ಗುರುವಾರ, ಸೆಪ್ಟೆಂಬರ್ 14, 2023

ಧರ್ಮಸ್ಥಳ ಸೌಜನ್ಯ ಪ್ರಕರಣ ಅಂದಿನಿಂದ ಇಂದಿನವರೆಗೆ….!! ಮುಂದೆ??

ಸೌಜನ್ಯ ದೌರ್ಜನ್ಯ ನತ ದ್ರಷ್ಟ ಸೌಜನ್ಯ ಎಂಬ ವಿದ್ಯಾರ್ಥಿನಿಯು ಘೋರ,ಭಯಾನಕವಾಗಿ ಪೈಶಾಚಿಕ ರೀತಿಯಲ್ಲಿ ಅತ್ಯಾಚಾರಗೊಂಡು ಹತ್ಯೆಯಾಗಿ ಸರಿ ಸುಮಾರು ಹನ್ನೊಂದು ವರ್ಷಗಳೇ ಕಳೆದು ಹೋಗಿದೆ.ಇಂದಿಗೂ ನೈಜ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ನಮ್ಮಲ್ಲಿನ ಕಾನೂನು ವ್ಯವಸ್ಥೆ,ತನಿಖಾ ಸಂಸ್ಥೆಯಿಂದ ಆಗದೇ ಹೋಯಿತು, ಸುದೀರ್ಘ ಹನ್ನೊಂದು ವರ್ಷಗಳ ಬಳಿಕ ಬಂದ ಕೋರ್ಟ್ ತೀರ್ಪು ಅಸಮಾಧಾನದಿಂದ ಕೂಡಿತ್ತು ಹಾಗೂ ಮತ್ತೆ ಸೌಜನ್ಯ ಸುದ್ದಿ ಗರಿಗೆದರುವಂತೆ ಮಾಡಿಬಿಟ್ಟಿತು.ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮ್ಮರೊಡಿ, ಸಂತ್ರಸ್ತೆಯ ಕುಂಟುಂಬಸ್ಥರನ್ನು ಕಟ್ಟಿಕೊಂಡು ರಾಜ್ಯಾದ್ಯಂತ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ, ಒಂದಷ್ಟು ಒಳ್ಳೆ/ಕೆಟ್ಟಮನಸ್ಸುಗಳೂ ಇದಕ್ಕೆ ಕೈ ಜೋಡಿಸಿವೆ . ಈ ಪ್ರಕರಣವನ್ನು ಆರಂಭದಲ್ಲಿ ಅಕ್ಟೋಬರ್ 2012ರಲ್ಲಿ ದಾಖಲಿಸಲಾಯಿತು,ಬೆಳ್ತಂಗಡಿ ಪೊಲೀಸರು ತನಿಖೆ ನಡೆಸಿದರು ನಂತರ ಅದನ್ನು ನವೆಂಬರ್ 2013 ರಲ್ಲಿ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ), ಚೆನ್ನೈನ ವಿಶೇಷ ಅಪರಾಧ ವಿಭಾಗವು ವಹಿಸಿಕೊಂಡಿತು. 2016ರಲ್ಲಿ ತನಿಖೆ ಪೂರ್ಣಗೊಳಿಸಿ ಸಿಬಿಐ ವರದಿ ಸಲ್ಲಿಸಿತ್ತು. ಜೂನ್ 16 ರ ಆದೇಶದಲ್ಲಿ, ನ್ಯಾಯಾಧೀಶ ಸಿಬಿ ಸಂತೋಷ್, ಆರೋಪಿ ಮತ್ತು ಅಪರಾಧಕ್ಕೆ ಸಂಬಂಧಿಸಿದಂತೆ ಯಾವುದೇ ಸೂಕ್ತ ಸಾಕ್ಷಿಗಳಿಲ್ಲದಿರುವುದ ಬಗ್ಗೆ ತೀರ್ಪು ನೀಡಿದ್ದರು. ಅದೇ ಈಗ ಪುನಃ ಸೌಜನ್ಯಾ ಪ್ರಕರಣ ಜೀವ ಪಡೆಯುವುದಕ್ಕೆ ಕಾರಣೀಭೂತವಾಗಿದೆ.ಅಪರಾಧಿ ಎಂದು ಬಂಧಿಸಲ್ಪಟ್ಟು 6 ವರ್ಷ ಜೈಲು ಪಾಲಾಗಿ,ಜಾಮೀನಿನ ಮೂಲಕ ಹೊರಗೆ ಬಂದ ಸಂತೋಷ್ ರಾವ್, ನಿರಪರಾಧಿ ಎಂಬ ತೀರ್ಪು ಮೇಲ್ನೋಟಕ್ಕೆ ಕೋರ್ಟ್ ತೀರ್ಪಿನ ಪ್ರತಿಯಲ್ಲಿ ಗೊತ್ತಾಗಿದ್ದೇ ತಡ, ಹೋರಾಟಗಾರರಿಗೆ ಹಾಗೂ ಸಂತ್ರಸ್ತೆಯ ಕುಟುಂಬಿಕರಿಗೆ ಸಂತಸ ತಂದರೂ, ನಿಜವಾದ ಅಪಾಧಿಗಳು ಯಾರು ಅವರನ್ನು ಬಂಧಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿತ್ತು. ಹೌದು! ಹಾಗಾದರೆ ಅಪರಾಧಿಯಾರು? ಹತ್ಯಾಚಾರವಾದದ್ದು ಸತ್ಯ ಅಪರಾಧಿ ಇರುವುದು ಕೂಡ ಅಷ್ಟೇ ಸತ್ಯ! ಏನಿದು ಘಟನೆ? ಅದು 2012, 9ರ ಜೂನ್ ನಲ್ಲಿ ನಡೆದ ಘನ ಘೋರ ಘಟನೆ.ಎಂದಿನಂತೆ ಸಂಜೆ 4:30 ಸಮಯಕ್ಕೆ ಉಜಿರೆಯ ಎಸ್ಡಿಎಂ ಕಾಲೇಜಿನಿಂದ ಧರ್ಮಸ್ಥಳ ಗ್ರಾಮದ ಪಾಂಗಾಳಕ್ಕೆ ತನ್ನ ಮನೆಗೆ ಹೆಜ್ಜೆ ಹಾಕುತ್ತಿದ್ದ ಪಿಯುಸಿ ಓದುತ್ತಿದ್ದ 17 ವರ್ಷದ ಸೌಜನ್ಯ ಎನ್ನುವ ವಿದ್ಯಾರ್ಥಿನಿ ಮನೆಗೆ ಸೇರಿರಲಿಲ್ಲ.ಬಸ್ ನ್ನು ಇಳಿದು ಮನೆ ಕಡೆ ಹೋಗುತ್ತಿದ್ದ ಈಕೆಯನ್ನು ಕಂಡವರು ಇದ್ದಾರೆ ಸ್ವತಃ ಆಕೆಯ ಮಾವ ವಿಠ್ಠಲ ಗೌಡ ನೋಡಿದ್ದೂ,ವಿಶ್ ಕೂಡಾ ಮಾಡಿದ್ದರು ಅಂತೆ, ಆದರೆ ಮನೆಗೆ ಮಾತ್ರ ಆಕೆ ಹೋಗಲಿಲ್ಲ! ಅಲ್ಲಿ, ಇಲ್ಲಿ, ಎಲ್ಲಾ ಕಡೆ ಹುಡುಕಿದರೂ, ಸೌಜನ್ಯಾ ಇರುವಿಕೆ ಅರಿಯದೇ ಸ್ವಾಭಾವಿಕವಾಗಿ ಟೆನ್ಷನ್ ಗೆ ಒಳಗಾಗಿದ್ದರು ಕುಟುಂಬದ ಸದಸ್ಯರು.ಹುಡುಗಾಟ ಪ್ರಾರಂಭವಾಯಿತು ಇಡೀ ರಾತ್ರಿ ಶೋಧ ನಡೆಸಿದರೂ, ಸೌಜನ್ಯಳ ಸುಳಿವು ಸಿಕ್ಕಿರಲಿಲ್ಲ.ಮರುದಿನ ಅದೇ ಪ್ರದೇಶಕ್ಕೆ ಹೊಂದಿಕೊಂಡಂತೆ ಮುಖ್ಯ ರಸ್ತೆಯ ಕೂಗಳತೆಯ ದೂರದಲ್ಲಿ ಸೌಜನ್ಯಳ ಶವ ಪತ್ತೆಯಾಗುತ್ತದೆ. ದೇಶದ ನಾಗರಿಕ ಸಮಾಜ ತಲೆ ತಗ್ಗಿಸುವಂತ ರೀತಿಯಲ್ಲಿ ಕಂಡು ಬರುತ್ತದೆ ಆ ನೋಟ.ಅತ್ಯಾಚಾರ ಎಸಗಿದ್ದೂ ಮಾತ್ರ ಅಲ್ಲದೆ ತನ್ನ ಕ್ರೌರತೆ, ಮ್ರಗರತೆಯನ್ನು ಮರೆದ್ದರು ದುಷ್ಟರು. ಶವ ಸಿಕ್ಕ ಸ್ಥಿತಿಯನ್ನು ಬಿಡಿಸಿ, ಬಿಡಿಸಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ ಇಡೀ ರಾಜ್ಯಕ್ಕೆ ಅದಾಗಲೇ ಗೊತ್ತಿರುವ ವಿಷಯ.ದೌರ್ಜನ್ಯ ವಿರೋಧಿಸಿ ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನೆ ನಡೆಯುತ್ತದೆ., ಹರತಾಳ ಮುಗಿಲು ಮುಟ್ಟುತ್ತದೆ ಈತನ್ಮಧ್ಯೇ ಬೆಳ್ತಂಗಡಿಯ ಹಿಂದೂ ಹುಲಿ ಎಂದು ಗುರುತಿಸಲ್ಪಟ್ಟ ಮಹೇಶ್ ಶೆಟ್ಟಿ ತಿಮ್ಮರೊಡಿ ಅಚಾನಕ್ಕಾಗಿ ಈ ಪ್ರಕರಣದಲ್ಲಿ ಕಾಣಿಸಿಕೊಂಡು, ಸೌಜನ್ಯ ಕುಟುಂಬಸ್ಥರ ಜೊತೆ ಪ್ರತಿಭಟನೆಗೆ ಇಳಿದು ಬಿಡುತ್ತಾರೆ.
ಕೃತ್ಯ ನಡೆದ ಸ್ಥಳದಿಂದ ಸುಮಾರು ಒಂದೂವರೆ ಕಿಮೀ ದೂರದಲ್ಲಿರುವ ಬಾಹುಬಲಿ ಬೆಟ್ಟದಲ್ಲಿ ಸಂಜೆಯ ಸಮಯದಲ್ಲಿ ಭಿಕ್ಷುಕನ ರೀತಿಯಲ್ಲಿ ನಿಂತಿದ್ದ ಸಂತೋಷ್ ರಾವ್ ಎಂಬಾತನ್ನು ಈ ಪ್ರಕರಣದಲ್ಲಿ ಹೋರಾಟಗಾರರು ಆರೋಪಿಸಿರುವ ನಾಲ್ಕು ಮಂದಿಯ ಪೈಕಿ ಮಲ್ಲಿಕ್ ಜೈನ್ ಜೊತೆಗೆ,ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾರೆ.ಈತನೇ ಸೌಜನ್ಯ ರೇಪ್ ಅಂಡ್ ಮರ್ಡರ್ ಮಾಡಿದ್ದು ಎಂದೂ ಆತನನ್ನು ಜೈಲ್ ನ ಕಂಬಿ ಹಿಂದೆ ತಳ್ಳುತ್ತಾರೆ., ಹೋರಾಟಗಾರರು ಹಾಗೂ ಸೌಜನ್ಯ ಮನೆಯವರು ಈತ ನಿರಾಪರಾಧಿ ಇದರ ಹಿಂದೆ ಬೇರೆ 4 ಜನರು ಇದ್ದಾರೆ ಎಂದು ಅವರ ಹೆಸರನ್ನುಬಹಿರಂಗ ಪಡಿಸುತ್ತಾರೆ . ಆ ಆರೋಪಿಗಳು ಪಾರಾಗಲು ಸಂತೋಷ್ ರಾವ್ ಎನ್ನುವ ಮುಗ್ದ, ಮಾನಸಿಕ ರೋಗಿ ತರಹ ಇರುವ ಈ ವ್ಯಕ್ತಿಯನ್ನು ಪಿಟ್ ಮಾಡಲಾಗಿದೆ ಎಂದೂ ಆರೋಪಿಸುತ್ತಾರೆ. ಸೌಜನ್ಯಳ ಪೋಸ್ಟ್ ಮಾರ್ಟಮ್ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯ ಸೇರಿದಂತೆ ಪೊಲೀಸ್ ತನಿಖೆ ಇನ್ನಿತರ ಚಟುವಟಿಕೆಗಳು ಸರಿಯಾದ ರೀತಿಯಲ್ಲಿ ಆಗಿಲ್ಲ, ಹಾಗೂ ಆರೋಪಿಗಳ ಮೇಲೆ ನಾವು ಕೊಟ್ಟ ದೂರನ್ನು ಪೊಲೀಸರು ಪ್ರಭಾವಿಗಳ ಒತ್ತಡದ ಮೇಲೆ ದಾಖಲಿಸಲಿಲ್ಲ ಎಂಬ ಆರೋಪವನ್ನು ಇಂದಿಗೂ ಮಾಡುತ್ತಾರೆ. ಆರೋಪಿಗಳು ಎಂದು ಹೇಳಲ್ಪಟ್ಟ 4 ಜನರಲ್ಲಿ ಒಬ್ಬ ಧರ್ಮಸ್ಥಳದ ಧರ್ಮಾಧಿಕಾರಿಯ ತಮ್ಮನ ಮಗ ನಿಶ್ಚಲ್ ಜೈನ್, ಅಮೆರಿಕಾದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಆ ಸಮಯದಲ್ಲಿ ಆತ ಊರಿನಲ್ಲಿ ಇರಲೇ ಇಲ್ಲ ಎಂಬ ಸಾಕ್ಷಿ ಸಿಕ್ಕರೂ, ಅದೆಲ್ಲಾ ಫೇಕ್ ಎನ್ನುವುದು ಸೌಜನ್ಯ ಮನೆಯವರ ಉದಾಂಡ ವಾದ .ಇನ್ನುಳಿದ ಮೂವರ ವಿಚಾರಣೆಯಾಗುತ್ತದೆ ಹಾಗೂ ಸ್ವಯಂ ಪ್ರೇರಿತವಾಗಿ ಬ್ರೈನ್ ಮ್ಯಾಪಿಂಗ್ ಗೂ ಒಳಪಡಿಸಲಾಗಿದೆ ಎಂಬ ದಾಖಲೆಯನ್ನೂ ಪ್ರೆಸ್ ಮೀಟ್ ನಡೆಸಿ ಈ ಮೂವರು ಮುಂದಿಡುತ್ತಾರೆ. ಸಿಓಡಿ ಇಂದ ಸಿಬಿಐವರೆಗಿನ ಮೆಟ್ಟಿಲನ್ನೂ, ಹತ್ತಿದ್ದ ಈ ಪ್ರಕರಣ ಕೊನೆಗೂ ಇತ್ತೀಚಿಗೆ ಸಿಬಿಐ ನಿಂದ ತೀರ್ಪು ಬಂದಿತ್ತು ಅಪರಾಧಿ ಎಂದು ಬಿಂಬಿಸಲಾಗಿದ್ದ ಸಂತೋಷ್ ರಾವ್ ಬಗೆಗೆ ಯಾವುದೇ ಸಾಕ್ಷಿ ಆಧಾರಗಳಿಲ್ಲ ಆತ ನಿರಾಪರಾಧಿ ಎಂಬ ದಿಕ್ಕಿನಲ್ಲಿ ಆತನಿಗೆ ಕ್ಲೀನ್ ಚಿಟ್ ಮಾದರಿಯಲ್ಲಿ ತೀರ್ಪು ನೀಡಿತ್ತು.ಇದರಿಂದ ಅತೃಪ್ತಗೊಂಡ ಸೌಜನ್ಯ ಮನೆಯವರು ಹಾಗೂ ಹೋರಾಟಗಾರರು ಪ್ರತಿಭಟನೆಗೆ ಇಳಿದು ಬಿಟ್ಟಿದ್ದಾರೆ.ಸಂತೋಷ್ ರಾವ್ ಅಪರಾಧ ಮಾಡಿಲ್ಲ ಎಂಬುದನ್ನು ನಾವು ಮೊದಲೇ ತಿಳಿಸಿದ್ದೆವು ಅವನು ಖುಲಾಸೆಗೊಂಡಿರುವುದು ನಮಗೆ ಖುಷಿ ತಂದರೂ ,ನೈಜವಾದ ಅಪರಾಧಿಗಳ ಪತ್ತೆಯಾಗಿಲ್ಲ,ತೃಪ್ತಿ ತಂದಿಲ್ಲ ಎಂಬುದನ್ನು ಇಟ್ಟುಕೊಂಡು ನ್ಯಾಯಕ್ಕಾಗಿ ಹೋರಾಟದ ಹಾದಿ ಇಳಿದಿವೆ. ಸಂತೋಷ್ ರಾವ್ ನಿರಪರಾಧಿಯಾದರೇ? ಅಪರಾಧಿಗಳು ಯಾರು? ಸಂತೋಷ್ ರಾವ್ ನಿರಾಪರಾಧಿಯಾದರೇ ಸೌಜನ್ಯರನ್ನು ಪೈಶಾಚಿಕ ಹತ್ಯೆ ಮಾಡಿದ ಆ ಕಾಮಾಂಧರರು ಯಾರು? ಅವರಿಗೆ ಗಲ್ಲು ಶಿಕ್ಷೆಯಾಗಬೇಕು ಸೌಜನ್ಯಳಿಗೆ ನ್ಯಾಯ ಸಿಗಬೇಕು ಎಂದು ಕರಾವಳಿ ಕರ್ನಾಟಕ ಮಾತ್ರವಲ್ಲದೇ ರಾಜ್ಯಾದ್ಯಂತ ತಿಮ್ಮರೊಡಿ ಮಹೇಶ್ ಶೆಟ್ಟಿಯವರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ ಅವರ ಜೊತೆಗೆ ಮೈಸೂರಿನ ಒಡನಾಡಿ ಸಂಸ್ಥೆ ಕೂಡ ಕೈ ಜೋಡಿಸಿವೆ. ಮಹೇಶ್ ಶೆಟ್ಟಿ ತಿಮ್ಮರೊಡಿಯವರು ಇದೆ ವಿಚಾರದಲ್ಲಿ ಮುಂಬೈಗೂ ಪ್ರಯಾಣ ಬೆಳೆಸಿ ಅಲ್ಲಿಯೂ ತಮ್ಮ ಪ್ರಖರ ಭಾಷಣವನ್ನು ಬೀಗಿದ್ದೂ ಈಗ ಸಧ್ಯ ಕರಾವಳಿಯಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಡೆಲ್ಲಿ ತನಕವೂ ಹೋಗಿ ನ್ಯಾಯಕ್ಕಾಗಿ ಹೋರಾಡುವುದು ಎಂದು ಗುಡುಗುತ್ತಿದ್ದಾರೆ.ಅಚ್ಚರಿಯೆಂದರೆ ಈ ಪ್ರಕರಣದಲ್ಲಿ ರಾಜ್ಯಮಟ್ಟದ,ನ್ಯೂಸ್ ಚಾನೆಲ್ ಗಳು ವಿಶೇಷ ಸುದ್ದಿ ಮಾಡದೇ ಇರುವುದು ಜೊತೆಗೆ ದೊಡ್ಡ ದೊಡ್ಡ ನ್ಯೂಸ್ ಪೇಪರ್ ಗಳೂ ಸಹಾ ಕೈ ಜೋಡಿಸದೇ ಇರುವುದು., ಕೇವಲ ಪ್ರತಿಭಟೆನಾ ಸಭೆಯ ವರದಿ ಸಣ್ಣ ಕಾಲಂನಲ್ಲಿ ಜಾಗ ಪಡೆಯುತ್ತಿದೆ ಅಷ್ಟೇ.ಆದರೆ ಹಲವಾರು ಯೌಟ್ಯೂಬ್ ಚಾನೆಲ್ ಗಳು ಎಪಿಸೋಡ್ ಮೇಲೆ ಎಪಿಸೋಡ್ ಮಾಡುತ್ತಿವೆ ವಿಪರ್ಯಾಸವೆಂದರೆ ಯೌಟ್ಯೂಬ್ ನಿಂದ ಲೀಗಲ್ ನೋಟಿಸ್ ಜಾರಿಯಾಗುತ್ತಿದೆಯಂತೆ ಸೌಜನ್ಯಳಿಗೆ ಸಂಬಂದಿಸಿದ ವರದಿ ಪ್ರಕಟವಾಗಬಾರದು ಎಂದು., ಹಾಗೂ ವಿಡಿಯೋಗಳೆಲ್ಲಾ ತನ್ನಷ್ಟೇ ಡಿಲೀಟ್ ಕೂಡ ಆಗುತ್ತಿವೆಯಂತೆ ಇದು ಒಂದು ರೀತಿಯ ಪ್ರಭಾವದ ಫಲ ಎಂದೂ ಹೇಳಲಾಗುತ್ತಿದೆ. ಧರ್ಮಾಧಿಕಾರಿಗಳನ್ನು ದೂರುದೇತಕ್ಕೆ? ಪ್ರತಿಭಟನೆಕಾರರು ಸೌಜನ್ಯಳಿಗೆ ನ್ಯಾಯ ಸಿಗಬೇಕು ಎಂಬ ವಿಚಾರ ಇಟ್ಟುಕೊಂಡು ಹೋರಾಟ ನಡೆಸದೇ ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಅವಹೇಳನಕಾರಿ ಯಾದ ಹೇಳಿಕೆಯನ್ನು ಕೊಡುತ್ತಿದ್ದಾರೆ.ಕ್ಷೇತ್ರದ ಪಾವಿತ್ರತೆಯನ್ನು ಹಾಳು ಕೆಡುವುತ್ತಿದ್ದಾರೆ ಎಂದು ದೇವಸ್ಥಾನದ ಭಕ್ತರು ಹಿತೈಷಿಗಳು ,ಅಭಿಮಾನಿಗಳು ಹೇಳುತ್ತಿದ್ದಾರೆ ಒಂದು ಲೆಕ್ಕದಲ್ಲಿ ಇದು ಸರಿ ಅನ್ನಿಸಿದರೂ ,ಇನ್ನೊಂದು ಕಡೆಯಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದವರು ಮುಖ್ಯವಾಹಿನಿಗೆ ಬಂದು ಒಂದು ಉತ್ತಮ ಹೇಳಿಕೆಯನ್ನು ಕೊಡುವುದು ಹಾಗೂ ಸಭೆ,ಪ್ರತಿಭಟನೆಯಲ್ಲಿ ಇರುವಿಕೆಯನ್ನು ತೋರ್ಪಡಿಸದೇ ಇರುವುದು ಹೋರಾಟಗಾರರಿಗೆ ವಸ್ತು ಆಗುತ್ತಿರುವುದು ಎನ್ನುವುದು ನನ್ನ ಅಭಿಪ್ರಾಯ ! ದೇಶದ ಪ್ರಾಚೀನ, ಜನಪ್ರೀಯ, ಪಾವಿತ್ರತ್ಯೆಯ ಕ್ಷೇತ್ರಲ್ಲಿ ಸ್ಥಾನ ಪಡೆದ ಧರ್ಮಸ್ಥಳ ಇದು ಪುಣ್ಯ ಕ್ಷೇತ್ರವಾದರೂ ಅದೊಂದು ಗ್ರಾಮ.ಈ ಗ್ರಾಮಕ್ಕೆ ಸಂಬಂಧ ಪಟ್ಟಲ್ಲಿ ಘಟನೆ ನೆಡದಿರುವುದು. ಸಂತ್ರಸ್ತೆ ವ್ಯಾಸಂಗ ಮಾಡುತ್ತಿರುವ ಕಾಲೇಜು ಕೂಡಾ ಧರ್ಮಸ್ಥಳ ಸಂಸ್ಥೆಗೆ ಒಳಪಟ್ಟದ್ದು ಹಾಗೂ ಅಲ್ಲಿ ಕೆಲಸ ನಿರ್ವಹಿಸುತ್ತಿರುವವರ ಮೇಲೆ ಆರೋಪ ಬಂದಿರುವ ಕಾರಣ ದಿಂದಲಾದರೂ ,ಇದಕ್ಕೆಲ್ಲಾ ತೆರೆ ಎಳೆಯಲು ಧರ್ಮಸ್ಥಳ ಧರ್ಮಾಧಿಕಾರಿ ,ಪೂಜ್ಯರು, ಖಾವಂದರು, ಮಾತನಾಡುವ ಮಂಜುನಾಥ ಎಂದೇ ಹೆಸರು ಪಡೆದಿರುವ ಡಿ.ವೀರೇಂದ್ರ ಹೆಗ್ಗಡೆಯವರು ಆಟ್ಲಿಸ್ಟ್ ಒಂದಾದರೂ ಬಹಿರಂಗ ಸಭೆಯಲ್ಲಿ ಪಾಲ್ಕೊಂಡಿದ್ದರೇ, ಕ್ಷೇತ್ರಕ್ಕೆ ಮತ್ತು ಅವರಿಗೆ ಗೌವರ ಸಲ್ಲುತ್ತಿತ್ತು,ಸಾಕಷ್ಟು ನಮ್ಮಂತ ಅಭಿಮಾನಿಗಳಿಗೆ,ಇನ್ನು ಹೋರಾಟಗಾರರಿಗೆ, ಟೀಕಾಗಾರರಿಗೂ ಚಾಟಿ ಏಟು ಸಿಗುತ್ತಿತ್ತು.ಇದೆಕ್ಕೆಲ್ಲಾ ಉತ್ತರ ಕೊಡುತ್ತಾ ಈ ಸಭೆ.ಹೋರಾಟಗಳಿಗೆ ತೆರಳಲು ಸಮಯದ ಕೊರತೆ ಹಾಗೂ ಅದು ಅವರ ಕರ್ತ್ಯವ್ಯಪರತೆಗೆ ನಿಲುಕದ್ದು .ಸಣ್ಣ ಸೌಜನ್ಯಕ್ಕಾದರೂ,ನಾಡಿನ ಏಳಿಗೆಯನ್ನು ಬಯಸುತ್ತಿರುವ,ಬೆಸೆಯುತ್ತಿರುವ ಮನೋಭಾವನೆಯಲ್ಲಿರುವ ಪೂಜ್ಯರು ರಾಜ್ಯಾದ್ಯಾ೦ತ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸ್ವ ಸಹಾಯ ಸ್ತ್ರೀಸಂಘಗಳ ಮೂಲಕ ಮಹಿಳೆಯರಿಗೆ ಸ್ವಾವಲಂಭಿ ಸ್ಥಿರತೆಯನ್ನು ಕಲ್ಪಿಸಿರುವವವರು. ಈ ಸೌಜನ್ಯ ವಿಚಾರವು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸದ್ದು ಪಡೆಯುತ್ತಿರುವುದರಿಂದ ತನ್ನ ಇರುವುಕೆಯನ್ನು ತೋರ್ಪಡಿಸಬೇಕಿತ್ತು ಎಂಬುದು ಹಲವರ ಅಭಿಪ್ರಾಯ. ಸಿಬಿಐಗೆ ಈ ಪ್ರಕರಣವನ್ನು ವಯಿಸುವಲ್ಲಿ ಧರ್ಮಾಧಿಕಾರಿಗಳ ಪಾತ್ರವೂ ದೊಡ್ಡದು ಇದೆ ಎಂಬುದನ್ನುಇಲ್ಲಿ ಸ್ಮರಿಸಿಕೊಳ್ಳಬೇಕು! ಅವರು ಅಂದು ಸಿಬಿಐಗೆ ವರ್ಗಾಹಿಸುವುದಕ್ಕೆ ಗ್ರಹ ಮಂತ್ರಿಗಳಾಗಿದ್ದ ಆರ್ ಅಶೋಕ್ ಅವರಿಗೆ ಪತ್ರವನ್ನೂ ಬರೆದಿದ್ದರು.ಎಲ್ಲೋ ಭೌತಿಕವಾಗಿ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿದ್ದರೇ ಅವರ ಕೀರ್ತಿಮಕುಟಕ್ಕೆ ಇನ್ನೊಂದು ಗರಿ ಸಿಗುತ್ತಿತ್ತು! ಸಂತೋಷ್ ರಾವ್ ನಿಜವಾಗಿಯೂ ಕ್ರತ್ಯ ಎಸಗಿರಬಹುದೇ? ಆತ ಪೋಲೀಸರ ಮುಂದೆ ಹೌದು ನಾನೇ ಮಾಡಿದ್ದು ಎಂದು ಒಪ್ಪಿಕೊಂಡಿದ್ದು ಯಾಕೆ? ಆತನ ಮೈ ಮೇಲೆ ಪರಚಿದ ಗಾಯಗಳು ಸೌಜನ್ಯಳದ್ದೇ? ಆತ ಬಾಹುಬಲಿ ಬೆಟ್ಟದಲ್ಲಿ ಸಿಕಿದ್ದಾಗ ಇಲ್ಲೇನು ಮಾಡುತ್ತಿದ್ದೆ ಎಂದು ದೇವಸ್ಥಾನದ ಸಿಬ್ಬಂದಿ ಕೇಳಿದಾಗ ಇನ್ನಿಬ್ಬರು ಇದ್ದಾರೆ ಅವರಿಗಗಾಗಿ ಕಾಯುತ್ತಿದ್ದೇನೆ ಎಂದವನು ಕ್ಷಣ ಮಾತ್ರದಲ್ಲಿ ವಿಚಿತ್ರಕಾರಿಯಾಗಿ ಅಲ್ಲಿಂದ ಓಡಿ ಹೋಗಲು ಪ್ರಯತ್ನಪಟ್ಟಿದ್ದು ಯಾಕೆ? ಸೌಜನ್ಯಳ ಮಾವನ ಹೋಟೆಲ್ ನಿಂದ ಪ್ರತಿದಿನ 3 ಪಾರ್ಸೆಲ್ ಊಟ ತೆಗೆದು ಕೊಂಡು ಹೋಗುತ್ತಿದ್ದುನಿಜವೇ? ಕರಾಟೆ ಬ್ಲಾಕ್ ಬೆಲ್ಟ್ ಆಗಿಯೂ, ಮಾನಸಿಕ ವ್ಯಕ್ತಿ ತರಹ ಗೋಚರಿಸುತ್ತಿದ್ದ ಈತ, ನಿಜಕ್ಕೂ ನಾಟಕವಾಡುತ್ತಿದ್ದಾನೆಯೇ? ಬ್ರೈನ್ ಮ್ಯಾಪಿಂಗ್ ಗೆ ಯಾಕೆ ಒಪ್ಪಿಕೊಂಡಿಲ್ಲ? ಲೈಂಗಿಕ ಸಾಮರ್ಥ್ಯವಿಲ್ಲಾ ಎಂದು ಹೇಳಲಾಗುತ್ತಿದ್ದರೂ ಈತ ಈ ಹಿಂದೆ ಅತ್ಯಾಚಾರಕ್ಕೆ ಪ್ರಯತ್ನಿಸಿ ವಿಫಲಗೊಂಡಿದ್ದು ಸುದ್ದಿಯಾಗಿದ್ದು ಸುಳ್ಳಾ?ಸಂತೋಷ್ ರಾವ್ ನಿಜವಾಗಿಯೂ ಕ್ರತ್ಯ ಎಸಗಿರಬಹುದು ಎನ್ನುವುದಕ್ಕೆ ಕೆಲವೊಂದು ಸಾಕ್ಷಿ ಒದಗಿಸುತ್ತಿವೆಯಾದರೂ,ಯಾವುದನ್ನೂ ಸತ್ಯ ಎಂದು ಒಪ್ಪುವಂತಿಲ್ಲ.ಒಂದು ಲೆಕ್ಕಚಾರದಲ್ಲಿ ಸೌಜನ್ಯಳನ್ನು ರೇಪ್ ಅಂಡ್ ಮರ್ಡರ್ ಮಾಡಿ ಆತ ಮರುದಿನ ಅಂದ್ರೆ ಕ್ರತ್ಯ ನಡೆದ ಸ್ಥಳದಿಂದ ಸುಮಾರು ಒಂದೂವರೆ ಕಿಮೀ ದೂರದಲ್ಲಿರುವ ಬಾಹುಬಲಿ ಬೆಟ್ಟದಲ್ಲಿ ಕಾಣಸಿಗುತ್ತಾನೆ ಅಲ್ಲಿಯೇ ಆತನನ್ನು ಹೋರಾಟಗಾರರು ಹೇಳುತ್ತಿರುವ ಆರೋಪಿಗಳ ಪೈಕಿ ಮಲ್ಲಿಕ್ ಜೈನ್ ಹಿಡಿದು ಸ್ಥಳಿಯರ ಸಹಕಾರ ದಿಂದ ಪೊಲೀಸರಿಗೆ ಒಪ್ಪಿಸುತ್ತಾರೆ ಅಂದರೆ ಸಂತೋಷ್ ರಾವ್ , ಹತ್ಯಾಚಾರ ಮಾಡಿ ಅಲ್ಲಿಯೇ ಇರಲು ಸಾಧ್ಯವೇ? ಆತ ಅಲ್ಲಿಂದ ಬೇರೆಕಡೆ ಸ್ಥಳಾಂತರ ಆಗಬೇಕಿತ್ತು ಅಲ್ವೇ ? ಇನ್ನು ಆತ ಅಲ್ಲಿ ಹೇಳಿದ್ದು ಇನ್ನಿಬ್ಬರು ಇದ್ದಾರೆ ಅವರನ್ನು ಕಾಯುತ್ತೀದ್ದೇನೆ ಎಂದವನು ದಿಢೀರ್ ಎಂದು ಓಟಕ್ಕಿತ್ತಿದ್ದು ಯಾಕೆ? ನಿಜವಾಗಿಯೂ ಅಲ್ಲಿ ಆತನ ಜೊತೆ ಇನ್ನಿಬ್ಬರು ಇದ್ದಿದ್ದಾರೆಯೇ? ಇದ್ದಿರಲೂ ಬಹುದು ಎಂಬ ಅಂಶ ಒಂದೆಡೆ ಸಂಶಯ ಮೂಡಿಸುತ್ತದೆ ಕಾರಣ ಆತನ ಘಟನೆ ನಡೆಯುವುದರ ಮೊದಲು 2-3 ದಿನಗಳಿಂದ ಸೌಜನ್ಯ ಮಾವ ವಿಠ್ಠಲ್ ಗೌಡ ಅವರ ಹೋಟೆಲ್ ನಿಂದ ಮೂರು ಊಟ ಪಾರ್ಸೆಲ್ ತಗೆದು ಕೊಂಡು ಹೋಗುತ್ತಿದ್ದದ್ದು, ಹಾಗೂ ಪೋಸ್ಟ್ ಮಾರ್ಟಮ್ ಮಾಡಿದ ವೈದ್ಯರ ಪ್ರಥಮ ಹಂತದ ಹೇಳಿಕೆಯಲ್ಲಿ ಇದನ್ನು ಒಬ್ಬ ವ್ಯಕ್ತಿಯಿಂದ ಮಾಡಲು ಅಸಾಧ್ಯ, ಗ್ಯಾಂಗ್ ರೇಪ್ ಆಗಿರುವ ಸಾಧ್ಯತೆಗಳಿವೆ ಎಂಬಾವುಗಳೆಲ್ಲಾ ಈತನೇ ಅಪರಾಧಿ ಎನ್ನುವುದಕ್ಕೆ ಪುಷ್ಟಿ ನೀಡುತ್ತಿವೆ.ಇನ್ನು ಆತ ಪೋಲೀಸರ ಮುಂದೆ ಸತ್ಯ ಒಪ್ಪಿಕೊಂಡಿದ್ದ ಎಂಬ ಮಾತು ಕೂಡ ಕೇಳಿಬರುತ್ತಿದೆ. ನಾನೇ ಮಾಡಿದ್ದು ಎಂದು ಅಪಹರಿಸಿದ ರೀತಿಯನ್ನೂ ಸಹ ಆತ ಸಂಕ್ಷಿಪ್ತವಾಗಿ ಪೊಲೀಸರಿಗೆ ತಿಳಿ ಹೇಳಿದ್ದನಂತೆ .ಕ್ರತ್ಯ ನಡೆದ ಸ್ಥಳಕ್ಕೆ ತೆರಳಬೇಕಾದರೆ ಎರಡು ಮಾರ್ಗಳು., ಒಂದು ಸುತ್ತು ಬಳಿಸಿ ಸಾಗಬೇಕಾದರೇ ಇನ್ನೊಂದು ರಸ್ತೆ ಒಂದು ಹರಿಯುವ ತೊರೆಯನ್ನು ದಾಟಿ ಹೋಗಬೇಕು., ಅದು ಮಳೆಗಾಲದ ಸಮಯವಾದುದ್ದರಿಂದ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತದೆ ಅದನ್ನು ದಾಟಿ ಸಾಗುವುದು ಅಷ್ಟು ಸುಲಭವಲ್ಲ ಎನ್ನಲಾಗುತ್ತದೆ. ಸಂತೋಷ್ ಆ ತೊರೆಯನ್ನು ದಾಟಿ ಅವಳನ್ನು ಎತ್ತಿ ಹೋಗಿದ್ದಾನೆಂದು, ಇನ್ನು ಅದರ ಪಕ್ಕದಲ್ಲಿ ಪ್ರಕ್ರತಿ ಚಿಕಿಸ್ಥಳಾಯ ಇದ್ದೂ, ಅದರ ವಾಚ್ ಮೆನ್ ನ ದ್ರಷ್ಟಿ ಮರೆಮಾಚಲು ಸಣ್ಣ ತಿರುವು ಇರುವುದರಿಂದ ಸುಲಭವಾಗಿತ್ತು ಎಂದೂ ಬಾಯಿ ಬಿಟ್ಟ ವಿಚಾರ ಪೊಲೀಸ್ ದಾಖಲಾತಿಯಲ್ಲಿಇದೆಯಂತೆ. ಆತನ ಪರವಾಗಿರುವ ಲಾಯರ್ ಮೋಹಿತ್ ಕುಮಾರ್ ಇದೆಲ್ಲಾ ಸುಳ್ಳು ಪೊಲೀಸರು ಬೆದರಿಸಿ ಹಲ್ಲೆ ಮಾಡಿದ್ದರ ತರುವಾಯ ಆತ ಹೀಗೆ ಒಪ್ಪಿಕೊಂಡು ಹೇಳಿದ್ದಾನೆ ಎಂದು ಆರೋಪ ಮಾಡುತ್ತಾರೆ.ಕೆಲವೊಂದು ಮೂಲಗಳ ಪ್ರಕಾರ ಆತ ಮಾನಸಿಕ ಅಸ್ವಸ್ಥ ಅಲ್ಲವೇ ಅಲ್ಲ ಆತ ಆ ತರಹ ನಾಟಕ ಮಾಡಿಕೊಂಡಿರುವವನು ,ತೀರ್ಥ ಕ್ಷೇತ್ರಗಳ ಸುತ್ತುವ ಭಕ್ತಿ,ಬಯಕೆಯನ್ನು ಹೊಂದಿರುವ ಈತ ಆದಾಗಲೇ ಶಬರಿ ಮಾಲೆ ಯಾತ್ರೆಗೆ ವ್ರತ ನಿರತನಾಗಿದ್ದನಂತೆ ಅದಕ್ಕೆ ಗಡ್ಡ ಮೀಸೆ ಹಾಗೂ ಕೂದಲುಗಳನ್ನು ಬಿಟ್ಟಿದ್ದ.ಕಾರ್ಕಳದ ಅಯ್ಯಪ್ಪ ಮಾಲಾಧಾರಿಗಳ ಜೊತೆ ಅಲ್ಲಿನ ಶಿಬಿರದಲ್ಲಿದ್ದ ಆತ ಆಗಾಗ ಧೂಮಪಾನವನ್ನು ಮಾಡುತ್ತಿದ್ದನಂತೆ ಇದನ್ನು ಕಣ್ಣಾರೆ ಕಂಡ ಉಳಿದ ವ್ರತಧಾರಿಗಳು ಸಾಕಷ್ಟು ಸಾರಿ ಆತನಿಗೆ ಬುದ್ದಿ ಹೇಳಿದರೂ, ಕೇಳಿಸಿ ಕೊಳ್ಳದ ಆತ ನನ್ನು ಅಲ್ಲಿಂದ ಬೀಳ್ಕೊಟ್ಟಿದ್ದರು ಎಂದು ಆತನ ಜೊತೆಗಿದ್ದ ಮಾಲಾಧಾರಿಯೊಬ್ಬರ ಹೇಳಿಕೆಯಿಂದ ತಿಳಿಯುತ್ತಿದೆ. ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ನ್ನು ಹೊಂದಿರುವವನು, ಇಂಜಿನಿಯರಿಂಗ್ ಪದವಿ ಪಡೆದು ಸಬ್ ಕಾಂಟ್ರಾಕ್ಟರ್ ಆಗಿ ಉದ್ಯೋಗ ನಿಭಾಯಿಸಿದ ವ್ಯಕ್ತಿ. ಕರಾಟೆ ಪಟುವಾಗಿದ್ದರಿಂದ ಈತ ನಿಂದ ಅತ್ಯಾಚಾರ ಕೊಲೆ ಮಾಡಲು ಸಾಧ್ಯತೆಗಳಿರಬಹುದು ಎಂಬ ಅಭಿವ್ಯಕ್ತಿಯೂ ಇದೆ.ಇನ್ನು ಈತ ಬ್ರೈನ್ ಮ್ಯಾಪಿಂಗ್ ಗೆ ಒಳಪಟ್ಟಿಲ್ಲ., ಕಾರಣ ಆರೋಗ್ಯ ಸ್ತಿಮಿತದಲ್ಲಿ ಇಲ್ಲ ಎಂಬ ಕಾರಣವೊಡ್ಡಿ ಆತನ ಪರ ಅಡ್ವಕೇಟ್ ಹೇಳಿದ್ದರು.ಬೆಂಗಳೂರಿನ ನಿಮಾನ್ಸ್ ನ ಖ್ಯಾತ ಮನೋವೈದ್ಯರು, ಪ್ರೊಫೆಸರ್ ಆಗಿರುವ ಡಾI ಸಿ.ಆರ್.ಚಂದ್ರಶೇಖರ್ ಅವರು ಆತನನ್ನು ಪರಿಶೀಲಿಸಿ, ಆತ ಆರೋಗ್ಯದಲ್ಲಿ ಫೈನ್ ಅಂಡ್ ಫಿಟ್ ನಲ್ಲಿ ಇದ್ದಾನೆ ಎಂಬ ಸರ್ಟಿಫಿಕೇಟ್ ಅನ್ನೂ ಕೊಟ್ಟಿರುತ್ತಾರೆ. ಆದರೂ ಆತ ಮಂಪರು ಪರೀಕ್ಷೆಗೆ ಒಳಗಾಗಿಲ್ಲ ಎಂಬ ಪ್ರಶ್ನೆ ಕಾಡುತ್ತದೆ.!ಆತನ ಮೈ ಮೇಲೆ ಇರುವ ಪರಚಿದ ಗಾಯಗಳು 72ಗಂಟೆಗಳ ಮೊದಲಿನ ಗುರುತುಗಳು ಎಂದು ವ್ಯದ್ಯಕೀಯ ತಪಾಸಣೆ (ಎಫ್ ಎಸ್ ಎಲ್) ಯಲ್ಲಿ ರುಜುವಾತುಗೊಂಡಿರುತ್ತದೆ. ಆತನಿಗೆ ಲೈಂಗಿಕ ಸಾಮರ್ಥ್ಯವಿಲ್ಲಾ ಎಂದು ಆತನ ಅಡ್ವಕೇಟ್ ಹೇಳುತ್ತಿದ್ದರೂ, ಎಲ್ಲೋ ಒಂದು ಗುಮಾನಿ ನಮ್ಮನ್ನು ಕಾಡದೇ ಇರದು ಈ ಹಿಂದೆ ಆತ ಕಾರ್ಕಳ ಹಾಗೂ ಬೆಂಗಳೂರಿನ ಯುವತಿಯ ಮೇಲೆ ಅತ್ಯಾಚಾರದ ವಿಫಲಯತ್ನದ ಬಗ್ಗೆ ದೂರು, ಹಾಗೂ ಪತ್ರಿಕಾ ವರದಿಗಳು ಸಾಕ್ಷಿ ಒದಗಿಸುತ್ತಿದೆ.ಇದೆಲ್ಲವೂ ಸಾಕ್ಷಿ ನುಡಿಯುತ್ತಿದ್ದರೂ, ಈತನೇ ಅಪರಾಧಿ ಎಂದು ಹೇಳುವಂತಿಲ್ಲ ಕಾರಣ ಸರಿಯಾದ ಜೀವಂತ ಸಾಕ್ಷಿ ಇಲ್ಲವೇ ಇಲ್ಲ.!ಕೋರ್ಟ್ ಪ್ರಾಸಿಕ್ಯೂಷನ್ ನಲ್ಲಿ ವೈಫಲ್ಯೆತೆಯನ್ನು ಕಂಡು ಕೊಂಡಿರಬಹುದೇ ಗೊತ್ತಿಲ್ಲ.ಇನ್ನು ಬಿಡುಗಡೆಗೊಂಡ ಬಳಿಕ ಈ ಸಂತೋಷ್ ರಾವ್ ಯಾರ ಕಣ್ಣಿಗೂ ಕಾಣಿಸಿಲ್ಲ., ಯಾವುದೋ ದೇವಸ್ಥಾನದಲ್ಲಿ ಇದ್ದನೆಂದು, ಆತನಿಗೆ ಮುಖ್ಯ ವಾಹಿನಿಗೆ ಬಂದು ಮಾಧ್ಯಮದ ಮುಂದೆ ನಡೆದ ಘಟನೆಯನ್ನು ವಿವರಿಸಬಹುದಿತ್ತು ಅಲ್ವೇ? ಆತ ಯಾಕೆ ಬರುತ್ತಿಲ್ಲ? ಆತನೇ ಸ್ವತಃ ಹೇಳಿಕೆ ಕೊಟ್ಟರೆ ಅದಕ್ಕೆ ಪೂರಕವಾಗಿ ಮಾಧ್ಯಮದವರು ಪ್ರಶ್ನೆ ಇಟ್ಟರೆ ಎಲ್ಲೊ ಒಂದುಚೂರು ಸತ್ಯ ದರ್ಶನವಾಗಹುದೇನೋ? ಆ ನಾಲ್ವರ ಸುತ್ತಾ ಸೌಜನ್ಯ ಹತ್ಯಾಚಾರ ನಡೆದದ್ದು 2012ರಲ್ಲಿ, ಸೌಜನ್ಯ ಕುಟುಂಸ್ಥರು 2013ರ ಹೊತ್ತಿಗೆ 4 ಜನರು ಇದರಲ್ಲಿ ಬಾಗಿಯಾಗಿದ್ದಾರೆ ಅವರು ಧರ್ಮಸ್ಥಳ ದೇವಸ್ಥಾನಕ್ಕೆ ಸಂಬಂಧ ಪಟ್ಟ ವ್ಯಕ್ತಿಗಳಾದ ನಿಶ್ಚಲ್ ಜೈನ್, ಧೀರಜ್ ಕೆಲ್ಲಾ, ಮಲ್ಲಿಕ್ ಜೈನ್ ಮತ್ತು ಉದಯ್ ಜೈನ್ ಎಂಬ ನಾಲ್ವರು ಎಂದು ಆರೋಪಿಸುತ್ತಾರೆ. ಕೆಲವೊಂದು ಪೂರಕವಾದ ಸಾಕ್ಷಿಗಳನ್ನೂ ಮುಂದೆ ಇಡುತ್ತಾರೆ.ಸೌಜನ್ಯ ಹತ್ಯೆ ಆದ ಆ ದಿನ ಸಂಜೆ ಬೇರೊಂದು ಹುಡುಗಿಯನ್ನು ಅಪಹರಿಸುವ ಸಂಚು ರೂಪಿಸುತ್ತಿದ್ದದ್ದನ್ನು ಮರೆಯಲ್ಲಿ ಸೌಜನ್ಯ ಕುಟುಂಬದ ಸದಸ್ಯರೊಬ್ಬರು ಕೇಳಿ ತಿಳಿದುಕೊಂಡಿದ್ದನ್ನು ಹೇಳುತ್ತಾರೆ. ಆಗ ಆ ಯುವತಿ ಅದೃಷ್ಟವಶಾತ್ ತಪ್ಪಿ ಹೋದ ಕಾರಣ ಅದೇ ಸಮಯಕ್ಕೆ ಸೌಜನ್ಯ ಬಸ್ ಇಳಿದು ಮನೆ ಕಡೆ ಸಾಗುವ ಸಂದರ್ಭ ಆಕೆಯಲ್ಲಿ ಕಿಡ್ನಾಪ್ ಮಾಡಿ ಸನಿಹದ ಲಾಡ್ಜ್ ನಲ್ಲಿ ಈ ನಾಲ್ವರು ಗ್ಯಾಂಗ್ ರೇಪ್ ಮಾಡಿ ಹತ್ಯಮಾಡಿ ಬೆಳಿಗ್ಗೆನ ಜಾವ ತಂದು ಇಲ್ಲಿ ಹಾಕಿದ್ದಾರೆ ,ಆ ದಿನ ರಾತ್ರಿ ನಾವು, ಸಾವಿರಕ್ಕೂ ಅಧಿಕ ಮಂದಿ ಇಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗದ ಡೆಡ್ ಬಾಡಿ, ಮರುದಿನ ಸಿಕ್ಕಿದ್ದು ನಮಗೆ ಪೂರ್ತಿ ಅನುಮಾನ ಕಾಡಿದೆ ,ಆಕೆಯ ಚಪ್ಪಲಿ ಹಾಗೂ ಕೊಡೆ ಕಾಣೆಯಾಗಿದೆ ,ಆ ದಿನ ರಾತ್ರಿ ಇಡೀ ಮಳೆ ಇತ್ತು ಆದರೂ ಬ್ಯಾಗ್ನಲ್ಲಿದ್ದ ಪುಸ್ತಕಗಳು ಒದ್ದೆಯಾಗಿಲ್ಲ,ಸೌಜನ್ಯಾಳ ನ್ನು ನಾಲ್ವರು ಅಪಹರಿಸುತ್ತಿರುದನ್ನು ನೇರವಾಗಿ ವರ್ಷ ಎನ್ನುವ ವಿದ್ಯಾರ್ಥಿನಿ ಹಾಗೂ ಪರಿಮಳ ಟೀಚರ್ ನೋಡಿದ್ದರ ಬಗ್ಗೆ ಮುಂತಾದ ಹೇಳಿಕೆಗಳನ್ನು ಹೋರಾಟಗಾರರು ಹಾಗೂ ಮನೆಯವರು ನೇರವಾಗಿ ನುಡಿಯುತ್ತಾರೆ.
ಇದರಲ್ಲಿ ಧೀರಜ್ ಕೆಲ್ಲಾ ಮತ್ತು ಮಲ್ಲಿಕ್ ಜೈನ್ ದೇವಸ್ಥಾನದಲ್ಲಿ ಉದ್ಯೋಗಿಯಾಗಿದ್ದರೇ, ಉದಯ್ ಜೈನ್ ಆಟೋ ರಿಕ್ಷಾ ಇಟ್ಟು ಬಾಡಿಗೆ ಮಾಡುವವನು ಇನ್ನು ನಿಶ್ಚಲ್ ಜೈನ್ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ತಮ್ಮನ ಮಗ ಆತ ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ ಆತ ಈ ಘಟನೆ ನಡೆದ ಸಮಯದಲ್ಲಿ ಊರಿನಲ್ಲಿ ಇರಲೇ ಇಲ್ಲ ಎಂಬ ದಾಖಲೆಯನ್ನು ನೀಡುತ್ತಾರೆ.ಸೌಜನ್ಯ ಮನೆಯವರ ಆರೋಪದಂತೆ ಈ ನಾಲ್ವರ ಬಗ್ಗೆ ನಾವು ಪೊಲೀಸರಿಗೆ ದೂರು ಕೊಟ್ಟರೂ, ಅವರು ಅದನ್ನು ಅಂಗೀಕಾರ ಮಾಡಲಿಲ್ಲ ಎನ್ನುತ್ತಾರೆ. ದೇವಸ್ಥಾನದ ಕೆಲಸದವರು ಹಾಗೂ ತನ್ನ ತಮ್ಮನ ಮಗನಿಗಾಗಿ ವೀರೇಂದ್ರ ಹೆಗ್ಗಡೆಯವರು ಅವರೆನ್ನೆಲ್ಲರನ್ನು ಈ ಪ್ರಕರಣದಲ್ಲಿ ರಕ್ಷಿಸಲು ,ಬಚಾವ್ ಮಾಡಿದ್ದಾರೆ,ಅವರ ಒತ್ತಡಕ್ಕಾಗಿ ಎಲ್ಲವೂ ಮುಚ್ಚಿ ಹೋಗಿದೆ ಮತ್ತು ಅವರ ಪ್ರಭಾವ ಇದರ ಮೇಲೆ ಖಂಡಿತವಾಗಿಯೂ ಬೀರಿದೆ ಎಂಬ ಮಾತನ್ನು ಇಂದಿಗೂ ಹೋರಾಟಗಾರರು ಹೇಳುತ್ತಾ ಬರುತ್ತಿದ್ದಾರೆ.ನಿಶ್ಶಲ್ ಜೈನ್ ಸದ್ಯ ಅಮೆರಿಕದಲ್ಲಿರುವ ಕಾರಣ ಉಳಿದ ಈ ಮೂವರು ಪತ್ರಿಕಾಗೋಷ್ಠಿ ನೆಡಸಿ ತಮ್ಮ ಮೇಲಿನ ಆರೋಪಕ್ಕೆ ತೆರೆ ಏಳುವ ಪ್ರಯತ್ನ ಮಾಡಿದ್ದಾರೆ.ನಮ್ಮ ತನಿಖೆ ಆಗಿದೆ ಸಿಓಡಿ ,ಸಿಬಿಐ ನಮ್ಮನ್ನು ವಿಚಾರಣೆ ಮಾಡಿದ್ದಾರೆ ,ಬ್ರೈನ್ ಮ್ಯಾಪಿಂಗ್ ಅವಶ್ಯತೆ ಇಲ್ಲ ಅಂದ್ರೂ ನಮ್ಮ ಮೇಲೆ ಆರೋಪ ಬಂದಿರುವುದಕ್ಕೆ ಸ್ವತಃ ನಾವಾಗಿಯೇ ಅದಕ್ಕೂ ಒಳಪಟ್ಟಿದ್ದೇವೆ ಎಂದು ಎಲ್ಲಾ ಡೀಟೈಲ್ಸ್ಗಳನ್ನ ಮಾಧ್ಯಮದ ಮುಂದೆ ಇಡುತ್ತಾರೆ. 2016ರಲ್ಲಿ ಶಂಕಿತ ಆರೋಪಿಗಳಾದ ಮಲ್ಲಿಕ್ ಜೈನ್, ಧೀರಜ್ ಜೈನ್ ಮತ್ತು ಉದಯ್ ಜೈನ್ ಅವರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು ಹಾಗೂ ಮೊನ್ನೆ ಮೊನ್ನೆ ಸೌಜನ್ಯ ತಾಯಿ ಕುಸುಮಾವತಿವರ ಮುಂದೆ ಅಣ್ಣಪ್ಪ ಸ್ವಾಮಿ ದೇವಸ್ಥಾನದಲ್ಲಿ ನಾವು ಯಾವುದೇ ತಪ್ಪು ಮಾಡಿಲ್ಲ ನಮಗೂ ಈ ಕೇಸಿಗೂ ಸಂಭಂದವಿಲ್ಲ ಎಂದು ಪ್ರಮಾಣವನ್ನೂ ಮಾಡಿದ್ದರು.ಒಟ್ಟಾರೆ ಈ ಪ್ರಕರಣದಲ್ಲಿ ಯಾರನ್ನು ನಂಬಬೇಕೋ ಯಾರ ಮೇಲೆ ವಿಶ್ವಾಸ ಇಡಬೇಕೋ ಎಂಬ ಜಿಜ್ಞಾಸೆ ಎಲ್ಲರಲ್ಲೂ ಉಂಟು ಮಾಡಿದೆ! ಉಸಿರುಗಟ್ಟಿಸುತ್ತಿರುವ ಈ ಪ್ರಕರಣಕ್ಕೆ ಒಂದೇ ಪರಿಹಾರ ಮರು ತನಿಖೆ ನಡೆಸುವುದು.! ಅದು ಅಷ್ಟು ಸುಲಭವಲ್ಲ! ಯಾಕೆಂದರೆ ಹನ್ನೊಂದು ವರ್ಷ ಕಳೆದು ಹೋಗಿದೆ ಹೆಚ್ಚಿನ ಸಾಕ್ಷಿಗಳೂ ನಾಶವಾಗಿವೆ. ಉಳಿದಿರುವ ದಾರಿ ಯೊಂದೇ ಅದು ಸಭೀಕರ ಸಮುಖದಲ್ಲಿ ಸಂತೋಷ್ ರಾವ್ ಗೆ ಹಾಗೂ ಆರೋಪ ಬಂದವರನ್ನು ಬ್ರೈನ್ ಮ್ಯಾಪಿಂಗ್ ಗೆ ಒಳಪಡಿಸುವುದು ಇದರಿಂದ ಕಿಂಚಿತ್ ಸತ್ಯ ಹೊರಬೀಳಬಹುದೇನೋ? ನ್ಯಾಯಾಧೀಶರು ಏನು ಹೇಳುತ್ತಾರೆ? ಅತ್ಯಾಚಾರದ ನಂತರ ವೈದ್ಯರು ಸಂಗ್ರಹಿಸಿದ ಮಾದರಿಗಳು ಪ್ರಕರಣಕ್ಕೆ ಪೂರಕವಾಗಿರಲಿಲ್ಲ,ಡಿಎನ್ಎ ವರದಿಯಲ್ಲಿಯೂ ಆರೋಪಿಗಳ ವಿರುದ್ಧ ಯಾವುದೇ ಸಕಾರಾತ್ಮಕ ಸಾಕ್ಷ್ಯಗಳಿಲ್ಲ.ಆರೋಪಿಯ ಬಟ್ಟೆಯ ಮೇಲೆ ಸೆಮಿನಲ್ ಕಲೆಗಳು ಅಥವಾ ಸಂತ್ರಸ್ತೆ ಕೂದಲು ಕಂಡುಬಂದಿಲ್ಲ. ಆಶ್ಚರ್ಯಕರ ಸಂಗತಿಯೆಂದರೆ, ಘಟನೆ ನಡೆದ ಸ್ಥಳದಿಂದ ಏನೂ ಪತ್ತೆಯಾಗಿಲ್ಲ, ಒಂದು ವೇಳೆ ಹೇಳಿದ ಸ್ಥಳದಲ್ಲಿ ಅತ್ಯಾಚಾರ ನಡೆದಿದ್ದರೆ, ಆರೋಪಿಗಳ ಕೂದಲು, ಹೆಜ್ಜೆಗುರುತುಗಳು, ಯಾವುದೇ ಸುಳಿವುಗಳನ್ನು ಕಂಡುಹಿಡಿಯಲು ತಜ್ಞರ ತಂಡವನ್ನು ಕರೆಸಲು ತನಿಖಾಧಿಕಾರಿಗೆ ಏನು ಅಡ್ಡಿಯಾಯಿತು? ನೀರ್ಲಕ್ಷೆ ದೋರಣೆಯನ್ನು ತೋರಿದ್ದರೇ? ಅಥವಾ ಯಾರದ್ದಾದರೂ ಪ್ರಭಾವ ಇದ್ದಿರಬಹುದೇ? ಹೀಗೇಕೆ ಗೊಂದಲ? ಶ್ರೀ ಧರ್ಮಸ್ಥಳ ಕ್ಷೇತ್ರಕ್ಕೆ ಸಂಬಂಧ ಪಟ್ಟವರು, ಅಭಿಮಾನಿಗಳು ಸೌಜನ್ಯ ಪರವಾದ ಹೋರಾಟಗಳಲ್ಲಿ ಅಡ್ಡಿ ಪಡಿಸುವ ಹಾಗೂ ಅದಕ್ಕೆ ವಿರುದ್ಧ ವಾದ ಹೇಳಿಕೆಯನ್ನು ಕೊಡುವ ಮೂಲಕ ಎಲ್ಲೊ ಹೋರಾಟಗಾರರ ದ್ವೇಷಕ್ಕೆ ಹಾಗೂ ಅನುಮಾನಕ್ಕೆ ಕಾರಣೀಭೂತರಾಗುತ್ತಿದ್ದಾರೆ ಎಂದು ಭಾಸವಾಗುತ್ತಿದೆ.ಗೊಂದಲವನ್ನು ಏರ್ಪಡಿಸುತ್ತಿರುವವರ ಹೇಳುವಂತೆ ಕ್ಷೇತ್ರಕ್ಕೆ ಅವಹೇಳನಕಾರಿ, ಅಪಮಾನ ತರುವ ರೀತಿಯಲ್ಲಿ ಪ್ರತಿಭಟನಾಕಾರರು ನೆಡೆದು ಕೊಳ್ಳುತ್ತಿದ್ದಾರೆ ಎಂದು.ಸಂತ್ರಸ್ತೆ ಸೌಜನ್ಯ ಧರ್ಮಸ್ಥಳ ಗ್ರಾಮಕ್ಕೆ ಸೇರಿದವಳು. ಕ್ಷೇತ್ರಕ್ಕೆ ಸಂಬಂಧಿಸಿದವರು ನ್ಯಾಯಪರವಾದ ಹೋರಾಟದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಬಾವೋದ್ವೇಗಕ್ಕೆ ಒಳಗಾಗುವ ಹೋರಾಟಗಾರರಲ್ಲಿ ಅಂತಹ ಹೇಳಿಕೆಗಳು ಮಾತಿನ ಬರದಲ್ಲಿ ಹೊರಟಿರುವದು ಸತ್ಯ. ಮೊನ್ನೆ ಉಡುಪಿಯಲ್ಲಿ ನಡೆದ ಸೌಜನ್ಯ ಪರ 'ಜನಾಗ್ರಹ' ಪ್ರತಿಭಟನೆಯಲ್ಲಿ ಒಂದಷ್ಟು ಮಂದಿ ಗೊಂದಲವನ್ನು ಏರ್ಪಡಿಸವ ಕಾರ್ಯಕ್ಕೂ ಕೈ ಹಾಕಿದ್ದರು.೨೦೦೦ ರೂಪಾಯಿ ಕೊಟ್ಟು ಹೋರಾಟ ಕೆಡಿಸಲು ದೇವಸ್ಥಾನಕ್ಕೆ ಸಂಬಂಧ ಪಟ್ಟವರು ನೀಡಿದ್ದಾರೆ ಎಂಬ ವಿಡಿಯೋ ತುಣುಕು ಒಂದು ಕೂಡಾ ಆ ಸಮಯದಲ್ಲಿ ವೈರಲ್ ಕೂಡಾ ಆಗಿತ್ತು.,ಹಾಗೆ ಇತ್ತೀಚಿಗೆ ಬೆಳ್ತಂಗಡಿಯಲ್ಲಿ ನಡೆದ ‘ಧರ್ಮಸ್ಥಳ ಹಕ್ಕೊತ್ತಾಯ' ಸಭೆಯಲ್ಲಿ ಸೌಜನ್ಯಳ ತಾಯಿ ಕುಸುಮಾವತಿ ಹಾಗೂ ಕುಟುಂಬಸ್ಥರಿಗೆ ವೇದಿಕೆ ಏರಲು ಬಿಡದೇ ಅವರ ಮಗನ ಮೇಲೆ ಹಲ್ಲೆಗೆ ಮುಂದಾದ ಘಟನೆಯೂ ನೆಡೆಯಿತು. ಇನ್ನು "ಇದರ ಹಿಂದೆ ಎಷ್ಟು ಜನರ ಕೈವಾಡ ಇದೆ ಎನ್ನುವುದು ನನಗೆ ಗೊತ್ತು ನಾನೇ ಇದನ್ನು ಸಿಬಿಐ ವಹಿಸಲು ಆ ಸಮಯದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಿದ್ದೇ ನಾನು, ಸತ್ಯ ವಿಚಾರವನ್ನು ಸೂಕ್ತ ಸಮಯದಲ್ಲಿ ಜನತೆ ಮುಂದೆ ತೆರಿದಿಡಿವೆ "ಎಂದು ಬಹಿರಂಗ ಸಭೆಯಲ್ಲಿ ಹೇಳಿದ್ದರು,ಬೆಳ್ತಂಗಡಿಯ ಮಾಜಿ ಶಾಸಕ ಕಾಂಗ್ರೆಸ್ ನ ವಸಂತ್ ಬಂಗೇರ ! ಇವರ ಹೇಳಿಕೆ ಮತ್ತದೇ ಗೊಂದಲವನ್ನು ಏರ್ಪಡಿಸುವುತ್ತಿದೆ, ಇನ್ನು ಈ ಕೇಸ್ ನಲ್ಲಿ ನೇರ ಸಾಕ್ಷಿದಾರರು ಎಂದು ಗುರುತಿಸಿಕೊಂಡಿರುವ ಪರಿಮಳ ಟೀಚರ್ ಹಾಗೂ ವರ್ಷ ಎಂಬ ವಿದ್ಯಾರ್ಥಿನಿ ಹೀಗೆ ಇವೆಲ್ಲವನ್ನೂ ಕೊಲಂಕುಷವಾಗಿ ಪರಿಗಣಿಸಿ, ಇವರೆಲ್ಲರನ್ನು ಸರಿಯಾಗಿ ತನಿಖೆ ಮಾಡಿ ಒಂದು ವಿಶೇಷ ತನಿಖಾದಳವನ್ನು ನಿಯೋಜಿಸಿದರೇ ಸತ್ಯ ಹೊರಹೊರತರುವುದಕ್ಕೆ ಪ್ರಯಾಸವಾಗದು. ಮಹೇಶ್ ಶೆಟ್ಟಿ ತಿಮರೋಡಿ ಈ ಪ್ರತಿಭಟನೆಗೆ ಧುಮುಕಲು ಕಾರಣವೇನು? ಮಹೇಶ್ ಶೆಟ್ಟಿ ತಿಮ್ಮರೊಡಿ ಬೆಳ್ತಂಗಡಿ ಪರಿಸರದಲ್ಲಿ ಚಿರಪರಿಚಿತ ಹೆಸರು, ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡವರು. ಪ್ರಖರವಾಗ್ಮಿ, ಇದ್ದದ್ದನ್ನು ಇದ್ದ ಹಾಗೆ ಭಯಭೀತಿಯನ್ನುಬದಿಗೊತ್ತಿ ನೇರವಾಗಿ ಕಕ್ಕುವ ವ್ಯಕ್ತಿತ್ವ, ತನ್ನ ಗೌರವಕ್ಕೆ ಚ್ಯುತಿ ಬಂದದ್ದರಿಂದ ಹಿಂದೂ ಸಂಘಟನೆಯಿಂದ ಹೊರಗುಳಿದು ಪ್ರಜಾಪ್ರಭುತ್ವ ವೇದಿಕೆಯನ್ನು ಕಟ್ಟಿದ್ದರು., ಅಲ್ಲಲ್ಲಿ ನ್ಯಾಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಇವರು, ಅದ್ಹೇಗೋ ಅಚಾನಕ್ಕಾಗಿ ಈ ಪ್ರಕರಣದಲ್ಲಿ ಇಳಿದಿದ್ದರು.,ಸುಖ ಸುಮ್ಮನೆ ನನ್ನ ಮೇಲೆ ಕೇಸು ದಾಖಲು ಗೊಂಡಿದ್ದರಿಂದ ತಾಳ್ಮೆ ಬಿಟ್ಟು ಈ ಹೋರಾಟಕ್ಕೆ ಇಳಿಯಬೇಕಾಯಿತು ಎಂಬ ಮಾತನ್ನು ಸಭೆ ಹೋರಾಟಗಳಲ್ಲಿ ಹೇಳುತ್ತಾ ಬರುತ್ತಿದ್ದಾರೆ.
ಮಹೇಶ್ ಶಟ್ಟಿ ತಿಮ್ಮೋರೋಡಿ ಅವರಿಗೆ ಧರ್ಮಸ್ಥಳ ದೇವಸ್ಥಾನದವರ ಬಗ್ಗೆ ಪೂರ್ವದ್ವೇಷ ಇದ್ದಿರುವುದರಿಂದ ಅದನ್ನು ಸಾಧಿ ಸುವುದಕ್ಕೆ, ತೀರಿಸುವುದಕ್ಕೆ ಈ ಹೋರಾಟವನ್ನು ಅಸ್ತ್ರವಾಗಿ ಬಳಸಿ ಕೊಂಡಿದ್ದಾರೆ., ಈ ಹಿಂದೆ ಅವರಿಗೆ ಎಂ ಎಲ್ ಎ ಸೀಟು ಸಿಗಲಿಲ್ಲ ಪ್ರಯತ್ನಕ್ಕೆ ಫಲ ಸಿಕ್ಕಿರಲಿಲ್ಲ ಮುಂದೆ ಬರುವ ಎಂ ಪಿ ಸೀಟು ಪಡೆಯುವ ಸಲುವಾಗಿ ಈ ರೀತಿ ಹೋರಾಟಕ್ಕೆ ಇಳಿದಿದ್ದಾರೆ, ಒಂದೇ ಕೈಯಲ್ಲಿ ಎರಡು ಹಕ್ಕಿ ಹೊಡೆಯುವ ಪ್ಲಾನ್ ಎಂಬ ಮಾತು ಕೂಡಾ ಜನ ಜನಿತವಾಗಿದೆ. ಸೌಜನ್ಯಾಳಿಗೆ ನ್ಯಾಯ ಸಿಗಲಿ! ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಗೆ ಫಲ ಸಿಗಬೇಕಾದರೇ, ಸರ್ಕಾರ ಇದರ ಬಗ್ಗೆ ಗಂಭೀರ ಆಲೋಚನೆ ಮಾಡಿ ಮರು ತನಿಖೆಗೆ ಒಳಪಡಿಸಬೇಕಾಗಿದೆ ಈಗಾಗಲೇ ಸಂತ್ರಸ್ತೆಯ ಕುಟುಂಬಿಕರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿಯನ್ನೂ ಕೊಟ್ಟಿದ್ದಾರೆ.ಅವರು ಅದನ್ನು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ತಿಂಗಳು ಕಳೆಯುತ್ತಾ ಬಂದರೂ,ಇದುವರೆಗೂ ಅದರ ಬಗ್ಗೆ ಏನೂ ಪಾಸಿಟಿವ್ ಸೂಚನೆ ಸಿಕ್ಕಿಲ್ಲ,ಇನ್ನು ಬಿಜೆಪಿಯ ಕರಾವಳಿ ಶಾಸಕರು, ಮಾಜಿ ಸಚಿವ ತ್ರಯರು ಸೂಕ್ತ ನ್ಯಾಯ ಲಭಿಸಲು ಸಭೆ ನಡೆಸಿದ್ದಾರೆ ಹಾಗೂ ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ ಮನವಿಯನ್ನೂ ನೀಡಿದ್ದಾರೆ.ಆದಷ್ಟು ಬೇಗ ಮರು ತನಿಖೆಯಾಗಲಿ,ಹನ್ನೊಂದು ವರ್ಷಗಳಿಂದ ಗೊಂದಲದ ಗೂಡಾಗಿರುವ ಈ ಘಟನೆಗೆ ಪರಿಹಾರ ಲಭಿಸಲಿ,ಸುಖಾಂತ್ಯ ಕಾಣಲಿ.ದಿನ ನಿತ್ಯ ಹೋರಾಟ,ಪ್ರತಿಭಟನೆ ನಡೆಸಿದರೇ ಏನೂ ಪ್ರಯೋಜನ ಕಾಣದು !ಸಂಕ ಮುರಿದಲ್ಲೆ ಸ್ನಾನ ಅನ್ನುವ ರೀತಿಯಲ್ಲಿ ಕೆಲವೊಂದು ಎಡಬಿಡಂಗಿಗಳು ತಮ್ಮ ದ್ವೇಷಕಾರುವುದಕ್ಕೆ,ವಯಕ್ತಿಕ ಚಟುವಟಿಕೆಗಳಿಗೆ ಈ ಪ್ರಕರಣವನ್ನು ದಾಳವಾಗಿ ರೂಪಿಸಿಕೊಂಡು ಕ್ಷೇತ್ರಕ್ಕೆ ಹಾಗೂ ವ್ಯಕ್ತಿಗಳ ಹೆಸರಿಗೆ ಮಸಿಬಳಿಯುವ ಕೆಲಸ ಮುಂದಾಗದೇ ಇರಲಿ.ಕಾಮಾಂಧುರರ ಕಪಿಮುಷ್ಠಿಯಲ್ಲಿ ಸೋತು ಸತ್ತು ಸ್ವರ್ಗ ಸೇರಿದ ಸೌಜನ್ಯ ಬದುಕಿ ಬರಲಾರಳು,ಹಾಗಂತ ಇದನ್ನು ಅಲ್ಲಿಗೆ ಬಿಟ್ಟು ಕೈ ತೊಳೆದು ಕೊಳ್ಳುವ ಸ್ಥಿತಿ ಕೂಡ ನಿರ್ಮಾಣವಾಗ ಬಾರದು, ಅದೆಷ್ಟೋ ಹೆಣ್ಣು ಮಕ್ಕಳು ಕರಾವಳಿಯಲ್ಲಿ ಇದೆ ತೆರನಾಗಿ ಜೀವತೆತ್ತಿದ್ದಾರೆ ಅವರಗಗಳಿಗೆ ನ್ಯಾಯ ಸಿಗದೇ ಕೇಸು ಮುಚ್ಚಿ ಹೋಗಿದ್ದನ್ನು ನೆನಪಿಸಿಕೊಳ್ಳಬಹುದು., ಇದು ಆ ಸಾಲಿಗೆ ಸೇರದೇ ಇರಲಿ., ಇದೊಂದು ಎಲ್ಲರಿಗೂ ಪಾಠ ವಾಗಲಿ ಮುಂದೆ ಇಂಥ ಕ್ರತ್ಯಗಳು ಸಂಭವಿಸದೇ ಇರುವುದಕ್ಕೆ ಈ ಘಟನೆ ನೆನಪು ತರವಂತೆ ಇರಬೇಕು.ಮುಂದೆಂದೂ ಪಾಪಿ ಕಾಮಿಗಳು ಈ ಬಗ್ಗೆ ಆಲೋಚನೆ ಮಾಡಲೇ ಬಾರದು ಅಂತಹ ನಿಸ್ಪಾಕ್ಷ ತನಿಖೆ ಹಾಗೂ ತಪ್ಪಿತಸ್ಥರಿಗೆ ಉಗ್ರ ಕಠಿಣ ಶಿಕ್ಷೆಆಗಲೇ ಬೇಕು.ದಿಲ್ಲಿಗೊಂದು ನ್ಯಾಯ, ಹಳ್ಳಿಗೊಂದು ನ್ಯಾಯ ಆಗಬಾರದು. ಸೌಜನ್ಯಾಳಿಗೆ ನ್ಯಾಯ ಸಿಗಲಿ!

ಶುಕ್ರವಾರ, ಜೂನ್ 23, 2023

ಎಲ್ಲಿಗೆ ಬಂತು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು?

ಹೌದು ! ಬಿಟ್ಟಿ ಭಾಗ್ಯ ಎಂದೇ ಹೇಳಲಾಗುತ್ತಿದ್ದ ಕಾಂಗ್ರೇಸ್ ನ ಚುನಾವಣಾ ಪ್ರಣಾಳಿಕೆಯಲ್ಲಿದ್ದ ಪ್ರಮುಖ ಐದು ಆಶ್ವಾನೆಗಳ ಗ್ಯಾರಂಟಿ ಭಾಗ್ಯಗಳಲ್ಲಿ ಶಕ್ತಿ ಭಾಗ್ಯ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒಂದು ಸಧ್ಯಕ್ಕೆ ಜಾರಿಯಾಗಿದ್ದು ಬಿಟ್ಟರೇ ಮತ್ತುಳಿದ ಭಾಗ್ಯಗಳು ನಾಳೆ ,ನಾಳೆ ಎಂಬಂತೆ ಸಾಗುತ್ತಿದೆ.,ಯಾವುದೇ ಮುಂಚಿತ ಪ್ಲಾನ್ ಇಲ್ಲದೇ ,ಎಲೆಕ್ಷೆನ್ ಟೈಮ್ ನಲ್ಲಿ ಗಲ್ಲಿ- ಗಲ್ಲಿಗಳಲ್ಲಿ ಬೀಷಣದ ಭಾಷಣ ಬೀಗುತ್ತಾ ಬಂದ ಕಾಂಗ್ರೆಸ್ ಮುಖಂಡರುಗಳು ಅಂತೂ ಚುನಾವಣೆಯಲ್ಲಿ ಹೆಚ್ಚಿನ ಮತಗಳು ಚಾಲಾವಣೆಗೊಳಿಸಿ ಯಾರೂ ಊಹಿಸಿದ ರೀತಿಯಲ್ಲಿ ಅತ್ಯಧಿಕ ಸೀಟುಗಳನ್ನು ಪಡೆದು ಸರಕಾರ ರೂಪಿಸಿತು.ಕರ್ನಾಟಕದಲ್ಲಿ ನೂತನ ಸರ್ಕಾರ ರೂಪು ಗೊಂಡು ಒಂದೂವರೆ ತಿಂಗಳು ಕಳೆದರೂ,ಗ್ಯಾರಂಟಿ ಯೋಜನೆಯ ಯೋಚನೆ ಸಧ್ಯಕ್ಕೆ ಸಹಕಾರವಾಗುವ ಲಕ್ಷಣ ಕಾಣುತ್ತಿಲ್ಲ ,ನಾಟಕ ದಿನೇ ದಿನೇ ನಾಗಾಲೋಟದಲ್ಲಿ ವಿಹರಿಸುತ್ತಿದೆ.ಸರ್ಕಾರ ಬಂದ ಮೊದಲನೇ ದಿನವೇ ನಾವು ಎಲ್ಲಾ ಗ್ಯಾರಂಟಿಗಳನ್ನೂ ಜಾರಿಗೊಳಿಸುತ್ತೇವೆ ಎಂದು ಹೇಳುತ್ತಿದ್ದ ಕೈ ಪಕ್ಷ ಜಾರಿಗೆ ತರುವಲ್ಲಿ ಶತಾಯಗತಾಯ ಶ್ರಮಿಸುತ್ತಿದೆ. ಬೇರೆ ವಿಧಿ ಇಲ್ಲ ಲೋಕಸಭಾ ಚುನಾವಣಾ ಸನಿಹದಲ್ಲಿದೆ ಇತ್ತ ಪ್ರತಿಪಕ್ಷಗಳ ದಾಳಿ,ಜನರ ಪ್ರತಿಭಟನೆಗೆ ಬೆದರಿ ಏನೋ ಒಂದು ರೂಪುರೇಷೆ ರೂಪಿಸಲೇ ಬೇಕಾಗಿದೆ. ಇಷ್ಟೆಲ್ಲಾ ಬಿಟ್ಟಿ ಭಾಗ್ಯ ದಯಪಾಲಿಸಲು ಖಂಡಿತವಾಗಿಯೂ ಆರ್ಥಿಕ ಪರಿಸ್ಥಿತಿ ನೆಟ್ಟಗಿರಲೇ ಬೇಕು . ಈ ಸಂಬಂಧ ಆರ್ಥಿಕ ತಜ್ಞರು ಕಾಂಗ್ರೆಸ್ ಗ್ಯಾರಂಟಿ ಕಾರ್ಡುಗಳ ಬಗ್ಗೆ ಎಷ್ಟೇ ಅಭಿಪ್ರಾಯ ಪಟ್ಟರೂ, ಯಾವುದಕ್ಕೂ ತಲೆ ಕೆಡಿಸಿ ಕೊಳ್ಳದ ಕಾಂಗ್ರೆಸ್ ಗೆದ್ದ ಮೇಲೆ ನೋಡಿದರಾಯ್ತು ಎಂಬಂತೆ ವರ್ತಿಸಿದವು, ಮೈಕ್ ಹಿಡಿದು ಘರ್ಜಿಸಿದ್ದೇ ಘರ್ಜರಿಸಿದ್ದು !
ಗೆದ್ದ ಮೇಲೆ ಕೊಡಲೇ ಬೇಕಾದ ಅನಿವಾರ್ಯತೆ ,ಪ್ರತಿಪಕ್ಷಗಳ ಹಾರಾಟ ,ಜನತೆಯ ಹೋರಾಟ ಇದಕ್ಕೆಲ್ಲಾ ಸಮಾಧಾನ ದಿಂದ ಪರಿಹರಿಸಲು ಕಂಡು ಕೊಂಡ ಮಾರ್ಗಗಲು ವಿಚಿತ್ರವೆನ್ನಿಸುತ್ತಿದೆ ಕೊಡುವುದು ಹೇಗೆ ?: ಹೌದು ! ಕೊಡದೇ ಇದ್ದರೇ ಜನ ದಂಗೆಗೆ ಏಳುವುದು ಖಚಿತ.ಇದಕ್ಕಾಗಿ ಹೊಸ ಪ್ಲಾನ್ ! ಗ್ಯಾರಂಟಿ ಕಾರ್ಡ್ ಹಿಡಿದು ಪ್ರಚಾರ ಮಾಡುವಾಗ ಇಲ್ಲದಿದ್ದ ಷರತ್ತುಗಳು ಈಗ ಒಮ್ಮೆಲೇ ಜೀವ ಪಡೆದುಕೊಳ್ಳುತ್ತಿದೆ ಎಲ್ಲದಕ್ಕೂ ಕಂಡೀಷನ್ ಅಪ್ಲೇ ! ಅದೂ ದಿನ-ದಿನವೂ ಬದಲಾವಣೆ ಒಬೊಬ್ಬ ಮುಖಂಡರದ್ದು ಒಂದೊಂದು ಷರತ್ತುಗಳ ನಿಯಮ,ಅಂತೂ ಇಂತೂ ಮೊನ್ನೆ ಮೊನ್ನೆ ಹೆಗಲ್ಲಾ, ಎಷ್ಟೆಲ್ಲಾ ಕಷ್ಟ ಪಟ್ಟು ಶಕ್ತಿ ಯೋಜನೆ ಯನ್ನು ಜಾರಿಗೆ ತಂದೆ ಬಿಟ್ಟಿತು ಸಿದ್ದರಾಮಯ್ಯನ ಸರ್ಕಾರ. ಮಹಿಳೆಯರಿಗೆ ಸರ್ಕಾರಿ ಸಾಮನ್ಯ ಬಸ್ ಗಳಲ್ಲಿ ಉಚಿತ ಪ್ರಯಾಣ ರಾಜ್ಯದೊಳಗೆ ರಾಜ್ಯದವರಿಗೆ ಮಾತ್ರ .ಅಬ್ಬಬ್ಬಾ ! ಬಸ್ಸು ಕಡಿಮೆ, ಪ್ರಯಾಣಿಕರು ಸಂಖ್ಯೆ ಅಧಿಕ ,ಬಸ್ಸು ರಶೋ ರಷ್ಹು ! ಜಗಳ, ಗಲಾಟೆ ,ಬಸ್ಸಿನ ಬಾಗಿಲು ಕಿತ್ತು ಬರುವುದು,ಬಸ್ಸಿನ ಕಿಟಕಿಗಳ ಮೂಲಕವೂ ಏರುವುದು ಒಂದೇ ಎರಡೇ ಇಷ್ಟಕ್ಕೆ ನಿಲ್ಲುತ್ತಿಲ್ಲ ಇದು ಕಂಟಿನ್ಯೂ ಆಗ್ತಾನೆ ಇದೆ ,ಎಷ್ಟೇ ಆಘಾತ ,ಅಪಘಾತವಾದರೂ,ಸರ್ಕಾರದ ಬೊಕ್ಕಸಕ್ಕೆ ಲಾಸ್ ಆದರೂ ಚಿಂತೆ ಇಲ್ಲ ಒಟ್ಟಾರೆ ಒಂದು ಗ್ಯಾರಂಟಿ ಜಾರಿ ಗೊಂಡು ಸಧ್ಯ ನಡಿತಾ ಇದೆ. ಎರಡನೇ ಗ್ಯಾರಂಟಿ ಗ್ರಹಲಕ್ಷ್ಮಿ ಉಚಿತ ೨೦೦ ಯೂನಿಟ್ ವಿದ್ಯುತ್ ಫ್ರೀ ಎಂಬ ಯೋಜನೆ ಇದಾಗಿತ್ತು . ಕಲ್ಲುಬಿದ್ದಿದೆ ಇದಕ್ಕೂ ಅಷ್ಟೇ ಸಾಕಷ್ಟು ಕಂಡೀಷನ್ !ಚುನಾವಣೆಗೆ ಮೊದಲು ನಂಗೂ ಫ್ರೀ ,ನಿಂಗೂ ಫ್ರೀ ಎನ್ನುತಿದ್ದ ಮಾತಿಗಿಲ್ಲದ ಷರತ್ತು ಈಗ ಬಂತು ಯಾರು ಎಷ್ಟು ಎಲೆಕ್ಟ್ರಿಸಿಟಿ ಖರ್ಚು ಮಾಡುತ್ತಾರೋ ಒಂದು ವರ್ಷದ ಅವರೇಜ್ ನ್ನು ಲೆಕ್ಕ ಹಾಕಿ ೧೦% ಅಷ್ಟು ಹೆಚ್ಚಿಗೆ ಸಬ್ಸಿಡಿ ಕೊಟ್ಟು ಅವರಿಗೆ ಉಚಿತವಾಗಿ ನೀಡುವುದು ಎಂಬ ನಿಯಮ.ಅಂದರೆ ಒಂದು ಮನೆಯಲ್ಲಿ ತಿಂಗಳಿಗೆ ೫೦ ಯೂನಿಟ್ ವ್ಯಯಿಸಿದ್ದರೇ ಅದನ್ನೇ ಸರಾಸರಿಯಲ್ಲಿಎಕ್ಕ ಹಾಕಿ ೬೦ ಯುನಿಟ್ ವರೆಗೆ ಮಾತ್ರ ಸರ್ಕಾರ ಭರಿಸುವುದು ಅದಕ್ಕಿಂತ ಒಂದು ಯೂನಿಟ್ ಹೆಚ್ಚಿಗೆ ಬಂದರೂ ಅದಕ್ಕೆ ಮನೆಯವರೇ ಜವಾಬ್ದಾರರು., ಸರ್ಕಾರ ಹೊಣೆ ಅಲ್ಲ. ೨೦೦ ಯೂನಿಟ್ ಫ್ರೀ, ಫ್ರೀ ಎನ್ನುತ್ತಿದ್ದ ಅತಿರಥರದ್ದು ಈಗಿನ ಷರತ್ತು. ಜುನ್ ತಿಂಗಳಿಂದ ಬಿಲ್ ಕಟ್ಟಬೇಕಾಗಿಲ್ಲ ಎನ್ನುತ್ತಿದ್ದವರು ಈಗ ಒಂದು ತಿಂಗಳು ಮುಂದಕ್ಕೆ ದೂಡಿ ಜುಲೈ ಆಗಿದೆ ,ಸಧ್ಯಕ್ಕೆ ಅದೂ ಕೂಡ ಫೈನಲ್ ಆಗಿಲ್ಲ ,ಅದಕ್ಕೂ ಸಹಾ ಅರ್ಜಿ ಗುಜರಾಯಿಸಲು ಒದ್ದಾಡ ಬೇಕಿದೆ ಓಡಾಡ ಬೇಕಿದೆ , ಸೇವಾ ಸಿಂಧೂ ಆನ್ಲೈನ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಜೂನ್೧೮ ರಿಂದ ಜಾರಿಗೆ ಬಂದರೂ ,ಪೋರ್ಟಲ್ ಮಾತ್ರ ಫುಲ್ ಸರ್ವರ್ ಡೌನ್ ! ಜನ ದಿನ ನಿತ್ಯ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಕಾದು -ಕಾದು ಸುಸ್ತಾಗಿ ಮನೆಕಡೆ ಹೆಜ್ಜೆ ಹಾಕದೇ ವಿಧಿ ಇಲ್ಲ. ಆಫ್ ಲೈನ್ ಮೂಲಕ ಅಥವಾ ಸರಳವಾಗಿ ,ಪಂಚಾಯತ್ ,ಬೂತ್ ಮಟ್ಟದಲ್ಲಿ ಇದನ್ನು ಕೈ ಕೊಂಡಿದ್ದರೆ ,ಹೇಗೂ ಕೈ ಪಕ್ಷ ಮಾಡಿದ ತಲೆ ಬುಡ ಇಲ್ಲದ ಗ್ಯಾರಂಟಿ ಯೋಜನೆಗೆ ಗೌರವ ವಾದರೂ ಸಿಗುತ್ತಿತ್ತು , ಇನ್ನು ಸೈಬರ್ ಕೆಫೆ ಗಳಲ್ಲಿ ೧೦೦,೨೦೦ ರೂಪಾಯಿಗಳನ್ನು ನೀಡಬೇಕಾದ ಪರಿಸ್ಥಿತಿ ಅದೂ ಕೂಡಾ ದಿನವೀಡೀ ಕಾದೂ ಬಸವಳಿದು ! ಇನ್ನು ಅನ್ನ ಭಾಗ್ಯದ ಸರದಿ ,ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎನ್ನುತ್ತಿದ್ದವರು ,ಈಗ ಅಕ್ಕಿ ಸ್ಟಾಕ್ ಇಲ್ಲದೇ ಅಕ್ಕಿಗಾಗಿ ಜಟಾಪಟಿ ನಡೆಸುತ್ತಿದ್ದಾರೆ . ಐದು ಕೆಜಿ ಅಂತೂ ಕೇಂದ್ರ ಸರ್ಕಾರ ನೀಡುತ್ತಿದೆ ಇನ್ನೈದು ಕೆಜಿ ಸಿದ್ದರಾಮಯ್ಯ ಸರ್ಕಾರದ್ದೂ.ಇದನ್ನು ಹೊಂದಿಸಿಕೊಂಡು ಹಂಚಿಕೆ ಮಾಡಿ ತಮ್ಮ ಜವಾಬ್ದಾರಿಯನ್ನು ಮರೆಯಬೇಕಿದ್ದ ,ಸಿದ್ದರಾಮಯ್ಯ ಅಂಡ್ ಗ್ಯಾಂಗ್ ಇಲ್ಲ ಸಲ್ಲದ ಆರೋಪವನ್ನು ಮಾಡುತ್ತಿದೆ. ನುಡಿದಂತೆ ನಡೆಯಲು ಆಗದವರು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ .ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಅವರ ಬಳಿ ತುಂಬಾ ಸ್ಟಾಕ್ ಇದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹೋರಾಟವನ್ನೂ ಮಾಡಿ ಬಿಟ್ಟದ್ದಾರೆ . ಕೇಂದ್ರ ಸರ್ಕಾರ ನೀಡುವ ಐದು ಕೆಜಿಯನ್ನು ಅವರು ಕೊಡುತ್ತಿದ್ದಾರೆ ,ಹೆಚ್ಚುವರಿಯಾಗಿ ಐದು ಕೆಜಿ ಕೊಡಲು ಬಿಜೆಪಿ ಪ್ರಣಾಳಿಕೆಯಲ್ಲಿತ್ತೆ ?ಕಾಂಗ್ರೆಸ್ ಅಲ್ಲವೇ ೧೦ ಕೆಜಿ ನೀಡುತ್ತೇವೆ ಎಂದು ಡಂಗುರ ಸಾರಿದ್ದು, ಹತ್ತು ಕೆಜಿ ಎಂದು ಗ್ಯಾರಂಟಿ ಕಾರ್ಡ್ ನಲ್ಲಿ ಹೇಳಿದ್ದರು ಐದು ಕೆಜಿ ಕೇಂದ್ರ ಸರ್ಕಾರ ಕೊಡುತ್ತಿದೆ ಅದನ್ನು ಬಿಟ್ಟು ಕಾಂಗ್ರೆಸ್ ೧೦ ಕೆಜಿ ಕೊಡುತ್ತದೆಯೋ ಉತ್ತರವಿಲ್ಲ ಅದು ಸೇರಿದರೇ ಒಟ್ಟು ೧೫ ಕೆಜಿ ಪಡಿತರ ಆಗುತ್ತದೆ. ಅಕ್ಕಿ ಕೊಡಿ ನಾವು ಪ್ರತಿಯಾಗಿ ಹಣ ನೀಡುತ್ತೇವೆ ನಮಗೆ ಪುಕ್ಕಟೆ ಬೇಡ ಎನ್ನುವ ಕೇಂದ್ರ ಸರಕಾರಕ್ಕೆ ಇವರುಗಳು ಬೇರೆ ಎಲ್ಲಿಯಾದರೂ ಆರೆಂಜ್ ಮಾಡಿ ಕೊಳ್ಳಬಾರದೇಕೇ ?ನಮ್ಮ ರಾಜ್ಯದಲ್ಲಿ ಅದೆಷ್ಟೋ ರೈತರಿದ್ದಾರೆ ಅವರಿಂದ ಪಡೆದು ಕೊಳ್ಳಲಿ ಅವರಿಗೂ ಸಹಾ ಅದರಿಂದ ಸಹಾಯವಾಗಬಲ್ಲದು ,ಅದಿಲ್ಲದಿದ್ದರೇ ಬೇರೆ ರಾಜ್ಯಗಳಿಂದ ಆಮದು ಮಾಡಿಕೊಳ್ಳಲಿ , ಅದ್ಯಾವುದೂ ಆಗದೇ ಹೋದಲ್ಲಿ ಆ ಐದು ಕೆಜಿಯ ಹಣವನ್ನು ಫಲಾನುಭಿಗಳ ಖಾತೆಗೆ ಹಾಕಲಿ ,ಒಟ್ಟಾರೆ ಕುಂಟು ನೆಪ ಹೇಳಿ ಜಾರಿ ಕೊಳ್ಳುವ ಉಪಾಯ ಬೇಡ. ದಿನ, ತಿಂಗಳುಗಳು ಹೀಗೆ ಸಾಗಲಿ ಎಂಬ ವಿಚಾರ ಇರಬಹುದೇ ,ಜುಲೈ ನಿಂದ ಕೊಡುತ್ತೇವೆ ಅಂದವರು ಈದೀಗ ಆಹಾರ ಸಚಿವರ ವರಸೆ ಬದಲಾಗಿದೆ ಆಗಷ್ಟ್ ಗೆ ಎಂಬ ಉತ್ತರ ಬರುತ್ತಿದೆ.,ಗೊತ್ತಿಲ್ಲ ಮುಂದಿನ ಕಥೆ ಏನೋ ? ಕೇಂದ್ರ ಸರ್ಕಾರ ನೀಡುತ್ತದೆ ಎಂದು ಎಲ್ಲಿಯೂ ಹೇಳಿಲ್ಲ ಕೇಂದ್ರದ ಬಳಿ ಒಂದಿಷ್ಟು ಸ್ಟಾಕ್ ಇದ್ದರೂ ಸುಮಾರು ೩೦ ರಾಜ್ಯಗಳ ಹೊಣೆ ಕೇಂದ್ರ ಸರ್ಕಾರದ ಮೇಲೆ ಇದೆ,ಪ್ರತಿ ರಾಜ್ಯಕ್ಕೂ ತಲಾ ಐದು ಕೆಜಿ ಯಂತೆ ನೀಡಬೇಕು ,ಮುಂಗಾರು ಹಿನ್ನಡೆ ಮತ್ತಿತರ ಕಾರಣಗಳಿಂದ ಭವಿಷ್ಯದ ವಿಚಾರಕ್ಕೆ ಸ್ಟಾಕ್ ಮಾಡಿ ಕೊಂಡಿರಬಹದು ಅದನ್ನು ತಮಗೆ ನೀಡಿ ಎಂದು ಬೆನ್ನು ಬೀಳುವುದು ,ಹೋರಾಟ ನೆಡೆಸುವುದು ಎಷ್ಟು ಸರಿ? ಗ್ರಹ ಲಕ್ಷ್ಮೀ ಗ್ಯಾರಂಟಿಗೂ ಷರತ್ತು ಅನ್ವಯವಾಗಿದೆ ರಾಜ್ಯದ ಎಲ್ಲಾ ಮನೆ ಯಜಮಾನಿಯೂ ಫಲಾನುಭವಿ ಅಲ್ಲ ಬಿಪಿಎಲ್ ಕಾರ್ಡ್ ಹೊಂದಿರುವ ಅದರಲ್ಲೂ ಮನೆಯಲ್ಲಿ ಯಾರಾದರೂ ಟ್ಯಾಕ್ಸ್ ಪೇಯರ್ ಆಗಿದ್ದರೆ ಅವರಿಗೆ ಇಲ್ಲವೇ ಇಲ್ಲ. ಇನ್ನೂ ಜಾರಿ ಗೊಂಡಿಲ್ಲ ,ಅದಿನ್ನೂ ಇಮ್ಲಿಮೆಂಟ್ ನಲ್ಲೇ ಇದೆ., ಎಂದು ಅರ್ಜಿಗೆ ಅವಕಾಶ ಪಡೆದು ಕೊಳ್ಳುತ್ತೋ ಕಾದುನೋಡಬೇಕಾಗಿದೆ . ಒಟ್ಟಾರೆ ನಾಲ್ಕು ಗ್ಯಾರಂಟಿಗಳ ಬಗೆಗೆ ದಿನ ನಿತ್ಯ ಒಂದೊಂದು ಷರತ್ತು ನಿಯಮಾವಳಿ ಕೇಳಿ ಬರುತ್ತಿದ್ದರೇ, ಐದನೇ ಗ್ಯಾರಂಟಿ ಯುವ ನಿಧಿ ಪದವಿದರರಿಗೆ ೩೦೦೦ ಹಾಗೂ ಡಿಪ್ಲೋಮ ಹೊಂದಿದವರಿಗೆ ೧೫೦೦ರೂ. ಪದವಿ ಮತ್ತು ಡಿಪ್ಲೋಮಾ ಮುಗಿಸಿರುವ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆಯ ಪ್ರಕಾರ, 2022-23ನೇ ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಮಾತ್ರ ನಿರುದ್ಯೋಗ ಭತ್ಯೆಯನ್ನು, ಅದೂ ಎರಡು ವರ್ಷಗಳ ಅವಧಿಗೆ ಮಾತ್ರ ನೀಡಲಾಗುವುದು ಎಂಬ ಷರತ್ತು ವಿಧಿಸಲಾಗಿದೆ. ಹಾಗಾದರೆ ಈ ಅವಧಿಗೆ ಮುನ್ನ ಪದವಿ, ಡಿಪ್ಲೋಮಾ, ಇನ್ನಿತರ ವೃತ್ತಿಪರ ಕೋರ್ಸ್ಗಳನ್ನು ಮುಗಿಸಿ ಉದ್ಯೋಗಕ್ಕಾಗಿ ಹಗಲಿರಳು ಶ್ರಮಿಸುತ್ತ, ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಯುವಜನರು ನಿರುದ್ಯೋಗಿಗಳಲ್ಲವೇ..? ಸದ್ಯಕ್ಕೆ ಈ ಯೋಜನೆಯ ಆಸೆ ಬದಿಗಿರಿಸೋಣ! ಇನ್ನೊಂದು ವರ್ಷದೊಳಗೆ ಎಂಪಿ ಎಲೆಕ್ಷನ್ ಬರುತ್ತಿದೆ ಅದರ ಒಳಗೆ ಈ ಐದು ಗ್ಯಾರಂಟಿಗಳು ಫಲಪ್ರಧವಾದರೇ ಕಾಂಗ್ರೆಸ್ ಗೆ ಒಂದೆರಡು ಹೆಚ್ಚಿಗೆ ಓಟ್ ಬೀಳಬಹುದು . ಎಲ್ಲಿಂದ ಬರಲಿದೆ ಗ್ಯಾರಂಟಿ ಯೋಜನೆಗೆ ಬಜೆಟ್ ? ನುಡಿದಂತೆ ನಡೆದಿದ್ದೇವೆ ಎಂದು ಬೀಗುವ ಕಾಂಗ್ರೆಸ್ ,ಹೇಳಿದ್ದು ಬೇರೆ ಮಾಡುತ್ತಿರುವುದೇ ಬೇರೆ ,ಎಲ್ಲಾ ಗ್ಯಾರಂಟಿ ಗಳಿಗೆ ಕಂಡೀಷನ್ ಆಪ್ಲ್ಯೆ ! ,ಇಷ್ಟಾದರೂ ಇದಕ್ಕೆ ಸಾವಿರಾರು ಕೋಟಿ ಬಜೆಟ್ ಬೇಕೇ ಬೇಕು ! ಎಲ್ಲಿಂದ ಬರುತ್ತದೆ ಬಜೆಟ್ ? ಒಂದೋ ಸಾಲ ಮಾಡಬೇಕು ಇಲ್ಲ ಬೆಲೆ ಏರಿಕೆ ಮಾಡಲೇಬೇಕು ಇದಲ್ಲದೆ ಬೇರೆ ವಿಧಿ ,ಯಾವೋಬ್ಬ ಜನ ಪ್ರತಿನಿಧಿಯೂ ತಮ್ಮ ಮನೆಯಿಂದ ಬಂಡವಾಳ ಹಾಕುವುದಿಲ್ಲ ಎಲ್ಲವೂ ನಮ್ಮ ಸಾಮಾನ್ಯ ಪ್ರತಿಯೊಬ್ಬ ನಾಗರಿಕನ ಬೆವರಿನ ಹಣವೇ . , ಅಗತ್ಯ ವಸ್ತುಗಳ ಬೆಲೆ ಏರಿಕೆ ಕಂಡಿದೆ ,ವಿದ್ಯುತ್ತು ಬೆಲೆ ಸಾರ್ವಕಾಲಿಕ ದಾಖಲೆ ಕಂಡಿದೆ ,ಅಬಕಾರಿ ವಸ್ತುಗಳ ಬೆಲೆ ೨೦% ಕೂ ಅಧಿಕ ಏರಿಕೆ ,ಹಾಲಿನ ದರ ಲೀ ೫ ರೂ ಏರಿಕೆ ಕಾಣಲಿದೆಯಂತೆ , ಪೆಟ್ರೋಲ್ ,ಡೀಸೆಲ್ ಬೆಲೆ ಕೆಲವೇ ದಿನಗಳಲ್ಲಿ ಏರಿಕೆ ಕಾಣಲಿದೆ ಎಂಬ ಮಾತು ಕೇಳಿಬರುತ್ತಿದೆ. ಹೆಚ್ಚಿನ ವಸ್ತುಗಳೆಲ್ಲವೂ ದುಪ್ಪಟ್ಟು ,ಇದೇ ಉಚಿತ ಭಾಗ್ಯಕ್ಕೆ ಹೆಲ್ಪ್ .ಅಂತೂ ಎಲ್ಲರ ನಿರೀಕ್ಷೆಯಂತೆ ೧೦ರೂ ಕೊಟ್ಟು ೨೦ರೂ ವಸೂಲಿ ಮಾಡುವ ತಂತ್ರಗಾರಿಕೆ ಎನ್ನುವುದು ಗಾತ್ರಿ ಆಗಿದೆ. ಜೊತೆಗೆ ಇದೆ ಸಾಲದ ಶೂಲ ,ಒಟ್ಟಾರೆ ದಿವಾಳಿ ಭಾಗ್ಯ . ಏನೆ ಇರಲಿ ಇದೀಗ ಮುಖ್ಯ ಐದು ಗ್ಯಾರಂಟಿಗಳ ವಿಚಾರಗಳಷ್ಟೇ ಪ್ರಚಾರಕ್ಕೆ ಬಂದಿರುವಂತದ್ದು ,ಮುಂದೆ ಪ್ರಣಾಳಿಕೆಯಲ್ಲಿ ಭರ್ತಿ ಭರವಸೆಗಳ ಪೂರ ,ಭಾಗ್ಯಗಳ ಲಿಸ್ಟ್ ಇದೆ ಅದು ಎಂದು ಮುನ್ನೆಲೆಗೆ ಬರುತ್ತೋ ಗೊತ್ತಿಲ್ಲ. ಮುಂದಿನ ಚುನಾವಣೆಯನ್ನು ದ್ರಷ್ಟಿಯಲ್ಲಿ ಇಟ್ಟುಕೊಂಡು ಹೇಗಾದ್ರೂ ಷರತ್ತು ನಿಯಮಗಳನ್ನು ಸೇರಿಸಿ ,ಬೆರೆಯಿಸಿ ಚಲಾಯಿಸಬಹುದು ,ಐದು ವರ್ಷ ಈ ಗ್ಯಾರಂಟಿಗಳ ಜೊತೆ ಪ್ರಣಾಳಿಕೆಯನ್ನ ಆಶ್ವಾಸನೆಗಾಲ ಮಹಾಪೂರ ಜಾರಿ ಯಾವುದು ಕಷ್ಟ ಸಾಧ್ಯ ,ಅದು ಜಾರಿಯಾದರೇ ರಾಜ್ಯ ಇನ್ನೊಂದು ಶ್ರೀಲಂಕಾ ಆಗುವದು ಶತ ಸಿದ್ದ , ಎಂಪಿ ಚುನಾವಣೆಯಲ್ಲಿ ,ಮತದಾರರು ಸರಿಯಾದ ಪಾಠ ಕಲಿಸುತ್ತಾರೆ ಎಂಬ ವಿಶ್ವಾಸ ಎಲ್ಲರಲ್ಲೂ ಇದೆ ,ಯಾವುದಕ್ಕೂ ಮೊದಲು ಪ್ರತಿಪಕ್ಷಗಳು ಸ್ಟ್ರಾಂಗ್ ಆಗಬೇಕಿದೆ ,ಕೇವಲ ಒಂದೆರಡು ಮುಖಗಳು ಮುನ್ನೆಲೆಗೆ ಬಂದು ಮಾಧ್ಯಮದ ಮುಂದೆ ಅರಚಿದರೇ ಪ್ರಯೋಜನವಾಗದು ಗಟ್ಟಿ ಧ್ವನಿ ಮೊಳಗಿಸುವ ಗುಂಡಿಗೆ ಇರಬೇಕು ,ಬರಬೇಕು ,ರಾಜ್ಯ ಅಭಿವೃದ್ಧಿ ಗೊಳ್ಳಬೇಕು ,ಬಿಟ್ಟಿ ಭಾಗ್ಯಗಳನ್ನ ಕೊಟ್ಟು ಜನರನ್ನು ಸೋಮಾರಿಯನ್ನಾಗಿಸುವ ಚಾಳಿ ದೂರವಾಗ್ಬೇಕು ,ಉಚಿತ ಕೊಡಲೇಬೇಕು ಎನ್ನುವ ಮನಸ್ಥಿತಿ ಇದ್ದರೇ ಮೂಲಭೂತ ವಿಚಾರಕ್ಕೆ ನೀಡಲಿ ,ಆರೋಗ್ಯ,ಶಿಕ್ಷಣ ,ಇನ್ನಿತರಕ್ಕೆ ವಿನಿಯೋಗವಾಗಲಿ ಎಂಬ ಸದಾಶಯದೊಂದಿಗೆ .

ಸೋಮವಾರ, ಮೇ 15, 2023

ಬಿಟ್ಟಿ ಭಾಗ್ಯಗಳಿಗೆ ಮನಸೋತ ಮತದಾರ ,5 ಗ್ಯಾರಂಟಿ ಕಾರ್ಡ್ಗಳಿಂದಲೇ ಗೆದ್ದು ಬೀಗಿತಾ ಕಾಂಗ್ರೆಸ್ ?!

ಯಾರೂ ಕೂಡ ಊಹಿಸದ ರೀತಿಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಸ್ವತಂತ್ರ ಸರ್ಕಾರ ರೂಪಿಸಲು ಸಜ್ಜಾಗಿದೆ.ಸಮೀಕ್ಷೆಗಳೆಲ್ಲಾ ತಲೆ ಕೆಳಗಾದವು.ಈ ಬಾರಿ ಅತಂತ್ರವೇ ಗತಿ ಎಂಬ ಎಕ್ಸಿಟ್ ಪೊಲ್ ನ ಎಲ್ಲಾ ಸುರ್ವೇಗೂ ಮತದಾರ ಅನಿರೀಕ್ಷಿತ ಉತ್ತರ ಕೊಟ್ಟಿದ್ದಾನೆ.ನರೇಂದ್ರ ಮೋದಿ,ಅಮಿತ್ ಷಾ,ಜೆಪಿ ನಡ್ಡಾ,ಯೋಗಿ ಪ್ರಚಾರ, ರೋಡ್ ಶೋ ಗೆ ಬೆಲೆ ಇಲ್ಲದಂತಾಯಿತು. ಅಂತೂ ಮತದಾರ ಬಿಟ್ಟಿ ಭಾಗ್ಯಕ್ಕೆ ಮನಸೋತು ಕಾಂಗ್ರೆಸ್ ಗೆ ಓಟು ಒತ್ತಿದ್ದಾನೆ ಘಟಾನುಘಟಿ ಹಾಲಿ 12 ಜನ ಮಂತ್ರಿಗಳೂ ಸಹಾ ಸೀಟ್ ಉಳಿಸಿ ಕೊಳ್ಳಲಾಗದಿರವುದು ದುರಾದ್ರಷ್ಟವೇ ಸರಿ. ಹೌದು ದೇಶದಲ್ಲಿ ಕಾಂಗ್ರೆಸ್ ಗೆ ಉಳಿವಿಲ್ಲ.ಕರ್ನಾಟಕದಲ್ಲಂತೂ ಉಳಿಗಾಲವಿಲ್ಲಎಂಬ ಮಾತಿತ್ತು.ಆದರೆ ಮೊನ್ನೆಯ 135 ಸೀಟ್ ನ ಐತಿಹಾಸಿಕ ಗೆಲುವು ಇದೆನ್ನೆಲ್ಲವನ್ನು ಅಳಿಸಿ ಹಾಕಿದೆ.ಬಣ ರಾಜಕೀಯದ ನಡುವೆಯೂ ಕಾಂಗ್ರೆಸ್ ಕರ್ನಾಟಕದಲ್ಲಿ ಅಸ್ತಿತ್ವವನ್ನು ಉಳಿಸಿಕೊಂಡಿದೆ.
ಯಾವ ರಾಜಕೀಯ ಪಾರ್ಟಿಗೂ ಬಹುಮತ ದೊರಕುವುದಿಲ್ಲ,ಜೆಡಿಎಸ್ ಕಿಂಗ್ ಮೇಕರ್ ಅಂತಲೇ ಬಿಂಬಿತವಾಗಿತ್ತು, ಮತದಾರ ಎಲ್ಲವನ್ನು ಉಲ್ಟಾ ಮಾಡಿದ್ದಾನೆ.ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಂದಗಳಿಂದ ಹಿಡಿದು,ಪ್ರಧಾನ ಮಂತ್ರಿ ನರೇಂದ್ರ ಮೋದಿ ,ಕೇಂದ್ರ ಗ್ರಹ ಸಚಿವ ಚುನಾವಣಾ ಚಾಣಾಕ್ಷ ಎಂದೇ ಕರೆಯಲ್ಪಡುವ ಅಮಿತ್ ಷಾ,ಬುಲ್ಡೋಜರ್ ಬಾಬಾ ಖ್ಯಾತಿಯ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ , ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾರವರ ಅದ್ದೂರಿ ರೋಡ್ ಶೋ,ತಿಂಗಳುಗಳಗಟ್ಟಲೇ ಪ್ರಚಾರ,ಸಭೆ ಯಾವುದೂ ಕೆಲಸಕ್ಕೆ ಬಾರದೇ ಹೋಯಿತು . ಒಟ್ಟಾರೆ ಮತದಾರ ಬದಲಾವಣೆ ಬಯಸಿದ್ದಾನಾ ?ಬಿಜೆಪಿ ಸರ್ಕಾರದ ಆಡಳಿತಕ್ಕೆ ರೋಸಿ ಹೋಗಿದ್ದಾನಾ ? ಅಥವಾ ಕಾಂಗ್ರೆಸ್ನ್ ಆ ಆಶ್ಸ್ವಾಸನೆಗೆ ಮಾರು ಹೋಗಿದ್ದಾನಾ ಗೊತ್ತಿಲ್ಲಾ ? ಕೈ ಚಿಹ್ನೆಗೆ ವೋಟ್ ಅಂತೂ ಊಹೆಗೆ ನಿಲುಕದಷ್ಟು ಬಿದ್ದಿದೆ. ಅರ್ಥಾತ್ ಬಿಜೆಪಿ ಸೋತಿರುವುದಕ್ಕೆ ,ಕಾಂಗ್ರೆಸ್ ಫುಲ್ ಮೆಜಾರಿಟಿ ಬಂದಿರುವುದಕ್ಕೆ ಕಾರಣ ಹುಡುಕುತ್ತಾ ಹೋದರೇ ಬಹಳಷ್ಟು ವಿಚಾರಗಳು ತೆರೆದು ಕೊಳ್ಳುತ್ತದೆ ನನ್ನಮೂಗಿನ ನೇರಕ್ಕೆ ಕೆಲವೊಂದನ್ನು ಹೈಲೈಟ್ ಮಾಡುವುದಾದರೇ,ಬಿಜೆಪಿಗೆ ಮೊದಲ ಹೊಡೆತ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನನ್ನ ಸಿ ಎಂ ಸೀಟಿನಿಂದ ಇಳಿಸಿದ್ದು.,ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಕಟ್ಟಿ ಬೆಳೆಸಿದ, ಅಧಿಕಾರಕ್ಕೆ ತಂದ ಕೀರ್ತಿ ಬಿ.ಎಸ್ ಯಡಿಯೂರಪ್ಪನವರಿಗೆ ಸಲ್ಲುತ್ತದೆ.ವಯಸ್ಸಿನ ಮಿತಿಯ ಕಾರಣ ಕೊಟ್ಟು ಕುರ್ಚಿಯಿಂದ ಕೆಳಗೆ ಇಳಿಯಲಾಯಿತು,ಮುಖ್ಯ ಮಂತ್ರಿ ಬದಲಾವಣೆ ಹಲವರಲ್ಲಿ ಬೀಸರ ತಂದಿತ್ತು., ಖುದ್ದು ಬಿಜೆಪಿಯ ಆಂತರಿಕ ಮುನಿಸಿಗೂ ಕಾರಣವಾಯಿತು . ಮನಸ್ಸಿಲ್ಲದೆ ಕುರ್ಚಿ ಬಿಟ್ಟು ಕೊಟ್ಟ ಯಡ್ಡಿ ಮೇಲ್ನೋಟಕ್ಕೆ ನಿವೃತ್ತಿ ಬಗ್ಗೆ ಘೋಷಣೆ ಮಾಡಿದ್ದರೂ, ಅಳುಕು,ಬೇಸರ ಮಾತ್ರ ಮನದಲ್ಲೇ ಇತ್ತು ಹೈ ಕಮಾಂಡ್ ನ ಬಲವಂತದ ಬದಲಾವಣೆಯನ್ನು ತೋರಿಸಿಕೊಳ್ಳದೇ ಆಗಾಗ ಸಂಸತ್ ಗೂ ಹಾಜರಾಗುತ್ತಿದ್ದರು,ಹಾಗೂ ಪ್ರಚಾರ ಕಾರ್ಯವನ್ನು ಕೈ ಗೊಂಡಿದ್ದರು .,ಇದು ಬಿಜಿಪಿಗೆ ಅಲ್ಲದಿದ್ದರೂ ತನ್ನ ಮಕ್ಕಳ ಭವಿಷ್ಯದ ರಾಜಕೀಯಕ್ಕೆ ಸಹಾಯವಾಗಲಿ ಎಂಬಂತೆಯೂ ಇತ್ತು ಹಾಗೂ ಫಲ ಶ್ರುತಿ ಯಂಬಂತೆ ಶಿಕಾರಿಪುರದಲ್ಲಿ ವಿಜಯೇಂದ್ರ ವಿನ್ ಆಗಿದ್ದರು. ಇನ್ನು ತಾಂಡವ ಆಡಿದ್ದು 40 % ಕಮಿಷನ್ ವ್ಯವಹಾರ., ನೇರ ನೇರಾ ಸಾಕ್ಷಿ ಪುರಾವೆಗಳೂ ಕೂಡ ದೊರಕಿತ್ತು., ಗುತ್ತಿಗೆದಾರೊಬ್ಬರು ಮಾಜಿ ಸಚಿವ ಈಶ್ವರಪ್ಪರವರ ಮೇಲೆ ಕಮಿಷನ್ ಆರೋಪ ಹೊರಿಸಿ ಆತ್ಮಹತ್ಯೆಗೆ ಶರಣಾದರೇ ,ಇನ್ನು ಎದುರಿಂದ ಎದುರಿಗೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರ ಮಗ ಕಮಿಷನ್ ಪಡೆಯುತ್ತಿರುವಾಗ ಸಿಕ್ಕಿ ಬಿದ್ದಿದ್ದು ,ಆತನಿಗೆ ಯಾವುದೇ ಶಿಕ್ಷೆಯನ್ನು ನೀಡದೇ ಇದ್ದಿದ್ದು ಎಲ್ಲವೂ ಕಾಂಗ್ರೆಸ್ ಗೆ ಲಾಭವಾಗಿ ಪರಿಣಮಿಸಿತ್ತು. ಇನ್ನು ಪ್ರಯೋಗ ಶಾಲೆಯಂಬಂತೆ ಹೊಸ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದು ,ಸುಮಾರು 65 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಹೊಸಬರಿಗೆ ಅವಕಾಶ ಕಲ್ಪಿಸಲಾಯಿತು,ಅಭ್ಯರ್ಥಿಯ ಪರಿಚಯ ವಿಲ್ಲದೇ ಓಟು ಡೈವರ್ಟ್ ಆಗಿದ್ದು ಸತ್ಯ. ಇದರಿಂದ ಸೀಟು ಸಿಗದ ಹಾಲಿ ಶಾಸಕರು ಬಂಡಾಯ ಎದ್ದು ಮುನಿಸಿಕೊಂಡರೇ , ಕೆಲವರು ಬೇರೆ ಪಕ್ಷದ ಕಡೆ ಮುಖ ಮಾಡಿದ್ದರು.ಇದು ಸಹಾ ಎಲ್ಲೂ ಸೋಲಿಗೆ ಕಾರಣವಾಯಿತು.ಲಿಂಗಾಯಿತ ,ಒಕ್ಕಲಿಗ ,ವೀರಶೈವ ಹೀಗೆ ವಿವಿಧ ಸಮುದಾಯಗಳ ಮೇಲಿನ ಮೀಸಲಾತಿ ,ಹಾಗೆ ರಾಜ್ಯಕ್ಕೆ ಅಮಲ್ ಹಾಲಿನ ಎಂಟ್ರಿ ಹೀಗೆ ಹತ್ತು ಹಲವು ಸಣ್ಣ ಪುಟ್ಟ ವಿಚಾರ ಗಳೆಲ್ಲವೂ, ಕಾಂಗ್ರೆಸ್ ಗೆಲುವಿಗೆ ಕಾರಣವಾಯಿತು. ಬಹು ಮುಖ್ಯವಾಗಿ ಭಾರತೀಯ ಜನತಾ ಪಾರ್ಟಿಗೆ ಗೆ ಹೊಡೆತ ಕೊಟ್ಟಿದ್ದು ಕಾಂಗ್ರೆಸ್ ನ ಐದು ಗ್ಯಾರಂಟಿಗಳು ಇದಕ್ಕೆ ಕ್ಲೀನ್ ಬೋಲ್ಡ್ ಆಗಿ ಬಿಟ್ಟಿದ್ದ ಮತದಾರ ! ಗೆಲ್ಲಲೇ ಬೇಕೆಂಬ ಪಣ ತೊಟ್ಟ ಕಾಂಗ್ರೇಸ್ ಅತೀ ದೊಡ್ಡ ಪ್ರಣಾಳಿಕೆಯಲ್ಲೇ ಜನರ ಮುಂದೆ ಇಟ್ಟಿತ್ತು ದಿನಕ್ಕೊಂದರಂತೆ ಬಿಡುಗಡೆ ಗೊಂಡ ಐದು ಭಾಗ್ಯದಲ್ಲಿ ಭರವಸೆಗಳು ಗೃಹ ಜ್ಯೋತಿ ಯೋಜನೆ: ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಿಕೆ,ಯುವನಿಧಿ ಯೋಜನೆ : ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 3,000 ಹಾಗೂ ಡಿಪ್ಲೊಮಾ ಪದವೀಧರರಿಗೆ ಪ್ರತಿ ತಿಂಗಳು 1,500 ರೂ. ಭತ್ಯೆ, ಅನ್ನಭಾಗ್ಯ: ಪ್ರತಿ ತಿಂಗಳು ವ್ಯಕ್ತಿಗೆ 10 ಕೆಜಿ ಅಕ್ಕಿ ಉಚಿತ,ಗೃಹಲಕ್ಷಿ ಯೋಜನೆ: ಮನೆಯ ಮಹಿಳೆಗೆ ಯಜಮಾನನಿಗೆ 2000 ರೂಪಾಯಿ ನೀಡುವುದು,ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆ : ಕೈ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತವಾಗಿ ಬಸ್ ಗಳಲ್ಲಿ ಪ್ರಯಾಣ ಅವಕಾಶ. ಇದು ಕಾಂಗ್ರೆಸ್ ಗೆಲುವುಗೆ ಪ್ರಾಮುಖ್ಯತೆಯನ್ನು ಪಡೆದು ,ಬಿಜೆಪಿ ಹೀನಾಯ ಸೋಲಿಗೆ ಕಾರಣವಾಯಿತು .ಈ ಗ್ಯಾರಂಟಿ ಗಳನ್ನು ಕಾಂಗ್ರೆಸ್ ದಯಪಾಲಿಸುತ್ತದೆ ಎಂಬ ಯಾವುದೇ ವಿಶ್ವಾಸ ವಿಲ್ಲಾ ಅರ್ಥ ಶಾಸ್ತ್ರಜ್ಞರ ಪ್ರಕಾರ ರಾಜ್ಯದ ಬಜೆಟ್ ನ ೮೦ % ಅದಕ್ಕೆ ವಿನಿಯೋಗವಾಗುತ್ತದೆಯಂತೆ ,ಒಟ್ಟಾರೆ ಇವುಗಳನ್ನು ಜಾರಿಗೆ ತರುವುದು ಕಷ್ಟ ಸಾದ್ಯವಾದರೂ ,ವಿವಿಧ ಕಾರಣವೊಡ್ಡಿ ,ಕುಂಟು ನೆಪ ಹೇಳಿ ಜಾರಿ ಕೊಳ್ಳಬಹುದು., ಅದಿಲ್ಲವೆಂದರೆ ಒಂದಷ್ಟು ದಿನ ಜಾರಿಗೊಳಿಸಿ ಸ್ಥಗಿತ ಗೊಳಿಸಬಹುದು ,ಇನ್ನು ಐದು ಗ್ಯಾರಂಟಿಯಂತೆ ನಡೆದು ಕೊಂಡರೇ ಕರ್ನಾಟಕ ದಿವಾಳಿಯಾಗುವುದು ಶತ ಸಿದ್ದ.

ಗುರುವಾರ, ಮೇ 4, 2023

ಶೆಟ್ಟರ್ ,ಸವದಿಗೆ ಮತದಾರರು ತಕ್ಕ ಶಾಸ್ತಿ ಮಾಡಬೇಕಾಗಿದೆ !

ಬಾಯಿಗೆ ಬಂದಂತೆ ಕಾಂಗ್ರೆಸ್ ಗೆ ಉದ್ದುದ್ದ ನಾಲಿಗೆ ಹರಿ ಬಿಡುತ್ತಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ,ಮಾಜಿ ಉಪ ಮುಖ್ಯ ಮಂತ್ರಿ ಲಕ್ಷ್ಮಣ್ ಸವದಿ ಬಿಜೆಪಿ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ.ಎಲ್ಲವನ್ನೂ ಕೊಟ್ಟ ಬಿಜೆಪಿಗೆ ವಿದಾಯ ಹೇಳಿ ಎಂಎಲ್ಎ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಅಧಿಕಾರದ ಲಾಲಸೆಯಿಂದ ಕಾಂಗ್ರೆಸ್ ಗೆ ಕೈ ಜೋಡಿಸಿ ಟಿಕೆಟ್ ಗಿಟ್ಟಿಸಿಕೊಂಡು ಬಿಜೆಪಿ ವಿರುದ್ಧ ಹರಿ ಹಾಯುತ್ತಿದ್ದಾರೆ . ಇಂಥ ಜನಪ್ರತಿನಿಧಿಗಳು ನಮಗೆ ಬೇಕೇ ? ಮಾತೃ ಪಕ್ಷಕ್ಕೆ ಮೋಸ ಮಾಡಿ ಸದಾ ಕುರ್ಚಿಗಾಗಿ ಹಪ ಹಪಿಸುವ ಇಂತವರನ್ನು ಆರಿಸಿ ವಿಧಾನ ಸೌಧ ಕ್ಕೆ ಕಳುಹಿಸಿ ಕೊಡಬೇಕಾ ? ಈ ಬಾರಿ ಗೆಲ್ಲುತ್ತಾರಾ ? ಖಂಡಿತವಾಗಿಯೂ ಆ ಭಾಗದ ಮತದಾರರು ಗೆಲ್ಲಿಸಬಾರದು ಕೇವಲ ಕುರ್ಚಿಗಾಗಿ ಅಂಡೆಲೆಯುವ ಇಂಥ ಅತಿರಥರಿಗೆ ಓಟ್ ಒತ್ತ ಬಾರದು.ಒಂದು ರಾಜಕೀಯ ಪಕ್ಷದಿಂದ ಗುರುತಿಸಿಕೊಂಡು ,ಜನರ ಆಶೀರ್ವಾದ ಪಡೆದು ಪಟ್ಟಕೇರಿದ ಬಳಿಕ ಮುಂದೆ ಅದೇ ಪಕ್ಷಕ್ಕೆ ಮೋಸ ಮಾಡುವ ಇವರು ಜನಸೇವಕ ರಾಗಲು ಯೋಗ್ಯರೇ ?
7-8 ಸಾರಿ ಆರಿಸಿಬಂದರೂ,ದೊಡ್ಡ ಹುದ್ದೆ ಸಿಗದ ಅದೆಷ್ಟೋ ಅರ್ಹರ ಮಧ್ಯೆ 3-4 ಬಾರಿ ಗೆದ್ದು ಬಂದವರಿಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ.ಜಗದೀಶ್ ಶೆಟ್ಟರ್ ಮುಖ್ಯ ಮಂತ್ರಿ ಮಟ್ಟವನ್ನೂ ಸ್ವಿಕರಿಸಿದ್ದರೇ ,ಲಕ್ಷ್ಮಣ್ ಸವದಿ ಉಪ ಮುಖ್ಯ ಮಂತ್ರಿ ಯಾಗಿಯೂ ಗುದ್ದುಗೆ ಏರಿದ್ದಾರೆ.ಇಷ್ಟೆಲ್ಲವನ್ನೂ ಪಕ್ಷ ಕೊಟ್ಟಿದೆ.ಕಮಲದ ಚಿಹ್ನೆಯಡಿಯಲ್ಲಿ ಆರಿಸಿ ಬಂದಿದ್ದಾರೆ.ಒಂದೊಮ್ಮೆ ಮಿನಿಸ್ಟರ್ ಸವದಿ ಸದನದಲ್ಲಿ ಬ್ಲೂ ಫಿಲಂ ನೋಡಿ ಪ್ರಪಂಚದಾದ್ಯಂತ ಜನಪ್ರೀಯ ಗೊಂಡು ಬಿಜೆಪಿಯ ಪಕ್ಷಕ್ಕೆ ಮಸಿ ಬಳಿಯುವಂತ ಕಾರ್ಯಕ್ಕೆ ಕೈ ಹಾಕಿದರೂ ಈ ಮಹಾನುಭಾವನಿಗೆ ಪಕ್ಷ ಉಚ್ಚಾಟನೆ ಮಾಡಿಲ್ಲ ಮಾರ್ಯಾದೆ ಬೀದಿ ಪಾಲಾದರೂ, ಸಹಿಸಿಕೊಂಡು ಮತ್ತೆದೇ ಸ್ಥಾನ ಮಾನವನ್ನು ಕೊಟ್ಟಿತ್ತು .ಆದರೆ ಈತ ಇಂದು ಮಾಡಿದ್ದಾದರೂ ಏನು ? ಅತೀ ಆಸೆ, ಅಧಿಕಾರದ ಹಾಹಾಕಾರ,ವಯಸ್ಸು ಮೀರುತ್ತಿದ್ದರೂ ತನಗೆ ಎಲ್ಲವೂ ಬೇಕು ಎನ್ನುವ ಹುಚ್ಚು ಮನೋಭಾವನೆ ! ಜನಸೇವೆ ಸೇವೆ ಮಾಡಲು ಇನ್ನೊಂದು ಪಕ್ಷಕ್ಕೆ ಟಿಕೆಟ್ ಗಿಟ್ಟಿಸಿಕೊಂಡಿದ್ದೇವೆ ಎನ್ನುವ ಇವರ ಜನಸೇವೆ ಎಷ್ಟರ ಮಟ್ಟಿಗೆ ಇದೆ ಎಂದು ರಾಜ್ಯದ ಜನತೆ ನೋಡಿಲ್ಲವೇ ?ಮುಖ್ಯ ಮಂತ್ರಿ,ಉಪಮುಖ್ಯ ಆದವರ ಕೊಡುಗೆ ಏನು? ಎಂತ? ಎನ್ನುವುದು ಇಡೀ ರಾಜ್ಯವೇ ನೋಡಿತ್ತು.ಅವಕಾಶ ಎಲ್ಲರಿಗೂ ಬೇಕು .ದೇಶಕ್ಕಾಗಿ ತುಡಿಯುವ,ಜನಸೇವೆಗೆ ಮಿಡಿಯುವ ಮನಸ್ಸುಗಳು ಸಾಕಷ್ಟು ಅರ್ಹ ಅಭ್ಯರ್ಥಿಗಳು ಸಮಾಜದಲ್ಲಿವೆ.,ಅವರುಗಳಿಗೆ ಪ್ರೋತ್ಸಾಹ ಸಿಗಬೇಕಾಗಿದೆ. ಕೇವಲ ಕುಟುಂಬ ರಾಜಕೀಯ,ವಯಸ್ಸು ಮೀರುತ್ತಿದ್ದರೂ ಮತ್ತೆದೇ ಮುಖ ಹೊತ್ತು ಬರುವವರು ಸಮಾಜಕ್ಕೆ ಬೇಕಾಗಿಲ್ಲ.ಈ ನಿಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿಯ ನೀತಿ ,ನಿಯಮ ಉತ್ತಮವಾದದ್ದೇ ಆದರೇನು ಮಾಡುವದು ಕೆಲವು ನಿಯತ್ತು ಇಲ್ಲದ ಇಂಥ ಬಂಡಾಯದ ಮನಸುಗಳು ಇದ್ದೆ ಇರುತ್ತವೆ.ಹಾಲಾಡಿ ಶ್ರೀನಿವಾಸ್ ಶೆಟ್ಟಿಯಂತ ಅಪರೂಪದ ಸಹೃದಯವಂತರು ಸಿಗುವುದು ಕೇವಲ ಕೋಟಿಗೆ ಒಬ್ಬರು ಏನೋ ೫ ಬಾರಿ ನಿರಂತರವಾಗಿ ಎದುರಾಳಿ ಯಾರೇ ಇದ್ದರೂ ದೊಡ್ಡ ಮಾರ್ಜಿನ್ ನಲ್ಲಿ ಗೆದ್ದು ಬೀಗುತ್ತಿರುವ ಸೋಲಿಲ್ಲದ ಸರದಾರ ಹಾಲಾಡಿಗೆ ಸಾಟಿ ಯಾರು ಇಲ್ಲ., ಪಕ್ಷ ಬೀ ಫಾರ್ಮ್ ಕೊಟ್ಟರೂ ,ಹೊಸಬರಿಗೆ ಅವಕಾಶ ಕೊಡುವ ಉದ್ದೇಶ ದಿಂದ ಸ್ವಯಂ ನಿವ್ರತಿ ಪಡೆದ ಹಾಲಾಡಿ ತನ್ನದೇ ಚುನಾವಣೆ ಎನ್ನುವಂತೆ ಪಕ್ಷದ ಅಭ್ಯರ್ಥಿ ಪರ ಹಗಲು ರಾತ್ರಿ ಪ್ರಚಾರ ಕಾರ್ಯದಲ್ಲಿದ್ದಾರೆ ಇಂತವರು ಪಕ್ಷಕ್ಕೆ ಮಾತ್ರ ಅಲ್ಲ ದೇಶಕ್ಕೆ ಹೆಮ್ಮೆಯ ಆಸ್ತಿ. ಹೊಸಮುಖಗಳಿಗೆ ಅವಕಾಶ ಮಾಡಿ ಕೊಡುವ ಬಿಜೆಪಿಯಲ್ಲಿನ ವ್ಯವಸ್ಥೆ ಒಂದು ರೀತಿಯಲ್ಲಿ ಪ್ರಯೋಗ ಶಾಲೆಯಂತೆ ಕಂಡು ಬಂದರೂ, ಸಮಾಜಕ್ಕೆ ಇದು ಸ್ವಾಗತಾರ್ಹ.ಸಾಮಾನ್ಯ ಕಾರ್ಯಕರ್ತನೂ ಸಹ ಅವಕಾಶ ಪಡೆಯುತ್ತಿದ್ದಾನೆ .ಈ ಬಾರಿ ರಾಜ್ಯಾದ್ಯಂತ 224 ಕ್ಷೇತ್ರ ಗಳ ಪೈಕಿ ಸುಮಾರು 65 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿ ಘೋಷಣೆ ಯಾಗಿದೆ /ಪರಿಚಯವಾಗಿದೆ.ಒಂದಷ್ಟು ಹಾಲಿ ಕ್ಷೇತ್ರದ ಶಾಸಕರು ಕ್ಷಣಿಕ ಕಾಲ ಮುನಿಸು ತೋರಿಸಿದರೂ,ಪಕ್ಷದ ಸಿದ್ದಾಂತವನ್ನು ಮನಗೊಂಡು ಹೊಸ ಅಭ್ಯರ್ಥಿಗಳಿಗೆ ಬೆಂಬಲವನ್ನು ಸೂಚಿಸಿದ್ದಾರೆ.ಮತದಾರರು ಪ್ರಜ್ಞಾವಂತರಾಗಿದ್ದಾರೆ ಕೇವಲ ಹಣ -ಹೆಂಡ, ಇಲ್ಲ- ಸಲ್ಲದ ಆಶ್ವಾಸನೆಗೆ ,ವಿವಿಧ ಕೊಡುಗೆಗಳಿಗೆ ಮರು ಹೋಗಲಾರರು/ಮಣೆ ಹಾಕಲಾರರು.ವಿಶ್ವಾಸ ವಿದೆ ಹೆಸರು ಪದವಿ ಕೊಟ್ಟ ಪಕ್ಷವನ್ನು ದಿಕ್ಕರಿಸಿ ,ಅದರ ವಿರುದ್ಧವೇ ಹರಿ ಹಾಯುತ್ತಿರುವ ಇನ್ನೊಂದು ಪಕ್ಷದಿಂದ ಸ್ವರ್ಧಿಸಿರುವ ಈರ್ವರಿಗೆ ಮತದಾರರು ತಕ್ಕ ಶಾಸ್ತಿ ಮಾಡದೇ ಇರಲಾರರು.ಸೋತರೇ ಇವರಂತಿರುವ ಕೆಲವು ಮನಸ್ಥಿತಿ ಮಹಾನೋಭಾವರಿಗೆ ಉತ್ತಮ ಪಾಠ ವಾಗಬಲ್ಲದು .ಯಾವುದಕ್ಕೂ ಮೇ 13ರ ರವರೆಗೆ ಕಾದು ನೋಡೋಣ.

ಮಂಗಳವಾರ, ಏಪ್ರಿಲ್ 4, 2023

ಕಬ್ಜ ಸಿನಿಮಾ ನೋಡಿ ಮನಸ್ಸು ಕುಬ್ಜ ಆಗದೇ ಇರದು

ಪ್ರಸ್ತುತ ಸೌತ್ ಸಿನಿಮಾ ರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾದ್ದೇ ಕಾರುಬಾರು ಅದರಲ್ಲೂ ,ಕನ್ನಡವೂ ತಾವೇನೂ ಕಮ್ಮಿ ಇಲ್ಲವೆಂಬಂತೆ ಇತ್ತೀಚಿಗೆ ದಿನಗಳಲ್ಲಿ ಸುಗ್ಗಿ ಕಾಲ ಶುರುವಾಗಿದೆ. ಚಾರ್ಲಿ 777,ಕೆಜಿಎಫ್ ಭರ್ಜರಿ ಹಿಟ್ ಪಡೆದುಕೊಂಡರೇ ಕಾಂತಾರ ಕನ್ನಡದಲ್ಲಿ ಸೂಪರ್ ಡೂಪರ್ ಆದ ಬಳಿಕ ಇತರ ಭಾಷೆಯಲ್ಲಿ ಅನಿವಾರ್ಯವಾಗಿ ಡಬ್ಬಿಂಗ್ ಪಡೆದು,ಪ್ಯಾನ್ ಇಂಡಿಯಾ ಸಿನಿಮಾವಾಗಿ ಭರ್ಜರಿ ಹಿಟ್ ಪಡೆದಿದ್ದು ಇತಿಹಾಸ. ಇದರ ತನ್ಮಧ್ಯೆ ಕಬ್ಜ ಎನ್ನುವ ಸಿನಿಮಾ ರಿಲೀಜ್ ಗೆ ಮೊದಲೇ ಉತ್ತಮವಾದ ಪ್ರಚಾರವನ್ನು ಪಡೆದುಕೊಂಡಿತ್ತು., ಪ್ಯಾನ್ ಇಂಡಿಯಾ ಸಿನಿಮಾ ಎನ್ನುವುದು ಒಂದೆಡೆಯಾದರೇ ಇನ್ನೊಂದೆಡೆ ಕಿಚ್ಚ ಸುದೀಪ್ ,ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ,ರಿಯಲ್ ಸ್ಟಾರ್ ಉಪೇಂದ್ರ ಹೀಗೆ ಕನ್ನಡ ಮೂರು ಅದ್ಭುತ ನಾಯಕ ನಟರ ಜೊತೆಗೆ ಇತರ ಭಾಷೆಯ ದೊಡ್ಡ ದೊಡ್ಡ ಹೆಸರಾಂತ ಕಲಾವಿದರ ದಂಡನ್ನೇ ಹೊಂದಿತ್ತು. ಹೌದು ! ಆರ್. ಚಂದ್ರು ನಿರ್ದೇಶನದಲ್ಲಿ ನೂರಾ ಇಪ್ಪತ್ತು ಕೋಟಿಗೂ ಅಧಿಕ ಬಂಡವಾಳವನ್ನು ಹೂಡಿ ಚಿತ್ರೀಕರಣ ಮುಗಿಸಿ ಅಪ್ಪು ದಿ. ಡಾ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದ ದಿನದಂದೇ ಬಿಡುಗಡೆಗೊಳಿಸಲಾಯಿತು .
ಸಿನಿಮಾದ ಬಗ್ಗೆ ಅಪಾರವಾದ ಅಪೇಕ್ಷೆ ಎಲ್ಲರಲ್ಲೂ ಇತ್ತು.ಆದರೆ ಸಿನಿಮಾ ನೋಡಿದವರು ಮಾತ್ರ ಟಾಕೀಸ್ ನಿಂದ ಸಪ್ಪೆ ಮೊರೆ ಹಾಕಿ ಹೊರಗೆ ಬಂದರೇ ,ಇನ್ನು ಒಂದಷ್ಟು ಪ್ರೇಕ್ಷಕರು ಅರ್ಧ ಸಿನಿಮಾಕ್ಕೆ ಎದ್ದು ಬಂದವರು ಇದ್ದರಂತೆ.(ನನ್ನ ಕಣ್ಣ ಮುಂದೆ ನಡೆದಿದೆ ಕೂಡಾ.) ಇನ್ನು ಕೆಲವರು ಶಿವರಾಜ್ ಕುಮಾರ್ ಎಂಟ್ರಿ ಸೀನ್ ನ ನೋಡ್ಕೊಂಡು ಹೋಗೋಣಾ ಎಂದು ಕಾದು ಕಾದೂ ,ಕೊನೆಗೆ ಸಿನಿಮಾ ಮುಗಿಸಿಯೇ ಹೋರಾಡಬೇಕಾದ ಅನಿವಾರ್ಯತೆ ವ್ಯಕ್ತವಾಗಿದ್ದು ಸುಳ್ಳಲ್ಲ ಯಾಕೆಂದರೆ ಶಿವಣ್ಣನ ಪಾತ್ರ ತೆರೆಯ ಮೇಲೆ ಮೂಡಿ ಬಂದಿದ್ದೆ ಫಿಲಂ ಮುಗಿಯೋ 1 ನಿಮಿಷದ ಮೊದಲು. ಸಿನಿಮಾದ ಬಗ್ಗೆ ಒಂದೇ ಲೈನ್ ನಲ್ಲಿ ಹೇಳಬೇಕೆಂದರೇ ಕೆಜಿಎಫ್ ನ ಮುಂದುವರಿದ ಭಾಗ ಅನ್ನಬೇಕೋ ಅಥವಾ ಈ ಸಿನಿಮಾವನ್ನು ಹಿಂದೆ ಎಲ್ಲೊ ನೋಡಿದ ರೀತಿಯಲ್ಲೇ ಇದೆ ಅಲ್ವೇ ಅನ್ನಬೇಕೋ ಒಂದೂ ಅರ್ಥವಾಗುತ್ತಿಲ್ಲ.ಅದೇ ರೀತಿಯಲ್ಲಿ ಭಾಸವಾದರೂ ಅಚ್ಚರಿ ಪಡಬೇಕಿಲ್ಲ ಸೇಮ್ ಟು ಸೇಮ್ ಕೆಜಿಎಫ್ ನ ಜೆರಾಕ್ಸ್ ಕಾಪಿ .!ಆಕ್ಷನ್ ,ಥ್ರಿಲ್ಲರ್ ,ಗುಂಡು ,ಸೌಂಡು ಎಲ್ಲವೂ ಅದೇ ಅದೇ.. ಅದೇನೇ !!!ಸಿನಿಮಾದಲ್ಲಿ ಉಪೇಂದ್ರ ಡಾನ್ ಆಗಿದ್ದರೆ ,ಸುದೀಪ್ ಕಥೆ ಹೇಳೋ ನಿರೂಪಕ ,ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣ ಸಿಗುತ್ತಾರೆ. ಸಿನಿಮಾ ನೋಡ್ತಾ ನೋಡ್ತಾ ಹೋದಂತೆ ಶಿವರಾಜ್ ಕುಮಾರ್ ಪಾತ್ರದ ಸುಳಿವೇ ಸಿಗೋದಿಲ್ಲ .ಸಿನಿಮಾದ ಕೊನೆಯ ದ್ರಶ್ಯ ಮುಗಿಯುವ ಸಮಯದಲ್ಲಿ ದೊಡ್ಡ ಸೈನ್ಯದೊಂದಿಗೆ ಶಿವಣ್ಣನ ಎಂಟ್ರಿ ಆಗುತ್ತದೆ .ಅದೇನೋ ಡೈಲಾಗ್ ಹೇಳುತ್ತಿದಂತೆ ಪರೆದೆ ಮೇಲೆ ಕಬ್ಜ ೨ ಎಂದು ಮುದ್ರಿತ ಗೊಳ್ಳುತ್ತದೆ. ಅಲ್ಲಿಗೆ ಸಿನಿಮಾದ ಪಾರ್ಟ್1ರ ಖೇಲ್ ಖತಂ ನಾಟಕ್ ಬಂದ್ ! ಕೆಜಿಎಫ್ ಸಿನಿಮಾದ ಸಂಗೀತ ನಿರ್ದೇಶಕರೇ ಇಲ್ಲಿ ಕೂಡಾ ಮ್ಯೂಸಿಕ್ ಕೈಗೆತ್ತಿಕೊಂಡಿದ್ದಾರೆ ,ಅದೇ ಎದೆ ನಡುಗಿಸುವ ಸೌಂಡು .ಒಮ್ಮೊಮ್ಮೆ ಕಿವಿ ಮುಚ್ಚಿ ಕೊಳ್ಳಬೇಕಾದ ಅನಿವಾರ್ಯತೆಯೂ ಉದ್ಭವಿಸುತ್ತದೆ.ಒಂದೇ ಒಂದು ಸಾಂಗ್ 'ರಾಧೇ ರಾಧೆ ' ಎನ್ನುವ ಹಾಡನ್ನು ಕೇಳಿಸಿ ಕೊಳ್ಳಬಹುದು., ಇಂಪಾದ ಹಾಡು ಕಿವಿ ತಂಪಾದರೇ ಮತ್ತೆಲ್ಲವೂ ಅಟ್ಟರ್ ವೆಸ್ಟ್. ಕಲಾವಿದರುಗಳಿಗೆ ಬರವಿಲ್ಲ.ಕಥೆಗೆ ಅವಶ್ಯಕತೆ ಇಲ್ಲದಿದ್ದರೂ ಬಹುಬಾಷಾ ತಾರೆಯರು ಒಟ್ಟುಗೂಡಿದ್ದಾರೆ. ಯಾರಿಗೂ ಹೆಚ್ಚು ಕೆಲಸ ವಿಲ್ಲಾ. ಕಥೆಗೆ ಅರ್ಥವಿಲ್ಲಾ ಮುಂದಿನ ಭಾಗಕ್ಕೆ ವೈಟ್ ಮಾಡದೇ ವಿಧಿ ಇಲ್ಲ.ಯಾಕೆಂದರೆ ಈಗಾಗಲೇ ಮತ್ತದೇ ಪ್ರಚಾರದ ಗೀಳು ಶುರುವಾಗಿದೆ ಕಬ್ಜ2 ನಲ್ಲಿ ತೆಲುಗಿನ ಪವನ್ ಕಲ್ಯಾಣ್ ಹಾಗೂ ಕೆಜಿಎಫ್ ನ ಯಶ್ ಇರುತ್ತಾರೆ ಎಂಬ ಸುದ್ದಿ ಹರಡುತ್ತಿದೆ .