ಸೋಮವಾರ, ಅಕ್ಟೋಬರ್ 24, 2022

ಇಂತಹ ಎಡಬಿಡಂಗಿಗಳಿಗೆ ಪ್ರತಿಕ್ರೀಯೆ ನೀಡುವ ಅಗತ್ಯ ವಿಲ್ಲಾ !

'ಕಾಂತಾರ'ಸಿನಿಮಾ ಇನ್ನಿಲ್ಲದ ದಾಖಲೆಗಳನ್ನು ಮಾಡಿ ಮುನ್ನುಗುತ್ತಿದೆ ,ಸೆ 30 ರಂದು ತೆರೆಕಂಡು,ಎಲ್ಲೂ ನೆಗೆಟಿವ್ ಕಾಮೆಂಟ್ ಗಳಿಲ್ಲದೇ ಎಲ್ಲಾ ವರ್ಗದ ಸಿನಿ ವೀಕ್ಷಕರು,ವಿಮರ್ಶಕರೂ ಸಹಾ ೫ ಕ್ಕೆ ನಾಲ್ಕೂವರೆ ರೇಟಿಂಗ್ ಕೊಟ್ಟಿದ್ದಾರೆ. ಸಿನಿಮಾವು ಕೂಡಾ ಅಷ್ಟೇ ಅದ್ಭುತವೂ ಕೂಡಾ ಆಗಿತ್ತು. ದೈವರಾಧನೆ, ಆಚಾರ -ವಿಚಾರ, ನಡೆ-ನುಡಿ, ನೆಲ-ಜನ ಸಂಸ್ಕೃತಿಯನ್ನು ಹೊತ್ತು ತಂದ ನೈಜ ಕಥಾ ಹಂದರವನ್ನು ಹೊಂದಿರುವ ಪೂರ್ಣ ಕುಟುಂಬ ಕುಳಿತು ನೋಡುವಂತಾ ಕಮರ್ಷಿಯಲ್ ಸಿನಿಮಾ ಇದಾಗಿತ್ತು. ಇದಕ್ಕಾಗಿಯೇ ಇಂದು ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ,ಇತರ ಭಾಷೆಗಳಲ್ಲಿ ರಿಮೇಕ್ ಆಗಿ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಮೂಡಿ ಬಂದಿದ್ದು ಇತಿಹಾಸ.ಇಂತಿಪ್ಪ ಸಿನಿಮಾದ ಬಗ್ಗೆ ಮೊನ್ನೆ ಕೆಲಸ ಇಲ್ಲದ ನಾಲಾಯಕ್ ಒಬ್ಬ ನಾಲಿಗೆ ಹರಿ ಬಿಟ್ಟಿದ್ದಾನೆ. ಇಲ್ಲ-ಸಲ್ಲದ ವಿಚಾರಗಳಿಗೆ ಕಾಂಟ್ರವರ್ಸಿ ಕ್ರೀಯೇಟ್ ಮಾಡುವ ಚೇತನ್ ಎಂಬಂತಾ ಕಾಂತಾರ ಸಿನಿಮಾದಲ್ಲಿ ಅಳವಡಿಸಲಾಗಿರುವ ದೈವರಾಧನೆ ಹಿಂದೂ ಧರ್ಮಕ್ಕೆ ಸಂಬಂಧ ಪಟ್ಟಿದ್ದು ಅಲ್ಲ ಅನ್ನುತ್ತಿದ್ದಾನೆ.ವೈದಿಕ, ಭ್ರಾಹ್ಮಣ್ಯ ಮಣ್ಣಾಗಟ್ಟಿ ಎಂದು ವಿಚಾರ ಹೀನ ವಿವಾದ ಎಬ್ಬಿಸುತ್ತಿರುವ ಈತ ಅದೇನೋ ದೊಡ್ಡ ಅತಿರಥನಲ್ಲ ಅಮೇರಿಕಾದಲ್ಲಿ ಜನ್ಮ ತಾಳಿ ಭಾರತದ ನೆಲದಲ್ಲಿ ನೆಲೆನಿಂತ ಕಮ್ಯೂನಿಷ್ಟ್ ಕಮಂಗಿ ಅಂತೆ. 'ಆ ದಿನಗಳು' ಎಂಬ ಸಿನಿಮಾದ ಮೂಲಕ ನಟನಾಗಿ ಗುರುತಿಸಿಕೊಂಡವನು.
ಅದೇನೋ ಆ ದಿನಗಳಲ್ಲಿ ಸ್ವಲ್ಪ ಹೆಸರು ಮಾಡಿತ್ತು ಈತನ 'ಆ ದಿನಗಳು 'ಎಂಬ ಮೂವಿ.ಮತ್ತೆಲ್ಲಾ ಏಕದಂ ಪ್ಲಾಪ್ ! 15 ವರ್ಷಗಳಲ್ಲಿ ಕೇವಲ 4 ಸಿನಿಮಾ ಮಾಡಿ ಬದಿಗೆ ಸೇರಿದ.ಯಾವೊಬ್ಬ ನಿರ್ದೇಶಕನೂ ಅವಕಾಶ ಕೊಡದೇ ಇದ್ದಾಗ ನಾನು ಸಮಾಜ ಸೇವಕ ಎಂಬ ಹಣೆಪಟ್ಟಿ ಕಟ್ಟಿ ಕೊಂಡು ಹೀಗೆ ವಿವಾದ ಮಾಡುತ್ತಲೇ ಬಂದವನು. ಈತನ ವರ್ತನೆಯನ್ನು ವರ್ಣರಂಜಿತವಾಗಿ ತೋರಿಸುವ ಬಿಲಾಸ್ ಬಿಟ್ಟ ಮಾಧ್ಯಮಗಳು ಆತನನ್ನು ದೊಡ್ಡ ಹೀರೊವನ್ನಾಗಿ ಮಾಡಿ ಬಿಟ್ಟಿವೆ. ಆತನ ಸ್ಟೇಟ್ಮೆಂಟ್ ಗೆ ರಿಪ್ಲೇ ಮಾಡುವ ನಾವುಗಳೂ ಸಹಾ ಅದಕ್ಕೆ ಸಾತ್ ಕೊಟ್ಟು ಉರಿಯುತ್ತಿರುವ ಬೆಂಕಿ ತುಪ್ಪ ಸುರಿಸುತ್ತಿದ್ದೇವೆ.ಆತನ ಮಾತಿನಲ್ಲಿ ಎಳ್ಳಷ್ಟೂ ಆರ್ಥವಿಲ್ಲದಾಗ ಅದನ್ನು ಬದಿಗಿರಿಸಿ ಸುಮ್ಮನಾಗಬೇಕು ಅಲ್ವೇ? ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದೇ ? ಗಾದೆ ಮಾತು ಎಷ್ಟು ಸೊಗಸಾಗಲಿದೆ.ನಿನ್ನೆ ಉಂಟಾಗಿದ್ದೂ ಅಷ್ಟೇ ತುಂಬಾ ದಿನಗಳ ನಂತರ ಅಂದರೇ ಮೀಟೂ ವಿವಾದ ಬಳಿಕ ಮತ್ತೆ ಮುಖ್ಯ ವಾಹಿನಿಗೆ ಬಂದಿದ್ದಾನೆ. ಕಾಂತಾರ ಸಿನಿಮಾ ವಿಚಾರಕ್ಕೆ ಸಂಬಂಧಿಸಿ ಟ್ವಿಟ್ ಮಾಡಿದ್ದಾನೆ . ಅವನ ಬಗ್ಗೆ ಎಲ್ಲ ಗೊತ್ತಿರುವ ನಾವುಗಳು ಅದಕ್ಕೆ ಸೊಪ್ಪು ಹಾಕುವುದು ತಪ್ಪು.ತಟಸ್ಥ ನಿಲುವನ್ನು ತೆಳೆಯಬೇಕಿತ್ತು ಅವನ ಅಸಂಬದ್ಧ ಹೇಳಿಕೆಗೆ ಪ್ರತಿಕ್ರೀಯೆ ಕೊಡುವುದು ಮಹಾ ತಪ್ಪು. ಅದು ಕೆಸರು ಅದಕ್ಕೆ ಕಲ್ಲು ಹಾಕಿದ್ರೆ ಅದು ನಮ್ಮ ಮುಖಕ್ಕೆ ಸೀರುವುದು ಅಲ್ವೇ ? ಈ ಕೆಲವು ಮೀಡಿಯಾಗಳಿಗೂ ಕೆಲಸ ಇಲ್ಲ ಈ ತರಹದ್ದೇ ಸುದ್ದಿ ಮಾಡಿ ಟಿ ಆರ್ ಪಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ,ಆತನನ್ನು ಅಟ್ಟಕ್ಕೆ ಏರಿಸಿಬಿಟ್ಟಿವೆ.ಒಂದಷ್ಟು ಹಿಂದೂ ಮುಖಂಡರ ಬಳಿ ಪ್ರತಿಕ್ರೀಯೆ ,ಡಿಬೇಟ್ ಕಾರ್ಯಕ್ರಮವನ್ನೆಲ್ಲಾ ಪ್ರಾರಂಭಿಸಿ ಬಿಟ್ಟಿವೆ.ಮೊಸರಲ್ಲಿ ಕಲ್ಲು ಹುಡುಕುವ ಕಾಂಜಿ ಪಿಂಜಿಗಳಿಗೆಲ್ಲಾ ಸಿನಿಮಾ ನಿರ್ದೇಶಕ ರಿಷಬ್ ಶೆಟ್ಟಿಯ ಉತ್ತರವೇ ಕರೆಕ್ಟ್ . 'ಅದಕ್ಕೆಲ್ಲ ಏನು ಕಾಮೆಂಟ್ ಮಾಡೋಲ್ಲ ' ಇದು ಬುದ್ದಿವಂತರ ಲಕ್ಷಣ.ಅಮೇರಿಕಾದಲ್ಲಿ ಹುಟ್ಟಿ ಭಾರತೀಯ ಧರ್ಮ , ಸಂಸ್ಕೃತಿಯ ಬಗ್ಗೆ ಮಾತನಾಡವ ಯೋಗ್ಯತೆ ಇಲ್ಲದವನಿಗೆ ಪಾಠ ಮಾಡುವ ಅಗತ್ಯ ಇಲ್ಲ.ಕತ್ತೆಗೆನೂ ಗೊತ್ತು ಕಸ್ತೂರಿ ಪರಿಮಳ ಆದರೂ ಕೆಲವಂದಿಷ್ಟು ಮಂದಿ ಮನಸ್ಸು ತಡೆಯಲಾಗದೇ ಆತನಿಗೆ ಸರಿಯಾಗೇ ಟಾಂಗ್ ಕೊಟ್ಟಿದ್ದಾರೆ.ಆತ ಸರಿ ಹೋಗುವುದೇ ಇಲ್ಲ. ಅಷ್ಟಕ್ಕೂ ಆತನೇನೂ ಧರ್ಮ ಪಂಡಿತನಲ್ಲ ವಿದ್ವಾಂಸನಂತೂ ಅಲ್ಲವೇ ಅಲ್ಲ ಇನ್ನಾದರೂ ಇಂತಹ ಎಡಬಿಡಂಗಿಗಳಿಗೆ ಪ್ರತಿಕ್ರೀಯೆ ನೀಡುವ ಅಗತ್ಯ ಇಲ್ಲ ಏನಂತೀರಿ ?

ಮಂಗಳವಾರ, ಅಕ್ಟೋಬರ್ 11, 2022

‘ಕಾಂತಾರ ‘ಕಾಣಲೇಬೇಕಾದ ಸಿನಿಮಾ

ಗಾಂಧೀ ನಗರದ ದಿಕ್ಕನ್ನೇ ಬದಲಾಯಿಸಿದ ಆರ್ ಆರ್ ಆರ್ ಎಂಬ ಕರಾವಳಿಯ ‘ತ್ರಿ’ ನಿರ್ದೇಶಕರು . ಸ್ಯಾಂಡಲ್ ವುಡ್ ಸಿನಿಮಾ ಲೋಕದಲ್ಲಿ ಹೊಸ ಕ್ರಾಂತಿ ಉಂಟಾಗಿದೆ.ಅದ್ಭುತವಾದ ಚಿತ್ರಗಳು ತೆರೆಕಾಣುತ್ತಿದ್ದೂ,ಪರಕೀಯರಿಂದಲೂ ಪ್ರಶಂಸೆಗೆ ಪಾತ್ರವಾಗುತ್ತಿದೆ.ಹೌದು ಕನ್ನಡ ಚಿತ್ರರಂಗ ಗೆದ್ದಿದೆ. ‘ಕೆಜಿಎಫ್ ‘ಯಾರೂ ಊಹಿಸಿರದಂತೆ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದ ಪ್ಯಾನ್ ಇಂಡಿಯಾ ಸಿನಿಮಾ.ಅದೇ ಸಂಸ್ಥೆಯಿಂದ ನಿರ್ಮಾಣಗೊಂಡ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಅಲ್ಲದಿದ್ದರೂ,ಎಲ್ಲರ ಮನ ಮುಟ್ಟಿದೆ ಕೇವಲ ರೀಲೀಜ್ ಆಗಿ ವಾರ ಕಳೆದಿಲ್ಲ ಹೌಸ್ ಫುಲ್ ಕಾಣುತ್ತಿದೆ.ಎಲ್ಲಾ ಭಾಷೆಗಳಲ್ಲಿಯೂ ಡಬ್ಬಿಂಗ್ ಗೊಳ್ಳುತ್ತಿದ್ದೂ,ಇನ್ನೇನು ಬೆಳ್ಳಿ ತೆರೆಯ ಮೇಲೇ ಅಪ್ಪಳಿಸಲಿದೆ.ನಟ-ನಿರ್ದೇಶಕ ರಿಷಬ್ ಶೆಟ್ಟಿಯ ಕಲ್ಪನೆಯಲ್ಲಿ ಮೂಡಿಬಂದ ಕಾಂತಾರ ಸಬ್ ಟೈಟಲ್ ನಂತೆ ಒಂದು ದಂತ ಕತೆಯೇ!ದಟ್ಟಾರಣ್ಯ,ಪಾಳೆಗಾರಿಕೆ ಆಡಳಿತ ವ್ಯವಸ್ಥೆ, ಗ್ರಾಮೀಣಿಗರ ಒಗ್ಗಟ್ಟು,ದೈವಾರಾಧನೆಯ ಕಥಾವಸ್ತುವನ್ನುಒಳಗೊಂಡ ಅದ್ಬುತ ಸಿನಿಮಾವೇ ಕಾಂತಾರ! 90ರ ದಶಕದ ನೈಜ ಕಥಾ ಹಂದರವನ್ನು ನಿರ್ದೇಶಕರು ಅಚ್ಚುಕಟ್ಟಾಗಿ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ,ಕರಾವಳಿ ಭಾಗದಲ್ಲಿ ನಡೆಯುವ ಸಾಂಪ್ರದಾಯಿಕ ಕಂಬಳ,ದೈವರಾಧನೆ,ಕೋಲ ನಂಬಿಕೆಯ ತಳಹದಿ,ಗ್ರಾಮೀಣ ಸೊಗಡು ಚಿತ್ರದಲ್ಲಿದೆ.
ಮೇಲ್ನೋಟಕ್ಕೆ ಇದು ಕರಾವಳಿಯ ಕಲೆ -ನೆಲೆ,ಆಚಾರ-ವಿಚಾರ,ವೈಶಿಷ್ಠ್ಯವೇ ಆದರೂ,ಇದು ಕೇವಲ ಅಲ್ಲಿನವರೆಗೆ ಮಾತ್ರ ಸೀಮಿತವಾದ ಕಥೆ ಅಲ್ಲವೇ ಅಲ್ಲ.ಕರಾವಳಿಯ ಭಾಗದ ಒಂದು ಉದಾಹರಣೆ ಅಷ್ಟೇ.ದೈವ ನಂಬಿಕೆ, ಆರಾಧನೆ,ಪಾಳೆಗಾರಿಕೆ ವ್ಯವಸ್ಥೆ,ಸಂಸ್ಕೃತಿ ,ಸಂಸ್ಕಾರ ಎಲ್ಲಾ ಪ್ರದೇಶದಲ್ಲೂ ಹೊಕ್ಕಾಗಿವೆ.ಕೆಲವೊಂದು ಭಾಗದಲ್ಲಿ ದೇವರ,ದೈವಗಳ ಆರಾಧನೆಯ ಪ್ರಕಾರಗಳು ವಿಭೀನ್ನವಾದರೂ ನಂಬಿಕೆ ಮಾತ್ರ ಒಂದೇ.'ಕಾಂತಾರ' ಪಕ್ಕಾ ಕಮರ್ಷಿಯಲ್ ಪಿಚ್ಚರ್ . ಪೂರ್ಣ ಕುಟುಂಬ ಕುಳಿತು ನೋಡುವಂತ ಸಿನಿಮಾ.ನಾಯಕ ಶಿವ (ರಿಷಬ್ ಶೆಟ್ಟಿ),ನಾಯಕಿ ಲೀಲಾ (ಸಪ್ತಮಿ) ಪಕ್ಕಾ ಹಳ್ಳಿ ಸೊಗಡಿಗೆ ಹೊಂದಿ ಕೊಂಡಂತೆ ಅದ್ಭುತವಾಗಿ ನಟಿಸಿದ್ದಾರೆ.ರಿಷಬ್ ಶೆಟ್ಟಿ ಸಿನಿಮಾದ ಯಾಕ್ಟರೋ ಅಥವಾ ಡೈರೆಕ್ಟರೋ ಗೊತ್ತಾಗುತ್ತಿಲ್ಲ.ಸಿನಿಮಾವೇ ಈ ಪ್ರಶ್ನೆಗೆ ಹೇಳುತ್ತದೆ.ಒಬ್ಬ ನಿರ್ದೇಶಕನಾಗಿ ಆ ಸಿನಿಮಾದಲ್ಲಿ ಜೊತೆಗೆ ಲೀಡ್ ಪಾರ್ಟ್ ನ ಹೊಂದಾಣಿಕೆ ಮಾಡಿ ಕೊಂಡ ರೀತಿ ನಿಜಕ್ಕೂ ಗ್ರೇಟ್..!! ಅಬ್ಬಾ ! ಆ ಕ್ಲೈಮೆಕ್ಸ್ ನ 20 ನಿಮಿಷ ಅವರ ಅಭಿನಯ ಪರಾಕಾಷ್ಠೆಗೆ ಸೇಲ್ಯೋಟ್ ಹೊಡೆಯಲೇಬೇಕು.ನ್ಯಾಷನಲ್ ಅವಾರ್ಡ್ ಗ್ಯಾರಂಟಿ !!ಇನ್ನುಳಿದ ಕಲಾವಿದರ ಬಗ್ಗೆ ಎರಡು ಮಾತಿಲ್ಲ.ತಮಗೆ ಕೊಟ್ಟ ಪಾತ್ರಗಳನ್ನು ಎಲ್ಲಾ ಪಾತ್ರಧಾರಿಗಳು ಎಲ್ಲೂ ಚ್ಯುತಿ ಬಾರದಂತೆ ನಟಿಸಿದ್ದಾರೆ,ಜೀವ ತುಂಬಿದ್ದಾರೆ.ಇದರಲ್ಲಿನ ಸಿಂಹ ಪಾಲು ಕಲಾವಿದರು ರಂಗಭೂಮಿಯಿಂದಲೇ ಬಂದವರಾದ್ದರಿಂದ ಪಾತ್ರಗಳು ಜೀವಂತವಾಗಿರಲೇ ಬೇಕಲ್ಲವೇ ? ಆ ಖಳ ನಾಯಕನ(ದೇವೇಂದರ ಸೂತ್ತೂರು ) ಪಾತ್ರಕ್ಕೆ ಅಚ್ಚುತ್ ಕುಮಾರ್ ಹೇಳಿ ಮಾಡಿಸಿದ ಹಾಗೆ ಇದೆ ,ಅರಣ್ಯಾಧಿಕಾರಿಯಾಗಿ ಕಿಶೋರ್ ರ ಅಭಿನಯ ಅದ್ಬುತ ಅಮೋಘ !ತಿಳಿ ಹಾಸ್ಯವಿದೆ,ತುಸು ಪ್ರೇಮವಿದೆ, ನವಿರಾದ ಪ್ರಣಯವಿದೆ,ಬೋರ್ ಹೊಡಿಸದ ಯಾಕ್ಷನ್ ಇದೆ, ಜಾಸ್ತಿ ಅನಿಸದ ಸೆಂಟಿಮೇಟ್ ಕೂಡ ಇದೆ.
ಏನಿಲ್ಲಾ ಹೇಳಿ ಎಲ್ಲವೂ ಈ ಸಿನಿಮಾದಲ್ಲಿ ಎಳೆ-ಎಳೆಯಾಗಿ ಕಾಣಸಿಗುತ್ತಿದೆ.ಕೋಟಿ ಪಡೆಯುವ ಕಲಾವಿದರಿಲ್ಲ,ವಿದೇಶದ ಸುತ್ತಾಟವಿಲ್ಲ,ಗ್ಲಾಮರ್ಸ್ ಸಾಂಗ್ ಇಲ್ಲ,ಅತೀರೇಕ ಅನಿಸುವ ಸಾಹಸ ಅಂತೂ ಇಲ್ವೇ ಇಲ್ಲ.ಕೇವಲ ಪ್ರಕ್ರತಿ ಸೊಬಗಿನ ಕಾಡಿನ ನಡುವೆ ಚಿತ್ರಿತಗೊಂಡ,ಸದ್ದಿಲ್ಲದೇ ಸುದ್ದಿಯಾಗುತ್ತಿರುವ ಚಿತ್ರ 'ಕಾಂತಾರ'ವನ್ನು ಮೆಚ್ಚಲೇಬೇಕು,ಕನ್ನಡಿಗರು ಆದಾಗಲೇ ಮೆಚ್ಚಿ ಕೊಂಡಿದ್ದಾರೆ.ಚಿತ್ರ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದೂ ಆಗಿದೆ !ಚಿತ್ರ ಎಷ್ಟುಫೇಮಸ್ ಆಗಿದೆ ಅನ್ನುದಕ್ಕೆ ಸಣ್ಣ ಉದಾಹರಣೆ ಏನಂದ್ರೆ ,ದೈವ ಆರಾಧನೆಯೇ ಕೇಂದ್ರ ಬಿಂದು ಆಗಿರುವ ಸಿನಿಮಾದಲ್ಲಿನ 'ಪಂಜುರ್ಲಿ','ಗುಳಿಗ' ದೈವಗಳ ಬಗ್ಗೆ ತಿಳಿಯುವುದಕ್ಕೆ ಚಿತ್ರ ನೋಡಿದ ಹಲವರು ಮಂದಿ ವಿವಿಧ ಬಗೆಯಲ್ಲಿ ಪ್ರಯತ್ನ ಪಡ್ತಾ ಇದ್ದಾರೆ.ಇನ್ನು ದೈವದ ಶಕ್ತಿ ಅರಿತವರು ಚಪ್ಪಲಿ ಬಿಟ್ಟು ಸಿನಿಮಾ ವೀಕ್ಷಿಸುತ್ತಿರುವ ವರದಿಗಳು ಕೇಳಿ ಬರುತ್ತಿವೆ.
ವಲ್ಡ್ ವೈಡ್ನಲ್ಲೂಜಯಭೇರಿ ಬಾರಿಸಿದ ಕಾಂತಾರ,ಇತಿಹಾಸದಲ್ಲಿಮೊದಲ ಬಾರಿಗೆ ಮಹಾರಾಷ್ಟ್ರದ ಮರಾಠ ಚಿತ್ರ ಮಂದಿರದಲ್ಲಿ ಬಿಡುಗಡೆ ಗೊಂಡಿದೆ,ಸ್ಯಾಂಡಲ್ ವುಡ್ ನಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಬಳಿಕ,ಬೇರೆ ಭಾಷೆಗಳಲ್ಲಿ ಡಬ್ಬಿಂಗ್ ಕೂಡಾ ಜಾಲ್ತಿಯಲ್ಲಿದೆ. ಇದೆ 14ಕ್ಕೆ ಹಿಂದಿಯಲ್ಲಿತೆರೆಕಂಡರೇ,15ಕ್ಕೆ ತೆಲುಗಿನಲ್ಲಿ ತೆರೆಕಾಣಲಿದೆ.ಈಗಾಗಲೇ ಇದರ ಟೈಲರ್ ಕೂಡ ರೀಲೀಸ್ ಆಗಿದ್ದೂ,ಇನ್ನುತಮಿಳು ಮತ್ತು ಮಲೆಯಾಳಂನಲ್ಲೂ ಕೂಡ ಪೋಸ್ಟರ್ ಹರಿದಾಡುತ್ತಿದ್ದೂ,ಸಧ್ಯದಲ್ಲೇ ಸಿನಿಮಾ ತೆರೆ ಕಾಣಲಿದೆಯಂತೆ.ಏನೇ ಇರಲಿ ಕನ್ನಡ ಚಿತ್ರರಂಗಕ್ಕೆ ಸುಗ್ಗಿ ಕಾಲ,ರಿಮೇಕ್,ಅಶ್ಲೀಲ,ರೌಡಿಸಂ ಚಿತ್ರಗಳಿಂದ ಬೇಸತ್ತಿದ್ದ ಪ್ರೇಕ್ಷಕರಿಗೆ ಪಕ್ಕಾ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಕಮರ್ಷಿಯಲ್ ಚಿತ್ರ ಕೊಟ್ಟಿದ್ದು ಕರ್ನಾಟಕದ ಕರಾವಳಿ ನಿರ್ದೇಶಕರುಗಳು ಎನ್ನುವುದಕ್ಕೆ ಅಡ್ಡಿ ಇಲ್ಲ ರಕ್ಷಿತ್ ಶೆಟ್ಟಿ,ರಾಜ್ ಬಿ ಶೆಟ್ಟಿ ಹಾಗೂ ರಿಷಬ್ ಶೆಟ್ಟಿಯಂತ ಆರ್ 'ತ್ರಿ'ಯರು. ಇತ್ತೀಚೆಗೆ ತೆರೆಕೊಂಡ ರಕ್ಷಿತ್ ಶೆಟ್ಟಿಯ '777ಚಾರ್ಲಿ' ಹಿಟ್ ನಂತರ ,ರಾಜ್ ಬಿ ಶೆಟ್ಟಿಯ 'ಗರುಡಗಮನ ವೃಷಭ ವಾಹನ' ಇದೀಗ ರಿಷಬ್ ಶೆಟ್ಟಿಯ 'ಕಾಂತಾರ' ಇದರ ತನ್ಮಧ್ಯೆ ಇನ್ನೋರ್ವ ಕರಾವಳಿಗ ಅನೂಪ್ ಭಂಡಾರಿಯ 'ರಂಗೀತರಂಗ' ಇದರ ಪಾರ್ಟ್ 2 ಎಂಬಂತೆ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಕೂಡಾ ಜಯಭೇರಿ ಬಾರಿಸಿತ್ತು.ಇಂತಹ ಸಿನಿಮಾಗಳು ಕೇರಳ ಸಿನಿಮಾ ಇಂಡಷ್ಟ್ರಿಯಲ್ಲಿ ಕಾಣುತ್ತಿದ್ದೇವು.,ನೈಜತೆಯನ್ನುಒತ್ತಿ ಸಾರುವ,ಕನ್ನಡಿ ಹಿಡಿಯುವಂತಿರುವ ಇಂತಹ ಚಿತ್ರಗಳು ಕನ್ನಡದಲ್ಲಿಯೂ ದಾಪುಗಾಲು ಇಡುತ್ತಿರುವುದು ನೋಡಿದರೆ ಹೆಮ್ಮೆ ಅನಿಸುತ್ತಿದೆ. ಕಾಂತಾರ ಭಾಗ 2 ಬರಬಹುದಾ ?ಯಾವಾಗ? ಎಂಬ ಪ್ರಶ್ನೆ,ಹೆಚ್ಚಿನ ಬೇಡಿಕೆ ಮತ್ತು ಕುತೂಹಲವೂ ಸಹಾ ಸೋಷಿಯಲ್ ಮೀಡಿಯಾದಲ್ಲಿ ಉಂಟಾಗಿದೆ. ವರಾಹ ರೂಪಂ ದೈವ ವರಿಷ್ಠಮ್……!!