ಸೋಮವಾರ, ಏಪ್ರಿಲ್ 4, 2022
ಸನಾತನ ಸಂಸ್ಕೃತಿಯನ್ನು ಮರೆಯದಿರೋಣ
ಬುದ್ದಿವಂತರ ನಾಡು ,ಕೃಷ್ಣನ ನಗರಿ ಉಡುಪಿಯಿಂದ ಆರಂಭ ಗೊಂಡ ಹಿಜಾಬ್ ವಿವಾದ ಕರಾವಳಿ ಮಾತ್ರವಲ್ಲದೇ ರಾಜ್ಯಾದ್ಯಾ೦ತ,ಹಿಡಿದು ದೇಶ ವ್ಯಾಪಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿತ್ತು.ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮರ್ಯಾದೆ ಬೀದಿಗೆ ಬಂದಿತ್ತು.ಹಿಂದೂ -ಮುಸ್ಲಿಂ ಬಾಯ್ -ಬಾಯ್ ಅಂತಿದ್ದವರು ದುಶ್ಮನ್ ತನವನ್ನು ಹೊಂದುವಂತಾಯಿತು.ಕೋಮು ಸಾಮರಸ್ಯ,ಧಾರ್ಮಿಕ ಸಂಘರ್ಷ ಒಳಗೊಳಗೆ ಉರಿಯಲಾರಂಭಿಸಿತು.ಕಿಚ್ಚು ಹಚ್ಚಿದ ಹಿಜಾಬ್ ಪರ ಆರು ವಿದ್ಯಾರ್ಥಿನೀಯರು ಹೈಕೋರ್ಟ್ ಮೆಟ್ಟಿಲೇರಿದ್ದು,ಮೌಲ್ಯಯುತವಾದ ತೀರ್ಪು ಉಚ್ಚ ನ್ಯಾಯಾಲಯದಿಂದ ಸಮವಸ್ತ್ರದ ಪರ ಬಂದರೂ ,ಹಿಜಾಬ್ ಧಾರಿಗಳಿಗೆ ಹಾಗೂ ಅದಕ್ಕೆ ಕುಮ್ಮಕ್ಕು ಕೊಡುವ ಎಡಬಿಡಂಗಿಗಳಿಗೆ ತೃಪ್ತಿ ಕಾಣದೇ ಸಂವಿಧಾನದ ವಿರುದ್ಧ ಕಿಡಿ ಕಾರಲಾರಂಭಿಸಿವೆ.ಕೋರ್ಟ್ ನ ತೀರ್ಪುನ್ನು ಗೌರವಿಸದೇ ದಿಕ್ಕರಿಸಿ ನಮ್ಮ ಮುಂಡು ವಾದ,ಕಾನೂನುನ್ನು ಪ್ರಸ್ತುತ ಪಡಿಸುತ್ತಿವೆ. ತೀರ್ಪನ್ನು ಖಂಡಿಸಿ ರಾಜ್ಯಾದ್ಯಂತ ಮುಸ್ಲಿಂ ವರ್ತಕರು ಒಂದು ದಿನ ಮಟ್ಟಿಗೆ ತಮ್ಮ ಎಲ್ಲಾ ಅಂಗಡಿ ಮುಂಗಟ್ಟುನ್ನು ಮುಚ್ಚಿ ವ್ಯಾಪಾರ, ವ್ಯವಹಾರವನ್ನು ಸ್ಥಗಿತ ಗೊಳಿಸಿ ಪ್ರತಿಭಟನೆ ನಡೆಸಿದ್ದರು.ಇದಕ್ಕುತ್ತರವಾಗಿ ಹಿಂದೂ ಸಂಘಟನೆಗಳು ಕೂಡಾ ಕೋಲ್ಡ್ ವಾರ್ ಆರಂಭಿಸಿವೆ.ಹೇಳಿ- ಕೇಳಿ ಇದೀಗ ಜಾತ್ರಾ ಉತ್ಸವದ ಸಮಯ ಕರೋನ ಕಾಲಘಟ್ಟದಲ್ಲಿ ಕಳೆದ ಎರಡು ವರ್ಷಗಳಿಂದ ನಿಂತಿದ್ದ ಹಬ್ಬ-ಹರಿದಿನಗಳು ಮತ್ತೆ ಚಿಗುರು ಒಡೆಯಲು ಆರಂಭಿಸಿವೆ. ಕರಾವಳಿಯ ಜನಪ್ರೀಯ ದೇವಸ್ಥಾನದ ಜಾತ್ರೆಗಳು ಒಂದರ ಮೇಲೊಂದರಂತೆ ಚಾಲನೆ ಪಡೆದು ಕೊಂಡಿದೆ.ಮುಸ್ಲಿಂ ಸಮುದಾಯದವರಿಗೆ ವ್ಯಾಪಾರಕ್ಕೆ ಅವಕಾಶ ವಿಲ್ಲಾ ಎಂದು ಹಿಂದೂ ಸಂಘಟನೆಗಳು ಬ್ಯಾನರ್ ,ಭಿತ್ತಿ ಪತ್ರ ಗಳ ಅಳವಡಿಸಿದ್ದಾರೆ.ಶಾಂತಿ ಸುವವ್ಯಸ್ಥೆಯಡಿಯಲ್ಲಿ ಸ್ಥಳೀಯ ಆಡಳಿತ ಸಂಸ್ಥೆಯಿಂದಲೂ ಪರವಾನಿಗೆ ಮೂಲಕ ಮುಸ್ಲಿಂ ವ್ಯಾಪಾರಸ್ಥರಿಗೆ ಬಹಿಷ್ಕರಿಸಲಾಗಿದೆ .ಕರಾವಳಿ ಯಿಂದಲೇ ಪ್ರಾರಂಭ ಗೊಂಡು ,ಮಾತ್ರವಲ್ಲದೇ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುವ ಜಾತ್ರೆ, ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ವ್ಯಾಪಾರಕ್ಕೆ ಅನುಮತಿ ನೀಡದೇ ಬಹಿಷ್ಕಾರ ಹಾಕುವ ಪ್ರಕ್ರಿಯೆ ನಡೆಯುತ್ತಿದ್ದರೆ, ಇದಕ್ಕೆ ಮುಸ್ಲಿಂ ಸಂಘಟನೆಗಳು, ಕಾಂಗ್ರೆಸ್ ಮುಖಂಡರು ಸೇರಿದಂತೆ ಕೆಲವರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ವಿಧಾನ ಸೌಧದಲ್ಲೂ ಪ್ರಸ್ತಾವ ಗೊಂಡು ಕೋಲಾಹಲ ಮೂಡಿಸಿದೆ .ಇದೇ ವಿಷಯ ಜಾಲತಾಣದಲ್ಲಿಯೂ ಭಾರಿ ಚರ್ಚೆ ಶುರುವಾಗಿದ್ದು, ಹಲವಾರು ನೆಟ್ಟಿಗರು ಮೂರು ತಿಂಗಳ ಹಿಂದೆ ಉಡುಪಿಯ ಗಂಗೊಳ್ಳಿಯಲ್ಲಿ ನಡೆದಿರುವ ಘಟನೆಯನ್ನು ನೆನಪಿಸಿಕೊಂಡು ಕಿಡಿ ಕಾರುತ್ತಿದ್ದಾರೆ.ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗಂಗೊಳ್ಳಿಯಲ್ಲಿ ಗೋಹತ್ಯೆ ವಿಚಾರವಾಗಿ ಕಳೆದ ಅಕ್ಟೋಬರ್ನಲ್ಲಿ ಕೆಲವು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇದರಲ್ಲಿ ಹಲವು ಮೀನುಗಾರರೂ ಭಾಗಿಯಾಗಿದ್ದರೆಂದು ಆಕ್ರೋಶಗೊಂಡಿದ್ದ ಮುಸ್ಲಿಂ ಮುಖಂಡರು ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಹಿಂದೂ ಮೀನುಗಾರರಿಂದ ಮೀನು ಖರೀದಿಸುವುದನ್ನು ಸ್ಥಗಿತಗೊಳಿಸುವಂತೆ ಕರೆ ಕೊಟ್ಟಿದ್ದರು. ಮಾತ್ರವಲ್ಲದೇ ಒಂದಷ್ಟು ದಿನಗಳವರೆಗೆ ಹಿಂದೂ ವರ್ತಕರಿಂದ ಮೀನನ್ನೂ ಖರೀದಿಸುತ್ತಿರಲಿಲ್ಲ.ಆಗ ಯಾವ ಮುಖಂಡರೂ ವಿರೋಧ ವ್ಯಕ್ತಪಡಿಸಲಿಲ್ಲ, ಆಗಿನ ನಿಷೇಧಕ್ಕೆ ಯಾರೊಬ್ಬರೂ ತುಟಿ ಬಿಚ್ಚಿರಲಿಲ್ಲ ಪ್ರಶ್ನಿಸಿಲ್ಲ.ಹಿಂದೂ-ಮುಸ್ಲಿಮರು ಸಹೋದರರು, ಸಾಮರಸ್ಯ ಕಾಪಾಡಿಕೊಳ್ಳಬೇಕು ಎಂದು ಈಗ ಮನಬಂದಂತೆ ಹೇಳಿಕೆ ನೀಡುತ್ತಿರುವವರು ಆಗ ಹಿಂದೂ ಮೀನುಗಾರರು ವ್ಯಾಪಾರವಿಲ್ಲದೇ ದುಃಖಿಸುತ್ತಿದ್ದರೂ ಅವರ ನೆರವಿಗೆ ಏಕೆ ಬರಲಿಲ್ಲ ಎಂಬ ಪ್ರಶ್ನೆ ಪ್ರಜ್ಞಾವಂತರಲ್ಲಿ ಕಾಡುತ್ತಿದೆ. ಏನೇ ಇರಲಿ ಸಭ್ಯರ ನಾಡಿನಲ್ಲಿ ಈ ವಿವಾದ ಅಂತ್ಯ ಕಾಣಬೇಕು . ಹಿಂದೂಯೇತರ ವ್ಯಾಪಾರಸ್ಥರಿಗೆ ಜಾತ್ರೆ, ಮಹೋತ್ಸವಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡದ ಪ್ರಕ್ರಿಯೆ ಮುಂದುವರೆಯುತ್ತಲೇ ಇದೆ . ಕರಾವಳಿಯ ಮಂದಾರ್ತಿ ಜಾತೇ ಯಿಂದ ಆರಂಭ ಗೊಂಡಿತ್ತು.,ಕಾಪು ಮಾರಿ ಪೂಜೆ ಜಾತ್ರೆಯಿಂದ ಮುನ್ನೆಲೆಗೆ ಬಂದಿತ್ತು.ಜೊತೆಗೆ ಇದೀಗ ಹಲಾಲ್ ಎಂಬ ಅಂಶವೂ ಸಹಾ ಮಾಡುತ್ತಿದೆ . ಒಟ್ಟಾರೆ ಹಿಜಾಬ್ ನಿಂದ ಉಂಟಾದ ಧರ್ಮ ಪ್ರತಿಷ್ಠೆ- ಪ್ರರಾಕಾಷ್ಠೆ,ಧರ್ಮ ದಂಗಾಲ್ ಎಲ್ಲಿಯವರಿಗೆ ಬಂದು ಮುಟ್ಟುತ್ತೋ ಗೊತ್ತಿಲ್ಲ.ಹಲವು ಧರ್ಮೀಯರ ನಾಡು ,ಸನಾತನ ಸಂಸ್ಕೃತಿಯ ಬೀಡಿ ನಲ್ಲಿ ತಲೆದೋರಿದ ಈ ವಿವಾದ ಆದಷ್ಟು ಬೇಗ ಅಂತ್ಯ ಗೊಳ್ಳಲಿ ಭಾರತೀಯ ಸಂಸ್ಕೃತಿಯನ್ನು ಪ್ರೀತಿಸಬೇಕಾದ,ಗೌರವಿಸಬೇಕಾದ ಕರ್ತವ್ಯ ನಮ್ಮದು ಅಲ್ಲವೇ ?
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ