ಸೋಮವಾರ, ಅಕ್ಟೋಬರ್ 24, 2022

ಇಂತಹ ಎಡಬಿಡಂಗಿಗಳಿಗೆ ಪ್ರತಿಕ್ರೀಯೆ ನೀಡುವ ಅಗತ್ಯ ವಿಲ್ಲಾ !

'ಕಾಂತಾರ'ಸಿನಿಮಾ ಇನ್ನಿಲ್ಲದ ದಾಖಲೆಗಳನ್ನು ಮಾಡಿ ಮುನ್ನುಗುತ್ತಿದೆ ,ಸೆ 30 ರಂದು ತೆರೆಕಂಡು,ಎಲ್ಲೂ ನೆಗೆಟಿವ್ ಕಾಮೆಂಟ್ ಗಳಿಲ್ಲದೇ ಎಲ್ಲಾ ವರ್ಗದ ಸಿನಿ ವೀಕ್ಷಕರು,ವಿಮರ್ಶಕರೂ ಸಹಾ ೫ ಕ್ಕೆ ನಾಲ್ಕೂವರೆ ರೇಟಿಂಗ್ ಕೊಟ್ಟಿದ್ದಾರೆ. ಸಿನಿಮಾವು ಕೂಡಾ ಅಷ್ಟೇ ಅದ್ಭುತವೂ ಕೂಡಾ ಆಗಿತ್ತು. ದೈವರಾಧನೆ, ಆಚಾರ -ವಿಚಾರ, ನಡೆ-ನುಡಿ, ನೆಲ-ಜನ ಸಂಸ್ಕೃತಿಯನ್ನು ಹೊತ್ತು ತಂದ ನೈಜ ಕಥಾ ಹಂದರವನ್ನು ಹೊಂದಿರುವ ಪೂರ್ಣ ಕುಟುಂಬ ಕುಳಿತು ನೋಡುವಂತಾ ಕಮರ್ಷಿಯಲ್ ಸಿನಿಮಾ ಇದಾಗಿತ್ತು. ಇದಕ್ಕಾಗಿಯೇ ಇಂದು ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ,ಇತರ ಭಾಷೆಗಳಲ್ಲಿ ರಿಮೇಕ್ ಆಗಿ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಮೂಡಿ ಬಂದಿದ್ದು ಇತಿಹಾಸ.ಇಂತಿಪ್ಪ ಸಿನಿಮಾದ ಬಗ್ಗೆ ಮೊನ್ನೆ ಕೆಲಸ ಇಲ್ಲದ ನಾಲಾಯಕ್ ಒಬ್ಬ ನಾಲಿಗೆ ಹರಿ ಬಿಟ್ಟಿದ್ದಾನೆ. ಇಲ್ಲ-ಸಲ್ಲದ ವಿಚಾರಗಳಿಗೆ ಕಾಂಟ್ರವರ್ಸಿ ಕ್ರೀಯೇಟ್ ಮಾಡುವ ಚೇತನ್ ಎಂಬಂತಾ ಕಾಂತಾರ ಸಿನಿಮಾದಲ್ಲಿ ಅಳವಡಿಸಲಾಗಿರುವ ದೈವರಾಧನೆ ಹಿಂದೂ ಧರ್ಮಕ್ಕೆ ಸಂಬಂಧ ಪಟ್ಟಿದ್ದು ಅಲ್ಲ ಅನ್ನುತ್ತಿದ್ದಾನೆ.ವೈದಿಕ, ಭ್ರಾಹ್ಮಣ್ಯ ಮಣ್ಣಾಗಟ್ಟಿ ಎಂದು ವಿಚಾರ ಹೀನ ವಿವಾದ ಎಬ್ಬಿಸುತ್ತಿರುವ ಈತ ಅದೇನೋ ದೊಡ್ಡ ಅತಿರಥನಲ್ಲ ಅಮೇರಿಕಾದಲ್ಲಿ ಜನ್ಮ ತಾಳಿ ಭಾರತದ ನೆಲದಲ್ಲಿ ನೆಲೆನಿಂತ ಕಮ್ಯೂನಿಷ್ಟ್ ಕಮಂಗಿ ಅಂತೆ. 'ಆ ದಿನಗಳು' ಎಂಬ ಸಿನಿಮಾದ ಮೂಲಕ ನಟನಾಗಿ ಗುರುತಿಸಿಕೊಂಡವನು.
ಅದೇನೋ ಆ ದಿನಗಳಲ್ಲಿ ಸ್ವಲ್ಪ ಹೆಸರು ಮಾಡಿತ್ತು ಈತನ 'ಆ ದಿನಗಳು 'ಎಂಬ ಮೂವಿ.ಮತ್ತೆಲ್ಲಾ ಏಕದಂ ಪ್ಲಾಪ್ ! 15 ವರ್ಷಗಳಲ್ಲಿ ಕೇವಲ 4 ಸಿನಿಮಾ ಮಾಡಿ ಬದಿಗೆ ಸೇರಿದ.ಯಾವೊಬ್ಬ ನಿರ್ದೇಶಕನೂ ಅವಕಾಶ ಕೊಡದೇ ಇದ್ದಾಗ ನಾನು ಸಮಾಜ ಸೇವಕ ಎಂಬ ಹಣೆಪಟ್ಟಿ ಕಟ್ಟಿ ಕೊಂಡು ಹೀಗೆ ವಿವಾದ ಮಾಡುತ್ತಲೇ ಬಂದವನು. ಈತನ ವರ್ತನೆಯನ್ನು ವರ್ಣರಂಜಿತವಾಗಿ ತೋರಿಸುವ ಬಿಲಾಸ್ ಬಿಟ್ಟ ಮಾಧ್ಯಮಗಳು ಆತನನ್ನು ದೊಡ್ಡ ಹೀರೊವನ್ನಾಗಿ ಮಾಡಿ ಬಿಟ್ಟಿವೆ. ಆತನ ಸ್ಟೇಟ್ಮೆಂಟ್ ಗೆ ರಿಪ್ಲೇ ಮಾಡುವ ನಾವುಗಳೂ ಸಹಾ ಅದಕ್ಕೆ ಸಾತ್ ಕೊಟ್ಟು ಉರಿಯುತ್ತಿರುವ ಬೆಂಕಿ ತುಪ್ಪ ಸುರಿಸುತ್ತಿದ್ದೇವೆ.ಆತನ ಮಾತಿನಲ್ಲಿ ಎಳ್ಳಷ್ಟೂ ಆರ್ಥವಿಲ್ಲದಾಗ ಅದನ್ನು ಬದಿಗಿರಿಸಿ ಸುಮ್ಮನಾಗಬೇಕು ಅಲ್ವೇ? ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದೇ ? ಗಾದೆ ಮಾತು ಎಷ್ಟು ಸೊಗಸಾಗಲಿದೆ.ನಿನ್ನೆ ಉಂಟಾಗಿದ್ದೂ ಅಷ್ಟೇ ತುಂಬಾ ದಿನಗಳ ನಂತರ ಅಂದರೇ ಮೀಟೂ ವಿವಾದ ಬಳಿಕ ಮತ್ತೆ ಮುಖ್ಯ ವಾಹಿನಿಗೆ ಬಂದಿದ್ದಾನೆ. ಕಾಂತಾರ ಸಿನಿಮಾ ವಿಚಾರಕ್ಕೆ ಸಂಬಂಧಿಸಿ ಟ್ವಿಟ್ ಮಾಡಿದ್ದಾನೆ . ಅವನ ಬಗ್ಗೆ ಎಲ್ಲ ಗೊತ್ತಿರುವ ನಾವುಗಳು ಅದಕ್ಕೆ ಸೊಪ್ಪು ಹಾಕುವುದು ತಪ್ಪು.ತಟಸ್ಥ ನಿಲುವನ್ನು ತೆಳೆಯಬೇಕಿತ್ತು ಅವನ ಅಸಂಬದ್ಧ ಹೇಳಿಕೆಗೆ ಪ್ರತಿಕ್ರೀಯೆ ಕೊಡುವುದು ಮಹಾ ತಪ್ಪು. ಅದು ಕೆಸರು ಅದಕ್ಕೆ ಕಲ್ಲು ಹಾಕಿದ್ರೆ ಅದು ನಮ್ಮ ಮುಖಕ್ಕೆ ಸೀರುವುದು ಅಲ್ವೇ ? ಈ ಕೆಲವು ಮೀಡಿಯಾಗಳಿಗೂ ಕೆಲಸ ಇಲ್ಲ ಈ ತರಹದ್ದೇ ಸುದ್ದಿ ಮಾಡಿ ಟಿ ಆರ್ ಪಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ,ಆತನನ್ನು ಅಟ್ಟಕ್ಕೆ ಏರಿಸಿಬಿಟ್ಟಿವೆ.ಒಂದಷ್ಟು ಹಿಂದೂ ಮುಖಂಡರ ಬಳಿ ಪ್ರತಿಕ್ರೀಯೆ ,ಡಿಬೇಟ್ ಕಾರ್ಯಕ್ರಮವನ್ನೆಲ್ಲಾ ಪ್ರಾರಂಭಿಸಿ ಬಿಟ್ಟಿವೆ.ಮೊಸರಲ್ಲಿ ಕಲ್ಲು ಹುಡುಕುವ ಕಾಂಜಿ ಪಿಂಜಿಗಳಿಗೆಲ್ಲಾ ಸಿನಿಮಾ ನಿರ್ದೇಶಕ ರಿಷಬ್ ಶೆಟ್ಟಿಯ ಉತ್ತರವೇ ಕರೆಕ್ಟ್ . 'ಅದಕ್ಕೆಲ್ಲ ಏನು ಕಾಮೆಂಟ್ ಮಾಡೋಲ್ಲ ' ಇದು ಬುದ್ದಿವಂತರ ಲಕ್ಷಣ.ಅಮೇರಿಕಾದಲ್ಲಿ ಹುಟ್ಟಿ ಭಾರತೀಯ ಧರ್ಮ , ಸಂಸ್ಕೃತಿಯ ಬಗ್ಗೆ ಮಾತನಾಡವ ಯೋಗ್ಯತೆ ಇಲ್ಲದವನಿಗೆ ಪಾಠ ಮಾಡುವ ಅಗತ್ಯ ಇಲ್ಲ.ಕತ್ತೆಗೆನೂ ಗೊತ್ತು ಕಸ್ತೂರಿ ಪರಿಮಳ ಆದರೂ ಕೆಲವಂದಿಷ್ಟು ಮಂದಿ ಮನಸ್ಸು ತಡೆಯಲಾಗದೇ ಆತನಿಗೆ ಸರಿಯಾಗೇ ಟಾಂಗ್ ಕೊಟ್ಟಿದ್ದಾರೆ.ಆತ ಸರಿ ಹೋಗುವುದೇ ಇಲ್ಲ. ಅಷ್ಟಕ್ಕೂ ಆತನೇನೂ ಧರ್ಮ ಪಂಡಿತನಲ್ಲ ವಿದ್ವಾಂಸನಂತೂ ಅಲ್ಲವೇ ಅಲ್ಲ ಇನ್ನಾದರೂ ಇಂತಹ ಎಡಬಿಡಂಗಿಗಳಿಗೆ ಪ್ರತಿಕ್ರೀಯೆ ನೀಡುವ ಅಗತ್ಯ ಇಲ್ಲ ಏನಂತೀರಿ ?

ಮಂಗಳವಾರ, ಅಕ್ಟೋಬರ್ 11, 2022

‘ಕಾಂತಾರ ‘ಕಾಣಲೇಬೇಕಾದ ಸಿನಿಮಾ

ಗಾಂಧೀ ನಗರದ ದಿಕ್ಕನ್ನೇ ಬದಲಾಯಿಸಿದ ಆರ್ ಆರ್ ಆರ್ ಎಂಬ ಕರಾವಳಿಯ ‘ತ್ರಿ’ ನಿರ್ದೇಶಕರು . ಸ್ಯಾಂಡಲ್ ವುಡ್ ಸಿನಿಮಾ ಲೋಕದಲ್ಲಿ ಹೊಸ ಕ್ರಾಂತಿ ಉಂಟಾಗಿದೆ.ಅದ್ಭುತವಾದ ಚಿತ್ರಗಳು ತೆರೆಕಾಣುತ್ತಿದ್ದೂ,ಪರಕೀಯರಿಂದಲೂ ಪ್ರಶಂಸೆಗೆ ಪಾತ್ರವಾಗುತ್ತಿದೆ.ಹೌದು ಕನ್ನಡ ಚಿತ್ರರಂಗ ಗೆದ್ದಿದೆ. ‘ಕೆಜಿಎಫ್ ‘ಯಾರೂ ಊಹಿಸಿರದಂತೆ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದ ಪ್ಯಾನ್ ಇಂಡಿಯಾ ಸಿನಿಮಾ.ಅದೇ ಸಂಸ್ಥೆಯಿಂದ ನಿರ್ಮಾಣಗೊಂಡ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಅಲ್ಲದಿದ್ದರೂ,ಎಲ್ಲರ ಮನ ಮುಟ್ಟಿದೆ ಕೇವಲ ರೀಲೀಜ್ ಆಗಿ ವಾರ ಕಳೆದಿಲ್ಲ ಹೌಸ್ ಫುಲ್ ಕಾಣುತ್ತಿದೆ.ಎಲ್ಲಾ ಭಾಷೆಗಳಲ್ಲಿಯೂ ಡಬ್ಬಿಂಗ್ ಗೊಳ್ಳುತ್ತಿದ್ದೂ,ಇನ್ನೇನು ಬೆಳ್ಳಿ ತೆರೆಯ ಮೇಲೇ ಅಪ್ಪಳಿಸಲಿದೆ.ನಟ-ನಿರ್ದೇಶಕ ರಿಷಬ್ ಶೆಟ್ಟಿಯ ಕಲ್ಪನೆಯಲ್ಲಿ ಮೂಡಿಬಂದ ಕಾಂತಾರ ಸಬ್ ಟೈಟಲ್ ನಂತೆ ಒಂದು ದಂತ ಕತೆಯೇ!ದಟ್ಟಾರಣ್ಯ,ಪಾಳೆಗಾರಿಕೆ ಆಡಳಿತ ವ್ಯವಸ್ಥೆ, ಗ್ರಾಮೀಣಿಗರ ಒಗ್ಗಟ್ಟು,ದೈವಾರಾಧನೆಯ ಕಥಾವಸ್ತುವನ್ನುಒಳಗೊಂಡ ಅದ್ಬುತ ಸಿನಿಮಾವೇ ಕಾಂತಾರ! 90ರ ದಶಕದ ನೈಜ ಕಥಾ ಹಂದರವನ್ನು ನಿರ್ದೇಶಕರು ಅಚ್ಚುಕಟ್ಟಾಗಿ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ,ಕರಾವಳಿ ಭಾಗದಲ್ಲಿ ನಡೆಯುವ ಸಾಂಪ್ರದಾಯಿಕ ಕಂಬಳ,ದೈವರಾಧನೆ,ಕೋಲ ನಂಬಿಕೆಯ ತಳಹದಿ,ಗ್ರಾಮೀಣ ಸೊಗಡು ಚಿತ್ರದಲ್ಲಿದೆ.
ಮೇಲ್ನೋಟಕ್ಕೆ ಇದು ಕರಾವಳಿಯ ಕಲೆ -ನೆಲೆ,ಆಚಾರ-ವಿಚಾರ,ವೈಶಿಷ್ಠ್ಯವೇ ಆದರೂ,ಇದು ಕೇವಲ ಅಲ್ಲಿನವರೆಗೆ ಮಾತ್ರ ಸೀಮಿತವಾದ ಕಥೆ ಅಲ್ಲವೇ ಅಲ್ಲ.ಕರಾವಳಿಯ ಭಾಗದ ಒಂದು ಉದಾಹರಣೆ ಅಷ್ಟೇ.ದೈವ ನಂಬಿಕೆ, ಆರಾಧನೆ,ಪಾಳೆಗಾರಿಕೆ ವ್ಯವಸ್ಥೆ,ಸಂಸ್ಕೃತಿ ,ಸಂಸ್ಕಾರ ಎಲ್ಲಾ ಪ್ರದೇಶದಲ್ಲೂ ಹೊಕ್ಕಾಗಿವೆ.ಕೆಲವೊಂದು ಭಾಗದಲ್ಲಿ ದೇವರ,ದೈವಗಳ ಆರಾಧನೆಯ ಪ್ರಕಾರಗಳು ವಿಭೀನ್ನವಾದರೂ ನಂಬಿಕೆ ಮಾತ್ರ ಒಂದೇ.'ಕಾಂತಾರ' ಪಕ್ಕಾ ಕಮರ್ಷಿಯಲ್ ಪಿಚ್ಚರ್ . ಪೂರ್ಣ ಕುಟುಂಬ ಕುಳಿತು ನೋಡುವಂತ ಸಿನಿಮಾ.ನಾಯಕ ಶಿವ (ರಿಷಬ್ ಶೆಟ್ಟಿ),ನಾಯಕಿ ಲೀಲಾ (ಸಪ್ತಮಿ) ಪಕ್ಕಾ ಹಳ್ಳಿ ಸೊಗಡಿಗೆ ಹೊಂದಿ ಕೊಂಡಂತೆ ಅದ್ಭುತವಾಗಿ ನಟಿಸಿದ್ದಾರೆ.ರಿಷಬ್ ಶೆಟ್ಟಿ ಸಿನಿಮಾದ ಯಾಕ್ಟರೋ ಅಥವಾ ಡೈರೆಕ್ಟರೋ ಗೊತ್ತಾಗುತ್ತಿಲ್ಲ.ಸಿನಿಮಾವೇ ಈ ಪ್ರಶ್ನೆಗೆ ಹೇಳುತ್ತದೆ.ಒಬ್ಬ ನಿರ್ದೇಶಕನಾಗಿ ಆ ಸಿನಿಮಾದಲ್ಲಿ ಜೊತೆಗೆ ಲೀಡ್ ಪಾರ್ಟ್ ನ ಹೊಂದಾಣಿಕೆ ಮಾಡಿ ಕೊಂಡ ರೀತಿ ನಿಜಕ್ಕೂ ಗ್ರೇಟ್..!! ಅಬ್ಬಾ ! ಆ ಕ್ಲೈಮೆಕ್ಸ್ ನ 20 ನಿಮಿಷ ಅವರ ಅಭಿನಯ ಪರಾಕಾಷ್ಠೆಗೆ ಸೇಲ್ಯೋಟ್ ಹೊಡೆಯಲೇಬೇಕು.ನ್ಯಾಷನಲ್ ಅವಾರ್ಡ್ ಗ್ಯಾರಂಟಿ !!ಇನ್ನುಳಿದ ಕಲಾವಿದರ ಬಗ್ಗೆ ಎರಡು ಮಾತಿಲ್ಲ.ತಮಗೆ ಕೊಟ್ಟ ಪಾತ್ರಗಳನ್ನು ಎಲ್ಲಾ ಪಾತ್ರಧಾರಿಗಳು ಎಲ್ಲೂ ಚ್ಯುತಿ ಬಾರದಂತೆ ನಟಿಸಿದ್ದಾರೆ,ಜೀವ ತುಂಬಿದ್ದಾರೆ.ಇದರಲ್ಲಿನ ಸಿಂಹ ಪಾಲು ಕಲಾವಿದರು ರಂಗಭೂಮಿಯಿಂದಲೇ ಬಂದವರಾದ್ದರಿಂದ ಪಾತ್ರಗಳು ಜೀವಂತವಾಗಿರಲೇ ಬೇಕಲ್ಲವೇ ? ಆ ಖಳ ನಾಯಕನ(ದೇವೇಂದರ ಸೂತ್ತೂರು ) ಪಾತ್ರಕ್ಕೆ ಅಚ್ಚುತ್ ಕುಮಾರ್ ಹೇಳಿ ಮಾಡಿಸಿದ ಹಾಗೆ ಇದೆ ,ಅರಣ್ಯಾಧಿಕಾರಿಯಾಗಿ ಕಿಶೋರ್ ರ ಅಭಿನಯ ಅದ್ಬುತ ಅಮೋಘ !ತಿಳಿ ಹಾಸ್ಯವಿದೆ,ತುಸು ಪ್ರೇಮವಿದೆ, ನವಿರಾದ ಪ್ರಣಯವಿದೆ,ಬೋರ್ ಹೊಡಿಸದ ಯಾಕ್ಷನ್ ಇದೆ, ಜಾಸ್ತಿ ಅನಿಸದ ಸೆಂಟಿಮೇಟ್ ಕೂಡ ಇದೆ.
ಏನಿಲ್ಲಾ ಹೇಳಿ ಎಲ್ಲವೂ ಈ ಸಿನಿಮಾದಲ್ಲಿ ಎಳೆ-ಎಳೆಯಾಗಿ ಕಾಣಸಿಗುತ್ತಿದೆ.ಕೋಟಿ ಪಡೆಯುವ ಕಲಾವಿದರಿಲ್ಲ,ವಿದೇಶದ ಸುತ್ತಾಟವಿಲ್ಲ,ಗ್ಲಾಮರ್ಸ್ ಸಾಂಗ್ ಇಲ್ಲ,ಅತೀರೇಕ ಅನಿಸುವ ಸಾಹಸ ಅಂತೂ ಇಲ್ವೇ ಇಲ್ಲ.ಕೇವಲ ಪ್ರಕ್ರತಿ ಸೊಬಗಿನ ಕಾಡಿನ ನಡುವೆ ಚಿತ್ರಿತಗೊಂಡ,ಸದ್ದಿಲ್ಲದೇ ಸುದ್ದಿಯಾಗುತ್ತಿರುವ ಚಿತ್ರ 'ಕಾಂತಾರ'ವನ್ನು ಮೆಚ್ಚಲೇಬೇಕು,ಕನ್ನಡಿಗರು ಆದಾಗಲೇ ಮೆಚ್ಚಿ ಕೊಂಡಿದ್ದಾರೆ.ಚಿತ್ರ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದೂ ಆಗಿದೆ !ಚಿತ್ರ ಎಷ್ಟುಫೇಮಸ್ ಆಗಿದೆ ಅನ್ನುದಕ್ಕೆ ಸಣ್ಣ ಉದಾಹರಣೆ ಏನಂದ್ರೆ ,ದೈವ ಆರಾಧನೆಯೇ ಕೇಂದ್ರ ಬಿಂದು ಆಗಿರುವ ಸಿನಿಮಾದಲ್ಲಿನ 'ಪಂಜುರ್ಲಿ','ಗುಳಿಗ' ದೈವಗಳ ಬಗ್ಗೆ ತಿಳಿಯುವುದಕ್ಕೆ ಚಿತ್ರ ನೋಡಿದ ಹಲವರು ಮಂದಿ ವಿವಿಧ ಬಗೆಯಲ್ಲಿ ಪ್ರಯತ್ನ ಪಡ್ತಾ ಇದ್ದಾರೆ.ಇನ್ನು ದೈವದ ಶಕ್ತಿ ಅರಿತವರು ಚಪ್ಪಲಿ ಬಿಟ್ಟು ಸಿನಿಮಾ ವೀಕ್ಷಿಸುತ್ತಿರುವ ವರದಿಗಳು ಕೇಳಿ ಬರುತ್ತಿವೆ.
ವಲ್ಡ್ ವೈಡ್ನಲ್ಲೂಜಯಭೇರಿ ಬಾರಿಸಿದ ಕಾಂತಾರ,ಇತಿಹಾಸದಲ್ಲಿಮೊದಲ ಬಾರಿಗೆ ಮಹಾರಾಷ್ಟ್ರದ ಮರಾಠ ಚಿತ್ರ ಮಂದಿರದಲ್ಲಿ ಬಿಡುಗಡೆ ಗೊಂಡಿದೆ,ಸ್ಯಾಂಡಲ್ ವುಡ್ ನಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಬಳಿಕ,ಬೇರೆ ಭಾಷೆಗಳಲ್ಲಿ ಡಬ್ಬಿಂಗ್ ಕೂಡಾ ಜಾಲ್ತಿಯಲ್ಲಿದೆ. ಇದೆ 14ಕ್ಕೆ ಹಿಂದಿಯಲ್ಲಿತೆರೆಕಂಡರೇ,15ಕ್ಕೆ ತೆಲುಗಿನಲ್ಲಿ ತೆರೆಕಾಣಲಿದೆ.ಈಗಾಗಲೇ ಇದರ ಟೈಲರ್ ಕೂಡ ರೀಲೀಸ್ ಆಗಿದ್ದೂ,ಇನ್ನುತಮಿಳು ಮತ್ತು ಮಲೆಯಾಳಂನಲ್ಲೂ ಕೂಡ ಪೋಸ್ಟರ್ ಹರಿದಾಡುತ್ತಿದ್ದೂ,ಸಧ್ಯದಲ್ಲೇ ಸಿನಿಮಾ ತೆರೆ ಕಾಣಲಿದೆಯಂತೆ.ಏನೇ ಇರಲಿ ಕನ್ನಡ ಚಿತ್ರರಂಗಕ್ಕೆ ಸುಗ್ಗಿ ಕಾಲ,ರಿಮೇಕ್,ಅಶ್ಲೀಲ,ರೌಡಿಸಂ ಚಿತ್ರಗಳಿಂದ ಬೇಸತ್ತಿದ್ದ ಪ್ರೇಕ್ಷಕರಿಗೆ ಪಕ್ಕಾ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಕಮರ್ಷಿಯಲ್ ಚಿತ್ರ ಕೊಟ್ಟಿದ್ದು ಕರ್ನಾಟಕದ ಕರಾವಳಿ ನಿರ್ದೇಶಕರುಗಳು ಎನ್ನುವುದಕ್ಕೆ ಅಡ್ಡಿ ಇಲ್ಲ ರಕ್ಷಿತ್ ಶೆಟ್ಟಿ,ರಾಜ್ ಬಿ ಶೆಟ್ಟಿ ಹಾಗೂ ರಿಷಬ್ ಶೆಟ್ಟಿಯಂತ ಆರ್ 'ತ್ರಿ'ಯರು. ಇತ್ತೀಚೆಗೆ ತೆರೆಕೊಂಡ ರಕ್ಷಿತ್ ಶೆಟ್ಟಿಯ '777ಚಾರ್ಲಿ' ಹಿಟ್ ನಂತರ ,ರಾಜ್ ಬಿ ಶೆಟ್ಟಿಯ 'ಗರುಡಗಮನ ವೃಷಭ ವಾಹನ' ಇದೀಗ ರಿಷಬ್ ಶೆಟ್ಟಿಯ 'ಕಾಂತಾರ' ಇದರ ತನ್ಮಧ್ಯೆ ಇನ್ನೋರ್ವ ಕರಾವಳಿಗ ಅನೂಪ್ ಭಂಡಾರಿಯ 'ರಂಗೀತರಂಗ' ಇದರ ಪಾರ್ಟ್ 2 ಎಂಬಂತೆ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಕೂಡಾ ಜಯಭೇರಿ ಬಾರಿಸಿತ್ತು.ಇಂತಹ ಸಿನಿಮಾಗಳು ಕೇರಳ ಸಿನಿಮಾ ಇಂಡಷ್ಟ್ರಿಯಲ್ಲಿ ಕಾಣುತ್ತಿದ್ದೇವು.,ನೈಜತೆಯನ್ನುಒತ್ತಿ ಸಾರುವ,ಕನ್ನಡಿ ಹಿಡಿಯುವಂತಿರುವ ಇಂತಹ ಚಿತ್ರಗಳು ಕನ್ನಡದಲ್ಲಿಯೂ ದಾಪುಗಾಲು ಇಡುತ್ತಿರುವುದು ನೋಡಿದರೆ ಹೆಮ್ಮೆ ಅನಿಸುತ್ತಿದೆ. ಕಾಂತಾರ ಭಾಗ 2 ಬರಬಹುದಾ ?ಯಾವಾಗ? ಎಂಬ ಪ್ರಶ್ನೆ,ಹೆಚ್ಚಿನ ಬೇಡಿಕೆ ಮತ್ತು ಕುತೂಹಲವೂ ಸಹಾ ಸೋಷಿಯಲ್ ಮೀಡಿಯಾದಲ್ಲಿ ಉಂಟಾಗಿದೆ. ವರಾಹ ರೂಪಂ ದೈವ ವರಿಷ್ಠಮ್……!!

ಸೋಮವಾರ, ಏಪ್ರಿಲ್ 4, 2022

ಸನಾತನ ಸಂಸ್ಕೃತಿಯನ್ನು ಮರೆಯದಿರೋಣ

ಬುದ್ದಿವಂತರ ನಾಡು ,ಕೃಷ್ಣನ ನಗರಿ ಉಡುಪಿಯಿಂದ ಆರಂಭ ಗೊಂಡ ಹಿಜಾಬ್ ವಿವಾದ ಕರಾವಳಿ ಮಾತ್ರವಲ್ಲದೇ ರಾಜ್ಯಾದ್ಯಾ೦ತ,ಹಿಡಿದು ದೇಶ ವ್ಯಾಪಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿತ್ತು.ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮರ್ಯಾದೆ ಬೀದಿಗೆ ಬಂದಿತ್ತು.ಹಿಂದೂ -ಮುಸ್ಲಿಂ ಬಾಯ್ -ಬಾಯ್ ಅಂತಿದ್ದವರು ದುಶ್ಮನ್ ತನವನ್ನು ಹೊಂದುವಂತಾಯಿತು.ಕೋಮು ಸಾಮರಸ್ಯ,ಧಾರ್ಮಿಕ ಸಂಘರ್ಷ ಒಳಗೊಳಗೆ ಉರಿಯಲಾರಂಭಿಸಿತು.ಕಿಚ್ಚು ಹಚ್ಚಿದ ಹಿಜಾಬ್ ಪರ ಆರು ವಿದ್ಯಾರ್ಥಿನೀಯರು ಹೈಕೋರ್ಟ್ ಮೆಟ್ಟಿಲೇರಿದ್ದು,ಮೌಲ್ಯಯುತವಾದ ತೀರ್ಪು ಉಚ್ಚ ನ್ಯಾಯಾಲಯದಿಂದ ಸಮವಸ್ತ್ರದ ಪರ ಬಂದರೂ ,ಹಿಜಾಬ್ ಧಾರಿಗಳಿಗೆ ಹಾಗೂ ಅದಕ್ಕೆ ಕುಮ್ಮಕ್ಕು ಕೊಡುವ ಎಡಬಿಡಂಗಿಗಳಿಗೆ ತೃಪ್ತಿ ಕಾಣದೇ ಸಂವಿಧಾನದ ವಿರುದ್ಧ ಕಿಡಿ ಕಾರಲಾರಂಭಿಸಿವೆ.ಕೋರ್ಟ್ ನ ತೀರ್ಪುನ್ನು ಗೌರವಿಸದೇ ದಿಕ್ಕರಿಸಿ ನಮ್ಮ ಮುಂಡು ವಾದ,ಕಾನೂನುನ್ನು ಪ್ರಸ್ತುತ ಪಡಿಸುತ್ತಿವೆ. ತೀರ್ಪನ್ನು ಖಂಡಿಸಿ ರಾಜ್ಯಾದ್ಯಂತ ಮುಸ್ಲಿಂ ವರ್ತಕರು ಒಂದು ದಿನ ಮಟ್ಟಿಗೆ ತಮ್ಮ ಎಲ್ಲಾ ಅಂಗಡಿ ಮುಂಗಟ್ಟುನ್ನು ಮುಚ್ಚಿ ವ್ಯಾಪಾರ, ವ್ಯವಹಾರವನ್ನು ಸ್ಥಗಿತ ಗೊಳಿಸಿ ಪ್ರತಿಭಟನೆ ನಡೆಸಿದ್ದರು.ಇದಕ್ಕುತ್ತರವಾಗಿ ಹಿಂದೂ ಸಂಘಟನೆಗಳು ಕೂಡಾ ಕೋಲ್ಡ್ ವಾರ್ ಆರಂಭಿಸಿವೆ.ಹೇಳಿ- ಕೇಳಿ ಇದೀಗ ಜಾತ್ರಾ ಉತ್ಸವದ ಸಮಯ ಕರೋನ ಕಾಲಘಟ್ಟದಲ್ಲಿ ಕಳೆದ ಎರಡು ವರ್ಷಗಳಿಂದ ನಿಂತಿದ್ದ ಹಬ್ಬ-ಹರಿದಿನಗಳು ಮತ್ತೆ ಚಿಗುರು ಒಡೆಯಲು ಆರಂಭಿಸಿವೆ. ಕರಾವಳಿಯ ಜನಪ್ರೀಯ ದೇವಸ್ಥಾನದ ಜಾತ್ರೆಗಳು ಒಂದರ ಮೇಲೊಂದರಂತೆ ಚಾಲನೆ ಪಡೆದು ಕೊಂಡಿದೆ.ಮುಸ್ಲಿಂ ಸಮುದಾಯದವರಿಗೆ ವ್ಯಾಪಾರಕ್ಕೆ ಅವಕಾಶ ವಿಲ್ಲಾ ಎಂದು ಹಿಂದೂ ಸಂಘಟನೆಗಳು ಬ್ಯಾನರ್ ,ಭಿತ್ತಿ ಪತ್ರ ಗಳ ಅಳವಡಿಸಿದ್ದಾರೆ.ಶಾಂತಿ ಸುವವ್ಯಸ್ಥೆಯಡಿಯಲ್ಲಿ ಸ್ಥಳೀಯ ಆಡಳಿತ ಸಂಸ್ಥೆಯಿಂದಲೂ ಪರವಾನಿಗೆ ಮೂಲಕ ಮುಸ್ಲಿಂ ವ್ಯಾಪಾರಸ್ಥರಿಗೆ ಬಹಿಷ್ಕರಿಸಲಾಗಿದೆ .
ಕರಾವಳಿ ಯಿಂದಲೇ ಪ್ರಾರಂಭ ಗೊಂಡು ,ಮಾತ್ರವಲ್ಲದೇ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುವ ಜಾತ್ರೆ, ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ವ್ಯಾಪಾರಕ್ಕೆ ಅನುಮತಿ ನೀಡದೇ ಬಹಿಷ್ಕಾರ ಹಾಕುವ ಪ್ರಕ್ರಿಯೆ ನಡೆಯುತ್ತಿದ್ದರೆ, ಇದಕ್ಕೆ ಮುಸ್ಲಿಂ ಸಂಘಟನೆಗಳು, ಕಾಂಗ್ರೆಸ್ ಮುಖಂಡರು ಸೇರಿದಂತೆ ಕೆಲವರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ವಿಧಾನ ಸೌಧದಲ್ಲೂ ಪ್ರಸ್ತಾವ ಗೊಂಡು ಕೋಲಾಹಲ ಮೂಡಿಸಿದೆ .ಇದೇ ವಿಷಯ ಜಾಲತಾಣದಲ್ಲಿಯೂ ಭಾರಿ ಚರ್ಚೆ ಶುರುವಾಗಿದ್ದು, ಹಲವಾರು ನೆಟ್ಟಿಗರು ಮೂರು ತಿಂಗಳ ಹಿಂದೆ ಉಡುಪಿಯ ಗಂಗೊಳ್ಳಿಯಲ್ಲಿ ನಡೆದಿರುವ ಘಟನೆಯನ್ನು ನೆನಪಿಸಿಕೊಂಡು ಕಿಡಿ ಕಾರುತ್ತಿದ್ದಾರೆ.ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗಂಗೊಳ್ಳಿಯಲ್ಲಿ ಗೋಹತ್ಯೆ ವಿಚಾರವಾಗಿ ಕಳೆದ ಅಕ್ಟೋಬರ್ನಲ್ಲಿ ಕೆಲವು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇದರಲ್ಲಿ ಹಲವು ಮೀನುಗಾರರೂ ಭಾಗಿಯಾಗಿದ್ದರೆಂದು ಆಕ್ರೋಶಗೊಂಡಿದ್ದ ಮುಸ್ಲಿಂ ಮುಖಂಡರು ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಹಿಂದೂ ಮೀನುಗಾರರಿಂದ ಮೀನು ಖರೀದಿಸುವುದನ್ನು ಸ್ಥಗಿತಗೊಳಿಸುವಂತೆ ಕರೆ ಕೊಟ್ಟಿದ್ದರು. ಮಾತ್ರವಲ್ಲದೇ ಒಂದಷ್ಟು ದಿನಗಳವರೆಗೆ ಹಿಂದೂ ವರ್ತಕರಿಂದ ಮೀನನ್ನೂ ಖರೀದಿಸುತ್ತಿರಲಿಲ್ಲ.ಆಗ ಯಾವ ಮುಖಂಡರೂ ವಿರೋಧ ವ್ಯಕ್ತಪಡಿಸಲಿಲ್ಲ, ಆಗಿನ ನಿಷೇಧಕ್ಕೆ ಯಾರೊಬ್ಬರೂ ತುಟಿ ಬಿಚ್ಚಿರಲಿಲ್ಲ ಪ್ರಶ್ನಿಸಿಲ್ಲ.ಹಿಂದೂ-ಮುಸ್ಲಿಮರು ಸಹೋದರರು, ಸಾಮರಸ್ಯ ಕಾಪಾಡಿಕೊಳ್ಳಬೇಕು ಎಂದು ಈಗ ಮನಬಂದಂತೆ ಹೇಳಿಕೆ ನೀಡುತ್ತಿರುವವರು ಆಗ ಹಿಂದೂ ಮೀನುಗಾರರು ವ್ಯಾಪಾರವಿಲ್ಲದೇ ದುಃಖಿಸುತ್ತಿದ್ದರೂ ಅವರ ನೆರವಿಗೆ ಏಕೆ ಬರಲಿಲ್ಲ ಎಂಬ ಪ್ರಶ್ನೆ ಪ್ರಜ್ಞಾವಂತರಲ್ಲಿ ಕಾಡುತ್ತಿದೆ. ಏನೇ ಇರಲಿ ಸಭ್ಯರ ನಾಡಿನಲ್ಲಿ ಈ ವಿವಾದ ಅಂತ್ಯ ಕಾಣಬೇಕು . ಹಿಂದೂಯೇತರ ವ್ಯಾಪಾರಸ್ಥರಿಗೆ ಜಾತ್ರೆ, ಮಹೋತ್ಸವಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡದ ಪ್ರಕ್ರಿಯೆ ಮುಂದುವರೆಯುತ್ತಲೇ ಇದೆ . ಕರಾವಳಿಯ ಮಂದಾರ್ತಿ ಜಾತೇ ಯಿಂದ ಆರಂಭ ಗೊಂಡಿತ್ತು.,ಕಾಪು ಮಾರಿ ಪೂಜೆ ಜಾತ್ರೆಯಿಂದ ಮುನ್ನೆಲೆಗೆ ಬಂದಿತ್ತು.ಜೊತೆಗೆ ಇದೀಗ ಹಲಾಲ್ ಎಂಬ ಅಂಶವೂ ಸಹಾ ಮಾಡುತ್ತಿದೆ . ಒಟ್ಟಾರೆ ಹಿಜಾಬ್ ನಿಂದ ಉಂಟಾದ ಧರ್ಮ ಪ್ರತಿಷ್ಠೆ- ಪ್ರರಾಕಾಷ್ಠೆ,ಧರ್ಮ ದಂಗಾಲ್ ಎಲ್ಲಿಯವರಿಗೆ ಬಂದು ಮುಟ್ಟುತ್ತೋ ಗೊತ್ತಿಲ್ಲ.ಹಲವು ಧರ್ಮೀಯರ ನಾಡು ,ಸನಾತನ ಸಂಸ್ಕೃತಿಯ ಬೀಡಿ ನಲ್ಲಿ ತಲೆದೋರಿದ ಈ ವಿವಾದ ಆದಷ್ಟು ಬೇಗ ಅಂತ್ಯ ಗೊಳ್ಳಲಿ ಭಾರತೀಯ ಸಂಸ್ಕೃತಿಯನ್ನು ಪ್ರೀತಿಸಬೇಕಾದ,ಗೌರವಿಸಬೇಕಾದ ಕರ್ತವ್ಯ ನಮ್ಮದು ಅಲ್ಲವೇ ?

ಶುಕ್ರವಾರ, ಫೆಬ್ರವರಿ 4, 2022

ನಾ ಬಿಡೆ ನೀ ಕೊಡೆ :ಬುದ್ದಿವಂತರ ನಾಡಲ್ಲಿ ಹೀಗೊಂದು ಹಿಜಾಬ್ ವಿವಾದ !!

ಆರು ಜನ ವಿದ್ಯಾರ್ಥಿನೀಯರಿಂದ ಇಡೀ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ! ಜಿಲ್ಲೆಯ ಹಲವು ಕಾಲೇಜಿಗೆ ಹರಡಿದ ಸ್ಕಾರ್ಫ್ ಸಂಘರ್ಷ :ಹಿಜಾಬ್ v/s ಕೇಸರಿ ಶಾಲು ! ರಾಜ್ಯಾದ್ಯಂತ ಹರಡಿದರೂ ಅಚ್ಚರಿ ಇಲ್ಲ ಈ ಸೋಂಕು ! ಉಡುಪಿಯ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಕಳೆದ ಒಂದೂವರೆ ತಿಂಗಳಿಂದ ಹೀಗೊಂದು ವಿವಾದ ಕೇಳಿಬರುತ್ತಿವೆ .ಆರು ಜನ ವಿದ್ಯಾರ್ಥಿನೀಯರು ಕಾಲೇಜಿನ ಆವರಣದಲ್ಲಿ ಪ್ರತಿಭಟನಾ ನಿರತರಾಗಿದ್ದೂ, ಫಲ ಕಾಣದೇ ಹೈಕೋರ್ಟ್ ಮೆಟ್ಟಿಲೇರಿದ್ದಾರೆ . ಇತ್ತ ಜಿಲ್ಲೆಯ ವಿವಿಧ ಕಾಲೇಜಿನಲ್ಲಿ ಸ್ಕಾರ್ಫ್ ಸಂಘರ್ಷ ಮುಗಿಲು ಮುಟ್ಟಿದೆ . ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿದೆ. ಬುದ್ದಿವಂತರ ನಾಡಿನ ಮಾನ ಹರಾಜಾಗುತ್ತಿದೆ . ಶುರುವಾಗಿದ್ದು ಆರು ವಿಧ್ಯಾರ್ಥಿನಿಯರಿಂದ ಉಡುಪಿಯ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ 97 ಮುಸ್ಲಿಂ ಧರ್ಮದ ವಿದ್ಯಾರ್ಥಿನೀಯರು ವಿದ್ಯಾರ್ಜನೆ ಮಾಡುತ್ತಿದ್ದಾರೆ ಅವರಿಗಿಲ್ಲದ ಈ ವರಿ ಕೇವಲ 6 ಮಂದಿಗೆ ಎಲ್ಲಿಂದ ಬಂತೋ ಗೊತ್ತಿಲ್ಲಾ . ಹಿಜಾಬ್ ಧರಿಸಿಯೇ ನಾವು ತರಗತಿ ಪ್ರವೇಶಿಸುತ್ತೇವೆ ಎಂಬ ಹಠ ,ಚಟ ! ಹಿಜಾಬ್ ಧರಿಸುವುದು ನಮ್ಮ ಹಕ್ಕು, ಧಾರ್ಮಿಕ ವಿಚಾರ ಎಂಬ ಮೊಂಡು ವಾದ !ಹೌದು ! ತಲೆಬಾಗಲೇ ಬೇಕು, ಇಸ್ಲಾಂ ಸಂಸ್ಕೃತಿಯಲ್ಲಿ ಬುರ್ಖಾ ಹಾಗೂ ಹಿಜಾಬ್ ನ್ನು ಮಹಿಳೆಯರು ಧರಿಸಬೇಕು ಹಿಜಾಬ್ ಧರಿಸವುದು ಅನಾದಿಕಾಲದಿಂದಲೂ ನಡೆದು ಕೊಂಡು ಬಂದ ಪದ್ಧತಿ.,ಹಾಗಂತ ಕೆಲವು ಸ್ಥಳಗಳಲ್ಲಿ, ಕೆಲವು ನಿಯಮಗಳು ಇದೆ, ನಿರ್ಬಂಧವೂ ಇದೆ . ಶೈಕ್ಷಣಿಕ ವ್ಯವಸ್ಥೆಯಲ್ಲಿ ,ಶಿಸ್ತು- ಶ್ರದ್ದೆಯಿಂದ ಪಾಠ ಪ್ರವಚನ ಕಲಿಯಬೇಕದ ಸ್ಥಳದಲ್ಲಿ ಇದು ಅನಾವಶ್ಯಕ . ಶಾಲಾ -ಕಾಲೇಜುಗಳ ನಿಯಮದಡಿಯಲ್ಲಿ ಅಲ್ಲಿನ ಸೂಕ್ತ ಸಮವಸ್ತ್ರ, ವಸ್ತ್ರಸಂಹಿತೆ ಪಾಲನೆ ಮಾಡ್ಬೇಕು,ಅವಲಂಭಿಸಬೇಕು. ಸಾಮಾಜಿಕ ಕ್ಷೇತ್ರದಲ್ಲಿಇದು ಅಪ್ರಸ್ತುತ. ಅಂತೂ ಸಂಪ್ರದಾಯಿಕವಾಗಿ ನಡೆಕೊಂಡು ಬರುತ್ತಿದ್ದ ಇತಿಹಾಸ ಭರಿತ ಕಾಲೇಜಿನಲ್ಲಿ ಹೊಸ ಇತಿಹಾಸ ಸ್ರಷ್ಠಿಸಲು ಹೊರಟಿದ್ದಾರೆ ಆರು ಜನ ಹಿಜಾಬ್ ಧಾರಿಣಿಗಳು .
ಕಾಲೇಜಿಗೆ ಪ್ರವೇಶವಿಲ್ಲ : ಈ ಹಿಜಾಬ್ ಧಾರಿಣಿಯರಿಗೆ ಕಾಲೇಜಿನ ಆಡಳಿತ ಮಂಡಳಿ ಸಮಜಾಯಿಸಿ ಹೇಳಿದರೂ ಪಟ್ಟು ಬಿಡದ ಆರು ಜನ ವಿದ್ಯಾರ್ಥಿನೀಯರಿಗೆ ಕಾಲೇಜಿನ ಹಿತ ದ್ರಷ್ಟಿ ಇಂದ ಪ್ರವೇಶ ನಿರಾಕರಿಸದ್ದನ್ನು ಅಲ್ಲಗಳೆಯುವಂತಿಲ್ಲ .ಪಟ್ಟು ಸಡಲಿಸದ ಇವರುಗಳಿಗೆ ಒಂದಷ್ಟು ಕುಮ್ಮಕ್ಕು ಸಿಕ್ಕಿದರ ಫಲವಾಗಿ ಕಾಲೇಜಿನ ಆವರಣದಲ್ಲಿ ಪ್ರತಿಭಟನೆ ನಿರತರಾದರು. ಸಂಧಾನ ಸಭೆಯೂ ವಿಫಲ : ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಪೋಷಕರ ಜೊತೆ ಸೇರಿ ತಜ್ಞರ ಜೊತೆ ಮಾತುಕತೆ ನಡೆಯಿಸಿ ಇಲ್ಲಿಗೆ ಇದು ಅಂತ್ಯಗೊಳ್ಳುತ್ತೇನೋ ಅನ್ನುವ ಆಶಾ ಭಾವನೆ ಇಟ್ಟುಕೊಂಡಿದ್ದರೇ ,ನಾ ಬಿಡೆ ಎನ್ನುವ ನಿಲುವನ್ನು ಹೊಂದಿರುವ ಆರು ಜನ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ . 'ನಮ್ಮ ಧರ್ಮ ಇದು ನಮ್ಮ ಹಕ್ಕು ನಾವು ಧರಿಸಿಯೇ ಧರಿಸುತ್ತೇವೆ 'ಎಂದು ಹಠ ಹಿಡಿರುವ ಇವರುಗಳು ಒಂದು ಪಕ್ಷದಲ್ಲಿ ಸರ್ಕಾರಿ ನೌಕರಿ ದೊರತರೇ ? ಪೊಲೀಸ್ ಇಲಾಖೆ ಹಾಗೂ ಮಿಲಿಟರಿ ಮತ್ತಿತ್ತರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯವೇ ? ಅಲ್ಲಿ ಹಿಜಾಬ್ ಗೆ ಅಡೆ ತಡೆ ಉಂಟಾಗುವುದಿಲ್ಲವೇ ? ಅದೆಷ್ಟು ಮುಸ್ಲಿಂ ಧರ್ಮದವರು ಇಂತಹ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ವೇ ? ಇನ್ನೂ ಸಿನಿಮಾ ಮತ್ತಿತರ ಸಾಂಸ್ಕೃತಿಕ ಕ್ಷೇತ್ರದಲ್ಲಿ ಪಾಲ್ಗೊಳ್ಳಲು ಸಾಧ್ಯವೇ ? ಉಳಿದ ಸಹಪಾಠಿಗಳಿಗೆ ಇಲ್ಲದಿರುವ ಹಕ್ಕು ಈ ಆರು ಜನಕ್ಕೆ ಮಾತ್ರ ಸೀಮಿತವೇ ? ಇದ್ದರೂ ಇದು ಈ ಹಿಂದೆ ಹೇಳಿದಂತೆ ಶಾಲೆ ಕಾಲೇಜಿನಲ್ಲಿ ಅನ್ವಹಿಸುವುದಿಲ್ಲ , ಮೊದಲಾಗಿ ಶಾಲಾ ಕಾಲೇಜುಗಳಲ್ಲಿ ಇಂತಹ ಧಾರ್ಮಿಕ ಆಚರಣೆಗೆ ಅವಕಾಶವೇ ಇಲ್ಲಾ . ಅದರಲ್ಲೂ ಇದು ಮಹಿಳಾ ಕಾಲೇಜು ಆದ್ದರಿಂದ ಇಲ್ಲಿನ ವಿದ್ಯಾರ್ಥಿಗಳೆಲ್ಲಾರೂ ಮಹಿಳೆಯರೇ ಅಲ್ಲವೇ ? ಕೇವಲ ವಿಚಾರ ಹೀನ ವಿವಾದ ಮಾಡುತ್ತಿರುವ ಈ ವಿದ್ಯಾರ್ಥಿಗಳಿಗೆ ಸೂಕ್ತವಾದ ಕಾನೂನಿನ ಅಡಿಯಲ್ಲಿ ಶಿಕ್ಷಿಸಬೇಕಿದೆ .ಒಂದು ಪಕ್ಷದಲ್ಲಿ ಸಾಂಪ್ರಾದಾಯಿಕವಾಗಿ ನಡೆದು ಕೊಂಡು ಬಂದ ಕಾಲೇಜಿನ ನೀತಿ- ನಿಯಮ ಮುರಿದು ಇವರಿಗೆ ಅವಕಾಶ ಕೊಟ್ಟಿದ್ದೇ ಯಾದರೇ ,ಮುಂದೆ ಇದು ಬಹಳ ದೊಡ್ಡ ಗೊಂದಲ -ಗದ್ದಲಕ್ಕೆ ಕಾರಣ ಆಗದೇ ಇರದು., ಈಗಾಗಾಲೇ ಊಹಿಸಿದಂತೆ ಇನ್ನೊಂದು ಧರ್ಮದವರು ಇದಕ್ಕೆ ಪ್ರತಿರೋಧ ತರುತ್ತಿದ್ದಾರೆ . ಅಂತೆಯೇ ಜಿಲ್ಲೆಯ ಕುಂದಾಪುರದ ಸರಕಾರಿ ಜೂನಿಯರ್ ಕಾಲೇಜಿನ ನಿನ್ನೆ ನಡೆದ ಘಟನೆ ಬೆನ್ನಲ್ಲೇ ಮತ್ತೆ 3-4 ಕಾಲೇಜಿನ ಹಿಂದೂ ಧರ್ಮದ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ,ಜೈ ಕಾರ ಹಾಕುತ್ತಾ ಕೋಮು ಸಂಘರ್ಷಕ್ಕೆ ಕಾರಣೀಭೂತರಾಗುತ್ತಿದ್ದಾರೆ. ಏನು ಅರಿಯದ ಮುಗ್ದ ಮಕ್ಕಳಲ್ಲಿ ಮತೀಯತೆಯ ವಿಷ ಬೀಜ ಬಿತ್ತುವ ಕಾರ್ಯ ರೂಪು ಗೊಳ್ಳುತ್ತಿದೆ . ನಾಡಿನ ,ನಾಳಿನ ದೇಶದ ಸಮತೋಲನ ವ್ಯವಸ್ಥೆಗೆ ಶಿಕ್ಷಣ ಮುಖ್ಯ. ಶಿಕ್ಷಣ ಸಂಸ್ಥೆಯಲ್ಲಿ ನಾವೆಲ್ಲರೂ ಒಂದು ಎಂದು ಉತ್ತಮ ನಡವಳಿಕೆ ಪಾಠ ಕಲಿತು ಆ ಮಕ್ಕಳು ಮುಂದಿನ ಪ್ರಜೆಯಾಗಿ ನಿಲ್ಲುವಲ್ಲಿ ಸಹಕಾರಿಯಾಗ ಬೇಕು ಆದರೆ ಇಲ್ಲಿ ನಡಿಯುತ್ತಿರುವ ವಿಚಾರವಾದರೂ ಏನು ? ಕೋಮು ಸೌಹಾರ್ದತೆಗೆ ದಕ್ಕೆ ತರುತ್ತಿದೆ. ಆ ಆರು ವಿದ್ಯಾರ್ಥಿನೀಯರು ಎಲ್ಲಿ ಸೂಕ್ತವೋ ಅಲ್ಲಿ ಅಲ್ಲಿಗೆ ಹೊಗಲಿ ಅದನ್ನು ಬಿಟ್ಟು ಗೊಂದಲವನ್ನು ಸ್ರಷ್ಟಿ ಮಾಡುವುದು ಸರಿ ಅಲ್ಲ, ಆರು ವಿದ್ಯಾರ್ಥಿಗಳಿಂದ ಇಡೀ ಕಾಲೇಜಿನ ಭವಿಷ್ಯ ಹಾಳಾಗುತ್ತಿದೆ. ಶೈಕ್ಷಣಿಕವಾಗಿ ವರ್ಷದಿಂದ ವರ್ಷಕ್ಕೆ ಪ್ರಥಮ ದ್ವೀತಿಯ ಸ್ಥಾನದಲ್ಲಿ ಕಂಗೊಳಿಸುತ್ತಿದ್ದ ಬುದ್ಧಿವಂತರ ಜಿಲ್ಲೆ ಉಡುಪಿ, ಇಂತವರಿಂದ ರಾಷ್ಟ್ರ ಅಂತರಾಷ್ಟ್ರ ಮಟ್ಟದಲ್ಲಿ ಕೆಟ್ಟ ರೀತಿಯಲ್ಲಿ ಸುದ್ದಿಯಾಗುವಂತಾಯಿತು .