ಭಾನುವಾರ, ಮೇ 27, 2018

ಸಕಲ ಕಲಾ ವಲ್ಲಭ ;ಮುಸ್ತಾಕ್ ಹೆನ್ನಾಬೈಲ್


ಧರ್ಮಕ್ಕೂ ತೊಡಕಾಗದ ಅಪೂರೂಪದ ಅರಳುತ್ತಿರುವ ಬಹುಮುಖ ವ್ಯಕ್ತಿತ್ವ



ಯಕ್ಷಗಾನ ಕರ್ನಾಟಕ ಕರಾವಳಿಯ ಗಂಡುಕಲೆ .ಒಂದು ಕಾಲದಲ್ಲಿ ಕೇವಲ ಪುರುಷರಿಗೆ ಮಾತ್ರ ಸೀಮಿತವಾಗಿದ್ದ ಈ ಕಲೆಯಲ್ಲಿ ಇತ್ತೀಚೆಗೆ ಸ್ತ್ರೀಯರು ಪ್ರವೇಶ ಮಾಡಿ ಮಿಂಚುತ್ತಿದ್ದಾರೆ. ಇನ್ನೂ ಸಂತೋಷದ ವಿಚಾರವೆಂದರೆ ಅನ್ಯ ಧರ್ಮೀಯರ ಪ್ರವೇಶ. ಜಬ್ಬಾರ್ ಸಮೋ ಈ ಹೆಸರು ಕೇಳಿದಾಕ್ಷಣ ತಾಳಮದ್ದಲೆ ಪ್ರೇಕ್ಷಕರಿಗೆ ಏನೋ ರೋಮಾಂಚನ,ಜಬ್ಬಾರರಂತೆ ಈ ಕ್ಷೇತ್ರದಲ್ಲಿ ಹೆಸರು ಮಾಡಬಲ್ಲ ,ಈಗಷ್ಟೇ ಅಂಬೆಗಾಲಿಡುತ್ತಿರುವ ವಿನೂತನ ಪ್ರತಿಭೆ ಮುಸ್ತಾಕ್ ಹೆನ್ನಾಬೈಲ್.

ಅರಣ್ಯ ಇಲಾಖೆ ಸಿಬ್ಬಂದಿಯಾದ ಅಬ್ದುಲ್ ಹಮೀದ್ ಮತ್ತು ರಹಿಮುನ್ನಿಸಾ ದಂಪತಿಗಳ ಪುತ್ರರಾಗಿ ಕುಂದಾಪುರ ತಾಲೂಕು ಸಿದ್ಧಾಪುರ ಗಾೃಮದ ಹೆನ್ನಾಬೆೈಲುವಿನಲ್ಲಿ ಅಕ್ಟೋಬರ್ 26 ,1978 ರಲ್ಲಿ ಮುಸ್ತಾಕರು ಹುಟ್ಟಿದರು.ಪ್ರಾಥಮಿಕ ಶಿಕ್ಷಣವನ್ನು ಹೆನ್ನಾಬೆೈಲು,ಪ್ರೌಢ ಶಿಕ್ಷಣವನ್ನು ಹೊಸಂಗಡಿ ಮತ್ತು ಪದವಿ ಶಿಕ್ಷಣವನ್ನು ಸರಕಾರಿ ಕಾಲೇಜು ಶಂಕರನಾರಾಯಣದಲ್ಲಿ ಪೊರೆೈಸಿದರು.

ಮುಸ್ತಾಕರದು ಬಹುಮುಖ ಪ್ರತಿಭೆ.

ಹವ್ಯಾಸಿ ತಾಳಮದ್ದಲೆಯ ಅರ್ಥಧಾರಿ,ವೇಷಧಾರಿ.. ಆರ್ಕೆಸ್ಟ್ರಾ ಗಾಯಕ..ಸೊಗಸಾದ ಕಾರ್ಯಕ್ರಮ ನಿರೂಪಕ ..ಮೋಡಿ ಮಾಡುವ ಭಾಷಣಕಾರ..ಉತ್ತಮ ಬರಹಗಾರ , ರೋಟರಿಯಂತಹ ಅಂತರಾಷ್ಟ್ರೀಯ ಮಟ್ಟದ ಸಮಾಜ ಸೇವಾ ಸಂಘಟನೆಗಳಲಿ ಸಕ್ರಿಯರಾಗಿರುವ ಕ್ರಿಯಾಶೀಲ ವ್ಯಕ್ತಿತ್ವದವರು.
ಇಸ್ಲಾಮಿಕ್ ಧಾರ್ಮಿಕ ಗ್ರಂಥಗಳ ಆಳವಾದ ಜ್ಞಾನದ ಜೊತೆಗೆ ಹಿಂದೂ ಮಹಾಕಾವ್ಯಗಳಾದ ರಾಮಾಯಣ ,ಮಹಾಭಾರತ ,ಭಗವದ್ಗೀತೆ,ವೇದ ಉಪನಿಷತ್ತುಗಳ ಮೇಲೆ ಅರ್ಥ ವ್ಯಾಖ್ಯಾನ ಕೊಡಬಲ್ಲ ಆಕರ್ಷಕ ವಾಗ್ಮಿ....ತಾಳಮದ್ದಲೆ ಕ್ಷೇತ್ರಕ್ಕೆ ಇತ್ತೀಚೆಗಷ್ಟೇ ಪಾದಾರ್ಪಣೆ ಮಾಡಿದರೂ ,ಮಾಡಿದ ಎಲ್ಲಾ ಪಾತ್ರಗಳು ಜನಮನ್ನಣೆಗಳಿಸಿ
ರಂಗದಲ್ಲಿಯೂ ಮೋಡಿಯ ಮಾತಿನಿಂದ ಖ್ಯಾತಿಗಳಿಸುತ್ತಿದ್ದಾರೆ.....ಸತ್ಯ ಹರಿಶ್ಚಂದ್ರ ಪ್ರಸಂಗದ 'ವಿಶ್ವಾಮಿತ್ರ', ಗದಾಯುದ್ಧದ 'ಸಂಜಯ'ಭೀಷ್ಮ ವಿಜಯದ 'ಬ್ರಾಹ್ಮಣ',ಇಂದ್ರಜಿತು ಕಾಳಗದ 'ವಿಭೀಷಣ' ಶ್ರೀ ಕೃಷ್ಣ ಪರಂಧಾಮದ 'ಜರ' ಮುಂತಾದ ಪಾತ್ರಗಳಲ್ಲಿ ತನ್ನ ಅಭಿನಯ,ಮಾತುಗಾರಿಕೆ,ವಿಶೇಷ ಶೆೈಲಿಯ ಪ್ರಸ್ತುತಿಯ ಜೊತೆಗೆ ಸಾಮಾಜಿಕ ಸಾಮರಸ್ಯ ಸಾರುವಲ್ಲಿ ಮತ್ತು ಕಲೆ ಧರ್ಮಾತೀತವಾದುದು ಎನ್ನುವುದನ್ನು ಸಾಧಿಸಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಮ್ಮ ಬಿಡುವಿಲ್ಲದ ವೃತ್ತಿ ಜೀವನದ ನಡುವೆಯೂ ಹವ್ಯಾಸಿಯಾಗಿ ಹಲವಾರು ಇತರ ರಂಗಗಳಂತೆ ಯಕ್ಷರಂಗ ವನ್ನೂ ಆಯ್ದುಕೊಂಡ ಮುಸ್ತಾಕರು ವೃತ್ತಿಯಲ್ಲಿ ಚಿನ್ನಾಭರಣ ಕ್ಷೇತ್ರದಲ್ಲಿರುವವರು ..
ವಿಶ್ವದ ಪ್ರಮುಖ ಚಿನ್ನಾಭರಣ ಸಂಸ್ಥೆಯಾದಂತಹ ಚೆಮ್ಮನೂರು ಜ್ಯುವೆಲರ್ಸ್ನಲ್ಲಿ ಮತ್ತು ಭಾರತದ ಪ್ರಖ್ಯಾತ ಮುಕೇಶ ಅಂಬಾನಿಯವರ ರಿಲಾಯನ್ಸ್‌ ಸಂಸ್ಥೆಗಳಲ್ಲಿ ಸರಿಸುಮಾರು 18 ವರ್ಷ ಸೇವೆ ಸಲ್ಲಿಸಿ ಇದೀಗ Rsj Gold ಎನ್ನುವ ಸ್ವಂತ ಸಂಸ್ಥೆಯನ್ನು ನಡೆಸುತ್ತಿದ್ದಾರೆ ....ಯಕ್ಷಗಾನ ರಂಗದ ತನ್ನ ಪಯಣದಲ್ಲಿ ಈ ರಂಗಕ್ಕೆ ತನ್ನನ್ನು ಪರಿಚಯಿಸಿದ ಸಿದ್ಧಾಪುರ ಯಕ್ಷ ನುಡಿಸಿರಿ ಬಳಗದ ಅಧ್ಯಕ್ಷ ಡಾ।ಜಗದೀಶ ಶೆಟ್ಟಿಯವರನ್ನು ಸದಾ ಸ್ಮರಿಸುತ್ತಾರೆ.
ರಂಗದ ನಡೆಗಳ ಜೊತೆಗೆ ಪಾತ್ರಕ್ಕೆ ಬೇಕಾದ ಪೌರಾಣಿಕ ಜ್ಞಾನ ಮತ್ತು ಸ್ಫೂರ್ತಿಯನ್ನು ಹವ್ಯಾಸಿ ತಾಳಮದ್ದಲೆ ಅರ್ಥಧಾರಿ ಹಾಗೂ ತನ್ನ ಗುರುಗಳಾದಂತಹ ಶ್ರೀ ಧನಂಜಯ ಚಾತ್ರ ಹಳ್ಳಿಹೊಳೆ ನೀಡುತ್ತಿರುವುದನ್ನು ಕೃತಜ್ಞತೆಯಿಂದ ನೆನೆಯುತ್ತಾರೆ ...ಜೊತೆಗೆ ಕಮಲಶಿಲೆ ಮೇಳದ ಪ್ರಸಿದ್ಧ ಭಾಗವತ ಶ್ರೀ ಗಣೇಶ ಕುಮಾರ್ ಹೆಬಿೃ ಮತ್ತು ಮಿತ್ರ ಹಾಗೂ ಕಲಾವಿದ ಶ್ರೀ ಸತೀಶ ಮೂಡುಬಗೆಯವರ ಸಹಕಾರವನ್ನು ನೆನಪಿಸುತ್ತಾರೆ...ಮಂಗಳೂರು ವಿಶ್ವವಿದ್ಯಾನಿಲಯದಿಂದ ಕಲಾ ಪದವಿಯನ್ನುೂ ಮತ್ತು ಕುವೆಂಪು ವಿಶ್ವವಿದ್ಯಾನಿಲಯದಿಂದ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಮುಸ್ತಾಕರು ಕಲೆಯ ಮೂಲಕ ಜ್ಞಾನ ಪ್ರಸರಣ ಮಾತ್ರವಲ್ಲದೆ ಸೌಹಾರ್ದತೆ ಮೂಡುವುದರ ಜೊತೆಗೆ ಸುಸಂಸ್ಕೃತ ಸಮಾಜ ನಿರ್ಮಾಣವಾಗಬೇಕೆಂಬ ಉನ್ನತ ಆಶಯವನ್ನು ಹೊಂದಿರುವವರು...

http://vknews.in/335976/

ಶನಿವಾರ, ಮೇ 26, 2018

ಜೆಡಿಎಸ್ –ಕಾಂಗ್ರೆಸ್ ಮೈತ್ರಿ ಎಷ್ಟು ದಿನ ? ಅದೃಷ್ಟದ ಮುಖ್ಯ ಮಂತ್ರಿ ಕುಮಾರಸ್ವಾಮಿ !!!


ಗೊತ್ತಿತ್ತು ..! ಪ್ರಜ್ನಾವಂತರಿಗೆ ಅರಿವಿತ್ತು. ಈ ಬಾರಿ ಖಂಡಿತವಾಗಿಯೂ ಸಹಾ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಬಹುಮತ ದಕ್ಕುವುದು ಕಷ್ಟ ಸಾಧ್ಯ ಎಂದು ! ಬಾರತೀಯ ಜನತಾ ಪಾರ್ಟಿ ಪರ ಸಮೀಕ್ಷೆ ವಾಲುತ್ತಿದ್ದರೆ,ಹಾಗೂ ೧೦೪ ಬ್ರಹತ್ ಪ್ರಮಾಣದ ಸೀಟುಗಳನ್ನು ಪಡೆದಿದ್ದರೆ ಅದು ನಿಜವಾಗಿಯೂ “ಮೋದಿ ಹವಾ” ಎಂದು ಬೀಗದೇ ಬೇರೆ ಉಪಾಯವಿಲ್ಲ .
ಎಸ್ ! ಬಿಜೆಪಿ ಸ್ವತಂತ್ರ್ಯವಾಗಿ ಸರ್ಕಾರ ನಡೆಸುವುದು ಕಷ್ಟವೇನಲ್ಲ ಆದರೆ ಇಲ್ಲಿ ಕೊರತೆ ಕಾಣುವುದು ಮುಖ್ಯವಾಗಿ ಉತ್ತಮ ಕ್ಯಾಂಡಿಡಿಯೆಟ್ ನದು . ಪ್ರಸ್ತುತ ಇರುವ ಮುಖಂಡರುಗಳ ನಡುವೆ ಆಂತರಿಕ ಕಚ್ಚಾಟ , ಭಿನ್ನಾಭಿಪ್ರಾಯ ,ಮೈ ಮನಸ್ಸು ,ಬ್ರಷ್ಟಚಾರ ರೂಪಿ ವರ್ಚಿಸ್ಸಿನಿಂದ ಬಿಜಿಪಿ ರಾಜ್ಯದಲ್ಲಿ ತನ್ನ ಕಹಳೆಯನ್ನು ಮೊಳಗಿಸುವುದು ಕಷ್ಟವೇ ಸರಿ ! ಒಟ್ಟಾರೆ ಮೋದಿ ಹವಾ ಅಮಿತ್ ಷಾ ಬೆಂಬಲ, ಹೋರಾಟ ,ಪ್ರಚಾರ ತಂತ್ರ ಹಾಗೂ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರ್ಕಾರದ ಕೆಲವು ಅಹಿತಕರ ಚಟುವಟಿಕೆಯಿಂದ ೧೦೪ ಸೀಟು ಪಡೆಯಲು ಶಕ್ತವಾಗಿದಂತೂ ಸತ್ಯ.
ಮ್ಯಾಜಿಕ್ ನಂಬರ್ ೧೧೨ ಕ್ಕಾಗಿ ಉಳಿಸಿದ ಸೀಟಿನ ಅನಿವಾರ್ಯತೆಗೆ ಬಿಜೆಪಿ ಪಾಳಯದಿಂದ ಕುದುರೆ ವ್ಯಾಪಾರ ನಡೆದರೂ ಸಹಾ ಅದು ಸಫಲವಾಗಲಿಲ್ಲ . ಸಾಧ್ಯವಾಗಲೇ ಇಲ್ಲ . ಈ ನಿಟ್ಟಿನಲ್ಲಿ ಜೆಡಿ ಎಸ್ ನ ಕುಮಾರ ಸ್ವಾಮೀ ಮತ್ತು ಕಾಂಗ್ರೆಸ್ ನ ಡಿಕೆ ಶಿವಕುಮಾರ್ ತಮ್ಮ ಶಾಸಕರನ್ನು ಹದ್ದು ಬಸ್ತಿನಲ್ಲಿ ಇಡಲು ಅವರ ಜಾಣ್ಮೆ ಮತ್ತು ಪಾತ್ರ ಬಲು ದೊಡ್ದದಾಗಿತ್ತು .
ಒಟ್ಟಾರೆಯಾಗಿ ಮೇ ೧೫ ರಿಂದ 8 -೧೦ ದಿನ ರಾಜಕೀಯ ರಂಗಿನಾಟ ನಿಜಕ್ಕೂ ಸೋಜಿಗವನ್ನು ಉಣಬಡಿಸಿತ್ತು . ರಾಷ್ಟ್ರದ್ಯಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. ಸುದ್ದಿ ವಾಹನಿಗಳಿಗೆ ಹಬ್ಬವೋ ಹಬ್ಬ ! ದಿನದ 24 ಗಂಟೆಯೂ ಸಹಾ ಎಡಬಿಡದೇ ನೇರ ಪ್ರಸಾರದಲ್ಲೇ ಸನ್ನದ್ದವಾಗಿದ್ದವು . ಅತೀ ಹೆಚ್ಚು ಬಹುಮತ ೧೦೪ ಸೀಟು ಪಡೆದ ಬಿಜೆಪಿ ಆಟಕುಂಟು ಲೆಕ್ಕಕಿಲ್ಲ ಎನ್ನುವಂತಾಗಿತ್ತು . ಕೇವಲ ೭೭ ಸೀಟು ಪಡೆದ ಕಾಂಗ್ರೆಸ್ ಹಾಗೂ ೩೭ ಸೀಟು ಮಾತ್ರ ಪಡೆದ ಜೆಡಿಎಸ್ ದೋಸ್ತಿಗಳಾಗಿವೆ . ರಾಜ್ಯದಲ್ಲಿ ಕಿಂಗ್ ಮೇಕರ್ ಎಂದೇ ಗುರುತಿಸಲ್ಪಟ್ಟ ದೇವೇಗೌಡ ನೇತೃತ್ವದ . ಜೆಡಿಸ್ನ ಕುಮಾರ ಸ್ವಾಮೀ ಅದೃಷ್ಟದ ಮುಖ್ಯ ಮಂತ್ರಿಯಾಗಿದ್ದಾರೆ. ಪ್ರತಿಪಕ್ಷಕ್ಕೂ ಯೋಗ್ಯತೆ ಇಲ್ಲ ಸೀಟು ಪಡೆದ ಕುಮಾರ ಸ್ವಾಮಿಗೆ ರಾಜಯೋಗ...11 ಒಟ್ಟಾರೆ ಈ ಮೈತ್ರಿ ಸರ್ಕಾರ ಎಷ್ಟು ದಿನ ವ್ಯಾಲಿಡಿಟಿ ಪಡೆದು ಕೊಳ್ಳುತ್ತೋ ಗೊತ್ತಿಲ್ಲ , ಪೂರ್ಣ ೫ ವರ್ಷ ಪೂರೈಸೋದು ಬವಿಷ್ಯ : ಕನಸ್ಸಿನ ಮಾತೇ ಸರಿ ಎಂಬ ವಿಧ್ಯಾಮಾನ ಸಾರಿ ಹೇಳುತ್ತಿದೆ . ಜೆಡಿಎಸ್ ನಿಂದ ಹೊರಗೆ ಬಂದ ಸಿದ್ದರಾಮಯ್ಯನಿಗೆ ದೇವೇಗೌಡ ,ಹಾಗೂ ಕುಮಾರ ಸ್ವಾಮೀ ಯಿಂದ ಹಾವು ಮುಂಗುಸಿ ಆಟ ಹೆಚ್ಚು ದಿನ ಬಾಳಲಿಕ್ಕೆ ಬಿಡಲಾಗದು!!
ಏನೇ ಇರಲಿ ಎಲ್ಲಕಿಂತ ಹೆಚ್ಚು ಪ್ರಭಾವಶಾಲಿಯ ಅಂಶ ಈ ನಾಟಕ ರಂಗದಲ್ಲಿ ಗಮನಿಸಬೇಕಾದದ್ದು ಯಡಿಯೂರಪ್ಪ ಅಂಡ್ ಟೀಮ್ ನಿಂದ 104 ಸೀಟು ಪಡೆದು ಅನಿವಾರ್ಯ ಇರುವ 8 ಸೀಟು ಹೇಗಾದರೂ ಕುದುರೆ ವ್ಯಾಪಾರ ಮೂಲಕ ಪಡೆದು ಸ್ವತಂತ್ರ್ಯ ಸರ್ಕಾರ ರಚಿಸಬೇಕು ಎಂಬ ಮಹಾದಾಸೆಯಿಂದ ಬಗೆ ಬಗೆಯ ಸರ್ಕಸ್ ನಡೆಸಿಯೇ ಬಿಟ್ಟಿತು .ಸುಪ್ರಿಂ ಕೋರ್ಟ್ ಮೊರೆ ಹೋಗಿ ರಾಜ್ಯಪಾಲರ ಮುಖಾಂತರ ಮುಂದಿರುವ ಸಂಕಷ್ಟವನ್ನು ಮನಗಾಣದೆ ತರಾತುರಿಯಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿ ಬಿಟ್ಟಿದ್ದರು ಯಡಿಯೂರಪ್ಪ .ಇತ್ತ ವಿರೋಧ ಪಕ್ಷದವರ ಲಡಾಯಿ ಜೋರಾಗಿತ್ತು . ಸುಪ್ರಿಂ ಕೋರ್ಟ್ ನ ಕದ ರಾತ್ರಿ ೧೨ ಗಂಟೆಗೆ ವಿರೋಧ ಪಾರ್ಟಿಗಳು ಬಡಿದವು. ಸರ್ವೋಚ್ಚ ನ್ಯಾಯಾಲಯ ಬಹುಮತ ಸಾಬೀತಿಗೆ ಡೇಟ್ ಫಿಕ್ಸ್ ಮಾಡಿ ಆಗಿತ್ತು .ಆದರೇನು ಮಾಡೋದು ಸೇಮ್ ಟು ಸೇಮ್ ೧೯೯೬ ರಲ್ಲಿ ವಾಜಪೇಯಿಗೆ ಉಂಟಾದ ಸಂದಿಗ್ನ ಪರಿಸ್ತಿತಿ ಅಕ್ಷರಸ ಯಡ್ಡಿಗೂ ಕೂಡಾ ಅನುಭವಿಸಬೇಕಿತ್ತು . ಅಂತೂ ಯಡಿಯೂರಪ್ಪ ಸದನದಲ್ಲಿ ಬಹುಮತ ಸಾಬೀತು ಪಡಿಸಲಾಗದೇ ,ಫೀಲಿಂಗ್ ಬಾಷಣವನ್ನು ಮುಗಿಸಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಯೇ ಬಿಟ್ಟರು .
ಸಿಕ್ಕ ಸೀಟುಗಳಿಂದ ವಿರೋಧ ಪಕ್ಷದವರ ಆಟೋಟೊಪ ದಿಂದ ಸರ್ಕಾರವನ್ನು ನಡೆಸಲು ಸಾಧ್ಯವಾಗುವುದಿಲ್ಲ .ಎಂದು ಗೊತ್ತಿದ್ದರೂ ಕೂಡಾ ಈ ಮೊದಲು ಬಹಿರಂಗ ಪಡಿಸಿದಂತೆ ಯಡ್ಡಿ ಇಂತಹ ದಿನವೇ ಮುಖ್ಯ ಮಂತ್ರಿ ಯಾಗಿ ಪ್ರಮಾಣವ ಚನವನ್ನು ಮಾಡುತ್ತೇನೆ ಎಂದು ಕೊಂಡ ರೀತಿಗೆ ಬೆಲೆ ಸಿಕ್ಕಿದಂತಾಗಿದಂತೂ ಸುಳ್ಳಲ್ಲ . ಸದನದಲ್ಲಿ ಮಂಡಿಸಿದ ಭಾವದ್ವೇಗದ ಬಾಷಣ ಎಂತವರಿಗೂ ಸಹಾ ಕನಿಕರವನ್ನು ತರುವಂತಿತ್ತು . ಮುಂದೊಮ್ಮೆ ಪ್ರಸ್ತುತ ಸರ್ಕಾರ ಮುರಿದು ಬಿದ್ದಿದ್ದೇ ಯಾದರೇ ಉಪಚುನಾವಣೆಯಲ್ಲಿ ಬಹುಮತ ಖಂಡಿತವಾಗಿಯೂ ಬಿಜೆಪಿಗೆ ದಕ್ಕಬಹುದೇನೋ ?! ಸಿಂಪತಿ ಮತ್ತು ಪ್ರಮಾಣ ಸ್ವೀಕರಿಸಿದ ಕ್ಷಣದಲ್ಲಿ ರೈತರ ಸಾಲ ಮನ್ನಾ ಎಂದು ಘೋಷಣೆ ಮಾಡಿದ ಕೆಲವೊಂದು ಅಂಶಗಳು ಇಲ್ಲಿ ವರ್ಕೌಟ್ ಆಗಬಹುದು ,,
ಯಾವುದಕ್ಕೂ ಕಾಲವೇ ಉತ್ತರ ಹೇಳಬೇಕು .

ವಿಧ್ಯಾರ್ಥಿಗಳ ಹಿತ ದ್ರಷ್ಟಿಯಿಂದ ಉತ್ತಮವಾದ ನಿರ್ಧಾರ !


ಹೌದು ಈ ವರ್ಷದಿಂದ ಪಿಯುಸಿ ತರಗತಿಗಳು ಬಲು ಬೇಗನೇ ಆರಂಭ ಕಾಣುತ್ತಿದೆ ,ಸರ್ಕಾರದ ಈ ಹೊಸ ಆದೇಶದ ಇದರ ವಿರುದ್ಧ ವಿಧ್ಯಾರ್ಥಿಗಳು ಹಾಗೂ ಉಪನ್ಯಾಕರುಗಳು ಅತೃಪ್ತರಾಗಿದ್ದಾರೆ . ನೀರಿನ ಸಮಸ್ಯೆ, ಬಿಸಿಲ ಝಳ , ಶುಭಕಾರ್ಯಗಳ ಸಮಯ ಈ ಸಂದರ್ಭದಲ್ಲಿ ತರಗತಿ ಪ್ರಾರಂಭವಾಗುವುದು ಸಮಂಜಸ ಅಲ್ಲ ಎಂಬ ಮಾತುಗಳೂ ಕೂಡಾ ಕೇಳಿಬರುತ್ತಿವೆ .

ಅವಧಿಗೆ ಮುನ್ನಾ ಪಿಯುಸಿ ತರಗತಿ ಪ್ರಾರಂಬವಾಗೋದು ಕೊಂಚ ಎಲ್ಲೂ ಹೊಸತು ಅನ್ನಿಸಿದರೂ ಇದು ಒಳ್ಳೆಯ ಬೆಳವಣಿಗೆ ಈ ಒಂದು ಕಾನೂನು ಜಾರಿಗೊಳಿಸಿದ ಪದವಿ ಪೂರ್ವ ಇಲಾಖೆಗೆ ಅಭಿನಂದನೆ ಸಲ್ಲಿಸಬೇಕು ..ಯಾವುದೋ ಒಂದು ನಿರ್ದಿಷ್ಟ ಕಾರಣವಿಲ್ಲದೇ ಪಿ ಯು ಮಂಡಳಿ ಈ ನಿರ್ಧಾರಕ್ಕೆ ಕೈ ಹಾಕಿಲ್ಲ ಬಲವಾದ ವಿಚಾರ ಇದರ ಹಿಂದೆ ವಿರಬಹುದು .ಇಲ್ಲಿ ನೀರಿನ ಸಮಸ್ಯೆ, ಬಿಸಿಲ ಝಳ , ಶುಭಕಾರ್ಯಗಳ ಗೊಡವೆಗಳೆಲ್ಲಾ ಇದಕ್ಕೆ ಸಂಬಂದ ಪಡುವುದಿಲ್ಲ .ಉಪನ್ಯಾಸಕರೂ ಅಷ್ಟೇ ಈ ಆದೇಶವನ್ನು ಪಾಲಿಸಲೇಬೇಕು. ಬೇಗನೇ ಪಾಠ ಪ್ರವಚನ ಶುರು ಮಾಡಿದರೆ ಕೊನೆಯ ದಿನಗಳಲ್ಲಿ ಸಾಕಷ್ಟು ಉಪಯೋಗ ವಿಧ್ಯಾರ್ಥಿಗಳಿಗೆ ಉಂಟಾಗುವುದರ ಜೊತೆಗೆ ಉಪನ್ಯಾಸಕ ಗಳಿಗೂ ಸಹಾ ಹೆಚ್ಚಿನ ಒತ್ತಡ ಬೀಳುವುದಿಲ್ಲ .. ವಿಧ್ಯಾರ್ಥಿಗಳ ಹಿತ ದ್ರಷ್ಟಿಯಿಂದ ಉತ್ತಮವಾದ ನಿರ್ಧಾರ !

ರಾಜಕೀಯ ಪಕ್ಷಗಳಲ್ಲಿ ಬಂಡಾಯ ಸರ್ವೆ ಸಾಮಾನ್ಯ!



ಈ ಚುನಾವಣೆಗಳು ಸಮೀಪಿಸಿದಾಗ ಟಿಕೇಟ್ ಸಮಸ್ಯೆ ಸಾಮನ್ಯವಾಗಿ ಕಾಡುತ್ತದೆ . ತನಗೆ ಬೇಕು ನನಗೆ ಬೇಕು ...ನಾ ಮುಂದು ತಾ ಮುಂದೆ ಎಂದು ಕಣಕ್ಕೆ ಇಳಿಯುವ ಆಕಾಂಕ್ಷೆಗಳ ದಂಡೇ ನಮ್ಮ ಎಲ್ಲಾ ರಾಜಕೀಯ ಪಕ್ಷಗಳಲ್ಲಿವೆ . ಒಂದೇ ಸೀಟನ್ನು ನಾಲ್ಕೈದು ಮಂದಿ ಗೆ ಹಂಚಲಾಗದ ಸಂದರ್ಭದಲ್ಲಿ ,ಟೀಕೆಟ್ ಸಿಗದ ವ್ಯಕ್ತಿ ಬಂಡಾಯ ಏಳುತ್ತಾನೆ !!
ಹೌದು ರಾಜಕೀಯ ಪಕ್ಷಗಳಲ್ಲಿ ಬಂಡಾಯ ಸರ್ವೆ ಸಾಮಾನ್ಯ..! ಮುಖಂಡರಿಗೆ ,ಹೈಕಮಾಂಡ್ ಮುಂದೆ ದೊಡ್ಡ ಸವಾಲು ಹಾಗೂ ಬಿನ್ನಾಭಿಪ್ರಾಯ ವನ್ನು ಟಿಕೇಟ್ ಹಂಚಿಕೆಯಲ್ಲಿ ಎದುರಿಸಬೇಕಾಗಿ ಬರುತ್ತದೆ .ಎಲ್ಲೋ ಆಕಾಂಕ್ಷೆಗಳಿಗೆ ಸೀಟು ಕೈ ತಪ್ಪಿ ಹೋದಾಗ ಬಂಡಾಯ ಆರಂಭವಾಗುತ್ತದೆ .ಆತ ಬೇರೆ ಪಕ್ಷ ಸೇರುವ ಅಥವಾ ಪಕ್ಷೇತರರಾಗಿ ನಿಂತು ತಮ್ಮ ಸ್ವಂತ ಪಕ್ಷದ ವಿರುದ್ದ ಇಲ್ಲ ಸಲ್ಲದ ಆರೋಪ ಹೊರಿಸಿ ತೊಡೆ ತಟ್ಟುತ್ತಾರೆ ಪಕ್ಷದ ವರಿಷ್ಠರು ಎಲ್ಲಾರಿಗೂ ಬೀ ಫಾರಂ ಕೊಡಲಿಕ್ಕೆ ಸಾಧ್ಯವಿಲ್ಲ.. ಇದ್ದವರಲ್ಲಿ ಉತ್ತಮರು ಯಾರೂ ಹಾಗೂ ಗೆಲ್ಲುವ ಕುದುರೆ , ಬೆಂಬಲದ ಅಂಶವನ್ನೂ ಅರಿತು ಕೊಡಲಾಗುತ್ತದೆ.ಎಲ್ಲೂ ಒಮೊಮ್ಮೆ ತಮ್ಮ ನಿಕಟವರ್ತಿ ಗಳಿಗೆ ಅದು ವರ್ಗಾವಣೆ ಯಾಗುತ್ತದೆ.. ಟಿಕೇಟ್ ಹಂಚಿಕೆ ಪಾರದರ್ಷಕವಾಗಿರಬೇಕು ಹಾಗೂ ಆಕಾ೦ಕ್ಷಿಗಳು ಪಕ್ಷದ ಆಶೋತ್ತರಗಳನ್ನು ಗಮನಿಸಿ ಆಯ್ಕೆ ಸಮಿತಿ ಜೊತೆ ಕೈ ಜೋಡಿಸಬೇಕು, ಆಗ ಬಂಡಾಯ ಶಮನ ಆಗಬಹುದು.

ಭಾನುವಾರ, ಜನವರಿ 14, 2018

ಧರ್ಮ ಸಂಘರ್ಷಕ್ಕೆ ಇನ್ನೆಷ್ಟು ಅಮಾಯಕರುಗಳು ಬಲಿಯಾಗಬೇಕು ?


ಕೋಮು ಸಾಮರಸ್ಯಕ್ಕೆ ಮತ್ತೆರೆಡು ಜೀವಗಳು ಬಲಿಯಾಗಿವೆ . ಸೆರಗಿನಲ್ಲಿ ಕೆಂಡ ಕಟ್ಟಿ ಕೊಂಡಂತೆ ಇದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಬೆಂಕಿ ಹೊತ್ತಿ ಉರಿದಿದೆ ,
ಅಮಾಯಕರಿಬ್ಬರು ಬೀದಿ ಬದಿ ಹೆಣವಾಗಿದ್ದಾರೆ .ಎಂದಿನಂತೆ ರಾಜಕೀಯದ ಹಾರಾಟ ಮುಂದುವರಿದಿದೆ .ರಾಜ ಕಾರಣಿಗಳಿಗೆ ಹಬ್ಬದೂಟವಾದರೇ,ಇದನ್ನೇ ಕಾದ ಕುಳಿತ ಮತಾಂದ ಮತೀಯರಿಗೆ ಸಾಧನೆಯ ಸಂತೋಷ ..! ಒಟ್ಟಾರೆ ಅಕ್ಷರಸ: ಬುದ್ದಿವಂತರ ನಾಡು ಜಗತ್ತಿನಾದ್ಯಂತ ಮತ್ತೆ ಸುದ್ದಿಗೆ ಗ್ರಾಸವಾಗಿದೆ.ಇನ್ನೆಷ್ಟು ಬಲಿ ಬೇಕು? ಅಮಾಯಕರಗಳ ಸಾವಿನ ನಿರೀಕ್ಷೆಯಲ್ಲಿ ಕುಡ್ಲ ಕಣ್ಣು ಬಿಟ್ಟು ಕಾತರಿಸುವುತ್ತಿರುವುದೂ ಸುಳ್ಳಲ್ಲ .
ಇವತ್ತಿನವರೆಗೆ ಈ ಎಲ್ಲಾ ಘಟನೆಗಳನ್ನು ಮೆಲುಕು ಹಾಕಿದರೇ ನಮಗೆ ಸಿಗುವ ಫಲಿತಾಂಶ ಕೇವಲ ಅಮಾಯಕರುಗಳದ್ದೇ ಸಾವು ನೋವುಗಳು .ಫಟಿಂಗರು ಬಚಾವ್ ಆಗುತ್ತಾರೆ ಅಮಾಯಕರು ಮಾತ್ರ ಬಲಿಪಶುಗಳಾಗುತ್ತಿದ್ದಾರೆ .
ಬಾಲ್ಯದಲ್ಲೇ ತನ್ನ ತಂದೆಯನ್ನು ಕಳೆದುಕೊಂಡು ,ಅಕ್ಕರೆಯ ತಾಯಿ ವಿಕಲ ಚೇತನ ಸಹೋದರನೊಂದಿಗೆ ಕುಟುಂಬದ ಪೂರ್ಣ ಹೊರೆಯನ್ನು ಹೊತ್ತ ದೀಪಕ್ ಖುಷಿ ಖುಷಿಯಾಗಿ ಬದುಕಿನ ಪಯಣವನ್ನು ನೆಮ್ಮದಿ ಯಿಂದ ಮುಂದುವರಿಸುತ್ತಾ ಇದ್ದ . ಆದಾಗಲೇ ಕಷ್ಟಪಟ್ಟು ಇಷ್ಟಪಟ್ಟು ಸಾಲ -ಸೂಲ ಮಾಡಿ ಹಣ ಹೊಂದಿಸಿ ಹೊಸ ಮನೆಯನ್ನೂ ಕಟ್ಟಿದ್ದ, ದುಶ್ಚಟಗಳಿಂದ ದೂರ ವಿದ್ದ ದೀಪು ಕುಟುಂಬದ ಆಧಾರ ಸ್ತಂಬವಾಗಿದ್ದ . ಈಗ ದೀಪಕ್ ಕಾಣದ ಲೋಕಕ್ಕೆ ಪಯಣ ಬೆಳೆಸಿದ್ದಾನೆ . ತಾಯಿ ತಮ್ಮನಿಗೆ ಮುಂದಿನ ದಿಕ್ಕು ಯಾರೆಂಬುದನ್ನು ಊಹಿಸಿದರೆ ಕರಳು ಹಿಂಡಿ ಬರುತ್ತದೆ, ತಾನು ಆಯ್ತು ತನ್ನ ಕೆಲಸ ವಾಯಿತು ಎಂಬಷ್ಟೇ ಗುಣ ನಡತೆಯಲ್ಲಿ ಅಳವಡಿಸಿಕೊಂಡಿದ್ದ ಅನ್ನುವುದಕ್ಕೆ ,ಸುಮಾರು 7 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಆತನ ಮಾಲಿಕನೇ ಸಾಕ್ಷಿ .ಕಣ್ಣು ಮುಂದೆ ಇನ್ನಿಲ್ಲವಾದ ದೀಪಕನ್ನು ಕಂಡು ಪುಟ್ಟ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳುವ ಪರಿ ನೋಡಿದರೆ ಸುಲಭವಾಗಿ ಅರ್ಥೈಸಬಹುದು ದೀಪಕ್ ಹೇಗೆ ಇದ್ದ ಎಂದು .ಸ್ನೇಹಿತರ ಸಂಘ ದಿಂದಲೇ ದೂರ ಉಳಿಯುತ್ತಿದ್ದ ,ಎಷ್ಟು ಬೇಕು ಅಷ್ಟೇ ಪರಿಧಿಯಲ್ಲಿ ಅವನ ದಿನಚರಿ ಪೂರ್ಣ ಗೊಳ್ಳುತ್ತಿತ್ತಂತೆ .,ಹತ್ತಿರದ ದಿಂದ ಕಂಡ ಬಲ್ಲವರ ಅಭಿಪ್ರಾಯ !
ಅಷ್ಟಕ್ಕೂ ದೀಪಕ್ ಹತ್ಯೆಗೆ ಕಾರಣ ವಾದರೂ ಏನು ಎಂಬುದರ ಹಿನ್ನಲೆ ಹುಡುಕುತ್ತಾ ಹೋದರೆ ನಿಜಕ್ಕೂ ಬೇಸರ ಮೂಡುತ್ತದೆ .
ಬ್ಯಾನರ್ ಕಟ್ಟುವ ವಿಚಾರ .! ಹಿಂದೂ ಧಾರ್ಮಿಕ ಕಾರ್ಯಕ್ರಮ ಬ್ಯಾನರ್ ನ್ನು ತೆರವುಗೊಳಿಸಿ ಇಸ್ಲಾಂ ಕಾರ್ಯಕ್ರಮಕ್ಕೆ ಸಂಬಂದ ಪಟ್ಟ ಬ್ಯಾನರ್ ನ್ನು ಕಟ್ಟುವ ವಿಚಾರದಲ್ಲಿ ಕೊಂಚ ಉಭಯ ಭಾಂದವರಲ್ಲಿ ಜಗಳ ನಡೆಯುತ್ತದೆ. ಜಗಳ ತಾರಕಕ್ಕೇರುತ್ತಿರುವಂತೆ ಪೋಲಿಸರ ಆಗಮನವೂ ಆಗುತ್ತದೆ. ಇಂತಹ ಸಮಯದಲ್ಲಿ ತಮ್ಮ ಕ್ಯೂರಾಸಿಟಿಗೋಸ್ಕರ ಆ ಸಮಯದಲ್ಲಿ ಯಾರೇ ಇದ್ದರೂ ಕೂಡಾ ಮೊಬೈಲ್ ತೆಗೆದು ಚಿತ್ರ ಸೆರೆ ಹಿಡಿಯುತ್ತಾರೆ .ಇದು ಸ್ವಾಭಾವಿಕ .,ಎಲ್ಲರಂತೆ ದೀಪಕ್ ಕೂಡಾ ತನ್ನ ಮೊಬೈಲ್ ನಲ್ಲಿ ಆ ದ್ರಶ್ಯಗಳನ್ನು ಚಿತ್ರಿಸಿ ಕೊಳ್ಳುತ್ತಾನೆ.ಇದನ್ನು ಕಂಡ ಆ ಗಲಭೆಯಲ್ಲಿನ ಮುಖ್ಯ ಪಾತ್ರಧಾರಿಯೊಬ್ಬ ದೀಪಕ್ ನ್ನು ಗಮನಿಸಿ ವಿಡಿಯೋ ಡಿಲಿಟ್ ಮಾಡುವಂತೆ ತಾಕಿತು ಮಾಡುತ್ತಾನೆ . ನೋ ಚಾನ್ಸ್ ! ಆ ಮಾತಿಗೆ ಹೆಚ್ಚಿನ ಗಮನ ಕೊಡದೇ ತನ್ನ ದೈನಂದಿನ ಕಾರ್ಯದಲ್ಲಿ ಮಗ್ನನಾಗುತ್ತಾನೆ . ಆದರೆ ಬೆನ್ನು ಬಿಡದ ಪುಂಡರು ,ದೂರವಾಣಿ ಮೂಲಕವೂ ಸಹಾ ಡಿಲೀಟ್ ಮಾಡು ಎಂದು ದುಂಬಾಲು ಬೀಳುತ್ತಾರೆ, ಬೆದರಿಕೆಯನ್ನೂ ಒಡ್ಡುತ್ತಾರೆ . ವಿಡೇಯೂ ಡಿಲೀಟ್ ಮಾಡಿಲ್ಲ ಅಂದರೆ ನಿನ್ನನ್ನೇ ಡಿಲೀಟ್ ಮಾಡುತ್ತೇವೆ ಎಂಬ ಒತ್ತಡವನ್ನೂ ತರುತ್ತಾರೆ. ಫಿಲಿಮಿ ಡೈಲಾಗ್ ಎಂದಷ್ಟೇ ಮನದಲ್ಲಿ ಅರಿತು ,ಅಷ್ಟಕ್ಕೂ ನಾನೇನು ಮಾಡಿದ್ದೇನೆ ? ಯಾಕಾಗಿ ಡಿಲೀಟ್ ಮಾಡಬೇಕು ಎಂದು ಮುಂದಿನ ಅಪಾಯಕಾರಿ ಸನ್ನಿವೇಶ ದ ಬಗ್ಗೆ ಒಂದಿಂಚು ಆಲೋಸಿರಲಿಲ್ಲ ದೀಪಕ್ ಅದರ ಅಗತ್ಯತೆಯೂ ಇರಲಿಲ್ಲ .ಆದರೆ ಜ.2 ದೀಪಕ್ ಗೆ ಕೊನೆಯ ದಿನವಾಗಿತ್ತು .ಪಾಪಿಗಳು ಹೇಳಿದಂತೆ ಸೇಮ್ ಸಿನಿಮಾ ಶೈಲಿಯಲ್ಲೇ ಸ್ಕೆಚ್ ರೂಪಿಸಿ ಬಿಟ್ಟಿದ್ದರು .
ನಂತರ ನಡೆಯಿತು ಹೈಡ್ರಾಮ ! ಸತ್ತ ಹೆಣದ ಮುಂದೆ ರಾಜಕೀಯ ,ಜಾತಿ ಎಲ್ಲವೂ ಬಂದು ಬಿಡುತ್ತವೆ .
ಆತ ಬೆಜೆಪಿ ಕಾರ್ಯಕರ್ತ ಹಿಂದೂ ಮುಖಂಡ .ಮರಳು ಮಾಫಿಯಾದಲ್ಲಿದ್ದ . ಹೀಗೆ ಒಂದೇ ಎರಡೇ ? ಸುಳ್ಳು ಪುಳ್ಳುಗಳೆಲ್ಲವೂ ರೆಕ್ಕೆ -ಪುಕ್ಕ ಕಟ್ಟಿಕೊಂಡು ಜಗಜಾಹೀರಾತು ಆಗುತ್ತದೆ .ಸತ್ತ ದೀಪಕ್ ಗೆ ಮಾತ್ರ ಏನು ನಡೆಯುತ್ತಿದೆ ಎಂಬ ಪ್ರಜ್ಞೆಯೇ ಇರಲಿಲ್ಲ . ವಾಸ್ತವಕ್ಕೆ ಯಾವ ಸಂಘಟನೆಯಾಗಲೇ ,ಮುಖಂಡತ್ವವನ್ನು ವಹಿಸುವುದಾಗಲಿ ಮಣ್ಣಾಗಟ್ಟಿ ಏನೂ ಇರಲಿಲ್ಲ .ಅಮಾಯಕನಾಗಿದ್ದ .ವಿಡಿಯೋ ಚಿತ್ರಿ ಕರಿಸಿದ್ದ ಎಂಬೀ ಒಂದೇ ಒಂದು ಕಾರಣಕ್ಕೆ ಹತ್ಯೆ ಮಾಡಲಾಗಿತ್ತೆ ? ಆತ ಕುತೂಹಲಕ್ಕಾಗಿ ಚಿತ್ರೀಕರಿಸಿದ್ದು ತಪ್ಪೇ ? ಅವನು ಅವಶ್ಯಕತೆಗನುಗುಣವಾಗಿ ವಿಡಿಯೋ ಮಾಡಿದ್ದೇ ಆಗಿದ್ದರೇ ,ಅಂದೇ ಆತ ಅದನ್ನು ವೈರಲ್ ಮಾಡ್ತಾ ಇದ್ದ ,ಎಲ್ಲಾ ಟೀವಿ ಸುದ್ದಿ ಮಾಧ್ಯಮ ಗಳು ಸೇರಿದಂತೆ ಸಾಮಾಜಿಕ ಜಾಲತಾಣ ದಲ್ಲಿ ಅದು ಪ್ರಸಾರ ಕಾಣುತ್ತಿತ್ತು .ಆದರೆ ದೀಪಕ್ ಗೆ ಆ ಇಂಟ್ನೇಷನ್ ಇರಲಿಲ್ಲ .
ಹೆಣದ ಮುಂದೆ ರಾಜಕೀಯ ಮಾಡಿದವರ ವಿರುದ್ದ ದಿಕ್ಕಾರವಿದೆ ತಮ್ಮ ಬೆಳೆ ಬೇಯಿಸಿಕೊಳ್ಳಲು ಇಂಥ ಹೀನ ಕಾರ್ಯಕ್ಕೆ ಕೈ ಹಾಕುತ್ತಿರುವರಿಗೆ ಮಾನ ಮರ್ಯಾದೆ ಒಂದಿನಿತೂ ಇಲ್ಲ. ಇತ್ತ ದೀಪಕ್ ಕುಟುಂಬಕ್ಕೆ ಸಮಾಧಾನ ಪಡಿಸುವ ಅತ್ತ ಅರೆಷ್ಟ್ ಆದವರಿಗೆ ಕಠಿಣ ಶಿಕ್ಷೆಗೆ ಗುರಿ ಪಡಿಸುವ ಗೌಜಿಗೆ ಹೋಗದೇ ತಮ್ಮ ತಮ್ಮಲ್ಲೇ ಇಲ್ಲ ಸಲ್ಲದ ಆರೋಪ ಹೊರಿಸಿ ಇನ್ನೊಬ್ಬರ ಮೇಲೆ ಕಿಡಿಕಾರುತ್ತಿರುವ ಮತಾಂದ ಸಮಾಜಕ್ಕೆ ನಾಚಿಕೆ ಆಗಬೇಕು ಇದಕ್ಕೆ ಪ್ರತಿಕಾರವೆಂಬಂತೆ ಸಂಘಟನೆಯ ಹಣೆ ಪಟ್ಟಿಯಲ್ಲಿರುವ ಅತಿರಥರು ಇನ್ನೊಬ್ಬ ಅಮಾಯಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸುತ್ತಾರೆ ಸಾವು ಬುದುಕಿನ ಮಧ್ಯೆ ಹೋರಾಡಿ ಅಂತೂ ಕೊನೆಗೆ ಬಷೀರ್ ಕೊನೆ ಉಸಿರು ಎಳೆಯುತ್ತಾರೆ .
ತನ್ನ ಅನಿವಾರ್ಯದ ಪರಿಸ್ತಿತಿಗೆ ಸುಖ-ಸಂತೋಷವನ್ನು ಮರೆತು ಯವ್ವನವೆನ್ನೆಲ್ಲಾ ಗಲ್ಪ್ ರಾಷ್ಟ್ರ ದಲ್ಲಿ ಕಳೆದು ಇತ್ತಿಚೆಗಷ್ಟೇ ತಾಯ್ನಾಡಿಗೆ ಬಂದಿದ್ದರು ಕೊನೆ ಘಳಿಗೆಯಲ್ಲಿಯಾದರೂ ಕುಟುಂಬಿಕರ ಜೊತೆ ನೆಮ್ಮದಿಯ ಜೀವನ ಸಾಗಿಸುವ ಬಯಕೆ ಅವರದಾಗಿತ್ತು . ಒಂದು ಪುಟ್ಟ ಪಾಸ್ಟ್ ಪುಡ ಅಂಗಡಿಯನ್ನು ನಡೆಸುತ್ತಿದ್ದರು ಬಷೀರ್ .ಆದರೆ ಏನೋ ಮಾಡೋಣ ಹೇಳಿ ಮತಾಂದರ ಧರ್ಮಯುದ್ಧಕ್ಕೆ ತನ್ನ ಉಸಿರು ಚೆಲ್ಲ ಬೇಕಾಯಿತು .
ನಾಚಿಕೆ ಆಗಬೇಕು ಏನು ಸಾಧನೆ ಆಯ್ತು ? ಅಮಾಯಕನ ಕೊಂದು ನೀವೇನು ಪಡೆದಿರಿ ? ನಿಮಗೆ ತಾಕತ್ತು ಧೈರ್ಯ ಸ್ಥೈರ್ಯ ಇದ್ದಿದ್ದರೆ ದೀಪಕ್ ಹಂತಕರ ಮೇಲೆ ನಿಮ್ಮ ಕೊಪಾಗ್ನಿಯನ್ನು ತೀರಿಸಿಕೊಳ್ಳ ಬೇಕಿತ್ತು ಅದಿಲ್ಲವೆಂದಾದರೆ ಮಂಗಳೂರಿನಲ್ಲಿ ಆಗಾಗ ನಡೆಯುವ ಇಂಥ ಘಟನೆ ಗಳಿಗೆ ಬ್ರೇಕ್ ಹಾಕಬೇಕಿತ್ತು ? ಆ ಹಿಮ್ಮತ್ತು ಖಂಡಿತವಾಗಿಯೂ ಇಲ್ಲ . ಪುಲ್ ಸ್ಟಾಪ್ ಇಲ್ಲದ ಹೇಡಿತನಕ್ಕೆ ಈ ಪರಿಸರದಲ್ಲಿ ಪ್ರತಿ ಬಾರಿಯೂ ಅಷ್ಟೇ ಅಮಾಯಕರುಳೇ ಬಲಿ ಯಾಗುತ್ತಿದ್ದಾರೆ . ಪ್ರಚೋಧಿಸುವವರು ,ರೌಡಿ ಸೀಟರ್ ಗಳು ಯಾರೂ ಸಹಾ ಸತ್ತಿಲ್ಲ !ಬೆಂಕಿ ಹತ್ತಿಸಿ ದೂರ ಸರಿಯುವ ಇವರುಗಳಿಗೆ ಏನು ಗೊತ್ತು ಹೆತ್ತ ಕರುಳು ನೋವು ,ಕುಟುಂಸ್ತರ ಕಣ್ಣೀರು!!
ಇನ್ನು ಬಷೀರ್ ಕೊಲೆಗೆ ಪ್ರತಿಕಾರವಾಗಿ ಯಾವ ಅಮಯಾಕ ಸಿಗುತ್ತಾನೆ ಭೇಟೆಗೆ ಗೊತ್ತಿಲ್ಲ.ಧರ್ಮ ಧರ್ಮಗಳ ಸಂಘರ್ಷ , ಕೋಮು ಸಾಮರಸ್ಯಕ್ಕೆ ಕೊನೆಯೇ ಇಲ್ಲವೇ ? ಬುದ್ದಿವಂತರ ನಾಡು ಬುದ್ದಿ ಹೀನವಾಗುತ್ತಿದೆ !



ಭಾನುವಾರ, ಡಿಸೆಂಬರ್ 17, 2017

ಒಬ್ಬರಿಗೆ ಒಂದು ನ್ಯಾಯ ಇನ್ನೊಬ್ಬರಿಗೆ ಮತ್ತೊಂದು ??

ಆಳಿಗೊಂದು ಕಲ್ಲು !! ನ್ಯೂಸ್ ಚಾನೆಲ್ ಗಳಿಗೆ ಹಬ್ಬವೋ ಹಬ್ಬ !!! ದಿನದ ಇಪ್ಪತ್ತನಾಲ್ಕು ಗಂಟೆ ರವಿಬೆಳಗೆರೆ ಬಗ್ಗೆ ಸುದ್ದಿಯೋ ಸುದ್ದಿ..! ಇದ್ದಿದ್ದು ಇಲ್ಲದಿದ್ದು ಎಲ್ಲವನ್ನೂ ಉಪ್ಪು ,ಖಾರ, ಹುಳಿ ಬೆರೆಸಿ ,ಒಸಮಾ ಬಿಲ್ ಲಾಡೆನ್ ಗೆ ಹೋಲಿಸುವಂತ ವಿದ್ಯಾಮಾನ ಸಧ್ಯ ಜಾರಿಯಲ್ಲಿದೆ .
ಬಂಧನ ಮುಕ್ತರಾದ ಮೇಲೆ ಈ ನ್ಯೂಸ್ ಚಾನೆಲ್ ಗಳ ಹಾಗೂ ಅದರ ಲೈವ್ ಡಿಸ್ಕಷನ್ ನಲ್ಲಿ ಭಾಗವಹಿಸಿದವರ ಉವಾಚದ ಕ್ಲಿಪ್ ಗಳನ್ನು ನೋಡಿದರೆ ಖಂಡಿತವಾಗಿಯೂ ಬೆಳೆಗೆರೆ ಇನ್ನೊಮ್ಮೆ ನಾನು ಹುಟ್ಟಿ ಬಂದ್ದಿದೇನೋ ಎಂಬಷ್ಟರ ಮಟ್ಟಿಗೆ ಭಾಸ ವಾಗದೇ ಇರದು ಅರ್ಥಾತ್ ಒಬ್ಬಬ್ಬರ ತೆಗಳಿಕೆ ,ಹೊಗಳಿಕೆ, ಬಾಲ್ಯ ಯವ್ವನ ಹೀಗಿದ್ದಿತೆ ?ತನ್ನ ಕಣ್ಣನ್ನು ತಾನೇ ನಂಬಲಾರದ ಸನ್ನಿವೇಶ ಎದುರಾಗಬಹುದೇನೋ ?
ತನ್ನ ಆಪ್ತ ಸ್ನೇಹಿತ ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ ಎಂದು ಗೌರಿ ಲಂಕೇಶ್ ವಿಚಾರಣೆ ವೇಳೆ ಸಿಕ್ಕಿ ಬಿದ್ದ ಹಂತಕನ ಮಾತು ಕೇಳಿ ಪತ್ರಕರ್ತ ರವಿ ಬೆಳೆಗೆರೆ ಯನ್ನು ಅನಾರೋಗ್ಯದ ನಡುವೆಯೂ ರಾತ್ರೋ ರಾತ್ರಿ ಬಂಧಿ ಸಲಾಗಿತ್ತು . ಆ ಹಂತಕನ ಮಾತು ಬ್ರಹ್ಮವಾಕ್ಯವೆಂದು ತಿಳಿದ ಕಾನೂನು ವ್ಯವಸ್ಥೆ ಅರೆಷ್ಟ್ ಮಾಡಿ ಬಿಟ್ಟಿತು .
ಕಾನೂನಿನಲ್ಲಿ ಬಂಧಿಸುವುದುಕ್ಕೆ ಸಮಯ ,ಜಾಗ ಯಾವುದು ಬೇಕಾಗಿಲ್ಲ ಆದರೆ ಇದು ಎಲ್ಲರಿಗೂ ಅನ್ವಯ ವಾಗುವಂತೆ ಇರ್ಬೇಕು ಅಲ್ವೇ ಆದರೆ ಅಚ್ಚರಿ ಅನ್ನಿಸುವುದು ಇಲ್ಲಿ ,ಪೋಲಿಸ್ ಅದಿಕಾರಿ ಬಿ.ಗಣಪತಿ , ಐ.ಪಿ.ಎಸ್ ಅಧಿಕಾರಿ ಡಿ ಕೆ ರವಿ ಕೇಸ್ ಗಳಿಗೆ ಅರ್ಥವೇ ವಿಲ್ಲ ಅವರ ಮನೆಯವರು ಖಡ ಖಂಡಿತವಾಗಿ ಸಾಕ್ಷಿ ಸಮೇತ ಹೇಳುತ್ತಿದ್ರೂ ತಪ್ಪಿತಸ್ತರು ಯಾರು ಎಂದೂ ಗೊತ್ತಿದ್ದರೂ ಅಪರಾಧಿಗಳನ್ನೂ ಬಂಧಿಸಲು ಸಾಧ್ಯವಾಗಿಲ್ಲ , ಇವರೆಲ್ಲಾ ಬಿಡಿ ಸಾಮನ್ಯ ಜನರ ಗತಿ ನೋಡಿ ಮೊನ್ನೆ ಮೊನ್ನೆ ಪ್ರವೆಸ್ ಮೆಸ್ತಾ ಹೊನ್ನಾವರದ ಘಟನೆಯನ್ನೇ ನೆನಪು ಮಾಡಿಕೊಳ್ಳೋಣ ಎಲ್ಲವೂ ಗೊತ್ತಿದ್ದರೂ ಅರೆಷ್ಟ್ ಮಾಡುವಲ್ಲಿ ?? ಕಣ್ಣಾರೆ ಕಂಡ ಊರವರು ಇದ್ದಾರೆ , ಮನೆಯವರು ಸಾಕ್ಷಿ ನುಡಿಯುತ್ತಿದ್ದಾರೆ ಅದರೂ ಪ್ರಯೋಜನವಿಲ್ಲ .ಅದೇ ಒಬ್ಬ ಆಗುಂತನ ಮಾತು ಆಲಿಸಿ, ಆಧರಿಸಿದ ಕಾನೂನು ವ್ಯವಸ್ಥೆಗೆ ಏನು ಹೇಳೋಣ ?ರಾಜ್ಯ ರಾಜಕಾರಣದ ಆಡಳಿತ ವ್ಯವಸ್ಥೆಗೆ ಕಾನೂನು ಈಲಾಖೆ ಕರ್ತವ್ಯ ಏನೂ ಹೇಳಿ ಪ್ರಯೋಜನ ಇಲ್ಲ .
ಒಟ್ಟಾರೆ ರವಿ ಬೆಳಗೆರೆ ಯಾರೂ ಮಾಡದ ತಪ್ಪು ಮಾಡಿಲ್ಲ ಹಾಗಂತಾ ಮಾಡಿದ್ದೆ ಸರಿ ಎಂದೂ ಸಹಾ ಹೇಳಲಾಗುತ್ತಿಲ್ಲ .ಸಿಕ್ಕಿದ್ದೇ ಚಾನ್ಸು ಅನ್ನುತ್ತಾ ವಿರೋಧಿಗಳಿಂದ ಹಿಡಿದು ರಾಜಕೀಯ ನೇತಾರುಗಳಿಂದ ಹಿಡಿದು ಮೀಡಿಯ ಕೂಡಾ ಬೆನ್ನಿಗೆ ಬಿದ್ದು ಸೇಡು ತೀರಿಸಿಕೊಳ್ಳುವುದು ಇದೆಯಲ್ಲಾ ಅದು ಸಮಂಜಸವಾಗಿ ಕಾಣುತ್ತಿಲ್ಲ . ಅಪರಾಧಿಯೋ ಇಲ್ಲವೋ ಅದು ಬೇರೆ ಮಾತು .
ಅದು ಸೂಕ್ತವಾದ ತನಿಖೆ ಯಿಂದ ಸಾಬೀತು ಆಗಬೇಕು . ಆಗುತ್ತದೆ ಅಲ್ಲಿಯವರೆಗೆ ಅನಾರೋಗ್ಯದ ನಡುವೆ ರಾತ್ರೋ ರಾತ್ರಿ ಏಕಾಏಕಿ ಬಂಧೀಸಿ ಇಲ್ಲ ಸಲ್ಲದ ಆರೋಪದಡಿಯಲ್ಲಿ ಕೇಸು ದಾಖಲಿಸಿ ವಿಚಾರಣೆ ಯನ್ನು ನಡೆಸುವದರ ಜೊತೆಗೆ ವಿಕ್ರತೆಯನ್ನು ಮರೆಯುವುದು ಇದೆಯಲ್ಲ ಅದನ್ನು ಸಹಿಸಿ ಕೊಳ್ಳಕ್ಕೆ ಆಗ್ತಾ ಇಲ್ಲ ?ಇಲ್ಲ ಸಲ್ಲದ ವಿಚಾರವನ್ನು ಹೆಣೆದು ,ವಿರೋಧಿಗಳನ್ನು ಸ್ಟುಡಿಯೋ ದೊಳಗೆ ಕೂರಿಸಿ 24 ಗಂಟೆಯವರೆಗೂ ಕಾರ್ಯಕ್ರಮವನ್ನು ಎಳೆಯುವುದು ಎಳ್ಳಷ್ಟು ಸರಿಯಲ್ಲ ?ಜನಪ್ರತಿನಿಧಿಗಳಿಗೆ ಒಂದು ನ್ಯಾಯ ಬೆಳೆಗೆರೆಗೆ ಒಂದು ನ್ಯಾಯ ಇದೆಂತಾ ತಾರತಮ್ಯ ? ಕಂಟ್ರವರ್ಸಿ ಪತ್ರಕ್ರತರೆಂದೇ ? ಯಾರಿಗೂ ಬೆದರದೇ ಇದ್ದದ್ದನ್ನು ಇದ್ದ ಹಾಗೆ ಪೆನ್ನುನ್ನು ಖಡ್ಗವಾಗಿಸುವ ಛಾತಿಗಾಗಿಯೇ ? ಇವರ ಸೃಜನ ಶೀಲ ಕ್ರೀಯಾಶಿಲತೆಗೆ ಅದೆಸ್ಟೋ ಅಸಾಧ್ಯವಾದ ಯಾರು ಮಾಡದ ವಿಚಾರ ವೈವಿಧ್ಯೆತೆ ಎಂಟದೆ ಭಂಟನಂತೆ ತನ್ನ ಮೊನಚು ಬರವಣಿಗೆಯಲ್ಲಿ ತೋರಿಸಿ ಕೊಟ್ಟಿದ್ದಾರೆ . ಅತೀ ಹೆಚ್ಚು ಸಂಖ್ಯೆಯಲ್ಲಿ ಇವರ ಅಕ್ಷರವನ್ನು ಪ್ರೀತಿಸುವ ಓದುಗ ವರ್ಗವಿದೆ . ಒಂದು ಬುಕ್ ರಿಲಿಸ್ ಆದ್ರೆ ಬಹಳ ದೊಡ್ಡ ಮಟ್ಟದಲ್ಲಿ ಶೆಲಿಂಗ್ ಇರುವುದು ಇವರ ಗಟ್ಟಿತನಕ್ಕೆ ಸಾಕ್ಷಿ . ಪಾತಕ ಲೋಕದ ಅನಾವರಣ, ಕ್ರೈಂ ನ್ನು ತುಂಬಾ ಹತ್ತಿರ ದಿಂದ ಕಂಡವರು ಕಂಡ ಹಾಗೆ ಲೇಖನಿ ಚಳಪಳಿಸುವುದರ ಹಿಂದೆ ಗಂಭೀರ ಚಿಂತನೆ ಆ ಕ್ರತು ಶಕ್ತಿ ಬೆಳೆಗೆರೆ ಬಿಟ್ಟರೆ ಬೇರೆ ಯಾರಿಂದಲೂ ಅಸಾಧ್ಯ ..! ಏನೇ ಇರಲಿ ಪುಲ್ ಸ್ಟಾಪ್ ಇಡುವ ಮುನ್ನ ಕೊನೆಯದಾಗಿ ಒಂದೇ ಒಂದು ಮಾತು ಬೆಳೆಗೆರೆ ಮಾಡಿದ್ದು ಸರಿ ಎಂಬುದು ನನ್ನ ಓಡಲದ್ವನಿ ವಿವರವಲ್ಲ . ತಪ್ಪು ಯಾರೇ ಮಾಡಲಿ ತಪ್ಪು ತಪ್ಪೇ ! ಅದಕ್ಕೊಂದು ಅರ್ಥ ವ್ಯವಸ್ತೆ ಇದೆ ಅದೇ ದಿಕ್ಕಿನಲ್ಲಿ ಸಾಗಬೇಕು ಸಂವಿಧಾನದ ಕಾನೂನು ಒಡೆದು ಬಡಿದು ಆಳುವ ಈ ನೀತಿ ಸರಿಯಲ್ಲ ಅಷ್ಟೇ !

ಗುರುವಾರ, ಸೆಪ್ಟೆಂಬರ್ 28, 2017

ನ್ಯೂಸ್ ಮಾಧ್ಯಮಗಳೇ ಬ್ರೇಕಿಂಗ್ ನ್ಯೂಸ್ ಗಳಾಗುತ್ತಿವೆ !

ಕರ್ನಾಟಕದಲ್ಲಿ ಇವತ್ತಿನವರೆಗೆ ಸುಮಾರು 13 ಸ್ಯಾಟ್ ಲೈಟ್ ಸುದ್ದಿ ವಾಹಿನಿಗಳು ಕಾರ್ಯನಿರ್ವಹಿಸುತ್ತಿವೆ .ಇನ್ನೂ ಕೇಬಲ್ ಟಿವಿ ನೆಟ್ವರ್ಕ್ಗಳಿಗೆ ಲೆಕ್ಕವಿಲ್ಲ.. ! ಹೌದು ಇದು ಸರಿ ಸುಮಾರು ಹತ್ತು ವರ್ಷಗಳಿಂದ ಈಚೇಗಿನ ಬೆಳವಣಿಗೆ . ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಪತ್ರಿಕೋದ್ಯಮ ,ಮಾಧ್ಯಮಗಳು ಸಮಾಜ ಮುಖಿ ಕಾರ್ಯಚರಿಸುವುದಕ್ಕಿಂತ ಒಂದು ರೀತಿಯಲ್ಲಿ ಬಿಜಿನೆಸ್ ಆಗಿ ರೂಪು ಗೊಂಡಿದೆ ಏನೋ ಎಂಬಂತೆ ಬಾಸವಾಗುತ್ತಿವೆ ಪ್ರಸ್ತುತ ಪರಿಸ್ತಿತಿಯನ್ನು ಅವಲೋಕಿಸಿದರೆ ಈ ಮಾತನ್ನು ತಳ್ಳಿ ಹಾಕುವಂತೆಯೂ ಇಲ್ಲ ., ಹಾಗಂತ ಪೂರ್ಣಪ್ರಮಾಣದಲ್ಲಿ ಒಪ್ಪಿಕೊಳ್ಳುವನ೦ತೆಯೂ ಇಲ್ಲ .
ಇದರಲ್ಲಿ ಮುಂಚೂಣಿಯಲ್ಲಿ ಕಾಣ ಸಿಗುವುದು ಎಲೆಕ್ಟ್ರಾನಿಕ್ ಮಾಧ್ಯಮ . ಟಿವಿಯ ಮುಂದೆ ನಿದಿಷ್ಟ ಡಿಶ್ ನೆಟ್ವರ್ಕ್ ಗಳ ಮೂಲಕ ಆಸ್ಪಾದಿಸಬೇಕಾದ ಕಾಲವಿತ್ತು .ಈಗ ಹಾಗಿಲ್ಲ ಅಂಗೈ ಅಗಲದ ಮೊಬೈಲ್ ನಲ್ಲಿ ನೇರವಾಗಿ ವಿಕ್ಷಿಸುವಂತ ಜಮಾನಕ್ಕೆ ಬಂದಿದ್ದೇವೆ.ಈ ನಡುವೆ ತಾಂತ್ರಿಕತೆಯೂ ಸಹಾ ಅಷ್ಟೇ ಮುಂದುವರಿದಿದೆ. ಗಂಟೆಗಟ್ಟಲೇ ಕಾಯಬೇಕಾದ ಅಗತ್ಯವೂ ಇಲ್ಲ ಎಲ್ಲಾ ಪಾಸ್ಟ್! ..ಪಾಸ್ಟ್ ಆಗಿ ಸಿಗುತ್ತಿವೆ ಲೈವ್ ಆಗಿ ಆಯಾ ಸ್ಥಳ ದಿಂದಲೇ ಕಾರ್ಯಕ್ರಮ ಸುದ್ದಿಗಳು ಬಿತ್ತಾರವಾಗುತ್ತಿವೆ . ಏನೇ ಇರಲಿ ಪಾಸ್ಟ್ ಜನರೇಶನ್ ನಲ್ಲಿ ಟಿವಿ ಮುಂದೆ ಕೂತು ಸುದ್ದಿ ನೋಡವುದು ,ಪೇಪರ್ ಪುಟ ತಿರುವಿ ಹಾಕುವಷ್ಟು ಸಮಯವ್ಯಯ ಮಾಡುವುದಕ್ಕೆ ಪುರಸೋತ್ತೆ ಇಲ್ಲ ..ಇಂತಹ ಕಾರಣ ಗಳಿಂದ ಸ್ಪರ್ದಾತ್ಮಕವಾಗಿ ಸುದ್ದಿ ನೀಡುವಲ್ಲಿ ಕೊಂಚ ಎಲೆಕ್ಟ್ರಾನಿಕ್ ಮಾಧ್ಯಮಗಳ ಪಾತ್ರ ಬಲು ದೊಡ್ಡದು.
ಆದರೆ ಬ್ರೇಕಿಂಗ್ ನ ನ್ಯೂಸ್ ನೀಡುವ ಸುದ್ದಿ ವಾಹಿನಿಗಳೇ ಕೆಲವೊಮ್ಮೆ ಬ್ರೇಕಿಂಗ್ ನ್ಯೂಸ್ ಆಹಾರಕ್ಕೆ ಒಳಗಾಗಿ ನಗೆ ಪಾಟಲಿಗೆ ಈಡಾಗುವುತ್ತಿರುವುದೇ ವಿಪರ್ಯಾಸ !!
ಕರ್ನಾಟಕದಲ್ಲಿ ಟಿವಿ 9 ವಾಹಿನಿ ಕ್ರಪಾಕಟಾಕ್ಷದಿಂದ ಸಾಕಷ್ಟು ಚಾನೆಲ್ ಗಳು ಅರಳಿವಿವೆ ಹಾಗೂ ಅಳಿದಿವೆ ಹಾಗೂ ಅಳಿವಿನ ಅಂಚಿನಲ್ಲಿದೆ ಇನ್ನೂ ಕೆಲವು ಮೊಗ್ಗಾಗಿ ಅರಳುವ ಸನಿಹದಲ್ಲಿದೇವೆ .
ಸುಮಾರು ಹತ್ತು ವರ್ಷಗಳ ಹಿಂದೆ ನಮಗೆ ಸುದ್ದಿ ,ದ್ರಶ್ಯ ಮಾದ್ಯಮದಲ್ಲಿ ಕಾಣಲು ದಿನದಲ್ಲಿ ಕೆಲವು ಗಂಟೆಗಳು ಮಾತ್ರ ಈ ಟಿವಿ ಹಾಗೂ ಉದಯ ಟಿವಿ ಮುಖಾ೦ತರ ಸಿಗುತ್ತಿತ್ತು. ತದ ನಂತರ ಕರ್ನಾಟಕದ ಬಾಗಿಲು ಬಡಿದಿದ್ದು ಅಂದ್ರ ಮೂಲದ ಟಿವಿ 9 ಎಂಬ ಜನಪ್ರೀಯ ಪ್ರಾದೇಶಿಕ ಸುದ್ದಿ ವಾಹಿನಿ .24 ಗಂಟೆಗಳ ಕಾಲ ನ್ಯೂಸ್ ಜೊತೆಗೆ ಮನೋರಂಜನಾ ಕಾರ್ಯಕ್ರಮಗಳ ಮೂಲಕ ಇಡೀ ರಾಜ್ಯದಲ್ಲಿ ಅಭಿಮಾನಿ ಬಳಗವನ್ನು, ಕಾಲಿಟ್ಟ ಸ್ವಲ್ಪ ಸಮಯದಲ್ಲಿ ಸಂಪಾದೀಸಿ ಬಿಟ್ಟಿತು .ಹಾಗೂ ಹಲವಾರು ಪತ್ರಕರ್ತರಿಗೆ,ತಂತ್ರಜ್ಞರಿಗೆ ಹೊಸ ಮುಖಗಳಿಗೆ ಅವಕಾಶ ಕೊಟ್ಟು ಅವರನ್ನು ಸ್ಟಾರ್ ಮಾಡಿ ಅವರುಗಳೇ ಮುಂದೆ ಟಿವಿ 9 ಗೆ ಪೈಪೋಟಿ ನೀಡುವ ಚಾನೆಲ್ ಒಡೆತನವನ್ನು ದಕ್ಕಿಸಿ ಕೊಟ್ಟಿತು .
ಹೌದು .!ಈ ಹಿಂದೆ ಈ ಟಿವಿ ಹಾಗೂ ಕೆಲವು ಪತ್ರಿಕೆಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದರಿಗೆ ರತ್ನ ಕಂಬಳಿ ಹಾಸಿತ್ತು .ಹಾಗೆ ಅಲ್ಲಿಂದ ದ್ರಶ್ಯ ಮಾದ್ಯಮದಲ್ಲಿ ABCD ಕಲಿತ ಕೆಲವರು ಬೇರೆ ನ್ಯೂಸ್ ಚಾನೆಲ್ ಒಡೆಯರಾದ್ರೆ ಇನ್ನೂ ಕೆಲವರು ಮಂದಿ ಕೆಲವು ಚಾನೆಲ್ ಗಳಲ್ಲಿ ಮುಖ್ಯ ಬೂಮಿಕೆಯಲ್ಲಿ ಕಂಡು ಬಂದರು . ಒಟ್ಟಾರೆ ಈದೀಗ 13 ಚಾನಲ್ ಗಳಿದ್ದರೂ ಟಿವಿ 9 ಗೆ ಪೈಪೋಟಿ ನೀಡುವವಂತಿದ್ದರೂ , ಒಂದಿಂಚೂ ಕದಲದೇ ತನ್ನಯಾದ ಟಿಆರ್ಪಿಯನ್ನು ಇಂದಿಗೂ ಕೂಡಾ ಹಾಗೆ ಇಟ್ಟು ಕೊಂಡು ಬಂದಿದೆ ಎಂದರೆ ಸೋಜಿಗವೇ ಸರಿ ! ಮೊನ್ನೆ ಮೊನ್ನೆಯ ಒಂದು ವಿಚಾರ ಮಾತ್ರ ಟಿವಿ9 ಗೆ ಶಾಕ್ ತಂದಿದಂತೂ ಸತ್ಯ .
ಇತ್ತಿಚೆಗಷ್ಟೇ ಕೆಲವು ಟಾಪ್ ತಂತ್ರಜ್ಞರು ಹಾಗೂ ಅಯಂಕರ್ ಗಳು ವಾಹಿನಿಗೆ ಗುಡ್ ಬೈ ಹೇಳಿ ಬೇರೆ ಚಾನಲ್ ಸೇರಿ ಕೊಂಡರೆ ,,ಟಿವಿ 9 ಆಧಾರ ಸ್ತಂಭವಾಗಿದ್ದ ಹಿರಿಯ ನಿರ್ಮಾಪಕ ಎಸ್ ರವಿಕುಮಾರ್ ಹಾಗೂ ಇನ್ನೋರ್ವ ನಿರ್ಮಾಪಕ ಮಾರುತಿ ರಾಜಿನಾಮೆ ಸಲ್ಲಿಸಿರುವುದು . ! ಹೌದು ಟಿವಿ 9 ಉನ್ನತ ಸ್ಥಾನಕ್ಕೆ ಏರಲು ಅಂದಿನಿಂದ ಇಂದಿನವರೆಗೆ ಇವರುಗಳ ಶ್ರಮ ಬುದ್ದಿ ಕೌಶ್ಯಲತೆ ಹೇಳತೀರದು . ಒಂದು ಸಮಯದಲ್ಲಿ ಬೇಡಿಕೆಯ ತಂತ್ರಜ್ಞರು ಹಾಗೂ ನಿರೂಪಕರು ಬಿಟ್ಟು ಹೋದರೂ , ಈ ಎರಡು ಹೆಸರುಗಳೇ ಟಿವಿ 9 ಉಸಿರು ಅಂತರಾತ್ಮ ಆಗಿದ್ದರು ಎಂದು ತುಂಬಾ ಹತ್ತಿರ ದಿಂದ ಕಂಡವರ ಹೇಳುತ್ತಾರೆ . ಏನೇ ಇರಲಿ ಇದು ಟಿವಿ 9 ಗೆ ಬಹಳ ದೊಡ್ಡ ನಷ್ಟ ಹಾಗೂ ಟಿವಿ 9 ಬಾಳು ಮುಂದೇನು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ .
ಇನ್ನೂ ಉದಯವಾರ್ತೆ ವಾಹಿನಿ ಬಾಗಿಲು ಹಾಕಿ ಕೊಂಡಿದೆ ಅಂತೆ .ಇನ್ನೂ ಗಣಿ -ದಣಿ ಮಾಲೀಕತ್ವದ ಜನಶ್ರಿ ಟಿವಿ ತನ್ನ ಉದ್ಯೋಗಿಗಳಿಗೆ ಕಳೆದ ಕೆಲವು ತಿಂಗಳುಗಳಿಂದ ಸಂಭಾವನೆಯನ್ನು ಕೊಟ್ಟಿಲ್ಲವಂತೆ .ಸಂತ್ರಸ್ತರು ಸೋಶಿಯಲ್ ಮೇಡಿಯಾ ಮೂಲಕ ಕಿಡಿ ಕಾರುತ್ತಿದ್ದಾರೆ . ಹಾಗೆ ಟಿವಿ 9 ಹಾಗೂ ಸುವರ್ಣ ವಾಹಿನಿಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ,ಹಿರಿಯ ಪತ್ರಕರ್ತ ವಾಗ್ಮಿ ಮುದ್ರಣ ಮಧ್ಯಮದ ಘೋಟ್ಗಜ ರಂಗನಾಥ್ ೨೦೧೨ ರಲ್ಲಿ ಪಬ್ಲಿಕ್ ಟಿವಿಯನ್ನು ಸ್ತಾಪಿಸಿದ್ದು ಪಬ್ಲಿಕ್ ಗೆ ಗೊತ್ತಿರುವಂತ ಅಂಶವೇ . ಅವರ ರೈಟ್ ಹ್ಯಾಂಡ್ ಆಗಿದ್ದ ರಾಧಾ ಹಿರೇಗೌಡರು ಪಬ್ಲಿಕ್ ಟಿವಿಯನ್ನು ತೊರೆದಿದ್ದಾರೆ ಎಂಬ ಅದಿಕ್ರತ ಘೋಷಣೆ ಕೇಳಿ ಬರುತ್ತಿವೆ . ಈ ಹಿಂದೆ ಇದೇ ತರಹನಾದ ಸುದ್ದಿ ಹಬ್ಬಿತ್ತಾದರೂ, “ಇದೆಲ್ಲಾ ಅಪ್ಪಟ ಸುಳ್ಳು ,ನಾನು ಪಬ್ಲಿಕ್ ಟಿವಿ ಬಿಟ್ಟಿಲ್ಲ,ಬಿಡುವುದಿಲ್ಲ , ನಾನು ಯಾವುದೇ ಚಾನೆಲ್ ಸೇರಿ ಕೊಳ್ಳುತ್ತಿಲ್ಲ “.ಎಂದು ತನ್ನ ಎಂದಿನ ಏರು ದ್ವನಿಯಲ್ಲಿ ಫೇಸ್ಬುಕ್ ಲೈವ್ ನಲ್ಲಿ ಹೇಳಿದ್ದರು . ಆದರೆ ಈಗಿನ ಬ್ರೇಕಿಂಗ್ ನ್ಯೂಸ್ ಪ್ರಕಾರ ರಾಧಾ ಮೇಡಂ ನೂತನ ಚಾನೆಲ್ ಗೆ ಲೀಡ್ ಆಗಿ ಸೇರಿದ್ದಾರೆ .ಇನ್ನೂ ಕೆಲವು ದಿನಗಳಲ್ಲಿ ಟಿವಿ ಪರದೆ ಮೇಲೆ ಇವರ ನೋಡಬಹುದು ಹಾಗೆ ಪಬ್ಲಿಕ್ ಟೀವಿ ಕಿಂತ ಮೂರು ಪಟ್ಟು ಹೆಚ್ಚಿನ ಸಂಬಾವನೆಯನ್ನು ಕೊಡುತ್ತಾರೆ ಎಂಬಿತ್ಯಾದಿ ಮಾತುಗಳು ಸೋಶಿಯಲ್ ನೆಟ್ವರ್ಕ್ ಗಳ ಮೂಲಕ ವೈರಲ್ ಆಗಿದೆ .ಯಾವುದು ಸತ್ಯವೋ ಯಾವುದು ಮಿಥ್ಯವೋ ಗೊತ್ತಿಲ್ಲ ಆದರೆ ರಾಧಾ ಮೇಡಂ ಕಳೆದ ಕೆಲವು ದಿನಗಳಿಂದ ಪಬ್ಲಿಕ್ ಟಿವಿಯಲ್ಲಿ ನಾಪತ್ತೆಯಾಗಿದ್ದಾರೆ ಇದು ಬ್ರೇಕಿಂಗ್ ನ್ಯೂಸ್ ಹೇಳುವುತ್ತಿರ್ವುದು ಸತ್ಯ .! ಗೌರಿ ಲಂಕೇಶ್ ಹತ್ಯೆ ನಂತರ ಲಂಕೇಶ್ ಪತ್ರಿಕೆಗೆ ದಿಕ್ಕಿಲ್ಲ ! ಯಾರು ಮುಂದುವರಿಸಿ ಕೊಂಡು ಹೋಗುತ್ತಾರೋ ಎಂಬ ಜಿಜ್ಞಾಸೆಯಲ್ಲಿ ತಿಂಗಳುಗಳು ಕಳೆದೇ ಹೋಗಿದೆ ..ಈಗಿನ ಮತ್ತೊಂದು ಬ್ರೇಕಿಂಗ್ ನ್ಯೂಸ್ ಪ್ರಕಾರ ರಾಜ್ಯದಲ್ಲಿ ಗಲ್ಲೆಬ್ಬಿಸಿದ ರವಿ ಬೆಳೆಗೆರೆ ನೇತೃತ್ವದ ಹಾಯ್ ಬೆಂಗಳೂರು ಪತ್ರಿಕೆಯನ್ನು ನಿಲ್ಲಿಸುವ ಇಂಗಿತವನ್ನು ವ್ಯಕ್ತಪಡೀದ್ದಾರಂತೆ . ಒಟ್ಟಾರೆ 22 ವರ್ಷಗಳಿಂದ ಅದೆಸ್ಟೋ ಜನರನ್ನು ಎದುರು ಹಾಕಿಕೊಂಡು ,ಅದೆಷ್ಟೋ ಜನರನ್ನು ಬೆತ್ತಲೆ ಮಾಡಿದ ಇನ್ನೊಂದು ಟ್ಯಾಬ್ಲೆಟ್ ಪತ್ರಿಕೆ ಮುಚ್ಚುತ್ತಿದೆ . ಇನ್ನೂ ದಸರಾ ಆಯುಧ ಪೂಜೆ ಹಾಗೂ ವಿಜಯದಶಮಿ ಪ್ರಯುಕ್ತ ಕೆಲವೊಂದು ಚಾನೆಲ್ ಗಳು ಗ್ರ್ಯಾಂಡ್ ಓಪನಿಂಗ್ ಕಾಣಲಿದೆಯಂತೆ ಒಟ್ಟಾರೆ ಇತ್ತೀಚೆಗಿನ ದಿನಗಳಲ್ಲಿ ಸುದ್ದಿಮಾದ್ಯಮಗಳೇ ಬ್ರೇಕಿಂಗ್ ನ್ಯೂಸ್ ಆಗ್ತಾ ಇರೋದು ಮಾತ್ರ ಸುಳ್ಳಲ್ಲ !!!