ಶುಕ್ರವಾರ, ನವೆಂಬರ್ 26, 2021
ಜನಪ್ರೀಯತೆ ಬಳಿಕ ಉಂಡ ಮನೆಗೆ ದ್ರೋಹ ಬಗೆಯುವ ಭಾಗವತರು?! ಯಕ್ಷ ರಂಗದಲ್ಲಿ ಇದೇನಿದು?
ಹೌದು! ಹೀಗೊಂದು ಮಾತು ಯಕ್ಷ ರಂಗದಲ್ಲಿ ಪ್ರಚಲಿತದಲ್ಲಿದೆ.ಒಂದೆರಡು ವರ್ಷಗಳ ಹಿಂದೆ ಯಕ್ಷಗಾನ ಭಾಗವತರಾದ ಕಟೀಲು ಮೇಳದ ಪಟ್ಲ ಸತೀಶ್ ಶೆಟ್ಟಿಯವರ ಬಗ್ಗೆ ನಾವು ಕೇಳಿದ್ದೆವು., ಸ್ಟಾರ್ ಪಟ್ಟ ತಂದು ಕೊಟ್ಟದ್ದು ಕಟೀಲು ಮೇಳ. ಪ್ರತಿಭೆ ಇದ್ದರೂ ಅವಕಾಶ, ವೇದಿಕೆ ಜನಪ್ರೀಯತೆಯ ಹಾದಿ ಕಟೀಲು ಮೇಳವೇ ಆಗಿತ್ತು. ಮೇಳದಲ್ಲಿ ಸಾಕಷ್ಟು ವರ್ಷಗಳ ಕಾಲ ಪ್ರಧಾನ ಭಾಗವತರಾಗಿದ್ದ ಪಟ್ಲರವರು ಯಂಗ್ ದುನಿಯಾಕ್ಕೆ ಹಾಟ್ ಫೇವರೆಟ್ ಆಗಿದ್ದರು .ತನ್ನ ಕಂಚಿನ ಕಂಠದ ಸ್ವರ ಮಾಧುರ್ಯ ದಿಂದ ಎಲ್ಲೆಡೆ ಪ್ರಖ್ಯಾತಿಯನ್ನು ಪಡೆದುಕೊಂಡರು. ಹೋದಲ್ಲಿ ಬಂದಲ್ಲಿ ಎಲ್ಲೆಂದರಲ್ಲಿ ಗೌರವ,ಸನ್ಮಾನಕ್ಕೆ ಕೊರತೆ ಇರಲಿಲ್ಲ., ‘ಯಕ್ಷ ದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ)’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ದಾನಿಗಳಿಂದ ಹಣ ಸಂಗ್ರಹಿಸಿ ಯಕ್ಷರಂಗದಲ್ಲಿರುವ ಅಸಹಾಯಕರಿಗೆ ಸಹಾಯ ಹಸ್ತವನ್ನು ಚಾಚುತ್ತಿದ್ದ ಇವರ ಸನ್ನಡೆಗೆ, ಅಭಿಮಾನ ಮತ್ತಷ್ಟು ಉತ್ತುಂಗಕ್ಕೆ ಏರಿತ್ತು.ಅಲ್ಲಲ್ಲಿ ನಡೆಯುವ ವಿಶೇಷ ತಾಳ -ಮದ್ದಳೆ ಕಾರ್ಯಕ್ರಮ ಸೇರಿದಂತೆ ಅತಿಥಿಯಾಗಿ ಭಾಗವಹಿಸುವ ಶೆಡ್ಯೂಲ್ ತುಂಬಾನೇ ಬ್ಯುಸಿ ಯಾಗಿತ್ತು. ಇತ್ತ ಮೇಳವನ್ನು ಸರಿದೂಗಿಸಬೇಕಿತ್ತು. ಪ್ರತಿದಿನ ಬೇರೆ ಕಾರ್ಯಕ್ರಮಗಳ ಸಂಖ್ಯೆಗೆ ಮಿತಿ ಇಲ್ಲದಾಗ ಇತ್ತ ಮೇಳಕ್ಕೆ ಹಾಜರಾಗುವುದು ಅಪರೂಪವಾಗಿತ್ತು .ಮೇಳವನ್ನು ಮರೆತೇಬಿಟ್ಟರೆಂಬಂತಿದ್ದ ಇವರ ಈ ನಡೆ ಮೇಳದ ಯಜಮಾನರಿಗೆ, ಸಂಚಾಲಕರಿಗೆ ತೃಪ್ತಿ ತಂದಿಲ್ಲ. ಸರಿಯಾದ ವಿಚಾರವೂ ಹೌದು .ತಾವು ಕರ್ತವ್ಯ ನಿರ್ವಹಿಸುತ್ತಿರುವ ಮೇಳಕ್ಕೆ ಮುಖ್ಯವಾಗಿ ಒತ್ತುನೀಡಬೇಕು.ಮತ್ತುಳಿದ ಕೆಲಸಗಳು ಬಿಡುವಿನ ಸಮಯದಲ್ಲಿ ಇರಿಸಿಕೊಂಡರೇ ತಮ್ಮಗೌರವ ಇಮ್ಮಡಿಯಾಗುತ್ತದೆ,ಕಲಾವಿದನಿಗೆ ಗೌರವ ದೊರಕುವುದು ಸಹ ದಿಟ. ತಮಗೆ ಪುರ್ಸೊತ್ತು ಇದ್ದಾಗ ರಂಗ ಮಂಚ ಏರುತ್ತಿದ್ದ ಪಟ್ಲರ ಈ ಅನೀತಿಯಿಂದ ಕಟೀಲು ಮೇಳ ದಿಂದ ಹೊರಗುಳಿಯಬೇಕಾಯಿತು. ಈಗ ಮತ್ತೊಬ್ಬ ಸ್ಟಾರ್ ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯರವರು ಇದೆ ಕಾರಣ ದಿಂದ ಪೆರ್ಡೂರು ಮೇಳದಿಂದ ಕೈಬಿಡಲಾಗಿದೆ ಅಂತೆ!
ಅತ್ತ ತೆಂಕು ತಿಟ್ಟಿನಲ್ಲಿ ಪಟ್ಲ ಸತೀಶ್ ಶೆಟ್ಟಿಯಾದರೇ ಇತ್ತ ಬಡಗಿನಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್ಯದ್ದೇ ಪಾರಂಪತ್ಯ. ಆಧುನಿಕ ದಿನದಲ್ಲಿ ಪ್ರಸಿದ್ದಿ ಪಡೆದ ಭಾಗ್ಯವಂತ ಭಾಗವತರುಗಳು . ಸಾಕಷ್ಟು ವರ್ಷಗಳಿಂದ ಮಾರಣ ಕಟ್ಟೆ ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದ ಜನ್ಸಾಲೆ ರಾಘವೇಂದ್ರ ಆಚಾರ್ಯರವರು,ವಯಸ್ಸಿನ ಕಾರಣದಿಂದ ಸುಮಾರು 25ಕ್ಕೂ ಅಧಿಕ ವರ್ಷಗಳ ಕಾಲ ಸಮರ್ಥವಾಗಿ ಭಾಗವತರಾಗಿ ನಿರ್ದೇಶಕರಾಗಿ ಒಂದಿನಿತು ಕಪ್ಪು ಚುಕ್ಕೆ ಇಲ್ಲದಂತೆ ಕರ್ತವ್ಯ ನಿರ್ವಹಿಸಿದ್ದ ಸುಬ್ರಹಣ್ಯ ಧಾರೇಶ್ವರ ಅವರು ನಿವೃತ್ತಿ ಪಡೆದಾಗ ಅವರ ಜಾಗವನ್ನು ತುಂಬ ಬಲ್ಲ ಉತ್ತಮ ಭಾಗವತರಾಗಿ ಗುರುತಿಸಿಕೊಂಡವರು ಜನ್ಸಾಲೆ ರಾಘವೇಂದ್ರ ಆಚಾರ್ಯರವರು. ಅವರನ್ನು ಪೆರ್ಡೂರು ಮೇಳದ ಯಜಮಾನರಾದ ಕರುಣಾಕರ ಶೆಟ್ಟಿಯವರು ಕರೆತಂದು ನಿಯುಕ್ತಿಗೊಳಿಸಿದರು.ಸುಮಾರು 9ವರ್ಷಗಳ ಕಾಲ ಪೆರ್ಡೂರು ಮೇಳವನ್ನು ಮುನ್ನೆಡಿಸಿದ ಕೀರ್ತಿ ಅವರಿಗೆ ಸಲ್ಲದೇ ಇರದು. ಎಲ್ಲೂ ಚ್ಯುತಿ ಬಾರದಂತೆ ಯಕ್ಷಗಾನ ಕಲಾವಿದರ ಜೊತೆಗೆ,ಪ್ರಸಂಗ ಕರ್ತರ,ಸಂಘಟಕರ ಜೊತೆ ಇದ್ದ ಜನ್ಸಾಲೆ ಈ ವರ್ಷ ಅದೇನು ಆಯ್ತೋ ಗೊತ್ತಿಲ್ಲ ಇನ್ನೇನು ಮೇಳ ತಿರುಗಾಟ ಪ್ರಾರಂಭಿಸುವ ಬೆರಳಣಿಕೆ ದಿನಗಳಿರುವ ಸಂದರ್ಭದಲ್ಲಿ ದೀಢೀರ್ ಹೊರ ಬಿದ್ದಾಗ ಯಕ್ಷ ಪ್ರೇಮಿಗಳಲ್ಲಿ,ಜನ್ಸಾಲೆ ಅಭಿಮಾನಿಗಳಲ್ಲಿ ಕೋಲಾಹಲ ,ಕುತೂಹಲ ಉಂಟಾಗಿದ್ದುಸುಳ್ಳಲ್ಲ! ಮೇಳದ ವ್ಯವಸ್ಥೆಗೆ ಜನ್ಸಾಲೆ ಒಗ್ಗಿ ಕೊಳ್ಳದ ಹಿನ್ನಲೆಯಲ್ಲಿ ಮೇಳದಿಂದ ಕೈ ಬಿಡಲಾಗಿದೆ ಎಂಬ ಮಾತು ಮೇಳದ ಯಜಮಾನರಿಂದ ಬಂದಿದೆ.ವಾಸ್ತವಾಂಶ ಇಲ್ಲದೇ ಇರದು ದಿನ ದಿಂದ- ದಿನಕ್ಕೆ ಜನಪ್ರೀಯತೆಯ ನಾಗಾಲೋಟದಲ್ಲಿರುವ ಜನ್ಸಾಲೆಗೆ ಕಾರ್ಯಕ್ರಮಕ್ಕೆ ಬರಗಾಲ ವಿರಲಿಲ್ಲ ಅನೂದಿನವೂ 2-3ಕಾರ್ಯಕ್ರಮ ಫಿಕ್ಸ್! ಇದರಿಂದ ಮೇಳದ ಭವಿಷ್ಯದ ಚಿಂತನೆ, ಮೇಳದ ಕಲಾವಿದರು ಬೇರೆಡೆ ಅತಿಥಿಯಾಗಿ ತೆರಳಬಾರದೆಂದು ಕಟ್ಟಪ್ಪಣೆ ಹೊರಡಿಸಿದ ಪರಿಣಾಮ ಜನ್ಸಾಲೆ ಇದಕ್ಕೆ ಹೊಂದಿಕೊಳ್ಳದ ಕಾರಣ ಅವರನ್ನು ಬಿಡಬೇಕಾಯಿತು. ಇದು ಈ ವರ್ಷ ಇನ್ನೊಂದು ಪ್ರಸಿದ್ಧ ಡೇರೆ ಮೇಳವಾದ ಕಿಶನ್ ಹೆಗ್ಡೆ ನೇತೃತ್ವದ ಸಾಲಿಗ್ರಾಮ ಮೇಳದಲ್ಲೂ ಸಹಾ ಈ ಕಂಡೀಷನ್ ಜಾರಿಯಾಗಿದ್ದು ಅವರ ಕೈಪಿಡಿ, ಬ್ಯಾನರ್ ನಲ್ಲೂ ಮುದ್ರಿಸಲಾಗಿದೆ.
ಜನ್ಸಾಲೆ ಕಂಡಿಷನ್ ಗೆ ಒಪ್ಪದೇ ಇದ್ದಾಗ ಬೀಳ್ಕೊಡಬೇಕಾಯಿತು ಎಂದು ಹೇಳಲಾಗುತ್ತಿದೆ. ನನ್ನನ್ನು ನಾನು ಮಾರಿಕೊಳ್ಳುದಿಲ್ಲ ಎಂದು ಸೀದಾ ಹೊರನಡೆದಿದ್ದಾರೆ .ಜನ್ಸಾಲೆ ಯವರ ಮುಂದಿನ ನಡೆ ಗೊತ್ತಿಲ್ಲ .ಪ್ರಸ್ತುತ ಮತ್ತದೇ ಜಾಗಕ್ಕೆ ಸುಬ್ರಹ್ಮಣ್ಯ ಧಾರೇಶ್ವರರು ಆಗಮಿಸಿದ್ದಾರೆ.
ಪಟ್ಲ ಸತೀಶ್ ಶೆಟ್ಟಿಯವರು ಮುಂದೇನು ಮಾಡಲಿದ್ದಾರೆ ಎಂಬ ಸಂದರ್ಭದಲ್ಲಿ ಅವರು ನಾಗವೃಜ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕ್ಷೇತ್ರದ ಪಾವಂಜೆಯ ಮೇಳವನ್ನು ಕಟ್ಟಿದರು ನೂತನ ಮೇಳ ಹೊರಡಿಸಿ ಯಶಸ್ವೀಯಾದರು.ಕಟೀಲು ಮೇಳದಲ್ಲಿ ಜಾಗ ಇಲ್ಲದಿದ್ದರೂ ಇಲ್ಲಿ ಫಲ ದಕ್ಕಿಸಿಕೊಂಡಿದ್ದಾರೆ.ಆದರೆ ಪೆರ್ಡೂರು ಮೇಳ ತೊರೆದ ಜನ್ಸಾಲೆ ರಾಘವೇಂದ್ರರ ಮುಂದಿನ ನಡೆ ಏನು ಎಂದು ಯಕ್ಷ ಚಾವಡಿಯಲ್ಲಿ ಕೇಳಿ ಬರುತ್ತಿರುವ ಪ್ರಶ್ನೆ ! ಇದೀಗ ಎಲ್ಲಾ ಮೇಳಗಳೂ ತಿರುಗಾಟ ಪ್ರಾರಭಿಸಿದೆ ಯಾವ ಮೇಳಕ್ಕೂ ಅಧಿಕ್ರತವಾಗಿ ಜನ್ಸಾಲೆ ಸ್ಥಾನ ಪಡೆಯುವಂತಿಲ್ಲ.ಈ ವರ್ಷ ತಾಳ -ಮದ್ದಳೆ ಹಾಗೂ ಅತಿಥಿಯೇ ಗತಿ ಎಂಬಂತಾಗಿದೆ.
ಶನಿವಾರ, ನವೆಂಬರ್ 20, 2021
ರೈತರ ಎದುರು ಮಂಡಿಯೂರಿದರೇ ಪ್ರಧಾನಿ ? ಮೋದಿಯ ಭಾವುಕತೆಯ ಭಾಷಣದ ಅರ್ಥವೇನು ?
ನವೆಂಬರ್ 19 ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ,ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುನಾನಕ್ ಜಯಂತಿಯ ಶುಭಕೋರುತ್ತಾ , ದೇಶದ ಜನತೆಗೆ ಕ್ಷಮೆ ಯಾಚಿಸಿದ್ದು ನಿಜಕ್ಕೂ ಬೇಸರ ತರಿಸಿತ್ತು . ಕೇಂದ್ರ ಸರಕಾರ ಜಾರಿಗೆ ತಂಡ ಮೂರು ಕೃಷಿ ಮಸೂದೆಯನ್ನು ಹಿಂತೆಗೆದು ಕೊಳ್ಳಲಾಗುವುದು ರೈತರಿಗೆ ಅರ್ಥೈಸುವಲ್ಲಿ ವಿಫಲರಾಗಿದ್ದೇವೆ ,ರೈತರೇ ತಮ್ಮ ಹೋರಾಟವನ್ನು ಕೊನೆಗಾಣಿಸಿ, ಹೊಲಕ್ಕೆ ಸಾಗಿ ಎಂದು ಭಾವುಕತೆಯನ್ನು ವ್ಯಕ್ತಪಡಿಸಿದರು . ರೈತರೆಂಬ ಹಣೆಪಟ್ಟಿಯಲ್ಲಿರುವವರಿಗೆ ,ಪ್ರತಿ ಪಕ್ಷದವರಿಗೆ,ವಿರೋಧಿಗಳ ಸಂತೋಷಕ್ಕೆ ಮಾತ್ರ ಪಾರವೇ ಇರಲಿಲ್ಲ . ಮೋದಿ ಸೋತರು ,ರೈತರು ಗೆದ್ದರು ಎಂಬ ಅಭಿಪ್ರಾಯದ ಜೊತೆಗೆ ಮುಂಬರುವ ಜುನಾವಣೆಯನ್ನು ದ್ರಷ್ಟಿಯಲ್ಲಿತ್ತು ಕೊಂಡು ಮೋದಿ ವಾಪಸ್ ಪಡೆದರು ಎಂಬೆಲ್ಲಾ ಮಾತು ಹರಿದಾಟುತ್ತಿವೆ .
ಒಟ್ಟಾರೆ ಕ್ರಷಿ ಕಾಯ್ದೆಯನ್ನು ಹಿಂಪಡೆಯಲು ಕಾರಣವೇನು ?
ಮೂರು ಕ್ರಷಿ ತಿದ್ದುಪಡಿ ಮಸೂದೆ ಪ್ರಸ್ತಾಪಕ್ಕೆ ಬಂದು ಹೆಚ್ಚು ಕಮ್ಮಿ ಒಂದುವರ್ಷ ದಾಟಿದೆ . ಇದರ ನಡುವೆ ಸಾಕಷ್ಟ ಚುನಾವಣೆಗಳೂ ಬಂದೂ ಹೋಗಿವೆ ,ಪ್ರತಿಭಟನೆಗೆ ನಾಂದಿ ಹಾದಿ , ಹರತಾಳ ಮುಂದುವರಿಯುತ್ತಲೇ ಇವೆ . ಒಂದಷ್ಟು ರೈತರು ಪ್ರಾಣವನ್ನೂ ಕಳೆದು ಕೊಂಡರು ಅಂತಹ ಸಮಯದಲ್ಲಿಈ ಕಾಯ್ದೆಯನ್ನು ಹಿಂದೆ ತೆಗೆದು ಕೊಳ್ಳದ ಮೋದಿ, ಅದ್ಯಾಕೆ ನ.19 ರ ದಿನ ಅದೂ ,ಗುರುನಾನಕ್ ಜಯಂತಿಯಂದೇ ಈ ತೀರ್ಮಾನಕ್ಕೆ ಬಂದರು ಎಂಬದು ಯಕ್ಷಪ್ರಶ್ನೆ ?
ಕ್ರಷಿ ಕಾಯ್ದೆ ವಿರೋಧಿಸಿದವರ ಸಿಂಹ ಪಾಲು ಪಂಜಾಬ್ ರಾಜ್ಯದ ರೈತರು . ಸಿಖ್ಖರಿಗೆ ಗುರುನಾನಕ್ ದೇವರು . ಮುಂದೆ ಚುನಾವಣೆ ಸಮೀಪ ವಿರುವುದು ಕೂಡಾ ಪಂಜಾಬ್ ರಾಜ್ಯದಲ್ಲೇ.ಹೀಗಾಗಿಯೇ ಮೋದಿ ಪಂಜಾಬ್ ನಲ್ಲಿ ಓಟ್ ಬ್ಯಾಂಕಿಗ್ ಗೆ ಈ ಕಾರ್ಯಕ್ಕೆ ಮುಂದಾದರೇ ? ಎಂಬ ಮಾತುಗಳು ಪಚಲಿತದಲ್ಲಿವೆ.ಕಾಂಗ್ರೆಸ್ ನ ಬಲಿಷ್ಠ ಕೋಟೆ ಪಂಜಾಬ್ ನಲ್ಲಿ ಕಮಲ ಅರಳುವುದು ಅಷ್ಟೊಂದು ಸುಲಭದ ಮಾತು ಅಲ್ಲ . ಇನ್ನು ಮೋದಿ ಮೇಲೆ ಕಿಡಿಕಾರುತ್ತಿರುವ ಪಂಜಾಬಿಗರಿಂದ ಓಟ್ ದಕ್ಕಿಸಿಕೊಳ್ಳುವುದು ಸಹ ಕಷ್ಟ ಸಾಧ್ಯ . ಇಂತಿಪ್ಪ ಮೋದಿ ಯಾಂಡ್ ಟೀಮ್ ಅದರ ಬಗ್ಗೆ ಖಂಡಿತವಾಗಿಯೂ ಸೋತಿದ್ದಲ್ಲ
'ನಾ ಕೊಡೆ ನೀ ಬಿಡೆ' ಎನ್ನವಂತ ಸ್ಥಿತಿಗೆ ಅಂತ್ಯ ಹಾಡಲೇ ಬೇಕಿತ್ತು ಅದಕ್ಕಾಗಿ ಈ ತೀರ್ಮಾನಕ್ಕೆ ಬಂದಿರಬಹದು . ಅದೇನೇ ಇರಲಿ ಭಾರವಾದ ಧ್ವನಿಯಲ್ಲಿ ಭಾವನೆಯನ್ನು ಮೇಳೈಸುತ್ತಿದ್ದ ಪ್ರಧಾನಿ ಮೋದಿ ಮಾತಿನಲ್ಲಿ ಅರ್ಥವಿತ್ತು ನಾವು ರೈತರಿಗೆ ಅರ್ಥೈಸಿ ಹೇಳುವಲ್ಲಿ ಸೋತಿದ್ದೇವೆ ನಾವೀದನ್ನು ಸಂಸತ್ತಿನಲ್ಲಿ ಚರ್ಚಿಸಿ ಹಿಂದಕ್ಕೆ ತೆಗೆದು ಕೊಳ್ಳುತ್ತೇವೆ ಅಂದಾಗ ನಿಜವಾದ ರೈತರಿಗೆ ದುಃಖದ ಕಟ್ಟೆ ಒಡೆಯದೇ ಇರಲಾರದು . ರೈತರ ಶ್ರಯೋಭಿರುವುದ್ದಿಗಾಗಿ ತಂದ ಕಾಯ್ದೆ ರೈತರಿಗೆ ಬೇಡವೆಂದ ಮೇಲೆ ಇನ್ನೇನು ಮಾಡಲು ಸಾಧ್ಯ ? ತಮ್ಮ ಲಾಭಕ್ಕಾಗಿ ಮಧ್ಯವರ್ತಿಗಳು ಒಂದಷ್ಟು ರೈತರನ್ನು ಎತ್ತಿಕಟ್ಟಿ ಕೊನೆಗೂ ತಮ್ಮ ಆಸೆ ತೀರಿಸಿ ಕೊಂಡಿವೆ .ತಮ್ಮ ಕಾಲಿಗೆ ತಾವೇ ಕೊಡಲಿಪೆಟ್ಟು ಕೊಟ್ಟು ಕೊಂಡ ರೈತರು ಮುಂದೆ ಅನುಭವಿಸಲೇಬೇಕಾಗಿದೆ.
ಬುಧವಾರ, ಜುಲೈ 28, 2021
ಇದೆಂತಾ ನ್ಯಾಯ ಪರ ಹೋರಾಟ ಇಂದ್ರಜಿತ್ ಲಂಕೇಶ್ ಅವರೇ ??
ಹೌದು.! ಅದೇ ಇಂದ್ರಜಿತ್ ಲಂಕೇಶ್ !! ಕಳೆದ ವರ್ಷ ಡ್ರಗ್ಸ್ ವಿವಾದ ಬಗ್ಗೆ ಗಮನ ಸೆಳೆದಿದ್ದ ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಮತ್ತೆ ಗಮನ ಸೆಳೆಯುತ್ತಿದ್ದಾರೆ .ಕಳೆದ ಒಂದು ವಾರದಿಂದ ನಟ ದರ್ಶನ್ ವಿಚಾರಕ್ಕೆ ಉಪ್ಪು, ಹುಳಿ, ಖಾರ ಬೆರಿಸಿ ವಿವಾದಕ್ಕೆ ಕಾರಣೀಭೂತ ರಾಗಿದ್ದಾರೆ. ಸಾಮಾನ್ಯರಿಗೆ ನ್ಯಾಯ ದೊರಕಬೇಕು ಎಂದು ಡೈಲಾಗ್ ಹೊಡೆಯು ಲಂಕೇಶ್ ಲಂಕೇಶ್ ಸೆಲೆಬ್ರಿಟಿಗಳ ಹಿಂದೆ ಬೀಳುವ ಉದ್ದೇಶ ಅರ್ಥವಾಗುತ್ತಿಲ್ಲ .ನಿಜವಾಗಿಯೂ ಉತ್ತಮ ಅತ್ಯುತ್ತಮ ಕಾರ್ಯ .ಒಬ್ಬ ಪತ್ರಕರ್ತನಾಗಿ ಸಮಾಜದ ಬಗ್ಗೆ ಆಲೋಚಿಸುವುದು, ಅಂಕು -ಡೊಂಕು ತಿದ್ದುವ ಪ್ರಯತ್ನಕ್ಕೆ ಕೈ ಹಾಕಿರುವುದು ಅದ್ಬುತ ಕಾರ್ಯ ಆದರೆ ಅದ್ಯಾಕೋ ನಿನಿಮಾ ಮಂದಿಯನ್ನೇ ತನಗೆ ಆಗದವರನ್ನು ಟಾರ್ಗೆಟ್ ಮಾಡುವ ನೀತಿ ಸರಿಯಲ್ಲ .
ಕಳೆದ ಬಾರಿ ಡ್ರಗ್ಸ್ ವಿಚಾರದಲ್ಲಿ ಸಿನಿಮಾ ಮಂದಿಗಳು ಭಾಗಿಯಾಗಿದ್ದಾರೆ ಎಂದು ಸಮಾಜ ಹೋರಾಟಗಾರ ಪ್ರಶಾಂತ್ ಸಂಭರ್ಗಿ ಜೊತೆ ಒಂದಿಷ್ಟು ವಿವರಗಳನ್ನು ಬಹಿರಂಗ ಪಡಿಸಿದ್ದರು. ಸಾಕ್ಷಿ ,ಪುರಾವೆಗಳನ್ನ ಸಿಸಿಬಿ ಒದಗಿಸಿದ್ದರು. ಕೆಲವು ನಟ -ನಟಿಯರು ಸೇರಿದಂತೆ ಒಂದಷ್ಟು ಕಲಾವಿದರುಗಳನ್ನು ವಿಚಾರಣೆಗೆ ಒಳಪಡಿಸಿ ಸಿಸಿಬಿ ಟೀಮ್ ಕೈ ತೊಳೆದು ಕೊಂಡಿತ್ತು. ನಟಿ ಸಂಜನಾ ಮತ್ತು ರಾಗಿಣಿಯನ್ನು ಬಂಧಿಸಿ ಬಿಡುಗಡೆ ಮಾಡಿ ಅಲ್ಲಿಗೆ ಡ್ರಗ್ಸ್ ವಿಚಾರ ಅಂತ್ಯ ಗೊಂಡಿತ್ತು. ತತ್ಸಮಯದಲ್ಲಿ ಮಾಧ್ಯಮಗಳ ಮುಂದೆ ಪ್ರತ್ಯಕ್ಷಗೊಂಡ ಇಂದ್ರಜಿತ್ ಲಂಕೇಶ್ ಸಿಸಿಬಿ ಯಿಂದ "ಪಾರದರ್ಶಕ ವಿಚಾರಣೆಯಾಗಿಲ್ಲ ಅಪರಾಧಿಗಳಿಗೆ ಶಿಕ್ಷೆ ಕೊಡಲಿಲ್ಲ ನಾನು ಕೊಟ್ಟ ಲಿಸ್ಟ್ ಲ್ಲಿರಿರುವವರ ವಿಚಾರಣೆ ಆಗಿಲ್ಲ" ಎಂದು ಆರೋಪಿಸಿದ್ದರು .ರಾಜಕೀಯ ,ಹಣ ಬಲಗಳ ನಡುವೆ ಯಾಸ್ ಯುಸುವಲ್ ಮುಚ್ಚಿ ಹೋಗಿದ್ದು ದಿಟ !
ಈ ಎಲ್ಲಾ ಪ್ರಕರಣದ ಬಳಿಕ ಎಲ್ಲೂ ಇಂದ್ರಜಿತ್ ಲಂಕೇಶ್ ಮೇಲೆ ಒಂದಷ್ಟು ಜನರಿಗೆ ಅಭಿಮಾನ ಹುಟ್ಟಿತ್ತು , ಹೆಚ್ಚಿತ್ತು .ಒಂದೊಳ್ಳೆ ಸಮಾಜ ಮುಖಿ ಕಾರ್ಯಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿತ್ತು .
ಇದೀಗ ಮತ್ತೆ ಸುದ್ದಿಯಾಗಿದ್ದಾರೆ ಇಂದ್ರಜಿತ್ ಲಂಕೇಶ್ . ನಟ ದರ್ಶನ್ ತೂಗುದೀಪ್ ಮತ್ತು ನಿರ್ಮಾಪಕ ಉಮಾಪತಿ ಹಾಗೂ ಅರುಣಾಕುಮಾರಿ ನಡುವೆ ನಡೆಯತೇನ್ನೆಲಾದ ೨೫ ಕೋಟಿ ವಿಚಾರದಲ್ಲಿ ದರ್ಶನ ಶೂರುಟಿ ಹಾಕಿದ್ದಾರೆ ಎಂಬಲ್ಲಿಂದ ಶುರುವಾಗಿತ್ತು.ದರ್ಶನ್ ಅರಿವಿಗೆ ಬರದೇ ವಿಚಾರ ಬಹಿರಂಗವಾದ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿಬಿಡುತ್ತಾರೆ . ನಿರ್ಮಾಪಕ ಉಮಾಪತಿಯವರ ಕಿತಾಪತಿ ಇದರಲ್ಲಿ ಮೇಲ್ನೋಟಕ್ಕೆ ಎದ್ದು ಕಾಣುತ್ತಿದ್ದರೂ , ಉಮಾಪತಿ ಅದನ್ನು ಮುಚ್ಚಿ ಹಾಕಲು ಬೇರೆ-ಬೇರೆ ಸ್ಟೇಟನ್ಮೆಂಟ್ ಕೊಡಲು ಪ್ರಾರಂಭಿಸುತ್ತಾರೆ . ದೊಡ್ಮನೆಯ ಜಮೀನು ,ಸಂದೇಶ್ ನಾಗರಾಜ್ ಹೋಟೆಲ್ ಕಥೆ . ಇದೆಲ್ಲವೂ ಹರಿದಾಡಲು ಪ್ರಾರಂಭಿಸಿಬಿಟ್ಟಿತು . ವಿಚಾರ ೨೫ ಕೋಟಿ ರೂಪಾಯಿ ಆದರೆ ಇನ್ನಿತರ ವಿಚಾರಗಳು ತೇಲಿ ವಿವಾದಗಳೇ ಸ್ರಷ್ಟಿಯಾದವು. ಇತ್ತ ಇಂದ್ರಜಿತ್ ಲಂಕೇಶ್ ಕೂಡ ಈ ಮ್ಯಾಟರ್ ಗೆ ಎಂಟ್ರಿಯಾಗುತ್ತಾರೆ . "ಹೋಟೆಲ್ ನಲ್ಲಿ ಹಲ್ಲೆ ಆಗಿದ್ದು ನಿಜ ,ತನ್ನ ಫಾರ್ಮ್ಹೌಸ್ ಗೆ ಕರೆಸಿಕೊಂಡ ಮಹಿಳೆ ಯಾರು ? ನನ್ನಲ್ಲಿ ಆಡಿಯೋ ಇದೆ ,ದರ್ಶನ್ ಗೂಂಡಾಗಿರಿ ಮಾಡುತ್ತಾರೆ "ಅದೂ ಇದೂ , ಇಲ್ಲ ಸಲ್ಲದನೆಲ್ಲವನ್ನೂ ಪತ್ರಿಕಾಗೋಷ್ಠಿ ಕರೆದು ಉಸುರುತ್ತಾರೆ . "ದರ್ಶನ್ ಗೂಂಡಾಗಿರಿ ಮಾಡುವುದು ಸರಿಯಲ್ಲ ಒಬ್ಬ ಹೋಟೆಲ್ ಸಪ್ಲೆಯರ್ ಹೊಡೆದಿದ್ದು ತಪ್ಪು ಸಾಮಾನ್ಯ ಜನರಿಗೆ ನ್ಯಾಯ ದೊರಕಬೇಕು ಎಂಬ ಉದ್ದೇಶ ಮಾತ್ರ ನನಗಿದೆ ಎನ್ನುತ್ತಾರೆ .
ಹೌದು ! ದರ್ಶನ ತಪ್ಪು ಮಾಡಿದ್ದೇಯಾದರೇ ಅವರಿಂದ ಹಲ್ಲೆಗೊಳಗಾದವರು ಪೊಲೀಸರಿಗೆ ದೂರು ನೀಡಬೇಕಾಗಿತ್ತು . ಅಥವಾ ಅವರೇ ಮುಖ್ಯವಾಹಿನಿಗೆ ಬಂದು ಹೇಳಬಹುದಿತ್ತು . ಅದು ಆಗಿಲ್ಲಾ . ಆಹಾರ ತಡವಾಗಿ ಬಂದಿದ್ದಕ್ಕೆ ಬೈದಿದ್ದಾರೆ ಅನ್ನುವುದು ದರ್ಶನ್ ಜೊತೆಗಿದ್ದವರ ಉತ್ತರ . ಒಬ್ಬ ಸಲೆಬ್ರಿಟಿಯಾಗಿ ಆಹಾರ ತಡವಾಗಿ ಬಂದಿದ್ದಕ್ಕೆ ಕೋಪದಲ್ಲಿ ಜಸ್ಟ್ ತಲೆ ಮೇಲೆ ಹೊಡೆದಿರಬಹುದು ಎಂಬ ಮಾತು ಇದೆ ಅದು ಪ್ರೀತಿಯಿಂದ ಸವರಿರಬಹುದು ಮಾರಣಾಂತಿಕವಾಗಿ ಹಲ್ಲೆ ಮಾಡಿಲ್ಲ ಪ್ರೀತಿಯಿಂದ ಯಾವಾಗಲೂ ಸರ್ವ್ ಮಾಡುವ ಆತ ಅದರಿಂದ ಆತನಿಗೇನೂ ದುಃಖವಾಗಿಲ್ಲ ಸುಖ -ಸುಮ್ಮನೆ ಕಪೋಲ ಕಲ್ಪಿತ ಆರೋಪ ಮಾಡುತ್ತಿದ್ದಾರೆ ಎಂದೇಳುವ ದರ್ಶನ್ ಮಾತಿನಲ್ಲಿ ಅರ್ಥವಿದೆ .
ಫಾರ್ಮ್ಹೌಸ್ ಗೆ ಬಂದ ಮಹಿಳೆ , ಪತ್ನಿಯ ಮೇಲಿನ ಹಲ್ಲೆ ಬೂತಕಾಲದಲ್ಲಿನ ವಿಚಾರ ಎತ್ತಿ ಹಿಡಿಯುವ ಇಂದ್ರಜಿತ್ ಗೆ ಪ್ರಜ್ಞಾವಂತರು ಹೇಳುವುದು ಇಷ್ಟೇ , ಇದು ಅವರ ಖಾಸಗಿ ವಿಚಾರವಲ್ಲವೇ ? ಇದರಿಂದ ಸಮಾಜಕ್ಕೆ ಕಂಟಕ ತರುವಂತ ಸಂದೇಶ ವಿದೆಯೇ ? ಇದ್ದರೂ ,ಕೇವಲ ದರ್ಶನ್ ತೂಗುದೀಪ್ ಮಾತ್ರ ಅರ್ಹರೇ ?ದೊಡ್ಡ ಸೆಲೆಬ್ರಿಟಿಗಳು ಇಂತಹ ತಪ್ಪು ಮಾಡಿಲ್ಲವೇ ? ದರ್ಶನ್ ನ ನೆಗೆಟಿವ್ ಪಾಯಿಂಟ್ ನ್ನು ಮಾತ್ರ ಉಸುರುವ ಇಂದ್ರಜಿತ್ ಲಂಕೇಶ್ ಅವರ ಒಳ್ಳೆಯ ಕಾರ್ಯವನ್ನು ಸಮಾಜಕ್ಕೆ ಬಹಿರಂಗ ಪಡಿಸಿ, ಇತ್ತೀಚೆಗೆ ಕರೋನಾ ಕಾಲ ಘಟ್ಟದಲ್ಲಿ ವಾರಿಯರ್ ಆಗಿ ಕೆಲಸ ಮಾಡಿದ್ದು ,ಆಹಾರ ಕಿಟ್ ಒದಗಿಸಿದ್ದರಿಂದ ಹಿಡಿದು ಸಮಾಜ ಮುಖಿ ಕಾರ್ಯ ದರ್ಶನ್ ನಿಂದ ಆಗಿದೆ ಅದ್ಯಾಕೆ ಇವರ ಕಣ್ಣಿಗೆ ಕಾಣಿಸುದಿಲ್ಲ ? ಒಬ್ಬ ಬಡ ವ್ಯಕ್ತಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ನಾನು ನ್ಯಾಯ ಪರವಾಗಿ ದರ್ಶನ ವಿಚಾರ ಎತ್ತಿದ್ದೇನೆ ಎಂದು ಹೇಳುವ ಇಂದ್ರಜಿತ್ ಗೆ ಕೇವಲ ದರ್ಶನ ನಿಂದ ಹಲ್ಲೆ ಗೊಳಗಾಗಿರುವ ಮಾತ್ರ ಕಣ್ಣಿಗೆ ಕಾಣಿಸುವುದೇ ?ಇತ್ತೀಚಿಗೆ ಮಾನ್ಯ ಉಪಮುಖ್ಯ ಮಂತ್ರಿ ಮಗನ ಕಾರು ಅಪಘಾತ ದಿಂದ ಒಬ್ಬ ಬಡ ರೈತ ಕೊನೆಯುಸೀರು ಎಳೆದಿದ್ದು ಕಾಣಿಸಲಿಲ್ಲವೇ ಹೀಗೆ ಹಲವಾರು ಉದಾಹರಣೆಗಳನ್ನ ಕೊಡಬಹುದು .ನಿಮ್ಮ ಸಮಾಜದ ಕಳಕಳಿಗೆ ಗೌರವವಿದೆ ಆದರೆ ಒಬ್ಬರನ್ನು ಟಾರ್ಗೆಟ್ ಮಾಡುವ ವಿಚಾರಕ್ಕೆ ಖಂಡಿತ ಧಿಕ್ಕಾರವಿದೆ .
ಭಾನುವಾರ, ಜುಲೈ 4, 2021
ವೈದ್ಯರನ್ನು /ವ್ಯವಸ್ಥೆಯನ್ನು ದೂರುವ ಮೊದಲು ಇದನ್ನು ಆಲೋಚಿಸಿ !
ಮೊನ್ನೆ ವಾಟ್ಸಾಪ್ ನಲ್ಲಿ ಬಂದ ವಿಡಿಯೋ ನೋಡ್ತಾ ಇದ್ದೆ ಅದರಲ್ಲೊಂದು ತೀರಾ ಬಾವುಕತೆ ಯಿಂದ ತನ್ನ ನೋವಿನ ವಿಚಾರ ಹೇಳುತ್ತಿದ್ದ ತಮಿಳು ನಾಡಿನ ನರ್ಸ್ ಒಬ್ಬಳ ಮಾತು ನಿಜಕ್ಕೂ ಮನಸ್ಸಿಗೆ ನಾಟುವಂತಿತ್ತು ನಾಗರಿಕ ಸಮಾಜ ತಲೆ ತಗ್ಗಿಸುವಂತ ವಿಚಾರ ಅದರಲ್ಲಿ ತುಂಬಿತ್ತು ಕೋವಿಡ್ ಸಂದರ್ಭದಲ್ಲಿ ಜನ ಸಾಮನ್ಯರು ಪ್ರದರ್ಶಿಸುವವರ ಉದ್ದಟತನಕ್ಕೆ ಬುದ್ದಿ ಹೇಳುವ ಸಂದೇಶ ಗಮನ ಸೆಳೆಯಿತು. ಸಾಮಾಜಿಕ ಅಂತರ ಒಂದೇ ಮಾರ್ಗ ಕೋವಿಡ್ ನಿಯಂತ್ರವನ್ನು ತರಬಹುದೇ ವಿನಾ: ಸಧ್ಯಕ್ಕೆ ಯಾವುದೇ ಮೆಡಿಸಿನ್ ಇಲ್ಲ ವ್ಯಾಕ್ಸಿನ್ ಇದ್ದರೂ, ಅದು ಅಷ್ಟು ಫಲಪ್ರಧ ಅಲ್ಲ ., ಇನ್ನು ನಮ್ಮ ದೇಶದ ಜನ ಸಂಖ್ಯೆಗೆ ಅನುಗುಣವಾಗಿ ಬೇಡಿಕೆಗೆ, ಪೂರೈಕೆ ಮತ್ತು ಲಭ್ಯತೆ ಅಷ್ಟಕಷ್ಟೇ !ಇದನ್ನೆಲ್ಲವನ್ನು ಮನಗೊಂಡು ನಮ್ಮ ಸುರಕ್ಷತೆ ಹಾಗೂ ನಮ್ಮವರ ರಕ್ಷಣೆಗಾಗಿ ಒಂದಷ್ಟು ದಿನ ಮನೆಯಲ್ಲೇ ಇದ್ದು ,ಸಾಮಾಜಿಕ ಅಂತರ ಕಾಪಾಡಿದ್ದೇಯಾದರೇ ಖಂಡಿತವಾಗಿಯೂ ಕರೋನ ವೈರಸ್ ನಿಂದ ಗೆಲ್ಲಬಹುದು ಜೊತೆಗೆ ದೇಶವನ್ನೂ ! ಆದರೆ ಜನ ಸಾಮನ್ಯರು ಯಾಕೆ ಇದರ ಬಗ್ಗೆ ಆಲೋಚಿಸುತ್ತಿಲ್ಲ ? ಬುದ್ದಿ ಹೀನ ರಾಗಿದ್ದಾರೆ .ನಿರ್ಲಕ್ಷತೆ ,ನಿರ್ಲಜ್ಜತೆ ,ಉದ್ದತನದಿಂದಲೇ ಇಷ್ಟೊಂದು ಪ್ರಮಾಣದಲ್ಲಿ ಏರಿಕೆ ಕಂಡೂ ,ಪ್ರಾಣ ಹಾನಿಗೆ ಕಾರಣವಾಗಿರುವುದು .ಕೋವಿಡ್ ನಿಯಮ ಪಾಲನೆ ,ಸರಕಾರದ ಮಾರ್ಗ ಸೂಚಿಯನ್ನು ಗಾಳಿಗೆ ತೋರಿ ಮಾಸ್ಕ್ ಉಪಯೋಗಿಸದೇ ಎಲ್ಲೆಂದರಲ್ಲಿ ತಿರುಗಾಡುವುದು ,ಇದೆಲ್ಲವೂ ಕೋವಿಡ್ ಹರಡುವುದಕ್ಕೆ ರಹದಾರಿಯಾಗಿದೆ . ರೋಗ ಉಲ್ಭಣ ಗೊಂಡ ನಂತರ ಆಸ್ಪತ್ರೆಗೆ ದಾಖಲಾಗುವುದು ಬೆಡ್ ,ಆಕ್ಸಿಜನ್ ಸಿಗದೇ ಇರುವುದು ಸಾವಿನ ಕದ ತಟ್ಟುತ್ತಿರುವವರ ಬಗ್ಗೆ ಉತ್ತಮ ಹೇಳುತ್ತಿದ್ದ ಆ ನರ್ಸ್ “ಜನಸಸಂಖ್ಯೆ ಅನುಗುಣವಾಗಿ ಅಷ್ಟೊಂದು ಆಸ್ಪತ್ರೆ ,ಬೆಡ್ ,ವೈದ್ಯಕೀಯ ಪರಿಕರ ,ಆಸ್ಪತ್ರೆಯ ಸಿಬ್ಬಂದಿಗಳು ನಮ್ಮಲ್ಲಿ ಇಲ್ಲ ,ಎಲ್ಲವನ್ನೂ ಒಮ್ಮತದಲ್ಲಿ ಸಮತೋಲನಕ್ಕೆ ತರುವುದು ಕೂಡಾ ಕಷ್ಟ ಸಾಧ್ಯ ,ರೋಗ ಲಕ್ಷಣ ಉಲ್ಬಣಗೊಂಡ ನಂತರ ಆಸ್ಪತ್ರೆಗೆ ದೌಡಾಯಿಸುವ ರೋಗಿಗಳು ಬೆಡ್ ,ಆಕ್ಸಿಜನ್ ಗೆ ಪರದಾಡುವುದು ,ವೈದ್ಯರ ಮೇಲೆ ರೇಗಾಡುವದು ಎಷ್ಟು ಸರಿ ? ರೋಗಿಗಳು ತುಂಬಾ ಸೀರಿಯಸ್ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗುವುದರಿಂದ ಅವರುಗಳ ಪ್ರಾಣ ಆ ಸಂದರ್ಭದಲ್ಲಿ ಉಳಿಯುವುದು ,ಮತ್ತು ಉಳಿಸುವುದು ತುಂಬಾನೇ ಕಷ್ಟ . ವೈದ್ಯರುಗಳು ಸಾಕಷ್ಟು ಪ್ರಯತ್ನ ಪಡುತ್ತಾರೆ ,ಇನ್ನು ನರ್ಸ್ಗಳು ಲ್ಯಾಬ್ ಟೆಕ್ನಿಷಿಯನ್ ಗಳು ತಮ್ಮ ಪ್ರಾಣದ ಹಂಗು ತೊರೆದು ಹೊರಡುತ್ತಾರೆ . 4 ಜನರನ್ನು ಆರೈಕೆ ಮಾಡುವ ಸಹಜ ಸ್ಥಿತಿಯಲ್ಲಿ 10-15 ಜನರನ್ನು ಕಷ್ಟ ಪಟ್ಟು ಇಷ್ಟದಿಂದಲೇ ರೆಸ್ಟ್ ಗಳನ್ನೆಲ್ಲಾ ಬಿಟ್ಟು ನಾವು ಪ್ರಯತ್ನ ಪಡುತ್ತವೆ ,ನಮಗೂ ಗಂಡ -ಹೆಂಡತಿ, ಮಕ್ಕಳು ಒಟ್ಟಾರೆ ಫ್ಯಾಮಿಲಿ ಇಲ್ಲವೇ ? ಪ್ರತಿಕ್ಷಣವೂ ಅವುಗಳನ್ನು ಮರೆತು,ಬದಿಗೊತ್ತಿ ಕೋವಿಡ್ ವೈರಸ್ ನಮ್ಮ ಸುತ್ತಲೂ ಇದ್ದರೂ ,ಅದರ ಭಯವನ್ನು ಬಿಟ್ಟಾಕಿ ,ರೋಗಿಗಳು ರಿಕಾವರಿಯಾಗಿ ಹೊರ ಹೋಗ್ಬೇಕು ಎಂದು 12-14 ಗಂಟೆಗಳ ಕಾಲ ನಿರಂತರವಾಗಿ ಪಿಪಿಈ ಕಿಟ್ ಧರಿಸಿ ಕೊಂಡು ರೋಗಿಗಳ ಉಪಚಾರವನ್ನು ಮಾಡುತ್ತೇವೆ , ಒಂದು ರೋಗಿ ನಮ್ಮ ಕಣ್ಣ ಮುಂದೆ ಮರಣ ಒಪ್ಪಿದಾಗ ಅವರ ಕುಟುಂಬ ಕ್ಕಿಂತ ಜಾಸ್ತಿ ನಮಗೆ ದುಃಖದ ಕಟ್ಟೆ ಒಡಿಯುತೇ ನಾವು ಕಲ್ಲು ಹೃದಯಿಗಳಲ್ಲ ,ನಾವು ಮನುಷ್ಯರೇ ಅಲ್ವೇ ?ಯಾವೊಬ್ಬ ಡಾಕ್ಟರ್ ,ನರ್ಸ್ ಅಥವಾ ಟೆಕ್ನಿಷಿಯನ್ ಗಳಾಗಲಿ ರೋಗಿಗಳ ಆದಷ್ಟು ಬೇಗ ಗುಣ ಮುಖರಾಗಿ ಹೊರ ಹೋಗ್ಬೇಕು ಅನ್ನುವ ಮನಸ್ಥಿಯನ್ನೇ ಹೊಂದಿರುತ್ತಾರೆ ತಮ್ಮ ಕಾರ್ಯಕ್ಕೆ ಪ್ರತಿಫಲ ಸಿಕ್ಕಾಗ ಅದಕ್ಕಿಂತ ಜಾಸ್ತಿ ಆನಂದ ಇನ್ನೊಂದಿರುವುದಿಲ್ಲ , ಆದರೆ ರೋಗಿಗಳು ಚಿಕಿತ್ಸೆಗೆ ಸ್ಪಂದಿಸದೇ ,ಮರಣ ಹೊಂದಿದಾಗ ರೋಗಿಗಳ ಸಂಬಂದಿಕರು ವೈದ್ಯರ ಮೇಲೇ ಹರಿಹಾಯುವುದು,ಹಲ್ಲೆ ಮಾಡುವದು ಆಸ್ಪತ್ರೆ ಧ್ವ೦ಸ ಮಾಡುವ ಕಾರ್ಯ ಚುಟವಟಿಕೆಯನ್ನು ಬೆಳಿಸಿಕೊಂಡಿದ್ದಾರೆ ! ವೈದ್ಯರುಗಳು ಕೇವಲ ಸ್ವಾರ್ಥ ಸಾಧನೆಗಾಗಿ ಹಂಬಲಿಸುತ್ತಾರೆ .ಅನವಶ್ಯಕವಾಗಿ ರೋಗಿಗಳನ್ನು ಸಾಯಿಸುತ್ತಾರೆ ಎಂಬಲ್ಲಾ ಸುದ್ದಿಗಳು ಸತ್ಯಕ್ಕೆ ದೂರವಾದವುಗಳು ಎಲ್ಲೂ ಬೆರಳೆಣಿಕೆ ಮಂದಿ ಮಾತ್ರ ಇಂಥ ಅಹಿತಕರ ಕಾರ್ಯಕ್ಕೆ ಕೈ ಹಾಕಿರಬಹುದು ಆದರೆ ಎಲ್ಲರನ್ನೂ ಅದೇ ದ್ರಷ್ಟಿ ಯಿಂದ ನೋಡುವ ಜಾಯಮಾನ ನಮ್ಮಲ್ಲಿ ಬೇರೂರಿದೆ . ನಮ್ಮನ್ನು ತೀರಾ ಕೀಳು ಮಟ್ಟದಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ ಕಷ್ಟ ಪಟ್ಟು ಹಗಲು ಇರಳು ರೋಗಿಗಳನ್ನು ಈ ಸಮಯದಲ್ಲಿ ಪ್ರಾಣವನ್ನು ಒತ್ತಿ ಇಟ್ಟು ಜಾಕರಿ ಮಾಡುವ ನಮಗೆ ನೀಡುವ ಬಹುಮಾನ ಇದೇನಾ ? ಸುಮಾರು ಎಂಟನೂರಕ್ಕೂ ಅಧಿಕ ಮಂದಿ ದೇಶದಲ್ಲಿ ವೈದ್ಯರು ಅದೆಷ್ಟು ಜಾಗ್ರತೆ ವಹಿಸಿಯೂ ಕೋವಿಡ್ ರೋಗಿಗಳಿಗೆ ಟ್ರೀಟ್ಮೆಂಟ್ ಕೊಟ್ಟು ಸಾನೊಪ್ಪಿದ್ದಾರೆ. ವೈದ್ಯಕೀಯ ಸಿಬಂದಿಗಳ ಮೇಲೆ ಅನೂ ಕ್ಷಣವೂ ತೂಗುಗತ್ತಿ ನೇತಾಡುತ್ತಿರುತ್ತದೆ .” ನಿಜಕ್ಕೂ ಆ ನರ್ಸ್ ಮಾತಿನಲ್ಲಿ ಅರ್ಥವಿತ್ತು, ಸಾಮಾಜಿಕ ಕಳಕಳಿ ಇದ್ದೇ ಇತ್ತು . ಹೌದು ! ವೈದ್ಯರುಗಳ ಬಗ್ಗೆ ಆಸ್ಪತ್ರೆಗಳ ಬಗ್ಗೆ ಉದ್ದುದ್ದ ದೂರುಗಳ ಸರಮಾಲೆಯನ್ನು ಹರಿಸುವ ನಾವುಗಳು ಯಾಕೆ ಆಲೋಚನಾ ಭಗ್ನರಾಗುತ್ತೇವೆ?.ಮೊದಲೇ ಪ್ರಿಕಾಶನ್ ನ್ನು ತಂದು ಕೊಂಡಿದ್ದರೇ ವೈದ್ಯರನ್ನು ,ವ್ಯವಸ್ಥೆಗೆ ಬೆಟ್ಟು ತೋರಿಸುವ ಅಗತ್ಯವಿರುವುದಿಲ್ಲ
ಗುರುವಾರ, ಏಪ್ರಿಲ್ 1, 2021
ಜಾರಿ ಬಿದ್ದ ಜಾರಕಿ ಹೊಳಿ : ಸಿಡಿ ಹಿಂದೆ ಅದೆಷ್ಟು ಬಾಡಿ ?
ಸರಿ ಸುಮಾರು ಒಂದು ತಿಂಗಳು ಪೂರ್ಣಗೊಂಡಿದೆ ರಾಜ್ಯ ರಾಜಕಾರಣ ದಲ್ಲಿ ಅಲ್ಲೋಲ -ಕಲ್ಲೋಲವನ್ನು ಎಬ್ಬಿಸುತ್ತಿರುವ ಸಿಡಿ ವಿಚಾರ ಅಂತ್ಯ ಕಾಣುವ ಲಕ್ಷಣವಿಲ್ಲ . ರಾಜ್ಯದಲ್ಲಿ ಬಿಜೆಪಿ ಸರ್ಕಾರ ರೂಪುಗೊಳ್ಳಲು ಪ್ರಮುಖ ಪಾತ್ರ ವಹಿಸಿದ್ದ ನೀರಾವರಿ ಸಚಿವ ಜಾರಕಿ ಹೊಳಿ ಬ್ರದರ್ಸ್ ಗಳಲ್ಲಿ ಒಬ್ಬರಾದ ರಮೇಶ್ ಜಾರಕಿಹೊಳಿಯವರು ಯುವತಿ ಯೊಂದಿಗಿರುವ ರಾಸಲೀಲೆ ಎಂದು ಹೆಸರು ಪಡೆದ ಖಾಸಗೀ ದ್ರಶ್ಯ ಬಿಡುಗಡೆ ಗೊಂಡಿತ್ತು . ಎರಡು ವಿಡಿಯೋಗಳು ಸಾಮಾಜಿಕ ಜಾಲ ತಾಣವೂ ಸೇರಿದಂತೆ ಬ್ಲರ್ ರೂಪದಲ್ಲಿ ಮಾಧ್ಯಗಳಲ್ಲಿ ಪ್ರಮುಖ ಬ್ರೇಕಿಂಗ್ ಆಗಿ ಕಾಣ ಸಿಕ್ಕವು ,ಒಂದು ಮಿಲನ ದ್ರಶ್ಯ ವಾದರೇ ಇನ್ನೊಂದು ವಿಡಿಯೋ ಕಾಲ್ ಸ್ಕ್ರೀನ್ ರೆಕಾರ್ಡ್ ಆಗಿತ್ತು . ಅಂದೇ ಸಾಮಾಜಿಕ ಕಾರ್ಯಕರ್ತರಾದ ದಿನೇಶ್ ಕಲ್ಲಹಳ್ಳಿ ಎಂಬುವವರು ಯುವತಿಗೆ ಮೋಸವಾಗಿದೆ , ಕೆಲಸ ಕೊಡಿಸುತ್ತೇನೆ ಎಂಬ ಆಮಿಷ ಒಡ್ಡಿ ರಮೇಶ್ ಜಾರಕಿ ಹೊಳಿ ಯುವತಿಯನ್ನು ಬಳಸಿಕೊಂಡಿದ್ದಾರೆ ಎಂದು ಬಂಧನಕ್ಕಾಗಿ ಕೇಸು ದಾಖಲಿಸುತ್ತಾರೆ . ಇತ್ತ ನಾನೇನು ಮಾಡಿಲ್ಲ ಅದು ನನ್ನ ವಿಡಿಯೋ ಅಲ್ಲ ಬ್ಲಾಕ್ ಮೇಲ್ ಮಾಡಲಾಗುತ್ತಿದೆ . ನಾಲ್ಕು ತಿಂಗಳ ಹಿಂದೆ ನನ್ನ ಮನವರಿಕೆಗೆ ಬಂದಿತ್ತು ಇದರಲ್ಲಿ ದೊಡ್ಡ ಟೀಮ್ ಇದೆ ಒಬ್ಬ ಮಹಾನಾಯಕ ಇದರಲ್ಲಿ ಇದ್ದಾನೆ ನನ್ನನ್ನು ರಾಜಕೀಯವಾಗಿ ಮುಗಿಸಲು ಈ ರೀತಿ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದರು .
ಪ್ರಕರಣ ಕಾವು ಪಡೆಯುತ್ತಿದಂತೆ ತನ್ನ ಸಚಿವ ಸ್ಥಾನಕ್ಕೆ ರಾಜಿನಾಮೆಯನ್ನು ಸಲ್ಲಿಸುತ್ತಾರೆ . ಇತ್ತಾ ಒಂದೆರಡು ದಿನಗಳ ನಂತರ ದಿನೇಶ್ ಕಲ್ಲ ಹಳ್ಳಿಯವರು ತಮ್ಮ ಮೇಲೆ ಬಂದ ಆರೋಪದ ಕಾರಣ ನೀಡಿ ಕೇಸನ್ನು ವಾಪಸ್ಸು ತೆಗದುಕೊಳ್ಳುತ್ತಾರೆ .
ಸಿಡಿಯಲ್ಲಿರುವವರು ಜಾರಕಿಹೊಳಿ ನಾ ?: ಸಿಡಿಯಲ್ಲಿರುವ ದ್ರಶ್ಯವನ್ನು ಕೂಲಂಕುಷವಾಗಿ ವೀಕ್ಷಿಸಿದರೇ ,ರಮೇಶ ಜಾರಕಿಹೊಳಿ ಎಂಬುದರಲ್ಲಿ ಎರಡು ಮಾತಿಲ್ಲ ಅವರ ಸಂಭಾಷಣೆಯನ್ನು ಗಮನಿಸಿದರೇ ಅದು ಅವರೇ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ, ಸಿಡಿಯಲ್ಲಿರುವ ಲೇಡಿ ಸಹಾ ಅವಳೇ ಎಂಬುದು ಮೇಲ್ನೋಟಕ್ಕೆ ಸಾಭೀತು ಪಡಿಸುತ್ತಿದೆ
ಬ್ಲಾಕ್ ಮೇಲ್ ಒಳಗಾದರೇ ಜಾರಕಿಹೊಳಿ ?:
ಹೌದು ಮೇಲ್ನೋಟಕ್ಕೆ ಇದು ಬ್ಲಾಕ್ ಮೇಲ್ ಎಂದೇ ಪರಿಗಣಿಸಬಹುದು .ಹಲವಾರು ಸಂದೇಹ -ಸಂಶಯಗಳ ಪ್ರಕಾರ ವಿಡಿಯೋ ಮಾಡಿರುವುದು ಯುವತಿನೇ ,ವಿಡಿಯೋ ಕಾಲ್ ಸ್ಕ್ರೀನ್ ರೆಕಾರ್ಡ್ ನಲ್ಲೆಯೇ ಅದು ಸಾಭೀತು ಪಡಿಸುತ್ತಿದೆ . ಇಂತಹ ದೊಡ್ಡ ನಾಯಕನನ್ನು ಎದುರು ಹಾಕಿಕೊಳ್ಳುವುದು ಸಾಮನ್ಯದ ಸಂಗತಿ ಅಲ್ಲ .ಇದರ ಹಿಂದೆ ದೊಡ್ಡ ಗ್ಯಾಂಗ್ ಇದೆ ಎನ್ನುವುದನ್ನು ಒತ್ತಿ ಹೇಳಬೇಕಾದ ಅಗತ್ಯವಿಲ್ಲಾ ಇಂತವರನ್ನೇ ಕಂಡು ಬ್ಲಾಕ್ ಮೇಲ್ ದಂಧೆ ಮಾಡುವ ಗ್ಯಾಂಗ್ ಇದಾಗಿದೆ . ಒಂದಷ್ಟು ಹಣಕ್ಕೆ ಬೇಡಿಕೆ ಇಟ್ಟು ಹನಿಟ್ರ್ಯಾಪ್ ಮೂಲಕ ತಮ್ಮ ಕಾರ್ಯ ಪೂರೈಸುತ್ತಿದ್ದ ಈ ಗ್ಯಾಂಗ್ ರಮೇಶ್ ಜಾರಕಿ ಹೊಳಿ ಯನ್ನು ತಮ್ಮ ಜೋಳಿಗೆಗೆ ಬೀಳಿಸಿಕೊಂಡಿತ್ತು ,ಈತನಲ್ಲಿ ಸಾಕಷ್ಟು ಹಣ ಇರಬ ಹುದೆಂದು ನೂರು ಕೋಟಿಗೂ ಅಧಿಕ ಮೊತ್ತದ ಬೇಡಿಕೆ ಇಟ್ಟಿದ್ದರು ಸರ್ಕಾರವನ್ನು ಬೀಳಿಸಿ ಕೆಲವು ಶಾಸಕರನ್ನು ಸೆಳೆದಿದ್ದು ,ಇವರಲ್ಲಿ ಸಂಪತ್ತು ಹೇರಳ ವಾಗಿ ಸಿಗಬಹುದು ಎಂಬ ಆಲೋಚನೆಯಿಂದ ಬ್ಲಾಕ್ಮೇಲ್ ಮಾಡಲಾಗಿತ್ತೆಂಬ ವಿಚಾರ ಒಂದು ಆಂಗಲ್ ಹೇಳುತ್ತಿದೆ ಅಷ್ಟು ದೊಡ್ಡ ಮೊತ್ತ ಈಡೇರಿಸುವಲ್ಲಿ ಅಶಕ್ತರಾದಾಗ ವಿಡಿಯೋ ರೆಲೀಸ್ಜ್ ಮಾಡಲಾಗಿದೆ ಎಂಬ ಮಾತು ಇದೆ . .ರಮೇಶ ಜಾರಕಿಹೊಳಿ ಅಭಿಪ್ರಾಯವೂ ಸೇರಿದಂತೆ ರಮೇಶ ಜಾರಕಿಹೊಳಿ ರಾಜಕಾರಣವನು ತಟಸ್ಥ ಗೊಳಿಸಲು ಹಾಗೂ ಈ ಹಿಂದೆ ಸಮಿಶ್ರ ಸರ್ಕಾರವನ್ನು ಕೆಡುವವಲ್ಲಿ ಕಾರಾಣೀಕರ್ತ ರಾಗಿದ್ದ ಅದರ ಮೇಲಿನ ಸಿಟ್ಟಿನಿಂದ ಈ ರೀತಿಯಲ್ಲಿ ಖೆಡ್ಡಾಕ್ಕೆ ಉರುಳಿಸಲಾಯಿತೇ ಎಂದು ಹೇಳಲಾಗುತ್ತಿದೆ . ಒಂದು ಹಂತದಲ್ಲಿ ಜಾರಕಿಹೊಳಿ ಇಮೇಜ್ ಡ್ಯಾಮೇಜ್ ಮಾಡಲು ಈ ಕ್ರತ್ಯ ವನ್ನು ಮಾಡಲಾಗಿತ್ತೆಯಾದರೂ , ವಿಡಿಯೋದಲ್ಲಿ ಇರುವ ವ್ಯಕ್ತಿ ಮಾತ್ರ ಜಾರಕಿಹೊಳಿ ಎಂದು ನಂಬಲೇ ಬೇಕಾಗಿದೆ .ಇದು ಸತ್ಯ !ಇದನ್ನು ಅವರು ಒಪ್ಪಿಕ್ಕೊಳ್ಳುತ್ತಿಲ್ಲ!!
ಮಹಾನಾಯಕ ಡಿಕೆಶಿ ?
ಪ್ರಕರಣದ ಹಿಂದೆ ಮಹಾನಾಯಕ ನಿದ್ದಾನೆ ಎಂದು ನೇರವಾಗಿ ಹೇಳುತ್ತಿದ್ದ ಜಾರಕಿಹೊಳಿ ಅಂತೂ ಕೊನೆಗೂ ಮೊನ್ನೆ ಮೊನ್ನೆ ರಿವೀಲ್ ಮಾಡಿದ್ದರು ಅದು ಡಿಕೆ ಶಿವಕುಮಾರ್ ಎಂದು . ಇದಕ್ಕೆ ಪುಷ್ಟಿ ನೀಡುವಂತೆ ಯುವತಿಯ ಜೊತೆ ಅವಳ ಸಹೋದರ ಮಾತಾಡಿದ ಕಾಲ್ ರೆಕಾರ್ಡ್ ಕೂಡಾ ಪುರಾವೆಯನ್ನು ಒದಗಿಸಿತ್ತು ಇನ್ನು ಸೋಷಿಯಲ್ ಮೀಡಿಯಾದಲ್ಲಿ ಡಿಕೆಶಿ ಜೊತೆಗೆ ಸಿಡಿಯಲ್ಲಿರುವ ಯುವತಿ ಹಾಗೂ ಅದಕ್ಕೆ ಸಹಕರಿಸಿದರೆಂದು ಕೇಳಿ ಬರುತ್ತಿರುವ ಇಬ್ಬರು ಫೋಟೋ ಗಳು ಹರಿದಾಡುತ್ತಿತ್ತು . ಯುವತಿಯ ಪೋಷಕರು ನೇರವಾಗಿ ಆರೋಪವನ್ನು ಮಾಡುತ್ತಿದ್ದಾರೆ ಮಗಳನ್ನು ಡಿಕೆಶಿ ತನ್ನ ರಾಜಕೀಯ ತೆವಲಿಗೋಸ್ಕರ ಬಳಸುತ್ತಿದ್ದಾರೆ ಎಂದು ಇದನ್ನೆಲ್ಲಾವನ್ನು ಗಮನಿಸಿದರೆ ಎಲ್ಲೋ ಡಿಕೆಶಿ ಹಸ್ತಕ್ಷೇಪ ಇರಬಹುದೇ ಎಂಬ ಅನುಮಾನ ಕಾಡುತ್ತಿದೆ.
ಗೊಂದಲ ಎಬ್ಬಿಸುತ್ತಿರುವ ಯುವತಿಯ ಹೇಳಿಕೆ : ವಿಡಿಯೋ ರಿಲೀಜ್ ಕಂಡು ಒಂದಷ್ಟು ದಿನಗಳ ಕಾಲ ಮೌನ ವಾಗಿದ್ದ ಯುವತಿ ಇತ್ತೀಚಿಗೆ ವಿಡಿಯೋಗಳ ಮೂಲಕ ಗೊಂದಲದ ಹೇಳಿಕೆಯನ್ನು ನೀಡಲಾರಂಭಿಸಿದ್ದಾಳೆ ಮೊದಲಿಗೆ ತಮ್ಮ ಕುಟುಂಬದವರೆಗೆ ಜೊತೆ ಫೋನ್ ಸಂಭಾಷಣೆಯಲ್ಲಿ ಇದೆಲ್ಲಾ ಫೇಕು,ನಾನು ಅಂತವಳಲ್ಲ ಗ್ರಾಫಿಕ್ಸ್ ಮೂಲಕ ಸೃಷ್ಟಿಸಲಾಗಿದೆ ಎಂದೆಲ್ಲಾ ಉಸಿರಿದ್ದಳು . ರಮೇಶ್ ಜಾರಕಿಹೊಳಿ ನನಗೆ ಸರ್ಕಾರಿ ಕೆಲಸ ನೀಡುತ್ತೇನೆಂದು ಎಂದು ಅತ್ಯಾಚಾರ ಮಾಡಿದ್ದಾರೆ ಎಂದು ನಂತರ ಹೇಳಿಕೆ ಕೊಡುತ್ತಾಳೆ . ಮೇಲ್ನೋಟಕ್ಕೆ ವಿಡಿಯೋ ಈತ ಳಿಂದಲೇ ರೆಕಾರ್ಡ್ ಆಗಿದ್ದರೂ , ರಮೇಶ್ ಜಾರಕಿ ಹೋಳಿ ನೇ ವಿಡಿಯೋ ಮಾಡಿದ್ದಾರೆ ಎಂದು ಹೇಳುತ್ತಿದ್ದಾಳೆ . ನಾನು ಈಗ ನನ್ನ ಸ್ನೇಹಿತ ನ ಜೊತೆ ಡಿಕೆಶಿ ಮನೆಯಲ್ಲಿ ಇದ್ದೇನೆ ಗೋವಾಕ್ಕೆ ಹೋಗ್ತಾ ಇದ್ದೇವೆ ಎಂದು ತನ್ನ ಸಹೋದರನಿಗೆ ಕರೆ ಮಾಡಿದಾಗ ಹೇಳುತ್ತಾಳೆ . ಒಟ್ಟಾರೆ ಗೊಂದಲದ ಹೇಳಿಕೆಗಳ ಮಧ್ಯೆ ಇದೀಗ ಜಗದೀಶ್ ಎನ್ನುವ ಲಾಯರ್ ನ್ನು ಗೊತ್ತು ಮಾಡಿ ,ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾಳೆ ., ಎಸ್ ಐಟಿ ಪ್ರಶ್ನೆ ಕೇಳುತ್ತಿದೆ ಅವರಿಗೆ ತೃಪ್ತಿದಾಯಿಕ ವಾದ ಉತ್ತರ ಕೊಡುತ್ತಿಲ್ಲ ಎಂಬ ಆರೋಪ ವಿದೆ . ಇನ್ನೂ ಯುವತಿಯ ಪೋಷಕರು ಮಾಡುವ ಆರೋಪ ದಲ್ಲಿ ಹುರುಳಿಲ್ಲ ಜಾರಕಿಹೊಳಿ ಅವರಲ್ಲಿ ಹೇಳಿಸುತ್ತಿದ್ದಾರೆ ,ದಿನೇಶ್ ಕಲ್ಲಹಳ್ಳಿ ಕೇಸನ್ನು ವಾಪಸು ಪಡೆಯಲು ಸಹಾ ಇವರೇ ಕಾರಣ ಎಂದೆಲ್ಲಾ ಯುವತಿಯ ಟೀಮ್ ಹೇಳುತ್ತಿದೆ ., ಒಟ್ಟಾರೆ ತಿಂಗಳು ಕಳೆಯುತ್ತಾ ಬಂದರೂ , ತಾರ್ಕಿಕ ಅಂತ್ಯ ಕಾಣುತ್ತಿಲ್ಲ ಮೀಡಿಯಾಗಳಿಗೆ ಒಳ್ಳೆಯ ವಸ್ತು ಸಿಕ್ಕಿದೆ . ಹಲವರು ಅಡಿ-ಗಡಿಗೆ ಕೇಳಿ ,ಕೇಳಿ ಕಿರಿ -ಕಿರಿಯಲ್ಲಿ ರೋಸಿ ಹೋಗಿದ್ದಾರೆ . ಹೈಡ್ರಾಮಾಗೆ ಯಾವಾಗ ಫುಲ್ ಸ್ಟಾಪ್ ಸಿಗತ್ತೋ ಕಾದು ನೋಡಬೇಕಾಗಿದೆ .
ಶುಕ್ರವಾರ, ಮಾರ್ಚ್ 19, 2021
ಕಿಸಾನ್ ಕೀ ಆಂದೋಲನಾ ಎಷ್ಟು ಸರಿ ?
ಕೇಂದ್ರ ಸರ್ಕಾರದ 3 ರೈತ ಕಾಯ್ದೆಯನ್ನು ವಿರೋಧಿಸಿ ದಿಲ್ಲಿಯಲ್ಲಿ ಹೋರಾಟನಿರತ ರೈತರು ಮಂಕಾದರೆ ಎಂಬ ಗುಮಾನಿ ಹಬ್ಬುತ್ತಿದೆ .ತಮ್ಮಿಂದ ಸರ್ಕಸ್ ಸಾಧ್ಯವಾಗುವುದಿಲ್ಲ ಎಂದು ಅರಿತು ಹೋಶ್ /ಜೋಷ್ ಕಳೆದು ಕೊಂಡರೇ ?
ಕಳೆದ 2-3ತಿಂಗಳುಗಳಿಂದ ಸಹಸ್ರಾರು ಮಂದಿ ರೈತರೆಂಬ ಹಣೆಪಟ್ಟಿಯಲ್ಲಿರುವವರು ಕೇಂದ್ರ ಸರಕಾರವು ರೈತರಿಗಾಗಿ ತಂದ ಕಾಯ್ದೆಯನ್ನು ವಿರೋಧಿಸಿ ಉಗ್ರ ಹೋರಾಟಕ್ಕೆ ಕಿಚ್ಚು ಹಚ್ಚಿಸಿದ್ದವು ,ಸಾಂಘವಾಗಿ ಸಾಗುತ್ತಿದ್ದ ಹೋರಾಟ ಒಂದಷ್ಟು ಉಗ್ರ ಸ್ವರೂಪವನ್ನು ಪಡೆದು ಕೊಂಡಿತ್ತು, ದೆಹಲಿಯ ಕೆಂಪು ಕೋಟೆಯಲ್ಲಿ ಕೆಂಪು ಧ್ವಜವನ್ನು ಹಾರಿಸಿತ್ತು . ಟ್ಯಾಕ್ಟರ್ ನ್ನು ಹೋರಾಟ ನಿಯಂತ್ರಿಸುತ್ತಿದ್ದ ಪೋಲೀಸರ ಮೇಲೆ ಹಾರಿಸುವಲ್ಲಿ ಮುಂದಾಗಿತ್ತು ,ಭಾರತ್ ಬಂದ್ ಕೂಡಾ ಮಾಡಲಾಗಿತ್ತು , ಹಸಿರು ಶಾಲು ತೊಟ್ಟ ಕಿಡಿಗೇಡಿಗಳು ಇಷ್ಟೆಲ್ಲಾ ಅನಾಚಾರಕ್ಕೆ ಮುನ್ನುಡಿ ಬರೆದಿದ್ದರು .
ರೈತ ಅನ್ನದಾತ .,ನಮ್ಮ ದೇಶದಲ್ಲಿ ರೈತರಿಗೆ ಹಾಗೂ ಸೈನಿಕರಿಗೆ ಇರುವಷ್ಟು ,ಕೊಡುವಷ್ಟು ಗೌರವ -ಘನತೆ ಮತ್ಯಾರಿಗೂ ಇಲ್ಲಾ ಅವರುಗಳೇ ನಿಜವಾದ ಹೀರೋಗಳು ,ಭೂಮಿ ಪುತ್ರ ,ಅನ್ನ ನೀಡುವ ದೇವರುಗಳು ಎಂಬಿತ್ಯಾದಿ ವ್ಯಾಖ್ಯಾನ ಗಳಿರುವ ರೈತ ನಿಜಕ್ಕೂ ಇಷ್ಟೊಂದು ಉಗ್ರ ರೂಪ ತಾಳು ವನೇ ? ಇಲ್ಲಾ..! ಅಸಾಧ್ಯದ ಮಾತು., ನಷ್ಟ /ಕಷ್ಟವನ್ನು ಕಂಡ- ಬೆಂದ ಜೀವವದು ಅವರಿಗೆ ರೂಢಿಯಾಗಿ ಬಿಟ್ಟಿದೆ .ತಾವು ಬೆಳೆಯುವ ಬೆಳೆಯಲ್ಲಿ ನಷ್ಟವೇ ಹೊರತು ಲಾಭ ಅಲ್ಪ ಪ್ರಮಾಣದ್ದು ಎಂಬುದು . ಮಾರುಕಟ್ಟೆಯಲ್ಲಿ ಉತ್ತಮ ಬೆಂಬಲ ಬೆಲೆ ಇದ್ದರೂ , ರೈತರಿಗೆ ಮಾತ್ರ ನಾಲ್ಕಾಣೆಯಷ್ಟೂ ಲಾಭ ವಿಲ್ಲಾ . ಎಲ್ಲಾವೂ ಮಧ್ಯವರ್ತಿಗಳ ಪಾಲು . ಅವರುಗಳ ಜೋಳಿಗೆ ಮಾತ್ರ ತುಂಬುತ್ತದೆ . ಇದೆಲ್ಲವನ್ನು ಮನಗೊಂಡರೇ ಕೇಂದ್ರ ಸರ್ಕಾರದ ಈ ಕಾಯ್ದೆ ರೈತರ ಬದುಕಿಗೆ ಬೆಳಕು ಎನ್ನದೇ ವಿಧಿ ಇಲ್ಲ . ಇದಕ್ಕೆಂದೇ ಒಂದಷ್ಟು ಕಾರ್ಪೊರೇಟ್ ಕಂಪನಿಗಳನ್ನು ನೇಮಿಸಿದ್ದೂ ಅವುಗಳು ರೈತರಿಂದ ನೇರ ಖರೀಧಿ ಮಾಡುತ್ತದೆ ಇಲ್ಲಿ ಮಧ್ಯವರ್ತಿಗಳ ಪ್ರವೇಶ ವಿರುವುದಿಲ್ಲ . ಮಾರುಕಟ್ಟೆ ದರವೇ ರೈತರಿಗೆ ಲಭಿಸುತ್ತದೆ,
ಅಗ್ಗದ ರೀತಿಯಲ್ಲಿ ನಮಗೆ ದುಡ್ಡು ಮಾಡಲು ಸಾಧ್ಯವಿಲ್ಲ ಎಂದು ಆಲೋಚಿಸಿ ಇದರಿಂದ ಕುಪಿತ ಗೊಂಡು ಮಧ್ಯವರ್ತಿಗಳು ಒಂದಷ್ಟು ರೈತರನ್ನು ಎತ್ತಿಕಟ್ಟಿ ಹಾಗೂ ನಕಲಿ ರೈತರನ್ನು ಸ್ರಷ್ಟಿಸಿ ಹೋರಾಟಕ್ಕೆ ಇಳಿದವು ಅಷ್ಟೇ . ನಿಜವಾದ ರೈತರು, ಈ ಯೋಜನೆಯಿಂದ ಸಂತಸ ಗೊಂಡಿದ್ದಾರೆ . ಸಾಕಷ್ಟು ಜನ ಸಾಮಾಜಿಕ ಜಾಲ ತಾಣದಲ್ಲಿ ಸಹಾ ಹೇಳಿಕೊಂಡಿದ್ದನ್ನು ಸಹಾ ನಾವು ಕಣ್ಣಾರೆ ಕಾಣುತ್ತಿದ್ದೇವೆ .
ಇನ್ನೂ ,ಕೆಲವೊಂದು ಬುದ್ಧಿ ಜೀವಿಗಳು ,ಕೇಂದ್ರ ಸರ್ಕಾರದ ವಿರೋಧಿಗಳು ಸಹಾ ಧ್ವನಿ ಗೂಡಿಸಿದ್ದಾರೆ ಎಪಿ ಎಂಸಿ ಮುಚ್ಚಿ ಹೋಗುತ್ತದೆ., ಒಂದಷ್ಟು ಕಾಲದವರೆಗೆ ಉತ್ತಮ ಬೆಲೆ ತೆತ್ತು ,ರೈತರಿಂದ ಬೆಳೆ ಪಡೆಯಲಾಗುತ್ತದೆ . ತದನಂತರ ತಮ್ಮ ಮನಸ್ಸಿಗೆ ತಿಳಿದ ರೀತಿಯಲ್ಲಿ ಖರೀಧಿಸಲಾಗುತ್ತದೆ ಇದರಿಂದ ರೈತರಿಗೆ ನಷ್ಟವೇ ಹೊರತು ರೈತರಿಗೆ ಉಳಿಗಾಲವಿಲ್ಲ ವೆಂದೆಲ್ಲಾ ಆರೋಪದ ಮಳೆಯನ್ನು ಸುರಿಸುತ್ತಿವೆ ., ಇದು ಸತ್ಯಕ್ಕೆ ದೂರವಾದರೂ, ಆ ಸಮಯದಲ್ಲಿ ಅಂತಹ ಪರಿಸ್ಥಿತಿ ಉದ್ಬವಿಸಿದ್ದೇ ಯಾದರೇ ರೈತರು ಬೀದಿಗೆ ಇಳಿಯಬಹುದು ಅದನ್ನು ಬಿಟ್ಟು ಪ್ರಸ್ತುತ, ಇದಕ್ಕೆ ಹಿಂದೇಟು ಹಾಕುವುದು ತರವಲ್ಲ ,ಸರಿಯಲ್ಲ . ಈಗಾಗಲೇ ಈಡೀ ಜಗತ್ತೇ ಮೆಚ್ಚುವಂತಹ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಯಾವುದೇ ಯೋಜನೆಯನ್ನು ರೂಪಿಸುವುದಕ್ಕಿಂತ ಮೊದಲು ಅದರ ಒಳಗುಟ್ಟು ಆಳ -ಅಗಲವನ್ನು ಮನಗೊಂಡೇ ರಚಿತ ವಾಗಿಯೇ ಇರುತ್ತದೆ. ಅಷ್ಟು ಸುಲಭಕ್ಕೆ ಮೋದಿ ಪಡೆ ಹಿಂದೆ ತೆಗೆದು ಕೊಳ್ಳುವ ಕಾರ್ಯಕ್ಕೆ ಕೈ ಹಾಕುವುದಿಲ್ಲ . ಈ ಯೋಜನೆ ಫಲ ಕಾಣುವಲ್ಲಿ ಕೋಟಿ ಕೋಟಿ ರೈತರ ಹಾರೈಕೆಯೇ ಶ್ರೀ ರಕ್ಷೆ ಆಗಿರುವುದರಿಂದ ಕಾಯ್ದೆ ಖಂಡಿತವಾಗಿಯೂ ಹಳ್ಳ ಸೇರದು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)





