ಗುರುವಾರ, ಮೇ 16, 2013

ಕರಾವಳಿಯಲ್ಲಿ ಹೆಚ್ಚುತ್ತಿರುವ ನೈತಿಕ ಪೋಲಿಸ್ ಗಿರಿಗೆ ಕೊನೆ ಇಲ್ಲವೇ?



ಬುದ್ದಿವಂತರ ನಾಡಾದ ಕರಾವಳಿಯಲ್ಲಿ ಮತ್ತೆ ನೈತಿಕ ಪೋಲಿಸ್ ಗಿರಿ ಮೊಳಗುತ್ತಿದೆ.ವರ್ಷಗಳ ಹಿಂದೆ ಶ್ರೀ ರಾಮಸೇನಾ ಸಂಘಟನೆಯ ಕಾರ್ಯ ಕರ್ತರು ಮಂಗಳೂರಿನ ಲಾಡ್ಜ್ ಒಂದರ ಮೇಲೆ ದಾಳಿ ಮಾಡಿ ಸಿಕ್ಕ -ಸಿಕ್ಕವರಿಗೆ ಚೆನ್ನಾಗಿ ಥಳಿಸಿ ಕರಾವಳಿಯನ್ನು ಒಂದೊಮ್ಮೆ ತಲ್ಲಣಗೊಳಿಸಿದ್ದರು . ಅಲ್ಲಿಗೆ ಶಾಂತವಾಗಿದ್ದ ನೈತಿಕ ಪೋಲಿಸ್ ಗಿರಿ ಮತ್ತೊಮ್ಮೆ ಪಡಿಲ್ ನ ಹೋಂ ಷ್ಟೇ ಮೇಲೆ ದಾಳಿ ಮುಖಾಂತರ ಮತ್ತೊಮ್ಮೆ  ಗರಿಗೆದರಿ ನಿಂತು ಬಿಟ್ಟಿತು . ಇನ್ನೇನು ಆ ನೋವು , ಹತಾಶೆ ತಣ್ಣಗಾಗುದರ ಮೊದಲೇ ಮತ್ತದೇ ರಾಗ ಪುಟಿದೆದ್ದು ನಿಂತಿದ್ದು  .ಕೇವಲ ತಿಂಗಳುಗಳ ಅನಂತರದಲ್ಲಿ ಹಿಂದೂ ಸಮುದಾಯದ ಸದಸ್ಯರನ್ನು ಮತಾಂತರ ಮಾಡಲಾಗುತ್ತಿದೆ  ಎಂಬ ವಿಚಾರದ ಮೇಲೆ ಹಿಂದೂ ಪರ ಸಂಘಟನೆಗಳು  ಉಡುಪಿ ಸಮೀಪದ   ಶಿರ್ವದ ಪ್ರಾರ್ಥನಾ ಮಂದಿರದ ಪ್ರಾರ್ಥನಾ ನಿರತ ಭಕ್ತಾಧಿಗಳ ಮೇಲೆ ದಾಳಿ ಮಾಡಿ  ದಬ್ಬಾಳಿಕೆಯ ಕಹಳೆಯನ್ನು ಮೊಳಗಿಸಿದರೆ ,ಅದರ ಬೆನ್ನಿಗೆ ಒಂದೆರಡು ದಿನಗಳಲ್ಲಿ ಕಾಪು ಸಮೀಪದ ಉಚ್ಚಿಲದಲ್ಲಿ ಮಂಗಳೂರ ನಿಂದ ಮಣಿಪಾಲಕ್ಕೆ ಸಾಗುತ್ತಿದ್ದ ಬಸ್ಸಿನಲ್ಲಿದ್ದ ಇಬ್ಬರು ಅನ್ಯಕೊವಿನ  ವಿಧ್ಯಾರ್ಥಿಗಳು  ,ವಿಧ್ಯಾರ್ಥಿನೀಯರ ಜೊತೆ ಮಾತನಾಡಿದರು ಎಂಬ ಕಾರಣಕ್ಕೆ  ಕೆಲ ಮುಸ್ಲಿಂ ಯುವಕರು  ಬಸ್ಸನ್ನು ಅಡ್ಡಗಟ್ಟಿ  ಪ್ರಯಾಣಿಸುತ್ತಿದ್ದ ಆ ಅನಾಮಿಕ ವಿಧ್ಯಾರ್ಥಿಗಳನ್ನು ಬಲವಂತವಾಗಿ ಬಸ್ಸಿನಿಂದ ಕೆಳಗೆಇಳಿಯಿಸಿ ಹಿಗ್ಗಾ ಮುಗ್ಗ ಬಾರಿಸಿ ತಮ್ಮ ದ್ವೇಷವನ್ನು ಸಾಧಿಸಿ ನೈತಿಕ ಪೋಲಿಸ್ ಗಿರಿಯನ್ನು ಪ್ರದರ್ಶಿಸಿ ಬಿಟ್ಟರು .
ವಿಧ್ಯಾರ್ಥಿ ಮೇಲೆ ನಡೆದ ಹಲ್ಲೆ .


ಈ ವರ್ಷದಲ್ಲಿ ಸುಮಾರು ನಡೆದ ಮೂರು ಘಟನೆಗಳೂ ಸಹಾ ಪ್ರಜ್ಞಾವಂತರ ನಿದ್ದೆಗೆಡಿಸಿದೆ. ಅಹಿತಕಾರಿ ಚಟುವಟಿಕೆ ಅಲ್ಲಿ ನಡೆಯುತ್ತಿದೆ ಎಂದು ಹೋಂ ಷ್ಟೇ ಮೇಲೆ ದಾಳಿ ಎಸಗಿದ್ದು ಕಾನೂನಿನ ಹಳಿಯನ್ನು ದಾಟಿದಂತದ್ದು ,ನಿಜಕ್ಕೂ ಕಳವಳಕಾರಿಯೂ ಹೌದು . ಅಂತ ಘಟನೆ ಅಲ್ಲಿ ನಡೆಯುತ್ತಿದ್ದರೂ ಅದನ್ನು ತಪ್ಪಿಸಲು/ಹೋರಾಡಲು  ಕಾನೂನು ಇದೆ ಸೂಕ್ತ ಇಲಾಖೆ ಇದೆ..ಅದನ್ನು ಬಿಟ್ಟು ಮನಸ್ಸಿಗೆ ಬಂದ  ರೀತಿಯಲ್ಲಿ ದಾದಾಗಿರಿ ತೋರಿಸುವದು ನಾಡಿನ ನಾಳಿನ ಉದ್ದಾರಕ್ಕೆ ಸಹಾಯವನ್ನು ತೋರಿಸುತ್ತದೆಯೇ ? ಇನ್ನು ಅದಾಗಿ ಕೆಲವೇ ತಿಂಗಳುಗಳಲ್ಲಿ ಉಡುಪಿ ಸಮೀಪದ ಶಿರ್ವದ ಕ್ರಿಶ್ಚಿಯನ್ ಪ್ರಾರ್ಥನಾ ಮಂದಿರದ ಮೇಲೆ ಹಿಂದೂ ಪರ ಸಂಘಟನೆಗಳು ಅಲ್ಲಿ ಹಿಂದೂ ಜನಾಂಗದವರನ್ನು ಮತಾಂತರ ಮಾಡಲಾಗುತ್ತಿದೆ ಎಂದು ರಾತ್ರೋ ರಾತ್ರಿ ಪ್ರಾರ್ಥನಾ ನಿರತರ ಮೇಲೆ ಹಲ್ಲೆ ಮಾಡಿ ಪೂರ್ಣ ಮಂದಿರವನ್ನು ದ್ವ೦ಸ ಮಾಡಲಾಯಿತು .ಇದರಿಂದ ಬಿಡಿ ಕಾಸಿನಷ್ಟು ಪ್ರಯೋಜನ ಸಿಕ್ಕಿದoತೂ ಇಲ್ಲ . ಅಲ್ಲಿ ಒಂದೊಮ್ಮೆ ಮಾತಾಂದರ  ನಡೆದಿದ್ದು ಹೌದಾಗಿದ್ದೆ ಆದರೂ  ಒಂದು ಕೈ ಇಂದ ಚಪ್ಪಾಳೆ ತಟ್ಟಲು ಸಾಧ್ಯವೇ ? ಎರಡು ಕಡೆಯಿಂದ ಒಮ್ಮತದ ಒಪ್ಪಿಗೆ ಇಲ್ಲದೆ ಮಾತಂದರ ಹೊಂದಲು ಸಾಧ್ಯವೇ ಇಲ್ಲ . ಯಾಕೆ ಹೀಗಾಯಿತು ಕಾರಣ ಏನೆಂಬುದನ್ನು ತನಿಖೆ ಮಾಡಿ ಮಾತಾಂದರಕ್ಕೆ ಮಾರು ಹೋದವರನ್ನು / ಹೋಗುವವರನ್ನು ತೆಡೆದು ಸೂಕ್ತ ರೀತಿಯಲ್ಲಿ ಮನಸನ್ನು ಬದಲಾಯಿಸುವದ್ದ್ ನ್ನು ಬಿಟ್ಟು ಹೀಗೆ ಎಕಾ -ಏಕಿ ಹಲ್ಲೆ ಗೆ  ಮುಂದಾಗುವುದು ಎಷ್ಟು ಸರಿ ?
ಇನ್ನು ಒಂದು ಹುಡುಗ ಇನ್ನೊಂದು ಹುಡುಗಿ ಜೊತೆ ಮಾತನಾಡವುದು ಸಾಮನ್ಯ .  ಈ ಘಟನೆಗೆ ಸಂಬಂದಿಸಿದಂತೆ ಆ ನಾಲ್ಕು ಜನ ವಿಧ್ಯಾರ್ಥಿಗಳ ಜಾತಿ ಬೇರೆಯಾದರೂ ಒಂದೇ ಕಾಲೇಜ್ ಸಹಪಾಠಿ ಗಳು  ಬಸ್ಸಿನಲ್ಲಿ ಸಾಮನ್ಯವೆಂಬಂತೆ ಆದಿನ ಮಾತನಾಡಿದ್ದರು ಆದರೆ ಅದನ್ನೇ ತಪ್ಪು ಗ್ರಹಿಸಿ ಸುಖಾ ಸುಮ್ಮನೆ ಆ ಅಮಾಯಕ ವಿಧ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುದನ್ನು ಯಾರೂ ಮೆಚ್ಚಲಾರ . ಭವಿಷ್ಯ ಉದಾಹರಣೆಗೆ ಈ ಘಟನೆಯ ಹಿಂದೆ ಬಲು ದೊಡ್ಡ ಸಂಗತಿ ಇರಬಹುದು .
ಚರ್ಚ್ ಮೇಲೆ ನಡೆದ ದಾಳಿ
ಬಸ್ಸಿನಲ್ಲಿ ಮಾತನಾಡುತ್ತಿದ್ದ ಆ ವಿಧ್ಯಾರ್ಥಿನೀಯರು ತಮ್ಮ ಜೊತೆ ಸಲುಗೆ ಬೆಳೆಸದೆ ಇನ್ನೋರ್ವ ( ಬೇರೆ ಧರ್ಮ ಸಂಬಂದ ಪಟ್ಟವನ )ಜೊತೆ ಯಲ್ಲಿರುವದನ್ನು ಕಂಡ ಒಬ್ಬ ಸಾಮನ್ಯ ಯುವಕ ತಮ್ಮ ಸ್ನೇಹಿತ ಅಥವಾ ಸಂಘ -ಸಂಸ್ಥೆಗಳೆಂದು (ಇತ್ತಿಚೆಗೆ  ಬಾರಿ ಪ್ರಮಾಣದಲ್ಲಿ )ಗುರುತಿಸಿಕೊಳ್ಳುತ್ತಿರುವ ಕೆಲವು ಗುoಪುಗಳಿಗೆ ಇಲ್ಲೇನೋ ದುಸ್ರಾ  ನಡೆಯುತ್ತಿದೆ ಎಂದು ಕಿವಿಕಚ್ಚಿದ್ದಾನೆ . ಅದಕ್ಕೆಂದೇ ಇರುವ ಕೆಲವು  ಪುರಸೋತ್ತಿನ ಪುಡಾರಿಗಳು ಕಾರ್ಯಪ್ರವರ್ತರಾಗಿದ್ದಾರೆ ಅಷ್ಟೇ .ಇಂಥ ಘಟನೆಗಳು ಸಂಬವಿಸುತ್ತಿರ್ವುದು ಕೆವಲ ತಮ್ಮ ವಯಕ್ತಿಕ ದ್ವೇಷ ವರ್ಚಸ್ಸಿನಿಂದ. ನಂತರ ಗುoಪು ಗೂಡಿ  ಹಲ್ಲೆ ನಡೆಸಿ ನೈತಿಕ ಪೋಲಿಸ್ ಗಿರಿಯನ್ನು ಪ್ರದರ್ಶನ ವಾಗುತ್ತದೆ . ಕೋಮು ಸೌಹರರ್ದೆತೆಗೆ ಹಾದಿ ಮಾಡಿ ಕೊಡುವುದರ ಜೊತೆಗೆ  ಸೇಡಿಗೆ ಸೇಡು ಎಂಬಂತೆ ಆಯಾಯ ಸುಮುದಯದ ಸದಸ್ಯರು ಕತ್ತಿ ಮಸೆಯುತ್ತಾರೆ . ಹೀಗೆ ಸಂಕ ಮುರಿದಲ್ಲೆಲ್ಲಾ ಸ್ನಾನ ವಾಗುತ್ತದೆ . ಒಟ್ಟಾರೆಯಾಗಿ  ಇಷ್ಟರ ತನಕ ಸಂಬವಿಸಿದ ಎಲ್ಲಾ ಘಟನೆಗೂ ಹೀಗೆದ್ದೇ  ಅನ್ನುವದರಲ್ಲಿ ಎರಡು ಮಾತಿಲ್ಲ .   ಮುಂದೆಯೂ ಸಹಾ ಇದೇ ಹಾದಿಯಲ್ಲಿ ಸಾಗುವದು ಶತ ಸಿದ್ದವೇ ..ಹೋಗೆಯಾಡುತ್ತಿರುವ  ಬೂದಿ ಮುಚ್ಚಿದ ಕೆಂಡ ಯಾವಾಗ ಬೇಕಾದರೂ ಉರಿಯ ಬಹುದು ..ಇದಕ್ಕೆ ಕೊನೆ ಎಂಬವುದು ಇಲ್ಲವೇ ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ