ಶನಿವಾರ, ಫೆಬ್ರವರಿ 2, 2013

ಮೀಡಿಯಾ ಒಂದು ಸಮಾಜದ ಮೈನ್ ಪಾರ್ಟ್.




ಇದು ಬಹುಶ: ಉಡುಪಿಯ ಇತಿಹಾಸದಲ್ಲಿ ಪ್ರಥಮ ಬಾರಿ ಎನ್ನಬಹುದೇನೊ ?! ಅಷ್ಟೋಂದು ಮಾಧ್ಯಮ ಮಂದಿ ವರದಿ ,ವಿಡಿಯೋ, ಫೊಟೋಗಾಗಿ ಮುಗಿ ಬೀಳುತ್ತಿರುವ ಸಂದರ್ಭ. ಕೇವಲ ಉಡುಪಿ ಜಿಲ್ಲೆಯ ,ರಾಜ್ಯದವರಲ್ಲದೇ ದೇಶದ ಅದರಲ್ಲೂ ಅಂತರಾಷ್ಟ್ರಿಯ ಮಟ್ಟದ ವಿವಿಧ ಮಾಧ್ಯಮಗಳು  ಆಗಮಿಸಿದ್ದರು .ನೇರ ಪ್ರಸಾರದ ವಾಹನಗಳು ಸಾಲುಗಟ್ಟಿ ನಿಂತಿದ್ದವು .ಇಂತಹ ವಾತಾವರಣ ಇದುವರೆಗೂ ಉಡುಪಿ ಜಿಲ್ಲೆ ತನ್ನ ತೆಕ್ಕೆಯೊಳಗೆ ಹಾಕಿ ಕೊಳ್ಳದಿದ್ದರೂ ಮುಂದೆ ಇಂತಹ ಪರಿಸ್ಥಿತಿ ಉದ್ಬಾವಿಸಬಾರದು ಅಂತಿಲ್ಲ. ಹೌದು ಈ ಸನ್ನಿವೇಶ ಕಂಡು ಬಂದಿದ್ದೂ ಉಡುಪಿಯ ಶಿರ್ವದಲ್ಲಿ ಡಿ.17 ಸೋಮವಾರ . ರಂದು .ಲಂಡನ್  ಕೇಂಬ್ರಿಜ್ .ಆಸ್ವತ್ರೆ ಯಲ್ಲಿ ಆಕಸ್ಮಿಕ ಸಾವು (ಆತ್ಮಹತ್ಯೆ) ನಿಂದ ಮ್ರತ ದೇಹ ದಫನಕ್ಕೆ ತವರೂರಿಗೆ  ಬಂದ ಕಾರಣ
ನರ್ಸ್ ಜೆಸಿಂತಾ ಸಲ್ದಾನ ಅಂತ್ಯಕ್ರೀಯೆಯ ಚಿತ್ರಣವನ್ನು ಸೆರೆಹಿಡಿಯಲು ,ವರದಿಗಾಗಿ ಆ ಕ್ಷಣ ದಲ್ಲಿ ಸೇರಿದ್ದ ಲಕ್ಶಾಂತರ ಅಭಿಮಾನಿ ,ಹಿತೈಷಿಗಳ ಕಂಬನಿಯ ನಡುವೆ ನೂರಾರು ಪತ್ರಕರ್ತರ ಸಹಾಮಿಲನ ವು ಸಾಥ್ ನೀಡಿದ್ದು ಹೀಗೆ
.ಒಂದೊಂದು ಮಾಧ್ಯಮದಲ್ಲಿ ಕನಿಷ್ಠವೆಂದರೂ ಎರಡೇರಡು ಜನ ವರದಿಗಾಗಿ ಮುಗಿ ಬೀಳುತ್ತಿದ್ದರು .ಮ್ರತರ ಕುಟುಂಬಸ್ಥರು ಪರಿ-ಪರಿಯಾಗಿ ಮಾಧ್ಯಮದ ದ ಸ್ನೇಹಿತರು  ದಯಮಾಡಿ ಅಂತ್ಯಕ್ರಿಯೆಯ ಚಿತ್ರಣವನ್ನು ತೆಗೆಯಬೇಡಿ ಎಂದು ಅಲವತ್ತು ಕೊಂಡರೂ ,ಯಾವುದಕ್ಕೂ ಕ್ಯಾರ್ ಮಾಡದ ಮೀಡಿಯಾ ಮಂದಿ ಪ್ರತಿಸ್ವರ್ಧಿತನ ದಿಂದ ವರದಿಯ ಆಳದಲ್ಲಿ ವಿಹರಿಸುತ್ತಿದ್ದರು . ಹೇಗ್ಯಾಗೋ ವರದಿ ಚಿತ್ರವನ್ನು ಕಲೆಹಾಕಿ ಸ್ಥಳದಲ್ಲೇ ಲ್ಯಾಪ್ ಟಾಪ್ ,ಐಪಾಡ್,ಟ್ಯಾಬ್ಲೆಟ್ ಮುಖಾಂತರ ತಮ್ಮ -ತಮ್ಮ ಮಾಧ್ಯಮಗಳಿಗೆ ಕಳಿಸುತ್ತಿದ್ದರು .ಬಹುಶ್ಯ ಇಂತಹ ವರ್ತಮಾನ ನಡೆಯಲು ನರ್ಸ್ ಜೆಸಿಂತಾ ಇರಬಹುದೇ ?! ಎಂತೆಂಥ ವಿ.ಇ.ಪಿ ಗಳೇ ಇಹಲೋಕ ತ್ಯಜಿಸಿದಾಗಲೂ ಈ  ಬೆಳವಣಿಗೆ ಕಂಡು ಕೇಳರಿಯಲಿಲ್ಲ. ಕೇವಲ ಒಬ್ಬ ನರ್ಸ್ ಗೆ ಈ ರಾಜ ಮರ್ಯಾದೆ ಯಾಕೆ ಎಂಬ ಆಲೋಚನೆಗೆ ಕಾರಣ-ಜೆಸಿಂತಾ ಸಾವು ಸಂಶಯದ ಸುಳಿಯಲ್ಲಿ ಸಿಕ್ಕಿ ಎಫ಼್ಹ್ .ಎಮ್ ಆರ್ಜೆ ಗಳ ಕುಚೆಷ್ಟೆ ಯಿಂದ ಪ್ರಾಣವನ್ನ ತ್ಯಜಿಸಿದ ದ್ದರಿಂದ ಸ್ವತ: ಲಂಡನ್ ನ ಮಾಧ್ಯಮಗಳೇ ಬೀದಿದೆ ಬಂದು ಹೈಲೆಟ್ ಮಾಡಿದ್ದವು .ಸೂಕ್ತ ತೀರ್ಪಿ ಗಾಗಿ ನ್ಯಾಯದ ಬಾಗಿಲನ್ನು ಬಡಿದಿದ್ದವು ಹಾಗಾಗಿಯೇ ಎನೋ ಈ ಘಟನೆ ಮಾಧ್ಯಮ ಕೇಂದ್ರಿತವಾಗಿ ರೂಪು ಗೊಂಡಿರು ವುದು .ಜನಪ್ರತಿನಿಧಿಗಳಿಂದ ಹಿಡಿದು ಸೆಲಬ್ರಿಟಿ ,ಗ್ರಾಮದ ನಾಗರೀಕ ರನ್ನು ಒಂದು ವಾರದ ತನಕ ಸರಿಯಾದ ನಿದ್ರೆ ,ಆಹಾರ ವಿಲ್ಲದೇ ನಮ್ಮ ಪತ್ರಕರ್ತ ರು ಸೇರಿದಂತೆ ದೂರದ ಅದರಲ್ಲೂ ಲಂಡನ್ ಮಾಧ್ಯಮ ದ ಮಂದಿ ಗಳು ಸಂದರ್ಶನ ಮಾಡುವ, ಮಾಹಿತಿ ಯನ್ನು ಕಲೆಹಾಕುವ ಪರಿ ನಿಜಕ್ಕೂ ಅನನ್ಯ ಅನುಕರಣೀಯ ವಾದದ್ದು ಪ್ರಸ್ತುತ ದಿನಗಳಲ್ಲಿ ಸ್ವರ್ಧಾತ್ಮಕ ರೀತಿಯಲ್ಲಿ ಮಾದ್ಯಮಗಳು ಬೆಳೆಯುತ್ತಿದ್ದರೂ ಸೂಕ್ತ ಯಾ ಸೂಕ್ಸ್ಮಸತ್ಯವನ್ನು ಹೊರಗೇಡುವಲ್ಲಿ ,ನ್ಯಾಯವನ್ನು ಬಡಿದೆಬ್ಬಿಸುವಲ್ಲಿ ಸಹಕಾರಿ ಯಾಗಿವೆ .ಈ ಘಟನೇ ಯೆ ಇದಕ್ಕೆ ಉತ್ತಮ ಉದಾಹರಣೆ .ಮೀಡಿಯಾ ಸಮಾಜ ಒಂದು ಮೈನ್ ಪಾರ್ಟ್ ಎನ್ನಲೇ ಬೇಕು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ