ಮಂಗಳವಾರ, ಜುಲೈ 28, 2020

ಅಂತವರಿಗಿಂತ ಕೆಟ್ಟವನಾದನೇ ಡ್ರೋನ್ ಪ್ರತಾಪ್ ?


ಡ್ರೋನ್ ಪ್ರತಾಪ್ ಹೆಸರು ಕೇಳದವರು ಯಾರು ಇಲ್ಲ 2-3 ವರ್ಷಗಳ ಹಿಂದೆ ಅತೀ ಹೆಚ್ಚು ಜನಪ್ರೀಯ ಗೊಂಡ ಪ್ರತಾಪ್ ಮತ್ತೆ ಸುದ್ದಿಯಾಗುತ್ತಿದ್ದಾರೆ ಬಡತನ ದಿಂದ ಬಂದು ತನ್ನ ಪ್ರಯತ್ನ ಮತ್ತು ಯಶೋಗಾಥೆ ಯಿಂದ ಯುವ ವಿಜ್ಞಾನಿ ಎಂಬ ನಾಮಾಂಕಿತ ದೊಂದಿಗೆ ಎಲ್ಲಾರಿಗೂ ಮಾದರಿ ಎನಿಸಿಕೊಂಡ ಈತ ಕಳೆದ ಒಂದಷ್ಟು ದಿನಗಳಿಂದ ಈಚೆಗೆ ಸಾಮಾಜಿಕ ಜಾಲ ತಾಣ ಸೇರಿದಂತೆ ಮಾಧ್ಯಮಗಳ ಚಾವಡಿಯಲ್ಲಿ ವಸ್ತುವಾಗುತ್ತಿದ್ದಾರೆ . ಬಗೆ ಬಗೆಯ ಟ್ರೊಲ್ಸ್ ಗಳು ಅನೇಕಾನೇಕ ಆತನ ಕಥೆಗಳು ವಿಚಿತ್ರಕಾರಿಯಾಗಿ ತಾರಕಕ್ಕೇರುತ್ತಿದೆ . ಅಂತಹ ದೊಡ್ಡ ತಪ್ಪು ಮಾಡಿದ್ದಾನೆಯೇ ಪ್ರತಾಪ್ ? ತಪ್ಪು ದೊಡ್ಡದಿರಲಿ ಸಣ್ಣದಿರಲಿ ತಪ್ಪು ತಪ್ಪೇ ! ದ್ರೋಹ ವಂಚನೆ ಎಂಬಿತ್ಯಾದಿಗಳಿಂದ ಸುದ್ದಿಯಲ್ಲಿರುವ ಪ್ರತಾಪ್ ನನ್ನು ಈ ಸ್ಥಿತಿಗೆ ಕರೆತಂದವರು ಯಾರು ? ಈಗಿನ ಅದೇ ಮಾಧ್ಯಮ ವಲ್ಲವೇ ?ಹಾಗೆ ನೋಡಿದರೆ ಪ್ರತಾಪ್ ನದ್ದು ಎಲ್ಲವೂ ಸತ್ಯವಲ್ಲ ಹಾಗಂತ ಎಲ್ಲವೂ ಸುಳ್ಳೆಂದು ಹೇಳಲಾಗದು. ಪ್ರತಾಪ್ 'ಈ ತ್ಯಾಜ್ಯ' ವಸ್ತುಗಳನ್ನು ಬಳಸಿ ಡ್ರೋನ್ ಮಾಡದಿರಬಹುದು ,ಕೆಲವು ಸಿನಿಮಾ ಕಥೆಗಳನ್ನು ತನ್ನ ಭಾಷಣದಲ್ಲಿ ಬಿಸಾಕಿರಬಹುದು ,ದೇಶ ಸುತ್ತದಿರಬಹುದು .
ಆದರೂ ಆತನಲ್ಲಿ ಸ್ವಲ್ಪ ಲಾಲೆಜ್ಡ್ ಇದೆ. ಅದಿದೆ ಅನ್ನುವುದಕ್ಕೆ ಎಲ್ಲೋ ಆತನ ಹಾವ -ಭಾವ ದಿಂದ ಆರ್ಥವಾಗುತ್ತಿದೆ ಮೆಡಲ್ ಗಳನ್ನೂ ಪಡೆಯದಿದ್ದರೂ ಆ ಸ್ಥಳ ಗಳಿಗೆ ಎಂಟ್ರಿಯನ್ನು ದಕ್ಕಿಸಿಕೊಂಡಿರುವುದು ಎಲ್ಲೋ ಅವನಲ್ಲಿನ ಪ್ರತಿಭೆ ಸಾಕ್ಷಿ ಒದಗಿಸುತ್ತಿದೆ ಒಂದಷ್ಟು ಪ್ರಯತ್ನ ಪಟ್ಟರೇ ಖಂಡಿತವಾಗಿಯೂ ಸಾಧಿಸಬಲ್ಲನು ಅದೆಲ್ಲಾ ಬದಿಗಿರಿಸಿದರೇ ,ಇಂದಿನ ಈ ಎಲ್ಲಾ ಗೊಂದಲ, ಗೊಡವೆಗಳಿಗೆ ಸೋಶಿಯಲ್ ನೆಟ್ವರ್ಕ್ ,ನ್ಯೂಸ್ ವಾಹಿನಿಗಳೇ ಕಾರಣ. ಇದೀಗ ಅದೂ ಇದೂ ಎಂದು ವರ್ಣರಂಜಿತವಾಗಿ ಕಥೆ ಕಟ್ಟುವ ಇವುಗಳು ಅಂದು ಈತನ ಪೂರ್ವಪರವನ್ನು ಕಂಡು ಕಾರ್ಯಕ್ರಮವನ್ನು ಪ್ರಸಾರ ಮಾಡ್ಬೇಕಿತ್ತು . ತಮ್ಮ ಟಿಆರ್ಪಿ ತೆವಲಿಗೋಸ್ಕರ ಇಂತಹ ಕಾರ್ಯಕ್ರಮಗಳಿಗೆ ಕಥನ ಹೆಣೆಯುವರ ಮಧ್ಯೆ ಸಿಕ್ಕಿದ್ದೇ ಛಾನ್ಸು ಎನ್ನುತ್ತಾ ಇಲ್ಲ ಸಲ್ಲದ ಸುಳ್ಳು -ಪೊಳ್ಳುಗಳನ್ನು ಹೇಳಲು ಒಳ್ಳೆಯ ಪ್ಲಾಟ್ ಪಾರ್ಮ್ ಸಿಕ್ಕಿತ್ತು ಪ್ರತಾಪ್ ಗೆ . ಅದನ್ನೇ ಬಂಡವಾಳ ಮಾಡ್ಕೊಂಡು ಬಿಟ್ಟದ್ದ . ಹಲವಾರು ಜನರಿಗೆ ,ಕಡಿಮೆ ಸಮಯದಲ್ಲಿ ರೋಲ್ ಮಾಡೆಲ್ ಆಗಿಬಿಟ್ಟ . ಆತನ ಮೇಲೆ ಕನಿಕರ ತೋರಿಸದ್ದ ಕೈಗಳಿಗೆ ಆತನ ಯಶೋಗಾಥೆಯನ್ನು ಆಲಿಸಿದ ಮನಸ್ಸುಗಳಿಗೆ ಘಾಸಿಯಾಗಿದ್ದು ಬಿಟ್ಟರೇ ತಲೆ ಹೋಗುವಂತ ವಿಚಾರವೇನೂ ಇರಲಿಲ್ಲ. ದಿನೇ -ದಿನೇ ಟ್ರೋಲ್ ಮಾಡುವವರು ಸುದ್ದಿ ರೆಡಿ ಮಾಡುವವರು ಆಲೋಚಿಸಿ . ಗುಬ್ಬಿ ಮೇಲೆ ಬ್ರಹ್ಮಸ್ತ್ರವೇಕೇ ? ದೇಶವನ್ನು ಲೂಟಿ ಗೈದವರು,ಕೊಳ್ಳೆ ಹೊಡೆದವರು ,ಆಶ್ವಾಸೆಯನ್ನು ಕೊಟ್ಟು ಓಟು ಪಡೆದು ಸ್ವಾರ್ಥ ಪರಿಧಿಯಲ್ಲಿ ಸುತ್ತುವ ರಾಜಕಾರಣಿ ಗಳಿಗೆ , ದೇಶದ ಅನ್ನ ತಿಂದು ಅನ್ಯ ದೇಶಗಳ ಎಂಜಲು ನೆಕ್ಕುವವರಿಗಿಂತ ದೊಡ್ಡ ತಪ್ಪು ಮಾಡಿಲ್ಲ ಪ್ರತಾಪ್. ಇವರುಗಳು ಮಾಧ್ಯಮ ಮತ್ತು ನೆಟ್ಟಿಗರಿಗೆ ಆಹಾರ ವಾಗದಿರುವುದು ವಿಪರ್ಯಾಸ . ಬಗ್ಗಿದವರಿಗೆ ಹಿಡಿದಷ್ಟು ಗುದ್ದು ಕೊಡುವುದು ತರವಲ್ಲ !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ