ಮಂಗಳವಾರ, ಜೂನ್ 30, 2020

App ಅಷ್ಟೇ ಬ್ಯಾನ್ ಆದರೆ ಸಾಕೇ?


ಚೀನಾ ಆಕ್ರಮಣದ ಬಳಿಕ ಭಾರತದಲ್ಲಿ ಚೀನಾ ಬಾಯ್ಕಟ್ಟ್ ಆಂದೋಲನವೇ ಶುರುವಾಯಿತು , ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕು ಎಂಬಂತ ಕೂಗುಗಳು ಸಾಮಾಜಿಕ ಜಾಲ ತಾಣಗಳಲ್ಲಿ ಬಲವಾದವು.ಸಾಕಷ್ಟು ಜನರು ತಮ್ಮ ಮೊಬೈಲ್ ನಲ್ಲಿನ App ಗಳನ್ನು ಅಳಿಸಿಯೂ ಆಯಿತು. ಇತ್ತ ಸರ್ಕಾರ 59 App ಗಳನ್ನು ಬ್ಯಾನ್ ಮಾಡಿಯೂ ಬಿಟ್ಟಿತು. ಇದು ಚೀನಾ ವಿರುದ್ಧದ ಮಹಾ ಸಮರ ಎಂದು ಬಿಂಬಿತವಾದರೂ, ಇನ್ನೊಂದೆಡೆ ಸೈಬರ್ ಕ್ರೈಮ್ ಅನ್ನು ತಪ್ಪಿಸುವ ಸಲುವಾದ ವಿಷಯ ಎಂಬುದು ಗುಟ್ಟಿನಲ್ಲಿ ಇದೆ. ಅದೇನೇ ಇರಲಿ App ಗೆನೋ ಬ್ರೇಕ್ ಬಿತ್ತು. ಆದರೆ ಎಲ್ಲಾ App ಗಳನ್ನು ನಿಷೇಧ ಮಾಡುವಲ್ಲಿ ಸರ್ಕಾರ ವಿಫಲವಾಯಿತೇ? ಈ 59 App ನಲ್ಲಿ ಹೆಚ್ಚೆಂದರೆ 10-12 ಮಾತ್ರ ಸಾಮನ್ಯವಾಗಿ ಉಪಯೋಗವಾಗುತ್ತಿದೆ. ಅತೀ ಹೆಚ್ಚು ಪ್ರಚಲಿತದಲ್ಲಿರುವ Paytm Zoom ,PUBG ಯಂತಹ ಇನ್ನಿತರ App ಗಳು ಸರ್ಕಾರದ ಕಣ್ಣಿಗೆ ಕಾಣಿಸದಿದ್ದದ್ದು ವಿಪರ್ಯಾಸ.! ಇಷ್ಟಾದರೂ ಆಯಿತಲ್ಲಾ ಸ್ತುತ್ಯಾರ್ಹ.ಗಿಳಿಯ ಮೇಲೆ ಬ್ರಹ್ಮಾಸ್ತ್ರ ಎಂಬತೆ ಯಾವುದೋ ಮುಖ್ಯನೋ ಅದನ್ನು ಬಿಟ್ಟು ಈ App ಮೇಲೆ ಮಾತ್ರ ದುಶ್ಮನ್ ಗಿರಿ ತೋರಿಸಿದೆ ಸರ್ಕಾರ. ಇದರಿಂದ ಎಳ್ಳಷ್ಟು ಪ್ರಯೋಜನ ವಿಲ್ಲ.
ರಕ್ಕಸ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯೇ ಸರಿ !!ಧೈರ್ಯ ,ಸ್ಥೈರ್ಯ ,ತಾಕತ್ತು ಇದ್ದರೇ ಎಲೆಕ್ಟ್ರಾನಿಕ್ ಸಹಿತ ಇನ್ನಿತ್ತರ ವಸ್ತುಗಳನ್ನು ಬ್ಯಾನ್ ಮಾಡಲಿ.ಅದು ಅಸಾಧ್ಯದ ಮಾತು. World Trade Organization ಪ್ರಕಾರ ಹಾಗೆ ಮಾಡುವಂತಿಲ್ಲ.ಜನ ಸಾಮಾನ್ಯರ ಮೇಲೆ ಜವಬ್ದಾರಿಯನ್ನು ಹೊರಿಸಿದಂತಿದೆ ,ಜನ ಸಾಮಾನ್ಯರೂ ಸಹಾ ಅಷ್ಟೇ ಅಸಹಾಯಕರು . ಹೆಚ್ಚಾಗಿ ,ಕಡಿಮೆ ಕ್ರಯದ ವಸ್ತುವಿನ ಹಿಂದೆ ಬೀಳುವ ನಮ್ಮಿಂದ ಇದು Impossible !.ಇದು ಸರ್ಕಾರದ ಆಡಳಿತ ವ್ಯವಸ್ಥೆಯಲ್ಲೆ ಆಗಬೇಕು ಸುಲಭವಾಗಿ ದೇಶದ ಗಲ್ಲಿ -ಗಲ್ಲಿಯಲ್ಲಿ ಸಿಗುವಂತ ಈ ಮಾಲುಗಳಿಗೆ ಕಡಿವಾಣ ಬೀಳಬೇಕು. ಜನ ಸಾಮನ್ಯರು ಹೆಚ್ಚೆಂದರೆ ತಮ್ಮ ಮೊಬೈಲ್ ನಲ್ಲಿನ App ನ್ನ Uninstall ಮಾಡಬಹುದು,ಅದನ್ನು ಎಲ್ಲಾ ಮನಸ್ಥಿತಿಯವರು ಮಾಡುತ್ತಾರೆ ಎಂಬ ವಿಶ್ವಾಸವಿಲ್ಲ .,Tiktok ನಂತಹ App ಭಾರತದಲ್ಲಿ ಹೆಚ್ಚು ಜನಪ್ರೀಯತೆಯನ್ನು ಪಡೆದು ಕೊಂಡಿದೆ. ಲಕ್ಷ, ಕೋಟಿಗಟ್ಟಲೇ ಫಾಲವರ್ಸ್ ನ್ನು ಹೊ0ದಿರುವವರು ಇದಕ್ಕೆ ಹಿಂಜರಿಯುವುದು ಅಷ್ಟೇ ಸತ್ಯ, ಎನೇ ಇರಲಿ ಅಂತೂ ,ಇಂತೂ ಒಂದಷ್ಟು App ಗಳಿಗೆ ಸರ್ಕಾರ ವಿದಾಯ ಹೇಳಿದೆ .ಅದರಲ್ಲೂ Tiktok ಬಂದ್ ಆಗಿದ್ದೂ ಸಂತೋಷಕರ !ಇನ್ನೂ ಬೇರೆ ವಸ್ತುಗಳ ಕಥೆ ಎನು?ಅವುಗಳ ಆಯುಸ್ಸು ಎಂದು ?ಮೊದಲಿಗೆ ಚೀನಾದ ಆಮದನ್ನು ನಿಲ್ಲಿಸಬೇಕು. ಈಗಿರುವ ಎಲ್ಲಾ ಸ್ಟಾಕ್ ಗಳಿಗೆ ಬೆಂಕಿ ಬೀಳಬೇಕು. ಚೈನಾ ಮೊಬೈಲ್ ಉಪಯೋಗ ಮಾಡುತ್ತಿರುವವರಿಗೆ ಅದೇ ಬೆಲೆಯ ಮೊಬೈಲ್ ದಯಪಾಲಿಸಿ. ಚೈನಾದಂತೆ ನಮ್ಮಲ್ಲಿ ಯಾಕೆ ಅದೇ ಬೆಲೆಗೆ ವಸ್ತುಗಳು ತಯಾರಿಸಲು ಸಾಧ್ಯವಾಗುತ್ತಿಲ್ಲ?App ಗೆಯೆನೋ ಪರ್ಯಾಯವಾಗಿ ನಮ್ಮಲ್ಲಿ ಹೊಸ App ಸ್ರಷ್ಠಿಯಾಗಬಹುದು., ಇತರ ವಸ್ತುಗಳು ಭವಿಷ್ಯ ?? ಸರ್ಕಾರದ ಮುಂದೆ ಇರುವ ಸವಾಲುಗಳು ಇವು.!

ಭಾನುವಾರ, ಜೂನ್ 28, 2020

ಆಡಂಬರದ ಮದುವೆಗೆ ಕರೋನ ತಂತು ಕಡಿವಾಣ !


"ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು” ಎಂಬ ಗಾದೆ ಮಾತಿದೆ. ಇದರ ಅರ್ಥ ಆಧುನಿಕ ಜಗತ್ತಿನಲ್ಲಿ ಈ ಎರಡು ಕೆಲಸ ಬಹಳ ಕಷ್ಟಕರವಾದದ್ದು. ಆರ್ಥಿಕ ಸ್ಥಿತಿ ತುಂಬಾ ಮುಖ್ಯವಾದದ್ದು .ಮನೆಯನ್ನು ಹೇಗಾದರೂ ಕಟ್ಟಬಹುದು ಆದರೆ ಈ ಮದುವೆ ಎನ್ನುವ ಒಂದು ಕಾರ್ಯಕ್ರಮ ಇದೆಯಲ್ಲ ಇದನ್ನು ಎಷ್ಟೇ ಅದ್ದೂರಿ ,ಆಡಂಬರವಾಗಿ ಆಚರಿಸಿದರೂ , ಮರುದಿನ ಮನಸ್ಸಲ್ಲಿ ಏನೋ ಕಳೆದುಕೊಂಡ ಅನುಭವ ಮನೆ ಮಂದಿಗೆ ಉಂಟಾಗುತ್ತದೆ.ಮನೆಯವರೆಲ್ಲಾ ಒಟ್ಟು ಸೇರಿ ಒಂದು ದೊಡ್ಡ ಮೀಟಿಂಗ್ ಕೂಡ ಅರೆಂಜ್ ಮಾಡಿ , "ಹೀಗೆ ಮಾಡಿದ್ರೆ ಚೆನ್ನಾಗಿತ್ತು ,ಹಾಗೆ ಆಗಿದ್ದಿದ್ದರೆ ಒಳ್ಳೆದಿತ್ತು ,ಆ ಮನೆಯವರು ಆ ತರಹ ಮಾಡಿದ್ದರು ,ಈ ಮನೆಯವರು ಈ ತರಹ ಮಾಡಿದ್ದಾರೆ ಇಷ್ಟು ಖರ್ಚು ಮಾಡಿದ್ದವರಿಗೆ ಅದೊಂದ್ದನ್ನು ಪೂರ್ಣ ಗೊಳಿಸಬೇಕಿತ್ತು ." ಎಂಬ ಅಭಿವ್ಯಕ್ತಿ ಹೊರಹೊಮ್ಮುತ್ತದೆ .ಎಲ್ಲಿಯಾದರೂ ಮನೆವರ ಹಿತೈಷಿಗಳು ಸಿಕ್ಕಿದ್ದರೆ ಅವರು ಹೇಳುದು ಕೂಡಾ ಹೀಗೆ "ಮದುವೆ ಚೆನ್ನಾಗಿ ನಡೆದು ಹೋಯ್ತು ಆದರೆ ಅದೊಂದು ಇದ್ದಿದ್ದರೆ ,ಹಾಗೆ ಆಗಿದ್ದರೇ ಇನ್ನೂ ಗಮ್ಮತ್ತು ಇರ್ತಾ ಇತ್ತು ". ಎಂದು ತಟ್ಟನೆ ಇತ್ತ ಕಡೆಯಿಂದ ಉತ್ತರವೂ ಅಷ್ಟೇ "ಇನ್ನೊಬ್ಬನು ಇದ್ದಾನಲ್ಲ ಮದುವೆಗೆ ಅವನಿಗೆ ನೀವು ಹೇಳಿದ ಹಾಗೆ ಮಾಡೋಣ" ಎನ್ನುತ್ತಾರೆ .ಹೌದು ! ನಮ್ಮಲ್ಲಿ ಮದುವೆಗೆ ಮಾಡಿದಷ್ಟು ಖರ್ಚು-ವೆಚ್ಚು ಇನ್ಯಾವುದೇ ಕಾರ್ಯಕ್ರಮಕ್ಕೆ ಮಾಡಲಾಗುವುದಿಲ್ಲ . ಅಷ್ಟೊಂದು ಅದ್ದೂರಿ ,ಆಡಂಬರವಾಗಿ ಮಾಡಲಾಗುತ್ತದೆ . ನಮ್ಮ ದೇಶದಲ್ಲಿ ಮದುವೆ ವಿಷಯ ಬಂದರೆ, ಇಡಿಯ ಜೀವಮಾನ ಉಳಿಸಿದ ಗಳಿಕೆಯನ್ನು ಒಂದೇ ದಿನದಲ್ಲಿ ಖರ್ಚು ಮಾಡಿಸದಿದ್ದರೆ ಅದು ಮದುವೆಯೇ ಅಲ್ಲ. ಇದಕ್ಕೆಂದೇ ಮಕ್ಕಳು ಚಿಕ್ಕವರಿದ್ದಾಗಿನಿಂದಲೇ ಮದುವೆಗಾಗಿ ಹಣವನ್ನು ಉಳಿಸುತ್ತಾ ಬರುವುದೇ ಹೆಚ್ಚಿನವರು ಅನುಸರಿಸುವ ಮಾರ್ಗ.! ಉಳ್ಳವುರಿಗಂತೂ ಖರ್ಚಿಗೆ ಲೆಕ್ಕ -ಪತ್ರವೇ ಇರುವುದಿಲ್ಲ .ಅಷ್ಟೊಂದು ವಿಜೃಂಭಣೆಯಿಂದ ಮದುವೆ ಕಾರ್ಯವನ್ನು ಮುಗಿಸಿ ಬಿಡುತ್ತಾರೆ . ಆದರೆ ಇಲ್ಲದವರು ಸಹಾ ಅದೇನೋ ಕಷ್ಟಪಟ್ಟು ,ಸಾಲ -ಸೂಲ ಮಾಡಿ ಹಣ ಹೊಂದಿಸಿ ಆಡಂಬರಕ್ಕೆ ದಾಸರಾಗಿ ಬಿಡುತ್ತಾರೆ . ಉಳ್ಳವರು ಆನೆ ಮೇಲೆ ಹೋಗುತ್ತಾರೆ . ಇಲ್ಲದವರು ಅವರನ್ನು ನೋಡಿ ಸಂತೋಷ ಪಡಬೇಕೇ ವಿನಃ ಅವರಂತೆ ನಾವು ಮಾಡಬೇಕು ಎಂದು ಬಯಸುವುದು ಎಷ್ಟು ಸರಿ ? ಹಾಸಿಗೆ ಇದ್ದಷ್ಟೇ ಕಾಲು ಚಾಚ ಬೇಕು ಅಲ್ಲವೇ ? ಸರಳವಾಗಿ ಮದುವೆ ಮಾಡೋಣ ಎಂದು ಯಾರಾದರೂ ಸಲಹೆ ಮಾಡಿದರೆ ಎಲ್ಲಾ ಕಡೆಗಳಿಂದ ಇದಕ್ಕೆ ವಿರೋಧ ಎದುರಾಗುತ್ತದೆ.ನಮಗಿಂತಲೂ ಆರ್ಥಿಕವಾಗಿ ಹಿಂದುಳಿದ ಇನ್ನಾರೋ ಮಾಡಿದ ಮದುವೆಯನ್ನು ಉದಾಹರಿಸಿ ಅವರಿಗಿಂತ ನಾವೇನು ಕಡಿಮೆ ಎಂಬ ಧೋರಣೆ ಅನುಸರಿಸಲಾಗುತ್ತದೆ .ಮದುವೆ ಎಂಬುದು ವ್ಯಕ್ತಿಯ ಬಾಳಿನಲ್ಲಿ ಒಮ್ಮೆ ಮಾತ್ರ ನಡೆಯುವಂತದ್ದು, ಅದನ್ನು ಅದ್ದೂರಿಯಾಗಿ ಮಾಡಬೇಕು ,ನೆರ ಹೊರೆಯವರು ನಮ್ಮನ್ನು ಕೊಂಡಾಡಬೇಕು ,ಎಲ್ಲರ ಮೆಚ್ಚುಗೆಗೆ ಪಾತ್ರರಾಗಬೇಕು ಎಂಬ ಈ ಮನೋಭಾವವೇ ಆಧುನಿಕ ದಿನಗಳಲ್ಲಿ ಎದ್ದು ಕಾಣುತ್ತಿದೆ . ಈ ಆಡಂಬರಕ್ಕೆ ಇದೇ ಮೂಲ ಕಾರಣವಾದರೂ, ಇನ್ನೊಂದು ವಿಚಾರವನ್ನೂ ಗಮನಿಸಬೇಕು ,ಸ್ವರ್ಧಾತ್ಮಕತೆಯೂ ಸಹಾ ಇಲ್ಲಿ ಮೇಳೈಸುತ್ತದೆ . "ಆ ಮನೆಯವರ ಬಳಿ ಬಿಡಿಗಾಸು ಇಲ್ಲದಿದ್ದರೂ ,ಸಹಾ ಮಕ್ಕಳಿಗೆ ಅಷ್ಟೊಂದು ಅದ್ದೂರಿಯಾಗಿ ಮದುವೆ ಮಾಡಿಸಿದ್ದಾರೆ ನಾವು ಅವರಿಂದ ಮೇಲ್ ಸ್ಥರದಲ್ಲಿ ಇದ್ದೇವೆ ಎಂದು ಅಹಂಕಾರದ ಆರ್ಭಟಕ್ಕೆ ಜೋತು ಬೀಳುವ ಇವರಲ್ಲಿ, ಅಸಲಿಗೆ ಆರ್ಥಿಕ ಪರಿಸ್ಥಿತಿ ಸುಭಧ್ರವಿಲ್ಲದಿದ್ದರೂ ,ಮದುವೆ ಮಾಡಿಸುತ್ತಾರೆ .ಅರ್ಥ ಇಷ್ಟೇ ಅವರಿಗಿಂತ ನಾವು ಕಡಿಮೆ ಯಾಗಬಾರದು ಎಂಬಂತ ಮನಸ್ಥಿತಿ ಹಲವರಲ್ಲಿದೆ. ಅಂತಹ ಮ್ಯಾಟರುಗಳೇ ಇಂದಿನ ದಿನ ಸಿಂಹ ಪಾಲು ಅಂದರೂ ಅತಿಶಯೋಕ್ತಿ ಯಾಗಲಾರದು . ಎಲ್ಲಿಯವರಿಗೆ ಅಂದರೆ ಮದುವೆಯ ಆಮಂತ್ರಣ ಪತ್ರಿಕೆ ತನಕವೂ ಈ ಪೈಪೋಟಿ ಮುಂದುವರಿಯುತ್ತದೆ! 2-3 ದಿನದಲ್ಲಿ ಸಮಾರಂಭ ವಿದಾಯ ಕಾಣುತ್ತೆ . ಇದಕ್ಕೆ ವೆಚ್ಚವಾಗುವ ಹಣದ ಸಂದಾಯವಾಗುದಕ್ಕೆ ಅದೆಷ್ಟು ಸಮಯ ಬೇಕೋ ಗೊತ್ತಿಲ್ಲ .,ಅದೇಗೋ ಕಷ್ಟ ಪಟ್ಟು ಭರಿಸಲೇ ಬೇಕಾಗುತ್ತದೆ . ಮದುವೆ ಸಮಾರಂಭ ಎನ್ನುವುದು ಒಂದೇ ದಿನದಲ್ಲಿ ಮುಗಿದು ಹೋಗುವಂತ್ತದ್ದಲ್ಲ ., ಕಾರ್ಯಕ್ರಮದ ಲಿಸ್ಟ್ ಬಹಳ ಉದ್ದವಿದ್ದರೂ ,ಆ ಮೂರು ದಿನಗಳಲ್ಲಿ ಖರ್ಚಾಗುವ ವಿಚಾರ ಮಾತ್ರ ಬಹಳ ಮುಖ್ಯ .ಮೊದಲಿಗೆ ಪ್ರಾರಂಭವಾಗುವುದು ನಿಶ್ಚಿತಾರ್ಥದಿಂದ. ಎಂಗೇಜ್ಮೆಂಟ್ ಗೆ ದೊಡ್ಡ ಹಾಲ್ ಬೇಕು ಕಡಿಮೆ ಅಂದರೂ ಸಾವಿರ ಜನ ಸೇರಲೇ ಬೇಕು ಅವರೆಲ್ಲರನ್ನು ಮೊಬೈಲಜಿಷನ್ ಮಾಡಲು ವಾಹನದ ವ್ಯವಸ್ಥೆ ,ಹಾಲ್ ನ ಅಲಂಕಾರ ,ಭೂರಿ ಭೋಜನ ದೊಂದಿಗೆ ಎಂಗೇಜ್ಮೆಂಟ್ ಕಾರ್ಯಕ್ರಮ ಫಿನಿಷ್ !ನೆಕ್ಸ್ಟ್ ಸ್ಟೆಪ್ ಮೆಹಂದಿ ಕಾರ್ಯಕ್ರಮ ಕೆಲವೊಂದು ಮಂದಿ ತಮ್ಮ ನಿವಾಸದಲ್ಲೇ ಹಮ್ಮಿಕೊಂಡರೇ , ಇನ್ನೂ ಕೆಲವರು ಆಗಲೇ ಹೇಳಿದಂತೆ ಪ್ರಸಿದ್ಧ ಹಾಲ್ ಗಳನ್ನೇ ಆಯ್ಕೆ ಮಾಡಿ ಕೊಳ್ಳುತ್ತಾರೆ . ಮನೆ ಮುಂದೆ ಶಾಮಿಯಾನ ,ಮನೆ ಪೂರ್ತಿ ಕಲರ್ ಫುಲ್ ಲೈಟಿಂಗ್ಸ್ ನೊಂದಿಗೆ ಬಗೆ-ಬಗೆಯ ಅಲಂಕಾರ . ಜೊತೆಗೆ ನಾನ್ ವೆಜ್ ಊಟ.ಇನ್ನೂ ಮೆಹಂದಿಗೆ ಮಧ್ಯಪಾನ ವಿಲ್ಲದೇ ಅದು ಪೂರ್ಣಗೊಳ್ಳುವುದೇ ಇಲ್ಲ ,ಇದನ್ನು ಕರಾವಳಿ ಕರ್ನಾಟಕದಲ್ಲಿ ಯೆಥೇಚ್ಛವಾಗಿ ಕಾಣ ಬಹುದು.ಡ್ಯಾನ್ಸ್ ಆರ್ಕೆಷ್ಟ್ರಾ ದೊಂದಿಗೆ ಮೆಹಂದಿ ಕಾರ್ಯಕ್ರಮ ಖತಮ್ .!ನಂತರ ಬರುವುದೇ ಮದುವೆ ,ಆರತಕ್ಷತೆ ಇದೂ ಸಹಾ ಅಷ್ಟೇ ಇದಕ್ಕೆ ಹೊರತಾಗಿಲ್ಲ ಪ್ರಸಿದ್ಧ ಹಾಲ್ ,ಸಾವಿರಾರು ಜನರ ಕೂಡುವಿಕೆ ,ವಾಹನದ ವ್ಯವಸ್ಥೆ ,ಭೂರಿ ಭೋಜನ ಇತ್ಯಾದಿ ಇತ್ಯಾದಿ.!ಇದು ಕಾರ್ಯಕ್ರಮದ ಹೈಲೈಟ್ಸ್., ಆದರೆ ಇನ್ನು ಹಿನ್ನೋಟವೂ ಅಷ್ಟೇ ಅದ್ಭುತ ,ಅಮೋಘ ! ವರನ ಕಡೆಯಿಂದ ವಧುಗೆ ನಿರ್ದಿಷ್ಟ ಬಂಗಾರದ ಬೇಡಿಕೆ ,ಅದಕ್ಕೆ ಅನುಗುಣವಾಗಿ ಏನು ಕೊರತೆ ಬಾರದ ಹಾಗೆ ತುಸು ಹೆಚ್ಚೇ ಹಾಕಿ ಈಗೀಗ ಕೆಜಿ ಗಟ್ಟಲೇ ಬಂಗಾರದ ಹೇರಿಕೆ ಕಂಡು ಬರುತ್ತದೆ . ಲಕ್ಷಗಟ್ಟಲೇ ಹಣದ ಬಟ್ಟೆ !, ವಧು-ವರರರಿಗೆ ಮಾತ್ರವಲ್ಲದೇ ಕುಟುಂಬಸ್ಥರಿಗೆ ನೆಂಟರಿಷ್ಟರಿಗೂ ತೆಗೆಯಲಾಗುತ್ತದೆ.ಲೋಡುಗಟ್ಟಲೇ ಬಟ್ಟೆ -ಬರೆಗೆ ಎಷ್ಟು ಬೆಲೆಯಾಗಬೇಡ ?ಒಂದೇ ಕಲರ್ ಬಟ್ಟೆಯನ್ನು ತೊಟ್ಟು ಒನ್ದಷ್ಟು ಮಂದಿ ಮದುವೆ ಮಂಟಪದಲ್ಲಿ ಮಿರ-ಮಿರ ಮಿಂಚುತ್ತಿರುದನ್ನು ಕಂಡಿರುತ್ತೇವೆ .
ಮದುವೆಗೆ ಬಂದವರು ಎಲ್ಲಾ ನಮ್ಮನ್ನೇ ಗಮನಿಸಲಿ ಎಂಬ ಉದ್ದೇಶ ! ಆಡಂಬರಕ್ಕೆ ಎಣೆ ಇಲ್ಲ . ಎಂತೆಂತಾ ನಮೂನೆಗಳು ? ಎಷ್ಟೆಲ್ಲಾ ದುಂದು ವೆಚ್ಚ ?ಇಷ್ಟೆಲ್ಲಾ ಆಡಂಬರ ಅವಶ್ಯಕೆತೆ ಇದೆಯೇ ? ಸರಳವಾಗಿ ಮದುವೆಯಾದರೆ ನೂರು ವರ್ಷ ಬಾಳುವುದಿಲ್ವೇ ?ಎಲ್ಲವೂ ಪ್ರತಿಷ್ಠೆಗೋಸ್ಕರ ಅಷ್ಟೇ !ಹಾಗಂತಾ ಸಿಂಪಲ್ ಆಗಿ ಮದುವೆಯಾಗುವವರು ಇಲ್ಲವಂತಲ್ಲ . ಕೆಲವೊಮ್ಮೆ ಪರಿಸ್ಥತಿ ಸರಳ ಮದುವೆಗೆ ನೂಕಿ ಬಿಡುತ್ತದೆ. ಪ್ರೀತಿ -ಪ್ರೇಮ -ಪ್ರಣಯದಲ್ಲಿ ತೇಲಾಡುವ ಪ್ರೇಮ ಪಕ್ಷಿಗಳು ಸರಳ ಮದುವೆಗೆ ಹೊಂದಿಕೊಳ್ಳಲೇ ಬೇಕು . ಪ್ರೇಮಿಗಳ ಮನೆಯಲ್ಲಿ ಒಪ್ಪಿಗೆ ಸಿಗದೇ ಇದ್ದಾಗ ತನ್ನ ಸ್ನೇಹಿತರೊಂದಿಗೆ ರಿಜಿಸ್ಟರ್ ಮ್ಯಾರೇಜ್ ಅಥವಾ ಯಾವುದೋ ದೇವಸ್ಥಾನದಲ್ಲಿ ತಾಳಿ ಕಟ್ಟುವುದು ಇದ್ದೇ ಇರುತ್ತದೆ . ಇದು ಸರಳ ಮದುವೆಗೆ ಬೆಸ್ಟ್ ಎಗ್ಸಾಂಪಲ್ ! ಇನ್ನು ಅಲ್ಲಲ್ಲಿ ಕೆಲವು ಸಂಘಟನೆ ಮತ್ತು ದೇವಸ್ಥಾನದ ವತಿಯಿಂದ ಉಚಿತ ಸಾಮೂಹಿಕ ವಿವಾಹ ಎಂದು ವರ್ಷದಲ್ಲಿ ಒಮ್ಮೆ ದೊಡ್ಡ ಕಾರ್ಯಕ್ರಮವನ್ನು ಇಟ್ಟುಕೊಳ್ಳುತ್ತವೆ . ಆ ವೇದಿಕೆಯಲ್ಲಿ ಒಂದಷ್ಟು ಉಚಿತವಾಗಿ ಕೆಲವೊಂದು ವಸ್ತುಗಳು(ವಸ್ತ್ರ ಆಭರಣ ) ಸಹಾ ಲಭಿಸುತ್ತದೆ . ಅತೀ ಬಡತನದ ಬೇಗೆಯಲ್ಲಿದ್ದವರು,ಹರಕೆ ಹೊತ್ತವರು ,ಅಂತರ್ಜಾತೀಯ ವಧು-ವರರು ಈ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿ ಹೆಸರನ್ನು ನೊಂದಾಯಿಸಿಕೊಳ್ಳುತ್ತಾರೆ .ಆಗಲೇ ಹೇಳಿದಂತೆ ಇಂತಹ ಪರಿಸ್ಥಿತಿಗೆ ಹೊಂದಿಕೊಂಡು ಸರಳ ವಿವಾಹ ನಡೆಯುತ್ತದೆ .ಈಗಿನ ಪರಿಸ್ಥಿತಿ ಯಾವುದಕ್ಕೂ ಕ್ಯಾರೇ ಮಾಡುತ್ತಿಲ್ಲ ,ಹಣ ,ಅಂತಸ್ತು ,ಗೌರವ ,ಘನತೆ ಸ್ವರ್ಧಾತ್ಮಕತೆಗೆ ಬ್ರೇಕ್ ಹಾಕಲು ಕರೋನ ಬಂದಿದೆ. ಈ ವರ್ಷ ಕರೋನ ಎಂಬ ಮಹಾಮಾರಿ ವಕ್ಕರಿಸಿ , ಜನ ಸಾಮನ್ಯರನ್ನು ಹೈರಾಣಾಗಿಸಿದ್ದು ಎಲ್ಲರಿಗೂ ಗೊತ್ತಿರುವುದೇ . ಇದರಿಂದ ಹೆಚ್ಚು ಹೊಡೆತ ಬಿದ್ದಿದ್ದು ಈ ಮದುವೆ ಸಮಾರಂಭಕ್ಕೆ ಈಗಾಗಲೇ ಮೊದಲೇ ನೊಂದಾಯಿಸದಂತೆ ,ಒಳ್ಳೆಯ ದಿನ, ಶುಭ ಘಳಿಗೆ ಯೊಂದಿಗೆ ನಡೆಯಬೇಕೆಂದು ಆಕಾಂಕ್ಷೆ ಪಟ್ಟವರಿಗೆ ಅದ್ದೂರಿ ಕೈ ಕೊಟ್ಟಿದೆ .ರಾಜಕಾರಣಿಗಳ ಮಕ್ಕಳು ,ಸಿನಿಮಾ ಮಂದಿಗಳೆಂಬ ಸೆಲೆಬ್ರಿಟಿಗಳಿಗೆ ಕರೋನ , ಮದುವೆ ವಿಷಯದಲ್ಲೂ ಮಾರಕವಾಗಿದಂತೂ ಸತ್ಯ . ಹೆಚ್ಚಿನವರು ಮದುವೆ ದಿನಾಂಕವನ್ನು ಮುಂದೆ ದೂಡಿದರೂ , ಎಷ್ಟು ದಿನ ಎಂದು ಕಾಯಬಹುದು ? ಈಗಾಗಲೇ 4-5 ತಿಂಗಳು ಕಳೆದರೂ , ಕರೋನಾ ಕಥೆ ಮುಗಿಯುವ ಲಕ್ಷಣ ಕಾಣುತಿಲ್ಲ. ಹಾಗಾಗಿ ಅನಿವಾರ್ಯವಾಗಿ ಸರಳ ಮದುವೆಗೆ ಅಡಿ ಇಡಲೇಬೇಕಾಯಿತು. ಕುಟುಂಬಸ್ಥರ ಸಮ್ಮುಖದಲ್ಲಿ ,ಬೆರಳೆಣಿಕೆಯ ನೆಂಟರುಷ್ಟರುಗಳ ಜೊತೆಗೆ ವಿವಾಹವಾಗುವಲ್ಲಿ ಉಂಟಾದ ಕೊರತೆ ಯಾದರೂ ಏನು ? ಒನ್ದಷ್ಟು ಆಡಂಬರ, ನೆರೆ ಹೊರೆಯವರು ವೀಕ್ಷಣೆಗೆ ಇಲ್ಲ ಎಂಬುದು ಬಿಟ್ಟರೇ , ಮತ್ತಿನ್ನೇನು ತೊಡಕು ?ಹೀಗೆ ಮದುವೆಯಾದರೆ ಗಂಡ -ಹೆಂಡತಿಯಾಗಿ ಸುಖವಾಗಿ ಬಾಳುದಿಲ್ಲವೇ ?ಊರ -ಪರ ಊರಿನವರಿಗೆ ತಮ್ಮ ಅದ್ದೂರಿತನವನ್ನು ತೋರ್ಪಡಿಸುವ ಅಗತ್ಯವಿಲ್ಲ ಸತಿ -ಪತಿಯಾದ ಮೇಲೆ ಎಲ್ಲಾರಿಗೂ ಅರಿವಾಗುತ್ತದೆ .ಕರೋನ ಇದಕ್ಕೊಂದು ದೊಡ್ಡ ಕಡಿವಾಣ ಹಾಕಿದ್ದು ಸಂತೋಷ ತಂದಿದೆ. ಮದುವೆ ಕಾರ್ಯ ಪ್ರಸ್ತುತ ಕರೋನ ಕಾಲದಲ್ಲಿ ಹೇಗೆ ನಡೆಯುತ್ತಿದೆಯೋ ಅದೇ ರೀತಿ ಮುಂದೆ ಕೂಡಾ ಸರಳವಾಗಿ ನಡೆಯಲಿ .

ಮಂಗಳವಾರ, ಜೂನ್ 23, 2020

ನಿಜವಾದ ಸ್ವಾರ್ಥಿಗಳು ಯಾರು ?


“ತಂದೆ ತಾಯಿ ತೀರಿಕೊಂಡರೂ, ಊರಿಗೆ ಬಾರದ ಇವರುಗಳು ತಮ್ಮ ಜೀವ ಭಯದಿಂದ ತಮ್ಮ ತಮ್ಮ ಮನೆಗಳಿಗೆ ದೌಡಾಯಿಸುತ್ತಿದ್ದಾರೆ. ಇವರೆಲ್ಲಾ ಸ್ವಾರ್ಥಿಗಳು .ಸ್ವಾರ್ಥಕ್ಕಾಗಿ ಜೀವಿಸುತ್ತಾರೆ” ಎಂದು ಸೋಶಿಯಲ್ ನೆಟ್ವರ್ಕ್ ಗಳ ಮೂಲಕ ಅನಿವಾಸಿಗಳಿಗೆ ದಿಕ್ಕಾರ ಕೂಗುವವರಲ್ಲಿ ಎಷ್ಟು ಸ್ವಾರ್ಥ ತುಂಬಿದೆ ನೋಡಿ ಇವರುಗಳು ಹೊರಗಿನಿಂದ ವೈರಸ್ ಹೊತ್ತು ತಂದರೇ ನಮಗೆಲ್ಲಿ ಹರಡುತ್ತದೋ ಎಂಬ ಹೆದರಿಕೆ ,ಸ್ವಾರ್ಥ ಮನೋಭಾವನೆಯಿಂದ ಹೀಗೆಲ್ಲಾ ಉಸುರುತ್ತಾರೆ. ಹೊರಗಿನವರ ಆರ್ಥಿಕ ಸಹಾಯ,ಅಲ್ಲಿನ ವಸ್ತುಗಳಿಗೆ ಹಾತೊರೆಯುವರಲ್ಲಿಯೇ ಇದೆ ಸ್ವಾರ್ಥಪರತೆ. ಕರೋನ ಎಂಬ ಮಹಾಮಾರಿಯಿಂದ ಈಡೀ ಜಗತ್ತು ಹೈರಾಣಾಗಿ ಹೋಗಿದೆ . ಈ ಸಂದರ್ಭದಲ್ಲಿ ಊರು ಬಿಟ್ಟು ಪರ ರಾಜ್ಯ, ಪರ ದೇಶಕ್ಕೆ ದುಡಿಯಲು ಹೋದ ಹಲವರ ಸ್ಥಿತಿಯೂ ಕೂಡಾ ಚಿಂತಾ ಜನಕವಾಗಿದೆ .
ಉದ್ಯೋಗವಿಲ್ಲ , ಸರಿಯಾದ ಆಹಾರವಿಲ್ಲ ,ರೂಮ್ ಬಾಡಿಗೆ ನೀಡಲು ಕೈಯಲ್ಲಿ ಕಾಸಿಲ್ಲ ಈ ಕಾರಣ ದಿ೦ದ ಕಷ್ಟಪಟ್ಟು ತಮ್ಮ ಊರಿಗೆ ಮರಳಿ ಬರುವವರಿಗೆ ಬಹಿಷ್ಕಾರದ ಕೂಗು ಎದುರಾಗಿದೆ . ಚೀನಾದಲ್ಲಿ ಹುಟ್ಟಿದ ಕರೋನ ಈಗ ಜಗತ್ತಿನಾದ್ಯಂತ ಕೇಕೆ ಹಾಕುತ್ತಿದೆ ಅಂದರೆ ಹೊರದೇಶದಲ್ಲಿರುವವರು ಅಲ್ಲಿಂದ ಪುಕ್ಕಟ್ಟೆಯಾಗಿ ತಂದು ಕಾಯಿಲೆಯನ್ನು ಇಲ್ಲಿ ಹಬ್ಬಿಸುತ್ತಾರೆ .ಅವರುಗಳು ಬರುವುದು ಬೇಡ ಅವರುಗಳಿಂದಲೇ ಈ ಪರಿಯ ರೋಗ ವೃದ್ಧಿ ಗೊಳ್ಳುತ್ತಿದೆ ಎಂದು ಹೇಳುವವರ ಮಾತಿನಲ್ಲಿ ಕೊಂಚ ಅರ್ಥವಿದೆಯಾದರೂ , ಅನಿವಾಸಿಗಳ ತಪ್ಪಾದರೂ ಏನು ?ಅವರುಗಳಿಗೂ ಸಹಾ ಜೀವ ಭಯವಿಲ್ಲವೇ ?ಬದುಕ ಬೇಕೆಂಬ ಬಯಕೆ ಇಲ್ಲವೇ ? ಬಯಸಿ ಬಯಸಿ ಯಾರು ಕೂಡ ರೋಗಗಕ್ಕೆ ಬಲಿಯಾಗುದಿಲ್ಲ ,ಅದರಲ್ಲೂ ಈ ಕರೋನ ದಿಂದ ಎಷ್ಟು ಜಾಗ್ರತಿವಹಿಸಿದರೂ ಅದು ನಮ್ಮನ್ನು ಆವರಿಸಿ ಬಿಡುತ್ತದೆ . ಹಾಗಂತ ಎಲ್ಲರಲ್ಲೂ ಈ ಖಾಯಿಲೆ ಇರುತ್ತದೆ ಅಂತ ಅಲ್ಲಾ ಕೆಲವರಲ್ಲಿ ಕಂಡೂ ಬಂದರೂ ,ಹಲವರಲ್ಲಿ ನೆಗೆಟಿವ್ ಕೇಸೇ ತುಂಬಿ ಇರುತ್ತವೆ . ಅಂದ ಮಾತ್ರಕ್ಕೆ ಅವರುಗಳು ಬರುವುದು ಸರಿಯಲ್ಲ ಎಂಬುದರಲ್ಲಿ ಅರ್ಥವಿಲ್ಲಾ . ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುವುದು ತರವಲ್ಲ . ಅದೇಷ್ಟು ಕಷ್ಟಪಟ್ಟು ವಿಧ್ಯಾಭ್ಯಾಸ ಮುಗಿಸಿ ತಮ್ಮ ಸ್ವಂತ ಊರಿನಲ್ಲಿ ಉದ್ಯೋಗ ಸಿಗದೇ ಇದ್ದಾಗ, ನೆಲೆಗೆ ಬೆಲೆಗೆ ಸಿಗದೇ ಇದ್ದಾಗ , ಅನಿವಾರ್ಯವಾಗಿ ಹೊರದೇಶ ,ಹೊರರಾಜ್ಯವನ್ನು ಅವಲಂಭಿಸಬೇಕಾಗಿ ಬರುತ್ತದೆ. ತಮ್ಮ ಅವಶ್ಯಕ್ತತೆಗೆ ಇಲ್ಲಿ ಸಿಗುವ ಹಣ ತ್ರಪ್ತಿ ದಾಯಕವಾಗಿಲ್ಲವಾದ್ದರಿಂದ . ತಮ್ಮ ಆರ್ಥಿಕ ಸಮಸ್ಯೆಯನ್ನು ಸರಿದೂಗಿಸಲು ಕಂಡರಿಯದ ಪ್ರದೇಶಕ್ಕೆ ,ಅಲ್ಲಿನ ವಾತಾವರಣ, ಜನ ಸಂಪರ್ಕ ಯೋಗ್ಯವಲ್ಲದಿದ್ದರೂ ,ಸಹಾ ಮನೆಯವರನ್ನೇಲ್ಲಾ ಬಿಟ್ಟು ವರ್ಷಗಟ್ಟಲೇ ದೂರವಿದ್ದೂ , ಹಗಲು ರಾತ್ರಿ ಯೆನ್ನದೇ ,ತಮ್ಮ ಕಷ್ಟವನ್ನೇಲ್ಲಾ ಇಷ್ಟವನ್ನಾಗಿಸಿ ಸುಖ ಜೀವನ ನಡೆಸುತ್ತಾರೆ . ತೀರಿ ಹೋದ ತಂದೆ-ತಾಯಿಯನ್ನೋ ಸಂಬಂದಿಕರನ್ನು ನೋಡಲು ಬಾರದವರು ಈ ಕರೋನಾ ದಿಂದ ಊರಿಗೆ ಮರಳುತ್ತಾರೆ ಎಂಬ ಮಾತು ಎಲ್ಲೋ ಸತ್ಯದ ತಲೆ ಮೇಲೆ ಹೊಡೆಯುತ್ತಿದ್ದರೂ, ಎಲ್ಲಾರಿಗೂ ಒಪ್ಪಿಗೆ ಯಾಗುವಂತ್ತದ್ದಲ್ಲ .ಒಂದೋ,ಎರಡು ಕೇಸುಗಳು ಅಲ್ಲಿನ ಪರಿಸ್ಥಿತಿ ಗೆ ಅನುಗುಣವಾಗಿ ಹೀಗೆ ಮಿಸ್ಸಿಂಗ್ ಆಗಬಹುದು.. ಹಲವಾರು ಕಡೆಯಲ್ಲಿ ಅಗ್ರಿಮೆಂಟ್ ,ಜವಬ್ದಾರಿಯುತ ಕೆಲಸ,ರಜೆ ಸಿಗದೇ ಇರುವುದು ಹೀಗೆ ಮುಂತಾದ ಕಾರಣಗಳಿಂದ ಎಮರ್ಜೆನ್ಸಿಗೆ ಬಾರದೇ ಇರುವುದು ಎಲ್ಲೋ ಬೆರಳು ಎಣಿಕೆ ಯಷ್ಟು ನಡೆಯುತ್ತದೆ ಅಷ್ಟೇ! ಊರಿಗೆ ಬರಬೇಡಿ ಎಂದು ಹೇಳುವವರು ಮುಂದೆ ಯಾವುದಾದರೂ ಧಾರ್ಮಿಕ .ಸಾಂಸ್ಕ್ರತಿಕ, ಕಾರ್ಯಕ್ರಮ ವಿದ್ದಾಗ ,ಫೋನ್ ಹಾಯಿಸಿ ಮೆಸೆಜ್ ಮಾಡಿ, ಎಷ್ಟೇಷ್ಟೋ ಬೇಡಿಕೆ ಇಡುತ್ತಾರೆ .ಅವರಿಂದ ಲಾಭ ಬೇಕು., ಆದರೆ ಕಷ್ಟ ಮಾತ್ರ ಬೇಡ. ನಿಜವಾದ ಸ್ವಾರ್ಥಿಗಳು ಇವರುಗಳೇ. ಗಣೇಶೋತ್ಸವ ,ಶಾರದೋತ್ಸವ,ಕೋಲ,ನೇಮ, ನಾಗಮಂಡಲ,ದೇವಸ್ಠಾನದ ಧಾರ್ಮಿಕ ಉತ್ಸವ ಇನ್ನಿತರ ಯಾವುದೇ ಧಾರ್ಮಿಕ ,ಸಾಂಸ್ಕೃತಿಕ ,ಸಾಮಾಜಿಕ ಕಾರ್ಯಕ್ರಮಕ್ಕೆ ಆರ್ಥಿಕ ಪರಿಸ್ತಿತಿ ನೆಟ್ಟಗೆ ಇದ್ದರೇ ಅದು ನಾವು ಎಣಿಸಿದಂತೆ ನಿಗದಿತ ಫಲಿತಾಂಶ ನೀಡಲು ಸಾಧ್ಯ. ಸಮೀಕ್ಷೆ ಬಿದಿಗಿರಲಿ .,ವಾಸ್ತವಾರ್ಹವಾಗಿಯೂ ಅನಿವಾಸಿಗಳದ್ದೇ ಹೆಚ್ಚಿನ ಹಣ ಸಂಗ್ರಹವಾಗುವುದು. ಗಲ್ಪ್ ರಾಷ್ಟ್ರ ,ಮಹಾರಾಷ್ಟ್ರ ,ಮತ್ತಿತ್ತರ ಪ್ರದೇಶದಲ್ಲಿರುವವರೇ ಸಹಾಯ ಮಾಡುವುದು ತಾವು ಆ ಕಾರ್ಯಕ್ರಮ ಹಾಜರಾಗದೇ ಇದ್ದರೂ, ನಮ್ಮ ಊರು ನಮ್ಮ ದೇವಸ್ಥಾನ ನಮ್ಮ ಕಾರ್ಯಕ್ರಮ ಎಂದು ಎಣಿಸಿ , ಹೆಚ್ಚಿನ ಪ್ರಮಾಣದಲ್ಲೇ ಸಹಾಯ ಹಸ್ತ ನೀಡುತ್ತಾರೆ ಆಗ ಅವರ ಸಹಾಯ ಬೇಕಿತ್ತು. ಈಗ ಪಾಪ ಅಲ್ಲಿ ಕೆಲಸ ಇಲ್ಲ ಆಹಾರ ಇಲ್ಲದೇ ಒದ್ದಾಡುತ್ತಿರುವವರು ಊರಿಗೆ ಬಂದರೆ ಅಪಸ್ವಾರ !.ನಿಜಕ್ಕೂ ಬೇಸರದ ವಿಚಾರ ಅಷ್ಟಕ್ಕೂ ಅವರು ಬರುವುದು ಸ್ವಂತ ಊರಿಗೆ .,ಅವರ ಮನೆಗೆ ಅಲ್ಲವೇ ?ಅದನ್ನು ತಡೆಯುವ ಅಥವಾ ಅಲ್ಲ ಗೆಳೆಯುವ ಹಕ್ಕೂ ಯಾರಿಗೂ ಇಲ್ಲ .

ಸೋಮವಾರ, ಜೂನ್ 15, 2020

ಕರಾಳ ವರ್ಷ ಈ 2020 !


ಹೌದು !ಹಿಂದೆಂದೂ ಕಂಡು ಕೇಳರಿಯದಂತ ಅಹಿತಕರ ಘಟನೆಯನ್ನು ಹೊತ್ತು ತಂದಿದೆ ಈ ವರ್ಷ 2020 ! ಕಣ್ಣಿಗೆ ಮುದ ನೀಡುವಂತಹ ಸಂಖ್ಯೆ 2020., ಅಷ್ಟೇ ಕಣ್ಣೀರು ತರಿಸುತ್ತಿದೆ ದಿನದಿಂದ ದಿನಕ್ಕೆ. ಸಾವು-ನೋವುಗಳನ್ನೂ ತನ್ನ ಬತ್ತಳಿಕೆಯಲ್ಲಿ ಇಟ್ಟುಕೊಂಡಿದೆ. ಲೆಕ್ಕ- ಪತ್ರ ಇಲ್ಲದೇ ವೇಗವಾಗಿ ವಿಹರಿಸುತ್ತಿದೆ.,ಇನ್ನೂ ಅರ್ಧ ವರ್ಷ ಕಳೆದಿಲ್ಲ ,ಇಷ್ಟೊಂದು ಪಾಸ್ಟ್ ಆಗಿ ದುಃಖದ ಮಡುವಿನೊಂದಿಗೆ ಕಣ್ಣೀರಿನಲ್ಲಿ ಕೈ ತೊಳೆಯಿಸುತ್ತಿದೆ ಅಂದರೇ, ಇನ್ನುಳಿದ ಅರ್ಧ ವರ್ಷದ ಬಗೆಗೆ ಆಲೋಚಿಸಿದರೇ ನಿದ್ರೆ ಹತ್ತುವುದಿಲ್ಲ ಭಯದ ನಡುವೆ ಬದುಕು ಸಾಗಿಸುವಂತಾಗಿದೆ .ಕರೋನ ಎಂಬ ಮಹಾಮಾರಿ ಕಂಡು ಬಂದದ್ದು ,2019 ರ ಡಿಸೇಂಬರ್ ಕೊನೆ ಭಾಗದಲ್ಲಿಯಾದರೂ ,ಪರಿಣಾಮ ,ಫಲಿತಾಂಶ ಮಾತ್ರ 2020 ನೀಡುತ್ತಿದೆ.ದೇಶದಲ್ಲಿ ಸುಮಾರು 3 ಲಕ್ಷ ಅಧಿಕ ಮಂದಿ ಸೋಂಕಿಗೆ ತುತ್ತಾದರೇ 8500 ಕ್ಕೂ ಅಧಿಕ ಮಂದಿ ತಮ್ಮದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಳ್ಳುವಂತಿದೆ . ಇದುವರಿಗಿನ ಅಂಕಿ-ಅಂಶದ ಪ್ರಕಾರ ಮುಂದೆ ಅದೆಷ್ಟೋ ದೇವರಿಗೆ ಗೊತ್ತು . ಅದೆಷ್ಟೋ ಪತಿ ಪತ್ನಿಯನ್ನು ,ಅಮ್ಮ ಮಗನನ್ನು ,ತಂದೆ - ತಾಯಿ ,ಬಂಧು ಬಳಗವನ್ನೂ ಎಲ್ಲಾಕ್ಕಿಂತ ಹೆಚ್ಚಾಗಿ, ಇನ್ನೇನು ಮಗುವನ್ನು ನೋಡುವ ದಿನ ಸಮೀಪಿಸುವಾಗಲೇ ಮುಖವನ್ನು ನೋಡಲು ಸಾಧ್ಯವಾಗದ ಸುದ್ದಿ ನಿಜಕ್ಕೂ ಅರಗಿಸಿಕೊಳ್ಳಲಾಗದು. ಇಂತಹ ದುಃಖ ಭರಿತ ಕೇಸುಗಳಿಗೆ ಲೆಕ್ಕವಿಲ್ಲ ,ಅನೂ ದಿನವೂ ಏರಿಕೆ ಕಾಣುತ್ತಿದೆ . 'ಅಯ್ಯೋ ಪಾಪಾ' ಎಂಬ ಧ್ವನಿಯೊಂದಿಗೆ ಕಣ್ಣೀರು ನಮಗೆ ಅರಿವಿಲ್ಲದಂತೆ ಉದುರದೇ ಇರದು . 'ಇದು ಎಂತ ವರ್ಷವಪ್ಪಾ’ ಎಂದು ಹಿಡಿ ಶಾಪ ಹಾಕುತ್ತಿದ್ದರೇ ,ಮತ್ತದೇ ಪತ್ರಿಕೆ, ಟಿವಿಗಳಲ್ಲಿ ಅದೇ ನ್ಯೂಸ್ !ಇನ್ನೂ ಸೆಲೆಬ್ರಿಟಿಗಳಿಗಂತೂ ಕರಾಳ ವರ್ಷವೇ ಸರಿ. ಎಂದೂ ಕೂಡಾ ಈ ಪರಿಯ, ಈ ಪ್ರಾಯದ ಸಾವು -ನೋವು ಕಂಡ ಉದಾಹರಣೆಗಳಿಲ್ಲ .ಆದರೆ ಈ ವರ್ಷ ಸೆಲೆಬ್ರೆಟಿಗಳ ಬಾಳಲ್ಲಿ ಹೆಸರಂತೆ ಟ್ವೆಂಟಿ -ಟ್ವೆಂಟಿ ಆಡುತ್ತಿದೆ . ಒಟ್ಟಾರೇ ಈ ವರ್ಷ ಅದೆಷ್ಟು ಸೆಲೆಬ್ರಿಟಿಗಳು ದೂರ ಆಗಿದ್ದಾರೆ ,ನೋವು ಅನುಭವಿಸಿದ ,ಆಸ್ಪತ್ರೆ ಕದ ತಟ್ಟಿದವರ ಒಂದು ಪುಟ್ಟ ಪರಿಚಯದ ಪಟ್ಟಿ ಸಂಗಹ್ರಹಿಸಿದ್ದೇನೆ .ಇದರಲ್ಲಿ ಸಿನಿಮಾ ನಟ ,ನಟಿ,ನಿರ್ಮಾಪಕ ,ಸಂಗೀತ ನಿರ್ದೇಶಕ , ಕವಿ -ಸಾಹಿತಿ , ನ್ಯಾಯವಾದಿ,ರಾಜಕೀಯ ಮುಖಂಡರು ಇದ್ದಾರೆ .
ಬಾಲಿವುಡ್ ನಟಿ- ಶಬಾನಾ ಆಜ್ಮಿ :
ಅದು ಜನವರಿ 18 ಶನಿವಾರ ಬಾಲಿವುಡ್ ಹೆಸರಾಂತ ನಟಿ ಶಬಾನಾ ಆಜ್ಮಿ ಕಾರು ಅಪಘಾತವಾಗಿತ್ತು . ಅದೃಷ್ಟವಶಾತ್ ಶಬಾನಾ ಗಾಯಕೊಂಡಿದ್ದು ಬಿಟ್ಟರೇ, ಅಪಾಯದಿಂದ ಪಾರಾಗಿದ್ದರು. ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಮುಂಬೈ–ಪುಣೆ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿತ್ತು . ಮುಂಬೈನಿಂದ 60 ಕಿ.ಮೀ. ದೂರದ ಖಲಾಪುರದಲ್ಲಿ ಶಬಾನಾ ಪ್ರಯಾಣಿಸುತ್ತಿದ್ದ ಕಾರು, ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು ಶಬಾನಾ ಅವರನ್ನು ನವಿ ಮುಂಬೈನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು .ಅಜ್ಮಿ 1974ರಲ್ಲಿ ಶ್ಯಾಮ್ ಬೆನೆಗಲ್ ನಿರ್ದೇಶನದ ಅಂಕುರ್ ಸಿನಿಮಾದ ಮೂಲಕ ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ್ದ ಇವರು ,ಸಾಕೆಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ . 69 ವರ್ಷದ ಶಬಾನಾ ಆಜ್ಮಿ ಅವರು ಅತ್ಯುತ್ತಮ ನಟಿಗಾಗಿ ಐದು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು 4 ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನ ಪಡೆದಿದ್ದಾರೆ.ಹಾಗೂ 2012ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಸಂಗೀತ ನಿರ್ದೇಶಕ-ಅರ್ಜುನ್ ಜನ್ಯ
ಜನಪ್ರೀಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿರುವ ಅರ್ಜುನ್ ಜನ್ಯ ಫೆಬ್ರವರಿ 26ನೇ ತಾರೀಕು ಬುಧವಾರ ರಂದು ಮೈಸೂರಿನ ತಮ್ಮ ನಿವಾಸದಲ್ಲಿರುವಾಗ ಹೃದಯಾಘಾತಕ್ಕೊಳಗಾಗಿದ್ದರು ತಕ್ಷಣ ಅವರನ್ನು ಚಿಕಿತ್ಸೆಗಾಗಿ ಸಮೀಪದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಅವರನ್ನು ತೀವ್ರ ನಿಗಾ ಘಟಕದಲ್ಲಿ ಇಟ್ಟಿದ್ದರು. ಅರ್ಜುನ್ ಜನ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು . ‘ಬೆಳಗ್ಗೆ 2.30ಕ್ಕೆ ಅರ್ಜುನ್ ಅವರಿಗೆ ಆಸ್ಪತ್ರೆಯ ತಂಡ ಆಂಜಿಯೋಪ್ಲ್ಯಾಸ್ಟಿ ಮಾಡಿದ್ದೇವೆ. ಇನ್ನು 2 ಗಂಟೆ ತಡವಾಗಿದ್ದರೆ ಕೆಟ್ಟ ಪರಿಣಾಮ ಎದುರಿಸಬೇಕಿತ್ತು. ಸದ್ಯ ಎಲ್ಲವೂ ಸರಿಯಾಗಿದೆ. ಅರ್ಜುನ್ ಜನ್ಯ ಕ್ಷೇಮವಾಗಿದ್ದಾರೆ' ಎಂದು ವೈದ್ಯರು ಹೇಳಿದ್ದರು.39 ವರ್ಷದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಹಿಟ್ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಂಗೀತ ನಿರ್ದೇಶನದ ಜೊತೆಗೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಗುರುತಿಸಿಕೊಂಡಿದ್ದಾರೆ.ಇತ್ತೀಚೆಗೆ ತೆರೆಕಂಡ ದರ್ಶನ್ ಅಭಿನಯದ 'ಒಡೆಯ' ಸಿನಿಮಾಗೆ ಹಾಗೂ ಇನ್ನೇನು ತೆರೆ ಕಾಣಬೇಕಿರುವ 'ರಾಬರ್ಟ್' ಚಿತ್ರಕ್ಕೆ ಇವರೇ ಸಂಗೀತ ನಿರ್ದೇಶನ ಮಾಡಿದ್ದಾರೆ.
ನಿರ್ಮಾಪಕ -ವಿ ಕೆ ಮೋಹನ್
ಖ್ಯಾತ ನಿರ್ಮಾಪಕ, ಉದ್ಯಮಿ ವಿ ಕೆ ಮೋಹನ್ ಅವರು ಬೆಂಗಳೂರಿನ ಪೀಣ್ಯ ಬಳಿಯಿರುವ ತಮ್ಮದೇ ಹೋಟೆಲ್ ಒಂದರಲ್ಲಿ ಮಾರ್ಚ್ 22 ರಂದು ನೇಣಿಗೆ ಶರಣಾಗಿದ್ದರು .ದಿ| ಡಾ ರಾಜ್‌ ಕುಮಾರ್‌ ಕುಟುಂಬಕ್ಕೆ ಆತ್ಯಾಪ್ತರಾಗಿದ್ದ ಅವರು . ಹಲವು ಸಿನೆಮಾಗಳ ವಿತರಕರಾಗಿ ಹಾಗೂ ನಿರ್ಮಾಪಕರಾಗಿಯೂ ಕೆಲಸ ನಿರ್ವಹಿಸಿದ್ದರು.ವಿ.ಕೆ. ಮೋಹನ್‌ ಅಲಿಯಾಸ್‌ ಕಪಾಲಿ ಮೋಹನ್‌ ಅವರಿಗೆ 62 ವರ್ಷವಾಗಿತ್ತು . ಕುಂದಾಪುರ ಮೂಲದ ವಿ.ಕೆ.ಮೋಹನ್ ವಕ್ವಾಡಿ, ಮಹಾಲಕ್ಷ್ಮಿ ಲೇಔಟ್‌ನಲ್ಲಿ ಕುಟುಂಬದ ಜತೆ ವಾಸವಿದ್ದ ಅವರು, ಸಿನಿಮಾ ನಿರ್ಮಾಣ, ವಿತರಣೆ, ಫೈನಾನ್ಸ್ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರು.
ನಟಿ - ಶರ್ಮಿಳಾ ಮಾಂಡ್ರೆ
ಅದು ಏಪ್ರಿಲ್ 3 ರಂದು ಬೆಳಗ್ಗಿನ ಜಾವ ಮೂರು ಗಂಟೆ ಸುಮಾರಿಗೆ ಬೆಂಗಳೂರಿನ ವಸಂತ ನಗರ ಬಳಿಯ ರೈಲ್ವೆ ಪೋಲ್ಗೆ ಜಾಗ್ವಾರ್ ಕಾರು ಡಿಕ್ಕಿ ಹೊಡೆಯಿತು . ಕಾರಿನಲ್ಲಿ ಸ್ಯಾಂಡಲ್ವುಡ್ ನಟಿ ಶರ್ಮಿಳಾ ಮಾಂಡ್ರೆ ಜೊತೆಗೆ ಆಕೆಯ ಸ್ನೇಹಿತರು ಇದ್ದರು. ಅಪಘಾತದಲ್ಲಿ ಶರ್ಮಿಳಾ ಮಾಂಡ್ರೆ ಮುಖಕ್ಕೆ ಸಣ್ಣ-ಪುಟ್ಟ ಗಾಯಗಳಾಗಿತ್ತು ಬಿಟ್ಟರೇ ಅಪಾಯದಿಂದ ಪಾರಾಗಿದ್ದರು .2007ರಲ್ಲಿ "ಸಜನಿ" ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ನಂತರ ಕೃಷ್ಣ, ನವಗ್ರಹ, ಹೀಗೆ ಸುಮಾರು 19 ಸಿನೆಮಾಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.ಇದಲ್ಲದೆ ಇವರು ಕನ್ನಡ, ತೆಲುಗು, ಚಿತ್ರರಂಗದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಹಾಸ್ಯನಟ- ಬುಲೆಟ್ ಪ್ರಕಾಶ್
ಬುಲೆಟ್ ಪ್ರಕಾಶ್ ಕನ್ನಡದ ಜನಪ್ರಿಯ ಹಾಸ್ಯನಟರ ಪೈಕಿ ಗುರುತಿಸಿಕೊಂಡಿದ್ದ ಬುಲೆಟ್ ಪ್ರಕಾಶ್ ಅವರು ಬಹು ಅಂಗಾಂಗಗಳ ವೈಫಲ್ಯದಿಂದ ಏಪ್ರಿಲ್ 6 ರಂದು ಕೊನೆಯುಸಿರೆಳೆದಿದ್ದರು. ಅವರಿಗೆ ಕೇವಲ 44 ವರ್ಷ ವಯಸ್ಸು ಆಗಿತ್ತು . ಕಿಡ್ನಿ ವೈಫಲ್ಯ ಮತ್ತು ಸೋಂಕಿನಿಂದ ಬಳಲುತ್ತಿದ್ದ, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದಾಗಿ, ನಗರದ ಪೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು ರಾಯಲ್ ಎನ್ಫೀಲ್ಡ್ ಬುಲೆಟ್ ಬ೦ಡಿಯನ್ನು ಓಡಿಸುವುದರಿ೦ದ ಇವರಿಗೆ ಈ ಬುಲೆಟ್ ಎ೦ಬ ಹೆಸರು ಸೇರಿಕೊಂಡು ಬುಲೆಟ್ ಪ್ರಕಾಶ್ ಎಂಬುದಾಗಿತ್ತು. 2002ರ ಧ್ರುವ ಚಿತ್ರದಿಂದ ಆರಂಭಗೊಂಡ ಇವರ ಸಿನಿ ಜರ್ನಿ, ಪಾರ್ಥ, ಮಸ್ತ್ ಮಜಾ ಮಾಡಿ, ಐತಲಕಡಿ ಸೇರಿದಂತೆ ರಾಜಸಿಂಹದ ನಂತ್ರ ಮುಂದುವರೆದಿತ್ತು. 2015 ರಲ್ಲಿ, ಪ್ರಕಾಶ್ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದ ಅವರು, ಕನ್ನಡ ಅಷ್ಟೇ ಅಲ್ಲದೇ ಸೌಂತ್ ಇಂಡಿಯನ್ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್‌ ನಟ -ಇರ್ಫಾನ್‌ ಖಾನ್
ಬಾಲಿವುಡ್‌ ನಟ ಇರ್ಫಾನ್‌ ಖಾನ್ ಏಪ್ರಿಲ್ 29 ರಂದು ಬುಧವಾರ ಮುಂಬೈನಲ್ಲಿ‌ ನಿಧನರಾದರು. 53 ವರ್ಷದ ಇರ್ಫಾನ್,ನ್ಯೂರೊಎಂಡ್ರೊಕ್ರೈನ್ ಟ್ಯೂಮರ್ ಎಂಬ ಅಪರೂಪದ ಕ್ಯಾನ್ಸರ್‌ನಿಂದ ಬಳಲಿದ್ದ ಇರ್ಫಾನ್ ಖಾನ್ ವಿದೇಶದಲ್ಲಿ ಚಿಕಿತ್ಸೆ ಪಡೆದಿದ್ದರು. ಮಂಗಳವಾರ ಇರ್ಫಾನ್‌ ತೀವ್ರ ಅನಾರೋಗ್ಯದಿಂದ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕೆತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದರು .ಮೊದಲಿಗೆ ಇರ್ಫಾನ್ ಖಾನ್ ಚಾಣಕ್ಯ, ಬನೇಗಿ ಅಪ್ನಿ ಬಾತ್, ಭಾರತ್ ಏಕ್ ಕೋಜ್ ಮತ್ತು ಚಂದ್ರಕಾಂತ್ ಟಿವಿ ಶೋಗಳಲ್ಲಿ ಕಾಣಿಸಿಕೊಂಡರು. ನಂತರ ಸಿನಿಮಾ ಕ್ಷೇತ್ರದತ್ತ ಮುಖ ಮಾಡಿದರು. ಲೈಫ್ ಇನ್ ಎ ಮೆಟ್ರೋ, ಪಾನ್ ಸಿಂಗ್ ತೋಮರ್, ಲೈಫ್ ಆಫ್ ಪೈ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂಗ್ರೇಜಿ ಮೀಡಿಯಂ ಅವರ ಕೊನೆಯ ಸಿನಿಮಾ.
ಬಾಲಿವುಡ್ ನಟ -ರಿಷಿ ಕಪೂರ್
ಇರ್ಫಾನ್ ಖಾನ್ ನನ್ನ ಕಳೆದು ಕೊಂಡು ಕಣ್ಣೀರು ಇಡುತ್ತಿದ್ದ ಬಾಲಿವುಡ್ ಗೆ ಕೇವಲ ದಿನದಾದ ಅಂತರದಲ್ಲಿ ಇನ್ನೊಂದು ಆಘಾತ ಬರಸಿಡಿಲಿನಂತೆ ಬಂದು ಒದಗಿತ್ತು . ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾದರು.67 ವರ್ಷದ ರಿಷಿಕಪೂರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಕುಟುಂಬದ ಕಾರ್ಯಕ್ರಮ ನಿಮಿತ್ತ ದಿಲ್ಲಿಗೆ ಹೋದಾಗ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆಗ ತಮಗೆ ಇನ್ಫೆಕ್ಷನ್ ಆಗಿತ್ತು ಎಂದು ತಿಳಿಸಿದ್ದರು. ಮುಂಬೈಗೆ ಮರಳಿದ ಬಳಿಕ ವೈರಲ್ ಜ್ವರದ ಕಾರಣ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿ ಬಹಳ ಬೇಗ ಬಿಡುಗಡೆಯಾಗಿದ್ದರು.ತಂದೆ ರಾಜ್‌ ಕಪೂರ್ ಅವರ 'ಮೇರಾ ನಾಮ್ ಜೋಕರ್' ಚಿತ್ರದಲ್ಲಿನ ಬಾಲನಟನೆಗಾಗಿ ರಿಷಿ ಕಪೂರ್ 1970ರಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಡಿಂಪಲ್ ಕಪಾಡಿಯಾ ಜೊತೆಗೆ ಲೀಡ್ ಆಗಿ 'ಬಾಬಿ' ಚಿತ್ರದಲ್ಲಿ ಕಾಣಿಸಿಕೊಂಡ ರಿಷಿಗೆ 1974ರಲ್ಲಿ ಉತ್ತಮ ನಟ ವಿಭಾಗದಲ್ಲಿ ಫಿಲ್ಮ್‌ಫೇರ್ ಅವಾರ್ಡ್ ಸಿಕ್ಕಿತ್ತು. 1973ರಿಂದ 2000ರವರೆಗೆ 92 ಸಿನಿಮಾಗಳಲ್ಲಿ ಲೀಡ್ ಆಗಿ ಕಾಣಿಸಿಕೊಂಡ ರಿಷಿ ಕಪೂರ್ ,ಅವುಗಳಲ್ಲಿ 32 ಹಿಟ್ ಸಿನಿಮಾ ನೀಡಿದ್ದರು. 'ದೊ ದೋನಿ ಚಾರ್', 'ಕಪೂರ್ & ಸನ್ಸ್' ಸಿನಿಮಾಗಳಿಗೆ ಫಿಲ್ಮ್‌ಫೇರ್ ಅವಾರ್ಡ್ ಪಡೆದಿದ್ದರು. ಇವರ ಪತ್ನಿ ನೀತು ಸಿಂಗ್ ಜೊತೆಗೆ 12 ಸಿನಿಮಾಗಳಲ್ಲಿ ನಟಿಸಿದ್ದರು.ಇವರನ್ನು ಕಳೆದು ಕೊಂಡ ಬಾಲಿವುಡ್ ಬಡವಾಗಿದೆ .
ಖ್ಯಾತ ಕವಿ- ಕೆ.ಎಸ್‌ ನಿಸಾರ್ ಅಹಮ್ಮದ್
ಖ್ಯಾತ ಕವಿ ಹಾಗೂ ಬರಹಗಾರ ಕೆ.ಎಸ್‌ ನಿಸಾರ್ ಅಹಮ್ಮದ್ ಮೇ 3 ರಂದು,ಭಾನುವಾರ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು . ನಿತ್ಯೋತ್ಸವ ಕವಿ ಎಂದೇ ಪ್ರಸಿದ್ದಗಳಿಸಿದ್ದ ನಿಸಾರ್ ಅಹಮ್ಮದ್ ಅತ್ಯುತ್ತಮ ಸಾಹಿತ್ಯ ಸಂಕಲನಗಳನ್ನು ಕನ್ನಡಕ್ಕೆ ನೀಡಿದರು. ಇತ್ತೀಚೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಭಾನುವಾರ ಪದ್ಮನಾಭನಗರದಲ್ಲಿರುವ ತಮ್ಮ ಸ್ವಗೃಹದಲ್ಲಿದ್ದ ಅವರು ಕೊನೆಯುಸಿರೆಳೆದಿದ್ದಾರೆ.ಕಳೆದ 15 ದಿನಗಳ ಹಿಂದಷ್ಟೇ ಅಮೆರಿಕದಲ್ಲಿದ್ದ ಅವರ ಪುತ್ರ ಕೂಡ ನಿಧನರಾಗಿದ್ದು, ಮಾನಸಿಕವಾಗಿ ಅವರು ತೀವ್ರ ಆಘಾತಕ್ಕೊಳಗಾಗಿದ್ದರು.ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಫೆಬ್ರುವರಿ 5,1936ರಲ್ಲಿ ಜನಿಸಿದರು. 1959ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1994ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದರು.ನಿಸಾರ್ ಅಹಮದ್ ಅವರ ಸಾಹಿತ್ಯಾಸಕ್ತಿ 10ನೇ ವಯಸ್ಸಿನಲ್ಲೇ ಆರಂಭ.'ಜಲಪಾತ'ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ (2018) 21 ಕವನ ಸಂಕಲನಗಳು, 14 ವೈಚಾರಿಕೆ ಕೃತಿಗಳು, 5 ಮಕ್ಕಳ ಸಾಹಿತ್ಯ ಕೃತಿಗಳು, 5 ಅನುವಾದ ಕೃತಿಗಳು, 13 ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ.ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ,ಮಾಸ್ತಿ ಪ್ರಶಸ್ತಿ ,ಪಂಪ ಪ್ರಶಸ್ತಿ,ಗೊರೋರು ಪ್ರಶಸ್ತಿಗಳು ದೊರೆತಿವೆ. ಇಷ್ಟೇ ಅಲ್ಲದೇ ಶಿವಮೊಗ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು. ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಇವರನ್ನೂ ಕೂಡಾ ಈ 2020 ಬಿಡಲೇ ಇಲ್ಲ
ಹಾಸ್ಯನಟ -ಮೈಕಲ್ ಮಧು
ಏಪ್ರಿಲ್ ಮುಗಿದು ಮೇ ತಿಂಗಳು ಆರಂಭವಾಗುತ್ತಿದ್ದಂತೆ ಇತ್ತ ಕನ್ನಡದ ಹಿರಿಯ ಹಾಸ್ಯನಟ ಮೈಕಲ್ ಮಧು ನಮ್ಮನ್ನು ಅಗಲಿದರು . ಅವರಿಗೆ 55 ವರ್ಷ ವಯಸ್ಸು ಆಗಿತ್ತು . ಮನೆಯಲ್ಲಿ ಕುಸಿದು ಬಿದ್ದ ನಟನನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ,ಮೇ 13 ರಂದು ಬುಧವಾರ ಬೆಂಗಳೂರಿನ ಕೆ.ಆರ್‌ ಆಸ್ಪತ್ರೆಯಲ್ಲಿ ನಿಧನರಾದರು .ಕಳೆದ ಎರಡೂವರೆ ದಶಕಗಳಿಂದ ಕನ್ನಡದ ಸುಮಾರು 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಮೈಕಲ್‌ ಮಧು ವಿವಿಧ ಹಾಸ್ಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು.ಮೈಕಲ್ ಮಧು ಅವರು ಓಂ, ಲವ್ ಟ್ರೇನಿಂಗ್ ಸ್ಕೂಲ್, ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು, ಪಾಪಿಗಳ ಲೋಕದಲ್ಲಿ, ಎಕೆ 47, ಎ, ಮಿನುಗು ತಾರೆ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಕಾಶಿನಾಥ್ ಅವರ ನಿರ್ದೇಶನದ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಮೈಕಲ್ ಮಧು,ಕೇವಲ ನಟ ಮಾತ್ರವಲ್ಲದೇ ,ನ್ರತ್ಯ ಸಂಯೋಜಕರು ಕೂಡಾ ಆಗಿದ್ದರು ಆದುದ್ದರಿಂದಲೇ ಅವರಿಗೆ ಮೈಕಲ್ ಎಂಬ ಹೆಸರು ಅಂಟಿ ಕೊಂಡಿತ್ತು.
ನಟಿ-ಮೆಬಿನಾ ಮೈಕಲ್
ಚಿತ್ರರಂಗಕ್ಕೆ ಇದೀಗ ಪಾದಾರ್ಪಣೆ ಮಾಡಿದ್ದ ಕೊಡಗಿನ ಯುವ ಪ್ರತಿಭೆ ನಮ್ಮನ್ನು ಬಿಟ್ಟು ಅಗಲಿದರು . ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ’ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಸೀಸನ್ 4 ವಿನ್ನರ್ ಮೆಬಿನಾ ಮೈಕಲ್ ಅವರು ಭೀಕರ ರಸ್ತೆ ಅಪಘಾತದಲ್ಲಿ ಮೇ 26 ಮಂಗಳವಾರ ದಂದು ಸಂಜೆ ಮೃತಪಟ್ಟಿರು .ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ದೇವಿಹಳ್ಳಿ ರಾಷ್ಟೀಯ ಹೆದ್ದಾರಿ 75ರಲ್ಲಿ ಸಂಜೆ ಸುಮಾರು 4.30ರ ಸಮಯದಲ್ಲಿ ಅಪಘಾತ ಸಂಭವಿಸಿತ್ತು . ಟ್ರಾಕ್ಟರ್-ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿತ್ತು ಬೆಂಗಳೂರಿನಿಂದ ಸೋಮವಾರಪೇಟೆಗೆ ತಮ್ಮ ನಿವಾಸಕ್ಕೆ ಕಾರಿನಲ್ಲಿ ಮೇಬಿನಾ ಮೂವರ ಜೊತೆ ತೆರಳುತ್ತಿದ್ದರು. ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟ ಮೆಬಿನಾ, ಪ್ರತಿಯೊಂದು ಟಾಸ್ಕನ್ನೂ ಚೆನ್ನಾಗಿ ನಿಭಾಯಿಸುತ್ತಿದ್ದರು. ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ದಾಟಿದ್ದ ಆಕೆ ವಿಜೇತೆಯಾಗಿದ್ದರು. ರಿಯಾಲಿಟಿ ಶೋ ಬಳಿಕ ಮಾಡೆಲಿಂಗ್ನತ್ತ ಮುಖ ಮಾಡಿದ್ದ ಮೆಬಿನಾ ಅಲ್ಲೂ ಕೂಡಾ ಯಶಸ್ಸು ಗಳಿಸಿದ್ದರು.ತಮಿಳು ಚಿತ್ರ ಒಂದರಲ್ಲಿ ನಟಿಸುತ್ತಿದ್ದರು ,ಕನ್ನಡಲ್ಲೂ ಎರಡು ಸಿನಿಮಾಗಳಿಗೆ ಅವಕಾಶ ಪಡೆದಿದ್ದರು .
ನಟಿ- ಚಂದನಾ
ಇತ್ತ ನಗರದ ತಾವರೆಕೆರೆಯಲ್ಲಿ ನಟಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆಯಿತು ತಾವರೆಕೆರೆಯ ಕೃಷ್ಣಮೂರ್ತಿ ಲೇಔಟಿನ ನಿವಾಸಿ ಚಂದನಾ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು .ವಿಷ ಸೇವಿಸಿದ್ದ ಚಂದನಾರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತರಾಗಿದ್ದಾರೆ.29 ವರ್ಷದ ಚಂದನಾ ,ಕನ್ನಡ ಕಿರುತೆರೆ, ಜಾಹೀರಾತು, ಚಲನಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಮೇ 30 ರಂದು ವಿಷ ಸೇವನೆಯ ಸೆಲ್ಫಿ ವಿಡಿಯೋ ಮಾಡಿರುವ ಚಂದನಾ ಅವರು ತಮ್ಮ ಪ್ರಿಯಕರ ದಿನೇಶ್ ಎಂಬುವರ ಮೇಲೆ ಆರೋಪ ಮಾಡಿದ್ದಾರೆ.ತಾವರಕೆರೆ ಮುಖ್ಯರಸ್ತೆಯ ಕೃಷ್ಣಮೂರ್ತಿ ಲೇಔಟ್‌ನಲ್ಲಿರುವ ಮನೆಯಲ್ಲಿ ವಾಸವಿದ್ದ ಚಂದನಾ, ಲೈವ್ ವಿಡಿಯೊ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದರು.
ಸಂಗೀತ ನಿರ್ದೇಶಕ- ವಾಜಿದ್ ಖಾನ್
ಜೂನ್ ಮೊದಲ ದಿನವೇ ಬಾಲಿವುಡ್ಗೆ ಮತ್ತೊಂದು ಆಘಾತಕಾರಿ ಸುದ್ದಿ ಕಾದಿತ್ತು. ದಬಂಗ್ ಖ್ಯಾತಿಯ ಸಂಗೀತ ನಿರ್ದೇಶಕ ವಾಜಿದ್ ಖಾನ್ ಕಿಡ್ನಿ ವೈಫಲ್ಯದಿಂದ 42ನೇ ವಯಸ್ಸಿನಲ್ಲೇ ಕೊನೆಯುಸಿರೆಳೆದರು. ವಾಜಿದ್ ಖಾನ್. ಸಾಜಿದ್ – ವಾಜಿದ್ ಜೋಡಿ ಅಂತಲೇ ಬಾಲಿವುಡ್ನಲ್ಲಿ ಹೆಸರು ಮಾಡಿದ್ದ ಸಹೋದರರು. 1998ರಲ್ಲಿ ಸಲ್ಮಾನ್ ಖಾನ್ ಅವರ ‘ಪ್ಯಾರ್ ಕಿಯಾ ತೋ ಡರ್ನಾ ಕ್ಯಾ’ ಸಿನಿಮಾದಿಂದ ಸಂಗೀತ ನಿರ್ದೇಶಕರಾಗಿ ಎಂಟ್ರಿ ಕೊಟ್ಟ ಈ ಜೋಡಿ ಮತ್ತೆ ಹಿಂದಿರುಗಿ ನೋಡಿರಲಿಲ್ಲ. ಆ ಬಳಿಕ 22 ವರ್ಷಗಳ ಸಂಗೀತಪಯಣದಲ್ಲಿ 50ಕ್ಕೂ ಹೆಚ್ಚು ಹಿಟ್, ಸೂಪರ್ಹಿಟ್ ಸಿನಿಮಾಗಳಿಗೆ ಹಲವು ಚಾರ್ಟ್ಬಸ್ಟರ್ ಸಂಗೀತ ನೀಡಿದ್ದರು. ಅದರಲ್ಲೂ ಸಲ್ಮಾನ್ ಖಾನ್ರ ಅಚ್ಚುಮೆಚ್ಚಿನ ಸಂಗೀತ ನಿರ್ದೇಶಕರಾಗಿದ್ದ ಈ ಜೋಡಿ, ‘ದಬಾಂಗ್’, ‘ಹಲೋ’, ‘ವೀರ್’, ‘ಪಾರ್ಟನರ್’, ‘ವಾಂಟೆಡ್’ , ‘ಏಕ್ ಥಾ ಟೈಗರ್’ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಗೀತ ನೀಡಿ ಸೈ ಎನಿಸಿಕೊಂಡಿದ್ದರು. ಅವರು ಸಂಗೀತ ನೀಡಿದ ಕೊನೆಯ ಸಿನಿಮಾ ಕೂಡ ಸಲ್ಮಾನ್ ಖಾನ್ ನಾಯಕರಾಗಿದ್ದ ‘ದಬಾಂಗ್ 3’.ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವಾಜಿದ್ ಖಾನ್, ಅವರನ್ನು ಕೆಲ ದಿನಗಳ ಹಿಂದೆ ಚೆಂಬೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸಮಸ್ಯೆ ಉಲ್ಬಣಗೊಂಡ ಪರಿಣಾಮ ನಾಲ್ಕು ದಿನಗಳಿಂದ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಸೋಮವಾರ ಬೆಳಗಿನ ಜಾವ ಅವರು ಚಿಕಿತ್ಸೆಗೆ ಸ್ಪಂದಿಸದೆ ವಿಧಿವಶರಾಗಿದ್ದಾರೆ. ಲಾಕ್ಡೌನ್ ಮುಗಿದು ಇನ್ನೇನು ಚಿತ್ರೀಕರಣ ಪ್ರಾರಂಭವಾಗುತ್ತೆ ಅಂತ ಎದುರು ನೋಡುತ್ತಿದ್ದ ಬಾಲಿವುಡ್ ಮಂದಿ ಮತ್ತೆ ಕಣ್ಣೀರಾಗಿದ್ದಾರೆ.
ನಟ -ಚಿರಂಜೀವಿ ಸರ್ಜಾ
ಅದು ಭಾನುವಾರ ಜೂನ್ 7 ರಂದು ಮಧ್ಯಾಹ್ನ ಯುವ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾದರು ಎಂಬ ಸುದ್ದಿಯನ್ನು ಕೇಳಿ ಇಡೀ ಸ್ಯಾಂಡಲ್ವುಡ್ನ್ನು ಅಕ್ಷರಶಃ ಬೆಚ್ಚಿ ಬೀಳಿಸಿತ್ತು. ಇನ್ನೇನು ಚಿತ್ರರಂಗದಲ್ಲಿ ಹೊಸ ಸಾಧನೆ ಮಾಡಲು ಹೊರಟ್ಟಿದ್ದ ಚಿರು 39ನೇ ವಯಸ್ಸಿನಲ್ಲೇ ತಮ್ಮೆಲ್ಲಾ ಕನಸುಗಳನ್ನು ಬಿಟ್ಟು ಗುಡ್ ಬೈ ಹೇಳಿದ್ದರು. ಮದ್ಯಾಹ್ನ 2 ಗಂಟೆಗೆ ಸುಮಾರಿಗೆ ಕುಟುಂಬದೊಟ್ಟಿಗೆ ಊಟ ಮಾಡುತ್ತಿರುವಾಗ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಚಿರಂಜೀವಿ ಸರ್ಜಾ ಅವರನ್ನು ಜಯನಗರದ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು . ಆದರೆ, ಆಸ್ಪತ್ರೆಗೆ ಕರೆತಂದು ಕೆಲವೇ ನಿಮಿಷದಲ್ಲಿ ಚಿರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಚಿರಂಜೀವಿ ಸರ್ಜಾ ನಟಿ ಮೇಘನಾ ರಾಜ್ ಅವರ ಜೊತೆ 2017ರಲ್ಲಿ ನಿಶ್ವಿತಾರ್ಥ ಮಾಡಿಕೊಂಡಿದ್ದರು. 2018ರಲ್ಲಿ ವಿವಾಹವಾಗಿದ್ದರು. ಇದಾದ ಎರಡೇ ವರ್ಷದಲ್ಲಿ ಅವರು ಮೃತಪಟ್ಟಿದ್ದಾರೆ.ಅವರ ಸಾವಿಗೆ ಇಡೀ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದ್ದಾರೆ. 2009ರಲ್ಲಿ ತೆರೆಕಂಡ ವಾಯುಪುತ್ರ ಸಿನಿಮಾ ಮೂಲಕ ಚಿರಂಜೀವಿ ಸರ್ಜಾ ಬಣ್ಣದ ಬದುಕಿಗೆ ಕಾಲಿಟ್ಟಿದ್ದರು. ದಂಡಂ ದಶಗುಣಂ, ವರದ ನಾಯಕ, ಸಿಂಗ ಸೇರಿ ಸುಮಾರು 22 ಸಿನಿಮಾಗಳಲ್ಲಿ ನಟಿಸಿದ್ದರು.1980 ರಂದು ಆಕ್ಟೋಬರ್ 17ರಂದು ಬೆಂಗಳೂರಿನಲ್ಲಿ ಕಲಾವಿದರ ಕುಟುಂಬದಲ್ಲಿ ಜನಿಸಿದ್ದ ಚಿರಂಜೀವಿ ಸರ್ಜಾ, ವಾಯು ಪುತ್ರ ಚಿತ್ರದ ಮ‌ೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದರು. ಚಿಕ್ಕ ವಯಸ್ಸಿನಲ್ಲಿ ಚಿರಂಜೀವಿ ಸರ್ಜಾ ನಿಧನರಾಗಿರುವುದು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.
ನಿರ್ಮಾಪಕ- ಅನಿಲ್ ಸೂರಿ
ಜೂನ್ 3 ಬುಧವಾರ ದಂದು ಇನ್ನೊಂದು ಸ್ಯಾಡ್ ನ್ಯೂಸ್ ಬಂದಿತ್ತು . ಕೊರೋನಾ ಸೋಂಕಿಗೆ ಬಾಲಿವುಡ್ ನ ಹಿರಿಯ ನಿರ್ಮಾಪಕ ಅನಿಲ್ ಸೂರಿ ಸಾವನ್ನಪ್ಪಿದ್ದರು ಎಂದು .ಅವರಿಗೆ 77 ವರ್ಷ ವಯಸ್ಸಾಗಿತ್ತು . ಅನಿಲ್ ಸೂರಿ ಅವರಿಗೆ ಕಳೆದ ಜೂನ್ 2ರಂದು ಜ್ವರ ಕಾಣಿಸಿಕೊಂಡಿತು. ಮರು ದಿನ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಮುಂಬೈನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಅಂತೆ . ವೈದ್ಯಕೀಯ ತಪಾಸಣೆಯ ವೇಳೆ ಅವರಿಗೆ ಕೊರೊನಾ ತಗುಲಿರುವುದು ಪತ್ತೆಯಾಯಿತು. ಆದರೆ ಸಂಜೆ 7 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ‌ ಅವರು‌ ಸಾವನ್ನಪ್ಪಿದ್ದರು ಎಂದು ತಿಳಿದು ‌ಬಂದಿದೆ. ಅನಿಲ್‌ ಸೂರಿ ಅವರು ಕರ್ಮಯೋಗಿ, ರಾಜ್ ತಿಲಕ್ ನಂತಹ ಹೆಸರಾಂತ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.
ರಾಜಕೀಯ ಮುಖಂಡ -ಆಸ್ಕರ್ ಫೆರ್ನಾಂಡಿಸ್
ಹಿರಿಯ ಕಾಂಗ್ರೆಸ್ ಮುಖಂಡ, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಜೂನ್ 10 ರಂದು ಅನಾರೋಗ್ಯದ ನಿಮಿತ್ತ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 79 ವರ್ಷ ಪ್ರಾಯದ ಆಸ್ಕರ್ ಫರ್ನಾಂಡಿಸ್ ಅವರು ಎದೆ ನೋವು ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ನಗರದ ಕೊಡಿಯಾಲಬೈಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿಲಾಗುತ್ತಿದೆ.ಹಿರಿಯ ಕಾಂಗ್ರೆಸ್ ಮುಖಂಡ ಎದೆ ನೋವು ಮತ್ತು ಕಿಡ್ನಿ ಸಮಸ್ಯೆಯಿಂದ ಅವರು ಬಳಲುತ್ತಿದ್ದರೂ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.ಉಡುಪಿ ಮೂಲದವರಾದ ಆಸ್ಕರ್ ಫರ್ನಾಂಡಿಸ್ ಅವರು ಉಡುಪಿ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.ಅವರು ಆದಷ್ಟು ಬೇಗ ಚೇತರಿಕೆ ಕಂಡು ತಮ್ಮ ನಿವಾಸಕ್ಕೆ ಬರಲಿ ಎಂದು ಆಶಿಸೋಣ
ನ್ಯಾಯವಾದಿ- ಎಂ.ಸಿ.ನರಸಿಂಹನ್
ಹೈಕೋರ್ಟ್ ನ ಪ್ರಸಿದ್ಧ ಕಾರ್ಮಿಕ ನ್ಯಾಯವಾದಿ, ಕಮ್ಯುನಿಸ್ಟ್ ಪಕ್ಷದ ನಾಯಕರಾಗಿದ್ದ ಮಾಜಿ ಶಾಸಕ ಎಂ.ಸಿ.ನರಸಿಂಹನ್ ಜೂನ್ 10 ರಂದು ಬುಧವಾರ ಸಂಜೆ 5 ಗಂಟೆಗೆ ಬಸವೇಶ್ವರ ನಗರದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು . ಅವರಿಗೆ 98 ವರ್ಷ ವಯಸ್ಸು ಆಗಿತ್ತು ಹೈಕೋರ್ಟ್ ನ ಹಿರಿಯ ವಕೀಲರೂ ಮಾಜಿ ಶಾಸಕರು ಹಾಗೂ ಎಐಟಿಯುಸಿ ರಾಜ್ಯ ಸಮಿತಿ ಪೋಷಕರಾಗಿದ್ದ.ನರಸಿಂಹನ್ ಅವರು ಕಾರ್ಮಿಕ ವಿವಾದಗಳ ಬಗೆಗಿನ ಪ್ರಕರಣಗಳ ವಾದ ಮಂಡನೆಯಲ್ಲಿ ಹೆಸರಾಂತ ವಕೀಲರಾಗಿದ್ದರು.ರಾಜ್ಯದ ಕಮ್ಯುನಿಸ್ಟ್ ಚಳವಳಿಯ ಹಿರಿಯ ಮುಖಂಡರು ಮತ್ತು ಕಾರ್ಮಿಕ ನಾಯಕರೂ ಆಗಿದ್ದ ನರಸಿಂಹನ್ ಅವರು 1957ರಿಂದ 1962ರವರೆಗೆ ಕೆಜಿಎಫ್ ವಿಧಾನಸಭಾ ಕ್ಷೇತ್ರದಿಂದ ಸಿಪಿಐ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಅಂತೆಯೇ, 1962ರಿಂದ 1967ರವರೆಗೆ ವಿಧಾನ ಸಭೆಯಿಂದ ಪರಿಷತ್ ಗೆ ಆಯ್ಕೆಯಾಗಿದ್ದರು.ಕಾರ್ಮಿಕರ ಕನಿಷ್ಠ ವೇತನ ಕಾಯ್ದೆ ಸೇರಿದಂತೆ ದುಡಿಯುವ ವರ್ಗದ ಜನರ ಕಲ್ಯಾಣಕ್ಕೆ ಉಪಯೋಗವಾಗುವಂತಹ ಹಲವು ಕಾನೂನುಗಳು ರೂಪುಗೊಳ್ಳಲು ನರಸಿಂಹನ್ ಕಾರಣರಾಗಿದ್ದರು. 1957ರಲ್ಲಿ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಕೆಜಿಎಫ್ ಕ್ಷೇತ್ರದಿಂದ ಮೈಸೂರು ವಿಧಾನಸಭೆಗೆ ಚುನಾಯಿತರಾದರು. 1962ರ ಚೀನಾ ಮಹಾಯುದ್ಧದ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದ ಅವರು 1962ರಿಂದ 1967ರವರೆಗೂ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು.ಶಾಸನ ಸಭೆಗಳಲ್ಲಿ ದುಡಿಯುವ ಜನರ ಧ್ವನಿಯಾಗಿದ್ದ ಅವರು ರೈತ-ಕಾರ್ಮಿಕರ ಹಿತಾಸಕ್ತಿಯನ್ನು ಪರಿಣಾಮಕಾರಿಯಾಗಿ ಪ್ರತಿನಿಧಿಸಿದ್ದರು. .ಕಾರ್ಮಿಕರ ಧ್ವನಿ ಕ್ಷೀಣವಾಗಿರುವ ಇಂದಿನ ದಿನಗಳಲ್ಲಿ ಎಂ.ಸಿ.ಎನ್ ಅವರಂತಹ ಕಾರ್ಮಿಕ ವರ್ಗದ ಪಕ್ಷಪಾತಿಯ ನಿಧನದಿಂದ ಕಾರ್ಮಿಕ ವರ್ಗ ಇನ್ನಷ್ಟು ಬಡವಾಗಿದೆ.
ಬಾಲಿವುಡ್- ನಟ ಸುಶಾಂತ್ ಸಿಂಗ್ ರಜಪೂತ್
ಪ್ರಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 14ರ ಶುಕ್ರವಾರ ದಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಂದ್ರಾದಲ್ಲಿನ ತಮ್ಮ ನಿವಾಸದಲ್ಲಿಂದು ಆತ್ಮಹತ್ಯೆ ಮಾಡಿಕೊಂಡಿದ್ದರು. 34 ವರ್ಷದ ಸುಶಾಂತ್ ಈ ಕೃತ್ಯ ಮಧ್ಯಾಹ್ನ 1.30ರ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು ,'ಪವಿತ್ರ ರಿಶ್ತಾ' ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. '' ಕಾಯ್ ಪೋ ಚೇ' ಸಿನಿಮಾ ಮೂಲಕ ಮೊದಲ ಬಾರಿಗೆ ಬಾಲಿವುಡ್ ಪ್ರವೇಶಿಸಿದ್ದ ಸುಶಾಂತ್ ಸಿಂಗ್, 11 ಚಿತ್ರಗಳಲ್ಲಿ ನಟಿಸಿದ್ದು, ಫಿಲಂ ಫೇರ್ ಪ್ರಶಸ್ತಿಗೂ ಭಾಜನರಾಗಿದ್ದರು.ಅವರು ನಟಿಸಿದ್ದ 'ಶುದ್ಧ್ ದೇಶಿ ರೊಮ್ಯಾನ್ಸ್' ಸಿನಿಮಾದ ನಟನೆ ಮೆಚ್ಚುಗೆಗೆ ಪಾತ್ರವಾಗಿತ್ತು. ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜೀವನಾಧಾರಿತ ಚಿತ್ರ ಸುಶಾಂತ್ ಸಿಂಗ್ ಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತ್ತು.'ಕಿಸ್ ದೇಸ್ ಮೇ ಮೇರಾ ದಿಲ್' ಧಾರಾವಾಹಿ ಮೂಲಕ ಗುರುತಿಸಿಕೊಂಡಿದ್ದ ಸುಶಾಂತ್‍ಗೆ 'ಪವಿತ್ರ ರಿಶ್ತೆ' ಧಾರಾವಾಹಿ ಟೆಲಿವಿಷನ್ ಸ್ಟಾರ್ ವ್ಯಾಲ್ಯೂ ನೀಡಿತ್ತು.ಇವರ ಪ್ರತಿಭೆ ಮತ್ತು ಸಾಮರ್ಥ್ಯ ಗುರುತಿಸಿದ ಬಾಲಿವುಡ್ ಇವರನ್ನು ಕೈ ಬೀಸಿ ಕರೆಯಿತು. 'ಡಿಟೆಕ್ಟಿವ್ ಬ್ಯೂಮ್ ಕೇಶ್ ಭಕ್ಷಿ' ,' ರಭಟಾ', 'ಸಂಚಾರಿಯಾ', 'ಚಿಚ್ಚೋರೆ ಮೊದಲಾದ ಹಲವು ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ನಟಿಸಿ ಮನೋಜ್ಞ ಅಭಿನಯದ ಮೂಲಕ ರಂಜಿಸಿದ ಸುರದ್ರೂಪಿ ನಟ ರಜಪುತ್ ಚಿತ್ರ ರಸಿಕರನ್ನು ತಮ್ಮ ಅಗಾಧ ಪ್ರತಿಭೆಯಿಂದ ರಂಜಿಸಿದರು.ಇಂದು ಅತ್ಯುತ್ತಮ ಟೆಲಿವಿಷನ್ ನಟ , ಸ್ಕ್ರೀನ್ ಪ್ರಶಸ್ತಿ, ಜೀ ಅವಾಡ್ರ್ಸ್, ಮೆಲ್ಬೋರ್ನ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳಿಗೆ ಪಾತ್ರರಾಗಿದ್ದ ಸುಶಾಂತ್ ,ನಟನೆ ಅಲ್ಲದೆ ಅದ್ಭುತ ನೃತ್ಯ ಪಟುವೂ ಆಗಿದ್ದರು. ಅವರದೇ ಆದ ನವೋದ್ಯಮವನ್ನು ಸ್ಥಾಪಿಸಿ ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದರು.
ಇದು ಸಾವು ನೋವು ಅನುಭವಿಸಿದ ಸೆಲೆಬ್ರಿಟಿಗಳ ಸಣ್ಣ ನೋಟವಾಗಿದೆ, ನಾವುಗಳು ದಿನನಿತ್ಯ ಇವರ ಬಗ್ಗೆ ಕಂಡು ಕೇಳಿ ತಿಳಿದು ಕೊಂಡಿದ್ದೇವೆ.ಸಾಕಷ್ಟು ಇವರುಗಳ ಸಿನಿಮಾಗಳನ್ನು ನೋಡಿದ್ದೇವೆ .ಅವರುಗಳು ಹೇಗೋ ನಮಗೆ ಅತೀ ಆಪ್ತರೆನ್ನಿಸಿ ಬಿಡುತ್ತಾರೆ. ಏನೇ ಇರಲಿ ಸಾವಿನ ದವಡೆಯನ್ನು ಸ್ಪರ್ಶಿಸಿ ಬಂದವರು,ಅತೀ ಚಿಕ್ಕ ಪ್ರಾಯದಲ್ಲೇ ಇಹಲೋಕ ತ್ಯಜಿಸಿದವರನ್ನು ಕಂಡರೆ ನಿಜಕ್ಕೂ ದುಃಖವಾಗುತ್ತದೆ,ಆವರೆಲ್ಲರಿಗೂ ಶಾಂತಿ ದೊರಕಲಿ ಇನ್ನು ಉಳಿದಿರುವ 2020 ಅರ್ಧ ವರ್ಷದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಿರಲಿ ಎಂಬ ಆಶಯ ನಮ್ಮೆಲ್ಲರದ್ದು ಆಗಿರಲಿ .





.

ಶನಿವಾರ, ಜೂನ್ 13, 2020

ಕಾಲ ಮಿತಿಗೆ ಇಳಿದ ಯಕ್ಷಗಾನ ಮೇಳಗಳು


ಹೌದು !ಕಾಲಕ್ಕೆ ತಕ್ಕಂತೆ ಕೋಲ ಎಂಬ ಆಡು ನುಡಿ ನಮ್ಮಲಿದೆ . ಎಲ್ಲವೂ ಕಾಲದ ಮಹಿಮೆ .ಕಾಲಾಯ ತಸಂಹೀ ನಮಃ ಎಂದು ಅದಕ್ಕೆ ಹೇಳುದೇನೋ ?ಗಂಡು ಕಲೆ ಯಕ್ಷಗಾನ ಕರಾವಳಿ ಕರ್ನಾಟಕದ ಜನಪ್ರೀಯ ಜಾನಪದದ ರಂಗ ಭೂಮಿ ರೂಪ ,ಧಾರ್ಮಿಕ ಕಲೆ ,ನವ ರಸವನ್ನು ಒಂದೇ ವೇದಿಕೆಯಡಿಯಲ್ಲಿ ತಂದು ಜನಮನವನ್ನು ಯಥೇಚ್ಛವಾಗಿ ತಣಿಸುವ ಅಭೂತ ಪೂರ್ವ ಕಲಾಪ್ರಕಾರ, ಭಕ್ತಿ ,ಭಾವವನ್ನು ಮೆರೆಯುವ ದೇವತಾರಾಧನೆ ಕಲೆ. ಚೆಂದದ ವೇದಿಕೆ,ನೃತ್ಯ, ಮಾತುಗಾರಿಗೆ ,ಹಾಡುಗಾರಿಕೆ ,ವೇಷ -ಭೂಷಣ, ಚಂಡೆ -ಮದ್ದಳೆ ಶ್ರುತಿಯ ನಿನಾದ ಇವೆಲ್ಲವನ್ನೂ ಒಂದೇ ಸೂರಿನಡಿ ಕಟ್ -ಕಾಪಿ -ಪೇಸ್ಟ್ ಇಲ್ಲದೇ ನೇರವಾಗಿ ಕಾಣಸಿಗುವ ಏಕೈಕ ಕಲೆ ಅದು ಯಕ್ಷಗಾನ .ಇದರಲ್ಲಿ ತೆಂಕು ಮತ್ತು ಬಡಗು ತಿಟ್ಟು ಎಂಬ ಎರಡು ವಿಧಗಳಿವೆ. ಬಡ ಬೆಡಗು ಎಂದು ಇನ್ನೊಂದು ವಿಧ ವಿದ್ದರೂ ,ಅದು ಬಡಗು ತಿಟ್ಟು ಮಾದರಿ.ಯಕ್ಷಗಾನದ ಪದ್ಧತಿ ಒಂದೇಯಾದರೂ , ತುಸು ಪರಿ ಮಾತ್ರ ಬೇರೆ. ಇತ್ತೀಚಿಗೆ ಜನಪ್ರೀಯತೆ ಗೊಳ್ಳುತ್ತಿರುವ ತಾಳ ಮದ್ದಳೆ ಕೂಡಾ ಯಕ್ಷಗಾನದ ಇನ್ನೊಂದು ಭಾಗ ,ಮಗ್ಗುಲು .ಇನ್ನು ಯಕ್ಷಗಾನದ ಮೇಳಗಳಲ್ಲಿ ಎರಡು ವಿಧವಿದೆ.ಬಯಲಾಟ ಮೇಳ ,ಮತ್ತು ಡೇರೆ (ಟೆಂಟ್)ಮೇಳ . ಬಯಲಾಟ ಎಂದರೆ ದೇವಸ್ಥಾನದ ವತಿಯಿಂದ ನಡೆಯಲ್ಪಡುವ ಸೇವಾದರ ಹರಕೆಗನುಗುಣವಾಗಿ ನಡೆಯುವ ಯಕ್ಷಗಾನ ಮೇಳವಾದರೇ, ಅಲ್ಲಲ್ಲಿ ಡೇರೆ ಇಟ್ಟು ನಿರ್ದಿಷ್ಟ ಟಿಕೆಟ್ ನೊಂದಿಗೆ ಆಡುವ ಆಟಕ್ಕೆ ಡೇರೆ ಮೇಳ ಎಂದು ಕರೆಯಲಾಗುತ್ತದೆ .ಹೆಚ್ಚಾಗಿ ಹರಕೆ ಆಟಗಳೇ ಅಧಿಕ ಪ್ರಾಮಾಣದಲ್ಲಿರುವುದರಿಂದ ಬಯಲಾಟಗಳೇ ಹೆಚ್ಚು ಕಾಣಸಿಗುತ್ತದೆ. ಆಧುನಿಕ ವೈಜ್ಞಾನಿಕ ತಂತ್ರಜ್ಞಾನಗಳ ನಡುವೆ ಇಂದಿಗೂ ಸಹಾ ಯಕ್ಷಗಾನ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ ಎಂದರೆ ಅದಕ್ಕೆ ಯಕ್ಷಗಾನ ಪ್ರೀಯರ ಪ್ರೋತ್ಸಾಹ ,ಧಾರ್ಮಿಕತೆಯಲ್ಲಿನ ನಂಬಿಕೆಯೇ ಪ್ರಧಾನ ಅಂಶವೆನ್ನಲು ಅಡ್ಡಿಯಿಲ್ಲ .ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ ದಿನದಿಂದ ದಿನಕ್ಕೆ ಒಂದೊಂದು ಕ್ಷೇತ್ರ ದಿಂದ ಹುಟ್ಟಿಕೊಳ್ಳುತ್ತಿರುವ ಯಕ್ಷಗಾನ ಮೇಳಗಳೇ ಸಾಕ್ಷಿ.
ಏನೇ ಇರಲಿ, ಆದರೆ ಬೇಸರದ ವಿಚಾರವೆಂದರೆ ಹೆಚ್ಚಿನ ಯಕ್ಷಗಾನ ಮೇಳಗಳು ಕಾಲ ಮಿತಿಗೆ ಸೀಮಿತವಾಗಿರುವುದು. ಸಂಜೆ 7 ಗಂಟೆಯಿಂದ ರಾತ್ರಿ 12ರ ಒಳಗೆ ಕಥಾಪ್ರಸಂಗವನ್ನು ಪೂರ್ಣಗೊಳಿಸಿ ಪೆಟ್ಟಿಗೆಯನ್ನು ಕಟ್ಟುವ ಪದ್ಧತಿ ಜಾರಿಯಲ್ಲಿದೆ.ಆರಂಭದಲ್ಲಿ ಒಂದೆರಡು ಮೇಳಗಳಿದ್ದೂ ,ತದನಂತರ ಅದರ ಅಂಕೆ ಸಂಖ್ಯೆ ವ್ರದ್ದಿಸುತ್ತಾ ಹೋಗುತ್ತಿದೆ.ಇದು ಹಲವರಿಗೆ ಅರಗಿಸಿಕೊಳ್ಳಲಾರದ ವಿಚಾರವೆಂದರೂ, ಅತಿಶೋಯೋಕ್ತಿಯಾಗಲಾರದು. ಬೆಳಿಗ್ಗೆ ತನಕ ನಿದ್ರೆ ಬಿಟ್ಟು ನೋಡುವವರ ಸಂಖ್ಯೆ ಕುಂಠಿತಗೊಂಡಿದೆ .,ಈಗೇನಿದ್ದರೂ ಜನರು ಪಾಸ್ಟ್ ಬದುಕಿಗೆ ಹೊಂದಿಕೊಂಡಿದ್ದಾರೆ.ಎಲ್ಲವೂ ಬೇಗ ಬೇಕು.,ವೇಗದ ಜಿಂದಗಿಯಲ್ಲಿ ಮನೋರಂಜನಾತ್ಮಕವಾಗಿಯೂ ,ಸಹಾ ಜನತೆ ಅದನ್ನೇ ಬಯಸುವುದರಿಂದ ವೀಕ್ಷಕರ ಕೊರತೆ ನಿವಾರಣೆಗೆ ಕಾಲ ಮಿತಿ ಮಾಡದ ವಿಧಿಯಿಲ್ಲ.,ಆಟ ಆಡಿಸುವ ಮನೆಯ ನಾಲ್ಕು ಮಂದಿ ಮತ್ತು ಕಲಾವಿದರುಗಳೇ ಬಿಟ್ಟರೇ ,ಪ್ರೇಕ್ಷಕರ ಸಂಖ್ಯೆ ಬೆರಳಣಿಕೆಷ್ಟು ಎಂಬುದು ಸತ್ಯಕ್ಕೆ ಅರ್ಹವಾದರೂ ,ಸುಮಾರು 5-6 ಶತಮಾನಗಳ ಇತಿಹಾಸ ಇರುವ ಯಕ್ಷಗಾನ ಕಲೆಗೆ ಭಂಗ ತರುವುದು , ಹೀಗೆ ತುಂಡರಿಸುವುದು ಎಷ್ಟು ಸಮಂಜಸ ? ಕಥೆಗಳಲ್ಲಿ ಕಟ್ ,ಕೆಲವು ಪಾತ್ರಗಳ ಪ್ರವೇಶವೂ ಇಲ್ಲ.ಸ್ವಷ್ಟ ,ಸ್ವಚ್ಛ ,ಶುದ್ಧ ಸಂಭಾಷಣೆ, ಚಂಡೆ-ಮದ್ದಳೆಯೊಂದಿಗಿನ ನಿನಾದದ ನೃತ್ಯ ,ಭಾಗವತಿಕೆ ಪದಗಳೇ ಪೂರ್ಣ ಯಕ್ಷಗಾನದ ಜೀವಾಳ., ಅದೇ ಇಲ್ಲ ಅಂದ ಮೇಲೆ ಯಕ್ಷಗಾನ ನೋಡುವುದಾದರೇ, ಅದು ಯಕ್ಷಗಾನ ಅಲ್ಲವೇ ಅಲ್ಲ ಅನ್ನುವ ಕಟು ಭಾವನೆ ಮನಸ್ಸಿನಲ್ಲಿ ಪುಟಿದೇಳುತ್ತದೆ. ಎಲ್ಲಾ ವಿಚಾರದಲ್ಲೂ ,ಕಾಲಕ್ಕೆ ಹೊಂದಿಕೊಂಡು ಬಾಳುವುದು ಸರಿಯಲ್ಲ .ಯಕ್ಷಗಾನವೆಂದರೆ ಪರಂಪರೆಯ ಕಲೆ .ಇದೀಗ ಕಾಲ ಮಿತಿಯಲ್ಲಿರುವ ಯಕ್ಷಗಾನ ಕಾಲ ಕ್ರಮೇಣ ಕಾಲವಾದರೂ ಅಚ್ಚರಿ ಇಲ್ಲ.ಅದಕ್ಕಾಗಿ ಯಕ್ಷಗಾನದ ಪೋಷಕರು , ಪ್ರೋತ್ಸಾಹಕರು ಸಹರಿಸಬೇಕು . ಯಕ್ಷಗಾನ ಉಳಿಯಬೇಕು .ಬೆಳೆಯಬೇಕು . ಕಲೆಯು ಉಳಿವು ಮತ್ತು ಬೆಳವಣಿಗೆ ಯಕ್ಷಗಾನ ಪ್ರೀಯರು ಯೋಚಿಸಬೇಕಾಗಿದೆ.ಸಂತೋಷದ ವಿಚಾರವೆಂದರೇ ಡೇರೆ ಮೇಳಗಳೂ,ಸೇರಿದಂತೆ ಕೆಲವು ಬಯಲಾಟ ಮೇಳಗಳು ಇಂದಿಗೂ ಸಹಾ ಮುಂಜಾನೆ ತನಕ ಆಟ ಆಡಿಸುತ್ತಿವೆ ಇದು ಕೊಂಚ ತೃಪ್ತಿದಾಯಕ ಬೆಳವಣಿಗೆಯಾದರೂ , ಇವುಗಳು ಭವಿಷ್ಯತ್ ನಲ್ಲಿ ಕಾಲಮಿತಿಗೆ ಜಾರದಿರಲಿ ಎಂಬ ವಿಶ್ವಾಸ ,ಆಶಯ ನನ್ನದು.ರಾತ್ರಿ 9:30 ಕ್ಕೆ ಪ್ರಾರಂಭವಾಗಿ ಮುಂಜಾನೆ 6:00 ಗಂಟೆ ತನಕ ಮಂಗಳ ಪದ್ಯ ಆಲಿಸಿ, ಮನೆಕಡೆ ಹೆಜ್ಜೆ ಹಾಕುವ ಪೂರ್ತಿ ಪ್ರಮಾಣದ ಪಾತ್ರವರ್ಗವನ್ನು ಕಣ್ತುಂಬಿಸಿಕೊಳ್ಳುವ 3-4 ಭಾಗವತರುಗಳಿಂದ ಸಂಪೂರ್ಣ ಪದ್ಯದ ರಸಗವಳವನ್ನು ಆಸ್ಪಾದಿಸುವ ,ಆಲಿಸುವ ,ಕಡ್ಲೇಕಾಯಿ ,ವಡೆ ,ಅಡಿಗಡಿಗೆ ಚಾ ಹೀರುವ, ಕಣ್ಣು ಕೂರುವ, ಕೋಳಿ ನಿದ್ರೆ ಮಾಡುವ ಮಜಾನೇ ಬೇರೆ ಅಲ್ಲವೇ ?!