ಸೋಮವಾರ, ಡಿಸೆಂಬರ್ 19, 2016
ಬಂಡ ಬ್ರಷ್ಟಚಾರಿಗಳಿಂದಲೇ ಬಡವರು ಬರ್ಬಾದ್ !
ಎಲ್ಲಿಯವರೆಗೆ ಪೂರ್ಣ ಪ್ರಮಾಣದಲ್ಲಿ ಬ್ರಷ್ಟಚಾರಿಗಳು ನಮ್ಮ ಸಮಾಜದಿಂದ ನಿರ್ನಾಮವಾಗುವುದಿಲ್ಲವೋ ಅಲ್ಲಿಯವರಗೆ ದೇಶ ಉದ್ದಾರವಾಗಲು ಸಾಧ್ಯವಿಲ್ಲ, ಬಡವರ ಬರ್ಬಾದ್ ತನ ಮುಂದುವರಿಯತ್ತಲೇ ಇರುತ್ತದೆ . ಅದಿಲ್ಲವೆಂದರೆ ಹೀಗಾಗುತ್ತದೆಯೇ ? ದೇಶ ಕಂಡ ಅಪ್ರತಿಮ ಜನ ಸೇವಕ ಪ್ರಧಾನಿ ನರೇಂದ್ರ ಮೋದಿ ದೊಡ್ಡ ನೋಟುಗಳನ್ನು ನಿಷೇಧ ಮಾಡಿ ಕಾಳ ಧನ ಕರಗಿ ಹೋಗಿ ಮುಂದೊಂದು ದಿನ ಭಾರತ ಮಾದರಿ ದೇಶವಾಗಿ ಬಡಬಲ್ಲಿಗರಿಗೆ ಆಶ್ರಯವಾಗುತ್ತದೆ ಎಂದು ಅದ್ಭುತ ಸಾಹಸಕ್ಕೆ ಕೈ ಹಾಕಿದರೆ ಥೂ !ನಾಚಿಕೆ ಗೆಟ್ಟವರು ಹಣದ ಹಿಂದೆ ಅಂಡಿಲೆಯುವ ನೀಚ ಹೀನ ಮನಸ್ಥಿತಿಯ ರಕ್ತ ಬೀಜಾಸುರನ ಸಂತತಿ ಬ್ರಷ್ಟಾಚಾರಿಗಳು ಬಿಡಬಲ್ಲರೆ ?!.ಕಂತೆ ಕಂತೆ ಹೊಸ ಹೊಸ ನೋಟುಗಳು ಐಟಿ ದಾಳಿಯಲ್ಲಿ ದಿನ ನಿತ್ಯ ಸಿಗ್ತಾನೆ ಇವೆ . ಸಾಮಾನ್ಯ ಒಬ್ಬ ವ್ಯಕ್ತಿ ದಿನವೀಡಿ ಕ್ಯೂ ನಲ್ಲಿ ನಿ೦ತರೂ 2500 ರೂ ATM ನಲ್ಲಿ ದೊರಕುದು ಕಷ್ಟ . ವಾರಕ್ಕೆ 24000 ರೂ. ಕಿಂತ ಮೇಲೆ ಹಣ ಸಿಗೋಲ್ಲ .. ಇಂತಿರುವಾಗ ದಿನ ನಿತ್ಯ ಈ ಪರಿಯ ಕೋಟಿ ಕೋಟಿ ಹೊಸ ಹೊಸ ನೋಟು ಕಂತೆಗಳು ಸೀಜ್ ಆಗ್ತಾ ಇವೆಯಲ್ಲ ? ಇಷ್ಟೊಂದು ಪ್ರಮಾಣದ ಇಷ್ಟು ದಿನಗಳಲ್ಲಿ ಬ್ಯಾಂಕ್ ಮುಂದೆ ಕಾವಲು ಕಾಯದೇ ನೇರವಾಗಿ ಇವರ ಬಚ್ಚಲ ಮೆನೆಯಿ೦ದ ಹಿಡಿದು ಮಲಗುವ ಹಾಸಿಗೆ ಕೆಳಗೆ ಸಿಗೋದು ಅಂದ್ರೆ ತಮಾಷೆನಾ ?
ಬೆಂಕಿ ಇಲ್ಲದೇ ಹೋಗೆ ಯಾಡುತ್ತದೆಯೇ ? ಚಾಪೆಯಡಿಯಲ್ಲಿ ನುಸುಳುವ ಯೋಜನೆ ಜಾರಿಗೆ ತಂದರೂ ಕೆಲವರ ರಂಗೋಲಿ ಯಡಿ ನುಸುಳುವ ಜಾಯಮಾನದ ಜಾಣ್ಮೆಯನ್ನು ಮೆಚ್ಚಲೇ ಬೇಕು !! ಇವರುಗಳಿಂದ ಹೇಗೆ ದೇಶದ ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯ ? ಕೆಲವು ಬ್ಯಾಂಕ್ ಉದ್ಯೋಗಿಗಳು ಬ್ಯಾಂಕ್ ಮೇನೇಜರ್ ಗಳು ಹೊಡೆಯದೇ ಬಡಿಯದೇ ಕೂತಲ್ಲೇ (ಬೆವರು ಹರಿಸದೇ ) ಕಮಿಷನ್ ವ್ಯವಹಾರದಲ್ಲಿ ತಮ್ಮ ಚಾಕಚಕ್ಯತೆಯನ್ನು ತೋರಿದ್ದರಲ್ಲ ಶೇಮ್ ! ಕೊಂಚ ಮನಸಾಕ್ಷಿ ಇದ್ದರೆ ಅಬಲರಿಂದ ವ್ರದ್ದರರೂ ಬಿಸಿಲಿನಲ್ಲಿ ತಮ್ಮ ದೈನಂದಿನ ಕೆಲಸ ಕಾರ್ಯವನ್ನು ಬಿಟ್ಟು ಕ್ಯೂ ನಲ್ಲಿ ನಿಂತು ತಮ್ಮ ಹಣವನ್ನು ಎಕ್ಸ್ ಚೆ೦ಜ್ ಮಾಡುವ ಪರಿಯನ್ನು ಒಮ್ಮೆ ನೋಡಿ, ಕನಿಕರ ವಿದ್ದರೆ ಕಂಬನಿ ಖಂಡಿತವಾಗಿಯೂ ಉದುರುತ್ತವೆ .ಅವರುಗಳಿಗೆ ಸಾಧ್ಯವಾದರೆ ಸಹಕಾರ ನೀಡಿ ಅದನ್ನು ಬಿಟ್ಟು ಯಾವುದೇ ಕಷ್ಟವಿಲ್ಲದೇ ಪರ್ಸೆಂಟ್ ಲೆಕ್ಕದಲ್ಲಿ ದೊಡ್ಡ ಕುಳಗಳಿಗೆ ಹಣ ಅಡಗಿಸುವುದಕ್ಕೆ ಸಾಥ್ ನೀಡುತ್ತಿದ್ದಿರಲ್ಲ ? ಛೆ ! ನಾಚಿಕೆ ಆಗಬೇಕು.. ದಿಕ್ಕಾರವಿರಲಿ ಇಂತಹ ವ್ಯವಸ್ಥೆಗೆ !!!.ಇದು ಕೇವಲ ಮನಿಮಾಫಿಯಾದ ಬಗಗೆಗಿನ ವಿಚಾರವಲ್ಲ , ಯಾವುದೇ ಒಂದು ಯೋಜನೆ ಬಂದರೂ ಫಲಾನುಭವಿಗಳಿಗೆ ಸಿಗುವುದು ಎಳ್ಳು ಪ್ರಮಾಣ ಮಾತ್ರ .. ಉದಾಹರಣೆಗೆ ಒಂದು ರೂಪಯಿ ಅಕ್ಕಿ ಬಡವನಿಗೆ ಸೇರುವುದು ಎಲ್ಲೋ 30% ಮಾತ್ರ . ಲೋಡ್ ಗಟ್ಟಲೇ ಬೇರೆ ಗೋಡಾನ್ನಿಗೆ ಸರಬರಜಾಗುವುದು ಗುಟ್ಟೆನಲ್ಲ ..! ಒಂದು ರಸ್ತೆಯ ಗುತ್ತಿಗೆ ಕಾರ್ಯವೂ ಅಷ್ಟೇ 100% ಬಜೆಟ್ ನಲ್ಲಿ ಅವರಿವರ ಕೈ ಸೋಕಿ ಕೊನೆಗೆ ನಿರ್ಮಾಣವಾಗುವದು ಕೇವಲ ಹೆಚ್ಚೆಂದರೆ 25% ಮೊತ್ತದಲ್ಲಿ ಮಾತ್ರ ....ಸಿಂಹಪಾಲು ಸಂಬಂದ ಪಟ್ಟವರ ಖಜಾನೆಗೆ ಜಮಾವಣಯಾಗುತ್ತದೆ. ಇದೆಕ್ಕೆಲ್ಲಾ ಕೊನೆ ಎಂದು ? ಮಟ್ಟ ಹಾಕುವವರು ಯಾರು ? ಯಾವ ಕಾನೂನಿನಡಿ ಇದು ಸಾದ್ಯ ? ಮೋದಿ ಯಿಂದಲೇ ಸಾಧ್ಯವಿಲ್ಲ ಅಂದ ಮೇಲೆ ಇದನ್ನು ಇನ್ಯಾರಿಂದ ನಿರೀಕ್ಷಿಸಬಹುದು ? ಐಟಿ ದಾಳಿ ಆಗಿದೆ ..ಆಗ್ತಾನೂ ಇದೆ ಅಂದ ಮಾತ್ರಕ್ಕೆ ಒಂದಿಷ್ಟು ತಪ್ಪಿತಸ್ತರು ಬಲೆಗೆ ಬಿದ್ದಿದ್ದಾರೆ ಅಷ್ಟೇ !! ಇನ್ನು ಗುಟ್ಟಾಗಿ ಅದೆಷ್ಟೋ ತಿಮಿಂಗಿಲಗಳು ನಮ್ಮ ಸುತ್ತಾ ಮುತ್ತಾ ಮೂಲೆ ಮೂಲೆಗಳಲ್ಲಿ ಇದ್ದಾವೆ.. ಇದ್ದೆ ಇರುತ್ತವೆ . ಈ ರಹಸ್ಯವನ್ನು ಪೂರ್ಣ ಪ್ರಮಾಣದಲ್ಲಿ ಪತ್ತೆ ಹಚ್ಚುವುದು ಕಠಿಣವೇ ಸರಿ . ಎಲ್ಲಿಯವರೆಗೆ ಭಂಡ ಬಕಾಸುರ ವಂಶದ ಬ್ರಷ್ಟಚಾರಿಗಳು ನಿರ್ನಾಮವಾಗುತ್ತಾರೋ ಅಲ್ಲಿಯವರೆಗೆ ನಡಿತಾನೆ ಇರುತ್ತೆ .. ಏನೂ ಮಾಡಲು ಸಾಧ್ಯವಿಲ್ಲ ಕೊನೆಯಾದಾಗಿ ಒಂದು ಮಾತು ಬೆಂಕಿಯ ಪಕ್ಕ ಬೆಣ್ಣೆಯನ್ನು ಇಡಬಾರದು ಅಷ್ಟೇ !!!
ಶುಕ್ರವಾರ, ಡಿಸೆಂಬರ್ 16, 2016
ಮುಗಿಯಿತೇ ಜಯಮ್ಮ ನಿನ್ನ ಕಾಲ ?
ಯಾರೂ ಕೂಡಾ ಊಹಿಸಿರಲು ಸಾಧ್ಯವಿಲ್ಲ .ತಮಿಳುನಾಡಿನ ‘’ಪುರುಚ್ಚಿ ತಲೈವಿ’’ ಎಂದೇ ಖ್ಯಾತಿ ಪಡೆದ ಅಮ್ಮ ಅಂದೇ ದೇಶದಾದ್ಯಂತ ಜನಪ್ರೀಯರೂ ಆಗಿದ್ದ, ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಇನ್ನಿಲ್ಲ .ಎಲ್ಲವೂ ದಾಖಲೆಗಳು ! ಹುಟ್ಟಿನಿ೦ದ ಸಾವಿನ ತನಕವೂ ದಾಖಲೆಗಳ ಸರದಾರ್ತಿ. ಯಾರೂ ಕೂಡಾ ಅಂದಾಜಿಸಲಾಗದ ವಿಚಿತ್ರ ಸಂಗತಿಗಳು ಜಯಲಲಿತಾ ಸುತ್ತಾ ಇವೆ . ಕರ್ನಾಟಕದಲ್ಲಿ ಹುಟ್ಟಿ ತಮಿಳು ನಾಡಿನಲ್ಲಿ ಅನಭಿಷೆಕ್ತ ದೊರೆಯಾದ ಜಯಲಲಿತಾ ಬಾಲ್ಯ ಅಷ್ಟೊಂದು ಚೆನ್ನಾಗಿರಲಿಲ್ಲವಂತೆ .ಬಾಲ್ಯದಲ್ಲೇ ಸಾಕಷ್ಟು ಕಷ್ಟಪಟ್ಟು ಶಾಲಾ ಜೀವನದಲ್ಲಿಯೇ ಉತ್ತಮವಾಗಿ ವಿಧ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿದ್ದರೇ,ಯಾರೂ ಕೂಡಾ ಎಣಿಸಿರಲಿಕ್ಕಿಲ್ಲ ಜಯಲಲಿತ ಪೇಮಸ್ ಹಿರೋಯಿನ್ ಆಗ್ತಾಳೆ ಅಂತ , ಹೆಚ್ಚೇನು ಮುಖ್ಯಮಂತ್ರಿ ಸೀಟು ಸಹಾ ಅರಸಿಕೊಂಡು ಆರಿಸಿಕೊಂಡು ಬರಲಿಕ್ಕೆ ಜಾಸ್ತಿ ಸಮಯ ಬೇಕಾಗಿರಲಿಲ್ಲ. ತಾನು ಮುಟ್ಟಿದ್ದೆಲ್ಲಾ ಸಕ್ಸಸ್ ಆಗುತ್ತೆ ಅಂತ ಖುದ್ದು ಜಯಲಲಿತಾಗೂ ಕೂಡಾ ಗೊತ್ತಿರಲಿಕ್ಕಿಲ್ಲ .ರಾಜಕಾರಾಣಿಯಾಗಿ ಯಾರೂ ಮಾಡದ ಕಾರ್ಯದಲ್ಲಿ ಸಫಲರಾಗುತ್ತಾಳೆ . “ಜನ ಸೇವೆಯೇ ಜನಾರ್ಧನ ಸೇವೆ” ಎಂದು ಜನರನ್ನು ಪಾಲಿಸಿ ಪೋಷಿಸುತ್ತಾಳೆ , ಅಮ್ಮ ಎಂದೇ ಜನ ಜನಿ ಳಾಗುತ್ತಾಳೆ .ಎಲ್ಲಾ ದಾಖಲೆಯನ್ನು ತನ್ನ ಹೆಸರಲ್ಲಿ ಬರೆದು ಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ . ತನ್ನ ಸಾವು ಕೂಡಾ ಒಂದು ದಾಖಲೆ ಆಗುತ್ತದೆ ಎಂದು ಸ್ವರ್ಗದಲ್ಲಿರುವ ಜಯಲಲಿತಾಗೆ ಗೊತ್ತಿರಲಿಕ್ಕಿಲ್ಲ !. ಎಲ್ಲವೂ ಸಾರ್ವಕಾಲಿಕ ದಾಖಲೆ !!!.
74 ದಿನ ಆಸ್ಪತ್ರೆಯಲ್ಲಿದ್ದರೂ ಸಾಯುವಂತ ಕಾಯಿಲೆ ಖಂಡಿತವಾಗಿಯೂ ಬಾಧಿಸುತ್ತಿತ್ತೆ ?ಪ್ರಾಣಕ್ಕೆ ಕುತ್ತು ತರುತ್ತಿರುವ ಕಾಯಿಲೆ ಇದ್ದರೂ ಮೇಲ್ನೋಟಕ್ಕೆ ಪಬ್ಲಿಕ್ ಗೆ ಪಬ್ಲಿಕ್ ಆಗಿಲ್ಲ. ಸುಧಾರಿಸಿದ್ದಾರೆ ಅಂತದ್ದೇನೂ ಇಲ್ಲ ಎಂದು ವೈದ್ಯಕೀಯ ಮೂಲಗಳು ಹೇಳಿದ್ದೆ ಹೇಳಿದ್ದು ..ಇದು ನಿಜವೇ ? ಸಾವಿನ ದವದೆಯಲ್ಲಿದ್ದರೂ ವೈದ್ಯರು ಪ್ರಚಾರಿಸಿಲ್ಲ ಯಾಕೆ ? ಒಂದು ಪಕ್ಷದಲ್ಲಿ ಕಾಯಿಲೆ ಮಿತಿ ಮೀರಿದ್ದೆ ಯಾದರೇ ವಿದೇಶ ಆಸ್ಪತ್ರೆಯನ್ನು ಅವಲಂಬಿಸುವುದು ಸಾಮನ್ಯವಾಗಿ ಸೆಲೆಬ್ರೇಟ್ ಗಳು ಹಿಂದಿನಿಂದಲೂ ನಡೆದುಕೊಂಡು ಬಂದ ರೀತಿ ..ಆದರೆ ಅಲ್ಲಿಗೆ ರವಾನೆ ಆಗಿಲ್ಲ ಯಾಕೆ ? ಜಯ ಆಪ್ತರೇ ಜಯಲಿತರನ್ನು ಇಲ್ಲವಾಗಿಸಿ ಬಿಟ್ಟರೆ ?? ಎಲ್ಲವೂ ಪಿಸು ಪಿಸು !! ಒಟ್ಟಾರೆ ಗೊಂದಲದ ಗೂಡು ಆಷ್ಟೇ !..ಅನೀರಿಕ್ಷಿತವಾಗಿ ಅಮ್ಮ ಕಾಲವಾಗಿದ್ದಾರೆ . ಏನೇ ಇರಲಿ ಇಂತಹ ಅದ್ಭುತ ರಾಜಕಾರಣಿಯನ್ನು ದೇಶ ಅಗಲಿದೆ .
ಬಾಲ್ಯ ದಿಂದಲೂ ಹಿಡಿದ ಕಾರ್ಯವನ್ನೆಲ್ಲಾ ಸಕ್ಸಸ್ ನಲ್ಲಿ ಕಾಣುತ್ತಾ ಕಷ್ಟದಿಂದ ಬಂದು ಸುಖ ಸಂಸಾರ ಬೇಡ ವೆಂದು ಒಬ್ಬಂಟಿಯಾಗಿ ಜೀವನ ಸಾಗಿಸುತ್ತಾ ತಮಿಳ ಪಾಲಿಗೆ ಅಮ್ಮನಾದ ಜಯಲಲಿತಾ ರಂತಹ ರಾಜಕಾರಿಣಿ ಭಾರತಕ್ಕೆ ಸಿಗುವುದು ಬಹಳ ಅಪೂರೂಪ. ಹಿಂದಿಲ್ಲ ಮುಂದೆ ಕೂಡಾ ಇ೦ತವರು ಕಾಣಸಿಗರು ಎಂದು ಎದೆ ತಟ್ಟಿ ಹೇಳಬಹುದು. ತಮಗೆ ಮಾತ್ರವಲ್ಲದೇ ಮರಿ ಮಕ್ಕಳವರೆಗೆ ಆಗುವಷ್ಟು ಸoಪತ್ತನ್ನು ಕೂಡಿಟ್ಟು ಅನೈತಿಕವಾಗಿ ರಾಜಕಾರಣ ಮಾಡುವ ಜನಪ್ರತಿನಿಧಿಗಳು ನಮ್ಮ ಮುಂದೆ ಸಹಸಾರು ಜನ ಇದ್ದಾರೆ ಆದರೆ ಅದ್ಯಾವುದೂ ಗೊಡವೆ ಇಲ್ಲದೇ ಜನಗಳೇ ನನ್ನ ಕುಟುಂಬದವರು ರೆಂದು ಕೇವಲ ಬಾಯಿ ಮಾತಿಗೆ ವೋಟ್ ಬೇಡಿಕೆಗೆ ಉಪಯೋಗಿಸದೇ ಪ್ರತ್ಯಕ್ಷವಾಗಿ ತೋರಿಸಿದ ದಿಟ್ಟ ಮಹಿಳೆ ಈಕೆ . ಅದೆಷ್ಟು ಸೌಲಭ್ಯ ಅದೆಷ್ಟು ಯೊಜನೆಗಳ ಮೂಲಕ ಬಡವರ ನಿರಾಶ್ರಿತರ ಪರವಾಗಿ ನಿಂತಾಕೆ . ಸ್ವಂತ ನೆಲ ಕರ್ನಾಟಕವಾದರೂ ನೀರಿಗಾಗಿ , ತಮ್ಮ ನೆಲದ ಜನಗಳಿಗಾಗಿ , ಕರ್ನಾಟಕದ ವಿರುದ್ಧ ತೊಡೆ ತಟ್ಟಿ ಕಾವೇರಿ ನೀರಿಗಾಗಿ ಸುಪ್ರ್ರಿಂ ಕೋರ್ಟ್ ಮೆಟ್ಟಿಲೇರಿ ಕರುನಾಡ ಜನರ ಹೆಗೆಗೆ ಒಳಗಾಗಿ ಕಾವೇರಿ ನೀರನ್ನು ತಮಿಳರಿಗೆ ಕುಡಿಸಿದಾಕೆ !!
ಮಹಿಳೆಯರು ಮಕ್ಕಳು ವ್ರದ್ಧರು ನಡೆಯಲಿಕ್ಕೆ ಸಾಧ್ಯವಾಗದವರೂ ಕೂಡಾ ಅಮ್ಮ ಅಮ್ಮ ಎಂದು ಅಮ್ಮನಿಗಾಗಿ ಎಳೆ ಮಗು ಗೋಳಿಡುವ ರೀತಿಯಲ್ಲಿ ರೋಧಿಸುವ ದ್ರಶ್ಯವೇ ಸಾರಿ ಹೇಳುತ್ತಿದೆ, ಅಮ್ಮನ ಕೀರ್ತಿಯೆಲ್ಲಿಯರೆಗೆ ಕೊಂಡು ಒಯಿದಿದೆ ಎಂದು . ಈ ಚಿತ್ರಣ ನಾವು ನಿನಿಮಾಗಳಲ್ಲಿ ಅಲ್ಲ ನೈಜ ಜೀವನದಲ್ಲಿ ಅಂದರೆ ಅರ್ಥವಾಗುತ್ತದೆ ಜಯಲಲಿತಾರ ಪಾರದರ್ಶಕ ಆಡಳಿತ ವ್ಯವಸ್ಥೆ ಅದೆಷ್ಟು ಜನಪೋಯೋಗಿ ಆಗಿತ್ತು ಎಂದು . ಇಂತಹ ಚಿತ್ರಣವನ್ನು ದೇಶದ ಯಾವುದೇ ಮೂಲೆಯಲ್ಲಿ ಸಹಾ ಕಾಣಲಿಕ್ಕೆ ಸಾಧ್ಯವಿಲ್ಲ . ಒಟ್ಟಾರೆ ಇದನ್ನೆಲ್ಲಾ ಇಷ್ಟು ದಿನ ಅನುಭವಿಸಿದ ತಮಿಳುರು ಅದೃಷ್ಟವಂತರು ಎಂದರೂ ಅತಿಶಯೋಕ್ತಿಯಾಗಲಾರದು .
ಒಂದು ಕಾಲದಲ್ಲಿ ಅಂದ್ರ ಪ್ರದೇಶದ ಮುಖ್ಯ ಮಂತ್ರಿಯಾಗಿದ್ದ ವೈಎಸ್ ರಾಜಶೇಖರ್ ರೆಡ್ಡಿ ಕಾಲದಲ್ಲೂ ಸಹಾ ಇಂಥದ್ದೇ ಒಂದು ಅಭಿಮಾನವನ್ನು ಅವರು ಸಂಪಾದಿಸಿದ್ದರು .. ಹೆಲಿಕಾಪ್ಟರ್ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ್ದರು. ತದನಂತರದ ಅಲ್ಲಿನ ರಾಜಕೀಯ ಬೆಳವಣಿಗೆ ಎಷ್ಟು ಕುಲಗೆಟ್ಟು ಹೋಗಿತ್ತು ಎಂಬುದರ ಬಗ್ಗೆ ಬೆಳಕು ಚೆಲ್ಲುವುದರ ಅಗತ್ಯವಿಲ್ಲ ಅದೆಷ್ಟು ನೀಚ ಮಟ್ಟಕ್ಕೆ ರಾಜಕೀಯ ಹೋಯಿತು ಅಂದ್ರೆ ,ಒಂದೇ ರಾಜ್ಯ ಎರಡು ಹೋಳುಗಳಾಗಿ ಪರಿವರ್ತನೆ ಗೊಂಡಿತು ಅ೦ತದ್ದೆ ಪರಿಸ್ತಿತಿ ತಮಿಳು ನಾಡಿಗೂ ಕೂಡಾ ದೂರವಿಲ್ಲ . ಗಟ್ಟಿತನ ರಾಜಕೀಯ ವ್ಯವಸ್ಥೆ ಕೈಕೊಟ್ಟಂತೆ ಇದೆ . ಅಮ್ಮನ ಕಾಲದಲ್ಲಿ ಸುಖಿಗಳಾಗಿದ್ದ ಪ್ರಜೆಗಳಿಗೆ ದುಖದ ದಿನ ದೂರವಿಲ್ಲ ಎನ್ನಬಹುದೇನೋ ?! ಕಾಲವೇ ಉತ್ತರ ಹೇಳಬೇಕು !
ಕೊನೆಯಾದಾಗಿ ಒಂದೇ ಮಾತು
ಮುಗಿಯತೇ ಜಯಮ್ಮ ನಿನ್ನ ಕಾಲ?
ಹುಟ್ಟಿದ್ದು ಕರುನಾಡಿನಲ್ಲಿ
ಹೆಸರುಗಳಿಸಿದ್ದು ತಮಿಳು ನಾಡಿನಲ್ಲಿ
ಜಾಣೆಯಾಗಿ ವಿದ್ಯಾಭ್ಯಾಸದಲ್ಲಿ ಎತ್ತಿದ ಕೈ
ಅಭಿನೇತ್ರಿಯಾಗಿಯೂ ಚಿತ್ರರಂಗದಲ್ಲಿ ಸೈ
ಕಷ್ಟದಲ್ಲಿ ನೀ ಎದ್ದು ಬಂದೆ
ಸಂಸಾರ ಸುಖ ಬೇಡ ವೆಂದೆ
ಜನ ಸೇವೆಗೆ ಬದುಕು ಮುಡುಪಾಗಿಟ್ಟೆ
ಜನ ಮಾನಸದಲ್ಲಿ ಆರಾಧ್ಯ ದೈವ ಆಗಿಬಿಟ್ಟೆ
ಹೆಸರಲ್ಲೇ ಇತ್ತು ಜಯ
ಅದಕ್ಕೇನೋ ಹಿಡಿದ ಕಾರ್ಯವೆಲ್ಲ ವಿಜಯ
ತಮಿಳಿನ ಪುರುಚ್ಚಿ ತಲೈವಿ ನೀನಾದೆ
ದೇಶದಾದ್ಯಂತ ಅಮ್ಮನಿಗೆ ಅನ್ವರ್ಥಳಾದೆ
ಮುಗಿಯತೇ ಜಯಮ್ಮ ನಿನ್ನ ಕಾಲ?
ಇನ್ನ್ಯಾರು ತಮಿಳರಿಗೆ ಅಭಯದ ಬಲ ?
ಶನಿವಾರ, ಡಿಸೆಂಬರ್ 3, 2016
ದೇವರ ನಾಡಿನಲ್ಲಿ ದೇವಾಲಯದ ಸ್ಥಿತಿ ಎಲ್ಲಿಗೆ ಬಂದು ನಿಂತಿದೆ ?
ದೇವರ ಸ್ವಂತ ನಾಡು ಕೆರೆಯಿಸಿ ಕೊಳ್ಳುವ ಉತ್ತರ ಭಾರತದ ಪುಟ್ಟ ರಾಜ್ಯ ಕೇರಳ . ಹೌದು !ಹಲವು ಧರ್ಮೀಯರ ನಾಡು ಭಾರತದಲ್ಲಿ ಅತೀ ಹೆಚ್ಚು ಮಠ ಮಂದಿರ ಸೇರಿದಂತೆ ಹಲವಾರು ಧಾರ್ಮಿಕ ಸ್ಥಳವನ್ನು ಹೊoದಿರುವುದು ಕೇರಳ ಬಿಟ್ಟರೆ ಬೇರಾವುದೂ ಇಲ್ಲ ಅದಕ್ಕಾಗಿಯೇ ಏನೋ , ದೇವರ ಸ್ವಂತ ನಾಡು ಎಂದು ಪ್ರಖ್ಯಾತಿ ಪಡೆದಿದೆ .
ಕೇವಲ ಹಿಂದೂ ಧರ್ಮ ಮಾತ್ರವಲ್ಲದೇ ಮಾರಿಗೊಂದು ಚರ್ಚ್ ಮಸ್ಜಿದ್ ಗಳೂ ಕಾಣ ಸಿಗುತ್ತವೆ ಇದರರ್ಥ ಸಮಭಾವ ಸಮ್ಮಿಲನ ದೊಂದಿಗೆ ಧಾರ್ಮಿಕ ಚಟುವಟಿಕೆ ಅದರ ರೀತಿ ನೀತಿಯೇ ಎಂಬ ತಳ ಹದಿಯಲ್ಲಿ ನಡೆಯುತ್ತಿದೆ., ನಡೆಯಲ್ಪಡುತ್ತದೆ. ಅದು ಹಿಂದಿನಿಂದಲೂ ನಡೆದು ಕೊಂಡು ಬಂದ ಪದ್ಧತಿ. ಕೇರಳದಲ್ಲಿರುವ ಶಬರಿಮಲೈ ಸ್ವಾಮೀ ಅಯ್ಯಪ್ಪ ದೇವಸ್ಥಾನದ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ ಎಲ್ಲಾರಿಗೂ ಗೊತ್ತಿರುವ ವಿಚಾರ ಹನ್ನೆರಡು ವರ್ಷದ ದಾಟದ ಹಾಗೂ 40 ವರ್ಷಗಳ ಮೇಲಿನ ,ಮಹಿಳೆಯರಿಗೆ ಮಾತ್ರ ಶ್ರೀಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಪ್ರವೇಶ .ಇದು ಪರಂಪರಾಗತವಾಗಿ ನಡೆದು ಕೊಂಡು ಬಂದಿರುವ ಅಚಾರ ವಿಚಾರ . ಅದರ ಹಿಂದಿನ ಕಥೆಯನ್ನೂ ಇಲ್ಲಿ ಅರಹಬೇಕಾಗಿಲ್ಲ ಸಮಸ್ತ ಸಮಾಜವೂ ಅರಿತಿರುವ ಸಂಗತಿ ,ಆದರೆ ಅದ್ಯಾಕೋ ಗೊತ್ತಿಲ್ಲ ಇತ್ತೀಚಿಗಿನ ದಿನಗಳಲಿ ಕೇರಳ ರಾಜ್ಯವು ಹೈಕೋರ್ಟ್ ನಿಂದ ಹಿಡಿದು ಸುಪ್ರಿಂ ಕೋರ್ಟ್ ವರೆಗೂ ಸಹಾ ಮಹಿಳೆಯರ ಪ್ರವೇಶಕ್ಕೆ ಅನುವು ಮಾಡಿ ಕೊಡಬೇಕೆಂಬ ಅತಿಯಾಸೆಯಸಾಹಸಕ್ಕೆ ಕೈ ಹಾಕಿದೆ
ಇದರ ಪರ ವಾದ -ವಿವಾದ ಇನ್ನೂ ನಡೆಯುತ್ತಲೇ ಇದೆ . ಮುಂದೆ ಇದು ಯಾವ ದಿಕ್ಕಿನಲ್ಲಿ ತೀರ್ಪು ಪಡೆದು ಕೊಳ್ಳುತದೋ ಗೊತ್ತಿಲ್ಲ. ಸಾಮನ್ಯವಾಗಿ ಎಲ್ಲಾರಲ್ಲೂ ಮೂಡುವುದು ಒಂದೇ ಮಹಿಳೆಯರಿಗೆ ಪ್ರವೇಶ ಬೇಡ ತಲತಲಾಂತರ ದಿಂದ ಬಂದಿರುವ ಈ ಸುಸಂಸ್ಕ್ರತಿ ,ಸಂಪ್ರದಾಯವನ್ನು ಒಮ್ಮೆಲೇ ಮುರಿಯುವುದು ಸರಿಯಲ್ಲ ಎಂಬುದು.ಮುಂದೆ ಇದರ ವಿರುದ್ದವಾಗಿ ಸುಪ್ರಿಂ ಕೋರ್ಟ್ ನಿಂದ ತೀರ್ಪು ಬಂದರೂ ಅಚ್ಚರಿ ಇಲ್ಲ. ಯಾಕೆಂದರೆ ನಿನ್ನೆ ಇನ್ನoತ್ತದ್ದೆ ಒಂದು ಮಾಹಾನ್ ತೀರ್ಪು ಹೊರಬಂದಿತ್ತು . ಈ ಮೊದಲೇ ನಾನು ಹೇಳಿದಂತೆ ದೇವರ ಸ್ವಂತ ನಾಡು ಎಂದು ತನ್ನ ಅಸ್ತಿತ್ವವನ್ನು ಉಳಿಸಿ ಕೊಂಡ ಬಂದಿರುವುದಕ್ಕೆ ಅಲ್ಲಿನ ಭಕ್ತರ ಧಾರ್ಮಿಕ ಪ್ರಜ್ಞೆ ದೇವರ ಮೇಲಿಟ್ಟಿರುವ ನಂಬಿಕೆ ವಿಧಿವಿಧಾನಗಳು ಬೇರೆಲ್ಲೂ ಕಾಣ ಸಿಗದು .ಇಲ್ಲಿ ಯಾವುದೇ ಒಂದು ದೇವಸ್ಥಾನದ ಒಳ ಪ್ರವೇಶಾತಿಗೆ ಪುರುಷರು ಅಂಗಿ –ಬನಿಯಾನ್ ನ್ನು ತೆಗೆಯದೇ ಒಳ ಹೋಗುವಂತಿಲ್ಲ ಇನ್ನು ಕೆಲವೊಂದು ದೇವಸ್ಥಾನಗಳಲ್ಲಿ ಪುರುಷರು ಅಂಗಿಯನ್ನು ತೆಗೆಯುವುದರ ಜೊತೆಗೆ ಲುಂಗಿ-ಪಂಚೆಯನ್ನು ಧರಿಸಲೇ ಬೇಕು ಹಾಗೂ ಮಹಿಳೆಯರು ಕಟ್ಟುನಿಟ್ಟಾಗಿ ಸೀರೆಯನ್ನು ಧರಿಸಿರಬೇಕು ,ಚೂರಿದಾರ್ ಇದ್ದರೆ ಅದರ ಮೇಲೆ ಪಂಚೆ ಅಥವಾ ದೋತಿ- ಲುಂಗಿಯನ್ನು ಕಡ್ಡಾಯವಾಗಿಉಡಲೇ ಬೇಕು ಆಗ ಮಾತ್ರ ಪ್ರವೇಶ ಕಲ್ಪಿಸಲಾಗುತ್ತದೆ ಇದು ಇಂದಿನದಲ್ಲಾ ಸಾಕಷ್ಟು ದಶಕ ಗಳಿಂದ ನಡೆದು ಕೊಂಡು ಬಂದಿರುವ ಪದ್ಧತಿ . ನಿನ್ನೆ ಸುಪ್ರಿ ಕೋರ್ಟ್ ನಿಂದ ಒಂದು ತೀರ್ಪು ಹೊರಬಿದ್ದಿದೆ ಕೇರಳದ ರಾಜಧಾನಿ ತಿರುವನoತಪುರಂಲ್ಲಿರುವ ಅನಂತ ಪದ್ಮನಾಭ ದೇಗುಲದಲ್ಲಿ (ಚಿನ್ನ ಸಿಕ್ಕಿ ಜಗತಿನಾದ್ಯಂತ ಖ್ಯಾತಿ ಪಡೆದ ಮಂದಿರ ) ಮಹಿಳೆಯರು ಲುಂಗಿಯನ್ನು ಬಳಸದೇ ಚೂರಿದಾರ್ ರಿಂದಲೇ ನೇರವಾಗಿ ಪ್ರವೆಶಿಸಬಹುದೆಂದು , ಸುಪ್ರಿಂ ಕೋರ್ಟ್ ಗೆ ತೆಲೆಕೆಟ್ಟಿದೆ !! ,ಹಾಗಂತ ಭಕ್ತರೇ ನೀವೇಕೆ ಹೀಗೆ ? ಧಾರ್ಮಿಕತೆಯನ್ನು ಉನ್ನತ ಸ್ತರದಲ್ಲಿ ಮೇಳೈಸಿಕೊಂಡು ಬಂದಿರುವ ಭಾರತೀಯ ಅದರಲ್ಲೂ ಕೇರಳದಲ್ಲಿ ಈ ನೀತಿ ಜಾರಿಗೆ ಬಂದಿರುವುದು ಅಕ್ಷ್ಯಮ! ಸಹಿಸುವನ್ತದ್ದಲ್ಲ ಧಾರ್ಮಿಕತೆಗೆ ಪೆಟ್ಟು ನೀಡಿದಂತಾಗಿದೆ ತಲೆ ತಲಾಂತರ ದಿಂದ ನಡೆದು ಕೊಂಡು ಬಂದಿರುವ ಪದ್ದತಿಗೆ ಬೆಲೆ ಇಲ್ಲದಂತಾಗುತ್ತದೆ . ಸಮಾಧಾನ ಇಷ್ಟೇ ಈ ಬಗ್ಗೆ ಪ್ರಜ್ಞಾವಂತ ತಾಯಿ ಸಹೋದರಿಯರು ಈ ರೋಲ್ಸ್ ಗೆ ಒಗ್ಗಿ ಕೊಳ್ಳಲಿಲ್ಲ ಕೇರಳದಲ್ಲಿ ಹರತಾಳ ನಡೆಯುತ್ತಿದೆ ಆದಷ್ಟು ಬೇಗ ಈ ನೀತಿಯನ್ನು ಕೋರ್ಟು ಹಿಂತೆದುಕೊಳ್ಳಬೇಕು . ಅದಿಲ್ಲದಿದ್ದರೆ ದೇವರ ಸ್ವಂತ ನಾಡಿನಲ್ಲಿ ದೇವರಿಗೆ ಬೆಲೆ ನೆಲೆ ಇಲ್ಲದಂತಾಗುತ್ತದೆ ಇನ್ನು ಉಳಿದ ದೇಗುಲ ಸಹಾ ತೂಗುಯ್ಯಾಲೆಯಲ್ಲಿರುತ್ತವೆ ಕಲಿಯುಗದ ಬ್ರಹ್ಮಚಾರಿ ಮಾಣಿಕ೦ಟನಿಗೂ ಸಹಾ ಮುಂದೆ ಕಂಟಕ ತಪ್ಪಿದ್ದಲ್ಲ ಭಕ್ತರೆ ಎಚ್ಚೆತ್ತು ಕೊಳ್ಳಿ ಇದು ಕೇವಲ ಕೆರಳಿಗರಲ್ಲದೇ , ಭಾರತೀಯರಾದ ನಾವುಗಳು ದೇಗುಲದ ಸ್ಥಿತಿ ಅದೊಗತಿಗೆ ಬಾರದಂತೆ ಖಂಡಿಸಬೇಕು ,ಕೈ ಜೋಡಿಸಿ ದೇಗುಲಗಳ ಉದ್ದಾರಕ್ಕೆ ಪಣ ತೊಡಬೇಕಾಗಿದೆ .

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)