ಗುರುವಾರ, ಏಪ್ರಿಲ್ 1, 2021
ಜಾರಿ ಬಿದ್ದ ಜಾರಕಿ ಹೊಳಿ : ಸಿಡಿ ಹಿಂದೆ ಅದೆಷ್ಟು ಬಾಡಿ ?
ಸರಿ ಸುಮಾರು ಒಂದು ತಿಂಗಳು ಪೂರ್ಣಗೊಂಡಿದೆ ರಾಜ್ಯ ರಾಜಕಾರಣ ದಲ್ಲಿ ಅಲ್ಲೋಲ -ಕಲ್ಲೋಲವನ್ನು ಎಬ್ಬಿಸುತ್ತಿರುವ ಸಿಡಿ ವಿಚಾರ ಅಂತ್ಯ ಕಾಣುವ ಲಕ್ಷಣವಿಲ್ಲ . ರಾಜ್ಯದಲ್ಲಿ ಬಿಜೆಪಿ ಸರ್ಕಾರ ರೂಪುಗೊಳ್ಳಲು ಪ್ರಮುಖ ಪಾತ್ರ ವಹಿಸಿದ್ದ ನೀರಾವರಿ ಸಚಿವ ಜಾರಕಿ ಹೊಳಿ ಬ್ರದರ್ಸ್ ಗಳಲ್ಲಿ ಒಬ್ಬರಾದ ರಮೇಶ್ ಜಾರಕಿಹೊಳಿಯವರು ಯುವತಿ ಯೊಂದಿಗಿರುವ ರಾಸಲೀಲೆ ಎಂದು ಹೆಸರು ಪಡೆದ ಖಾಸಗೀ ದ್ರಶ್ಯ ಬಿಡುಗಡೆ ಗೊಂಡಿತ್ತು . ಎರಡು ವಿಡಿಯೋಗಳು ಸಾಮಾಜಿಕ ಜಾಲ ತಾಣವೂ ಸೇರಿದಂತೆ ಬ್ಲರ್ ರೂಪದಲ್ಲಿ ಮಾಧ್ಯಗಳಲ್ಲಿ ಪ್ರಮುಖ ಬ್ರೇಕಿಂಗ್ ಆಗಿ ಕಾಣ ಸಿಕ್ಕವು ,ಒಂದು ಮಿಲನ ದ್ರಶ್ಯ ವಾದರೇ ಇನ್ನೊಂದು ವಿಡಿಯೋ ಕಾಲ್ ಸ್ಕ್ರೀನ್ ರೆಕಾರ್ಡ್ ಆಗಿತ್ತು . ಅಂದೇ ಸಾಮಾಜಿಕ ಕಾರ್ಯಕರ್ತರಾದ ದಿನೇಶ್ ಕಲ್ಲಹಳ್ಳಿ ಎಂಬುವವರು ಯುವತಿಗೆ ಮೋಸವಾಗಿದೆ , ಕೆಲಸ ಕೊಡಿಸುತ್ತೇನೆ ಎಂಬ ಆಮಿಷ ಒಡ್ಡಿ ರಮೇಶ್ ಜಾರಕಿ ಹೊಳಿ ಯುವತಿಯನ್ನು ಬಳಸಿಕೊಂಡಿದ್ದಾರೆ ಎಂದು ಬಂಧನಕ್ಕಾಗಿ ಕೇಸು ದಾಖಲಿಸುತ್ತಾರೆ . ಇತ್ತ ನಾನೇನು ಮಾಡಿಲ್ಲ ಅದು ನನ್ನ ವಿಡಿಯೋ ಅಲ್ಲ ಬ್ಲಾಕ್ ಮೇಲ್ ಮಾಡಲಾಗುತ್ತಿದೆ . ನಾಲ್ಕು ತಿಂಗಳ ಹಿಂದೆ ನನ್ನ ಮನವರಿಕೆಗೆ ಬಂದಿತ್ತು ಇದರಲ್ಲಿ ದೊಡ್ಡ ಟೀಮ್ ಇದೆ ಒಬ್ಬ ಮಹಾನಾಯಕ ಇದರಲ್ಲಿ ಇದ್ದಾನೆ ನನ್ನನ್ನು ರಾಜಕೀಯವಾಗಿ ಮುಗಿಸಲು ಈ ರೀತಿ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದರು .
ಪ್ರಕರಣ ಕಾವು ಪಡೆಯುತ್ತಿದಂತೆ ತನ್ನ ಸಚಿವ ಸ್ಥಾನಕ್ಕೆ ರಾಜಿನಾಮೆಯನ್ನು ಸಲ್ಲಿಸುತ್ತಾರೆ . ಇತ್ತಾ ಒಂದೆರಡು ದಿನಗಳ ನಂತರ ದಿನೇಶ್ ಕಲ್ಲ ಹಳ್ಳಿಯವರು ತಮ್ಮ ಮೇಲೆ ಬಂದ ಆರೋಪದ ಕಾರಣ ನೀಡಿ ಕೇಸನ್ನು ವಾಪಸ್ಸು ತೆಗದುಕೊಳ್ಳುತ್ತಾರೆ .
ಸಿಡಿಯಲ್ಲಿರುವವರು ಜಾರಕಿಹೊಳಿ ನಾ ?: ಸಿಡಿಯಲ್ಲಿರುವ ದ್ರಶ್ಯವನ್ನು ಕೂಲಂಕುಷವಾಗಿ ವೀಕ್ಷಿಸಿದರೇ ,ರಮೇಶ ಜಾರಕಿಹೊಳಿ ಎಂಬುದರಲ್ಲಿ ಎರಡು ಮಾತಿಲ್ಲ ಅವರ ಸಂಭಾಷಣೆಯನ್ನು ಗಮನಿಸಿದರೇ ಅದು ಅವರೇ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ, ಸಿಡಿಯಲ್ಲಿರುವ ಲೇಡಿ ಸಹಾ ಅವಳೇ ಎಂಬುದು ಮೇಲ್ನೋಟಕ್ಕೆ ಸಾಭೀತು ಪಡಿಸುತ್ತಿದೆ
ಬ್ಲಾಕ್ ಮೇಲ್ ಒಳಗಾದರೇ ಜಾರಕಿಹೊಳಿ ?:
ಹೌದು ಮೇಲ್ನೋಟಕ್ಕೆ ಇದು ಬ್ಲಾಕ್ ಮೇಲ್ ಎಂದೇ ಪರಿಗಣಿಸಬಹುದು .ಹಲವಾರು ಸಂದೇಹ -ಸಂಶಯಗಳ ಪ್ರಕಾರ ವಿಡಿಯೋ ಮಾಡಿರುವುದು ಯುವತಿನೇ ,ವಿಡಿಯೋ ಕಾಲ್ ಸ್ಕ್ರೀನ್ ರೆಕಾರ್ಡ್ ನಲ್ಲೆಯೇ ಅದು ಸಾಭೀತು ಪಡಿಸುತ್ತಿದೆ . ಇಂತಹ ದೊಡ್ಡ ನಾಯಕನನ್ನು ಎದುರು ಹಾಕಿಕೊಳ್ಳುವುದು ಸಾಮನ್ಯದ ಸಂಗತಿ ಅಲ್ಲ .ಇದರ ಹಿಂದೆ ದೊಡ್ಡ ಗ್ಯಾಂಗ್ ಇದೆ ಎನ್ನುವುದನ್ನು ಒತ್ತಿ ಹೇಳಬೇಕಾದ ಅಗತ್ಯವಿಲ್ಲಾ ಇಂತವರನ್ನೇ ಕಂಡು ಬ್ಲಾಕ್ ಮೇಲ್ ದಂಧೆ ಮಾಡುವ ಗ್ಯಾಂಗ್ ಇದಾಗಿದೆ . ಒಂದಷ್ಟು ಹಣಕ್ಕೆ ಬೇಡಿಕೆ ಇಟ್ಟು ಹನಿಟ್ರ್ಯಾಪ್ ಮೂಲಕ ತಮ್ಮ ಕಾರ್ಯ ಪೂರೈಸುತ್ತಿದ್ದ ಈ ಗ್ಯಾಂಗ್ ರಮೇಶ್ ಜಾರಕಿ ಹೊಳಿ ಯನ್ನು ತಮ್ಮ ಜೋಳಿಗೆಗೆ ಬೀಳಿಸಿಕೊಂಡಿತ್ತು ,ಈತನಲ್ಲಿ ಸಾಕಷ್ಟು ಹಣ ಇರಬ ಹುದೆಂದು ನೂರು ಕೋಟಿಗೂ ಅಧಿಕ ಮೊತ್ತದ ಬೇಡಿಕೆ ಇಟ್ಟಿದ್ದರು ಸರ್ಕಾರವನ್ನು ಬೀಳಿಸಿ ಕೆಲವು ಶಾಸಕರನ್ನು ಸೆಳೆದಿದ್ದು ,ಇವರಲ್ಲಿ ಸಂಪತ್ತು ಹೇರಳ ವಾಗಿ ಸಿಗಬಹುದು ಎಂಬ ಆಲೋಚನೆಯಿಂದ ಬ್ಲಾಕ್ಮೇಲ್ ಮಾಡಲಾಗಿತ್ತೆಂಬ ವಿಚಾರ ಒಂದು ಆಂಗಲ್ ಹೇಳುತ್ತಿದೆ ಅಷ್ಟು ದೊಡ್ಡ ಮೊತ್ತ ಈಡೇರಿಸುವಲ್ಲಿ ಅಶಕ್ತರಾದಾಗ ವಿಡಿಯೋ ರೆಲೀಸ್ಜ್ ಮಾಡಲಾಗಿದೆ ಎಂಬ ಮಾತು ಇದೆ . .ರಮೇಶ ಜಾರಕಿಹೊಳಿ ಅಭಿಪ್ರಾಯವೂ ಸೇರಿದಂತೆ ರಮೇಶ ಜಾರಕಿಹೊಳಿ ರಾಜಕಾರಣವನು ತಟಸ್ಥ ಗೊಳಿಸಲು ಹಾಗೂ ಈ ಹಿಂದೆ ಸಮಿಶ್ರ ಸರ್ಕಾರವನ್ನು ಕೆಡುವವಲ್ಲಿ ಕಾರಾಣೀಕರ್ತ ರಾಗಿದ್ದ ಅದರ ಮೇಲಿನ ಸಿಟ್ಟಿನಿಂದ ಈ ರೀತಿಯಲ್ಲಿ ಖೆಡ್ಡಾಕ್ಕೆ ಉರುಳಿಸಲಾಯಿತೇ ಎಂದು ಹೇಳಲಾಗುತ್ತಿದೆ . ಒಂದು ಹಂತದಲ್ಲಿ ಜಾರಕಿಹೊಳಿ ಇಮೇಜ್ ಡ್ಯಾಮೇಜ್ ಮಾಡಲು ಈ ಕ್ರತ್ಯ ವನ್ನು ಮಾಡಲಾಗಿತ್ತೆಯಾದರೂ , ವಿಡಿಯೋದಲ್ಲಿ ಇರುವ ವ್ಯಕ್ತಿ ಮಾತ್ರ ಜಾರಕಿಹೊಳಿ ಎಂದು ನಂಬಲೇ ಬೇಕಾಗಿದೆ .ಇದು ಸತ್ಯ !ಇದನ್ನು ಅವರು ಒಪ್ಪಿಕ್ಕೊಳ್ಳುತ್ತಿಲ್ಲ!!
ಮಹಾನಾಯಕ ಡಿಕೆಶಿ ?
ಪ್ರಕರಣದ ಹಿಂದೆ ಮಹಾನಾಯಕ ನಿದ್ದಾನೆ ಎಂದು ನೇರವಾಗಿ ಹೇಳುತ್ತಿದ್ದ ಜಾರಕಿಹೊಳಿ ಅಂತೂ ಕೊನೆಗೂ ಮೊನ್ನೆ ಮೊನ್ನೆ ರಿವೀಲ್ ಮಾಡಿದ್ದರು ಅದು ಡಿಕೆ ಶಿವಕುಮಾರ್ ಎಂದು . ಇದಕ್ಕೆ ಪುಷ್ಟಿ ನೀಡುವಂತೆ ಯುವತಿಯ ಜೊತೆ ಅವಳ ಸಹೋದರ ಮಾತಾಡಿದ ಕಾಲ್ ರೆಕಾರ್ಡ್ ಕೂಡಾ ಪುರಾವೆಯನ್ನು ಒದಗಿಸಿತ್ತು ಇನ್ನು ಸೋಷಿಯಲ್ ಮೀಡಿಯಾದಲ್ಲಿ ಡಿಕೆಶಿ ಜೊತೆಗೆ ಸಿಡಿಯಲ್ಲಿರುವ ಯುವತಿ ಹಾಗೂ ಅದಕ್ಕೆ ಸಹಕರಿಸಿದರೆಂದು ಕೇಳಿ ಬರುತ್ತಿರುವ ಇಬ್ಬರು ಫೋಟೋ ಗಳು ಹರಿದಾಡುತ್ತಿತ್ತು . ಯುವತಿಯ ಪೋಷಕರು ನೇರವಾಗಿ ಆರೋಪವನ್ನು ಮಾಡುತ್ತಿದ್ದಾರೆ ಮಗಳನ್ನು ಡಿಕೆಶಿ ತನ್ನ ರಾಜಕೀಯ ತೆವಲಿಗೋಸ್ಕರ ಬಳಸುತ್ತಿದ್ದಾರೆ ಎಂದು ಇದನ್ನೆಲ್ಲಾವನ್ನು ಗಮನಿಸಿದರೆ ಎಲ್ಲೋ ಡಿಕೆಶಿ ಹಸ್ತಕ್ಷೇಪ ಇರಬಹುದೇ ಎಂಬ ಅನುಮಾನ ಕಾಡುತ್ತಿದೆ.
ಗೊಂದಲ ಎಬ್ಬಿಸುತ್ತಿರುವ ಯುವತಿಯ ಹೇಳಿಕೆ : ವಿಡಿಯೋ ರಿಲೀಜ್ ಕಂಡು ಒಂದಷ್ಟು ದಿನಗಳ ಕಾಲ ಮೌನ ವಾಗಿದ್ದ ಯುವತಿ ಇತ್ತೀಚಿಗೆ ವಿಡಿಯೋಗಳ ಮೂಲಕ ಗೊಂದಲದ ಹೇಳಿಕೆಯನ್ನು ನೀಡಲಾರಂಭಿಸಿದ್ದಾಳೆ ಮೊದಲಿಗೆ ತಮ್ಮ ಕುಟುಂಬದವರೆಗೆ ಜೊತೆ ಫೋನ್ ಸಂಭಾಷಣೆಯಲ್ಲಿ ಇದೆಲ್ಲಾ ಫೇಕು,ನಾನು ಅಂತವಳಲ್ಲ ಗ್ರಾಫಿಕ್ಸ್ ಮೂಲಕ ಸೃಷ್ಟಿಸಲಾಗಿದೆ ಎಂದೆಲ್ಲಾ ಉಸಿರಿದ್ದಳು . ರಮೇಶ್ ಜಾರಕಿಹೊಳಿ ನನಗೆ ಸರ್ಕಾರಿ ಕೆಲಸ ನೀಡುತ್ತೇನೆಂದು ಎಂದು ಅತ್ಯಾಚಾರ ಮಾಡಿದ್ದಾರೆ ಎಂದು ನಂತರ ಹೇಳಿಕೆ ಕೊಡುತ್ತಾಳೆ . ಮೇಲ್ನೋಟಕ್ಕೆ ವಿಡಿಯೋ ಈತ ಳಿಂದಲೇ ರೆಕಾರ್ಡ್ ಆಗಿದ್ದರೂ , ರಮೇಶ್ ಜಾರಕಿ ಹೋಳಿ ನೇ ವಿಡಿಯೋ ಮಾಡಿದ್ದಾರೆ ಎಂದು ಹೇಳುತ್ತಿದ್ದಾಳೆ . ನಾನು ಈಗ ನನ್ನ ಸ್ನೇಹಿತ ನ ಜೊತೆ ಡಿಕೆಶಿ ಮನೆಯಲ್ಲಿ ಇದ್ದೇನೆ ಗೋವಾಕ್ಕೆ ಹೋಗ್ತಾ ಇದ್ದೇವೆ ಎಂದು ತನ್ನ ಸಹೋದರನಿಗೆ ಕರೆ ಮಾಡಿದಾಗ ಹೇಳುತ್ತಾಳೆ . ಒಟ್ಟಾರೆ ಗೊಂದಲದ ಹೇಳಿಕೆಗಳ ಮಧ್ಯೆ ಇದೀಗ ಜಗದೀಶ್ ಎನ್ನುವ ಲಾಯರ್ ನ್ನು ಗೊತ್ತು ಮಾಡಿ ,ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾಳೆ ., ಎಸ್ ಐಟಿ ಪ್ರಶ್ನೆ ಕೇಳುತ್ತಿದೆ ಅವರಿಗೆ ತೃಪ್ತಿದಾಯಿಕ ವಾದ ಉತ್ತರ ಕೊಡುತ್ತಿಲ್ಲ ಎಂಬ ಆರೋಪ ವಿದೆ . ಇನ್ನೂ ಯುವತಿಯ ಪೋಷಕರು ಮಾಡುವ ಆರೋಪ ದಲ್ಲಿ ಹುರುಳಿಲ್ಲ ಜಾರಕಿಹೊಳಿ ಅವರಲ್ಲಿ ಹೇಳಿಸುತ್ತಿದ್ದಾರೆ ,ದಿನೇಶ್ ಕಲ್ಲಹಳ್ಳಿ ಕೇಸನ್ನು ವಾಪಸು ಪಡೆಯಲು ಸಹಾ ಇವರೇ ಕಾರಣ ಎಂದೆಲ್ಲಾ ಯುವತಿಯ ಟೀಮ್ ಹೇಳುತ್ತಿದೆ ., ಒಟ್ಟಾರೆ ತಿಂಗಳು ಕಳೆಯುತ್ತಾ ಬಂದರೂ , ತಾರ್ಕಿಕ ಅಂತ್ಯ ಕಾಣುತ್ತಿಲ್ಲ ಮೀಡಿಯಾಗಳಿಗೆ ಒಳ್ಳೆಯ ವಸ್ತು ಸಿಕ್ಕಿದೆ . ಹಲವರು ಅಡಿ-ಗಡಿಗೆ ಕೇಳಿ ,ಕೇಳಿ ಕಿರಿ -ಕಿರಿಯಲ್ಲಿ ರೋಸಿ ಹೋಗಿದ್ದಾರೆ . ಹೈಡ್ರಾಮಾಗೆ ಯಾವಾಗ ಫುಲ್ ಸ್ಟಾಪ್ ಸಿಗತ್ತೋ ಕಾದು ನೋಡಬೇಕಾಗಿದೆ .
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ