ಗುರುವಾರ, ಜುಲೈ 2, 2020

ಈ ಪರಿಯ ನಿರ್ಲಕ್ಷೆ ಯಾಕೆ?


ಇಟಲಿ,ಪ್ರಾನ್ ಸೇರಿದಂತೆ ಅನೇಕ ದೇಶಗಳಲ್ಲಿ ಕೊವೀಡ್ ಮ್ರತರನ್ನು ಲಾರಿಯಲ್ಲಿ ತುಂಬಿಸಿ ದೊಡ್ಡ ಹೊಂಡಕ್ಕೆ ಡಂಪ್ ಮಾಡುವ ವಿಡೀಯೋವನ್ನು ನಾವೇಲ್ಲಾ ಇತ್ತಿಚೆಗೆ ಕಂಡಿರುತ್ತೇವೆ. ಅಂತದ್ದೇ ಚಿತ್ರಣವನ್ನು ನಮ್ಮ ದೇಶದ ರಾಜ್ಯದಲ್ಲಿನ ಬಳ್ಳಾರಿ,ದಾವಣಗಿರಿ,ಯಾದಗಿರಿಯಲ್ಲಿ ನೋಡುವ೦ತಾಗಿದ್ದು ನಮ್ಮ ದೌರ್ಭಾಗ್ಯ ಸರಿ !ಯಾವುದೇ ಕರುಣೆ,ಅನುಕಂಪ,ಗೌರವ,ಸೌಜನ್ಯ,ನಾಚಿಕೆ,ಮರ್ಯಾದೆ ಇಲ್ಲದೇ ಬೀದಿ ನಾಯಿ ಸತ್ತಾಗ ಹೇಗೆ ಅದನ್ನು ದರ-ದರನೆ ಎಳೆದು ಹೊಂಡಕ್ಕೆ ಎಸಯಲಾಗುತ್ತದೋ ಕಾರ್ಯ ರೂಢಿಗತವಾಗಿದೆ. ಜೆಸಿಬಿ ಯಂತ್ರದ ಮೂಲಕ ಗುಂಡಿಗೆ ದೂಡುವ,ಒಂದೇ ಹೊಂಡದಲ್ಲಿ 4-5 ಶವವನ್ನು ಎಸೆಯುವ ಪರಿಸ್ತಿತಿಯನ್ನು ನೋಡಿದರೇ ಕರುಳು ಚುರುಕ್ ಅನ್ನುತ್ತದೆ. ಇನ್ನು ಇದನ್ನು ಗಮನಿಸುತ್ತಿರುವ ಅವರನ್ನು ಕಳೆದು ಕೊಂಡ ಕುಟುಂಬಸ್ಥರಿಗೆ ಹೇಗಾಗಬೇಡ. ನಾಯಿ,ಇಲಿ ಸತ್ತಾಗ ಅವುಗಳ ಬಾಲ ಹಿಡಿದು ದರ ದರನೇ ಎಳೆದು ಎಸೆಯುತ್ತೇವೆ ಸೇಮ್ ಟು ಸೇಮ್ ಎಸೆಯುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೆ ಶೇಮ್ ಆಗಬೇಕು., ತಮ್ಮಂತಯೇ ಇನ್ನೊಬ್ಬರ ದೇಹ ಎಂಬ ಕಿಂಚಿತ್ ಅರಿವು ಇಲ್ಲವೇ? ಒಂದು ನಾಯಿ ಸತ್ತರೇ ಇನ್ನೊಂದು ನಾಯಿ ಅದೇಷ್ಟು ಉಪಚಾರ ಮಾಡುತ್ತದೆ. ಕಣ್ಣೀರು ಸುರಿಸುತ್ತದೆ. ತನ್ನ ಮೂತಿಯಿಂದ ಮಣ್ಣು ಮಾಡುತ್ತದೆ, ನಾಯಿಗಿಂತ ಕಡೆಯಾದೇವಾ?ಶ್ವಾನಕ್ಕಿರುವಷ್ಟು, ಬುದ್ದಿಮತ್ತೆ,ಪಾಪ ಪ್ರಜ್ನೆ ನಮ್ಮವರಿಗೆ ಇಲ್ಲದೇ ಇರುವುದು ಕಳವಳಕಾರಿ. ಕೋವಿಡ್ ರೋಗಿಗಳಿಂದ ದೂರವಿರಬೇಕು,ಮ್ರತದೇಹದಿಂದಲೂ ಕೂಡಾ ಹೌದು.
ಭಯ,ಆತಂಕ ಎಲ್ಲಾರಲ್ಲೂ ಇರುತ್ತದೆ. ನರ್ಸ್ ,ಡಾಕ್ಟರ್ ಎಷ್ಟು ಕಾಳಜಿಯಿಂದ ರೋಗಿಗಳಿಗೆ ಟ್ರೀಟ್ ಮೆಂಟ್ ಕೊಡುತ್ತಾರೆ.ಆದರೆ ಇತ್ತ ಸತ್ತವರ ಶವವನ್ನು ದೂರದಿಂದ ಎಸೆಯುವರಿಗೆ ಇದು ಪಾಲನೆಯಾಗುವುದಿಲ್ಲವೇ? ಪಿಪಿಇ ಧಿರಿಸುಗಳನ್ನು ಧರಿಸಿಯೂ, ಇಂಥಹ ಕಾರ್ಯಕ್ಕೆ ಮುಂದಾಗುವುದು ಎಷ್ಟು ಸರಿ ?ಅಷ್ಟೊಂದು ಭಯವೇ? ಶವಕ್ಕೂ ಕೂಡಾ ಪುಲ್ ಕವರ್ ಮಾಡಲಾಗುತ್ತದೆ ಆ ಹೊದಿಕೆ ಯಿಂದ ವೈರಸ್ ಹೊರಬರಲು ಸಾಧ್ಯವೇ? ತಾವುಗಳು ಸಹಾ ತುಂಬಾನೆ ರಕ್ಷಣಾತ್ಮಕ ಕವಚವನ್ನೇ ತೊಟ್ಟೂ ಹೀಗೆ ಮಾಡಲು ತಮಗೆ ಮನಸ್ಸು ಹೇಗೆ ಬರುತ್ತದೆ ?ನಿಮ್ಮ ಮನೆಯ ಸದಸ್ಯಗಳಿಗೆ ಹೀಗೆ ಮಾಡುತ್ತೀರಾ ?" ಸತ್ತವರ ದೇಹ ಎತ್ತ ಬಿದ್ದರೇನು?" ಎಂಬ ನಾಣ್ಣುಡಿ ಇದೆ.ಆದರೂ ಕೂಡಾ ನಮ್ಮಲ್ಲಿ ಸತ್ತವರಿಗೆ ಎಷ್ಟು ಶಾಸ್ತ್ರ ,ಸಂಪ್ರದಾಯಯುತವಾಗಿ ಅಂತ್ಯಕ್ರೀಯೆಯನ್ನು ಮಾಡಲಾಗುತ್ತದೆ. ಅದು ಬದಿಗಿರಲಿ ಕಿಂಚಿತ್ ಸರಿಯಾಗಿ ಹೊಂಡಕ್ಕೆ ಹಾಕಿ ದಫನ ಮಾಡಲೂ ನಿಮ್ಮಿಂದ ಸಾಧ್ಯವಾಗುತ್ತಿಲ್ಲ ,ಒಂದೇ ಗುಂಡಿಗೆ ಒಂದೇ ಮ್ರತ ದೇಹ ಅಂತ ಗೋತ್ತಿದ್ದರೂ, 4-5 ಶವವನ್ನು ಒಂದೇ ಸಮನೆ ಸುರಿಯುವ ನೀವುಗಳು ಬುದ್ದಿಭ್ರಮಣೆರೇ? ಅಂದರೂ ಅತಿಶಯೊಕ್ತಿ ಯಾಗಲಾರದು .ಒಂದು ಸರ್ಕಾರಿ ಹುದ್ದೆಯನ್ನು ಹೊಂದಿರುವ ವ್ಯಕ್ತಿ ಮ್ರತರಾದರೇ ಸಕಲ ಸರ್ಕಾರಿ ಗೌರವ ಲಭಿಸುತ್ತದೆ ಆದರೆ ಇಲ್ಲಿ ಕೋವಿಡ್ ಗೆ ತುತ್ತಾದರೇ ಜೆಸಿಬಿಯ ಮೂಲಕ ಕಸವನ್ನು ಬೀಸಾಡುವ ಹಾಗೆ ಗುಂಡಿಗೆ ದೂಡಿ ಅಂತ್ಯಸಂಸ್ಕಾರ ಕಾರ್ಯ ಮುಗಿದು ಬಿಡುವ ಪದ್ದತಿ ಜಾರಿಯಲ್ಲಿದೆ .ಎಂತಹ ಕಾಲಘಟ್ಟದಲ್ಲಿ ನಾವಿದ್ದೇವೆ ? ಹೌದು !ಕರೋನ ಸಮಸ್ಯೆಇದೆ .ಪ್ರಸ್ತುತದ ಪರಿಸ್ಥಿತಿ ಎಲ್ಲರಿಗೂ ಅರ್ಥವಾಗುತ್ತದೆ. ಆದರೂ ಈ ಪರಿಯ ನಿರ್ಲಕ್ಷೆ,ನಿರ್ಲಜ್ಜೆ ಯಾಕೆ?ದ್ರಷ್ಠಿ ಕೋನ ಬದಲಾಗಿದೆ!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ