ಸೋಮವಾರ, ಅಕ್ಟೋಬರ್ 24, 2022
ಇಂತಹ ಎಡಬಿಡಂಗಿಗಳಿಗೆ ಪ್ರತಿಕ್ರೀಯೆ ನೀಡುವ ಅಗತ್ಯ ವಿಲ್ಲಾ !
'ಕಾಂತಾರ'ಸಿನಿಮಾ ಇನ್ನಿಲ್ಲದ ದಾಖಲೆಗಳನ್ನು ಮಾಡಿ ಮುನ್ನುಗುತ್ತಿದೆ ,ಸೆ 30 ರಂದು ತೆರೆಕಂಡು,ಎಲ್ಲೂ ನೆಗೆಟಿವ್ ಕಾಮೆಂಟ್ ಗಳಿಲ್ಲದೇ ಎಲ್ಲಾ ವರ್ಗದ ಸಿನಿ ವೀಕ್ಷಕರು,ವಿಮರ್ಶಕರೂ ಸಹಾ ೫ ಕ್ಕೆ ನಾಲ್ಕೂವರೆ ರೇಟಿಂಗ್ ಕೊಟ್ಟಿದ್ದಾರೆ. ಸಿನಿಮಾವು ಕೂಡಾ ಅಷ್ಟೇ ಅದ್ಭುತವೂ ಕೂಡಾ ಆಗಿತ್ತು. ದೈವರಾಧನೆ, ಆಚಾರ -ವಿಚಾರ, ನಡೆ-ನುಡಿ, ನೆಲ-ಜನ ಸಂಸ್ಕೃತಿಯನ್ನು ಹೊತ್ತು ತಂದ ನೈಜ ಕಥಾ ಹಂದರವನ್ನು ಹೊಂದಿರುವ ಪೂರ್ಣ ಕುಟುಂಬ ಕುಳಿತು ನೋಡುವಂತಾ ಕಮರ್ಷಿಯಲ್ ಸಿನಿಮಾ ಇದಾಗಿತ್ತು. ಇದಕ್ಕಾಗಿಯೇ ಇಂದು ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ,ಇತರ ಭಾಷೆಗಳಲ್ಲಿ ರಿಮೇಕ್ ಆಗಿ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಮೂಡಿ ಬಂದಿದ್ದು ಇತಿಹಾಸ.ಇಂತಿಪ್ಪ ಸಿನಿಮಾದ ಬಗ್ಗೆ ಮೊನ್ನೆ ಕೆಲಸ ಇಲ್ಲದ ನಾಲಾಯಕ್ ಒಬ್ಬ ನಾಲಿಗೆ ಹರಿ ಬಿಟ್ಟಿದ್ದಾನೆ. ಇಲ್ಲ-ಸಲ್ಲದ ವಿಚಾರಗಳಿಗೆ ಕಾಂಟ್ರವರ್ಸಿ ಕ್ರೀಯೇಟ್ ಮಾಡುವ ಚೇತನ್ ಎಂಬಂತಾ ಕಾಂತಾರ ಸಿನಿಮಾದಲ್ಲಿ ಅಳವಡಿಸಲಾಗಿರುವ ದೈವರಾಧನೆ ಹಿಂದೂ ಧರ್ಮಕ್ಕೆ ಸಂಬಂಧ ಪಟ್ಟಿದ್ದು ಅಲ್ಲ ಅನ್ನುತ್ತಿದ್ದಾನೆ.ವೈದಿಕ, ಭ್ರಾಹ್ಮಣ್ಯ ಮಣ್ಣಾಗಟ್ಟಿ ಎಂದು ವಿಚಾರ ಹೀನ ವಿವಾದ ಎಬ್ಬಿಸುತ್ತಿರುವ ಈತ ಅದೇನೋ ದೊಡ್ಡ ಅತಿರಥನಲ್ಲ ಅಮೇರಿಕಾದಲ್ಲಿ ಜನ್ಮ ತಾಳಿ ಭಾರತದ ನೆಲದಲ್ಲಿ ನೆಲೆನಿಂತ ಕಮ್ಯೂನಿಷ್ಟ್ ಕಮಂಗಿ ಅಂತೆ. 'ಆ ದಿನಗಳು' ಎಂಬ ಸಿನಿಮಾದ ಮೂಲಕ ನಟನಾಗಿ ಗುರುತಿಸಿಕೊಂಡವನು.ಅದೇನೋ ಆ ದಿನಗಳಲ್ಲಿ ಸ್ವಲ್ಪ ಹೆಸರು ಮಾಡಿತ್ತು ಈತನ 'ಆ ದಿನಗಳು 'ಎಂಬ ಮೂವಿ.ಮತ್ತೆಲ್ಲಾ ಏಕದಂ ಪ್ಲಾಪ್ ! 15 ವರ್ಷಗಳಲ್ಲಿ ಕೇವಲ 4 ಸಿನಿಮಾ ಮಾಡಿ ಬದಿಗೆ ಸೇರಿದ.ಯಾವೊಬ್ಬ ನಿರ್ದೇಶಕನೂ ಅವಕಾಶ ಕೊಡದೇ ಇದ್ದಾಗ ನಾನು ಸಮಾಜ ಸೇವಕ ಎಂಬ ಹಣೆಪಟ್ಟಿ ಕಟ್ಟಿ ಕೊಂಡು ಹೀಗೆ ವಿವಾದ ಮಾಡುತ್ತಲೇ ಬಂದವನು. ಈತನ ವರ್ತನೆಯನ್ನು ವರ್ಣರಂಜಿತವಾಗಿ ತೋರಿಸುವ ಬಿಲಾಸ್ ಬಿಟ್ಟ ಮಾಧ್ಯಮಗಳು ಆತನನ್ನು ದೊಡ್ಡ ಹೀರೊವನ್ನಾಗಿ ಮಾಡಿ ಬಿಟ್ಟಿವೆ. ಆತನ ಸ್ಟೇಟ್ಮೆಂಟ್ ಗೆ ರಿಪ್ಲೇ ಮಾಡುವ ನಾವುಗಳೂ ಸಹಾ ಅದಕ್ಕೆ ಸಾತ್ ಕೊಟ್ಟು ಉರಿಯುತ್ತಿರುವ ಬೆಂಕಿ ತುಪ್ಪ ಸುರಿಸುತ್ತಿದ್ದೇವೆ.ಆತನ ಮಾತಿನಲ್ಲಿ ಎಳ್ಳಷ್ಟೂ ಆರ್ಥವಿಲ್ಲದಾಗ ಅದನ್ನು ಬದಿಗಿರಿಸಿ ಸುಮ್ಮನಾಗಬೇಕು ಅಲ್ವೇ? ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದೇ ? ಗಾದೆ ಮಾತು ಎಷ್ಟು ಸೊಗಸಾಗಲಿದೆ.ನಿನ್ನೆ ಉಂಟಾಗಿದ್ದೂ ಅಷ್ಟೇ ತುಂಬಾ ದಿನಗಳ ನಂತರ ಅಂದರೇ ಮೀಟೂ ವಿವಾದ ಬಳಿಕ ಮತ್ತೆ ಮುಖ್ಯ ವಾಹಿನಿಗೆ ಬಂದಿದ್ದಾನೆ. ಕಾಂತಾರ ಸಿನಿಮಾ ವಿಚಾರಕ್ಕೆ ಸಂಬಂಧಿಸಿ ಟ್ವಿಟ್ ಮಾಡಿದ್ದಾನೆ . ಅವನ ಬಗ್ಗೆ ಎಲ್ಲ ಗೊತ್ತಿರುವ ನಾವುಗಳು ಅದಕ್ಕೆ ಸೊಪ್ಪು ಹಾಕುವುದು ತಪ್ಪು.ತಟಸ್ಥ ನಿಲುವನ್ನು ತೆಳೆಯಬೇಕಿತ್ತು ಅವನ ಅಸಂಬದ್ಧ ಹೇಳಿಕೆಗೆ ಪ್ರತಿಕ್ರೀಯೆ ಕೊಡುವುದು ಮಹಾ ತಪ್ಪು. ಅದು ಕೆಸರು ಅದಕ್ಕೆ ಕಲ್ಲು ಹಾಕಿದ್ರೆ ಅದು ನಮ್ಮ ಮುಖಕ್ಕೆ ಸೀರುವುದು ಅಲ್ವೇ ? ಈ ಕೆಲವು ಮೀಡಿಯಾಗಳಿಗೂ ಕೆಲಸ ಇಲ್ಲ ಈ ತರಹದ್ದೇ ಸುದ್ದಿ ಮಾಡಿ ಟಿ ಆರ್ ಪಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ,ಆತನನ್ನು ಅಟ್ಟಕ್ಕೆ ಏರಿಸಿಬಿಟ್ಟಿವೆ.ಒಂದಷ್ಟು ಹಿಂದೂ ಮುಖಂಡರ ಬಳಿ ಪ್ರತಿಕ್ರೀಯೆ ,ಡಿಬೇಟ್ ಕಾರ್ಯಕ್ರಮವನ್ನೆಲ್ಲಾ ಪ್ರಾರಂಭಿಸಿ ಬಿಟ್ಟಿವೆ.ಮೊಸರಲ್ಲಿ ಕಲ್ಲು ಹುಡುಕುವ ಕಾಂಜಿ ಪಿಂಜಿಗಳಿಗೆಲ್ಲಾ ಸಿನಿಮಾ ನಿರ್ದೇಶಕ ರಿಷಬ್ ಶೆಟ್ಟಿಯ ಉತ್ತರವೇ ಕರೆಕ್ಟ್ . 'ಅದಕ್ಕೆಲ್ಲ ಏನು ಕಾಮೆಂಟ್ ಮಾಡೋಲ್ಲ ' ಇದು ಬುದ್ದಿವಂತರ ಲಕ್ಷಣ.ಅಮೇರಿಕಾದಲ್ಲಿ ಹುಟ್ಟಿ ಭಾರತೀಯ ಧರ್ಮ , ಸಂಸ್ಕೃತಿಯ ಬಗ್ಗೆ ಮಾತನಾಡವ ಯೋಗ್ಯತೆ ಇಲ್ಲದವನಿಗೆ ಪಾಠ ಮಾಡುವ ಅಗತ್ಯ ಇಲ್ಲ.ಕತ್ತೆಗೆನೂ ಗೊತ್ತು ಕಸ್ತೂರಿ ಪರಿಮಳ ಆದರೂ ಕೆಲವಂದಿಷ್ಟು ಮಂದಿ ಮನಸ್ಸು ತಡೆಯಲಾಗದೇ ಆತನಿಗೆ ಸರಿಯಾಗೇ ಟಾಂಗ್ ಕೊಟ್ಟಿದ್ದಾರೆ.ಆತ ಸರಿ ಹೋಗುವುದೇ ಇಲ್ಲ. ಅಷ್ಟಕ್ಕೂ ಆತನೇನೂ ಧರ್ಮ ಪಂಡಿತನಲ್ಲ ವಿದ್ವಾಂಸನಂತೂ ಅಲ್ಲವೇ ಅಲ್ಲ ಇನ್ನಾದರೂ ಇಂತಹ ಎಡಬಿಡಂಗಿಗಳಿಗೆ ಪ್ರತಿಕ್ರೀಯೆ ನೀಡುವ ಅಗತ್ಯ ಇಲ್ಲ ಏನಂತೀರಿ ?
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ