ಮಕ್ಕಳಿರುವ ಜಾಗಕ್ಕೆ ಹೋಗಿ ಶಿಕ್ಷಕರು ಪಾಠ ಮಾಡಬೇಕು. ಒಂದೇ ಊರಿನ ಒಂದೇ ತರಗತಿಯ ವಿದ್ಯಾರ್ಥಿಗಳ
ಗುಂಪು ಮಾಡಿ . ಗ್ರಾಮದ ದೇವಸ್ಥಾನ, ಸಮುದಾಯ ಭವನ, ಖಾಲಿ ಮನೆ ಹೀಗೆ ಪಾಠ ಮಾಡಲು ಸೂಕ್ತವಾದ
ಶುಚಿತ್ವ ಸ್ಥಳದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು ಎಂಬುದಾಗಿತ್ತು . ಶಿಕ್ಷಕರು-ಮಕ್ಕಳ
ನಿರಂತರ ಸಂಪರ್ಕ, ಮಕ್ಕಳಲ್ಲಿ ಮಾರ್ಗದರ್ಶಿತ ಸ್ವಯಂ ಕಲಿಕೆ, ಶಿಕ್ಷಕರ ಮೂಲಕ ಮಕ್ಕಳ ಮನೋಸ್ಥೈರ್ಯದ
ವೃದ್ಧಿ, ಶಾಲೆಯಿಂದ ಮಕ್ಕಳು ಹೊರಗುಳಿಯದಂತೆ ಖಾತ್ರಿ, ಶಿಕ್ಷಕರು, ಶಾಲಾ ಮೇಲುಸ್ತುವಾರಿ ಸಮಿತಿಯ
ಸದಸ್ಯರು, ಆಡಳಿತ ಮಂಡಳಿಯವರು, ಸ್ವಯಂ ಸೇವಕರು, ಪೋಷಕರು ಹಾಗೂ ಸಮುದಾಯದ ಎಲ್ಲಾ ಭಾಗೀದಾರ ಸಕ್ರಿಯ
ತೊಡಗಿಸುವಿಕೆಯಂತಹ ಸದುದ್ದೇಶದ ಕಾರ್ಯಕ್ರಮವೇ ವಿದ್ಯಾಗಮ .
ವಿದ್ಯಾರ್ಥಿಗಳಿಗೆ ಅದೆಷ್ಟು ಉಪಕಾರ : ಉಳ್ಳವರಿಗೆ ಅದೆಷ್ಟೋ ಅವಕಾಶ ಲಭಿಸುತ್ತಿದೆ ಆದರೆ
ಇಲ್ಲದವರ ಪಾಡು ಹೇಳತೀರದು ನಗರ ವಾಸಿಗಳಿಗೆ ಅಂತರ್ಜಾಲ ಶಿಕ್ಷಣ ಲಭಿಸುತ್ತದೆ ಕಂಪ್ಯೂಟರ್ ,ಮೊಬೈಲ್
ಬಳಕೆಗೆ ಆರ್ಥಿಕ ಸ್ಥಿತಿ ಹೊಂದಿಕೆ ಯಾಗುವುದರಿಂದ ಯಾವುದೇ ತೊಂದರೆ ಇರದು . ಇನ್ನೂ ಒಂದಷ್ಟು
ಖರ್ಚು ಮಾಡಿ ಟೂಷನ್ ಕೊಡಲು ತರಬೇತಿದಾರರನ್ನು ಮನೆಗೆ ಕರೆಯಿಸಿ ಕೊಳ್ಳುವ ಪರಿಪಾಠ,ಅವಕಾಶ ಇದೆ .
ಆದರೆ ಗ್ರಾಮೀಣ ಪರಿಸರದಲ್ಲಿನ ವಿದ್ಯಾರ್ಥಿಗಳ ಸ್ಥಿತಿ ಶೋಚನೀಯ. ಅಂತರ್ಜಾಲವಂತೂ ಇಲ್ಲ ಕಂಪ್ಯೂಟರ್
,ಮೊಬೈಲ್ ಇಲ್ಲವೇ ಇಲ್ಲ . ಇನ್ನಿತರ ಸೌಲಭ್ಯ ದೂರದ ಮಾತು . ಒಂದು ಹೊತ್ತಿನ ತುತ್ತಿಗಾಗಿ ಕೂಲಿ
ನಾಲಿ ಮಾಡಿ ಮುಂಜಾನೆ ಮನೆ ಬಿಟ್ಟರೆ ಮುಸ್ಸಂಜೆ ಮನೆ ಸೇರುವ ಪಾಲಕರ ಪೋಷಕರಿಗೆ ಭಯ ಆವರಿಸರುತ್ತೆ
ಮಕ್ಕಳು ಏನು ಮಾಡ್ತಾವೋ ಹೇಗೆ ಇದ್ದವೂ ಎಂಬುದು. ಇರುವಲ್ಲಿ ಇರದ ವಯಸ್ಸಿನ ಸಹಜ ಗುಣಕ್ಕೆ ಕಡಿವಾಣ
ಹಾಕಲು ಮನೆಯಲ್ಲಿ ಯಾರು ಇಲ್ಲ ಇತ್ತ ಶಾಲೆ ಇಲ್ಲಾ. ಈ ಎಲ್ಲ ಆತಂಕ ಪಾಲಕರಲ್ಲಿ ಇದ್ದೇ ಇರುತ್ತವೆ .
ಈ ಯೋಜನೆ ಪ್ರಕಾರ ಒಂದಷ್ಟು ವಿದ್ಯಾರ್ಜನೆ ಜೊತೆಗೆ ಸುರಕ್ಷತೆಯೂ ಕಾಪಾಡುತ್ತವೆ. ವಿದ್ಯಾಗಮ
ಯೋಜನೆಯ ಉದ್ದೇಶವೇ ಹೀಗಿದೆ ಗ್ರಾಮ, ನಗರ, ಪಟ್ಟಣ, ಗುಡ್ಡಗಾಡು, ಹಳ್ಳಿಗಾಡು ಪ್ರದೇಶ, ಬೆಟ್ಟ,
ಅರಣ್ಯದಂಚಿನ ಗ್ರಾಮಗಳ ಮಕ್ಕಳಿಗೆ ಟಿವಿ, ಮೊಬೈಲ್ ಸೌಲಭ್ಯವೂ ಕಷ್ಟ ಮಕ್ಕಳ ಶಿಕ್ಷಣಕ್ಕೆ ಒತ್ತು
ನೀಡುವ ಅದರಲ್ಲೂ, ಗ್ರಾಮೀಣ ಮಕ್ಕಳಿಗೆ ಅತೀ ಮುಖ್ಯವಾದ ಯೋಜನೆ . ಎಲ್ಲೆಡೆ, ಎಲ್ಲರಿಗೂ ಶಿಕ್ಷಣ
ಬೇಕೆಂಬ ನೀತಿಗೆ ಇದು ಉತ್ತಮ ವಾಗಿದೆ . ಕರೋನ ಕಾಲದಲ್ಲಿ 10 ನೇ ತರಗತಿ ಪರೀಕ್ಷೆ ನೆಡೆಸಿ
ದೇಶಕ್ಕೆ ಮಾದರಿಯಾದ ನಮ್ಮ ರಾಜ್ಯಕ್ಕೆ ಇದೊಂದು ಸಾಹಸ ಗಾಥೆಯ ಗರಿಯೂ ಹೌದು. 150ಕ್ಕೂ ಅಧಿಕ
ಶಿಕ್ಷಕರು ಕೋವಿಡ್ ಗೆ ತುತ್ತಾಗಿ ಪ್ರಾಣ ತ್ಯಾಗ ಮಾಡಿದ್ದರೆಂಬ ಮಾಧ್ಯಮ ಸಮೀಕ್ಷೆಯಲ್ಲಿ ಎಷ್ಟು
ಹುರುಳಿದೆಯೋ ಗೊತ್ತಿಲ್ಲ ,ಆದರೆ ಕರೋನ ಕಾಲ ಘಟ್ಟದಲ್ಲಿ ಇಡೀ ಜಗತ್ತೇ ಸಂಕಷ್ಟ ಎದುರಿಸುತ್ತಿದೆ
ಇದೀಗ ಅದೇ ದೈನಂದಿನ ಜೀವನಕ್ಕೆ ಒಗ್ಗಿ ಕೊಳ್ಳಲೇ ಬೇಕಾಗಿದೆ . ಸಿನಿಮಾ ,ಶಾಲೆ ಬಿಟ್ಟರೆ
ಮತ್ತೆಲ್ಲಾ ಸಾಮನ್ಯ ಪರಿಸ್ಥಿತಿಗೆ ಬಂದಿದೆ . ಹಾಗಂತ ಸುರಕ್ಷತೆಯನ್ನು ಮೈ ಗೂಡಿಸದೇ ಇರುವುದು
ಸರಿಯಲ್ಲ ಅವಶ್ಯಕ ಸುರಕ್ಷತೆ ಬೇಕು. ಆ ಸುರಕ್ಷತೆಯನ್ನು ಪಾಲಿಸಿದರೇ ವಿದ್ಯಾಗಮ ಯೋಜನೆ ಸಕ್ಸಸ್
ಕಾಣುವುದರಲ್ಲಿ ಎರಡು ಮಾತಿಲ್ಲ. ಮಕ್ಕಳ ಕಲಿಕೆ ನಿರಂತರ ಆಗಿರುವಂತೆ ನೋಡಿಕೊಳ್ಳುವುದಕ್ಕಾಗಿ
ಎಂ.ಕೆ. ಶ್ರೀಧರ್ ನೇತೃತ್ವದ ಸಮಿತಿ ವರದಿ ಆಧಾರದಲ್ಲಿ ವಿದ್ಯಾಗಮ ಯೋಜನೆ ಅನುಷ್ಠಾನ ಬಂದ
ರಾಜ್ಯಾದ್ಯಂತ ಒಟ್ಟು ಸರಿ ಸುಮಾರು ಐವತ್ತು ಲಕ್ಷಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳು
‘ವಿದ್ಯಾಗಮ’ದ ಪ್ರಯೋಜನವನ್ನು ಪಡೆಯುವಂತಾಗಿದ್ದು ಸಂತೋಷದ ವಿಚಾರ .ಶಿಕ್ಷಕ ವೃತ್ತಿ ಎಂದರೆ ಅದು
ಸಾಮಾಜಿಕ ಸೇವೆಯೂ ಹೌದು , ಜವಾಬ್ದಾರಿಯೂ ಹೌದು. ಸಮರ್ಥವಾಗಿ ಸುರಕ್ಷತೆ ಯೊಂದಿಗೆ ನಿರ್ವಹಿಸಿದರೇ
ಸಾವು -ನೋವುಗಳಿಲ್ಲದೇ ಯೋಜನೆ ಯನ್ನು ಪೂರ್ಣಗೊಳಿಸಿ ವಿದ್ಯಾರ್ಥಿಗಳ ಭವ್ಯ ಭಾವಿಷ್ಯಕ್ಕೇ
ಮುನ್ನುಡಿ ಬರೆಯಬೇಕು ಸುರಕ್ಷತೆ ಹೇಗಿದ್ದರೆ ಚೆನ್ನಾ :ವಿದ್ಯಾಗಮಕ್ಕೆ ತೆರಳುವ
ಶಿಕ್ಷಕರಿಗೆ/ವಿದ್ಯಾರ್ಥಿಗಳಿಗೆ ಆಗಾಗ ಉಚಿತ ಕೊರೊನಾ ತಪಾಸಣೆ ಸೌಲಭ್ಯ ಜೊತೆಗೆ ವೈದ್ಯಕೀಯ
ವ್ಯವಸ್ಥೆ ಜಾರಿಯಾಗಬೇಕು . ಸಮುದಾಯ ಭವನ ಅಥವಾ ವಿದ್ಯಾರ್ಥಿಗಳ ಸಾಮಾಜಿಕ ಅಂತರ ಕಾಪಾಡುವಲ್ಲಿ
ಸೂಕ್ತ ವೇದಿಕೆ,ವಿಶಾಲ ಸ್ಥಳ ಕಲ್ಪಿಸಬೇಕು,ಶುಚಿತ್ವ ಕಡೆ ಗಮನ ವಹಿಸಿ , ಶಿಕ್ಷಕರಿಗೆ, ಪೋಷಕರಿಗೆ
ಧೈರ್ಯ ತುಂಬುವಂತ ಕೆಲಸವಾಗಬೇಕು .ಆಯಾಯ ಗ್ರಾಮದವರು ತುಂಬು ಹೃದಯ ದಿಂದ ಪ್ರೋತ್ಸಾಹಿಸಬೇಕು. ಇಂತಹ
ಸಣ್ಣ ಪುಟ್ಟ ಮಾರ್ಪಾಡು ಅವಶ್ಯಕತೆ ಬಿಟ್ಟರೇ, ಧೈರ್ಯ ಒಂದೇ ಸಾಧನ .
ಬುಧವಾರ, ಅಕ್ಟೋಬರ್ 7, 2020
ಅನುಶ್ರೀಯೂ.. ಡ್ರಗ್ಸೂ..!
ಸ್ಟಾರ್ ನಿರೂಪಕಿ ಅನುಶ್ರೀ ಹೆಸರು ಡ್ರಗ್ಸ್ ಜಾಲದಲ್ಲಿ ತಳಕು ಹಾಕಿ ಕೊಂಡಿದ್ದರ ವಿಚಾರ ಈಗ ಭಯಂಕರ ಸುದ್ದಿಯಾಗಿ ಹರಡಲಾರಂಭಿಸಿದೆ. ಮಾದಕ ಜಾಲಕ್ಕೆ ಸಂಬಂಧ ಪಟ್ಟಂತೆ ಕೊರಿಯೋ ಗ್ರಾಫರ್ ಕಿಶೋರ್ ನನ್ನ ಬಂಧಿಸಲಾಗಿತ್ತು. ಬಂಧನದ ಬಳಿಕ ಕಿಶೋರ್ ಬಯಲು ಪಡಿಸಿದ್ದ .,ನಮ್ಮ ಪಾರ್ಟಿಯಲ್ಲಿ ಅನುಶ್ರೀ ಪಾಲ್ಗೊಳ್ಳುತ್ತಿದ್ದಳು ಹಾಗೂ ಡ್ರಗ್ಸ್ ಸೇವಿಸುತ್ತಿದ್ದಳು ಎಂದು. ,ವಿಷಯ ತಿಳಿದ ಸಿಸಿಬಿ ಪೊಲೀಸರು ಅನುಶ್ರೀ ಗೆ ನೋಟಿಸ್ ನೀಡಿತ್ತು . ಅಂತೆಯೇ ಮಂಗಳೂರಿನ ಸಿಸಿಬಿ ತಂಡ ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಬಿಡುಗಡೆ ಮಾಡಿತ್ತು ನಂತರ ನಡೆದಿದ್ದು ಸುದ್ದಿಯೋ ಸುದ್ದಿ ಸಾಕಷ್ಟು ಮಂದಿ ಅವಳು ಒಳ್ಳೆ ಹುಡುಗಿ ಅವಳು ಡ್ರಗ್ಸ್ ಜಾಲದಲ್ಲಿ ಇಲ್ಲ ಎಂಬ ಧ್ವನಿ ಮೊಳಗಿಸುತ್ತಿದ್ದರೇ, ಇತ್ತಾ ಇದಕ್ಕೆ ವಿರುದ್ಧವಾದ ಅಪವಾದ ಕೇಳಿ ಬರುತ್ತಿವೆ .ಅದೂ ಇದೂ ಎಂದು ರೆಕ್ಕೆ ಪುಕ್ಕ ಕಟ್ಟಿಕೊಂಡು ಸುದ್ದಿ ಹಾರಾಡುತ್ತಿವೆ. ಅನುಶ್ರೀ ಸ್ವಷ್ಟಿಕರಣಕ್ಕಾಗಿ ಮಾಧ್ಯಮಗಳ ಮುಂದೆ ಬಂದಿದ್ದೂ ಆಯ್ತು , fbಯಲ್ಲಿ ಬಂದಿದ್ದೂ ಆಯಿತು. fb ಯಲ್ಲಿ ಲೈವ್ ಬಂದೂ ಅತ್ತು ,ಗೊಗೇರದು ಹೇಳಿದ್ದೂ ಆಯ್ತು "೧೨ ವರ್ಷಗಳ ಹಿಂದೆ ಕಿಶೋರ್ ನಂಗೆ ಡಾನ್ಸ್ ಮಾಷ್ಟ್ರ್ ಆಗಿದ್ದರು ಆಗ ನಾನು ವಿನ್ ಕೂಡಾ ಆಗಿದ್ದೆ ಅದೇ ಈಗ ನನಗೆ ಮುಳುವಾಗಿದೆ ಅದೇ ಸಂಕಷ್ಟ ತಂದು ಕೊಡುತ್ತದೆ ಎಂದು ನಾನು ಎಣಿಸಿರಲಿಲ್ಲ . ನಾನು ಅಮ್ಮ ಮತ್ತು ತಮ್ಮನ ಜೊತೆ ಸುಂದರವಾಗಿ ಜೀವನ ನಡೆಸುತ್ತಿದ್ದೇನೆ ,ಸುಖವಾಗಿ ಕಾಲ ಕಳೆಯುತ್ತಿದ್ದೇನೆ ಯಾವುದೇ ಪಾರ್ಟಿಗೆ ನಾನು ಹೋಗುವುದಿಲ್ಲ . ೧೨ ವರ್ಷದ ಹಿಂದೆ ಪರಿಚಯ ಹಾಗೂ ಕಳೆದ ಕೆಲವು ವರ್ಷಗಳ ಹಿಂದೆ ಆತನ ಡಾನ್ಸ್ ಕ್ಲಾಸ್ ಉದ್ಘಾಟನೆಗೆ ನಾನು ತೆರಳಿದ್ದೆ ಅಷ್ಟೇ. ಈಗ ಏನೂ ಕಾಂಡೆಕ್ಟ್ ಇಲ್ಲ ಎಂದಿದ್ದರು. ಬೆಂಕಿ ಇಲ್ಲದೇ ಹೊಗೆಯಾಡುತ್ತದೆಯೇ ? ಎಂಬ ಪ್ರಶ್ನೆ ಸಾಮಾನ್ಯ ನಾಗರೀಕರಲ್ಲೂ ಅನುಮಾನ ಹುಟ್ಟಿಸುತ್ತಿದೆ ಸುಖಾ -ಸಮ್ಮನೆ ಆತ ಪೋಲೀಸರ ಮುಂದೆ ಅನುಶ್ರೀ ಹೆಸರು ಹೇಳುವುದಕ್ಕೆ ಸಾಧ್ಯವಿಲ್ಲ . ಎಲ್ಲೂ ಇದರಲ್ಲಿ ಅನುಶ್ರೀ ಇರಬಹುದೆಂಬ ಗುಮಾನಿ ಕಂಡು ಬರುತ್ತದೆ ಇದರ ಮಧ್ಯೆ ಸಿಸಿಬಿ ಯಿಂದ ಇನ್ನೊಂದು ಬಾಂಬ್ ಹೊರಬಿತ್ತು . ಮಂಗಳೂರಿನ ಸಿಸಿಬಿ ಕಚೇರಿಗೆ ವಿಚಾರಣೆಗೆ ತೆರಳುವುದಕ್ಕಿಂತ ಮೊದಲು ,ಅನುಶ್ರೀ ತನ್ನ ಮೊಬೈಲ್ ನಿಂದ ಹಲವಾರು ದೊಡ್ಡ -ದೊಡ್ಡ ರಾಜಕಾರಣಿಗಳಿಗೂ ಸೇರಿದಂತೆ ಉದ್ಯಮಿಗಳಲ್ಲಿ ಒತ್ತಡ ಹೇರಿದ್ದರಂತೆ ನನ್ನನ್ನು ಬಂಧಿಸಿದಂತೆ ನೋಡಿಕೊಳ್ಳಿ ಎಂದು ಅಲವತ್ತು ಕೊಂಡಿದ್ದರಂತೆ ಅವರ ಅಪ್ಪಣೆ ಮೇರೆಗೆ ಪೊಲೀಸರು ಕೇವಲ ವಿಚಾರಣೆಯನ್ನು ನೆಡೆಸಿ ಕಳುಹಿಸಿದ್ದರೆಂಬುದು ಸುದ್ದಿ . ಇನ್ನು ಸಿಸಿಬಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅನುಶ್ರೀಯನ್ನು ವಿಚಾರಣೆ ಮಾಡಿದ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ . ಇದೆಲ್ಲವನ್ನೂ ಕಂಡರೇ ಅನುಶ್ರೀ ತಪ್ಪು ಮಾಡಿರಬಹುದೇ ಅನುಮಾನಕ್ಕೆ ಕಾರಣವಾಗಿದೆ. ತಪ್ಪು ಮಾಡಿಲ್ಲವೆಂದ ಮೇಲೆ ವಿಚಾರಣೆಗೆ ಒಳಪಡುವ ಮುನ್ನಾ ದಿನ ರಾಜಕಾರಣಿಗೆ ಕಾಲ್ ಮಾಡಿದ್ದು ಯಾಕೆ ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತದೆ. ಏನೇ ಇರಲಿ ಇದೀಗ ಬಂದ ಇನ್ನೊಂದು ಸುದ್ದಿಯ ಪ್ರಕಾರ ರಾಜ್ಯ ಸರ್ಕಾರವು ಅಧಿಕಾರಿಗಳಿಗೆ ಪ್ರೀ ಹ್ಯಾಂಡ್ ಕೊಟ್ಟಿದ್ದಾರಂತೆ. ಇನ್ನೊಮ್ಮೆ ವಿಚಾರಣೆ ನಡೆಯುತ್ತಾ ? ಅನುಶ್ರೀ ಅರೆಸ್ಟ್ ಆಗ್ತಾರಾ ? ಕಾಲವೇ ಉತ್ತರ ಹೇಳಬೇಕು . ಕಷ್ಟ ದಿಂದ ಮೇಲೆ ಬಂದು ಯಾವುದೇ ಗಾಡ್ ಫಾದರ್ ಇಲ್ಲದೇ ಸೆಲೆಬ್ರಿಟಿ ಆಗಿದ್ದ ಅನುಶ್ರೀ ಕಹಾನಿಗೆ ಅಧಿಕ ಬೆಲೆ ಬರುತ್ತದೆ ಅದಿಲ್ಲವೆಂದರೆ ಇಷ್ಟು ದಿನ ಸಂಪಾದಿಸಿದ ಇಮೇಜ್ ನೀರಲ್ಲಿ ಕೊಚ್ಚಿ ಹೋಗುತ್ತದೆ ಅಷ್ಟೇ !!
ಗುರುವಾರ, ಸೆಪ್ಟೆಂಬರ್ 24, 2020
ಡ್ರಗ್ಸ್ ವಿಚಾರವನ್ನು ಬಹಿರಂಗ ಪಡಿಸಿದ ಇಂದ್ರಜಿತ್, ಸಂಬರಗಿ ಅಭಿನಂದನಾರ್ಹರು !
ಸಿನಿಮಾದಲ್ಲಿ ಕಾಣುತ್ತಿದ್ದ ರೀಲ್ ಕಹಾನಿಯನ್ನು ರಿಯಲ್ ಆಗಿ ಸಿನಿಮಾ ಭಾಂದವರಿಂದಲೇ ನೋಡಬೇಕಾದ ಪರಿಸ್ಥಿತಿ ಈಗ ಬಂದೊದಗಿದೆ .,ವಿಪರ್ಯಾಸದ ಜೊತೆಗೆ ಅಚ್ಚರಿಯನ್ನು ಮೂಡಿಸುತ್ತಿದೆ . ಡ್ರಗ್ಸ್ ಸಪ್ಲೆಯರ್ 'ಅನಿಕಾ' ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ನಂತರ ರಾಜ್ಯದಲ್ಲಿ ಡ್ರಗ್ಸ್ ವಿಚಾರ ಬೆಳಕಿಗೆ ಬರಲು ಪ್ರಾರಂಭವಾಯಿತು . ನಿರ್ದೇಶಕ ನಟ' ಇಂದ್ರಜಿತ್ ಲಂಕೇಶ್' ಹಾಗೂ ಸಾಮಾಜಿಕ ಕಾರ್ಯಕರ್ತ 'ಪ್ರಶಾಂತ್ ಸಂಬರ್ಗಿ' ಮುಖ್ಯವಾಹಿನಿಗೆ ಬಂದು ಈ ವಿಚಾರದ ಬಗ್ಗೆ ಬಹಿರಂಗ ಹೇಳಿಕೆ ಕೊಟ್ಟು ,ನಂತರ ಸಾಕಷ್ಟು ಬೆಳವಣಿಗೆ ಕಂಡು ಬಂತು ,ಬಗೆದಷ್ಟು ಡ್ರಗ್ಸ್ ಜಾಲದ ಅನಾವರಣ ಬಯಲಾಗಲಾರಂಭಿಸಿತು . ಡ್ರಗ್ಸ್ ದಂಧೆ ಎಲ್ಲಾ ಕಡೆಯಲ್ಲೂ ತನ್ನ ಕಬಂಧ ಬಾಹುವನ್ನು ಚಾಚಿದೆ . ಸಾಮಾನ್ಯ ಪಾರ್ಟಿಯಿಂದ ಹಿಡಿದು ಕಾಲೇಜು ಅಂಗಳದವರೆಗೂ ಹರಡಿರುವುದು ಸತ್ಯ ಸಂಗತಿ ! ಸಿನಿಮಾ ಕ್ಷೇತ್ರದಲ್ಲಿ ಬೀಡು ಬಿಟ್ಟರುವುದು ,ಕೆಲವು ನಟ-ನಟಿಯರು ಈ ಮಾಫಿಯಾದಲ್ಲಿ ಮುಳುಗಿರುವುದನ್ನು ಕಂಡರೇ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದೆ. ಮೊದಲೇ ಚಿತ್ರರಂಗ ಶುಕ್ರ ದೆಸೆಯಲ್ಲಿದೆ . ೨೦೨೦ ಈ ಕರಾಳ ವರ್ಷ ಅದೆಷ್ಟು ಕಲಾವಿದರುಗಳನ್ನು ಬಲಿ ಪಡೆದು ತೀರಾ ದುಃಖದಲ್ಲಿರುವ ಗಾಂಧೀನಗರಕ್ಕೆ ಈಗ ನಶೆಯ ವಿಚಾರದಲ್ಲಿ ಸಂಪೂರ್ಣ ಕಮರಿ ಹೋಗಿರುವುದು ಸುಳ್ಳಲ್ಲ! ಮಾದಕ ವಸ್ತುವನ್ನು ಸೇವಿಸುವುದು ಅದರಲ್ಲಿ ಪಾಲ್ಗೊಳ್ಳುವುದು ದೊಡ್ಡ ಅಪರಾಧ . ಅದರಲ್ಲೂ ,ಸಿನಿಮಾ ಎಂಬುದು ಪಬ್ಲಿಕ್ ಗೆ ತೀರಾ ಹತ್ತಿರ ಸಂಬಂಧಪಟ್ಟಿರುವ ಕಲಿಕಾ ಮಾಧ್ಯಮ . ಸಾಮಾನ್ಯರೂ ಸಹಾ ಅದರಲ್ಲಿರುವ ವಿಚಾರವನ್ನು ಅರಿತು ನಡೆಯುವವರು. ಸಿನಿಮಾ ಮಂದಿಯನ್ನು ಮೆಚ್ಚಿಕೊಳ್ಳುತ್ತಾರೆ. ನೆಚ್ಚಿ ಕೊಳ್ಳುತ್ತಾರೆ., ಅವರುಗಳ ಉದ್ದುದ್ದಾ ಡೈಲಾಗ್ ನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ . ಈ ನಿಟ್ಟಿನಲ್ಲಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಸೆಲೆಬ್ರಟಿಗಳು ಈ ಹಾದಿಗೆ ಇಳಿದರೇ ಎಂಥಾ ದುರ್ದೈವ ? ಸೆಲೆಬ್ರಿಟಿಗಳು ಅದೆಷ್ಟು ಜಾಗೂರಕರಾಗಿದ್ದರೂ ,ಗಾಸಿಪ್ ಅವರ ಬಳಿ ಸುತ್ತುತ್ತಾ ಇರುತ್ತದೆ ಈ ತನ್ಮಧ್ಯೆ ಈ ಕರ್ಮ ಕಾಂಡದಲ್ಲಿ ಭಾಗಿಯಾಗಿರುವವರಿಂದ ಉತ್ತಮ ನಟ -ನಟಿಯರು ಸೇರಿದಂತೆ ಸಂಪೂರ್ಣ ಕಲಾವಿದರುಗಳಿಗೆ ,ಸಿನಿಮಾ ಇಂಡಸ್ಟ್ರಿಗೆ ಕೆಟ್ಟ ಹೆಸರು ಜೊತೆಗೆ ಕಟುವಾಗಿ ಟೀಕಿಸುವ ನಡತೆ ಹುಟ್ಟಿಕೊಳ್ಳುತ್ತದೆ .ಇದು ಎಲ್ಲರಿಗೂ ಗೊತ್ತಿದ್ದರೂ ಸಹಾ ಬೆಳಕಿಗೆ ತರುವಲ್ಲಿ ಹಿಂದೇಟು ಹಾಕುತ್ತಿದ್ದಾರೆ . ಧೈರ್ಯ -ಸ್ಥೈರ್ಯ ದಿಂದ ತಮಗೆ ಅರಿತ ವಿಚಾರವನ್ನು ಬಹಿರಂಗ ಪಡಿಸುವಲ್ಲಿ ಶಕ್ತರಾದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತು ಸಮಾಜ ಸೇವಕ ಪ್ರಶಾಂತ್ ಸಂಬರಗಿ ಅಭಿನಂದನಾರ್ಹರು. ಫಲ ಶ್ರುತಿಯಂಬತೆ ಇಬ್ಬರು ನಟಿಯರು ಜೈಲು ಪಾಲಾಗಿದ್ದಾರೆ . ಇನ್ನಷ್ಟು ಜನರ ವಿಚಾರಣೆ ಸಿಸಿಬಿ ಯಿಂದ ನಡೆಯುತ್ತಿದೆ . ಉಪ್ಪು ತಿಂದವರು ನೀರು ಕುಡಿಯಲೇ ಬೇಕು . ಇನ್ನು ಊಟಕ್ಕಿಲ್ಲದ ಉಪ್ಪಿಕಾಯಿ ಯಂತಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಇದನ್ನೆಲ್ಲವನ್ನೂ ಹತೋಟಿಗೆ ತರುವಲ್ಲಿ ಶ್ರಮಿಸಬೇಕು ಅದನ್ನು ಬಿಟ್ಟು ತಮಗೆ ಸಂಬಂದ ವಿಲ್ಲಾ ಎಂದು ಕಣ್ಣಿದ್ದೂ ಕುರುಡರಂತೆ ವರ್ತಿಸುವ ರೀತಿ ಸರಿ ಅಲ್ಲ . ಆರೋಪಿಗಳ ಪರ ನಿಲ್ಲುವವಂತೆ ಭಾಸವಾಗುವ ರೀತಿಯ ನಡವಳಿಕೆ ಮೇಲ್ನೋಟಕ್ಕೆ ಮೊನ್ನೆಯ ದಿನ ಅರಿವಿಗೆ ಬಂದಿತ್ತು . ಪ್ರಶಾಂತ್ ಸಂಬರಗಿ ಆರೋಪಕ್ಕೆ ಅವರ ವಿರುದ್ಧ ತಿರುಗಿ ಬಿದ್ದು," ಅವರಿಗೆ ಸಿನಿಮಾ ವಿಚಾರದ ಬಗ್ಗೆ ಮಾತಾಡುವುದಕ್ಕೆ ಅವರು ಇಂಡಸ್ಟ್ರಿಗೆ ಸಂಬಂಧ ಪಟ್ಟವರಲ್ಲ . ಅದೇನೇ ಇದ್ದರೂ ವಾಣಿಜ್ಯ ಮಂಡಳಿಗೆ ಬಂದು ಕಂಪ್ಲೇಟ್ ಕೊಡೆಬೇಕಿತ್ತು" ಎಂದೆಲ್ಲಾ ಸ್ಟೇಟ್ಮೆಂಟ್ ಕೊಡುವ , ವಾಣಿಜ್ಯ ಮಂಡಳಿಗೆ ಎಲ್ಲವೂ ಅರಿವಿದ್ದು ಆರೋಪಿಗಳಿಗೆ ಸಪೋರ್ಟ್ ಮಾಡುತ್ತಿದೆಯೋ ಎನ್ನುವ ಅನುಮಾನ ಹುಟ್ಟುತ್ತಿದೆ. ಏನೇ ಇರಲಿ ಸೆಲೆಬ್ರಟಿಗಳನ್ನ ಮುಂದಿಟ್ಟು ಸರಾಗವಾಗಿ ಈ ದಂಧೆಯನ್ನು ನೆಡೆಸುವ ಇದರ ಹಿಂದಿನ ಬ್ರಹತ್ ಕುಳಗಳ ಜಾಡು ಹಿಡಿಯಬೇಕು .ಮಾದಕ ವಸ್ತುಗಳನ್ನು ಕಡಿವಾಣ ಹಾಕಲು ಯುವ ಪೀಳಿಗೆಗಳ ಹಿತದ್ರಷ್ಠಿಯಿಂದ ಪಾರದರ್ಶಕವಾಗಿ ತನಿಖೆಗೆ ಎಲ್ಲರೂ ಸಹಕರಿಸ ಬೇಕಾಗಿದೆ . ಪಟ್ಟಭದ್ರ ಹಿತಾಸಕ್ತಿಗಳಿಗೆ ತನಿಖಾಧಿಕಾರಿಗಳು ತಲೆ ಕೆಡಿಸಿ ಕೊಳ್ಳದೇ ಕಾರ್ಯಾನುಮಖವಾಗವ ಸ್ವಾತಂತ್ರ ಶಕ್ತಿಯನ್ನು ಸಂಭಂದ ಪಟ್ಟ ಇಲಾಖೆ ನೀಡ ಬೇಕಾಗಿದೆ. ಇಲಾಖಾಧಿಕಾರಿಗಳ ಮೇಲೆ ಒತ್ತಡ ತರುವಂತ ತನಿಖೆಯ ಹಾದಿ ತಪ್ಪಿಸುವ ಕೆಲಸ ವಾಗಬಾರದು. ಹಾಗಾದರೆ ಮಾತ್ರ ದಂಧೆಯನ್ನು ಮಟ್ಟ ಹಾಕಲು ಸಾಧ್ಯವಾಗ ಬಹುದು . ಆರೋಪ ಕೇಳಿಬಂದಿರುವಂತ ನಟ -ನಟಿಯರು ,ಕಲಾವಿದರುಗಳು , ರಾಜಕಾರಣಿಗಳು, ರಾಜಕಾರಣಿಗಳ ಮಕ್ಕಳು, ಉದ್ಯಮಿಗಳನ್ನ ವಿಚಾರಣೆಗೆ ಒಳಪಡಿಸಿ .,ಕಾನೂನಾತ್ಮಕವಾಗಿ ಸೂಕ್ತ ಶಿಕ್ಷೆಯಾಗಲಿ . ಡ್ರಗ್ಸ್ ಪೆಡ್ಲರ್ ಗಳ ಜೊತೆಗೆ ಗುರುತಿಸಿ ಕೊಂಡವರು ,ನಿರಂತರ ಪಾರ್ಟಿಯಲ್ಲಿ ಬಾಗಿಯಾದವರ ಬಂಧನವಾದರೇ ,ಕದ್ದು ಮುಚ್ಚಿ ನಡೆಯುತ್ತಿರುವ ಈ ವ್ಯವಹಾರ, ವೈವಾಟುದಾರರಿಗೆ ನಡುಕ ಉಂಟಾಗುವುದರಲ್ಲಿ ಸಂದೇಹ ವಿಲ್ಲಾ ಹಾಗೂ ಪೂರ್ಣ ವಿದಾಯ ಕಾಣುವುದರಲ್ಲಿ ಯಾವುದೇ ಅನುಮಾನವಿಲ್ಲಾ !
ಶುಕ್ರವಾರ, ಆಗಸ್ಟ್ 21, 2020
ಕಣ್ತುಂಬಿಸಿ ಕೊಳ್ಳುವಂತಿಲ್ಲ ಈ ಬಾರಿಯ ಚೌತಿ ಹಬ್ಬವನ್ನಾ !
ಗಣೇಶ ಚತುರ್ಥಿ ಹಬ್ಬ ಮತ್ತೆ ಬಂದಿದೆ ..ಚೌತಿ ಹಬ್ಬವೆಂದ ಕೂಡಲೇ ಬಾರಿ ಗೌಜು . ಕುಟುಂಬದವರ ಜೊತೆ
ಊರವರ ಜೊತೆಗೆ ರಂಗು -ರಂಗಾಗಿ ಆಚರಿಸಬಲ್ಲ ಆಕರ್ಷಣೀಯ ಹಬ್ಬಗಳ ಪೈಕಿ ಮೇಲ್ಪಂಕ್ತಿಯಲ್ಲಿ ಕಂಡು
ಬರುತ್ತದೆ ಗೌರಿ -ಗಣೇಶ ಹಬ್ಬ. ಮನೆಯಲ್ಲೇ ಮೂರ್ತಿ ಇಟ್ಟು ಸಾಂಪ್ರದಾಯಿಕ ಪೂಜೆ ಮಾಡಿ ವಿಸರ್ಜನೆ
ಮಾಡುವ ಪದ್ಧತಿ ಒಂದೆಡೆಯಾದರೆ ಇನ್ನು ಸಾರ್ವಜನಿಕ ಗಣೇಶೋತ್ಸವ ಮತ್ತೊಂದು ಕಡೆ ಜಗಮಗಿಸುತ್ತದೆ .
ಮಹಾರಾಷ್ತ್ರ ಸೇರಿದಂತೆ ಅತೀ ಹೆಚ್ಚಾಗಿ ದಕ್ಷಿಣ ಭಾರತದ ಗಲ್ಲಿ -ಗಲ್ಲಿ ಗಳಲ್ಲಿ ಚೌತಿ ಗಣೇಶ ಮನೆ
ಮಾತಾಗುತ್ತಾನೆ . ಅದೆಷ್ಟು ಸಡಗರ ಅದೆಂತಾ ಅದ್ದೂರಿತನ ಎಂದು ವರ್ಣಿಸುವುದಕ್ಕೆ ಪದಗಳೇ ಸಿಗದು.
ಅಷ್ಟೊಂದು ಆಡಂಬರ ಮೇಳೈಸುತ್ತದೆ .ಊರು ಬಿಟ್ಟು ಪರ ಊರ ಸೇರಿದವರು ಉದ್ಯೋಗಸ್ತರು ,ಶಿಕ್ಷಣ
ಪಡೆಯುತ್ತಿರುವವರು ಈ ಹಬ್ಬಕ್ಕಾಗಿ ತಮ್ಮೂರಿಗೆ ಬಾರದೇ ಇರಲಾರರು. ಇಷ್ಟೊಂದು ಆಕರ್ಷಣೆ ಈ ಗೌರಿ
ಗಣೇಶ ಹಬ್ಬಕ್ಕೆ ಇದೆ. ಕರೋನ ಈ ಬಾರಿ ಮಾತ್ರ ಕಂಟಕ ತಂದು ಬಿಟ್ಟಿದೆ. ಹಾಗಂತ ಈ ಚೈನಾ ವೈರಸ್
ಪ್ರತಿಯೊಂದು ಹಬ್ಬ ಹರಿದಿನ ಶುಭ ಕಾರ್ಯಕ್ಕೆ ಕಡಿವಾಣ ತಂದಿದ್ದು ನಿಜವೇ ಯಾದರೂ, ಗಣೇಶನ
ಹಬ್ಬದವರೆಗಾದರೂ ಓಡಿ ಹೋಗಬಹುದುದೆಂಬಂತಿದ್ದ ನಿರೀಕ್ಷೆ ಹುಸಿಯಾಗಿದೆ.
ಒಂದು ದಿನದಿಂದ ಹಿಡಿದು ಮೂರು ದಿನ, ಹದಿನೈದು ದಿನ ,ತಿಂಗಳು ಗಟ್ಟಲೇವರೆಗೂ ತಾತ್ಕಾಲಿಕ ಪೆಂಡಾಲ್
ಗಳಲ್ಲಿ ಗಣೇಶನ ವಿಗ್ರಹವನ್ನು ವಿಟ್ಟು ಹಗಲು- ಇರುಳು ಎನ್ನದೇ ಧಾರ್ಮಿಕ ,ಸಾಂಸ್ಕ್ರತಿಕ
ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಮನೆಯಲ್ಲೂ ಅಷ್ಟೇ ಸಂಭ್ರಮದ ವಾತಾವರಣ ಸ್ರಷ್ಟಿಯಾಗುತ್ತದೆ.
ಸಾರ್ವಜನಿಕ ಗಣೇಶೋತ್ಸವದಲ್ಲಿ ಮುಸ್ಸಂಜೆ ಯಿಂದ ಮಧ್ಯರಾತ್ರಿವರೆಗೆ ಕೆಲವೆಡೆ ಮುಂಜಾನೆ ತನಕವೂ
ನಾಟಕ ,ನ್ರತ್ಯ, ರಸಮಂಜರಿ ಕಾರ್ಯಕ್ರಮಗಳು ಮನರಂಜಿಸುತ್ತದೆ . ಒಂದೊಂದು ಊರಿನಲ್ಲಿ ಕಡಿಮೆಯೆಂದರೂ
೨-೩ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತದೆ ಊರಿಗೆ ಊರೇ ಹಬ್ಬದ ಸಂಭ್ರಮ ಸಡಗರದಲ್ಲಿ ತೇಲಿ
ಹೋಗುತ್ತದೆ.ಮದುವಣ ಗಿತ್ತಿಯಂತೆ ಊರು ಶ್ರ೦ಗಾರ ಗೊಳ್ಳುತ್ತದೆ .ಬಗೆ ಬಗೆಯ ಗಣೇಶನ ವಿಗ್ರಹ :ಚೌತಿಯ
ಗಣೇಶ ಆಸ್ತಿಕ ಮತ್ತು ನಾಸ್ತಿಕನಾಗಿ ಕಂಗೊಳಿಸುತ್ತಾನೆ. ಧಾರ್ಮಿಕ ಶ್ರದ್ಧೆಯ ಜೊತೆಗೆ
ಮೋನೋರಂಜನಾತ್ಮಕವಾಗಿಯೂ ಸೆಳೆಯುತ್ತಾನೆ ಚೌತಿಯ ಹಬ್ಬದಂದು ಪುಟಾಣಿ ಗಣೇಶ ನಿಂದ ಹಿಡಿದು ಆಳೆತ್ತರದ
ಗಣೇಶ ಕಾಣಸಿಗುತ್ತಾನೆ . ಇನ್ನು ಮುಂಬಾಯಿಯಂತ ಮಹಾನಗರದಲ್ಲಿ ಕಟ್ಟಡ ಗಾತ್ರದ ಗಣೇಶ ವಿಗ್ರಹ
ವನ್ನಿಟ್ಟು ಪೂಜಿಸಲಾಗುತ್ತದೆ . ಇನ್ನೊಂದು ವಿಶೇಷವೆಂದರೆ ಆಯಾಯ ಟ್ರೆಂಡ್ ಗೆ ಅನುಗುಣವಾಗಿ ವೈರಲ್
ವ್ಯಕ್ತಿಯನ್ನು ಹೋಲುವಂತ ಗಣೇಶನ ವಿಗ್ರಹವನ್ನು ರಚಿಸುತ್ತಾರೆ ವಿಗ್ರಹ ರಚನಾಕಾರರು . ಉದಾಹರಣೆಗೆ
ನರೇಂದ್ರ ಮೋದಿ ,ಕ್ರಿಕೆಟ್ ರುಗಳು, ಸೆಲೆಬ್ರಿಟಿಗಳ ಒಳಗೊಂಡ೦ತೆ ಚಿತ್ರ- ವಿಚಿತ್ರವಾಗಿ ಗಣೇಶನ
ರೂಪ, ಆಕಾರ ,ಸ್ರಷ್ಟಿಯಾಗುತ್ತದೆ. ಇದಕ್ಕೆ ಅಷ್ಟೇ ಬೇಡಿಕೆಯೂ ಇದೆ ಬೇಡಿಕೆದಾರರ ಅಭಿರುಚಿ ಬಯಕೆ
ಮೇರೆಗೆ ರಚಿತ ಗೊಳ್ಳುತ್ತದೆ ಎನ್ನುವ ಅಭಿಪ್ರಾಯ ರಚನಕಾರರ ವಲಯದ್ದು . ಒಟ್ಟಾರೆ ಇಲ್ಲಿ ಗಣೇಶ ಭಾವ
- ಭಕ್ತಿಗೆ ಮಾತ್ರವಲ್ಲದೇ ಮನೋರಂಜನಾ ವಸ್ತು ಕೂಡಾ ಆಗುವುದು ಸುಳ್ಳಲ್ಲ . ಇದಕ್ಕೆ ಹಲವರ
ಆಕ್ಷೇಪಗಳಿದ್ದರೂ,ಇದುವರೆಗೂ ರಚನೆಯಲ್ಲಿ ಒಂದಿನಿತು ಬದಲಾವಣೆ ಕಂಡಿಲ್ಲ.
ಮೆರವಣಿಗೆ :ಇನ್ನೊಂದು ಆಕರ್ಷಣೆ ಎಂದರೆ ಅದು ವಿಸರ್ಜನಾ ಮೆರವಣಿಗೆ . ಅದ್ಭುತ ಶೋಭಾಯಾತ್ರೆಯಲ್ಲಿ ಕಿ.ಮೀ. ಗೂ
ಅಧಿಕ ದೊರದವರೆಗೆ ಜನಸಂಧಣಿ . ನಾಸಿಕ್ ಬ್ಯಾಂಡ್ ,ಚಂಡೆ ,ಟ್ಯಾಬ್ಲೋ ,ಪಟಾಕಿ ಪ್ರತಾಪ ಸೇರಿದಂತೆ
ಇನ್ನಿತರ ಬಗೆ- ಬಗೆಯ ವೇಷ ಧಾರಿಗಳು ಮನಸೆಳೆಯುತ್ತಾರೆ. ಎಲ್ಲಾಕ್ಕಿಂತ ಹೆಚ್ಚಾಗಿ ಮೆರವಣಿಗೆಯಲ್ಲಿ
ಸಾಗುವ ಪ್ರತಿಯೊಬ್ಬರ ಹೆಜ್ಜೆ ಬದಲಾವಣೆ ಗೊಳ್ಳುತ್ತದೆ. ತಮಗೆ ಅರಿವಿಲ್ಲದಂತೆ ಕಾಲು ಕುಣಿತಕ್ಕೆ
ಒಗ್ಗಿ ಕೊಳ್ಳುತ್ತದೆ. ಇಂಥ ಕ್ಷಣಕ್ಕಾಗಿ ಜಾತಕಪಕ್ಷಿ ಯಂತಿರುವ ನಶೆ ಏರಿಸಿ ನಾಚುವ ವರ್ಗವನ್ನು
,ಡಿಜೆ ಸೌಂಡ್ ,ಕ್ಯಾಬರೇ ಸಾಂಗ್ ನಮಗೆ ಹಾಗೂ ವೀಕ್ಷಕರಿಗೆ ಖುಷಿ ಎಂಟರ್ಟೈನ್ಮೆಂಟ್ ಸಿಕ್ಕರೇ ಇತ್ತ
ಗಣೇಶ ಮರುಗದೇ ಇರಲಾರನು .!! ವಿಸರ್ಜನೆ :ಕೊನೆಯ ವಿಚಾರಕ್ಕೆ ಬಂದರೆ ,ಗಣೇಶನ ಉತ್ಸವ ವಿಗ್ರಹವಾದ
ಮಣ್ಣಿನ ಮೂರ್ತಿಯನ್ನು ವಿಸರ್ಜನೆ ಮಾಡಲೇ ಬೇಕಾಗುತ್ತದೆ ಬಾವಿ, ಕೆರೆ, ನದಿಯಲ್ಲಿ ವಿಧಿ
ವಿಧಾನಗಳಂತೆ ಪೂಜಾ ಕೈಂಕರ್ಯ ನಂತರ ವಿಸರ್ಜನೆ ಮಾಡುವುದು ರೂಢಿ. ಗ್ರಾಮೀಣ ಪ್ರದೇಶಗಳಲ್ಲಿ ಬಾವಿ
,ಕೆರೆ, ನದಿಗಳಿಗೆ ಬರಗಾಲವಿಲ್ಲ ಆದರೆ ಪಟ್ಟಣ ಪ್ರದೇಶಗಳಲ್ಲಿ ಗಣೇಶನನ್ನು ನೀರಿನಲ್ಲಿ
ತೇಲಿಸುವುದು ಕಷ್ಟದ ಕೆಲಸ . ಅಲ್ಲಿ -ಇಲ್ಲಿ ,ಆಚೆ -ಈಚೆ ಹೊತ್ತಲ್ಲದ ಹೊತ್ತಿನ ಗತ್ತಿನಲ್ಲಿ
ತಿರುಗಿಸಿ , ಗಣೇಶ ಅರ್ಧ ಜೀವ ಕೆಳೆದು ಕೊಂಡು ಕೊನೆಗೆ ನೀರಿನಲ್ಲಿ ಮುಳುಗುತ್ತಾನೆ . ಚೌತಿ
ರೂವಾರಿ ಊರಾದ ಮುಂಬೈಗೆ ಮಾತ್ರ ಸಮುದ್ರ ಸಾಕಾಗುವುದಿಲ್ಲ ಆಳೆತ್ತರದ ಗಣೇಶ ಮೂರ್ತಿ ವಿಸರ್ಜನೆ
ಗೊಂಡರೂ, ಮರುದಿನ ಪತ್ರಿಕೆಯಲ್ಲಿ ಗಣೇಶನ ಮೂರ್ತಿಯ ಚಿತ್ರಗಳನ್ನೂ ಕಂಡರೆ ಮನಸ್ಸು ಮರುಗುತ್ತದೆ
ಅರ್ಧಕರ್ಧ ತುಂಡರಿಸಿದ ಮೂರ್ತಿಗಳು ಸಮುದ್ರ ದಡದಲ್ಲಿ ಕಾಣ ಸಿಗುತ್ತದೆ. ಸಾಕಷ್ಟು ದಿನಗಳ ತನಕ
ಕಾಪಾಡಲು ಮೂರ್ತಿ ರಚನೆಯಲ್ಲಿ ಜೇಡಿ ಮಣ್ಣಿನ ಜೊತೆ ಒಂದಷ್ಟು ರಾಸಾಯನಿಕ ವಸ್ತು ಹಾಗೂ ಪೈಂಟ್ ಗಳ
ಬೆರೆಕೆಯಲ್ಲಿ ರೂಪುಗೊಳಿಸುವುದರಿಂದ ನೀರಿನಲ್ಲಿ ಕರಗುವುದು ತುಸು ಕಷ್ಟಕರವಾದರೇ , ಇನ್ನೊಂದೆಡೆ
ನೀರು ಕಲುಷಿತ ಗೊಳುತ್ತದೆ., ಮಾಲಿನ್ಯ ಭರಿತ ನೀರಿನಲ್ಲಿ ಸಮುದ್ರ ಸಸ್ತನಿ ಗಳಿಗೆ ಮಾರಕವಾಗುವುದರ
ಜೊತೆಗೆ ಅದನ್ನು ಸೇವಿಸುವ ಮನುಷ್ಯನಿಗೂ ಇಲ್ಲ ಸಲ್ಲದ ಖಾಯಿಲೆಗಳು ತಗುಲುವುದರಲ್ಲಿ ಎರಡು
ಮಾತಿಲ್ಲ. ಚೌತಿ ಗಣೇಶ ಇದೆನ್ನೆಲ್ಲಾವನ್ನೂ ಅರಗಿಸಿ ಕೊಳ್ಳಲಾರನಾದರೂ ,ಅನುಭವಿಸಲೇ ಬೇಕು
ವರ್ಷಕ್ಕೆ ಒಂದು ಬಾರಿ . ! ಈ ವರ್ಷ ಗಣೇಶನ ನೆಮ್ಮದಿಗೆ ಯಾವುದೇ ಭಂಗ ವಿಲ್ಲಾ .! ಡಿಜೆ ಸೌಂಡ್
ಇಲ್ಲ ,ಕ್ಯಾಬರೆ ನರ್ತನ ಇಲ್ಲ ದೇಹ ಛಿದ್ರ ಗೊಳ್ಳುವ ನೋಟವಿಲ್ಲ . ಎಲ್ಲಕ್ಕೂ ಕರೋನ ಕಡಿವಾಣ
ಹಾಕಿದೆ . ಕಾದು ಕುಳಿತು ಎಂಜಾಯ್ ಮಾಡುವ ನಮ್ಮಂತ ಮನಸ್ಸುಗಳಿಗೆ ಮಾತ್ರ ಬೇಸರ ತಂದಿದೆ.
ಕರೋನಕ್ಕಿಷ್ಟು ಹಿಡಿ ಶಾಪ ಹಾಕಿ ಮನೆಯಲ್ಲೇ ಕಾಲ ಕೆಳೆಯಬೇಕಾಗಿದೆ .
ಬುಧವಾರ, ಆಗಸ್ಟ್ 19, 2020
ಇವರುಗಳಿಗೆ ಯಾಕೆ ತಾರತಮ್ಯ ?
ಕರೋನ ದಿಂದ ಇಡೀ ಪ್ರಪಂಚ ಕಂಗೆಟ್ಟುಹೋಗಿರುವುದು ನಿಜ.,ಅದರಲ್ಲೂ ಜಗತ್ತಿನ ಎರಡನೇ ಅತೀ ದೊಡ್ಡ ಜನ ಸಂಖ್ಯೆಯನ್ನು ಹೊಂದಿರುವ ಆರ್ಥಿಕತೆಯಲ್ಲಿ ಅಷ್ಟೊಂದು ಸಧೃಢ ವಾಗಿರದ ಭಾರತಕ್ಕೆ ಸವಾಲೇ ಸರಿ. ತನ್ಮಧ್ಯೆ ಕೆಲವೊಂದು ರಾಜ್ಯಗಳು ಸರ್ಕಾರದ ವತಿಯಿಂದ ಒಂದಷ್ಟು ಯೋಜನೆಗಳನ್ನು ದಯಪಾಲಿಸಿವೆ. ಇದಕ್ಕೆ ನಮ್ಮ ಕರ್ನಾಟಕ ರಾಜ್ಯವು ಹೊರತಾಗಿಲ್ಲ.ನಿರ್ಗತಿಕರಿಗೆ,ವ್ಯಾಪಾರಿಗಳಿಗೆ,ಕಲಾವಿದರು ,ಹೋಟೆಲ್ ಕಾರ್ಮಿಕರು ಇನ್ನಿತರ ದಿನ ಕೂಲಿ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ಇದೆಲ್ಲಾ ಅರಿತ ಸರ್ಕಾರವು ಒಂದಷ್ಟು ಯೋಜನಾ ನೀತಿಯನ್ವಯ ಆಟೋ ,ಟಾಕ್ಸಿ ಚಾಲಕರಿಗೆ, ಅಗಸಿಗರಿಗೆ, ಕ್ಷೌರಿಕರಿಗೆ ಸಹಾಯಧನವನ್ನು ಕಲ್ಪಿಸಲಾಗಿದೆ . ಒಳ್ಳೆಯ ಬೆಳವಣಿಗೆ ಕೂಡಾ .,ಆದರೆ ಆದ್ಯಾಕೋ ತಾರತಮ್ಯವಾದಂತ ವಿಚಾರ ಮೂಡುತ್ತದೆ. ದಿನದ ಒಂದು ಹೊತ್ತಿನ ತುತ್ತಿಗಾಗಿ ಕೂಲಿ ಮಾಡುವವರ ಪೈಕಿ ಯಕ್ಷಗಾನ ಕಲಾವಿದರುಗಳು ಹೋಟೆಲ್ ನೌಕರುಗಳೂ ಸೇರಿದ್ದಾರೆ ಇವರುಗಳು ಆ ಯೋಜನೆಯಲ್ಲಿ ಸ್ಥಾನ ಪಡೆಯದಿರುವುದು ವಿಪರ್ಯಾಸ .ಕೆಲವೊಂದು ಯಕ್ಷಗಾನ ಮೇಳಗಳು ದೇವಸ್ಥಾನದ ವತಿಯಿಂದ ಅದರಲ್ಲೂ ,ಧಾರ್ಮಿಕ ದತ್ತಿ ಇಲಾಖೆಯಡಿಯಲ್ಲಿ ಕಾರ್ಯಾಚರಿಸುವುದರಿಂದ ಅದಕ್ಕೆ ಒಳಪಡುವ ಯಕ್ಷಗಾನ ಮೇಳಗಳಿಂದ ಕಲಾವಿದರುಗಳಿಗೆ ಕಿಂಚಿತ್ ಸಹಾಯಕವಾಗುತ್ತದೆ.ಧಾರ್ಮಿಕ ದತ್ತಿಯಿಂದ ಹೊರತಾಗಿರುವ ಯಕ್ಷಗಾನ ಮೇಳಕ್ಕೆ ಇದು ಲಭ್ಯತೆ ಇಲ್ಲ. ಡೇರೆ ಮೇಳಗಳು ಸೇರಿದಂತೆ ಕೆಲವು ಮೇಳಗಳು ದೇವಳದ ವತಿಯಿಂದ ನಡೆಯಲ್ಪಡುವ ಯಕ್ಷಗಾನ ಕಲಾವಿದರುಗಳಿಗೆ ಅನುಕೂಲವಾಗುವಂತೆ ಸರ್ಕಾರ ಯೋಚಿಸುವುದರ ಜೊತೆಗೆ ಹೋಟೆಲ್ ಕಾರ್ಮಿಕರ ಬಗ್ಗೆನೂ ಗಮನ ಹರಿಸಬೇಕಾಗಿದೆ .ಲಾಕ್ ದೌನ್ ಪರಿಣಾಮ ಅದೆಷ್ಟೋ ಹೋಟೆಲ್ ಗಳು ಮುಚ್ಚಿವೆ .ಹೋಟೆಲ್ ಕಟ್ಟಡಗಳ ಬಾಡಿಗೆ ಕಟ್ಟಲು ಸಹಾಯಕರಾದ ಸಾಕಷ್ಟು ಮಾಲೀಕರು ಹೋಟೆಲ್ ಗಳನ್ನೂ ಮಾರಾಟ ಮಾಡಿದ್ದಾರೆ. ಅದರಲ್ಲೂ ಅದನ್ನೇ ನಂಬಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದ ಕಾರ್ಮಿಕರಿಗೆ ಉದ್ಯೋಗ ವಿಲ್ಲದಂತಾಗಿದೆ ಇನ್ನು ಅನ್ಲಾಕ್ ಆಗಿ ಹೋಟೆಲ್ ತೆರೆದರೂ, ವ್ಯಾಪಾರಿಗಳಿಲ್ಲದೇ ಬಿಕೋ ಎನ್ನುತ್ತಿದೆ . ತರುವಾಯ ಹೋಟೆಲ್ ನಲ್ಲಿ ದುಡಿಯುವವ ಕಾರ್ಮಿಕರ ಸಂಖ್ಯೆನ್ನು ಕೂಡಾ ತಗ್ಗಿಸಲಾಗಿದೆ . ಇನ್ನೊಂದೆಡೆ ಪಾರ್ಸೆಲ್ ಕೊಡುವ ಪದ್ದತಿ ಜಾರಿಯಾದ್ದರಿಂದ ಕಾರ್ಮಿಕರು ಉದ್ಯೋಗಕ್ಕೆ ಕತ್ತರಿ ಬಿದ್ದಿದೆ. ತಾವು ಮಾಡಿಟ್ಟ ಸಾಲ ಕಟ್ಟಲಾಗದೇ,ಮಾಸಿಕ ಬಾಡಿಗೆ ಪಾವತಿಸಲಾಗದೇ ,ಹೋಟೆಲ್ ವ್ಯವಹಾರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶ ಕಾಣದೇ ಹೋಟೆಲ್ ಮಾಲೀಕರಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ . ದಿನೇ -ದಿನೇ ಈ ಸಂಖ್ಯೆ ಏರುಗತಿಯತ್ತ ಸಾಗುತ್ತಿದೆ.ಈ ಎಲ್ಲಾ ಸಮಸ್ಯೆಯನ್ನು ಹೋಗಲಾಡಿಸಲು ಸರ್ಕಾರಕ್ಕೆ ತುಸು ಕಷ್ಟವೇ ಆದರೂ ಪರಿಹಾರ ಅಥವಾ ಪರ್ಯಾಯ ಮಾರ್ಗಗಳ ಮೂಲಕ ಇಂತವರಿಗೆ ಸಹಾಯವಾಗಬೇಕಿದೆ .ಇಂತಹ ಯೋಜನೆಗಳ ಮೂಲಕ ಬೇಧ -ಭಾವ ಮಾಡದೇ ಇದ್ದರೇ ಕಿಂಚಿತ್ ಉಪಕಾರವಾಗಬಲ್ಲದು.
ಭಾನುವಾರ, ಆಗಸ್ಟ್ 2, 2020
ಇದರ ಹಿಂದೆ ಇರುವವರ ಕೈವಾಡ ಯಾರದ್ದು ?
ಕರೋನಾ ಕರ್ನಾಟಕಕ್ಕೆ ಕಾಲಿಟ್ಟ ಘಳಿಗೆ ಯಿಂದ ಆಯುರ್ವೇದ ಪಂಡಿತ ಡಾl ಗಿರಿಧರ್ ಕಜೆಯವರು ನನ್ನಲ್ಲಿ ಔಷಧ ವಿದೆ , ನಾನು ಇದನ್ನು ಸಂಪೂರ್ಣವಾಗಿ ಗುಣಪಡಿಸುತ್ತೇನೆ ಎಂದು ಬಹಿರಂಗವಾಗಿ ಸವಾಲ್ ಹಾಕಿದ್ದರು ಅಂತೆಯೇ ಸರಕಾರಕ್ಕೆ ಮನವಿಯನ್ನೂ ಸಲ್ಲಿಸಿದ್ದರು ಆದರೇನು ಮಾಡೋಣ ಹೇಳಿ ದಪ್ಪ ಕಿವಿಯ ಸರ್ಕಾರಕ್ಕೆ ಇದೆನ್ನೆಲ್ಲಾ ಕೇಳುವ ವ್ಯವಧಾನ ವಿರಲಿಲ್ಲ ಯಾವುದರಲ್ಲಿ ಎಷ್ಟು ಪೀಕಬೇಕೋ ಎಂಬ ಆಲೋಚನಾ ಲೋಕದಲ್ಲಿರುವವರಿಗೆ ಇದು ಅರ್ಥವಾಗುವುದಿಲ್ಲ. ಅನುಮತಿಗೆ ಒಂದಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ ,ಸಮಯಕ್ಕೆ ಬೆಲೆ ಇಲ್ಲದಾಗ ಮಾತ್ರ ಅನುಮಾನ ಹೊಗೆಯಾಡುತ್ತವೆ . ದುಡ್ಡು ಮಾಡುವ ಆಸೆಯನ್ನು ಎಳ್ಳಷ್ಟೂ ಹೊಂದಿರದ ಅಪ್ರತಿಮ ,ಪ್ರಾಮಾಣಿಕ ವ್ಯಕ್ತಿ ಡಾ l ಕಜೆಯವರು ಅವರ ವ್ಯಕ್ತಿತ್ವವೇ ಅಂತದ್ದು ಎನ್ನುವುದಕ್ಕೆ ಇಲ್ಲಿರುವ ಕೆಲವು ಉದಾಹರಣೆಯನ್ನು ಗಮನಿಸಬಹುದು . ಕೋಟಿಗಟ್ಟಲೇ ಸುರಿದರೂ ವಾಸಿಯಾಗದ ಖಾಯಿಲೆ ಕೇವಲ ನೂರು ರೂಪಾಯಿಯಲ್ಲಿ ದಯಪಾಲಿಸುತ್ತಿದ್ದಾರೆ.ಅಷ್ಟು ಮಾತ್ರವಲ್ಲದೇ ಮಾಧ್ಯಮಗಳ ಮೂಲಕ ಮನೆಯಲ್ಲಿ ಹೇರಳವಾಗಿ, ಸುಲಭವಾಗಿ ಸಿಗುವ ಮದ್ದುಗಳನ್ನು ಪ್ರಚಾರ ಪಡಿಸುತ್ತಿದ್ದಾರೆ. ತಮ್ಮ ಬಳಿ ಬರುವ ರೋಗಿಗಳಿಗೆ ಉಚಿತವಾಗಿ ಮೆಡಿಸಿನ್ ನ್ನು ಹಂಚುತ್ತಿದ್ದಾರೆ. ಕೇವಲ ಕರೋನ ದಿಂದ ಮುಕ್ತರಾಗಬೇಕೆಂಬ ಅಭಿಲಾಷೆ ಮನಸ್ಥಿತಿ ಮಾತ್ರ ಅವರಲ್ಲಿದೆ. ಇತ್ತ ಅಪ್ರೂವಲ್ ಗೆ ಛಲ ಬಿಡದ ಇವರು ಸಾಕಷ್ಟು ಬಾರಿ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳ ಹಿಂದೆ ಬಿದ್ದು ,ತಮ್ಮ ಔಷಧದ ಅನುಮತಿಗೆ ಬೇಡಿಕೆ ಇಡುತ್ತಾ ಕಚೇರಿ ಅಲೆದಾಡಿದ್ದರ ಫಲ ಶೃತಿಗಏನೋ ಎಂಬಂತೆ , ಕೊನೆಗೂ ದಾರಿ ಕಾಣದ ಸರ್ಕಾರದ ಸಂಬಂಧ ಪಟ್ಟ ಇಲಾಖೆ ಒಂದು ಶರತ್ತುವಿನ ಅನ್ವಯ ಡಾ l ಕಜೆ ಬಳಿ ಇರುವ ಎಲ್ಲಾ ಈ ಸಂಬಂಧ ಔಷಧವನ್ನು ಸರ್ಕಾರಕ್ಕೆ ಹಸ್ತಾ೦ತರಿಸಬೇಕು ಹಾಗೂ ಸ್ವತಃ ಯಾರಿಗೂ ಕೊಡುವಂತಿಲ್ಲ ಎಂಬ ಸರಕಾರದ ತೀರ್ಮಾನಕ್ಕೆ ಬದ್ಧರಾಗಿ ತಮ್ಮ ಸನಿಹಕ್ಕೆ ಬರುವ ರೋಗಿಗಳಿಗೆ ಔಷಧೋಪಚಾರವನ್ನು ನಿಲ್ಲಿಸಿ ಸರ್ಕಾರದ ದಿಂದಲೇ ಪೂರೈಕೆ ಕಂಡರೆ ಒಂದಿನಿತು ಒಳ್ಳೆದು ಎಂದಾಲೋಚಿಸಿದರೇ ,ಇತ್ತ ನಡೆದಿದ್ದೇ ಬೇರೆ ಕಜೆ ಔಷಧಗಳೆಲ್ಲವೂ ಸರಕಾರದ ಗೋದಾಮಿನಲ್ಲಿ ಬಂಧಿಯಾಯಿತೇ ವಿನಾ: ರೋಗಿಗಳಿಗೆ ತಲುಪಲೇ ಇಲ್ಲ . ಮಾಫಿಯಾದ ಕರಿ ಮೋಡ ಆವರಿಸಿ ಬಿಟ್ಟಿತ್ತು ,ಪಟ್ಟಭದ್ರ ಹಿತಾಸಕ್ತಿಗಳ ನಡುವೆ ಸಿಲುಕಿತು. ಖಾಸಗೀ ಆಸ್ಪತ್ರೆಗಳಿಗೆ ಹೊಡೆತ ಬೀಳುತ್ತದೆ ,ಔಷಧ ತಯಾರಿಸುವ ಕಂಪನಿಗಳಿಗೆ ಬರೆ ಬೀಳುತ್ತವೆ ಎಂಬ ಕಾರಣದಿಂದ ಈ ಔಷಧಿ ಮಾರುಕಟ್ಟೆಗೆ ಬಾರದಿರಲು ಕಾಣದ ಕೈಗಳು ಕೆಲಸ ಮಾಡಿವೆ. ಕೆಲವು ಸೆಲಬ್ರಿಟಿಗಳನ್ನೂ ಸೇರಿದಂತೆ ಅದೆಷ್ಟೋ ರೋಗಿಗಳನ್ನು ಗುಣ ಪಡಿಸಿದ ಡಾ l ಕಜೆಯವರು ಪ್ರಶಂಸಾರ್ಹರು .ಖುದ್ದು ಸಚಿವ ಸಿಟಿ ರವಿಯವರು ಸಹಾ ಮಾಧ್ಯಮದ ಮುಂದೆ ಹೇಳಿದ್ದರು ನಾನು ಡಾ l ಕಜೆಯವರ ಔಷಧ ದಿಂದಲೇ ಗುಣಮುಖನಾಗಿದ್ದೇನೆ ಎಂದು . ಅಸುರರ ಕ್ಷೇತ್ರದಲ್ಲಿ ಜಯ ಲಭಿಸುವುದು ಅಷ್ಟು ಸುಲಭದ ಮಾತು ಅಲ್ಲವೇ ಅಲ್ಲ. ನಮ್ಮವರಿಗೂ ಅಷ್ಟೇ ನಮ್ಮ ಮನೆಯ ಊಟ ಹಿಡಿಸುವುದಿಲ್ಲ ಆಯುರ್ವೇದ ಔಷಧ ನಮ್ಮ ಕೊಡುಗೆ ,ಭಾರತದ ಆಯುರ್ವೇಧ ಪದ್ಧತಿ ಮತ್ತಿನ್ನೇಲ್ಲೂ ಯಾವುದೇ ದೇಶದಲ್ಲಿ ಸಿಗುವುದಿಲ್ಲ. ಅದರದ್ದೇಯಾದ ಮಹತ್ವ ಗುಣ ವಿಶೇಷತೆಗಳಿವೆ . ರೋಗವನ್ನು ಹೊಡೆದು ಓಡಿಸುವ ಶಕ್ತಿ ಇದೆ . ಇಂಗ್ಲಿಷ್ ಮೆಡಿಸಿನ್ ಬಗ್ಗೆ ಹಾತೊರೆಯುವ ನಾವುಗಳು ಇದರ ಬಗ್ಗೆ ಕಿಂಚಿತ್ ಒಲವು ನೀಡಬೇಕಾಗಿದೆ. ಡಾ l ಕಜೆಯವರ ಔಷಧ ಮಾರುಕಟ್ಟೆಗೆ ಬರುವಂತಾಗಲಿ.
ಮಂಗಳವಾರ, ಜುಲೈ 28, 2020
ಅಂತವರಿಗಿಂತ ಕೆಟ್ಟವನಾದನೇ ಡ್ರೋನ್ ಪ್ರತಾಪ್ ?
ಡ್ರೋನ್ ಪ್ರತಾಪ್ ಹೆಸರು ಕೇಳದವರು ಯಾರು ಇಲ್ಲ 2-3 ವರ್ಷಗಳ ಹಿಂದೆ ಅತೀ ಹೆಚ್ಚು ಜನಪ್ರೀಯ ಗೊಂಡ ಪ್ರತಾಪ್ ಮತ್ತೆ ಸುದ್ದಿಯಾಗುತ್ತಿದ್ದಾರೆ ಬಡತನ ದಿಂದ ಬಂದು ತನ್ನ ಪ್ರಯತ್ನ ಮತ್ತು ಯಶೋಗಾಥೆ ಯಿಂದ ಯುವ ವಿಜ್ಞಾನಿ ಎಂಬ ನಾಮಾಂಕಿತ ದೊಂದಿಗೆ ಎಲ್ಲಾರಿಗೂ ಮಾದರಿ ಎನಿಸಿಕೊಂಡ ಈತ ಕಳೆದ ಒಂದಷ್ಟು ದಿನಗಳಿಂದ ಈಚೆಗೆ ಸಾಮಾಜಿಕ ಜಾಲ ತಾಣ ಸೇರಿದಂತೆ ಮಾಧ್ಯಮಗಳ ಚಾವಡಿಯಲ್ಲಿ ವಸ್ತುವಾಗುತ್ತಿದ್ದಾರೆ . ಬಗೆ ಬಗೆಯ ಟ್ರೊಲ್ಸ್ ಗಳು ಅನೇಕಾನೇಕ ಆತನ ಕಥೆಗಳು ವಿಚಿತ್ರಕಾರಿಯಾಗಿ ತಾರಕಕ್ಕೇರುತ್ತಿದೆ . ಅಂತಹ ದೊಡ್ಡ ತಪ್ಪು ಮಾಡಿದ್ದಾನೆಯೇ ಪ್ರತಾಪ್ ? ತಪ್ಪು ದೊಡ್ಡದಿರಲಿ ಸಣ್ಣದಿರಲಿ ತಪ್ಪು ತಪ್ಪೇ ! ದ್ರೋಹ ವಂಚನೆ ಎಂಬಿತ್ಯಾದಿಗಳಿಂದ ಸುದ್ದಿಯಲ್ಲಿರುವ ಪ್ರತಾಪ್ ನನ್ನು ಈ ಸ್ಥಿತಿಗೆ ಕರೆತಂದವರು ಯಾರು ? ಈಗಿನ ಅದೇ ಮಾಧ್ಯಮ ವಲ್ಲವೇ ?ಹಾಗೆ ನೋಡಿದರೆ ಪ್ರತಾಪ್ ನದ್ದು ಎಲ್ಲವೂ ಸತ್ಯವಲ್ಲ ಹಾಗಂತ ಎಲ್ಲವೂ ಸುಳ್ಳೆಂದು ಹೇಳಲಾಗದು. ಪ್ರತಾಪ್ 'ಈ ತ್ಯಾಜ್ಯ' ವಸ್ತುಗಳನ್ನು ಬಳಸಿ ಡ್ರೋನ್ ಮಾಡದಿರಬಹುದು ,ಕೆಲವು ಸಿನಿಮಾ ಕಥೆಗಳನ್ನು ತನ್ನ ಭಾಷಣದಲ್ಲಿ ಬಿಸಾಕಿರಬಹುದು ,ದೇಶ ಸುತ್ತದಿರಬಹುದು . ಆದರೂ ಆತನಲ್ಲಿ ಸ್ವಲ್ಪ ಲಾಲೆಜ್ಡ್ ಇದೆ. ಅದಿದೆ ಅನ್ನುವುದಕ್ಕೆ ಎಲ್ಲೋ ಆತನ ಹಾವ -ಭಾವ ದಿಂದ ಆರ್ಥವಾಗುತ್ತಿದೆ ಮೆಡಲ್ ಗಳನ್ನೂ ಪಡೆಯದಿದ್ದರೂ ಆ ಸ್ಥಳ ಗಳಿಗೆ ಎಂಟ್ರಿಯನ್ನು ದಕ್ಕಿಸಿಕೊಂಡಿರುವುದು ಎಲ್ಲೋ ಅವನಲ್ಲಿನ ಪ್ರತಿಭೆ ಸಾಕ್ಷಿ ಒದಗಿಸುತ್ತಿದೆ ಒಂದಷ್ಟು ಪ್ರಯತ್ನ ಪಟ್ಟರೇ ಖಂಡಿತವಾಗಿಯೂ ಸಾಧಿಸಬಲ್ಲನು ಅದೆಲ್ಲಾ ಬದಿಗಿರಿಸಿದರೇ ,ಇಂದಿನ ಈ ಎಲ್ಲಾ ಗೊಂದಲ, ಗೊಡವೆಗಳಿಗೆ ಸೋಶಿಯಲ್ ನೆಟ್ವರ್ಕ್ ,ನ್ಯೂಸ್ ವಾಹಿನಿಗಳೇ ಕಾರಣ. ಇದೀಗ ಅದೂ ಇದೂ ಎಂದು ವರ್ಣರಂಜಿತವಾಗಿ ಕಥೆ ಕಟ್ಟುವ ಇವುಗಳು ಅಂದು ಈತನ ಪೂರ್ವಪರವನ್ನು ಕಂಡು ಕಾರ್ಯಕ್ರಮವನ್ನು ಪ್ರಸಾರ ಮಾಡ್ಬೇಕಿತ್ತು . ತಮ್ಮ ಟಿಆರ್ಪಿ ತೆವಲಿಗೋಸ್ಕರ ಇಂತಹ ಕಾರ್ಯಕ್ರಮಗಳಿಗೆ ಕಥನ ಹೆಣೆಯುವರ ಮಧ್ಯೆ ಸಿಕ್ಕಿದ್ದೇ ಛಾನ್ಸು ಎನ್ನುತ್ತಾ ಇಲ್ಲ ಸಲ್ಲದ ಸುಳ್ಳು -ಪೊಳ್ಳುಗಳನ್ನು ಹೇಳಲು ಒಳ್ಳೆಯ ಪ್ಲಾಟ್ ಪಾರ್ಮ್ ಸಿಕ್ಕಿತ್ತು ಪ್ರತಾಪ್ ಗೆ . ಅದನ್ನೇ ಬಂಡವಾಳ ಮಾಡ್ಕೊಂಡು ಬಿಟ್ಟದ್ದ . ಹಲವಾರು ಜನರಿಗೆ ,ಕಡಿಮೆ ಸಮಯದಲ್ಲಿ ರೋಲ್ ಮಾಡೆಲ್ ಆಗಿಬಿಟ್ಟ . ಆತನ ಮೇಲೆ ಕನಿಕರ ತೋರಿಸದ್ದ ಕೈಗಳಿಗೆ ಆತನ ಯಶೋಗಾಥೆಯನ್ನು ಆಲಿಸಿದ ಮನಸ್ಸುಗಳಿಗೆ ಘಾಸಿಯಾಗಿದ್ದು ಬಿಟ್ಟರೇ ತಲೆ ಹೋಗುವಂತ ವಿಚಾರವೇನೂ ಇರಲಿಲ್ಲ. ದಿನೇ -ದಿನೇ ಟ್ರೋಲ್ ಮಾಡುವವರು ಸುದ್ದಿ ರೆಡಿ ಮಾಡುವವರು ಆಲೋಚಿಸಿ . ಗುಬ್ಬಿ ಮೇಲೆ ಬ್ರಹ್ಮಸ್ತ್ರವೇಕೇ ? ದೇಶವನ್ನು ಲೂಟಿ ಗೈದವರು,ಕೊಳ್ಳೆ ಹೊಡೆದವರು ,ಆಶ್ವಾಸೆಯನ್ನು ಕೊಟ್ಟು ಓಟು ಪಡೆದು ಸ್ವಾರ್ಥ ಪರಿಧಿಯಲ್ಲಿ ಸುತ್ತುವ ರಾಜಕಾರಣಿ ಗಳಿಗೆ , ದೇಶದ ಅನ್ನ ತಿಂದು ಅನ್ಯ ದೇಶಗಳ ಎಂಜಲು ನೆಕ್ಕುವವರಿಗಿಂತ ದೊಡ್ಡ ತಪ್ಪು ಮಾಡಿಲ್ಲ ಪ್ರತಾಪ್. ಇವರುಗಳು ಮಾಧ್ಯಮ ಮತ್ತು ನೆಟ್ಟಿಗರಿಗೆ ಆಹಾರ ವಾಗದಿರುವುದು ವಿಪರ್ಯಾಸ . ಬಗ್ಗಿದವರಿಗೆ ಹಿಡಿದಷ್ಟು ಗುದ್ದು ಕೊಡುವುದು ತರವಲ್ಲ !
ಶುಕ್ರವಾರ, ಜುಲೈ 17, 2020
ಚೀನಾಕ್ಕೆ ಶರಣಾಯಿತೇ ಅಮೇರಿಕಾ ?!
ವಿಶ್ವದ ದೊಡ್ಡಣ್ಣ ಅಮೇರಿಕಾ. ಇದಕ್ಕೆ ಎದುರಾಳಿ ದೇಶವನ್ನು ಊಹಿಸುವುದೇ ಕಷ್ಟ.ಬಲಿಷ್ಟ ರಾಷ್ಟ್ರ. ವಿಜ್ಞಾನ ,ತಂತ್ರಜ್ಜಾನ,ಆರ್ಥಿಕತೆ ,ಸಾರ್ಥಕತೆ ಹೀಗೆ ಎಲ್ಲಾ ವಿಭಾಗದಲ್ಲಿ ಅಭಿವ್ರದ್ಧಿ ಹೊಂದಿರುವ ವಿಶ್ವದ ನಂಬರ್ ಒನ್ ರಾಷ್ಟ್ರ ಅಮೇರಿಕಾ ಎಂಬುವುದನ್ನು ಒತ್ತಿ ಹೇಳಬೇಕಾದ ಅವಶ್ಯಕತೆ ಇಲ್ಲ. ವಿಶ್ವದ ಎಲ್ಲಾ ದೇಶಗಳೂ ಅಮೇರಿಕಾದ ಮಾತನ್ನು ತಪ್ಪದೇ ಒಪ್ಪುತ್ತದೆ. ಅಮೇರಿಕಾ ನಮಗೇನಾದರೂ ಮಾಡಿಬಿಡಬಹುದೆಂಬ ಆತಂಕದ ಜೊತೆಗೆ ಸಂಕಷ್ಟ ಕಾಲದಲ್ಲಿ ಸಹಾಯಕ್ಕಾದರೂ, ಅಮೇರಿಕಾವನ್ನು ಅಪ್ಪಿಕೊಳ್ಳಲೇ ಬೇಕು. ಎಂಬುದು ಗಮನಾರ್ಹ ಸಂಗತಿ. ಯಾರಿಗೂ ಕ್ಯಾರೆ ಮಾಡದ ಸಧ್ಯದ ಟ್ರಂಪ್ ಸಾರಥ್ಯದ ಅಮೇರಿಕಾ, ಪ್ರಸ್ತುತ ಎಲ್ಲೊ ಒಂದು ಕಡೆ ಚೀನಾಕ್ಕೆ ಹೆದರುತ್ತಿದೇಯಾ ಎಂಬ ಭಾವನೆ ಉಂಟಾಗುತ್ತಿದೆ. ಸಾಮನ್ಯವಾಗಿ ಎಲ್ಲರಲ್ಲೂ ಇದ್ದ ಅಭಿವ್ಯಕ್ತಿ ಎಂದರೆ ಕ್ರೂರಿ ಕೊರೋನಾವನ್ನು ಕೊಟ್ಟ ಚೀನಾವನ್ನು ಮಟ್ಟಹಾಕಲು ,ಅದಕ್ಕೆ ತಕ್ಕ ಪಾಠ ಕಲಿಸುವುದು ಅಮೇರಿಕಾ ಬಿಟ್ಟರೇ ಇನ್ಯಾವುದರಿಂದಲೂ ಅಸಾಧ್ಯ. ಅದರಲ್ಲೂ ಅಮೇರಿಕಾ ಸ್ಕೂರ್ ಪಟ್ಟಿಯಲ್ಲಿ ಅಗ್ರಪಂಕ್ತಿಯ ಸ್ಥಾನ ಪಡೆದಿದೆ .ಕೋಪಾಗ್ನಿಯಲ್ಲಿ ಅದು ಕುದಿಯುತ್ತಿದೆ. ಪ್ರತ್ಯಕ್ಷವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ಮಾಡುತ್ತಿರುವ ಟೀಕಾ ಪ್ರಹಾರದಲ್ಲಿ ಸುಲಭವಾಗಿ ಅರ್ಥೈಸಿಕೊಳ್ಳಬಹುದು. ಉಂಟಾದ ನಷ್ಟ ಭರಿಸುವುದರಿಂದ ಹಿಡಿದು,ಯುದ್ದಕ್ಕೆ ಸನ್ನದ್ದವಾಗುವ ರೀತಿಯಲ್ಲಿ ಬಡಾಯಿ ಕೊಚ್ಚಿಕೊಳ್ಳುತ್ತಿದೆ.ಚೀನಾದ ಬೆಂಬಲಕ್ಕೆ ಕಡಿವಾಣ ಹಾಕಲು ಇತರ ದೇಶಗಳಿಗೆ ಖಡಾಕ್ ವಾರ್ನಿಂಗ್ ಕೊಟ್ಟಿದೆ . ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ದ ಗುಡುಗಿದೆ.
ಬೆಂಬಲ ಒತ್ತಟ್ಟಿಗಿರಲಿ,ಇತರ ದೇಶಗಳು ಸಹಾ ಚೀನಾದ ವಿರುದ್ಧ ಕಿಡಿಕಾರುತ್ತಿವೆ. ಅವುಗಳಿಂದ ಪ್ರತಿಕಾರ ತೀರಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಸ್ವತಂತ್ರವಾಗಿ ಹೋರಾಡುವ ಶಕ್ತಿ ಇರುವುದು ವಿಶ್ವದ ದೊಡ್ಡಣ್ಣನಿಗೆ ಮಾತ್ರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಕೊಟ್ಟು ಸುಮ್ಮನಾಗುತ್ತಾರೆ ವಿನಹ ಪ್ರತಿರೋಧದ ಪ್ರಭಾವವಾಗಿಲ್ಲ. ಚೀನಾದ ವಸ್ತುಗಳನ್ನು ಬಹಿಷ್ಕರಿಸಬೇಕು .ಚೀನಾಕ್ಕೆ ಇರುವ ಬೆಂಬಲವನ್ನು ಹಿಂದುತೆಗೆದು ಕೊಳ್ಳಬೇಕೆಂಬ, ನಿಬಂಧನೆ-ನಿರ್ಭಂಧ ಮಾತುಗಳನ್ನು ಹೇಳುತ್ತದೆಯಾದರೂ, ಅದರ ಪಾಲನೆ ಕಟ್ಟುನಿಟ್ಟಾಗಿ ಖುದ್ದು ಅಮೇರಿಕಾ ದಿಂದಲೇ ಆಗುತ್ತಿಲ್ಲ. ಎಲ್ಲವೂ ಬಾಲಿಶ!
ಭಾರತ ಇತ್ತಿಚೆಗೆ 59 ಯಾಪ್ ಗಳನ್ನು ಬ್ಯಾನ್ ಮಾಡಿತ್ತು.ಅಮೇರಿಕಾ ಭಾರತವನ್ನು ಪ್ರಶಂಸಿಸಿತ್ತು .ಲಡಾಖ್ ಗಡಿಯಲ್ಲಿ ಯೋಧರ ಮೇಲಾದ ದಾಳಿಯನ್ನು ಖಂಡಿಸಿ,ಭಾರತಕ್ಕೆ ಬೆಂಬಲವನ್ನೂ ನೀಡಿತ್ತು. ಭಾರತ ಚೈನಾದ ಯಾಪ್ ನ್ನು ಬ್ಯಾನ್ ಮಾಡಿದ ಬೆನ್ನಲ್ಲೇ ತಾನೂ ಕೂಡಾ ನೀಷೇಧಿಸುತ್ತೇನೆಂದು ಘೋಷಿಸಿತ್ತು. ಕಾಲ ಉರುಳುತ್ತಿದೆ ಅಮೇರಿಕಾ ಸುಮ್ಮನಾಗಿದೆ. ಮಾತು ಮರೆತಂತಿದೆ.
ಚೀನಾದ ವೈರಸ್ ಹೆಚ್ವು ಪ್ರಭಾವ ಬೀರಿದ್ದು ಅಮೇರಿಕಾದ ಮೇಲೆ., ಚೇತರಿಕೆ ಹಂತಕ್ಕೂ ಸಾಗದ ಅಮೇರಿಕಾ ಚೀನಾಕ್ಕೆ ಶರಣಾದಂತಿದೆ. ಮತ್ತಿನ್ಯಾವುದಾದರೂ ವೈರಸ್ ನ್ನು ತಯಾರುಮಾಡಿ ಬಿಡಬಹುದೆಂಬ ದಿಗಿಲು ತಗುಲಿರಬಹುದೇ?!! ಈ ಸಂದರ್ಭ ಸಮಂಜಸವಲ್ಲಾ ಆ ಕಾಲಕ್ಕೆ ಕಾಯೋಣ ಎಂಬ ವಿಚಾರ ವಿರಬಹುದೇ ಗೊತ್ತಿಲ್ಲ ! ಅಮೇರಿಕಾ ದಿಂದ ಮುಂದೆ ನಾವೇನು ನಿರೀಕ್ಷಿಸಬಹುದು ? ಕಾದು ನೋಡೊಣ. !
-ಶಿವಕುಮಾರ್ ಹೊಸಂಗಡಿ
ಗುರುವಾರ, ಜುಲೈ 2, 2020
ಈ ಪರಿಯ ನಿರ್ಲಕ್ಷೆ ಯಾಕೆ?
ಇಟಲಿ,ಪ್ರಾನ್ ಸೇರಿದಂತೆ ಅನೇಕ ದೇಶಗಳಲ್ಲಿ ಕೊವೀಡ್ ಮ್ರತರನ್ನು ಲಾರಿಯಲ್ಲಿ ತುಂಬಿಸಿ ದೊಡ್ಡ ಹೊಂಡಕ್ಕೆ ಡಂಪ್ ಮಾಡುವ ವಿಡೀಯೋವನ್ನು ನಾವೇಲ್ಲಾ ಇತ್ತಿಚೆಗೆ ಕಂಡಿರುತ್ತೇವೆ. ಅಂತದ್ದೇ ಚಿತ್ರಣವನ್ನು ನಮ್ಮ ದೇಶದ ರಾಜ್ಯದಲ್ಲಿನ ಬಳ್ಳಾರಿ,ದಾವಣಗಿರಿ,ಯಾದಗಿರಿಯಲ್ಲಿ ನೋಡುವ೦ತಾಗಿದ್ದು ನಮ್ಮ ದೌರ್ಭಾಗ್ಯ ಸರಿ !ಯಾವುದೇ ಕರುಣೆ,ಅನುಕಂಪ,ಗೌರವ,ಸೌಜನ್ಯ,ನಾಚಿಕೆ,ಮರ್ಯಾದೆ ಇಲ್ಲದೇ ಬೀದಿ ನಾಯಿ ಸತ್ತಾಗ ಹೇಗೆ ಅದನ್ನು ದರ-ದರನೆ ಎಳೆದು ಹೊಂಡಕ್ಕೆ ಎಸಯಲಾಗುತ್ತದೋ ಕಾರ್ಯ ರೂಢಿಗತವಾಗಿದೆ. ಜೆಸಿಬಿ ಯಂತ್ರದ ಮೂಲಕ ಗುಂಡಿಗೆ ದೂಡುವ,ಒಂದೇ ಹೊಂಡದಲ್ಲಿ 4-5 ಶವವನ್ನು ಎಸೆಯುವ ಪರಿಸ್ತಿತಿಯನ್ನು ನೋಡಿದರೇ ಕರುಳು ಚುರುಕ್ ಅನ್ನುತ್ತದೆ. ಇನ್ನು ಇದನ್ನು ಗಮನಿಸುತ್ತಿರುವ ಅವರನ್ನು ಕಳೆದು ಕೊಂಡ ಕುಟುಂಬಸ್ಥರಿಗೆ ಹೇಗಾಗಬೇಡ. ನಾಯಿ,ಇಲಿ ಸತ್ತಾಗ ಅವುಗಳ ಬಾಲ ಹಿಡಿದು ದರ ದರನೇ ಎಳೆದು ಎಸೆಯುತ್ತೇವೆ ಸೇಮ್ ಟು ಸೇಮ್ ಎಸೆಯುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೆ ಶೇಮ್ ಆಗಬೇಕು., ತಮ್ಮಂತಯೇ ಇನ್ನೊಬ್ಬರ ದೇಹ ಎಂಬ ಕಿಂಚಿತ್ ಅರಿವು ಇಲ್ಲವೇ? ಒಂದು ನಾಯಿ ಸತ್ತರೇ ಇನ್ನೊಂದು ನಾಯಿ ಅದೇಷ್ಟು ಉಪಚಾರ ಮಾಡುತ್ತದೆ. ಕಣ್ಣೀರು ಸುರಿಸುತ್ತದೆ. ತನ್ನ ಮೂತಿಯಿಂದ ಮಣ್ಣು ಮಾಡುತ್ತದೆ, ನಾಯಿಗಿಂತ ಕಡೆಯಾದೇವಾ?ಶ್ವಾನಕ್ಕಿರುವಷ್ಟು, ಬುದ್ದಿಮತ್ತೆ,ಪಾಪ ಪ್ರಜ್ನೆ ನಮ್ಮವರಿಗೆ ಇಲ್ಲದೇ ಇರುವುದು ಕಳವಳಕಾರಿ. ಕೋವಿಡ್ ರೋಗಿಗಳಿಂದ ದೂರವಿರಬೇಕು,ಮ್ರತದೇಹದಿಂದಲೂ ಕೂಡಾ ಹೌದು.ಭಯ,ಆತಂಕ ಎಲ್ಲಾರಲ್ಲೂ ಇರುತ್ತದೆ. ನರ್ಸ್ ,ಡಾಕ್ಟರ್ ಎಷ್ಟು ಕಾಳಜಿಯಿಂದ ರೋಗಿಗಳಿಗೆ ಟ್ರೀಟ್ ಮೆಂಟ್ ಕೊಡುತ್ತಾರೆ.ಆದರೆ ಇತ್ತ ಸತ್ತವರ ಶವವನ್ನು ದೂರದಿಂದ ಎಸೆಯುವರಿಗೆ ಇದು ಪಾಲನೆಯಾಗುವುದಿಲ್ಲವೇ? ಪಿಪಿಇ ಧಿರಿಸುಗಳನ್ನು ಧರಿಸಿಯೂ, ಇಂಥಹ ಕಾರ್ಯಕ್ಕೆ ಮುಂದಾಗುವುದು ಎಷ್ಟು ಸರಿ ?ಅಷ್ಟೊಂದು ಭಯವೇ? ಶವಕ್ಕೂ ಕೂಡಾ ಪುಲ್ ಕವರ್ ಮಾಡಲಾಗುತ್ತದೆ ಆ ಹೊದಿಕೆ ಯಿಂದ ವೈರಸ್ ಹೊರಬರಲು ಸಾಧ್ಯವೇ? ತಾವುಗಳು ಸಹಾ ತುಂಬಾನೆ ರಕ್ಷಣಾತ್ಮಕ ಕವಚವನ್ನೇ ತೊಟ್ಟೂ ಹೀಗೆ ಮಾಡಲು ತಮಗೆ ಮನಸ್ಸು ಹೇಗೆ ಬರುತ್ತದೆ ?ನಿಮ್ಮ ಮನೆಯ ಸದಸ್ಯಗಳಿಗೆ ಹೀಗೆ ಮಾಡುತ್ತೀರಾ ?" ಸತ್ತವರ ದೇಹ ಎತ್ತ ಬಿದ್ದರೇನು?" ಎಂಬ ನಾಣ್ಣುಡಿ ಇದೆ.ಆದರೂ ಕೂಡಾ ನಮ್ಮಲ್ಲಿ ಸತ್ತವರಿಗೆ ಎಷ್ಟು ಶಾಸ್ತ್ರ ,ಸಂಪ್ರದಾಯಯುತವಾಗಿ ಅಂತ್ಯಕ್ರೀಯೆಯನ್ನು ಮಾಡಲಾಗುತ್ತದೆ. ಅದು ಬದಿಗಿರಲಿ ಕಿಂಚಿತ್ ಸರಿಯಾಗಿ ಹೊಂಡಕ್ಕೆ ಹಾಕಿ ದಫನ ಮಾಡಲೂ ನಿಮ್ಮಿಂದ ಸಾಧ್ಯವಾಗುತ್ತಿಲ್ಲ ,ಒಂದೇ ಗುಂಡಿಗೆ ಒಂದೇ ಮ್ರತ ದೇಹ ಅಂತ ಗೋತ್ತಿದ್ದರೂ, 4-5 ಶವವನ್ನು ಒಂದೇ ಸಮನೆ ಸುರಿಯುವ ನೀವುಗಳು ಬುದ್ದಿಭ್ರಮಣೆರೇ? ಅಂದರೂ ಅತಿಶಯೊಕ್ತಿ ಯಾಗಲಾರದು .ಒಂದು ಸರ್ಕಾರಿ ಹುದ್ದೆಯನ್ನು ಹೊಂದಿರುವ ವ್ಯಕ್ತಿ ಮ್ರತರಾದರೇ ಸಕಲ ಸರ್ಕಾರಿ ಗೌರವ ಲಭಿಸುತ್ತದೆ ಆದರೆ ಇಲ್ಲಿ ಕೋವಿಡ್ ಗೆ ತುತ್ತಾದರೇ ಜೆಸಿಬಿಯ ಮೂಲಕ ಕಸವನ್ನು ಬೀಸಾಡುವ ಹಾಗೆ ಗುಂಡಿಗೆ ದೂಡಿ ಅಂತ್ಯಸಂಸ್ಕಾರ ಕಾರ್ಯ ಮುಗಿದು ಬಿಡುವ ಪದ್ದತಿ ಜಾರಿಯಲ್ಲಿದೆ .ಎಂತಹ ಕಾಲಘಟ್ಟದಲ್ಲಿ ನಾವಿದ್ದೇವೆ ? ಹೌದು !ಕರೋನ ಸಮಸ್ಯೆಇದೆ .ಪ್ರಸ್ತುತದ ಪರಿಸ್ಥಿತಿ ಎಲ್ಲರಿಗೂ ಅರ್ಥವಾಗುತ್ತದೆ. ಆದರೂ ಈ ಪರಿಯ ನಿರ್ಲಕ್ಷೆ,ನಿರ್ಲಜ್ಜೆ ಯಾಕೆ?ದ್ರಷ್ಠಿ ಕೋನ ಬದಲಾಗಿದೆ!!
ಮಂಗಳವಾರ, ಜೂನ್ 30, 2020
App ಅಷ್ಟೇ ಬ್ಯಾನ್ ಆದರೆ ಸಾಕೇ?
ಚೀನಾ ಆಕ್ರಮಣದ ಬಳಿಕ ಭಾರತದಲ್ಲಿ ಚೀನಾ ಬಾಯ್ಕಟ್ಟ್ ಆಂದೋಲನವೇ ಶುರುವಾಯಿತು , ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕು ಎಂಬಂತ ಕೂಗುಗಳು ಸಾಮಾಜಿಕ ಜಾಲ ತಾಣಗಳಲ್ಲಿ ಬಲವಾದವು.ಸಾಕಷ್ಟು ಜನರು ತಮ್ಮ ಮೊಬೈಲ್ ನಲ್ಲಿನ App ಗಳನ್ನು ಅಳಿಸಿಯೂ ಆಯಿತು. ಇತ್ತ ಸರ್ಕಾರ 59 App ಗಳನ್ನು ಬ್ಯಾನ್ ಮಾಡಿಯೂ ಬಿಟ್ಟಿತು. ಇದು ಚೀನಾ ವಿರುದ್ಧದ ಮಹಾ ಸಮರ ಎಂದು ಬಿಂಬಿತವಾದರೂ, ಇನ್ನೊಂದೆಡೆ ಸೈಬರ್ ಕ್ರೈಮ್ ಅನ್ನು ತಪ್ಪಿಸುವ ಸಲುವಾದ ವಿಷಯ ಎಂಬುದು ಗುಟ್ಟಿನಲ್ಲಿ ಇದೆ. ಅದೇನೇ ಇರಲಿ App ಗೆನೋ ಬ್ರೇಕ್ ಬಿತ್ತು. ಆದರೆ ಎಲ್ಲಾ App ಗಳನ್ನು ನಿಷೇಧ ಮಾಡುವಲ್ಲಿ ಸರ್ಕಾರ ವಿಫಲವಾಯಿತೇ? ಈ 59 App ನಲ್ಲಿ ಹೆಚ್ಚೆಂದರೆ 10-12 ಮಾತ್ರ ಸಾಮನ್ಯವಾಗಿ ಉಪಯೋಗವಾಗುತ್ತಿದೆ. ಅತೀ ಹೆಚ್ಚು ಪ್ರಚಲಿತದಲ್ಲಿರುವ Paytm Zoom ,PUBG ಯಂತಹ ಇನ್ನಿತರ App ಗಳು ಸರ್ಕಾರದ ಕಣ್ಣಿಗೆ ಕಾಣಿಸದಿದ್ದದ್ದು ವಿಪರ್ಯಾಸ.! ಇಷ್ಟಾದರೂ ಆಯಿತಲ್ಲಾ ಸ್ತುತ್ಯಾರ್ಹ.ಗಿಳಿಯ ಮೇಲೆ ಬ್ರಹ್ಮಾಸ್ತ್ರ ಎಂಬತೆ ಯಾವುದೋ ಮುಖ್ಯನೋ ಅದನ್ನು ಬಿಟ್ಟು ಈ App ಮೇಲೆ ಮಾತ್ರ ದುಶ್ಮನ್ ಗಿರಿ ತೋರಿಸಿದೆ ಸರ್ಕಾರ. ಇದರಿಂದ ಎಳ್ಳಷ್ಟು ಪ್ರಯೋಜನ ವಿಲ್ಲ.ರಕ್ಕಸ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯೇ ಸರಿ !!ಧೈರ್ಯ ,ಸ್ಥೈರ್ಯ ,ತಾಕತ್ತು ಇದ್ದರೇ ಎಲೆಕ್ಟ್ರಾನಿಕ್ ಸಹಿತ ಇನ್ನಿತ್ತರ ವಸ್ತುಗಳನ್ನು ಬ್ಯಾನ್ ಮಾಡಲಿ.ಅದು ಅಸಾಧ್ಯದ ಮಾತು. World Trade Organization ಪ್ರಕಾರ ಹಾಗೆ ಮಾಡುವಂತಿಲ್ಲ.ಜನ ಸಾಮಾನ್ಯರ ಮೇಲೆ ಜವಬ್ದಾರಿಯನ್ನು ಹೊರಿಸಿದಂತಿದೆ ,ಜನ ಸಾಮಾನ್ಯರೂ ಸಹಾ ಅಷ್ಟೇ ಅಸಹಾಯಕರು . ಹೆಚ್ಚಾಗಿ ,ಕಡಿಮೆ ಕ್ರಯದ ವಸ್ತುವಿನ ಹಿಂದೆ ಬೀಳುವ ನಮ್ಮಿಂದ ಇದು Impossible !.ಇದು ಸರ್ಕಾರದ ಆಡಳಿತ ವ್ಯವಸ್ಥೆಯಲ್ಲೆ ಆಗಬೇಕು ಸುಲಭವಾಗಿ ದೇಶದ ಗಲ್ಲಿ -ಗಲ್ಲಿಯಲ್ಲಿ ಸಿಗುವಂತ ಈ ಮಾಲುಗಳಿಗೆ ಕಡಿವಾಣ ಬೀಳಬೇಕು. ಜನ ಸಾಮನ್ಯರು ಹೆಚ್ಚೆಂದರೆ ತಮ್ಮ ಮೊಬೈಲ್ ನಲ್ಲಿನ App ನ್ನ Uninstall ಮಾಡಬಹುದು,ಅದನ್ನು ಎಲ್ಲಾ ಮನಸ್ಥಿತಿಯವರು ಮಾಡುತ್ತಾರೆ ಎಂಬ ವಿಶ್ವಾಸವಿಲ್ಲ .,Tiktok ನಂತಹ App ಭಾರತದಲ್ಲಿ ಹೆಚ್ಚು ಜನಪ್ರೀಯತೆಯನ್ನು ಪಡೆದು ಕೊಂಡಿದೆ. ಲಕ್ಷ, ಕೋಟಿಗಟ್ಟಲೇ ಫಾಲವರ್ಸ್ ನ್ನು ಹೊ0ದಿರುವವರು ಇದಕ್ಕೆ ಹಿಂಜರಿಯುವುದು ಅಷ್ಟೇ ಸತ್ಯ, ಎನೇ ಇರಲಿ ಅಂತೂ ,ಇಂತೂ ಒಂದಷ್ಟು App ಗಳಿಗೆ ಸರ್ಕಾರ ವಿದಾಯ ಹೇಳಿದೆ .ಅದರಲ್ಲೂ Tiktok ಬಂದ್ ಆಗಿದ್ದೂ ಸಂತೋಷಕರ !ಇನ್ನೂ ಬೇರೆ ವಸ್ತುಗಳ ಕಥೆ ಎನು?ಅವುಗಳ ಆಯುಸ್ಸು ಎಂದು ?ಮೊದಲಿಗೆ ಚೀನಾದ ಆಮದನ್ನು ನಿಲ್ಲಿಸಬೇಕು. ಈಗಿರುವ ಎಲ್ಲಾ ಸ್ಟಾಕ್ ಗಳಿಗೆ ಬೆಂಕಿ ಬೀಳಬೇಕು. ಚೈನಾ ಮೊಬೈಲ್ ಉಪಯೋಗ ಮಾಡುತ್ತಿರುವವರಿಗೆ ಅದೇ ಬೆಲೆಯ ಮೊಬೈಲ್ ದಯಪಾಲಿಸಿ. ಚೈನಾದಂತೆ ನಮ್ಮಲ್ಲಿ ಯಾಕೆ ಅದೇ ಬೆಲೆಗೆ ವಸ್ತುಗಳು ತಯಾರಿಸಲು ಸಾಧ್ಯವಾಗುತ್ತಿಲ್ಲ?App ಗೆಯೆನೋ ಪರ್ಯಾಯವಾಗಿ ನಮ್ಮಲ್ಲಿ ಹೊಸ App ಸ್ರಷ್ಠಿಯಾಗಬಹುದು., ಇತರ ವಸ್ತುಗಳು ಭವಿಷ್ಯ ?? ಸರ್ಕಾರದ ಮುಂದೆ ಇರುವ ಸವಾಲುಗಳು ಇವು.!
ಭಾನುವಾರ, ಜೂನ್ 28, 2020
ಆಡಂಬರದ ಮದುವೆಗೆ ಕರೋನ ತಂತು ಕಡಿವಾಣ !
"ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು” ಎಂಬ ಗಾದೆ ಮಾತಿದೆ. ಇದರ ಅರ್ಥ ಆಧುನಿಕ ಜಗತ್ತಿನಲ್ಲಿ ಈ ಎರಡು ಕೆಲಸ ಬಹಳ ಕಷ್ಟಕರವಾದದ್ದು. ಆರ್ಥಿಕ ಸ್ಥಿತಿ ತುಂಬಾ ಮುಖ್ಯವಾದದ್ದು .ಮನೆಯನ್ನು ಹೇಗಾದರೂ ಕಟ್ಟಬಹುದು ಆದರೆ ಈ ಮದುವೆ ಎನ್ನುವ ಒಂದು ಕಾರ್ಯಕ್ರಮ ಇದೆಯಲ್ಲ ಇದನ್ನು ಎಷ್ಟೇ ಅದ್ದೂರಿ ,ಆಡಂಬರವಾಗಿ ಆಚರಿಸಿದರೂ , ಮರುದಿನ ಮನಸ್ಸಲ್ಲಿ ಏನೋ ಕಳೆದುಕೊಂಡ ಅನುಭವ ಮನೆ ಮಂದಿಗೆ ಉಂಟಾಗುತ್ತದೆ.ಮನೆಯವರೆಲ್ಲಾ ಒಟ್ಟು ಸೇರಿ ಒಂದು ದೊಡ್ಡ ಮೀಟಿಂಗ್ ಕೂಡ ಅರೆಂಜ್ ಮಾಡಿ , "ಹೀಗೆ ಮಾಡಿದ್ರೆ ಚೆನ್ನಾಗಿತ್ತು ,ಹಾಗೆ ಆಗಿದ್ದಿದ್ದರೆ ಒಳ್ಳೆದಿತ್ತು ,ಆ ಮನೆಯವರು ಆ ತರಹ ಮಾಡಿದ್ದರು ,ಈ ಮನೆಯವರು ಈ ತರಹ ಮಾಡಿದ್ದಾರೆ ಇಷ್ಟು ಖರ್ಚು ಮಾಡಿದ್ದವರಿಗೆ ಅದೊಂದ್ದನ್ನು ಪೂರ್ಣ ಗೊಳಿಸಬೇಕಿತ್ತು ." ಎಂಬ ಅಭಿವ್ಯಕ್ತಿ ಹೊರಹೊಮ್ಮುತ್ತದೆ .ಎಲ್ಲಿಯಾದರೂ ಮನೆವರ ಹಿತೈಷಿಗಳು ಸಿಕ್ಕಿದ್ದರೆ ಅವರು ಹೇಳುದು ಕೂಡಾ ಹೀಗೆ "ಮದುವೆ ಚೆನ್ನಾಗಿ ನಡೆದು ಹೋಯ್ತು ಆದರೆ ಅದೊಂದು ಇದ್ದಿದ್ದರೆ ,ಹಾಗೆ ಆಗಿದ್ದರೇ ಇನ್ನೂ ಗಮ್ಮತ್ತು ಇರ್ತಾ ಇತ್ತು ". ಎಂದು ತಟ್ಟನೆ ಇತ್ತ ಕಡೆಯಿಂದ ಉತ್ತರವೂ ಅಷ್ಟೇ "ಇನ್ನೊಬ್ಬನು ಇದ್ದಾನಲ್ಲ ಮದುವೆಗೆ ಅವನಿಗೆ ನೀವು ಹೇಳಿದ ಹಾಗೆ ಮಾಡೋಣ" ಎನ್ನುತ್ತಾರೆ .ಹೌದು ! ನಮ್ಮಲ್ಲಿ ಮದುವೆಗೆ ಮಾಡಿದಷ್ಟು ಖರ್ಚು-ವೆಚ್ಚು ಇನ್ಯಾವುದೇ ಕಾರ್ಯಕ್ರಮಕ್ಕೆ ಮಾಡಲಾಗುವುದಿಲ್ಲ . ಅಷ್ಟೊಂದು ಅದ್ದೂರಿ ,ಆಡಂಬರವಾಗಿ ಮಾಡಲಾಗುತ್ತದೆ . ನಮ್ಮ ದೇಶದಲ್ಲಿ ಮದುವೆ ವಿಷಯ ಬಂದರೆ, ಇಡಿಯ ಜೀವಮಾನ ಉಳಿಸಿದ ಗಳಿಕೆಯನ್ನು ಒಂದೇ ದಿನದಲ್ಲಿ ಖರ್ಚು ಮಾಡಿಸದಿದ್ದರೆ ಅದು ಮದುವೆಯೇ ಅಲ್ಲ. ಇದಕ್ಕೆಂದೇ ಮಕ್ಕಳು ಚಿಕ್ಕವರಿದ್ದಾಗಿನಿಂದಲೇ ಮದುವೆಗಾಗಿ ಹಣವನ್ನು ಉಳಿಸುತ್ತಾ ಬರುವುದೇ ಹೆಚ್ಚಿನವರು ಅನುಸರಿಸುವ ಮಾರ್ಗ.! ಉಳ್ಳವುರಿಗಂತೂ ಖರ್ಚಿಗೆ ಲೆಕ್ಕ -ಪತ್ರವೇ ಇರುವುದಿಲ್ಲ .ಅಷ್ಟೊಂದು ವಿಜೃಂಭಣೆಯಿಂದ ಮದುವೆ ಕಾರ್ಯವನ್ನು ಮುಗಿಸಿ ಬಿಡುತ್ತಾರೆ . ಆದರೆ ಇಲ್ಲದವರು ಸಹಾ ಅದೇನೋ ಕಷ್ಟಪಟ್ಟು ,ಸಾಲ -ಸೂಲ ಮಾಡಿ ಹಣ ಹೊಂದಿಸಿ ಆಡಂಬರಕ್ಕೆ ದಾಸರಾಗಿ ಬಿಡುತ್ತಾರೆ . ಉಳ್ಳವರು ಆನೆ ಮೇಲೆ ಹೋಗುತ್ತಾರೆ . ಇಲ್ಲದವರು ಅವರನ್ನು ನೋಡಿ ಸಂತೋಷ ಪಡಬೇಕೇ ವಿನಃ ಅವರಂತೆ ನಾವು ಮಾಡಬೇಕು ಎಂದು ಬಯಸುವುದು ಎಷ್ಟು ಸರಿ ? ಹಾಸಿಗೆ ಇದ್ದಷ್ಟೇ ಕಾಲು ಚಾಚ ಬೇಕು ಅಲ್ಲವೇ ? ಸರಳವಾಗಿ ಮದುವೆ ಮಾಡೋಣ ಎಂದು ಯಾರಾದರೂ ಸಲಹೆ ಮಾಡಿದರೆ ಎಲ್ಲಾ ಕಡೆಗಳಿಂದ ಇದಕ್ಕೆ ವಿರೋಧ ಎದುರಾಗುತ್ತದೆ.ನಮಗಿಂತಲೂ ಆರ್ಥಿಕವಾಗಿ ಹಿಂದುಳಿದ ಇನ್ನಾರೋ ಮಾಡಿದ ಮದುವೆಯನ್ನು ಉದಾಹರಿಸಿ ಅವರಿಗಿಂತ ನಾವೇನು ಕಡಿಮೆ ಎಂಬ ಧೋರಣೆ ಅನುಸರಿಸಲಾಗುತ್ತದೆ .ಮದುವೆ ಎಂಬುದು ವ್ಯಕ್ತಿಯ ಬಾಳಿನಲ್ಲಿ ಒಮ್ಮೆ ಮಾತ್ರ ನಡೆಯುವಂತದ್ದು, ಅದನ್ನು ಅದ್ದೂರಿಯಾಗಿ ಮಾಡಬೇಕು ,ನೆರ ಹೊರೆಯವರು ನಮ್ಮನ್ನು ಕೊಂಡಾಡಬೇಕು ,ಎಲ್ಲರ ಮೆಚ್ಚುಗೆಗೆ ಪಾತ್ರರಾಗಬೇಕು ಎಂಬ ಈ ಮನೋಭಾವವೇ ಆಧುನಿಕ ದಿನಗಳಲ್ಲಿ ಎದ್ದು ಕಾಣುತ್ತಿದೆ . ಈ ಆಡಂಬರಕ್ಕೆ ಇದೇ ಮೂಲ ಕಾರಣವಾದರೂ, ಇನ್ನೊಂದು ವಿಚಾರವನ್ನೂ ಗಮನಿಸಬೇಕು ,ಸ್ವರ್ಧಾತ್ಮಕತೆಯೂ ಸಹಾ ಇಲ್ಲಿ ಮೇಳೈಸುತ್ತದೆ . "ಆ ಮನೆಯವರ ಬಳಿ ಬಿಡಿಗಾಸು ಇಲ್ಲದಿದ್ದರೂ ,ಸಹಾ ಮಕ್ಕಳಿಗೆ ಅಷ್ಟೊಂದು ಅದ್ದೂರಿಯಾಗಿ ಮದುವೆ ಮಾಡಿಸಿದ್ದಾರೆ ನಾವು ಅವರಿಂದ ಮೇಲ್ ಸ್ಥರದಲ್ಲಿ ಇದ್ದೇವೆ ಎಂದು ಅಹಂಕಾರದ ಆರ್ಭಟಕ್ಕೆ ಜೋತು ಬೀಳುವ ಇವರಲ್ಲಿ, ಅಸಲಿಗೆ ಆರ್ಥಿಕ ಪರಿಸ್ಥಿತಿ ಸುಭಧ್ರವಿಲ್ಲದಿದ್ದರೂ ,ಮದುವೆ ಮಾಡಿಸುತ್ತಾರೆ .ಅರ್ಥ ಇಷ್ಟೇ ಅವರಿಗಿಂತ ನಾವು ಕಡಿಮೆ ಯಾಗಬಾರದು ಎಂಬಂತ ಮನಸ್ಥಿತಿ ಹಲವರಲ್ಲಿದೆ. ಅಂತಹ ಮ್ಯಾಟರುಗಳೇ ಇಂದಿನ ದಿನ ಸಿಂಹ ಪಾಲು ಅಂದರೂ ಅತಿಶಯೋಕ್ತಿ ಯಾಗಲಾರದು . ಎಲ್ಲಿಯವರಿಗೆ ಅಂದರೆ ಮದುವೆಯ ಆಮಂತ್ರಣ ಪತ್ರಿಕೆ ತನಕವೂ ಈ ಪೈಪೋಟಿ ಮುಂದುವರಿಯುತ್ತದೆ! 2-3 ದಿನದಲ್ಲಿ ಸಮಾರಂಭ ವಿದಾಯ ಕಾಣುತ್ತೆ . ಇದಕ್ಕೆ ವೆಚ್ಚವಾಗುವ ಹಣದ ಸಂದಾಯವಾಗುದಕ್ಕೆ ಅದೆಷ್ಟು ಸಮಯ ಬೇಕೋ ಗೊತ್ತಿಲ್ಲ .,ಅದೇಗೋ ಕಷ್ಟ ಪಟ್ಟು ಭರಿಸಲೇ ಬೇಕಾಗುತ್ತದೆ . ಮದುವೆ ಸಮಾರಂಭ ಎನ್ನುವುದು ಒಂದೇ ದಿನದಲ್ಲಿ ಮುಗಿದು ಹೋಗುವಂತ್ತದ್ದಲ್ಲ ., ಕಾರ್ಯಕ್ರಮದ ಲಿಸ್ಟ್ ಬಹಳ ಉದ್ದವಿದ್ದರೂ ,ಆ ಮೂರು ದಿನಗಳಲ್ಲಿ ಖರ್ಚಾಗುವ ವಿಚಾರ ಮಾತ್ರ ಬಹಳ ಮುಖ್ಯ .ಮೊದಲಿಗೆ ಪ್ರಾರಂಭವಾಗುವುದು ನಿಶ್ಚಿತಾರ್ಥದಿಂದ. ಎಂಗೇಜ್ಮೆಂಟ್ ಗೆ ದೊಡ್ಡ ಹಾಲ್ ಬೇಕು ಕಡಿಮೆ ಅಂದರೂ ಸಾವಿರ ಜನ ಸೇರಲೇ ಬೇಕು ಅವರೆಲ್ಲರನ್ನು ಮೊಬೈಲಜಿಷನ್ ಮಾಡಲು ವಾಹನದ ವ್ಯವಸ್ಥೆ ,ಹಾಲ್ ನ ಅಲಂಕಾರ ,ಭೂರಿ ಭೋಜನ ದೊಂದಿಗೆ ಎಂಗೇಜ್ಮೆಂಟ್ ಕಾರ್ಯಕ್ರಮ ಫಿನಿಷ್ !ನೆಕ್ಸ್ಟ್ ಸ್ಟೆಪ್ ಮೆಹಂದಿ ಕಾರ್ಯಕ್ರಮ ಕೆಲವೊಂದು ಮಂದಿ ತಮ್ಮ ನಿವಾಸದಲ್ಲೇ ಹಮ್ಮಿಕೊಂಡರೇ , ಇನ್ನೂ ಕೆಲವರು ಆಗಲೇ ಹೇಳಿದಂತೆ ಪ್ರಸಿದ್ಧ ಹಾಲ್ ಗಳನ್ನೇ ಆಯ್ಕೆ ಮಾಡಿ ಕೊಳ್ಳುತ್ತಾರೆ . ಮನೆ ಮುಂದೆ ಶಾಮಿಯಾನ ,ಮನೆ ಪೂರ್ತಿ ಕಲರ್ ಫುಲ್ ಲೈಟಿಂಗ್ಸ್ ನೊಂದಿಗೆ ಬಗೆ-ಬಗೆಯ ಅಲಂಕಾರ . ಜೊತೆಗೆ ನಾನ್ ವೆಜ್ ಊಟ.ಇನ್ನೂ ಮೆಹಂದಿಗೆ ಮಧ್ಯಪಾನ ವಿಲ್ಲದೇ ಅದು ಪೂರ್ಣಗೊಳ್ಳುವುದೇ ಇಲ್ಲ ,ಇದನ್ನು ಕರಾವಳಿ ಕರ್ನಾಟಕದಲ್ಲಿ ಯೆಥೇಚ್ಛವಾಗಿ ಕಾಣ ಬಹುದು.ಡ್ಯಾನ್ಸ್ ಆರ್ಕೆಷ್ಟ್ರಾ ದೊಂದಿಗೆ ಮೆಹಂದಿ ಕಾರ್ಯಕ್ರಮ ಖತಮ್ .!ನಂತರ ಬರುವುದೇ ಮದುವೆ ,ಆರತಕ್ಷತೆ ಇದೂ ಸಹಾ ಅಷ್ಟೇ ಇದಕ್ಕೆ ಹೊರತಾಗಿಲ್ಲ ಪ್ರಸಿದ್ಧ ಹಾಲ್ ,ಸಾವಿರಾರು ಜನರ ಕೂಡುವಿಕೆ ,ವಾಹನದ ವ್ಯವಸ್ಥೆ ,ಭೂರಿ ಭೋಜನ ಇತ್ಯಾದಿ ಇತ್ಯಾದಿ.!ಇದು ಕಾರ್ಯಕ್ರಮದ ಹೈಲೈಟ್ಸ್., ಆದರೆ ಇನ್ನು ಹಿನ್ನೋಟವೂ ಅಷ್ಟೇ ಅದ್ಭುತ ,ಅಮೋಘ ! ವರನ ಕಡೆಯಿಂದ ವಧುಗೆ ನಿರ್ದಿಷ್ಟ ಬಂಗಾರದ ಬೇಡಿಕೆ ,ಅದಕ್ಕೆ ಅನುಗುಣವಾಗಿ ಏನು ಕೊರತೆ ಬಾರದ ಹಾಗೆ ತುಸು ಹೆಚ್ಚೇ ಹಾಕಿ ಈಗೀಗ ಕೆಜಿ ಗಟ್ಟಲೇ ಬಂಗಾರದ ಹೇರಿಕೆ ಕಂಡು ಬರುತ್ತದೆ . ಲಕ್ಷಗಟ್ಟಲೇ ಹಣದ ಬಟ್ಟೆ !, ವಧು-ವರರರಿಗೆ ಮಾತ್ರವಲ್ಲದೇ ಕುಟುಂಬಸ್ಥರಿಗೆ ನೆಂಟರಿಷ್ಟರಿಗೂ ತೆಗೆಯಲಾಗುತ್ತದೆ.ಲೋಡುಗಟ್ಟಲೇ ಬಟ್ಟೆ -ಬರೆಗೆ ಎಷ್ಟು ಬೆಲೆಯಾಗಬೇಡ ?ಒಂದೇ ಕಲರ್ ಬಟ್ಟೆಯನ್ನು ತೊಟ್ಟು ಒನ್ದಷ್ಟು ಮಂದಿ ಮದುವೆ ಮಂಟಪದಲ್ಲಿ ಮಿರ-ಮಿರ ಮಿಂಚುತ್ತಿರುದನ್ನು ಕಂಡಿರುತ್ತೇವೆ .ಮದುವೆಗೆ ಬಂದವರು ಎಲ್ಲಾ ನಮ್ಮನ್ನೇ ಗಮನಿಸಲಿ ಎಂಬ ಉದ್ದೇಶ ! ಆಡಂಬರಕ್ಕೆ ಎಣೆ ಇಲ್ಲ . ಎಂತೆಂತಾ ನಮೂನೆಗಳು ? ಎಷ್ಟೆಲ್ಲಾ ದುಂದು ವೆಚ್ಚ ?ಇಷ್ಟೆಲ್ಲಾ ಆಡಂಬರ ಅವಶ್ಯಕೆತೆ ಇದೆಯೇ ? ಸರಳವಾಗಿ ಮದುವೆಯಾದರೆ ನೂರು ವರ್ಷ ಬಾಳುವುದಿಲ್ವೇ ?ಎಲ್ಲವೂ ಪ್ರತಿಷ್ಠೆಗೋಸ್ಕರ ಅಷ್ಟೇ !ಹಾಗಂತಾ ಸಿಂಪಲ್ ಆಗಿ ಮದುವೆಯಾಗುವವರು ಇಲ್ಲವಂತಲ್ಲ . ಕೆಲವೊಮ್ಮೆ ಪರಿಸ್ಥತಿ ಸರಳ ಮದುವೆಗೆ ನೂಕಿ ಬಿಡುತ್ತದೆ. ಪ್ರೀತಿ -ಪ್ರೇಮ -ಪ್ರಣಯದಲ್ಲಿ ತೇಲಾಡುವ ಪ್ರೇಮ ಪಕ್ಷಿಗಳು ಸರಳ ಮದುವೆಗೆ ಹೊಂದಿಕೊಳ್ಳಲೇ ಬೇಕು . ಪ್ರೇಮಿಗಳ ಮನೆಯಲ್ಲಿ ಒಪ್ಪಿಗೆ ಸಿಗದೇ ಇದ್ದಾಗ ತನ್ನ ಸ್ನೇಹಿತರೊಂದಿಗೆ ರಿಜಿಸ್ಟರ್ ಮ್ಯಾರೇಜ್ ಅಥವಾ ಯಾವುದೋ ದೇವಸ್ಥಾನದಲ್ಲಿ ತಾಳಿ ಕಟ್ಟುವುದು ಇದ್ದೇ ಇರುತ್ತದೆ . ಇದು ಸರಳ ಮದುವೆಗೆ ಬೆಸ್ಟ್ ಎಗ್ಸಾಂಪಲ್ ! ಇನ್ನು ಅಲ್ಲಲ್ಲಿ ಕೆಲವು ಸಂಘಟನೆ ಮತ್ತು ದೇವಸ್ಥಾನದ ವತಿಯಿಂದ ಉಚಿತ ಸಾಮೂಹಿಕ ವಿವಾಹ ಎಂದು ವರ್ಷದಲ್ಲಿ ಒಮ್ಮೆ ದೊಡ್ಡ ಕಾರ್ಯಕ್ರಮವನ್ನು ಇಟ್ಟುಕೊಳ್ಳುತ್ತವೆ . ಆ ವೇದಿಕೆಯಲ್ಲಿ ಒಂದಷ್ಟು ಉಚಿತವಾಗಿ ಕೆಲವೊಂದು ವಸ್ತುಗಳು(ವಸ್ತ್ರ ಆಭರಣ ) ಸಹಾ ಲಭಿಸುತ್ತದೆ . ಅತೀ ಬಡತನದ ಬೇಗೆಯಲ್ಲಿದ್ದವರು,ಹರಕೆ ಹೊತ್ತವರು ,ಅಂತರ್ಜಾತೀಯ ವಧು-ವರರು ಈ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿ ಹೆಸರನ್ನು ನೊಂದಾಯಿಸಿಕೊಳ್ಳುತ್ತಾರೆ .ಆಗಲೇ ಹೇಳಿದಂತೆ ಇಂತಹ ಪರಿಸ್ಥಿತಿಗೆ ಹೊಂದಿಕೊಂಡು ಸರಳ ವಿವಾಹ ನಡೆಯುತ್ತದೆ .ಈಗಿನ ಪರಿಸ್ಥಿತಿ ಯಾವುದಕ್ಕೂ ಕ್ಯಾರೇ ಮಾಡುತ್ತಿಲ್ಲ ,ಹಣ ,ಅಂತಸ್ತು ,ಗೌರವ ,ಘನತೆ ಸ್ವರ್ಧಾತ್ಮಕತೆಗೆ ಬ್ರೇಕ್ ಹಾಕಲು ಕರೋನ ಬಂದಿದೆ. ಈ ವರ್ಷ ಕರೋನ ಎಂಬ ಮಹಾಮಾರಿ ವಕ್ಕರಿಸಿ , ಜನ ಸಾಮನ್ಯರನ್ನು ಹೈರಾಣಾಗಿಸಿದ್ದು ಎಲ್ಲರಿಗೂ ಗೊತ್ತಿರುವುದೇ . ಇದರಿಂದ ಹೆಚ್ಚು ಹೊಡೆತ ಬಿದ್ದಿದ್ದು ಈ ಮದುವೆ ಸಮಾರಂಭಕ್ಕೆ ಈಗಾಗಲೇ ಮೊದಲೇ ನೊಂದಾಯಿಸದಂತೆ ,ಒಳ್ಳೆಯ ದಿನ, ಶುಭ ಘಳಿಗೆ ಯೊಂದಿಗೆ ನಡೆಯಬೇಕೆಂದು ಆಕಾಂಕ್ಷೆ ಪಟ್ಟವರಿಗೆ ಅದ್ದೂರಿ ಕೈ ಕೊಟ್ಟಿದೆ .ರಾಜಕಾರಣಿಗಳ ಮಕ್ಕಳು ,ಸಿನಿಮಾ ಮಂದಿಗಳೆಂಬ ಸೆಲೆಬ್ರಿಟಿಗಳಿಗೆ ಕರೋನ , ಮದುವೆ ವಿಷಯದಲ್ಲೂ ಮಾರಕವಾಗಿದಂತೂ ಸತ್ಯ . ಹೆಚ್ಚಿನವರು ಮದುವೆ ದಿನಾಂಕವನ್ನು ಮುಂದೆ ದೂಡಿದರೂ , ಎಷ್ಟು ದಿನ ಎಂದು ಕಾಯಬಹುದು ? ಈಗಾಗಲೇ 4-5 ತಿಂಗಳು ಕಳೆದರೂ , ಕರೋನಾ ಕಥೆ ಮುಗಿಯುವ ಲಕ್ಷಣ ಕಾಣುತಿಲ್ಲ. ಹಾಗಾಗಿ ಅನಿವಾರ್ಯವಾಗಿ ಸರಳ ಮದುವೆಗೆ ಅಡಿ ಇಡಲೇಬೇಕಾಯಿತು. ಕುಟುಂಬಸ್ಥರ ಸಮ್ಮುಖದಲ್ಲಿ ,ಬೆರಳೆಣಿಕೆಯ ನೆಂಟರುಷ್ಟರುಗಳ ಜೊತೆಗೆ ವಿವಾಹವಾಗುವಲ್ಲಿ ಉಂಟಾದ ಕೊರತೆ ಯಾದರೂ ಏನು ? ಒನ್ದಷ್ಟು ಆಡಂಬರ, ನೆರೆ ಹೊರೆಯವರು ವೀಕ್ಷಣೆಗೆ ಇಲ್ಲ ಎಂಬುದು ಬಿಟ್ಟರೇ , ಮತ್ತಿನ್ನೇನು ತೊಡಕು ?ಹೀಗೆ ಮದುವೆಯಾದರೆ ಗಂಡ -ಹೆಂಡತಿಯಾಗಿ ಸುಖವಾಗಿ ಬಾಳುದಿಲ್ಲವೇ ?ಊರ -ಪರ ಊರಿನವರಿಗೆ ತಮ್ಮ ಅದ್ದೂರಿತನವನ್ನು ತೋರ್ಪಡಿಸುವ ಅಗತ್ಯವಿಲ್ಲ ಸತಿ -ಪತಿಯಾದ ಮೇಲೆ ಎಲ್ಲಾರಿಗೂ ಅರಿವಾಗುತ್ತದೆ .ಕರೋನ ಇದಕ್ಕೊಂದು ದೊಡ್ಡ ಕಡಿವಾಣ ಹಾಕಿದ್ದು ಸಂತೋಷ ತಂದಿದೆ. ಮದುವೆ ಕಾರ್ಯ ಪ್ರಸ್ತುತ ಕರೋನ ಕಾಲದಲ್ಲಿ ಹೇಗೆ ನಡೆಯುತ್ತಿದೆಯೋ ಅದೇ ರೀತಿ ಮುಂದೆ ಕೂಡಾ ಸರಳವಾಗಿ ನಡೆಯಲಿ .
ಮಂಗಳವಾರ, ಜೂನ್ 23, 2020
ನಿಜವಾದ ಸ್ವಾರ್ಥಿಗಳು ಯಾರು ?
“ತಂದೆ ತಾಯಿ ತೀರಿಕೊಂಡರೂ, ಊರಿಗೆ ಬಾರದ ಇವರುಗಳು ತಮ್ಮ ಜೀವ ಭಯದಿಂದ ತಮ್ಮ ತಮ್ಮ ಮನೆಗಳಿಗೆ ದೌಡಾಯಿಸುತ್ತಿದ್ದಾರೆ. ಇವರೆಲ್ಲಾ ಸ್ವಾರ್ಥಿಗಳು .ಸ್ವಾರ್ಥಕ್ಕಾಗಿ ಜೀವಿಸುತ್ತಾರೆ” ಎಂದು ಸೋಶಿಯಲ್ ನೆಟ್ವರ್ಕ್ ಗಳ ಮೂಲಕ ಅನಿವಾಸಿಗಳಿಗೆ ದಿಕ್ಕಾರ ಕೂಗುವವರಲ್ಲಿ ಎಷ್ಟು ಸ್ವಾರ್ಥ ತುಂಬಿದೆ ನೋಡಿ ಇವರುಗಳು ಹೊರಗಿನಿಂದ ವೈರಸ್ ಹೊತ್ತು ತಂದರೇ ನಮಗೆಲ್ಲಿ ಹರಡುತ್ತದೋ ಎಂಬ ಹೆದರಿಕೆ ,ಸ್ವಾರ್ಥ ಮನೋಭಾವನೆಯಿಂದ ಹೀಗೆಲ್ಲಾ ಉಸುರುತ್ತಾರೆ. ಹೊರಗಿನವರ ಆರ್ಥಿಕ ಸಹಾಯ,ಅಲ್ಲಿನ ವಸ್ತುಗಳಿಗೆ ಹಾತೊರೆಯುವರಲ್ಲಿಯೇ ಇದೆ ಸ್ವಾರ್ಥಪರತೆ. ಕರೋನ ಎಂಬ ಮಹಾಮಾರಿಯಿಂದ ಈಡೀ ಜಗತ್ತು ಹೈರಾಣಾಗಿ ಹೋಗಿದೆ . ಈ ಸಂದರ್ಭದಲ್ಲಿ ಊರು ಬಿಟ್ಟು ಪರ ರಾಜ್ಯ, ಪರ ದೇಶಕ್ಕೆ ದುಡಿಯಲು ಹೋದ ಹಲವರ ಸ್ಥಿತಿಯೂ ಕೂಡಾ ಚಿಂತಾ ಜನಕವಾಗಿದೆ . ಉದ್ಯೋಗವಿಲ್ಲ , ಸರಿಯಾದ ಆಹಾರವಿಲ್ಲ ,ರೂಮ್ ಬಾಡಿಗೆ ನೀಡಲು ಕೈಯಲ್ಲಿ ಕಾಸಿಲ್ಲ ಈ ಕಾರಣ ದಿ೦ದ ಕಷ್ಟಪಟ್ಟು ತಮ್ಮ ಊರಿಗೆ ಮರಳಿ ಬರುವವರಿಗೆ ಬಹಿಷ್ಕಾರದ ಕೂಗು ಎದುರಾಗಿದೆ . ಚೀನಾದಲ್ಲಿ ಹುಟ್ಟಿದ ಕರೋನ ಈಗ ಜಗತ್ತಿನಾದ್ಯಂತ ಕೇಕೆ ಹಾಕುತ್ತಿದೆ ಅಂದರೆ ಹೊರದೇಶದಲ್ಲಿರುವವರು ಅಲ್ಲಿಂದ ಪುಕ್ಕಟ್ಟೆಯಾಗಿ ತಂದು ಕಾಯಿಲೆಯನ್ನು ಇಲ್ಲಿ ಹಬ್ಬಿಸುತ್ತಾರೆ .ಅವರುಗಳು ಬರುವುದು ಬೇಡ ಅವರುಗಳಿಂದಲೇ ಈ ಪರಿಯ ರೋಗ ವೃದ್ಧಿ ಗೊಳ್ಳುತ್ತಿದೆ ಎಂದು ಹೇಳುವವರ ಮಾತಿನಲ್ಲಿ ಕೊಂಚ ಅರ್ಥವಿದೆಯಾದರೂ , ಅನಿವಾಸಿಗಳ ತಪ್ಪಾದರೂ ಏನು ?ಅವರುಗಳಿಗೂ ಸಹಾ ಜೀವ ಭಯವಿಲ್ಲವೇ ?ಬದುಕ ಬೇಕೆಂಬ ಬಯಕೆ ಇಲ್ಲವೇ ? ಬಯಸಿ ಬಯಸಿ ಯಾರು ಕೂಡ ರೋಗಗಕ್ಕೆ ಬಲಿಯಾಗುದಿಲ್ಲ ,ಅದರಲ್ಲೂ ಈ ಕರೋನ ದಿಂದ ಎಷ್ಟು ಜಾಗ್ರತಿವಹಿಸಿದರೂ ಅದು ನಮ್ಮನ್ನು ಆವರಿಸಿ ಬಿಡುತ್ತದೆ . ಹಾಗಂತ ಎಲ್ಲರಲ್ಲೂ ಈ ಖಾಯಿಲೆ ಇರುತ್ತದೆ ಅಂತ ಅಲ್ಲಾ ಕೆಲವರಲ್ಲಿ ಕಂಡೂ ಬಂದರೂ ,ಹಲವರಲ್ಲಿ ನೆಗೆಟಿವ್ ಕೇಸೇ ತುಂಬಿ ಇರುತ್ತವೆ . ಅಂದ ಮಾತ್ರಕ್ಕೆ ಅವರುಗಳು ಬರುವುದು ಸರಿಯಲ್ಲ ಎಂಬುದರಲ್ಲಿ ಅರ್ಥವಿಲ್ಲಾ . ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುವುದು ತರವಲ್ಲ . ಅದೇಷ್ಟು ಕಷ್ಟಪಟ್ಟು ವಿಧ್ಯಾಭ್ಯಾಸ ಮುಗಿಸಿ ತಮ್ಮ ಸ್ವಂತ ಊರಿನಲ್ಲಿ ಉದ್ಯೋಗ ಸಿಗದೇ ಇದ್ದಾಗ, ನೆಲೆಗೆ ಬೆಲೆಗೆ ಸಿಗದೇ ಇದ್ದಾಗ , ಅನಿವಾರ್ಯವಾಗಿ ಹೊರದೇಶ ,ಹೊರರಾಜ್ಯವನ್ನು ಅವಲಂಭಿಸಬೇಕಾಗಿ ಬರುತ್ತದೆ. ತಮ್ಮ ಅವಶ್ಯಕ್ತತೆಗೆ ಇಲ್ಲಿ ಸಿಗುವ ಹಣ ತ್ರಪ್ತಿ ದಾಯಕವಾಗಿಲ್ಲವಾದ್ದರಿಂದ . ತಮ್ಮ ಆರ್ಥಿಕ ಸಮಸ್ಯೆಯನ್ನು ಸರಿದೂಗಿಸಲು ಕಂಡರಿಯದ ಪ್ರದೇಶಕ್ಕೆ ,ಅಲ್ಲಿನ ವಾತಾವರಣ, ಜನ ಸಂಪರ್ಕ ಯೋಗ್ಯವಲ್ಲದಿದ್ದರೂ ,ಸಹಾ ಮನೆಯವರನ್ನೇಲ್ಲಾ ಬಿಟ್ಟು ವರ್ಷಗಟ್ಟಲೇ ದೂರವಿದ್ದೂ , ಹಗಲು ರಾತ್ರಿ ಯೆನ್ನದೇ ,ತಮ್ಮ ಕಷ್ಟವನ್ನೇಲ್ಲಾ ಇಷ್ಟವನ್ನಾಗಿಸಿ ಸುಖ ಜೀವನ ನಡೆಸುತ್ತಾರೆ . ತೀರಿ ಹೋದ ತಂದೆ-ತಾಯಿಯನ್ನೋ ಸಂಬಂದಿಕರನ್ನು ನೋಡಲು ಬಾರದವರು ಈ ಕರೋನಾ ದಿಂದ ಊರಿಗೆ ಮರಳುತ್ತಾರೆ ಎಂಬ ಮಾತು ಎಲ್ಲೋ ಸತ್ಯದ ತಲೆ ಮೇಲೆ ಹೊಡೆಯುತ್ತಿದ್ದರೂ, ಎಲ್ಲಾರಿಗೂ ಒಪ್ಪಿಗೆ ಯಾಗುವಂತ್ತದ್ದಲ್ಲ .ಒಂದೋ,ಎರಡು ಕೇಸುಗಳು ಅಲ್ಲಿನ ಪರಿಸ್ಥಿತಿ ಗೆ ಅನುಗುಣವಾಗಿ ಹೀಗೆ ಮಿಸ್ಸಿಂಗ್ ಆಗಬಹುದು.. ಹಲವಾರು ಕಡೆಯಲ್ಲಿ ಅಗ್ರಿಮೆಂಟ್ ,ಜವಬ್ದಾರಿಯುತ ಕೆಲಸ,ರಜೆ ಸಿಗದೇ ಇರುವುದು ಹೀಗೆ ಮುಂತಾದ ಕಾರಣಗಳಿಂದ ಎಮರ್ಜೆನ್ಸಿಗೆ ಬಾರದೇ ಇರುವುದು ಎಲ್ಲೋ ಬೆರಳು ಎಣಿಕೆ ಯಷ್ಟು ನಡೆಯುತ್ತದೆ ಅಷ್ಟೇ! ಊರಿಗೆ ಬರಬೇಡಿ ಎಂದು ಹೇಳುವವರು ಮುಂದೆ ಯಾವುದಾದರೂ ಧಾರ್ಮಿಕ .ಸಾಂಸ್ಕ್ರತಿಕ, ಕಾರ್ಯಕ್ರಮ ವಿದ್ದಾಗ ,ಫೋನ್ ಹಾಯಿಸಿ ಮೆಸೆಜ್ ಮಾಡಿ, ಎಷ್ಟೇಷ್ಟೋ ಬೇಡಿಕೆ ಇಡುತ್ತಾರೆ .ಅವರಿಂದ ಲಾಭ ಬೇಕು., ಆದರೆ ಕಷ್ಟ ಮಾತ್ರ ಬೇಡ. ನಿಜವಾದ ಸ್ವಾರ್ಥಿಗಳು ಇವರುಗಳೇ. ಗಣೇಶೋತ್ಸವ ,ಶಾರದೋತ್ಸವ,ಕೋಲ,ನೇಮ, ನಾಗಮಂಡಲ,ದೇವಸ್ಠಾನದ ಧಾರ್ಮಿಕ ಉತ್ಸವ ಇನ್ನಿತರ ಯಾವುದೇ ಧಾರ್ಮಿಕ ,ಸಾಂಸ್ಕೃತಿಕ ,ಸಾಮಾಜಿಕ ಕಾರ್ಯಕ್ರಮಕ್ಕೆ ಆರ್ಥಿಕ ಪರಿಸ್ತಿತಿ ನೆಟ್ಟಗೆ ಇದ್ದರೇ ಅದು ನಾವು ಎಣಿಸಿದಂತೆ ನಿಗದಿತ ಫಲಿತಾಂಶ ನೀಡಲು ಸಾಧ್ಯ. ಸಮೀಕ್ಷೆ ಬಿದಿಗಿರಲಿ .,ವಾಸ್ತವಾರ್ಹವಾಗಿಯೂ ಅನಿವಾಸಿಗಳದ್ದೇ ಹೆಚ್ಚಿನ ಹಣ ಸಂಗ್ರಹವಾಗುವುದು. ಗಲ್ಪ್ ರಾಷ್ಟ್ರ ,ಮಹಾರಾಷ್ಟ್ರ ,ಮತ್ತಿತ್ತರ ಪ್ರದೇಶದಲ್ಲಿರುವವರೇ ಸಹಾಯ ಮಾಡುವುದು ತಾವು ಆ ಕಾರ್ಯಕ್ರಮ ಹಾಜರಾಗದೇ ಇದ್ದರೂ, ನಮ್ಮ ಊರು ನಮ್ಮ ದೇವಸ್ಥಾನ ನಮ್ಮ ಕಾರ್ಯಕ್ರಮ ಎಂದು ಎಣಿಸಿ , ಹೆಚ್ಚಿನ ಪ್ರಮಾಣದಲ್ಲೇ ಸಹಾಯ ಹಸ್ತ ನೀಡುತ್ತಾರೆ ಆಗ ಅವರ ಸಹಾಯ ಬೇಕಿತ್ತು. ಈಗ ಪಾಪ ಅಲ್ಲಿ ಕೆಲಸ ಇಲ್ಲ ಆಹಾರ ಇಲ್ಲದೇ ಒದ್ದಾಡುತ್ತಿರುವವರು ಊರಿಗೆ ಬಂದರೆ ಅಪಸ್ವಾರ !.ನಿಜಕ್ಕೂ ಬೇಸರದ ವಿಚಾರ ಅಷ್ಟಕ್ಕೂ ಅವರು ಬರುವುದು ಸ್ವಂತ ಊರಿಗೆ .,ಅವರ ಮನೆಗೆ ಅಲ್ಲವೇ ?ಅದನ್ನು ತಡೆಯುವ ಅಥವಾ ಅಲ್ಲ ಗೆಳೆಯುವ ಹಕ್ಕೂ ಯಾರಿಗೂ ಇಲ್ಲ .
ಸೋಮವಾರ, ಜೂನ್ 15, 2020
ಕರಾಳ ವರ್ಷ ಈ 2020 !
ಹೌದು !ಹಿಂದೆಂದೂ ಕಂಡು ಕೇಳರಿಯದಂತ ಅಹಿತಕರ ಘಟನೆಯನ್ನು ಹೊತ್ತು ತಂದಿದೆ ಈ ವರ್ಷ 2020 ! ಕಣ್ಣಿಗೆ ಮುದ ನೀಡುವಂತಹ ಸಂಖ್ಯೆ 2020., ಅಷ್ಟೇ ಕಣ್ಣೀರು ತರಿಸುತ್ತಿದೆ ದಿನದಿಂದ ದಿನಕ್ಕೆ. ಸಾವು-ನೋವುಗಳನ್ನೂ ತನ್ನ ಬತ್ತಳಿಕೆಯಲ್ಲಿ ಇಟ್ಟುಕೊಂಡಿದೆ. ಲೆಕ್ಕ- ಪತ್ರ ಇಲ್ಲದೇ ವೇಗವಾಗಿ ವಿಹರಿಸುತ್ತಿದೆ.,ಇನ್ನೂ ಅರ್ಧ ವರ್ಷ ಕಳೆದಿಲ್ಲ ,ಇಷ್ಟೊಂದು ಪಾಸ್ಟ್ ಆಗಿ ದುಃಖದ ಮಡುವಿನೊಂದಿಗೆ ಕಣ್ಣೀರಿನಲ್ಲಿ ಕೈ ತೊಳೆಯಿಸುತ್ತಿದೆ ಅಂದರೇ, ಇನ್ನುಳಿದ ಅರ್ಧ ವರ್ಷದ ಬಗೆಗೆ ಆಲೋಚಿಸಿದರೇ ನಿದ್ರೆ ಹತ್ತುವುದಿಲ್ಲ ಭಯದ ನಡುವೆ ಬದುಕು ಸಾಗಿಸುವಂತಾಗಿದೆ .ಕರೋನ ಎಂಬ ಮಹಾಮಾರಿ ಕಂಡು ಬಂದದ್ದು ,2019 ರ ಡಿಸೇಂಬರ್ ಕೊನೆ ಭಾಗದಲ್ಲಿಯಾದರೂ ,ಪರಿಣಾಮ ,ಫಲಿತಾಂಶ ಮಾತ್ರ 2020 ನೀಡುತ್ತಿದೆ.ದೇಶದಲ್ಲಿ ಸುಮಾರು 3 ಲಕ್ಷ ಅಧಿಕ ಮಂದಿ ಸೋಂಕಿಗೆ ತುತ್ತಾದರೇ 8500 ಕ್ಕೂ ಅಧಿಕ ಮಂದಿ ತಮ್ಮದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಳ್ಳುವಂತಿದೆ . ಇದುವರಿಗಿನ ಅಂಕಿ-ಅಂಶದ ಪ್ರಕಾರ ಮುಂದೆ ಅದೆಷ್ಟೋ ದೇವರಿಗೆ ಗೊತ್ತು . ಅದೆಷ್ಟೋ ಪತಿ ಪತ್ನಿಯನ್ನು ,ಅಮ್ಮ ಮಗನನ್ನು ,ತಂದೆ - ತಾಯಿ ,ಬಂಧು ಬಳಗವನ್ನೂ ಎಲ್ಲಾಕ್ಕಿಂತ ಹೆಚ್ಚಾಗಿ, ಇನ್ನೇನು ಮಗುವನ್ನು ನೋಡುವ ದಿನ ಸಮೀಪಿಸುವಾಗಲೇ ಮುಖವನ್ನು ನೋಡಲು ಸಾಧ್ಯವಾಗದ ಸುದ್ದಿ ನಿಜಕ್ಕೂ ಅರಗಿಸಿಕೊಳ್ಳಲಾಗದು. ಇಂತಹ ದುಃಖ ಭರಿತ ಕೇಸುಗಳಿಗೆ ಲೆಕ್ಕವಿಲ್ಲ ,ಅನೂ ದಿನವೂ ಏರಿಕೆ ಕಾಣುತ್ತಿದೆ . 'ಅಯ್ಯೋ ಪಾಪಾ' ಎಂಬ ಧ್ವನಿಯೊಂದಿಗೆ ಕಣ್ಣೀರು ನಮಗೆ ಅರಿವಿಲ್ಲದಂತೆ ಉದುರದೇ ಇರದು . 'ಇದು ಎಂತ ವರ್ಷವಪ್ಪಾ’ ಎಂದು ಹಿಡಿ ಶಾಪ ಹಾಕುತ್ತಿದ್ದರೇ ,ಮತ್ತದೇ ಪತ್ರಿಕೆ, ಟಿವಿಗಳಲ್ಲಿ ಅದೇ ನ್ಯೂಸ್ !ಇನ್ನೂ ಸೆಲೆಬ್ರಿಟಿಗಳಿಗಂತೂ ಕರಾಳ ವರ್ಷವೇ ಸರಿ. ಎಂದೂ ಕೂಡಾ ಈ ಪರಿಯ, ಈ ಪ್ರಾಯದ ಸಾವು -ನೋವು ಕಂಡ ಉದಾಹರಣೆಗಳಿಲ್ಲ .ಆದರೆ ಈ ವರ್ಷ ಸೆಲೆಬ್ರೆಟಿಗಳ ಬಾಳಲ್ಲಿ ಹೆಸರಂತೆ ಟ್ವೆಂಟಿ -ಟ್ವೆಂಟಿ ಆಡುತ್ತಿದೆ . ಒಟ್ಟಾರೇ ಈ ವರ್ಷ ಅದೆಷ್ಟು ಸೆಲೆಬ್ರಿಟಿಗಳು ದೂರ ಆಗಿದ್ದಾರೆ ,ನೋವು ಅನುಭವಿಸಿದ ,ಆಸ್ಪತ್ರೆ ಕದ ತಟ್ಟಿದವರ ಒಂದು ಪುಟ್ಟ ಪರಿಚಯದ ಪಟ್ಟಿ ಸಂಗಹ್ರಹಿಸಿದ್ದೇನೆ .ಇದರಲ್ಲಿ ಸಿನಿಮಾ ನಟ ,ನಟಿ,ನಿರ್ಮಾಪಕ ,ಸಂಗೀತ ನಿರ್ದೇಶಕ , ಕವಿ -ಸಾಹಿತಿ , ನ್ಯಾಯವಾದಿ,ರಾಜಕೀಯ ಮುಖಂಡರು ಇದ್ದಾರೆ .

ಬಾಲಿವುಡ್ ನಟಿ- ಶಬಾನಾ ಆಜ್ಮಿ :
ಅದು ಜನವರಿ 18 ಶನಿವಾರ ಬಾಲಿವುಡ್ ಹೆಸರಾಂತ ನಟಿ ಶಬಾನಾ ಆಜ್ಮಿ ಕಾರು ಅಪಘಾತವಾಗಿತ್ತು . ಅದೃಷ್ಟವಶಾತ್ ಶಬಾನಾ ಗಾಯಕೊಂಡಿದ್ದು ಬಿಟ್ಟರೇ, ಅಪಾಯದಿಂದ ಪಾರಾಗಿದ್ದರು. ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಮುಂಬೈ–ಪುಣೆ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿತ್ತು . ಮುಂಬೈನಿಂದ 60 ಕಿ.ಮೀ. ದೂರದ ಖಲಾಪುರದಲ್ಲಿ ಶಬಾನಾ ಪ್ರಯಾಣಿಸುತ್ತಿದ್ದ ಕಾರು, ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು ಶಬಾನಾ ಅವರನ್ನು ನವಿ ಮುಂಬೈನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು .ಅಜ್ಮಿ 1974ರಲ್ಲಿ ಶ್ಯಾಮ್ ಬೆನೆಗಲ್ ನಿರ್ದೇಶನದ ಅಂಕುರ್ ಸಿನಿಮಾದ ಮೂಲಕ ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ್ದ ಇವರು ,ಸಾಕೆಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ . 69 ವರ್ಷದ ಶಬಾನಾ ಆಜ್ಮಿ ಅವರು ಅತ್ಯುತ್ತಮ ನಟಿಗಾಗಿ ಐದು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು 4 ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನ ಪಡೆದಿದ್ದಾರೆ.ಹಾಗೂ 2012ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಸಂಗೀತ ನಿರ್ದೇಶಕ-ಅರ್ಜುನ್ ಜನ್ಯ
ಜನಪ್ರೀಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿರುವ ಅರ್ಜುನ್ ಜನ್ಯ ಫೆಬ್ರವರಿ 26ನೇ ತಾರೀಕು ಬುಧವಾರ ರಂದು ಮೈಸೂರಿನ ತಮ್ಮ ನಿವಾಸದಲ್ಲಿರುವಾಗ ಹೃದಯಾಘಾತಕ್ಕೊಳಗಾಗಿದ್ದರು ತಕ್ಷಣ ಅವರನ್ನು ಚಿಕಿತ್ಸೆಗಾಗಿ ಸಮೀಪದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಅವರನ್ನು ತೀವ್ರ ನಿಗಾ ಘಟಕದಲ್ಲಿ ಇಟ್ಟಿದ್ದರು. ಅರ್ಜುನ್ ಜನ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು . ‘ಬೆಳಗ್ಗೆ 2.30ಕ್ಕೆ ಅರ್ಜುನ್ ಅವರಿಗೆ ಆಸ್ಪತ್ರೆಯ ತಂಡ ಆಂಜಿಯೋಪ್ಲ್ಯಾಸ್ಟಿ ಮಾಡಿದ್ದೇವೆ. ಇನ್ನು 2 ಗಂಟೆ ತಡವಾಗಿದ್ದರೆ ಕೆಟ್ಟ ಪರಿಣಾಮ ಎದುರಿಸಬೇಕಿತ್ತು. ಸದ್ಯ ಎಲ್ಲವೂ ಸರಿಯಾಗಿದೆ. ಅರ್ಜುನ್ ಜನ್ಯ ಕ್ಷೇಮವಾಗಿದ್ದಾರೆ' ಎಂದು ವೈದ್ಯರು ಹೇಳಿದ್ದರು.39 ವರ್ಷದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಹಿಟ್ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಂಗೀತ ನಿರ್ದೇಶನದ ಜೊತೆಗೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಗುರುತಿಸಿಕೊಂಡಿದ್ದಾರೆ.ಇತ್ತೀಚೆಗೆ ತೆರೆಕಂಡ ದರ್ಶನ್ ಅಭಿನಯದ 'ಒಡೆಯ' ಸಿನಿಮಾಗೆ ಹಾಗೂ ಇನ್ನೇನು ತೆರೆ ಕಾಣಬೇಕಿರುವ 'ರಾಬರ್ಟ್' ಚಿತ್ರಕ್ಕೆ ಇವರೇ ಸಂಗೀತ ನಿರ್ದೇಶನ ಮಾಡಿದ್ದಾರೆ.
ನಿರ್ಮಾಪಕ -ವಿ ಕೆ ಮೋಹನ್
ಖ್ಯಾತ ನಿರ್ಮಾಪಕ, ಉದ್ಯಮಿ ವಿ ಕೆ ಮೋಹನ್ ಅವರು ಬೆಂಗಳೂರಿನ ಪೀಣ್ಯ ಬಳಿಯಿರುವ ತಮ್ಮದೇ ಹೋಟೆಲ್ ಒಂದರಲ್ಲಿ ಮಾರ್ಚ್ 22 ರಂದು ನೇಣಿಗೆ ಶರಣಾಗಿದ್ದರು .ದಿ| ಡಾ ರಾಜ್ ಕುಮಾರ್ ಕುಟುಂಬಕ್ಕೆ ಆತ್ಯಾಪ್ತರಾಗಿದ್ದ ಅವರು . ಹಲವು ಸಿನೆಮಾಗಳ ವಿತರಕರಾಗಿ ಹಾಗೂ ನಿರ್ಮಾಪಕರಾಗಿಯೂ ಕೆಲಸ ನಿರ್ವಹಿಸಿದ್ದರು.ವಿ.ಕೆ. ಮೋಹನ್ ಅಲಿಯಾಸ್ ಕಪಾಲಿ ಮೋಹನ್ ಅವರಿಗೆ 62 ವರ್ಷವಾಗಿತ್ತು . ಕುಂದಾಪುರ ಮೂಲದ ವಿ.ಕೆ.ಮೋಹನ್ ವಕ್ವಾಡಿ, ಮಹಾಲಕ್ಷ್ಮಿ ಲೇಔಟ್‌ನಲ್ಲಿ ಕುಟುಂಬದ ಜತೆ ವಾಸವಿದ್ದ ಅವರು, ಸಿನಿಮಾ ನಿರ್ಮಾಣ, ವಿತರಣೆ, ಫೈನಾನ್ಸ್ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರು.
ನಟಿ - ಶರ್ಮಿಳಾ ಮಾಂಡ್ರೆ
ಅದು ಏಪ್ರಿಲ್ 3 ರಂದು ಬೆಳಗ್ಗಿನ ಜಾವ ಮೂರು ಗಂಟೆ ಸುಮಾರಿಗೆ ಬೆಂಗಳೂರಿನ ವಸಂತ ನಗರ ಬಳಿಯ ರೈಲ್ವೆ ಪೋಲ್ಗೆ ಜಾಗ್ವಾರ್ ಕಾರು ಡಿಕ್ಕಿ ಹೊಡೆಯಿತು . ಕಾರಿನಲ್ಲಿ ಸ್ಯಾಂಡಲ್ವುಡ್ ನಟಿ ಶರ್ಮಿಳಾ ಮಾಂಡ್ರೆ ಜೊತೆಗೆ ಆಕೆಯ ಸ್ನೇಹಿತರು ಇದ್ದರು. ಅಪಘಾತದಲ್ಲಿ ಶರ್ಮಿಳಾ ಮಾಂಡ್ರೆ ಮುಖಕ್ಕೆ ಸಣ್ಣ-ಪುಟ್ಟ ಗಾಯಗಳಾಗಿತ್ತು ಬಿಟ್ಟರೇ ಅಪಾಯದಿಂದ ಪಾರಾಗಿದ್ದರು .2007ರಲ್ಲಿ "ಸಜನಿ" ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ನಂತರ ಕೃಷ್ಣ, ನವಗ್ರಹ, ಹೀಗೆ ಸುಮಾರು 19 ಸಿನೆಮಾಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.ಇದಲ್ಲದೆ ಇವರು ಕನ್ನಡ, ತೆಲುಗು, ಚಿತ್ರರಂಗದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಹಾಸ್ಯನಟ- ಬುಲೆಟ್ ಪ್ರಕಾಶ್
ಬುಲೆಟ್ ಪ್ರಕಾಶ್ ಕನ್ನಡದ ಜನಪ್ರಿಯ ಹಾಸ್ಯನಟರ ಪೈಕಿ ಗುರುತಿಸಿಕೊಂಡಿದ್ದ ಬುಲೆಟ್ ಪ್ರಕಾಶ್ ಅವರು ಬಹು ಅಂಗಾಂಗಗಳ ವೈಫಲ್ಯದಿಂದ ಏಪ್ರಿಲ್ 6 ರಂದು ಕೊನೆಯುಸಿರೆಳೆದಿದ್ದರು. ಅವರಿಗೆ ಕೇವಲ 44 ವರ್ಷ ವಯಸ್ಸು ಆಗಿತ್ತು . ಕಿಡ್ನಿ ವೈಫಲ್ಯ ಮತ್ತು ಸೋಂಕಿನಿಂದ ಬಳಲುತ್ತಿದ್ದ, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದಾಗಿ, ನಗರದ ಪೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು ರಾಯಲ್ ಎನ್ಫೀಲ್ಡ್ ಬುಲೆಟ್ ಬ೦ಡಿಯನ್ನು ಓಡಿಸುವುದರಿ೦ದ ಇವರಿಗೆ ಈ ಬುಲೆಟ್ ಎ೦ಬ ಹೆಸರು ಸೇರಿಕೊಂಡು ಬುಲೆಟ್ ಪ್ರಕಾಶ್ ಎಂಬುದಾಗಿತ್ತು. 2002ರ ಧ್ರುವ ಚಿತ್ರದಿಂದ ಆರಂಭಗೊಂಡ ಇವರ ಸಿನಿ ಜರ್ನಿ, ಪಾರ್ಥ, ಮಸ್ತ್ ಮಜಾ ಮಾಡಿ, ಐತಲಕಡಿ ಸೇರಿದಂತೆ ರಾಜಸಿಂಹದ ನಂತ್ರ ಮುಂದುವರೆದಿತ್ತು. 2015 ರಲ್ಲಿ, ಪ್ರಕಾಶ್ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದ ಅವರು, ಕನ್ನಡ ಅಷ್ಟೇ ಅಲ್ಲದೇ ಸೌಂತ್ ಇಂಡಿಯನ್ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್ ನಟ -ಇರ್ಫಾನ್ ಖಾನ್
ಬಾಲಿವುಡ್ ನಟ ಇರ್ಫಾನ್ ಖಾನ್ ಏಪ್ರಿಲ್ 29 ರಂದು ಬುಧವಾರ ಮುಂಬೈನಲ್ಲಿ ನಿಧನರಾದರು. 53 ವರ್ಷದ ಇರ್ಫಾನ್,ನ್ಯೂರೊಎಂಡ್ರೊಕ್ರೈನ್ ಟ್ಯೂಮರ್ ಎಂಬ ಅಪರೂಪದ ಕ್ಯಾನ್ಸರ್‌ನಿಂದ ಬಳಲಿದ್ದ ಇರ್ಫಾನ್ ಖಾನ್ ವಿದೇಶದಲ್ಲಿ ಚಿಕಿತ್ಸೆ ಪಡೆದಿದ್ದರು. ಮಂಗಳವಾರ ಇರ್ಫಾನ್ ತೀವ್ರ ಅನಾರೋಗ್ಯದಿಂದ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕೆತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದರು .ಮೊದಲಿಗೆ ಇರ್ಫಾನ್ ಖಾನ್ ಚಾಣಕ್ಯ, ಬನೇಗಿ ಅಪ್ನಿ ಬಾತ್, ಭಾರತ್ ಏಕ್ ಕೋಜ್ ಮತ್ತು ಚಂದ್ರಕಾಂತ್ ಟಿವಿ ಶೋಗಳಲ್ಲಿ ಕಾಣಿಸಿಕೊಂಡರು. ನಂತರ ಸಿನಿಮಾ ಕ್ಷೇತ್ರದತ್ತ ಮುಖ ಮಾಡಿದರು. ಲೈಫ್ ಇನ್ ಎ ಮೆಟ್ರೋ, ಪಾನ್ ಸಿಂಗ್ ತೋಮರ್, ಲೈಫ್ ಆಫ್ ಪೈ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂಗ್ರೇಜಿ ಮೀಡಿಯಂ ಅವರ ಕೊನೆಯ ಸಿನಿಮಾ.
ಬಾಲಿವುಡ್ ನಟ -ರಿಷಿ ಕಪೂರ್
ಇರ್ಫಾನ್ ಖಾನ್ ನನ್ನ ಕಳೆದು ಕೊಂಡು ಕಣ್ಣೀರು ಇಡುತ್ತಿದ್ದ ಬಾಲಿವುಡ್ ಗೆ ಕೇವಲ ದಿನದಾದ ಅಂತರದಲ್ಲಿ ಇನ್ನೊಂದು ಆಘಾತ ಬರಸಿಡಿಲಿನಂತೆ ಬಂದು ಒದಗಿತ್ತು . ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾದರು.67 ವರ್ಷದ ರಿಷಿಕಪೂರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಕುಟುಂಬದ ಕಾರ್ಯಕ್ರಮ ನಿಮಿತ್ತ ದಿಲ್ಲಿಗೆ ಹೋದಾಗ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆಗ ತಮಗೆ ಇನ್ಫೆಕ್ಷನ್ ಆಗಿತ್ತು ಎಂದು ತಿಳಿಸಿದ್ದರು. ಮುಂಬೈಗೆ ಮರಳಿದ ಬಳಿಕ ವೈರಲ್ ಜ್ವರದ ಕಾರಣ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿ ಬಹಳ ಬೇಗ ಬಿಡುಗಡೆಯಾಗಿದ್ದರು.ತಂದೆ ರಾಜ್ ಕಪೂರ್ ಅವರ 'ಮೇರಾ ನಾಮ್ ಜೋಕರ್' ಚಿತ್ರದಲ್ಲಿನ ಬಾಲನಟನೆಗಾಗಿ ರಿಷಿ ಕಪೂರ್ 1970ರಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಡಿಂಪಲ್ ಕಪಾಡಿಯಾ ಜೊತೆಗೆ ಲೀಡ್ ಆಗಿ 'ಬಾಬಿ' ಚಿತ್ರದಲ್ಲಿ ಕಾಣಿಸಿಕೊಂಡ ರಿಷಿಗೆ 1974ರಲ್ಲಿ ಉತ್ತಮ ನಟ ವಿಭಾಗದಲ್ಲಿ ಫಿಲ್ಮ್‌ಫೇರ್ ಅವಾರ್ಡ್ ಸಿಕ್ಕಿತ್ತು. 1973ರಿಂದ 2000ರವರೆಗೆ 92 ಸಿನಿಮಾಗಳಲ್ಲಿ ಲೀಡ್ ಆಗಿ ಕಾಣಿಸಿಕೊಂಡ ರಿಷಿ ಕಪೂರ್ ,ಅವುಗಳಲ್ಲಿ 32 ಹಿಟ್ ಸಿನಿಮಾ ನೀಡಿದ್ದರು. 'ದೊ ದೋನಿ ಚಾರ್', 'ಕಪೂರ್ & ಸನ್ಸ್' ಸಿನಿಮಾಗಳಿಗೆ ಫಿಲ್ಮ್‌ಫೇರ್ ಅವಾರ್ಡ್ ಪಡೆದಿದ್ದರು. ಇವರ ಪತ್ನಿ ನೀತು ಸಿಂಗ್ ಜೊತೆಗೆ 12 ಸಿನಿಮಾಗಳಲ್ಲಿ ನಟಿಸಿದ್ದರು.ಇವರನ್ನು ಕಳೆದು ಕೊಂಡ ಬಾಲಿವುಡ್ ಬಡವಾಗಿದೆ .
ಖ್ಯಾತ ಕವಿ- ಕೆ.ಎಸ್ ನಿಸಾರ್ ಅಹಮ್ಮದ್
ಖ್ಯಾತ ಕವಿ ಹಾಗೂ ಬರಹಗಾರ ಕೆ.ಎಸ್ ನಿಸಾರ್ ಅಹಮ್ಮದ್ ಮೇ 3 ರಂದು,ಭಾನುವಾರ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು . ನಿತ್ಯೋತ್ಸವ ಕವಿ ಎಂದೇ ಪ್ರಸಿದ್ದಗಳಿಸಿದ್ದ ನಿಸಾರ್ ಅಹಮ್ಮದ್ ಅತ್ಯುತ್ತಮ ಸಾಹಿತ್ಯ ಸಂಕಲನಗಳನ್ನು ಕನ್ನಡಕ್ಕೆ ನೀಡಿದರು. ಇತ್ತೀಚೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಭಾನುವಾರ ಪದ್ಮನಾಭನಗರದಲ್ಲಿರುವ ತಮ್ಮ ಸ್ವಗೃಹದಲ್ಲಿದ್ದ ಅವರು ಕೊನೆಯುಸಿರೆಳೆದಿದ್ದಾರೆ.ಕಳೆದ 15 ದಿನಗಳ ಹಿಂದಷ್ಟೇ ಅಮೆರಿಕದಲ್ಲಿದ್ದ ಅವರ ಪುತ್ರ ಕೂಡ ನಿಧನರಾಗಿದ್ದು, ಮಾನಸಿಕವಾಗಿ ಅವರು ತೀವ್ರ ಆಘಾತಕ್ಕೊಳಗಾಗಿದ್ದರು.ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಫೆಬ್ರುವರಿ 5,1936ರಲ್ಲಿ ಜನಿಸಿದರು. 1959ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1994ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದರು.ನಿಸಾರ್ ಅಹಮದ್ ಅವರ ಸಾಹಿತ್ಯಾಸಕ್ತಿ 10ನೇ ವಯಸ್ಸಿನಲ್ಲೇ ಆರಂಭ.'ಜಲಪಾತ'ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ (2018) 21 ಕವನ ಸಂಕಲನಗಳು, 14 ವೈಚಾರಿಕೆ ಕೃತಿಗಳು, 5 ಮಕ್ಕಳ ಸಾಹಿತ್ಯ ಕೃತಿಗಳು, 5 ಅನುವಾದ ಕೃತಿಗಳು, 13 ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ.ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ,ಮಾಸ್ತಿ ಪ್ರಶಸ್ತಿ ,ಪಂಪ ಪ್ರಶಸ್ತಿ,ಗೊರೋರು ಪ್ರಶಸ್ತಿಗಳು ದೊರೆತಿವೆ. ಇಷ್ಟೇ ಅಲ್ಲದೇ ಶಿವಮೊಗ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು. ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಇವರನ್ನೂ ಕೂಡಾ ಈ 2020 ಬಿಡಲೇ ಇಲ್ಲ
ಹಾಸ್ಯನಟ -ಮೈಕಲ್ ಮಧು
ಏಪ್ರಿಲ್ ಮುಗಿದು ಮೇ ತಿಂಗಳು ಆರಂಭವಾಗುತ್ತಿದ್ದಂತೆ ಇತ್ತ ಕನ್ನಡದ ಹಿರಿಯ ಹಾಸ್ಯನಟ ಮೈಕಲ್ ಮಧು ನಮ್ಮನ್ನು ಅಗಲಿದರು . ಅವರಿಗೆ 55 ವರ್ಷ ವಯಸ್ಸು ಆಗಿತ್ತು . ಮನೆಯಲ್ಲಿ ಕುಸಿದು ಬಿದ್ದ ನಟನನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ,ಮೇ 13 ರಂದು ಬುಧವಾರ ಬೆಂಗಳೂರಿನ ಕೆ.ಆರ್ ಆಸ್ಪತ್ರೆಯಲ್ಲಿ ನಿಧನರಾದರು .ಕಳೆದ ಎರಡೂವರೆ ದಶಕಗಳಿಂದ ಕನ್ನಡದ ಸುಮಾರು 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಮೈಕಲ್ ಮಧು ವಿವಿಧ ಹಾಸ್ಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು.ಮೈಕಲ್ ಮಧು ಅವರು ಓಂ, ಲವ್ ಟ್ರೇನಿಂಗ್ ಸ್ಕೂಲ್, ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು, ಪಾಪಿಗಳ ಲೋಕದಲ್ಲಿ, ಎಕೆ 47, ಎ, ಮಿನುಗು ತಾರೆ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಕಾಶಿನಾಥ್ ಅವರ ನಿರ್ದೇಶನದ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಮೈಕಲ್ ಮಧು,ಕೇವಲ ನಟ ಮಾತ್ರವಲ್ಲದೇ ,ನ್ರತ್ಯ ಸಂಯೋಜಕರು ಕೂಡಾ ಆಗಿದ್ದರು ಆದುದ್ದರಿಂದಲೇ ಅವರಿಗೆ ಮೈಕಲ್ ಎಂಬ ಹೆಸರು ಅಂಟಿ ಕೊಂಡಿತ್ತು.
ನಟಿ-ಮೆಬಿನಾ ಮೈಕಲ್
ಚಿತ್ರರಂಗಕ್ಕೆ ಇದೀಗ ಪಾದಾರ್ಪಣೆ ಮಾಡಿದ್ದ ಕೊಡಗಿನ ಯುವ ಪ್ರತಿಭೆ ನಮ್ಮನ್ನು ಬಿಟ್ಟು ಅಗಲಿದರು . ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ’ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಸೀಸನ್ 4 ವಿನ್ನರ್ ಮೆಬಿನಾ ಮೈಕಲ್ ಅವರು ಭೀಕರ ರಸ್ತೆ ಅಪಘಾತದಲ್ಲಿ ಮೇ 26 ಮಂಗಳವಾರ ದಂದು ಸಂಜೆ ಮೃತಪಟ್ಟಿರು .ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ದೇವಿಹಳ್ಳಿ ರಾಷ್ಟೀಯ ಹೆದ್ದಾರಿ 75ರಲ್ಲಿ ಸಂಜೆ ಸುಮಾರು 4.30ರ ಸಮಯದಲ್ಲಿ ಅಪಘಾತ ಸಂಭವಿಸಿತ್ತು . ಟ್ರಾಕ್ಟರ್-ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿತ್ತು ಬೆಂಗಳೂರಿನಿಂದ ಸೋಮವಾರಪೇಟೆಗೆ ತಮ್ಮ ನಿವಾಸಕ್ಕೆ ಕಾರಿನಲ್ಲಿ ಮೇಬಿನಾ ಮೂವರ ಜೊತೆ ತೆರಳುತ್ತಿದ್ದರು. ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟ ಮೆಬಿನಾ, ಪ್ರತಿಯೊಂದು ಟಾಸ್ಕನ್ನೂ ಚೆನ್ನಾಗಿ ನಿಭಾಯಿಸುತ್ತಿದ್ದರು. ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ದಾಟಿದ್ದ ಆಕೆ ವಿಜೇತೆಯಾಗಿದ್ದರು. ರಿಯಾಲಿಟಿ ಶೋ ಬಳಿಕ ಮಾಡೆಲಿಂಗ್ನತ್ತ ಮುಖ ಮಾಡಿದ್ದ ಮೆಬಿನಾ ಅಲ್ಲೂ ಕೂಡಾ ಯಶಸ್ಸು ಗಳಿಸಿದ್ದರು.ತಮಿಳು ಚಿತ್ರ ಒಂದರಲ್ಲಿ ನಟಿಸುತ್ತಿದ್ದರು ,ಕನ್ನಡಲ್ಲೂ ಎರಡು ಸಿನಿಮಾಗಳಿಗೆ ಅವಕಾಶ ಪಡೆದಿದ್ದರು .
ನಟಿ- ಚಂದನಾ
ಇತ್ತ ನಗರದ ತಾವರೆಕೆರೆಯಲ್ಲಿ ನಟಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆಯಿತು ತಾವರೆಕೆರೆಯ ಕೃಷ್ಣಮೂರ್ತಿ ಲೇಔಟಿನ ನಿವಾಸಿ ಚಂದನಾ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು .ವಿಷ ಸೇವಿಸಿದ್ದ ಚಂದನಾರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತರಾಗಿದ್ದಾರೆ.29 ವರ್ಷದ ಚಂದನಾ ,ಕನ್ನಡ ಕಿರುತೆರೆ, ಜಾಹೀರಾತು, ಚಲನಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಮೇ 30 ರಂದು ವಿಷ ಸೇವನೆಯ ಸೆಲ್ಫಿ ವಿಡಿಯೋ ಮಾಡಿರುವ ಚಂದನಾ ಅವರು ತಮ್ಮ ಪ್ರಿಯಕರ ದಿನೇಶ್ ಎಂಬುವರ ಮೇಲೆ ಆರೋಪ ಮಾಡಿದ್ದಾರೆ.ತಾವರಕೆರೆ ಮುಖ್ಯರಸ್ತೆಯ ಕೃಷ್ಣಮೂರ್ತಿ ಲೇಔಟ್‌ನಲ್ಲಿರುವ ಮನೆಯಲ್ಲಿ ವಾಸವಿದ್ದ ಚಂದನಾ, ಲೈವ್ ವಿಡಿಯೊ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದರು.
ಸಂಗೀತ ನಿರ್ದೇಶಕ- ವಾಜಿದ್ ಖಾನ್
ಜೂನ್ ಮೊದಲ ದಿನವೇ ಬಾಲಿವುಡ್ಗೆ ಮತ್ತೊಂದು ಆಘಾತಕಾರಿ ಸುದ್ದಿ ಕಾದಿತ್ತು. ದಬಂಗ್ ಖ್ಯಾತಿಯ ಸಂಗೀತ ನಿರ್ದೇಶಕ ವಾಜಿದ್ ಖಾನ್ ಕಿಡ್ನಿ ವೈಫಲ್ಯದಿಂದ 42ನೇ ವಯಸ್ಸಿನಲ್ಲೇ ಕೊನೆಯುಸಿರೆಳೆದರು. ವಾಜಿದ್ ಖಾನ್. ಸಾಜಿದ್ – ವಾಜಿದ್ ಜೋಡಿ ಅಂತಲೇ ಬಾಲಿವುಡ್ನಲ್ಲಿ ಹೆಸರು ಮಾಡಿದ್ದ ಸಹೋದರರು. 1998ರಲ್ಲಿ ಸಲ್ಮಾನ್ ಖಾನ್ ಅವರ ‘ಪ್ಯಾರ್ ಕಿಯಾ ತೋ ಡರ್ನಾ ಕ್ಯಾ’ ಸಿನಿಮಾದಿಂದ ಸಂಗೀತ ನಿರ್ದೇಶಕರಾಗಿ ಎಂಟ್ರಿ ಕೊಟ್ಟ ಈ ಜೋಡಿ ಮತ್ತೆ ಹಿಂದಿರುಗಿ ನೋಡಿರಲಿಲ್ಲ. ಆ ಬಳಿಕ 22 ವರ್ಷಗಳ ಸಂಗೀತಪಯಣದಲ್ಲಿ 50ಕ್ಕೂ ಹೆಚ್ಚು ಹಿಟ್, ಸೂಪರ್ಹಿಟ್ ಸಿನಿಮಾಗಳಿಗೆ ಹಲವು ಚಾರ್ಟ್ಬಸ್ಟರ್ ಸಂಗೀತ ನೀಡಿದ್ದರು. ಅದರಲ್ಲೂ ಸಲ್ಮಾನ್ ಖಾನ್ರ ಅಚ್ಚುಮೆಚ್ಚಿನ ಸಂಗೀತ ನಿರ್ದೇಶಕರಾಗಿದ್ದ ಈ ಜೋಡಿ, ‘ದಬಾಂಗ್’, ‘ಹಲೋ’, ‘ವೀರ್’, ‘ಪಾರ್ಟನರ್’, ‘ವಾಂಟೆಡ್’ , ‘ಏಕ್ ಥಾ ಟೈಗರ್’ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಗೀತ ನೀಡಿ ಸೈ ಎನಿಸಿಕೊಂಡಿದ್ದರು. ಅವರು ಸಂಗೀತ ನೀಡಿದ ಕೊನೆಯ ಸಿನಿಮಾ ಕೂಡ ಸಲ್ಮಾನ್ ಖಾನ್ ನಾಯಕರಾಗಿದ್ದ ‘ದಬಾಂಗ್ 3’.ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವಾಜಿದ್ ಖಾನ್, ಅವರನ್ನು ಕೆಲ ದಿನಗಳ ಹಿಂದೆ ಚೆಂಬೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸಮಸ್ಯೆ ಉಲ್ಬಣಗೊಂಡ ಪರಿಣಾಮ ನಾಲ್ಕು ದಿನಗಳಿಂದ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಸೋಮವಾರ ಬೆಳಗಿನ ಜಾವ ಅವರು ಚಿಕಿತ್ಸೆಗೆ ಸ್ಪಂದಿಸದೆ ವಿಧಿವಶರಾಗಿದ್ದಾರೆ. ಲಾಕ್ಡೌನ್ ಮುಗಿದು ಇನ್ನೇನು ಚಿತ್ರೀಕರಣ ಪ್ರಾರಂಭವಾಗುತ್ತೆ ಅಂತ ಎದುರು ನೋಡುತ್ತಿದ್ದ ಬಾಲಿವುಡ್ ಮಂದಿ ಮತ್ತೆ ಕಣ್ಣೀರಾಗಿದ್ದಾರೆ.
ನಟ -ಚಿರಂಜೀವಿ ಸರ್ಜಾ
ಅದು ಭಾನುವಾರ ಜೂನ್ 7 ರಂದು ಮಧ್ಯಾಹ್ನ ಯುವ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾದರು ಎಂಬ ಸುದ್ದಿಯನ್ನು ಕೇಳಿ ಇಡೀ ಸ್ಯಾಂಡಲ್ವುಡ್ನ್ನು ಅಕ್ಷರಶಃ ಬೆಚ್ಚಿ ಬೀಳಿಸಿತ್ತು. ಇನ್ನೇನು ಚಿತ್ರರಂಗದಲ್ಲಿ ಹೊಸ ಸಾಧನೆ ಮಾಡಲು ಹೊರಟ್ಟಿದ್ದ ಚಿರು 39ನೇ ವಯಸ್ಸಿನಲ್ಲೇ ತಮ್ಮೆಲ್ಲಾ ಕನಸುಗಳನ್ನು ಬಿಟ್ಟು ಗುಡ್ ಬೈ ಹೇಳಿದ್ದರು. ಮದ್ಯಾಹ್ನ 2 ಗಂಟೆಗೆ ಸುಮಾರಿಗೆ ಕುಟುಂಬದೊಟ್ಟಿಗೆ ಊಟ ಮಾಡುತ್ತಿರುವಾಗ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಚಿರಂಜೀವಿ ಸರ್ಜಾ ಅವರನ್ನು ಜಯನಗರದ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು . ಆದರೆ, ಆಸ್ಪತ್ರೆಗೆ ಕರೆತಂದು ಕೆಲವೇ ನಿಮಿಷದಲ್ಲಿ ಚಿರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಚಿರಂಜೀವಿ ಸರ್ಜಾ ನಟಿ ಮೇಘನಾ ರಾಜ್ ಅವರ ಜೊತೆ 2017ರಲ್ಲಿ ನಿಶ್ವಿತಾರ್ಥ ಮಾಡಿಕೊಂಡಿದ್ದರು. 2018ರಲ್ಲಿ ವಿವಾಹವಾಗಿದ್ದರು. ಇದಾದ ಎರಡೇ ವರ್ಷದಲ್ಲಿ ಅವರು ಮೃತಪಟ್ಟಿದ್ದಾರೆ.ಅವರ ಸಾವಿಗೆ ಇಡೀ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದ್ದಾರೆ. 2009ರಲ್ಲಿ ತೆರೆಕಂಡ ವಾಯುಪುತ್ರ ಸಿನಿಮಾ ಮೂಲಕ ಚಿರಂಜೀವಿ ಸರ್ಜಾ ಬಣ್ಣದ ಬದುಕಿಗೆ ಕಾಲಿಟ್ಟಿದ್ದರು. ದಂಡಂ ದಶಗುಣಂ, ವರದ ನಾಯಕ, ಸಿಂಗ ಸೇರಿ ಸುಮಾರು 22 ಸಿನಿಮಾಗಳಲ್ಲಿ ನಟಿಸಿದ್ದರು.1980 ರಂದು ಆಕ್ಟೋಬರ್ 17ರಂದು ಬೆಂಗಳೂರಿನಲ್ಲಿ ಕಲಾವಿದರ ಕುಟುಂಬದಲ್ಲಿ ಜನಿಸಿದ್ದ ಚಿರಂಜೀವಿ ಸರ್ಜಾ, ವಾಯು ಪುತ್ರ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದರು. ಚಿಕ್ಕ ವಯಸ್ಸಿನಲ್ಲಿ ಚಿರಂಜೀವಿ ಸರ್ಜಾ ನಿಧನರಾಗಿರುವುದು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.
ನಿರ್ಮಾಪಕ- ಅನಿಲ್ ಸೂರಿ
ಜೂನ್ 3 ಬುಧವಾರ ದಂದು ಇನ್ನೊಂದು ಸ್ಯಾಡ್ ನ್ಯೂಸ್ ಬಂದಿತ್ತು . ಕೊರೋನಾ ಸೋಂಕಿಗೆ ಬಾಲಿವುಡ್ ನ ಹಿರಿಯ ನಿರ್ಮಾಪಕ ಅನಿಲ್ ಸೂರಿ ಸಾವನ್ನಪ್ಪಿದ್ದರು ಎಂದು .ಅವರಿಗೆ 77 ವರ್ಷ ವಯಸ್ಸಾಗಿತ್ತು . ಅನಿಲ್ ಸೂರಿ ಅವರಿಗೆ ಕಳೆದ ಜೂನ್ 2ರಂದು ಜ್ವರ ಕಾಣಿಸಿಕೊಂಡಿತು. ಮರು ದಿನ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಮುಂಬೈನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಅಂತೆ . ವೈದ್ಯಕೀಯ ತಪಾಸಣೆಯ ವೇಳೆ ಅವರಿಗೆ ಕೊರೊನಾ ತಗುಲಿರುವುದು ಪತ್ತೆಯಾಯಿತು. ಆದರೆ ಸಂಜೆ 7 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದರು ಎಂದು ತಿಳಿದು ಬಂದಿದೆ. ಅನಿಲ್ ಸೂರಿ ಅವರು ಕರ್ಮಯೋಗಿ, ರಾಜ್ ತಿಲಕ್ ನಂತಹ ಹೆಸರಾಂತ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.
ರಾಜಕೀಯ ಮುಖಂಡ -ಆಸ್ಕರ್ ಫೆರ್ನಾಂಡಿಸ್
ಹಿರಿಯ ಕಾಂಗ್ರೆಸ್ ಮುಖಂಡ, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಜೂನ್ 10 ರಂದು ಅನಾರೋಗ್ಯದ ನಿಮಿತ್ತ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 79 ವರ್ಷ ಪ್ರಾಯದ ಆಸ್ಕರ್ ಫರ್ನಾಂಡಿಸ್ ಅವರು ಎದೆ ನೋವು ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ನಗರದ ಕೊಡಿಯಾಲಬೈಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿಲಾಗುತ್ತಿದೆ.ಹಿರಿಯ ಕಾಂಗ್ರೆಸ್ ಮುಖಂಡ ಎದೆ ನೋವು ಮತ್ತು ಕಿಡ್ನಿ ಸಮಸ್ಯೆಯಿಂದ ಅವರು ಬಳಲುತ್ತಿದ್ದರೂ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.ಉಡುಪಿ ಮೂಲದವರಾದ ಆಸ್ಕರ್ ಫರ್ನಾಂಡಿಸ್ ಅವರು ಉಡುಪಿ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.ಅವರು ಆದಷ್ಟು ಬೇಗ ಚೇತರಿಕೆ ಕಂಡು ತಮ್ಮ ನಿವಾಸಕ್ಕೆ ಬರಲಿ ಎಂದು ಆಶಿಸೋಣ
ನ್ಯಾಯವಾದಿ- ಎಂ.ಸಿ.ನರಸಿಂಹನ್
ಹೈಕೋರ್ಟ್ ನ ಪ್ರಸಿದ್ಧ ಕಾರ್ಮಿಕ ನ್ಯಾಯವಾದಿ, ಕಮ್ಯುನಿಸ್ಟ್ ಪಕ್ಷದ ನಾಯಕರಾಗಿದ್ದ ಮಾಜಿ ಶಾಸಕ ಎಂ.ಸಿ.ನರಸಿಂಹನ್ ಜೂನ್ 10 ರಂದು ಬುಧವಾರ ಸಂಜೆ 5 ಗಂಟೆಗೆ ಬಸವೇಶ್ವರ ನಗರದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು . ಅವರಿಗೆ 98 ವರ್ಷ ವಯಸ್ಸು ಆಗಿತ್ತು ಹೈಕೋರ್ಟ್ ನ ಹಿರಿಯ ವಕೀಲರೂ ಮಾಜಿ ಶಾಸಕರು ಹಾಗೂ ಎಐಟಿಯುಸಿ ರಾಜ್ಯ ಸಮಿತಿ ಪೋಷಕರಾಗಿದ್ದ.ನರಸಿಂಹನ್ ಅವರು ಕಾರ್ಮಿಕ ವಿವಾದಗಳ ಬಗೆಗಿನ ಪ್ರಕರಣಗಳ ವಾದ ಮಂಡನೆಯಲ್ಲಿ ಹೆಸರಾಂತ ವಕೀಲರಾಗಿದ್ದರು.ರಾಜ್ಯದ ಕಮ್ಯುನಿಸ್ಟ್ ಚಳವಳಿಯ ಹಿರಿಯ ಮುಖಂಡರು ಮತ್ತು ಕಾರ್ಮಿಕ ನಾಯಕರೂ ಆಗಿದ್ದ ನರಸಿಂಹನ್ ಅವರು 1957ರಿಂದ 1962ರವರೆಗೆ ಕೆಜಿಎಫ್ ವಿಧಾನಸಭಾ ಕ್ಷೇತ್ರದಿಂದ ಸಿಪಿಐ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಅಂತೆಯೇ, 1962ರಿಂದ 1967ರವರೆಗೆ ವಿಧಾನ ಸಭೆಯಿಂದ ಪರಿಷತ್ ಗೆ ಆಯ್ಕೆಯಾಗಿದ್ದರು.ಕಾರ್ಮಿಕರ ಕನಿಷ್ಠ ವೇತನ ಕಾಯ್ದೆ ಸೇರಿದಂತೆ ದುಡಿಯುವ ವರ್ಗದ ಜನರ ಕಲ್ಯಾಣಕ್ಕೆ ಉಪಯೋಗವಾಗುವಂತಹ ಹಲವು ಕಾನೂನುಗಳು ರೂಪುಗೊಳ್ಳಲು ನರಸಿಂಹನ್ ಕಾರಣರಾಗಿದ್ದರು. 1957ರಲ್ಲಿ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಕೆಜಿಎಫ್ ಕ್ಷೇತ್ರದಿಂದ ಮೈಸೂರು ವಿಧಾನಸಭೆಗೆ ಚುನಾಯಿತರಾದರು. 1962ರ ಚೀನಾ ಮಹಾಯುದ್ಧದ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದ ಅವರು 1962ರಿಂದ 1967ರವರೆಗೂ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು.ಶಾಸನ ಸಭೆಗಳಲ್ಲಿ ದುಡಿಯುವ ಜನರ ಧ್ವನಿಯಾಗಿದ್ದ ಅವರು ರೈತ-ಕಾರ್ಮಿಕರ ಹಿತಾಸಕ್ತಿಯನ್ನು ಪರಿಣಾಮಕಾರಿಯಾಗಿ ಪ್ರತಿನಿಧಿಸಿದ್ದರು. .ಕಾರ್ಮಿಕರ ಧ್ವನಿ ಕ್ಷೀಣವಾಗಿರುವ ಇಂದಿನ ದಿನಗಳಲ್ಲಿ ಎಂ.ಸಿ.ಎನ್ ಅವರಂತಹ ಕಾರ್ಮಿಕ ವರ್ಗದ ಪಕ್ಷಪಾತಿಯ ನಿಧನದಿಂದ ಕಾರ್ಮಿಕ ವರ್ಗ ಇನ್ನಷ್ಟು ಬಡವಾಗಿದೆ.
ಬಾಲಿವುಡ್- ನಟ ಸುಶಾಂತ್ ಸಿಂಗ್ ರಜಪೂತ್
ಪ್ರಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 14ರ ಶುಕ್ರವಾರ ದಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಂದ್ರಾದಲ್ಲಿನ ತಮ್ಮ ನಿವಾಸದಲ್ಲಿಂದು ಆತ್ಮಹತ್ಯೆ ಮಾಡಿಕೊಂಡಿದ್ದರು. 34 ವರ್ಷದ ಸುಶಾಂತ್ ಈ ಕೃತ್ಯ ಮಧ್ಯಾಹ್ನ 1.30ರ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು ,'ಪವಿತ್ರ ರಿಶ್ತಾ' ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. '' ಕಾಯ್ ಪೋ ಚೇ' ಸಿನಿಮಾ ಮೂಲಕ ಮೊದಲ ಬಾರಿಗೆ ಬಾಲಿವುಡ್ ಪ್ರವೇಶಿಸಿದ್ದ ಸುಶಾಂತ್ ಸಿಂಗ್, 11 ಚಿತ್ರಗಳಲ್ಲಿ ನಟಿಸಿದ್ದು, ಫಿಲಂ ಫೇರ್ ಪ್ರಶಸ್ತಿಗೂ ಭಾಜನರಾಗಿದ್ದರು.ಅವರು ನಟಿಸಿದ್ದ 'ಶುದ್ಧ್ ದೇಶಿ ರೊಮ್ಯಾನ್ಸ್' ಸಿನಿಮಾದ ನಟನೆ ಮೆಚ್ಚುಗೆಗೆ ಪಾತ್ರವಾಗಿತ್ತು. ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜೀವನಾಧಾರಿತ ಚಿತ್ರ ಸುಶಾಂತ್ ಸಿಂಗ್ ಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತ್ತು.'ಕಿಸ್ ದೇಸ್ ಮೇ ಮೇರಾ ದಿಲ್' ಧಾರಾವಾಹಿ ಮೂಲಕ ಗುರುತಿಸಿಕೊಂಡಿದ್ದ ಸುಶಾಂತ್‍ಗೆ 'ಪವಿತ್ರ ರಿಶ್ತೆ' ಧಾರಾವಾಹಿ ಟೆಲಿವಿಷನ್ ಸ್ಟಾರ್ ವ್ಯಾಲ್ಯೂ ನೀಡಿತ್ತು.ಇವರ ಪ್ರತಿಭೆ ಮತ್ತು ಸಾಮರ್ಥ್ಯ ಗುರುತಿಸಿದ ಬಾಲಿವುಡ್ ಇವರನ್ನು ಕೈ ಬೀಸಿ ಕರೆಯಿತು. 'ಡಿಟೆಕ್ಟಿವ್ ಬ್ಯೂಮ್ ಕೇಶ್ ಭಕ್ಷಿ' ,' ರಭಟಾ', 'ಸಂಚಾರಿಯಾ', 'ಚಿಚ್ಚೋರೆ ಮೊದಲಾದ ಹಲವು ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ನಟಿಸಿ ಮನೋಜ್ಞ ಅಭಿನಯದ ಮೂಲಕ ರಂಜಿಸಿದ ಸುರದ್ರೂಪಿ ನಟ ರಜಪುತ್ ಚಿತ್ರ ರಸಿಕರನ್ನು ತಮ್ಮ ಅಗಾಧ ಪ್ರತಿಭೆಯಿಂದ ರಂಜಿಸಿದರು.ಇಂದು ಅತ್ಯುತ್ತಮ ಟೆಲಿವಿಷನ್ ನಟ , ಸ್ಕ್ರೀನ್ ಪ್ರಶಸ್ತಿ, ಜೀ ಅವಾಡ್ರ್ಸ್, ಮೆಲ್ಬೋರ್ನ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳಿಗೆ ಪಾತ್ರರಾಗಿದ್ದ ಸುಶಾಂತ್ ,ನಟನೆ ಅಲ್ಲದೆ ಅದ್ಭುತ ನೃತ್ಯ ಪಟುವೂ ಆಗಿದ್ದರು. ಅವರದೇ ಆದ ನವೋದ್ಯಮವನ್ನು ಸ್ಥಾಪಿಸಿ ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದರು.
ಇದು ಸಾವು ನೋವು ಅನುಭವಿಸಿದ ಸೆಲೆಬ್ರಿಟಿಗಳ ಸಣ್ಣ ನೋಟವಾಗಿದೆ, ನಾವುಗಳು ದಿನನಿತ್ಯ ಇವರ ಬಗ್ಗೆ ಕಂಡು ಕೇಳಿ ತಿಳಿದು ಕೊಂಡಿದ್ದೇವೆ.ಸಾಕಷ್ಟು ಇವರುಗಳ ಸಿನಿಮಾಗಳನ್ನು ನೋಡಿದ್ದೇವೆ .ಅವರುಗಳು ಹೇಗೋ ನಮಗೆ ಅತೀ ಆಪ್ತರೆನ್ನಿಸಿ ಬಿಡುತ್ತಾರೆ. ಏನೇ ಇರಲಿ ಸಾವಿನ ದವಡೆಯನ್ನು ಸ್ಪರ್ಶಿಸಿ ಬಂದವರು,ಅತೀ ಚಿಕ್ಕ ಪ್ರಾಯದಲ್ಲೇ ಇಹಲೋಕ ತ್ಯಜಿಸಿದವರನ್ನು ಕಂಡರೆ ನಿಜಕ್ಕೂ ದುಃಖವಾಗುತ್ತದೆ,ಆವರೆಲ್ಲರಿಗೂ ಶಾಂತಿ ದೊರಕಲಿ ಇನ್ನು ಉಳಿದಿರುವ 2020 ಅರ್ಧ ವರ್ಷದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಿರಲಿ ಎಂಬ ಆಶಯ ನಮ್ಮೆಲ್ಲರದ್ದು ಆಗಿರಲಿ .
.
ಶನಿವಾರ, ಜೂನ್ 13, 2020
ಕಾಲ ಮಿತಿಗೆ ಇಳಿದ ಯಕ್ಷಗಾನ ಮೇಳಗಳು
ಹೌದು !ಕಾಲಕ್ಕೆ ತಕ್ಕಂತೆ ಕೋಲ ಎಂಬ ಆಡು ನುಡಿ ನಮ್ಮಲಿದೆ . ಎಲ್ಲವೂ ಕಾಲದ ಮಹಿಮೆ .ಕಾಲಾಯ ತಸಂಹೀ ನಮಃ ಎಂದು ಅದಕ್ಕೆ ಹೇಳುದೇನೋ ?ಗಂಡು ಕಲೆ ಯಕ್ಷಗಾನ ಕರಾವಳಿ ಕರ್ನಾಟಕದ ಜನಪ್ರೀಯ ಜಾನಪದದ ರಂಗ ಭೂಮಿ ರೂಪ ,ಧಾರ್ಮಿಕ ಕಲೆ ,ನವ ರಸವನ್ನು ಒಂದೇ ವೇದಿಕೆಯಡಿಯಲ್ಲಿ ತಂದು ಜನಮನವನ್ನು ಯಥೇಚ್ಛವಾಗಿ ತಣಿಸುವ ಅಭೂತ ಪೂರ್ವ ಕಲಾಪ್ರಕಾರ, ಭಕ್ತಿ ,ಭಾವವನ್ನು ಮೆರೆಯುವ ದೇವತಾರಾಧನೆ ಕಲೆ. ಚೆಂದದ ವೇದಿಕೆ,ನೃತ್ಯ, ಮಾತುಗಾರಿಗೆ ,ಹಾಡುಗಾರಿಕೆ ,ವೇಷ -ಭೂಷಣ, ಚಂಡೆ -ಮದ್ದಳೆ ಶ್ರುತಿಯ ನಿನಾದ ಇವೆಲ್ಲವನ್ನೂ ಒಂದೇ ಸೂರಿನಡಿ ಕಟ್ -ಕಾಪಿ -ಪೇಸ್ಟ್ ಇಲ್ಲದೇ ನೇರವಾಗಿ ಕಾಣಸಿಗುವ ಏಕೈಕ ಕಲೆ ಅದು ಯಕ್ಷಗಾನ .ಇದರಲ್ಲಿ ತೆಂಕು ಮತ್ತು ಬಡಗು ತಿಟ್ಟು ಎಂಬ ಎರಡು ವಿಧಗಳಿವೆ. ಬಡ ಬೆಡಗು ಎಂದು ಇನ್ನೊಂದು ವಿಧ ವಿದ್ದರೂ ,ಅದು ಬಡಗು ತಿಟ್ಟು ಮಾದರಿ.ಯಕ್ಷಗಾನದ ಪದ್ಧತಿ ಒಂದೇಯಾದರೂ , ತುಸು ಪರಿ ಮಾತ್ರ ಬೇರೆ. ಇತ್ತೀಚಿಗೆ ಜನಪ್ರೀಯತೆ ಗೊಳ್ಳುತ್ತಿರುವ ತಾಳ ಮದ್ದಳೆ ಕೂಡಾ ಯಕ್ಷಗಾನದ ಇನ್ನೊಂದು ಭಾಗ ,ಮಗ್ಗುಲು .ಇನ್ನು ಯಕ್ಷಗಾನದ ಮೇಳಗಳಲ್ಲಿ ಎರಡು ವಿಧವಿದೆ.ಬಯಲಾಟ ಮೇಳ ,ಮತ್ತು ಡೇರೆ (ಟೆಂಟ್)ಮೇಳ . ಬಯಲಾಟ ಎಂದರೆ ದೇವಸ್ಥಾನದ ವತಿಯಿಂದ ನಡೆಯಲ್ಪಡುವ ಸೇವಾದರ ಹರಕೆಗನುಗುಣವಾಗಿ ನಡೆಯುವ ಯಕ್ಷಗಾನ ಮೇಳವಾದರೇ, ಅಲ್ಲಲ್ಲಿ ಡೇರೆ ಇಟ್ಟು ನಿರ್ದಿಷ್ಟ ಟಿಕೆಟ್ ನೊಂದಿಗೆ ಆಡುವ ಆಟಕ್ಕೆ ಡೇರೆ ಮೇಳ ಎಂದು ಕರೆಯಲಾಗುತ್ತದೆ .ಹೆಚ್ಚಾಗಿ ಹರಕೆ ಆಟಗಳೇ ಅಧಿಕ ಪ್ರಾಮಾಣದಲ್ಲಿರುವುದರಿಂದ ಬಯಲಾಟಗಳೇ ಹೆಚ್ಚು ಕಾಣಸಿಗುತ್ತದೆ. ಆಧುನಿಕ ವೈಜ್ಞಾನಿಕ ತಂತ್ರಜ್ಞಾನಗಳ ನಡುವೆ ಇಂದಿಗೂ ಸಹಾ ಯಕ್ಷಗಾನ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ ಎಂದರೆ ಅದಕ್ಕೆ ಯಕ್ಷಗಾನ ಪ್ರೀಯರ ಪ್ರೋತ್ಸಾಹ ,ಧಾರ್ಮಿಕತೆಯಲ್ಲಿನ ನಂಬಿಕೆಯೇ ಪ್ರಧಾನ ಅಂಶವೆನ್ನಲು ಅಡ್ಡಿಯಿಲ್ಲ .ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ ದಿನದಿಂದ ದಿನಕ್ಕೆ ಒಂದೊಂದು ಕ್ಷೇತ್ರ ದಿಂದ ಹುಟ್ಟಿಕೊಳ್ಳುತ್ತಿರುವ ಯಕ್ಷಗಾನ ಮೇಳಗಳೇ ಸಾಕ್ಷಿ.ಏನೇ ಇರಲಿ, ಆದರೆ ಬೇಸರದ ವಿಚಾರವೆಂದರೆ ಹೆಚ್ಚಿನ ಯಕ್ಷಗಾನ ಮೇಳಗಳು ಕಾಲ ಮಿತಿಗೆ ಸೀಮಿತವಾಗಿರುವುದು. ಸಂಜೆ 7 ಗಂಟೆಯಿಂದ ರಾತ್ರಿ 12ರ ಒಳಗೆ ಕಥಾಪ್ರಸಂಗವನ್ನು ಪೂರ್ಣಗೊಳಿಸಿ ಪೆಟ್ಟಿಗೆಯನ್ನು ಕಟ್ಟುವ ಪದ್ಧತಿ ಜಾರಿಯಲ್ಲಿದೆ.ಆರಂಭದಲ್ಲಿ ಒಂದೆರಡು ಮೇಳಗಳಿದ್ದೂ ,ತದನಂತರ ಅದರ ಅಂಕೆ ಸಂಖ್ಯೆ ವ್ರದ್ದಿಸುತ್ತಾ ಹೋಗುತ್ತಿದೆ.ಇದು ಹಲವರಿಗೆ ಅರಗಿಸಿಕೊಳ್ಳಲಾರದ ವಿಚಾರವೆಂದರೂ, ಅತಿಶೋಯೋಕ್ತಿಯಾಗಲಾರದು. ಬೆಳಿಗ್ಗೆ ತನಕ ನಿದ್ರೆ ಬಿಟ್ಟು ನೋಡುವವರ ಸಂಖ್ಯೆ ಕುಂಠಿತಗೊಂಡಿದೆ .,ಈಗೇನಿದ್ದರೂ ಜನರು ಪಾಸ್ಟ್ ಬದುಕಿಗೆ ಹೊಂದಿಕೊಂಡಿದ್ದಾರೆ.ಎಲ್ಲವೂ ಬೇಗ ಬೇಕು.,ವೇಗದ ಜಿಂದಗಿಯಲ್ಲಿ ಮನೋರಂಜನಾತ್ಮಕವಾಗಿಯೂ ,ಸಹಾ ಜನತೆ ಅದನ್ನೇ ಬಯಸುವುದರಿಂದ ವೀಕ್ಷಕರ ಕೊರತೆ ನಿವಾರಣೆಗೆ ಕಾಲ ಮಿತಿ ಮಾಡದ ವಿಧಿಯಿಲ್ಲ.,ಆಟ ಆಡಿಸುವ ಮನೆಯ ನಾಲ್ಕು ಮಂದಿ ಮತ್ತು ಕಲಾವಿದರುಗಳೇ ಬಿಟ್ಟರೇ ,ಪ್ರೇಕ್ಷಕರ ಸಂಖ್ಯೆ ಬೆರಳಣಿಕೆಷ್ಟು ಎಂಬುದು ಸತ್ಯಕ್ಕೆ ಅರ್ಹವಾದರೂ ,ಸುಮಾರು 5-6 ಶತಮಾನಗಳ ಇತಿಹಾಸ ಇರುವ ಯಕ್ಷಗಾನ ಕಲೆಗೆ ಭಂಗ ತರುವುದು , ಹೀಗೆ ತುಂಡರಿಸುವುದು ಎಷ್ಟು ಸಮಂಜಸ ? ಕಥೆಗಳಲ್ಲಿ ಕಟ್ ,ಕೆಲವು ಪಾತ್ರಗಳ ಪ್ರವೇಶವೂ ಇಲ್ಲ.ಸ್ವಷ್ಟ ,ಸ್ವಚ್ಛ ,ಶುದ್ಧ ಸಂಭಾಷಣೆ, ಚಂಡೆ-ಮದ್ದಳೆಯೊಂದಿಗಿನ ನಿನಾದದ ನೃತ್ಯ ,ಭಾಗವತಿಕೆ ಪದಗಳೇ ಪೂರ್ಣ ಯಕ್ಷಗಾನದ ಜೀವಾಳ., ಅದೇ ಇಲ್ಲ ಅಂದ ಮೇಲೆ ಯಕ್ಷಗಾನ ನೋಡುವುದಾದರೇ, ಅದು ಯಕ್ಷಗಾನ ಅಲ್ಲವೇ ಅಲ್ಲ ಅನ್ನುವ ಕಟು ಭಾವನೆ ಮನಸ್ಸಿನಲ್ಲಿ ಪುಟಿದೇಳುತ್ತದೆ. ಎಲ್ಲಾ ವಿಚಾರದಲ್ಲೂ ,ಕಾಲಕ್ಕೆ ಹೊಂದಿಕೊಂಡು ಬಾಳುವುದು ಸರಿಯಲ್ಲ .ಯಕ್ಷಗಾನವೆಂದರೆ ಪರಂಪರೆಯ ಕಲೆ .ಇದೀಗ ಕಾಲ ಮಿತಿಯಲ್ಲಿರುವ ಯಕ್ಷಗಾನ ಕಾಲ ಕ್ರಮೇಣ ಕಾಲವಾದರೂ ಅಚ್ಚರಿ ಇಲ್ಲ.ಅದಕ್ಕಾಗಿ ಯಕ್ಷಗಾನದ ಪೋಷಕರು , ಪ್ರೋತ್ಸಾಹಕರು ಸಹರಿಸಬೇಕು . ಯಕ್ಷಗಾನ ಉಳಿಯಬೇಕು .ಬೆಳೆಯಬೇಕು . ಕಲೆಯು ಉಳಿವು ಮತ್ತು ಬೆಳವಣಿಗೆ ಯಕ್ಷಗಾನ ಪ್ರೀಯರು ಯೋಚಿಸಬೇಕಾಗಿದೆ.ಸಂತೋಷದ ವಿಚಾರವೆಂದರೇ ಡೇರೆ ಮೇಳಗಳೂ,ಸೇರಿದಂತೆ ಕೆಲವು ಬಯಲಾಟ ಮೇಳಗಳು ಇಂದಿಗೂ ಸಹಾ ಮುಂಜಾನೆ ತನಕ ಆಟ ಆಡಿಸುತ್ತಿವೆ ಇದು ಕೊಂಚ ತೃಪ್ತಿದಾಯಕ ಬೆಳವಣಿಗೆಯಾದರೂ , ಇವುಗಳು ಭವಿಷ್ಯತ್ ನಲ್ಲಿ ಕಾಲಮಿತಿಗೆ ಜಾರದಿರಲಿ ಎಂಬ ವಿಶ್ವಾಸ ,ಆಶಯ ನನ್ನದು.ರಾತ್ರಿ 9:30 ಕ್ಕೆ ಪ್ರಾರಂಭವಾಗಿ ಮುಂಜಾನೆ 6:00 ಗಂಟೆ ತನಕ ಮಂಗಳ ಪದ್ಯ ಆಲಿಸಿ, ಮನೆಕಡೆ ಹೆಜ್ಜೆ ಹಾಕುವ ಪೂರ್ತಿ ಪ್ರಮಾಣದ ಪಾತ್ರವರ್ಗವನ್ನು ಕಣ್ತುಂಬಿಸಿಕೊಳ್ಳುವ 3-4 ಭಾಗವತರುಗಳಿಂದ ಸಂಪೂರ್ಣ ಪದ್ಯದ ರಸಗವಳವನ್ನು ಆಸ್ಪಾದಿಸುವ ,ಆಲಿಸುವ ,ಕಡ್ಲೇಕಾಯಿ ,ವಡೆ ,ಅಡಿಗಡಿಗೆ ಚಾ ಹೀರುವ, ಕಣ್ಣು ಕೂರುವ, ಕೋಳಿ ನಿದ್ರೆ ಮಾಡುವ ಮಜಾನೇ ಬೇರೆ ಅಲ್ಲವೇ ?!
ಸೋಮವಾರ, ಮೇ 4, 2020
ಕರೋನ -ಕೊಡೋಣಾ :ನಾಚಿಕೆಯಾಗಬೇಕು ಇಂತಹ ಜನಪ್ರತಿನಿಧಿಗಳಿಗೆ !
ಕರುಣೆ ಇಲ್ಲದ ಕರೋನ ಎಂಬ ಮಹಾಮಾರಿಯ ಹೊಡೆತಕ್ಕೆ ಇಡಿ ವಿಶ್ವವೇ ನಲುಗಿ ಹೋಗಿದೆ ,ಶ್ರೀಮಂತ ರಾಷ್ಟ್ರಗಳು ತಮ್ಮ ಕೈಯಲ್ಲಿ ಏನೂ ಮಾಡಲೂ ಸಾಧ್ಯವಿಲ್ಲ ಎಂದು ಕೈಕಟ್ಟಿ ಕುಳಿತಿರುವುದು ತಿಳಿದಿರುವ ವಿಚಾರ ಲಾಕ್ ಡೌನ್ ಒಂದೇ ಪರಿಹಾರ ಎಂದು ಎಣಿಸಿದರೂ ,ಕೋಟಿಗಟ್ಟಲೆ ದೇಶವಾಸಿಗಳನ್ನು ಕೂಡಿಹಾಕಿ ಇಡಲು ಸಾಧ್ಯವೇ ?ಹೊಟ್ಟೆಗೆ ಹಿಟ್ಟು ಬೇಕಲ್ಲವೇ ? ಇಡೀ ವಿಶ್ವವೇ ಆರ್ಥಿಕತೆಯಲ್ಲಿ ಕುಸಿತ ಕಂಡಿದ್ದು ಶ್ರೀಮಂತ ರಾಷ್ಟ್ರ್ರಗಳೂ ತಲೆ ಮೇಲೆ ಕೈ ಹೊತ್ತು ಕೊಂಡು ಕುಳಿತಿವೆ . ಹಾಗೋ- ಹೇಗೋ ತಮ್ಮ ಜನಸಂಖ್ಯೆಗನುಗುಣವಾಗಿ ನಿಭಾಯಿಸಬಲ್ಲ ತಾಕತ್ತು ಕೆಲ ರಾಷ್ಟ್ರಗಳಿಗಿವೆ , ಅವುಗಳು ಏನೋ ಒಂದು ಸಾಧಿಸಬಲ್ಲವು . ವಿಶ್ವದ ಎರಡನೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಮೂಲಸೌಕರ್ಯದ ವಿಚಾರದಲ್ಲಿ ಅಷ್ಟೊಂದು ಬಲಶಾಲಿಯಾಗಿರದ ನಮ್ಮ ದೇಶಕ್ಕೆ ಇದು ಬಹಳ ಹೊರೆ ತಂದಿದೆ ,ಹೊಡೆತ ಬಿದ್ದಿದ್ದೂ ಅಷ್ಟಿಷ್ಟಲ್ಲ 21 ದಿನಗಳ ಕಾಲ ಬಂಧಿಯಾಗಿ, ಪುನ: ಮೇ 3ರವರೆ ಸಮೀಪ ತಲುಪ ಮೊದಲೇ ಮತ್ತೆ ಮೇ 17 ಕ್ಕೆ ಮುಂದುವರಿದಿದೆ ಈ ಲಾಕ್ ಡೌನ್ ! ನಿಜಕ್ಕೂ ಅರಗಿಸಿಕೊಳ್ಳಗಾದ ವಿಚಾರವಾದರೂ ಅನುಭವಿಸದೇ ವಿಧಿ ಇಲ್ಲ ಉಳ್ಳವರು ಹೇಗೋ ಇದ್ದುದ್ದರಲ್ಲಿ ಜೀವನ ಸಾಗಿಸುತ್ತಾ ಇದ್ದರೆ ಇಲ್ಲದವರಿಗೆ ಒಂದು ಹೊತ್ತು ಊಟಕ್ಕೂ ಪರದಾಡಬೇಕಾದ ಸಂದರ್ಭದ ಬಂದೊದಗಿದೆ ,ದಿನಗೂಲಿ ನೌಕರರ ಪಾಡು ಹೇಳತೀರದು . ಅವರನ್ನೆಲ್ಲರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ದಿನನಿತ್ಯ ಬಳಕೆಯ ಸಾಮಾಗ್ರಿಗಳನ್ನು ಪೂರೈಸಬೇಕಾಗಿದೆ.ಕೆಲವು ರಾಜ್ಯಗಳು ಕೇಂದ್ರ ಸರ್ಕಾರದ ಜಂಟಿ ಆಶ್ರಯದಲ್ಲಿ ರೇಷನ್ ವಿತರಣೆಯನ್ನು ಮಾಡುತ್ತಿವೆ . ನೌಕರಿಯಲ್ಲಿನ ತಿಂಗಳ ಸಂಬಳವೂ ನಿರಂತರವಾಗಿ ನಡೆಯಲು ಆಯಾಯ ಕಂಪನಿ ಸಂಸ್ಥೆಗಳಿಗೆ ಆದೇಶವನ್ನೂ ನೀಡಲಾಗಿದೆ , ಜನಧನ ಯೋಜನೆ ಜಾರಿಯಲ್ಲಿದೆ. ಅಷ್ಟು ಮಾತ್ರ ಸಾಕೇ ? ಭಾರತದ ಪಾಲಿಗೆ ದೊಡ್ಡ ಸವಾಲೇ ಸರಿ..! ಆರ್ಥಿಕತೆ ಮುಮ್ಮಲ ಮಲಗಿದೆ. ಜನ ಸಾಮಾನ್ಯರ ಹಿತದೃಷ್ಟಿಯಿಂದ ಸರ್ಕಾರವು ದಾನಿಗಳಿಂದ ದೇಣಿಗೆ ಸಂಗ್ರಹಕ್ಕೆ ಮುಂದಾಗಿದೆ ,ಒಂದು ಪಕ್ಷದಲ್ಲಿ ಸರಿ ಕಂಡರೂ , ಇನ್ನೊಂದು ದಿಕ್ಕಿನಲ್ಲಿ ಇದು ನಗೆಪಾಟಲಿಗೆ ಈಡಾಗುತ್ತಿದೆ ಈ ಸಮಯದಲ್ಲಿ ದೇಶಕ್ಕೆ ದೇಣಿಗೆ ಅನಿವಾರ್ಯವೇನೋ ಆದರೂ, ಅದನ್ನು ಜನಸಾಮಾನ್ಯರ ಮೇಲೆ ಹೊರಿಸುವುದು ತರವಲ್ಲ ಸಂಸದರು ,ಶಾಸಕರು ,ಸರ್ಕಾರದ ಹತ್ತಾರು ಭಾಗದಲ್ಲಿರುವ, ಈಗಾಗಲೇ ಸರ್ಕಾರದ ಬೊಕ್ಕಸದಿಂದ ತಿಂದು ತೇಗಿ ಮಿಕ್ಕಿದ ಸಂಪತ್ತಿನ ಅಲ್ಪ ಪ್ರಮಾಣದಲ್ಲಿ ಕೊಟ್ಟರೆ ಸಾಕು ದೇಶದ ಆರ್ಥಿಕ ಸ್ಥಿತಿ ಸುಭದ್ರವಾಗುವುದರಲ್ಲಿ ಎರಡು ಮಾತಿಲ್ಲ . ನಾಲ್ಕು ಸಾವಿರದಿಂದ ಐದು ಸಾವಿರ ತನಕ ಸಂಸದರು ,ಶಾಸಕರು ನಮ್ಮ ದೇಶದಲ್ಲಿ ಇದ್ದಾರೆ ಶಾಸಕರಾಗುವ ಮೊದಲು ಕೋಟಿ ಕೋಟಿ ತಮ್ಮ ಆಸ್ತಿಪಾಸ್ತಿಯನ್ನು ತೋರಿಸುತ್ತಾರೆ,ಆದಮೇಲೆ ಅದೆಷ್ಟು ಕೋಟಿಯೋ ಅವರಿಗೆ ಲೆಕ್ಕ ವಿಲ್ಲಾ ಬಿಡಿ ! ಇವರುಗಳಿಂದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕಸಿಯಬೇಕಾಗಿದೆ ಅಥವಾ ದೇಶದ ರಕ್ಷಣೆಗೆ ಅವರು ಸೌಜನ್ಯಕ್ಕಾದರೂ , ಆಗಮಿಸಬೇಕು ಅಲ್ಲವೇ? ನಾಚಿಕೆ ಇಲ್ಲವೇ ಜನಪ್ರತಿನಿಧಿಗಳಿಗೆ ? ಒಂದಷ್ಟು ಮಂದಿ ಅನಿವಾರ್ಯತೆಗೆ ಚೂರು-ಪಾರು ಒಂದು ದಿನದ್ದೋ , ತಿಂಗಳದ್ದು ವರ್ಷದ ಸಂಬಳವನ್ನು ಪರಿಹಾರ ನಿಧಿಗೆ ಕೊಟ್ಟರೆ ಇನ್ನು ಕೆಲವರಿಗೆ ನಾಚಿಕೆಯಾಗಬೇಕು ಒಂದೂ ನಯಾ ಪೈಸೆಯನ್ನೂ ಬಿಚ್ಚಿಲ್ಲ ಚುನಾವಣೆ ಬಂದಾಗ ಹಣ ಹೆಂಡ ಇನ್ನಿತರ ಸಾಮಾನುಗಳನ್ನು ಹಂಚುವ ಇವರುಗಳು ಈಗ ಸತ್ತಿದ್ದಾರೆ ?, ಕೋಟಿಗಟ್ಟಲೇ ಖರ್ಚು ಮಾಡಿ ಮಕ್ಕಳ ಮದುವೆ ಮಾಡಲಿಕ್ಕೆ , ಕೋಟಿಗೆ ಕಿಂಚಿತ್ ಲೆಕ್ಕವಿಲ್ಲದಂತೆ ಯಂ ಎಲ್ ಏ ಗಳನ್ನು ಖರೀದಿ ಮಾಡಲು ಹಣ ವಿದೆ ಆದರೆ ದೇಶ ಸನ್ಕಷ್ಟದಲ್ಲಿರುವಾಗ,ವೋಟು ಹಾಕಿದ ಜನತೆ ಹಸಿವಿನಿಂದ ಸಾಯುತ್ತಿರುವಾಗ ಎಲ್ಲಿದೆ ನಿಮ್ಮ ಮೊಸಳೆ ಕಣ್ಣೀರು ? ಎಲ್ಲಿದೆ ನಿಮ್ಮ ರಿಯಲ್ ಸಹಾಯ ಹಸ್ತದ ಬೆಳವಣಿಗೆ ? ಭಾವೋದ್ವೇಗ ಉಂಟಾಗುತ್ತಿದೆ , ಕೋಪ ನೆತ್ತಿಗಿರುತ್ತಿದೆ ,ರಕ್ತ ಕುದಿಯುತ್ತಿದೆ . ಇವೆರೆಲ್ಲಾ ಬದಲಾಗೋಲ್ಲ , ಯಾರೂ ಕೂಡಾ ರಿಯಲ್ ಹೀರೊ ಅಲ್ಲಾ ಕೇವಲ ಕುರ್ಚಿಯ ಲಾಲಸೆಗೆ ಒದ್ದಾಡುವ ಸ್ವಾರ್ಥಿಗಳು .. ! ಯೋಚಿಸಿ ಪ್ರಜೆಗಳೇ,ಆಲೋಚಿಸಿ ಇದೆ ಸರಿಯಾದ ಸಮಯ ಸಹಾಯ ಮಾಡಿದವರ ಮೇಲೆ ಗಮನವಿರಲಿ ಮುಂದಿನ ಚುನಾವಣೆಗೆ ಅಸ್ತ್ರ ನಿಮ್ಮಲ್ಲೇ ಇದೆ ಈಗಲೇ ಮಸೆಯಲು ಸಿದ್ದರಾಗಿ .
ಮೆಚ್ಚಬೇಕು ಇಂಥವರುಗಳ ಕಾರ್ಯ: ಅದೆಷ್ಟು ವಾಹನಗಳು ,ಹೋಟೆಲ್, ಕಾರ್ಖಾನೆ, ಐಷಾರಾಮಿ ದೊಡ್ಡ ದೊಡ್ಡ ಬಂಗಲೆ ಅವೆಲ್ಲವನ್ನೂ ಹೊಂದಿರುವ ಜನಪ್ರತಿನಿಧಿಗಳ ಪೈಕಿ ,ಯಾವೊಬ್ಬನಿಂದಲೂ ಸಹಾ ಎಳ್ಳು ಕಾಳಷ್ಟು ಉಪಯೋಗ ವಾಗಿಲ್ಲ. ನಿಜಕ್ಕೂ ಮೆಚ್ಚಬೇಕು ನಮ್ಮಲ್ಲಿ ಏನೂ ಇಲ್ಲದಿದ್ದರೂ ಸಹಾ ಹಲವಾರು ಮನಸ್ಸುಗಳು ಸಹಾಯಕ್ಕೆ ಬಂದಿದೆ ತಮ್ಮಿಂದ ಏನು ಕೊಡಲು ಇಲ್ಲದಿದ್ದರೂ ದುಡಿಯುವ ,ತುಡಿಯುವ ಮನಸ್ಸುಗಳಿಗೆ ಕೃತಜ್ಞತೆ ಸಲ್ಲಿಸಲೇಬೇಕು. ತಮ್ಮಲ್ಲಿ ಒಂದು ರೂಪಾಯಿ ಇದ್ದರೇ, ಅದರಲ್ಲಿ ಇಲ್ಲದವರಿಗೆ ಐವತ್ತು ಪೈಸೆ ಕೊಡಲು ಇಷ್ಟ ಪಡುವ ಮನಸ್ಸುಗಳು ಈ ದಿನಗಳಲ್ಲಿ ತೆರೆಮರೆಯಲ್ಲಿ ಬೆಳಕಿಗೆ ಬರುತ್ತಿವೆ. ಉಡುಪಿ ಮಲ್ಪೆಯ ಮೀನು ಮಾರುವ ಮಹಿಳೆಯೆ ಶಾರದಕ್ಕನ ನೋಡಿ ಮೊನ್ನೆ ಸುದ್ದಿಯಾದಳು ಮನೆ ಕಟ್ಟಲಿಕ್ಕೆ ಇಟ್ಟ ಮೂವತ್ತು ಸಾವಿರ ರೂಪಾಯಿನ್ನು ಈ ಸಮಯದಲ್ಲಿ ತನ್ನಂತೆ ಇರುವ ಬಡ ಜೀವಕ್ಕೆ ಆಸೆರೆಯಾದಳು. ಸುಮಾರು ೧೪೦ ಮನೆಗಳಿಗೆ ಅಕ್ಕಿ ವಿತರಿಸಿದ ಧೀರೆಯಾದಳು. , ಬೆಂಗಳೂರಿನಲ್ಲಿ ಪಾಕೆಟ್ ಹಾಲಿಗೆ ಹೊಡೆದಾಟ ,ಹಾತುರ ಪಡೆಯುವ ಕೆಲವು ಮನಸ್ಥಿತಿಗಳು ಇವರನ್ನು ನೋಡಿ ಕಲಿಬೇಕು , ಯಾವ್ದೋ ಒಂದು ಸಂಸ್ಥೆ ,ಕಡು ಬಡತನವನ್ನು ಹೊಂದಿದ್ದ ಒಂಟಿ ಮಹಿಳೆ ಮನೆಗೆ ಅಗತ್ಯ ಸಾಮಗ್ರಿಯನ್ನು ತಂದು ಕೊಟ್ಟರೆ ಪಾಪ ಆಕೆ ನನಗೆ ಬೇಡ ಈಗಾಗಾಲೇ ಸಿಕ್ಕಿದೆ ಬೇರೆಯವರಿಗೆ ಕೊಡಿ ಅವರಿಗೂ ಸಹಾಯವಾಗುತ್ತದೆ ಎಂದು ವಿನಮ್ರ ವಾಗಿ ಹೇಳುವ ಆ ವಿಡಿಯೋ ಕಣ್ಣೇರು ತರಿಸುತ್ತಿದೆ . ಆಟೋ ರಿಕ್ಷಾ ಆನಂದಣ್ಣ . ಜೀವನವೋಪಾಯಕ್ಕೆ ಬಾಡಿಗೆಗೆ ಒಂದು ಸಣ್ಣ ಆಟೋರಿಕ್ಷಾ ಇದೆ. ತೀರಾ ಗ್ರಾಮೀಣ ಭಾಗದಲ್ಲಿರುವ ಇವರು ಮೊದಲೇ ಬಡತನದಲ್ಲಿ ಬೇಯುತ್ತಾ ಬಂದವರು ,ಅವರಿಗೂ ಅರಿವಿದೆ ಬಡತನ ಎಂದರೇನು ಅದು ಈ ಸಮಯದಲ್ಲಿ ಎಷ್ಟು ಪರಿಣಾಮ ಬೀರುತ್ತಿದೆ ಎಂದು , ಲಾಕ್ ದೌನ್ ಆದ ದಿನದಿಂದಲೂ ಆ ಭಾಗದಲ್ಲಿ ಅದೆಷ್ಟೋ ಜನರಿಗೆ ಉಪಕಾರಿಯಾಗಿದ್ದಾರೆ ,ಗ್ರಾಮೀಣ ಪ್ರದೇಶಗಲ್ಲಿ ರೋಗಿಗಳನ್ನು ದೂರದ ಆಸ್ಪತ್ರೆ ಸಾಗಿಸಲು , ಸರ್ಕಾರ ಕೊಟ್ಟ ರೇಷನ್ ನ್ನು ಅವರ ಮನೆ ತಲುಪಿಸಲು ,ಅಗತ್ಯ ವಸ್ತುಗಳನ್ನು ನಿರ್ಗತಿಕರಿಗೆ ಬಡವರಿಗೆ ಮನೆಗೆ ತಲುಪಿಸುವ ಕಾರ್ಯವನ್ನು ಕೈ ಕೊಂಡಿದ್ದಾರೆ ನಿಜಕ್ಕೂ ಇವರೆಲ್ಲಾ ತೆರೆ ಮರೆಯ ಹೀರೊಗಳು ಬೆಳಕಿಗೆ ಬರುದಿಲ್ಲ .,ಅದೂ ಅವರಿಗೆ ಅವಶ್ಯಕೆತೆಯೂ ಇಲ್ಲ ಬಿಡಿ .! ಹಾ.! ಮೊನ್ನೆ ಒಂದು ಈ ಹಳ್ಳಿಯಲ್ಲಿ ಕಹಿ ಘಟನೆಯೊಂದು ನಡೆದು ಬಿಟ್ಟಿತು ಕಾಡಿಗೆ ಸೊಪ್ಪು ತರಲು ಹೋದ ಮಹಿಳೆಗೆ ಹಾವು ಕಚ್ಚಿದಾಗ ಅದು ಯಾರೋ ಆನಂದ ಅಣ್ಣನಿಗೆ ಫೋನ್ ಹಾಯಿಸಿದ್ದರು ತಡ ಮಾಡದೇ ಸ್ಥಳಕ್ಕೆ ದೌಡಾಯಿಸಿ ಆ ಮಹಿಳೆಯನ್ನು ತನ್ನ ಆಟೋದಲ್ಲಿ ಹೊತ್ತು ನೆಡೆದರು 3 ಆಸ್ಪತ್ರೆ ಕ್ಲಿನಿಕ್ ಒಳ ಹೊಕ್ಕರೂ ಪ್ರಯೋಜನ ಕಾಣದೇ ಅತೀ ವೇಗವಾಗಿಯೇ ತಾಲೂಕಿನ ದೊಡ್ಡ ಆಸ್ಪತ್ರೆಗೆ ಬಂದರು . ಸರಿ ಸುಮಾರು 45 ಕೀಮಿ ದೂರಡಾ ಪಯಣಆಸ್ಪತ್ರೆಯಲ್ಲಿ ಧಾಖಲಾದರೂ, ಆಸ್ಪತ್ರೆ ಫೀಸುಗೂ ಹಣ ವಿಲ್ಲದೇ ಇದ್ದ ಮಹಿಳೆಯ ಕುಟುಂಬದ ಸಂಕಷ್ಟ ಕಂಡು ತಾನೇ ಜೇಬಲ್ಲಾ ಅರಸಿ 2000 ಕೊಟ್ಟು ಬಂದರು . ನಿಜಕ್ಕೂ ಇವರುಗಳು ಗ್ರೇಟ್ ಅಲ್ಲದೆ ಮತ್ತಿನೇನು ? ಇದು ನಾ ಕಂಡ ಉದಾಹರಣೆ ಅಷ್ಟೇ ಇಂತಹ ಅದೆಷ್ಟೋ ಮಂದಿ ನಮ್ಮ ಸುತ್ತ ಮುತ್ತಾ ಇದ್ದಾರೆ .ಇವರಾರು ಪ್ರಚಾರ ಬಯಸೊಲ್ಲ ,ಎಡ ಕೈಗೆ ಕೊಟ್ಟರೆ ಬಲ ಕೈಗೆ ತಿಳಿಯಬಾರದೆಂಬ೦ತೇ ಇದ್ದರೂ ಅದು ಬೆಳಕಿಗೆ ಬರುತ್ತದೆ ಅದೂ ಬರಲೇ ಬೇಕು ಕೂಡಾ ಒನ್ದಷ್ಟು ಅತಿ ರಥರುಗಳ ಮರ್ಯಾದೆಗೆ ಅನಿವಾರ್ಯ ! ಕೆಲವು ಮನಸ್ಥಿಗಳಿಗೆ ಏನು ಹೇಳ್ಬೇಕು ಗೊತ್ತಾಗೊಲ್ಲ ಕೊಡುವುದು ಮೂರು ಕಾಸಿನ ವಿಚಾರ ಆದರೆ ಆರು ಕಾಸಿನ ಪ್ರಚಾರ ! ಆಹಾರ ಕಿಟ್ ಗಳ ಮೇಲೆ ತಮ್ಮ ಫೋಟೋ, ಹೆಸರು, ರಾಜಕೀಯ ಪಕ್ಷಗಳ ಚಿನ್ಹೆ ,ಒಂದಾ ಎರಡಾ ಒಟ್ಟಾರೆ ಪುಕ್ಕಟೆ ಪಬ್ಲಿಸಿಟಿಗಳೂ ಕಾಣ ಸಿಗುತ್ತಿವೆ. ಅದೇನೆಯಿರಲಿ ಸಂಕ ಮುರಿದಲ್ಲೆ ಸ್ನಾನ್ಹ ,ಜೊತೆಗೆ ಸ್ವಾಮೀ ಕಾರ್ಯದ ಜೊತೆ ಸ್ವ ಕಾರ್ಯವೂ ಸಹಾ ಈ ಸಮಯದಲ್ಲಿ ತಾರಕ್ಕೆಕ್ಕೆ ಏರಿದೆ .ಒಟ್ಟಾರೆ ಕೆಲವು ಸಣ್ಣಪುಟ್ಟ ಸಂಘ-ಸಂಸ್ಥೆಗಳು , ಸಮಾಜ ಸೇವೆ ಗೆ ತಮ್ಮನ್ನು ಅರ್ಪಿಸುವ ಸಮಾನ ಮನಸ್ಕರು ಹಳ್ಳಿ- ಹಳ್ಳಿಗಳಿಗೆ ಸಾಗಿ ಆಹಾರವನ್ನು ಒದಗಿಸುವ, ಸಹಾಯ ಹಸ್ತವನ್ನು ಚಾಚುವ ಕಾರ್ಯವನ್ನು ಕೈಗೊಂಡಿದೆ,ನಿರ್ಗತಿಕರಿಗೆ , ಭಿಕ್ಷುಕರಿಗೆ, ಬೀದಿನಾಯಿ ,ಪ್ರಾಣಿ- ಪಕ್ಷಿಗಳಿಗೆ ಆಹಾರ ಒದಗಿಸುವ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು ! ಐಸೋಲೇಶನ್ ಗಳಿಗೆ ತಮ್ಮ ತಮ್ಮ ಕಟ್ಟಡ ಮನೆಗಳನ್ನು ಕೊಡಲು ಮುಂದಾಗುವ ಮನಸ್ಸುಗಳೂ ಇವೆ ಸದ್ಯ ಕೆಲವು ಐಟಿ-ಬಿಟಿ ಕಂಪನಿಗಳು, ಸಿನಿಮಾ ನಟ-ನಟಿಯರು ಸಹಾಯಧನವನ್ನು ನೀಡುತ್ತಿದ್ದಾರೆ,ಕೊಡಲೇ ಬೇಕು ಅದು ಅವರ ಧರ್ಮ ಈ ಮಣ್ಣಿನ ಋಣ .! ಜನ ಪ್ರತಿನಿಧಿಗಳೇ ಏಳಿ ,ಮತ ದಾನ ಪ್ರಭುಗಳೇ ನೆನಪಿಡಿ, ಮತ ಭಿಕ್ಷೆಗೆ ಬಂದಾಗ ರಿವೇಂಜ್ ನಿಮ್ಮದಾಗಿರಲಿ !!
ಶುಕ್ರವಾರ, ಏಪ್ರಿಲ್ 24, 2020
ದೆಹಲಿ ಅತ್ಯಾಚಾರ ಪ್ರಕರಣ :ಕೊನೆಗೂ ಸುಖಾಂತ್ಯ !,ಆದರೆ ಇನ್ನೊಬ್ಬನನ್ನು ಹೊರಕೆ ಇಟ್ಟಿದ್ದು ಸರಿಯಲ್ಲ
2020ರ ಮಾರ್ಚ್ 21ನೇ ತಾರೀಕು ಭಾರತದ ಸಂವಿಧಾನದಡಿಯಲ್ಲಿ ಕಾನೂನಾತ್ಮಕವಾಗಿ ನ್ಯಾಯಾಲಯದ ವ್ಯವಸ್ಥೆಯಲ್ಲಿ ಹೊಸ ಭಾಷೆ ಬರೆದ ದಿನ ! ಇತಿಹಾಸದ ಪುಟದಲ್ಲಿ ದಾಖಲಾದ ಕ್ಷಣ !! ಒಂಟಿ ಹೆಣ್ಣೊಬ್ಬಳು ಮಧ್ಯರಾತ್ರಿಯಲ್ಲಿ ರಸ್ತೆಮೇಲೆ ತಿರುಗಾಡಿದರೆ ಅಂದೇ ಭಾರತ ಸ್ವತಂತ್ರವಾಗುತ್ತದೆ ಎಂದು ರಾಷ್ಟ್ರಪಿತ ಗಾಂಧೀಜಿ ಹೇಳಿದ್ದರು. ಅದು ಅಸಾಧ್ಯದ ಮಾತೇ ಬಿಡಿ ...! ಅಂದು ಮಧ್ಯರಾತ್ರಿ ಹೆಣ್ಣೊಬ್ಬಳು ಬಸ್ಸಿಗಾಗಿ ಕಾದಿದ್ದಳು ಬಸ್ಸು ಬಂತು ಬಸ್ಸು ಏರಿದ್ದಳು ಆರು ಜನರಿದ್ದರು ಅವರೆಲ್ಲಾ ರಾಕ್ಷಸ ತ್ರಯರು ಅಂತ ಆ ಮುಗ್ದೆಗೆ ಗೊತ್ತೇ ಇರಲಿಲ್ಲ ಬಸ್ಸಿನಲ್ಲಿದ್ದ ಆ ಕಾಮಾಂಧರು ಪೈಶಾಚಿಕವಾಗಿ ಅತ್ಯಾಚಾರ ಮಾಡಿದ್ದಲ್ಲದೆ, ಹಿಂಸಾತ್ಮಕವಾಗಿ ಅವಳನ್ನು ಮುಗಿಸಿಬಿಟ್ಟಿದ್ದರು. ಇದು ಸುಮಾರು ಏಳು ವರ್ಷಗಳ ಹಿಂದಿನ ಮಾತು ದೇಶಾದ್ಯಂತ ದೊಡ್ಡ ಸದ್ದು ಮಾಡಿದ ಸುದ್ದಿ ! ಡಿಸೆಂಬರ್ 16, 2012ರಂದು ಭಾರತದ ರಾಜಧಾನಿ ದೆಹಲಿಯಲ್ಲಿ 23ವರ್ಷದ ವೈದ್ಯ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಕರುಣಾಜನಕ ಕಥೆ ಕೇವಲ ಅತ್ಯಾಚಾರ ಮಾತ್ರ ಮಾಡದ ಕಾಮ ಪಿಶಾಚಿಗಳು ಅಮಾನವೀಯವಾಗಿ ರಾಡ್ ನಿಂದ ಹಲ್ಲೆ ಮಾಡಿ ಚಲಿಸುವ ಬಸ್ಸಿಂದ ಕೆಳಕ್ಕೆ ಎಸೆದರು ತೀವ್ರವಾಗಿ ಹೊಟ್ಟೆ, ಕರುಳು, ಮರ್ಮಾಂಗ ಜರ್ಜರಿತ ಗೊಂಡು ಐಸಿಯು ನಲ್ಲಿ ಒಂದು ದಿನ ಸಾವು ಬದುಕಿನ ನಡುವೆ ಹೋರಾಡಿ ಕೊನೆ ಉಸಿರು ಎಳೆದಿದ್ದಳು . ಪ್ರಕರಣದ ಬೆನ್ನಿಗೆ ಆರೋಪಿಗಳನ್ನು ಬಂಧಿಸಲಾಯಿತು.6 ಜನ ಕಾಮುಕರು ಸಿಕ್ಕಿಬಿದ್ದಿದ್ದರು .ಇವರಿಗೆ ಸಾರ್ವಜನಿಕವಾಗಿ ಗುಂಡಿಕ್ಕುವಂತೆ ಜನಾಕ್ರೋಶವೂ ಭುಗಿಲೆದ್ದಿತ್ತೂ ಆದರೂ, ಕಳೆದ 7 ವರ್ಷ 3 ತಿಂಗಳಿಂದ ಸತತ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಇವರಿಗೆ ಗಲ್ಲುಶಿಕ್ಷೆ ವಿಧಿಸಿತ್ತು.ಆರು ಜನರ ಪೈಕಿ ಜನ ಆರೋಪಿಗಳಾದ ಮುಖೇಶ್ ಸಿಂಗ್, ಪವನ್ ಗುಪ್ತಾ, ಅಕ್ಷಯ್ ಠಾಕೂರ್ ಹಾಗೂ ವಿನಯ್ ಶರ್ಮಾರನ್ನು 2020 ರ ಮಾರ್ಚ್ 21ನೇ ತಾರೀಕಿನಂದು ಬೆಳಗ್ಗಿನ ಜಾವ 5.30ಕ್ಕೆ ಗಲ್ಲಿಗೇರಿಸಲಾಯಿತು. ಇನ್ನೆಷ್ಟೋ ಕಾಮುಕರಿಗೆ ಇದು ಪಾಠವಾಯಿತು ಏನು ಖುಷಿ !ದೇಶ ಸಂತೋಷದಲ್ಲಿ ತೇಲಾಡಿತು., ಆದರೆ ಅದರಲ್ಲಿ ನಾಲ್ಕು ಜನರಿಗೆ ಮಾತ್ರ ಶಿಕ್ಷೆಯಾಗಿತ್ತು . ಒಬ್ಬತಾ ಬಸ್ಚಾಲಕನಾಗಿದ್ದ ರಾಮ್ ಸಿಂಗ್ ತಾನೇ ಆತ್ಮಹತ್ಯೆ ಮಾಡಿಕೊಂಡು ತನ್ನ ತಪ್ಪಿಗೆ ಸರಿಯಾದ ಶಿಕ್ಷೆಯನ್ನು ಪಡೆದುಕೊಂಡನು.ಇನ್ನೊಬ್ಬ ರಾಜು ಎಂಬಾತ ವಯಸ್ಸಿನ ಮಿತಿಯಲ್ಲಿ ಒಂದಷ್ಟು ಸಡಿಲಿಕೆ ಕಂಡು ಸಣ್ಣಪುಟ್ಟ ಶಿಕ್ಷೆಗೆ ಒಳಪಡಿಸುವ ಮೂಲಕ ಮನೆಗೆ ಕಳಿಸಿಕೊಡಲಾಗಿತ್ತು ಪ್ರಶ್ನೆ ಹುಟ್ಟಿರುವುದು ಮತ್ತು ಆಕ್ರೋಶಕ್ಕೆ ಕಾರಣವಾಗಿರುವುದು ಇದು, ದೊಡ್ಡ ತಪ್ಪು ಮಾಡಿದ ಈತನಿಗೆ ಮರಣದಂಡನೆ ವಿಧಿಸಬೇಕು ಅಂತೆಯೇ ಈ ಪೈಶಾಚಿಕ ಕೃತ್ಯದಲ್ಲಿ ಈತನೇ ಮುಂಚೂಣಿಯಲ್ಲಿದ್ದನಂತೆ ಹಿಂಸಾತ್ಮಕ ಪ್ರವೃತ್ತಿಯನ್ನು ತೋರ್ಪಡಿಸಿದ್ದದ್ದು ಈತನೇ ಅಂತೆ ಈತನನ್ನು ಸಹಾ ಗಲ್ಲಿಗೆ ಏರಿಸಬೇಕಿತ್ತು ಅಪ್ರಾಪ್ತ ಎಂದು ಹೊರಗೆ ಇಟ್ಟಿದ್ದು ಸರಿಯಲ್ಲ ಇಂಥವರಿಂದ ಇನ್ನಷ್ಟು ಜೀವಗಳು ನೋವು ಅನುಭವಿಸಬೇಕೋ ಗೊತ್ತಿಲ್ಲ ಹಾಗೆ ಅಂಡರ್ ಏಜ್ ಎಂಬ ಹಣೆಪಟ್ಟಿಯಲ್ಲಿ ಇಂತವರು ಇಂತಹ ಕಾರ್ಯಕ್ಕೆ ಮುಂದಾಗುದರಲ್ಲಿ ಯಾವುದೇ ಸಂಶಯವಿಲ್ಲ ಅತ್ಯಾಚಾರ ಮಾಡಿ ಹಿಂಸಾತ್ಮಕವಾಗಿ ಸಾಯಿಸುವ ಕೆಲವು ವಿಕೃತ ಕಾಮಿಗಳಿಗೆ ಮರಣದಂಡನೆ ಸರಿಯಾದ ಶಿಕ್ಷೆ ಆದರೆ ಅದಾಗುತ್ತಿಲ್ಲ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಅದಿಲ್ಲ ಎಂಬುದೇ ಬಹಳ ಬೇಸರ . ಏನೇ ಆಗಲಿ ಅದೆಷ್ಟೋ ವರ್ಷಗಳ ನಂತರ ಕಷ್ಟಪಟ್ಟು ಪಟ್ಟು ಬಿಡದೆ ನೇಣಿಗೇರಿಸಿದ ರಲ್ಲಿ ಶಕ್ತರಾದ ವಕೀಲರಿಗೆ ಹಾಗೂ ಪ್ರತಿಭಟನೆ ಹಾಗೂ ಇವರ ಬೆಂಬಲಕ್ಕೆ ನಿಂತ ಒಳ್ಳೆಯ ಮನಸ್ಸಿಗರ ಶ್ರಮ ದಿಂದ ಉತ್ತಮ ತೀರ್ಪು ಸಿಕ್ಕಿದೆ . ದಿಲ್ಲಿಯಲ್ಲಿನ ಈ ಘಟನೆ ಬೆಳಕಿಗೆ ಬಂದಿದ್ದೂ ಕೊನೆಗೂ ಸುಖಾಂತ್ಯ ಕಂಡಿದೆ . ಇಂತಹ ಅದೆಷ್ಟೋ ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಲೇ ಇರುತ್ತದೆ. ಕೆಲವರು ಮಾನ ಮರ್ಯಾದೆ ಗೆ ಅಂಜಿ ಹಾಗೂ ರಾಜಕೀಯ ಒತ್ತಡ, ಬ್ಲಾಕ್ಮೇಲ್ ,ಇನ್ನಿತ್ತರ ಚಟುವಟಿಕೆ ಇಂದ ಬೆಳಕಿಗೆ ಬಾರದೆ ಘಟನೆಗಳು ಅಲ್ಲೇ ಮುದುಡಿ ಹೋಗುತ್ತದೆ . ಒಂದು ಪಕ್ಷದಲ್ಲಿ ಮುಖ್ಯ ವಾಹಿನಿಗೂ ಬಂದರೂ ನ್ಯಾಯ ಮಾತ್ರ ನಮ್ಮ ದೇಶ ದಲ್ಲಿ ಮರೀಚಿಕೆ.! ಅದಕ್ಕಾಗಿ ಅದೆಷ್ಟೋ ಕಥೆಗಳು ವ್ಯಥೇಗಳಾಗಿ ಅಂತ್ಯ ಗೊಳ್ಳುತ್ತಿದೆ. ವಿದೇಶ ಗಲ್ಲಿರುವಂತ ಕಾನೂನು ನಮ್ಮಲ್ಲಿ ಜಾರಿ ಆದರೇ ಇಂಥ ಘಟನೆ ಕಡಿವಾಣ ಬೀಳಬಹುದೇನೋ ? ಪೊಲೀಸರೂ ಸಹಾ ಏನೂ ಮಾಡಲೂ ಸಾಧ್ಯ ವಿಲ್ಲಾ ಅವರ ಕೈ ಕಟ್ಟಿ ಹಾಕುವ ವ್ಯವಸ್ಥೆ ನಮ್ಮಲ್ಲಿದೆ .. ಏನೇ ಇರಲಿ ಇತ್ತೀಚಿಗೆ ನಡೆದ ಹೈದ್ರಾಬಾದ್ ನ ಘಟನೆಯನ್ನು ಮೆಲುಕು ಹಾಕುತ್ತಾ ಒಡಲಧ್ವನಿಗೆ ಫುಲ್ ಸ್ಟಾಪ್ ಇಡುತ್ತಿದ್ದೇನೆ ಆ ಪೊಲೀಸರಿಗೆ ಸೆಲ್ಯೂಟ್ ಹೊಡೆಯಲೇ ಬೇಕು ಚಾಕ ಚಕ್ಯತೆಯಿಂದ ಅವರುಗಳೇ ಆ ಕಾಮಾಂಧರುಗಳಿಗೆ ನೇರವಾಗಿ ತಕ್ಕ ಶಿಕ್ಷೆ ನೀಡಿದ್ದಾರೆ. ಅದಾಗಬೇಕು .
ಗುರುವಾರ, ಏಪ್ರಿಲ್ 2, 2020
ಸ್ವಾಮೀಜಿಗಳೇ ನಿಮ್ಮದು ಇದೆಂತಾ ಭಂಡತನ ?
ಮೊನ್ನೆ ಒಂದು ಘಟನೆ ಘಟಿಸಿತು. ಮುಖ್ಯಮಂತ್ರಿ ಯಡಿಯೂರಪ್ಪ ಕೋಪೋದ್ರಿಕ್ತರಾಗಿ ವೇದಿಕೆಯಿಂದ ಕೆಳಗಿಳಿದರು ಎಂದು ಮಾಧ್ಯಮಗಳು ನಾನ್ ಸ್ಟಾಪ್ ಸುದ್ದಿಯನ್ನು ಹರಿಯಬಿಟ್ಟಿದ್ದವು . ಎಲ್ಲರೂ ಯಡಿಯೂರಪ್ಪನವರದು ತಪ್ಪು ಎಂದು ಹೇಳುತ್ತಿದ್ದರೆ ವಿನಹ ,ಘಟನೆ ಬಗ್ಗೆ ಕಿಂಚಿತ್ ಆಲೋಚನೆ ಅವರಲ್ಲಿ ಇರಲಿಲ್ಲ ಅಷ್ಟಕ್ಕೂ ಅದು ಅಂತ ದೊಡ್ಡ ಘಟನೆಏನೂ ಆಗಿರಲಿಲ್ಲ .ಅದು ದಾವಣಗೆರೆಯ ಹರಿಹರದಲ್ಲಿ ನಡೆಯುತ್ತಿದ್ದ ಹರ ಜಾತ್ರೆಯ ಕಾರ್ಯಕ್ರಮ ಯಾವುದೋ ಒಂದು ಸಮಾವೇಶ . ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಯವರು ಯಡಿಯೂರಪ್ಪ ಜೊತೆ ವೇದಿಕೆ ಹಂಚಿಕೊಂಡಿದ್ದರು . ಸ್ವಾಮೀಜಿ ಸ್ವಾಮಿ ಕಾರ್ಯ ಮಾಡುದನ್ನು ಬಿಟ್ಟು ಸ್ವ- ಕಾರ್ಯಕ್ಕೆ ಮುಂದಾಗಿದ್ದರು ! ಹೌದಪ್ಪ ಎಂತೆಂತಹ ಸ್ವಾಮೀಜಿಗಳನ್ನು ನಾವು ಪ್ರಸ್ತುತ ಪ್ರಪಂಚದಲ್ಲಿ ಕಾಣುತ್ತಿದ್ದೇವೆ ಅಂದರೆ ಅದಕ್ಕೆಲೆಕ್ಕಪತ್ರವಿಲ್ಲ., ವರ್ಣಿಸಲಾಗದಂತ ಆಟಿಟ್ಯೂಡ್ ಅನ್ನು ಹೊಂದಿರುವ ಸ್ವಾಮೀಜಿಗಳು ನಮ್ಮ ಕಣ್ಣಮುಂದೆ ಬೇಡವೆಂದರೂ ಕಾಣಿಸಿಕೊಳ್ಳುತ್ತಾರೆ ಅದೇನೇ ಇರಲಿ , ಈ ಸ್ವಾಮೀಜಿ ಏನು ಮಾಡಿದ್ರು ಅಂದರೆ ತಮ್ಮ ಭಾಷಣದ ಸರದಿ ಬಂದಾಗ ಮೈಕ್ ಎತ್ತಿಕೊಂಡು , ಏರ್ಪಡಿಸಲಾದ ಸಮಾವೇಶದ ಬಗ್ಗೆ ಉಸುರುದನ್ನು ಬಿಟ್ಟು , ಏಕ್ದಂ ಮುಖ್ಯಮಂತ್ರಿ ಬಗ್ಗೆ ಮಾತಾಡ್ಲಿಕ್ಕೆ ಶುರುವಿಟ್ಟು ಕೊಂಡರು ,ಆ ಸ್ವಾಮೀಜಿಯ ಪ್ರಕಾರ ಯಡಿಯೂರಪ್ಪನವರು ತಮ್ಮ ಮುಖ್ಯಮಂತ್ರಿ ಸೀಟು ಉಳಿಸಿಕೊಂಡಿದ್ದರೆ ಅಂದರೆ ಅವರ ಜನಾಂಗದ ಶಾಸಕರಿಂದ ಅಂತೆ , ಅದಕ್ಕೆ ಅವರ ಸಮುದಾಯದವರನ್ನು ಮಂತ್ರಿ ಮಾಡಬೇಕಂತೆ , ಅದಿಲ್ಲದಿದ್ದರೆ ತುಂಬಾ ಕಷ್ಟ ಅನುಭವಿಸುತ್ತಾರೆ ನಿಮ್ಮ ಸೀಟು ಉಳಿಯುವುದಿಲ್ಲ ಅದು-ಇದು ಎಂದು ಬೊಗಳೆ ಬಿಟ್ಟಿದ್ದು ,ಬಿಟ್ಟಿದ್ದು .! ಅಸಲಿಗೆ ಸ್ವಾಮೀಜಿಗೆ ಇದು ಅಗತ್ಯವಿತ್ತೆ ? ಸ್ವಾಮೀಜಿಗೆ ರಾಜಕೀಯ ಯಾಕೆ ? ಎಲ್ಲವನ್ನೂ ತ್ಯಜಿಸಿದ ಸ್ವಾಮಿಗೆ ರಾಜಕೀಯ ದಲ್ಲಿ ಮೂಗು ತೋರಿಸುವ ಅಧಿಕಾರ ವಿದೆಯೇ ? ಅವರ ಇತಿಮಿತಿ ಏನು ಎಂಥ ಎಂಬ ಪ್ರಶ್ನೆ ಪ್ರಜ್ಞಾವಂತರಲ್ಲಿ ಕಾಡದೇ ಇರದು . ಒಂದು ಪಕ್ಷದಲ್ಲಿ ಸ್ವಾಮಿಗೆ ಅಗತ್ಯ ಕಂಡು ಬಂದಿದ್ದರೆ , ಮುಖ್ಯಮಂತ್ರಿಯಲ್ಲಿ ತಮ್ಮ ಈ ವೈಚಾರಿಕತೆಯನ್ನು ಮಂಡಿಸಬಹುದಿತ್ತು ,ಇರಿಸಬಹುದಾಗಿತ್ತು ಅದನ್ನು ಬಿಟ್ಟು ಸ್ವಾಮೀಜಿ, ಬಹಿರಂಗ ಸಭೆಯಲ್ಲಿ ಬಾಯಿಗೆ ಬಂದ ಹಾಗೆ ಮಾತನಾಡುವುದು ಎಷ್ಟು ಸಮಂಜಸ ವಾದದ್ದು ?ಇದರಿಂದ ತುಸು ಬೇಸರದಿಂದ ಸೀಟಿನಿಂದ ಮುಖ್ಯ ಮಂತ್ರಿ ಯಡಿಯೂರಪ್ಪ ಮೇಲೆದಿದ್ದು ತಪ್ಪೇನಿಲ್ಲ . ಸೀಟಿನಿಂದ ಎದ್ದು ಹೊರಗೆ ನಡೆಯಲಿಲ್ಲ ಎದ್ದು ಅವರಲ್ಲಿ ಸೌಜನ್ಯವಾಗಿ ವಿನಂತಿಸಿದ್ದರು "ಸ್ವಾಮೀಜಿಗೆ ನಿಮ್ಮಿಂದ ಈ ಮಾತು ಬರಬಾರದು "ಎಂದು ಅಲವತ್ತುಕೊಂಡ ಕಾಲುಮುಟ್ಟಿ ಬೇಡಿಕೊಂಡಿದ್ದರು ಆದರೆ ವೇದಿಕೆ ಬಿಟ್ಟು ಕೆಳಗೆ ಇಳಿಯಲಿಲ್ಲ ಇದು ಸ್ವಾಮೀಜಿಯ ದುರಾಂಕಾರವೋ ಅಥವಾ ಮುಖ್ಯಮಂತ್ರಿಗಳದ್ದೋ ? ಮಾಧ್ಯಮಗಲ್ಲಿ ಪ್ರಸಾರ ಕಂಡ ವಿಡಿಯೋ ಕ್ಲಿಪ್ ನೋಡಿ ತಾವೇ ತೀರ್ಮಾನಿಸಿ . ಅಲ್ಲಿ ಮುಖ್ಯಮಂತ್ರಿಗಳೇ ಇರಲಿ ಅಥವಾ ಇನ್ನು ಯಾರೇ ಇದ್ದರೂ ಕೂಡ ಸ್ವಾಮೀಜಿ ಮಾಡಿದ್ದು ಮಹಾನ್ ತಪ್ಪು ಅಲ್ಲವೇ ?!ಸ್ವಾಮೀಜಿಗಳಲ್ಲಿ ದೇವರನ್ನು ಕಾಣುತ್ತೇವೆ ,ನಂಬುತ್ತೇವೆ ದೇವರಿಗೆ ಹತ್ತಿರವಾದವರು ,ಅನೂ ದಿನ ಅನೂ ಕ್ಷಣವೋ ಧ್ಯಾನ ಪೂಜೆ ಯಲ್ಲಿ ಮಗ್ನರಾಗಿರುತ್ತಾರೆ ಎಂದು ಅವರಲ್ಲಿ ಆತ್ಮೀಯತೆ,ಪೂಜನೀಯ ಭಾವನೆಯನ್ನು ಬೆಳೆಸುತ್ತೇವೆ ಆದರೆ ಇಂಥ ಚಟುವಟಿಕೆಗಳಿಂದ ಒಳ್ಳೆ ಸ್ವಾಮೀಜಿ ಗಳ ಮೇಲೂ ಸಹ ನಮ್ಮ ನಂಬಿಕೆ ಕುಸಿಯುತ್ತದೆ ಹಾಗೂ ಇತರ ಧರ್ಮದವರ ನಗೆಪಾಟಲಿಗೆ ನಾವು ಈಡಾಗುತ್ತಿದೆ. ಪೇಜಾವರ ಶ್ರೀಗಳು ಹಾಗೂ ಸಿದ್ದಲಿಂಗ ಮಠದ ಸ್ವಾಮೀಜಿಗಳಂತೆ ಯಾವ ಸ್ವಾಮೀಜಿ ಇನ್ನು ಜನ್ಮ ತಾಳಲಾರರಾರು ಅವರ ಪಾದದ ಧೂಳಿಗೆ ಕೂಡ ಸಮವಲ್ಲ ಇಂಥ ಕಪಟ ಭಂಡತನದ ಸ್ವಾಮೀಜಿಗಳಿಂದ ದೂರವಿರುವುದೇ ಲೇಸು ಏನಂತೀರಿ ?
ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ (ಕ್ರಪೆ:- #youtub #ಒನ್ ಇಂಡಿಯಾ)
https://www.youtube.com/watch?v=iubma_HjSqU
ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ (ಕ್ರಪೆ:- #youtub #ಒನ್ ಇಂಡಿಯಾ)
https://www.youtube.com/watch?v=iubma_HjSqU
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)






















