ಸ್ಟೈಲ್ ಬ್ಯಾಡ ಮರಿ ವಿದ್ಯಾಭ್ಯಾಸ ಒಂದೇ ನಿನ್ನ ಗುರಿ ...
ಇದು ಇತ್ತೀಚಿಗೆ ನಡೆದ ಘಟನೆ ,exam ಮುಗಿಸಿ ನಾನು ಮತ್ತು ಸ್ನೇಹಿತ ಇನ್ನೇನು ಕಾಲೇಜ್ ಕ್ಯಾಂಪಸ್ ನಿಂದ ಬೀಳ್ಕೊಡಬೇಕು ಅನ್ನು ವಷ್ಟರಲ್ಲಿ ಎಲ್ಲಿಂದಲೋ ಬಂತು ಒಂದು ಅಪ್ಪಚಿ ಬೈಕ್ .ಭಯಂಕರ ಸ್ಪೀಡ್ ವೇಗದೊಂದಿಗೆ ಪ್ರೀತ್ಸೋದ್ ತಪ್ಪಾ film ನಲ್ಲಿ ರವಿಚಂದ್ರನ್ ಸ್ಟೈಲ್ ತರಹ ಒಂದೇ ಸಮನೆ ತಿರುಗಿಸಿ ಬಿಟ್ಟಿದ್ದ ಆ ಬೈಕ್ ನ ಮಹಾನುಭಾವ .. ಕಾಲೇಜ್ ಬಿಡುವ ಹೊತ್ತು ..ವಿಧ್ಯಾರ್ಥಿ -ವಿಧ್ಯಾರ್ಥಿನಿಯರಿಂದ ಕ್ಯಾಂಪಸ್ ಕಂಗೊಳಿಸುತ್ತಿತ್ತು .ಅದೇ ಸಮಯಕ್ಕೆ ಈ ಪರಿಂದ ಬಂದ ಈ ಬೈಕ್ನ ಕಾರುಬಾರು ನೋಡಿ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುವಂತೆ ಮಾಡಿತ್ತು.ಬೈಕನ ಪ್ರಾಣಿ ಬೇರೆಯಾರೂ ಆಗಿರದೆ ಅದೇ ಕಾಲೇಜ್ ನ 2nd year ನಮಗಿಂತ junior ಆಗಿದ್ದ . ಯಾಕೋ ಏನೋ ಒಂದಷ್ಟು ಸ್ಟೈಲ್ ಮಾಡುವ ಆಲೋಚನೆಯೋ ಅಥವಾ ಒಂದ್ಚೂರು ಕಣ್ಣ ತಂಪು ಮಾಡುವ ಬಯಕೆಯೋ ಗೊತ್ತಿಲ್ಲ. ಆತನಿಗೆ ಆ ದಿನ ಕ್ಲಾಸ್ ಇಲ್ಲದಿದ್ದರೂ ಟಿಪ್-ಟಾಪ್ ಆಗಿ ಸ್ಟೆಪ್ ಜಾರಿದ್ದು ಮಾತ್ರ ಬಹಳ ಬೇಸರ ತರಿಸಿತ್ತು .ಕಣ್ಣು ಮುಚ್ಚಿ ತೆರೆಯುದರೊಳಗೆ ಆದ ಅ ಘಟನೆ ಯನ್ನು ನೋಡಲು ಗುಂಪೇ ಒಂದಾಗಿತ್ತು .ಕಡಕ್ಕಾಗಿ style ಮಾಡಲು ಹೋಗಿ ಸಕತ್ತಾಗಿ fail ಆಗಿದ್ದವನ ಚೀರಾಟ ಮುಗಿಲು ಮುಟ್ಟಿತ್ತು."ನಾವು ಒಂದ್ಚೂರು ನೋಡ್ಕೊಂಡು ಬರೋಣ"ಅಂದ್ರೆ ಸ್ನೇಹಿತ, "ಬೇಡ ಮಾರಾಯ ಊರಿಗಿಲ್ಲದ ಉಸಾಬರಿ ನಮಗ್ಯಾಕೆ ಅವನದ್ ಯಾವಾಗಲೂ ಹೀಗೆ ಸಾವಿರ ಸಲ ಸ್ಟಂಟ್ ಮಾಡುದೆ ಆಯಿತು ..ಬೇಗ ಮನೆಗೆ ಹೋಗುವಾ ನಾಳೆ ಪ್ರಿಂಟ್ ಮೇಡಿಯ ಎಕ್ಷಮ್ ಉಂಟು ನಡೆ " ಎಂದ ....
- shivu
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ