ಆರಕ್ಷಕರೇ... ನರಭಕ್ಷಕರೇ...?!
ಹೀಗೊಂದು ಮಾತು ಮನದ ಮೂಲೆಯಲ್ಲಿ ತಲ್ಲಣಿಸಿದರೂ ಆಧುನಿಕ ವಿದ್ಯಮಾನದಲ್ಲಿ ಪ್ರಚಲಿತ ಹಾದಿಯಲ್ಲಿ ಮಿನುಗುತ್ತಿರುದು ವಸ್ಥಾವರ್ಹ!
'ಜನಗಳ ಸೇವೆಯೇ ಜನಾರ್ಧನನ ಸೇವೆ ' ಎಂಬ ವೇದೊಕ್ತಿಯನ್ನು ಅನುಸರಿಸಿ ಹೊರಹೊಮ್ಮಿಸುವ ಹಿರಿಯ ಆರಕ್ಷಕ (ಪೋಲಿಸ್ ) ಅಧಿಕಾರಿಗಳ ಉದ್ದದ್ದ ಭಾಷಣ -ಸಾರಾಂಶದ ಒಂದೊಂದು ಎಳೆಗಳನ್ನು ಆಲಿಸಿದಾಗ ಒಮ್ಮೆ ತಲೆ ತೂಗಿಸುವಂತಗೂದು ಖಂಡಿತ .ಆದರೆ ಒಮ್ಮೊಮ್ಮೆ ಕೆಲ ಪೋಲಿಸ್ ಅಧಿಕಾರಿಗಳ ವರ್ತನೆಗಳನ್ನು ಗಮನಿಸಿದರೆ ರಾತ್ರಿ ಕನಸಿನಲ್ಲಿ ಪೊಲೀಸರು ಬಂದರೆ ಯಮ -ಧೂತರು ಬಂದಂತೆ ಎಂಬ ಪ್ರಾಚೀನರ ಪ್ರಾತ:ಕಾಲದ ನುದಿಮತ್ತು ಈ ಸಮಯದಲ್ಲಿ ಸೂಕ್ತಮತ್ತು ಸೂಕ್ಷ್ಮ ಯೆನಿಸುದರಲ್ಲಿ ಎರಡುಮಾತಿಲ್ಲ .
![]() |
| ಸಂಗ್ರಹ |
ಒಂದು ಬ್ರಹತ್ ಸಮಾವೇಶ ನಡೀತಾ ಇರುವ ತನ್ಮಧ್ಯೆ ಪ್ರತಿಭಟನೆ ,ಘರ್ಷಣೆಯೂ ಪ್ರಾರಂಭ ವಾಗುತ್ತದೆ ದೌರ್ಜನ್ಯ ಎಸಗಿ ಅಪರಾಧಿಗಳು ಪಾರಾಗಿ ತಮ್ಮ ಮನೆಯಲ್ಲಿ ನಿದ್ದರೆಗೆ ಜಾರಿದರೂ ಪೊಲೀಸರು ನಾಪತ್ತೆ ! ಅಂತೂ ಮೇಲಧಿಕಾರಿಗಳ ಒತ್ತಡಕ್ಕೆ ಮಣಿದು ಮೇಲಧಿಕಾರಿಗಳಿಗೆ ತಾವು ಮಾಡಿದ ಘನ ಸಾಹಸವನ್ನೂಅವರಿಗೆ ತೋರ್ಪಡಿಸುವ ಸಲುವಾಗಿ ಪಾಪ ಏನೂ ತಿಳಿಯದ ಸಮಾರಂಬಕ್ಕೆ ನೋಡಲು ಬಂದ ಕೆಲ ಅಮಾಯಕ ನಿರಪರಾದಿಗಳು ಇವರಗಳ ಕಾಳಗಕ್ಕೆ ಒಳಗಾಗುತ್ತಾರೆ .ಇದು ಸಿನಿಮ ಕತೆ ಅಲ್ಲ ..ಇಂಥ ಅದೆಷ್ಟೋ ಘಟನೆಗಳು ನಮ್ಮ ಸುತ್ತ -ಮುತ್ತಲೂ ಕಣ್ಣ ಮುಂದೆ ಹಾದು ಹೋಗುತ್ತಲೇ ಇರುತ್ತದೆ ..
ಇದಕ್ಕೊಂದು ನಾ ಕಂಡ ೧ ಸತ್ಯ ಘಟನೆ ಇಲ್ಲಿದೆ ನೋಡಿ ,ಆ ಊರಿನ ಬಸ್ ಸ್ಟ್ಯಾಂಡ್ ಸ್ವಲ್ಪ ಮುಂದೆ ಒಂದು ಖಾಸಗಿ ಲಾರಿ ಹೋಗುತ್ತಾ ಇತ್ತು ,ಅಚಾನಕ್ಕಾಗಿ ಇಬ್ಬರು ವ್ಯಕ್ತಿ ಗಳು ಕೈ ನ್ನು ಲಾರಿಗೆ ಅಡ್ಡ ಹಿಡಿದರು ..ಇವರಿಗೆ ಡ್ರಾಪ್ ಕೊಟ್ಟರೆ ಬಸ್ ನವರಹತ್ತಿರ ಯಾಕೆ ಸುಮ್ನೆ ಬೈಸಿ ಕೊಳ್ಳುದು ಎಂದು ಆಲೋಚಿಸಿಸಿ ಲಾರಿಯನ್ನು ಅಲ್ಲಿ ನಿಲ್ಲಿಸದೆ ಮುಂದಕ್ಕೆ ಚಲಿಸಿಯೇ ಬಿಟ್ಟರು.ಕ್ಷಣ ಮಾತ್ರ ದಲ್ಲಿ ಪೋಲಿಸ್ ಜೀಪ್ ನಾ ಸೈರನ್ .. ತತ್ತಕ್ಷಣ ಲಾರಿಯನ್ನು ತಡೆಗಟ್ಟಿ ೪-೫ ಪೋಲಿಸ್ ಅಧಿಕಾರಿಗಳು ಹಿಂದೆ -ಮುಂದೆ ನೋಡದೆ ಎಳೆದು ಹಾಕಿ ಸಿಕ್ಕಿದ್ದೇ ಚಾನ್ಸು ಅಂತ ಹಿಗ್ಗಾ-ಮುಗ್ಗಾ ಬಾರಿಸಿದ್ದೆ,ಬಾರಿಸಿದ್ದು ಏನೂ ತಿಳಿಯದೆಅರಕ್ಷಸ (ಕ )ರ ಪೆಟ್ಟಿಗೆ ಒಳಗಾದವರ ರೋಧನ ಮುಗಿಲು ಮುಟ್ಟುತ್ತಿದ್ದು ಯಾರಿಗೆ ಆದರೂ ಕರಳು ಚೂರಕ್ ಎನ್ನದೆ ಇರಲಾರದು .
ಅಲ್ಲಿ ಅಡ್ಡ ಹಾಕಿದ್ದು ಪ್ರಾಯಶಃ ಪೊಲೀಸರೆ ಇರಬಹುದು ಎಂಬ ಮನವರಿಕೆ ಆಗ ಅದರೂ .ಮೊದಲೇ ಗೊತ್ತಿದ್ದರೆ ಅಲ್ಲಿ ಲಾರಿ ಯನ್ನು ನಿಲ್ಲಿಸುತ್ತಿದ್ದರೋ ಏನೋ ?!ಇದು ಒಂದು ಉದಾಹರಣೆ ಅಸ್ಟೆ..ಮೊನ್ನೆ-ಮೊನ್ನೆ ನಡೆದ ಬೆಳ್ತಂಗಡಿ ,ಬಜಪೆ,ಬೈಂದೂರ್ ನ ಪ್ರಕರಣವನ್ನು ನೆನಪು ಮಾಡಿಕೊಳ್ಳಿ ..
ಪೋಲಿಸ್ ರೆಂದರೇನು ? ಹೇಗಿರಬೇಕು ?ಎಂಬ ಮನೋಭಾವನೆ ಪೋಲಿಸ್ ಇಲಾಖೆ ಯಲ್ಲಿರುವ ಕೆಲ ಪೋಲಿಸ್ ಮಹಾನುಭಾವರುಗಳಿಗೆ ಗೊತ್ತಿಲ್ಲ ದಿದ್ದರೂ ಅಟ್ ಲಿಸ್ಟ್ ಒಂದು ಡ್ರೆಸ್ (ಯುನಿಫಾರ್ಮ್ ) ಅನ್ನುದೂ ಸಹಾ ಇಲ್ಲವೇ ?ಡ್ರೆಸ್ ಇಲ್ಲದೆ ಕಾರ್ಯಾಚರಣೆ ಮಾಡುದು ಉಲ್ಲಂಘನೆ ಎಂದು ಗೊತ್ತಿದ್ದರೂ ಕಾನೂನು -ಕಾಇದೆ ಎಲ್ಲ ಸುಟ್ಟು-ಸುಡುಗಾಡು ಸೇರುತ್ತಿದೆ .. ಇಂಥಹ ಕೆಲ ಪೋಲಿಸ್ ಇಲಾಖೆ ಯಾ ಪಾಪದ ಕೂಪದ ಸರ್ವಾಧಿಕಾರ .ಸಾಮಂತಿಯ ಆಳ್ವಿಕೆ ಇಂದ ದಿನ ನಿತ್ಯ ಸಾವಿರಾರು ಅಮಾಯಕ ಮುಗ್ಧರ ವ್ಯಥೆಯ ಕಥೆ ವಿಚಿಧ್ರಕಾರಕವಾಗಿ ನಡೆಯುತ್ತಿದ್ದರೂ ,ಇದಕ್ಕೊಂದು ಕಠಿಣ ಕಾನೂನು ಇಲ್ಲದೆ ಇರುದು ಕಳವಳಕಾರಿ .ಇವರ ದಬ್ಬಾಳಿಕೆ ದೌರ್ಜನ್ಯತನದಿಂದ ಮುಗ್ಧ ಮನಸ್ಸಿಗರ ಭಾವನೆ -ಭಾವುಕತೆ ಯನ್ನು ಅರ್ಥೈಸಿಕೊಳ್ಳುವ್ವರು ಯಾರು ?
ಹಗಲು -ರಾತ್ರಿ ವಿಶ್ರಾಂತಿ ಇಲ್ಲದೆ ನಾಡಿನ ಹಿತ ಕಾಯುವವರೆಂದು ಪಟ್ಟ ಕೊಟ್ಟರೆ ಭಯೋತ್ಪಾದನೆ ಕೊಂಡಿಯಂತೆ ಸಮಾಜದ ಲ್ಲಿ ರೂಪುಗೊಳ್ಳುತ್ತಿರುವ ಕೆಲ ಆರಕ್ಷಕರಿಗೆ ನೀವೇನು ಹೇಳುತ್ತಿರಿ?
(ದಯವಿಟ್ಟು ಅನ್ಯಾತ ಭಾವಿಸ ಬೇಡಿ ಈ ಲೇಖನದ ಉದ್ದೇಶ ಕೇವಲ ಕೆಲ ಇಂಥ ಪೋಲಿಸ್ ಮಹಾನುಭಾವರುಗಳಿಗೆ ಮಾತ್ರ .ನಮ್ಮಲ್ಲಿ ಅದೆಸ್ಟೋ ಒಳ್ಳೆ -ಒಳ್ಳೆಯ ಪೋಲಿಸ್ ರು ಗಲಿದ್ದೂ ,ತಮ್ಮ ಪ್ರಾಣ ವನ್ನು ಮುಡುಪಾಗಿಟ್ಟು ಹೋರಾಡಿದ, ಸಮಾಜದಲ್ಲಿ ಶಾಂತಿ ,ಸೌಹಾರ್ದತೆ ಮತ್ತು ನಾಗರೀಕ ಸುರಕ್ಷತೆಗಾಗಿ ,ಹಗಲಿರುಳು ತಮ್ಮ ಪ್ರಾಣವನ್ನು ಪಣವಾಗಿಟ್ಟ ಧಿಮಂತ ಪೊಲೀಸರಿಗೆ ಹೆಡ್ಸಾಫ್ ..)
ಎಸ್.ಕೆ .ಹೊಸಂಗಡಿ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ