ಅದು ಕುಂದಾಪುರದ ಶಾಸ್ತ್ರೀ ವ್ರತ್ತ. ಆ ದಿನ ಶುಭ ಶುಕ್ರವಾರದ ಮುಸ್ಸಂಜೆಯ ಮುಸುಕಿನ ಹೊತ್ತು ..ಹಳೆ ಬಸ್ಸು ನಿಲ್ದಾಣ ದ ಕಡೆ ಇಂದ ಒಂದು ಬಿಳಿ ಬಣ್ಣದ ಇಂಡಿಕಾ ಕಾರು ಬರುತ್ತಿತ್ತು .ಕಾರಿನಲ್ಲಿ ಕೇವಲ ಒಬ್ಬನೇ ಒಬ್ಬ ಅಂದರೆ ,ಸಾಧಾರಣ ೨೨-೨೩ ವರ್ಷದ ಒಳಗಿನ ಯುವಕನಾದ ಅದರ ಚಾಲಕ ಅಲ್ಲೇ ಸ್ವಲ್ಪ ಸೈಡ್ ನಲ್ಲಿ ಸ್ಟ್ಯಾಂಡ್ ಮಾಡುವ ಸಲುವಾಗಿ ತಿಳಿಯದೆ ನಿಧಾನವಾಗಿ ಟಚ್ ಮಾಡಿಯೇ ಬಿಟ್ಟ .ತತ್ತಕ್ಷಣ ಅಲ್ಲೇ ಪಕ್ಕದಲ್ಲಿ ನಿಂತಿದ್ದ ಆ ಬೈಕ್ ನ ಒಡೆಯ ಅವನ ಹತ್ತಿರ ಬಂದು ಇಂಡಿಕಾ ಕಾರಿನ ಒಳಗಿದ್ದ ಚಾಲಕನನ್ನು ಒಂದೇ ಸಮನೆ ಎಳೆದು ಎರಡು ಕಪಾಳಕ್ಕೆ ಕೊಟ್ಟು ಬಿಟ್ಟ.ಕ್ಷಣ ಮಾತ್ರ ದಲ್ಲಿ ಜನರ ಗುಂಪು ಒಂದಾಗಿತ್ತು ..
![]() |
| ಕೃಪೆ |
ಸಾಯಂಕಾಲದ ಸಮಯ ಬೇರೆ ,ಸ್ವಲ್ಪ -ಸ್ವಲ್ಪ ಪರಮಾತ್ಮ ಬಿದ್ದಿದ್ದ ಕೆಲ ಮಹಾನುಭರ ಹೊಟ್ಟೆಗೆ .."ನನ್ದು ತಪ್ಪಾಗಿದೆ ಸರ್ .ಬೈಕ್ನ ರಿಪೇರಿ ಮಾಡಿ ಕೊಡ್ಸ್ತಿನಿ ಕಾರಿನ ಬ್ರೇಕ್ ಸ್ವಲ್ಪ ಪ್ರಾಬ್ಲಮ್ ಇದ್ದಿತ್ತು .." ಎಂದು ಉತ್ತರಿಸುದಕ್ಕೂ ಪೂರ್ಣ ವಾಗಿ ಬಿಡದೆ ,'ಹೊಡಿ ಮಗ ಹೊಡಿ ಮಗ ಬಿಡ ಬ್ಯಾಡ ಅವನ್ನ ' ಅಂತ ಸಿಕ್ಕಿದವರು ,ಸಿಕ್ಕಿದಸ್ಟು,ಸಿಕ್ಕಾಪಟ್ಟೆ ಕೊಟ್ಟೆ ಬಿಟ್ಟರು ..ಪಾಪ ! ಕಂಗಾಲಾದ ಆ ಕಾರಿನ ಚಾಲಕನ ದ್ವಂದ್ವ ಪರ್ಸಿಸ್ತಿತಿಯನ್ನು ನೋಡಿದರೆ ಮನುಷತ್ವ ಎನ್ನುವ ಸವ್ಜನ್ಯ ವಿರುವ ಯಾರಿಗೆ ಯಾದರೂ ಕಂಬನಿ ತನಗರಿವಿಲ್ಲದಂತೆ ಕುಸುರದೆ ಇರಲಾರದು .ಸಿಕ್ಕಿದ್ದೇ ಚಾನ್ಸು ಎಂದು ಹಿಗ್ಗಾ-ಮುಗ್ಗಾ ಬಾರಿಸುತಿದ್ದ, ಇವರುಗಳಿಗೆ ತಮ್ಮಂತೆಯೇ ಇನ್ನೊಬ್ಬರ ಜೀವ ಎನ್ನುವ ಕಿಂಚಿತ್ತ್ ಕರುಣೆ ಇಲ್ಲದೆ ಇರುವದು ಕಳವಳಕಾರಿ .ಕಾರಿನವರದ್ದು ತಪ್ಪು ಸ್ವಾಭಾವಿಕ ವಾಗಿದ್ದರೂ ,(ಇಲ್ಲದಿದ್ದರೂ ) ಕಾನೂನು ಅನ್ನುದು ಇಲ್ಲವೇ ? ಪುಕ್ಸಟೆ ಪ್ರೊಗ್ರಾಮ್ ಎಂದು ತಮ್ಮ ಎರೆಡು ಕಣ್ಣು ಗಳಿಂದ ಇವರುಗಳ ಕುಕ್ರತ್ಯ-ಕಟೋರ ಕ್ರಮ ಗಳನ್ನು, ಕಂಡರೂ ಇದನ್ನು ಹಿಮ್ಮೆಟ್ಟಿಸುವ ಹಿಮ್ಮತ್ತು ಎದೆಗಾರಿಕೆ ನಮ್ಮಲ್ಲಿನ ಗುಂಪು -ಗುಂಪಾದ ಜನಕ್ಕೆ ಇಲ್ಲದೆ ಇರೂದು ಆಘಾತಕಾರಿ ಸಂಗತಿ ." ತಪ್ಪು ಮಾಡುವದು ಸಹಜ ತಿದ್ದಿ ಕೊಳ್ಳುದು ಮಾನವನ ಧರ್ಮ " ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ..ಆದರೆ ಇಲ್ಲಿ ತಪ್ಪನ್ನು ತಿದ್ದಿ ಕೊಳ್ಳುದಕ್ಕು ಪುರೋಸೋತ್ತು ಕೊಡದೆ ನಡೆದ ಮೊನ್ನೆ -ಮೊನ್ನೆಯ ಈ ಕಟ್ಟಾ ಕಹಾನಿಗೆ ನೀವೆನ0ತೀರಿ?
- ಶಿವಕುಮಾರ್ ,ಹೊಸಂಗಡಿ
- ಶಿವಕುಮಾರ್ ,ಹೊಸಂಗಡಿ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ