ಮಂಗಳವಾರ, ಏಪ್ರಿಲ್ 9, 2019
ಮೋದಿ ಮತ್ತೊಮ್ಮೆ ಮನದಲ್ಲಿರಲಿ!
ಲೋಕ ಸಭಾ ಚುನಾವಣೆ ಮತ್ತೆ ಬಂದಿದೆ . ಮೋದಿ ಸರ್ಕಾರವನ್ನು ಮತ್ತೆ ತರಲು ಒಕ್ಕೊಲರಿಂದ ಯುವ ಸಮುದಾಯ ,ಪ್ರಜ್ಞಾವಂತ ನಾಗರಿಕರು ಸಜ್ಜಾಗಿದ್ದಾರೆ . "ಮೋದಿ.. ಮೋದಿ" ! 'ಮತ್ತೊಮ್ಮೆ ಮೋದಿ' !! ಎಂಬ ವೇದ ವಾಕ್ಯವನ್ನು ಉಚ್ಚರಿಸುತ್ತಿದ್ದಾರೆ ಸ್ತುತರ್ಹ! ಸುಮಾರು 70ವರ್ಷಗಳ ಬಳಿಕ ಪ್ರಧಾನಿ ಹುದ್ದೆಗೆ ಒಂದು ಗೌರವ ಮತ್ತು ದೇಶದ ಅಭಿವೃವುದ್ಧಿಗೆ ಹೆಸರುವಾಸಿಯಾಗಿದ್ದು ಮೋದಿ ಬಿಟ್ಟರೆ ಬೇರಾರಿಂದಲೂ ಆ ರೆಕಾರ್ಡ್ನ್ನು ಮುರಿಯುದಕ್ಕೆ ಸಾಧ್ಯವಾಗಿಲ್ಲ ,ಭವಿಷ್ಯದಲ್ಲಿ ನರೇಂದ್ರ ಮೋದಿ ಬಿಟ್ಟರೆ ಆ ಸಾಲಿಗೆ ಬೇರೆ ಯಾರೂ ಆ ಯೋಗ್ಯತೆಯನ್ನು ಕಾಪಾಡುದಕ್ಕೆ ಸಾಧ್ಯವೇ ಇಲ್ಲ . ಮೋದಿ ಪ್ರಧಾನಿಯಾಗುವುದಕ್ಕೆ ಮುಂಚೆ ಗುಜರಾತ್ ನಲ್ಲಿ ಹ್ಯಾಟ್ರಿಕ್ ಮುಖ್ಯ ಮಂತ್ರಿಯಾಗಿ ಸಾಧನೆ ಸಾಹಸಗಾಥೆ ಅವರ ಬಗ್ಗೆ ಪ್ರಶಂಸೆಯ ಮಾತು ದೇಶದ ಉದ್ದಗಲಕ್ಕೂ ಮೂಡಲು ಹೆಚ್ಚಿನ ಸಮಯವೇ ಬೇಕಾಗಿರಲಿಲ್ಲ ಪ್ರಧಾನಿ ಪಟ್ಟ ಸ್ವೀಕರಿಸಿದ ನಂತರ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದ್ದೂ ಸುಳ್ಳಲ್ಲ . ದೇಶದ ಗಲ್ಲಿ -ಗಲ್ಲಿ ಗಳಲ್ಲಿ ಬಿಡಿ ಶತ್ರು ದೇಶದವರ ಕೂಡಾ ಚಾಯಿವಾಲನ ಬಗೆಗೆ ಉತ್ತಮ ಮಾತುಗಳನ್ನು ಆಡುತ್ತಿವೆ . ಚೌಕಿದಾರನ ಅದೆಷ್ಟೋ ಯೋಜನೆಗಳು ಅದೆಂತಾ ಯೋಚನೆಗಳು !! .ಒಂದಂತೂ ಸತ್ಯ ಮೋದಿಗೆ 5 ವರ್ಷ ಎಲ್ಲೂ ಸಾಕಾಗಿಲ್ಲ ಇನ್ನೂ ಸಾಕಷ್ಟು ಯೋಜನೆಗಳು ಅವರ ಬತ್ತಳಿಕೆ ಯಲ್ಲಿದೆ ಚಿಗುರು ಒಡೆಯುತ್ತಿದೆ. ಇನ್ನೂ ಸಮಯ ಬೇಕು ಆ ಸಮಯ ನಮ್ಮಲ್ಲಿದೆ ನಾವು ಕೊಟ್ಟರೆ ಖಂಡಿತವಾಗಿಯೂ ಮುಂದಿನ ಅವಧಿಯಲ್ಲಿ ದೇಶ ಇನ್ನಷ್ಟು ಬಲ ಶಾಲಿಯಾಗುವದರಲ್ಲಿ ಯಾವುದೇ ಅನುಮಾನ ವಿಲ್ಲಾ . ನೋಟ್ ಬ್ಯಾನ್ ಜಿಎಸ್ಟಿ ಗಳೆಲ್ಲಾ ಮುಂದಿಟ್ಟು ವಿರೋಧ ಪಕ್ಷದವರು ಮತ ಭೇಟಿಗೆ ಇಳಿದಿದ್ದಾರೆ . ಅದು ಪ್ರಜ್ಞಾವಂತರಿಗೆ ಗೊತ್ತು ಎಲ್ಲೂ ಒಂದ್ಚೂರು ಜನ ಮಾನಸದಲ್ಲಿ ತೊಂದರೆ ತಂದಿದ್ದು ಸತ್ಯ ಆದರೆ ,ಇದು ದೇಶಕ್ಕೆ ಎಷ್ಟು ಲಾಭ ತಂದಿದೆ ಎನ್ನುವುದನ್ನು ಸಹಾ ಮನಗಾಣಬೇಕು . ಕಳೆದ 70ವರ್ಷಗಳಿಂದ ಗಾಂಧಿ ಎಂದು ಹೆಸರು ಹೇಳಿ ಕೊಂಡು ಬಂದ ಅತಿರಥರಿಂದ ಅದೆಷ್ಟು ಪ್ರಯೋಜನ ದೇಶ ಕಂಡಿದೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರವೇ .ಕಳೆದ ಬಾರಿ ರಾಬೊಟೋ ಮನ್ಮೋಹನ್ ಸಿಂಗ್ ನ್ನು ಪ್ರಧಾನಿ ಮಾಡಿದ ಕಾಂಗ್ರೆಸ್ ಈಗ ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸದೆ . ಕೆಜಿಗೂ ಲೀಟರ್ ಗೂ ವ್ಯತ್ಯಾಸ ಗೊತ್ತಿಲ್ದೆ ಇರುವವ , ಸರಿಯಾಗಿ ಮಾತನ್ನು ಹೊರಡಿಸಲಾಗದವ .ಕಂಡ ಕಂಡ ಸಭೆಯಲ್ಲಿ ಟ್ರಾಲ್ ಪೀಸ್ ಆಗಿರುವ ಈಗ ಒಂದೊಮ್ಮೆ ಪ್ರಧಾನಿಯಾದ್ರೆ ದೊಡ್ಡ ಜೋಕರ್ ಬಿಟ್ಟರೆ ಪ್ರಧಾನಿ ಕುರ್ಚಿಗೆ ಅಯೋಗ್ಯ !ಇನ್ನೂ ಕಾಂಗ್ರೆಸ್ ನಲ್ಲಿ ಯಾವೊಬ್ಬನೂ ಸಹಾ ಪ್ರಧಾನಿ ಸ್ಥಾನಕ್ಕೆ ಇಲ್ಲವೇ ಇಲ್ಲ . ಒಂದಿಷ್ಟು ಮೈತ್ರಿ ಪಕ್ಷಗಳು ಕುರ್ಚಿ ಆಸೆಗೆ ಹಪಹಪಿಸುತ್ತವೆ .ಒಂದೊಮ್ಮೆ ಈ ದೋಸ್ತಿ ಸರ್ಕಾರ ಸ್ಥಾಪನೆಯಾದರೂ ಸುಭದ್ರ ಸರ್ಕಾರ ಎಷ್ಟರ ಮಟ್ಟಿಗೆ ನೀಡಬಲ್ಲರು ಎಂಬುದು ಎಲ್ಲರ ಅರಿವೆಗೆ ಬಂದಿರುವಂತದ್ದೇ. ಇನ್ನು ಮಹಾ ಘಟ ಬಂಧನ್ ಎಂದು ಹೋರಾಟಕ್ಕೆ ಇಳಿದಿರುವ ಇವರುಗಳಿಂದ ಯಾವ ಸರಿ ಸಾಟಿ ಇಲ್ಲ ಮೋದಿ ಹೆಸರು ಹೇಳಲಿಕ್ಕೂ ಲಾಯಿಕ್ಕ ಇಲ್ಲದ ಇವರುಗಳ ನಾಲಿಗೆ ಎಷ್ಟು ಹರಿಸಿದರೂ ಅಷ್ಟೇ ! 18 ಗಂಟೆಗಳ ಕಾಲ ಹಗಲು ಇರುಳು ಎನ್ನದೆ . ತನ್ನ ಪರಿವಾರವನ್ನು ಬಿಟ್ಟು ದೇಶದ ಸೇವೆಗಾಗಿ ದುಡಿಯುತ್ತಿರುವ ತನ್ನ ರಾಜಕೀಯದ ಅಧಿಕಾರಾವಧಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಭ್ರಷ್ಟಾಚಾರ ಮುಕ್ತ ಪಾರದರ್ಶಕವಾಗಿ ಆಡಳಿತ ನೀಡಿದ ಮೋದಿ ಮುಂದೆಯೂ ಸಹಾ ಅತೀ ಹೆಚ್ಚು ಮತಗಳಿಂದ ಆರಿಸಿ ಬರ್ಬೇಕು . ಇದೆ ಬರುವ ಲೋಕ ಸಭಾ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತವನ್ನು ನೀಡೋಣ ಸ್ಥಳೀಯ ಅಭ್ಯರ್ಥಿ ಯಾರೇ ಇರಲಿ ಮೋದಿ ಮುಖ ನೋಡಿ ತಮ್ಮ ಓಟ್ ಒತ್ತಿ ಇದು ಸ್ಥಳೀಯ ಚುನಾವಣಯಲ್ಲ ಅಭ್ಯರ್ಥಿಯ ಅರ್ಹತೆ ಪ್ರಮಾಣ ಪತ್ರವನ್ನು ನೋಡುವುದು ಬೇಡ ಭವಿಷ್ಯ ಭಾರತದ ಬಗ್ಗೆ ಗಮನ ವಹಿಸೋಣ ..ಮೋದಿ ಮತ್ತೊಮ್ಮೆ ಎಂಬದು ಮನದಲ್ಲಿರಲಿ !
ಮಂಗಳವಾರ, ಏಪ್ರಿಲ್ 2, 2019
ಲೋಕಾ ಸಮರ :ಮಂಡ್ಯಕ್ಷೇತ್ರವೂ ,ಕುಮಾರ ಸ್ವಾಮೀ ಕಿತಾಪತಿಯೂ !
ರಾಜ್ಯದಲ್ಲಿ ಲೋಕ ಸಭಾ ಚುನಾವಣೆಯ ಕಾವು ಹೆಚ್ಚಾಗುತ್ತಿದೆ ,ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಅಭ್ಯರ್ಥಿಗಳ ಭವಿಷ್ಯಕ್ಕೆ ಸಾಕ್ಷಿ ಬರೆಯಲು ಹೊರಟಿರುವ ಲೋಕ ಸಭಾ ಚುನಾವಣೆಯ ಮೈತ್ರಿ ಸರ್ಕಾರದ ಸೀಟು ಹಂಚಿಕೆ ವಿಚಾರದಲ್ಲಿ ಬಹಳಷ್ಟು ರಂಗಿನಾಟ ನಡೆಯುತ್ತಿದೆ.ಕುಟುಂಬ ರಾಜಕೀಯಕ್ಕೆ ಹೆಸರಾಗಿರುವ ದೇವೇಗೌಡರ ತಾಳ್ಮೆ ಕಿಂಚಿತ್ ಕಡಿಮೆ ಆದಂತೆ ಇಲ್ಲ ಎಂದೇ ಹೇಳಬಹುದು ಈ ಬಾರಿ ಚುನಾವಣೆಗೆ ತಮ್ಮ ಕುಟುಂಬದ ಇನ್ನೆರೆಡು ಹೊಸ ಮುಖವನ್ನು ಕಣಕ್ಕಿಳಿಸಿದೆ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಹಾಗೂ ರೇವಣ್ಣ ಪುತ್ರ ಪ್ರಜ್ವಲ್ ! ಜೆಡಿಎಸ್ ಹಾಗೂ ಕಾಂಗ್ರೆಸ್ ನಲ್ಲಿ ಘಟಾಘಟಾನಿ ಮುಖಂಡರು ಕಾರ್ಯಕರ್ತರು ,ಗೆಲ್ಲುವ ಕುದುರೆಗಳಿದ್ದರೂ ಅವ್ರೇರಿಗೂ ಬಿ ಫಾರ್ಮ್ ಇಲ್ಲ . ಅವರುಗಳೆಲ್ಲರೂ ಕೇವಲ ಪಾರ್ಟಿ ಪಕ್ಷಕ್ಕಾಗಿ ಹಗಲಿರುಳು ಬೆವರು ಸುರಿಸಿ ದುಡಿಯುವುದಕ್ಕೆ ಮಾತ್ರ ಸೀಮಿತ .
ಇದು ಜೆಡಿಎಸ್ ನಲ್ಲಿ ಹೊಸತು ಅಲ್ಲ ಬಿಡಿ ಆದರೆ ಹೊಸದಾಗಿ ಕಾಣುವುದು ಸದ್ಯದ ಪರಿಸ್ಥಿತಿ ಮಂಡ್ಯ ಕ್ಷೇತ್ರ. ರಾಜ್ಯದಲ್ಲಿ ಮಾತ್ರ ಅಲ್ಲ ದೇಶದಾದ್ಯಂತ ಪ್ರತಿಷ್ಟೆಯ ಕಣವಾಗಿ ಮೂಡಿ ಬಂದಿದೆ. ದಿವಂಗತ ನಟ ಅಂಬರೀಷ್ ಮಂಡ್ಯದಲ್ಲಿ ಕಾಂಗ್ರೆಸ್ ನಿಂದ ಗೆದ್ದು ಎಂಪಿ ಆಗಿದ್ದರು. ಜನಪ್ರತಿನಿಧಿಯಾಗಿ ತಮ್ಮ ಕೈಲಾದ ಜನೋಪಯೋಗಿ ಕೆಲಸವನ್ನು ನಿರ್ವಹಿಸಿದರು ಕಾವೇರಿ ನೀರಿನ ವಿಚಾರದ ಬಗ್ಗೆ ತಮ್ಮ ನಿರ್ಧಾರಕ್ಕೆ ಕೇಂದ್ರ ಸರ್ಕಾರದ ಗಮನ ವಹಿಸಿಲ್ಲ ಎಂದು ತಮ್ಮ ರಾಜೀನಾಮೆ ಸಲ್ಲಿಸಿದವರು .ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾದ ಅಂಬರೀಶ್ ಅವರ ಪರವಾಗಿ ಅವರ ಸ್ಥಾನ ತುಂಬಲು ಪತ್ನಿ ಸುಮಲತಾ ಅಂಬರೀಶ್ ಅವರಿಗೆ ಜನರ ಒತ್ತಾಯದ ಮೇರೆಗೆ ಮಂಡ್ಯ ಕ್ಷೇತ್ರಕ್ಕೆ ಪಕ್ಷೇತರರಾಗಿ ಸ್ಪರ್ದಿಸಿದ್ದಾರೆ .ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸ ರಾಜ್ಯದಲ್ಲಿ ಪ್ರತಿಫಲಿತವಾಗಿದೆ .ಸೀಟು ಹಂಚಿಕೆ ವಿಚಾರದಲ್ಲಿ ಜೆಡಿಸ್ನಿಂದ ಸುಮಲತಾಗೆ ಟಿಕೆಟ್ ಕೊಡವುದರ ಬಗ್ಗೆ ಸುದ್ದಿ ಕೇಳಿಬಂದಿತ್ತದರೂ ತಮ್ಮ ಕುಟುಂಬ ರಾಜಕೀಯ ಯಕ್ಕೆ ಹೆಸರು ವಾಸಿ ಯಾದ ದೇವೇಗೌಡರು ಬಿಡಬೇಕಲ್ಲ ಅದು ಸುದ್ದಿಗೆ ಮಾತ್ರ ಸೀಮಿತವಾಗಿತ್ತು ಕೊನೆಗೂ ಕುಮಾರ ಸ್ವಾಮೀ ಅವರು ತನ್ನ ಮಗನನ್ನೇ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿಬಿಟ್ಟರು . ಎಲ್ಲೂ ಸಣ್ಣ ಅನುಮಾನ ಖಂಡಿತ ಕುಮಾರ ಸ್ವಾಮಿಗೆ ಇತ್ತು ಸುಮಲತಾ ವಿರುದ್ಧ ಮಗ ಜಯ ಸಾಧಿಸುವುದು ಕಷ್ಟವೇ ಸರಿ ಅಂತಾ ,ಸುಮಲತಾ ವರನ್ನು ಹಿಮ್ಮೆಟ್ಟಿಸುವಲ್ಲಿ ಇನ್ನಿಲ್ಲದ ಕಸರತ್ತುನ್ನು ಮಾಡುತ್ತಾ ಬಂದಿದ್ದಾರೆ .ಆದರೂ ಧೈರ್ಯ ಗುಂದದ ಸುಮಲತಾ ಅಖಾಡಕ್ಕೆ ಮುನ್ನುಗಿದ್ದಾರೆ . ತನ್ನ ಮಗನನ್ನು ಮಂಡ್ಯ ಕ್ಷೇತ್ರದಲ್ಲಿ ಗೆಲ್ಲಲೇ ಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ ಕುಮಾರಸ್ವಾಮಿ. ತಮ್ಮ ಸ್ವಂತ ಕ್ಷೇತ್ರದಂತೆ ಇರುವ ಎಲ್ಲಿ ಒಂದಷ್ಟು ತನ್ನ ಪ್ರಾಬಲ್ಯತೆಯನ್ನು ಹೊಂದಿದ್ದವುದು ಸುಳ್ಳಲ್ಲ . ರೈತರ ಸಾಲ ಮನ್ನಾ ಎಂಬ ನಾಟಕಗಳನ್ನು ಜಾರಿಗೆ ತಂದು ,ಮೊಸಳೆ ಕಣ್ಣೀರು ಹಾಕಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳು ಸ್ಥಾನಕ್ಕೆ ಏಳು ಜೆಡಿಎಸ್ ಪಾಳಯಕ್ಕೆ ಒಲಿದು ಬಂದಿತ್ತು., ಅದೇ ಹುಮ್ಮಸ್ಸು ಹಾಗೂ ತನ್ನದೇ ಆಡಳಿತ ಪಕ್ಷ ಎಂಬ ಬಿಗುಮಾನ ಅವರಿಗೆ ಪ್ಲಸ್ ಪಾಯಿಂಟ್ . ಆದರೆ ಸುಮಲತಾ ಅವರಿಗೆ ಮಂಡ್ಯದ ಗಂಡು ಅಂಬರೀಶ್ ವರ್ಚಸ್ಸು . ಸಿಂಪತಿ ಹಾಗೂ ಕುಮಾರ ಸ್ವಾಮೀ ಕುಟುಂಬ ರಾಜಕಾರಣ ದ್ವೇಷ ಇದೆಲ್ಲಾ ಸುಮಲತಾ ಅವರಿಗೆ ಹೆಲ್ಪ್ ಆಗಬಹುದು.ಸುಮಲತಾರನ್ನು ಸೋಲಿಸಬೇಕು ಹಾಗೂ ಕಣಕ್ಕೆ ಇಳಿಯದಂತೆ ಗಮನಹರಿಸಬೇಕೆಂದು ಕುಮಾರ ಸ್ವಾಮೀ ಮತ್ತು ರೇವಣ್ಣ ಸಾಕಷ್ಟು ಸರ್ಕಸ್ ಮಾಡಿದರೂ ಏಳ್ಳ ಷ್ಟೂ ಪ್ರಯೋಜನ ಕಂಡಿಲ್ಲ ಇಲ್ಲ ಸಲ್ಲದ ಹೇಳಿಕೆ ,ನಾಮಪತ್ರ ಸಲ್ಲಿಸುವ ವೇಳೆ ಪವರ್ ,ಕೇಬಲ್ ಕಟ್ ಹೀಗೆ ನಾನಾ ಸಮಸ್ಯೆನ್ನು ತಂದು ಒಡ್ಡಿದರೂ ,ಜನರ ಆಶೋತ್ತರಕ್ಕೆ ಹಿಂದೆ ಸರಿಯದೇ ಮುಂದಡಿ ಇಟ್ಟಿದ್ದಾರೆ .ಉತ್ತಮ ಪ್ರಶಂಸೆಯ ಮಾತು ಮತ್ತು ಆಶೀರ್ವಾದ ಮಂಡ್ಯ ಜನತೆಯಿಂದ ಕೇಳಿಬರುತ್ತಿದೆ ಬೇಕು ಬೇಡದ ಹೇಳಿಕೆಗಳನ್ನು ಕೊಡುತ್ತಾ ಬಂದಿರುವ ಕುಮಾರಸ್ವಾಮಿ ಬ್ರದರ್ಸ್ ಇದುವರಿಗೂ ಏನೂ ಪ್ರಯೋಜನ ಕಾಣದ ಹಿನ್ನೆಲೆಯಲ್ಲಿ ಇನ್ನೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ ಮತದಾರರಲ್ಲಿ ಒಂದಷ್ಟು ಗೊಂದಲ ಮೂಡಿಸಲು ಕೃತಕ ಮೂರು ಮಂದಿ ಸುಮಲತಾ ಕ್ಯಾಂಡಿಡೇಟ್ ಅನ್ನು ಪಕ್ಷೇತರರಾಗಿ ಕಣಕ್ಕೆ ಇಳಿಸಿದ್ದಾರೆ .ಏನೆನೆಲ್ಲಾ ಕಸರತ್ತು ನಡೆಸುತ್ತಿರುವಇವರುಗಳು ಮುಂದೆ ಎಷ್ಟು ತಲೆ ಓಡಿಸಿದರೂ ಪ್ರಯೋಜನಕಾರಿ ಆಗದು ಮತದಾರರು ಪ್ರಜ್ಞಾವಂತರು ಕೆಲವೇ ದಿನಗಳಲ್ಲಿ ಫಲಿತಾಂಶ ಉತ್ತರ ನೀಡಬಲ್ಲದು !
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)

