ಭಾನುವಾರ, ಜೂನ್ 9, 2024
ಮೋದಿ ಯುಗ ಮುಗಿತೇ ?ರಾಮನ ನಾಡಿನಲ್ಲಿ ಸಿಗಲಿಲ್ಲ ನಿರೀಕ್ಷಿತ ಬೆಂಬಲ !!
ಅಂತೂ, ಎಲ್ಲರ ಬಹು ನೀರಿಕ್ಷೆಯ ಲೋಕ ಸಭಾ ಎಲೆಕ್ಷನ್ ರಿಸಲ್ಟ್ ಬಂದಿದೆ .ಅಬ್ ಕಿ ಬಾರ್ 400 ಪಾರ್ ಎನ್ನುವ ಘೋಷಣೆಯೊಂದಿಗೆ ಅತ್ಯಂತ ಪ್ರಚಲಿತದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿ ಮತ್ತು ಅದರ ಮಿತ್ರ ಪಕ್ಷಗಳಿಗೆ (ಎನ್ ಡಿ ಎ) ಘೋಷಣಾ ಸಂಖ್ಯೆ ಬದಿಗಿರಿಲಿ ಅಟ್ಲಿಸ್ಟ್ ಬಹುಮತವನ್ನೂ ಪಡೆಯುವಲ್ಲಿ ಸಫಲ ಕಾಣಲಿಲ್ಲ, ಇನ್ನೂ ಘಟಬಂಧನದ ಇಂಡಿಯಾ ಒಕ್ಕೂಟಕ್ಕೂ ಬಹುಮತ ಲಭಿಸಿಲ್ಲ ಅದು ದಕ್ಕಿಸಿ ಕೊಳ್ಳುವುದು ಅಷ್ಟೊಂದು ಸುಲಭದ ಮಾತು ಅಲ್ಲ.ನಾವು ಗೆದ್ದೇ ಬೀಗುತ್ತಿವೀ ಎನ್ನುವ ಬಿಜೆಪಿಯ ತತ್ವ ಸಿದ್ದಾಂತಗಳೆಲ್ಲಾ ಮತದಾರ ತಲೆ ಕೆಳಗಾಗಿಸಿದ್ದಾನೆ ಇನ್ನೂ ಚುನಾವಣಾ ಸಮೀಕ್ಷೆ(ಎಕ್ಸಿಟ್ ಪೋಲ್) ಎಲ್ಲವೂ ಸುಳ್ಳಾಗಿಸಿದೆ ಮತದಾರ ಬದಲಾವಣೆ ಬಯಸಿದ್ದಾನೋ ಅಥವಾ ಕೊನೆ ಕ್ಷಣದಲ್ಲಿ ಇಂಡಿಯಾದ ಮೈತ್ರಿಕೂಟದ ಗ್ಯಾರಂಟಿಗಳೆಲ್ಲಾ ಕೈ ಹಿಡಿಯಿತೋ ಗೊತ್ತಿಲ್ಲ.
ಬಿಜೆಪಿ 240 ಹಾಗೂ ಅದರ ಮೈತ್ರಿಕೂಟ 293ಕ್ಕೆ ತೃಪ್ತಿ ಪಡೆದು ಕೊಳ್ಳುವಂತಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿ ಫಿನಿಕ್ಸ್ ನಂತೆ ಎದ್ದು ಬಂದಿದ್ದೆ ಸೋಜಿಗ ಅಚ್ಚರಿ ಪಡುವಂತಿದೆ ಕಳೆದ 2019 ರ ಚುನಾವಣೆಯಲ್ಲಿ52 ಸೀಟು ಬಾಚಿದ್ದ ಕೈ ಪಾರ್ಟಿ ಈ ಬಾರಿ 99 ಕ್ಕೆ ಬಂದು ನಿಂತಿತು. ಅದರ ಹೊಸ ನಾಮಧೇಯದ ಇಂಡಿಯಾ ಮೈತ್ರಿ ಕೂಟ ಒಟ್ಟು 234 ಕ್ಷೇತ್ರವನ್ನು ತನ್ನದಾಗಿಸಿ ಕೊಂಡಿತು.ಯಾವ ಪಾರ್ಟಿಗೂ ನಿಚ್ಚಳ ಬಹುಮತ ದೊರಕದೆ ಇದ್ದರೂ ಸಹಾ, ಸರ್ಕಾರ ರಚಿಸುವುದಕ್ಕೆ ಇಬ್ಬರಿಗೂ ಅಡ್ಡಿ ಇಲ್ಲ ಬಹುಪಾಲು ಭಾರತೀಯ ಜನತಾಪಾರ್ಟಿ ನೇತೃತ್ತ್ವದ ಏನ್ ಡಿ ಎಗೆ ಅವಕಾಶ ಇದ್ದರೂ, ಅದು ಅಷ್ಟು ಸುಲಭದ ಮಾತು ಅಲ್ಲ. ಅದರ ಎರಡು ಮಿತ್ರ ಪಕ್ಷಗಳಾದ ಬಿಹಾರದ ನಿತೀಶ್ ಕುಮಾರ್ ಸಾರಥ್ಯದ ಜೆಡಿಯು,ಹಾಗೂ ಆಂಧ್ರ ಪ್ರದೇಶದ ತೆಲುಗು ದೇಶಂ ಪಾರ್ಟಿಯ ಚಂದ್ರ ಬಾಬು ನಾಯ್ಡು 16 ಮತ್ತು 12 ಎಂಪಿ ಬಲವನ್ನು ಹೊಂದಿರುವ ಈರ್ವರು ಎನ್ ಡಿ ಯ ಕೇಂದ್ರ ಬಿಂದು.ಇಂಡಿಯಾ ಹಾಗೂ ಎನ್ ಡಿ ಯ ಕ್ಕೂ ಕೂಡಾ ಸರಕಾರ ರಚಿಸುವದಕ್ಕೆ ಈರ್ವರೇ ಕಿಂಗ್ ಮೇಕರ್ ಗಳು. ಈರ್ವರೂ ಕೂಡಾ ಬಹಳ ಡೇಂಜರ್ ಗಳೇ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಹಾರುವ ಹಕ್ಕಿಗಳು.ಕುರ್ಚಿ,ಪದವಿಗಾಗಿ ಹಂಬಲಿಸುವ ಬಕ ಪಕ್ಷಿಗಳು ಎನ್ನಬಹುದು.ಪಲ್ಟಿ ರಾಮ್ ಎಂದೇ ಖ್ಯಾತಿ ಪಡೆದಿರುವ ನಿತೀಶ್ ಕುಮಾರ್ ಗಾಳಿ ಬಂದ ಕಡೆ ತೋರಿ ಕೊಳ್ಳುವ ಮಹಾನ್ ಅತಿರಥ. ಇತ್ತೀಚೆಗಷ್ಟೇ ಇಂಡಿಯಾ ಒಕ್ಕೂಟ ಸೇರಿ ಪುನಾ: ಎನ್ ಡಿ ಎ ಜೊತೆ ಸೇರಿದವರು. ಈತ ಸದಾ ಲಾಭದ ದಿಕ್ಕಿಗೆ ಸಂಚರಿಸುವ ವ್ಯಕ್ತಿ ಅದಕ್ಕಾಗಿ ಏನೋ ಪ್ರಧಾನಿ ನರೇಂದ್ರ ಮೋದಿಯವರೇ ಆತನಿಗೆ ಪಲ್ಟಿ ರಾಮ್ ಎಂದೇ ಅಡ್ಡ ಹೆಸರು ಇಟ್ಟಿದ್ದರು. ಇನ್ನು ಚಂದ್ರ ಬಾಬು ನಾಯ್ಡು ಕೂಡಾ ಇದಕ್ಕೆ ಹೊರತಾಗಿಲ್ಲ.
ಈ ಇಬ್ಬರು ಯಾವುದೇ ಪಾರ್ಟಿ ಸೇರಿದರೇ ಮಾತ್ರ ಮ್ಯಾಜಿಕ್ ಸಂಖ್ಯೆ ಯೊಂದಿಗೆ ಸರ್ಕಾರ ರಚಿಸಲು ಸಹಕಾರಿ ಯಾಗಬಹುದು ಇಬ್ಬರ ಅಂಗಳದಲ್ಲಿ ಚೆಂಡು ಇದೆ .ಇಬ್ಬರನ್ನು ದೆಹಲಿಗೆ ಕರೆಯಿಸಿ ಬಿಜೆಪಿ ಪ್ರಮುಖರು ಮೀಟಿಂಗ್ ಮಾಡಿದ್ದು ಆಯಿತು, ಈರ್ವರ ಮನ ಒಲಿಸಿದ್ದು ಸದ್ಯಕ್ಕಿರುವ ವಿಚಾರವಾದರೂ ಮುಂದೇನೋ ಪ್ರಶ್ನಾರ್ಥ ಚಿಹ್ನೆ. ದೊಡ್ಡ ದೊಡ್ಡ ಬೇಡಿಕೆ ಇಟ್ಟು ಕಾಂಗ್ರೆಸ್ ಕೂಡಾ ಮನಸೆಳೆಯುತ್ತಿದೆ ಎಂಬ ವಿಚಾರವಿದ್ದರೂ, ಎರಡು ಬದಿಯಲ್ಲೂ ಸರಕಾರ ರಚಿಸಲು ಇವರೇಗಳೇ ಪ್ರಮುಖ ಧಾರಿಗಳು ಹಾಗಾಗಿ ಅಪ್ಪಿಕೊಳ್ಳಲು ಹಾಗೂ ಅವರ ಬೇಡಿಕೆಯನ್ನು ಒಪ್ಪಿಕೊಂಡು ಸರ್ಕಾರ ಸ್ಥಾಪಿಸಲು
ಸರಳವಾಗಿ 400 ಸ್ಥಾನ ದಾಟಲಿದೆ ಎಂಬಂತೆ ಬಿಂಬಿತವಾಗಿದ್ದರೂ ಬಿಜೆಪಿ ಎಡವಿದ್ದು ಎಲ್ಲಿ ? ಅಯೋಧ್ಯಯಲ್ಲಿ ರಾಮ ಮಂದಿರವನ್ನು ಪುನರ್ ನಿರ್ಮಾಣ ಮಾಡಿ ಹಿಂದೂಧರ್ಮಗಳ ಮತ ಬಾಚಿ ಕೊಳ್ಳುತ್ತದೆ ಎಂದೇ ಭವಿಷ್ಯ ಹೇಳುತ್ತಿದ್ದರೂ ,ಎಲ್ಲವೂ ಉಲ್ಟಾ ಪಲ್ಟಾ ಆಗಿ ಹೋಗಿದ್ದು ಅಚ್ಚರಿಸಿ ಪಡುವಂತಿದೆ. ದೇಶದಲ್ಲಿ ಉತ್ತರ ಪ್ರದೇಶವು ಅತ್ಯಧಿಕ ಸೀಟು ಗೆಲ್ಲುತ್ತದೆ ಎಂದೇ ಭಾವಿಸಲಾಗಿತ್ತು ಮತ್ತೂ ಅದನ್ನು ಪಡೆದದೇ ತೀರಬೇಕಿತ್ತು 80 ಸೀಟಿನಲ್ಲಿ ಕಳೆದ 2019 ರಲ್ಲಿ 62 ಸೀಟು ಪಡೆದಿತ್ತು.ಈ ಬಾರಿ ಅದಕ್ಕಿಂತಲೂ ಲೆಕ್ಕಚಾರದಲ್ಲಿ ಹೆಚ್ಚೇ ಗೆಲ್ಲಬೇಕಿತ್ತು 80 ಕ್ಕೆ 80 ಕ್ಕೂ ಬಾಚಿ ಕೊಳ್ಳುವ ಅವಕಾಶವನ್ನು ಹೊಂದಿತ್ತು 500ವರ್ಷಗಳಿಂದಲೂ ಬಹಳಷ್ಟು ಚರ್ಚೆಯ ವಿಷಯವಾಗಿದ್ದ ಅಯೋಧ್ಯಾ ರಾಮಂದಿರದ ನಿರ್ಮಾಣ ಮತ್ತು ಉದ್ಘಾಟನೆ ವಿಶ್ವದಾದ್ಯಂತ ಪ್ರಚಲಿತಕ್ಕೆ ಬಂದಿತ್ತು ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಅಲ್ಲಿನ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಎಲ್ಲಾ ಮತಗಟ್ಟೆಯನ್ನು ಈ ಬಾರಿ ಖಂಡಿತ ಕೊಳ್ಳೆ ಹೊಡೆದೆ ಹೊಡೆಯುತ್ತಾರೆ ಎಂದು ಬೀಗಿದ್ದು ಸತ್ಯ. ಇನ್ನು ಉತ್ತರ ಪ್ರದೇಶದಲ್ಲಿ ಬಹಳಷ್ಟು ಅಭಿರುವುದ್ಧಿ ಕೆಲಸ ಕಾರ್ಯಗಳೂ ನಡೆದಿತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ,ಜೊತೆಗೆ ಇನ್ಫೋಟ್ರಕ್ಸ್ಚಾರ್ ಕೆಲಸಗಳು ಅದ್ಭುತವಾಗಿ ನಡೆದಿದ್ದವು .ಇಷ್ಟೆಲ್ಲಾ ಇಂಪ್ರುಮೆಂಟ್ ಆಗಿದ್ದ ಯುಪಿಯಲ್ಲಿ ಜನತಾ ಜನಾರ್ಧನ ವೋಟು ಕೊಡಲೇ ಇಲ್ಲೇ ಕಳೆದ ಚುನಾವಣಾ ಯಲ್ಲಿ62 ಸಿಕ್ಕಿದ್ದ ಸೀಟು ಈ ಬಾರಿ ಕೇವಲ ಅದರ ಅರ್ಧದಷ್ಟು ಕಡಿಮೆಗೊಂಡಿತ್ತು ಕೇವಲ 32 ಸೀಟಿಗೆ ತೃಪ್ತಿ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಉದ್ಭವಿತು.ಜೊತೆಗೆ ಮಾಹಾರಾಷ್ಟ,ರಾಜಸ್ಥಾನ, ಮಧ್ಯ ಪ್ರದೇಶಗಳೂ ಕೂಡ ಮೋಸ ಮಾಡಿ ಬಿಟ್ಟವು. ನರೇಂದ್ರ ಮೋದಿ ವರ್ಚಸ್ಸು ಕುಠಿತ ಗೊಂಡಿತೇ ? ಬಿಜೆಪಿ ಸರ್ಕಾರದ ಆಡಳಿತ ಹಳಸಿತೇ ,ಸಾಕು ಅನ್ನಿಸಿತೇ ಗೊತ್ತಿಲ್ಲ.ನರೇಂದ್ರ ಮೋದಿಯ ಅಲೆ, ವರ್ಚಸ್ಸಿನಿಂದ ಸತತ ಎರಡೆರಡು ,ಮೂರ್ಮೂರು ಬಾರಿ ಎಲ್ಲಾ ಹೆಚ್ಚಿನ ಅಭ್ಯರ್ಥಿಗಳು ಗೆದ್ದು ಬಂದಿದ್ದು ವಾಸ್ತವ ಈ ಬಾರಿ ಇಷ್ಟೆಕ್ಕೆ ತಂದು ನಿಲ್ಲಿಸಿದ ಮತದಾರ, ಮುಂದೆ ಬಿಜೆಪಿಯ ಭವಿಷ್ಯ ಏನು ಎತ್ತ ಎಂಬುದು ಯಕ್ಷ ಪ್ರಶ್ನೆ. ಈ ಬಾರಿ ಮೋದಿಯೂ ಸಹಾ ತಮ್ಮ ಎಂದಿನ ಕ್ಷೇತ್ರವಾದ ವಾರಾಣಾಸಿಯಲ್ಲೂ ಸಹಾ ಪ್ರಾಸದಾಯಿಕ ಗೆಲುವನ್ನು ಕಂಡಿದ್ದು ಎಲ್ಲೂ ಮೋದಿ ಯುಗ ಮುಗಿಯುತ್ತೀದೆಯೇ ಎಂಬಂತೆ ಭಾಸವಾಗಿತ್ತು.ಒಟ್ಟಾರೆ ಈ ಬಾರಿ ಬಿಜೆಪಿಗೆ ನಿರೀಕ್ಷಿಸಿದಷ್ಟು ಸೀಟು ಬಾರದೇಹೋಗಿರುವುದು ವಿಪರ್ಯಾಸ. ಏನೇ ಇರಲಿ ಬಿಜೆಪಿ ನೇತೃತ್ವದ ಏನ್ ಡಿ ಎ ಸರ್ಕಾರ ಆಳ್ವಿಕೆ ನಡೆಸುವುದು 99 ಪ್ರತಿಶತವೇ ಆದರೂ, ಈ ಸರ್ಕಾರ ಎಷ್ಟು ದಿನ ಇರತ್ತೋ ಗೊತ್ತಿಲ್ಲ. ಸಂಸದೀಯ ಮೀಟಿಂಗ್ ನಲ್ಲಿ ಎನ್ ಡಿ ಎ ಮಿತ್ರ ಪಕ್ಷಗಳು ಸಪೋರ್ಟ್ ಅಂತೂ ಕೊಟ್ಟಿದ್ದಾವೆಯಾದರೂ ,ಯಾವ ಕ್ಷಣದಲ್ಲೂ ಬೇಕಾದರೂ ತಮ್ಮ ನಡವಳಿಕೆಯನ್ನು ಬದಲಾವಣೆ ಮಾಡು ಬಹುದು ಎಂಬುದು ಕೂಡಾ ಅಷ್ಟೇ ಸತ್ಯ. ಉತ್ತಮ,ದೊಡ್ಡ ಮಟ್ಟದ ಸ್ಥಾನ ಮಾನದ ಆಕಾಂಕ್ಷಿಗಳೆಲ್ಲವನ್ನೂ ಹೊಂದಿಸಿಕೊಂಡು ಆಡಳಿತ ನೆಡೆಸುವುದು ಕೊಡ ಅಷ್ಟು ಸುಲಭದ ಮಾತು ಅಲ್ಲವೇ ಅಲ್ಲಾ ಸ್ವತಂತ್ರವಾಗಿ ನಿರ್ಣಾಯ ತೆಗೆದುಕೊಳ್ಳಲು ಸಾಧ್ಯವಿಲ್ಲ
ಇನ್ನು ಕಾಂಗ್ರೆಸ್ ಪಕ್ಷವೂ ಇಂಡಿಯಾ ಮೈತ್ರಿ ಕೂಟದಲ್ಲಿ ಸಾಕಷ್ಟು ಪಾರ್ಟಿಗಳಿದ್ದೂ ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ರಚಿಸುವುದು ಜೊತೆಗೆ ಐದು ವರ್ಷಗಳ ಕಾಲ ನಿರ್ವಹಿಸುವುದು ಅಸಾಧ್ಯವೇ ಸರಿ.!
ಏನೇ ಇರಲಿ ಸಧ್ಯದ ಮಾಹಿತಿ ಪ್ರಕಾರ ನರೇಂದ್ರ ಮೋದಿ ಮೂರನೇ ಬಾರಿಗೆ ಇದೆ ಭಾನುವಾರ ಜೂನ್ 9ರ ಸಂಜೆ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂಬ ಮಾಹಿತಿ ಇದ್ದರೂ ಅದೆಷ್ಟು ಸತ್ಯವೊ ಕಾದು ನೋಡಬೇಕಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ