ಶನಿವಾರ, ಸೆಪ್ಟೆಂಬರ್ 29, 2012

ಈ ತಾರತಮ್ಯ ಯಾಕೆ ?

ಜಾತಿ ,ಧರ್ಮ, ಭಾಷೆ ಬೇರೆ ಯಾದರೂ ,ನೆಲೆ ಒಂದೆ. ಭೂಮಿ ತಾಯಿಯ ಚಾದರದಡಿಯಲ್ಲಿ ನೆಲೆ ಸಿರುವ ನಾವು ಭಾರತೀಯರು ಅಥವಾ ಕರ್ನಾಟಕದವರೇ ಅಲ್ಲವೇ? ಜಾತಿ /ಭಾಷೆ ಯ ವಿಚಾರದಲ್ಲಿ ತಾರತಮ್ಯ ಉಂಟಾಗುತ್ತದೆ ಎಂದರೆ ಬಹಳ ಬೇಸರದ ವಿಚಾರ ಜಾತಿ ಎಂಬ ಪೆಡಂಬೂತ ಸ್ವಾತಂತ್ರ್ಯ ಭಾರತ ದಿಂದಲೂ ಅಂಟಿ ಕೊಂಡು ಬಂದಿದೆ. ಭಾಷ ,ನೆಲೆ ವಿಚಾರದಲ್ಲೂ ಅಷ್ಟೇ .. ಅವರವ ರಾಜ್ಯ ದ ನೆಲೆ ಬೆಲೆ ಯ ತಾಕತ್ತನ್ನು ಎತ್ತಿ ಹಿಡಿಯುವ ಬಯಕೆ ಯಿಂದಲೊ ಏನೋ ನಮ್ಮ ೨೯ -೩೯ ರಾಜ್ಯದ ಲ್ಲಿ ಸಾಮಾನ್ಯ ವಾಗಿಈ ಸಮಸ್ಯೆ ಇರುವಂತದ್ದೇ ..ಆದರೆ ನಮ್ಮ ಕರ್ನಾಟಕದ ಅದರಲ್ಲೂ ಬುದ್ದಿವಂತರ ನಾಡಾದ ಕರಾವಳಿ ಜಿಲ್ಲೆಯಲ್ಲೂ ಈ ತರಹದ ಭಾಷಾ ದೌರ್ಜನ್ಯ ನಡೆಯುತ್ತಿರುವುದು ಶೊಚನೀಯ ಸಂಗತಿ .ಕರಾವಳಿ  ಎಂದ ಕೂಡಲೇ ನೆನಪಾಗುವುದು ಉಡುಪಿ,ಮಂಗಳೂರು. ಜಿಲ್ಲೆಗಳು ಇಲ್ಲಿನ ಪ್ರಾದೇಶಿಕ ಭಾಷೆ ತುಳು , ಹಾಗಾಗಿಯೇನೋ ತುಳು ನಾಡು ಎಂದೇ ಪ್ರಾಖ್ಯಾತಿ ಪಡೆದು ಕೊಂಡಿದೆ. ಕರ್ನಾಟದ ಪ್ರಮುಖ ಜಿಲ್ಲೆಯೂ ಹೌದಾದ್ದರಿಂದ ಕನ್ನಡ ಮಾತ್ರು ಬಾಷೆ. ಆದರೆ ಇಲ್ಲಿನ ಕೆಲವು ಜನರಿಗೆ ಕನ್ನಡವೇ ಗೊತ್ತಿಲ್ಲ. ಗೊತ್ತಿರುವ ಪುಣ್ಯಾತ್ಮರು ಮಾತನಾಡುವ ಕನ್ನಡ ಬಹಳ ವಿಚ್ಚಿಧ್ರಕಾರಿಯಾಗಿರುವುತ್ತದೆ. ಬಸ್ಸು ,ಅಂಗಡಿ ,ಕಛೇರಿ ಸೇರಿದಂತೆ ಎಲ್ಲೆಂದರಲ್ಲಿ ತುಳುವಿನದ್ದೇ ಆರ್ಭಟ. ಹೊರಗಿನ ಜಿಲ್ಲೆಯ ಅಪರಿಚಿತರಿದ್ದರೆ ಈ ಉಭಯ ಪ್ರದೇಶಕ್ಕೆ ಪ್ರಥಮ ಬಾರಿ ಆಗಮಿಸಿದ್ದರಂತೂ ನಿಜಕ್ಕೂ ನಾವೇನೂ ತಪ್ಪಿ ಬೇರೆ ರಾಜ್ಯಕ್ಕೆ ಬಂದಿದ್ದೇವೆನೋ ಎಂಬಂತೆ ಭಾಸ ವಾಗದೆ ಇರಲಾರದು. ಅಪ್ಪಿ ತಪ್ಪಿ ಕನ್ನಡದಲ್ಲಿ ಮತನಾಡಿದರೆ ಮುಗಿಯಿತು ಇವರ ವಕ್ರ ನೋಟ ನಮ್ಮನ್ನು ಹೈರಾಣನಾಗಿಸಿಬಿಡುತ್ತದೆ. ನಮ್ಮ ಅದ್ರುಷ್ಟಕ್ಕೆ ಒಂದೆರಡು ವಾಕ್ಯ ಉಸುರಿದರೂ ಮತ್ತದೇ ತುಳು ವಿಗೆ ಜೋತು ಬೀಳುತ್ತಾರೆ. ಅದು ಅವರ ಅಭ್ಯಾಸ ಬಲ ಬಿಡಿ .ಅದನ್ನೂ ಎನೂ ಮಾಡಲೂ ಅಸಾಧ್ಯ ಪರಿಸ್ತಿತಿ " ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ ಅಂತಾರಲ್ಲ"  ಹಾಗೆ ಉದ್ಯೋಗ, ವಿಧ್ಯಾಭ್ಯಾಸಕ್ಕೆ ಉತ್ತಮ ಕೊಡುಗೈಯಾದ್ದರಿಂದ ಈ ಪ್ರದೇಶವನ್ನು ಆಶ್ರಯಿಸಿರುವವರ ಸಂಖ್ಯೆ ಅಪಾರ . ಮೊದಲೇ ತಿಳಿಸಿರುವಂತೆ ತುಳು ನಾಡಿನಿಂದ ಹೊರಗಿನವರು ಎಂದು ಮನದಟ್ಟಾಗುತ್ತಿದ್ದಂತೆ ಅವರನ್ನು ಬಹಳ ನಿಕ್ರಷ್ಟರನ್ನಾಗಿ ನೋಡಿಕೊಳ್ಳುತ್ತಾರೆ. ಅದೇ ಆ ವ್ಯಕ್ತಿ ತುಳು ತುಳು ಶಬ್ದವನ್ನು ಹೊರಸೂಸಿದರೆ
ಸಾಕು ಹೆಗಲ ಮೇಲೆ ಕೈ ಹಾಕಿ ಮುತ್ತಿಕ್ಕುವ ಪರಿ ಯವರೇಗೂ ಭಾಷಾ ವೈವಿದ್ಯೆತೆ ಮನೆ ಮಾಡಿದೆ. ಕೆಲವು ಪುಂಡರಂತೂ ಘಟ್ಟದ ಮೇಲಿಂದ ಬಂದ ಗೌಡರು ಎಂದೇ ವಾಚಿಸುತ್ತಾರೆ .ಅದನ್ನೇ ಅಡ್ಡಹೆಸರಾಗಿಸಿ ಕೊಂಡು ಅವರನ್ನು ಹಿಯಾಳಿಸುತ್ತಾರೆ. ಹಾಗಂತ ಎಲ್ಲಾರೂ ಅದೇ ನಡವಳಿಕೆ ಯನ್ನು ಹೊಂದಿದವರೇನಲ್ಲ. ಎನೇ ಇರಲಿ ತುಳು ವಿನ ಬಗ್ಗೆ ತುಳು ನಾಡಿನ ಬಗ್ಗೆ ನಾನೇನೂ ವಿರೋಧಿಯೇನಲ್ಲ. ನಾನು ಸಹಾ ಇಲ್ಲಿಯೇ ಹುಟ್ಟಿ ಬೆಳೆದವ.. ಆದರೆ ಈ ಒಂದು ನ್ಯೊನತಾ ಭಾವದಿಂದ ಮನಸ್ಸಿನ ಬೇಸರವನ್ನು ಒಡಲಧ್ವನಿಯಾಗಿ ಹೊರ ಹಾಕಬೇಕಾತಷ್ಟೇ.  ಕೊನೆಯದಾಗಿ ಒಂದು ಮಾತು ಬಾಷಾ ಪ್ರೇಮ ವಿರಲಿ ಜೊತೆಗೆ ಸಾಧ್ಯವಾದಷ್ಟು ಮಾತ್ರು ಬಾಷೆಯೂ ಬಳಕೆ ಯಾಗಲಿ .ಇದು ತುಳು ನಾಡು ಎಂದು ಕರೆಯಿಸಿಕೊಳ್ಳುವ ಮೊದಲು ಕರುನಾಡೆ ಎಂಬ ಮನೋವೈಖರಿ ಎಲ್ಲಾರಲ್ಲೂ ಮನೆಮಾಡಲಿ ,ಬಾಷಾ ದೌರ್ಜನ್ಯ ವನ್ನು ಬಿಟ್ಟಾಕಿ ಎಂಬುದಷ್ಟೇ ನನ್ನ ಮನೋಭಿಲಾಷೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ