ಮಂಗಳವಾರ, ಅಕ್ಟೋಬರ್ 29, 2013

ಬೆಂಕಿ ಇಲ್ಲದೇ ಹೊಗೆಯಾಡದು ..

 ವರ್ಷಗಳ ನಂತರ ಉಜರೆ ಸೌಜನ್ಯ  ಪ್ರಕರಣ ಜೀವ ಪಡೆದು ಉತ್ಪ್ರೆಕ್ಶಾ ನಾಗಾಲೋಟದಲ್ಲಿ ಸಂಚರಿಸುತ್ತಿದೆ.ವಿಧ್ಯಾರ್ಥಿ ನಿ ಸೌಜನ್ಯಳ ಅತ್ಯಾಚಾರ ಕೊಲೆಗೆ ಸಂಬಂಧಪಟ್ಟಂತೆ ಧರ್ಮಸ್ಥಳದ ಧರ್ಮಾಧಿಕಾರಿಗಳ ಸಂಬಂದಿಕರೇ ಪ್ರಮುಖ ಕಾರಣ ಎಂದು ಬೊಟ್ಟು ಮಾಡಿ ತೋರಿಸಲಾಗುತ್ತಿದೆ . ಕೆಲವು ವ್ಯಕ್ತಿಗಳು ಮುಂಚುಣಿಗೆ ಬಂದು  ಹೋರಾಟಕ್ಕೆ ಇಳಿದು ಸೌಜನ್ಯಳ ವಿಷಯಗಳನ್ನು ಎತ್ತಿ ಇನ್ನೀತರ ವಿಚಾರ ವೈಚಾರಿಕತೆಯ ವಿರುದ್ಧ ಧ್ವನಿಯಾಗಿಸುತ್ತಾ ಆರೋಪದ ಮಳೆಯನ್ನು ಹರಿಸುತ್ತಿರುವುದನ್ನು ನೋಡುತ್ತಿದ್ದರೆ 'ಇಲ್ಲ' ಇನ್ನುವ ಮನೋಭಾವ ಸಾರಿಸಾರಿ ಮನದಲ್ಲಿ ನುಡಿಯುವುತ್ತಿದ್ದರೂ, ಎಲ್ಲೂ ಒಂದು ಕಡೆ  ಬೆಂಕಿ ಇಲ್ಲದೇ ಹೊಗೆಯಾಡದು ಎಂಬ ವಿಚಾರ ಪದೇ ಪದೇ ತಟ್ಟದೇ ಇರಲಾರದು
.
ಇದು ಕೇವಲ ಸೌಜನ್ಯಳ ಪ್ರಕರಣ ವನ್ನು ನ್ಯಾಯದ ಬಾಗಿಲಿಗೆ ತರುವ ಪ್ರಯತ್ನವಾಗಿರದೇ ಹಿಂದೆ ಅಲ್ಲಿ ನಡೆದು ಭೂಗತ ಗೊಂಡ ಕೊಲೆ , ಸುಲುಗೆ , ಅತ್ಯಾಚಾರ, ಕಾಣೆ ಮುಂತಾದ ಹತ್ತು ಹಲವು ಪ್ರಕರಣಗಳನ್ನು ಪತ್ತೆ ಹಚ್ಚುವ ಕಾರ್ಯ ವಾಗುವುತ್ತಿದೆ ಎಂದು ಮೆಲ್ನೊಟಕ್ಕೆ  ಹೋರಾಟ, ಸಭೆ - ಪ್ರತಿಭಟನೆಗಳಿಂದ ಸಾರಿ ಹೇಳುತ್ತಿದೆ. ನಿಜಕ್ಕೂ ಇದು ಸೌಗತಾರ್ಹವೂ ಕೂಡಾ ಹೌದು. ಡೆಲ್ಲಿಯ ಗ್ಯಾಂಗ್ ರೆಪ್ , ಹಾಗೂ ಮಣಿಪಾಲದ ಅತ್ಯಾಚಾರ ಪ್ರಕರಣದ ಆರೊಪಿಗಳನ್ನು ಬಂಧಿಸಲಾಗಿದೆ. ಆದರೆ ಸೌಜನ್ಯಳ ವಿಷಯಕ್ಕೆ ಮೀನಾಮೇಷ ಯಾಕೆ.. ಹಿಂದೆ ತಾಲ್ಲೊಕಿನಲ್ಲಿ  ನಡೆದ ಅದೇಷ್ಟೋ ಘಟನೆಗಳ ವಿಚಾರಣೆ ಮೂಲೆ ಸೇರಿರುವುದರ ಗುಟ್ಟೇನು ? ಪೋಲಿಸ್ ಇಲಾಖೆಗೂ ಸೇರಿದಂತೆ ಅಕ್ಕ-ಪಕ್ಕದಲ್ಲಿರುವವರಿಗೂ ಅಲ್ಲಿ ಎನು ನಡೆಯುತ್ತಿದೆ ..? ಯಾರ ಕೈವಾಡವಿದೆ . ಎಂಬುದು ಗೊತ್ತಿದ್ದರೂ ಯಾಕೆ ಇದು ಮುಖ್ಯವಾಹಿನಿಗೆ ಬರುತ್ತಿಲ್ಲ. ಇಂಥಹ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಎಲ್ಲೆಡೆ ಪಸರಿಸಲು ಬೇಕಾಗಿದ್ದು... ಇಷ್ಟೊಂದು ಧೀರ್ಘ ಸಮಯ.  ಮೊನ್ನೆ -ಮೊನ್ನೆಯಿಂದ ಮಾಧ್ಯಮಗಳ ಮೂಲಕ ಇಂಚು ಇಂಚಾಗಿ ಹರಿದು ಬಂದ ವಿಚಾರ ನಿಜಕ್ಕೂ ಮೂಗಿನ ಮೇಲೆ ಬೆರಳು ಇಡುವಂತೆ ಮಾಡಿದೆ. ಇದನ್ನೇಲ್ಲಾ ಗಮನಿಸುತ್ತಿದ್ದರೆ, ಎಲ್ಲಾ ಪ್ರಕರಣದ ಹಿಂದೆ ಬಲಾಡ್ಯರ ಬಲ ಪ್ರಯೋಗದ ಪ್ರಭಾವ  ಇಲ್ಲದೇ ಇರಲಾರದು.  ಎನೇ ಇರಲಿ ಯಾವುದೇ ಬೆದರಿಕೆ ,ಒತ್ತಡಕ್ಕೆ ಮಣಿಯದೇ ಜೀವದ ಹಂಗು ತೋರೆದು ಹೋರಾಟಕ್ಕೆ ನಿಂತ ತಿಮ್ಮರೋಡಿ ಮಹೇಶ ಶೆಟ್ಟಿ  ಸೇರಿದಂತೆ ಮತ್ತಿತ್ತರರ ಧೈರ್ಯ, ಸ್ಥೈರ್ಯವನ್ನು ಮೆಚ್ಚತಕ್ಕದ್ದೇ. ಒಟ್ಟಾರೆ ಘಟನೆಗೆ ಸಂಬಂದಿಸಿದಂತೆ ಇಲ್ಲಿ ಯವುದು ಸತ್ಯ- ಯಾವುದು ಮಿಥ್ಯ ಎಂಬುದು ಪ್ರಮುಖವಾಗಿ ಕಾಡುತ್ತಿದೆ. ನಿಸ್ಪಾಕ್ಶಪಾತ ತನಿಖೆಯಾದರೆ .ಉತ್ತರ ಸಿಗಬಹುದು ಪಾರದರ್ಶಕ ತನಿಖೆ ಸಾಧ್ಯವೇ.. ???  

ಬುಧವಾರ, ಆಗಸ್ಟ್ 21, 2013

ನಿಡ್ಡೊಡಿ ಉಳಿವಿಗೆ ಒಗ್ಗೂಡಿ




ಬಹು ಚರ್ಚೆಯಲ್ಲಿರುವ ಹಾಗೂ ಕರಾವಳಿಯ ನಾಡಿ -ಮಿಡಿತವನ್ನು ಎಚ್ಚರಿಸುತ್ತಿರುವ ವಿಚಾರ ಇದಾಗಿದೆ . ಹೌದು !ಮಂಗಳೂರು ಸಮೀಪದ ನಿಡ್ಡೊಡಿ ಎಂಬಲ್ಲಿ ಉಷ್ಣ ವಿದ್ಯುತ್  ಸ್ಥಾವರ ಸ್ಥಾಪನೆ ಆಗಲಿದೆ .ಇದರ ನೀಲನಕ್ಷೆ ಈಗಾಗಲೇ ತಯಾರು ಗೊಂಡಿದ್ದೂ , ಕಾಮಗಾರಿ ಪ್ರಾರಂಭವಾಗಲು ಕ್ಷಣ ,ಗಣನೆಯಲ್ಲಿದೆ . ಅರಗಿಸಿ ಕೊಳ್ಳಲಾಗದ ಈ ವಿಚಾರ ವನ್ನು ತಿಳಿದು ಸುತ್ತ -ಮುತ್ತಲಿನ ಸ್ಥಳಿಯರು ಕಿಡಿ ಕಾರುತ್ತಿದ್ದಾರೆ . ತಮ್ಮ ಎಕರೆ ಗಟ್ಟಲೇ ಕ್ರಷಿ ಭೂಮಿ ,ಹಚ್ಚ ಹಸುರಿನ ಸ್ವಚ್ಛ ಪರಿಸರ ನಾಶ ವಾಗುವುದರ ಜೊತೆಗೆ ಶಾಶ್ವತ ವಾಗಿ ಪ್ರದೇಶ ನಿಶ್ಯಬ್ದ ವಾಗುವ ಲಕ್ಷಣ ವನ್ನು ಮುಂದಾಗಿ ಆಲೋಚಿಸಿ ಎಲ್ಲಡೆ ಪ್ರಜ್ಞಾವಂತರ ರೋಷ-ಆವೇಶದ ಕಟ್ಟೆ ಒಡೆದಿದೆ . ಇತ್ತೀಚಿಗೆ ಸಮೀಕ್ಷೆ ಆಗಮಿಸಿದ ಉನ್ನತ ಅಧಿಕಾರಿಗಳನ್ನು ಚಪ್ಪಲಿ ಹಿಡಿಸೋಡಿಯೊಂದಿಗೆ ಸ್ವಾಗತಿಸಿ  ತರಾಟೆಗೆ ತೆಗೆದು ಕೊಂಡ ನಾಗರಿಕರು, ಹೋರಾಟದ ಕಿಚ್ಚನ್ನು ದಿನೇ ದಿನೇ ವಿಸ್ತರಿಸುತ್ತಿದ್ದಾರೆ . ಇದು ಸ್ವಾಗತವೂ ಕೂಡಾ ಹೌದು . ಆದರೆ 
ನಿಡ್ಡೊಡಿ ಯಲ್ಲಿ ಉಷ್ಣ ವಿಧ್ಯುತ್ ಸ್ಥಾವರ ರೆಡಿ ಆಗುತ್ತಾ ?! :
ಖಂಡಿತವಾಗಿಯೂ ಇದು ಇಂದಲ್ಲ ನಾಳೆ ಯಾದರೂ ಇದಕ್ಕೆ ಹಸಿರು ನಿಶಾನೆ ದೊರಕದೇ ಇರಲಾರದು . ಎಂಬ ಮಾತು ಪ್ರಚಲಿತದಲ್ಲಿದೆ ಕಾರಣ ಇಷ್ಟೇ.  ಕೇಂದ್ರ ಸರಕಾರದ ಕ್ರಪಾ ಪೋಷಿತ ಯೋಜನೆ ಇದಾಗಿರುವುದರಿಂದ ಜೊತೆಗೆ ಕರ್ನಾಟಕದಲ್ಲೂ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿರ್ವುದರ ಜೊತೆಗೆ ಕರಾವಳಿಯಲ್ಲಿ ಮಂತ್ರಿ ಗಿರಿಗಳ ಪಾಲು ಬಹು ದೊಡ್ಡದಿದೆ . ಒಂದೆಡೆ ತಮ್ಮನ್ನು ಆರಸಿ, ಹಾರೈಸಿ ವಿಧಾನ ಸೌಧಕ್ಕೆ ಪ್ರವೇಶ ಕಲ್ಪಿಸಿದ ಮತದಾರ ಪ್ರಭುಗಳನ್ನೂ ಬಿಡುವಂತಿಲ್ಲ ಇನ್ನೊಂದೆಡೆ ಆಸನದ ಪದವಿಯನ್ನು ದಯಪಾಲಿಸಿದ ಸರಕಾರದ ತೀರ್ಪನ್ನು ತಿದ್ದುವಂತಿಲ್ಲದ ತ್ರಿಶಂಕು ಪರಿಸ್ಥಿತಿಯಲ್ಲಿ ಮಂತ್ರಿ ಮಹೋದಯರು ಕೊನೆಗೆ ತುಳಿಯುವ ಹಾದಿ ಸರ್ಕಾರದ ಮೆಟ್ಟಿಲನ್ನೇ . ಮತದಾರ ಹಂಗು ಈಗಿಲ್ಲ ಕಾರಣ ಪದವಿ ಗಟ್ಟಿಯಾಗಿದೆ  ೫ ವರ್ಷ ತೊಂದರೆ ಇಲ್ಲ ಮತದಾರರ ಎದುರು ಮೊಸಳೆ ಕಣ್ಣೀರಿಡುತ್ತಾ ಇತ್ತ ತಮ್ಮ ಬೇಳೆ ಬೇಯಿಸಿ ಕೊಳ್ಳುವವರನ್ನು ನಾವು ಕಾಣ  ಬಹುದು ಇದಕ್ಕೆ ತಾಜಾ ಉದಾಹರಣೆಯ೦ದರೆ ಯುಪಿಸಿಎಲ್.   ಪಡುಬಿದ್ರೆ ಸಮೀಪ ನಿರ್ಮಾಣ ಗೊಂಡ ನಾಗಾರ್ಜುನ ಉಷ್ಣ ವಿಧ್ಯುತ್ ಸ್ಥಾವರ ವೇ ಸಾಕ್ಷಿ ನುಡಿಯುತ್ತಿದೆ . ಮೂರು ವರ್ಷಗಳ ಹಿಂದೆ ಇದೇ ತರಹನಾದ ಹೋರಾಟ ಚಳುವಳಿ ನಡೆದಿದ್ದು !!ನಂತರ ವಾಸ್ತವದ ವಿಚಾರವನ್ನು ಪರಸ್ತುತ ಪಡಿಸುವ ಅಗತ್ಯವೇ ಇಲ್ಲ. ಅದೇ ದಿಕ್ಕಿನಲ್ಲಿ ಇದು  ಸಾಗ ಬಹುದೇ  ಗೊತ್ತಿಲ್ಲಾ ಕಾಲವೇ ಉತ್ತರ ಹೇಳಬೇಕು
ನಿಡ್ಡೊಡಿ ನಾಗರ್ಜುನ ಕ್ಕಿಂತ ಮೂರು ಪಟ್ಟು ದೊಡ್ಡದು !;
ಆಸಲಿಗೆ ಯೋಜಿಸಲ್ಪಟ್ಟ ನಿಡ್ಡೊಡಿ ಉಷ್ಣ ವಿಧ್ಯುತ್ ಸ್ಥಾವರ ಯುಪಿಸಿಯೇಲ್ ಕ್ಕಿಂತ ಮೂರು ಪಟ್ಟು ದೊಡ್ಡದು . ಇದರಿಂದ ಹೊರಬರುವ ಹೋಗೆ , ರಾಸಾಯನಿಕ ಕಲ್ಮಶ ಸೇರಿದಂತೆ ಪರಿಸರ ಮಾರಕಕ್ಕೆ ಪೂರಕವಾದ ಅಂಶಗಳು ಸಹಾ ಸಾಕಷ್ಟು ಬಿನ್ನವಾಗಿದೆ. ನಾಗಾರ್ಜುನ ಸಾಗರ ಕೇವಲ ಒಂದು ಗ್ರಾಮಕ್ಕೆ ಕುಂದು ತರುವಂತಿದ್ದರೆ ಇದು ಮೂರು ಗ್ರಾಮಕ್ಕೆ ಕಂಟಕ ಪ್ರಾಯವಾಗಲಿದೆ . ಅದೂ ಅಲ್ಲದೇ ಇದು ಬಹಳ ಎತ್ತರದ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವದರಿಂದ ಇದರ ಬಿಸಿ ಇನ್ನಷ್ಟು ವಿಸ್ತಾರ ಕಾಣುತ್ತದೆ ಎಂಬದು ತಜ್ಞರ ಅಭಿಪ್ರಾಯ . ಇಷ್ಟೆಲ್ಲಾ ಉಪದ್ರವಕಾರಿತನವನ್ನು ಹೊಂದಿರಿರುವ ಉಷ್ಣ ವಿಧ್ಯುತ್ ಸ್ಥಾವರದ ಸ್ಥಾಪನೆ ಇಲ್ಲಿ ಅವಶ್ಯವಿದೆಯೇ ಎಂಬ ಪ್ರಶ್ನೆ ಕಾಡದೇ ಇರದು ಇದಕ್ಕೆ ಒಂದನ್ನು  ಪಡಿಬೇಕಿದ್ದರೆ ಇನ್ನೊಂದನ್ನು ಕಳೆದು ಕೊಳ್ಳ ಬೇಕು ಎಂಬ ಸಿದ್ದ  ಉತ್ತರವಿರುವದು ಸರಿಯೇ ಆದರೂ ಇಲ್ಲಿಗದು ಖಂಡಿತ ವಾಗಿಯೂ ಅನ್ವಯಿಸುದಿಲ್ಲ ಕರಾವಳಿ ಯಲ್ಲಿ ಈಗಾಗಲೇ ಹಲವಾರು ಜಲವಿದ್ಯುತ್ ಕೇಂದ್ರ ಹಾಗೂ ಉಷ್ಣ ವಿದ್ಯುತ್ ಸ್ಥಾವರ ಇರುವದರಿಂದ ಕರಾವಳಿ ಪ್ರದೇಶಕ್ಕೆ ಖಂಡಿತವಾಗಿಯೂ ವಿದ್ಯುತ್ ಅಭಾವವಿಲ್ಲಾ . ಇದು ಇನ್ನ್ಯಲ್ಲಿಗೋ ಬೇಕಾಗಿರ್ವುದರಿಂದ ಇಲ್ಲಿ  ಸ್ಥಾವರವನ್ನು ನಿರ್ಮಿಸಲು ಮುಂದಾಗಿದ್ದಾರೆ . ಎಲ್ಲಿ ವಿದ್ಯುತ್ ಅಗತ್ಯವೋ ಅಲ್ಲಿ ನಿರ್ಮಾಣ ಕಾಣಲಿ ಎಂಬುದು ನಿಡ್ಡೊಡಿ ಉಳಿವಿನ ಹೋರಾಟ ಗಾರರ ಬಲ ವಾದ ಕೂಗಾಗಿದೆ . ನಿಜಕ್ಕೂ ಈ ಮಾತು ವಾಸ್ತವರ್ಹವೂ ಕೂಡ ಹೌದು . ನಿಡ್ಡೊಡಿ ಬಗ್ಗೆ  ಯಾರೂ ನಿರ್ಲಕ್ಷೆ ವಹಿಸ ಬಾರದು ನಿಡ್ಡೊಡಿ ಪರಿಸರ ಉಳಿಸಿಕೊಳ್ಳಬೇಕು ಪ್ರಯತ್ನ ಪಟ್ಟು ನಿದ್ದೋಡಿ ಯಲ್ಲಾಗುವ ಸ್ಥಾವರವನ್ನು  ಬೇರೆಡೆಯಲ್ಲಿ ನಿರ್ಮಿಸಲು ಒತ್ತಡ ತರುವಲ್ಲಿ ಸರ್ವರೂ ಒಗ್ಗೂಡ ಬೇಕಾಗಿದೆ . 

ಮಂಗಳವಾರ, ಜುಲೈ 16, 2013

ಎಂದೋ ನಡೆಯಬೇಕಿತ್ತು ?!

 ಇದು ಎಂದೋ  ನಡೆಯಬೇಕಾಗಿತ್ತು ಅಂತೂ ಈಗ ಕಾಲ ಕೂಡಿ ಬಂದಿದೆಯೇನೊ ಎನ್ನಬಹುದು  ಸಂಸ್ಕ್ರತಿ -ಸಭ್ಯತೆಗೆ ಹೆಸರಾದ ಕರಾವಳಿ ಜಿಲ್ಲೆಯಲ್ಲಿ ಒಂದು  ಕ್ರಷ್ಣನ ನಾಡು ಉಡುಪಿ . ಮಣಿಪಾಲ್ ವಿಶ್ವವಿಧ್ಯಾನಿಲಯ ಜಗತ್ಪ್ರಸಿದ್ದ. ರಾಜ್ಯದ ಇತರ ಜಿಲ್ಲೆಗ ಳಿಂದ ಹಾಗೂ ದೇಶದ ಇತರ ರಾಜ್ಯಗಳಿಂದ ಮಾತ್ರವಲ್ಲದೇ ವಿದೇಶಗಳಿಂದಲೂ ವಿಧ್ಯಾರ್ಜನೆಗೆ ಮಣಿಪಾಲ್ ತಾಂತ್ರಿಕ ಮತ್ತು ವೈದ್ಯಕೀಯ ವಿಧ್ಯಾಲಯನ್ನು ಆಶ್ರಯಿಸಿಕೊಂಡಿರುವವರ ಸಂಖ್ಯೆ ಬಲು ದೊಡ್ಡದು.  

'ಮಣಿಪಾಲ್ ಒಂದು ಮಿನಿ ಅಮೇರಿಕಾ '?! : ವಾಸ್ತವಕ್ಕೆ ಮಣಿಪಾಲನ್ನು ಒಂದಿರುಳಿನಲ್ಲಿ ಬೆಲೆ ಕೊಟ್ಟು ಆಲೋಚಿಸಿದರೇ ನಮ್ಮ ಮನ:ಪಟಲದಲ್ಲಿ ಸದ್ದಿಲ್ಲದೇ ಮಣಿಪಾಲ್ ಎಂಬುದು ಮಿನಿ ಅಮೇರಿಕಾ ಎಂಬ ಕಲ್ಪನೆ ಮೂಡಿ ಮರೆಯಾಗದೇ ಇರದು .ಕಾರಣ , ಪಾಶ್ಚತ್ಯ ಸಂಸ್ಕ್ರತಿಯ ಜೊತೆಗೆ ಅದರ ಅಪ್ಪಳಿಕೆಯ ಪ್ರಭಾವವನ್ನು ಹೊಂದಿರುವ ,ಅದಕ್ಕೆ ಮಾರು ಹೋಗುವ ಉಳ್ಳವರ ಪಾಲಿ ನೊಂದಿಗೆ ಮಣಿಪಾಲ್ ಯುನಿವರ್ಸಿಟಿ ಹತ್ತಿರದ ಸಂಬಂಧವನ್ನು ಹೊಂದಿರುವುದರಿಂದ ಅವರುಗಳ ಭಾಷೆ ,ವೇಷ - ಭೂಷಣ ,ತಿಂಡಿ - ತೀರ್ಥ ಎಲ್ಲಾವೂ ಪರಕೀಯ ರೀತಿ -ನೀತಿಯನ್ನು ಅಳವಡಿಸಿ ಕೊಂಡಿದ ಜೊತೆಗೆ ಮಣಿಪಾಲ್ ಒಂದು ಪುಟ್ಟ ಪ್ರಾಂತ್ಯವಾದರೂ ಮುಗಿಲೆತ್ತರಕ್ಕೆ ಪಸರಿಸುತ್ತಿರುವ ಕಟ್ಟಡಗಳು,ಕಾಂಗ್ರೇಟ್  ಕಾಡುನ್ನು ತನ್ನ ತೆಕ್ಕೆಗೆ ಹಾಕಿ ಕೊಳ್ಳುತ್ತಿದೆ , ತುಂಡುಡುಗೆ ಉಟ್ಟು , ಹೆಗಲ ಮೇಲೆ ಕೈ ಹಾಕಿ ಕೊಂಡು ಹೊತ್ತು -ಗೊತ್ತಿಲ್ಲದೇ ಎಲ್ಲೇಂದರಲ್ಲಿ ಅಲೆದಾಡುತ್ತಿರುವ ಜಂಟಿ ,ಒಂಟಿ ನಡುಗೆಯ ವಿದ್ಯಾಮಾನದ ಲ್ಲಿರುವ ಮಣಿಪಾಲ್ ಒಂದು ಮಿನಿ ಅಮೇರಿಕ ಎಂಬ ಭಾವನೆ ಸದ್ದಿಲ್ಲದೇ ಮೊಳಕೆ ಒಡೆಯುತ್ತದೆ . ಇಂತಿಪ್ಪ ಪರಿಸ್ತಿತಿಯಲ್ಲಿ ಅಮೇರಿಕಾದಲ್ಲಿ ಚಾಲ್ತಿ ಯಲ್ಲಿರುವ ಪದ್ಧತಿ ನಮ್ಮಲಿ ಇಲ್ಲದಿರುವದರಿಂದ ಮೊನ್ನೆ ಈ ಅತ್ಯಾಚಾರ ಪ್ರಕರಣ ದಾಖಲಾಗಿರಬಹುದು . ಅಷ್ಟಕ್ಕೂ ವಾಸ್ತವದ ಸಂಗತಿ ಯನ್ನು ಗಮನಿಸುತ್ತಿದ್ದರೆ  ನಡೆದ ಘಟನೆಯೆನೋ ಅಷ್ಟೋಂದು ಮಹತ್ವ ಪೂರ್ಣಾ ವಾದುದ್ದಲ್ಲ. ಹಲವಾರು ದಶಕಗಳ ಇತಿಹಾಸವನ್ನು ಹೊಂದಿರುವ ಈ  ಯುನಿವರ್ಸಿಟಿ ವಿಧ್ಯಾರ್ಥಿಗಳ ನಡವಳಿಕೆಯಿಂದ ಎಂದೋ ಇದು ಅನುರಣಿಸಬೇಕಿತ್ತು.  ಆದರೆ ಮೇಲೆ ತಿಳಿಸಿದಂತೆ ಸಭ್ಯತೆ -ಸಂಸ್ಕರ್ತಿಗೆ ಹೆಸರಾದ  ಬುದ್ದಿವಂತರ ನಾಡಾದುದರಿಂದ  ಮೊನ್ನೆ -ಮೊನ್ನೆ ಜರುಗಿದೆ ಅಷ್ಟೇ.
ಅಷ್ಟಕ್ಕೂ ಅತ್ಯಾಚರಿಗಳದ್ದೇ ಮಹಾನ್ ತಪ್ಪು ಎಂದೇ ಬಿಂಬಿಸಲಾಗುತ್ತಿದೆಯಾದರೂ , ಎರಡು ಕೈ ತಟ್ಟಿದರೆ ಮಾತ್ರ ಚಪ್ಪಾಳೆ ಎಂಬ ಕಿಂಚಿತ್ ಅರಿವು ಮೂಡಬಾರದೇಕೆ ? ಆಕರ್ಷಣೆ / ಆಸ್ಪದ ವಿಲ್ಲದೇ ಯಾವುದೇ ಅತ್ಯಾಚಾರ ಪ್ರಕರಣ ದಾಖಲಾಗಲು ಸಾಧ್ಯವಿಲ್ಲ. ತಪ್ಪು ಎರಡು ಕಡೆಯಿಂದಲೂ ಇದೆ. ಇನ್ನು ಸಂಕ ಮುರಿದಲ್ಲೆ ಸ್ನಾನ ಮಾಡಲು ಬಯಸುವ ಕೆಲವು ಕಾಮಾಂಧರು  ಹಿಡಿದಿಡಲು ಬಹಳ ಕಷ್ಟ. ಮೊನ್ನೆ ಘಟನೆಯ ಬಗ್ಗೆ ಹೇಳ ಬೇಕಂದರೆ ಒಂಬ್ಬಂಟಿಯಾಗಿ ಸಾಗುವ ಅವಶ್ಯಕತೆ ಆ ವಿಧ್ಯಾರ್ಥಿ ನೀಗೆ ಇತ್ತೆ? ಇದನ್ನೆ ಅಸ್ತ್ರವಾಗಿ ಕಾಮ ಪಿಪಾಸುಗಳು ಬಳಸಿ ಕೊಂಡಿದ್ದರು. ದೆಹಲಿಯಲ್ಲಿ ನಡೆದ ಘಟನೆಯೂ ಸಹಾ ಇದಕ್ಕಿಂತ ತೀರ ಭಿನ್ನವಾಗಿರಲಿಲ್ಲ. ಎರಡು ಘಟನೆಗಳೂ ಒಂದೇ ರೀತಿಯದ್ದವು. ಎನೇ ಯಾಗಲಿ ಗಾಂಧೀಜಿ ಕಂಡ ಕನಸು ,ಕನಸ್ಸೇ ಹೊರತು ನನಸಾಗುವುದಿಲ್ಲ. ನಮ್ಮ ತನ ,ನಮ್ಮ ಜಾಗ್ರತೆ ನಮ್ಮಲ್ಲಿದ್ದರೇ ಇಂಥಹ ಅಹಿತಕರ ಘಟನೆ ನಡೆಯದಂತೆ ತಡೆಗಟ್ಟಬಹುದು ಇಲ್ಲದಿದ್ದರೆ ಇದು ನಿಂತ ನೀರಲ್ಲ. 

ವಿಧಾನ ಸೌಧ ಯಾರಪ್ಪನ ಮನೆಯ ಸ್ವತ್ತಲ್ಲ


ಕೆಂಗಲ್ ಹನುಮಂತಯ್ಯನವರ ಕನಸ್ಸಿನ ಕೂಸು ಇದು. ಇವರು ಮುಖ್ಯ ಮಂತ್ರಿ ಯಾಗಿದ್ದ ಸಂಧರ್ಭ ತಮ್ಮ ಆಡಳಿತಾವಧಿಯಲ್ಲಿ ಇದನ್ನು ರಚಿಸಿದ್ದರು  . ಪ್ರಜಾ ಪ್ರಭುತ್ವದ ವ್ಯವಸ್ಥೆಯಡಿಯಲ್ಲಿ ಆರಿಸಿ ಬಂದ ಜನಪ್ರತಿನಿಧಿಗಳನ್ನ ಒಗ್ಗೂಡಿಸಿ ಜನಹಿತಕ್ಕಾಗಿ ಚರ್ಚಾಕೂಟವನ್ನು ಏರ್ಪಡಿಸಲು  ನಿರ್ಮಿಸಲ್ಪಟ್ಟ ಸಂಸತ್ತು ಇದಾಗಿದೆ .
ವಿಶ್ವದಾದ್ಯಂತ  ಸಂಚಾರ ಮಾಡಿ  ಅಲ್ಲಲ್ಲಿನ ಒನಪು ,ವೈಯಾರ ,ವಿಸ್ಮಯ ,ವಿಶಿಷ್ಟತೆಯ ಅರಿವನ್ನು ಅಳವಡಿಸಿ ಕೊಂಡು ಹನುಮಂತಯ್ಯನವರು ರಾಜ್ಯದ ರಾಜಧಾನಿಯಾದ ಬೆಂಗಳೂರಿನ ಹ್ರದಯ ಭಾಗದಲ್ಲಿ 2 ಕೋಟಿ ರೂ. ಗೋ ಅಧಿಕ  ವೆಚ್ಚದಲ್ಲಿ 1956 ರರಲ್ಲಿ ಇದನ್ನು ನಿರ್ಮಿಸಿದರು. ಇಂತಿಪ್ಪ ವಿಧಾನ ಸೌಧ ಅದರದ್ದೇಯಾದ ಗೌರವ ,ಘನತೆಯನ್ನು ಹೊಂದಿದೆ . ಸೌಧವನ್ನು ದೇವಾಲಯವೆಂದೇ ಪರಿಗಣಿಸಲಾಗಿದೆ . ದೈವಭಕ್ತಿ ,ದೈವೀ ನಿಷ್ಠೆಯ ಗೌರವ ಭಾವದ ಪ್ರತೀಕವಾಗಿದೆ  ಎಂದರೆ ಅದು ಅತಿಶಯೋಕ್ತಿಯಾಗಲಾರದು . ಜನಗಳ ಸೇವೆಯೇ ಜನಾರ್ಧನ ಸೇವೆ ಎಂದಾಲೋಚಿಸುವ ಜನಪ್ರತಿನಿಧಿಗಳು ಭಕ್ತಿ ಭಾವದಿಂದಲೇ  ಪ್ರವೇಶಿಸಿ ಧನ್ಯತಾ ಭಾವವವನ್ನು ಮೆರೆಯುತ್ತಾರೆ .   ಅದೇ ಸತ್ಯ .. ಅದೇ ನಿತ್ಯವೂ ಕೂಡಾ ಹೌದು . ಆದರೆ  ಬಹಳ ಬೇಸರದ ವಿಚಾರವೆಂದರೆ ಕಾಲಘಟ್ಟ ಬದಲಾಗುತ್ತಿದೆ . ಕಾಲ ಚಕ್ರದ ಗ್ರಹಗತಿಯಲ್ಲಿ ವಿಧಾನಸೌಧ ಕರಗುತ್ತಿದೆ .. ಮುಮ್ಮುಲ ಮರುಗುತ್ತಿದೆ .
ಸೌಧ ಪ್ರವೇಶಿಸಲು ದೇವರು ಮಾಡಿ ಕೊಟ್ಟ ಅವಕಾಶವೆಂದು ಭಾವಿಸಬೇಕಾದ ಇಂದಿನ ಕೆಲವು ಮಂತ್ರಿ ಮಹೋದಯರು ವಾಸ್ತು ,ಜ್ಯೋತಿಷ್ಯದ ಎಂಬ ಪದ್ದತಿಗೆ ದಾಸರಾಗಿ ವಾಸ್ತು ಶಿಲ್ಪದಂತಿರುವ ವಿಧಾನ ಸೌಧದ ಗೋಡೆಯನ್ನು ಒಡೆಯುವ ಯೋಜನೆಗೆ ಕಟಿ ಬದ್ದರಾಗಿದ್ದಾರೆ  . ಪೂಜನೀಯ ಭಾವದಿಂದ ಅದನ್ನು ಆರೈಕೆ ಮಾಡಬೇಕಾದುದ್ದು ಅವರ ಕರ್ತವ್ಯದ ಜೊತೆಗೆ ,ಜವಾಬ್ದಾರಿಯೂ ಕೂಡಾ ಹೌದು . ಆದರೆ ಇಷ್ಟ ಬಂದಂತೆ ಹೇಸಿಗೆ(ನೀಲಿ ಚಿತ್ರ ವೀಕ್ಷಣೆ ಸೇರಿದಂತೆ  ) ಪ್ರವತ್ತಿಯನ್ನು ತಾಳುತ್ತಿರುವ ಇಂತವರಿಗೆ ಕಠಿಣ ಕಾನೂನು ಇಲ್ಲವೇ ?


ಶುಕ್ರವಾರ, ಮೇ 31, 2013

ಉಡುಪಿ ಶ್ರೀಕೃಷ್ಣಮಠ ಮುಜರಾಯಿ ಇಲಾಖೆಗೆ ಒಳಪಡಿಸಬಾರದು .

ಮುಖ್ಯ ಮಂತ್ರಿ ಸಿದ್ದರಾಮಯ್ಯ ಇತ್ತೀಚಿಗೆ ಉಡುಪಿ ಶ್ರೀಕೃಷ್ಣ ಮಠವನ್ನು ರಾಜ್ಯದ  ಮುಜರಾಯಿ ಇಲಾಖೆಗೆ ಸೇರ್ಪಡೆ ಗೊಳಿಸಬೇಕೆಂಬ ತೀರ್ಮಾನ ಕೈಗೊಂಡಿದ್ದರ ಬಗ್ಗೆ ಯಾರೂ ಚಾಕರವೆತ್ತದಿವುದು ಬೇಸರದ ವಿಚಾರ.  

ಮದ್ವ ಕ್ಷೇತ್ರ ಉಡುಪಿ ಶ್ರೀ ಕೃಷ್ಣ ಮಠದಲ್ಲಿ 8 ಮಠಗಳಿದ್ದೂ ಎಲ್ಲವೂ ಮಠಧೀಶರ ಉಪಸ್ತಿತಿಯಲ್ಲಿ ಪೂಜಾ -ಪುನಸ್ಕಾರ ಅನುರಣಿಸುತ್ತದೆ . ಮಠದಲ್ಲಿ ಅತೀ ಹೆಚ್ಚು ದೇಣಿಗೆ ಸಂಗ್ರಹ ವಾಗುತ್ತಿರುವುದು ಸತ್ಯ .ಇದು ಸಾಕಷ್ಟು ಜನಪಯೋಗಿ ಕಾರ್ಯದಲ್ಲಿ ತೊಡುಗುತ್ತಿದೆ . ದಿನಕ್ಕೆ ಸುಮಾರು 56 ,000 ವಿಧ್ಯಾರ್ಥಿಗಳಿಗೆ ಮಠದ ಅಧೀನ ದಿಂದ ಮಧ್ಯಾಹ್ನ ಊಟ ದೊರಕುತ್ತಿದೆ . ಇದು ಒಂದು ಲೆಕ್ಕದಲ್ಲಿ ಮುಜರಾಯಿ ಇಲಾಖೆಗೆ  ಸೇರ್ಪಡೆಗೊಂಡಿದ್ದೆಯಾದರೇ  ಇದ್ದಕ್ಕೆಲ್ಲ ಕಡಿವಾಣ ಬೀಳದೇ ಇರದು . ಈಗಾಗಲೇ ನಾವು ಗಮನಿಸಿದಂತೆ ಧಾರ್ಮಿಕ ದತ್ತಿ ಕಾನೂನಿನನ್ವಯದಡಿ  ಇಲಾಖೆಗೆ ಒಳಪಟ್ಟ ಕಲವು ಧಾರ್ಮಿಕ ಕ್ಷೇತ್ರಗಳ  ವಸ್ತು ಸ್ಥಿತಿ ಕಣ್ಮುಂದೆ ಗೋಚರಿಸುತ್ತಿದೆ , ಹಲವೆಡೆ ಸಮಯಕ್ಕೆ ಸರಿಯಾಗಿ ಸ್ವಚ್ಛ ಕಾರ್ಯವೂ ಸಹಾ  ನಡೆಯದೇ ನೆನೆಗುದಿಗೆ ಬಿದ್ದಿದ್ದುನ್ನು ವರ್ಣಿಸುವ ಅವಶ್ಯಕತೆಯೇ ಇಲ್ಲ .ಆದ ಕಾರಣ ಇದನ್ನು ಇಲಾಖೆಗೆ ಸೇರಿಸ ಬಾರದೆಂಬ ಗಟ್ಟಿ  ಕೂಗು ಮೊಳಗುತ್ತಿದ್ದರೂ , ಬಲವಾದ ಧ್ವನಿ ಅಡಗಿ ಕುಳಿತು ಸಾಥ್ ನೀಡದಿರವುದು ಅಚ್ಚರಿ .ಅಸಮಾಧಾನಕ್ಕೆ ಕಾರಣವಾಗಿದೆ . ಪ್ರಸ್ತುತ ಆಡಳಿತ ಪಕ್ಷ ತಮ್ಮದೆಯಾದರೂ , ವೈಯಕ್ತಿಕ ಸಪೋರ್ಟ್ ನ  ವರ್ಚಸ್ಸನ್ನು ಬದಿಗಿಟ್ಟು ಕಾಂಗ್ರೆಸ್ ನ ಹಿರಿಯ ಮುಖಂಡ ಕೇಂದ್ರದ ಮಾಜಿ ಸಚಿವರಾದ ಜನಾರ್ಧನ ಪೂಜಾರಿ ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದೂಸಂತೋಷ / ಸುತ್ತರ್ಹವಾದರೂ , ಮೊನ್ನೆ ಮೊನ್ನೆ ಅಧಿಕಾರದ ಗದ್ದುಗೆ ಏರಿದ ಉಡುಪಿಯ ಶಾಸಕ ಪ್ರಮೋದ್ ಮದ್ವರಾಜ್ ತಮ್ಮ ಭಕ್ತಿ ಪರಕಾಷ್ಟೆಯ ಅಭಿಮಾನದಿಂದ  ಶ್ರೀಕೃಷ್ಣನ  ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರೂ ಸಹಾ ಶ್ರೀಕೃಷ್ಣ ಮಠದ ಉಳಿವಿಗೆ ಶ್ರಮಿಸದಿರವುದು ಪ್ರಜ್ಞಾವಂತ ನಾಗರಿಕರ ಆಕ್ರೋಶಕ್ಕೆ ಗುರಿಯಾಗಿದೆ.