ಭಾನುವಾರ, ಸೆಪ್ಟೆಂಬರ್ 11, 2011

ಏನ್ ಜನರೋ ಯಾಕಿಂಗ್ ಆಡ್ತಾರೋ ...?(2006)

ಏನ್ ಜನರೋ ಯಾಕಿಂಗ್ ಆಡ್ತಾರೋ ...?
ಮೊನ್ನೆ ನಮ್ಮೂರಿನ ಸಮೀಪ ಯಕ್ಷಗಾನ ಬಯಲಾಟ ಇದ್ದಿತ್ತು .ಯಕ್ಷಗಾನ ಪ್ರಿಯನಾಗಿದ್ದ ನನಗೆ ದಿನ ಮಾತ್ರ ಯಕ್ಷಗಾನ ನೋದುದಕ್ಕೆ ಹೋಗಲು ಮನಸ್ಸೇ ಇರಲ್ಲಿಲ್ಲ .." ವರ್ಷದ ಕೊನೆಯ ಆಟ ಆಗುದು ನಮ್ಮೂರಿನಲ್ಲಿ ,ಅದು ಅಲ್ಲದೆ ಬಹಳ ಜನಪ್ರಿಯ ಅತಿಥಿ ಕಲಾವಿದರು ಆಗಮಿಸುತ್ತಾರೆ" ಎನ್ನುವ ನನ್ನ ಸ್ನೇಹಿತನ ಒತ್ತ್ಯದ ಮೇರೆಗೆ ಯಕ್ಷಗಾನ ನೋಡುದಕ್ಕೆ ನಾವೀಬ್ಬರು ಹೊರೆಟೆವು . ಬಹಳಷ್ಟು ಪ್ರೇಕ್ಷಕರ ನಡುವೆ ಎರಡು ಕುರ್ಚಿ ಖಾಲಿ ಇದ್ದಿತು . ನಾವೀಬ್ಬರು ಹೋಗಿ ಕುಳಿತು ಕೊಂಡೆವು ನನ್ನ ಎದುರಿನ ಸ್ವಲ್ಪ ದೂರದಲ್ಲಿ  ಒಂದು  ಕುರ್ಚಿ ಖಾಲಿ ಇದ್ದಿತು ಒಬಬ್ಬರಾದಿಯಾಗಿ ಬಂದು ನಿಮಿಷದಲ್ಲಿ ಜಾಗ ಖಾಲಿ ಮಾಡುತ್ತಿದ್ದರು .ಸಾದಾರಣ ನನ್ನ ಅಂದಾಜಿನ ಪ್ರಕಾರ ಗಂಟೆಗೆ ಸುಮಾರು ೨೫ ಕಿಂತ ಹೆಚ್ಚು ಮಂದಿ  ಅಲ್ಲಿ ಕುಳಿತು ಜಾಗ ಖಾಲಿ ಮಾಡಿದ್ದರು .ನನಗಂತೂ ಬಹಳ ವಿಚಿದ್ರವಾಗಿ ಕಾಣುತ್ತಿತ್ತು ..ತನಗೇನೂ  ಆಗಿಲ್ಲದಂತೆ ಬಹಳಷ್ಟು  ಕುತೂಹಲಭರಿತನಾಗಿ ಯಕ್ಷಗಾನವನ್ನು ನೋಡುತ್ತಿದ್ದ ಸ್ನೇಹಿತನ್ನು ಒಮ್ಮೆ ಎಚ್ಚರಿ ,ನನಗೆ ಉಂಟಾದ ಸಮಸ್ಸೆಯನ್ನು ಅವನಲ್ಲಿ ಪ್ರಸ್ತಾಪಿಸಿದಾಗ ,"ಕುಮಾರ ಸ್ವಾಮಿಯೇ ಎಷ್ಟು ಕಷ್ಟ ಪಟ್ಟರೂ ಕುರ್ಚಿ ಯನ್ನು ಗಟ್ಟಿಮಾಡಿಕೊಳ್ಳುದಕ್ಕೆ ಆಗ್ಲಿಲ್ಲ ಇನ್ನು ಇವರೆದ್ದೇನು ಮಹಾ ? ಸುಮ್ನೆ ಊರಿಗಿಲ್ಲದ ಉಸಾಬರಿ ನಿನಗ್ಯಾಕೆ ಸುಮ್ನೆ ಆಟ ನೋಡು ' ಎಂದು ವಂಗ್ಯ ಮಾಡಿದ.. ಸ್ವಲ್ಪ ಹೊತ್ತು ಬಿಟ್ಟು ಮತ್ತದೇ ಸರದಿಯನ್ನು ನೋಡಿದಾಗ ನನಗೆ ತಲೆ ಬಿಸಿ ಇಮ್ಮಡಿ ಆಯಿತು .ಇದರಲ್ಲಿ ಏನೋ ರಹಸ್ಯ ಇದೆ ಪತ್ತೆ ಹಚ್ಚ ಬೇಕು ಅಂತ ನಾನು ನನಗಿಂತ ೫ ಮೀ ದೂರದಲ್ಲಿರುವ ಆ ಕುರ್ಚಿ ಯಲ್ಲಿ ನಾನೇ ಹೋಗಿ ಕುಳಿತು ಕೊಂಡೆ .
ಅಂತೂ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತು. ಆ ಕುರ್ಚಿಯ ಪಕ್ಕದಲ್ಲಿ ಒಬ್ಬ ಪುಣ್ಯಾತ್ಮ  ಏನ್ ೭೨ ಮೊಬೈಲ್  ಹಿಡ್ಕೊಂಡು  ವಿಡಿಯೋ ಸೊಂಗನ್ನು ,ಅದರಲ್ಲಿ ಎಷ್ಟು ಸೌಂಡ್ ಇದೆಯೋ ಅಷ್ಟನ್ನು ಪ್ಲೇ ಮಾಡಿ ಯಕ್ಷಗಾನವನ್ನು ವನ್ನು ನೋಡುದು ಬಿಟ್ಟು ಅದನ್ನು ಕೇಳ್ತಾ ,ನೋಡ್ತಾ ,ಮಸ್ತ್ -ಮಜಾ ಮಾಡ್ತಾ ಇದ್ದ .,ಆದ್ರೆ ಅವನ ಪಕ್ಕದವರಿಗೆ ಸಕತ್  ತೊಂದರೆ ಆಗುತ್ತದೆ ಅವನಿಗೆ ಗೊತಿರಲಿಲ್ಲ ಇತ್ತು .ನಾನು ಹೋಗಿ "ಸ್ವಾಮಿ ಮೊಬೈಲ್ ನ ಬಂದ್ ಮಾಡಿ ಅಥವಾ ಸೌಂಡ್ ನ ಸ್ವಲ್ಪ ಕಮ್ಮಿ ಮಾಡಿ ಬೇರೆಯವರಿಗೆ ಉಪದ್ರವ ಆಗುತ್ತೆ "ಅಂದೆ."ನನ್ನ ಮೊಬೈಲ್ ,ಯಾರಿಗೂ ಇದರ ಬಗ್ಗೆ ಕೇಳಲು ಹಕ್ಕಿಲ್ಲ ,ನಾನು ಏನು ಬೇಕಾದ್ರು ಮಾಡಬಹುದು " ಎಂದು ರೌದ್ರ ಮುಖ ಭಾವದೊಂದಿಗೆ ನನ್ನ ಕಡೆಗೆ ತಿರುಗಿದಾಗ ಹಲವು ವರ್ಷಗಳ ಹಿಂದೆ ನೋಡಿದ ಚಿತ್ರದ್ದಲ್ಲಿ 'ವಜ್ರ ಮುನಿ 'ಯನ್ನೇ ನೋಡಿದ ಹಾಗೆ ಆಗಿತ್ತು .
'ಕತ್ತೆ ಎಂದಾದರೂ ನಿನ್ನನ್ನು ಒದ್ದರೆ ಮರಳಿ ನೀನ್ ಒದಯದಿರದಕೆ ಕತ್ತೆಯ ವದೆಯನ್ನು ಹಿಂತುರಿಗಿಸಿದರೆ ,ನೋವಿನ ಬಹುಪಾಲು ನಿನಗೆ ' ಎನ್ನುವ ಕವಿ ವಾಣಿ ಪಕ್ಕನೆ ನನ್ನ ಮನಸಿನ ಪುಟದಲ್ಲಿ ಹರಿದು ಬಂತು .ನನಲ್ಲಿಂದ ಕಾಲ್ಕಿತ್ತೆ .ಸುಮಾರು ಹೊತ್ತು ಕಳೆದ ನಂತರ ಆ ಕುರ್ಚಿ ಯಲ್ಲಿ ಒಬ್ಬ ಮಹಾನುಭಾವ ಬಂದು ಕುಳಿತು ಕೊಂಡರು ಮೊಬೈಲ್ ಮನುಷ್ಯ ಮತ್ತು ಅವರುಗಳ ನಡುವೆ ಮಾತಿನ ಚಕಮಕಿ ಜೋರಾಗಿ ನಡೆಯುತ್ತಿತ್ತು ,ನಾನಂತೂ ಬಹಳ ಕುತೂಹಲ ಭರಿತನಾಗಿ ನೋಡುತ್ತಾ ಕುಳಿತ್ತಿದ್ದೆ ,
ಯಕ್ಷಗಾನ ದಲ್ಲಿ ,ಅಸುರ -ದೇವತೆ ಗಳ ನಡುವೆ ಯುದ್ದ  ಪ್ರಾರಂಭ ವಗಿದ್ದೆ ತಡಾ, ಇವರುಗಳ ನಡುವೆ ಜಗಳ ತಾರಕಕ್ಕೇರಿತ್ತು ,ಯಕ್ಷಗಾನದಲ್ಲಿ ಆಸುರ ಅರು ಓಡಿ ಹೋದ ಹಾಗೆ ಇಲ್ಲಿ ಮೊಬೈಲ್ ಮನುಷ್ಯನೂ ಮಾಯವಾಗಿದ್ದ ...............!
                    -------    ಶಿವಕುಮಾರ್ ,ಹೊಸಂಗಡಿ 

ಶನಿವಾರ, ಸೆಪ್ಟೆಂಬರ್ 10, 2011

ಆರಕ್ಷಕರೇ.. ನರಭಕ್ಷಕರೇ .? 2005 ರಲ್ಲಿ ನಾ ಕಂಡ ಸತ್ಯ ಘಟನೆ


ಆರಕ್ಷಕರೇ... ನರಭಕ್ಷಕರೇ...?!
ಹೀಗೊಂದು ಮಾತು ಮನದ ಮೂಲೆಯಲ್ಲಿ ತಲ್ಲಣಿಸಿದರೂ ಆಧುನಿಕ ವಿದ್ಯಮಾನದಲ್ಲಿ ಪ್ರಚಲಿತ ಹಾದಿಯಲ್ಲಿ ಮಿನುಗುತ್ತಿರುದು ವಸ್ಥಾವರ್ಹ!
'ಜನಗಳ ಸೇವೆಯೇ ಜನಾರ್ಧನನ ಸೇವೆ ' ಎಂಬ ವೇದೊಕ್ತಿಯನ್ನು ಅನುಸರಿಸಿ ಹೊರಹೊಮ್ಮಿಸುವ ಹಿರಿಯ ಆರಕ್ಷಕ (ಪೋಲಿಸ್ ) ಅಧಿಕಾರಿಗಳ ಉದ್ದದ್ದ ಭಾಷಣ -ಸಾರಾಂಶದ ಒಂದೊಂದು ಎಳೆಗಳನ್ನು ಆಲಿಸಿದಾಗ ಒಮ್ಮೆ ತಲೆ ತೂಗಿಸುವಂತಗೂದು ಖಂಡಿತ .ಆದರೆ ಒಮ್ಮೊಮ್ಮೆ ಕೆಲ ಪೋಲಿಸ್ ಅಧಿಕಾರಿಗಳ ವರ್ತನೆಗಳನ್ನು ಗಮನಿಸಿದರೆ ರಾತ್ರಿ ಕನಸಿನಲ್ಲಿ ಪೊಲೀಸರು ಬಂದರೆ ಯಮ -ಧೂತರು ಬಂದಂತೆ ಎಂಬ ಪ್ರಾಚೀನರ ಪ್ರಾತ:ಕಾಲದ ನುದಿಮತ್ತು ಸಮಯದಲ್ಲಿ ಸೂಕ್ತಮತ್ತು ಸೂಕ್ಷ್ಮ ಯೆನಿಸುದರಲ್ಲಿ ಎರಡುಮಾತಿಲ್ಲ .
ಸಂಗ್ರಹ
 ಒಂದು ಬ್ರಹತ್ ಸಮಾವೇಶ ನಡೀತಾ ಇರುವ ತನ್ಮಧ್ಯೆ ಪ್ರತಿಭಟನೆ ,ಘರ್ಷಣೆಯೂ ಪ್ರಾರಂಭ ವಾಗುತ್ತದೆ ದೌರ್ಜನ್ಯ ಎಸಗಿ ಅಪರಾಧಿಗಳು ಪಾರಾಗಿ ತಮ್ಮ ಮನೆಯಲ್ಲಿ ನಿದ್ದರೆಗೆ ಜಾರಿದರೂ ಪೊಲೀಸರು ನಾಪತ್ತೆ ! ಅಂತೂ ಮೇಲಧಿಕಾರಿಗಳ ಒತ್ತಡಕ್ಕೆ ಮಣಿದು ಮೇಲಧಿಕಾರಿಗಳಿಗೆ ತಾವು ಮಾಡಿದ ಘನ ಸಾಹಸವನ್ನೂಅವರಿಗೆ ತೋರ್ಪಡಿಸುವ ಸಲುವಾಗಿ ಪಾಪ ಏನೂ ತಿಳಿಯದ ಸಮಾರಂಬಕ್ಕೆ ನೋಡಲು  ಬಂದ ಕೆಲ ಅಮಾಯಕ ನಿರಪರಾದಿಗಳು  ಇವರಗಳ ಕಾಳಗಕ್ಕೆ ಒಳಗಾಗುತ್ತಾರೆ .ಇದು ಸಿನಿಮ ಕತೆ ಅಲ್ಲ ..ಇಂಥ ಅದೆಷ್ಟೋ ಘಟನೆಗಳು ನಮ್ಮ ಸುತ್ತ -ಮುತ್ತಲೂ ಕಣ್ಣ ಮುಂದೆ ಹಾದು ಹೋಗುತ್ತಲೇ ಇರುತ್ತದೆ ..
ಇದಕ್ಕೊಂದು ನಾ ಕಂಡ ಸತ್ಯ ಘಟನೆ ಇಲ್ಲಿದೆ ನೋಡಿ , ಊರಿನ ಬಸ್ ಸ್ಟ್ಯಾಂಡ್  ಸ್ವಲ್ಪ ಮುಂದೆ ಒಂದು ಖಾಸಗಿ ಲಾರಿ ಹೋಗುತ್ತಾ ಇತ್ತು ,ಅಚಾನಕ್ಕಾಗಿ ಇಬ್ಬರು ವ್ಯಕ್ತಿ ಗಳು ಕೈ ನ್ನು ಲಾರಿಗೆ ಅಡ್ಡ ಹಿಡಿದರು ..ಇವರಿಗೆ ಡ್ರಾಪ್ ಕೊಟ್ಟರೆ ಬಸ್ ನವರಹತ್ತಿರ ಯಾಕೆ ಸುಮ್ನೆ ಬೈಸಿ ಕೊಳ್ಳುದು ಎಂದು ಆಲೋಚಿಸಿಸಿ ಲಾರಿಯನ್ನು ಅಲ್ಲಿ ನಿಲ್ಲಿಸದೆ ಮುಂದಕ್ಕೆ ಚಲಿಸಿಯೇ ಬಿಟ್ಟರು.ಕ್ಷಣ ಮಾತ್ರ ದಲ್ಲಿ ಪೋಲಿಸ್ ಜೀಪ್ ನಾ ಸೈರನ್ .. ತತ್ತಕ್ಷಣ ಲಾರಿಯನ್ನು ತಡೆಗಟ್ಟಿ - ಪೋಲಿಸ್  ಅಧಿಕಾರಿಗಳು ಹಿಂದೆ -ಮುಂದೆ ನೋಡದೆ ಎಳೆದು ಹಾಕಿ ಸಿಕ್ಕಿದ್ದೇ ಚಾನ್ಸು ಅಂತ ಹಿಗ್ಗಾ-ಮುಗ್ಗಾ ಬಾರಿಸಿದ್ದೆ,ಬಾರಿಸಿದ್ದು ಏನೂ ತಿಳಿಯದೆಅರಕ್ಷಸ (ಕ )ರ ಪೆಟ್ಟಿಗೆ ಒಳಗಾದವರ ರೋಧನ ಮುಗಿಲು ಮುಟ್ಟುತ್ತಿದ್ದು ಯಾರಿಗೆ ಆದರೂ ಕರಳು ಚೂರಕ್ ಎನ್ನದೆ ಇರಲಾರದು .
ಅಲ್ಲಿ ಅಡ್ಡ ಹಾಕಿದ್ದು ಪ್ರಾಯಶಃ ಪೊಲೀಸರೆ ಇರಬಹುದು ಎಂಬ ಮನವರಿಕೆ ಆಗ ಅದರೂ .ಮೊದಲೇ ಗೊತ್ತಿದ್ದರೆ ಅಲ್ಲಿ ಲಾರಿ ಯನ್ನು ನಿಲ್ಲಿಸುತ್ತಿದ್ದರೋ ಏನೋ ?!ಇದು ಒಂದು ಉದಾಹರಣೆ ಅಸ್ಟೆ..ಮೊನ್ನೆ-ಮೊನ್ನೆ ನಡೆದ ಬೆಳ್ತಂಗಡಿ ,ಬಜಪೆ,ಬೈಂದೂರ್  ಪ್ರಕರಣವನ್ನು ನೆನಪು ಮಾಡಿಕೊಳ್ಳಿ ..
ಪೋಲಿಸ್ ರೆಂದರೇನು ? ಹೇಗಿರಬೇಕು ?ಎಂಬ ಮನೋಭಾವನೆ ಪೋಲಿಸ್ ಇಲಾಖೆ ಯಲ್ಲಿರುವ ಕೆಲ ಪೋಲಿಸ್ ಮಹಾನುಭಾವರುಗಳಿಗೆ ಗೊತ್ತಿಲ್ಲ ದಿದ್ದರೂ ಅಟ್ ಲಿಸ್ಟ್ ಒಂದು ಡ್ರೆಸ್ (ಯುನಿಫಾರ್ಮ್ ) ಅನ್ನುದೂ ಸಹಾ ಇಲ್ಲವೇ ?ಡ್ರೆಸ್ ಇಲ್ಲದೆ ಕಾರ್ಯಾಚರಣೆ ಮಾಡುದು ಉಲ್ಲಂಘನೆ ಎಂದು ಗೊತ್ತಿದ್ದರೂ ಕಾನೂನು -ಕಾಇದೆ ಎಲ್ಲ ಸುಟ್ಟು-ಸುಡುಗಾಡು ಸೇರುತ್ತಿದೆ .. ಇಂಥಹ ಕೆಲ ಪೋಲಿಸ್ ಇಲಾಖೆ ಯಾ ಪಾಪದ ಕೂಪದ ಸರ್ವಾಧಿಕಾರ .ಸಾಮಂತಿಯ ಆಳ್ವಿಕೆ ಇಂದ ದಿನ ನಿತ್ಯ ಸಾವಿರಾರು ಅಮಾಯಕ ಮುಗ್ಧರ ವ್ಯಥೆಯ ಕಥೆ ವಿಚಿಧ್ರಕಾರಕವಾಗಿ ನಡೆಯುತ್ತಿದ್ದರೂ ,ಇದಕ್ಕೊಂದು ಕಠಿಣ ಕಾನೂನು ಇಲ್ಲದೆ ಇರುದು ಕಳವಳಕಾರಿ .ಇವರ ದಬ್ಬಾಳಿಕೆ ದೌರ್ಜನ್ಯತನದಿಂದ ಮುಗ್ಧ ಮನಸ್ಸಿಗರ ಭಾವನೆ -ಭಾವುಕತೆ ಯನ್ನು ಅರ್ಥೈಸಿಕೊಳ್ಳುವ್ವರು ಯಾರು ?
ಹಗಲು -ರಾತ್ರಿ ವಿಶ್ರಾಂತಿ ಇಲ್ಲದೆ ನಾಡಿನ ಹಿತ ಕಾಯುವವರೆಂದು ಪಟ್ಟ ಕೊಟ್ಟರೆ ಭಯೋತ್ಪಾದನೆ ಕೊಂಡಿಯಂತೆ ಸಮಾಜದ ಲ್ಲಿ ರೂಪುಗೊಳ್ಳುತ್ತಿರುವ ಕೆಲ ಆರಕ್ಷಕರಿಗೆ ನೀವೇನು ಹೇಳುತ್ತಿರಿ?

(ದಯವಿಟ್ಟು ಅನ್ಯಾತ  ಭಾವಿಸ ಬೇಡಿ  ಈ ಲೇಖನದ ಉದ್ದೇಶ ಕೇವಲ ಕೆಲ ಇಂಥ ಪೋಲಿಸ್ ಮಹಾನುಭಾವರುಗಳಿಗೆ ಮಾತ್ರ .ನಮ್ಮಲ್ಲಿ ಅದೆಸ್ಟೋ ಒಳ್ಳೆ -ಒಳ್ಳೆಯ ಪೋಲಿಸ್ ರು ಗಲಿದ್ದೂ ,ತಮ್ಮ ಪ್ರಾಣ ವನ್ನು ಮುಡುಪಾಗಿಟ್ಟು ಹೋರಾಡಿದ, ಸಮಾಜದಲ್ಲಿ ಶಾಂತಿ ,ಸೌಹಾರ್ದತೆ ಮತ್ತು ನಾಗರೀಕ ಸುರಕ್ಷತೆಗಾಗಿ ,ಹಗಲಿರುಳು ತಮ್ಮ ಪ್ರಾಣವನ್ನು ಪಣವಾಗಿಟ್ಟ ಧಿಮಂತ ಪೊಲೀಸರಿಗೆ  ಹೆಡ್ಸಾಫ್  ..)
                                                                                               ಎಸ್.ಕೆ .ಹೊಸಂಗಡಿ

ಗುರುವಾರ, ಸೆಪ್ಟೆಂಬರ್ 8, 2011

ಕ್ರೀಡಾ ಕಣಿ -ನಮ್ಮೂರ ಕಣ್ಮಣಿ -ಬಂಗಾರದ ರಾಣಿ :ಅಶ್ವಿನಿ

ಕ್ರೀಡಾ ಕಣಿ -ನಮ್ಮೂರ ಕಣ್ಮಣಿ -ಬಂಗಾರದ ರಾಣಿ :ಅಶ್ವಿನಿ
ಗ್ರಾಮೀಣ ಪ್ರತಿಬೆ ಗಳೇ ಹಾಗೆ ,ಕೈ ತುಂಬಾ ಕೆಲಸ ..ಮೈ ತುಂಬಾ ನಿದ್ರೆ ..ಕಷ್ಟ ದಿಂದ ಸುಖವನ್ನು ಕಾಣುವ ಮುಗ್ದ ಜೀವಿಗಳು .ಬಾಲ್ಯತನದಿಂದಲೇ ಕಷ್ಟ ವನ್ನು ಇಷ್ಟವಾನ್ನಗಿಸಿಕೊಂದವರು ಹಲವಾರು ಜನ .ಬೆಳಿಗ್ಗೆ ಗಂಟೆಗೆ ಶಾಲೆಯ ಚೀಲ ಬೆನ್ನಿಗಿದ್ದರೆ ,ಸಾಯಂಕಾಲ ಗಂಟೆ ನಂತರ ತೋಟದಲ್ಲಿ ,ಬುಟ್ಟಿ ತಲೆಯ ಮೇಲಿರುತ್ತದೆ .ಇದು ಹೆಚ್ಚಿನವರ ದಿನಚರಿ .ಇಂಥಹ ದಿನಗಳ ನಡುವೆಯೂ,ಮನಸ್ಸಿನಲ್ಲಿ ಒಂದೊಂದು ಕನಸು ಇದ್ದೆ ಇರುತದೆ .. ಕನಸು ನನಸೂ ಆಗಬಹುದೂ ,ಇಲ್ಲ ಕನಸು ಕನಸಾಗಿಯೇ ಇರಬಹುದು .ಎಲ್ಲ ಮಾನವ ಜೀವಿಗಳಿಗೆ ಒಂದೊಂದು ಬಯಕೆ ಇದ್ದೆ ಇರುತ್ತದೆ ಒಬ್ಬರುಓದುದರಲ್ಲಿ ಮುಂದೆ ಇದ್ದರೆ,ಇನ್ನೊಬ್ಬರು ಕ್ರೀಡೆಯಲ್ಲಿ ,ಮನೋರಂಜನೆಯಲ್ಲಿ,ಇನ್ನೂ ಮುಂತಾದ ..ವಿವಿಧ ಕಾರ್ಯದಲ್ಲಿ ಆಸಕ್ತಿ ಯನ್ನೂ ಹೊಂದಿರುತ್ತಾರೆ .ಅದೆಲ್ಲ ಅವರವರ ಬಾವಕ್ಕೆ -ಬಕುತಿಗೆ ಸಂಬಂದ ಪಟ್ಟ ವಿಚಾರ .ಇವತ್ತಿನ ಅಪರಿಚಿತ ಬಾಲಕ ಯಾ ಬಾಲಕಿ ನಾಡಿನ ಪ್ರಧಾನಿಯೂ ಆಗಬಹುದೂ ,ಇಲ್ಲವೇ ಒಸಮಾ-ಬಿನ್ -ಲಾಡೆನ್ನೂ ಆಗಬಹುದು ..ಅದು ಮುಂದಿನ ಭವಿಷ್ಯದಲ್ಲಿ ಏನಿದೆ ಎಂದು ತಕ್ಷಣ ತಿಳಿಯದಿದ್ದರೂ ಸುಧೀರ್ಘ ಸಮಯದ ನಂತರ ಮನವರಿಕೆ ಯಾಗುತ್ತದೆ .ಇದಕ್ಕೊಂದು ಉದಾಹರಣೆ ಅಂದರೆ ಉಡುಪಿ ಜಿಲ್ಲೆಯ ಸಿದ್ದಾಪುರದ ಅಶ್ವಿನಿ ಯಾನೆ ಅಶುವನ್ನು ತೆಗೆದು ಕೊಳ್ಳ ಬಹುದು ..ಸಿದ್ದಾಪುರ ಸಮೀಪದ ಅಕ್ಕುಂಜೆ ಯನ್ನುವ ಸಾದಾರಣ ಒಂದು ಪುಟ್ಟಹಳ್ಳಿಯಲಿ ಹುಟ್ಟಿ ಹತ್ತಿರದೆಲ್ಲೆಲ್ಲೂ ಕೆಳಿಸುವಂತಿಲ್ಲದ ಪ್ರದೇಶವನ್ನು ಇವಳು ಇಡೀ ವಿಶ್ವ ,ದೇಶಕ್ಕೆ ಹತ್ತಿರದಂದ ಕಾಣಿಸುವಂತೆ ಮಾಡಿದ್ದಾಳೆ
ಹೌದು ಇದು ಅಶ್ವಿನಿ ಗೆ ಬಂದ ಅದೃಷ್ಟ ವಲ್ಲ ..ಅವಳಲ್ಲಿರುವ ಪ್ರತಿಭೆ ಇಂದ ಕುಂದಾಪುರ ತಾಲೋಕಿನಸಿದ್ದಾಪುರ ಸಮೀಪದ ಜನ್ಸಾಲೆ ಇಂದ ಕೂಗಳತೆಯ ದೂರದಲ್ಲಿರುವ ಅಕ್ಕುಂಜೆಯ ಕೃಷಿಕರಾದ ಚಿದಾನಂದ ಶೆಟ್ಟಿ ,ಮತ್ತು ಯಶೋದ ಶೆಟ್ಟಿಯವರ ಹೆಮ್ಮೆಯ ಮಗಳಾದ ಇವಳು ಹೊಸಂಗಡಿಯ ಇಂಗ್ಲಿಷ್ ಮಾದ್ಯಮದ ಪ್ರಾಥಮಿಕ ಶಾಲಾ ಜೀವನದಿಂದಲೇ ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಯಾದ,ಛಾಪನ್ನು ಮೂಡಿಸಿದವಳು
,ವಲಯ ,ತಾಲೂಕು ,ಜಿಲ್ಲಾ,ರಾಜ್ಯ ಮಟ್ಟದಲ್ಲಿ ಚಿರತೆಯ ಓಟದಲ್ಲಿ ಸಕ್ರಿಯವದವಳು,ಜನಪ್ರಿಯದಉತ್ತುಂಗದಲ್ಲಿ ಪ್ರಶಸ್ತಿಯನ್ನು ಬಾಚಿ ಕೊಂದವಳು .ಮುಂದೆ ನಿನಗೆ ಉಜ್ವಲ ಭವಿಷ್ಯ ವಿದೆ ಎಂದು ಶಾಲಾ ಜೇವನದಲ್ಲಿ ಪೀಟಿ ಉಷಾ ಎಂದೇ ಪ್ರಶಂಷೆಗೆ ಪಾತ್ರಳದವಳು .. ಕಾಲೇಜ್ ಜೀವನಕ್ಕೆ ವಿದಾಯ ಹೇಳಿ ,ಊದ್ಯೋಗ ಜಗತ್ತಿನಲ್ಲಿ ತೇಲಿದರೂ,ತನ್ನಲ್ಲಿನ ಕ್ರೀಡಾ ಹುಮ್ಮಸ್ಸನ್ನು ಬದಿಗಿರಸಲಿಲ್ಲ.ಇದಕ್ಕೆ ತಂದೆ-ತಾಯಿ ,ಬಂಧು ಬಳಗದವರು ಬಹಳಷ್ಟು ಪ್ರೊಸ್ಥಾವವನ್ನು ಕೊಡುತ್ತಿದ್ದರು .ಕಷ್ಟ -ಪಟ್ಟು ಕಠಿಣ ತರಬೇತಿಯನ್ನು ಹೊಂದುತ್ತಿದ್ದಳು
ಪ್ರಯತ್ನಕ್ಕೆ ಫಲ ಸಿಗುತ್ತದೆ ಎನ್ನುವ ಲೋಕ ರೂಢಿ ಯನ್ನು ವಾಸ್ತವಕ್ಕೆ ತಂದಳು .ಇದರ ಫಲವೇ ಇಲ್ಲಿದೆ ನೋಡಿ ,೨೦೦೮ ರ ಹಾಂಕಾಂಗ್ ನಲ್ಲಿ ನಡೆದ 'ಸೌತ್ ಎಷ್ಯಡ್ ಇಂಡೋರ್ ಐತ್ಲೆತಿಕ್' ಗಳಲ್ಲಿ ದೇಶಕ್ಕೆ ಹೆಸರನ್ನು ತಂದು ಕೊಟ್ಟಳು .ಕಳೆದ ಅಕ್ಟೋಬರ್ ನಲ್ಲಿ  ದೆಹಲಿ ಯಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾ ಕೂಟದಲ್ಲಿ ೪*೪೦೦ ಮೀಟರ್ ರಿಲೇ ಓಟದಲ್ಲಿ  ಪ್ರಥಮ ಸ್ಥಾನವನ್ನು ತನ್ನ ಇತರ ಮೂರುಜನ ಸಹ ಆಟಗಾರ್ತಿಯರೊಂದಿಗೆ ಯಾರೂ ಊಹಿಸದ ರೀತಿಯಲ್ಲಿ ಚಿನ್ನದ ಪದಕವನ್ನು ತಂದು ವಿಶ್ವ ಮಟ್ಟದಲ್ಲಿ ,ಇತಿಹಾಸದ ಪುಟದಲ್ಲಿ ಮುದ್ರಿಸಿದಳು .ಮುಂದೆ ನಡೆಯುವ ಏಷ್ಯನ್ ಮತ್ತು ಒಲಂಪಿಕ್ಸ್ ನಲ್ಲಿ ತನ್ನ ಕ್ರೀಡಾ ಜ್ಯೋತಿಯನ್ನು ಬೆಳಗಿಸಲು ಬಹಳಷ್ಟು ತರಬೇತಿಯನ್ನು ಪಡೆಯುತ್ತಿದ್ದಾಳೆ .ತನ್ನಲ್ಲಿ ಧೈರ್ಯ ವಿದೆ ,ಛಲವಿದೆ,ತಾಕ್ಕತಿದೆ ಎದುರಿಗೆ ಯಾರೇ ಇದ್ದರೂ ಕ್ಯಾರೆ ಮಾಡದ ಅಶ್ವಿನಿಗೆ ಮೊನ್ನೆ ೨೫ ರ ಗುರುವಾರದಂದು ದೇಶಕ್ಕೆ ಇನ್ನೊಂದು ಬಂಗಾರದ ಪದಕವನ್ನು ತಂದು ಕೊಟ್ಟಳು .ಎಷ್ಯಡ್  ಗೇಮ್ಸ್ ನ ಮಹಿಳೆಯರ ೪೦೦ ಮೀ .ಹರಡ್ಸಲ್ ಫೈನಲ್ಸ್ ನಲ್ಲಿ ,ವೈಕ್ತಿಕ ಶ್ರೇಷ್ಠ  ೫೬.೧೫ ಸೆ. ಅವಧಿ ಯಲ್ಲಿ, ದಾಖಲಿಸಿದಳು .ಕ್ರೀಡಾ ತಾರೆಗಳಾದ ಎಂ .ಡೀ .ವಲ್ಸಮ್ಮ .ಪೀ .ಟೇ.ಉಷಾ ಮುಂತಾದವರ ಸಾಲಿಗೆ ಅಶ್ವಿನಿ ಶೆಟ್ಟಿಯ ಹೆಸರು ಗಿನ್ನಿಸ್ ಪುಸ್ತಕದಲ್ಲಿ ,ಸೇರಿಸಲ್ಪಟ್ಟಿರುದು ಹೆಮ್ಮೆಯ ವಿಚಾರ
ಇನ್ನು ಮುಂಬರುವ ಒಲಂಪಿಕ್ಸ್ ನಲ್ಲಿ ಅಶ್ವಿನಿ ಸಾಧನೆಗೆ ತಯಾರಾಗಿದ್ದಾಳೆ .ಈಗಾಗಲೇ 'ರಷ್ಯನ್ ' ಹರ್ಡ್ಸಾಲ್ ನಲ್ಲಿ ತರಬೇತಿ ಪಡೆಯುತ್ತಿದ್ದು ,ಅವಳ ಆಸೆ ಈಡೇರಲಿ ಈಡಿ ದೇಶದ ಕ್ರೀಡಾ ಪ್ರೇಮಿಗಳ ಮನಸ್ಸಿನಲ್ಲಿ ಉತ್ಸಾಹ -ಉಲ್ಲಾಸದ ಕಿಚ್ಚನ್ನು ಹಚ್ಚಿದ ಅಶ್ವಿನಿ ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಗುರುತಿಸಲಿ ,ಗೌರವ ಸನ್ಮಾನ ಸಿಗಲಿ ನಮ್ಮೂರ ರಾಣಿಗೆ ಒಳ್ಳೆದಾಗಲಿ ಎಂದು ಹೃದಯ ತುಂಬಿ ಹಾರೈಸೋಣ ..  


                                                         ..                      ಶಿವಕುಮಾರ್ ,ಹೊಸಂಗಡಿ
                                                                                  ಚಿತ್ರ ಕೃಪೆ : ನೆಟ್