ಸ೦ವಿಧಾನದ ನಾಲ್ಕನೆಯ ಅಂಗವಾಗಿರುವ ಪತ್ರಿಕೊದ್ಯಮ ನಮ್ಮಲ್ಲಿ ಬಹಳಷ್ಟು ಬೆಳೆದಿದೆ.ದೇಶದ ಪ್ರಪ್ರಥಮ ವ್ರತ್ತ ಪತ್ರಿಕೆ 'ದಿ ಬೆಂಗಾಲ್ ಬಜೆಟ್
'ನಿಂದ ಹಿಡಿದು ನಮ್ಮ
, ಕರ್ನಾಟಕದ' ಮಂಗಳೂರು ಸಮಾಚಾರ'
ದ ಕ್ರಪಾಕಟಾಕ್ಷ ದಿಂದ ಅದೆಷ್ಟೊ ಬಗೆ -ಬಗೆ ಯ ಪತ್ರಿಕೆ ನಮ್ಮಲ್ಲಿ ಅರಳಿದೆ
ಮತ್ತು ಅಳಿದಿದೆ .ಪರಭಾಷೆಗೆ ಹೊಲಿಸಿದರೆ,ಕನ್ನಡ ಎಲ್ಲೂ
ಕಂಡು ಕೇಳರಿಯದ ರೀತಿಯಲ್ಲಿ ವಿವಿಧ ದಾಖಲೆ ಗಳೊಂದಿಗೆ ಇತಿಹಾಸ ನಿರ್ಮಿಸುತ್ತಿದೆ .ಕನ್ನಡ ಸಾಹಿತ್ಯ ಪರಂಪರೆಯನ್ನು ಕಾಯ್ದು ಕೊಂಡು
ಬರುವಲ್ಲಿ ದಿನ ಎರುಹೊತ್ತಿನ ಆವ್ರತ್ತಿ ,ವಾರ ,ಪಾಕ್ಷಿಕ ,ಮಾಸಿಕ ಹೀಗೆ ಇನ್ನೂ
ಮುಂತಾದ ವಿಧ -ವಿಧ ವಾದ ರೀತಿಯಲ್ಲಿ ಒದುಗರರ ಅಭಿರುಚಿಗೆ ತಕ್ಕಂತೆ ಸೂಕ್ಷ್ಮ ,ಸೂಕ್ತ ,ರಹಸ್ಯಮಯ ವರದಿಯಿಂದ ಹಿಡಿದು, ಕಥೆ, ಲೇಖನ
,ಕವಿತೆ,ಕವನ ಉತ್ತಮ
ಚಿತ್ರಸುದ್ದಿಯನ್ನು ಉಣಬಡಿಸಿ ಕನ್ನಡ
ಸಾಹಿತ್ಯ ಕೋಶ ದ ಸಾಮಥ್ಯ ವನ್ನು ಬಾನೆತ್ತರಕ್ಕೆ ಪಸರಿಸುವಲ್ಲಿ ದಶಕಗಳಿಂದ ತಮ್ಮನ್ನು ಸಂಪೂರ್ಣ ವಾಗಿ ತೊಡಗಿಸಿಕೊಳ್ಳುತ್ತಿರುವ ಸಂಪಾದಕ ಅದರಲ್ಲೂ ಲೆಖಕರಾಗಿಯೂ ಪತ್ರಿಕೊದ್ಯಮವನ್ನು ಅವಲಂಸಿರುವವರ ಸಂಖ್ಯೆ ಅಪಾರ. ಒಂದು ಪತ್ರಿಕೆ ಯನ್ನು
ಬಿಡುಗಡೆ ಗೊಳಿಸಿ ಅದನ್ನು
ನಡೆಸಿಕೊಂಡು ಹೋಗುವುದು ಎಂದರೆ
ಸಾಮನ್ಯ ವಿಷಯವಲ್ಲ. ಅದರ ಇಕ್ಕಟ್ಟು-ಬಿಕ್ಕಟ್ಟು ತುಡಿತ-ಮಿಡಿತ ಸಂಪಾದಕ ಪ್ರಕಾಶಕರಿಗೆ ಗೊತ್ತು .ದ್ರಶ್ಯಮಾಧ್ಯಮಗಳ ಭರ-ಭರಾಟೆ
ನಡುವೆ ಸ್ವಧಾತ್ಮಕ ರೀತಿಯಲ್ಲಿ ಆಧುನಿಕ
ಜಗತ್ತಿನ ಎರಿಳೀತದಲ್ಲಿ ದಿನಕ್ಕೊಂದರಂತೆ ಪತ್ರಿಕೆಗಳು ಜನ್ಮತಾಳುತ್ತಿವೆ. ಒದುಗರರ ಒಮ್ಮತ
ದ ಕಾಣಿಕೆ ಬಹುಶ:
ಪತ್ರಿಕೊದ್ಯಮದಲ್ಲಿ ಈ ಪತ್ರಿಕೆಗಳು ಮಿಂಚಲು ಕಾರಣವಾಗಿರ ಬಹುದು .ಒಂದು ಪತ್ರಿಕೆ ಎಂಬುದು
ನಾಡಿನ ಸುತ್ತಾಮುತ್ತಾ ಘಟಿಸುತ್ತಿರುವ ವರದಿಯನ್ನು ಬೆಳಿಗ್ಗೆ ಚಾಹ ದೊಂದಿಗೆ ನಂಜಿಕೊಳ್ಳುವಂತದ್ದಲ್ಲ. ಸಾರ್ವಜನಿಕ ಹಿತಾಸಕ್ತಿ ,ಸಾಮಾಜಿಕ ಕಾರ್ಯಗಳಿಗೆ ಕೈಂಕರ್ಯ ವನ್ನು
ತೊಡುವಂತದ್ದು. ಕನ್ನಡ ಸಾಹಿತ್ಯ ಲೋಕದಲ್ಲಿ ಓದುಗರರ ಸ್ರಜನಾತ್ಮಕ ,ಸಚ್ಚಾರಿತ್ರ್ಯ ಭರಿತ ,ಅರಿಯದ
ವಿಚಾರವನ್ನು ಅರಿಯುವಲ್ಲಿ ಚಿಂತನಾಶೀಲ ಆಯಾಮವನ್ನು ಕರುಣಿಸುವಂತದ್ದು.ಮನೋರಂಜನಾತ್ಮಕ ವಿಚಾರಧಾರೆಯನ್ನು ಉಣಬಡಿಸುವಂತದ್ದು. ಮಾನವೀಯ
ಸಾಧಕ ವರದಿ ಗಳನ್ನು
ನೀಡುವಲ್ಲಿ ಸಕರಾತ್ಮಕವಾದ ಹೆಜ್ಜೆಯನ್ನು ಪಡಿಮೂಡಿಸುವಂತದ್ದು .ಸಮಾಜ ಕಂಟಕತನವನ್ನು ತಿದ್ದಿ ಸಮಾಜದ
ಮೌಲ್ಯವನ್ನು ಎತ್ತಿ ಹಿಡಿಯುವಲ್ಲಿ ಸಹಭಾಗಿತ್ವವನ್ನು ವಹಿಸುವದು .ನಮ್ಮಲ್ಲಿ ಹೆಚ್ಚಿನ ಪತ್ರಿಕೆಗಳು ಇದರಲ್ಲಿ ಬಾಗಿಯಾಗಿದ್ದರೆ ಕೆಲವು ಪತ್ರಿಕೆಗಳು ತಮ್ಮ ಸ್ವಾರ್ಥಪರಿಧಿಯಲ್ಲಿಯೇ ಸುತ್ತುತ್ತಿದೆ .'ಲೇಖನಿ ಖಡ್ಗಗಿಂತ ಹರಿತ 'ವಾದದ್ದು ಎಂಬ ಮಾತಿದೆ ನಿಜಕ್ಕೂ ಇದು ವಾಸ್ತವಾರ್ಹ ವಿಚಾರವೂ ಹೌದು ಲೇಖನಿ ಮೂಲಕ ಸಮಾಜ ಕಂಟಕವನ್ನು ಮಟ್ಟಹಾಕುವ ಆಯುಧವಾಗಿರುವ ಪತ್ರಿಕೆಯ ಇನ್ನೊಂದು ಮುಖ ಎಂದರೆ
ಕ್ರೈಂ ಪತ್ರಿಕೆ ಎಂದು ಗುರುತಿಸಬಹುದು .ಒಂದು ಕ್ರೈಂ ಪತ್ರಿಕೆಯನ್ನು ನಡೆಸ ಬೇಕೆಂದರೆ ಸಂಪಾದಕರು /ಪ್ರಕಾಶಕರು ಮಾನಸಿಕವಾಗಿ ,ದೈಹಿಕವಾಗಿ ಪ್ರಭಲರಾಗಿರಲೇ ಬೇಕು .ಸಾಮಾನ್ಯವಾಗಿ 'ಸೆರಗಿನಲ್ಲಿ ಕೆಂಡ ಕಟ್ಟಿ ಕೊಂಡಂತೆ 'ಎಂದರೂ
ತಪ್ಪಲ್ಲ .ಲೇಖನಿಗೆ ಆಹಾರವಾದ ಅದೆಷ್ಟೋ ಸಮಾಜ ಕಂಟಕರ
,ಅಪರಾಧಿಗಳ ,ಕೋಪ -ಶಾಪ ವನ್ನು ಅರಗಿಸಿಕೊಳ್ಳಲೇಬೇಕು ಒಂದು ಪಾರ್ಶ್ವದಲ್ಲಿ ಯೋಚಿಸಿದರೆ ಉತ್ತಮ ಈ ವಿಭಾಗದ ಪತ್ರಕರ್ತನಿಗೆ ಒಂದು ಸುರಕ್ಷಾ ಸಮಸ್ಯೆ ಎದ್ದು
ಕಾಣುತ್ತದೆ .ಪತ್ರಿಕಾಲಯಕ್ಕೆ/ವರದಿಗೆ ತೆರಳಿದವನು ಮನೆಗೆ ವಾಪಸ್ಸು ಬರುತ್ತಾನೆಂದು ಯಾವುದೇ ವಿಶ್ವಾಸ ಸಹಮನ: ಪಟಲದಲ್ಲಿ ನೆಲೆಸಿರೂದೆ ಇಲ್ಲ .ಇಂತಹ ತ್ರಿಶಂಕು ಪರಿಸ್ಥತಿಯ ನಡುವೆಯೂ ಎಲ್ಲಾ ಭಯ -ಬೀತಿ ಯನ್ನು ಬದಿಗೊತ್ತಿ ಕರ್ತವ್ಯ ನಿರ್ವಹಿಸುವ ,ಕೊಂಚ ಮಟ್ಟಿಗಾದರೂ ಸಮಾಜದ ಹಿತ ಕಾಪಾಡುವಲ್ಲಿ ಅಳಿಲು ಸೇವೆ ಮಾಡುವ ಪತ್ರಕರ್ತರು ಇದ್ದಾರೆ೦ಬುದೇ, ಹೆಮ್ಮೆಯ ವಿಚಾರ .ನೂರಕ್ಕೆ ಒಬ್ಬರಂತೆ ಇಂತವರುಗಳು ತೆರೆಮರೆಯಲ್ಲಿ ಕಾಣ ಸಿಕ್ಕರೂ ,ಇನ್ನು ಊರಿನ ಉಸಾಬರಿ ನಮಗ್ಯಾಕೆ ನಮ್ಮ ಸುರಕ್ಷೆ ನಮಗೆ ಮುಖ್ಯ
ಎನ್ನುವ ಮಹಾನುಭಾವರು ಹಲವರು .ಇನ್ನು ಕೆಲವರು ನಡವಳಿಕೆ ಯನ್ನು ಗಮನಿಸುತ್ತಿದ್ದರೆ , ಬಹಳ ಬೇಸರ ಅನ್ನಿಸುತ್ತದೆ .ಸ್ವಾಮಿ ಕಾರ್ಯದ
ಜೊತೆಗೆ ಸ್ವ ಕಾರ್ಯವನ್ನೂ ಪೂರ್ಣಗೊಳಿಸುವವರೂ ಇದ್ದಾರೆ .ಒಂದು ಪತ್ರಿಕೆ ಅಥವಾ ಅದರ ವರದಿಗಾರ ಒಬ್ಬ ಅಪರಾದಿಯನ್ನು ಆತನ ಅಹಿತಕಾರಿ ಇತಿಹಾಸವನ್ನು ಬಯಲಿಗೆ ತಂದರೆ ,ಇನ್ನೊಂದು ಪತ್ರಿಕೆ ಆತನನ್ನು ಆತನಿಂದ
ವಿವಿಧ ರೀತಿಯ ಲಾಭಾಂಶವನ್ನು ಪಡೆಯುವ ಸಲುವಾಗಿ ಆತ ಒಳ್ಳೆಯಯವನು ಎಂದು ಬೇಕಾಬಿಟ್ಟಿ ಇಲ್ಲ /ಸಲ್ಲದ ವಿಚಾರವನ್ನು ಕ್ರೋಡಿಕರಿಸಿ ಅಟ್ಟಕ್ಕೆರಿಸುವ ಪರಿ ನಿಜಕ್ಕೂ ರೋಚಕ .ಇನ್ನು
ಒಬ್ಬ ಉನ್ನತ ವ್ಯಕ್ತಿ (ಗಣ್ಯ ವ್ಯಕ್ತಿ ) ಒಂದು ಅಪರಾಧ ಮಾಡಿದ್ದೂ ಒಂದು ಪ್ರತಿಷ್ಟಿತ ವರದಿಗಾರನ ಅಥವಾ ಅಂತಹ ಪತ್ರಿಕೆಯ ಬಂಧು ಎಂಬುವವನ ಕಣ್ಣಿಗೆ ಸಿಕ್ಕರೆ ಸಾಕು ಆ ವರದಿಗಾರ ಆ ಉನ್ನತ ವ್ಯಕ್ತಿ ಯನ್ನು ಬ್ಲಾಕ್ ಮೇಲ್ ಮಾಡುದಕ್ಕೆ ತಲ್ಲಿಣನಾಗುತ್ತಾನೆ .ಇಂತಹ ಒಂದು ದಂದೆಯೂ ಸಹ ಪತ್ರಿಕೋದ್ಯಮದ ತೆರೆಮೆರೆಯಲ್ಲಿ ಕಾಣ ಸಿಗುತ್ತಿದೆ .ಇನ್ನು ತಮಗೆ ಆಗದಿದ್ದವರನ್ನು ಕಂಡರೆ
ಸಾಕು ಲೇಖನಿ ಮೂಲಕವೇ
ಕೊಲ್ಲುವಷ್ಟು ಕ್ರೂರತನವೂ ಸಹಾ ಆಜ್ ಕಾಲ್ ಜಮಾನ ದಲ್ಲಿ ಮಿತಿ ಮೀರುತಿದೆ .ಕ್ರೈಂ ಪತ್ರಿಕೆ ಎಂಬ ಹಣೆಪಟ್ಟಿ ಯಲ್ಲಿ ವಿರಮಿಸುತ್ತಿರುವ ಹಲವಾರು
ಪತ್ರಿಕೆಗಳು ಸೀಮಿತವಾಗಿ ವಾರ,ಪಾಕ್ಷಿಕ ,ಮಾಸಿಕ ಎಂಬ ಸಂಚಿಕೆ
ಯಡಿ ಕಾರ್ಯ ನಿರ್ವಹಿಸುತಿರುವದು ವಾಡಿಕೆ
ಯಲ್ಲಿದ್ದರೂ,ಕೆಲವೊಂದು ಪತ್ರಿಕೆ ಗಳು ಅಮಾವಾಸ್ಯೆ ಹುಣ್ಣಿಮೆ ಯಾದರೂ
ಪ್ರಕಟಣೆ ಗೊಳ್ಳದಿರುವದು ಬೇಸರದ ವಿಚಾರ .ಪತ್ರಕರ್ತನಿಗೂ ಹಾಗೂ ವರದಿ ಗಾರನಿಗೂ ಗಜ -ಗಜಾಂತರ
ವ್ಯತ್ಯಾಸ ಗಳಿವೆ .ನಿರ್ಧಿಷ್ಟ -ನಿಯಮಿತವಾದ ಸೀಮಿತ ಅವಧಿಯ
ಶಿಕ್ಷಣ ಪ್ರಮಾಣಪತ್ರ ದ
ಅವಶ್ಯಕತೆ ಎಲ್ಲಾ ಕ್ಷೇತ್ರ ಗಳಲ್ಲೂ ಹೊಂದಿದ್ದರೂ ,ಪತ್ರಿಕೋದ್ಯಮಕ್ಕೆ ಬಹುಷ್ಯ
ಇದರ ಅವಶ್ಯಕತೆ ಇಲ್ಲ ಅನ್ನಬಹುದು .5 ನೇ ತರಗತಿ ಕಲಿತ ಅದೆಷ್ಟೋ ಪತ್ರಕರ್ತರು ಪತ್ರಿಕೋದ್ಯಮದಲ್ಲಿ ಮಿಂಚಿದ್ದಾರೆ .ಪತ್ರಿಕೆ ,ಪತ್ರಿಕೋದ್ಯಮ ಸಮಾಜದಲ್ಲಿನ ಜ್ಞಾನಕೌಶಲ್ಯ ವನ್ನು ಹೊಂದ್ದಿದ್ದರೆ ,ಪತ್ರಕರ್ತ ನಾಗುವವನಿಗೆ ಅದೇ ಪದವಿ ಯೆನ್ನುದರಲ್ಲಿ ತಪ್ಪಿಲ್ಲ .ಇಂದು ವಿಧ -ವಿಧ ದ ರೀತಿಯಲ್ಲಿ ಶಿಕ್ಷಣ ಪತ್ರಕರ್ತನಿಗೆ ಸಿಗುತ್ತಿದ್ದರೂ ಸಹಾ ಕೆಲವೊಂದು ಪತ್ರಕರ್ತರ ಅಹಿತಕಾರಿ ಚಟುವಟಿಕೆಯಿಂದ ನಿಷ್ಟಾವಂತ ಪತ್ರಕರ್ತನ ಬಗ್ಗೆ ಅವಮಾನ ,ಅಪನಂಬಿಕೆ ಹತಾಶೆ
ಮಡುಗಟ್ಟಿ ನಿಂತಿದೆ .ಮನ ಸೆಳೆಯುತ್ತಿರುವ ಪತ್ರಿಕೋದ್ಯಮದ ಸಹಜ ಸೌಂದರ್ಯ ಕಳೆಗುಂದುತ್ತಿದೆ .ಹಿಂದಿನ ದಿನಗಳಲ್ಲಿ ಪತ್ರಕರ್ತರೆಂದರೆ ಅವರದ್ದೇಯಾದ ಒಂದು ಗೌರವ ಘನತೆಯನ್ನು ಹೊಂದಿರುತ್ತಿದ್ದರು ಅದೇ ಮಾನದಂಡ ದಲ್ಲಿ ವಿಹರಿಸುತ್ತಿದ್ದರು .ಅಂತೆಯೇ
ಜನಾನುರಾಗಿ ಜನಪ್ರಿಯರು ಕೂಡ ಆಗಿದ್ದರು .ಆದರೆ ಇಂದಿನ
ದಿನಗಳಲ್ಲಿ ನಡತೆಯ ಗ್ರಹ ಗತಿ ಯ ಸ್ವಭಾವದ ಕಪಿ ಮುಷ್ಠಿ ಯಲ್ಲಿ
ಪತ್ರಿಕೋದ್ಯಮ ಸಂಕಷ್ಟದ ಹಾದಿಯನ್ನು ಅನುಸರಿಸುತ್ತಿರುವದು ವಿಷಾದಕರ .ಕೊನೆಯದಾಗಿ ಒಂದು ಮಾತು
ಪತ್ರಿಕೆಯ ಸಂಪಾದಕರು ಏನನ್ನು
ಅಪೇಕ್ಷಿಸುತ್ತಾರೆ ,ಪತ್ರಿಕೆ ಎನನ್ನು
ಬಯಸುತ್ತದೆ .ಓದುಗರರ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಪತ್ರಕರ್ತನಾದವನು ಆ ದಿಕ್ಕಿನಲ್ಲಿ ಹೆಜ್ಜೆ ಇಡಬೇಕು ಪತ್ರಿಕೆಗೆ ಮಸಿ ಬಳಿಯುವಂತಹ ,ಪತ್ರಿಕೆ ಮೇಲೆ ಇರುವ ಗೌರವಕ್ಕೆ ಕಪ್ಪು ಚುಕ್ಕೆಯನ್ನಿಡುವಲ್ಲಿ ಹೇಸಿಗೆಯ ದಡ್ಡ ತನದ ಪರಮಾವಧಿಯನ್ನು ಪ್ರದರ್ಶಿಸಬಾರದು .ಪತ್ರಿಕೆಯ ಪ್ರಸಿದ್ಧ ಪ್ರತಿನಿಧಿ ,ಪತ್ರಿಕೆಯ ಜೀವಾಳ
ಎಂದು ನಂಬಿರುವ ಸಂಪಾದಕ
ವರ್ಗಕ್ಕೆ ತಮ್ಮ ಮರ್ಕಟ
ಮನಸ್ಸನ್ನು ತೋರಿಸಬಾರದು .ಸಂಪಾದಕರೂ ಅಷ್ಟೇ
ಕೆಲವು ನಯವಂಚಕ ಪತ್ರಕರ್ತರುಗಳಿಗೆ ಬೆಂಕಿಯ
ಪಕ್ಕ ಬೆಣ್ಣೆಯನ್ನು ಇಡದೇ , ಚಾಣಾಕ್ಷತನದ ಧುರ್ಬಿನ್ ಇಟ್ಟು ಕಾರ್ಯಾಚರಣೆ ಕೈಗೊಳ್ಳಬೇಕು . ಕಾಮಿನಿ -ಕಾಂಚಾಣ ಕ್ಕೆ ಒಳಗಾಗದೇ ಪತ್ರಿಕೋದ್ಯಮ ವಾದ -ವಿವಾದಗಳ ಗೊಬ್ಬರದ ಗುಂಡಿಯಾಗದಂತೆ ನೋಡಿ ಕೊಳ್ಳುವ ಮನಸ್ಸು
ಮನದ ಮೂಲೆಯಲ್ಲಿ ಮೊಳೆಕೆಯೊಡಯಲಿ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ