ಗುರುವಾರ, ಮೇ 4, 2023

ಶೆಟ್ಟರ್ ,ಸವದಿಗೆ ಮತದಾರರು ತಕ್ಕ ಶಾಸ್ತಿ ಮಾಡಬೇಕಾಗಿದೆ !

ಬಾಯಿಗೆ ಬಂದಂತೆ ಕಾಂಗ್ರೆಸ್ ಗೆ ಉದ್ದುದ್ದ ನಾಲಿಗೆ ಹರಿ ಬಿಡುತ್ತಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ,ಮಾಜಿ ಉಪ ಮುಖ್ಯ ಮಂತ್ರಿ ಲಕ್ಷ್ಮಣ್ ಸವದಿ ಬಿಜೆಪಿ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ.ಎಲ್ಲವನ್ನೂ ಕೊಟ್ಟ ಬಿಜೆಪಿಗೆ ವಿದಾಯ ಹೇಳಿ ಎಂಎಲ್ಎ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಅಧಿಕಾರದ ಲಾಲಸೆಯಿಂದ ಕಾಂಗ್ರೆಸ್ ಗೆ ಕೈ ಜೋಡಿಸಿ ಟಿಕೆಟ್ ಗಿಟ್ಟಿಸಿಕೊಂಡು ಬಿಜೆಪಿ ವಿರುದ್ಧ ಹರಿ ಹಾಯುತ್ತಿದ್ದಾರೆ . ಇಂಥ ಜನಪ್ರತಿನಿಧಿಗಳು ನಮಗೆ ಬೇಕೇ ? ಮಾತೃ ಪಕ್ಷಕ್ಕೆ ಮೋಸ ಮಾಡಿ ಸದಾ ಕುರ್ಚಿಗಾಗಿ ಹಪ ಹಪಿಸುವ ಇಂತವರನ್ನು ಆರಿಸಿ ವಿಧಾನ ಸೌಧ ಕ್ಕೆ ಕಳುಹಿಸಿ ಕೊಡಬೇಕಾ ? ಈ ಬಾರಿ ಗೆಲ್ಲುತ್ತಾರಾ ? ಖಂಡಿತವಾಗಿಯೂ ಆ ಭಾಗದ ಮತದಾರರು ಗೆಲ್ಲಿಸಬಾರದು ಕೇವಲ ಕುರ್ಚಿಗಾಗಿ ಅಂಡೆಲೆಯುವ ಇಂಥ ಅತಿರಥರಿಗೆ ಓಟ್ ಒತ್ತ ಬಾರದು.ಒಂದು ರಾಜಕೀಯ ಪಕ್ಷದಿಂದ ಗುರುತಿಸಿಕೊಂಡು ,ಜನರ ಆಶೀರ್ವಾದ ಪಡೆದು ಪಟ್ಟಕೇರಿದ ಬಳಿಕ ಮುಂದೆ ಅದೇ ಪಕ್ಷಕ್ಕೆ ಮೋಸ ಮಾಡುವ ಇವರು ಜನಸೇವಕ ರಾಗಲು ಯೋಗ್ಯರೇ ?
7-8 ಸಾರಿ ಆರಿಸಿಬಂದರೂ,ದೊಡ್ಡ ಹುದ್ದೆ ಸಿಗದ ಅದೆಷ್ಟೋ ಅರ್ಹರ ಮಧ್ಯೆ 3-4 ಬಾರಿ ಗೆದ್ದು ಬಂದವರಿಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ.ಜಗದೀಶ್ ಶೆಟ್ಟರ್ ಮುಖ್ಯ ಮಂತ್ರಿ ಮಟ್ಟವನ್ನೂ ಸ್ವಿಕರಿಸಿದ್ದರೇ ,ಲಕ್ಷ್ಮಣ್ ಸವದಿ ಉಪ ಮುಖ್ಯ ಮಂತ್ರಿ ಯಾಗಿಯೂ ಗುದ್ದುಗೆ ಏರಿದ್ದಾರೆ.ಇಷ್ಟೆಲ್ಲವನ್ನೂ ಪಕ್ಷ ಕೊಟ್ಟಿದೆ.ಕಮಲದ ಚಿಹ್ನೆಯಡಿಯಲ್ಲಿ ಆರಿಸಿ ಬಂದಿದ್ದಾರೆ.ಒಂದೊಮ್ಮೆ ಮಿನಿಸ್ಟರ್ ಸವದಿ ಸದನದಲ್ಲಿ ಬ್ಲೂ ಫಿಲಂ ನೋಡಿ ಪ್ರಪಂಚದಾದ್ಯಂತ ಜನಪ್ರೀಯ ಗೊಂಡು ಬಿಜೆಪಿಯ ಪಕ್ಷಕ್ಕೆ ಮಸಿ ಬಳಿಯುವಂತ ಕಾರ್ಯಕ್ಕೆ ಕೈ ಹಾಕಿದರೂ ಈ ಮಹಾನುಭಾವನಿಗೆ ಪಕ್ಷ ಉಚ್ಚಾಟನೆ ಮಾಡಿಲ್ಲ ಮಾರ್ಯಾದೆ ಬೀದಿ ಪಾಲಾದರೂ, ಸಹಿಸಿಕೊಂಡು ಮತ್ತೆದೇ ಸ್ಥಾನ ಮಾನವನ್ನು ಕೊಟ್ಟಿತ್ತು .ಆದರೆ ಈತ ಇಂದು ಮಾಡಿದ್ದಾದರೂ ಏನು ? ಅತೀ ಆಸೆ, ಅಧಿಕಾರದ ಹಾಹಾಕಾರ,ವಯಸ್ಸು ಮೀರುತ್ತಿದ್ದರೂ ತನಗೆ ಎಲ್ಲವೂ ಬೇಕು ಎನ್ನುವ ಹುಚ್ಚು ಮನೋಭಾವನೆ ! ಜನಸೇವೆ ಸೇವೆ ಮಾಡಲು ಇನ್ನೊಂದು ಪಕ್ಷಕ್ಕೆ ಟಿಕೆಟ್ ಗಿಟ್ಟಿಸಿಕೊಂಡಿದ್ದೇವೆ ಎನ್ನುವ ಇವರ ಜನಸೇವೆ ಎಷ್ಟರ ಮಟ್ಟಿಗೆ ಇದೆ ಎಂದು ರಾಜ್ಯದ ಜನತೆ ನೋಡಿಲ್ಲವೇ ?ಮುಖ್ಯ ಮಂತ್ರಿ,ಉಪಮುಖ್ಯ ಆದವರ ಕೊಡುಗೆ ಏನು? ಎಂತ? ಎನ್ನುವುದು ಇಡೀ ರಾಜ್ಯವೇ ನೋಡಿತ್ತು.ಅವಕಾಶ ಎಲ್ಲರಿಗೂ ಬೇಕು .ದೇಶಕ್ಕಾಗಿ ತುಡಿಯುವ,ಜನಸೇವೆಗೆ ಮಿಡಿಯುವ ಮನಸ್ಸುಗಳು ಸಾಕಷ್ಟು ಅರ್ಹ ಅಭ್ಯರ್ಥಿಗಳು ಸಮಾಜದಲ್ಲಿವೆ.,ಅವರುಗಳಿಗೆ ಪ್ರೋತ್ಸಾಹ ಸಿಗಬೇಕಾಗಿದೆ. ಕೇವಲ ಕುಟುಂಬ ರಾಜಕೀಯ,ವಯಸ್ಸು ಮೀರುತ್ತಿದ್ದರೂ ಮತ್ತೆದೇ ಮುಖ ಹೊತ್ತು ಬರುವವರು ಸಮಾಜಕ್ಕೆ ಬೇಕಾಗಿಲ್ಲ.ಈ ನಿಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿಯ ನೀತಿ ,ನಿಯಮ ಉತ್ತಮವಾದದ್ದೇ ಆದರೇನು ಮಾಡುವದು ಕೆಲವು ನಿಯತ್ತು ಇಲ್ಲದ ಇಂಥ ಬಂಡಾಯದ ಮನಸುಗಳು ಇದ್ದೆ ಇರುತ್ತವೆ.ಹಾಲಾಡಿ ಶ್ರೀನಿವಾಸ್ ಶೆಟ್ಟಿಯಂತ ಅಪರೂಪದ ಸಹೃದಯವಂತರು ಸಿಗುವುದು ಕೇವಲ ಕೋಟಿಗೆ ಒಬ್ಬರು ಏನೋ ೫ ಬಾರಿ ನಿರಂತರವಾಗಿ ಎದುರಾಳಿ ಯಾರೇ ಇದ್ದರೂ ದೊಡ್ಡ ಮಾರ್ಜಿನ್ ನಲ್ಲಿ ಗೆದ್ದು ಬೀಗುತ್ತಿರುವ ಸೋಲಿಲ್ಲದ ಸರದಾರ ಹಾಲಾಡಿಗೆ ಸಾಟಿ ಯಾರು ಇಲ್ಲ., ಪಕ್ಷ ಬೀ ಫಾರ್ಮ್ ಕೊಟ್ಟರೂ ,ಹೊಸಬರಿಗೆ ಅವಕಾಶ ಕೊಡುವ ಉದ್ದೇಶ ದಿಂದ ಸ್ವಯಂ ನಿವ್ರತಿ ಪಡೆದ ಹಾಲಾಡಿ ತನ್ನದೇ ಚುನಾವಣೆ ಎನ್ನುವಂತೆ ಪಕ್ಷದ ಅಭ್ಯರ್ಥಿ ಪರ ಹಗಲು ರಾತ್ರಿ ಪ್ರಚಾರ ಕಾರ್ಯದಲ್ಲಿದ್ದಾರೆ ಇಂತವರು ಪಕ್ಷಕ್ಕೆ ಮಾತ್ರ ಅಲ್ಲ ದೇಶಕ್ಕೆ ಹೆಮ್ಮೆಯ ಆಸ್ತಿ. ಹೊಸಮುಖಗಳಿಗೆ ಅವಕಾಶ ಮಾಡಿ ಕೊಡುವ ಬಿಜೆಪಿಯಲ್ಲಿನ ವ್ಯವಸ್ಥೆ ಒಂದು ರೀತಿಯಲ್ಲಿ ಪ್ರಯೋಗ ಶಾಲೆಯಂತೆ ಕಂಡು ಬಂದರೂ, ಸಮಾಜಕ್ಕೆ ಇದು ಸ್ವಾಗತಾರ್ಹ.ಸಾಮಾನ್ಯ ಕಾರ್ಯಕರ್ತನೂ ಸಹ ಅವಕಾಶ ಪಡೆಯುತ್ತಿದ್ದಾನೆ .ಈ ಬಾರಿ ರಾಜ್ಯಾದ್ಯಂತ 224 ಕ್ಷೇತ್ರ ಗಳ ಪೈಕಿ ಸುಮಾರು 65 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿ ಘೋಷಣೆ ಯಾಗಿದೆ /ಪರಿಚಯವಾಗಿದೆ.ಒಂದಷ್ಟು ಹಾಲಿ ಕ್ಷೇತ್ರದ ಶಾಸಕರು ಕ್ಷಣಿಕ ಕಾಲ ಮುನಿಸು ತೋರಿಸಿದರೂ,ಪಕ್ಷದ ಸಿದ್ದಾಂತವನ್ನು ಮನಗೊಂಡು ಹೊಸ ಅಭ್ಯರ್ಥಿಗಳಿಗೆ ಬೆಂಬಲವನ್ನು ಸೂಚಿಸಿದ್ದಾರೆ.ಮತದಾರರು ಪ್ರಜ್ಞಾವಂತರಾಗಿದ್ದಾರೆ ಕೇವಲ ಹಣ -ಹೆಂಡ, ಇಲ್ಲ- ಸಲ್ಲದ ಆಶ್ವಾಸನೆಗೆ ,ವಿವಿಧ ಕೊಡುಗೆಗಳಿಗೆ ಮರು ಹೋಗಲಾರರು/ಮಣೆ ಹಾಕಲಾರರು.ವಿಶ್ವಾಸ ವಿದೆ ಹೆಸರು ಪದವಿ ಕೊಟ್ಟ ಪಕ್ಷವನ್ನು ದಿಕ್ಕರಿಸಿ ,ಅದರ ವಿರುದ್ಧವೇ ಹರಿ ಹಾಯುತ್ತಿರುವ ಇನ್ನೊಂದು ಪಕ್ಷದಿಂದ ಸ್ವರ್ಧಿಸಿರುವ ಈರ್ವರಿಗೆ ಮತದಾರರು ತಕ್ಕ ಶಾಸ್ತಿ ಮಾಡದೇ ಇರಲಾರರು.ಸೋತರೇ ಇವರಂತಿರುವ ಕೆಲವು ಮನಸ್ಥಿತಿ ಮಹಾನೋಭಾವರಿಗೆ ಉತ್ತಮ ಪಾಠ ವಾಗಬಲ್ಲದು .ಯಾವುದಕ್ಕೂ ಮೇ 13ರ ರವರೆಗೆ ಕಾದು ನೋಡೋಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ