ಕೆಂಗಲ್
ಹನುಮಂತಯ್ಯನವರ ಕನಸ್ಸಿನ ಕೂಸು ಇದು. ಇವರು ಮುಖ್ಯ ಮಂತ್ರಿ ಯಾಗಿದ್ದ ಸಂಧರ್ಭ ತಮ್ಮ ಆಡಳಿತಾವಧಿಯಲ್ಲಿ
ಇದನ್ನು ರಚಿಸಿದ್ದರು . ಪ್ರಜಾ ಪ್ರಭುತ್ವದ ವ್ಯವಸ್ಥೆಯಡಿಯಲ್ಲಿ ಆರಿಸಿ ಬಂದ ಜನಪ್ರತಿನಿಧಿಗಳನ್ನ
ಒಗ್ಗೂಡಿಸಿ ಜನಹಿತಕ್ಕಾಗಿ ಚರ್ಚಾಕೂಟವನ್ನು ಏರ್ಪಡಿಸಲು ನಿರ್ಮಿಸಲ್ಪಟ್ಟ ಸಂಸತ್ತು ಇದಾಗಿದೆ
.
ವಿಶ್ವದಾದ್ಯಂತ ಸಂಚಾರ ಮಾಡಿ ಅಲ್ಲಲ್ಲಿನ ಒನಪು ,ವೈಯಾರ ,ವಿಸ್ಮಯ ,ವಿಶಿಷ್ಟತೆಯ
ಅರಿವನ್ನು ಅಳವಡಿಸಿ ಕೊಂಡು ಹನುಮಂತಯ್ಯನವರು ರಾಜ್ಯದ ರಾಜಧಾನಿಯಾದ ಬೆಂಗಳೂರಿನ ಹ್ರದಯ ಭಾಗದಲ್ಲಿ
2 ಕೋಟಿ ರೂ. ಗೋ ಅಧಿಕ ವೆಚ್ಚದಲ್ಲಿ 1956 ರರಲ್ಲಿ ಇದನ್ನು ನಿರ್ಮಿಸಿದರು. ಇಂತಿಪ್ಪ
ವಿಧಾನ ಸೌಧ ಅದರದ್ದೇಯಾದ ಗೌರವ ,ಘನತೆಯನ್ನು ಹೊಂದಿದೆ . ಸೌಧವನ್ನು ದೇವಾಲಯವೆಂದೇ ಪರಿಗಣಿಸಲಾಗಿದೆ
. ದೈವಭಕ್ತಿ ,ದೈವೀ ನಿಷ್ಠೆಯ ಗೌರವ ಭಾವದ ಪ್ರತೀಕವಾಗಿದೆ ಎಂದರೆ ಅದು ಅತಿಶಯೋಕ್ತಿಯಾಗಲಾರದು .
ಜನಗಳ ಸೇವೆಯೇ ಜನಾರ್ಧನ ಸೇವೆ ಎಂದಾಲೋಚಿಸುವ ಜನಪ್ರತಿನಿಧಿಗಳು ಭಕ್ತಿ ಭಾವದಿಂದಲೇ
ಪ್ರವೇಶಿಸಿ ಧನ್ಯತಾ ಭಾವವವನ್ನು ಮೆರೆಯುತ್ತಾರೆ . ಅದೇ ಸತ್ಯ .. ಅದೇ ನಿತ್ಯವೂ
ಕೂಡಾ ಹೌದು . ಆದರೆ ಬಹಳ ಬೇಸರದ ವಿಚಾರವೆಂದರೆ ಕಾಲಘಟ್ಟ ಬದಲಾಗುತ್ತಿದೆ . ಕಾಲ ಚಕ್ರದ
ಗ್ರಹಗತಿಯಲ್ಲಿ ವಿಧಾನಸೌಧ ಕರಗುತ್ತಿದೆ .. ಮುಮ್ಮುಲ ಮರುಗುತ್ತಿದೆ .
ಸೌಧ ಪ್ರವೇಶಿಸಲು ದೇವರು
ಮಾಡಿ ಕೊಟ್ಟ ಅವಕಾಶವೆಂದು ಭಾವಿಸಬೇಕಾದ ಇಂದಿನ ಕೆಲವು ಮಂತ್ರಿ ಮಹೋದಯರು ವಾಸ್ತು ,ಜ್ಯೋತಿಷ್ಯದ
ಎಂಬ ಪದ್ದತಿಗೆ ದಾಸರಾಗಿ ವಾಸ್ತು ಶಿಲ್ಪದಂತಿರುವ ವಿಧಾನ ಸೌಧದ ಗೋಡೆಯನ್ನು ಒಡೆಯುವ ಯೋಜನೆಗೆ
ಕಟಿ ಬದ್ದರಾಗಿದ್ದಾರೆ . ಪೂಜನೀಯ ಭಾವದಿಂದ ಅದನ್ನು ಆರೈಕೆ ಮಾಡಬೇಕಾದುದ್ದು ಅವರ ಕರ್ತವ್ಯದ
ಜೊತೆಗೆ ,ಜವಾಬ್ದಾರಿಯೂ ಕೂಡಾ ಹೌದು . ಆದರೆ ಇಷ್ಟ ಬಂದಂತೆ ಹೇಸಿಗೆ(ನೀಲಿ ಚಿತ್ರ ವೀಕ್ಷಣೆ ಸೇರಿದಂತೆ
) ಪ್ರವತ್ತಿಯನ್ನು ತಾಳುತ್ತಿರುವ ಇಂತವರಿಗೆ ಕಠಿಣ ಕಾನೂನು ಇಲ್ಲವೇ ?


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ