ಶನಿವಾರ, ಫೆಬ್ರವರಿ 2, 2013

ಪ್ರಳಯ ಭೀತಿ :ಪರಿಸ್ಥಿತಿ ಸಹಜ ಸ್ಥಿತಿ





ರಳಯ ದಿನ ಎಂದು ಬಿಂಬಿತವಾದ 21 ಡಿ .2012 ರ  ದಿನ  ಕೊಂಚ ಆತಂಕದ ವಿದ್ದರೂ ಜನಜೀವನ ಸಹಜ ಸ್ಥಿತಿಯಲ್ಲಿ ವಿಹರಿಸಿತ್ತು  .ದೈನಂದಿನ ಚಟುವಟಿಕೆಗೆ ಯಾವುದೇ ಪರಿಣಾಮಬೀರಿಲ್ಲ .
 2000 ಇಸವಿಗೆ ಪ್ರಳಯ ಸಂಬವಿಸುವುದು  ಕಟ್ಟಿಟ್ಟ ಬುತ್ತಿ ಎಂದು ಆಗಿನ ವರ್ಷಗಳ ಮೊದಲೇ ತತ್ತಸಮಯ ಅಷ್ಟೊಂದು ಮಾಧ್ಯಮಗಳ ಸದ್ದಿಲ್ಲದಿದ್ದರೂ ಸುದ್ದಿ ಮಾತ್ರ ಬೆಟ್ಟದಷ್ಟು ಪ್ರಚಲಿತವನ್ನು ಹೊಂದಿ ಗಲ್ಲಿ -ಗಲ್ಲಿ ಗಳಲ್ಲಿ ಗುಲ್ಲನ್ನೇ ಹಬ್ಬಿಸಿತು ,ಜನ ಜೀವನದ ಮೇಲೆ ಬಾರಿ ತಲ್ಲಣವನ್ನೇ ಉಂಟು ಮಾಡಿತ್ತು .ಜನರು ಪ್ರಳಯದ ಭೀತಿ,ಪ್ರಾಣ ಭಯದಿಂದ ಊರನ್ನೇ ತ್ಯಜಿಸಿಸುವದರ  ಸನ್ನಿವೇಶ ಒಂದೆಡೆ ಯಾದರೆ ,ಸಾಲ -ಸೂಲ ಮಾಡಿ ಪ್ರಳಯದ ಕೆಲವು  ದಿನಗಳ ಮೊದಲು  ಹೆಚ್ಚಿನವರು ಪಾರ್ಟಿ ಯ ಹೆಸರಲ್ಲಿ ಮಸ್ತ್ -ಮಜಾ ಮಾಡಿದ ಬಹಳಷ್ಟು ಉದಾಹರಣೆ ಗಳು ದಾಖಲಾಗಿದ್ದವು .ಆದರೆ ನೀರಿಕ್ಷೆ ಹುಸಿ  ಯಾಗಿಸಿತ್ತು .ಅಂತೆಯೇ  ಕಳೆದ ಎರಡು ವರ್ಷಗಳ ಹಿಂದೆ ಮತ್ತೆ ಅದೇ ರಾಗದ ವಾತಾವರಣ ಸ್ರಷ್ಟಿಗೆ ಕನ್ನಡಿ ಹಿಡಿಯಲು ಕೆಲವು ದ್ರಶ್ಯ ಮಾಧ್ಯಮಗಳು ಸ್ವರ್ಧಾತ್ಮಕ ರೀತಿಯಲ್ಲಿ ವಿವಿಧ ಜೋತಿಷ್ಯ ಗಳನ್ನು ದಿನವೀಡಿ ಕಾರ್ಯಕ್ರಮವನ್ನು ಪ್ರಸಾರ ಮಾಡುದ  ಪ್ರಚಾರ ಪಡಿಸಿದ್ದರು .ಇದು ಕೇವಲ ಗ್ರಾಮೀಣ ಪ್ರದೇಶಗಲ್ಲಿ ತುಸು ಭಯದ ವಾತಾವರಣ ವನ್ನು ಸ್ರಷ್ಟಿ ಮಾಡಿದ್ದು ಬಿಟ್ಟರೆ ಪಟ್ಟಣ ಪ್ರದೇಶ ಅದರಲ್ಲೂ ಪ್ರಜ್ಞವಂತರಲ್ಲಿ ಎಳ್ಳು ಕಾಳಿನಷ್ಟೂ   ಪ್ರ ಭಾವ ಬೀರುವಲ್ಲಿ   ಸಾಧ್ಯವಾಗಲಿಲ್ಲ .ಜನರು ಎಚ್ಚೆತ್ತು ಕೊಂಡಿದ್ದಾರೆ ,ಚಿಂತಿತರಾಗಿದ್ದಾರೆ .ಕಳೆದ ಬಾರಿ ಕಹಿ ನೆನಪನ್ನು ಪುನರಾವರ್ತಿಸುವ ಅಗತ್ಯವನ್ನು ತೋಡೆದು ಹಾಕುವಲ್ಲಿ ಸಫಲರಾಗಿದ್ದಾರೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ