ಮೋಜು ನೀಡಿ ಮಸಣದ ಹಾದಿಯನ್ನು ತೋರಿಸುವ ವಿಷ .......
ಮೊನ್ನೆ ಉಡುಪಿ ಚಿತ್ತರಂಜನ್ ಸರ್ಕಲ್ ಸಮೀಪದ ಒಂದಷ್ಟು ಜನರ ಗುಂಪನ್ನು ನೋಡಿ ದಂಗಾಗಿದ್ದೆ .ಏನು ಸಮಾಚಾರ ನೋಡೋಣ ಅಂತ ಸ್ನೇಹಿತನ ಜೊತೆ ಅತ್ತ ಕಡೆ ಗಾಬರಿ ಇಂದ ಧಾವಿಸಿದೆ..ಲಗು -ಬಗೆ ಇಂದ ನೋಡಿದರೆ ಅಂತ ತಲೆ ಹೋಗುವ ವಿಷಯವಾಗಿರಲಿಲ್ಲ ಇತ್ತು .ಕೆಲವರು ಒಳ್ಳೆ ಮಜಾ ತಗೊಳ್ತಾ ಇದ್ದರೆ ,ಕೆಲವರು ತಮ್ಮ ಮೊಬೈಲ್ ಹಿಡ್ಕೊಂಡು ಫೋಟೋ ,ವೀಡಿಯೋ ದರಲ್ಲಿ ಬ್ಯುಸಿ ಆಗಿದ್ದರು .ವಿಷ್ಯ ಇಷ್ಟೇ .ಕಂಠ ಪೂರ್ತಿ ಕುಡಿದು ಒಬ್ಬ ಕುಡುಕ ಪ್ರೇಮಿ , ಒಂದ್ಚೂರು ಡಾನ್ಸ್ ,ಒಂಚೂರು ಅಹಿತಕರ ಮಾತು ,ಮುಂದಡಿ ಇಡಲಾರದ ಪರಿಸ್ತಿ ಯಲ್ಲಿ ಬೈಕ್ ಸವಾರ ರನ್ನು ಅಡ್ಡ ಗಟ್ಟಿ ,'ನಾನು ಬರುತ್ತೇನೆ ನೆಡಿಲಿಕ್ಕೆ ಆಗ್ತಾಇಲ್ಲ ಒಂದು ಸ್ವಲ್ಪ ಹಾಕಿದ್ದು ಜಾಸ್ತಿ ಆಯಿತು .ನಂಗೆ ಒಂದು ಚೂರ್ ಡ್ರಾಪ್ ಮಾಡಿ' ಅಂತ ಅವರು ಗಳನ್ನು ಹಿಂಬಾಲಿಸುತ್ತಿದ್ದ ರೀತಿ ಬಹಳ ಶೋಚನೀಯ ವಾಗಿತ್ತು ಮತ್ತು ಬಹಳ ಹಾಸ್ಯ ಭರಿತ ವಾಗಿತ್ತು .ಪುಕ್ಸತೆ ಮನೋರಂಜನೆ ಯನ್ನು ವಿಕ್ಷಿಸುತ್ತಿದ್ದ ಕೆಲ ಅಲ್ಲಿದ್ದ ಜನರಿಗೆ ಅರಿವಾಗಿರಬಹುದು ..ಅವನೆಷ್ಟೇ ದೊಡ್ಡ ವ್ಯೆಕ್ತಿ ಯಾಗಿದ್ದರೂ /ಗೌರವ ಸ್ಥಾನ ದಲ್ಲಿದ್ದರೂ ,ಲಿಮಿಟ್ ಗಿಂತ ಸ್ವಲ್ಪ ಜಾಸ್ತಿ ಯಾದರೆ ಸಾರಾಯಿ ಎನ್ನುವ ಉದ್ದೀಪನ ದ್ರವ್ಯ ಎಂತವರನ್ನು ಸಹಾ ಒಂದ್ಚೂರು ಅಲ್ಲಾಡಿಸಿ ಚಿಕ್ಕವ ನನ್ನಾಗಿ ಬಿಡುತ್ತದೆ .ಎಂಥ ಗ್ರೇಟ್ ಅಲ್ವೇ ಸಾರಾಯಿ ? ಹ್ಯಾಂಡ್ ಸಪ್ ಯೂ ....!ಇದನ್ನು ಕಂಡು ಹಿಡಿದ ಪುಣ್ಯತ್ಮನಿಗೆ ಪಾದ ಪೂಜೆ ಮಾಡಲೇಬೇಕು ..ಹೌದು ಪ್ರಸ್ತುತ ಸಮಾಜದಲ್ಲಿ ಅಬಲ ರಿಂದ ವ್ರದ್ದರವರೆಗೂ ,ಅವಲಂಬಿಸಿರುವ ಈ ಜೀಜ್ ಇವತ್ತು ನಿನ್ನೆಯದ್ದಲ್ಲ ..ಇದರ ಇತಿಹಾಸ ಪ್ರಾಚೀನ ವಾದದ್ದು .ಪುರಾಣಗಳಲ್ಲೂ ಮತ್ತೇರಿಸುವ ಮಧ್ಯ ಇತ್ತು ಎಂದು ನಾವು ಗಳು ಕೇಳಿ ತಿಳಿದಿದ್ದೇವೆ .ಶ್ರೀಮಂತರು ಮೋಜಿಗಾಗಿ ಮಧ್ಯಪಾನ ಮಾಡಿದರೆ ,ಬಡಜನರು ತಮ್ಮ ಆಯಾಸ ವನ್ನು ತೀರಿಸಿ ಕೊಳ್ಳಲು,ಮನದ ಬೇಗೆಯನ್ನು ಮರೆಸಿ ಕೊಳ್ಳಲು ,ಇದರ ಮೊರೆ ಹೋದರೆ ,ಇನ್ನು ಕೆಲವರು ಖುಷಿಗಾಗಿ ,ದುಖಕ್ಕಾಗಿ ,ಇದನ್ನು ಅಳವಡಿಸಿಕೊಂಡರೆ ,ಪ್ರೇಮಿ ಗಳಂತೂ 'ಸಾರಾಯಿ ಸಿಸೆಯಲಿ ನನ್ನ ದೇವತೆ ಕಾಣುವಳು ' ಅಂತ ಮಧ್ಯದ ದಾಸರಾಗುತ್ತಾರೆ ..ಮೊದ-ಮೊದಲು ಎಲ್ಲೊಸ್ನೇಹಿತನ ಜೊತೆ ಸೇರಿ ಒಂದು ತುಟುಕು-ಗುಟುಕು ಎಂದು ಟೇಸ್ಟ್ ನೋಡುವ ಮಂದಿ ಕೊನೆಗೆ ೩೦-೬೦ ಆಗಿ ಬಾಟಲಿ ಗಟ್ಟಲೆ ಹೀರುತ್ತಾ ,ಹೀಗೆ ಬೀದಿ ಬದಿಯಲ್ಲಿ ,ಶೋಗೆ ಆಹಾರ ವಾಗುತ್ತಾರೆ.ಮರ್ಯಾದಸ್ಥ ಕುಟುಂಬದವರು ಇಂಥವರುಗಳು ಒಬ್ಬ -ಒಬ್ಬರು ಮನೆಯಲ್ಲಿದ್ರೆ ಇವರ ಕಪಿ ಚೇಷ್ಟೆ ಯಲ್ಲಿ ತಲೆ ಎತ್ತಲಾರದ ಪರಿಸ್ತಿತಿ ಒಂದೆಡೆಯಾದರೆ ,ಮನೆಯ ಯಜಮಾನ ನೆ ಈ ಕುಡುಕ ಸಹವಾಸಕ್ಕೆ ಬಿದ್ದರೆ ,ಹೆಂಡತಿ ಮಕ್ಕಳು ಗೆ ಉಪವಾಸವೇ ಗತಿ ಯಾಗುತ್ತದೆ .ಒಟ್ಟಾರೆಯಾಗಿ ಕುಟುಂಬದಲ್ಲಿ ಕೋಲಾಹಲವನ್ನೇ ಸ್ರಷ್ಟಿ ಮಾಡಿ ಬಿಡುತ್ತದೆ ..ಜಗಳ -ಗಲಾಟೆ -ಹೊಡೆ ದಾಟಕ್ಕು ಸೈ ಎನ್ನುವಷ್ಟು ಬಲಾಡ್ಯತನವನ್ನು ಹೊಂದಿದೆ .ಸಮಾಜದ ಮಹಾ ಪಿಡುಗು ಗಳಲ್ಲಿ ,ಮಧ್ಯಪಾನ ಮುಂಚೂಣಿ ಯಲ್ಲಿದೆ .ಅದೆಷ್ಟೋ ಕುಟುಂಬ ಗಳು ಬೀದಿಗೆ ಬಿದ್ದಿದೆ .ಸ್ವಾತಂತ್ರ್ಯ ನಂತರ ಹಲವು ರಾಜ್ಯಗಳಲ್ಲಿ ಮದ್ಯಪಾನ ನಿಷೇಧ ಜಾರಿಗೆ ಬಂದರೂ ,ಕುಡಿಯುವವರ ಸಂಖ್ಯೆ ಕಡಿಮೆಯಾಗಲಿಲ್ಲ .ಮಧ್ಯ ಮಾರಾಟದ ಬಗ್ಗೆ ವಿವಿದ ಮಹಿಳ ಸಂಘಟನೆ ಗಳು ಸೇರಿದಂತೆ ಇತರ ಸಂಘ -ಸಂಸ್ಥೆ ಗಳು ಹೋರಾಟ ನಡೆಸಿದರೂ ,ನೀರಿನ ಮೇಲೆ ಹೋಮ ಮಾಡಿದಂತೆ ಆಗಿದೆ .ಇತ್ತೀಚಿಗೆ ರಾಜ್ಯ ಸರ್ಕಾರ “ಮಧ್ಯ ನಿಷೇಧ” ಎನ್ನುವ ಕಾನೂನನ್ನು ಜಾರಿಗೆ ತಂದಿತು .ಮೊದಲೇ ,ಚೂರು -ಪಾರು ಕಡಿಮೆ ಕ್ರೆಯದಲ್ಲಿ ಕುಡಿಯುತ್ತಿದ್ದ ಬಡವರು ಈಗ ಹೆಚ್ಚು ಬೆಲೆಯ ಮಧ್ಯವನ್ನು ಕುಡಿಯುವಂತೆ ಮಾಡಿತು .ದಿನ ನಿತ್ಯ ದುಡಿದು ಸಂಪಾದಿಸಿದ ಹಣ ಈಗ ಹೆಚ್ಚು ಬೆಲೆ ಮಧ್ಯಕ್ಕೆ ಖರ್ಚಾಗುತ್ತಿದೆ . ಕುಡಿಯುವ ಮನಸ್ಸು ಹೇಗಾದರೂ ಕುಡಿದೆ ಕುಡಿಯುತ್ತಾನೆ ..ಅದೆಷ್ಟು ದೊಡ್ದದರೂ ,ಸಿಗುವ ಸಾರಾಯಿ ಯನ್ನು ಕುಡಿಯದೆ ಇರಲಾರ .."ಹುಟ್ಟು ಗುಣ ಸುಟ್ಟರೂ ಹೋಗುದಿಲ್ಲ "ಅಂತಾರಲ್ಲ ಹಾಗೆ ನಮ್ಮ ರಾಜ್ಯ ಸರ್ಕಾರದ ಈ ದಿವ್ಯ ಚಿಂತನ ಶಕ್ತಿ ಗೆ (!) ತಲೆದೂಗಲೇ ಬೇಕು .ಈ” ಮಧ್ಯನಿಷೇಧ” ದಿಂದ ಕಳ್ಳಬಟ್ಟಿ ದಂದೆಗೆ ಹಾದಿ ಸುಗಮವಾಗಿದೆ .ಎಷ್ಟೇ ಕಾನೂನನ್ನು ತಂದರೂ ಅದು ನಡಿತಾನೆ ಇರತ್ತದೆ ..ಈ ಕುಡುಕ ಚಟಕ್ಕೆ ಪುರುಷ ಮಾತ್ರ ವಲ್ಲದೆ ಮಹಿಳೆಯರು ಬಲಿಯಗುತ್ತಿರುದನ್ನು ನಾವು ಕಾಣಬಹುದು .ಪುರುಷರಿಗಿಂತ ನಾವೇನು ಕಮ್ಮಿ ಇಲ್ಲ ಎಂಬ ಮಹಿಳೆಯರೂ ನಮ್ಮಲ್ಲಿದ್ದಾರೆ .ಇದು ನಿತ್ಯ ಸತ್ಯ ಯುಗುದ ಜೋಗುಳ ಸರ್ಕಾರ ಹೀಗೆ ನಿಷೇಧ ಹೆರುದಕ್ಕಿಂತ ತಯಾರಿಕೆ ಯನ್ನು ಸಂಪೂರ್ಣ ವಾಗಿ ನಿಲ್ಲಿಸಿದರೆ ಒಂದಷ್ಟು ಇದರಿಂದ ಸಮಾಜದಲ್ಲಿ ನಡೆಯುತ್ತಿರುವ ಅಪಘಾತ ,ಅತ್ಯಾಚಾರ ,ರೋಗ ,ಬೈಗುಳ ,ಜಗಳ ,ಗಲಾಟೆ ,ಹೊಡೆದಾಟ ಕ್ಕೆ ಕಡಿವಾಣ ಬೀಳ ಬಹುದು .ಎಷ್ಟೋ ಬಡ ಕುಟುಂಬ ಉದ್ದಾರವಾಗಬಹುದು ಅಲ್ಲವೇ ???
![]() |
| ಚಿತ್ರ ಕೃಪೆ :facebook |
ಕೊನೆಯದಾಗಿ ಒಂದು ಮಾತು ಮೋಜು ನೀಡಿ ಮಸಣದ ಹಾದಿಯನ್ನು ತೋರಿಸುವ ಹಣ ಕೊಟ್ಟು ಅಮೂಲ್ಯ ಜೀವ ವನ್ನು ಕಳೆದು ಕೊಳ್ಳುವ ಈ ಸಾರಾಯಿ ಎಂಬ ವಿಷ ನಮಗೆ ಬೇಕೇ ?
----- ಶಿವಕುಮಾರ್ ,ಹೊಸಂಗಡಿ
----- ಶಿವಕುಮಾರ್ ,ಹೊಸಂಗಡಿ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ