ಸೋಮವಾರ, ಮೇ 15, 2023
ಬಿಟ್ಟಿ ಭಾಗ್ಯಗಳಿಗೆ ಮನಸೋತ ಮತದಾರ ,5 ಗ್ಯಾರಂಟಿ ಕಾರ್ಡ್ಗಳಿಂದಲೇ ಗೆದ್ದು ಬೀಗಿತಾ ಕಾಂಗ್ರೆಸ್ ?!
ಯಾರೂ ಕೂಡ ಊಹಿಸದ ರೀತಿಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಸ್ವತಂತ್ರ ಸರ್ಕಾರ ರೂಪಿಸಲು ಸಜ್ಜಾಗಿದೆ.ಸಮೀಕ್ಷೆಗಳೆಲ್ಲಾ ತಲೆ ಕೆಳಗಾದವು.ಈ ಬಾರಿ ಅತಂತ್ರವೇ ಗತಿ ಎಂಬ ಎಕ್ಸಿಟ್ ಪೊಲ್ ನ ಎಲ್ಲಾ ಸುರ್ವೇಗೂ ಮತದಾರ ಅನಿರೀಕ್ಷಿತ ಉತ್ತರ ಕೊಟ್ಟಿದ್ದಾನೆ.ನರೇಂದ್ರ ಮೋದಿ,ಅಮಿತ್ ಷಾ,ಜೆಪಿ ನಡ್ಡಾ,ಯೋಗಿ ಪ್ರಚಾರ, ರೋಡ್ ಶೋ ಗೆ ಬೆಲೆ ಇಲ್ಲದಂತಾಯಿತು. ಅಂತೂ ಮತದಾರ ಬಿಟ್ಟಿ ಭಾಗ್ಯಕ್ಕೆ ಮನಸೋತು ಕಾಂಗ್ರೆಸ್ ಗೆ ಓಟು ಒತ್ತಿದ್ದಾನೆ ಘಟಾನುಘಟಿ ಹಾಲಿ 12 ಜನ ಮಂತ್ರಿಗಳೂ ಸಹಾ ಸೀಟ್ ಉಳಿಸಿ ಕೊಳ್ಳಲಾಗದಿರವುದು ದುರಾದ್ರಷ್ಟವೇ ಸರಿ.
ಹೌದು ದೇಶದಲ್ಲಿ ಕಾಂಗ್ರೆಸ್ ಗೆ ಉಳಿವಿಲ್ಲ.ಕರ್ನಾಟಕದಲ್ಲಂತೂ ಉಳಿಗಾಲವಿಲ್ಲಎಂಬ ಮಾತಿತ್ತು.ಆದರೆ ಮೊನ್ನೆಯ 135 ಸೀಟ್ ನ ಐತಿಹಾಸಿಕ ಗೆಲುವು ಇದೆನ್ನೆಲ್ಲವನ್ನು ಅಳಿಸಿ ಹಾಕಿದೆ.ಬಣ ರಾಜಕೀಯದ ನಡುವೆಯೂ ಕಾಂಗ್ರೆಸ್ ಕರ್ನಾಟಕದಲ್ಲಿ ಅಸ್ತಿತ್ವವನ್ನು ಉಳಿಸಿಕೊಂಡಿದೆ.
ಯಾವ ರಾಜಕೀಯ ಪಾರ್ಟಿಗೂ ಬಹುಮತ ದೊರಕುವುದಿಲ್ಲ,ಜೆಡಿಎಸ್ ಕಿಂಗ್ ಮೇಕರ್ ಅಂತಲೇ ಬಿಂಬಿತವಾಗಿತ್ತು, ಮತದಾರ ಎಲ್ಲವನ್ನು ಉಲ್ಟಾ ಮಾಡಿದ್ದಾನೆ.ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಂದಗಳಿಂದ ಹಿಡಿದು,ಪ್ರಧಾನ ಮಂತ್ರಿ ನರೇಂದ್ರ ಮೋದಿ ,ಕೇಂದ್ರ ಗ್ರಹ ಸಚಿವ ಚುನಾವಣಾ ಚಾಣಾಕ್ಷ ಎಂದೇ ಕರೆಯಲ್ಪಡುವ ಅಮಿತ್ ಷಾ,ಬುಲ್ಡೋಜರ್ ಬಾಬಾ ಖ್ಯಾತಿಯ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ , ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾರವರ ಅದ್ದೂರಿ ರೋಡ್ ಶೋ,ತಿಂಗಳುಗಳಗಟ್ಟಲೇ ಪ್ರಚಾರ,ಸಭೆ ಯಾವುದೂ ಕೆಲಸಕ್ಕೆ ಬಾರದೇ ಹೋಯಿತು . ಒಟ್ಟಾರೆ ಮತದಾರ ಬದಲಾವಣೆ ಬಯಸಿದ್ದಾನಾ ?ಬಿಜೆಪಿ ಸರ್ಕಾರದ ಆಡಳಿತಕ್ಕೆ ರೋಸಿ ಹೋಗಿದ್ದಾನಾ ? ಅಥವಾ ಕಾಂಗ್ರೆಸ್ನ್ ಆ ಆಶ್ಸ್ವಾಸನೆಗೆ ಮಾರು ಹೋಗಿದ್ದಾನಾ ಗೊತ್ತಿಲ್ಲಾ ? ಕೈ ಚಿಹ್ನೆಗೆ ವೋಟ್ ಅಂತೂ ಊಹೆಗೆ ನಿಲುಕದಷ್ಟು ಬಿದ್ದಿದೆ.
ಅರ್ಥಾತ್ ಬಿಜೆಪಿ ಸೋತಿರುವುದಕ್ಕೆ ,ಕಾಂಗ್ರೆಸ್ ಫುಲ್ ಮೆಜಾರಿಟಿ ಬಂದಿರುವುದಕ್ಕೆ ಕಾರಣ ಹುಡುಕುತ್ತಾ ಹೋದರೇ ಬಹಳಷ್ಟು ವಿಚಾರಗಳು ತೆರೆದು ಕೊಳ್ಳುತ್ತದೆ ನನ್ನಮೂಗಿನ ನೇರಕ್ಕೆ ಕೆಲವೊಂದನ್ನು ಹೈಲೈಟ್ ಮಾಡುವುದಾದರೇ,ಬಿಜೆಪಿಗೆ ಮೊದಲ ಹೊಡೆತ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನನ್ನ ಸಿ ಎಂ ಸೀಟಿನಿಂದ ಇಳಿಸಿದ್ದು.,ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಕಟ್ಟಿ ಬೆಳೆಸಿದ, ಅಧಿಕಾರಕ್ಕೆ ತಂದ ಕೀರ್ತಿ ಬಿ.ಎಸ್ ಯಡಿಯೂರಪ್ಪನವರಿಗೆ ಸಲ್ಲುತ್ತದೆ.ವಯಸ್ಸಿನ ಮಿತಿಯ ಕಾರಣ ಕೊಟ್ಟು ಕುರ್ಚಿಯಿಂದ ಕೆಳಗೆ ಇಳಿಯಲಾಯಿತು,ಮುಖ್ಯ ಮಂತ್ರಿ ಬದಲಾವಣೆ ಹಲವರಲ್ಲಿ ಬೀಸರ ತಂದಿತ್ತು., ಖುದ್ದು ಬಿಜೆಪಿಯ ಆಂತರಿಕ ಮುನಿಸಿಗೂ ಕಾರಣವಾಯಿತು . ಮನಸ್ಸಿಲ್ಲದೆ ಕುರ್ಚಿ ಬಿಟ್ಟು ಕೊಟ್ಟ ಯಡ್ಡಿ ಮೇಲ್ನೋಟಕ್ಕೆ ನಿವೃತ್ತಿ ಬಗ್ಗೆ ಘೋಷಣೆ ಮಾಡಿದ್ದರೂ, ಅಳುಕು,ಬೇಸರ ಮಾತ್ರ ಮನದಲ್ಲೇ ಇತ್ತು ಹೈ ಕಮಾಂಡ್ ನ ಬಲವಂತದ ಬದಲಾವಣೆಯನ್ನು ತೋರಿಸಿಕೊಳ್ಳದೇ ಆಗಾಗ ಸಂಸತ್ ಗೂ ಹಾಜರಾಗುತ್ತಿದ್ದರು,ಹಾಗೂ ಪ್ರಚಾರ ಕಾರ್ಯವನ್ನು ಕೈ ಗೊಂಡಿದ್ದರು .,ಇದು ಬಿಜಿಪಿಗೆ ಅಲ್ಲದಿದ್ದರೂ ತನ್ನ ಮಕ್ಕಳ ಭವಿಷ್ಯದ ರಾಜಕೀಯಕ್ಕೆ ಸಹಾಯವಾಗಲಿ ಎಂಬಂತೆಯೂ ಇತ್ತು ಹಾಗೂ ಫಲ ಶ್ರುತಿ ಯಂಬಂತೆ ಶಿಕಾರಿಪುರದಲ್ಲಿ ವಿಜಯೇಂದ್ರ ವಿನ್ ಆಗಿದ್ದರು.
ಇನ್ನು ತಾಂಡವ ಆಡಿದ್ದು 40 % ಕಮಿಷನ್ ವ್ಯವಹಾರ., ನೇರ ನೇರಾ ಸಾಕ್ಷಿ ಪುರಾವೆಗಳೂ ಕೂಡ ದೊರಕಿತ್ತು., ಗುತ್ತಿಗೆದಾರೊಬ್ಬರು ಮಾಜಿ ಸಚಿವ ಈಶ್ವರಪ್ಪರವರ ಮೇಲೆ ಕಮಿಷನ್ ಆರೋಪ ಹೊರಿಸಿ ಆತ್ಮಹತ್ಯೆಗೆ ಶರಣಾದರೇ ,ಇನ್ನು ಎದುರಿಂದ ಎದುರಿಗೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರ ಮಗ ಕಮಿಷನ್ ಪಡೆಯುತ್ತಿರುವಾಗ ಸಿಕ್ಕಿ ಬಿದ್ದಿದ್ದು ,ಆತನಿಗೆ ಯಾವುದೇ ಶಿಕ್ಷೆಯನ್ನು ನೀಡದೇ ಇದ್ದಿದ್ದು ಎಲ್ಲವೂ ಕಾಂಗ್ರೆಸ್ ಗೆ ಲಾಭವಾಗಿ ಪರಿಣಮಿಸಿತ್ತು.
ಇನ್ನು ಪ್ರಯೋಗ ಶಾಲೆಯಂಬಂತೆ ಹೊಸ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದು ,ಸುಮಾರು 65 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಹೊಸಬರಿಗೆ ಅವಕಾಶ ಕಲ್ಪಿಸಲಾಯಿತು,ಅಭ್ಯರ್ಥಿಯ ಪರಿಚಯ ವಿಲ್ಲದೇ ಓಟು ಡೈವರ್ಟ್ ಆಗಿದ್ದು ಸತ್ಯ. ಇದರಿಂದ ಸೀಟು ಸಿಗದ ಹಾಲಿ ಶಾಸಕರು ಬಂಡಾಯ ಎದ್ದು ಮುನಿಸಿಕೊಂಡರೇ , ಕೆಲವರು ಬೇರೆ ಪಕ್ಷದ ಕಡೆ ಮುಖ ಮಾಡಿದ್ದರು.ಇದು ಸಹಾ ಎಲ್ಲೂ ಸೋಲಿಗೆ ಕಾರಣವಾಯಿತು.ಲಿಂಗಾಯಿತ ,ಒಕ್ಕಲಿಗ ,ವೀರಶೈವ ಹೀಗೆ ವಿವಿಧ ಸಮುದಾಯಗಳ ಮೇಲಿನ ಮೀಸಲಾತಿ ,ಹಾಗೆ ರಾಜ್ಯಕ್ಕೆ ಅಮಲ್ ಹಾಲಿನ ಎಂಟ್ರಿ ಹೀಗೆ ಹತ್ತು ಹಲವು ಸಣ್ಣ ಪುಟ್ಟ ವಿಚಾರ ಗಳೆಲ್ಲವೂ, ಕಾಂಗ್ರೆಸ್ ಗೆಲುವಿಗೆ ಕಾರಣವಾಯಿತು. ಬಹು ಮುಖ್ಯವಾಗಿ ಭಾರತೀಯ ಜನತಾ ಪಾರ್ಟಿಗೆ ಗೆ ಹೊಡೆತ ಕೊಟ್ಟಿದ್ದು
ಕಾಂಗ್ರೆಸ್ ನ ಐದು ಗ್ಯಾರಂಟಿಗಳು ಇದಕ್ಕೆ ಕ್ಲೀನ್ ಬೋಲ್ಡ್ ಆಗಿ ಬಿಟ್ಟಿದ್ದ ಮತದಾರ !
ಗೆಲ್ಲಲೇ ಬೇಕೆಂಬ ಪಣ ತೊಟ್ಟ ಕಾಂಗ್ರೇಸ್ ಅತೀ ದೊಡ್ಡ ಪ್ರಣಾಳಿಕೆಯಲ್ಲೇ ಜನರ ಮುಂದೆ ಇಟ್ಟಿತ್ತು ದಿನಕ್ಕೊಂದರಂತೆ ಬಿಡುಗಡೆ ಗೊಂಡ ಐದು ಭಾಗ್ಯದಲ್ಲಿ ಭರವಸೆಗಳು ಗೃಹ ಜ್ಯೋತಿ ಯೋಜನೆ: ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಿಕೆ,ಯುವನಿಧಿ ಯೋಜನೆ : ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 3,000 ಹಾಗೂ ಡಿಪ್ಲೊಮಾ ಪದವೀಧರರಿಗೆ ಪ್ರತಿ ತಿಂಗಳು 1,500 ರೂ. ಭತ್ಯೆ,
ಅನ್ನಭಾಗ್ಯ: ಪ್ರತಿ ತಿಂಗಳು ವ್ಯಕ್ತಿಗೆ 10 ಕೆಜಿ ಅಕ್ಕಿ ಉಚಿತ,ಗೃಹಲಕ್ಷಿ ಯೋಜನೆ: ಮನೆಯ ಮಹಿಳೆಗೆ ಯಜಮಾನನಿಗೆ 2000 ರೂಪಾಯಿ ನೀಡುವುದು,ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆ : ಕೈ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತವಾಗಿ ಬಸ್ ಗಳಲ್ಲಿ ಪ್ರಯಾಣ ಅವಕಾಶ. ಇದು ಕಾಂಗ್ರೆಸ್ ಗೆಲುವುಗೆ ಪ್ರಾಮುಖ್ಯತೆಯನ್ನು ಪಡೆದು ,ಬಿಜೆಪಿ ಹೀನಾಯ ಸೋಲಿಗೆ ಕಾರಣವಾಯಿತು .ಈ ಗ್ಯಾರಂಟಿ ಗಳನ್ನು ಕಾಂಗ್ರೆಸ್ ದಯಪಾಲಿಸುತ್ತದೆ ಎಂಬ ಯಾವುದೇ ವಿಶ್ವಾಸ ವಿಲ್ಲಾ ಅರ್ಥ ಶಾಸ್ತ್ರಜ್ಞರ ಪ್ರಕಾರ ರಾಜ್ಯದ ಬಜೆಟ್ ನ ೮೦ % ಅದಕ್ಕೆ ವಿನಿಯೋಗವಾಗುತ್ತದೆಯಂತೆ ,ಒಟ್ಟಾರೆ ಇವುಗಳನ್ನು ಜಾರಿಗೆ ತರುವುದು ಕಷ್ಟ ಸಾದ್ಯವಾದರೂ ,ವಿವಿಧ ಕಾರಣವೊಡ್ಡಿ ,ಕುಂಟು ನೆಪ ಹೇಳಿ ಜಾರಿ ಕೊಳ್ಳಬಹುದು., ಅದಿಲ್ಲವೆಂದರೆ ಒಂದಷ್ಟು ದಿನ ಜಾರಿಗೊಳಿಸಿ ಸ್ಥಗಿತ ಗೊಳಿಸಬಹುದು ,ಇನ್ನು ಐದು ಗ್ಯಾರಂಟಿಯಂತೆ ನಡೆದು ಕೊಂಡರೇ ಕರ್ನಾಟಕ ದಿವಾಳಿಯಾಗುವುದು ಶತ ಸಿದ್ದ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ