ಪ್ರಿಯ ಹೆಚ್ .ಆರ್ .ರಂಗನಾಥ್ ರವರೇ,
ನಿಮ್ಮ ಕನಸ್ಸಿನ ಕೂಸಾದ public tv ಯಲ್ಲಿ ಇಂದು
(10 .06 .2012 ) ಗಂಟೆ ಗಟ್ಟಲೆ ಗಳ ಕಾಲ ನಿತ್ಯಾನ೦ದ ಸ್ವಾಮಿಯ ವಿವಾದದ ಬಗ್ಗೆ ವಿಶೇಷ live ಕಾರ್ಯಕ್ರಮ
ಪ್ರಸಾರವಾಗಿತ್ತು ನಿರೂಪಕ ರಾಘವ್ ಸೂರ್ಯರಾಗಿದ್ದರು .ಸ್ಟುಡಿಯೋದೊಳಗೆ ಮಹಿಳಸಂಘಟನೆಯ ಅಧ್ಯಕ್ಷರಾದ
ಸುನಂದಾ,ನಿರ್ಮಾಪಕ ಮುನಿರತ್ನ ,ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .ಕಾರ್ಯಕ್ರಮದ ಉದ್ದೇಶ ನಿತ್ಯಾನ೦ದ
ಸ್ವಾಮಿಯ ಕರ್ಮಕಾಂಡದ ಬಗ್ಗೆ ಇತರ ಕೆಲವು ಮಠ ,ಸ್ವಾಮಿಜಿಗಳ ಅಭಿಪ್ರಾಯವನ್ನು ಆಲಿಸುದಾಗಿತ್ತು ನಿಜಕ್ಕೂ
ಉತ್ತಮ ಕಾರ್ಯಕ್ರಮವೇಯಾಗಿದ್ದರೂ, ಪೂರ್ವಗ್ರಹಪಿಡಿತವಾಗಿ ರೂಪುಗೊಳ್ಳಬಾರದಿತ್ತು .
ಎತ್ತಿಗೆ ಜ್ವರ
ಬಂದರೆ ಎಮ್ಮೆಗೆ ಬರೆ ಹಾಕಿದಂತೆ ಎಂಬ ಉಕ್ತಿಗೆ ಪೂರಕವಾಗಿತ್ತು .ಪ್ರಸ್ತುತವಲ್ಲದ ವಿಚಾರವನ್ನು ಎಳೆದು
ಒಂದೊಂದು ಸ್ವಾಮಿಜಿಗೆ ವಿಚಾರಹೀನವಾದ ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದು , ಅದರಲ್ಲೂ ಮುಖ್ಯವಾಗಿ
"ಪ್ರತಿಭಟನೆಯ ಮೂಲಕ ಕಠರಿವೀರ ಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸಿ ,ಉಡುಪಿ -ಮ೦ಗಳೂರಿನಲ್ಲಿ
ಕಲೆಕ್ಷನ್ ಕುಂಟಿತಗೊಳ್ಳಲಿಕ್ಕೆ ಕಾರಣಿಕರತರಾದ ಉಡುಪಿಯ ಶಿರೂರು ಮಠದ ಶ್ರೀ ಲಕ್ಷ್ಮಿ ತೀರ್ಥ
ಸ್ವಾಮೀಜಿಗಳು ಈಗ ಪರಿಸ್ತಿತಿ ಗೊತ್ತಿದ್ದೂ ಮಠದಲ್ಲಿ ಕುಳಿತುಕೊಂಡಿರುದು ಯಾಕೆ ?" ನಿತ್ಯಾನ೦ದ
ಸ್ವಾಮಿಯ ಬಗ್ಗೆ ಯಾಕೆ ಪ್ರತಿಭಟನೆಗೆ ಮುಂದಾಗಿಲ್ಲ ಎಂಬ ಕಾರಣವನ್ನು ನೀಡಿ ,ಸಂಕ ಮುರಿದಲ್ಲೇ ಸ್ನಾನ
ಎನ್ನುವಂತೆ ,ಪುಂಖಾನು -ಪುಂಖವಾಗಿ ರಾಘವ್ ಸೂರ್ಯ, ಸುನಂದಾ,ಮುನಿರತ್ನ ಅದೇ ಪ್ರಶ್ನೆಯನ್ನು ಬಾರಿ
-ಬಾರಿ ಕೇಳುತ್ತಿದ್ದ ರೀತಿ ,ಇನ್ನು ತೀರ personal ಎನ್ನುವ ವಿಚಾರಕ್ಕೆ ಕೈ ಹಾಕಿದ್ದು
public tv ಯೋಗ್ಯತೆಗೆ ತಕ್ಕುದಾದ್ದಲ್ಲ ಎನ್ನುದು ನನ್ನ ಅಭಿವ್ಯಕ್ತಿ .ನಿಜಕ್ಕೂ ಪೂರ್ಣ ಕಾರ್ಯಕ್ರಮವನ್ನು
ವಿಕ್ಷಿಸುತ್ತ ತೆರಳುತ್ತಿದ್ದರೆ ,ಈ ಕಾರ್ಯಕ್ರಮ ಪೂರ್ವಯೋಜಿತವಾಗಿ ಉಡುಪಿ ಶ್ರಿರು ಮಠದ ಶ್ರೀ ಲಕ್ಷ್ಮಿತೀರ್ಥ
ಸ್ವಾಮೀಜಿಗಳನ್ನು ಬೊಟ್ಟುಮಾಡಿ ತೋರಿಸುವ ಸಲುವಾಗಿ ರೂಪಿಸಲಾಗಿದೆ ಎಂದು ಭಾಸವಾಗುತಿತ್ತು .ಅಷ್ಟಕ್ಕೂ
ಸ್ಟು ಡಿಯೋದೊಳಗೆ ನಿರ್ಮಾಪಕ ಮುನಿರತ್ನರ ಅವಶ್ಯಕತೆ ಇತ್ತೇ ? "ಚಿತ್ರದಲ್ಲಿ ಹಿಂದೂ ದೇವತೆಗಳ
ಅವಹೇಳಕಾರಿ ಸನ್ನಿವೇಶವನ್ನು ಇದೆ ಅದನ್ನು ತೆರವು ಮಾಡಬೇಕು ಎಂಬ ಉದ್ದೇಶದಿಂದ ಚಿತ್ರ ಪ್ರದರ್ಶನದ
ವಿರುದ್ದ ಪ್ರತಿಭಟನೆ ಮಾಡಲಾಯಿತು .ಅದರಲ್ಲಿ ನಾನು ಮಾತ್ರ ಭಾಗಿಯಾಗಿರದೇ, ಬಜರಂಗದಳ ಸೇರಿದಂತೆ ವಿವಿಧ
ಹಿಂದೂ ಸಂಘಟನೆಗಳು ಪಾಲ್ಗೊಂಡಿದ್ದವು .ಆದರೆ ನಿತ್ಯಾನ೦ದ ಸ್ವಾಮಿಯ ವಿಚಾರವೇ ಬೇರೆ ರೀತಿಯದ್ದು .ಮಹಿಳೆಯರಿಗೆ
ಲೈಂಗಿಕ ಕ್ರಿಯಗೆ ಬಳಸಿಕೊಳ್ಳಲಾಗುತ್ತಿದೆ ಎಂಬುದು .ನಿತ್ಯಾನ೦ದ ಸ್ವಾಮಿಯ ವಿವಾದ ಇಂದು ಮಾಧ್ಯಮಗಳ
ಮೂಲಕ ನಾನು ತಿಳಿದಿದ್ದೇನೆ .ಇದಕ್ಕೆ ಖಂಡಿತವಾಗಿಯೂ ನನ್ನ ವಿರೋಧವಿದೆ ,ಇದು ಅಪರಾಧ . ನಾನು ಸಹ
ಇದರ ವಿರುದ್ದ ಪ್ರತಿಭಟಿಸಲು ಸಿದ್ದ" ಎಂದು ಎಷ್ಟೇ ಸ್ವಾಮೀಜಿ ಅವಲತ್ತು ಕೊಂಡರೂ ,ಮುನಿರತ್ನ,ಸುನಂದಾ,
ಮೇಲಿನಿಂದ -ಮೇಲೆ ಕಠರಿವೀರ ಚಿತ್ರ ದ ಬಗ್ಗೆಯೇ ಪ್ರಶ್ನೆಗಳನ್ನು, ಮುಸಿನಗುತ್ತ ತಾವು ಒಂದಷ್ಟು
ಸಂಭಂದ ರಹಿತ ಪ್ರಶ್ನೆಗಳ ಸುರಿಮಳೆ ಗೈದು ಅವರುಗಳಿಗೆ ಸಾಥ ನೀಡುತ್ತಿರುವ ನಿರೂಪಕ ರಾಘವ್ ಸೂರ್ಯ
ನ ಈ ಒಂದು ನಡೆ ನಿಜಕ್ಕೂ ಖಂಡನೀಯ .ಅಸಂಜಸವಾದದ್ದು . ಸ್ವರ್ಧಾತ್ಮಕ ಯುಗದಲ್ಲಿ ಸಂಚರಿಸುತ್ತಿರುವ
ಮಾಧ್ಯಮಗಳ ಮಧ್ಯೆ ಇತ್ತೀಚಿಗೆ ರೂಪುಗೊಂಡಿರುವ ನಿಮ್ಮ ಚಾನಲ್ನ ಏಳಿಗೆಗೆ ಆರೋಗ್ಯಕಾರಿಯಲ್ಲ
.ಕೊನೆಯದಾಗಿ ಮಾತು ಒಂದು ಬಿಗ್ ಬುಲೆಟ್ ನಂತೆ ಸ್ಚರಿತ್ರ್ಯ ,ಸನ್ನಡತೆ ,ನ್ಯಾಪರದಿಕ್ಕಿನಲ್ಲಿ
ಸಾಗುತ್ತಿರುವ ನಿಮ್ಮ ಆ ಶಿಸ್ತುಬದ್ದ ಡೈಲಾಗ್ ಡೆಲಿವರಿ ಸ್ ನ ನಿಮ್ಮ ಸಹ ಉದ್ಯೋಗಿಗಳಿಗೂ ಕೊಂಚ ಹೇಳಿ ಕೊಡಿ
