ಗುರುವಾರ, ಆಗಸ್ಟ್ 25, 2011

ಅಂತರಂಗದ ಅಳಲು

                                        ಇನ್ನೊಮ್ಮೆ ಹುಟ್ಟಿ ಬನ್ನಿ ಸರ್ .
ಪ್ರಾಥಮಿಕ ಶಾಲಾ ವಿದ್ಯಾಭ್ಯಾಸಕ್ಕೆ ಮಂಗಳ ಹಾಡಿ,ಹೈಸ್ಕೂಲ್ ಜೀವನದತ್ತ ಸಾಗುತಿರುವ ಎಲ್ಲರಂತೆ ನನಗೂ ಮೊದಲನೇ ದಿನವೇ ಬಹಳ ಭಯ ಉಂಟಾಗಿತ್ತು ,ಕಾರಣ ಅಲ್ಲಿರುವ ಕೆಲವು ವಿಧ್ಯಾರ್ಥಿಗಳು  "ಬಾಸ್ಕರ್ ಮಾಸ್ಟರ್ ಅಂದ್ರೆ ಬರಿ ಜೋರ್ ಒಂದ್ ಅಕ್ಷರವನ್ನೂ ಬೋರ್ಡ್ ಮೇಲೆ ಬರೆಯುದಿಲ್ಲ ..ಎಲ್ಲ ಅವರು ಪಟಪಟ ಅಂತ ಬಾಯಲ್ಲಿ ಹೇಳಿದ ಕೂಡಲೇ ಬರೆದು ಕೊಳ್ಳಬೇಕು,ಇಲ್ಲ ಅಂದ್ರೆ ಬೆನ್ನಿಗೆ ಹಾಳೆ ಕಟ್ತ್ಕೊಲ್ಲ್ಬೇಕು (ಅಡಿಕೆ ಮರದ ಹೂವಿನ ಹೊರ ಕವಚ ).ಬಹಳ ಕಷ್ಟ ವಾಗುತ್ತೆ ." ಹಾಗೆ-ಹೀಗೆ  ಅಂತ ಬಹಳ ಗೊಣಗುತಿದ್ದರು. ಮೊದಲೇ 'ಹಗ್ಗ ಕಂಡರೆ ಹೆದರುವವನ ಮೇಲೆ ಹವಸೆದಂತ' ಭಯದ ತಲ್ಲನದಲ್ಲಿದ್ದ ನನಗೆ ಅಂತೂ ಪ್ರಥಮ ಕ್ಲಾಸ್ ಸ್ಟಾರ್ಟ್ ಆಗಿತ್ತು ...ಅವರ ಹಾವ -ಬಾವ ,ನೀತಿ-ನಿಲುವನ್ನು ನೋಡಿದ್ದರೆ ಹೆದರಿಕೊಳ್ಳುವ ಮನೋಸ್ತಿತಿ ಒಂದೆಡೆಯಾದರೆ ,ಕುರ್ಚಿ ಯನ್ನು ,ಸೈಡ್ ಗೆಳೆದು ,ಟೇಬಲ್ ಮೇಲೆ ಕೂತು ಪಾಠ ಮಾಡುವ ಪರಿ ನಿಜಕ್ಕೂ ,ಬಹಳ ವಿಚಿತ್ರ -ವಿಸ್ಮಯ ..ನನ್ನ ಹೆದರಿಕೆಗೆ ಇಮ್ಮಡಿಯನ್ನು ತರಿಸುತಿತ್ತು  ಪಾಠದ ಮಧ್ಯ ಹಾಸ್ಯದ ಮಾತು ,ಕ್ಲಾಸಿಗೆ ವಿಶೇಷವಾದ ಮೆರಗನ್ನು ತರುತ್ತಾ ,ಒಂದಷ್ಟು ಪಾಠದ ಮೇಲೆ ಮನಸ್ಸನ್ನು ಕೇಂದ್ರಿಕರಿಸುವ ಸ್ಥಾಹಿಭಾವವನ್ನು ಕಾಣಬಹುದಿತ್ತು .
  ಪಾಠ ವನ್ನು ಮನ ಮುಟ್ಟುವಂತೆ - ವಾರಗಳವರೆಗೆ ಪ್ರವಚನವನ್ನು ಮಾಡುತಿದ್ದರು .ಬಿಡುವು ಇರುವ ಸಮದಲ್ಲೂ ,ವಿಶ್ರಾಂತಿ ಗೆ ಮೊರೆ ಹೋಗದೆ ,ಕ್ಲಾಸಿನಲ್ಲಿಯೇ ಕಾಲಕಳೆಯುತಿದ್ದರು ..ಪಟ್ಯ ಪುಸ್ತಕದ ಅಭ್ಯಾಸದಲ್ಲಿರುವ ಪ್ರಶೋನ್ತರವನ್ನು ,ಅವರು ಬಾಯಲ್ಲಿ ಹೇಳುತಿದದ್ನು ನಾವು ಬರೆದು ಕೊಳ್ಳ ಬೇಕಿತ್ತು. ಎಸ್ಟೆ ಕಠಿಣ ಶಬ್ದ ವಿದ್ದರೂ ಬೋರ್ಡ್ನ ಮೇಲೆ ಬರೆಯುದಗಲಿ ,ಸ್ಪೆಲ್ಲಿಂಗ್ ಹೇಳುದಾಗಲಿ ಮಾಡುತಿರಲಿಲ್ಲ.ಕಾರಣ ಎಲ್ಲರೂ  ಬರೆಯುವ ಛಾತಿ-ಆತ್ಮಬಲ ಶಕ್ತಿ ಯನ್ನು ಹೊಂದಬೇಕು ಯೆನ್ನುದೆ ಅವರ ಬಯಕೆ ಆಗಿತ್ತು .ಇಂಗ್ಲಿಷ್ ಎಂದರೆ ಕಬ್ಬಿಣದ ಕಡಲೆಯಂತಿದ್ದ ನನಗೆ ಕೇವಲ ಹೈಸ್ಕೂಲ್ ೩ರೆ ವರ್ಷದಲ್ಲಿ ಇಂಗ್ಲಿಷ್ ಅಂದ್ರೆ ಇಷ್ಟೇನಾ ಎಂಬಂತೆ ಭಾಸವಾಗಿತ್ತು ..ಹೈಸ್ಕೂಲ್ ಹೈಸ್ಹ್ಕೂಲ್ ಮೊದಲೆಯ ದಿನ ಸ್ನೇಹಿತ ಮಾತಿನಿಂದ ಬೆದರಿ ಬೆಂಡಾ ಗಿದ್ದ ನಾನೂ ,ಅವ್ರು ೧ದಿನ ಕ್ಲಾಸಿಗೆ ಬರದಇದ್ರೆ ತುಂಬ ಬೇಸರವನ್ನು ಉಂಟುಮಾಡುತಿತ್ತು.ಆದ್ರೆ ದಿನ ಮಾತ್ರ ನಮಗೆ ಬಹಳ ದುರದ್ರಸ್ತ ವೇನೋ ಎಂಬಂತೆ , ನವ್ವಾಗ SSLC ಕೊನೆಯ ಹಂತದಲ್ಲಿದ್ದೆವು ..ಎರಡು ಪಾಠ ಮಾತ್ರ ಬಾಕಿ ಇದ್ದಿತು ,ಬಹಳಷ್ಟು ವರ್ಷಗಳಿಂದ ಇದೆ ಕಾಲೇಜ್ ನಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದ ,ಇವರಿಗೆ ವರ್ಗಾವಣೆ ಎಂಬ ಬೂತ ಬಂದು ಕಾಡಿತ್ತು ..ಇದನ್ನು ಅವರಿಗೆ ಸೇರಿದಂತೆ ನಮಗೆಲ್ಲರಿಗೂ ಅರಗಿಸಿ ಕೊಳ್ಳಲಗದಿದ್ದರೂ,ಅನುಭವಿಸಲೇ ಬೇಕಿತ್ತು .ಯಾವಾಗಲೂ ನಗು -ನಗುತ್ತಲೇ ಇದ್ದ ಇವರ ಜೊತೆ ದಿನ ಇಡಿ ತರಗತಿ ಕನ್ನಿರಿಟ್ಟಿತು.ದೂರದ ಕಾರ್ಕಳಕ್ಕೆ ಹೋದರು..ತಿಂಗಳಾದರೂ ನಮ್ಮ ಕಣ್ಣಿರೂ ಬತ್ತಲೆ ಇಲ್ಲ ..ದೂರದಲ್ಲಿದ್ದರೂ ,ಒಮ್ಮೊಮ್ಮೆ ಬಿಡುವು ಮಾಡಿಕೊಂಡು ,ಕಾಲೇಜ್ ಬಂದು ನಮ್ಮೆಲ್ಲರ ಜೊತೆ ಅದೇ ಹುಮ್ಮಸ್ಸನ್ನು ತುಮ್ಬುತಿದ್ದರು ..ಹಾಗೆ ಒಂದು ದಿನ "ಮಕ್ಕಳೇ ನಿಮ್ಮ ಪ್ರೀತಿ -ವಿಶ್ವಾಸ ವನ್ನು ಮರಿಲಿಕ್ಕೆ ಆಗ್ತಾ ಇಲ್ಲ - ದಿನದಿಂದ ಬೈಕ್ ತಿಳಿಯದೆ ಇಟ್ಟ ಕಡೆ ತಿರುಗಿಸಿ ವಾಪಸು ಹೋಗುತ್ತ ಇದ್ದೆ ." ಎಂದು ಹೇಳಿ ಹೋಗಿದ್ದ ಅವರು ಮತ್ತೆ ಬರಲೇ ಇಲ್ಲ ..ನಮಗೂ ಎಕ್ಷಮ್ಸ ಮುಗಿದ್ದಿತು ..ನಾವ್ ಆಗ ೨ನೆ puc ಯಲ್ಲಿದ್ದೆವು ,ಬರ ಸಿಡಿಲಿನಂತೆ ಅದಿನ- ಕ್ಷಣ ಬಂದ ಸುದ್ದಿಯನ್ನ ಕೇಳಿ ಇಡಿ ಕಾಲೇಜ್ ಬೆಚ್ಚಿ ಬಿದ್ದಿತ್ತು ..ಭಾಸ್ಕರ್ ಮಾಸ್ಟರ್ ಹೃದಯಾಘಾತದಿಂದದೈವದಿನಾರದ್ರೆಂಬ ಸುದ್ದಿ ದಂಗು ಬಡಿಸಿತ್ತು .ಮನ ಬಹಳಸ್ಟು ಕಲಕಿತ್ತು ..ನನ್ನಂತೆ ಬಹಳ ವಿಧ್ಯಾರ್ಥಿಗಳ ಮನ ಪಟಲದಲ್ಲಿ ಅಚ್ಚಳಿಯದ ಹಚ್ಚೆಯಾಗಿ ಉಳಿದಿದ್ದಾರೆ ..ಇನ್ನೊಮ್ಮೆ ಹುಟ್ಟಿ ಬನ್ನಿ ಎಂದು ಆಶಿಸಬೇಕಷ್ಟೇ … 
                                                   - ಶಿವಕುಮಾರ್ ,ಹೊಸಂಗಡಿ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ