ಬುಧವಾರ, ಅಕ್ಟೋಬರ್ 14, 2020

‘ವಿದ್ಯಾಗಮ’ ಯೋಜನೆಯನ್ನು ಸ್ಥಗಿತ ಗೊಳಿಸುವುದು ಸಮಂಜಸ ಅಲ್ಲ

ವಿದ್ಯಾಗಮ ಯೋಜನೆ ಆರಂಭವಾದ ನಂತರ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಕೋವಿಡ್-19 ಪಾಸಿಟಿವ್ ಮತ್ತು ಸಾವು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಒಡ್ಡಿ ಯೋಜನೆಯನ್ನು ಸ್ಥಗಿತ ಮಾಡಲು ಮಾಧ್ಯಮಗಳ ಜೊತೆ ಕೆಲವು ವಿರೋಧ ಪಕ್ಷದ ಮುಖಂಡರುಗಳು ಸರ್ಕಾರದ ಮೇಲೆ ಒತ್ತಡ ತಂದೂ ಅಂತೂ ಸ್ಥಗಿತ ಗೊಂಡಿದೆ . ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂಬುದು ಸರ್ಕಾರದ ಉವಾಚ . ನಿಜಕ್ಕೂ ಸಧ್ಯದ ಪರಿಸ್ಥಿತಿಗೆ ಇದು ಯೋಗ್ಯವಾಗಿದೆ., ಆದರೆ ಇದನ್ನು ಸಂಪೂರ್ಣವಾಗಿ ಸ್ಥಗಿತ ಗೊಳಿಸಬಾರದು ಒಂದಷ್ಟು ಮಾರ್ಪಾಡುಗಳನ್ನು ಮಾಡಿ ಪುನಃ ಪ್ರಾರಂಭಿಸಬೇಕು. ಉತ್ತಮ ಯೋಜನೆಗಳಲ್ಲಿ ಒಂದಾದ ಶಾಲಾ ಮಕ್ಕಳಿಗೆ ಸುರಕ್ಷಿತ ಕ್ರಮಗಳೊಂದಿಗೆ ಕಲಿಕೆಯನ್ನು ಮುಂದುವರೆಸುವ ‘ವಿದ್ಯಾಗಮ’ಯೋಜನೆಯು ಬಡ ,ಮಾಧ್ಯಮ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಮಕ್ಕಳ ಸುರಕ್ಷತೆಗೆ ಹಾಗೂ ವಿದ್ಯಾರ್ಜನೆಗೆ ಇದು ಅನುಕೂಲವಾಗಿತ್ತು . ಏನೀದು ವಿದ್ಯಾಗಮ ಯೋಜನೆ : ತಿರಸ್ಕರಿಸುವ ಮೊದಲು ಯೋಜನೆ ಬಗ್ಗೆ ಅರಿಯಬೇಕಾಗಿದೆ . ಶಾಲೆಗಳು ಪ್ರಾರಂಭವಾಗುವವರೆಗೂ ವಿದ್ಯಾರ್ಥಿಗಳು ವಿದ್ಯೆ ಕಲಿಕೆಯಿಂದ ದೂರವಾಗ ಬಾರದೆನ್ನುವ ಕಾರಣಕ್ಕೆ ವಿದ್ಯಾಗಮ ಯೋಜನೆ ಜಾರಿ ಮಾಡಲಾಗಿತ್ತು. ಗ್ರಾಮೀಣ ಪ್ರದೇಶದ, ನಗರ ಪ್ರದೇಶದ ಸರ್ಕಾರಿ ಮಕ್ಕಳನ್ನ ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಯೋಜನೆಯನ್ನು ಜಾರಿ ಮಾಡಿತ್ತು. ರಾಜ್ಯ ಸರ್ಕಾರವು ಆಗಸ್ಟ್ 4ರಂದು ಅಧಿಕೃತ ಆದೇಶ ಜಾರಿಗೆ ತಂದಿತ್ತು. ಸುಮಾರು 47 ಲಕ್ಷ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎಂಬುದು ಸರ್ಕಾರದ ಯೋಚನಾ ಯೋಜನೆ ಆಗಿತ್ತು . ಅಂತೆಯೇ ವಿದ್ಯಾಗಮ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗದಂತೆ ಮಕ್ಕಳಿರುವ ಜಾಗಕ್ಕೆ ಹೋಗಿ ಶಿಕ್ಷಕರು ಪಾಠ ಮಾಡಬೇಕು. ಒಂದೇ ಊರಿನ ಒಂದೇ ತರಗತಿಯ ವಿದ್ಯಾರ್ಥಿಗಳ ಗುಂಪು ಮಾಡಿ . ಗ್ರಾಮದ ದೇವಸ್ಥಾನ, ಸಮುದಾಯ ಭವನ, ಖಾಲಿ ಮನೆ ಹೀಗೆ ಪಾಠ ಮಾಡಲು ಸೂಕ್ತವಾದ ಶುಚಿತ್ವ ಸ್ಥಳದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು ಎಂಬುದಾಗಿತ್ತು . ಶಿಕ್ಷಕರು-ಮಕ್ಕಳ ನಿರಂತರ ಸಂಪರ್ಕ, ಮಕ್ಕಳಲ್ಲಿ ಮಾರ್ಗದರ್ಶಿತ ಸ್ವಯಂ ಕಲಿಕೆ, ಶಿಕ್ಷಕರ ಮೂಲಕ ಮಕ್ಕಳ ಮನೋಸ್ಥೈರ್ಯದ ವೃದ್ಧಿ, ಶಾಲೆಯಿಂದ ಮಕ್ಕಳು ಹೊರಗುಳಿಯದಂತೆ ಖಾತ್ರಿ, ಶಿಕ್ಷಕರು, ಶಾಲಾ ಮೇಲುಸ್ತುವಾರಿ ಸಮಿತಿಯ ಸದಸ್ಯರು, ಆಡಳಿತ ಮಂಡಳಿಯವರು, ಸ್ವಯಂ ಸೇವಕರು, ಪೋಷಕರು ಹಾಗೂ ಸಮುದಾಯದ ಎಲ್ಲಾ ಭಾಗೀದಾರ ಸಕ್ರಿಯ ತೊಡಗಿಸುವಿಕೆಯಂತಹ ಸದುದ್ದೇಶದ ಕಾರ್ಯಕ್ರಮವೇ ವಿದ್ಯಾಗಮ .
ವಿದ್ಯಾರ್ಥಿಗಳಿಗೆ ಅದೆಷ್ಟು ಉಪಕಾರ : ಉಳ್ಳವರಿಗೆ ಅದೆಷ್ಟೋ ಅವಕಾಶ ಲಭಿಸುತ್ತಿದೆ ಆದರೆ ಇಲ್ಲದವರ ಪಾಡು ಹೇಳತೀರದು ನಗರ ವಾಸಿಗಳಿಗೆ ಅಂತರ್ಜಾಲ ಶಿಕ್ಷಣ ಲಭಿಸುತ್ತದೆ ಕಂಪ್ಯೂಟರ್ ,ಮೊಬೈಲ್ ಬಳಕೆಗೆ ಆರ್ಥಿಕ ಸ್ಥಿತಿ ಹೊಂದಿಕೆ ಯಾಗುವುದರಿಂದ ಯಾವುದೇ ತೊಂದರೆ ಇರದು . ಇನ್ನೂ ಒಂದಷ್ಟು ಖರ್ಚು ಮಾಡಿ ಟೂಷನ್ ಕೊಡಲು ತರಬೇತಿದಾರರನ್ನು ಮನೆಗೆ ಕರೆಯಿಸಿ ಕೊಳ್ಳುವ ಪರಿಪಾಠ,ಅವಕಾಶ ಇದೆ . ಆದರೆ ಗ್ರಾಮೀಣ ಪರಿಸರದಲ್ಲಿನ ವಿದ್ಯಾರ್ಥಿಗಳ ಸ್ಥಿತಿ ಶೋಚನೀಯ. ಅಂತರ್ಜಾಲವಂತೂ ಇಲ್ಲ ಕಂಪ್ಯೂಟರ್ ,ಮೊಬೈಲ್ ಇಲ್ಲವೇ ಇಲ್ಲ . ಇನ್ನಿತರ ಸೌಲಭ್ಯ ದೂರದ ಮಾತು . ಒಂದು ಹೊತ್ತಿನ ತುತ್ತಿಗಾಗಿ ಕೂಲಿ ನಾಲಿ ಮಾಡಿ ಮುಂಜಾನೆ ಮನೆ ಬಿಟ್ಟರೆ ಮುಸ್ಸಂಜೆ ಮನೆ ಸೇರುವ ಪಾಲಕರ ಪೋಷಕರಿಗೆ ಭಯ ಆವರಿಸರುತ್ತೆ ಮಕ್ಕಳು ಏನು ಮಾಡ್ತಾವೋ ಹೇಗೆ ಇದ್ದವೂ ಎಂಬುದು. ಇರುವಲ್ಲಿ ಇರದ ವಯಸ್ಸಿನ ಸಹಜ ಗುಣಕ್ಕೆ ಕಡಿವಾಣ ಹಾಕಲು ಮನೆಯಲ್ಲಿ ಯಾರು ಇಲ್ಲ ಇತ್ತ ಶಾಲೆ ಇಲ್ಲಾ. ಈ ಎಲ್ಲ ಆತಂಕ ಪಾಲಕರಲ್ಲಿ ಇದ್ದೇ ಇರುತ್ತವೆ . ಈ ಯೋಜನೆ ಪ್ರಕಾರ ಒಂದಷ್ಟು ವಿದ್ಯಾರ್ಜನೆ ಜೊತೆಗೆ ಸುರಕ್ಷತೆಯೂ ಕಾಪಾಡುತ್ತವೆ. ವಿದ್ಯಾಗಮ ಯೋಜನೆಯ ಉದ್ದೇಶವೇ ಹೀಗಿದೆ ಗ್ರಾಮ, ನಗರ, ಪಟ್ಟಣ, ಗುಡ್ಡಗಾಡು, ಹಳ್ಳಿಗಾಡು ಪ್ರದೇಶ, ಬೆಟ್ಟ, ಅರಣ್ಯದಂಚಿನ ಗ್ರಾಮಗಳ ಮಕ್ಕಳಿಗೆ ಟಿವಿ, ಮೊಬೈಲ್ ಸೌಲಭ್ಯವೂ ಕಷ್ಟ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಅದರಲ್ಲೂ, ಗ್ರಾಮೀಣ ಮಕ್ಕಳಿಗೆ ಅತೀ ಮುಖ್ಯವಾದ ಯೋಜನೆ . ಎಲ್ಲೆಡೆ, ಎಲ್ಲರಿಗೂ ಶಿಕ್ಷಣ ಬೇಕೆಂಬ ನೀತಿಗೆ ಇದು ಉತ್ತಮ ವಾಗಿದೆ . ಕರೋನ ಕಾಲದಲ್ಲಿ 10 ನೇ ತರಗತಿ ಪರೀಕ್ಷೆ ನೆಡೆಸಿ ದೇಶಕ್ಕೆ ಮಾದರಿಯಾದ ನಮ್ಮ ರಾಜ್ಯಕ್ಕೆ ಇದೊಂದು ಸಾಹಸ ಗಾಥೆಯ ಗರಿಯೂ ಹೌದು. 150ಕ್ಕೂ ಅಧಿಕ ಶಿಕ್ಷಕರು ಕೋವಿಡ್ ಗೆ ತುತ್ತಾಗಿ ಪ್ರಾಣ ತ್ಯಾಗ ಮಾಡಿದ್ದರೆಂಬ ಮಾಧ್ಯಮ ಸಮೀಕ್ಷೆಯಲ್ಲಿ ಎಷ್ಟು ಹುರುಳಿದೆಯೋ ಗೊತ್ತಿಲ್ಲ ,ಆದರೆ ಕರೋನ ಕಾಲ ಘಟ್ಟದಲ್ಲಿ ಇಡೀ ಜಗತ್ತೇ ಸಂಕಷ್ಟ ಎದುರಿಸುತ್ತಿದೆ ಇದೀಗ ಅದೇ ದೈನಂದಿನ ಜೀವನಕ್ಕೆ ಒಗ್ಗಿ ಕೊಳ್ಳಲೇ ಬೇಕಾಗಿದೆ . ಸಿನಿಮಾ ,ಶಾಲೆ ಬಿಟ್ಟರೆ ಮತ್ತೆಲ್ಲಾ ಸಾಮನ್ಯ ಪರಿಸ್ಥಿತಿಗೆ ಬಂದಿದೆ . ಹಾಗಂತ ಸುರಕ್ಷತೆಯನ್ನು ಮೈ ಗೂಡಿಸದೇ ಇರುವುದು ಸರಿಯಲ್ಲ ಅವಶ್ಯಕ ಸುರಕ್ಷತೆ ಬೇಕು. ಆ ಸುರಕ್ಷತೆಯನ್ನು ಪಾಲಿಸಿದರೇ ವಿದ್ಯಾಗಮ ಯೋಜನೆ ಸಕ್ಸಸ್ ಕಾಣುವುದರಲ್ಲಿ ಎರಡು ಮಾತಿಲ್ಲ. ಮಕ್ಕಳ ಕಲಿಕೆ ನಿರಂತರ ಆಗಿರುವಂತೆ ನೋಡಿಕೊಳ್ಳುವುದಕ್ಕಾಗಿ ಎಂ.ಕೆ. ಶ್ರೀಧರ್ ನೇತೃತ್ವದ ಸಮಿತಿ ವರದಿ ಆಧಾರದಲ್ಲಿ ವಿದ್ಯಾಗಮ ಯೋಜನೆ ಅನುಷ್ಠಾನ ಬಂದ ರಾಜ್ಯಾದ್ಯಂತ ಒಟ್ಟು ಸರಿ ಸುಮಾರು ಐವತ್ತು ಲಕ್ಷಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳು ‘ವಿದ್ಯಾಗಮ’ದ ಪ್ರಯೋಜನವನ್ನು ಪಡೆಯುವಂತಾಗಿದ್ದು ಸಂತೋಷದ ವಿಚಾರ .ಶಿಕ್ಷಕ ವೃತ್ತಿ ಎಂದರೆ ಅದು ಸಾಮಾಜಿಕ ಸೇವೆಯೂ ಹೌದು , ಜವಾಬ್ದಾರಿಯೂ ಹೌದು. ಸಮರ್ಥವಾಗಿ ಸುರಕ್ಷತೆ ಯೊಂದಿಗೆ ನಿರ್ವಹಿಸಿದರೇ ಸಾವು -ನೋವುಗಳಿಲ್ಲದೇ ಯೋಜನೆ ಯನ್ನು ಪೂರ್ಣಗೊಳಿಸಿ ವಿದ್ಯಾರ್ಥಿಗಳ ಭವ್ಯ ಭಾವಿಷ್ಯಕ್ಕೇ ಮುನ್ನುಡಿ ಬರೆಯಬೇಕು ಸುರಕ್ಷತೆ ಹೇಗಿದ್ದರೆ ಚೆನ್ನಾ :ವಿದ್ಯಾಗಮಕ್ಕೆ ತೆರಳುವ ಶಿಕ್ಷಕರಿಗೆ/ವಿದ್ಯಾರ್ಥಿಗಳಿಗೆ ಆಗಾಗ ಉಚಿತ ಕೊರೊನಾ ತಪಾಸಣೆ ಸೌಲಭ್ಯ ಜೊತೆಗೆ ವೈದ್ಯಕೀಯ ವ್ಯವಸ್ಥೆ ಜಾರಿಯಾಗಬೇಕು . ಸಮುದಾಯ ಭವನ ಅಥವಾ ವಿದ್ಯಾರ್ಥಿಗಳ ಸಾಮಾಜಿಕ ಅಂತರ ಕಾಪಾಡುವಲ್ಲಿ ಸೂಕ್ತ ವೇದಿಕೆ,ವಿಶಾಲ ಸ್ಥಳ ಕಲ್ಪಿಸಬೇಕು,ಶುಚಿತ್ವ ಕಡೆ ಗಮನ ವಹಿಸಿ , ಶಿಕ್ಷಕರಿಗೆ, ಪೋಷಕರಿಗೆ ಧೈರ್ಯ ತುಂಬುವಂತ ಕೆಲಸವಾಗಬೇಕು .ಆಯಾಯ ಗ್ರಾಮದವರು ತುಂಬು ಹೃದಯ ದಿಂದ ಪ್ರೋತ್ಸಾಹಿಸಬೇಕು. ಇಂತಹ ಸಣ್ಣ ಪುಟ್ಟ ಮಾರ್ಪಾಡು ಅವಶ್ಯಕತೆ ಬಿಟ್ಟರೇ, ಧೈರ್ಯ ಒಂದೇ ಸಾಧನ .

ಬುಧವಾರ, ಅಕ್ಟೋಬರ್ 7, 2020

ಅನುಶ್ರೀಯೂ.. ಡ್ರಗ್ಸೂ..!

ಸ್ಟಾರ್ ನಿರೂಪಕಿ ಅನುಶ್ರೀ ಹೆಸರು ಡ್ರಗ್ಸ್ ಜಾಲದಲ್ಲಿ ತಳಕು ಹಾಕಿ ಕೊಂಡಿದ್ದರ ವಿಚಾರ ಈಗ ಭಯಂಕರ ಸುದ್ದಿಯಾಗಿ ಹರಡಲಾರಂಭಿಸಿದೆ. ಮಾದಕ ಜಾಲಕ್ಕೆ ಸಂಬಂಧ ಪಟ್ಟಂತೆ ಕೊರಿಯೋ ಗ್ರಾಫರ್ ಕಿಶೋರ್ ನನ್ನ ಬಂಧಿಸಲಾಗಿತ್ತು. ಬಂಧನದ ಬಳಿಕ ಕಿಶೋರ್ ಬಯಲು ಪಡಿಸಿದ್ದ .,ನಮ್ಮ ಪಾರ್ಟಿಯಲ್ಲಿ ಅನುಶ್ರೀ ಪಾಲ್ಗೊಳ್ಳುತ್ತಿದ್ದಳು ಹಾಗೂ ಡ್ರಗ್ಸ್ ಸೇವಿಸುತ್ತಿದ್ದಳು ಎಂದು. ,ವಿಷಯ ತಿಳಿದ ಸಿಸಿಬಿ ಪೊಲೀಸರು ಅನುಶ್ರೀ ಗೆ ನೋಟಿಸ್ ನೀಡಿತ್ತು . ಅಂತೆಯೇ ಮಂಗಳೂರಿನ ಸಿಸಿಬಿ ತಂಡ ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಬಿಡುಗಡೆ ಮಾಡಿತ್ತು ನಂತರ ನಡೆದಿದ್ದು ಸುದ್ದಿಯೋ ಸುದ್ದಿ ಸಾಕಷ್ಟು ಮಂದಿ ಅವಳು ಒಳ್ಳೆ ಹುಡುಗಿ ಅವಳು ಡ್ರಗ್ಸ್ ಜಾಲದಲ್ಲಿ ಇಲ್ಲ ಎಂಬ ಧ್ವನಿ ಮೊಳಗಿಸುತ್ತಿದ್ದರೇ, ಇತ್ತಾ ಇದಕ್ಕೆ ವಿರುದ್ಧವಾದ ಅಪವಾದ ಕೇಳಿ ಬರುತ್ತಿವೆ .ಅದೂ ಇದೂ ಎಂದು ರೆಕ್ಕೆ ಪುಕ್ಕ ಕಟ್ಟಿಕೊಂಡು ಸುದ್ದಿ ಹಾರಾಡುತ್ತಿವೆ. ಅನುಶ್ರೀ ಸ್ವಷ್ಟಿಕರಣಕ್ಕಾಗಿ ಮಾಧ್ಯಮಗಳ ಮುಂದೆ ಬಂದಿದ್ದೂ ಆಯ್ತು , fbಯಲ್ಲಿ ಬಂದಿದ್ದೂ ಆಯಿತು. fb ಯಲ್ಲಿ ಲೈವ್ ಬಂದೂ ಅತ್ತು ,ಗೊಗೇರದು ಹೇಳಿದ್ದೂ ಆಯ್ತು "೧೨ ವರ್ಷಗಳ ಹಿಂದೆ ಕಿಶೋರ್ ನಂಗೆ ಡಾನ್ಸ್ ಮಾಷ್ಟ್ರ್ ಆಗಿದ್ದರು ಆಗ ನಾನು ವಿನ್ ಕೂಡಾ ಆಗಿದ್ದೆ ಅದೇ ಈಗ ನನಗೆ ಮುಳುವಾಗಿದೆ ಅದೇ ಸಂಕಷ್ಟ ತಂದು ಕೊಡುತ್ತದೆ ಎಂದು ನಾನು ಎಣಿಸಿರಲಿಲ್ಲ . ನಾನು ಅಮ್ಮ ಮತ್ತು ತಮ್ಮನ ಜೊತೆ ಸುಂದರವಾಗಿ ಜೀವನ ನಡೆಸುತ್ತಿದ್ದೇನೆ ,ಸುಖವಾಗಿ ಕಾಲ ಕಳೆಯುತ್ತಿದ್ದೇನೆ ಯಾವುದೇ ಪಾರ್ಟಿಗೆ ನಾನು ಹೋಗುವುದಿಲ್ಲ . ೧೨ ವರ್ಷದ ಹಿಂದೆ ಪರಿಚಯ ಹಾಗೂ ಕಳೆದ ಕೆಲವು ವರ್ಷಗಳ ಹಿಂದೆ ಆತನ ಡಾನ್ಸ್ ಕ್ಲಾಸ್ ಉದ್ಘಾಟನೆಗೆ ನಾನು ತೆರಳಿದ್ದೆ ಅಷ್ಟೇ. ಈಗ ಏನೂ ಕಾಂಡೆಕ್ಟ್ ಇಲ್ಲ ಎಂದಿದ್ದರು.
ಬೆಂಕಿ ಇಲ್ಲದೇ ಹೊಗೆಯಾಡುತ್ತದೆಯೇ ? ಎಂಬ ಪ್ರಶ್ನೆ ಸಾಮಾನ್ಯ ನಾಗರೀಕರಲ್ಲೂ ಅನುಮಾನ ಹುಟ್ಟಿಸುತ್ತಿದೆ ಸುಖಾ -ಸಮ್ಮನೆ ಆತ ಪೋಲೀಸರ ಮುಂದೆ ಅನುಶ್ರೀ ಹೆಸರು ಹೇಳುವುದಕ್ಕೆ ಸಾಧ್ಯವಿಲ್ಲ . ಎಲ್ಲೂ ಇದರಲ್ಲಿ ಅನುಶ್ರೀ ಇರಬಹುದೆಂಬ ಗುಮಾನಿ ಕಂಡು ಬರುತ್ತದೆ ಇದರ ಮಧ್ಯೆ ಸಿಸಿಬಿ ಯಿಂದ ಇನ್ನೊಂದು ಬಾಂಬ್ ಹೊರಬಿತ್ತು . ಮಂಗಳೂರಿನ ಸಿಸಿಬಿ ಕಚೇರಿಗೆ ವಿಚಾರಣೆಗೆ ತೆರಳುವುದಕ್ಕಿಂತ ಮೊದಲು ,ಅನುಶ್ರೀ ತನ್ನ ಮೊಬೈಲ್ ನಿಂದ ಹಲವಾರು ದೊಡ್ಡ -ದೊಡ್ಡ ರಾಜಕಾರಣಿಗಳಿಗೂ ಸೇರಿದಂತೆ ಉದ್ಯಮಿಗಳಲ್ಲಿ ಒತ್ತಡ ಹೇರಿದ್ದರಂತೆ ನನ್ನನ್ನು ಬಂಧಿಸಿದಂತೆ ನೋಡಿಕೊಳ್ಳಿ ಎಂದು ಅಲವತ್ತು ಕೊಂಡಿದ್ದರಂತೆ ಅವರ ಅಪ್ಪಣೆ ಮೇರೆಗೆ ಪೊಲೀಸರು ಕೇವಲ ವಿಚಾರಣೆಯನ್ನು ನೆಡೆಸಿ ಕಳುಹಿಸಿದ್ದರೆಂಬುದು ಸುದ್ದಿ . ಇನ್ನು ಸಿಸಿಬಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅನುಶ್ರೀಯನ್ನು ವಿಚಾರಣೆ ಮಾಡಿದ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ . ಇದೆಲ್ಲವನ್ನೂ ಕಂಡರೇ ಅನುಶ್ರೀ ತಪ್ಪು ಮಾಡಿರಬಹುದೇ ಅನುಮಾನಕ್ಕೆ ಕಾರಣವಾಗಿದೆ. ತಪ್ಪು ಮಾಡಿಲ್ಲವೆಂದ ಮೇಲೆ ವಿಚಾರಣೆಗೆ ಒಳಪಡುವ ಮುನ್ನಾ ದಿನ ರಾಜಕಾರಣಿಗೆ ಕಾಲ್ ಮಾಡಿದ್ದು ಯಾಕೆ ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತದೆ. ಏನೇ ಇರಲಿ ಇದೀಗ ಬಂದ ಇನ್ನೊಂದು ಸುದ್ದಿಯ ಪ್ರಕಾರ ರಾಜ್ಯ ಸರ್ಕಾರವು ಅಧಿಕಾರಿಗಳಿಗೆ ಪ್ರೀ ಹ್ಯಾಂಡ್ ಕೊಟ್ಟಿದ್ದಾರಂತೆ. ಇನ್ನೊಮ್ಮೆ ವಿಚಾರಣೆ ನಡೆಯುತ್ತಾ ? ಅನುಶ್ರೀ ಅರೆಸ್ಟ್ ಆಗ್ತಾರಾ ? ಕಾಲವೇ ಉತ್ತರ ಹೇಳಬೇಕು . ಕಷ್ಟ ದಿಂದ ಮೇಲೆ ಬಂದು ಯಾವುದೇ ಗಾಡ್ ಫಾದರ್ ಇಲ್ಲದೇ ಸೆಲೆಬ್ರಿಟಿ ಆಗಿದ್ದ ಅನುಶ್ರೀ ಕಹಾನಿಗೆ ಅಧಿಕ ಬೆಲೆ ಬರುತ್ತದೆ ಅದಿಲ್ಲವೆಂದರೆ ಇಷ್ಟು ದಿನ ಸಂಪಾದಿಸಿದ ಇಮೇಜ್ ನೀರಲ್ಲಿ ಕೊಚ್ಚಿ ಹೋಗುತ್ತದೆ ಅಷ್ಟೇ !!

ಗುರುವಾರ, ಸೆಪ್ಟೆಂಬರ್ 24, 2020

ಡ್ರಗ್ಸ್ ವಿಚಾರವನ್ನು ಬಹಿರಂಗ ಪಡಿಸಿದ ಇಂದ್ರಜಿತ್, ಸಂಬರಗಿ ಅಭಿನಂದನಾರ್ಹರು !

ಸಿನಿಮಾದಲ್ಲಿ ಕಾಣುತ್ತಿದ್ದ ರೀಲ್ ಕಹಾನಿಯನ್ನು ರಿಯಲ್ ಆಗಿ ಸಿನಿಮಾ ಭಾಂದವರಿಂದಲೇ ನೋಡಬೇಕಾದ ಪರಿಸ್ಥಿತಿ ಈಗ ಬಂದೊದಗಿದೆ .,ವಿಪರ್ಯಾಸದ ಜೊತೆಗೆ ಅಚ್ಚರಿಯನ್ನು ಮೂಡಿಸುತ್ತಿದೆ . ಡ್ರಗ್ಸ್ ಸಪ್ಲೆಯರ್ 'ಅನಿಕಾ' ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ನಂತರ ರಾಜ್ಯದಲ್ಲಿ ಡ್ರಗ್ಸ್ ವಿಚಾರ ಬೆಳಕಿಗೆ ಬರಲು ಪ್ರಾರಂಭವಾಯಿತು . ನಿರ್ದೇಶಕ ನಟ' ಇಂದ್ರಜಿತ್ ಲಂಕೇಶ್' ಹಾಗೂ ಸಾಮಾಜಿಕ ಕಾರ್ಯಕರ್ತ 'ಪ್ರಶಾಂತ್ ಸಂಬರ್ಗಿ' ಮುಖ್ಯವಾಹಿನಿಗೆ ಬಂದು ಈ ವಿಚಾರದ ಬಗ್ಗೆ ಬಹಿರಂಗ ಹೇಳಿಕೆ ಕೊಟ್ಟು ,ನಂತರ ಸಾಕಷ್ಟು ಬೆಳವಣಿಗೆ ಕಂಡು ಬಂತು ,ಬಗೆದಷ್ಟು ಡ್ರಗ್ಸ್ ಜಾಲದ ಅನಾವರಣ ಬಯಲಾಗಲಾರಂಭಿಸಿತು . ಡ್ರಗ್ಸ್ ದಂಧೆ ಎಲ್ಲಾ ಕಡೆಯಲ್ಲೂ ತನ್ನ ಕಬಂಧ ಬಾಹುವನ್ನು ಚಾಚಿದೆ . ಸಾಮಾನ್ಯ ಪಾರ್ಟಿಯಿಂದ ಹಿಡಿದು ಕಾಲೇಜು ಅಂಗಳದವರೆಗೂ ಹರಡಿರುವುದು ಸತ್ಯ ಸಂಗತಿ ! ಸಿನಿಮಾ ಕ್ಷೇತ್ರದಲ್ಲಿ ಬೀಡು ಬಿಟ್ಟರುವುದು ,ಕೆಲವು ನಟ-ನಟಿಯರು ಈ ಮಾಫಿಯಾದಲ್ಲಿ ಮುಳುಗಿರುವುದನ್ನು ಕಂಡರೇ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದೆ. ಮೊದಲೇ ಚಿತ್ರರಂಗ ಶುಕ್ರ ದೆಸೆಯಲ್ಲಿದೆ . ೨೦೨೦ ಈ ಕರಾಳ ವರ್ಷ ಅದೆಷ್ಟು ಕಲಾವಿದರುಗಳನ್ನು ಬಲಿ ಪಡೆದು ತೀರಾ ದುಃಖದಲ್ಲಿರುವ ಗಾಂಧೀನಗರಕ್ಕೆ ಈಗ ನಶೆಯ ವಿಚಾರದಲ್ಲಿ ಸಂಪೂರ್ಣ ಕಮರಿ ಹೋಗಿರುವುದು ಸುಳ್ಳಲ್ಲ! ಮಾದಕ ವಸ್ತುವನ್ನು ಸೇವಿಸುವುದು ಅದರಲ್ಲಿ ಪಾಲ್ಗೊಳ್ಳುವುದು ದೊಡ್ಡ ಅಪರಾಧ . ಅದರಲ್ಲೂ ,ಸಿನಿಮಾ ಎಂಬುದು ಪಬ್ಲಿಕ್ ಗೆ ತೀರಾ ಹತ್ತಿರ ಸಂಬಂಧಪಟ್ಟಿರುವ ಕಲಿಕಾ ಮಾಧ್ಯಮ . ಸಾಮಾನ್ಯರೂ ಸಹಾ ಅದರಲ್ಲಿರುವ ವಿಚಾರವನ್ನು ಅರಿತು ನಡೆಯುವವರು. ಸಿನಿಮಾ ಮಂದಿಯನ್ನು ಮೆಚ್ಚಿಕೊಳ್ಳುತ್ತಾರೆ. ನೆಚ್ಚಿ ಕೊಳ್ಳುತ್ತಾರೆ., ಅವರುಗಳ ಉದ್ದುದ್ದಾ ಡೈಲಾಗ್ ನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ . ಈ ನಿಟ್ಟಿನಲ್ಲಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಸೆಲೆಬ್ರಟಿಗಳು ಈ ಹಾದಿಗೆ ಇಳಿದರೇ ಎಂಥಾ ದುರ್ದೈವ ? ಸೆಲೆಬ್ರಿಟಿಗಳು ಅದೆಷ್ಟು ಜಾಗೂರಕರಾಗಿದ್ದರೂ ,ಗಾಸಿಪ್ ಅವರ ಬಳಿ ಸುತ್ತುತ್ತಾ ಇರುತ್ತದೆ ಈ ತನ್ಮಧ್ಯೆ ಈ ಕರ್ಮ ಕಾಂಡದಲ್ಲಿ ಭಾಗಿಯಾಗಿರುವವರಿಂದ ಉತ್ತಮ ನಟ -ನಟಿಯರು ಸೇರಿದಂತೆ ಸಂಪೂರ್ಣ ಕಲಾವಿದರುಗಳಿಗೆ ,ಸಿನಿಮಾ ಇಂಡಸ್ಟ್ರಿಗೆ ಕೆಟ್ಟ ಹೆಸರು ಜೊತೆಗೆ ಕಟುವಾಗಿ ಟೀಕಿಸುವ ನಡತೆ ಹುಟ್ಟಿಕೊಳ್ಳುತ್ತದೆ .ಇದು ಎಲ್ಲರಿಗೂ ಗೊತ್ತಿದ್ದರೂ ಸಹಾ ಬೆಳಕಿಗೆ ತರುವಲ್ಲಿ ಹಿಂದೇಟು ಹಾಕುತ್ತಿದ್ದಾರೆ .
ಧೈರ್ಯ -ಸ್ಥೈರ್ಯ ದಿಂದ ತಮಗೆ ಅರಿತ ವಿಚಾರವನ್ನು ಬಹಿರಂಗ ಪಡಿಸುವಲ್ಲಿ ಶಕ್ತರಾದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತು ಸಮಾಜ ಸೇವಕ ಪ್ರಶಾಂತ್ ಸಂಬರಗಿ ಅಭಿನಂದನಾರ್ಹರು. ಫಲ ಶ್ರುತಿಯಂಬತೆ ಇಬ್ಬರು ನಟಿಯರು ಜೈಲು ಪಾಲಾಗಿದ್ದಾರೆ . ಇನ್ನಷ್ಟು ಜನರ ವಿಚಾರಣೆ ಸಿಸಿಬಿ ಯಿಂದ ನಡೆಯುತ್ತಿದೆ . ಉಪ್ಪು ತಿಂದವರು ನೀರು ಕುಡಿಯಲೇ ಬೇಕು . ಇನ್ನು ಊಟಕ್ಕಿಲ್ಲದ ಉಪ್ಪಿಕಾಯಿ ಯಂತಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಇದನ್ನೆಲ್ಲವನ್ನೂ ಹತೋಟಿಗೆ ತರುವಲ್ಲಿ ಶ್ರಮಿಸಬೇಕು ಅದನ್ನು ಬಿಟ್ಟು ತಮಗೆ ಸಂಬಂದ ವಿಲ್ಲಾ ಎಂದು ಕಣ್ಣಿದ್ದೂ ಕುರುಡರಂತೆ ವರ್ತಿಸುವ ರೀತಿ ಸರಿ ಅಲ್ಲ . ಆರೋಪಿಗಳ ಪರ ನಿಲ್ಲುವವಂತೆ ಭಾಸವಾಗುವ ರೀತಿಯ ನಡವಳಿಕೆ ಮೇಲ್ನೋಟಕ್ಕೆ ಮೊನ್ನೆಯ ದಿನ ಅರಿವಿಗೆ ಬಂದಿತ್ತು . ಪ್ರಶಾಂತ್ ಸಂಬರಗಿ ಆರೋಪಕ್ಕೆ ಅವರ ವಿರುದ್ಧ ತಿರುಗಿ ಬಿದ್ದು," ಅವರಿಗೆ ಸಿನಿಮಾ ವಿಚಾರದ ಬಗ್ಗೆ ಮಾತಾಡುವುದಕ್ಕೆ ಅವರು ಇಂಡಸ್ಟ್ರಿಗೆ ಸಂಬಂಧ ಪಟ್ಟವರಲ್ಲ . ಅದೇನೇ ಇದ್ದರೂ ವಾಣಿಜ್ಯ ಮಂಡಳಿಗೆ ಬಂದು ಕಂಪ್ಲೇಟ್ ಕೊಡೆಬೇಕಿತ್ತು" ಎಂದೆಲ್ಲಾ ಸ್ಟೇಟ್ಮೆಂಟ್ ಕೊಡುವ , ವಾಣಿಜ್ಯ ಮಂಡಳಿಗೆ ಎಲ್ಲವೂ ಅರಿವಿದ್ದು ಆರೋಪಿಗಳಿಗೆ ಸಪೋರ್ಟ್ ಮಾಡುತ್ತಿದೆಯೋ ಎನ್ನುವ ಅನುಮಾನ ಹುಟ್ಟುತ್ತಿದೆ. ಏನೇ ಇರಲಿ ಸೆಲೆಬ್ರಟಿಗಳನ್ನ ಮುಂದಿಟ್ಟು ಸರಾಗವಾಗಿ ಈ ದಂಧೆಯನ್ನು ನೆಡೆಸುವ ಇದರ ಹಿಂದಿನ ಬ್ರಹತ್ ಕುಳಗಳ ಜಾಡು ಹಿಡಿಯಬೇಕು .ಮಾದಕ ವಸ್ತುಗಳನ್ನು ಕಡಿವಾಣ ಹಾಕಲು ಯುವ ಪೀಳಿಗೆಗಳ ಹಿತದ್ರಷ್ಠಿಯಿಂದ ಪಾರದರ್ಶಕವಾಗಿ ತನಿಖೆಗೆ ಎಲ್ಲರೂ ಸಹಕರಿಸ ಬೇಕಾಗಿದೆ . ಪಟ್ಟಭದ್ರ ಹಿತಾಸಕ್ತಿಗಳಿಗೆ ತನಿಖಾಧಿಕಾರಿಗಳು ತಲೆ ಕೆಡಿಸಿ ಕೊಳ್ಳದೇ ಕಾರ್ಯಾನುಮಖವಾಗವ ಸ್ವಾತಂತ್ರ ಶಕ್ತಿಯನ್ನು ಸಂಭಂದ ಪಟ್ಟ ಇಲಾಖೆ ನೀಡ ಬೇಕಾಗಿದೆ. ಇಲಾಖಾಧಿಕಾರಿಗಳ ಮೇಲೆ ಒತ್ತಡ ತರುವಂತ ತನಿಖೆಯ ಹಾದಿ ತಪ್ಪಿಸುವ ಕೆಲಸ ವಾಗಬಾರದು. ಹಾಗಾದರೆ ಮಾತ್ರ ದಂಧೆಯನ್ನು ಮಟ್ಟ ಹಾಕಲು ಸಾಧ್ಯವಾಗ ಬಹುದು . ಆರೋಪ ಕೇಳಿಬಂದಿರುವಂತ ನಟ -ನಟಿಯರು ,ಕಲಾವಿದರುಗಳು , ರಾಜಕಾರಣಿಗಳು, ರಾಜಕಾರಣಿಗಳ ಮಕ್ಕಳು, ಉದ್ಯಮಿಗಳನ್ನ ವಿಚಾರಣೆಗೆ ಒಳಪಡಿಸಿ .,ಕಾನೂನಾತ್ಮಕವಾಗಿ ಸೂಕ್ತ ಶಿಕ್ಷೆಯಾಗಲಿ . ಡ್ರಗ್ಸ್ ಪೆಡ್ಲರ್ ಗಳ ಜೊತೆಗೆ ಗುರುತಿಸಿ ಕೊಂಡವರು ,ನಿರಂತರ ಪಾರ್ಟಿಯಲ್ಲಿ ಬಾಗಿಯಾದವರ ಬಂಧನವಾದರೇ ,ಕದ್ದು ಮುಚ್ಚಿ ನಡೆಯುತ್ತಿರುವ ಈ ವ್ಯವಹಾರ, ವೈವಾಟುದಾರರಿಗೆ ನಡುಕ ಉಂಟಾಗುವುದರಲ್ಲಿ ಸಂದೇಹ ವಿಲ್ಲಾ ಹಾಗೂ ಪೂರ್ಣ ವಿದಾಯ ಕಾಣುವುದರಲ್ಲಿ ಯಾವುದೇ ಅನುಮಾನವಿಲ್ಲಾ !

ಶುಕ್ರವಾರ, ಆಗಸ್ಟ್ 21, 2020

ಕಣ್ತುಂಬಿಸಿ ಕೊಳ್ಳುವಂತಿಲ್ಲ ಈ ಬಾರಿಯ ಚೌತಿ ಹಬ್ಬವನ್ನಾ !

ಗಣೇಶ ಚತುರ್ಥಿ ಹಬ್ಬ ಮತ್ತೆ ಬಂದಿದೆ ..ಚೌತಿ ಹಬ್ಬವೆಂದ ಕೂಡಲೇ ಬಾರಿ ಗೌಜು . ಕುಟುಂಬದವರ ಜೊತೆ ಊರವರ ಜೊತೆಗೆ ರಂಗು -ರಂಗಾಗಿ ಆಚರಿಸಬಲ್ಲ ಆಕರ್ಷಣೀಯ ಹಬ್ಬಗಳ ಪೈಕಿ ಮೇಲ್ಪಂಕ್ತಿಯಲ್ಲಿ ಕಂಡು ಬರುತ್ತದೆ ಗೌರಿ -ಗಣೇಶ ಹಬ್ಬ. ಮನೆಯಲ್ಲೇ ಮೂರ್ತಿ ಇಟ್ಟು ಸಾಂಪ್ರದಾಯಿಕ ಪೂಜೆ ಮಾಡಿ ವಿಸರ್ಜನೆ ಮಾಡುವ ಪದ್ಧತಿ ಒಂದೆಡೆಯಾದರೆ ಇನ್ನು ಸಾರ್ವಜನಿಕ ಗಣೇಶೋತ್ಸವ ಮತ್ತೊಂದು ಕಡೆ ಜಗಮಗಿಸುತ್ತದೆ . ಮಹಾರಾಷ್ತ್ರ ಸೇರಿದಂತೆ ಅತೀ ಹೆಚ್ಚಾಗಿ ದಕ್ಷಿಣ ಭಾರತದ ಗಲ್ಲಿ -ಗಲ್ಲಿ ಗಳಲ್ಲಿ ಚೌತಿ ಗಣೇಶ ಮನೆ ಮಾತಾಗುತ್ತಾನೆ . ಅದೆಷ್ಟು ಸಡಗರ ಅದೆಂತಾ ಅದ್ದೂರಿತನ ಎಂದು ವರ್ಣಿಸುವುದಕ್ಕೆ ಪದಗಳೇ ಸಿಗದು. ಅಷ್ಟೊಂದು ಆಡಂಬರ ಮೇಳೈಸುತ್ತದೆ .ಊರು ಬಿಟ್ಟು ಪರ ಊರ ಸೇರಿದವರು ಉದ್ಯೋಗಸ್ತರು ,ಶಿಕ್ಷಣ ಪಡೆಯುತ್ತಿರುವವರು ಈ ಹಬ್ಬಕ್ಕಾಗಿ ತಮ್ಮೂರಿಗೆ ಬಾರದೇ ಇರಲಾರರು. ಇಷ್ಟೊಂದು ಆಕರ್ಷಣೆ ಈ ಗೌರಿ ಗಣೇಶ ಹಬ್ಬಕ್ಕೆ ಇದೆ. ಕರೋನ ಈ ಬಾರಿ ಮಾತ್ರ ಕಂಟಕ ತಂದು ಬಿಟ್ಟಿದೆ. ಹಾಗಂತ ಈ ಚೈನಾ ವೈರಸ್ ಪ್ರತಿಯೊಂದು ಹಬ್ಬ ಹರಿದಿನ ಶುಭ ಕಾರ್ಯಕ್ಕೆ ಕಡಿವಾಣ ತಂದಿದ್ದು ನಿಜವೇ ಯಾದರೂ, ಗಣೇಶನ ಹಬ್ಬದವರೆಗಾದರೂ ಓಡಿ ಹೋಗಬಹುದುದೆಂಬಂತಿದ್ದ ನಿರೀಕ್ಷೆ ಹುಸಿಯಾಗಿದೆ.
ಒಂದು ದಿನದಿಂದ ಹಿಡಿದು ಮೂರು ದಿನ, ಹದಿನೈದು ದಿನ ,ತಿಂಗಳು ಗಟ್ಟಲೇವರೆಗೂ ತಾತ್ಕಾಲಿಕ ಪೆಂಡಾಲ್ ಗಳಲ್ಲಿ ಗಣೇಶನ ವಿಗ್ರಹವನ್ನು ವಿಟ್ಟು ಹಗಲು- ಇರುಳು ಎನ್ನದೇ ಧಾರ್ಮಿಕ ,ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಮನೆಯಲ್ಲೂ ಅಷ್ಟೇ ಸಂಭ್ರಮದ ವಾತಾವರಣ ಸ್ರಷ್ಟಿಯಾಗುತ್ತದೆ. ಸಾರ್ವಜನಿಕ ಗಣೇಶೋತ್ಸವದಲ್ಲಿ ಮುಸ್ಸಂಜೆ ಯಿಂದ ಮಧ್ಯರಾತ್ರಿವರೆಗೆ ಕೆಲವೆಡೆ ಮುಂಜಾನೆ ತನಕವೂ ನಾಟಕ ,ನ್ರತ್ಯ, ರಸಮಂಜರಿ ಕಾರ್ಯಕ್ರಮಗಳು ಮನರಂಜಿಸುತ್ತದೆ . ಒಂದೊಂದು ಊರಿನಲ್ಲಿ ಕಡಿಮೆಯೆಂದರೂ ೨-೩ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತದೆ ಊರಿಗೆ ಊರೇ ಹಬ್ಬದ ಸಂಭ್ರಮ ಸಡಗರದಲ್ಲಿ ತೇಲಿ ಹೋಗುತ್ತದೆ.ಮದುವಣ ಗಿತ್ತಿಯಂತೆ ಊರು ಶ್ರ೦ಗಾರ ಗೊಳ್ಳುತ್ತದೆ .ಬಗೆ ಬಗೆಯ ಗಣೇಶನ ವಿಗ್ರಹ :ಚೌತಿಯ ಗಣೇಶ ಆಸ್ತಿಕ ಮತ್ತು ನಾಸ್ತಿಕನಾಗಿ ಕಂಗೊಳಿಸುತ್ತಾನೆ. ಧಾರ್ಮಿಕ ಶ್ರದ್ಧೆಯ ಜೊತೆಗೆ ಮೋನೋರಂಜನಾತ್ಮಕವಾಗಿಯೂ ಸೆಳೆಯುತ್ತಾನೆ ಚೌತಿಯ ಹಬ್ಬದಂದು ಪುಟಾಣಿ ಗಣೇಶ ನಿಂದ ಹಿಡಿದು ಆಳೆತ್ತರದ ಗಣೇಶ ಕಾಣಸಿಗುತ್ತಾನೆ . ಇನ್ನು ಮುಂಬಾಯಿಯಂತ ಮಹಾನಗರದಲ್ಲಿ ಕಟ್ಟಡ ಗಾತ್ರದ ಗಣೇಶ ವಿಗ್ರಹ ವನ್ನಿಟ್ಟು ಪೂಜಿಸಲಾಗುತ್ತದೆ . ಇನ್ನೊಂದು ವಿಶೇಷವೆಂದರೆ ಆಯಾಯ ಟ್ರೆಂಡ್ ಗೆ ಅನುಗುಣವಾಗಿ ವೈರಲ್ ವ್ಯಕ್ತಿಯನ್ನು ಹೋಲುವಂತ ಗಣೇಶನ ವಿಗ್ರಹವನ್ನು ರಚಿಸುತ್ತಾರೆ ವಿಗ್ರಹ ರಚನಾಕಾರರು . ಉದಾಹರಣೆಗೆ ನರೇಂದ್ರ ಮೋದಿ ,ಕ್ರಿಕೆಟ್ ರುಗಳು, ಸೆಲೆಬ್ರಿಟಿಗಳ ಒಳಗೊಂಡ೦ತೆ ಚಿತ್ರ- ವಿಚಿತ್ರವಾಗಿ ಗಣೇಶನ ರೂಪ, ಆಕಾರ ,ಸ್ರಷ್ಟಿಯಾಗುತ್ತದೆ. ಇದಕ್ಕೆ ಅಷ್ಟೇ ಬೇಡಿಕೆಯೂ ಇದೆ ಬೇಡಿಕೆದಾರರ ಅಭಿರುಚಿ ಬಯಕೆ ಮೇರೆಗೆ ರಚಿತ ಗೊಳ್ಳುತ್ತದೆ ಎನ್ನುವ ಅಭಿಪ್ರಾಯ ರಚನಕಾರರ ವಲಯದ್ದು . ಒಟ್ಟಾರೆ ಇಲ್ಲಿ ಗಣೇಶ ಭಾವ - ಭಕ್ತಿಗೆ ಮಾತ್ರವಲ್ಲದೇ ಮನೋರಂಜನಾ ವಸ್ತು ಕೂಡಾ ಆಗುವುದು ಸುಳ್ಳಲ್ಲ . ಇದಕ್ಕೆ ಹಲವರ ಆಕ್ಷೇಪಗಳಿದ್ದರೂ,ಇದುವರೆಗೂ ರಚನೆಯಲ್ಲಿ ಒಂದಿನಿತು ಬದಲಾವಣೆ ಕಂಡಿಲ್ಲ.
ಮೆರವಣಿಗೆ :ಇನ್ನೊಂದು ಆಕರ್ಷಣೆ ಎಂದರೆ ಅದು ವಿಸರ್ಜನಾ ಮೆರವಣಿಗೆ . ಅದ್ಭುತ ಶೋಭಾಯಾತ್ರೆಯಲ್ಲಿ ಕಿ.ಮೀ. ಗೂ ಅಧಿಕ ದೊರದವರೆಗೆ ಜನಸಂಧಣಿ . ನಾಸಿಕ್ ಬ್ಯಾಂಡ್ ,ಚಂಡೆ ,ಟ್ಯಾಬ್ಲೋ ,ಪಟಾಕಿ ಪ್ರತಾಪ ಸೇರಿದಂತೆ ಇನ್ನಿತರ ಬಗೆ- ಬಗೆಯ ವೇಷ ಧಾರಿಗಳು ಮನಸೆಳೆಯುತ್ತಾರೆ. ಎಲ್ಲಾಕ್ಕಿಂತ ಹೆಚ್ಚಾಗಿ ಮೆರವಣಿಗೆಯಲ್ಲಿ ಸಾಗುವ ಪ್ರತಿಯೊಬ್ಬರ ಹೆಜ್ಜೆ ಬದಲಾವಣೆ ಗೊಳ್ಳುತ್ತದೆ. ತಮಗೆ ಅರಿವಿಲ್ಲದಂತೆ ಕಾಲು ಕುಣಿತಕ್ಕೆ ಒಗ್ಗಿ ಕೊಳ್ಳುತ್ತದೆ. ಇಂಥ ಕ್ಷಣಕ್ಕಾಗಿ ಜಾತಕಪಕ್ಷಿ ಯಂತಿರುವ ನಶೆ ಏರಿಸಿ ನಾಚುವ ವರ್ಗವನ್ನು ,ಡಿಜೆ ಸೌಂಡ್ ,ಕ್ಯಾಬರೇ ಸಾಂಗ್ ನಮಗೆ ಹಾಗೂ ವೀಕ್ಷಕರಿಗೆ ಖುಷಿ ಎಂಟರ್ಟೈನ್ಮೆಂಟ್ ಸಿಕ್ಕರೇ ಇತ್ತ ಗಣೇಶ ಮರುಗದೇ ಇರಲಾರನು .!! ವಿಸರ್ಜನೆ :ಕೊನೆಯ ವಿಚಾರಕ್ಕೆ ಬಂದರೆ ,ಗಣೇಶನ ಉತ್ಸವ ವಿಗ್ರಹವಾದ ಮಣ್ಣಿನ ಮೂರ್ತಿಯನ್ನು ವಿಸರ್ಜನೆ ಮಾಡಲೇ ಬೇಕಾಗುತ್ತದೆ ಬಾವಿ, ಕೆರೆ, ನದಿಯಲ್ಲಿ ವಿಧಿ ವಿಧಾನಗಳಂತೆ ಪೂಜಾ ಕೈಂಕರ್ಯ ನಂತರ ವಿಸರ್ಜನೆ ಮಾಡುವುದು ರೂಢಿ. ಗ್ರಾಮೀಣ ಪ್ರದೇಶಗಳಲ್ಲಿ ಬಾವಿ ,ಕೆರೆ, ನದಿಗಳಿಗೆ ಬರಗಾಲವಿಲ್ಲ ಆದರೆ ಪಟ್ಟಣ ಪ್ರದೇಶಗಳಲ್ಲಿ ಗಣೇಶನನ್ನು ನೀರಿನಲ್ಲಿ ತೇಲಿಸುವುದು ಕಷ್ಟದ ಕೆಲಸ . ಅಲ್ಲಿ -ಇಲ್ಲಿ ,ಆಚೆ -ಈಚೆ ಹೊತ್ತಲ್ಲದ ಹೊತ್ತಿನ ಗತ್ತಿನಲ್ಲಿ ತಿರುಗಿಸಿ , ಗಣೇಶ ಅರ್ಧ ಜೀವ ಕೆಳೆದು ಕೊಂಡು ಕೊನೆಗೆ ನೀರಿನಲ್ಲಿ ಮುಳುಗುತ್ತಾನೆ . ಚೌತಿ ರೂವಾರಿ ಊರಾದ ಮುಂಬೈಗೆ ಮಾತ್ರ ಸಮುದ್ರ ಸಾಕಾಗುವುದಿಲ್ಲ ಆಳೆತ್ತರದ ಗಣೇಶ ಮೂರ್ತಿ ವಿಸರ್ಜನೆ ಗೊಂಡರೂ, ಮರುದಿನ ಪತ್ರಿಕೆಯಲ್ಲಿ ಗಣೇಶನ ಮೂರ್ತಿಯ ಚಿತ್ರಗಳನ್ನೂ ಕಂಡರೆ ಮನಸ್ಸು ಮರುಗುತ್ತದೆ ಅರ್ಧಕರ್ಧ ತುಂಡರಿಸಿದ ಮೂರ್ತಿಗಳು ಸಮುದ್ರ ದಡದಲ್ಲಿ ಕಾಣ ಸಿಗುತ್ತದೆ. ಸಾಕಷ್ಟು ದಿನಗಳ ತನಕ ಕಾಪಾಡಲು ಮೂರ್ತಿ ರಚನೆಯಲ್ಲಿ ಜೇಡಿ ಮಣ್ಣಿನ ಜೊತೆ ಒಂದಷ್ಟು ರಾಸಾಯನಿಕ ವಸ್ತು ಹಾಗೂ ಪೈಂಟ್ ಗಳ ಬೆರೆಕೆಯಲ್ಲಿ ರೂಪುಗೊಳಿಸುವುದರಿಂದ ನೀರಿನಲ್ಲಿ ಕರಗುವುದು ತುಸು ಕಷ್ಟಕರವಾದರೇ , ಇನ್ನೊಂದೆಡೆ ನೀರು ಕಲುಷಿತ ಗೊಳುತ್ತದೆ., ಮಾಲಿನ್ಯ ಭರಿತ ನೀರಿನಲ್ಲಿ ಸಮುದ್ರ ಸಸ್ತನಿ ಗಳಿಗೆ ಮಾರಕವಾಗುವುದರ ಜೊತೆಗೆ ಅದನ್ನು ಸೇವಿಸುವ ಮನುಷ್ಯನಿಗೂ ಇಲ್ಲ ಸಲ್ಲದ ಖಾಯಿಲೆಗಳು ತಗುಲುವುದರಲ್ಲಿ ಎರಡು ಮಾತಿಲ್ಲ. ಚೌತಿ ಗಣೇಶ ಇದೆನ್ನೆಲ್ಲಾವನ್ನೂ ಅರಗಿಸಿ ಕೊಳ್ಳಲಾರನಾದರೂ ,ಅನುಭವಿಸಲೇ ಬೇಕು ವರ್ಷಕ್ಕೆ ಒಂದು ಬಾರಿ . ! ಈ ವರ್ಷ ಗಣೇಶನ ನೆಮ್ಮದಿಗೆ ಯಾವುದೇ ಭಂಗ ವಿಲ್ಲಾ .! ಡಿಜೆ ಸೌಂಡ್ ಇಲ್ಲ ,ಕ್ಯಾಬರೆ ನರ್ತನ ಇಲ್ಲ ದೇಹ ಛಿದ್ರ ಗೊಳ್ಳುವ ನೋಟವಿಲ್ಲ . ಎಲ್ಲಕ್ಕೂ ಕರೋನ ಕಡಿವಾಣ ಹಾಕಿದೆ . ಕಾದು ಕುಳಿತು ಎಂಜಾಯ್ ಮಾಡುವ ನಮ್ಮಂತ ಮನಸ್ಸುಗಳಿಗೆ ಮಾತ್ರ ಬೇಸರ ತಂದಿದೆ. ಕರೋನಕ್ಕಿಷ್ಟು ಹಿಡಿ ಶಾಪ ಹಾಕಿ ಮನೆಯಲ್ಲೇ ಕಾಲ ಕೆಳೆಯಬೇಕಾಗಿದೆ .

ಬುಧವಾರ, ಆಗಸ್ಟ್ 19, 2020

ಇವರುಗಳಿಗೆ ಯಾಕೆ ತಾರತಮ್ಯ ?

ಕರೋನ ದಿಂದ ಇಡೀ ಪ್ರಪಂಚ ಕಂಗೆಟ್ಟುಹೋಗಿರುವುದು ನಿಜ.,ಅದರಲ್ಲೂ ಜಗತ್ತಿನ ಎರಡನೇ ಅತೀ ದೊಡ್ಡ ಜನ ಸಂಖ್ಯೆಯನ್ನು ಹೊಂದಿರುವ ಆರ್ಥಿಕತೆಯಲ್ಲಿ ಅಷ್ಟೊಂದು ಸಧೃಢ ವಾಗಿರದ ಭಾರತಕ್ಕೆ ಸವಾಲೇ ಸರಿ. ತನ್ಮಧ್ಯೆ ಕೆಲವೊಂದು ರಾಜ್ಯಗಳು ಸರ್ಕಾರದ ವತಿಯಿಂದ ಒಂದಷ್ಟು ಯೋಜನೆಗಳನ್ನು ದಯಪಾಲಿಸಿವೆ. ಇದಕ್ಕೆ ನಮ್ಮ ಕರ್ನಾಟಕ ರಾಜ್ಯವು ಹೊರತಾಗಿಲ್ಲ.ನಿರ್ಗತಿಕರಿಗೆ,ವ್ಯಾಪಾರಿಗಳಿಗೆ,ಕಲಾವಿದರು ,ಹೋಟೆಲ್ ಕಾರ್ಮಿಕರು ಇನ್ನಿತರ ದಿನ ಕೂಲಿ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ಇದೆಲ್ಲಾ ಅರಿತ ಸರ್ಕಾರವು ಒಂದಷ್ಟು ಯೋಜನಾ ನೀತಿಯನ್ವಯ ಆಟೋ ,ಟಾಕ್ಸಿ ಚಾಲಕರಿಗೆ, ಅಗಸಿಗರಿಗೆ, ಕ್ಷೌರಿಕರಿಗೆ ಸಹಾಯಧನವನ್ನು ಕಲ್ಪಿಸಲಾಗಿದೆ . ಒಳ್ಳೆಯ ಬೆಳವಣಿಗೆ ಕೂಡಾ .,ಆದರೆ ಆದ್ಯಾಕೋ ತಾರತಮ್ಯವಾದಂತ ವಿಚಾರ ಮೂಡುತ್ತದೆ. ದಿನದ ಒಂದು ಹೊತ್ತಿನ ತುತ್ತಿಗಾಗಿ ಕೂಲಿ ಮಾಡುವವರ ಪೈಕಿ ಯಕ್ಷಗಾನ ಕಲಾವಿದರುಗಳು ಹೋಟೆಲ್ ನೌಕರುಗಳೂ ಸೇರಿದ್ದಾರೆ ಇವರುಗಳು ಆ ಯೋಜನೆಯಲ್ಲಿ ಸ್ಥಾನ ಪಡೆಯದಿರುವುದು ವಿಪರ್ಯಾಸ .
ಕೆಲವೊಂದು ಯಕ್ಷಗಾನ ಮೇಳಗಳು ದೇವಸ್ಥಾನದ ವತಿಯಿಂದ ಅದರಲ್ಲೂ ,ಧಾರ್ಮಿಕ ದತ್ತಿ ಇಲಾಖೆಯಡಿಯಲ್ಲಿ ಕಾರ್ಯಾಚರಿಸುವುದರಿಂದ ಅದಕ್ಕೆ ಒಳಪಡುವ ಯಕ್ಷಗಾನ ಮೇಳಗಳಿಂದ ಕಲಾವಿದರುಗಳಿಗೆ ಕಿಂಚಿತ್ ಸಹಾಯಕವಾಗುತ್ತದೆ.ಧಾರ್ಮಿಕ ದತ್ತಿಯಿಂದ ಹೊರತಾಗಿರುವ ಯಕ್ಷಗಾನ ಮೇಳಕ್ಕೆ ಇದು ಲಭ್ಯತೆ ಇಲ್ಲ. ಡೇರೆ ಮೇಳಗಳು ಸೇರಿದಂತೆ ಕೆಲವು ಮೇಳಗಳು ದೇವಳದ ವತಿಯಿಂದ ನಡೆಯಲ್ಪಡುವ ಯಕ್ಷಗಾನ ಕಲಾವಿದರುಗಳಿಗೆ ಅನುಕೂಲವಾಗುವಂತೆ ಸರ್ಕಾರ ಯೋಚಿಸುವುದರ ಜೊತೆಗೆ ಹೋಟೆಲ್ ಕಾರ್ಮಿಕರ ಬಗ್ಗೆನೂ ಗಮನ ಹರಿಸಬೇಕಾಗಿದೆ .ಲಾಕ್ ದೌನ್ ಪರಿಣಾಮ ಅದೆಷ್ಟೋ ಹೋಟೆಲ್ ಗಳು ಮುಚ್ಚಿವೆ .ಹೋಟೆಲ್ ಕಟ್ಟಡಗಳ ಬಾಡಿಗೆ ಕಟ್ಟಲು ಸಹಾಯಕರಾದ ಸಾಕಷ್ಟು ಮಾಲೀಕರು ಹೋಟೆಲ್ ಗಳನ್ನೂ ಮಾರಾಟ ಮಾಡಿದ್ದಾರೆ. ಅದರಲ್ಲೂ ಅದನ್ನೇ ನಂಬಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದ ಕಾರ್ಮಿಕರಿಗೆ ಉದ್ಯೋಗ ವಿಲ್ಲದಂತಾಗಿದೆ ಇನ್ನು ಅನ್ಲಾಕ್ ಆಗಿ ಹೋಟೆಲ್ ತೆರೆದರೂ, ವ್ಯಾಪಾರಿಗಳಿಲ್ಲದೇ ಬಿಕೋ ಎನ್ನುತ್ತಿದೆ . ತರುವಾಯ ಹೋಟೆಲ್ ನಲ್ಲಿ ದುಡಿಯುವವ ಕಾರ್ಮಿಕರ ಸಂಖ್ಯೆನ್ನು ಕೂಡಾ ತಗ್ಗಿಸಲಾಗಿದೆ . ಇನ್ನೊಂದೆಡೆ ಪಾರ್ಸೆಲ್ ಕೊಡುವ ಪದ್ದತಿ ಜಾರಿಯಾದ್ದರಿಂದ ಕಾರ್ಮಿಕರು ಉದ್ಯೋಗಕ್ಕೆ ಕತ್ತರಿ ಬಿದ್ದಿದೆ. ತಾವು ಮಾಡಿಟ್ಟ ಸಾಲ ಕಟ್ಟಲಾಗದೇ,ಮಾಸಿಕ ಬಾಡಿಗೆ ಪಾವತಿಸಲಾಗದೇ ,ಹೋಟೆಲ್ ವ್ಯವಹಾರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶ ಕಾಣದೇ ಹೋಟೆಲ್ ಮಾಲೀಕರಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ . ದಿನೇ -ದಿನೇ ಈ ಸಂಖ್ಯೆ ಏರುಗತಿಯತ್ತ ಸಾಗುತ್ತಿದೆ.ಈ ಎಲ್ಲಾ ಸಮಸ್ಯೆಯನ್ನು ಹೋಗಲಾಡಿಸಲು ಸರ್ಕಾರಕ್ಕೆ ತುಸು ಕಷ್ಟವೇ ಆದರೂ ಪರಿಹಾರ ಅಥವಾ ಪರ್ಯಾಯ ಮಾರ್ಗಗಳ ಮೂಲಕ ಇಂತವರಿಗೆ ಸಹಾಯವಾಗಬೇಕಿದೆ .ಇಂತಹ ಯೋಜನೆಗಳ ಮೂಲಕ ಬೇಧ -ಭಾವ ಮಾಡದೇ ಇದ್ದರೇ ಕಿಂಚಿತ್ ಉಪಕಾರವಾಗಬಲ್ಲದು.

ಭಾನುವಾರ, ಆಗಸ್ಟ್ 2, 2020

ಇದರ ಹಿಂದೆ ಇರುವವರ ಕೈವಾಡ ಯಾರದ್ದು ?


ಕರೋನಾ ಕರ್ನಾಟಕಕ್ಕೆ ಕಾಲಿಟ್ಟ ಘಳಿಗೆ ಯಿಂದ ಆಯುರ್ವೇದ ಪಂಡಿತ ಡಾl ಗಿರಿಧರ್ ಕಜೆಯವರು ನನ್ನಲ್ಲಿ ಔಷಧ ವಿದೆ , ನಾನು ಇದನ್ನು ಸಂಪೂರ್ಣವಾಗಿ ಗುಣಪಡಿಸುತ್ತೇನೆ ಎಂದು ಬಹಿರಂಗವಾಗಿ ಸವಾಲ್ ಹಾಕಿದ್ದರು ಅಂತೆಯೇ ಸರಕಾರಕ್ಕೆ ಮನವಿಯನ್ನೂ ಸಲ್ಲಿಸಿದ್ದರು ಆದರೇನು ಮಾಡೋಣ ಹೇಳಿ ದಪ್ಪ ಕಿವಿಯ ಸರ್ಕಾರಕ್ಕೆ ಇದೆನ್ನೆಲ್ಲಾ ಕೇಳುವ ವ್ಯವಧಾನ ವಿರಲಿಲ್ಲ ಯಾವುದರಲ್ಲಿ ಎಷ್ಟು ಪೀಕಬೇಕೋ ಎಂಬ ಆಲೋಚನಾ ಲೋಕದಲ್ಲಿರುವವರಿಗೆ ಇದು ಅರ್ಥವಾಗುವುದಿಲ್ಲ. ಅನುಮತಿಗೆ ಒಂದಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ ,ಸಮಯಕ್ಕೆ ಬೆಲೆ ಇಲ್ಲದಾಗ ಮಾತ್ರ ಅನುಮಾನ ಹೊಗೆಯಾಡುತ್ತವೆ . ದುಡ್ಡು ಮಾಡುವ ಆಸೆಯನ್ನು ಎಳ್ಳಷ್ಟೂ ಹೊಂದಿರದ ಅಪ್ರತಿಮ ,ಪ್ರಾಮಾಣಿಕ ವ್ಯಕ್ತಿ ಡಾ l ಕಜೆಯವರು ಅವರ ವ್ಯಕ್ತಿತ್ವವೇ ಅಂತದ್ದು ಎನ್ನುವುದಕ್ಕೆ ಇಲ್ಲಿರುವ ಕೆಲವು ಉದಾಹರಣೆಯನ್ನು ಗಮನಿಸಬಹುದು .
ಕೋಟಿಗಟ್ಟಲೇ ಸುರಿದರೂ ವಾಸಿಯಾಗದ ಖಾಯಿಲೆ ಕೇವಲ ನೂರು ರೂಪಾಯಿಯಲ್ಲಿ ದಯಪಾಲಿಸುತ್ತಿದ್ದಾರೆ.ಅಷ್ಟು ಮಾತ್ರವಲ್ಲದೇ ಮಾಧ್ಯಮಗಳ ಮೂಲಕ ಮನೆಯಲ್ಲಿ ಹೇರಳವಾಗಿ, ಸುಲಭವಾಗಿ ಸಿಗುವ ಮದ್ದುಗಳನ್ನು ಪ್ರಚಾರ ಪಡಿಸುತ್ತಿದ್ದಾರೆ. ತಮ್ಮ ಬಳಿ ಬರುವ ರೋಗಿಗಳಿಗೆ ಉಚಿತವಾಗಿ ಮೆಡಿಸಿನ್ ನ್ನು ಹಂಚುತ್ತಿದ್ದಾರೆ. ಕೇವಲ ಕರೋನ ದಿಂದ ಮುಕ್ತರಾಗಬೇಕೆಂಬ ಅಭಿಲಾಷೆ ಮನಸ್ಥಿತಿ ಮಾತ್ರ ಅವರಲ್ಲಿದೆ. ಇತ್ತ ಅಪ್ರೂವಲ್ ಗೆ ಛಲ ಬಿಡದ ಇವರು ಸಾಕಷ್ಟು ಬಾರಿ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳ ಹಿಂದೆ ಬಿದ್ದು ,ತಮ್ಮ ಔಷಧದ ಅನುಮತಿಗೆ ಬೇಡಿಕೆ ಇಡುತ್ತಾ ಕಚೇರಿ ಅಲೆದಾಡಿದ್ದರ ಫಲ ಶೃತಿಗಏನೋ ಎಂಬಂತೆ , ಕೊನೆಗೂ ದಾರಿ ಕಾಣದ ಸರ್ಕಾರದ ಸಂಬಂಧ ಪಟ್ಟ ಇಲಾಖೆ ಒಂದು ಶರತ್ತುವಿನ ಅನ್ವಯ ಡಾ l ಕಜೆ ಬಳಿ ಇರುವ ಎಲ್ಲಾ ಈ ಸಂಬಂಧ ಔಷಧವನ್ನು ಸರ್ಕಾರಕ್ಕೆ ಹಸ್ತಾ೦ತರಿಸಬೇಕು ಹಾಗೂ ಸ್ವತಃ ಯಾರಿಗೂ ಕೊಡುವಂತಿಲ್ಲ ಎಂಬ ಸರಕಾರದ ತೀರ್ಮಾನಕ್ಕೆ ಬದ್ಧರಾಗಿ ತಮ್ಮ ಸನಿಹಕ್ಕೆ ಬರುವ ರೋಗಿಗಳಿಗೆ ಔಷಧೋಪಚಾರವನ್ನು ನಿಲ್ಲಿಸಿ ಸರ್ಕಾರದ ದಿಂದಲೇ ಪೂರೈಕೆ ಕಂಡರೆ ಒಂದಿನಿತು ಒಳ್ಳೆದು ಎಂದಾಲೋಚಿಸಿದರೇ ,ಇತ್ತ ನಡೆದಿದ್ದೇ ಬೇರೆ ಕಜೆ ಔಷಧಗಳೆಲ್ಲವೂ ಸರಕಾರದ ಗೋದಾಮಿನಲ್ಲಿ ಬಂಧಿಯಾಯಿತೇ ವಿನಾ: ರೋಗಿಗಳಿಗೆ ತಲುಪಲೇ ಇಲ್ಲ . ಮಾಫಿಯಾದ ಕರಿ ಮೋಡ ಆವರಿಸಿ ಬಿಟ್ಟಿತ್ತು ,ಪಟ್ಟಭದ್ರ ಹಿತಾಸಕ್ತಿಗಳ ನಡುವೆ ಸಿಲುಕಿತು. ಖಾಸಗೀ ಆಸ್ಪತ್ರೆಗಳಿಗೆ ಹೊಡೆತ ಬೀಳುತ್ತದೆ ,ಔಷಧ ತಯಾರಿಸುವ ಕಂಪನಿಗಳಿಗೆ ಬರೆ ಬೀಳುತ್ತವೆ ಎಂಬ ಕಾರಣದಿಂದ ಈ ಔಷಧಿ ಮಾರುಕಟ್ಟೆಗೆ ಬಾರದಿರಲು ಕಾಣದ ಕೈಗಳು ಕೆಲಸ ಮಾಡಿವೆ. ಕೆಲವು ಸೆಲಬ್ರಿಟಿಗಳನ್ನೂ ಸೇರಿದಂತೆ ಅದೆಷ್ಟೋ ರೋಗಿಗಳನ್ನು ಗುಣ ಪಡಿಸಿದ ಡಾ l ಕಜೆಯವರು ಪ್ರಶಂಸಾರ್ಹರು .ಖುದ್ದು ಸಚಿವ ಸಿಟಿ ರವಿಯವರು ಸಹಾ ಮಾಧ್ಯಮದ ಮುಂದೆ ಹೇಳಿದ್ದರು ನಾನು ಡಾ l ಕಜೆಯವರ ಔಷಧ ದಿಂದಲೇ ಗುಣಮುಖನಾಗಿದ್ದೇನೆ ಎಂದು . ಅಸುರರ ಕ್ಷೇತ್ರದಲ್ಲಿ ಜಯ ಲಭಿಸುವುದು ಅಷ್ಟು ಸುಲಭದ ಮಾತು ಅಲ್ಲವೇ ಅಲ್ಲ. ನಮ್ಮವರಿಗೂ ಅಷ್ಟೇ ನಮ್ಮ ಮನೆಯ ಊಟ ಹಿಡಿಸುವುದಿಲ್ಲ ಆಯುರ್ವೇದ ಔಷಧ ನಮ್ಮ ಕೊಡುಗೆ ,ಭಾರತದ ಆಯುರ್ವೇಧ ಪದ್ಧತಿ ಮತ್ತಿನ್ನೇಲ್ಲೂ ಯಾವುದೇ ದೇಶದಲ್ಲಿ ಸಿಗುವುದಿಲ್ಲ. ಅದರದ್ದೇಯಾದ ಮಹತ್ವ ಗುಣ ವಿಶೇಷತೆಗಳಿವೆ . ರೋಗವನ್ನು ಹೊಡೆದು ಓಡಿಸುವ ಶಕ್ತಿ ಇದೆ . ಇಂಗ್ಲಿಷ್ ಮೆಡಿಸಿನ್ ಬಗ್ಗೆ ಹಾತೊರೆಯುವ ನಾವುಗಳು ಇದರ ಬಗ್ಗೆ ಕಿಂಚಿತ್ ಒಲವು ನೀಡಬೇಕಾಗಿದೆ. ಡಾ l ಕಜೆಯವರ ಔಷಧ ಮಾರುಕಟ್ಟೆಗೆ ಬರುವಂತಾಗಲಿ.

ಮಂಗಳವಾರ, ಜುಲೈ 28, 2020

ಅಂತವರಿಗಿಂತ ಕೆಟ್ಟವನಾದನೇ ಡ್ರೋನ್ ಪ್ರತಾಪ್ ?


ಡ್ರೋನ್ ಪ್ರತಾಪ್ ಹೆಸರು ಕೇಳದವರು ಯಾರು ಇಲ್ಲ 2-3 ವರ್ಷಗಳ ಹಿಂದೆ ಅತೀ ಹೆಚ್ಚು ಜನಪ್ರೀಯ ಗೊಂಡ ಪ್ರತಾಪ್ ಮತ್ತೆ ಸುದ್ದಿಯಾಗುತ್ತಿದ್ದಾರೆ ಬಡತನ ದಿಂದ ಬಂದು ತನ್ನ ಪ್ರಯತ್ನ ಮತ್ತು ಯಶೋಗಾಥೆ ಯಿಂದ ಯುವ ವಿಜ್ಞಾನಿ ಎಂಬ ನಾಮಾಂಕಿತ ದೊಂದಿಗೆ ಎಲ್ಲಾರಿಗೂ ಮಾದರಿ ಎನಿಸಿಕೊಂಡ ಈತ ಕಳೆದ ಒಂದಷ್ಟು ದಿನಗಳಿಂದ ಈಚೆಗೆ ಸಾಮಾಜಿಕ ಜಾಲ ತಾಣ ಸೇರಿದಂತೆ ಮಾಧ್ಯಮಗಳ ಚಾವಡಿಯಲ್ಲಿ ವಸ್ತುವಾಗುತ್ತಿದ್ದಾರೆ . ಬಗೆ ಬಗೆಯ ಟ್ರೊಲ್ಸ್ ಗಳು ಅನೇಕಾನೇಕ ಆತನ ಕಥೆಗಳು ವಿಚಿತ್ರಕಾರಿಯಾಗಿ ತಾರಕಕ್ಕೇರುತ್ತಿದೆ . ಅಂತಹ ದೊಡ್ಡ ತಪ್ಪು ಮಾಡಿದ್ದಾನೆಯೇ ಪ್ರತಾಪ್ ? ತಪ್ಪು ದೊಡ್ಡದಿರಲಿ ಸಣ್ಣದಿರಲಿ ತಪ್ಪು ತಪ್ಪೇ ! ದ್ರೋಹ ವಂಚನೆ ಎಂಬಿತ್ಯಾದಿಗಳಿಂದ ಸುದ್ದಿಯಲ್ಲಿರುವ ಪ್ರತಾಪ್ ನನ್ನು ಈ ಸ್ಥಿತಿಗೆ ಕರೆತಂದವರು ಯಾರು ? ಈಗಿನ ಅದೇ ಮಾಧ್ಯಮ ವಲ್ಲವೇ ?ಹಾಗೆ ನೋಡಿದರೆ ಪ್ರತಾಪ್ ನದ್ದು ಎಲ್ಲವೂ ಸತ್ಯವಲ್ಲ ಹಾಗಂತ ಎಲ್ಲವೂ ಸುಳ್ಳೆಂದು ಹೇಳಲಾಗದು. ಪ್ರತಾಪ್ 'ಈ ತ್ಯಾಜ್ಯ' ವಸ್ತುಗಳನ್ನು ಬಳಸಿ ಡ್ರೋನ್ ಮಾಡದಿರಬಹುದು ,ಕೆಲವು ಸಿನಿಮಾ ಕಥೆಗಳನ್ನು ತನ್ನ ಭಾಷಣದಲ್ಲಿ ಬಿಸಾಕಿರಬಹುದು ,ದೇಶ ಸುತ್ತದಿರಬಹುದು .
ಆದರೂ ಆತನಲ್ಲಿ ಸ್ವಲ್ಪ ಲಾಲೆಜ್ಡ್ ಇದೆ. ಅದಿದೆ ಅನ್ನುವುದಕ್ಕೆ ಎಲ್ಲೋ ಆತನ ಹಾವ -ಭಾವ ದಿಂದ ಆರ್ಥವಾಗುತ್ತಿದೆ ಮೆಡಲ್ ಗಳನ್ನೂ ಪಡೆಯದಿದ್ದರೂ ಆ ಸ್ಥಳ ಗಳಿಗೆ ಎಂಟ್ರಿಯನ್ನು ದಕ್ಕಿಸಿಕೊಂಡಿರುವುದು ಎಲ್ಲೋ ಅವನಲ್ಲಿನ ಪ್ರತಿಭೆ ಸಾಕ್ಷಿ ಒದಗಿಸುತ್ತಿದೆ ಒಂದಷ್ಟು ಪ್ರಯತ್ನ ಪಟ್ಟರೇ ಖಂಡಿತವಾಗಿಯೂ ಸಾಧಿಸಬಲ್ಲನು ಅದೆಲ್ಲಾ ಬದಿಗಿರಿಸಿದರೇ ,ಇಂದಿನ ಈ ಎಲ್ಲಾ ಗೊಂದಲ, ಗೊಡವೆಗಳಿಗೆ ಸೋಶಿಯಲ್ ನೆಟ್ವರ್ಕ್ ,ನ್ಯೂಸ್ ವಾಹಿನಿಗಳೇ ಕಾರಣ. ಇದೀಗ ಅದೂ ಇದೂ ಎಂದು ವರ್ಣರಂಜಿತವಾಗಿ ಕಥೆ ಕಟ್ಟುವ ಇವುಗಳು ಅಂದು ಈತನ ಪೂರ್ವಪರವನ್ನು ಕಂಡು ಕಾರ್ಯಕ್ರಮವನ್ನು ಪ್ರಸಾರ ಮಾಡ್ಬೇಕಿತ್ತು . ತಮ್ಮ ಟಿಆರ್ಪಿ ತೆವಲಿಗೋಸ್ಕರ ಇಂತಹ ಕಾರ್ಯಕ್ರಮಗಳಿಗೆ ಕಥನ ಹೆಣೆಯುವರ ಮಧ್ಯೆ ಸಿಕ್ಕಿದ್ದೇ ಛಾನ್ಸು ಎನ್ನುತ್ತಾ ಇಲ್ಲ ಸಲ್ಲದ ಸುಳ್ಳು -ಪೊಳ್ಳುಗಳನ್ನು ಹೇಳಲು ಒಳ್ಳೆಯ ಪ್ಲಾಟ್ ಪಾರ್ಮ್ ಸಿಕ್ಕಿತ್ತು ಪ್ರತಾಪ್ ಗೆ . ಅದನ್ನೇ ಬಂಡವಾಳ ಮಾಡ್ಕೊಂಡು ಬಿಟ್ಟದ್ದ . ಹಲವಾರು ಜನರಿಗೆ ,ಕಡಿಮೆ ಸಮಯದಲ್ಲಿ ರೋಲ್ ಮಾಡೆಲ್ ಆಗಿಬಿಟ್ಟ . ಆತನ ಮೇಲೆ ಕನಿಕರ ತೋರಿಸದ್ದ ಕೈಗಳಿಗೆ ಆತನ ಯಶೋಗಾಥೆಯನ್ನು ಆಲಿಸಿದ ಮನಸ್ಸುಗಳಿಗೆ ಘಾಸಿಯಾಗಿದ್ದು ಬಿಟ್ಟರೇ ತಲೆ ಹೋಗುವಂತ ವಿಚಾರವೇನೂ ಇರಲಿಲ್ಲ. ದಿನೇ -ದಿನೇ ಟ್ರೋಲ್ ಮಾಡುವವರು ಸುದ್ದಿ ರೆಡಿ ಮಾಡುವವರು ಆಲೋಚಿಸಿ . ಗುಬ್ಬಿ ಮೇಲೆ ಬ್ರಹ್ಮಸ್ತ್ರವೇಕೇ ? ದೇಶವನ್ನು ಲೂಟಿ ಗೈದವರು,ಕೊಳ್ಳೆ ಹೊಡೆದವರು ,ಆಶ್ವಾಸೆಯನ್ನು ಕೊಟ್ಟು ಓಟು ಪಡೆದು ಸ್ವಾರ್ಥ ಪರಿಧಿಯಲ್ಲಿ ಸುತ್ತುವ ರಾಜಕಾರಣಿ ಗಳಿಗೆ , ದೇಶದ ಅನ್ನ ತಿಂದು ಅನ್ಯ ದೇಶಗಳ ಎಂಜಲು ನೆಕ್ಕುವವರಿಗಿಂತ ದೊಡ್ಡ ತಪ್ಪು ಮಾಡಿಲ್ಲ ಪ್ರತಾಪ್. ಇವರುಗಳು ಮಾಧ್ಯಮ ಮತ್ತು ನೆಟ್ಟಿಗರಿಗೆ ಆಹಾರ ವಾಗದಿರುವುದು ವಿಪರ್ಯಾಸ . ಬಗ್ಗಿದವರಿಗೆ ಹಿಡಿದಷ್ಟು ಗುದ್ದು ಕೊಡುವುದು ತರವಲ್ಲ !