ಆಳಿಗೊಂದು ಕಲ್ಲು !! ನ್ಯೂಸ್ ಚಾನೆಲ್ ಗಳಿಗೆ ಹಬ್ಬವೋ ಹಬ್ಬ !!! ದಿನದ ಇಪ್ಪತ್ತನಾಲ್ಕು ಗಂಟೆ ರವಿಬೆಳಗೆರೆ ಬಗ್ಗೆ ಸುದ್ದಿಯೋ ಸುದ್ದಿ..! ಇದ್ದಿದ್ದು ಇಲ್ಲದಿದ್ದು ಎಲ್ಲವನ್ನೂ ಉಪ್ಪು ,ಖಾರ, ಹುಳಿ ಬೆರೆಸಿ ,ಒಸಮಾ ಬಿಲ್ ಲಾಡೆನ್ ಗೆ ಹೋಲಿಸುವಂತ ವಿದ್ಯಾಮಾನ ಸಧ್ಯ ಜಾರಿಯಲ್ಲಿದೆ .
ಬಂಧನ ಮುಕ್ತರಾದ ಮೇಲೆ ಈ ನ್ಯೂಸ್ ಚಾನೆಲ್ ಗಳ ಹಾಗೂ ಅದರ ಲೈವ್ ಡಿಸ್ಕಷನ್ ನಲ್ಲಿ ಭಾಗವಹಿಸಿದವರ ಉವಾಚದ ಕ್ಲಿಪ್ ಗಳನ್ನು ನೋಡಿದರೆ ಖಂಡಿತವಾಗಿಯೂ ಬೆಳೆಗೆರೆ ಇನ್ನೊಮ್ಮೆ ನಾನು ಹುಟ್ಟಿ ಬಂದ್ದಿದೇನೋ ಎಂಬಷ್ಟರ ಮಟ್ಟಿಗೆ ಭಾಸ ವಾಗದೇ ಇರದು ಅರ್ಥಾತ್ ಒಬ್ಬಬ್ಬರ ತೆಗಳಿಕೆ ,ಹೊಗಳಿಕೆ, ಬಾಲ್ಯ ಯವ್ವನ ಹೀಗಿದ್ದಿತೆ ?ತನ್ನ ಕಣ್ಣನ್ನು ತಾನೇ ನಂಬಲಾರದ ಸನ್ನಿವೇಶ ಎದುರಾಗಬಹುದೇನೋ ?
ತನ್ನ ಆಪ್ತ ಸ್ನೇಹಿತ ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ ಎಂದು ಗೌರಿ ಲಂಕೇಶ್ ವಿಚಾರಣೆ ವೇಳೆ ಸಿಕ್ಕಿ ಬಿದ್ದ ಹಂತಕನ ಮಾತು ಕೇಳಿ ಪತ್ರಕರ್ತ ರವಿ ಬೆಳೆಗೆರೆ ಯನ್ನು ಅನಾರೋಗ್ಯದ ನಡುವೆಯೂ ರಾತ್ರೋ ರಾತ್ರಿ ಬಂಧಿ ಸಲಾಗಿತ್ತು . ಆ ಹಂತಕನ ಮಾತು ಬ್ರಹ್ಮವಾಕ್ಯವೆಂದು ತಿಳಿದ ಕಾನೂನು ವ್ಯವಸ್ಥೆ ಅರೆಷ್ಟ್ ಮಾಡಿ ಬಿಟ್ಟಿತು .ಕಾನೂನಿನಲ್ಲಿ ಬಂಧಿಸುವುದುಕ್ಕೆ ಸಮಯ ,ಜಾಗ ಯಾವುದು ಬೇಕಾಗಿಲ್ಲ ಆದರೆ ಇದು ಎಲ್ಲರಿಗೂ ಅನ್ವಯ ವಾಗುವಂತೆ ಇರ್ಬೇಕು ಅಲ್ವೇ ಆದರೆ ಅಚ್ಚರಿ ಅನ್ನಿಸುವುದು ಇಲ್ಲಿ ,ಪೋಲಿಸ್ ಅದಿಕಾರಿ ಬಿ.ಗಣಪತಿ , ಐ.ಪಿ.ಎಸ್ ಅಧಿಕಾರಿ ಡಿ ಕೆ ರವಿ ಕೇಸ್ ಗಳಿಗೆ ಅರ್ಥವೇ ವಿಲ್ಲ ಅವರ ಮನೆಯವರು ಖಡ ಖಂಡಿತವಾಗಿ ಸಾಕ್ಷಿ ಸಮೇತ ಹೇಳುತ್ತಿದ್ರೂ ತಪ್ಪಿತಸ್ತರು ಯಾರು ಎಂದೂ ಗೊತ್ತಿದ್ದರೂ ಅಪರಾಧಿಗಳನ್ನೂ ಬಂಧಿಸಲು ಸಾಧ್ಯವಾಗಿಲ್ಲ , ಇವರೆಲ್ಲಾ ಬಿಡಿ ಸಾಮನ್ಯ ಜನರ ಗತಿ ನೋಡಿ ಮೊನ್ನೆ ಮೊನ್ನೆ ಪ್ರವೆಸ್ ಮೆಸ್ತಾ ಹೊನ್ನಾವರದ ಘಟನೆಯನ್ನೇ ನೆನಪು ಮಾಡಿಕೊಳ್ಳೋಣ ಎಲ್ಲವೂ ಗೊತ್ತಿದ್ದರೂ ಅರೆಷ್ಟ್ ಮಾಡುವಲ್ಲಿ ?? ಕಣ್ಣಾರೆ ಕಂಡ ಊರವರು ಇದ್ದಾರೆ , ಮನೆಯವರು ಸಾಕ್ಷಿ ನುಡಿಯುತ್ತಿದ್ದಾರೆ ಅದರೂ ಪ್ರಯೋಜನವಿಲ್ಲ .ಅದೇ ಒಬ್ಬ ಆಗುಂತನ ಮಾತು ಆಲಿಸಿ, ಆಧರಿಸಿದ ಕಾನೂನು ವ್ಯವಸ್ಥೆಗೆ ಏನು ಹೇಳೋಣ ?ರಾಜ್ಯ ರಾಜಕಾರಣದ ಆಡಳಿತ ವ್ಯವಸ್ಥೆಗೆ ಕಾನೂನು ಈಲಾಖೆ ಕರ್ತವ್ಯ ಏನೂ ಹೇಳಿ ಪ್ರಯೋಜನ ಇಲ್ಲ .
ಒಟ್ಟಾರೆ ರವಿ ಬೆಳಗೆರೆ ಯಾರೂ ಮಾಡದ ತಪ್ಪು ಮಾಡಿಲ್ಲ ಹಾಗಂತಾ ಮಾಡಿದ್ದೆ ಸರಿ ಎಂದೂ ಸಹಾ ಹೇಳಲಾಗುತ್ತಿಲ್ಲ .ಸಿಕ್ಕಿದ್ದೇ ಚಾನ್ಸು ಅನ್ನುತ್ತಾ ವಿರೋಧಿಗಳಿಂದ ಹಿಡಿದು ರಾಜಕೀಯ ನೇತಾರುಗಳಿಂದ ಹಿಡಿದು ಮೀಡಿಯ ಕೂಡಾ ಬೆನ್ನಿಗೆ ಬಿದ್ದು ಸೇಡು ತೀರಿಸಿಕೊಳ್ಳುವುದು ಇದೆಯಲ್ಲಾ ಅದು ಸಮಂಜಸವಾಗಿ ಕಾಣುತ್ತಿಲ್ಲ . ಅಪರಾಧಿಯೋ ಇಲ್ಲವೋ ಅದು ಬೇರೆ ಮಾತು .ಅದು ಸೂಕ್ತವಾದ ತನಿಖೆ ಯಿಂದ ಸಾಬೀತು ಆಗಬೇಕು . ಆಗುತ್ತದೆ ಅಲ್ಲಿಯವರೆಗೆ ಅನಾರೋಗ್ಯದ ನಡುವೆ ರಾತ್ರೋ ರಾತ್ರಿ ಏಕಾಏಕಿ ಬಂಧೀಸಿ ಇಲ್ಲ ಸಲ್ಲದ ಆರೋಪದಡಿಯಲ್ಲಿ ಕೇಸು ದಾಖಲಿಸಿ ವಿಚಾರಣೆ ಯನ್ನು ನಡೆಸುವದರ ಜೊತೆಗೆ ವಿಕ್ರತೆಯನ್ನು ಮರೆಯುವುದು ಇದೆಯಲ್ಲ ಅದನ್ನು ಸಹಿಸಿ ಕೊಳ್ಳಕ್ಕೆ ಆಗ್ತಾ ಇಲ್ಲ ?ಇಲ್ಲ ಸಲ್ಲದ ವಿಚಾರವನ್ನು ಹೆಣೆದು ,ವಿರೋಧಿಗಳನ್ನು ಸ್ಟುಡಿಯೋ ದೊಳಗೆ ಕೂರಿಸಿ 24 ಗಂಟೆಯವರೆಗೂ ಕಾರ್ಯಕ್ರಮವನ್ನು ಎಳೆಯುವುದು ಎಳ್ಳಷ್ಟು ಸರಿಯಲ್ಲ ?ಜನಪ್ರತಿನಿಧಿಗಳಿಗೆ ಒಂದು ನ್ಯಾಯ ಬೆಳೆಗೆರೆಗೆ ಒಂದು ನ್ಯಾಯ ಇದೆಂತಾ ತಾರತಮ್ಯ ? ಕಂಟ್ರವರ್ಸಿ ಪತ್ರಕ್ರತರೆಂದೇ ? ಯಾರಿಗೂ ಬೆದರದೇ ಇದ್ದದ್ದನ್ನು ಇದ್ದ ಹಾಗೆ ಪೆನ್ನುನ್ನು ಖಡ್ಗವಾಗಿಸುವ ಛಾತಿಗಾಗಿಯೇ ? ಇವರ ಸೃಜನ ಶೀಲ ಕ್ರೀಯಾಶಿಲತೆಗೆ ಅದೆಸ್ಟೋ ಅಸಾಧ್ಯವಾದ ಯಾರು ಮಾಡದ ವಿಚಾರ ವೈವಿಧ್ಯೆತೆ ಎಂಟದೆ ಭಂಟನಂತೆ ತನ್ನ ಮೊನಚು ಬರವಣಿಗೆಯಲ್ಲಿ ತೋರಿಸಿ ಕೊಟ್ಟಿದ್ದಾರೆ . ಅತೀ ಹೆಚ್ಚು ಸಂಖ್ಯೆಯಲ್ಲಿ ಇವರ ಅಕ್ಷರವನ್ನು ಪ್ರೀತಿಸುವ ಓದುಗ ವರ್ಗವಿದೆ . ಒಂದು ಬುಕ್ ರಿಲಿಸ್ ಆದ್ರೆ ಬಹಳ ದೊಡ್ಡ ಮಟ್ಟದಲ್ಲಿ ಶೆಲಿಂಗ್ ಇರುವುದು ಇವರ ಗಟ್ಟಿತನಕ್ಕೆ ಸಾಕ್ಷಿ . ಪಾತಕ ಲೋಕದ ಅನಾವರಣ, ಕ್ರೈಂ ನ್ನು ತುಂಬಾ ಹತ್ತಿರ ದಿಂದ ಕಂಡವರು ಕಂಡ ಹಾಗೆ ಲೇಖನಿ ಚಳಪಳಿಸುವುದರ ಹಿಂದೆ ಗಂಭೀರ ಚಿಂತನೆ ಆ ಕ್ರತು ಶಕ್ತಿ ಬೆಳೆಗೆರೆ ಬಿಟ್ಟರೆ ಬೇರೆ ಯಾರಿಂದಲೂ ಅಸಾಧ್ಯ ..! ಏನೇ ಇರಲಿ ಪುಲ್ ಸ್ಟಾಪ್ ಇಡುವ ಮುನ್ನ ಕೊನೆಯದಾಗಿ ಒಂದೇ ಒಂದು ಮಾತು ಬೆಳೆಗೆರೆ ಮಾಡಿದ್ದು ಸರಿ ಎಂಬುದು ನನ್ನ ಓಡಲದ್ವನಿ ವಿವರವಲ್ಲ . ತಪ್ಪು ಯಾರೇ ಮಾಡಲಿ ತಪ್ಪು ತಪ್ಪೇ ! ಅದಕ್ಕೊಂದು ಅರ್ಥ ವ್ಯವಸ್ತೆ ಇದೆ ಅದೇ ದಿಕ್ಕಿನಲ್ಲಿ ಸಾಗಬೇಕು ಸಂವಿಧಾನದ ಕಾನೂನು ಒಡೆದು ಬಡಿದು ಆಳುವ ಈ ನೀತಿ ಸರಿಯಲ್ಲ ಅಷ್ಟೇ !
ಭಾನುವಾರ, ಡಿಸೆಂಬರ್ 17, 2017
ಗುರುವಾರ, ಸೆಪ್ಟೆಂಬರ್ 28, 2017
ನ್ಯೂಸ್ ಮಾಧ್ಯಮಗಳೇ ಬ್ರೇಕಿಂಗ್ ನ್ಯೂಸ್ ಗಳಾಗುತ್ತಿವೆ !
ಕರ್ನಾಟಕದಲ್ಲಿ ಇವತ್ತಿನವರೆಗೆ ಸುಮಾರು 13 ಸ್ಯಾಟ್ ಲೈಟ್ ಸುದ್ದಿ ವಾಹಿನಿಗಳು ಕಾರ್ಯನಿರ್ವಹಿಸುತ್ತಿವೆ .ಇನ್ನೂ ಕೇಬಲ್ ಟಿವಿ ನೆಟ್ವರ್ಕ್ಗಳಿಗೆ ಲೆಕ್ಕವಿಲ್ಲ.. ! ಹೌದು ಇದು ಸರಿ ಸುಮಾರು ಹತ್ತು ವರ್ಷಗಳಿಂದ ಈಚೇಗಿನ ಬೆಳವಣಿಗೆ . ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಪತ್ರಿಕೋದ್ಯಮ ,ಮಾಧ್ಯಮಗಳು ಸಮಾಜ ಮುಖಿ ಕಾರ್ಯಚರಿಸುವುದಕ್ಕಿಂತ ಒಂದು ರೀತಿಯಲ್ಲಿ ಬಿಜಿನೆಸ್ ಆಗಿ ರೂಪು ಗೊಂಡಿದೆ ಏನೋ ಎಂಬಂತೆ ಬಾಸವಾಗುತ್ತಿವೆ ಪ್ರಸ್ತುತ ಪರಿಸ್ತಿತಿಯನ್ನು ಅವಲೋಕಿಸಿದರೆ ಈ ಮಾತನ್ನು ತಳ್ಳಿ ಹಾಕುವಂತೆಯೂ ಇಲ್ಲ ., ಹಾಗಂತ ಪೂರ್ಣಪ್ರಮಾಣದಲ್ಲಿ ಒಪ್ಪಿಕೊಳ್ಳುವನ೦ತೆಯೂ ಇಲ್ಲ .ಇದರಲ್ಲಿ ಮುಂಚೂಣಿಯಲ್ಲಿ ಕಾಣ ಸಿಗುವುದು ಎಲೆಕ್ಟ್ರಾನಿಕ್ ಮಾಧ್ಯಮ . ಟಿವಿಯ ಮುಂದೆ ನಿದಿಷ್ಟ ಡಿಶ್ ನೆಟ್ವರ್ಕ್ ಗಳ ಮೂಲಕ ಆಸ್ಪಾದಿಸಬೇಕಾದ ಕಾಲವಿತ್ತು .ಈಗ ಹಾಗಿಲ್ಲ ಅಂಗೈ ಅಗಲದ ಮೊಬೈಲ್ ನಲ್ಲಿ ನೇರವಾಗಿ ವಿಕ್ಷಿಸುವಂತ ಜಮಾನಕ್ಕೆ ಬಂದಿದ್ದೇವೆ.ಈ ನಡುವೆ ತಾಂತ್ರಿಕತೆಯೂ ಸಹಾ ಅಷ್ಟೇ ಮುಂದುವರಿದಿದೆ. ಗಂಟೆಗಟ್ಟಲೇ ಕಾಯಬೇಕಾದ ಅಗತ್ಯವೂ ಇಲ್ಲ ಎಲ್ಲಾ ಪಾಸ್ಟ್! ..ಪಾಸ್ಟ್ ಆಗಿ ಸಿಗುತ್ತಿವೆ ಲೈವ್ ಆಗಿ ಆಯಾ ಸ್ಥಳ ದಿಂದಲೇ ಕಾರ್ಯಕ್ರಮ ಸುದ್ದಿಗಳು ಬಿತ್ತಾರವಾಗುತ್ತಿವೆ . ಏನೇ ಇರಲಿ ಪಾಸ್ಟ್ ಜನರೇಶನ್ ನಲ್ಲಿ ಟಿವಿ ಮುಂದೆ ಕೂತು ಸುದ್ದಿ ನೋಡವುದು ,ಪೇಪರ್ ಪುಟ ತಿರುವಿ ಹಾಕುವಷ್ಟು ಸಮಯವ್ಯಯ ಮಾಡುವುದಕ್ಕೆ ಪುರಸೋತ್ತೆ ಇಲ್ಲ ..ಇಂತಹ ಕಾರಣ ಗಳಿಂದ ಸ್ಪರ್ದಾತ್ಮಕವಾಗಿ ಸುದ್ದಿ ನೀಡುವಲ್ಲಿ ಕೊಂಚ ಎಲೆಕ್ಟ್ರಾನಿಕ್ ಮಾಧ್ಯಮಗಳ ಪಾತ್ರ ಬಲು ದೊಡ್ಡದು.ಆದರೆ ಬ್ರೇಕಿಂಗ್ ನ ನ್ಯೂಸ್ ನೀಡುವ ಸುದ್ದಿ ವಾಹಿನಿಗಳೇ ಕೆಲವೊಮ್ಮೆ ಬ್ರೇಕಿಂಗ್ ನ್ಯೂಸ್ ಆಹಾರಕ್ಕೆ ಒಳಗಾಗಿ ನಗೆ ಪಾಟಲಿಗೆ ಈಡಾಗುವುತ್ತಿರುವುದೇ ವಿಪರ್ಯಾಸ !!
ಕರ್ನಾಟಕದಲ್ಲಿ ಟಿವಿ 9 ವಾಹಿನಿ ಕ್ರಪಾಕಟಾಕ್ಷದಿಂದ ಸಾಕಷ್ಟು ಚಾನೆಲ್ ಗಳು ಅರಳಿವಿವೆ ಹಾಗೂ ಅಳಿದಿವೆ ಹಾಗೂ ಅಳಿವಿನ ಅಂಚಿನಲ್ಲಿದೆ ಇನ್ನೂ ಕೆಲವು ಮೊಗ್ಗಾಗಿ ಅರಳುವ ಸನಿಹದಲ್ಲಿದೇವೆ .
ಸುಮಾರು ಹತ್ತು ವರ್ಷಗಳ ಹಿಂದೆ ನಮಗೆ ಸುದ್ದಿ ,ದ್ರಶ್ಯ ಮಾದ್ಯಮದಲ್ಲಿ ಕಾಣಲು ದಿನದಲ್ಲಿ ಕೆಲವು ಗಂಟೆಗಳು ಮಾತ್ರ ಈ ಟಿವಿ ಹಾಗೂ ಉದಯ ಟಿವಿ ಮುಖಾ೦ತರ ಸಿಗುತ್ತಿತ್ತು. ತದ ನಂತರ ಕರ್ನಾಟಕದ ಬಾಗಿಲು ಬಡಿದಿದ್ದು ಅಂದ್ರ ಮೂಲದ ಟಿವಿ 9 ಎಂಬ ಜನಪ್ರೀಯ ಪ್ರಾದೇಶಿಕ ಸುದ್ದಿ ವಾಹಿನಿ .24 ಗಂಟೆಗಳ ಕಾಲ ನ್ಯೂಸ್ ಜೊತೆಗೆ ಮನೋರಂಜನಾ ಕಾರ್ಯಕ್ರಮಗಳ ಮೂಲಕ ಇಡೀ ರಾಜ್ಯದಲ್ಲಿ ಅಭಿಮಾನಿ ಬಳಗವನ್ನು, ಕಾಲಿಟ್ಟ ಸ್ವಲ್ಪ ಸಮಯದಲ್ಲಿ ಸಂಪಾದೀಸಿ ಬಿಟ್ಟಿತು .ಹಾಗೂ ಹಲವಾರು ಪತ್ರಕರ್ತರಿಗೆ,ತಂತ್ರಜ್ಞರಿಗೆ ಹೊಸ ಮುಖಗಳಿಗೆ ಅವಕಾಶ ಕೊಟ್ಟು ಅವರನ್ನು ಸ್ಟಾರ್ ಮಾಡಿ ಅವರುಗಳೇ ಮುಂದೆ ಟಿವಿ 9 ಗೆ ಪೈಪೋಟಿ ನೀಡುವ ಚಾನೆಲ್ ಒಡೆತನವನ್ನು ದಕ್ಕಿಸಿ ಕೊಟ್ಟಿತು .
ಹೌದು .!ಈ ಹಿಂದೆ ಈ ಟಿವಿ ಹಾಗೂ ಕೆಲವು ಪತ್ರಿಕೆಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದರಿಗೆ ರತ್ನ ಕಂಬಳಿ ಹಾಸಿತ್ತು .ಹಾಗೆ ಅಲ್ಲಿಂದ ದ್ರಶ್ಯ ಮಾದ್ಯಮದಲ್ಲಿ ABCD ಕಲಿತ ಕೆಲವರು ಬೇರೆ ನ್ಯೂಸ್ ಚಾನೆಲ್ ಒಡೆಯರಾದ್ರೆ ಇನ್ನೂ ಕೆಲವರು ಮಂದಿ ಕೆಲವು ಚಾನೆಲ್ ಗಳಲ್ಲಿ ಮುಖ್ಯ ಬೂಮಿಕೆಯಲ್ಲಿ ಕಂಡು ಬಂದರು . ಒಟ್ಟಾರೆ ಈದೀಗ 13 ಚಾನಲ್ ಗಳಿದ್ದರೂ ಟಿವಿ 9 ಗೆ ಪೈಪೋಟಿ ನೀಡುವವಂತಿದ್ದರೂ , ಒಂದಿಂಚೂ ಕದಲದೇ ತನ್ನಯಾದ ಟಿಆರ್ಪಿಯನ್ನು ಇಂದಿಗೂ ಕೂಡಾ ಹಾಗೆ ಇಟ್ಟು ಕೊಂಡು ಬಂದಿದೆ ಎಂದರೆ ಸೋಜಿಗವೇ ಸರಿ ! ಮೊನ್ನೆ ಮೊನ್ನೆಯ ಒಂದು ವಿಚಾರ ಮಾತ್ರ ಟಿವಿ9 ಗೆ ಶಾಕ್ ತಂದಿದಂತೂ ಸತ್ಯ .
ಇತ್ತಿಚೆಗಷ್ಟೇ ಕೆಲವು ಟಾಪ್ ತಂತ್ರಜ್ಞರು ಹಾಗೂ ಅಯಂಕರ್ ಗಳು ವಾಹಿನಿಗೆ ಗುಡ್ ಬೈ ಹೇಳಿ ಬೇರೆ ಚಾನಲ್ ಸೇರಿ ಕೊಂಡರೆ ,,ಟಿವಿ 9 ಆಧಾರ ಸ್ತಂಭವಾಗಿದ್ದ ಹಿರಿಯ ನಿರ್ಮಾಪಕ ಎಸ್ ರವಿಕುಮಾರ್ ಹಾಗೂ ಇನ್ನೋರ್ವ ನಿರ್ಮಾಪಕ ಮಾರುತಿ ರಾಜಿನಾಮೆ ಸಲ್ಲಿಸಿರುವುದು . ! ಹೌದು ಟಿವಿ 9 ಉನ್ನತ ಸ್ಥಾನಕ್ಕೆ ಏರಲು ಅಂದಿನಿಂದ ಇಂದಿನವರೆಗೆ ಇವರುಗಳ ಶ್ರಮ ಬುದ್ದಿ ಕೌಶ್ಯಲತೆ ಹೇಳತೀರದು . ಒಂದು ಸಮಯದಲ್ಲಿ ಬೇಡಿಕೆಯ ತಂತ್ರಜ್ಞರು ಹಾಗೂ ನಿರೂಪಕರು ಬಿಟ್ಟು ಹೋದರೂ , ಈ ಎರಡು ಹೆಸರುಗಳೇ ಟಿವಿ 9 ಉಸಿರು ಅಂತರಾತ್ಮ ಆಗಿದ್ದರು ಎಂದು ತುಂಬಾ ಹತ್ತಿರ ದಿಂದ ಕಂಡವರ ಹೇಳುತ್ತಾರೆ . ಏನೇ ಇರಲಿ ಇದು ಟಿವಿ 9 ಗೆ ಬಹಳ ದೊಡ್ಡ ನಷ್ಟ ಹಾಗೂ ಟಿವಿ 9 ಬಾಳು ಮುಂದೇನು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ . ಇನ್ನೂ ಉದಯವಾರ್ತೆ ವಾಹಿನಿ ಬಾಗಿಲು ಹಾಕಿ ಕೊಂಡಿದೆ ಅಂತೆ .ಇನ್ನೂ ಗಣಿ -ದಣಿ ಮಾಲೀಕತ್ವದ ಜನಶ್ರಿ ಟಿವಿ ತನ್ನ ಉದ್ಯೋಗಿಗಳಿಗೆ ಕಳೆದ ಕೆಲವು ತಿಂಗಳುಗಳಿಂದ ಸಂಭಾವನೆಯನ್ನು ಕೊಟ್ಟಿಲ್ಲವಂತೆ .ಸಂತ್ರಸ್ತರು ಸೋಶಿಯಲ್ ಮೇಡಿಯಾ ಮೂಲಕ ಕಿಡಿ ಕಾರುತ್ತಿದ್ದಾರೆ . ಹಾಗೆ ಟಿವಿ 9 ಹಾಗೂ ಸುವರ್ಣ ವಾಹಿನಿಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ,ಹಿರಿಯ ಪತ್ರಕರ್ತ ವಾಗ್ಮಿ ಮುದ್ರಣ ಮಧ್ಯಮದ ಘೋಟ್ಗಜ ರಂಗನಾಥ್ ೨೦೧೨ ರಲ್ಲಿ ಪಬ್ಲಿಕ್ ಟಿವಿಯನ್ನು ಸ್ತಾಪಿಸಿದ್ದು ಪಬ್ಲಿಕ್ ಗೆ ಗೊತ್ತಿರುವಂತ ಅಂಶವೇ . ಅವರ ರೈಟ್ ಹ್ಯಾಂಡ್ ಆಗಿದ್ದ ರಾಧಾ ಹಿರೇಗೌಡರು ಪಬ್ಲಿಕ್ ಟಿವಿಯನ್ನು ತೊರೆದಿದ್ದಾರೆ ಎಂಬ ಅದಿಕ್ರತ ಘೋಷಣೆ ಕೇಳಿ ಬರುತ್ತಿವೆ . ಈ ಹಿಂದೆ ಇದೇ ತರಹನಾದ ಸುದ್ದಿ ಹಬ್ಬಿತ್ತಾದರೂ, “ಇದೆಲ್ಲಾ ಅಪ್ಪಟ ಸುಳ್ಳು ,ನಾನು ಪಬ್ಲಿಕ್ ಟಿವಿ ಬಿಟ್ಟಿಲ್ಲ,ಬಿಡುವುದಿಲ್ಲ , ನಾನು ಯಾವುದೇ ಚಾನೆಲ್ ಸೇರಿ ಕೊಳ್ಳುತ್ತಿಲ್ಲ “.ಎಂದು ತನ್ನ ಎಂದಿನ ಏರು ದ್ವನಿಯಲ್ಲಿ ಫೇಸ್ಬುಕ್ ಲೈವ್ ನಲ್ಲಿ ಹೇಳಿದ್ದರು . ಆದರೆ ಈಗಿನ ಬ್ರೇಕಿಂಗ್ ನ್ಯೂಸ್ ಪ್ರಕಾರ ರಾಧಾ ಮೇಡಂ ನೂತನ ಚಾನೆಲ್ ಗೆ ಲೀಡ್ ಆಗಿ ಸೇರಿದ್ದಾರೆ .ಇನ್ನೂ ಕೆಲವು ದಿನಗಳಲ್ಲಿ ಟಿವಿ ಪರದೆ ಮೇಲೆ ಇವರ ನೋಡಬಹುದು ಹಾಗೆ ಪಬ್ಲಿಕ್ ಟೀವಿ ಕಿಂತ ಮೂರು ಪಟ್ಟು ಹೆಚ್ಚಿನ ಸಂಬಾವನೆಯನ್ನು ಕೊಡುತ್ತಾರೆ ಎಂಬಿತ್ಯಾದಿ ಮಾತುಗಳು ಸೋಶಿಯಲ್ ನೆಟ್ವರ್ಕ್ ಗಳ ಮೂಲಕ ವೈರಲ್ ಆಗಿದೆ .ಯಾವುದು ಸತ್ಯವೋ ಯಾವುದು ಮಿಥ್ಯವೋ ಗೊತ್ತಿಲ್ಲ ಆದರೆ ರಾಧಾ ಮೇಡಂ ಕಳೆದ ಕೆಲವು ದಿನಗಳಿಂದ ಪಬ್ಲಿಕ್ ಟಿವಿಯಲ್ಲಿ ನಾಪತ್ತೆಯಾಗಿದ್ದಾರೆ ಇದು ಬ್ರೇಕಿಂಗ್ ನ್ಯೂಸ್ ಹೇಳುವುತ್ತಿರ್ವುದು ಸತ್ಯ .! ಗೌರಿ ಲಂಕೇಶ್ ಹತ್ಯೆ ನಂತರ ಲಂಕೇಶ್ ಪತ್ರಿಕೆಗೆ ದಿಕ್ಕಿಲ್ಲ ! ಯಾರು ಮುಂದುವರಿಸಿ ಕೊಂಡು ಹೋಗುತ್ತಾರೋ ಎಂಬ ಜಿಜ್ಞಾಸೆಯಲ್ಲಿ ತಿಂಗಳುಗಳು ಕಳೆದೇ ಹೋಗಿದೆ ..ಈಗಿನ ಮತ್ತೊಂದು ಬ್ರೇಕಿಂಗ್ ನ್ಯೂಸ್ ಪ್ರಕಾರ ರಾಜ್ಯದಲ್ಲಿ ಗಲ್ಲೆಬ್ಬಿಸಿದ ರವಿ ಬೆಳೆಗೆರೆ ನೇತೃತ್ವದ ಹಾಯ್ ಬೆಂಗಳೂರು ಪತ್ರಿಕೆಯನ್ನು ನಿಲ್ಲಿಸುವ ಇಂಗಿತವನ್ನು ವ್ಯಕ್ತಪಡೀದ್ದಾರಂತೆ . ಒಟ್ಟಾರೆ 22 ವರ್ಷಗಳಿಂದ ಅದೆಸ್ಟೋ ಜನರನ್ನು ಎದುರು ಹಾಕಿಕೊಂಡು ,ಅದೆಷ್ಟೋ ಜನರನ್ನು ಬೆತ್ತಲೆ ಮಾಡಿದ ಇನ್ನೊಂದು ಟ್ಯಾಬ್ಲೆಟ್ ಪತ್ರಿಕೆ ಮುಚ್ಚುತ್ತಿದೆ . ಇನ್ನೂ ದಸರಾ ಆಯುಧ ಪೂಜೆ ಹಾಗೂ ವಿಜಯದಶಮಿ ಪ್ರಯುಕ್ತ ಕೆಲವೊಂದು ಚಾನೆಲ್ ಗಳು ಗ್ರ್ಯಾಂಡ್ ಓಪನಿಂಗ್ ಕಾಣಲಿದೆಯಂತೆ ಒಟ್ಟಾರೆ ಇತ್ತೀಚೆಗಿನ ದಿನಗಳಲ್ಲಿ ಸುದ್ದಿಮಾದ್ಯಮಗಳೇ ಬ್ರೇಕಿಂಗ್ ನ್ಯೂಸ್ ಆಗ್ತಾ ಇರೋದು ಮಾತ್ರ ಸುಳ್ಳಲ್ಲ !!!

ಭಾನುವಾರ, ಸೆಪ್ಟೆಂಬರ್ 10, 2017
ಅಂದು ಹಿತೇಂದ್ರ ಪ್ರಸಾದ್ . ಇಂದು ಗೌರಿ ಲಂಕೇಶ್!
ನನಗೆ ಒಮ್ಮೆಲೇ ಉಸಿರು ಬಿಗಿ ಹಿಡಿಸಿದ್ದು ಅಂದರೆ ಇದು ! ಅಂದು ಹಾಯ್ ಮಾರುತ ಪತ್ರಿಕೆಯ ಹಿತೇಂದ್ರ ಪ್ರಸಾದ್ ಹಾಗೂ ಇಂದು ಲಂಕೇಶ್ ಪತ್ರಿಕೆಯ ಗೌರಿ ಲಂಕೇಶ್ ಮರ್ಡರ್ ! ನನಗೆ ಕೆಲವೇ ಕೆಲವು ಪತ್ರ ಕರ್ತರ ಪೈಕಿ ಇವರಿಬ್ಬರ ಬರವಣಿಗೆ ಅಚ್ಚುಮೆಚ್ಚು ! ವಾರ -ದಿಂದ ವಾರಕ್ಕೆ ಕೂತೂಹಲ ದಿಂದ ಇವರ ಲೇಖನಕ್ಕಾಗಿ ಕಣ್ಣು ಕಾದು ಕುಳಿತಿರುತ್ತಿತ್ತು . ಹಿತೇಂದ್ರ ಪ್ರಸಾದ್ ರ ಹಾಯ್ ಮಾರುತ ಉಡುಪಿಯಿಂದ ಪ್ರಕಟಕೊಳ್ಳುತ್ತಿದ್ದೂ ಕರಾವಳಿಯಾದ್ಯಂತ ಜನಪ್ರೀಯ ಗೊಂಡಿತ್ತು ,ಸಂಚಲನವನ್ನೂ ಮೂಡಿಸಿತ್ತು .ಹಲವಾರು ದೊಡ್ಡ -ದೊಡ್ಡ ಕುಳಗಳನ್ನೇ ಎದುರಿಗೆ ಹಾಕಿ ಕೊಂಡು ತಮ್ಮ ತೀಕ್ಷ್ಣ ಬರಹದ ಮೂಲಕ ಚಾಟಿ ಬೀಸುತ್ತಿದ್ದರು ,ಇವರ ದುಷ್ಮನ್ ಸಂಖ್ಯೆ ಎಶ್ಟಿತೆಂದರೆ ಸ್ವತ: ಕೆಲವು ಪತ್ರಕರ್ತರ ಕೆಂಗಣ್ಣಿಗೂ ಗುರಿಯಾಗಿ ವಿರೋಧವನ್ನು ಕಟ್ಟಿ ಕೊಂಡ್ಡಿದ್ದರು ಯಾವ ಬೆದರಿಕೆಗೂ ಹೆದರದೆ ರಾಜಾರೋಷವಾಗಿ ಬೆರೆಯುತ್ತಿದ್ದರು ಹಾಗೂ ಲೇಖನಿ ಮೊನಚು ಗೊಳಿಸುತ್ತಿದ್ದರು ಹಾಗೂ ಒಬ್ಬಂಟಿಯಾಗಿಯೇ ತಿರುಗಾಡುತ್ತಾ ತನಿಖಾ ಕ್ರೈಮ್ ವರದಿಗಳನ್ನ ಸಿದ್ದ ಪಡಿಸುತ್ತಿದ್ದರು . ಅಂದು ರಾತ್ರಿ (22/08/2006 )ವರದಿಗೆ ತೆರಳಿದ್ದ ಮಣಿಪಾಲನ ತಲ್ಲೂರು ಬಾರ್ ನಲ್ಲಿ ಪಬ್ಲಿಕ್ ಳ ಎದುರೇ ತಲವಾರು ಕಾಳಗದಲ್ಲಿ ಅಲ್ಲೇ ಕೊನೆ ಉಸಿರು ಎಳೆದಿದ್ದರು . ಮರುದಿನ ಪತ್ರಕರ್ತ ಹಿತೇಂದ್ರ ಪ್ರಸಾದ್ ಮರ್ಡರ್ ಎಂದು ಬಿಂಬಿತ ಕೊಂಡಿತ್ತು . ಯಾವೊಬ್ಬ ಪತ್ರಕರ್ತನೂ ಕೂಡಾ ಬೀದಿಗೆ ಬಂದು ಪ್ರತಿಭಟನೆಗೆ ಮುಂದಾಗಲಿಲ್ಲ .ಇಂತವರೇ ಹತ್ಯೆ ಮಾಡಿದ್ದಾರೆ ಎಂದು ಗೊತ್ತಿದ್ದರೂ ಸಹಾ ಕಾನೂನು ಕೂಡಾ ಕ್ರಮ ಕೈಗೊಳ್ಳುವಲ್ಲಿ ವಿಫಲವಾಯಿತು ಇದು ಆದಿನದ ಮಾತು ಬಿಡಿ. ಇಂದು ಗೌರಿ ಲಂಕೇಶ್ ಮರ್ಡರ್ ..!!! ಇವರ ಹೆಸರು ಕೆಳದಿರುವವರು ಯಾರೂ ಇಲ್ಲ ಅಷ್ಟೊಂದು ಕಾಂಟ್ರವರ್ಸಿ, ಗಾಸಿಪ್ ಗಳ ಮೂಲಕ ಕರ್ನಾಟಕ ಬಿಡಿ ಜಗತ್ತಿನಾದ್ಯಂತ ಪ್ರಸಿದ್ದಿ ಪಡೆದವರು . ಇಂಗ್ಲಿಷ್ ಪತ್ರಕರ್ತೆಯಾಗಿ ವೃತ್ತಿ ಜೀವನ ಆರಂಭಿಸಿದ್ದ ಇವರು ಪ್ರಗತಿಪರರ ಗುಂಪು ಎಡಪಂತೀಯದಲ್ಲಿ ಗುರುತಿಸಿಕೊಂಡಿದ್ದವರು . ೫೫ ವರ್ಷದ ಗೌರಿ ಲಂಕೇಶ್ ,ತನ್ನ ತಂದೆ ಪಿ ಲಂಕೇಶ್ ನಿಧನದ ನಂತರ ಅವರು ನಿರ್ವಹಿಸುತ್ತಿದ್ದ ಲಂಕೇಶ್ ಪತ್ರಿಕೆಯ ಚುಕ್ಕಾಣಿ ಹಿಡಿದು "ಗೌರಿ ಲಂಕೇಶ್ "ಎಂದು ಟೈಟಲ್ ಚೇಂಜ್ ಮಾಡಿ ಖಾರವಾಗಿ ಲೇಖನಿ ಓಡಾಡಿಸುತ್ತಿದ್ದ ಪರಿ ಹಾಗೂ ಪ್ರತಿಕ್ರೀಯಿಸುತ್ತಿದ್ದ ಚಾತುರ್ಯತೆ ಜನಜನಿತ . ಅವರ ಬರವಣಿಗೆಯ ಶೈಲಿ ಲೇಖನಿಯನ್ನು ಖಡ್ಗವನ್ನಾಗಿಸಿ ಬೀಸುತ್ತಿದ್ದ ಪರಿ ಇಷ್ಟವಾಗಿತ್ತೇ ವಿನಹಾ ವೈಚಾರಿಕತೆಯನ್ನು ಮಾತ್ರ ಒಪ್ಪುವಂತೆ ಇರುತ್ತಿರಲಿಲ್ಲ .ಅವರ ಮೂಗಿನ ನೇರಕ್ಕೆ ಅವರ ವಾದ ಮಂಡಿಸುತ್ತಿದ್ದರು ,ಅವರ ವಿಚಾರವಾದಿತನವನ್ನು ಕೆಲವರು ಅಪ್ಪಿಕೊಂಡಿದ್ದಾರೆ ಸಾಕಷ್ಟು ಜನದೂಷಿಸುತ್ತಾರೆ .ಹೀಗಾಗಿಯೇ ಪರ ವಿರೋಧದ ಅಲೆಗಳಲ್ಲಿ ಕೊಂಚ ಪ್ರಚಲಿತವನ್ನೂ ಪಡೆದು ಕೊಂಡಿದ್ದರು .
ಅದೇನೋ ಹೇಗೋ ಗೊತ್ತಿಲ್ಲ.(06/09/2018) ಹಂತಕರು ಗುಂಡು ಹಾರಿಸಿಬಿಟ್ಟರು ಕ್ಷಣ ಮಾತ್ರದಲ್ಲಿ ಯಾವುದೇ ಕುರುಹುವಿಲ್ಲದೇ ನಿಗೂಢವಾಗಿ ನಡೆದು ಹೋಯಿತು ದಿಟ್ಟೆಯ ಹತ್ಯೆ !ಹಾಗೆ ನೋಡಿದ್ದರೆ ಹಿತೇಂದ್ರ ಪ್ರಸಾದ್ ಗೆ ಸಾಕಷ್ಟು ಬೆದರಿಕೆ ಕರೆ ಬಂದಿತ್ತು ,ವರದಿ ಪ್ರಕಟಿಸಿದರೆ ಹತ್ಯೆ ಮಾಡುತ್ತೇವೆ ಎಂಬ ವಚನವನ್ನು ಕೊಟ್ಟ ಕಹಾನಿಯನ್ನು ಎಳೆ- ಎಳೆ ಯಾಗಿ ಪ್ರಸಾದ್ ಪತ್ರಿಕೆಯಲ್ಲಿ ಹೇಳಿ ಕೊಂಡಿದ್ದರು ಕೂಡಾ ..ಅವರ ಕೊನೆಯ ಬರಹ ನನಗೆ ನನಪು ಇದ್ದ ಹಾಗೆ ನಾನು ಓದಿದ್ದು ಮಣಿಪಾಲ ತಲ್ಲೂರ್ ಬಾರ್ ನಲ್ಲಿ ನಡೆಯುವ ಲೈವ್ ಬ್ಯಾನ್ಡ್ ಬಗ್ಗೆ ಇದರ ಬಗ್ಗೆ ಸರದಿ ವರದಿಯನ್ನು ಬಿತ್ತರಿಸುತ್ತಿದ್ದರು . ಸಂಚಿಕೆ ಮೊದಲ ಕಂತಿನಲ್ಲಿ ಲೈವ್ ಬ್ಯಾಂಡ್ ನ ಪೂರ್ವಾಪರವನ್ನು ವಿವರಿಸಿದ್ದರು ಇನ್ನೊಂದಿಷ್ಟು ಇಂಟ್ರೆಸ್ಟಿಂಗ್ ಅಂಶವನ್ನು ಮುಂದಿನ ಸಂಚಿಕೆಗೆ ಮುಂದು ವರಿಸಿದ್ದರು .ಇನ್ನೇನು ಅದು ಅಚ್ಚಾಗುವ ಹಂತದಲ್ಲಿತ್ತು ಇದೆ ವಿಷಯಕ್ಕಾಗಿ ಆ ರಾತ್ರಿ ಖುದ್ದು ಲೈವ್ ಬ್ಯಾಂಡ್ ಗೆ ತೆರಳಿ ವಿಷಯ ಸಂಗ್ರಹಿಸುತ್ತಿದ್ದ ಸಂದರ್ಭ ಮಾರುಕಾಯುಧ ಗಳಿಂದ ಎಕಾಏಕಿ ಹಲ್ಲೆ ನಡೆಸಿ ಹಾಯ್ ಮಾರುತದ ಉಸಿರನ್ನು ನಿಲ್ಲಿಸಿದ್ದರು . ಇದೆಲ್ಲಾ ಇತಿಹಾಸ . ಇಂದಿನ ಈ ಘಟನೆ ಕೇಳಿ ಅಂದಿನ ಘಟನೆ ಮನಪಠಲಕ್ಕೆ ಬಂತು . ಹೌದು ಗೌರಿ ವಿಷಯವೂ ಕೂಡ ಶಾಕಿಂಗ್ ತಂದಿದೆ ಸೈದಾಂತಿಕ ವಾಗಿ ವಿರೋಧಿಗಳಿರುವುದು ಸಾಮಾನ್ಯ ಆದರೇ ಯಾವುದೇ ಬೆದರಿಕೆ ವಿಚಾರವನ್ನು ಅವರು ಎಲ್ಲಿಯೂ ಪ್ರಸ್ತಾಪಿಸಿಲ್ಲ ಅನಿರೀಕ್ಷಿತವಾಗಿ ಘಟನೆ ನಡೆದಿದೆ . ಹತ್ಯೆ ಖಂಡನೀಯ ! ಒಂದೊಳ್ಳೆಯ ಪತ್ರಕರ್ತೆಯನ್ನು ಕಳೆದು ಕೊಂಡಿದ್ದೇವೆ ಎಂದು ಹೇಳಬಲ್ಲೆ ., ವಯಕ್ತಿಕವಾಗಿ ಅವರ ಸಾಹಿತ್ಯದ ಶೈಲಿಯನ್ನು ಮಾತ್ರ ಇಷ್ಟಪಟ್ಟಿದ್ದೆ .ಅವರ ಪ್ರಚೋದನಾ ಕಾರಿ ಬೀಷಣದ ಭಾಷಣ ಹಾಗೂ ಎಡಪಂತೀಯ ನಿಲವುಗಳನ್ನು ನಾನು ವಿರೋಧಿಸ್ತೆನೆ . ಅಂದ ಹಾಗೆ ನಾನು ಓದಿದ್ದ ಅವರ ಕೊನೆ ಮುಖ ಪುಟ ವರದಿ "ಚಂಡಾಲ ಭಟ್ಟನಿಗೆ ಇನ್ನೆಷ್ಟು ಬಲಿ? .ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಹಂತಕರ ಬಂಧನವಾಗಲಿ ..
ಗುರುವಾರ, ಆಗಸ್ಟ್ 10, 2017
ನ್ಯಾಯ ಸಿಗದು ಅಟ್ ಲೀಸ್ಟ್ ಸತ್ಯನಾದ್ರೂ ಹೊರಬರಲಿ
ಈಗಷ್ಟೇ ಅರಳುತ್ತಿದ ಮೊಗ್ಗು !ಆಶೆ ಆಕಾಂಕ್ಷೆಗಳು ಬೆಟ್ಟದಷ್ಟು ಕಟ್ಟಿಕೊಂಡಿದ್ದಳು !. ಈ ಪುಟ್ಟ ಬಾಲೆಯಲ್ಲಿ ಆದಾಗಲೇ ಅಗಾಧವಾದ ಪ್ರತಿಭೆ ತುಂಬಿ ತುಳುಕಾಡುತ್ತಿತ್ತು!, ರಾಷ್ಟ್ರಮಟ್ಟಕ್ಕೆ ಪಸರಿಸಿಯೂ ಆಗಿತ್ತು ..ಪ್ರೈಮರಿ ಶಾಲಾ ಜೀವನದಲ್ಲಿಯೇ ಬ್ಯಾಡ್ ಮಿಂಟನ್ ಎಂಬ ಅತೀ ಅಪುರೂಪದ ಕ್ರೀಡೆ ಈ ಗ್ರಾಮೀಣ ಪರಿಸರ ಬಡ ಕುಟುಂಬದಲ್ಲಿ ಜನ್ಮ ತಾಳಿದ ಕುಹರಿಯಲ್ಲಿ ಅಡಕವಾಗಿತ್ತು . ಸೂಕ್ತ ಪ್ರೋತ್ಸಾಹದ ಕೊರತೆಯ ನಡುವೆಯೂ ಸಹಾ ತನ್ನ ದಿಟ್ಟ ಛಲ ಕಠಿಣ ಪರಿಶ್ರಮದಿಂದ ಜಿಲ್ಲಾ ರಾಜ್ಯಾಮ ಟ್ಟದಲ್ಲಿ ತನ್ನ ಕೀರ್ತಿ ಪತಾಕೆಯನ್ನು ಬೆಳಗಿಸಿದಲ್ಲದೆ ರಾಷ್ಟ್ರ ಮಟ್ಟದಲ್ಲೂ ಶಟಲ್ ಕೊಕ್ ನ್ನು ಮೂಲೆ ಮೂಲೆಗೆ ಅಟ್ಟಿದ್ದ ಈ ಪುಟ್ಟ ಪೋರಿಯ ಸಾಧನೆ ಕಡಿಮೆಯೇನಲ್ಲ .ಮುಂದೊಂದು ದಿನ ಖಂಡಿತವಾಗಿಯೂ ಸೈನಾ ನೆಹವಾಲ್ ನ್ನು ಮೀರಿಸುತ್ತಿದಳೋ ಅಥವಾ ಅವರ ಸಾಲಿಗೆ ಏರುತ್ತಿದ್ದಳೋ ಏನೋ ?!ಆದರೆ ಹಾಗಾಗಲಿಲ್ಲ.. ವಿಧಿ ಬಿಡಲಿಲ್ಲ . ಅದೇನೋ ಕೋಪ ಅವಳ ಮೇಲಿತ್ತೋ ನಾ ಕಾಣೆ .. ಅವಳ ಎಲ್ಲಾ ಬವಿಷ್ಯದ ಬಯಕೆ ಗಳನ್ನು ಕಸಿದು ಕೊಂಡು ಬಿಟ್ಟ
ಆ ಹೆತ್ತ ತಾಯಿಯ ಗೋಳು ಹೇಳತೀರದು ..ಅವಳ ಕುಟುಂಬವಲ್ಲದೇ, ಅವಳ ಊರು ಅಷ್ಟೇಕೆ ,ಇಡೀ ರಾಜ್ಯವೇ ಮರುಗುತ್ತಿವೆ . ಪ್ರತಿಬಾವಂತ ವಿಧ್ಯಾರ್ಥಿನಿ ಯಾವ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾದಳು ?ಹಿಂದಿನ ದಿನವಷ್ಟೇ ತಾಯಿಯ ಜೊತೆಗೆ ಮಾತನಾಡಿದ್ದಾಳೆ .. ಆ ವೈರಲ್ ಆದ ಫೋನ್ ಸಂಭಾಷಣೆಯ ರೆಕಾರ್ಡಿಂಗ್ ಸಂದೇಶವನ್ನು ಒಮ್ಮೆ ಕೇಳಿದರೆ ಎಂತವರಿಗೂ ಸಹಾ ಅರ್ಥವಾಗುತ್ತದೆ . ಇಷ್ಟೆಲ್ಲಾ ಚೆನ್ನಾಗಿ ಮಾತಾಡಿದ ಈಕೆ ಮರುದಿನ ನೇಣಿಗೆ ಕೊರಳು ಒಡ್ಡುತ್ತಾಳೆ ಅಂದರೆ ? ನಿಜಕ್ಕೂ ಇಲ್ಲ ..! ಏನೂ ನಿಗೂಢತೆ ಗೋಚರಿಸುತ್ತದೆ .!. ಸಾವಿನ ರಹಸ್ಯದಲ್ಲಿ ಏನೋ ಅಡಗಿದೆ ..ಆತ್ಮಹತ್ಯೇ ಮಾಡಿಕೊಳ್ಳುವ ಮನಸ್ತಿತಿ ಅವಳದಲ್ಲ .. ಯಾವ ನಿರ್ದಿಷ್ಟವಾದ ಕಾರಣವೂ ಇಲ್ಲ ಎನ್ನುವ ಅವಳ ಕುಟುಂಬಿಕರು ಬಿಡಿ ಇಂದಿನ ದಿನದ ಆ ರೆಕಾರ್ಡಿಂಗ್ ಅನ್ನು ಒಮ್ಮೆ ಆಲಿಸಿದರೆ ಸಾಕು ಯೆಂತಾವರೂ ಸಹಾ ಅರ್ಥೈಸಿ ಕೊಳ್ಳಬಲ್ಲರು.ಆತ್ಮಹತ್ಯೆ ಮಾಡಿಕೊಂಡಳು ಅಂದರೆ ಅಲ್ಲಿ ಆ ದಿನ ಏನಾಗಿತ್ತು ? ಯಾವುದೋ ಬಲವಾದ ಕಾರಣ ಅವಳನ್ನು ಪ್ರಚೋದಿಸಿತ್ತೆ ?
ಇದು ಆತ್ಮಹತ್ಯೇ ಅಲ್ಲಾ ಇದು ಹತ್ಯೆ ಎಂದು ಹೆತ್ತ ಕರುಳು ಮೂಗಿನ ನೇರಕ್ಕೆ ಪ್ರಶ್ನೆ ಮಾಡುತ್ತಿದೆ ..ಒಕ್ಕೊಲೋರಿಂದ ಕರಾವಳಿ ದ್ವನಿಗಳು ಬೊಬ್ಬೆ ಹೊಡೆಯುತ್ತಿದೆ .ಸಾಮಾಜಿಕ ಜಾಲ ತಾಣಗಳು ಹಗಲು ರಾತ್ರಿ ಅರಚುತ್ತಿವೆ ..! ಇಲ್ಲ ಕಾನೂನು ಕೈಕಟ್ಟಿ ಕೂತಿದೆ .
,ಎಂದಿನಂತೆ ಕೆಲ ವಿದ್ಯಾ ಸಂಸ್ತೆಗಳು ಇದು ಆತ್ಮಹತ್ಯೆ ನಮಗೆ ಗೊತ್ತಿಲ್ಲ ಲವ್ ಕೇಸ್ ಇರಬಹುದು ಎಂದು ಯಾಕೆ ಏನು ಎಂಬ ಸತ್ತ ವಿದ್ಯಾರ್ಥಿ ಬಗ್ಗೆ ಕಿಂಚಿತ್ ಚಿಂತಿಸದೇ ಸೀದಾ ಚಿತೆಗೆ ದಾರಿ ತೋರಿಸುವಳ ರೆಡಿ ಮೆಡ್ ಉತ್ತರ ಖ೦ಡಿತವಾಗಿಯೂ ನಾವು ಅಪೇಕ್ಷಿಸುವುದು ಸರ್ವೇ ಸಾಮಾನ್ಯ ..ಸಮಾಜವೂ ಕೂಡಾ ಅಷ್ಟೇ ಇದು ಯಾವುದೊ ಲವ್ ಕೇಸ್ ಅಂತ ಹಿಂದೂ ಮುಂದೂ ಆಲೋಚಿಸದೇ ಡಿಕ್ಲೇರ್ ಮಾಡಿ ಬಿಡುತ್ತದೆ .ಆದರೆ ಇಲ್ಲಿ ಇವಳಿನ್ನೂ ಕಾಲೇಜು ಕನ್ಯಾ ಅಲ್ಲ .. ಜಸ್ಟ್ ಹತ್ತನೇ ತರಗತಿಗೆ ಸೇರಿ ಅದೂ ಹೊಸ ಸಂಸ್ಥೆ ಕೇವಲ ಒಂದು ತಿಂಗಳುಗಳು ಕಳೆದಿವೆ ಅಷ್ಟೇ .ಒಂದು ಕ್ರೀಡಾ ಪಟುವಾಗಿ ಡಬ್ಬಲ್ ಗುಂಡಿಗೆ ಯನ್ನು ಹೊಂದಿರುವವರು ಆತ್ಮಹತ್ಯೆಗೆ ಶರಣಾಗುವುದು ಕನಸ್ಸಿನ ಮಾತು ಎಂದು ಬಲ್ಲವರು ಹೇಳುತ್ತಾರೆ .ಜಲೈ೨೦ ರಂದು ಇಹಲೋಕ ತ್ಯಜಿಸಿದ್ದಾಳೆ .
ಘಟನೆ ಸಂಬವಿಸಿದ್ದು ಸಂಜೆಯ ಸಮಯದಲ್ಲಿ ಹಾಸ್ಟೆಲ್ ನಲ್ಲಿ ರೂಂಮೆಟ್ ಗಳು , ವಾರ್ಡನ್ ಸೆಕುರಿಟಿ ಗಾರ್ಡ್ಸ್ ಎಲ್ಲಾರೂ ಕೂಡಾ ಅಲ್ಲಿರುತ್ತಾರೆ . ಒಳ ರೂಮಿನಲ್ಲಿ ಆತ್ಮಹತ್ಯೆಗೆ ಪ್ರಯತ್ನ ಬಿಡಿ ಆಲೋಚಿಸುವುದಕ್ಕೂ ಕಷ್ಟಕರವಾಗುತ್ತದೆ . ಈ ಹಿಂದೆ ಇದೇ ಸಂಸ್ತೆ ಯಲ್ಲಿ ಕೆಲವು ಘಟನೆಗಳು ನಡೆದು ಹೋಗಿದೆ . ಆತ್ಮಹತ್ಯೆ ಎಂದೇ ದಾಖಲಾದರೂ ಅದಕ್ಕೆ ಪುಷ್ಟಿ ನೀಡುವಂತ ,ಪೂರಕವೆಂಬಂತೆ ಕೆಲವು ಕುರುಹುಗಳು ಸಿಕ್ಕಿದ್ದವು , ಮಹಡಿ ಮೇಲಿಂದ ಹಾರಿ ಪ್ರಾಣ ಕಳೆದು ಕೊಂಡಿದ್ದು .ಡೆತ್ ನೋಟ್ ಬರೆದು ಇಟ್ಟಿದ್ದು ಇತ್ಯಾದಿ ಇತ್ಯಾದಿ .ಇದರ ಒಳ ನೋಟ ಏನೇ ಇದ್ರೂ ಆತ್ಮಹತ್ಯೆ ಎಂಬುದನ್ನು ನಾವು ಅರಗಿಸಿಕೊಳ್ಳಲೆ ಬೇಕಿತ್ತು !!..ಆದರೆ ಇವತ್ತಿನದ್ದೂ ಪೂರ್ತಿ ದಿಪರೆಂಟ್ !..ಹಿಂದಿನ ದಿನ ಅದೆಷ್ಟು ಲವಲವಿಕೆ ಯಿಂದ ಮನೆಯವರೊಂದಿಗೆ ಮಾತಾಡಿದ್ದ ಕಾವ್ಯ ಮರುದಿನ ಅದು ಹೇಗೆ ನೇಣಿಗೆ ಕೊರಳು ಓಡ್ಡಿದ್ದಳು ? ಸಾಮಾಜೀಕ ಹಿತಾಸಕ್ತಿ ,ಕುಟುಂಬದವರ ರೋದನೆ ಬದಿಗಿರಿರಲಿ ಕೊಂಚ ಸೌಜನ್ಯತೆ ಗಾಗಿ ಆಥವಾ ತನ್ನ ಜವಾಬ್ದಾರಿಯುತ ಕರ್ತವ್ಯವೂ ಹೌದು ಎಂಬಂತೆ ತನಿಖೆ ಮಾಡಿಸಬಹುದಿತ್ತು ಸಂಸ್ತೆಯ ಸ್ಥಾಪಕ ಮೋಹನ್ ಆಳ್ವರವರು .ಅದು ಬದಿಗಿರಿ ತನಿಖೆ ನಡೆಸುತ್ತೇವೆ ಎಂಬ ಹಾರಿಕೆಯ ಮಾತನ್ನಾದರೂ ಹೇಳಬಹುದಿತ್ತು ..ಆದರೆ ಇಲ್ಲಿ ಎಲ್ಲವೂ ಉಲ್ಟಾ ಎಲ್ಲೋ ಎಸಿ ರೂಂ ನಲ್ಲಿ ಕೂತು “ಇಲ್ಲ ಇದು ಆತ್ಮಹತ್ಯೇ” ..ಎಂದು ಕಂಡೆಲೆಲ್ಲಾ ಹೇಳುತ್ತಿದ್ದ ಆಳ್ವರ ನಡವಳಿಕೆ ಎಷ್ಟು ಸರಿ ? ಅಲ್ಲಿ ಏನಾಗಿದೆ ?ಯಾಕಾಗಿದೆ ?ಎಂದು ಮುಂದಿನ ಸಂಸ್ಥೆ ಭವಿಷ್ಯಕ್ಕಾಗಿ ಹಾಗೂ ವ್ಯಾಸಂಗ ಮಾಡುತ್ತಿರುವ ೨೬೦೦೦ ವಿಧ್ಯಾರ್ಥಿಗಳ ಪೋಷಕರ ದೈರ್ಯಕ್ಕಾಗಿ ತಾವೇ ಈ ಘಟನೆಯ ವಿಚಾರದ ಬಗೆಗೆ ಮುಂದೆ ನಿಂತು ಖುದ್ದು ಬಗೆಹರಿಸಬಹುದಿತ್ತು. ಇದು ಆತ್ಮಹತ್ಯೆ ಎಂದು ಘಂಟಾ ಘೋಷವಾಗಿ ಹೇಳುವ ಬದಲು ,ಏನೂ ಅರಿಯದೇ ದುಖದಲ್ಲಿರುವ ಕಾವ್ಯಳ ತಂದೆ –ತಾಯಿಗೆ ದೈರ್ಯದ ಮಾತನ್ನು ಹೇಳಿ ತನಿಖೆಗೆ ಸಹಕರಿಸಿದ್ದರೆ ಇಂದು ಸಮಾಜದಲ್ಲಿ ಅವರೊಬ್ಬ ಹಿರೋ ಆಗ್ತಾ ಇದ್ದರು .! ಪಬ್ಲಿಕ್ ನಿಮ್ಮ ಮುಂದೆ ಶರಣಾಗುತ್ತಿತ್ತು “ನಾವೇಕೆ ಅವಳನ್ನು ಮರ್ಡರ್ ಮಾಡಬೇಕು ನಮಗೆ ಏನು ಲಾಭ ?” ಎಂದು ತಾವು ಹೇಳೋದು ಸರಿನೇ ಆದರೂ ಕೆಲಮೊಮ್ಮೆ ಮರ್ಡರ್ ತಮ್ಮಿಂದಲೇ ಆಗ್ಬೇಕು ಅಂತ ಇಲ್ಲಾ ಎಲ್ಲೋ ಅಚಾನಕ್ಕಾಗಿ ತಮಗೆ ಗೊತ್ತಿಲ್ಲದಂತೆಯೂ ಆಗಬಹುದಲ್ಲವೇ ? ಅಷ್ಟಕ್ಕೂ ತಮ್ಮ ಹತ್ತಿರ ಏನು ಸಾಕ್ಷಿ ಇದೇ ಇದು ಸುಸೈಡ್ ಯೇ ಅನ್ನಲಿಕ್ಕೆ ? ನಿಮ್ಮ ವೈರಿಗಳು ಯಾಕೆ ಹಾಸ್ಟೆಲ್ ಗೆ ನುಗ್ಗಿ ಕೊಲೆ ಮಾಡಿ ಅವಳನ್ನು ನೇಣಿಗೆ ಏರಿಸಿರಬಾರದು ನೀವೇ ಹೇಳಿದಂತೆ ಬಾಗಿಲು ಲಾಕ್ ಆಗಿತ್ತು ನಮ್ಮ ಹುಡುಗರು ಮೇಲೆ ಹಾರಿ ಕೆಳಗೆ ಇಳಿದು ಬಾಗಿಲನ್ನು ಓಪನ್ ಮಾಡಿದ್ದು ಅಂಥಾ! ಅದೇ ತರಹ ಕಾವ್ಯಳನ್ನು ಕೊಲೆ ಮಾಡಿ ಮಾಡಿ ತಪ್ಪಿತಸ್ತರು ಹಾಗೆ ಪರಾರಿಯಾಗಿರ ಬಾರದೇಕೆ ? ಒಟ್ಟಾರೆ ತಾವು ಮಾಡಿದ್ದೆಲ್ಲಾ ಸರಿ ಹೇಳಿದೆಲ್ಲವನ್ನೂ ಕೆಳುವುದಕ್ಕೆ ಪ್ರಜ್ಞಾವಂತರು ತಯಾರಿಲ್ಲ .
ಆತ್ಮಹತ್ಯೆ ಹೇಗೆ ಆಯಿತು ? ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದೆಯಾದರೇ ಇದೇ ಕಾರಣವಾಗಿರಬಹುದೇ ? ಏನು ಎತ್ತ ಎಂದು ಅವಳ ಉತ್ತರ ಪತ್ರಿಕೆಯನ್ನು ಗಮನಿಸಿ ಪ್ರೋಗ್ರೆಸ್ ಮುಂದೆ ಇಡುಬಹುದಿತ್ತು ಆತ್ಮಾಹತ್ಯೆಗೆ ದೈಹಿಕ ಶಿಕ್ಷಕನೇ ಕಾರಣನಾಗಿರಬಹುದೇ ? ಎರಡರಲ್ಲಿ ಒಂದಂತೂ ಖಂಡಿತವಾಗಿಯೂ ಇದ್ದೆ ಇರುತ್ತದೆ ಇದನೆಲ್ಲವನ್ನೂ ಪರಿಶೀಲಿಸಿ ಸಾವಿನ ಅಂಶವನ್ನು ಪತ್ತೆಹಚ್ಚಿ ಗೊಂದಲಗಳಿಗೆ ತೆರೆ ಎಳೆಯಬೇಕಾದವರು ಇನ್ನಷ್ಟು ಗೋಜಲು ಗೋಜಲುಗಳನ್ನಾಗಿ ಮಾಡುತ್ತಿರುವವರ ಜವಾಬ್ದಾರಿನಾ ಇದು ? ಕ್ರೀಡಾ ಕೋಟದಲ್ಲಿ ತಮ್ಮ ಕಾಲೇಜಿಗೆ ತಾವುಗಳೇ ಒತ್ತಾಯ ಪೂರ್ವಕವಾಗಿ ಬರ ಹೇಳೀದ್ದು ,ಫ್ರೀಯಾಗಿ ಶಿಕ್ಷಣ ನೀಡುತ್ತೇವೆ ಎಂದು ಬಡಾಯಿ ಕೊಚ್ಚಿ ಕೊಳ್ಳುವುದನ್ನು ಬದಿಗಿಡಿ ..ಬಡವರ ಮನೆಯ ವಿಧ್ಯಾರ್ಥಿಗಳು ಎಂಬ ನಿರ್ಲಜ್ಜ ನಿರ್ಲಕ್ಷ ತನವೇಕೆ ?ಕಷ್ಟ ಪಟ್ಟು ಮಕ್ಕಳನ್ನು ಎಲ್ಲಿಂದಲೂ ಅವರ ಭವ್ಯ ಬವಿಷ್ಯಕ್ಕಾಗಿ ದೂರದ ವಿದ್ಯಾ ಸಂಸ್ಥೆಗೆ ಸೇರಿಸುತ್ತಾರೆ .. ಸೇರಿಸಿ ಕೊಳ್ಳುವವರ ಜವವ್ದಾರಿ ಅಷ್ಟೇ ಇರುತ್ತದೆ ತಮ್ಮ ಮಕ್ಕಳೆಂದೇ ಭಾವಿಸಬೇಕು ,ನಿಮ್ಮ ಮೇಲೆ ಜವಬ್ದಾರಿಯನ್ನು ಇರಿಸಿ ಕೊಂಡು ಇಷ್ಟು ದೂರ ಕಳಿಸಿದ್ದಾರೆ ಅವರನ್ನು ಉತ್ತಮ ರೀತಿಯಲ್ಲಿ ಮುತುವರ್ಜಿ ವಹಿಸಬೆಂಬ ಮನೋಬಾವನೆ ಬೆಳೆಯಬೇಕು .ಅದೇ ದಿಕ್ಕಿನಲ್ಲಿ ಕೊಂಚ ಗಮನ ಹರಿಸಬೇಕು ಅಲ್ಲವೇ ?. ತನ್ನ ಸಂಸ್ಥೆಗೆ ಹಾಗೂ ನನ್ನ ಹೆಸರಿಗೆ ಮಸಿ ಬಳಿಯುವಂತ ಕಾರ್ಯವಾಗುತ್ತಿದೆ ಎಂದೆನ್ನುವ ಆಳ್ವ ಅವರು ಒಮ್ಮೆ ತಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಲಿ ಇಲ್ಲಿ ಯಾರ ಮಾನ ಹರಾಜು ಆಗುತ್ತಿದ್ದೆ ಎಂದು ?” ಆತ್ಮತ್ಯೆಗೆ ಮಾಡಿಕೊಂಡಳು, ಇವರೆಲ್ಲ ಸ್ಪೋರ್ಟ್ಸ್ ಗೆ ಅನ್ಫಿಟ್” ಎಂದು ಕಂಡ- ಕಂಡಲ್ಲಿ ಉಸುರುತ್ತಿರುವ ಆಳ್ವರೇ ಇಲ್ಲಿ ಯಾರ ಮಾರ್ಯಾದೆ ಬೀದಿ ಪಾಲಾಗುತ್ತಿದೆ . ಸತ್ಯ ಗೊತ್ತಿಲ್ಲದ ನೀವು ಎಷ್ಟು ಸಹಜವಾಗಿ ಅವಳ ಮೇಲೆ ಗೂಬೆ ಕೂರುಸುತ್ತೀರಿ ..ರಾಷ್ಟ್ರ ಮಟ್ಟದಲ್ಲಿ ಆದಾಗಲೇ ಕೀರ್ತಿಯನ್ನು ಬೆಳಗಿಸಿದ ಕಾವ್ಯಳ ಎದುರು ನಿಮ್ಮದೇನು ಮಹಾ ?
ಕಾವ್ಯ ಮುಂಜಾನೆ ಪ್ರಾಕ್ಟಿಸ್ ಮಾಡಿದ್ದು ಕಾಲೇಜಿಗೆ ಹೋಗಿದ್ದು ಬಂದಿದ್ದು ಎಲ್ಲಾ ರೆಕಾರ್ಡ್ ಆದ ಸಿಸಿಟಿವಿಯೆ ಪೂಟೇಜ್ ಗಳು ಬಿಡುಗಡೆ ಗೊಂಡಿದೆ ಅದೇ ಅವಘಡ ಸಂಬವಿಸಿದ್ದರ ನೇಣಿನಿಂದ ಕುಣಿಕೆ ಸಡಿಲಿಸಿದ್ದೂ ,ನಾಲ್ಕನೇ ಪ್ಲ್ಲೋರಿಂದ ಆಸ್ಪತ್ರೆ ದಾಖಲಿಸಿದ್ದರ ಪೂಟೇಜ್ ಯಾಕೆ ಬಿಡುಗಡೆ ಗೊಂಡಿಲ್ಲ ? ಮೊದಲು ನೋಡಿದ ಅವಳ ಕ್ಲಾಸ್ ಮೇಟ್ ಗಳನ್ನು ಯಾಕೆ ಮಾಧ್ಯಮಗಳ ಮುಂದೆ ಕೂರಿಸಿಲ್ಲ . ? ಇನ್ನು ಬೆಳಿಗ್ಗೆ 4.15 ರಿಂದ ಪ್ರಾಕ್ಟಿಸ್ ಇರುತ್ತದೆ ಎಂದ ಕಾವ್ಯಾನ್ನು ಅಷ್ಟು ಬೇಗ ಕರೆದಿದ್ದರ ಉದ್ದೇಶ ಏನು ? ಇದಕ್ಕೆಲ್ಲಾ ಸೂತ್ರದಾರ ದೈಹಿಕ ಶಿಕ್ಷಕ ಇರಬಹುದೇ ? ಇಷ್ಟೆಲ್ಲಾ ಸಂದೇಹಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದ್ದರೂ ಯಾಕೆ ಇನ್ನೂ ದೈಹಿಕ ಶಿಕ್ಷಕನನ್ನು ಮಂಪರು ಪರೀಕ್ಷೆಗೆ ಒಳ ಪಡಿಸಲಿಲ್ಲ , ? ಎಲ್ಲಕ್ಕಿಂತ ಮೊದಲು ಈ ಕಾರ್ಯ ಆಗಬೇಕಿದೆ ಆಗ ನಿಖರವಾದ ಸತ್ಯ ಸಂಗತಿ ಹೊರಗೆ ಬೀಳ ಬಹುದೇನೋ ? ನ್ಯಾಯ ಸಿಗಬಹುದೇನೋ ?ಆದರೆ ಸತ್ತು ಸ್ವರ್ಗ ಸೇರಿದ ಕಾವ್ಯ ಇನ್ನೆಂದೂ ಬರಲಾರಳು !ಆ ಪುಟ್ಟ ಕೈಗಳಲ್ಲಿ ಬ್ಯಾಡ್ಮಿಂಟನ್ ನ್ನು ಆಸ್ಪಾದಿಸುವುದು ಅಸಾದ್ಯ ..ಆದರೆ ಈ ಹೋರಾಟಗಳು ಮುಂದೊಂದು ಕಾವ್ಯಳನ್ನು ಉಳಿಸಿ ಕೊಳ್ಳಲು ಮಾದರಿ ಯಾಗಬುಹುದು .
ಬುದ್ದಿವಂತರ ಜಿಲ್ಲೆ ಎಂದು ಕರೆಯಿಸಿ ಕೊಂಡ ಈ ನಾಡಿನಲ್ಲಿ ಅದೆಷ್ಟೋ ವಿಧ್ಯಾರ್ಥಿನಿಯರು ಹೇಳ ಹೆಸರಿಲ್ಲದಂತೆ ನಿಗೂಢವಾಗಿ ಸಾವಿನ ಕದ ತಟ್ಟಿದ್ದಾರೆ .. ವಂಶಿ ,ಸೌಜನ್ಯ ,ರತ್ನ ,ಅಕ್ಷತಾ ಇವರೆಲ್ಲಾ ಸಾವಿನ ಹಿಂದೆ ಇದೇ ರೀತಿಯ ಅನುಮಾನಗಳಿದ್ದವು ..ಪ್ರತಿಭಟನೆಗಳು ನಡೆದವು ,ಸಿಐಡಿ ,ಸಿಬಿಐ ನಂತಹ ದೊಡ್ಡ ದೊಡ್ಡ ಪೋಲಿಸ್ ಇಲಾಖೆಯ ಫೈಲ್ ಸೇರಿದ್ದವು. ಆದ್ರೆ ನ್ಯಾಯ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ . ನ್ಯಾಯ ದೇವೆತೆ ಕಣ್ಣು ತೆರೆಯಲೇ ಇಲ್ಲ .....!ಇದಕ್ಕೆ ಇನ್ನೊಂದು ಸೇರ್ಪಡೆ ಕಾವ್ಯಾ ..! ಈ ಘಟನೆಗಳು ನಿತ್ಯ ನಿರಂತರವೇ ? ಇದಕ್ಕೆಲ್ಲಾ ಪುಲ್ ಸ್ಟಾಪ್ ಇಡುವವರು ಯಾರು ? ಎಲ್ಲವೂ ಉತ್ತರ ಇಲ್ಲದ ಯಕ್ಷ ಪ್ರಶ್ನೆ !!!
ಮಂಗಳವಾರ, ಜುಲೈ 18, 2017
ಸಾಮರಸ್ಯವೇ ತುಂಬಿರುವ ಸಮಾಜದಲ್ಲಿ ಸಮನ್ವಯತೆ ಎಂಬುದು ಕೇವಲ ಮರೀಚಿಕೆ ಅಷ್ಟೇ !
ಇನ್ನೊಮ್ಮೆ ಉಡುಪಿ ಶ್ರೀ ಕ್ರಷ್ಣ ಮಠ ಜಗತ್ತಿನಾದ್ಯಂತ ಸುದ್ದಿಯಾಗುತ್ತಿದೆ . ಇಂದು ಹಾದಿ ಬೀದಿಯ ಸುದ್ದಿಗೆ ಗ್ರಾಸವಾಗಿದ್ದರ ವಿಚಾರ ಯಾವುದು ಎಂದರೆ ಶ್ರೀ ಕ್ರಷ್ಣ ಮಠದದ ಆವರಣದಲ್ಲಿ ಮುಸಲ್ಮಾರಿಗೆ ರಂಜಾನ್ ಹಬ್ಬದ ಪ್ರಯುಕ್ತ ಪೇಜಾವರ ಶ್ರೀಗಳು ಇಫ್ತಾರ್ ಕೂಟವನ್ನು ಆಯೋಜಿಸಿದ್ದು , ಹಾಗೂ ನಮಾಜ್ ಗೆ ಅವಕಾಶವನ್ನು ಮಾಡಿ ಕೊಟ್ಟಿದ್ದರ ಸಲುವಾಗಿ . ತರುವಾಯ ರಾಜ್ಯಾದ್ಯಂತ ವಾದ ವಿವಾದಗಳ ಭಿನ್ನಾಭಿಪ್ರಾಯ ವ್ಯಕ್ತವಾಗುತ್ತಿದೆ . ಇದೊಂದು ಸರ್ವಧರ್ಮ ಸಮನ್ವಯತೆ ಸಂಪಾದನೆಗೆ ಒಳ್ಳೆಯ ಕೊಂಡಿಯಾಗಿದೆ ಉತ್ತಮ ಕಾರ್ಯವನ್ನು ಸ್ವಾಮೀಜಿಗಳು ಕೈ ಗೊಂಡದ್ದು ಶ್ಲಾಘನೀಯ ಎಂದು ಪೇಜಾವರ ಶ್ರೀಗಳ ಬೆಂಬಲಕ್ಕೆ ಒಂದಷ್ಟು ಜನ ನಿಂತರೆ ಇನ್ನೊಂದಿಷ್ಟು ಜನ ಆಕ್ರೋಶದ ಅಭಿವ್ಯಕ್ತಿಯನ್ನೂ ಹೊರಹಾಕಿದ್ದಾರೆ . ಶ್ರೀ ರಾಮ ಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್ ಅಂತೂ ಈ ಘಟನೆಯ ಬಗ್ಗೆ ತೀವ್ರವಾದ ಖಂಡನೆ ಯನ್ನು ವ್ಯಕ್ತಪಡಿಸದ್ದಲ್ಲದೇ ,ರಾಜ್ಯಾದ್ಯಾ೦ತ ಪ್ರತಿಭಟನೆಯನ್ನೂ ನಡೆಸಿ ಕೊಟ್ಟರು . ಒಟ್ಟಾರೆ ನಾವು ಇಲ್ಲಿ ತಪ್ಪು ಒಪ್ಪುಗಳ ಪಟ್ಟಿ ಸಂಗ್ರಹಿಸುವುದಕ್ಕಿಂತ ಮೊದಲು ವಿಚಾರವನ್ನು ಮನಗಾಣುವುದಾದರೆ , ಶ್ರೀಮಠಕ್ಕೆ ಅಬ್ದುಲ್ ಹಾಜಿ ಯವರು ಪೂಜಾ ಕಾರ್ಯದ ದೀಪಕ್ಕೆ ಬೇಕಾಗುವ ಎಣ್ಣೆಯನ್ನು ಕೊಟ್ಟಿದ್ದಾರೆ .., ಹಾಗೂ ಮುಸ್ಲಿಂ ಭಾಂದವರು ಮಠದಲ್ಲಿ ಎರಡು ವರ್ಷಕ್ಕೊಮ್ಮೆ ನೆಡೆಯುವ ಜಗತ್ಪ್ರಸಿದ್ದ ಪರ್ಯಾಯ ಉತ್ಸವದಲ್ಲಿ ಹೊರೆಕಾಣಿಕೆ ಹಾಗೂ ನಿರಂತರ ಸಂಪರ್ಕವನ್ನು ಇಟ್ಟುಕೊಂಡು,ಸಹಾಯ ಹಸ್ತವನ್ನು ನೀಡುತ್ತಾ ಬಂದವರು . ಅವರ ಋಣ ತೀರಿಸಲ್ಲಿಕ್ಕೂ ಅಥವಾ ಅವರ ಬಲವಂತದ ಆಮಂತ್ರಣಕ್ಕೆ ಅತ್ತ ಧಾವಿಸಲಾಗದ ಸ್ಥಿತಿಗೂ ಏನೋ ಹೀಗೊಂದು ಕಾರ್ಯಕ್ರಮವನ್ನು ಆಯೋಸಿದ್ದರು ., ಮೂಲಗಳ ಪ್ರಕಾರ ಒಡನಾಟ , ಆತ್ಮೀಯತೆಯನ್ನು ಇಟ್ಟುಕೊಂಡ ಕೆಲವು ಮಸ್ಲಿಂ ಭಾ೦ದವರು ರಂಜಾನ್ ಹಬ್ಬದ ಆ ದಿನ ಸ್ವಾಮೀಜಿಗಳಿಗೆ ಆಹ್ವಾನಿಸಿದ್ದಾರಂತೆ “ನಿಮ್ಮ ಹಬ್ಬಕ್ಕೆ ಆಶೀರ್ವಾದ ನೀಡಲು ನಾನು ನೀವಿದ್ದಲ್ಲಿಗೆ ಬರಲು ತತ್ ಸಮಯದಲ್ಲಿ ಸಾಧ್ಯವಾಗುವುದಿಲ್ಲ ದಯಮಾಡಿ ಇಲ್ಲಿಗೆ ಬನ್ನಿ ಎಂದಾಲೋಚಿಸಿ ಮಠಕ್ಕೆ ಬರಹೇಳಿದ್ದರ೦ತೆ .. ಕೇವಲ ಆಶಿರ್ವಾದ ಹಾಗೂ ಹಬ್ಬಕ್ಕೆ ಶುಭ ಕೋರುವುದರ ಜೊತೆಗೆ ಇಲ್ಲಿಯ ವರೆಗಾಗಿ ಬಂದವರಿಗಾಗಿ ಮಠದಲ್ಲಿ ತಯಾರಿಸಲ್ಪಟ್ಟ ಲಘು ಉಪಹಾರವನ್ನು ನೀಡಲು ಮುಂದಾದಾಗ , ನಾವು ಯಾವುದೇ ಉಪಾಹಾರ ಸೇವಿಸುವ ಮೊದಲು ಉಪವಾಸ ಅಂತ್ಯದ ನಂತರ ಧರ್ಮದ ನೀತಿಯಂತೆ ನಮಾಜ್ (ಪ್ರಾರ್ಥನೆ ) ಮಾಡಿ ನಂತರ ಸೇವಿಸುತ್ತೇವೆ ಎಂಬ ಅವರುಗಳ ಇಚ್ಛೆಯ ಮೇರೇಗೆ ಮಠದ ಆವರಣದಲ್ಲಿ ಸಾರ್ವಜನಿಕರು ಬಂದು ತೆರಳುವ ಸ್ಥಳದಲ್ಲಿ ಸಂಪ್ರದಾಯ ಪದ್ದತಿಯಂತೆ ನಮಾಜ್ ಸಲ್ಲಿಸಿ ಉಪಹಾರವನ್ನು ಸೇವಿಸುತ್ತಾರೆ.ಇದು ಮುಂದೆ ಕ್ಷಣ ಮಾತ್ರದಲ್ಲಿ ರೆಕ್ಕೆ ಪುಕ್ಕ ಕಟ್ಟಿಕೊಂಡು ಬಹಿರಂಗ ವಾಗುತ್ತದೆ ಶ್ರೀ ಕೃಷ್ಣಮಠದಲ್ಲಿ ಮುಸಲ್ಮಾನ ರಿಗೆ ಇಪ್ತಾರ್ ಕೂಟವನ್ನು ಸ್ವಾಮೀಜಿ ಯವರು ನಡೆಸಿ ಕೊಟ್ಟಿದ್ದಾರೆ ಎಂದು ಮಾಧ್ಯಮಗಳು ಜಗತ್ ಜಾಹೀರಾತು ಮಾಡಿ ಬಿಡುತ್ತವೆ.. ನಂತರ ನಡೆಯಿತು ವಾದ ವಿವಾದಗಳ ಆರೋಪಗಳ ಸುರಿಮಳೆ !!
ಶ್ರೀಪಾದಂಗಳಿಗೆ ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧಯಿಸುವ ಯೋಗ್ಯತೆಯ ಆಳ್ತನ ಹಿರಿಯ ಜೀವ ಅವರಿಗೆ ಗೊತ್ತಿರುವಂತದ್ದೇ .. ಅವರಿಗೆ ಯಾರು ಯಾವುದೇ ತರನಾದ ಉಪದೇಶವನ್ನು ಮಾಡುವ ಹಾಗೂ ಅವರು ಮಾಡಿದ್ದೆ ಸರಿ ಅಲ್ಲ ಎಂದು ವಿಮರ್ಶಿಸುವ ಅವರ ವಿರುದ್ಧ ಪ್ರತಿಭಟನೆಗೆ ಇಳಿಯುವ ಹಕ್ಕು ಯಾರಿಗೂ ಇಲ್ಲ ಅದು ಸಮಂಜಸವೂ ಕೂಡಾ ಅಲ್ಲ . ಹಾಗಂತ ಇದರಲ್ಲಿ ನೋವಿನ ವಿಚಾರವೂ ಇಲ್ಲದಂತಿಲ್ಲ ಈ ಘಟನೆ ಯಿಂದಾಗಿ ಎರಡೂ ಸಮುದಾಯಗಳೂ ಸಹಾ ರೊಚ್ಚಿಗೆದ್ದು ತಳ್ಳಿ ಹಾಕುವಂತಿಲ್ಲ . ಮಠದಲ್ಲಿ ನಮಾಜ್ ಮಾಡಿದ್ದೂ ಶ್ರೀ ಪಾದರಿಂದ ಪ್ರಸಾದ ವನ್ನು ಸ್ವೀಕರಿಸಿದ್ದೂ ಇಸ್ಲಾಂ ಧರ್ಮ ಸಹಿಸುವುದಿಲ್ಲ ಇದು ಖಂಡನೀಯ ಎಂದು ಕೇವಲು ಮುಸ್ಲಿಮ್ ಸಂಘಟನೆಗಳ ಸಾಮಾಜಿಕ ತಾಣಗಳಲ್ಲಿ ಹೇಳಿ ಕೊಂಡಿವೆ . ಹಿಂದೂ ಧರ್ಮೀಯರೂ ಸಹಾ ಆಕ್ಷೇಪವನ್ನು ಹೊರಹಾಕಿದ್ದಾರೆ ಗೋವು ಭಕ್ಷಕರಿಗೆ ಆವರಣದೊಳಗೆ ಗೋ ಪಾಲಕ ಶ್ರೀ ಕೃಷ್ಣ ನ ಸಮುಖದಲ್ಲಿ ನಮಾಜ್ ಗೆ ಅವಕಾಶ ಮಾಡಿ ಕೊಟ್ಟಿದ್ದು ಸರಿ ಆಲ್ಲ ,ಮಸೀದಿಗಳಲ್ಲಿ ಹಿಂದೂ ಧರ್ಮದ ಆಚರಣೆಗೆ ಅವಕಾಶವನ್ನು ಅವರು ನೀಡುತ್ತಾರೆಯೇ ? ಎಂಬ ಪ್ರಶ್ನೆಗಳಿಗಳನ್ನೂ ಇಡುತ್ತಾರೆ ,ಒಟ್ಟಾರೆ ಸ್ವಾಮೀಜಿಗಳು ಋಣ ಸಂದಾಯಕ್ಕೂ ಅವರ ಮೇಲಿನ ಬಾ೦ದವ್ಯಕ್ಕೋ, , ಅಥವಾ ಕೋಮು ಸಾಮರಸ್ಯವನ್ನು ಹೋಗಲಾಡಿಸಲ್ಲಿಕ್ಕೂ ಹೀಗೊಂದು ಕಾರ್ಯಕ್ರವನ್ನು ಆಯೋಜಿಸಿದ್ದೂ ಒಂದೊಳ್ಳೆ ಭವಿಶ್ಯದ ಬೆಳೆವಣಿಗೆಗೆ , ಸಮಾಜದಲ್ಲಿ ಸರ್ವ ಧರ್ಮ ಸಮನ್ವಯತೆ ಗೆ ಸಹಕಾರವನ್ನು ನೀಡುತ್ತದೆ ಎಂದು ಯೋಚಿಸಿದರೆ ಇದರಿಂದ ಸಾಮರಸ್ಯವೇ ಉ೦ಟಾಗುತ್ತದೆ ವಿನಹಾ : ಸಮನ್ವಯತೆ ಕಾಣದು . ಶಾಂತಿಗೂಡಲ್ಲಿ ಆಶಾ೦ತಿಯೇ ಮೂಡುತ್ತದೆ ಹೊರತು ಎಣಿಸಿದ ಫಲಿತಾಂಶ ಮಾತ್ರ ದೊರಕುವುದು ಕಷ್ಟ ಸಾದ್ಯ ..ಏನೇ ಇರಲಿ
ಇದ್ದದ್ದು ಇದ್ದ ಹಾಗೆ ಇದ್ದರಷ್ಟೇ ಚೆಂದ ಎನ್ನಬಹುದೇನೋ ?!

ಮಂಗಳವಾರ, ಜೂನ್ 20, 2017
‘ಪೋಲಿಸ್ ಪೇದೆಯಾಗಿ ತನ್ನ ಮಡದಿಯನ್ನು ರಕ್ಷಣೆ ಮಾಡಿಕೊಳ್ಳುವಲ್ಲಿ ಸಾಧ್ಯವಾಗಿಲ್ಲ ಅಂದಾದರೆ ಉಳಿದವರ ಗತಿ ಏನು?
ಒಬ್ಬ ಪೋಲಿಸ್ ಕಾನ್ಸ್ಟೇಬಲ್ ರ ಅಸಹಾಯಕತೆ,ವ್ಯಥೇಯ ನುಡಿ.
“ನನ್ನ ಹೆಂಡತಿಯ ರಕ್ಷಣೆಯನ್ನು ನನ್ನ ಕಣ್ಣ ಮುಂದೇನೆ ನಾನೊಬ್ಬ ಪೋಲಿಸ್ ಪೇದೆಯಾಗಿ ಪೋಲಿಸ್ ಪೇದೆ ಮಾಡಿಕೊಳ್ಳುವಲ್ಲಿ ಸಾದ್ಯವಾಗಲ್ಲಿಲ್ಲವೆಂದಾರೆ ಇನ್ನೂ ದೇಶ ರಕ್ಷಣೆಗೆ ಪಣ ತೊಡಲು ನನ್ನಿಂದ ಅಥವಾ ನನ್ನಂತಾ ಆರಕ್ಷಕ ಪಡೆಗೆ ಸಾದ್ಯವಾಗ ಬಲ್ಲದೇ ? ಇನ್ನು ಸಾಮಾನ್ಯ ನಾಗರಿಕರ ಕತೆ ಎಂತದ್ದು ?”ಎಂಬೀ ಅಸಹಾಯಕತೆ ಮಾತು ತನ್ನ ಹಿರಿಯ ಪೋಲಿಸ್ ಅಧಿಕಾರಿ ಜೊತೆ ಪೋನ್ ನಲ್ಲಿ ನಡೆಸಿದ ವೈರಲ್ ಸಂದೇಶವನ್ನು ಒಮ್ಮೆ ಆಲಿಸಿದರೆ ಎಂತಹ ಕಚಡಾ ರಾಜಕೀಯ ವ್ಯವಸ್ತೆ ಹಳ್ಳಿ- ಹಳ್ಳಿ ಗಲ್ಲಿ- ಗಲ್ಲಿ ಗಳಲ್ಲಿ ನಮ್ಮನ್ನು ಆಳುತ್ತಿದೆ ಎಂಬುದು ದಿಟವಾಗುತ್ತದೆ .
ಹೌದು ನಾ ಹೇಳ ಹೊರಟಿರುವ ವಿಷಯ ಬೇರೆಯಲ್ಲಿಯದ್ದೂ ಅಲ್ಲ , ಮೊನ್ನೆ ಮೊನ್ನೆ ನಮ್ಮ ಪರಿಸರದ ಘಟನೆ ಬಗ್ಗೆ ..ಉಡುಪಿ ಯಿಂದ ಅನತಿ ದೂರದಲ್ಲಿರುವ ಮಲ್ಪೆ ಪೋಲಿಸ್ ಥಾಣಾ ವ್ಯಾಪ್ತಿಗೆ ಒಳಪಡುವ ಒಂದು ಪ್ರದೇಶದಲ್ಲಿ ನಡೆದ ಘಟನೆ ... ಒಂತರ ವಿಚಿತ್ರ ,ಸಚಿತ್ರ ಥೇಟ್ ಸಿನಿಮಾ ಶೈಲಿ ...!!
ಮಲ್ಪೆಯ ಪೋಲಿಸ್ ಕಾನ್ಷ್ಟೇಬಲ್ ಒಬ್ಬರು ತಮ್ಮ ಮಡದಿಯ ಜೊತೆಗೆ ಬೈಕ್ ನಲ್ಲಿ ಆಸ್ಪತ್ರೆಗೆ ತೆರಳಿ ಮಡದಿಯ ಆರೋಗ್ಯ ಪರೀಕ್ಷಾ ಕಾರ್ಯ ಮುಗಿದ ಬಳಿಕ ಅಲ್ಲಿಂದ ತುಸು ದೂರದಲ್ಲಿರುವ ಅಂಗಡಿ ಒಂದರಲ್ಲಿ ತಮಗೆ ಅಗತ್ಯವಿರುವ ಸಾಮಾಗ್ರಿಯನ್ನು ಖರಿದಿಸುವುದರಲ್ಲಿ ಆ ಪೋಲಿಸ್ ಪೇದೆ ಮಗ್ನರಾಗಿರುತ್ತಾರೆ . ಅಲ್ಲೇ ಪಕ್ಕದಲ್ಲಿ ನಿಂತಿದ್ದ ಆತನ ಪತ್ನಿಗೆ ಒಂದಿಬ್ಬರು ಕಂಠ ಪೂರ್ತಿ ಕುಡಿದು ಕಿರುಕುಳ ಕೊಡಲು ಪ್ರಾರಂಬಿಸುತ್ತಾರೆ . ಸಾಯ್ಲಿ ಎಂದು ಹಿಡಿಶಾಪ ಹಾಕಿ ಸುಮ್ಮನಾದ ಆಕೆ ಗಂಡನಲ್ಲಿ ಇದ್ಯಾವುದನ್ನೂ ಹೇಳದೇ ಇಬ್ಬರು ಬೈಕ್ ಏರಿ ಹೊರಡುತ್ತಾರೆ . ತಮ್ಮ ಮನಸ್ಸಿನ ವಾಂಚೆ ಯನ್ನು ಬಿಡದ ಆ ಕುಡುಕ ಕಾಮುಕರು , ಇವರ ಬೈಕ್ ನನ್ನು ಪೋಲೊ ಮಾಡುತ್ತಾರೆ . ಬೈಕ್ ನ್ನು ಹತ್ತಿರ-ಹತ್ತಿರ ತಂದು ಮತ್ತಷ್ಟು ಕಿರುಕುಳ ಕೊಡುವುದಕ್ಕೆ ಅಣಿ ಯಾಗುತ್ತಾರೆ , ಬೈಕ್ ನ ಹಿಂಬದಿ ಸವಾರ ಒಂದು ಕಲ್ಲನ್ನು ಎತ್ತಿ ಪೋಲಿಸ್ ಪೇದೆಯ ಹೆಂಡತಿ ಮೇಲೆ ಎಸೆಯುತ್ತಾನೋ ಆಗ ಕೋಪ ಗೊಂಡ ಮಹಿಳೆ ತನ್ನ ಪತಿಯಲ್ಲಿ ಎಲ್ಲಾವನ್ನೂ ಉರ್ಸುರುತ್ತಾಳೆ ,ಈ ಸಂದರ್ಭದಲ್ಲಿ ಯಾರೇ ಆದರೂ ಆ ಕೆಲಸವನ್ನು ಮಾಡಿಯೇ ತೀರುತ್ತಾರೆ ಕೋಪ ನೆತ್ತಿಗೆ ಏರದೆ ಇರದು .ಅಂತೆಯೇ ತಡಮಾಡದ ಪೋಲಿಸ್ ಪೇದೆ ಬೈಕ್ ಸೈಡ್ ಗೆ ಸರಿಸಿ , ಅವರಿಬ್ಬರಿಗೂ ಎರಡು ಕಪಾಳಕ್ಕೆ ಬಾರಿಸುತ್ತಾರೆ ...ಜನಜಂಗುಳಿ ಒಟ್ಟಾಗುತ್ತದೆ .. ಇಷ್ಟಕ್ಕೆ ಬಿಡ ಬೇಡಿ ಸರ್ ಅವರನ್ನು ಒದ್ದು ಒಳಗೆ ಹಾಕಿ ಎಂದು ನೆರದಿದ್ದವರ ಅಭಿಪ್ರಾಯದಂತೆ ಕೂಡಲೇ ಪೋಲಿಸ್ ಟಾಣೆಗೆ ಪೋನ್ ಹಾಯಿಸಿ ಅವರನ್ನು ತಾಣೆಗೆ ಕರೆದೊಯ್ಯುಲಾಗುತ್ತದೆ . . ಮಹಿಳೆಯ ದೂರಿನ ಅನ್ವಯ ದೂರನ್ನು ದಖಲಿಸಿಕೊಂಡು ಅಲ್ಲಿ ಇನ್ನೆರಡು ಬಿಸಿ ಬಸಿ ಹೋಳಿಗೆ ಕೊಟ್ಟು ಬುದ್ದಿವಾದ ಹೇಳಿ ಫಟಿಂಗ ರನ್ನು ಮನೆಗೆ ಅವರನ್ನು ಕಳಿಸಲಾಗುತ್ತದೆ .
ನಂತರ ನಡೆದಿದ್ದೇ ಹೈಡ್ರಾಮ !!!
ಮಹಿಳೆಯನ್ನು ಕಿಚಾಯಿಸಿ ಪಬ್ಲಿಕ್ ಗಳಿಂದ ಉಗಿಸಿ ಕೊಂಡು ಪೋಲಿಸ್ ಪೇದೆಯಿಂದ ಏಟು ತಿಂದ ಮಾಹಾನುಭಾವರು ಉಡುಪಿ ಶಾಸಕ ,ಮಂತ್ರಿ ಪ್ರಮೋದ್ ಮದ್ವ್ರರಾಜ್ ರವರ ಕಾರ್ಖಾನೆಯಲ್ಲಿ ಟ್ಯಾಕ್ಟರ್ ಚಾಲಕರಂತೆ . ಅಂದ ಮಾತ್ರಕ್ಕೆ ಸರಳವಾಗಿ ಅರ್ತೈಸಿ ಕೊಂಡು ಬಿಡಬಹುದು ಇವರ ಆಟೋಟೋಪಕ್ಕೆ ಹಿಂಬದಿ ಪ್ರೇರಣಾ ಶಕ್ತಿ ಇನ್ನೇನು ಬೇಕು ? ಚುನಾವಾಣ ಪ್ರಚಾರ ಮುಗಿಸಿ ನಿವಾಸಕ್ಕೆ ಮದ್ವರಾಜ್ ಬಂದು ಒಂದು ದಿನದ ಬಳಿಕ ನಡೆದ ವಿಷಯ ಅವರ ಕಿವಿಗೆ ಸೋಕುತ್ತದೆ .
ಮಹಿಳೆಗೆ ಆದ ಅನ್ಯಾಯದ ವಿರುದ್ದ ಕ್ರಮ ಕೈಗೊಳ್ಳ ಬೇಕಿದ್ದ ಮಾನ್ಯ ಸಚಿವರು,ತಮ್ಮ ಕೆಲಸ ಆಳುಗಳು ಮಾಡಿದ್ದೆ ಸರಿ ಎಂಬ ನಿಲುವಿಗೆ ಬದ್ದರಾಗುತ್ತಾರೆ , ಅವರ ರಕ್ಷಣೆ ನಿಲ್ಲುವುದು ಬಿಡಿ ,ಪೋಲಿಸ್ ಪೇದೆ ಮಾಡಿದ್ದು ಸರಿ ಅಲ್ಲ ಎಂದು ತನ್ನ ಪವರ್ ಬಳಸಿ ಪೇದೆಯನ್ನು ವರ್ಗಾವಣೆಗೆ ಮಾಡುವುದಕ್ಕೆ ಮು೦ದಾಗುತ್ತಾರೆ ..
ನೆಡೆದ ಘಟನೆಯು ಸ್ಥಳಿಯರಲ್ಲಿ ಯಾರದ್ದು ತಪ್ಪು ಸರಿ ಎಂಬ ಜಡ್ಜ್ಮೆಂಟ್ ಇದ್ದರೂ ,ಮಂತ್ರಿ ಪಟಾಲಂ ಕಡೆಯವರು ಜನರಿಗೆ ಮಂಕು ಬೂದಿ ಅರಚಿ ಇದರಲ್ಲಿ ಪೋಲಿಸ್ನದ್ದು ಪೂರ್ಣ ತಪ್ಪು ಎಂದು ತೋರಿಸೋಲ್ಕರ ಒಂದು ನಾಟಕವನ್ನು ಹೂಡುತ್ತದೆ .
ಎಂದಿಂತೆ ಅರಾಮಾಗಿ ಬೈಕ್ ನಲ್ಲಿ ಸುತ್ತಾಡಿ ಮಧ್ಯೆ ಹೀರಿ ಇತರರಿಗೆ ಕಿಚಾಯಿಸುವ ತಮ್ಮ ಹವ್ಯಾಸ ವನ್ನು ಒತ್ತೆಯಲ್ಲಿಟ್ಟು ಕೊ೦ ಡಿದ್ದ ಫಟಿಂಗರು ,ಒಂದು ದಿನದ ನಂತರ ಆಸ್ಪತ್ರೆಗೆ ದಾಖಲಾಗುತ್ತಾರೆ .. ಪೊಲೀಸರು ಹೊಡೆದದ ಏಟು ತೀವ್ರ ಸ್ವರೂಪ ತಾಳಿ ಸೇರಿಯಸ್ ಆಗಿದೆ ಎಂದು ಜೊತೆಗೆ ಪೋಲಿಸ್ ದೂರು ದಾಖಲಾಗುತ್ತದೆ . ..ಸಿನಿಯರ್ ಪೋಲಿಸ್ ಅಧಿಕಾರಿಯೊಬ್ಬರು ಈ ಪೇದೆಗೆ ಕರೆ ಮಾಡಿ ನೀನು 15 ದಿನದ ಮಟ್ಟಿಗೆ ರಜೆಗೆ ಊರಿಗೆ ತೆರಳು ಇಲ್ಲದಿದ್ದರೆ ನಿನಗೆ ಬೇರೆಡೆ ವರ್ಗಾವಣೆ ಮಾಡ ಬೇಕೆಂಬ ಒತ್ತಡ ವಿದೆ ಎಂಬ ಮಾತು ಕೇಳಿ ಆತನಿಗೆ ಒಮ್ಮೆಲೇ ಬೆಚ್ಚಿಬೀಳಿಸಿತ್ತಾದರೂ, ಇದು ಇದೇ ಸ್ವರೂಪ ತಾಳುತ್ತದೆ ಎಂಬ ಅರಿವು ಅವರಿಗೆ ಮೊದಲೇ ಮನಸಿನಲ್ಲಿ ಮನೆ ಮಾಡಿತ್ತು . ಏನು ಮಾಡೋಣ ಹೇಳಿ ಇಂತಹ ಹೇಸಿಗೆ ಪ್ರಜಾಪ್ರಬುತ್ವದಲ್ಲಿ ನಾವಿದ್ದೇವೆ ಎಂಬ ಕಡು ಸತ್ಯವನ್ನು ಬಗಲಲ್ಲಿ ಇಟ್ಟು ಕೊಳ್ಳಲೇ ಬೇಕು . ದುರ೦ತವಲ್ಲದೇ ಮತ್ತಿನ್ನೇನು ? ಒಬ್ಬ ಪೋಲಿಸ್ ಅಧಿಕಾರಿಗೆ ತನ್ನ ಹೆಂಡತಿಗೆ ರಕ್ಷಣೆ ಕೊಟ್ಟು ,ಅನ್ಯಾಯ ವಿರುದ್ದ ಹೋರಾಡಿ ನ್ಯಾಯ ಬದಿಗಿರಲಿ ಸ್ವತ: ತಾನೇ ಶಿಕ್ಷೆಯನ್ನು ಅನುಭವಿಸಬೇಕಾದ ಸ್ತಿತಿ ಬಂತೆಂದರೆ ಇನ್ನೂ ಸಾಮಾನ್ಯ ಜನರ ಗತಿ ಏನು ? ಮುಂದೆ ಒಂದು ದಿನ ತಮ್ಮತಮ್ಮ ಮನೆಯ ಹೆಣ್ಮಕ್ಕನ್ನು ಎತ್ತಾಕಿ ಕೊಂಡು ಹೋದರೂ ಅಚ್ಚರಿ ಇಲ್ಲ...! ಇಂತವರುಗಳಿಗೆ ಸಾಥ್ ನೀಡುವರಿಗೆ ಹಾಗೂ ಇದರಲ್ಲಿ ಬಾಗಿಯಾಗುವವರಿಗೆ ಆ ಕ್ಷಣದಲ್ಲಿ ಯಾವುದೇ ಶಿಕ್ಷೆ ನೀಡುವ ಸಿನಿಮಾಗಳಂತೆ ಒಬ್ಬ ನಾಯಕ ಬರಲು ಅಸಾದ್ಯವಾದರೂ ,ಮುಂದೊಂದು ದಿನ ಇವರುಗಳಿಗೂ ಈ ಪರಿಸ್ತಿತಿ ಬಾರದೇ ಇರದು ಪರಿಣಾಮ ಖಂಡಿತವಾಗಿಯೂ ಎದುರಿಸಬೇಕಾಗುತ್ತದೆ .. ಅಧಿಕಾರ ಹಣ ಯಾವುದೂ ಶಾಶ್ವತ ಅಲ್ಲ ಅಲ್ಲವೇ ?!.

ಸೋಮವಾರ, ಜನವರಿ 9, 2017
ಬ್ಲಾಕ್ ಮೆಲ್ ಎಂಬ ಕರಾಳ ದಂಧೆ
“ಹನಿಟ್ರ್ಯಾಪ್“.. ಸಿಂಪಲ್ಲಾಗಿ ಬ್ಲಾಕ್ ಮೆಲ್ ಅಂತ ಹೇಳಬಹುದು ಇದೊಂದು ಅಗ್ಗದ ರೀತಿಯಲ್ಲಿ ದುಡ್ಡು ಮಾಡಲು ಹೊರಟಿರುವವರ ದಂಧೆ .. ಇದಕ್ಕೆ ಸಾಕಷ್ಟು ವರ್ಷಗಳ ಇತಿಹಾಸ ಇದೆ ..ಇವತ್ತಿನ ನಿನ್ನೆಯ ವಿಚಾರವಂತೂ ಅಲ್ಲವೇ ಅಲ್ಲ .. ಇದರಲ್ಲಿ ಬಲಿಪಶು ವಾಗುವವರು ಹಾಗೂ ಈ ದಂಧೆಯ ಸೂತ್ರಧಾರರು ಅಷ್ಟೇ ಬಲಾಧ್ಯರು.
ಯಾರು ಯಾರು ಈ ಬ್ಲಾಕ್ ಮೇಲ್ ಪೆಡ೦ಬೂತಕ್ಕೆ ಒಳಗಾಗುತ್ತಾರೆ ?
ಸೆಲೆಬ್ರಿಟಿಗಳು , ರಾಜಕಾರಣಿಗಳು , ಪ್ರೀತಿ ಪ್ರೇಮ ಹೆಚ್ಚೀಕೆ ಪುಟಾಣಿ ಮಕ್ಕಳು ಸಹಾ ಅವರವರ ವಿಕ್ನೆಸ್ ಹಾಗೂ ಲಾಭಾಂಶ ಗೊಸ್ಕರ ಬ್ಲಾಕ್ ಮೆಲ್ ಗೆ ಒಳಪಡುತ್ತಾರೆ,
ಬ್ಲಾಕ್ ಮೆಲ್ ನ ಉದಯ ಹಾಗೂ ಧಂದೆಯ ಕಿರು ನೋಟ ನನ್ನ ಕಲ್ಪನೆಯಲ್ಲಿ :
ಈ ಧಂದೆ ಪ್ರಾರ೦ಭವಾಗಿದ್ದೆ ಹೀಗೆ .,ಅಲ್ಲೂ ನಡೆಯ ಬಾರದ ಘಟನೆ ಸಮಾಜದ ಸಮುಖದಲ್ಲಿ ರಾರಾಜಿಸಬಾರೆಂದು ಆ ವ್ಯಕ್ತಿ ಕಣ್ಣಾರೆ ಕಂಡ ವ್ಯಕ್ತಿಗೆ ಯಾವೊದೋ ಒಂದು ರೂಪದಲ್ಲಿ ಆಸೆ ತೋರಿಸಿದಾಗ, ಆ ಆಸೆ ಯೇ ಜೀವನದ ಕುಲ ಕಸಬು ಆಗಿ ನಿರ್ಮಾಣ ಗೊಂಡು ಒಂದು ಹಂತದಲ್ಲಿ ಇದರ ಕಬಂದ ಬಾಹು ದೊಡ್ಡ ಧಂಧೆಯಾಗಿ ಮಾರ್ಪಾಡು ಗೊಂಡಿದೆ ಎನ್ನ ಬಹುದೇನೋ ?!ಎಲ್ಲೋ ಆಗಾಗ ಅಲ್ಲೋ ಇಲ್ಲೋ ಕದ್ದು ಮುಚ್ಚಿ ನಡಿತಾ ಇದ್ದ ವಿಚಾರ ಬಹಿರಂಗವಾಗದೆ ಇರಲಿ ಅಂತ ಸಂತ್ರಸ್ತರು ಸ್ವಲ್ಪ ಯಾವೊದೋ ವಿಧದ ಲಾಬಾಂಶವನ್ನು ತೊರಿಸಿ ಆಲ್ಲಿಗೆ ಆ ಕಥೆಗೆ ಇತಿಶ್ರೀ ಹಾಡುತ್ತಿದ್ದರು .. ಅದನ್ನೇ ಬಂಡವಾಳ ಮಾಡಿಕೊಂಡ ಮಹಾನ್ ಪಟ0ಗರು ಅದನ್ನು ಒಂದು ಉದ್ಯೋಗವನ್ನಾಗಿ ,ದಂಧೆಯನ್ನಾಗಿ ಮಾಡಿರುವದು ವಿಚಿತ್ರವಾದರೂ ಸತ್ಯ ! ಹೆಚ್ಚಾಗಿ ಕೆಲವು ಟಿವಿ ಪತ್ರಿಕಾ ಮಾಧ್ಯಗಳೂ ಸಹಾ ಅಗ್ರ ಪಂತ್ಯಯಲ್ಲಿ ರಾರಾಜಿಸುತ್ತಿರುವುದು ಸುಳ್ಳಲ್ಲ .!
ಬ್ಲಾಕ್ ಮೆಲ್ ವಿಚಾರವನ್ನು ಒಳಗೊಂಡ ಸಿನಿಮಾ ಯಾರಿಗೆ ಪೂರಕ ವಾಗಿದೆ ?
ಇನ್ನು ಸಾಕಷ್ಟು ಸಿನಿಮಾಗಳು ಈ ಬ್ಲಾಕ್ ಮೇಲ್ ಗೆ ಸಂಬಂದ ಪಟ್ಟಂತೆ ಅದರ ನೈಜ ಒಳ ಹೂರಣ ತುಡಿತ ಮಿಡಿತಗಳ ಕಥಾ ಸಾರಾಂಶವನ್ನು ಇಟ್ಟು ತೆರೆ ಕಂಡಿವೆ .. ಚಿತ್ರದಲ್ಲಿ ಖಳ ನಾಯಕ ಮಾಡುವ ತಂತ್ರ ,ನಾಯಕನ ಕೌಶಲ್ಯ ಮುಂತಾದವುಗಳು ಇದರಲ್ಲಿ ಮೂಡಿ ಬರುತ್ತವೆ ..ಇದು ಸಮಾಜಕ್ಕೆ ಎಷ್ಟು ಉಪಯುಕ್ತವಾಗಿದೆ ..ಎಷ್ಟು ಪರಿಣಾಮಕಾರಿಯಾಗಿದೆ ಎಂಬ ವಿಚಾರ ಬದಿಗಿರಿಲಿ ಇದು ಯಾರಿಗೆ ಉಪಕಾರಿ ಆಗಿದ್ಯೋ ,ಪ್ರಚೋದನಕಾರಿ ಆಗಿದೆಯೋ ಗೊತ್ತಿಲ್ಲ .. ಅಂತ ಸಿನಿಮಾಗಳಿಂದ ಎಚ್ಚೆತ್ತ ಸಂತ್ರಸ್ತರಿಗಿಂತ , ಪಟಿ೦ಗರಿಗೆ ದಾರಿ ದೀಪ ಆಗಿದೆ ಎಬುವುದಕ್ಕೆ ಸಾಕಷ್ಟು ಪುರಾವೆಗಳು ಇವೆ ,,ಸಾಕ್ಷಾತ್ ಸಿಕ್ಕಿ ಬಿದ್ದ ಪಟಿಂಗ ರುಗಳೇ ಪೋಲಿಸ್ ರ ಮುಂದೆ ಬಾಯಿ ಬಿಟ್ಟಿದ್ದಾರೆ .
ಒಂದಷ್ಟು ಜಾಲಿ ಲೈಫೇಗೆ ಪುಟ್ಟ ಮಕ್ಕಳು ಕೂಡಾ ತಮ್ಮ ಪೋಷಕರುಗಳಿಗೂ ಸಹಾ ಬೇರೊಬ್ಬರ ಸಹಾಯ ಪಡೆದು ಪರ್ಸೆಂಟ್ ಲೆಕ್ಕದಲ್ಲಿ ಬ್ಲಾಕ್ ಮೆಲ್ ಮಾಡುವುದು, ಇದು ಸಿನಿಮಾ ಕಥೆ ಅಲ್ಲ ..ನಮ್ಮ ಮುಂದಿದೆ .,ಸಂಭವಿಸದ ರಿಯಲ್ ಸ್ಟೋರಿ ..!
ಪ್ರೀತಿ ಪ್ರೇಮವೆಂದು ನಾಟಕವಾಡಿ ಯಾವುದೋ ತಮ್ಮ ಲಾಭ ಕೊಸ್ಕರ ಮೋಸ ಮಾಡುವುದು ಬೇರೊಂದು ವಿಚಾರವಾದರೂ ,ಅದೂ ಕೂಡಾ ಬ್ಲಾಕ್ ಮೆಲ್ ಎಂದು ಕೆರೆಯಿಕೊಡುತ್ತದೆ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸಾಕಷ್ಟು ಸಂಗತಿಗಳು ಕಣ್ಣಿಗೆ ರಾಟುತ್ತವೆ. ಅದೇನೇ ಇರಲಿ
ಆಪ್ತರೇ ಮಾಡ್ತಾರೆ ಹನಿಟ್ರ್ಯಾಪ್:
ಹೌದು ! ‘ಹಣಕ್ಕೆ ಹೆಣ ಕೂಡ ಬಾಯಿ ಬಿಡತ್ತೆ’ ಅಂತ ಒಂದು ಗಾದೆ ಮಾತಿದೆ ...ಯಾರಿಗೆ ಹಣ ಬೇಡ ಹೇಳಿ ..? ಹೇಳಿ ಕೇಳಿ ಮೈ ಮುರಿಯದೇ ದುಡ್ಡು ಮಾಡಲು ಶೋಕಿ ಜೀವನ ನಡೆಸಲು ಯಾವ ಕಾರ್ಯಕ್ಕೂ ಸೈ ಎಂಬ ಮನಸ್ತಿತಿಯ ಮಹಾನುಭಾವರು ಕೂಡಾ ಇದ್ದಾರೆ ..ನಮ್ಮ ಎಷ್ಟೇ ಆಪ್ತರು ಎಂದು ಗುರುತಿಸಿ ಕೊಂಡರೂ, ಅವರ ಎದುರು ಯಾವುದೇ ರಹಸ್ಯ ವಿಚಾರವನ್ನು ಹಂಚಿಕೆ ಮಾಡುವುದು,ಬಿಚ್ಚಿ ಇಡುವುದು ಸರಿಯಲ್ಲ .. ನೇರವಾಗಿ ಅವರು ಬಾಗಿಯಾಗದೇ ಇದ್ದರೂ ಕುತಂತ್ರ ದಿಂದ ಅದನ್ನು ಇತರ ತಮ್ಮ ಸ್ನೇಹಿತರಿಗೆ ರವಾನಿಸಿ ತಮಗೆ ಏನೂ ಗೊತ್ತಿಲ್ಲದ ರೀತಿಯಲ್ಲಿ ಎರಡು ಕಡೆಯಿಂದ ಸಂಬಂದಗಟ್ಟಿ ಗೊಳಿಸಿ ಒಂದೇ ಕಲ್ಲಿನಲ್ಲಿ ಎರಡು ಹಣ್ಣು ಉದುರಿಸುವ ಛಾತಿ ಇರುವವರು ನಮ್ಮ ಹಿಂದೆ ಇದ್ದೆ ಇರುತ್ತಾರೆ. ಅಂತವರನ್ನು ಸಹಾ ಎಚ್ಚರಿಕೆ ಯಿಂದ ನೋಡಬೇಕಾದದ್ದು ಅನಿವಾರ್ಯ ಹಗಲು ಕಂಡ ಬಾವಿಗೆ ರಾತ್ರಿ ಬೀಳುವುದೇ ಇರುವುದು ಒಳ್ಳೇದು ಮೇಟಿ ಕಾಮ ಕಾಂಡ ಎಂದೆಲ್ಲಾ ಕೆರಿಸಿ ಕೊಂಡ ಇತ್ತೀಚಿಗೆ ಟಿವಿ ಮಾಧ್ಯಮಗಳ ಟೆಯಾರ್ಪಿ ಹೆಚ್ಚಸಿದ ಘಟನೆಯೂ ಸಹಾ ಇದೆ ಮಾದರಿಯದ್ದೇ .. ! ನಮ್ಮ ಎಚ್ಚರ ನಮ್ಮ ಕೈಲಲ್ಲಿ ಇರಬೇಕು ಅಷ್ಟೇ
ಬ್ಲಾಕ್ ಮೇಲ್ ಗೆ ಒಳಗಾದವವರಿಗೆ ಲಾಭಾ ಅಂಶವನ್ನು ದಯಪಾಲಿಸುವುದಕ್ಕಿಂತ ಅವರನ್ನು ನೇರವಾಗಿ ಪೋಲಿಸ್ ರಿಗೆ ಒಪ್ಪಿಸಿದರೆ ಮ್ಯಾಟರ್ ಕ್ಲೋಸ್ ಆಗುತ್ತೆ ಮುಂದೆ ಇಂತಹ ದಂಧೆಯನ್ನು ಯಾರೂ ಕೂಡಾ ಮಾಡಬಲ್ಲರು .. ಒಂದೊಮ್ಮೆ ಅವರುಗಳ ಬೇಡಿಕೆಗೆ ಮಣಿದರೆ ತಾವು ಅರ್ಧ ಸತ್ತಂತೆ ..ಅದನ್ನೇ ಹಿಡಿದು ಮೊದಲಿಗೆ ಇಂತಿಷ್ಟು ಪಡೆಯುವ ಅವರುಗಳು ನಂತರ ಮತ್ತೊಂದಿಷ್ಟಕ್ಕೆ ಬೇಡಿಕೆ ,ಕೊಟ್ಟು ಕೊಟ್ಟು ಕೋಡಂಗಿಯಾಗಿ ಅನಂತರ ತಮ್ಮ ಆ ನೈಜ ವಿಚಾರವೂ ಬೆಳಕಿಗೆ ಬರುತ್ತದೆ ಇತ್ತ ತಮ್ಮ ಖಜಾನೆಯೂ ಖಾಲಿಯಾಗಿರುತ್ತದೆ .ಅತ್ತ ಮರ್ಯಾದೆಯೂ ಸಹಾ ಬೀದಿಗೆ ಬಂದಿರುತ್ತದೆ ..ಎಲ್ಲಾಕ್ಕಿಂತ ಉತ್ತಮ ನೇರವಾಗಿ ಸಂಬದ ಪಟ್ಟವರಿಗೆ ತಿಳಿಸುವುದು.
ಮೊನ್ನೆಯ ವಿಚಾರವೂ ಹಾಗೆ ಆಗಿದೆ ಅನ್ನುವುದು ಮೆಲ್ನೋಟಕ್ಕೆ (ಬಲ್ಲ ಮೂಲಗಳಿಂದ ) ಸಾಬೀತು ಆಗುತ್ತಾ ಇದೆ ಸಚಿವ ಮೇಟಿ ವಿವಾದಲ್ಲಿ ಮೆಂದು ಸಾಕಾಗದ ಮಹಾನುಭಾವರು ಕೊನೆಗೂ ಸೀಡಿ ಬಿಡುಗಡೆ ಮಾಡಿದ್ರಂತೆ ..ಅತ್ತ ಹಣ ಇಲ್ಲ ಇತ್ತ ಮರ್ಯಾದೆ ಇಲ್ಲ .. ಇದು ಕೇವಲ ಮೇಟಿ ವಿಚಾರವಲ್ಲ ಇನ್ನೂ ಸಾಕಷ್ಟು ಜನ ಇದರಲ್ಲಿ ಮಾನ ಮರ್ಯಾದೆಗೆ ಅಂಜಿ ಬಲಿ ಪಶು ಆಗಿದ್ದಾರೆ .. ಪುಕ್ಕಟೆಯಾಗಿ ಹೆದರಿಸಿ ಬೆದರಿಸಿ ಲೂಟಿ ಕಾರರು ಆರಾಮಾಗಿ ಜೀವನ ಸಾಗಿಸುತ್ತಿದ್ದಾರೆ .. ಮೇಟಿ ವಿಚಾರ ದಿಂದ ಒಂದೊಂತು ಸತ್ಯ, ಸಮಾಜಕ್ಕೆ ಒಳ್ಳೆಯ ಪಾಠ ಸಿಕ್ಕಿದೆ ! ಬ್ಲಾಕ್ ಮೆಲ್ ದಂಧೆಯ ಕರಾಳ ಮುಖ ಬಯಲಾಗಿದೆ ..!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)