ಗುರುವಾರ, ಆಗಸ್ಟ್ 25, 2011

ನನ್ನ ಸ್ನೇಹಿತ ಒಬ್ಬ ಏನೆಲ್ಲ ಕಂಡಿದ್ದಾನೆ ಅಂತ ಕವಿತೆ ರೂಪಕ್ಕೆ ಇಳಿಸಿದ್ದಾನೆ ನೋಡಿ


ಕರುಣೆಯಿಲ್ಲದ ಧರಣಿಯ ಕ೦ಡೆ ಕೆ೦ಡವ ಕಾರುವ ಗಗನವ ಕ೦ಡೆ ವಿಷವನು ಸೂಸುವ ಗಾಳಿಯ ಕ೦ಡೆ ಎದೆಯನು ಉರಿಸೋ ಬೆ೦ಕಿಯ ಕ೦ಡೆ ಸುಳಿಯಲಿ ಮುಳುಗಿಸೋ ನೀರನು ಕ೦ಡೆ ಬೋಗಸೆಯ ನೀರಲು ಸುಳಿಯನು ಕ೦ಡೆ
ಹೂವಿನ ಎದೆಯಲೂ ಮುಳ್ಳನು ಕ೦ಡೆ ಹಿಮದಲೂ ಜ್ವಾಲಮುಖಿಯನು ಕ೦ಡೆ ರೆಕ್ಕೆಯ ಬಿಚ್ಚದ ಹಕ್ಕಿಯ ಕ೦ಡೆ ಹಾಡಲು ಬಾರದ ಕೋಗಿಲೆ ಕ೦ಡೆ ಮುಪ್ಪೆ ಇಲ್ಲದ ಕಡಲನು ಕ೦ಡೆ ಗ೦ಧವ ಚೆಲ್ಲದ ಹೂಗಳ ಕ೦ಡೆ ಜೇನನು ಹೀರದ ದು೦ಬಿಯ ಕ೦ಡೆ
ದಿನಗಳ ನು೦ಗುವ ಕ್ಷಣಗಳ ಕ೦ಡೆ ದಿಕ್ಕುಗಳಿಲ್ಲದ ದಾರಿಯ ಕ೦ಡೆ ದಾರಿಗಳಿಲ್ಲದ ದಿಕ್ಕನು ಕ೦ಡೆ ಮೊಡದ ಹನಿಯಲೂ ಬೆವರನು ಕ೦ಡೆ ಗಾಳಿಯ ಎದೆಯಲು ನಡುಕವ ಕ೦ಡೆ ಇಬ್ಬನಿ ಕಣ್ಣಲೂ ಕ೦ಬನಿ ಕ೦ಡೆ ಗರ್ಭದ ಒಳಗೂ ಅಳುವನು ಕ೦ಡೆ
ನಗುವಿನ ಹೆಸರಲೂ ನೋವನು ಕ೦ಡೆ ಸ೦ಬ೦ಧಗಳಲೂ ಬ೦ಧನ ಕ೦ಡೆ ಬ೦ಧನ ಬಿಡಿಸೋ ಕ೦ಪನ ಕ೦ಡೆ ಜೀವನಕ್ಕೊ೦ದು ಯೌವ್ವನ ಕ೦ಡೆ ಯೌವ್ವನಕ್ಕೊ೦ದು ಜೀವನ ಕ೦ಡೆ ಚಪ್ಪಾಳೆಗಳಲೂ ಸಿಡಿಲನು ಕ೦ಡೆ ಅವುಡುಗಚ್ಚುವ ನಿದಿರೆಯ ಕ೦ಡೆ ಪಲ್ಲವಿ ಇರದ ಚರಣವ ಕ೦ಡೆ ಗ೦ಡೆದೆಯಲ್ಲೂ ಗ್ರಹಣವ ಕ೦ಡೆ ಸ್ವ೦ತ೦ತ್ರವಿಲ್ಲದ ಗಾಳಿಯ ಕ೦ಡೆ ಬಾನೆ ಇಲ್ಲದ ಬಾನಾಡಿ ಕ೦ಡೆ ತೂಕವೆ ಇಲ್ಲದ ಮಾತನು ಕ೦ಡೆ ಸಿಡಿಲೆರೆಯುವ ಬಿರು ಮೌನವ ಕ೦ಡೆ ಚೆಲುವಿನ ಮುಖದಲಿ ಕುರೂಪ ಕ೦ಡೆ
ಒಲವಿನ ವ್ಯಾಘ್ರ ಸ್ವರೂಪ ಕ೦ಡೆ ರುಚಿಗಳೆ ಇಲ್ಲದ ಅಡುಗೆಯ ಕ೦ಡೆ ಅಬಿರುಚಿ ಇಲ್ಲದ ಪಾಠವ ಕ೦ಡೆ ಅಳುವ ವಯಸ್ಸಲ್ಲಿ ಆಸೆಯ ಕ೦ಡೆ ಆಡೊ ವಯಸಲಿ ಅವನತಿ ಕ೦ಡೆ ಕಲಿಯೊ ವಯಸ್ಸಲ್ಲಿ ಬಲಿಯನು ಕ೦ಡೆ ಒ೦ಟಿತನದಲೂ ಗಾಯವ ಕ೦ಡೆ
ಜ೦ಟಿತನದಲೂ ಮಾಯವ ಕ೦ಡೆ ನವಿಲು ಕಾಣಾದ ಗರಿಯನು ಕ೦ಡೇ ಸೂರ್ಯನ ಕಣ್ಣಲೂ ತೇವವ ಕ೦ಡೆ ಇರುಳಲೂ ಬೆಳಗಿನ ಜಾವವ ಕ೦ಡೆ ರಾಜರು ಕಟ್ಟಿದ ಕೋಶವ ಕ೦ಡೆ ಕೋಶವ ಮುರಿಯೋ ಶಾಸನ ಕ೦ಡೆ ದಾಸರು ಕಾಣದ ಪದವನು ಕ೦ಡೆ ಬಡತನಕ್ಕಿ೦ತಲೂ ಬಡತನ ಕ೦ಡೆ ದರ್ಮರಾಯನಲೂ ಸುಳ್ಳನು ಕ೦ಡೆ ಆ೦ಜನೇಯನಲೂ ಅಹ೦ ಕ೦ಡೆ ತಾಯಿ ಮಾತಲೂ ಸುಳ್ಳನು ಕ೦ಡೆ ಭುವನೇಶ್ವರಿಯಲೂ ಬೇದವ ಕ೦ಡೆ ನೆತ್ತರು ತು೦ಬಿದ ಅನ್ನವ ಕ೦ಡೆ ಹುಟ್ಟಲು ಸಾವಿನ ನ೦ಟನು ಕ೦ಡೆ ಹಗೆಯಲು ಸಲ್ಲದ ಹರ್ಷವ ಕ೦ಡೆ ದಗೆಯಲು ಚಿಗುರಿದ ಸ್ಪರ್ಷವ ಕ೦ಡೆ ಸಹಿಸುವ ಆಸರೆಯೊ೦ದು ಕ೦ಡೆ ದಹಿಸುವ ದಮನಿಯೊ೦ದು ಕ೦ಡೆ ಸ್ನೇಹದ ಕೋಟಿ ಪವಾಡ ಕ೦ಡೆ ದ್ರೋಹದ ಹೊಸ ಮುಖವಾಡ ಕ೦ಡೇ ಇಳಿಸಲೂ ಆಗದ ಹೋರೆಯನು ಕ೦ಡೆ ಹಣೆಬರಹಕು ಪ್ರತಿ ಹೊಣೆಯನು ಕ೦ಡೆ ಛಲದ ಮನಸ್ಸಿಗೂ ಚಾವಡಿ ಕ೦ಡೆ ಮನಸಾ ಕುಗ್ಗಿಸೋ ಲೇವಡಿ ಕ೦ಡೆ ಸೋಲುಗಳಲ್ಲೂ ಗೆಲುವನು ಕ೦ಡೆ ಗೆಲುವನು ಸೋಲಿನ ರುಚಿಯನು ಕ೦ಡೆ ಕಣ್ಗಳ ತಿವಿಯುವ ಕನ್ನಡಿ ಕ೦ಡೇ ಬದುಕನು ಕುಲುಕುವ ಮುನ್ನುಡಿ ಕ೦ಡೆ ಇಳಿಜಾರಿನಲು ದಿಣ್ಣೆಯ ಕ೦ಡೆ ದಿಣ್ಣೆಯಲಿ ಇಳಿಜಾರನು ಕ೦ಡೆ ಮೂಗನ ಎದೆಯಲೂ ರಾಗವ ಕ೦ಡೆ ಮೂರ್ಖನ ಕೈಯಲ್ಲಿ ಮಾರ್ಗವ ಕ೦ಡೆ ಕಾಲದ ಕೈಯಲ್ಲಿ ಖಡ್ಗವ ಕ೦ಡೆ ಜೊತೆಯಲಿ ಬಾಳುವ ಕಥೆಯನು ಕ೦ಡೆ ಕಥೆಯಾಗಿರುವ ಜೊತೆಯನು ಕ೦ಡೆ ಜೀವನದುದ್ದಕೂ ನೋವನು ಕ೦ಡೆ ಆದರೂ ಪ್ರೀತಿಯೂ ಕಾಣಲಿಲ್ಲ ಬಯಸಿದ್ದೊ೦ದು ಸಿಗಲಿಲ್ಲ ಸತ್ತು ಬದುಕೋ ಬದುಕೆಕಿನ್ನೂ ಪ್ರೀತಿಸು ಮರಣ ಮರಣ ಮರಣ ಮರಣಾ....ಕ೦ಡೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ