ಗುರುವಾರ, ಜನವರಿ 23, 2014

ನಾಚಿಕೆಗೇಡಿ ವ್ಯವಸ್ಥೆಗೆ ದಿಕ್ಕಾರ .. ದಿಕ್ಕಾರ!!!

ನಿಸ್ಪಾಕ್ಷಪಾತವಾಗಿ ತಮ್ಮ-ತಮ್ಮ ಕರ್ತವ್ಯವನ್ನು ನಿರ್ವಹಿಸುವವರು ಬೆರಳಣಿಕೆ ಮಂದಿ ಮಾತ್ರ . ಅಂತಾ ಪರಿಸ್ತಿಯಲ್ಲಿ ತಮ್ಮ ಜೀವದ ಹಂಗೂ ತೊರೆದು ಸೇವೆ ಸಲ್ಲಿಸುವವರು ಶೇ.ಒಂದಕ್ಕಿಂತೂ ಕಡಿಮೆ  ಎಂದರೂ ತಪ್ಪಲ್ಲ . ನಿಜಕ್ಕೂ ಜೀವವನ್ನು ಮುಡುಪಾಗಿಟ್ಟು ಮೊನ್ನೆ -ಮೊನ್ನೆ ರೌಡಿ ಮನ್ನಾನ ಗುಂಡಿಗೆ ಬಲಿಯಾದ  ಪಿಎಸ್ ಐ ಮಲ್ಲಿಕಾರ್ಜುನ ಬಂಡೆಗೆ ತಲೆ ಬಾಗಲೇ ಬೇಕು ನಮ್ಮಲ್ಲಿರುವ ಅವ್ಯವಸ್ತೆಯನ್ನು ಬದಿಗೊತ್ತಿ ಧೈರ್ಯಂ ಸರ್ವತ್ರ ಸಾಧನಂ ಎಂದು ದಿಟ್ಟತನವನ್ನು ಮೆರೆದ ಈ ಧೀರನನ್ನು ಇತಿಹಾಸದಲ್ಲಿ ಯಾರೂ ಕೂಡಾ ಮರಿಲಿಕ್ಕೆ ಸಾಧ್ಯವಿಲ್ಲ  ಪುಡಿ ಗಲಾಟೆಗೆ ಸಾವಿರಾರು ಪೋಲಿಸರನ್ನು ಸಜ್ಜು ಗೊಳಿಸುವ ನಮ್ಮ ರಕ್ಷಣ ವ್ಯವಸ್ತೆಯಲ್ಲಿ ಒಬ್ಬ ಕುಖ್ಯಾತ ರೌಡಿಯನ್ನು ಹಿಡಿಯಲು ಎರಡಂಕಿಯ ಪೋಲಿಸ್ !! ಜೇಬಿನಲ್ಲಿ ಪಿಸ್ತೂಲ್ ಇದ್ದರೂ ತಮ್ಮ ಜೀವ ರಕ್ಷಣೆಗೆ /ಉಪಯೋಗಕ್ಕೆ ಅಪ್ಪಣೆಯ ಕಾಯುವಿಕೆ !!ಭವಿಷ್ಯ ಇಂತಹ ಬಿಕ್ಕಟ್ಟಿನಲ್ಲಿಯೂ ಎದೆಗುಂದದೇ  ಧ್ಯರ್ಯ ಮೆರೆದ ಬಂಡೆಗ ಕೋಟಿ -ಕೋಟಿ ಸೆಲ್ಯೂಟ್ ………… ಇಂತವರು ಸಿಗವುದು ಸಾವಿರಾರು ಕೋಟಿಗೆ ಒಬ್ಬರೇ

ಏನೇ ಇರಲಿ ಸಮಾಜದ ಒಳಿತಿಗಾಗಿ ಜೀವ ತೆತ್ತ ಈ ಅಧಿಕಾರಿಗೆ ಬೆಲೆಯಲೇ ಇಲ್ಲವೇ ..?ಯಾವದೇ ಒಬ್ಬ ರಾಜಕಾರಣಿ /ಸೆಲೆಬ್ರಿಟಿಗೆ ಸಣ್ಣ  ಜ್ವರ ಬಂದರೂ ಅಮೇರಿಕಾ ,ಸಿಂಗಾಪುರಕ್ಕೆ ಕರೆದೊಯ್ಯುವ ನಮ್ಮ ವ್ಯವಸ್ಥೆಯಲ್ಲಿ  ಒಬ್ಬ ದೇಶಕ್ಕಾಗಿ ಮಡಿಯುವ ಸನ್ನಿದ್ಧದಲ್ಲಿದ್ದರೂ  ಹತ್ತಿರದ ಆಸ್ಪತ್ರೆಯೇ ದಿಕ್ಕು .! ಎಂಥಾಹ ವಿಪರ್ಯಾಸ ನೋಡಿ !!!ನಾಚಿಕೆಗೇಡಿ ವ್ಯವಸ್ಥೆಗೆ ದಿಕ್ಕಾರ …. ದಿಕ್ಕಾರ!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ