ಗುರುವಾರ, ಅಕ್ಟೋಬರ್ 25, 2018

ನಿಮ್ಮ ಅತೀರೇಕದ ಅಭಿಮಾನಕ್ಕೆ ಎಕ್ಕಡದಲ್ಲಿ ಹೊಡಿಬೇಕು !


ನಮ್ಮಲ್ಲಿ ಸಿನಿಮಾ ನಟ -ನಟಿಯರ ಮೇಲೆ ಇದ್ದಷ್ಟು ಅಭಿಮಾನ ಬೇರೆಯಲ್ಲೂ ಅಷ್ಟೊಂದು ಕಾಣಸಿಗುವುದಿಲ್ಲ . ರೀಲ್ ಹೀರೋಗಳನ್ನು ರಿಯಲ್ ಹೀರೊಗಳನ್ನಾಗಿ ನಾವು ಬಿಂಬಿಸ್ತವೆ . ಅಭಿಮಾನವನ್ನು ಮುಗಿಲೆತ್ತರಕ್ಕೆ ತೋರಿಸ್ತೇವೆ . ಎಷ್ಟೊಂದು ಅಭಿಮಾನ ನಮ್ಮ ತೆಕ್ಕೆಯಲ್ಲಿ ಅಂಟಿಕೊಂಡಿರುತ್ತವೆ ಅಂದ್ರೆ ತಮ್ಮ ಪ್ರಾಣವನ್ನು ಧಾರೆ ಎರೆಯುವುದಕ್ಕೂ ಸೈ ! ಇನ್ನೂ ಎಂತೆಂಥಾದೋ ಮನೋಭೂಮಿಕೆ ಅಡಕವಾಗಿರುತ್ತವೆ., ಅದೆಷ್ಟೋ ಮಂದಿ ನಟ ನಟಿಯರಿಗಾಗಿ ಪ್ರಾಣ ತ್ಯಾಗ ಮಾಡಿದ್ದನ್ನು ನೋಡಿದ್ದೇವೆ . ಪ್ರತಿಭಟನೆ ,ನಮ್ಮ- ನಮ್ಮ ಹಿರೊಗಳಿಗೋಸ್ಕರ ಹೋರಾಟ -ಹಾರಾಟ ,ಹಲ್ಲೆ -ಹರತಾಳ ಎಲ್ಲವನ್ನೂ ಕಂಡಿದ್ದೇವೆ . ಒಂದು ಸಿನಿಮಾ ರಿಲೀಸ್ ಆದರೆ ಸಾಕು ಸಿಹಿ ಹಂಚುವುದು ಪೋಸ್ಟ್ ಗಳಿಗೆ ಹಾಲೆ ರೆಯುವದು ಹೂವಿನ ಅಭಿಷೇಕ ಮಾಡುವುದು ಒಂದೇ ಎರಡೇ ಎಲ್ಲವೂ ಭೂತ ಭವಿಷ್ಯತ್ ಕಾಲದಲ್ಲಿ ಕಣ್ಣು ಮಿಟುಕಿಸುತ್ತದೆ . ಆದರೆ ವರ್ತಮಾನದ ವಿಚಾರವೆಂದರೆ ನಿಜಕ್ಕೂ ಅಸಹ್ಯ ಮೂಡಿಸುತ್ತಿದೆ . ಈ ಪರಿಯ ಅಭಿಮಾನಕ್ಕೆ ಎಕ್ಕಡದಲ್ಲಿ ಹೊಡಿಬೇಕು ಅನ್ನುವಷ್ಟು ಮಟ್ಟಿಗೆ ಮನಸ್ಸು ಭಾರವಾಗುತ್ತದೆ . 'ದಿ ವಿಲನ್' ಜೋಗಿ ಪ್ರೇಮ್ ನಿರ್ದೇಶನದ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ ಸಿನಿಮಾ ರಿಲೀಸ್ ಆಗಿತ್ತು . ನೆಲಮಂಗಲದಲ್ಲಿ ಒಂದು ಜೀವಂತ ಕೋಣವನ್ನು ಬಲಿ ಕೊಡಲಾಯಿತು . ಅದರ ರಕ್ತವನ್ನು ಸಿನಿಮಾ ಪೋಸ್ಟರ್ ಗೆ ಹಿಡಿದಿದ್ದಾರೆ ನಿನಿಮಾ ಒಳ್ಳೆ ರೀತಿಯಿಂದ ಓಡಬೇಕೆಂತೆ .ನಾಗರಿಕ ಸಮಾಜ ಎತ್ತ ಸಾಗುತ್ತಿದೆ ?. ನಿನಿಮಾದ ಒಂದು ಪೋಸ್ಟರ್ ಗೆ ಪ್ರಾಣಿ ಬಲಿ ಕೊಡುವುದೇ ? ಪ್ರಾಣಿ ಹಿಂಸೆ ಆಗುತ್ತಿದೆ ಎಂಬ ಕಾರಣಕ್ಕೆ ಐತಿಹಾಸಿಕ ಸಾಂಪ್ರದಾಯ ಬದ್ದ ಕಂಬಳ ಮತ್ತು ಜಲ್ಲಿ ಕಟ್ಟುವನ್ನು ನಿಷೇಧಕ್ಕೆ ಹೊರಟ 'ಪ್ರಾಣಿ ದಯಾ ಸಂಘ' ದವರಿಗೆ ಇದು ಕಣ್ಣಿಗೆ ಕಾಣಿಸಲಿಲ್ವೇ ?ಯಾರೂ ಕೂಡಾ ಇದರ ಬಗ್ಗೆ ತುಟಿ ಬಿಚ್ಚುತ್ತಿಲ್ಲ ,ಯೇಟ್ ಲಿಸ್ಟ್ ಸಿನಿಮಾ ಮಂದಿಯಾದರೂ ? ಇಂಥ ಅಂಧ ಅಭಿಮಾನಿಗಳಿಗೆ ಧಿಕ್ಕಾರ ವಿರಲಿ !

ಸೋಮವಾರ, ಅಕ್ಟೋಬರ್ 22, 2018

ಬಿಕಿನಿ ತೊಟ್ಟಷ್ಟು ಈಸಿ ಅಲ್ಲ ಈ ಬಟ್ಟೆ !!

ಕೆಲವೊಂದು ಜನಗಳಿಗೆ ತಾವು ಹೇಗಾದ್ರೂ ಮಾಡಿ ಪಬ್ಲಿಸಿಟಿ ತಕೊ ಬೇಕು ಎನ್ನುವ ಹುಚ್ಚು ಹಂಬಲ ಇರುತ್ತದೆ ,ಅಂತವರೂ ಎಂತದೇ ಕಾರ್ಯಕ್ಕೂ ಇಳಿಯುವುದಕ್ಕೆ ಹೇಸುವುದಿಲ್ಲ ., ಹಂಚು ಕಾಯುತ್ತಿರುವ ಹೊತ್ತಿಗೆ ದೋಸೆ ಹೊಯ್ಯಬೇಕು ಎಂದು ಇಂಥ ಮನಸ್ಸುಗಳು ಬಕ ಪಕ್ಷಿ ಗಳಂತೆ ಕಾಯುತ್ತಾ ಕುಳಿತಿರುತ್ತವೆ . ಕಳೆದ ಕೆಲವು ಸಮಯಗಳ ಹಿಂದೆ 'ಕಿಸ್ ಆಫ್ ಲವ್ ' ಎಂಬ ಹುಚ್ಚು ಮನೋಭಾವನೆಯ ವಿಚಾರ ಹೀನ ಅಭಿಯಾನವನ್ನು ಕೈ ಗೊಂಡು ತನ್ನ ಕಾಂಟ್ರವರ್ಸಿಯನ್ನು ಪ್ರದರ್ಶಿಸಿದ್ದ ಮಾಡೆಲ್ ರಹೀನಾ ಪಾತಿಮಾ ಇಂದು, ಪವಿತ್ರ ಕ್ಷೇತ್ರ ಶಬರಿಮಲೆ ಪ್ರವೇಶಿಸುವ ವಿಫಲ ಯತ್ನ ನಡೆಸಿದ್ದಾಳೆ .
ಕಿಸ್ ಆಪ್ ಲವ್ ನಂತಹ ಚಟುವಟಿಕೆಗಳೇ ಇವಳಿಗೆ ಹೇಳಿ ಮಾಡಿಸಿದ ಜಾಗ ಅದೇ ಅವಳ ಜೀವಾಳ ಕೂಡ ಹೌದು .,ಅಲ್ಲಿ ಬಿಚ್ಚಮ್ಮಳಾಗಿ ಬಿಟ್ಟಿ ಪ್ರಚಾರ ಪಡೆಯುದನ್ನು ಬಿಟ್ಟೂ, ಶಬರಿಮಲೆ ಹೆಸರು ಹೇಳಲಿಕ್ಕೂ ಯೋಗ್ಯತೆ ಇಲ್ಲದ ಮೂರು ಬಿಟ್ಟವಳು ,ವ್ರತಧಾರಿಯಾ ಕಪ್ಪು ಬಟ್ಟೆಯನ್ನು ಉಟ್ಟು ಬೆಟ್ಟ ಹತ್ತುವ ದೈರ್ಯಕ್ಕೆ ಮುಂದಾದಳು ಎಂದರೆ ? ಇವಳ ಜನ್ಮಕ್ಕಿಷ್ಟು ಬೆಂಕಿ ಹಾಕಾ , ಆ ಕಪ್ಪು ಬಟ್ಟೆ ಎಂದರೆ ಇವಳು ತೊಡುವ ಬಿಕಿನಿಯಷ್ಟು ಈಸಿ ಎಂದು ತಿಳಿದು ಕೊಂಡ ಳೇ ? ಆ ಬಟ್ಟೆಗಿರುವ ದೈವಾತ ಭಾವನೆ ಮರ್ಯಾದಾ ಪರಾಕಾಷ್ಠೆ, ಭಕ್ತಿ-ಭಾವ ಪರವಶತೆ ಬದಿಗಿರಲಿ ಒಬ್ಬಳು ಮುಸ್ಲಿಂ ಮಹಿಳೆಯಾಗಿ ಹಿಂದೂ ಪವಿತ್ರ ಕ್ಷೇತ್ರಕ್ಕೆ ಕಾಲಿಡುವುದಕ್ಕೂ ಮೊದಲು ಹಿಂದೆ ಮುಂದೆ ಗಮನಿಸಬೇಕು ಎಂಬ ಕಿಂಚಿತ್ ಅರಿವು ಇಲ್ಲವೇ ? ಲಜ್ಜೆ ಗೆಟ್ಟವಳ ಬುದ್ದಿ ಒತ್ತಟ್ಟಿಗಿರಲಿ ,ಅಂದು ಮುಸ್ಲಿಂ ಹುಡುಗಿ ಹಿಂದೂ ಧರ್ಮದ ಭಕ್ತಿಗೀತೆ ಹಾಡಿದಳು ಎಂಬ ಒಂದೇ ಕಾರಣಕ್ಕೆ ಎದ್ದೂ ಬಿದ್ದೂ ಬೊಬ್ಬಿಟ್ಟು ಬಹಿಷ್ಕಾರಕ್ಕೆ ಮುಂದಾದ ಮುಸ್ಲಿಂ ಧರ್ಮೀಯ ಮುಖಂಡರು ಇಂದು ಇವಳು ಮಾಡುತ್ತಿರುವುದು ಸರಿ ಎಂದು ಅನ್ನಿಸುತ್ತಿದೆಯೇ ? ಪುಕ್ಕಟೆ ಪ್ರಚಾರಕ್ಕಾಗಿ ನೂರಾರು ಪೊಲೀಸರ ಸುರ್ಪದಿಯೊಂದಿಗೆ ಜೀವ ಭಯದಿಂದ ಹೆಲ್ಮೆಟ್ ಧರಿಸಿ ಕ್ಷೇತ್ರಕ್ಕೆ ಕಾಲಿಟ್ಟ ರೆಹ್ಹನಾ ಫಾತಿಮಾಳ ವಿರುದ್ಧ ಯಾಕೆ ಯಾರು ಬಾಯಿ ಬಿಚ್ಚುತ್ತಿಲ್ಲ ? ಎಲ್ಲಿ ಹೋದಿರಿ ಬುದ್ದಿ ಜೀವಿಗಳೇ ? ಆಸ್ತಿಕ ಬಂಧುಗಳೇ ? ನಿಜಕ್ಕೂ ಖಂಡನೀಯ ! ಕೋಟ್ಯಂತರ ಹಿಂದೂಗಳ ಭಾವನೆಗೆ ದಕ್ಕೆ ತಂದ, ಕ್ರಾಂತಿಯ ಕಿಡಿಯನ್ನು ಹಚ್ಚಿಸಿದ ಇವಳ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಶಿಕ್ಷೆಯಾಗಲೇ ಬೇಕು . ನಿಜಕ್ಕೂ ಹಿಂದೂ ಮುಸ್ಲಿಂ ಭಾಯಿ- ಭಾಯಿ ಎಂಬ ಸಮಾನ ಮನಸ್ಕತೆ ಮುಸ್ಲಿಂ ಭಾಂದವರಲ್ಲಿ ಇದ್ದಿದ್ದೇ ಯಾದರೇ ಇಂತ ಮಿಟುಕಲಡಿಯನ್ನು ಇಸ್ಲಾಂ ಧರ್ಮದಿಂದ ಬಹಿಷ್ಕರಿಸುವದರ ಜೊತೆಗೆ ಗಡಿಪಾರು ಮಾಡಿ .

ಬುಧವಾರ, ಅಕ್ಟೋಬರ್ 3, 2018

ಕೋರ್ಟ್ ಆದೇಶ ಬಂದರೇನಂತೆ ಕತ್ತು ಹಿಡಿದು ನೂಕಿದರು ಸುಳಿಯಲಾರರು ಸಂಸ್ಕಾರಯುತ ನಾರಿಯರು


ಇತ್ತೀಚಿಗೆ ದಿನಗಳಲ್ಲಿ ಸುಪ್ರಿಂ ಕೋರ್ಟ್ ತೀರ್ಪು ಜನರ ಭಾವನೆಗೆ ದಕ್ಕೆ ತರುವಂತ, ನ್ಯಾಯಾಲಯದ ಮೇಲಿನ ನಂಬಿಕೆಯನ್ನು ಪೂರ್ಣ ನಂಬಿಕಾನರ್ಹಗೊಳಿಸುವಂತ,ಮನದಲ್ಲಿ ಕಿಚ್ಚು ಹಚ್ಚಿಸುವಂತಹ ಬೆಳೆವಣಿಗೆಗೆ ಕಾರಣವಾಗುತ್ತಿದೆ ಇದಕ್ಕೆ ಉದಾಹರಣೆ ಸಾಕಷ್ಟಿದೆ . ಇಂದಿನ ಈ ತಾಜಾ ಆದೇಶವನ್ನು ಗಮನಿಸುದಾದರೆ ನಿಜಕ್ಕೂ ರೋಷ ಉಕ್ಕಿ ಹರಿಯುತ್ತಿದೆ .
ಕಲಿಯುಗದಲ್ಲಿ ಕಾಣ ಸಿಗುವ ದೇವ ಆಸ್ತಿಕರ ಪಾಲಿಗೆ ಆರಾಧ್ಯ ದೇವವಾಗಿರುವ ಬ್ರಹ್ಮಚೈರ್ಯ ಅಯ್ಯಪ್ಪ ಸ್ವಾಮೀಯ ವಿಚಾರ .! ಶಬರಮಲೆಯಲ್ಲಿ ಮಹಿಳೆಯರಿಗೆ ಪ್ರವೇಶಕ್ಕೆ ಅನುಮತಿಯನ್ನು ಕೊಟ್ಟಂತ ತೀರ್ಪು .!!
ಸಾಕಷ್ಟು ವರ್ಷಗಳ ಹಿಂದೆ ಕೆಲವು ಎರಡಂಕಿಯ ಎಡಬಿಡ೦ಗಿಗಳು ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರಿಗೂ ಪ್ರವೇಶಾತಿ ಯನ್ನು ಒದಗಿಸಿಕೊಡಬೇಕು ಎಂದು ವಿವಿಧ ರೀತಿಯಲ್ಲಿ ಸರ್ಕಸ್ ಮಾಡಿ ಕೋರ್ಟ್ ಮೆಟ್ಟಿಲೇರಿದವು ಒಂದಷ್ಟು ದಿನ ಕೋರ್ಟ್ ಕಟ್ಟಲೆಯಲ್ಲಿ ವಿವಾದ ಸುತ್ತಿತ್ತಾದರೂ , ತೀರ್ಪು ಶಬರಿಮಲೆಯಲ್ಲಿ ಹಿಂದಿನಿಂದ ನಡೆದು ಕೊಂಡು ಬಂದ ಆಚರಣೆಗೆ ಅನುಗುಣವಾಗಿ ಕುಂಟುತ್ತಾ ಬಂದಿದ್ದರೂ, ತಟ್ಟನೆ ಇಂದು ಆರು ಜನ ನ್ಯಾಯದೀಶರ ಪೀಠದಲ್ಲಿ ಮಹಿಳೆಯರು ಪ್ರವೇಶಿಸಬಹುದು ಎಂದು ಕಡಾಕ್ ಆವೇಶದ ಆದೇಶವನ್ನು ಹೊರಡಿಸಿದೆ . ಒಂದಷ್ಟು ಎಡಬಿಡಂಗಿಗಳಿಗೆ ಸಂತೋಷದ ವಿಚಾರವಾದರೂ ಅಷ್ಟೇ ದುಃಖ ಎಲ್ಲಾ ಸಭ್ಯಸ್ಥ ಆಸ್ತಿಕರ ಮನದಲ್ಲಿ ಮುಡುಗುಟ್ಟಿದೆ.
ಶಬರಿಮಲೆ ಅಂದಾಕ್ಷಣ ಇಂದು ಹುಟ್ಟಿದ ಮಗುವಿಗೂ ಗೊತ್ತು ಆಳ ಅಂತರಾಳ ಎಷ್ಟು ಎಂಬುದು ,ಒಂದು ಕ್ಷಣ ಕಿವಿ ನಿಮಿರುತ್ತದೆ ,ಮೈ ರೋಮ ನೆಟ್ಟಗಾಗುತ್ತದೆ .ಕಾರಣ ಕಠಿಣ ವ್ರತಾಚರಣೆ ಮಾಡಿ ಪಾದಸ್ಪರ್ಶದ ಯಾತ್ರೆಯೊಂದಿಗೆ ಇರುಮುಡಿ ಹೊತ್ತು 18 ಮೆಟ್ಟಿಲುಗಳನ್ನು ಸ್ಪರ್ಶಿಸಿ ಸ್ವಾಮಿಯ ದರ್ಶನ ಪಡೆಯುವುದು ಅಷ್ಟು ಸುಲಭ ಅಲ್ಲವೇ ಅಲ್ಲ .ಉತ್ತರ ಭಾರತದಲ್ಲಿ ಪರಿಚಯದ ಕೊರತೆ ಇದ್ದರೂ, ಅದೇ ದಕ್ಷಿಣ ಭಾರತದ ಗಲ್ಲಿ-ಗಲ್ಲಿಗೂ ಗೊತ್ತು ಮಣಿಕಂಠನ ವಿಚಾರಧಾರೆ 48 ದಿನಗಳ ಕಾಲ ವ್ರತಾಚರಣೆ (ಈ ವ್ರತಾಚರಣೆ ಯಾವ ವಿಧದಲ್ಲಿ ಇರುತ್ತದೆ ಎಂದು ಹೇಳುವ ಅಗತ್ಯ ಇಲ್ಲ .ಸಾಮಾನ್ಯವಾಗಿ ಸಮಸ್ತರಿಗೂ ಅರಿವು ಇರುವುದೇ )ಮಾಡವುದೇ ದೊಡ್ಡ ಸಾಹಸ ಎಂದರೂ ತಪ್ಪಾಗಲಾರದು .
ಬ್ರಹ್ಮ ಚರ್ಯನಾದ ಮಣಿ ಕಂಠನ ಸನ್ನಿಧಿಗೆ ಮಹಿಳೆಯರು ಎಂದರೆ ,ಋತಿಮತಿಗೂ ಮೊದಲು ಹಾಗೂ ೪೦ ವರ್ಷ ದಾಟಿದ ಮಹಿಳೆಯರು ಮಾತ್ರ ಕಟ್ಟು ನಿಟ್ಟಾಗಿ ವ್ರತಾಚರಣೆಯನ್ನು ಕೈಗೊಂಡು ಸ್ವಾಮಿಯ ದರುಶನ ಪಡೆಯುವುದು ಪುರಾತನ ಕಾಲದಿಂದಲೂ ನಡೆದು ಕೊಂಡು ಬಂದ ಪರಂಪರೆ .ನಂಬಿಕೆಯ ತಳಹದಿಯಲ್ಲಿ ರೂಢಿಸಿ ಕೊಂಡು ಬಂದ ವಿಚಾರ . ಇದಕ್ಕೆ ಅಷ್ಟೇ ಸಹಮತವನ್ನು ಮಹಿಳೆಯರು ಸಹ ಕೊಡುತ್ತಿರುವುದನ್ನು ಹೇಳುವ ತಳ್ಳಿ ಹಾಕುವಂತಿಲ್ಲ .ತಮ್ಮ ಕುಟುಂಬದ ವ್ಯಕ್ತಿ ಶಬರಿಮಲೆ ಸ್ವಾಮಿ ಕ್ಷೇತ್ರಕ್ಕೆ ತೆರಳಲು ವ್ರತಚಾರಣೆ ಯಲ್ಲಿದ್ದರೆ ,ಮಹಿಳೆಯರು ಅವರ ಮೇಲೆ ತೋರಿಸುತ್ತಿವರ ಭಾವ ಭಕ್ತಿಯನ್ನು ಹೇಳತೀರದು .
ಆತ /ಆಕೆ ಸ್ವಾಮೀ ಸನ್ನಿಧಾನ ಕ್ಕೆ ಹೋಗಿ ಬರುವಲ್ಲಿ ಯವರೆಗೆ ಅವರೂ ಕೂಡಾ ವಿಧಿ- ವಿಧಾನಗಳಂತೆ ವ್ರತಾಚರನೆಯಲ್ಲಿ ತೊಡಗುತ್ತಾರೆ . ಭಗವಂತನ ಮೇಲೆ ನಂಬಿಕೆಯನ್ನೂ , ಭಾರತೀಯ ಸಂಸ್ಕೃತಿ ಸಂಸ್ಕಾರವನ್ನು ಮರೆತ ಕೆಲವು ಎಡಬಿಡಂಗಿಗಳು ಇದರ ತದ್ವಿರುದ್ಧ ಹೋರಾಟ ಮಾಡುತ್ತ ಬಂದಿದ್ದಾರೆ ನಾವುಗಳು ಕ್ಷೇತ್ರಕ್ಕೆ ತೆರಳಬೇಕು ಎಂಬುದು ಅವರ ಮೂಲ ಮಂತ್ರ ! ಅಯ್ಯಪ್ಪನ ದರ್ಶನ ಪಡೆಯಬೇಕೆಂಬುದು ಹೆಚ್ಚಿನ ಜನರಿಗೆ ಆಸಕ್ತಿ ಹಾಗೂ ಆಸೆ ಹಾಗೂ ದೈವತಾ ಭಾವನೆ ಇರುವುದು ತಪ್ಪಲ್ಲ ಆದರೆ ಅದಕ್ಕೊಂದು ಸಮಯ ,ನಿಯತ್ತು, ನಿಯಮ ಇರುತ್ತದೆ ಎನ್ನುವುದನ್ನು ಮರೆಯಬಾರದು 40 ವರ್ಷ ದಾಟಿದ ನಂತರ ಅವಕಾಶ ಸ್ವಾಮಿ ಕ್ಷೇತ್ರದಲ್ಲಿದೆ .ಅಲ್ಲಿಯವರೆಗೆ ತಾಳ್ಮೆಯಿಂದ ಇರಬಹುದು ಅಲ್ವೇ ? ಬೆರಳೆಣಿಕೆಯ ಮಂದಿ ಶಬರಿಮಲೆ ಪ್ರವೇಶ ಕೋರಿ ಹಾರಾಟ ನಡೆಸಿದ ಪಟಿoಗರು ,ಇನ್ನೂ ಅನೇಕ ಧಾರ್ಮಿಕ ಕ್ಷೇತ್ರಗಳಲ್ಲಿ ರೂಧಿಯಲ್ಲಿರುವಂತೆ ಮಹಿಳೆಯರಿಗೆ ಎಂದೂ ಯಾವ ಕಾಲಕ್ಕೂ ಬಿಲ್ ಕುಲ್ ಎಂಟ್ರಿ ಇಲ್ಲವೇ ಇಲ್ಲ ಇದು ಇವರ ಗಮನಕ್ಕೆ ಬಂದಿಲ್ಲವೇ ? ಹೋರಾಡುವ ತಾಕತ್ತಿಲ್ಲವೆ ?ಧೈರ್ಯವಿದ್ದರೆ ಅವುಗಳ ವಿರುದ್ದ ಹೋರಾಟವನ್ನು ಮುಂದುವರಿಸಿ ಆದರೆ ಕೋಟ್ಯಂತರ ಆಸ್ತಿಕರ ಭಾವನೆಗೆ ಧಕ್ಕೆ ತರುವುದು ಲಜ್ಜೆಗೇಡಿತನ. ಒಂದಂತು ಸತ್ಯ ಇಂಥವರು ಎಷ್ಟೇ ಹೆಣಗಾಟ ಮಾಡಿ ದರೂ ಸ್ವಾಮಿ ಕ್ಷೇತ್ರದ ಮೆಟ್ಟಿಲನ್ನು ಹತ್ತಲು ಖಂಡಿತವಾಗಿಯೂ ಸಾಧ್ಯವಿಲ್ಲ .ಹೆಚ್ಚಿನವರು ಸ್ವಾಮಿ ಮಣಿ ಕಂಠನ ಮಹಿಮೆಯನ್ನು ಅರಿತಿದ್ದಾರೆ ಕೋರ್ಟ್ನ ಆವೇಶದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿನ ಬೆಲೆ ನಮ್ಮಲ್ಲಿ ಇಲ್ಲ. ಕತ್ತು ಹಿಡಿದು ನೂಕಿದರೂ ಅತ್ತ ತಲೆ ಹಾಕಿ ಮಲಗದ ಸಂಸ್ಕಾರಯುತ ಮಹಿಳೆಯರು ಜೊತೆಗಿದ್ದಾರೆ ಅಷ್ಟೇ ಸಾಕು !! ಸ್ವಾಮಿಯೇ ಶರಣಂ ಅಯ್ಯಪ್ಪ !!!

ಮಂಗಳವಾರ, ಜೂನ್ 12, 2018

ಪೂರ್ಣ ಐದು ವರ್ಷ ಅಧಿಕಾರ ಚಲಾಯಿಸಿತು :ಸಿದ್ದು ಸರ್ಕಾರ !!



ಬ್ರಷ್ಟಚಾರದ ಆರೋಪ ವಿಲ್ಲದೇ ತಮ್ಮಳೋಗಿನ ನಾಯಕರುಗಳ ಜೊತೆ ಯಾವುದೇ ಒಂದು ಹೇಳಿಕೊಳ್ಳುವಂತ ಆಂತರಿಕ ಜಗಳ ವಿಲ್ಲದೇ ,ರಾಜ್ಯದಲ್ಲಿ ಐದು ವರ್ಷ ಪೂರ್ಣ ಸರ್ಕಾರವನ್ನು ನಡೆಸಿದ ಕೀರ್ತಿ ಕಾಂಗ್ರೆಸ್ ನ ಮಾಜಿ ಸಿಎಂ ಸಿದ್ದರಾಮಯ್ಯನಿಗೆ ಸಲ್ಲ ಬೇಕು . ಸಾಕಷ್ಟು ವರ್ಷಗಳ ನಂತರ ಸ್ವತಂತ್ರವಾಗಿ ಏಕ ಪಕ್ಷ, ಗೊಂದಲವನ್ನು ತಾಳದೇ ಪೂರ್ಣ ಅವಧಿಯನ್ನು ಮುಗಿಸಿದ್ದು ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ಎನ್ನದೇ ವಿಧಿ ಇಲ್ಲ .
ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯ ಕೆಲವೊಂದು ಜನಪಯೋಗಿ ಯೋಜನೆಯನ್ನು ಜಾರಿಗೆ ತಂದರೂ ಭಾಗ್ಯಗಳ ಸರದಾರ ನಾಗಿ ಅಹಿತಕರ ಕೋಮು ಸಾಮರಸ್ಯ ಜಾತಿ ಮುಂತಾವುಗಳಿಂದ ಜನತೆ ಕೆಂಗಣ್ಣಿಗೆ ಗುರಿಯಾಗಿದ್ದೂ ಮಾತ್ರ ಸುಳ್ಳಲ್ಲ!
ಸಿದ್ದರಾಮಯ್ಯನಿಗೆ ಒಲಿದು ಬಂದ ಸಿಎಂ ಕುರ್ಚಿ :
ಬಿಜೆಪಿಯ ಆಂತರಿಕ ಕಚ್ಚಾಟ ,ಬ್ರಷ್ಟಚಾರರೂಪಿ ಆಡಳಿತ ವ್ಯವಸ್ತೆಯಿಂದ ಜನತೆ ಕಳೆದ ಬಾರಿ ಕಾಂಗ್ರೆಸ್ ಗೆ ಪೂರ್ಣ ಬಹುಮತ ವನ್ನು ಕೊಟ್ಟಿದ್ದರು . ಜೆಡಿಎಸ್ ನಿಂದ ಹೊರಬಂದ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿ ಉನ್ನತ ಸ್ಥಾನವನ್ನು ಆ ಸಮಯದಲ್ಲಿ ಪಡೆದುಕೊಂಡಿದ್ದರು . ಆದರೆ ಅವರ ರಾಜ ಯೋಗ ನೋಡಿ ಕಾಂಗ್ರೆಸ್ ನ ಅದೆಸ್ಟೋ ಹಳೆಯ ತಲೆಮಾರುಗಳು ಸಿಮ್ ರೆಸ್ ನಲ್ಲಿದ್ದರೂ ,ಸಿದ್ದರಾಮಯ್ಯಗೆ ಸಿಎಂ ಕುರ್ಚಿ ಒಲಿದು ಬಂದಿತ್ತು . ಕೆಪಿಸಿಸಿ ಅಧ್ಯಕ್ಷರಾದ ಪರಮೆಶ್ವರಿಗೆ ಮುಖ್ಯ ಮಂತ್ರಿ ಪಟ್ಟ ಯಂದೇ ಚುನಾವಣೆ ಸಮೀಕ್ಷೆ ಪೂರ್ವ ಸಾಬೀತು ಆಗಿದ್ದರೂ,ಅವರೇ ಇದಕ್ಕೆ ಅರ್ಹ ರಾಗಿದ್ದರೂ, ತನ್ನ ಸ್ವಂತ ಕ್ಷೇತ್ರದಲ್ಲಿ ಪರಮೇಶ್ವರ್ ಸೋತ ಕಾರಣ ನಂತರ.ಸಿದ್ದರಾಮಯ್ಯರ ಅದೃಷ್ಟ ನೆಟ್ಟಗಿತ್ತು . ಮೇಜರ್ ರೋಲ್ ಸಿದ್ದರಾಮಯ್ಯನೇ ಆಗಿ ಬಿಟ್ಟರು !!
ಸಿದ್ದರಾಮಯ್ಯನ ವಿರೋಧದ ಅಲೆಯನ್ನು ಕಟ್ಟಿ ಕೊಂಡಿದ್ದರು :

ಸಾಕಷ್ಟು ಜನಪರ ಯೋಜನೆಗಳನ್ನೂ ಜಾರಿಗೆ ತಂದ ಸಿದ್ದರಾಮಯ್ಯ ತನ್ನೆಲ್ಲಾ ಈ ಯೋಜನೆಗಳು ಭಾಗ್ಯ ದಿಂದಲೇ ಹೆಸರು ಕೊನೆಗೊಳ್ಳುತ್ತಿತ್ತು . ಹೆಚ್ಚಿನ ಭಾಗ್ಯಗಳು ಕೋಮು ಸಾಮರಸ್ಯಕ್ಕೆ ಎಡೆಮಾಡಿ ಕೊಟ್ಟಿದ್ದವು . ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದದ್ದೂ ಸ್ವತಾ ಹಿಂದೂ ಆಗಿದ್ದೂ ಧರ್ಮದ ಭಾವನೆಗೆ ದಕ್ಕೆ ತರುವಂತ ಚಟುವಟಿಗೆಯಲ್ಲಿ ಬಾಗಿ ಯಾಗುತ್ತಾ ಹಿಂದೂ ಪರರಿಂದ ದ್ವೇಷವನ್ನು ಕಟ್ಟಿ ಕೊಂಡಿದ್ದರು . ಮಾತ್ರವಲ್ಲದೇ ವೀರಶೈವ ,ಲಿಂಗಾಯತ ಜಾತಿಗಳ ಒಡಕು ಮೂಡಿಸುವ ಪ್ರಯತ್ನ ,ಹಿರಿಯ ಅಧಿಕಾರಿಗಳ ವರ್ಗಾವಣೆ ,ಸಾವು ನೋವುಗಳಿಗೆ ಸೂಕ್ತವಾದ ನ್ಯಾಯವನ್ನು ಕೊಡಿಸುವುದರಲ್ಲಿ ವಿಫಲರಾಗಿದ್ದರು ಇವುಗಳಲ್ಲವೂ ಸಿದ್ದರಾಮಯ್ಯನ ಆಡಳಿತ ವ್ಯವಸ್ಥೆ ವಿರೋಧವನ್ನು ಕಟ್ಟಿ ಕೊಂಡಿದ್ದು ಹೊರತು ಪಡಿಸಿದರೆ ಅಧಿಕಾರಾವಧಿ ನಿಜಕ್ಕೂ ಉತ್ತಮವೇ ಆಗಿತ್ತು
ಮುಜುಗರ ತರುತ್ತಿತ್ತು ಆಗಾಗ ಸಿದ್ದರಾಮಯ್ಯನ ವೈವಾಟು :
ಹೌದು ! ಮಾನ್ಯ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ತಮ್ಮ ಐದು ವರ್ಷಗಳ ಅಲ್ಲಲ್ಲಿ ಸಭೆ ಸಮಾರಂಭ ಗಳಲ್ಲಿ ಮೈ ಮರೆತು ನಿದ್ರಿಸುತ್ತಿದ್ದ ಪರಿ ಹಾಗೂ ಭಾಷಾಣದಲ್ಲಿ ಅರಿವಿಲ್ಲದ ಮಾತುಗಳು ಹೊರಟು ನಗೆ ಪಾಟಾಲಿಗೆ ಈಡಾಗಿದ್ದೂ ಸಹಾ ಒಂದು ರೆಕಾರ್ಡ್ !. ವೇದಿಕೆಯಲ್ಲಿದ್ದ ಇತರ ನಾಯಕರಿಗೆ ಹೈಕಾಮಂಡ್ ಗೆ ಇದರಿಂದ ಮುಜುಗರವಾದರೂ ,ಜನರಿಗೆ ಮಾತ್ರ ಸಾಕಷ್ಟು ಎನ್ಜೋಯ್ಮೆಂಟ್ ಸಿಕ್ಕಿತ್ತು .ಏನೇ ಇರಲಿ ತೀಕ್ಷವಾದ,ಸ್ಟ್ರೇಟ್ ಪರ್ವಾರಡ್ ಮಾತುಗಳು ಸಿದ್ದರಾಮಯ್ಯರ ಬಳಿ ಇದ್ದದ್ದು ಮೆಚ್ಚುವಂತದ್ದು .!!

ಭಾನುವಾರ, ಮೇ 27, 2018

ಸಕಲ ಕಲಾ ವಲ್ಲಭ ;ಮುಸ್ತಾಕ್ ಹೆನ್ನಾಬೈಲ್


ಧರ್ಮಕ್ಕೂ ತೊಡಕಾಗದ ಅಪೂರೂಪದ ಅರಳುತ್ತಿರುವ ಬಹುಮುಖ ವ್ಯಕ್ತಿತ್ವ



ಯಕ್ಷಗಾನ ಕರ್ನಾಟಕ ಕರಾವಳಿಯ ಗಂಡುಕಲೆ .ಒಂದು ಕಾಲದಲ್ಲಿ ಕೇವಲ ಪುರುಷರಿಗೆ ಮಾತ್ರ ಸೀಮಿತವಾಗಿದ್ದ ಈ ಕಲೆಯಲ್ಲಿ ಇತ್ತೀಚೆಗೆ ಸ್ತ್ರೀಯರು ಪ್ರವೇಶ ಮಾಡಿ ಮಿಂಚುತ್ತಿದ್ದಾರೆ. ಇನ್ನೂ ಸಂತೋಷದ ವಿಚಾರವೆಂದರೆ ಅನ್ಯ ಧರ್ಮೀಯರ ಪ್ರವೇಶ. ಜಬ್ಬಾರ್ ಸಮೋ ಈ ಹೆಸರು ಕೇಳಿದಾಕ್ಷಣ ತಾಳಮದ್ದಲೆ ಪ್ರೇಕ್ಷಕರಿಗೆ ಏನೋ ರೋಮಾಂಚನ,ಜಬ್ಬಾರರಂತೆ ಈ ಕ್ಷೇತ್ರದಲ್ಲಿ ಹೆಸರು ಮಾಡಬಲ್ಲ ,ಈಗಷ್ಟೇ ಅಂಬೆಗಾಲಿಡುತ್ತಿರುವ ವಿನೂತನ ಪ್ರತಿಭೆ ಮುಸ್ತಾಕ್ ಹೆನ್ನಾಬೈಲ್.

ಅರಣ್ಯ ಇಲಾಖೆ ಸಿಬ್ಬಂದಿಯಾದ ಅಬ್ದುಲ್ ಹಮೀದ್ ಮತ್ತು ರಹಿಮುನ್ನಿಸಾ ದಂಪತಿಗಳ ಪುತ್ರರಾಗಿ ಕುಂದಾಪುರ ತಾಲೂಕು ಸಿದ್ಧಾಪುರ ಗಾೃಮದ ಹೆನ್ನಾಬೆೈಲುವಿನಲ್ಲಿ ಅಕ್ಟೋಬರ್ 26 ,1978 ರಲ್ಲಿ ಮುಸ್ತಾಕರು ಹುಟ್ಟಿದರು.ಪ್ರಾಥಮಿಕ ಶಿಕ್ಷಣವನ್ನು ಹೆನ್ನಾಬೆೈಲು,ಪ್ರೌಢ ಶಿಕ್ಷಣವನ್ನು ಹೊಸಂಗಡಿ ಮತ್ತು ಪದವಿ ಶಿಕ್ಷಣವನ್ನು ಸರಕಾರಿ ಕಾಲೇಜು ಶಂಕರನಾರಾಯಣದಲ್ಲಿ ಪೊರೆೈಸಿದರು.

ಮುಸ್ತಾಕರದು ಬಹುಮುಖ ಪ್ರತಿಭೆ.

ಹವ್ಯಾಸಿ ತಾಳಮದ್ದಲೆಯ ಅರ್ಥಧಾರಿ,ವೇಷಧಾರಿ.. ಆರ್ಕೆಸ್ಟ್ರಾ ಗಾಯಕ..ಸೊಗಸಾದ ಕಾರ್ಯಕ್ರಮ ನಿರೂಪಕ ..ಮೋಡಿ ಮಾಡುವ ಭಾಷಣಕಾರ..ಉತ್ತಮ ಬರಹಗಾರ , ರೋಟರಿಯಂತಹ ಅಂತರಾಷ್ಟ್ರೀಯ ಮಟ್ಟದ ಸಮಾಜ ಸೇವಾ ಸಂಘಟನೆಗಳಲಿ ಸಕ್ರಿಯರಾಗಿರುವ ಕ್ರಿಯಾಶೀಲ ವ್ಯಕ್ತಿತ್ವದವರು.
ಇಸ್ಲಾಮಿಕ್ ಧಾರ್ಮಿಕ ಗ್ರಂಥಗಳ ಆಳವಾದ ಜ್ಞಾನದ ಜೊತೆಗೆ ಹಿಂದೂ ಮಹಾಕಾವ್ಯಗಳಾದ ರಾಮಾಯಣ ,ಮಹಾಭಾರತ ,ಭಗವದ್ಗೀತೆ,ವೇದ ಉಪನಿಷತ್ತುಗಳ ಮೇಲೆ ಅರ್ಥ ವ್ಯಾಖ್ಯಾನ ಕೊಡಬಲ್ಲ ಆಕರ್ಷಕ ವಾಗ್ಮಿ....ತಾಳಮದ್ದಲೆ ಕ್ಷೇತ್ರಕ್ಕೆ ಇತ್ತೀಚೆಗಷ್ಟೇ ಪಾದಾರ್ಪಣೆ ಮಾಡಿದರೂ ,ಮಾಡಿದ ಎಲ್ಲಾ ಪಾತ್ರಗಳು ಜನಮನ್ನಣೆಗಳಿಸಿ
ರಂಗದಲ್ಲಿಯೂ ಮೋಡಿಯ ಮಾತಿನಿಂದ ಖ್ಯಾತಿಗಳಿಸುತ್ತಿದ್ದಾರೆ.....ಸತ್ಯ ಹರಿಶ್ಚಂದ್ರ ಪ್ರಸಂಗದ 'ವಿಶ್ವಾಮಿತ್ರ', ಗದಾಯುದ್ಧದ 'ಸಂಜಯ'ಭೀಷ್ಮ ವಿಜಯದ 'ಬ್ರಾಹ್ಮಣ',ಇಂದ್ರಜಿತು ಕಾಳಗದ 'ವಿಭೀಷಣ' ಶ್ರೀ ಕೃಷ್ಣ ಪರಂಧಾಮದ 'ಜರ' ಮುಂತಾದ ಪಾತ್ರಗಳಲ್ಲಿ ತನ್ನ ಅಭಿನಯ,ಮಾತುಗಾರಿಕೆ,ವಿಶೇಷ ಶೆೈಲಿಯ ಪ್ರಸ್ತುತಿಯ ಜೊತೆಗೆ ಸಾಮಾಜಿಕ ಸಾಮರಸ್ಯ ಸಾರುವಲ್ಲಿ ಮತ್ತು ಕಲೆ ಧರ್ಮಾತೀತವಾದುದು ಎನ್ನುವುದನ್ನು ಸಾಧಿಸಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಮ್ಮ ಬಿಡುವಿಲ್ಲದ ವೃತ್ತಿ ಜೀವನದ ನಡುವೆಯೂ ಹವ್ಯಾಸಿಯಾಗಿ ಹಲವಾರು ಇತರ ರಂಗಗಳಂತೆ ಯಕ್ಷರಂಗ ವನ್ನೂ ಆಯ್ದುಕೊಂಡ ಮುಸ್ತಾಕರು ವೃತ್ತಿಯಲ್ಲಿ ಚಿನ್ನಾಭರಣ ಕ್ಷೇತ್ರದಲ್ಲಿರುವವರು ..
ವಿಶ್ವದ ಪ್ರಮುಖ ಚಿನ್ನಾಭರಣ ಸಂಸ್ಥೆಯಾದಂತಹ ಚೆಮ್ಮನೂರು ಜ್ಯುವೆಲರ್ಸ್ನಲ್ಲಿ ಮತ್ತು ಭಾರತದ ಪ್ರಖ್ಯಾತ ಮುಕೇಶ ಅಂಬಾನಿಯವರ ರಿಲಾಯನ್ಸ್‌ ಸಂಸ್ಥೆಗಳಲ್ಲಿ ಸರಿಸುಮಾರು 18 ವರ್ಷ ಸೇವೆ ಸಲ್ಲಿಸಿ ಇದೀಗ Rsj Gold ಎನ್ನುವ ಸ್ವಂತ ಸಂಸ್ಥೆಯನ್ನು ನಡೆಸುತ್ತಿದ್ದಾರೆ ....ಯಕ್ಷಗಾನ ರಂಗದ ತನ್ನ ಪಯಣದಲ್ಲಿ ಈ ರಂಗಕ್ಕೆ ತನ್ನನ್ನು ಪರಿಚಯಿಸಿದ ಸಿದ್ಧಾಪುರ ಯಕ್ಷ ನುಡಿಸಿರಿ ಬಳಗದ ಅಧ್ಯಕ್ಷ ಡಾ।ಜಗದೀಶ ಶೆಟ್ಟಿಯವರನ್ನು ಸದಾ ಸ್ಮರಿಸುತ್ತಾರೆ.
ರಂಗದ ನಡೆಗಳ ಜೊತೆಗೆ ಪಾತ್ರಕ್ಕೆ ಬೇಕಾದ ಪೌರಾಣಿಕ ಜ್ಞಾನ ಮತ್ತು ಸ್ಫೂರ್ತಿಯನ್ನು ಹವ್ಯಾಸಿ ತಾಳಮದ್ದಲೆ ಅರ್ಥಧಾರಿ ಹಾಗೂ ತನ್ನ ಗುರುಗಳಾದಂತಹ ಶ್ರೀ ಧನಂಜಯ ಚಾತ್ರ ಹಳ್ಳಿಹೊಳೆ ನೀಡುತ್ತಿರುವುದನ್ನು ಕೃತಜ್ಞತೆಯಿಂದ ನೆನೆಯುತ್ತಾರೆ ...ಜೊತೆಗೆ ಕಮಲಶಿಲೆ ಮೇಳದ ಪ್ರಸಿದ್ಧ ಭಾಗವತ ಶ್ರೀ ಗಣೇಶ ಕುಮಾರ್ ಹೆಬಿೃ ಮತ್ತು ಮಿತ್ರ ಹಾಗೂ ಕಲಾವಿದ ಶ್ರೀ ಸತೀಶ ಮೂಡುಬಗೆಯವರ ಸಹಕಾರವನ್ನು ನೆನಪಿಸುತ್ತಾರೆ...ಮಂಗಳೂರು ವಿಶ್ವವಿದ್ಯಾನಿಲಯದಿಂದ ಕಲಾ ಪದವಿಯನ್ನುೂ ಮತ್ತು ಕುವೆಂಪು ವಿಶ್ವವಿದ್ಯಾನಿಲಯದಿಂದ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಮುಸ್ತಾಕರು ಕಲೆಯ ಮೂಲಕ ಜ್ಞಾನ ಪ್ರಸರಣ ಮಾತ್ರವಲ್ಲದೆ ಸೌಹಾರ್ದತೆ ಮೂಡುವುದರ ಜೊತೆಗೆ ಸುಸಂಸ್ಕೃತ ಸಮಾಜ ನಿರ್ಮಾಣವಾಗಬೇಕೆಂಬ ಉನ್ನತ ಆಶಯವನ್ನು ಹೊಂದಿರುವವರು...

http://vknews.in/335976/

ಶನಿವಾರ, ಮೇ 26, 2018

ಜೆಡಿಎಸ್ –ಕಾಂಗ್ರೆಸ್ ಮೈತ್ರಿ ಎಷ್ಟು ದಿನ ? ಅದೃಷ್ಟದ ಮುಖ್ಯ ಮಂತ್ರಿ ಕುಮಾರಸ್ವಾಮಿ !!!


ಗೊತ್ತಿತ್ತು ..! ಪ್ರಜ್ನಾವಂತರಿಗೆ ಅರಿವಿತ್ತು. ಈ ಬಾರಿ ಖಂಡಿತವಾಗಿಯೂ ಸಹಾ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಬಹುಮತ ದಕ್ಕುವುದು ಕಷ್ಟ ಸಾಧ್ಯ ಎಂದು ! ಬಾರತೀಯ ಜನತಾ ಪಾರ್ಟಿ ಪರ ಸಮೀಕ್ಷೆ ವಾಲುತ್ತಿದ್ದರೆ,ಹಾಗೂ ೧೦೪ ಬ್ರಹತ್ ಪ್ರಮಾಣದ ಸೀಟುಗಳನ್ನು ಪಡೆದಿದ್ದರೆ ಅದು ನಿಜವಾಗಿಯೂ “ಮೋದಿ ಹವಾ” ಎಂದು ಬೀಗದೇ ಬೇರೆ ಉಪಾಯವಿಲ್ಲ .
ಎಸ್ ! ಬಿಜೆಪಿ ಸ್ವತಂತ್ರ್ಯವಾಗಿ ಸರ್ಕಾರ ನಡೆಸುವುದು ಕಷ್ಟವೇನಲ್ಲ ಆದರೆ ಇಲ್ಲಿ ಕೊರತೆ ಕಾಣುವುದು ಮುಖ್ಯವಾಗಿ ಉತ್ತಮ ಕ್ಯಾಂಡಿಡಿಯೆಟ್ ನದು . ಪ್ರಸ್ತುತ ಇರುವ ಮುಖಂಡರುಗಳ ನಡುವೆ ಆಂತರಿಕ ಕಚ್ಚಾಟ , ಭಿನ್ನಾಭಿಪ್ರಾಯ ,ಮೈ ಮನಸ್ಸು ,ಬ್ರಷ್ಟಚಾರ ರೂಪಿ ವರ್ಚಿಸ್ಸಿನಿಂದ ಬಿಜಿಪಿ ರಾಜ್ಯದಲ್ಲಿ ತನ್ನ ಕಹಳೆಯನ್ನು ಮೊಳಗಿಸುವುದು ಕಷ್ಟವೇ ಸರಿ ! ಒಟ್ಟಾರೆ ಮೋದಿ ಹವಾ ಅಮಿತ್ ಷಾ ಬೆಂಬಲ, ಹೋರಾಟ ,ಪ್ರಚಾರ ತಂತ್ರ ಹಾಗೂ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರ್ಕಾರದ ಕೆಲವು ಅಹಿತಕರ ಚಟುವಟಿಕೆಯಿಂದ ೧೦೪ ಸೀಟು ಪಡೆಯಲು ಶಕ್ತವಾಗಿದಂತೂ ಸತ್ಯ.
ಮ್ಯಾಜಿಕ್ ನಂಬರ್ ೧೧೨ ಕ್ಕಾಗಿ ಉಳಿಸಿದ ಸೀಟಿನ ಅನಿವಾರ್ಯತೆಗೆ ಬಿಜೆಪಿ ಪಾಳಯದಿಂದ ಕುದುರೆ ವ್ಯಾಪಾರ ನಡೆದರೂ ಸಹಾ ಅದು ಸಫಲವಾಗಲಿಲ್ಲ . ಸಾಧ್ಯವಾಗಲೇ ಇಲ್ಲ . ಈ ನಿಟ್ಟಿನಲ್ಲಿ ಜೆಡಿ ಎಸ್ ನ ಕುಮಾರ ಸ್ವಾಮೀ ಮತ್ತು ಕಾಂಗ್ರೆಸ್ ನ ಡಿಕೆ ಶಿವಕುಮಾರ್ ತಮ್ಮ ಶಾಸಕರನ್ನು ಹದ್ದು ಬಸ್ತಿನಲ್ಲಿ ಇಡಲು ಅವರ ಜಾಣ್ಮೆ ಮತ್ತು ಪಾತ್ರ ಬಲು ದೊಡ್ದದಾಗಿತ್ತು .
ಒಟ್ಟಾರೆಯಾಗಿ ಮೇ ೧೫ ರಿಂದ 8 -೧೦ ದಿನ ರಾಜಕೀಯ ರಂಗಿನಾಟ ನಿಜಕ್ಕೂ ಸೋಜಿಗವನ್ನು ಉಣಬಡಿಸಿತ್ತು . ರಾಷ್ಟ್ರದ್ಯಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. ಸುದ್ದಿ ವಾಹನಿಗಳಿಗೆ ಹಬ್ಬವೋ ಹಬ್ಬ ! ದಿನದ 24 ಗಂಟೆಯೂ ಸಹಾ ಎಡಬಿಡದೇ ನೇರ ಪ್ರಸಾರದಲ್ಲೇ ಸನ್ನದ್ದವಾಗಿದ್ದವು . ಅತೀ ಹೆಚ್ಚು ಬಹುಮತ ೧೦೪ ಸೀಟು ಪಡೆದ ಬಿಜೆಪಿ ಆಟಕುಂಟು ಲೆಕ್ಕಕಿಲ್ಲ ಎನ್ನುವಂತಾಗಿತ್ತು . ಕೇವಲ ೭೭ ಸೀಟು ಪಡೆದ ಕಾಂಗ್ರೆಸ್ ಹಾಗೂ ೩೭ ಸೀಟು ಮಾತ್ರ ಪಡೆದ ಜೆಡಿಎಸ್ ದೋಸ್ತಿಗಳಾಗಿವೆ . ರಾಜ್ಯದಲ್ಲಿ ಕಿಂಗ್ ಮೇಕರ್ ಎಂದೇ ಗುರುತಿಸಲ್ಪಟ್ಟ ದೇವೇಗೌಡ ನೇತೃತ್ವದ . ಜೆಡಿಸ್ನ ಕುಮಾರ ಸ್ವಾಮೀ ಅದೃಷ್ಟದ ಮುಖ್ಯ ಮಂತ್ರಿಯಾಗಿದ್ದಾರೆ. ಪ್ರತಿಪಕ್ಷಕ್ಕೂ ಯೋಗ್ಯತೆ ಇಲ್ಲ ಸೀಟು ಪಡೆದ ಕುಮಾರ ಸ್ವಾಮಿಗೆ ರಾಜಯೋಗ...11 ಒಟ್ಟಾರೆ ಈ ಮೈತ್ರಿ ಸರ್ಕಾರ ಎಷ್ಟು ದಿನ ವ್ಯಾಲಿಡಿಟಿ ಪಡೆದು ಕೊಳ್ಳುತ್ತೋ ಗೊತ್ತಿಲ್ಲ , ಪೂರ್ಣ ೫ ವರ್ಷ ಪೂರೈಸೋದು ಬವಿಷ್ಯ : ಕನಸ್ಸಿನ ಮಾತೇ ಸರಿ ಎಂಬ ವಿಧ್ಯಾಮಾನ ಸಾರಿ ಹೇಳುತ್ತಿದೆ . ಜೆಡಿಎಸ್ ನಿಂದ ಹೊರಗೆ ಬಂದ ಸಿದ್ದರಾಮಯ್ಯನಿಗೆ ದೇವೇಗೌಡ ,ಹಾಗೂ ಕುಮಾರ ಸ್ವಾಮೀ ಯಿಂದ ಹಾವು ಮುಂಗುಸಿ ಆಟ ಹೆಚ್ಚು ದಿನ ಬಾಳಲಿಕ್ಕೆ ಬಿಡಲಾಗದು!!
ಏನೇ ಇರಲಿ ಎಲ್ಲಕಿಂತ ಹೆಚ್ಚು ಪ್ರಭಾವಶಾಲಿಯ ಅಂಶ ಈ ನಾಟಕ ರಂಗದಲ್ಲಿ ಗಮನಿಸಬೇಕಾದದ್ದು ಯಡಿಯೂರಪ್ಪ ಅಂಡ್ ಟೀಮ್ ನಿಂದ 104 ಸೀಟು ಪಡೆದು ಅನಿವಾರ್ಯ ಇರುವ 8 ಸೀಟು ಹೇಗಾದರೂ ಕುದುರೆ ವ್ಯಾಪಾರ ಮೂಲಕ ಪಡೆದು ಸ್ವತಂತ್ರ್ಯ ಸರ್ಕಾರ ರಚಿಸಬೇಕು ಎಂಬ ಮಹಾದಾಸೆಯಿಂದ ಬಗೆ ಬಗೆಯ ಸರ್ಕಸ್ ನಡೆಸಿಯೇ ಬಿಟ್ಟಿತು .ಸುಪ್ರಿಂ ಕೋರ್ಟ್ ಮೊರೆ ಹೋಗಿ ರಾಜ್ಯಪಾಲರ ಮುಖಾಂತರ ಮುಂದಿರುವ ಸಂಕಷ್ಟವನ್ನು ಮನಗಾಣದೆ ತರಾತುರಿಯಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿ ಬಿಟ್ಟಿದ್ದರು ಯಡಿಯೂರಪ್ಪ .ಇತ್ತ ವಿರೋಧ ಪಕ್ಷದವರ ಲಡಾಯಿ ಜೋರಾಗಿತ್ತು . ಸುಪ್ರಿಂ ಕೋರ್ಟ್ ನ ಕದ ರಾತ್ರಿ ೧೨ ಗಂಟೆಗೆ ವಿರೋಧ ಪಾರ್ಟಿಗಳು ಬಡಿದವು. ಸರ್ವೋಚ್ಚ ನ್ಯಾಯಾಲಯ ಬಹುಮತ ಸಾಬೀತಿಗೆ ಡೇಟ್ ಫಿಕ್ಸ್ ಮಾಡಿ ಆಗಿತ್ತು .ಆದರೇನು ಮಾಡೋದು ಸೇಮ್ ಟು ಸೇಮ್ ೧೯೯೬ ರಲ್ಲಿ ವಾಜಪೇಯಿಗೆ ಉಂಟಾದ ಸಂದಿಗ್ನ ಪರಿಸ್ತಿತಿ ಅಕ್ಷರಸ ಯಡ್ಡಿಗೂ ಕೂಡಾ ಅನುಭವಿಸಬೇಕಿತ್ತು . ಅಂತೂ ಯಡಿಯೂರಪ್ಪ ಸದನದಲ್ಲಿ ಬಹುಮತ ಸಾಬೀತು ಪಡಿಸಲಾಗದೇ ,ಫೀಲಿಂಗ್ ಬಾಷಣವನ್ನು ಮುಗಿಸಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಯೇ ಬಿಟ್ಟರು .
ಸಿಕ್ಕ ಸೀಟುಗಳಿಂದ ವಿರೋಧ ಪಕ್ಷದವರ ಆಟೋಟೊಪ ದಿಂದ ಸರ್ಕಾರವನ್ನು ನಡೆಸಲು ಸಾಧ್ಯವಾಗುವುದಿಲ್ಲ .ಎಂದು ಗೊತ್ತಿದ್ದರೂ ಕೂಡಾ ಈ ಮೊದಲು ಬಹಿರಂಗ ಪಡಿಸಿದಂತೆ ಯಡ್ಡಿ ಇಂತಹ ದಿನವೇ ಮುಖ್ಯ ಮಂತ್ರಿ ಯಾಗಿ ಪ್ರಮಾಣವ ಚನವನ್ನು ಮಾಡುತ್ತೇನೆ ಎಂದು ಕೊಂಡ ರೀತಿಗೆ ಬೆಲೆ ಸಿಕ್ಕಿದಂತಾಗಿದಂತೂ ಸುಳ್ಳಲ್ಲ . ಸದನದಲ್ಲಿ ಮಂಡಿಸಿದ ಭಾವದ್ವೇಗದ ಬಾಷಣ ಎಂತವರಿಗೂ ಸಹಾ ಕನಿಕರವನ್ನು ತರುವಂತಿತ್ತು . ಮುಂದೊಮ್ಮೆ ಪ್ರಸ್ತುತ ಸರ್ಕಾರ ಮುರಿದು ಬಿದ್ದಿದ್ದೇ ಯಾದರೇ ಉಪಚುನಾವಣೆಯಲ್ಲಿ ಬಹುಮತ ಖಂಡಿತವಾಗಿಯೂ ಬಿಜೆಪಿಗೆ ದಕ್ಕಬಹುದೇನೋ ?! ಸಿಂಪತಿ ಮತ್ತು ಪ್ರಮಾಣ ಸ್ವೀಕರಿಸಿದ ಕ್ಷಣದಲ್ಲಿ ರೈತರ ಸಾಲ ಮನ್ನಾ ಎಂದು ಘೋಷಣೆ ಮಾಡಿದ ಕೆಲವೊಂದು ಅಂಶಗಳು ಇಲ್ಲಿ ವರ್ಕೌಟ್ ಆಗಬಹುದು ,,
ಯಾವುದಕ್ಕೂ ಕಾಲವೇ ಉತ್ತರ ಹೇಳಬೇಕು .

ವಿಧ್ಯಾರ್ಥಿಗಳ ಹಿತ ದ್ರಷ್ಟಿಯಿಂದ ಉತ್ತಮವಾದ ನಿರ್ಧಾರ !


ಹೌದು ಈ ವರ್ಷದಿಂದ ಪಿಯುಸಿ ತರಗತಿಗಳು ಬಲು ಬೇಗನೇ ಆರಂಭ ಕಾಣುತ್ತಿದೆ ,ಸರ್ಕಾರದ ಈ ಹೊಸ ಆದೇಶದ ಇದರ ವಿರುದ್ಧ ವಿಧ್ಯಾರ್ಥಿಗಳು ಹಾಗೂ ಉಪನ್ಯಾಕರುಗಳು ಅತೃಪ್ತರಾಗಿದ್ದಾರೆ . ನೀರಿನ ಸಮಸ್ಯೆ, ಬಿಸಿಲ ಝಳ , ಶುಭಕಾರ್ಯಗಳ ಸಮಯ ಈ ಸಂದರ್ಭದಲ್ಲಿ ತರಗತಿ ಪ್ರಾರಂಭವಾಗುವುದು ಸಮಂಜಸ ಅಲ್ಲ ಎಂಬ ಮಾತುಗಳೂ ಕೂಡಾ ಕೇಳಿಬರುತ್ತಿವೆ .

ಅವಧಿಗೆ ಮುನ್ನಾ ಪಿಯುಸಿ ತರಗತಿ ಪ್ರಾರಂಬವಾಗೋದು ಕೊಂಚ ಎಲ್ಲೂ ಹೊಸತು ಅನ್ನಿಸಿದರೂ ಇದು ಒಳ್ಳೆಯ ಬೆಳವಣಿಗೆ ಈ ಒಂದು ಕಾನೂನು ಜಾರಿಗೊಳಿಸಿದ ಪದವಿ ಪೂರ್ವ ಇಲಾಖೆಗೆ ಅಭಿನಂದನೆ ಸಲ್ಲಿಸಬೇಕು ..ಯಾವುದೋ ಒಂದು ನಿರ್ದಿಷ್ಟ ಕಾರಣವಿಲ್ಲದೇ ಪಿ ಯು ಮಂಡಳಿ ಈ ನಿರ್ಧಾರಕ್ಕೆ ಕೈ ಹಾಕಿಲ್ಲ ಬಲವಾದ ವಿಚಾರ ಇದರ ಹಿಂದೆ ವಿರಬಹುದು .ಇಲ್ಲಿ ನೀರಿನ ಸಮಸ್ಯೆ, ಬಿಸಿಲ ಝಳ , ಶುಭಕಾರ್ಯಗಳ ಗೊಡವೆಗಳೆಲ್ಲಾ ಇದಕ್ಕೆ ಸಂಬಂದ ಪಡುವುದಿಲ್ಲ .ಉಪನ್ಯಾಸಕರೂ ಅಷ್ಟೇ ಈ ಆದೇಶವನ್ನು ಪಾಲಿಸಲೇಬೇಕು. ಬೇಗನೇ ಪಾಠ ಪ್ರವಚನ ಶುರು ಮಾಡಿದರೆ ಕೊನೆಯ ದಿನಗಳಲ್ಲಿ ಸಾಕಷ್ಟು ಉಪಯೋಗ ವಿಧ್ಯಾರ್ಥಿಗಳಿಗೆ ಉಂಟಾಗುವುದರ ಜೊತೆಗೆ ಉಪನ್ಯಾಸಕ ಗಳಿಗೂ ಸಹಾ ಹೆಚ್ಚಿನ ಒತ್ತಡ ಬೀಳುವುದಿಲ್ಲ .. ವಿಧ್ಯಾರ್ಥಿಗಳ ಹಿತ ದ್ರಷ್ಟಿಯಿಂದ ಉತ್ತಮವಾದ ನಿರ್ಧಾರ !

ರಾಜಕೀಯ ಪಕ್ಷಗಳಲ್ಲಿ ಬಂಡಾಯ ಸರ್ವೆ ಸಾಮಾನ್ಯ!



ಈ ಚುನಾವಣೆಗಳು ಸಮೀಪಿಸಿದಾಗ ಟಿಕೇಟ್ ಸಮಸ್ಯೆ ಸಾಮನ್ಯವಾಗಿ ಕಾಡುತ್ತದೆ . ತನಗೆ ಬೇಕು ನನಗೆ ಬೇಕು ...ನಾ ಮುಂದು ತಾ ಮುಂದೆ ಎಂದು ಕಣಕ್ಕೆ ಇಳಿಯುವ ಆಕಾಂಕ್ಷೆಗಳ ದಂಡೇ ನಮ್ಮ ಎಲ್ಲಾ ರಾಜಕೀಯ ಪಕ್ಷಗಳಲ್ಲಿವೆ . ಒಂದೇ ಸೀಟನ್ನು ನಾಲ್ಕೈದು ಮಂದಿ ಗೆ ಹಂಚಲಾಗದ ಸಂದರ್ಭದಲ್ಲಿ ,ಟೀಕೆಟ್ ಸಿಗದ ವ್ಯಕ್ತಿ ಬಂಡಾಯ ಏಳುತ್ತಾನೆ !!
ಹೌದು ರಾಜಕೀಯ ಪಕ್ಷಗಳಲ್ಲಿ ಬಂಡಾಯ ಸರ್ವೆ ಸಾಮಾನ್ಯ..! ಮುಖಂಡರಿಗೆ ,ಹೈಕಮಾಂಡ್ ಮುಂದೆ ದೊಡ್ಡ ಸವಾಲು ಹಾಗೂ ಬಿನ್ನಾಭಿಪ್ರಾಯ ವನ್ನು ಟಿಕೇಟ್ ಹಂಚಿಕೆಯಲ್ಲಿ ಎದುರಿಸಬೇಕಾಗಿ ಬರುತ್ತದೆ .ಎಲ್ಲೋ ಆಕಾಂಕ್ಷೆಗಳಿಗೆ ಸೀಟು ಕೈ ತಪ್ಪಿ ಹೋದಾಗ ಬಂಡಾಯ ಆರಂಭವಾಗುತ್ತದೆ .ಆತ ಬೇರೆ ಪಕ್ಷ ಸೇರುವ ಅಥವಾ ಪಕ್ಷೇತರರಾಗಿ ನಿಂತು ತಮ್ಮ ಸ್ವಂತ ಪಕ್ಷದ ವಿರುದ್ದ ಇಲ್ಲ ಸಲ್ಲದ ಆರೋಪ ಹೊರಿಸಿ ತೊಡೆ ತಟ್ಟುತ್ತಾರೆ ಪಕ್ಷದ ವರಿಷ್ಠರು ಎಲ್ಲಾರಿಗೂ ಬೀ ಫಾರಂ ಕೊಡಲಿಕ್ಕೆ ಸಾಧ್ಯವಿಲ್ಲ.. ಇದ್ದವರಲ್ಲಿ ಉತ್ತಮರು ಯಾರೂ ಹಾಗೂ ಗೆಲ್ಲುವ ಕುದುರೆ , ಬೆಂಬಲದ ಅಂಶವನ್ನೂ ಅರಿತು ಕೊಡಲಾಗುತ್ತದೆ.ಎಲ್ಲೂ ಒಮೊಮ್ಮೆ ತಮ್ಮ ನಿಕಟವರ್ತಿ ಗಳಿಗೆ ಅದು ವರ್ಗಾವಣೆ ಯಾಗುತ್ತದೆ.. ಟಿಕೇಟ್ ಹಂಚಿಕೆ ಪಾರದರ್ಷಕವಾಗಿರಬೇಕು ಹಾಗೂ ಆಕಾ೦ಕ್ಷಿಗಳು ಪಕ್ಷದ ಆಶೋತ್ತರಗಳನ್ನು ಗಮನಿಸಿ ಆಯ್ಕೆ ಸಮಿತಿ ಜೊತೆ ಕೈ ಜೋಡಿಸಬೇಕು, ಆಗ ಬಂಡಾಯ ಶಮನ ಆಗಬಹುದು.

ಭಾನುವಾರ, ಜನವರಿ 14, 2018

ಧರ್ಮ ಸಂಘರ್ಷಕ್ಕೆ ಇನ್ನೆಷ್ಟು ಅಮಾಯಕರುಗಳು ಬಲಿಯಾಗಬೇಕು ?


ಕೋಮು ಸಾಮರಸ್ಯಕ್ಕೆ ಮತ್ತೆರೆಡು ಜೀವಗಳು ಬಲಿಯಾಗಿವೆ . ಸೆರಗಿನಲ್ಲಿ ಕೆಂಡ ಕಟ್ಟಿ ಕೊಂಡಂತೆ ಇದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಬೆಂಕಿ ಹೊತ್ತಿ ಉರಿದಿದೆ ,
ಅಮಾಯಕರಿಬ್ಬರು ಬೀದಿ ಬದಿ ಹೆಣವಾಗಿದ್ದಾರೆ .ಎಂದಿನಂತೆ ರಾಜಕೀಯದ ಹಾರಾಟ ಮುಂದುವರಿದಿದೆ .ರಾಜ ಕಾರಣಿಗಳಿಗೆ ಹಬ್ಬದೂಟವಾದರೇ,ಇದನ್ನೇ ಕಾದ ಕುಳಿತ ಮತಾಂದ ಮತೀಯರಿಗೆ ಸಾಧನೆಯ ಸಂತೋಷ ..! ಒಟ್ಟಾರೆ ಅಕ್ಷರಸ: ಬುದ್ದಿವಂತರ ನಾಡು ಜಗತ್ತಿನಾದ್ಯಂತ ಮತ್ತೆ ಸುದ್ದಿಗೆ ಗ್ರಾಸವಾಗಿದೆ.ಇನ್ನೆಷ್ಟು ಬಲಿ ಬೇಕು? ಅಮಾಯಕರಗಳ ಸಾವಿನ ನಿರೀಕ್ಷೆಯಲ್ಲಿ ಕುಡ್ಲ ಕಣ್ಣು ಬಿಟ್ಟು ಕಾತರಿಸುವುತ್ತಿರುವುದೂ ಸುಳ್ಳಲ್ಲ .
ಇವತ್ತಿನವರೆಗೆ ಈ ಎಲ್ಲಾ ಘಟನೆಗಳನ್ನು ಮೆಲುಕು ಹಾಕಿದರೇ ನಮಗೆ ಸಿಗುವ ಫಲಿತಾಂಶ ಕೇವಲ ಅಮಾಯಕರುಗಳದ್ದೇ ಸಾವು ನೋವುಗಳು .ಫಟಿಂಗರು ಬಚಾವ್ ಆಗುತ್ತಾರೆ ಅಮಾಯಕರು ಮಾತ್ರ ಬಲಿಪಶುಗಳಾಗುತ್ತಿದ್ದಾರೆ .
ಬಾಲ್ಯದಲ್ಲೇ ತನ್ನ ತಂದೆಯನ್ನು ಕಳೆದುಕೊಂಡು ,ಅಕ್ಕರೆಯ ತಾಯಿ ವಿಕಲ ಚೇತನ ಸಹೋದರನೊಂದಿಗೆ ಕುಟುಂಬದ ಪೂರ್ಣ ಹೊರೆಯನ್ನು ಹೊತ್ತ ದೀಪಕ್ ಖುಷಿ ಖುಷಿಯಾಗಿ ಬದುಕಿನ ಪಯಣವನ್ನು ನೆಮ್ಮದಿ ಯಿಂದ ಮುಂದುವರಿಸುತ್ತಾ ಇದ್ದ . ಆದಾಗಲೇ ಕಷ್ಟಪಟ್ಟು ಇಷ್ಟಪಟ್ಟು ಸಾಲ -ಸೂಲ ಮಾಡಿ ಹಣ ಹೊಂದಿಸಿ ಹೊಸ ಮನೆಯನ್ನೂ ಕಟ್ಟಿದ್ದ, ದುಶ್ಚಟಗಳಿಂದ ದೂರ ವಿದ್ದ ದೀಪು ಕುಟುಂಬದ ಆಧಾರ ಸ್ತಂಬವಾಗಿದ್ದ . ಈಗ ದೀಪಕ್ ಕಾಣದ ಲೋಕಕ್ಕೆ ಪಯಣ ಬೆಳೆಸಿದ್ದಾನೆ . ತಾಯಿ ತಮ್ಮನಿಗೆ ಮುಂದಿನ ದಿಕ್ಕು ಯಾರೆಂಬುದನ್ನು ಊಹಿಸಿದರೆ ಕರಳು ಹಿಂಡಿ ಬರುತ್ತದೆ, ತಾನು ಆಯ್ತು ತನ್ನ ಕೆಲಸ ವಾಯಿತು ಎಂಬಷ್ಟೇ ಗುಣ ನಡತೆಯಲ್ಲಿ ಅಳವಡಿಸಿಕೊಂಡಿದ್ದ ಅನ್ನುವುದಕ್ಕೆ ,ಸುಮಾರು 7 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಆತನ ಮಾಲಿಕನೇ ಸಾಕ್ಷಿ .ಕಣ್ಣು ಮುಂದೆ ಇನ್ನಿಲ್ಲವಾದ ದೀಪಕನ್ನು ಕಂಡು ಪುಟ್ಟ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳುವ ಪರಿ ನೋಡಿದರೆ ಸುಲಭವಾಗಿ ಅರ್ಥೈಸಬಹುದು ದೀಪಕ್ ಹೇಗೆ ಇದ್ದ ಎಂದು .ಸ್ನೇಹಿತರ ಸಂಘ ದಿಂದಲೇ ದೂರ ಉಳಿಯುತ್ತಿದ್ದ ,ಎಷ್ಟು ಬೇಕು ಅಷ್ಟೇ ಪರಿಧಿಯಲ್ಲಿ ಅವನ ದಿನಚರಿ ಪೂರ್ಣ ಗೊಳ್ಳುತ್ತಿತ್ತಂತೆ .,ಹತ್ತಿರದ ದಿಂದ ಕಂಡ ಬಲ್ಲವರ ಅಭಿಪ್ರಾಯ !
ಅಷ್ಟಕ್ಕೂ ದೀಪಕ್ ಹತ್ಯೆಗೆ ಕಾರಣ ವಾದರೂ ಏನು ಎಂಬುದರ ಹಿನ್ನಲೆ ಹುಡುಕುತ್ತಾ ಹೋದರೆ ನಿಜಕ್ಕೂ ಬೇಸರ ಮೂಡುತ್ತದೆ .
ಬ್ಯಾನರ್ ಕಟ್ಟುವ ವಿಚಾರ .! ಹಿಂದೂ ಧಾರ್ಮಿಕ ಕಾರ್ಯಕ್ರಮ ಬ್ಯಾನರ್ ನ್ನು ತೆರವುಗೊಳಿಸಿ ಇಸ್ಲಾಂ ಕಾರ್ಯಕ್ರಮಕ್ಕೆ ಸಂಬಂದ ಪಟ್ಟ ಬ್ಯಾನರ್ ನ್ನು ಕಟ್ಟುವ ವಿಚಾರದಲ್ಲಿ ಕೊಂಚ ಉಭಯ ಭಾಂದವರಲ್ಲಿ ಜಗಳ ನಡೆಯುತ್ತದೆ. ಜಗಳ ತಾರಕಕ್ಕೇರುತ್ತಿರುವಂತೆ ಪೋಲಿಸರ ಆಗಮನವೂ ಆಗುತ್ತದೆ. ಇಂತಹ ಸಮಯದಲ್ಲಿ ತಮ್ಮ ಕ್ಯೂರಾಸಿಟಿಗೋಸ್ಕರ ಆ ಸಮಯದಲ್ಲಿ ಯಾರೇ ಇದ್ದರೂ ಕೂಡಾ ಮೊಬೈಲ್ ತೆಗೆದು ಚಿತ್ರ ಸೆರೆ ಹಿಡಿಯುತ್ತಾರೆ .ಇದು ಸ್ವಾಭಾವಿಕ .,ಎಲ್ಲರಂತೆ ದೀಪಕ್ ಕೂಡಾ ತನ್ನ ಮೊಬೈಲ್ ನಲ್ಲಿ ಆ ದ್ರಶ್ಯಗಳನ್ನು ಚಿತ್ರಿಸಿ ಕೊಳ್ಳುತ್ತಾನೆ.ಇದನ್ನು ಕಂಡ ಆ ಗಲಭೆಯಲ್ಲಿನ ಮುಖ್ಯ ಪಾತ್ರಧಾರಿಯೊಬ್ಬ ದೀಪಕ್ ನ್ನು ಗಮನಿಸಿ ವಿಡಿಯೋ ಡಿಲಿಟ್ ಮಾಡುವಂತೆ ತಾಕಿತು ಮಾಡುತ್ತಾನೆ . ನೋ ಚಾನ್ಸ್ ! ಆ ಮಾತಿಗೆ ಹೆಚ್ಚಿನ ಗಮನ ಕೊಡದೇ ತನ್ನ ದೈನಂದಿನ ಕಾರ್ಯದಲ್ಲಿ ಮಗ್ನನಾಗುತ್ತಾನೆ . ಆದರೆ ಬೆನ್ನು ಬಿಡದ ಪುಂಡರು ,ದೂರವಾಣಿ ಮೂಲಕವೂ ಸಹಾ ಡಿಲೀಟ್ ಮಾಡು ಎಂದು ದುಂಬಾಲು ಬೀಳುತ್ತಾರೆ, ಬೆದರಿಕೆಯನ್ನೂ ಒಡ್ಡುತ್ತಾರೆ . ವಿಡೇಯೂ ಡಿಲೀಟ್ ಮಾಡಿಲ್ಲ ಅಂದರೆ ನಿನ್ನನ್ನೇ ಡಿಲೀಟ್ ಮಾಡುತ್ತೇವೆ ಎಂಬ ಒತ್ತಡವನ್ನೂ ತರುತ್ತಾರೆ. ಫಿಲಿಮಿ ಡೈಲಾಗ್ ಎಂದಷ್ಟೇ ಮನದಲ್ಲಿ ಅರಿತು ,ಅಷ್ಟಕ್ಕೂ ನಾನೇನು ಮಾಡಿದ್ದೇನೆ ? ಯಾಕಾಗಿ ಡಿಲೀಟ್ ಮಾಡಬೇಕು ಎಂದು ಮುಂದಿನ ಅಪಾಯಕಾರಿ ಸನ್ನಿವೇಶ ದ ಬಗ್ಗೆ ಒಂದಿಂಚು ಆಲೋಸಿರಲಿಲ್ಲ ದೀಪಕ್ ಅದರ ಅಗತ್ಯತೆಯೂ ಇರಲಿಲ್ಲ .ಆದರೆ ಜ.2 ದೀಪಕ್ ಗೆ ಕೊನೆಯ ದಿನವಾಗಿತ್ತು .ಪಾಪಿಗಳು ಹೇಳಿದಂತೆ ಸೇಮ್ ಸಿನಿಮಾ ಶೈಲಿಯಲ್ಲೇ ಸ್ಕೆಚ್ ರೂಪಿಸಿ ಬಿಟ್ಟಿದ್ದರು .
ನಂತರ ನಡೆಯಿತು ಹೈಡ್ರಾಮ ! ಸತ್ತ ಹೆಣದ ಮುಂದೆ ರಾಜಕೀಯ ,ಜಾತಿ ಎಲ್ಲವೂ ಬಂದು ಬಿಡುತ್ತವೆ .
ಆತ ಬೆಜೆಪಿ ಕಾರ್ಯಕರ್ತ ಹಿಂದೂ ಮುಖಂಡ .ಮರಳು ಮಾಫಿಯಾದಲ್ಲಿದ್ದ . ಹೀಗೆ ಒಂದೇ ಎರಡೇ ? ಸುಳ್ಳು ಪುಳ್ಳುಗಳೆಲ್ಲವೂ ರೆಕ್ಕೆ -ಪುಕ್ಕ ಕಟ್ಟಿಕೊಂಡು ಜಗಜಾಹೀರಾತು ಆಗುತ್ತದೆ .ಸತ್ತ ದೀಪಕ್ ಗೆ ಮಾತ್ರ ಏನು ನಡೆಯುತ್ತಿದೆ ಎಂಬ ಪ್ರಜ್ಞೆಯೇ ಇರಲಿಲ್ಲ . ವಾಸ್ತವಕ್ಕೆ ಯಾವ ಸಂಘಟನೆಯಾಗಲೇ ,ಮುಖಂಡತ್ವವನ್ನು ವಹಿಸುವುದಾಗಲಿ ಮಣ್ಣಾಗಟ್ಟಿ ಏನೂ ಇರಲಿಲ್ಲ .ಅಮಾಯಕನಾಗಿದ್ದ .ವಿಡಿಯೋ ಚಿತ್ರಿ ಕರಿಸಿದ್ದ ಎಂಬೀ ಒಂದೇ ಒಂದು ಕಾರಣಕ್ಕೆ ಹತ್ಯೆ ಮಾಡಲಾಗಿತ್ತೆ ? ಆತ ಕುತೂಹಲಕ್ಕಾಗಿ ಚಿತ್ರೀಕರಿಸಿದ್ದು ತಪ್ಪೇ ? ಅವನು ಅವಶ್ಯಕತೆಗನುಗುಣವಾಗಿ ವಿಡಿಯೋ ಮಾಡಿದ್ದೇ ಆಗಿದ್ದರೇ ,ಅಂದೇ ಆತ ಅದನ್ನು ವೈರಲ್ ಮಾಡ್ತಾ ಇದ್ದ ,ಎಲ್ಲಾ ಟೀವಿ ಸುದ್ದಿ ಮಾಧ್ಯಮ ಗಳು ಸೇರಿದಂತೆ ಸಾಮಾಜಿಕ ಜಾಲತಾಣ ದಲ್ಲಿ ಅದು ಪ್ರಸಾರ ಕಾಣುತ್ತಿತ್ತು .ಆದರೆ ದೀಪಕ್ ಗೆ ಆ ಇಂಟ್ನೇಷನ್ ಇರಲಿಲ್ಲ .
ಹೆಣದ ಮುಂದೆ ರಾಜಕೀಯ ಮಾಡಿದವರ ವಿರುದ್ದ ದಿಕ್ಕಾರವಿದೆ ತಮ್ಮ ಬೆಳೆ ಬೇಯಿಸಿಕೊಳ್ಳಲು ಇಂಥ ಹೀನ ಕಾರ್ಯಕ್ಕೆ ಕೈ ಹಾಕುತ್ತಿರುವರಿಗೆ ಮಾನ ಮರ್ಯಾದೆ ಒಂದಿನಿತೂ ಇಲ್ಲ. ಇತ್ತ ದೀಪಕ್ ಕುಟುಂಬಕ್ಕೆ ಸಮಾಧಾನ ಪಡಿಸುವ ಅತ್ತ ಅರೆಷ್ಟ್ ಆದವರಿಗೆ ಕಠಿಣ ಶಿಕ್ಷೆಗೆ ಗುರಿ ಪಡಿಸುವ ಗೌಜಿಗೆ ಹೋಗದೇ ತಮ್ಮ ತಮ್ಮಲ್ಲೇ ಇಲ್ಲ ಸಲ್ಲದ ಆರೋಪ ಹೊರಿಸಿ ಇನ್ನೊಬ್ಬರ ಮೇಲೆ ಕಿಡಿಕಾರುತ್ತಿರುವ ಮತಾಂದ ಸಮಾಜಕ್ಕೆ ನಾಚಿಕೆ ಆಗಬೇಕು ಇದಕ್ಕೆ ಪ್ರತಿಕಾರವೆಂಬಂತೆ ಸಂಘಟನೆಯ ಹಣೆ ಪಟ್ಟಿಯಲ್ಲಿರುವ ಅತಿರಥರು ಇನ್ನೊಬ್ಬ ಅಮಾಯಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸುತ್ತಾರೆ ಸಾವು ಬುದುಕಿನ ಮಧ್ಯೆ ಹೋರಾಡಿ ಅಂತೂ ಕೊನೆಗೆ ಬಷೀರ್ ಕೊನೆ ಉಸಿರು ಎಳೆಯುತ್ತಾರೆ .
ತನ್ನ ಅನಿವಾರ್ಯದ ಪರಿಸ್ತಿತಿಗೆ ಸುಖ-ಸಂತೋಷವನ್ನು ಮರೆತು ಯವ್ವನವೆನ್ನೆಲ್ಲಾ ಗಲ್ಪ್ ರಾಷ್ಟ್ರ ದಲ್ಲಿ ಕಳೆದು ಇತ್ತಿಚೆಗಷ್ಟೇ ತಾಯ್ನಾಡಿಗೆ ಬಂದಿದ್ದರು ಕೊನೆ ಘಳಿಗೆಯಲ್ಲಿಯಾದರೂ ಕುಟುಂಬಿಕರ ಜೊತೆ ನೆಮ್ಮದಿಯ ಜೀವನ ಸಾಗಿಸುವ ಬಯಕೆ ಅವರದಾಗಿತ್ತು . ಒಂದು ಪುಟ್ಟ ಪಾಸ್ಟ್ ಪುಡ ಅಂಗಡಿಯನ್ನು ನಡೆಸುತ್ತಿದ್ದರು ಬಷೀರ್ .ಆದರೆ ಏನೋ ಮಾಡೋಣ ಹೇಳಿ ಮತಾಂದರ ಧರ್ಮಯುದ್ಧಕ್ಕೆ ತನ್ನ ಉಸಿರು ಚೆಲ್ಲ ಬೇಕಾಯಿತು .
ನಾಚಿಕೆ ಆಗಬೇಕು ಏನು ಸಾಧನೆ ಆಯ್ತು ? ಅಮಾಯಕನ ಕೊಂದು ನೀವೇನು ಪಡೆದಿರಿ ? ನಿಮಗೆ ತಾಕತ್ತು ಧೈರ್ಯ ಸ್ಥೈರ್ಯ ಇದ್ದಿದ್ದರೆ ದೀಪಕ್ ಹಂತಕರ ಮೇಲೆ ನಿಮ್ಮ ಕೊಪಾಗ್ನಿಯನ್ನು ತೀರಿಸಿಕೊಳ್ಳ ಬೇಕಿತ್ತು ಅದಿಲ್ಲವೆಂದಾದರೆ ಮಂಗಳೂರಿನಲ್ಲಿ ಆಗಾಗ ನಡೆಯುವ ಇಂಥ ಘಟನೆ ಗಳಿಗೆ ಬ್ರೇಕ್ ಹಾಕಬೇಕಿತ್ತು ? ಆ ಹಿಮ್ಮತ್ತು ಖಂಡಿತವಾಗಿಯೂ ಇಲ್ಲ . ಪುಲ್ ಸ್ಟಾಪ್ ಇಲ್ಲದ ಹೇಡಿತನಕ್ಕೆ ಈ ಪರಿಸರದಲ್ಲಿ ಪ್ರತಿ ಬಾರಿಯೂ ಅಷ್ಟೇ ಅಮಾಯಕರುಳೇ ಬಲಿ ಯಾಗುತ್ತಿದ್ದಾರೆ . ಪ್ರಚೋಧಿಸುವವರು ,ರೌಡಿ ಸೀಟರ್ ಗಳು ಯಾರೂ ಸಹಾ ಸತ್ತಿಲ್ಲ !ಬೆಂಕಿ ಹತ್ತಿಸಿ ದೂರ ಸರಿಯುವ ಇವರುಗಳಿಗೆ ಏನು ಗೊತ್ತು ಹೆತ್ತ ಕರುಳು ನೋವು ,ಕುಟುಂಸ್ತರ ಕಣ್ಣೀರು!!
ಇನ್ನು ಬಷೀರ್ ಕೊಲೆಗೆ ಪ್ರತಿಕಾರವಾಗಿ ಯಾವ ಅಮಯಾಕ ಸಿಗುತ್ತಾನೆ ಭೇಟೆಗೆ ಗೊತ್ತಿಲ್ಲ.ಧರ್ಮ ಧರ್ಮಗಳ ಸಂಘರ್ಷ , ಕೋಮು ಸಾಮರಸ್ಯಕ್ಕೆ ಕೊನೆಯೇ ಇಲ್ಲವೇ ? ಬುದ್ದಿವಂತರ ನಾಡು ಬುದ್ದಿ ಹೀನವಾಗುತ್ತಿದೆ !