ಗುರುವಾರ, ಮೇ 16, 2013

ಸಿಕ್ಕ ಅವಕಾಶವನ್ನು ಹೇಗೆ ಸದುಪಯೋಗ ಪಡಿಸಿ ಕೊಳ್ಳುತ್ತಾರೆ ಕಾದು ನೋಡಬೇಕು .



ಐದು ವರ್ಷಗಳಿಗೊಮ್ಮೆ ನಡೆಯುವ ವಿಧಾನ ಸಭಾ ಚುನಾವಣೆ  ಮುಗಿದಿದೆ  ಫಲಿತಾಂಶವೂ ಪ್ರಕಟಗೊಂಡಿದೆ . ಈ ಬಾರಿ  ಯಾರೂ ನಿರೀಕ್ಷೆ ಮಾಡದಂತೆ  7 ವರ್ಷಗಳ ರಾಜ್ಯದಲ್ಲಿ  ಸ್ಥಿರ ಸರ್ಕಾರ ರೂಪುಗೊಂಡಿದೆ. ತಮ್ಮ ಆಕಾಂಕ್ಷೆ ಯಂತೆ ಸಿದ್ದರಾಮಯ್ಯ  ಕಾಂಗ್ರೆಸ್ ನಿಂದ ಮುಖ್ಯ ಮಂತ್ರಿ ಕುರ್ಚಿ ಏರಿದ್ದಾರೆ . ಒಟ್ಟಾರೆ ಈ ಚುನಾವಣೆ  ಹಿಂದಿನ ಸರ್ಕಾರಕ್ಕೆ (ಬಿಜೆಪಿ )ಗೆ ಮಾಡಿದ್ದುಣ್ಣೋ ಮಹರಾಯ ಅನ್ನುವಂತಾದರೆ ಪ್ರಸ್ತುತ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರಕ್ಕೆ ಇದು ಬಯಸದೇ ಬಂದ  ಭಾಗ್ಯವಾಗಿದೆ. ಕಳೆದ 5 ವರ್ಷಗಳಿಂದ ಬಿಜೆಪಿ ಸರ್ಕಾರದ ಆಡಳಿತ ನೀತಿ-ರೀತಿ ಕಂಡು ಕೊಂಚ ಬದಲಾವಣೆಯನ್ನು ಬಯಸಿದ ಮತದಾನ ಪ್ರಭು ಕಾಂಗ್ರೆಸ್ ಕೈಗೆ ರಾಜ್ಯ ಭಾರವನ್ನು ಕಟ್ಟಿದ್ದಾನೆ . 

''ರಾಜ್ಯವನ್ನು ಸಿಂಗಾಪುರ ಮಾಡುತ್ತವೆ .ಯುರೋಪ್ ಮಾದರಿಯಲ್ಲಿ  ಪುನರ್ ನಿರ್ಮಾಣ ಮಾಡುತ್ತೇವೆ ''ಎಂದು ಟೊಳ್ಳು ಭರವಸೆಯ ಆಶ್ವಾಸನೆಗಳ ಮಳೆಯ  ಪ್ರಣಾಳಿಕೆಯನ್ನು ಬದಿಸಿರಿ ಸಾಧ್ಯವಾಗುವ ಜನ ಮೆಚ್ಚುವ ಕಾರ್ಯದಲ್ಲಿ ತಲ್ಲಿನವಾಗಬೇಕಿದೆ . ಸಮಸ್ಯೆ ಗಳನ್ನ ಸವಾಲಾಗಿ ಸ್ವೀಕರಿಸಿ ,ಹಿಂದಿನ ಸರಕಾರ ಯಾವ ಜನಹಿತ ಅಭಿರುವದ್ಧಿ ಕಾರ್ಯದಲ್ಲಿ ಕುಂಠಿತ ಗೊಂಡಿತ್ತು, ಎಂಬುದನ್ನು ಗಮನಿಸಿ ಆ ದಿಕ್ಕಿನಲ್ಲಿ  ಆಡಳಿತದ  ಚುಕ್ಕಾಣಿ ಹಿಡಿದಿರುವ ನೂತನ ಸರ್ಕಾರ ಆಲೋಚಿಸಿ ಕಾರ್ಯ ರೂಪಕ್ಕೆ ತರುವಲ್ಲಿ ಶಕ್ತವಾಗಬೇಕಾಗಿದೆ.ಇನ್ನು ಅಂತರಿಕ ಕಚ್ಚಾಟ ಒಳಜಗಳ ಬಿನ್ನಭಿಪ್ರಾಯದ ವೈವಾಟಿನಿಂದ ದೂರ ಸರಿದು  . ಅಭಿರುವ್ದಧಿಗೆ ಸಹಾಯವಾಗುವ ಸಾಕಷ್ಟು ಕಾರ್ಯಗಳು ಬಾಕಿ ಉಳಿದಿವೆ ,ಆಗ ಬೇಕಾಗಿರುವದು ಬಹಳಷ್ಟು. ಪೂರ್ಣಗೊಳ್ಳದೆ ಇರುವ ಯೋಜನೆಗಳ ಬಗ್ಗೆ ಗಮನ ಹರಿಸಿಬೇಕು  ಎನ್ನವುದು ಎಲ್ಲರ ಅಭಿವ್ಯ ಕ್ತಿ . ಈ ಅವಕಾಶವನ್ನು ಯಾವ ರೀತಿಯಲ್ಲಿ ಸದುಪಯೋಗ ಪಡೆದುಕೊಳ್ಳುತ್ತಾರೆ ಕಾದು ನೋಡಬೇಕಾಗಿದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ