ಸಿನಿಮಾ ಎನ್ನುವುದು 3 ಗಂಟೆ ಗಳ ಮನ ರಂಜಿಸುವ ಒಂದು ಕಾಲ್ಪನಿಕ
ಮನೋರಂಜನಾ ಕ್ಷೇತ್ರ .ಸಮಯ ಸದುಪಯೋಗ ,ಸಮಯ ಕಳೆಯುವದಕ್ಕಾಗಿ ಮನೋರಂಜನೆ ಗೋಸ್ಕರ ,ಅಬಲ ರಿಂದ ವ್ರದ್ಧ್ರ
ವರಗೆ ಸಿನಿಮಾದ ಮೊರೆ ಹೋಗುವದು ಸಾಮಾನ್ಯ ಮತ್ತು ಅತ್ಯಂತ ಹೆಚ್ಚು ಬಳಕೆ ಯಾಗುತ್ತಿರುವ ಒಂದು
ಜನಪ್ರಿಯ ತಾಣ .ಚಿತ್ರ ದ ಸನ್ನಿವೇಶ ಕಪಾಲಕಲ್ಪಿತ ವಾದರೂ ಮೇಲ್ನೋಟಕ್ಕೆ ಸತ್ಯ ಅಂಶವನ್ನೇ ಉಣಬಡಿ ಸುತ್ತಾ
ಕೆಲವಂದು ಕಥಾ ಹಂದರವು ಮನಸ್ಸಿನ ಭಾವನೆ ಯನ್ನು ತಲ್ಲಣ ಗೊಳಿಸುತ್ತದೆ , ತುಡಿತ -ಮಿಡಿತ ದ ಭಾವನಾ
ತ್ಮಕ ಬೀಜ ಮನಸ್ಸಿನ ಬುಟ್ಟಿಯಲ್ಲಿ ಕೊರೆಯುವ ಶಕ್ತಿ ಯನ್ನು ಸಿನಿಮಾದ ಕೆಲ ಕಹಾನಿ ಚಲಕ್ ನಲ್ಲಿರುತ್ತದೆ .ಅದೇನೇ ಇರಲಿ ಸಿನಿಮಾ ಸಮಾಜಕ್ಕೊಂದು ,ವ್ಯಕ್ತಿಗೊಂದು ಉತ್ತಮ ಸಂದೇಶ ವನ್ನು ನೀಡುದರ ಜೊತೆಗೆ
ಸ್ರಜನಾತ್ಮಕ ನಡತೆ ,ಉತ್ತಮ ಕೌಶಲ್ಯ ಕಲಿಸಿ ಕೊಡುತ್ತದೆ ,ಅದೇ ತರಹ ಒಂದು ಉತ್ತಮ ಸಮಾಜ ಮುಖಿ ಯಾಗಿ
ಕಾರ್ಯ ನಿರ್ವಹಿಸ ಬೇಕು ಎಂಬ ತುಡಿತ ಪ್ರಜ್ಞಾವಂತರ ಬಯಕೆ .ಹೆಚ್ಚಿನ ಸಿನಿಮಾ ಗಳು ಕಾಲ್ಪನಿಕ ಭಾವ
ಬಿತ್ತಿಯಾದರೇ ಕೆಲವು ಒಂದು ನಿರ್ದೇಶಕರು ಸತ್ಯ ಘಟನೆಗೆ ಸುಣ್ಣ -ಬಣ್ಣವನ್ನು ಹದ ವಾಗಿ ಬೆರೆಯಿಸಿ
ಬೆಳ್ಳಿಪರದೆಯ ಮೇಲೆ ಹರಿಯ ಬಿಡುತ್ತಾರೆ .

ನಮ್ಮಲ್ಲಿನ ಹೆಚ್ಚಿನ ಜನರ ಆಸೆ ನೋಡಿ ಸಿನಿಮಾ ನೋಡಿ
ಸಲ್ಮಾನ್ ಖಾನ್ ಆಗ್ಬೇಕು ,ದರ್ಶನ್ .ಸುದೀಪ್ ತರ ಪೈಟಿಂಗ್ ಗೆ ಒಗ್ಗಿ ಕೊಳ್ಳ ಬೇಕು ಎಂಬ ಮನಸ್ಥಿತಿ
ಯನ್ನು ಹೊಂದಿರುತ್ತಾರೆ .ಸಿನಿಮಾ ಎಂದರೆ ಹಾಗೆ ಅಲವೇ ಪುಸ್ತಕದ ಬದನೆ ಕಾಯಿ ಸಿನಿಮಾದಲ್ಲಿ
15 ಜನ ರೌಡಿ ಗಳೊಂದಿಗೆ ಹೊಡೆದಾಡುವ ಪರಿ ನಿಜ ಜೀವನದಲ್ಲಿ ನಿಜಕ್ಕೂ ಕನಸ್ಸಿನಲ್ಲೂ ಆಲೋಚಿಸಲು ಸಾಧ್ಯ
ವೇ.?. ಆದರೂ ಚಪಲ -ಚಟ ಮಾತ್ರ ಯಾರನ್ನೂ ಬಿಡೋಲ್ಲ . ‘ಪ್ರೀತ್ಸೋದ್ ತಪ್ಪಾ’ ಫಿಲಂ ನೋಡೋದ ಬೂಪ ನೊಬ್ಬ
ಶಿವಮೊಗ್ಗದ ಬಸ್ ಸ್ಟ್ಯಾಂಡ್ ಸಮೀಪ ಟೀಟ್ ರವಿಚಂದ್ರ ನ್ ತರಹ ಬೈಕ್ ರೈಡ್ ಮಾಡಿ ಸ್ತಳದಲ್ಲೇ
ಕೈ -ಕಾಲು ಮುರಿದು ಕೊಂಡ ಚಿತ್ರಣವನ್ನು ಹಲವಾರು ಮಂದಿ ಕಣ್ಣಾರೆ ಕಂಡಿದ್ದರು .ಇನ್ನು ಸಿನಿಮದಲ್ಲಿ
ಕಾಣಸಿಗುವ ರೌಡಿ ಸಂ ,ದರೋಡೆ ಯನ್ನು ನಮ್ಮಲ್ಲಿ ಅದೆಷ್ಟೋ ಬುದ್ದಿವಂತರು (!?) ಪ್ರಯೋಗ ಮಾಡಿ
ಸಕ್ಸುಸ್ ಆದವರೂ ಇದ್ದಾರೆ ,ಫೈಲ್ ಆಗಿ ಪೋಲಿಸ್ ಸ್ಟೇಷನ್ ನಲ್ಲಿ ಫೈಲ್ ನಲ್ಲಿ ಬಂಧಿ ಯಾದವರೂ ಇದ್ದಾರೆ
.ಸಿನಿಮಾದಲ್ಲಿ ರೈಲನ್ನು ಹೇಗೆ ಬ್ಲಾಶ್ಸ್ಟ್ ಮಾಡುತ್ತಾರೆ ಎಂಬ ಒಂದು ಮಾಸ್ಟರ್ ಪ್ಲಾನ್ ಒಂದು ಚಿತ್ರದಲ್ಲಿ
ಚಿತ್ರಿಸಲ್ಪಟ್ಟಿತ್ತು .ಅದೇ ವಿದಾನದಲ್ಲಿ 3 ದಶಕದ ಹಿಂದೆ ಉತ್ತರ ಭಾರತದಲ್ಲಿ ನೆರೆವೆರಿಸಿದ್ದರು
ನಮ್ಮ ಅತಿರಥರು .ಇಂಥ ಅದೆಷ್ಟೋ ಘಟನಾವಳಿ ಗಳು ನಮ್ಮ ಸುತ್ತ -ಮುತ್ತ ನಡೀತಾ ಇರುತ್ತವೆ .ಇದಕ್ಕೆಲ್ಲ
ಮುಖ್ಯ ಕಾರಣವೇ ಸಿನಿಮಾ ಹಂಗಾಮ . ಮೊನ್ನೆ -ಮೊನ್ನೆ ನಮ್ಮಲ್ಲೂ ಇಂತದ್ದೇ ಘಟನೆ ಉದ್ಭವಿಸಿತ್ತು
ಅದು ಆಗಷ್ಟ್ 7 ಮೈ ಸೂರ ನ ಅಶ್ವಿನಿ ಎಂಬಾಕೆ ಯನ್ನು ಚಿತ್ರ ವಿಚಿದ್ರಕಾರಿ ಯಾಗಿ ಕೊಲೆ ಮಾಡಲಾಗಿತ್ತು
.ಪೊಲೀಸರು ಹೇಗೋ ಹಂತಕರನ್ನು ಬಂಧಿ ಸುವಲ್ಲಿ ಸಫಲರಾದರು ಆರಕ್ಷಕರ ಪೆಟ್ಟಿನ ರುಚಿಗೆ ಅಂತೂ ಸತ್ಯವನ್ನೇ
ಬಾಯಿ ಬಿಟ್ಟರು .ನಾವು ದಂಡು ಪಾಳ್ಯ ಫಿಲಂ ನೋಡಿ ಈ ಕಾರ್ಯಕ್ಕೆ ಇಳಿದೆವು ,ಇದೆ ರೀತಿ ಕೋಲಾರ ,ದೊಡ್ಡ
ಬಳ್ಳಾಪುರ ದಲ್ಲಿ ಸ್ಕೆಚ್ ರೆಡಿ ಮಾಡಿ ಬಚಾವ್ ಆದವು ಎಂದು ತಮ್ಮ ಪ್ಲಾಶ್ ಬ್ಯಾಕ್ ಅನ್ನು ತೆರೆದಿಟ್ಟರು
.ಇಂಥ ಅದೆಷ್ಟೋ ಕ್ರತ್ಯ ಈ ಸಿನಿಮಾ ಕಹಾ ನಿ ಯಿಂದಲೇ ತೆರೆ ಮರೆಯಲ್ಲಿ ನಡೆಯಲ ಪಡುತ್ತದೆ .ಆದರೆ
ಇದು ಮಾತ್ರ ಹೆಚ್ಚಾಗಿ ಯಾರಿಗೂ ಕಾಣ ಸಿಗವುದಿಲ್ಲ .ಅದೆಷ್ಟೋ ಹಂತಕರನ್ನು ,ಪಡ್ಡೆಗಳನ್ನೂ ಸ್ರಷ್ಟಿ
ಮಾಡುದಕ್ಕೆ ಪಣತೊಟ್ಟಿರುವ ಈ ಸಿನಿಮಾದಿಂದ ಒಬ್ಬನಾದರೂ ಜಗ ಮೆಚ್ಚಿದ ಮಗ ,ಬಂಗಾರದ ಮನುಷ್ಯ ನನ್ನಾಗಿ
ರೂಪು ಗೊಳ್ಳಲು ಒಂದೂ ಚಿತ್ರಣವೂ ಪ್ರೇರಣೆಯಾಗದಿರುವುದು ವಿಪರ್ಯಾಸ .!!!