ಭಾನುವಾರ, ಆಗಸ್ಟ್ 26, 2012

ಇದು ಮೊಸಳೆ ಕಣ್ಣೀರೆ ?

ಸುಮಾರು 3 ಲಕ್ಷಕ್ಕೂ ಅಧಿಕ ಜನಸಂಖ್ಯೆಯಲ್ಲಿ ಕರ್ನಾಟಕವನ್ನು ಆಶ್ರ ಯಿಸಿರುವ ಉತ್ತರ ಭಾರತದ ಈಶಾನ್ಯ ಭಾಗದ  ಜನತೆ ಕಳೆದ ಮೂರು ದಿನಗಳಿಂದ ಪುಂಖಾನು -ಪುಂಖ ವಾಗಿ ಕಾಲ್ಕಿಳುತ್ತಿರುವ ಚಿತ್ರಣವನ್ನು ನೋಡಿ ಅನೇಕರು ಕರ್ನಾಟಕದ ಜನಸಂಖ್ಯೆ ಕಡಿಮೆಯಾಗಲಿ ನಮ್ಮ ನಿರುದ್ಯೋಗಿ ಗಳಿಗೆ  ಫಲ ಸಿಕ್ಕಿಲಿ ಅನ್ನುವಂತ ಮನಸ್ಥಿತಿ ಹೊಂದಿದ್ದರೆ , ಇವರುಗಳಿಂದ ನಮ್ಮ ರಾಜ್ಯಕ್ಕೆ ಬಹಳಷ್ಟು ಲಾಭಾ೦ಶವಿದೆ ಎಂಬ ವಿಚಾರ ತೆರೆ ಮರೆಯಲ್ಲಿ ಪ್ರಜ್ಞಾವಂತರು ಆಲೋಚಿಸುತ್ತಿದ್ದರೆ ,ನಮ್ಮ ರಾಜ್ಯದ ರಾಜಕೀಯ ಪಂಡಿತರಿಗೆ ಏನ್ ಅನ್ನಿಸುತ್ತಿದ್ದ್ಯೋ ಗೊತ್ತಿಲ್ಲ ಒಟ್ಟಾರೆ ಪಕ್ಷ ಬೇಧ ಮರೆತು ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಬೀಡು ಬಿಟ್ಟು ಮೈಕ್ ಹಿಡಿದು ಬೊಗಳೆ ಬಿಡುತ್ತಾ, ಈ ವಿಚಾರದಲ್ಲೂ ಅಷ್ಟೇ ನಿರಂತರವಾಗಿ  ಒಬ್ಬರನೊಬ್ಬರು ದೂರುದರಲ್ಲೇ ಕಾಲ ಕಳೆಯುತ್ತಿದ್ದಾರೆ ...ಹೋಗುವವರನ್ನು ಕೈ ಹಿಡಿದು ಕುಳ್ಳಿರಿಸಲು ಅಸಾಧ್ಯದ ಮಾತು
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ  ಹಾಕಿದ ನಡವಳಿಕೆ ಎಳ್ಳಷ್ಟು ಸರಿಯಲ್ಲ ಇವರುಗಳಿಗೆ ಸೂಕ್ತ ವಾದ ಭದ್ರತೆ ಒದಗಿಸುವಲ್ಲಿ ಆಡಳಿತ ಪಕ್ಷ ವಿಫಲ ವಾಗಿದೆ ಎಂದು ಕಿಡಿ ಕಾರುತ್ತಿರುವ ,ಒಂದೊಂದು ವಿಚಾರ ಸಿಕ್ಕರೆ ಸಾಕು ಆಡಳಿತ ಪಕ್ಷಕ್ಕೆ ಸರಿಯಾಗಿ ಜಾಡಿಸುವ , ವಿರೋಧ ಪಕ್ಷದ ಮಹಾನುಭಾವರು ಒಮ್ಮೆ ಆ ಸ್ಥಾನದಲ್ಲಿದ್ದಾರೆ ಏನು ಮಾಡುತ್ತಿದ್ದರು ?ಒಟ್ಟಾರೆ ಈ ವಿಚಾರ ದಲ್ಲಿ ಬಹಳಷ್ಟು ಪ್ರಶ್ನೆ ಉದ್ಭವಿಸುತ್ತಿದೆ.ರೆಗುಲರ್  ಟ್ರೈನ್ ಇದ್ದರೂ ,ಸ್ಪೆಷಲ್ ಟ್ರೈನ್ ವ್ಯವಸ್ಥೆ   ಈಶಾನ್ಯರನ್ನು ಕಳಿಸುದರ ಉದ್ದೇಶ ವೇನು?  ಈ ವ್ಯವಸ್ಥೆ ಮೂಲಕ ಆದಷ್ಟು ಬೇಗ  ಜಾಗಖಾಲಿ ಮಾಡಲಿ ಎಂಬ ಮನೋಭಾವನೆ ಹೊಂದಿರ ಬಹುದೇ ? ಆಕಸ್ಮಾತ್ ಅವರುಗಳಿಗೆ ಟ್ರೈನ್ ಸಂಪರ್ಕ ಇಲ್ಲದ ಪರಿಸ್ಥಿತಿ ಯಲ್ಲಿ  ಈಶಾನ್ಯರು ಹೇಗೆ ತೆರಳಲು ಸಾಧ್ಯ ವಾಗುತಿತ್ತು ? ಒಟ್ಟಾರೆಯಾಗಿ ಮೊಸಳೆ ಕಣ್ಣಿರು ಮಿಡಿಯುತ್ತಿರುವ ಇವರುಗಳ ಆತ್ಮ ಶಕ್ತಿ ಏನು ಹೇಳುತ್ತಿದೆ ಗೊತ್ತಿಲ್ಲ.ಏನೆ ಇರಲಿ ಉತ್ತರ ಭಾಗದಲ್ಲಿನ ನಾಗರಿಕರಿಗೆ ಸಂಕಟ -ಸಿಂಪತಿ ತೋರುವ ನಮ್ಮ ರಾಜಕಾರಣಿಗಳು ನಮ್ಮ ಉತ್ತರ ಕರ್ನಾಟಕದಲ್ಲಿನ ಕೆಲವು ಪ್ರದೇಶಗಳ ಜನರು ವಸತಿ ,ಆಹಾರ ,ಉದ್ಯೋಗಕ್ಕಾಗಿ  ಗುಳ್ಳೆಹೋಗುತ್ತಿರುದನ್ನು ತಪ್ಪಿಸುವದ ಸಲುವಾಗಿ ಬೇರೆ ಪರ್ಯಾಯ ಮಾರ್ಗವನ್ನು ಅರಸಬಹುದಿತ್ತು .ಒಂದಷ್ಟು ಸಾನ್ತ್ವಾನದ ನುಡಿ ಯನ್ನಾದರೂ ಹೇಳಬಹುದಿತ್ತು ..ಆಗ  ಇವರ ಹೋರಾಟದ ಸ೦ವಹನ  ಶೀಲ ಕಣ್ಣೀರ ಗಾಥೆ ಎಲ್ಲಿಗೆ ಹೋಗಿತ್ತು ?




ಸಿನಿಮಾ ಸಮಾಜದ ಒಳಿತಿಗೋ ..ಕೆಡುಕಿಗೋ..?

ಸಿನಿಮಾ ಎನ್ನುವುದು 3 ಗಂಟೆ ಗಳ ಮನ ರಂಜಿಸುವ ಒಂದು ಕಾಲ್ಪನಿಕ ಮನೋರಂಜನಾ ಕ್ಷೇತ್ರ .ಸಮಯ ಸದುಪಯೋಗ ,ಸಮಯ ಕಳೆಯುವದಕ್ಕಾಗಿ ಮನೋರಂಜನೆ ಗೋಸ್ಕರ ,ಅಬಲ ರಿಂದ ವ್ರದ್ಧ್ರ ವರಗೆ ಸಿನಿಮಾದ ಮೊರೆ ಹೋಗುವದು  ಸಾಮಾನ್ಯ ಮತ್ತು ಅತ್ಯಂತ ಹೆಚ್ಚು ಬಳಕೆ ಯಾಗುತ್ತಿರುವ ಒಂದು ಜನಪ್ರಿಯ ತಾಣ .ಚಿತ್ರ ದ ಸನ್ನಿವೇಶ ಕಪಾಲಕಲ್ಪಿತ ವಾದರೂ ಮೇಲ್ನೋಟಕ್ಕೆ ಸತ್ಯ ಅಂಶವನ್ನೇ ಉಣಬಡಿ ಸುತ್ತಾ ಕೆಲವಂದು ಕಥಾ ಹಂದರವು ಮನಸ್ಸಿನ ಭಾವನೆ ಯನ್ನು ತಲ್ಲಣ ಗೊಳಿಸುತ್ತದೆ , ತುಡಿತ -ಮಿಡಿತ ದ ಭಾವನಾ ತ್ಮಕ ಬೀಜ ಮನಸ್ಸಿನ ಬುಟ್ಟಿಯಲ್ಲಿ ಕೊರೆಯುವ ಶಕ್ತಿ ಯನ್ನು ಸಿನಿಮಾದ ಕೆಲ ಕಹಾನಿ ಚಲಕ್ ನಲ್ಲಿರುತ್ತದೆ .ಅದೇನೇ ಇರಲಿ  ಸಿನಿಮಾ ಸಮಾಜಕ್ಕೊಂದು ,ವ್ಯಕ್ತಿಗೊಂದು ಉತ್ತಮ ಸಂದೇಶ ವನ್ನು ನೀಡುದರ ಜೊತೆಗೆ ಸ್ರಜನಾತ್ಮಕ ನಡತೆ ,ಉತ್ತಮ ಕೌಶಲ್ಯ ಕಲಿಸಿ ಕೊಡುತ್ತದೆ ,ಅದೇ ತರಹ ಒಂದು ಉತ್ತಮ ಸಮಾಜ ಮುಖಿ ಯಾಗಿ ಕಾರ್ಯ ನಿರ್ವಹಿಸ ಬೇಕು ಎಂಬ ತುಡಿತ ಪ್ರಜ್ಞಾವಂತರ ಬಯಕೆ .ಹೆಚ್ಚಿನ ಸಿನಿಮಾ ಗಳು ಕಾಲ್ಪನಿಕ ಭಾವ ಬಿತ್ತಿಯಾದರೇ ಕೆಲವು ಒಂದು ನಿರ್ದೇಶಕರು ಸತ್ಯ ಘಟನೆಗೆ ಸುಣ್ಣ -ಬಣ್ಣವನ್ನು ಹದ ವಾಗಿ ಬೆರೆಯಿಸಿ ಬೆಳ್ಳಿಪರದೆಯ ಮೇಲೆ ಹರಿಯ ಬಿಡುತ್ತಾರೆ .
ನಮ್ಮಲ್ಲಿನ ಹೆಚ್ಚಿನ ಜನರ ಆಸೆ ನೋಡಿ  ಸಿನಿಮಾ ನೋಡಿ ಸಲ್ಮಾನ್ ಖಾನ್ ಆಗ್ಬೇಕು ,ದರ್ಶನ್ .ಸುದೀಪ್ ತರ ಪೈಟಿಂಗ್ ಗೆ ಒಗ್ಗಿ ಕೊಳ್ಳ ಬೇಕು ಎಂಬ ಮನಸ್ಥಿತಿ ಯನ್ನು ಹೊಂದಿರುತ್ತಾರೆ .ಸಿನಿಮಾ ಎಂದರೆ ಹಾಗೆ ಅಲವೇ ಪುಸ್ತಕದ ಬದನೆ ಕಾಯಿ  ಸಿನಿಮಾದಲ್ಲಿ 15 ಜನ ರೌಡಿ ಗಳೊಂದಿಗೆ ಹೊಡೆದಾಡುವ ಪರಿ ನಿಜ ಜೀವನದಲ್ಲಿ ನಿಜಕ್ಕೂ ಕನಸ್ಸಿನಲ್ಲೂ ಆಲೋಚಿಸಲು ಸಾಧ್ಯ ವೇ.?. ಆದರೂ ಚಪಲ -ಚಟ ಮಾತ್ರ ಯಾರನ್ನೂ ಬಿಡೋಲ್ಲ . ‘ಪ್ರೀತ್ಸೋದ್ ತಪ್ಪಾ’ ಫಿಲಂ ನೋಡೋದ ಬೂಪ ನೊಬ್ಬ ಶಿವಮೊಗ್ಗದ ಬಸ್ ಸ್ಟ್ಯಾಂಡ್  ಸಮೀಪ ಟೀಟ್ ರವಿಚಂದ್ರ ನ್  ತರಹ ಬೈಕ್ ರೈಡ್ ಮಾಡಿ ಸ್ತಳದಲ್ಲೇ ಕೈ -ಕಾಲು  ಮುರಿದು ಕೊಂಡ ಚಿತ್ರಣವನ್ನು ಹಲವಾರು ಮಂದಿ ಕಣ್ಣಾರೆ ಕಂಡಿದ್ದರು .ಇನ್ನು ಸಿನಿಮದಲ್ಲಿ ಕಾಣಸಿಗುವ  ರೌಡಿ ಸಂ ,ದರೋಡೆ ಯನ್ನು ನಮ್ಮಲ್ಲಿ ಅದೆಷ್ಟೋ ಬುದ್ದಿವಂತರು (!?) ಪ್ರಯೋಗ ಮಾಡಿ ಸಕ್ಸುಸ್ ಆದವರೂ ಇದ್ದಾರೆ ,ಫೈಲ್ ಆಗಿ ಪೋಲಿಸ್ ಸ್ಟೇಷನ್ ನಲ್ಲಿ ಫೈಲ್ ನಲ್ಲಿ ಬಂಧಿ ಯಾದವರೂ ಇದ್ದಾರೆ .ಸಿನಿಮಾದಲ್ಲಿ ರೈಲನ್ನು ಹೇಗೆ ಬ್ಲಾಶ್ಸ್ಟ್ ಮಾಡುತ್ತಾರೆ ಎಂಬ ಒಂದು ಮಾಸ್ಟರ್ ಪ್ಲಾನ್ ಒಂದು ಚಿತ್ರದಲ್ಲಿ ಚಿತ್ರಿಸಲ್ಪಟ್ಟಿತ್ತು .ಅದೇ  ವಿದಾನದಲ್ಲಿ 3 ದಶಕದ ಹಿಂದೆ ಉತ್ತರ ಭಾರತದಲ್ಲಿ ನೆರೆವೆರಿಸಿದ್ದರು ನಮ್ಮ ಅತಿರಥರು .ಇಂಥ ಅದೆಷ್ಟೋ ಘಟನಾವಳಿ ಗಳು ನಮ್ಮ ಸುತ್ತ -ಮುತ್ತ ನಡೀತಾ ಇರುತ್ತವೆ .ಇದಕ್ಕೆಲ್ಲ ಮುಖ್ಯ ಕಾರಣವೇ  ಸಿನಿಮಾ ಹಂಗಾಮ . ಮೊನ್ನೆ -ಮೊನ್ನೆ ನಮ್ಮಲ್ಲೂ ಇಂತದ್ದೇ ಘಟನೆ ಉದ್ಭವಿಸಿತ್ತು  ಅದು ಆಗಷ್ಟ್ 7 ಮೈ ಸೂರ ನ ಅಶ್ವಿನಿ ಎಂಬಾಕೆ ಯನ್ನು ಚಿತ್ರ ವಿಚಿದ್ರಕಾರಿ ಯಾಗಿ ಕೊಲೆ ಮಾಡಲಾಗಿತ್ತು .ಪೊಲೀಸರು ಹೇಗೋ ಹಂತಕರನ್ನು ಬಂಧಿ ಸುವಲ್ಲಿ ಸಫಲರಾದರು ಆರಕ್ಷಕರ ಪೆಟ್ಟಿನ ರುಚಿಗೆ ಅಂತೂ ಸತ್ಯವನ್ನೇ ಬಾಯಿ ಬಿಟ್ಟರು .ನಾವು ದಂಡು ಪಾಳ್ಯ ಫಿಲಂ ನೋಡಿ ಈ ಕಾರ್ಯಕ್ಕೆ ಇಳಿದೆವು ,ಇದೆ ರೀತಿ ಕೋಲಾರ ,ದೊಡ್ಡ ಬಳ್ಳಾಪುರ ದಲ್ಲಿ ಸ್ಕೆಚ್ ರೆಡಿ ಮಾಡಿ ಬಚಾವ್ ಆದವು ಎಂದು ತಮ್ಮ ಪ್ಲಾಶ್ ಬ್ಯಾಕ್ ಅನ್ನು ತೆರೆದಿಟ್ಟರು .ಇಂಥ ಅದೆಷ್ಟೋ ಕ್ರತ್ಯ ಈ ಸಿನಿಮಾ ಕಹಾ ನಿ ಯಿಂದಲೇ ತೆರೆ ಮರೆಯಲ್ಲಿ  ನಡೆಯಲ ಪಡುತ್ತದೆ .ಆದರೆ ಇದು ಮಾತ್ರ ಹೆಚ್ಚಾಗಿ ಯಾರಿಗೂ ಕಾಣ ಸಿಗವುದಿಲ್ಲ .ಅದೆಷ್ಟೋ ಹಂತಕರನ್ನು ,ಪಡ್ಡೆಗಳನ್ನೂ ಸ್ರಷ್ಟಿ ಮಾಡುದಕ್ಕೆ ಪಣತೊಟ್ಟಿರುವ ಈ ಸಿನಿಮಾದಿಂದ ಒಬ್ಬನಾದರೂ ಜಗ ಮೆಚ್ಚಿದ ಮಗ ,ಬಂಗಾರದ ಮನುಷ್ಯ ನನ್ನಾಗಿ ರೂಪು ಗೊಳ್ಳಲು ಒಂದೂ ಚಿತ್ರಣವೂ ಪ್ರೇರಣೆಯಾಗದಿರುವುದು  ವಿಪರ್ಯಾಸ .!!!

ಮಂಗಳವಾರ, ಆಗಸ್ಟ್ 14, 2012

ಅದ್ರಷ್ಟವಂತರ ಜೀವನದಾಟ ಈ ಮೀನುಗಾರಿಕೆ :

ಮೀನುಗಾರಿಕೆ ಎಂದರೆ ಹಾಗೆ ಅದ್ರಷ್ಟವಂತರ ಜಿಂದಗಿಯ ಖೇಲ್ ಅಂತಲೇ ಹೇಳಬಹುದು. ತಮ್ಮ ಜೀವದ ಹಂಗು ತೊರೆದು ನೀರಿಗೆ ಇಳಿಯಬೇಕಾಗುತ್ತದೆ. ಸಮುದ್ರಕ್ಕೆ ತೆರಳಿದ ಮೀನುಗಾರರು ವಾಪಸ್ಸು ಬರುತ್ತಾರೆ ಎಂಬ ಯಾವುದೇ ವಿಶ್ವಾಸವೂ ಇರುದಿಲ್ಲ. ಅದರಲ್ಲೂ ಮುಖ್ಯವಾಗಿ ಆಳಸಮುದ್ರದಲ್ಲಿ ಮೀನುಗಾರಿಕೆಯನ್ನು ನಡೆಸುವ ಮೀನುಗಾರರ ಪಾಡು ಹೇಳತೀರದು. ಸರಿ ಸುಮಾರು 100 ನಾಟಿಕಲ್ ಮೈಲು ದೂರ ಸಾಗುವ ಬೋಟ್, ಹೆಚ್ಚೆಂದರೆ 20 -22 ದಿನ ಮೀನುಗಾರಿಕೆ ನಡೆಸಿ ದಡಸೇರುತ್ತಾರೆ. 

ಸಾಮಾನ್ಯ ವಾಗಿ 10 -15 ದಿನಗಳವರೆಗೆ ಕಾರ್ಯಚರಣೆ ಮುಂದುವರಿಯುತ್ತದೆ. ಹೆಚ್ಚೂ-ಕಮ್ಮಿ 7 -8 ದಿನಗಳವರೆಗಳಂತೂ ಸಮುದ್ರ ವಾಸ ತಪ್ಪಿದ್ದಲ್ಲ. ಅಷ್ಟು ದಿನಕ್ಕೆ ಬೇಕಾಗುವಷ್ಟು ಸಾಮಾನು -ಸರಂಜಾಮುಗಳನ್ನು ಹೊತ್ತುಯ್ಯಲಾಗುತ್ತದೆ. ಒಂದು ಬೋಟ್ ನಲ್ಲಿ 8 ರಿಂದ 10 ಜನ ಇದ್ದೆ ಇರುತ್ತಾರೆ. ಒಂದು ಪ್ರಕಾರದಲ್ಲಿ ಯೋಚಿಸಿದರೆ ಮೀನುಗಾರರ ಜೀವನ ನೀರಿನ ಮೇಲಿನ ಗುಳ್ಳೆಯಂತೆ. ಯಾವಾಗ ಬೇಕಾದರೂ ಒಡೆಯಬಹುದು. ಕಾರ್ಯಾಚರಣೆಯ ಮಧ್ಯೆ ತೂಫಾನ್, ದಟ್ಟಅಲೆ ಆಗಮಿಸಿದರೆ, ಮೋಡ ಮುಸುಕಿ ತೆರಳುವ ಹಾದಿ ಕೆಟ್ಟರೆ, ಷ್ಟಿಮರ್ ಗೆ, ದೋಣಿಗೆ, ಅಚಾನಕ್ ಆಗಿ ಡಿಕ್ಕಿಯಾಗಿ ಅಪಘಾತ ಸಂಭವಿಸುವ ಪ್ರಮೇಯವೂ ಇರುತ್ತದೆ. ಇಂಥ ಅವಘಡ ಹಲವಾರು ಬಾರಿ ಕರಾವಳಿಯಲ್ಲಿ ಸಂಭವಿಸಿದೆ. ಬೋಟ್ ನಲ್ಲಿರುವ ಒಬ್ಬ ಸದಸ್ಯನಿಗೂ ಅನಾರೋಗ್ಯ ಲಕ್ಷಣ ಕಂಡು ಬಂದರೆ ದೇವರೇ ಗತಿ. ಗಂಭೀರ ಪ್ರಮಾಣದಲ್ಲಿ ಆರೋಗ್ಯದಲ್ಲಿ ಏರುಪೇರು ಉಂಟಾದರೆ ಸಮುದ್ರದಲ್ಲಿಯೇ ಕೊನೆಯುಸಿರೆಳಯಬೇಕು. 
 ರಕ್ಷಣೆಗೋಸ್ಕರ ಕಾರ್ಯಚರಣೆಯನ್ನು ಸ್ಥಗಿತಗೊಳಿಸಿ ದಡ ಸೇರಲೇ ಬೇಕಾಗುತ್ತದೆ. ದೂರ ಪ್ರಯಾಣಿಸಿ ಬರಿಕೈಲ್ಲಿ ವಾಪಸು ಬಂದರೆ ನಷ್ಟದ ಹೊಣೆ ಮೀನುಗಾರರೆ ಹೊರಬೇಕು. ಇತ್ತೀಚೆಗಿನ ದಿನಗಳಲ್ಲಿ ವಯರ್ ಲೆಸ್ ಸಾಧನ (walky talky ) ಪ್ರತಿಯೊಂದು ಬೋಟ್ ನಲ್ಲಿ 3 ರಿಂದ 4 ಸೆಟ್ ಅವಶ್ಯಕವಾಗಿದ್ದರೂ, ಕೆಲವೊಮ್ಮೆ ನೆಟ್ ವರ್ಕ್ ತೊಂದೆರೆ ಉಂಟಾಗಿ ಊಟಕ್ಕಿಲ್ಲದ ಉಪ್ಪಿನ ಕಾಯಿಯಂತಾಗುತ್ತದೆ. ಒಟ್ಟಾರೆ ಸಮಸ್ಯೆಗಳ ಸರಮಾಲೆಯಲ್ಲಿ ಕ್ಷಣ -ಕ್ಷಣವೂ ದುಗುಡ -ಆತಂಕದಿಂದ ಸರಿಯಾದ ನಿದ್ದೆ ಆಹಾರ ಬಿಟ್ಟು ದಿನ ದೂಡುವ ಇವರ ಸಾಹಸಮಯ ಜಿಂದಗಿಗೆ ಸೆಲ್ಯೂಟ್ ಹೊಡೆಯಲೇ ಬೇಕು .

ಅಣ್ಣನ ಹೋರಾಟ ಹಿಂದಕ್ಕೆ ?!

ಪ್ರಸ್ತುತ ಶತಮಾನದಲ್ಲೂ ಗಾಂಧೀಜಿಯ ತತ್ವದಡಿಯಲ್ಲಿ ವಿಹರಿಸುತ್ತಾ ,ಜನಮನ್ನಣೆಗಳಿಸಿ  ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದ ,ಅಣ್ಣ ಹಾಜರೆ  'ಆಧುನಿಕ ಗಾಂಧೀ 'ಎಂದೇ ಪ್ರಸಿದ್ಧಿಯನ್ನು ಪಡೆದು ಕೊಂಡರು.
ಬ್ರಷ್ಟಾಚಾರ ಮುಕ್ತ ರಾಷ್ಟ್ರ ಸ್ಥಾಪನೆ .ವಿದೇಶ ದಲ್ಲಿರುವ ಕಪ್ಪು ಹಣವನ್ನು ವಾಪಸು ಪಡೆಯುದರ ಸಲುವಾಗಿ ಕೇಂದ್ರ ಸರ್ಕಾರದ ವಿರುದ್ದ  ಹೋರಾಟದ ಚಾಟಿ ಬೀಸಿದರು .ತನ್ನ ಸಂಗಡಿಗರನ್ನು ಒಳಗೂಡಿ ಆಹಿಂಸಾತ್ಮಕ ಪ್ರತಿಭಟನೆ ನಡೆಸಿದರು .ಉಪವಾಸ ಸತ್ಯಾಗ್ರಹವನ್ನು ಕೆಲಕಾಲ ನಿರ್ಭೀತಿ ಯಿಂದ ನಡೆಸಿದರು .ಬವಿಷ್ಯ ಇಂತದ್ದೊಂದು ಚಳುವಳಿ ಯನ್ನು ದೇಶದಲ್ಲಿ ಸಾಕಷ್ಟು ಮೊದಲೇ ನಡೆಸಬೇಕಿತ್ತು ಎಂದು ಆಲೋಚನೆ ಮಗ್ನರಾದವರು  ಹಲವರು ಜನ .

 ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ ಮೇಲಾದರೂ ಅಣ್ಣ ನಂತಹ ದೇಶದ ಹಿತ ಚಿಂತಕರ ಕಾರ್ಯಕ್ಕೆ ದೇಶದಲ್ಲೆಡೆ ಸಾಕಷ್ಟು ಬೆಂಬಲ ವ್ಯಕ್ತಗೊಂಡಿತು .ಅಣ್ಣನ ಪ್ರತಿಭಟನೆಯ ಕಾವು  ಕ್ಷಣ ಕಾಲ ಕೇಂದ್ರ ಸರ್ಕಾರದ ಬುಡವನ್ನು ಅಲ್ಲಾಡಿಸಿ ಬಿಟ್ಟಿತು .ಈ ಕ್ರಮವನ್ನು ಕಂಡು ಕೇಂದ್ರ ಮೊಸಳೆ ಕಣ್ಣಿರನ್ನು ಮಿಡಿದು ಬಯಕೆಯನ್ನು ಈಡೇರಿಸುವಲ್ಲಿ ಪ್ರಯತ್ನಿಸುದಾಗಿ ಒಪ್ಪಿ ಕೊಂಡಿತು..ಪ್ರಯತ್ನಕ್ಕೆ ಸಿಕ್ಕ ಫಲ ದಿಂದ ಅಣ್ಣ ಹೂ ನಗೆನ್ನು ಮನಸ್ಸಿನಲ್ಲಿ ಚೆಲ್ಲಿದರು .ಆದರೆ ಭರವಸೆ ಕೊಟ್ಟ ಕೇಂದ್ರ ಸರಕಾರ ಬಯಕೆ ಈಡೇರಿಸುವಲ್ಲಿ ವಿಫಲವಾಯಿತು .ಕೆರಳಿದ ಆಣ್ಣ ಟೀಮ್ ಮತ್ತದೇ ಪ್ರತಿಭಟನೆ ನಿರಶನದ ಹಾದಿ ಮುಂದುವರಿಸಿದರೂ ,ಕೇಂದ್ರ ಯಾವುದೇ ರಿಯಾಕ್ಟ್ ಮಾಡದೇ ನೀರಿನ ಮೇಲೆ ಹೋಮ ಮಾಡಿದಂತ ಪರಿಸ್ತಿತಿ ಉದ್ಭವಗೊಂಡಿತು .ಯಾವದೇ ಒಬ್ಬ ಮನುಷ್ಯ ಎಷ್ಟು ದಿನ ಅಂತ ಉಪವಾಸ ಆಚರಿಸಲು ಸಾಧ್ಯ ?
ಉಪವಾಸ ಬಿಟ್ಟ ಅಣ್ಣ ಈ ವಿಷಯದಲ್ಲಿ ಅಸಾಯಕರಾದರು .ಮನವಲಿಸಲು ಈ ಹೋರಾಟ ಮಾರ್ಗದಿಂದ ಅಸಾಧ್ಯ ಎಂದು ಇಲ್ಲಿಗೆ ಕೈ ತೊಳೆದು ಕೊಂಡುಬಿಟ್ಟರೆ ,ಅಣ್ಣ ತಂಡದವರು ಮಾತ್ರ ಅಣ್ಣನ ಕಿವಿ ಊದಿ ಒಂದು ಸ್ವತಂತ್ರ್ಯ ಪಕ್ಷವನ್ನು ಕಟ್ಟಿ ಚುನಾವಣೆಗೆ ಸ್ವರ್ಧಿಸಿ ಹೋರಾಟ ನಡೆಸುದಾಗಿ ಸಾರಿ ಬಿಟ್ಟರು .ನಿಜಕ್ಕೂ ಅಣ್ಣ ರಾಜಕೀಯ ಸೇರಿ ಹೋರಾಟಕ್ಕೆ ಅನುವಾದರೆ ಇದು ಒಂದು ಕಪ್ಪು ಚುಕ್ಕೆ ಅಣ್ಣನ ಮೇಲೆ ಆವರಿಸುದರಲ್ಲಿ ಯಾವದೇ ಸಂಶಯ ವಿಲ್ಲ .ರಾಜಕೀಯ ಎಂದರೆ (ರಾ -ರಾವಣ ,ಜ-ಜರಾಸಂದ,ಕೀ -ಕೀಚಕ ,ಯ -ಯಮ )ದಂತರರುವ ರಾಕ್ಷಸ ಕೂಟಕ್ಕೆ ಒಬ್ಬ ಸಚ್ಚ ಸೌಧ ಪಂಥದ ಸನ್ನಡತೆಯ ವ್ಯಕ್ತಿ ಬಾಗಿಯಾಗಲು ಅಸಾಧ್ಯ ಮಾತೇ ಸರಿ .
 

ಸತ್ಯತ್ವನ್ನು ಮೆಟ್ಟಿ ಮಿಥ್ಯದ ಹಾದಿ ಯನ್ನೇ  ಹಿಡಿಯ ಬೇಕಾಗುತ್ತದೆ .ಇದು ಅಣ್ಣ ಟೀಂ ಗೆ ಆರೋಗ್ಯಕರ ವಿಚಾರವಲ್ಲ .ಒಂದು ಲೆಕ್ಕಚಾರದ ಪ್ರಕಾರ ಅಣ್ಣ ಇದಕ್ಕೆ ಒಗ್ಗಿಕೊಂಡರೆ ಅಣ್ಣ ನ ಇದುವರೆಗಿನ ಹೋರಾಟಕ್ಕೆ ಯಾವದೇ ಅರ್ಥ ವಿಲ್ಲ ..............

ಹೋ ಸ್ಟೇ ಮೇಲೆ ದಾಳಿ ವಾಸ್ತವ ಸಂಗತಿ ಏನು ?

ಜುಲೈ 28 ರಂದು ಮ೦ಗಳೂರಿನ ಪಡಿಲ್ ನಲ್ಲಿನ ಹೋಂ ಸ್ಟೇ ಮೇಲೆ ದಾಳಿಯ ಪರಿಣಾಮ, ನಾನ ಕಡೆ ಚರ್ಚೆಗೆ ಗ್ರಾಸವಾಗಿತ್ತು ಒಂದೆಡೆ  ಹಿ೦.ಜಾ .ವೇ ಯ ತಪ್ಪೆಂದು ಬಿಂಬಿತವಾದರೆ ಇನ್ನೊಂದೆಡೆ ವಿಧ್ಯಾರ್ಥಿಗಳದ್ದೇ ಮಹಾ ತಪ್ಪು ಎಂದು ಪ್ರತಿಭಟನೆ ವ್ಯಕ್ತ ವಾಗಿದ್ದವು .ಒಟ್ಟಾರೆಯಾಗಿ ಮೇಲ್ ನೋಟಕ್ಕೆ ಹಿ೦.ಜಾ.ವೇ ಯ ತಪ್ಪು ಸಾಬೀತು ಗೊಳ್ಳುವ೦ತಿದ್ದರೂ,ವಿಧ್ಯಾರ್ಥಿ ಗಳದ್ದೂ ತಪ್ಪು ಇಲ್ಲವಂತಿಲ್ಲ ಯಾವತ್ತೂ ಕೆಂಡ ವಿಲ್ಲದೇ ಹೊಗೆ ಯಾಡುದಿಲ್ಲ.ಕರಾವಳಿ ಸಂಘ ಪರಿವಾರಗಳ ನಾಡು .ಸಂಸ್ಕ್ರತಿಯ ರಕ್ಷಣೆ  ಹೆಸರಲ್ಲಿ ಬಗೆ -ಬಗೆಯ ಸಂಘಗಳು ತೊಡಗಿವೆ .ಸಂಸ್ಕ್ರತಿಯ ಉಳಿವಿಗಾಗಿ ಕಾರ್ಯ ನಿರ್ವಹಿಸುತ್ತವೆ .
 ಅಂತೆಯೇ ಉಳಿದ ಸಂಘಟನೆಗಳೂ ಅಷ್ಟೇ ತಲೆ ಎತ್ತಿವೆ .ತಾವೇನೂ ಇತರರುಗಳಿಗೆ ಕಮ್ಮಿ ಇಲ್ಲದಂತೆ ಪೈಪೋಟಿ ನೀಡುತ್ತಿವೆ .ಒಂದು ಲೆಕ್ಕದಲ್ಲಿ ಈ ಪ್ರತಿ ಸ್ವರ್ಧಿ ತನದಿನದಿಂದಲೇ ಇದು ಇಷ್ಟೊಂದು ತಲೆ ಎತ್ತಿದೆ.ಹೋಂ ಸ್ಟೇ ಯಲ್ಲಿನ birthday party ಕರ್ತೃ ಸ್ಥಳೀಯ ವಿಧ್ಯಾರ್ಥಿ .ಆತನ ನಿವಾಸ ಇರುವದು ಮ೦ಗಳೂರಿನಲ್ಲಿಯೇ .ಆತ ತನ್ನ ಸ್ನೇಹಿತರಿಗೆ ಪಾರ್ಟಿ ಕೊಡುವ ಮನಸಿದ್ದರೆ .ತನ್ನ ಸ್ವಂತ ಮನೆಗೆ ಬರ ಹೇಳಬಹುದಿತ್ತು .ಮನೆಗೆ ಆಹ್ವಾನಿಸಿ ಗಮ್ಮತ್ತ್ ಲ್ಲಿ ಆಚರಿಸಬಹುದಿತ್ತು .ಅದೆಲ್ಲ ಬಿಟ್ಟು ಹೋ೦  ಸ್ಟೇ ಯಲ್ಲೇ arrenge ಮಾಡಿದ್ದರ ಗುಟ್ಟೇನು ?bithday ಪಾರ್ಟಿ, ಸಹಜ -ಸಾಮಾನ್ಯವಾಗಿ ಹಿಂದಿನ ದಿನ ರಾತ್ರಿ 12 ಗಂಟೆ ನಂತರ ಮತ್ತು ಮರುದಿನ ಮಧ್ಯಾನದ ಒಳಗೆ ಆಚರಿಸುವ ಪರಿ ಎಲ್ಲಡೆ ಕಾಣ ಸಿಗುತ್ತವೆ .ಆದರೆ ಇವರದ್ದು ಏನೋ diffrent plan ಸಂಜೆ 6 ಗಂಟೆ ಯ ಮೇಲೆ .!
 ಅಷ್ಟಕ್ಕೂ ಅಲ್ಲಿ ಯಾವುದೇ decoration ಆಗಲಿ ,cake ಸೇರಿದಂತೆ ಮತಿತ್ತರ ವಸ್ತುಗಳೇ ಇಲ್ಲ !ವಿಧ್ಯಾರ್ಥಿನೀಯರೂ ಅಷ್ಟೇ ಅವರು ತೊಟ್ಟಿದ್ದ ಉಡುಗೆ -ತೊಡುಗೆಯನ್ನು ಗಮನಿಸುತಿದ್ದರೆ?? ಹಿ೦ .ಜಾ .ವೇ ಯು ದಾಳಿ ಮಾಡಿ ಬಂಧಿಸುವ plan  ನಿಜಕೂ success  ಹಂತವನ್ನು ತಲುಪಿದ್ದರೂ ,ಹಲ್ಲೆ ಮಡಿ ಚಿಕ್ಕ ಎಡವಟ್ ನಿಂದ ಏಕ್ ದಂ flap ನ್ನು ಅನುಭವಿಸಿದ್ದರು .ಹಲ್ಲೆ ಮಾಡಿದ್ದೂ ಒಂದು ಲೆಕ್ಕದಲ್ಲಿ ತಪ್ಪೇಯಾದರೂ ,ಅಲ್ಲಿನ ಪರಿಸ್ಥಿತಿ ಆ ಮಟ್ಟಕ್ಕೆ ದೂಡಿತ್ತು .ಅಲ್ಲಿ ನೆರೆದಿದ್ದ ಒಬ್ಬ್ಬ ವರದಿಗಾರರ ಪ್ರಕಾರ ಒಂದೊಂದು ಹೇಳಿಕೆ,ಅಲ್ಲಿ  5 -6 ,7 -8 -9 ಮಂದಿ ಎಂಬ ವರದಿ ಸಿಕ್ಕರೆ .ನಿಜಕ್ಕೂ ಅಲ್ಲಿ ಜಮಾವಣೆ ಗೊಂಡಿದ್ದು 15 -20 ಕ್ಕೂ ಅಧಿಕ ಎಂಬುದು ಅಲ್ಲಿನ ಸ್ಥಳೀಯ ಪರ್ತ್ಯಕ್ಷದರ್ಶಿಗಳ ಅಭಿಮತ .ದಾಳಿ ನಡೆದ ತಕ್ಷಣ ಎಲ್ಲ ವಿಧ್ಯಾರ್ಥಿಗಳು ಇದ್ದೇನೋ-ಬಿದ್ದೆನೋ ಎನ್ನುತ್ತಾ ,ತಮ್ಮ -ತಮ್ಮ ಚಪ್ಪಲಿ ,ವಾಹನಗಳನ್ನು ಬಿಟ್ಟು ಕಾಲ್ಕಿತ್ತರೆ,ಕೆಲವರು ಒಂದನೇ floor ನಿಂದ ಜಿಗಿದಿದ್ದಾರೆ .ಇದು ಬೇಕಿತ್ತಾ ?
 ಅಪರಾಧಿ ಎಂಬ ಭಾವನೆ ಇದರಿಂದಲೇ ತಿಳಿಯುದಿಲ್ಲವೇ?ಇವರನ್ನು ಹತೋಟಿಗೆ ತರುವದಕ್ಕಾಗಿ,ವಿಧ್ಯಾರ್ಥಿ ಗಳನ್ನೂ ಕ್ರೋಧಿಕರಿಸುವ ಸಲುವಾಗಿ ಅನಿವಾರ್ಯವಾಗಿ ಹಲ್ಲೆ ಮಾಡಲಾಯಿತು ,ಅಟ್ಟಾಡಿಸಿಕೊಂಡು,ಜಬ್ರದಸ್ತ್ ನಲ್ಲಿ ಹಿಡಿದು ಕೊಣೆಯಲ್ಲಿ ಬಂಧಿಸಬೇಕಾಯಿತು ಎನ್ನುದು ಮೂಲ ಗಳಿಂದ ತಿಳಿದು ಬರುತ್ತಿರುವುದು ವಾಸ್ತವಾರ್ಹ ಸಂಗತಿ .ನಮ್ಮದು ತಪ್ಪಿಲ್ಲ ಎಂದ ಮೇಲೆ ಸೀದಾ ಮಧ್ಯಮ ವರದಿಗಾರರ  ಸಮ್ಮುಖ ದಲ್ಲಿ ನಿಂತು ಕೆಮರಾಕ್ಕೆ ಫೋಸು ಕೊಟ್ಟು ಸತ್ಯ ಸಂಗತಿ ಯನ್ನು ಹೇಳ ಬಹುದಿತ್ತು .ಆದರೆ ಇವರಗಳು ಮಾಡಿದ್ದೇನು? ಕುಂಬಳ ಕೈ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡುದೆಂದರೆ ಇದೆ ಅಲ್ವೇ ?

ಸೋಮವಾರ, ಆಗಸ್ಟ್ 6, 2012

ಪತ್ರಕರ್ತರ ಮೇಲೆ ಕೇಸು ದಾಖಲಿಸಿದ ಕಾನೂನು ಇಲಾಖೆಗೆ ದಿಕ್ಕಾರ ..

ಮೊನ್ನೆ ಜುಲೈ 28 ರಂದು ಹಿ೦ .ಜಾ. ವೇ ಯ ಕಾರ್ಯಕರ್ತರು ಮ೦ಗಳೂರಿನ ಹೋಂ ಷ್ಟೇ ಮೇಲೆ ದಾಳಿ ನಡೆಸಿದ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬುದ್ದಿವಂತ ಜಿಲ್ಲೆಯ ಕರಾಳ ಮುಖ ಪರಿಚಿಸಲ್ಪಟ್ಟಿತು. ಇದರಲ್ಲಿ ತಪ್ಪು ಎನ್ನುವ ಅಂಶ ಒಂದೆಡೆ ಮೇಲ್ನೋಟಕ್ಕೆ ಹಿ೦ .ಜಾ. ವೇ. ಯಿಂದ ಉಂಟಾಗಿದ್ದರೆ  ಪಾರ್ಟಿ ನಡೆಸುತ್ತಿದ್ದ ವಿಧ್ಯಾರ್ಥಿಗಳಿಂದಲೂ  ತಪ್ಪು ಇಲ್ಲವಂತಲ್ಲ ,ಬೆಂಕಿ ಇಲ್ಲದೆ ಹೊಗೆಯಾಡದು .ಒಟ್ಟಾರೆ  ತಪ್ಪಿತಸ್ತರನ್ನು ಬಂಧಿಸಿ ಸೂಕ್ತ ಶಿಕ್ಷೆಗೆ ಗುರಿ ಪಡಿಸಬೇಕಾಗಿದ್ದ ನಮ್ಮ ಆರಕ್ಷಕ ದಳದವರು ಪ್ರಾಥಮಿಕವಾಗಿ ಈ ಘಟನೆಯನ್ನು ಚಿತ್ರೀಕರಿಸಿದ ಕಸ್ತೂರಿ ವಾಹಿನಿಯ ನವೀನ,tv9 ನ ರಾಜೇಶ  ಸೇರಿ ಮತ್ತಿಬ್ಬರು ಪತ್ರಕರ್ತರ ವಿರುದ್ಧ ಒಟ್ಟು 4 ಜನರ ಮೇಲೆ ಕೇಸು ಜಡಿದು ಬಿಟ್ಟಿದ್ದಾರೆ .ನಮ್ಮ ವಾಹಿನಿಗೆ ನಮ್ಮ ಪತ್ರಿಕೆಗೆ ಒಂದು exclusive  ಸುದ್ದಿ ನಮಿಂದ ಸಿಗಲಿ ಎಂಬ ಉದ್ದೇಶ ಇರಬಹುದು ,ನಮ್ಮ ಕರ್ತವ್ಯವನ್ನು ಆದಷ್ಟು ಗುಣಮಟ್ಟದಿಂದ ಪಾಲಿಸಬೇಕೆಂಬ ಹೋರಾಟವೂ  ಇರಬಹುದು.
ಸಮಾಜದ ಕುಂದು ಕೊರತೆಯನ್ನು ಕೊಂಚ ಮಟ್ಟದಲ್ಲಿ ತಿದ್ದುವಲ್ಲಿ ,ಜಾಗ್ರತೆ ಮೂಡಿಸುವಲ್ಲಿ ಜನಹಿತ ಕಳಾ -ಕಳಿ ಯಿಂದ ತಮ್ಮ ಕೈಲಾದಷ್ಟು ಅಳಿಲು ಸೇವೆ ಮಾಡವ ಇವರಗಳಿಗೆ ಮುಖ್ಯ ವಾಗಿ ಯಾವ ರಕ್ಷಣೆಯೂ ಇಲ್ಲ .ಎಲ್ಲೊ ಅಪಘಾತ ,ಆಘಾತ ಸಂಬವಿಸಿದಾಗ ಕೇವಲ ಪತ್ರಕರ್ತ ಸಂಘ ಕಂಬನಿ ಮಿಡಿಯುತ್ತದೆ ವಿನಹ..ಇನ್ನ್ಯರದ್ದೆ ಸುಖ ನುಡಿ ಅನಪೇಕ್ಷಿತ .ಒಟ್ಟಾರೆಯಾಗಿ ಮೊನ್ನೆ ನಡೆದ ಘಟನೆಯಲ್ಲಿ ಜೀವದ ಹಂಗು ತೊರೆದು ಘಟನಾ ವಿವರವನ್ನು ಕಲೆ ಹಾಕಿದ ಈ ಪತ್ರಕರ್ತ ಬಂಧುಗಳಿಗೆ ಪಾರಿತೋಷಕ ವಿರಲಿ ,ಒಂದೊಳ್ಳೆ ಮಾತನ್ನು ಹೇಳುವದನ್ನು ಬಿಟ್ಟು ಇವರಗಳ ಮೇಲೆಯೇ ಅಪರಾಧಿ ಎಂಬ ಹೆಣೆ ಪಟ್ಟಿಯನ್ನು ನೀಡಿದ್ದು ಎಷ್ಟು ಸಮಂಜ ಸ ಎಂಬ ಪ್ರಜ್ಞಾವಂತರ ಪ್ರಶ್ನೆಗೆ ,ಕಾನೂನು ಇಲಾಖೆ ಉತ್ತರ ಹೇಳಬೇಕಾಗಿದೆ. ಈ ವರಧಿಗಾರರು ಮೊನ್ನೆಯ ಈ ಕಹನಿಯನ್ನು ತೋರಿಸದಿದ್ದರೆ ಖಂಡಿತವಾಗಿಯೂ ಅಲ್ಲಿ ನಡೆದ ಸ್ವಷ್ಟ -ಸ್ವಚ್ಛ ಘಟನಾ ವಿವರ ಏನೆಂಬುದು ಯಾರಿಗೂ ಅರ್ಥವಾಗುತ್ತಿರಲಿಲ್ಲ ,ಹಾಗೆ ಅದರಲ್ಲಿ ಪಾಲ್ಗೊಂಡ ಕಿಡಿಗೆಡಿಗಳನ್ನು ಬಂಧಿಸುವಲ್ಲಿ ಇವರುಗಳ ಕ್ಯಾಮರದ ಕೈ ಚಾಲಕ ಸಹಕಾರಿಯಗಿತ್ತಲ್ಲವೇ? ಈ ಒಂದು ಘಟನೆಯಿಂದ ಎಲ್ಲರ ಮನೆ -ಮನಗಳಲ್ಲಿ ಜಾಗ್ರತೆ ಮೂಡಿಸುವ ಒಂದು ಅರಿವಿನ ವೇದಿಕೆಯೂ ಆಗಿದೆ ಎನ್ನುದರಲ್ಲಿ ಎರಡು ಮಾತಿಲ್ಲ.ಇಂತವರಿಗೆ ಒಂದು ಮೆಚ್ಚುಗೆಯ ಮಾತನಾಡುದನ್ನು ಬಿಟ್ಟು ಇವರಗಳ ವಿರುದ್ಧವೇ  ಕೇಸು ದಾಖಲಿಸಲು ಸಫಲರಾಗಿರುವ ಕಾನೂನು ಇಲಾಖೆಗೆ,  ಈ ಕ್ರತ್ಯದ ಹಿಂದಿರುವ ಕಾಣದ ಕೈ ಗಳ,ಬಾಗಿಯಾದ ವ್ಯಕ್ತಿಗಳ ಬಂಡವಾಳ ಬಯಲಾಗುತ್ತದೆ ಎಂಬ ರಕ್ಷಣಾತ್ಮಕ ಕಾರ್ಯವಾಗಿರಬಹುದೇ ? ಸಂಶಯದ ಹೊಗೆಯಾಡುತ್ತಿದೆ.

ತಪ್ಪಿತಸ್ತರನ್ನು ಕಾನೂನಿಗೆ ಗುರಿಪಡಿಸಿ . ಈ ತರಹದ ಘಟನೆ ಶಾಶ್ವತವಾಗಿ ಮರುಕಳಿಸದಿರಲಿ


                                    ಬುದ್ದಿವಂತರ ನಾಡಲ್ಲಿ ಅರಗಿಸಿಕೊಳ್ಳಲಾಗದ ಘಟನೆ


ಇತ್ತೀಚಿಗೆ ನಡೆದ ಗುವಾಹಾಟಿ ಪ್ರಕರಣದಿಂದ ಮೂಗಿನ ಮೇಲೆ ಬೆರಳನಿಟ್ಟು .ಇಂತದೊಂದು ಉಗ್ರತನ ದುರ್ಘಟನೆ ನಮ್ಮಲ್ಲೂ ಚಳಪಳಿಸುತ್ತದೆಯೇ ಎಂದು ಕೋಪ -ಆವೇಶ -ಆಕ್ರೋಶ ಹತಾಶೆ ಗಳನ್ನೂ ಕೋಟಿ ಹೃದಯಗಳು ಅರಗಿಸಿಕೊಳ್ಳುತ್ತಿರುವ ಮಧ್ಯೆ ಗಾಯದ ಮೇಲೆ ಬರೆ ಎಳೆದಂತೆ ಮಂಗಳೂರಿನ ಪಡಿಲ್ ನ ಹೋಂ ಷ್ಟೇ ಮೇಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಹಿಂಸಾತ್ಮಕ ರೀತಿಯಲ್ಲಿ ನಡೆದುಕೊಂಡ ಚಿತ್ರಣವನ್ನು ಗಮನಿಸುತ್ತಿದ್ದರೆ ,ನಿಜಕ್ಕೂ ಎಂತವನಿಗಾದರೂ ಹೃದಯ ಕಲ್ಲಾಗದೇ ಇರಲಾರದು.
ಸಂಸ್ಕ್ರತಿ -ಸಬ್ಯೆತೆಗೆ ಹೆಸರು ಪಡೆದ ಕರ್ನಾಟಕ ಅದರಲ್ಲೂ ಬುದ್ದಿವಂತರ ನಾಡಾದ ಕರಾವಳಿಯಲ್ಲಿ ನಡೆದ ಈ ಘಟನೆಯನ್ನು ಸಹಿಸಿ ಕೊಳ್ಳುದಾದರೂ ಹೇಗೆ ? ರೇವ್ ಪಾರ್ಟಿ ನಡೆಯುತ್ತಿದೆ  ಎಂಬ ವರ್ತಮಾನ ಮೇರೆಗೆ ಅಲ್ಲಿಗೆ ದಾವಿಸುವ ಸಂ ಸ್ಕ್ರತಿ ರಕ್ಷಕರು ಎಂದು ಹಣೆಪಟ್ಟಿ ಯಲ್ಲಿದ್ದ ಹಿ೦ .ಜಾ .ವೇ  ಮೊದಲು ಪೋಲಿಸ್ ಇಲಾಖೆ ಗೆ ಸುದ್ದಿ ಮುಟ್ಟಿಸ ಬೇಕಿತ್ತು .ತಮ್ಮ ಘನ೦ದಾರಿ ಕೆಲಸವನ್ನು ಕ್ಲಿಕ್ ಮಾಡಿಕೊಳ್ಳ ಬೇಕೆಂದು ಪ್ರೆಸ್ /ಮೀಡಿಯಾದ ಜೊತೆ ತೆರಳುವ ಉದ್ದೇಶ ವಾದರೂ ಏನು ?ಒಳ ನುಗ್ಗಿ ಏಕಾ-ಎಕಿ ಹಲ್ಲೆ ನಡೆಸುದರ ಬದಲು ಅಲ್ಲಿನ ಸನ್ನಿವೇಶ ,ವಿವರವನ್ನು ಪಡೆಯ ಬೇಕಿತ್ತು ..ಅಟ್ ಲಿಸ್ಟ್ ವಿಧ್ಯಾರ್ಥಿಗಳ  ಮಾತನ್ನು ಆಲಿಸಲಾದರೂ  ಪುರಸೊತ್ತು ನೀಡದೇ ತಾಲಿಬಾನ್ ರೀತಿಯಲ್ಲಿ ಮನ ಬಂದಂತೆ ತಳಿಸಿ ,ವಿಧ್ಯಾರ್ಥಿಗಳ ,ಅದರಲ್ಲೂ ಹೆಣ್ಣು ಮಕ್ಕಳ ಬಟ್ಟೆಯನ್ನು ವಿವಸ್ತ್ರ ಗೊಳಿಸಿದ್ದು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದೂ ನಿಜಕ್ಕೂ ಖಂಡನೀಯ . .
ಘಟನೆಗೆ  ಹಿ .ಜಾ .ವೇ ಯು ನಮ್ಮ ಪಾತ್ರವಿಲ್ಲ ಇದರಲ್ಲಿ ದುಷ್ಟಶಕ್ತಿಗಳ ಕೈವಾಡ ವಿದೆ .ಎಂದು ಸಮರ್ಥಿಸಿಕೊಂಡಿದೆಯಾದರೂ, ಭಾಗವಹಿಸಿದ ಎಲ್ಲ ಕಿಡಿ ಗೆಡಿಗಳನ್ನು ಬಂದಿಸಬೇಕು ನಂತರ ಸತ್ಯವನ್ನು ಹೊರ ಹಾಕಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು .ಈ ಕ್ರತ್ಯವನ್ನು ಎಸಗಿದ ಇವರುಗಳಿಗೆ ಅಕ್ಕ -ತಂಗಿಯರಿಲ್ಲವೆ?ಅಥವಾ ಆಕಾಶದಿಂದ ಬಿದ್ದವರೇ ?ತಾಯಿ ಹೆಣ್ಣಲ್ಲವೇ ? ಹಿಂದೂ ಸಂಘಟನೆಯ ಹೆಸರಿನ ವರ್ತನೆ ಇದು ಮೊದಲಿನದ್ದೇನೂ ಅಲ್ಲ ಈ ಹಿಂದೆ 2009 ಜನವರಿ 24 ರಂದು ಬಲ್ಮಟ ದ ಪಬ್ ಮೇಲೆ ಶ್ರೀ ರಾಮ ಸೇನಾ ಕಾರ್ಯ ಕರ್ತರ ದಂಡು ದಾಳಿ ನಡೆಸಿತ್ತು.ಆ ಸಮಯದಲ್ಲೇ ಒಂದು ಬಿಗು  ಕಟ್ಟು -ನಿಟ್ಟಾ ದ ಕ್ರಮ ಕೈ ಗೊಂಡಿದ್ದರೆ, ಪ್ರಾಯಷ: ಇವತ್ತಿನ ಈ ಘಟನೆ ನಡೆಯುತ್ತಿರಲಿಲ್ಲವಿತ್ತೇನೋ ? ಅಷ್ಟಕ್ಕೂ ಇವರರುಗಳ ವಿರುದ್ದ ಕ್ರಮ ಕೈ ಗೊ ಳ್ಳುದಾದರೂ ಹೇಗೆ? ಕೈ ಗೊಳ್ಳುವವರಾದರು ಯಾರು? ಎಂಬ  ಪ್ರಶ್ನೆ ಮೂಡುತ್ತಿದೆ  ಕರ್ನಾಟಕದ ಬಿಜೆಪಿ ಸರ್ಕಾರಕ್ಕೆ ಇವರುಗಳೇ ದಾರಿ ದೀಪ ಸಂಘ ಪರಿವಾರಗಳ  ಪಾರ೦ಪರ್ಯವಿಲ್ಲದೆ ಬಿಜೆಪಿ ಸೆಟ್ಟೆರಲು  ಸಾದ್ಯವಿಲ್ಲ
ತಪ್ಪಿತಸ್ತರ ವಿರುದ್ದ ಕ್ರಮ ಜರುಗಿಸಿದರೆ ಬಿಜಿಪಿ ಅಶಕ್ತಿದಾಯಕವಾಗುತ್ತದೆ  ಹೀಗಾಗಿಯೇ ಏನೋ ಇಷ್ಟೊಂದು ಎತ್ತರಕ್ಕೆ ಮೀರಿ ಈ ರೀತಿಯ ಘಟನೆಗಳು ಮರುಕಳಿಸಲು ಆಡಳಿತ ಪಕ್ಷ ಸಾಕ್ಷಿ ಭೂತವಾಗುತ್ತಿದೆ .ಇವತ್ತಿನ ಈ ಘಟನೆಯನ್ನು ಇಲ್ಲಿಗೆ ಬಿಟ್ಟರೆ ಮುಂದೆ ಈ ಸಂಘಟನೆ ಗಳು ಒಂಟಿ ಮನೆಯ ಮೇಲೆ ದಾಳಿ ಮಾಡಿ ಹೆಂಗಳೆಯರನ್ನು ಮಾನ ಬಂಗ ಮಾಡದೇ ಇರಲಾರರು ಎಂಬುದಕ್ಕೆ ಯಾವುದೇ ಅನುಮಾನ ವಿಲ್ಲ . ಸಮಾಜದ ಹಿತಕ್ಕಾಗಿ  ಕಾರ್ಯನಿರ್ವಹಿಸುತ್ತವೆ ಎಂಬ ಹಣೆ ಪಟ್ಟಿಯನ್ನು ಹೊಂದಿದ್ದರೆ  ಮಲ್ಪೆ ಯಲ್ಲಿ ನಡೆದ ರೇವ್ ಪಾರ್ಟಿಯನ್ನು ನಿಲ್ಲಿಸ ಬಹುದಿತ್ತು ,ವಿಧಾನ ಸೌದದಲ್ಲಿ ಬ್ಲೂ ಫಿಲ್ಮ ನೋಡುತಿದ್ದ ಸಚಿವರ ವಿರುದ್ಧ ಹೊರಡಬಹುದಿತ್ತು  ಆಗ ಎಲ್ಲಿಗೆ ಹೋಗಿತ್ತು ಇವರುಗಳ ಕೆಚ್ಚದೆಯ ವೀರತನ ?



ಜಂಗಲ್ ಜಾಕಿ ಗೆ ಏನಾಯಿತು ?

ಸಮಯ 8 ಗಂಟೆಯಾದರೆ ಸಾಕು ಸಮಸ್ತ ವೀಕ್ಷಕರು ಟೀವಿಯ  ಮುಂದೆ ಕೂರುತ್ತಾ ಯಾವಾಗ ರಾಜೇಶ್ ಬರ್ತಾನೆ ? ಅವನ  ನಡೆ -ನುಡಿಯನ್ನು ಆಲಿಸಬೇಕು ಛಲ-ಕುತೂಹಲ -ಆತುರ -ಕಾತರ ಬೆಟ್ಟದಷ್ಟು ಕೂಡಿರುತಿತ್ತು ಆತನ ಚಿತ್ರಣ ಮುಗಿದ ತಕ್ಷಣ ಮುಂದಿನ ದಿನಕ್ಕೆ ಇದೆ ಕಿಚ್ಚಿನ ವಾತಾವರಣವನ್ನು  ಮುಂದುವರಿಸುತಿತ್ತು .ಯಾವುದೇ ಟಾಸ್ಕ್ ನಲ್ಲಿ ಈತ ಸೋಲದಂತೆ ದೇವರಲ್ಲಿ ಹರಕೆ ಹೊತ್ತವರು ಅಧಿಕ ಜನ.ಆತನೇ ಪ್ರಥಮ ಬಹುಮಾನ ಗೆಲ್ಲಲಿ ಎಂದು ಆಶಯ ,ಹಾರೈಕೆ ಯನ್ನು ಹೊಂದಿದವರು ಬಹಳಷ್ಟು ಮಂದಿ.ಅಂತೂ ಸಾಕಷ್ಟು ಜನರ ಹಾರೈಕೆ ,ಆಶಿರ್ವಾದದ ಫಲದಿಂದ ಆತ ರಿಯಾಲಿಟಿ ಶೋ ಗೆದ್ದು 10 ಲಕ್ಷ ಬಹುಮಾನ ಪಡೆದೆ ಬಿಟ್ಟ .
ಅಂದ ಹಾಗೆ ಈ ಸ್ಟೋರಿ ಹೇಳುತ್ತಿರುವದು 2 ವರ್ಷದ ಹಿಂದೆ ಸುವರ್ಣ ವಾಹಿನಿಯಲ್ಲಿ ಪ್ರಸಾರ ಕಾಣುತಿದ್ದ 'ಹಳ್ಳಿ ಹೈದ ಪ್ಯಾಟಿಗ್ ಬಂದ ' ಎಂಬ ರಿಯಾಲಿಟಿ ಷೋ ವಿಜೇತ ರಾಜೇಶನ ಬಗ್ಗೆ.ಈ ರಿಯಾಲಿಟಿ ಶೋ ಎಷ್ಟು ಜನಪ್ರಿಯವಾಗಿದ ಎಂದರೆ ,ಬಹಳಷ್ಟು ಜನ ಈತನ ನಡವಳಿಕೆಯನ್ನು ಮೆಚ್ಚಿ ಹರಿಸಿದ್ದರು ..ಈತನೂ ಅಷ್ಟೇ ಒಂತರ ಜೋಕರ್  ತರಹ ಅರ್ದ ಮಾನಸಿಕ ಸ್ಥಿಯಲ್ಲಿಯನ್ನೇ  ಆ ಸಮಯದಲ್ಲಿ ಹೊಂದಿದ್ದ. ಆತನ ಕೆಲವಂದು ನಡವಳಿಕೆಯನ್ನು ಗಮನಿಸುತ್ತಿದ್ದರೆ ಆಗಲೇ ಅರಿವಾಗುತ್ತಿತ್ತು . ದೌರ್ಭಾಗ್ಯ ಎಂದರೆ ಆತ ಈಗ ಪೂರ್ಣ ಮಾನಸಿಕ ಅಸ್ವಸ್ಥನಾಗಿ ಮೈಸೂರಿನ ಕೆ .ಆರ್ .ಆಸತ್ರೆ ಯನ್ನು ಸೇರಿದ್ದಾನೆ .ಮಾನಸಿಕ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ . ಅಂದ ಹಾಗೆ ಈ ರಾಜೇಶ್ ಎನ್ನುವವನು ಮೈಸೂರು ಜಿಲ್ಲೆ ಹೆಚ್ಚ್.ಡಿ .ಕೋಟೆ ಯಲ್ಲಿನ ದಟ್ಟ ಕಾನನದಲ್ಲಿ ಪ್ರಾಣಿ -ಪಕ್ಷಿಗಳೊಡನೆ ಬೆಳೆದ ಗಿರಿಜನ ಯುವಕ .ಕಾಡಿನಲ್ಲಿ ಸಿಕ್ಕ ಗೆಡ್ಡೆ -ಗೆಣಸುಗಳನ್ನು ತಿಂದು ,ಹರಿಯುವ ಹೊಳೆಯ ನೀರನ್ನು ಕುಡಿದು ಜೀವನ ಸಾಗಿಸುತ್ತಿರುವ ಈ ಯವಕನ್ನು ಸಿಟಿ ಗೆ ತಂದರೆ  ಕಾಲ ಕಳೆಯುದಾದರೂ ಹೇಗೆ ? 
ಅಂತೆಯೇ ರಿಯಾಲಿಟಿ ಶೋ ವಿನ್ ಆದ .ಹಾಗೆಯೇ   ಇವನ ವಿಚ್ಚಿದ್ರ ಕಾರಿ ನಡವಳಿಕೆ ಯಿಂದ ಅಪಾರ ಅಭಿಮಾನಿ ಬಳಗವನ್ನು ಪಡೆದನು.ರಿಯಾಲಿಟಿ ಶೋ ನಲ್ಲಿ ಕ್ಲಿಕ್ ಆಗಿದ್ದೆ ತಡ ನಿರ್ದೇಶಕ ರವಿ ಕಡೂರು ಈ ಜೋಡಿಯನ್ನು ಇಟ್ಟು ಒಂದು ಸಿನಿಮ ಮಾಡಿದರೆ ಹೇಗಿರುತ್ತೆ ಎಂದು ಲೆಕ್ಕಚಾರ ಹಾಕಿ 'ಜಂಗಲ್ ಜಾಕಿ ' ಅನ್ನುವ ಒಂದು ಅವನ ಸುತ್ತಲು ಹೆಣೆಯಲಾದ ಕತೆಯನ್ನು ಕಟ್ಟಿ ಸಿನಿಮಾ ನಿರ್ಮಾಣಕ್ಕೆ ತೊಡಗಿದರು .ಸಿನಿಮಾ 2 ವರ್ಷದಿಂದ ಶೂಟಿಂಗ್ ನಡೆಯುತ್ತಿದ್ದರೂ ಬಿಡುಗಡೆ ಕಾಣುವ ಲಕ್ಷಣವಿಲ್ಲ .ರಾಜಿಶ್ನಿಗೆ ಒಂದು ಕಡೆ ಪ್ಯಾಟೆಯ ಸಿನಿಮ ಸಹವಾಸ ,ಇನ್ನೊಡೆದೆ ಹಳ್ಳಿಯ ಜೀವನದ ತಾಕಲಾಟ ಒಂದು ರೀತಿಯಲ್ಲಿ ಎಲ್ಲಿಯೂ ನೆಲೆ ಸಿಗದೇ ಅತಂತ್ರ ಪರಿಸ್ತಿತಿಯನ್ನು ಹೊಂದಿದನು . ಇನ್ನೊಂದೆಡೆ ಮಾದುವೆಯೂ ಬೇರೆ ಮಾಡಿ ಕೊಂಡಿದ್ದನು .2 ವರ್ಷ ಕಳೆದರೂ ಚಿತ್ರ ಬಿಡುಗಡೆ ಕಾಣಲಿಲ್ಲ ಎಂಬ ನೋವು ಬೇರೆ ಮಡುಗುಟ್ಟಿತ್ತು
 
ಇನ್ನು ಆತನ ಸ್ನೇಹಿತರು ,ಅಭಿಮಾನಿಗಳು ಚಿತ್ರ ಎಂದು ರೀಲಿಜ್ ಎಂದು ಪದೇ-ಪದೇ ಕೇಳುತ್ತಿದ್ದರು .ಮೊದಲೇ ಅರೆ ಮಾನಸಿಕ ಅದರೊಳಗೆ ಈ  ಪ್ರಶ್ನೆಗಳ ಸರಮಾಲೆ ಬೇರೆ .ಈ  ಎಲ್ಲ ಒತ್ತಡ ,ಆಘಾತದಿಂದ ಪೂರ್ಣ ಬುದ್ದಿ ಬ್ರಮಣೆ ಯಾಗಿ ಬಿಟ್ಟಿದ್ದಾನೆ ಎಂದು ಆತನ ಹಾವ -ಬಾವ ,ಆಳ -ಅಂತರಾಳವನ್ನು ಅರಿತವರಿಗೆ ಅರ್ಥವಾಗುತಿತ್ತು .ನಿಜಕ್ಕೂ ಇದರಲ್ಲಿ ಯಾರದ್ದು ತಪ್ಪು ? ರಾಜೇಶನದ್ದೇ ?ರಿಯಾಲಿಟಿ ಬಳಗದ್ದೇ?ಸಿನಿಮಾದ್ದೇ ?ಯಕ್ಷ ಪ್ರಶ್ನೆ ಗೆ ಉತ್ತರ .. ಯಾವನಿಗ್ ಗೊತ್ತು ?