ಶನಿವಾರ, ಅಕ್ಟೋಬರ್ 8, 2016

ತನ್ನ ತಲೆಯ ಮೇಲೆಯೇ ಚಪ್ಪಡಿ ಕಲ್ಲು ಹಾಕಿ ಕೊಂಡ್ರಾ ಪ್ರಕಾಶ್ ರೈ !

ಬಹು ಬಾಷಾ ಕಲಾವಿದ ಪ್ರಕಾಶ್ ರೈಯ “ಇದು ಒಳ್ಳೆ ರಾಮಾಯಣ” ನಿನಿಮಾದ ಪ್ರೊಮೋಷನ್ ನ ವಿಶೇಷ ರೆಕಾರ್ಡಿಂಗ್ ಕಾರ್ಯಕ್ರಮದ ಸಲುವಾಗಿ ಕನ್ನಡದ ಸುದ್ದಿ ವಾಹಿನಿಗಳ ಪೈಕಿ ಜನಶ್ರಿ ಸುದ್ದಿ ವಾಹಿನಿ ತಂಡದವರು ಅವರ ನಿವಾಸಕ್ಕೆ ತೆರಳಿದ್ದರು .ಕಾರ್ಯಕ್ರಮದ ಬಗೆಗಿನ ಪ್ರಶ್ನೆಗಳನ್ನೆಲ್ಲಾ ಕೇಳಿ ,ಇನ್ನೇನು ಕಾರ್ಯಕ್ರಮ ಮುಗಿಯುವ ಹಂತ ಬರುತ್ತಿದಂತೆ,ನಿರೂಪಕಿ ಕಾವೇರಿ ವಿವಾದಕ್ಕೆ ಸಂಬಂದಪಟ್ಟ ಒಂದು ಪ್ರಶ್ನೆಯನ್ನು ಕೇಳುತ್ತಾರೆ .ಪ್ರಶ್ನೆಯನ್ನು ಕೂಲ್ ಆಗಿ ನಿರೂಪಕಿ ಕೇಳುತ್ತಿದಂತೆ ಮೈ ಮೇಲೆ ಬೂತ ಬಂದವರ ರೀತಿಯಲ್ಲಿ ನಡತೆಯನ್ನು ಪ್ರದರ್ಶಿಸುತ್ತಾ ಪ್ರಕಾಶ್ ರೈ ,ಸಿನಿಮಾ ವಿಚಾರಕ್ಕೆ ಸಂಬoದಿಸಿದ ಈ ಕಾರ್ಯಕ್ರಮದಲ್ಲಿ ರಾಜಕೀಯದ ಪ್ರಶ್ನೆಯನ್ನು ಕೇಳ್ವುದು ತರವಲ್ಲ. ನಾನೇನು ತಪ್ಪು ಮಾಡಿದ್ದೆ .ಅದೂ ಇದೂ ಎಂದು ಇಲ್ಲ ಸಲ್ಲದ ವಿಚಾರವನ್ನು ಹಿಡಿದು ಅನಗತ್ಯವಾಗಿ ಎಗರಾಡಿ ಶರ್ಟ್ ಗೆ ಅಳವಡಿಸಿದ್ದ ಮೈಕ್ ತೆಗೆದು ಇನ್ನೂ ಯಾವೊತ್ತೂ ಬರಬೇಡಿ ಎಂದು ಷೋ ನಿಂದ ಹೊರೆಗೆ ನಡೆದೇ ಬಿಟ್ಟರು!!! https://www.youtube.com/watch?v=_FbRSsXwfjU ಆ ಪ್ರಶ್ನೆ ಇಲ್ಲಿ ಕೇಳಿದ್ದು ಸ್ವಲ್ಪ ಮಟ್ಟಿಗೆ ಸರಿಯಲ್ಲದೇ ಇದ್ದರೂ, ಪ್ರಸ್ತುತ ವಿಧ್ಯಮಾನಕ್ಕೆ ಅನುಗುಣವಾಗಿ ಕೇಳಿದ್ದರಲ್ಲಿ ತಪ್ಪಿಲ್ಲ . ಕಾವೇರಿಯ ವಿಚಾರದಲ್ಲಿ ಕನ್ನಡದ ಕೆಲವು ಸಿನಿಮಾ ಕಲಾವಿದರು ಹಾಗೂ ತಮಿಳು ಚಿತ್ರರಂಗದ ತಾರೆಯರೂ, ಸಹಾ ಕಾವೇರಿ ಕಳಾಕಳಿ ಯಲ್ಲಿ ಒಂದಿಷ್ಟು ಪರ ವಿರೋಧದ ಅಲೆಯಲ್ಲಿ ಪ್ರತಿಭಟನೆಗೆ ಇಳಿದದ್ದು ಎಲ್ಲರಿಗೂ ಗೊತ್ತೇ ಇರದ ವಿಚಾರವೆನಲ್ಲಾ .ತಾರೆಯರ ಬೆಂಬಲದಲ್ಲಿ ಪ್ರಕಾಶ್ ರೈ ಎರಡೂ ಚಿತ್ರರಂಗದ ಕಡೆಯಿಂದ ತಮ್ಮನ್ನು ತೋರ್ಪಡಿಸಿಕೊಳ್ಳ ದೇ ಇರುವುದು ಸಾಮಾನ್ಯ ವಾಗಿ ಎಲ್ಲರಲ್ಲೂ ಕುತೂಹಲ ಇದ್ದೇ ಇರುತ್ತೆ . ಬಹುಬಷಾ ನಟನಾಗಿ ,ಅದರಲ್ಲೂ ಕನ್ನಡಿಗನಾಗಿ ,ಕನ್ನಡದ ಹಲವು ಸಿನಿಮಾಗಳಲ್ಲಿ ಅಭಿನಯಿಸಿ ,ನಿರ್ದೇಶಿಸಿ, ನಿರ್ಮಾಪಿಸಿ , ಪ್ರಸಿದ್ದಿ ಪಡೆದವರು ಹಾಗಂತ ತಮಿಳು ನಾಡಿನಲ್ಲೂ ಚಿರಪರಿಚತ ವ್ಯಕ್ತಿಯೇ. ತಮಿಳು ಚಿತ್ರರಂಗದಲ್ಲೂ ಸಹಾ ಅಷ್ಟೇ ಜನಪ್ರಿಯತೆಯನ್ನು ಪಡೆದಿದ್ದವರು.ಉಭಯ ಚಿತ್ರರಂಗದ ತಾರೆಯರು ಕಾವೇರಿ ವಿವಾದದಲ್ಲಿ ತಮ್ಮನ್ನು ತಾವು ತೊಡಗಿ ಕೊಂಡಿರುವುದರ ಮಧ್ಯೆ ಪ್ರಕಾಶ್ ರೈ ಯಾವುದಕ್ಕೂ, ಸಾಥ್ ನೀಡದೇ ಸೈಲೆಂಟ್ ಮೂಡಿಗೆ ತೆರಳಿರುವುದರ ಮರ್ಮದ ಬಗ್ಗೆ ಈ ಪ್ರಶ್ನೆಯನ್ನು ಕೇಳಿದ್ದರಲ್ಲಿ ಖಂಡಿತವಾಗಿಯೂ ತಪ್ಪಿರಲಿಲ್ಲ .ಒಂದೊಮ್ಮೆ ತಪ್ಪು ಇತ್ತು ಏಣಿಸಿದರೆ, ಪ್ರಕಾಶ್ ರೈ ಪ್ರಶ್ನೆಗೆ ಸಮಾಧಾನ ದಿಂದ ಸವಾಕಾಶ ವಾಗಿ ಉತ್ತರಿಸ ಬಹುದ್ದಿತ್ತು ಅದಿಲ್ಲವೆಂದಾರೆ ಈ ಪ್ರಶ್ನೆಯನ್ನು ಕೇಳಬೇಡಿ ಎಂದು ವಿನಂತಿಸಿ ಕೊಂಡು, ಕಾರ್ಯಕ್ರಮ ಪೂರ್ಣಗೊಳಿಸುವಲ್ಲಿ ನೆರವಾಗಬೇಕಿತ್ತು . ಆದರೆ ಪ್ರಕಾಶ್ ರೈ ಮಾಡಿದ್ದು ಘೋರ ಅಪರಾಧ. ಮಗುಚಿ ಬಿದ್ದರೂ ಮುಗು ಮಣ್ಣಾಗಲಿಲ್ಲ ಎನ್ನುವಂತೆ ವಾಹಿನಿಯ ವಿರುದ್ದವೇ ಕಿಡಿಕಾರಿದ್ದು ತಮ್ಮ ಅಭಿಮಾನಿಗಳು ಮೆಚ್ಚುವಂತದ್ದಲ್ಲ .. ಅದೇ ಆ ಪ್ರಶ್ನೆಗೆ ಸoಯಮ ,ಸಮಚಿತ್ತದಿಂದ ಉತ್ತರಿದ್ದರೆ ನೀವು ಇಂದು ನಿಜ ಜೀವನದಲ್ಲಿ ಹೀರೋ ಆಗ್ತಾ ಇದ್ದಿದ್ದರಿ. ಅಭಿಮಾನ ಇನ್ನಷ್ಟು ಉಕ್ಕಿ ಹರಿಯುತ್ತಿತ್ತು .ಸಭ್ಯ ನಾಗರಿಕರಂತೆ ವರ್ತಿಸುವ ನಿಮ್ಮ ನಡಾವಳಿಗಳನ್ನ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಾವು ಗಮನಿಸಿದ್ದೇವೆ . ಆದರೆ ಇಲ್ಲಿ ಮಾತ್ರ ನಿಜ ವಿಚಾರದಲ್ಲಿ ಅಸಭ್ಯತೆ ಮಿತಿ ಮೀರಿತ್ತು. ತಮ್ಮ ಸಿನಿಮಗಳಲ್ಲೇ ಗಮನಿಸಿದಂತೆ ನೀವು ಹೆಚ್ಚಾಗಿ ಜನಪ್ರಿಯತೆ ಗೊoಡದ್ದು ಗೂಂಡಾ !,ವಿಲನ್ ಪಾತ್ರದಲ್ಲಿ ಅಲ್ವೇ ? ಅದನ್ನೇ ಇಲ್ಲಿ ಸಾಬೀತು ಪಡಿಸಿದ್ದಿರಿ. ಒಂದು ಜವಬ್ದಾರಿಯುತ ಸುದ್ದಿ ವಾಹಿನಿ ತಮ್ಮ ಪರವಾಗಿಯೇ ತಮ್ಮ ಚಿತ್ರದ ವಿಚಾರ ಜಗಜಹೀರಾತು ಮಾಡುವಲ್ಲಿ ತಮ್ಮ ಮನೆ ಬಾಗಿಲು ತನಕ ಬಂದವರನ್ನು ಈ ರೀತಿ ಉದ್ದಟತನವನ್ನು ತೋರಿ , ಅವರಿಗೆ ಅವಮಾನ ಮಾಡಿದ ತಾವು ,ಈ ಮಟ್ಟಕ್ಕೆ ಬೆಳೆಯಲು ತಮ್ಮ ಚಿತ್ರದ ಬಗ್ಗೆ ಗಲ್ಲಿ -ಗಲ್ಲಿ ಗಳಲ್ಲಿ ತಲುಪಿಸಿ, ತಮ್ಮ ಹೆಸರು ಬಾನೆತ್ತರಕ್ಕೆ ಬೆಳೆಸಲು ಈ ಮೀಡಿಯಾಗಳೇ ಪ್ರಮುಖ ಕಾರಣ ಎಂದು ಮರೆಯಬೇಡಿ . ಈ ಅಸಭ್ಯೇತೆ ಯಿಂದ ನಿಜಕ್ಕೂ ತಾವು ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವುದೂ ಬಿಡಿ , ಇನ್ನು ಮುಂದೆ ತಮ್ಮ ಸಂದರ್ಶನಕ್ಕೆ ಬೇರೆ ಮೀಡಿಯಾಗಳು ಹಿಂದೆ ಮುಂದೆ ನೋಡುವ ಅಥವಾ ಬರಲೇ ಬಾರದೆಂಬ ತೀರ್ಮಾಕ್ಕೆ ಬಂದರೂ ಅಚ್ಚರಿಯಿಲ್ಲ !! ತನ್ನ ಕೈಯಾರೆ ತಮ್ಮ ತಲೆಯ ಮೇಲೆ ತಾವೇ ಚಪ್ಪಡಿ ಕಲ್ಲು ಹಾಕಿ ಕೊಂಡಿದ್ದ್ರಿ .. !! ತಾವೇನೋ ಈ ಮಟ್ಟಕ್ಕೆ ಬೆಳೆದಾಯ್ತು ಇನ್ಯಾಕೆ ಮೀಡಿಯಾ ಎಂದು ಆಲೋಚನೆ ಯನ್ನು ಬಿಡಿ . ದಡ ಸೇರಿದ ಮೇಲೆ ಅಂಬಿಗನ ಹಂಗ್ಯಾಕೆ ಎಂಬ ಭ್ರಮೆ ದೂರವಾಗಲಿ ಪುನಾ: ದಡ ಸೇರುವುದಕ್ಕೆ ಅಂಬಿಗ ಬೇಕೇ ಬೇಕು !! https://www.youtube.com/watch?v=Ml0xPNgS938 ಇನ್ನು ಈ ವಿಚಾರ ಜನಶ್ರೀ ಟಿವಿಯ ಪ್ರಧಾನ ಸಂಪಾದಕರಾದ ಅನಂತ ಜೀನಿವಾರ್ ,ರೈ ನಡವಳಿಕೆ ಬಗ್ಗೆ ಮರುದಿನ ಬಹಿರಂಗ ಪಡಿಸಿದ್ದೆ ತಡಾ ,ಕೆಲವು ಅವರ ಅಭಿಮಾನಿಗಳು ರೈ ಮಾಡಿದ್ದೇ ಸರಿ ಎಂದು ವಿವಿಧ ಟ್ರೋಲ್ಲೆರ್ ಗಳ ಮೂಲಕ ಸೋಶಿಯಲ್ ನೆಟ್ವರ್ಕ್ ಗಳ ಮೂಲಕ ವಾಹಿನಿಯ ವಿರುದ್ದ ,ನಿರೂಪಕಿ, ಸಂಪಾದಕರ ವಿರುದ್ದ ಜರಿದಿದ್ದೆ ಜರಿದಿದ್ದು ! ಇವರಿಗೇನು ಗೊತ್ತು ಕೇವಲ ಸಿನಿಮಾದ ನಾಟಕೀಯತೆಗೆ ಮಾತ್ರ ಮನ ಸೋತವರು ಇವರುಗಳು . ಒಂದಿಷ್ಟು ಪ್ರಜ್ನತೆಯನ್ನು ಇಟ್ಟು ಕೊಂಡಿದ್ದರೆ ಅರ್ಥವಾಗುತ್ತಿತ್ತು. ರೀಲ್ ಆಚೆಗೆ ಬಂದು ರಿಯಲ್ ಆಗಿ ಏನು ಮಾಡಿದ್ದಾರೆ ಮಹಾನ್ ರೈ ಅವರು? ಇವರುಗಳಿಗೆ ಸಿನಿಮಾ ಹಿಟ್ ಆಗಬೇಕೆಂದರೆ ಟಿವಿ ಚಾನೆಲ್ ಗಳು ಬೇಕು.. ಸಿನಿಮಾ ಹಂಡ್ರೆದ್ ದಿನ ಒಡ್ಬೇಕೆಂದರೆ ಮೂಕ ಪ್ರೇಕ್ಷಕ ಜನತೆ ಬೇಕು . ಈ ಜನತೆಯ ಉದ್ದಾರಕ್ಕೆ ಏನು ಮಾಡಿದ್ದಾರೆ ತಾರೆ ಯರು ?? ಅದೇ ಜನತೆಗೆ ಮೂಲ ಭೂತ ಸೌಕರ್ಯ ಗಳಲ್ಲಿ ಒಂದಾದ ನೀರು ಕೊಡಲಿಕ್ಕೂ ಲಾಯಕ್ಕಲ್ಲದ ನಾಲಾಯಕ್ ಗಳು ನಮಗೆ ಬೇಕಾ? ಇವರ ಮನೆಯಿಂದ ಏನೂ ನಮಗೆ ನೀರು ಕೊಡೋದು ಬೇಡ ಅಟ್ ಲಿಸ್ಟ್ ಹೋರಾಟದಲ್ಲಿ ಬಾಗವಹಿಸಿದ ತಾರೆಯರ ಜೊತೆ ಏನೋ ಹರಕೆ –ಬಲಿ ಎಂದು ಭಾವಿಸಿ ,ಮೊಸಳೆ ಕಣ್ಣೀರು ಹಾಕಿ ಕೈ ತೊಳೆದು ಕೊಳ್ಳುವಲ್ಲಿ ಆಗುವ ಅಡ್ಡಿಯಾದರೂ ಏನು .. ? ಮೊನ್ನೆ ಮೊನ್ನೆ ನಮ್ಮ ಕನ್ನಡತಿ ನಾಯಕಿ ರಮ್ಯಾ ವಿಚಾರವನ್ನೇ ನೋಡಿ ಪಾಕಿಸ್ತಾನ ನರಕ ಅಲ್ಲ ಎಂದು ಹೇಳಿಯೇ ಬಿಟ್ಟಳು ದೇಶ ದ್ರೋಹಿಗಳು ಇವರಿಗೆಲ್ಲಾ ನಮ್ಮ ದೇಶ ಬೇಕಾ ?ರಾಜಕೀಯ ಗೋಸ್ಕರ ತಮ್ಮ ಶೀಲವನ್ನು ಕೊಡಲಿ ಆದರೆ ತಮ್ಮ ದೇಶವನ್ನಲ್ಲ ! ಪಾಕಿಸ್ತಾನ ನರಕ ಅಲ್ಲ ಎಂದು ಉಸುರಿದ್ದ ರಮ್ಯ ಗೆ ಯಾವುದೋ ಒಂದು ಕಾರ್ಯಕ್ರಮದಲ್ಲಿ ಸಿಕ್ಕಾಗ ಪಬ್ಲಿಕ್ ಟೀವಿಯ ಪ್ರತಿನಿಧಿ ಕೇಳಿದ್ದಕ್ಕೆ ಪಾಕಿಸ್ತಾನ ವಲ್ಲ ನಮ್ಮ ಮಂಗಳೂರು ನರಕ ಎಂದು ಎಷ್ಟೊಂದು ಲೀಲಾ ಜಾಲವಾಗಿ ಹೇಳಿಲ್ವಾ ? ಇಂಥಹ ನೀಚ ಮನಸ್ಥಿತಿಯನ್ನು ಅರಸಿ ಅರಹುವುದಕ್ಕೆ ಮಾಧ್ಯಮ ಬೇಕು !! ಮೊಟ್ಟೆ ಅಬಿಷೇಕ ಮಾಡಿಸ್ಲಿಕ್ಕೆ ಮಾಧ್ಯಮ ಬೇಕು . ಅದೇ ಈ ಪ್ರಕಾಶ್ ರೈ ವಿಚಾರದಲ್ಲೂ ಅಷ್ಟೇ ಅವರ ಮನದಿಂಗಿತವನ್ನು ಹೊರಹಾಕು ವಲ್ಲಿ ಪ್ರಯತ್ನಿಸಿದ ಜನಶ್ರೀ ವಾಹಿನಿದು ತಪ್ಪಿತ್ತೆ ? ಕೇವಲ ಪ್ರಕಾಶ್ ರೈ ಪರವಾಗಿ ಮಾತಾಡುವ ಅಭಿಮಾನಿಗಳೇ ಯೋಚಿಸಿ ತಮ್ಮ ಬುದ್ದಿಯನ್ನು ಖರ್ಚು ಮಾಡಿ .ಅಭಿಮಾನ ಅತಿಯಾಗದಿರಲಿ .ಅದನ್ನು ಬದಿಗಿಡಿ ಪ್ರಜ್ಞಾವಂತ ಸಮಾಜದಲ್ಲಿ ಗ್ರಹಿಕೆ ಸಾಮರ್ಥ್ಯ ಇರುವ ಪ್ರತಿಯೊಬ್ಬರೂ ಕೂಡಾ ಸತ್ಯಕ್ಕೆ ಬೆಂಬಲ ಕೊಡುತ್ತಾರೆ .

2 ಕಾಮೆಂಟ್‌ಗಳು:


  1. ಕನ್ನಡದ ಹೆಮ್ಮೆಯ ನಟ, ರಾಷ್ಟ್ರ ಪ್ರಶಸ್ತಿ ವಿಜೇತ, ಜಾತಿ, ಧರ್ಮ, ಭಾಷೆಗಳ ಮೀರಿ, ರಾಜ್ಯಗಳ ನಡುವೆ ಹಾರ್ದಿಕ ಸಂಬಂಧಗಳ ಸೇತುವಾದ ಪ್ರಕಾಶ್ ರೖರವರನ್ನು ನಾವು ನಡೆಸಿಕೊಂಡ ಬಗೆ ಅವಮಾನಕರ. ರೖತರ ಬೇರಾವ ಸಮಸ್ಯೆಗೂ ಪರಿಹಾರ ಹುಡುಕದ ನಮಗಿಂತ ಬಹಳ ಚೆನ್ನಾಗೇ ರೖತರ ಸಮಸ್ಯೆಗಳ ಬಗ್ಗೆ ಅರಿವು ಸ್ವತಃ ಭೂಮಿಗಿಳಿದು ದುಡಿವ ರೖತರಾದ ಪ್ರಕಾಶ್ ರೖರವರಿಗೆ ಇದೆ. ಪರಿಸ್ಥಿತಿಯ ಸೂಕ್ಷ್ಮತೆಯನ್ನರಿತು ಕದಡಿದ ಪರಿಸ್ಥಿತಿಯ ದುರುಪಯೋಗ ಮಾಡಲಿಚ್ಛಿಸದ ರೖರವರ ಅಪರೂಪದ ನಿಲುವು ಶ್ಲಾಘನೀಯ. ಲಾಭ ನಷ್ಟಗಳ ಗಣನೆಗೆ ತೆಗೆದು ಕೊಳ್ಳದೇ ಕನ್ನಡಕ್ಕೆ ಸದಭಿರುಚಿಯ ಚಲನಚಿತ್ರಗಳನ್ನು ಬಿಡದೇ ನಿರ್ಮಿಸುತ್ತಿರುವ ರೖರವರ ಸಿನಿಮಾಗಳನ್ನು ಅಗೌರವದಿಂದ ಕಾಣುವ ಯಾವುದೇ ನೖತಿಕ ಹಕ್ಕು ನಮಗಿಲ್ಲ.
    ಇನ್ನು ಅವರ ಸಾಮಾಜಿಕ ಬದ್ಧತೆಯ ಬಗ್ಗೆ ತಿಳಿಯಬೇಕೆಂದರೆ ಬಂಡೀಪುರದ ಕಾಡು, ಹುಲಿಗಳು, ಆನೆಗಳು, ಆದಿವಾಸಿಗಳನ್ನು ಬಂಡವಾಳಶಾಹಿಗಳ ಕಪಿಮುಷ್ಟಿಯಿಂದ ಕಾಪಾಡಿ ಸ್ವಂತ ಖರ್ಚಿನಲ್ಲಿ ಮಾಡುತ್ತಿರುವ ಕೆಲಸವನ್ನೊಮ್ಮೆ ನೋಡಿಬರಬೇಕು. ಅವರು ಮಣ್ಣಿಗಿಳಿದು ಕೆಲಸ ಮಾಡುವುದ ನೋಡಿ ಬರಬೇಕು.

    ಪ್ರತ್ಯುತ್ತರಅಳಿಸಿ
  2. *ಬರೀ ಬಾಯಿ ಮಾತಲ್ಲಲ್ಲ, ಆತ್ಮದಲ್ಲೇ ಇರಬೇಕು ಕನ್ನಡ!*
    ಪ್ರಕಾಶ್ ರೈ ಅತ್ಯದ್ಭುತ ನಟ ನಿಜ. ಕನ್ನಡ ಸಾಹಿತ್ಯವನ್ನ ಅಪಾರವಾಗಿ ಓದಿಕೊಂಡಿದ್ದಾರೆ. ಸಾಹಿತಿಗಳ ಒಡನಾಟವೂ ಅವರಿಗಿದೆ. ಪಡಬಾರದ ಕಷ್ಟಗಳನ್ನೆಲ್ಲಾ ಪಟ್ಟು, ಶ್ರಮ-ಪ್ರತಿಭೆಯಿಂದ ಮೇಲೇರಿದ್ದಾರೆ. ಹಾಗೆಂದ ಮಾತ್ರಕ್ಕೆ ಸಾಧನೆ-ದುಡ್ಡು ಇದ್ದಕಡೆ ಅಹಂ ಇರಲೇಬೇಕಾ?
    ಬಹುಶಃ ಪ್ರಕಾಶ್ ರೈ ತಮಗಿರುವ ಬೆಲೆಯನ್ನು ತಾವೇ ತಿಳಿದಂತೆ ಕಾಣುವುದಿಲ್ಲ. ತಾವು ಲಂಕೇಶರಂಥ ಮೇರು ಪತ್ರಕರ್ತರ ಪ್ರಭಾವಕ್ಕೊಳಗಾದವನು ಎಂದೆಲ್ಲಾ ಹೇಳಿಕೊಳ್ಳುವ ಪ್ರಕಾಶ್ ರೈ ಅವರ ವ್ಯಕ್ತಿತ್ವದ ಬಗ್ಗೆ ಕನ್ನಡದ ಸಿನಿಮಾ ಪತ್ರಕರ್ತರಲ್ಲೇ ಕೆಲವೊಂದು ತಕರಾರುಗಳಿವೆ.
    ಪ್ರಕಾಶ್ ರೈ ಕನ್ನಡ ಮೀಡಿಯಾ ಕೈಗೆ ಸಿಗುವುದು ಅವರ ಯಾವುದಾದರೂ ಸಿನಿಮಾ ರಿಲೀಸಿನ ಟೈಮಲ್ಲಿ ಮಾತ್ರ. ಈ ಆರು ವರ್ಷಗಳಲ್ಲಿ ಮೂರು ಕನ್ನಡ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಆದರೆ ಆ ಮೂರೂ ಸಿನಿಮಾಗಳು ರಿಮೇಕು. ಕೆಲವೊಂದು ಸಬ್ಜೆಕ್ಟುಗಳು ಕನ್ನಡಕ್ಕೆ ಬಂದರೆ ಚೆಂದ ಅಂತನಿಸಿರುತ್ತೆ. ಅಂಥಾ ಕಥೆಗಳನ್ನು ಇಲ್ಲಿಗೆ ತಕ್ಕಂತೆ ಮಾಡಿದ್ದಾರೆ ಅನ್ನೋದನ್ನು ಒಪ್ಪಬಹುದು. ಆದರೆ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಮಾತ್ರ ಮಾಧ್ಯಮದವರ ಮುಂದೆ ಹಾಜರಾಗಿ ತಮ್ಮ ಸಿನಿಮಾ ಕುರಿತು ಪ್ರಚಾರ ಪಡೆಯುತ್ತಾರೆ. ಪ್ರಕಾಶ್ ರೈ ಅವರ ಮೇಲಿನ ಅಭಿಮಾನ, ಪ್ರೀತಿಯಿಂದಾಗಿ ಅನೇಕ ಪತ್ರಿಕೆಗಳು, ವಾಹಿನಿಗಳು ಅವರ ಮತ್ತು ಅವರ ಸಿನಿಮಾದ ಕುರಿತಾಗಿ ಸಾಕಷ್ಟು ವರದಿ ಮಾಡುತ್ತವೆ. ಪ್ರಕಾಶ್ ರೈ ಅವರನ್ನು `ನಮ್ಮವರು’ ಅಂತಾ ನಮ್ಮ ಮಾಧ್ಯಮಗಳೂ ತಲೆ ಮೇಲೆ ಹೊತ್ತು ತಿರುಗುವುದರಿಂದ ಹುಡುಕಿಕೊಂಡು ಹೋಗಿ ಪ್ರಚಾರ ಕೊಡೋ ದೊಡ್ಡ ಗುಣವನ್ನು ತೋರುತ್ತಲೇ ಬಂದಿವೆ.
    ಆದರೆ… ಸಿನಿಮಾ ಹೊರತಾಗಿ ಪ್ರಕಾಶ್ ರೈ ಕನ್ನಡಿಗರ ಯಾವ ಹೋರಾಟಕ್ಕೆ ಸ್ಪಂದಿಸಿದ್ದಾರೆ? ಮಹದಾಯಿ ಹೋರಾಟದಲ್ಲಿ ಭಾಗವಹಿಸಿದ್ದಾರಾ? ಎಂದಾದರೂ ಕಾವೇರಿ ಸಮಸ್ಯೆಯ ಕುರಿತು ಬಯ್ತೆರೆದಿದ್ದಾರಾ? ದಲಿತ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ಎಂದಾದರೂ ಖಂಡಿಸಿದ್ದಾರಾ? “ನಾನೊಬ್ಬ ನಟ. ರಾಜಕಾರಣಿಯಲ್ಲ” ಅಂಥಾ ಹೇಳಿ ಇವರು ಸಲೀಸಾಗಿ ಜಾರಿಕೊಳ್ಳುವ ಪ್ರಯತ್ನ ಮಾಡಬಹುದು. ಆದರೆ ತಾವೊಬ್ಬ ಸಾಂಸ್ಕೃತಿಕ ರಾಯಭಾರಿ ಅನ್ನೋದು ಪ್ರಕಾಶ್ ರೈಗೆ ಗೊತ್ತಿಲ್ಲವಾ?
    `ನಾನು ಕನ್ನಡಿಗ’ ಎಂದು ಹೇಳಿಕೊಳ್ಳುವ ಪ್ರಕಾಶ್ ರೈ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರೋ ವ್ಯಕ್ತಿ. ಆದರೆ ಇವರ ಬಹುಪಾಲು ಆಸ್ತಿ ಇರೋದು ತಮಿಳುನಾಡಿನಲ್ಲಿ. ಇಲ್ಲಿ ಕಾವೇರಿ ಪರವಾಗಿ ಒಂದು ಹೇಳಿಕೆ ಕೊಟ್ಟರೆ ಮಹಾಬಲಿಪುರಂನಲ್ಲಿರುವ ತಮ್ಮ ಮನೆಯನ್ನು ತಮಿಳರು ಧ್ವಂಸ ಮಾಡುತ್ತಾರೆ ಅನ್ನೋ ಭಯ ಬಹುಶಃ ಪ್ರಕಾಶ್ ರೈ ಅವರಿಗಿರಬಹುದು. ತಮ್ಮ ನಟನೆಯಿಂದ ಅಗಣಿತ ಅಭಿಮಾನಿಗಳನ್ನು ಹೊಂದಿರುವ, ಯಾವುದೇ ಭಾಷೆಯ ಚಿತ್ರರಂಗದಲ್ಲಿ ಹೆಸರು ಮಾಡಿರುವ ಪ್ರಕಾಶ್ ರೈ ಆ ಎಲ್ಲ ಕಡೆ ತಮ್ಮ ಅಹಮ್ಮು, ಗರ್ವಗಳಿಂದ ಹೀನಾಮಾನ ತೆಗಳಿಕೆಗೆ ಪಾತ್ರರಾದವರು. ಪದೇಪದೇ ಆಂಧ್ರ ಮತ್ತು ತಮಿಳು ಚಿತ್ರರಂಗದಲ್ಲಿ ಬ್ಯಾನ್ ಆದವರು. ಇವರ ಸಾಧನೆ ಎಷ್ಟಿದೆಯೋ ಹುಳುಕೂ ಅಷ್ಟೇ ಪ್ರಮಾಣದಲ್ಲಿದೆ!
    ಮೊನ್ನೆ ನಡೆದ ಜನಶ್ರೀ ವಾಹಿನಿಯ ವಿಚಾರಕ್ಕೆ ಬಂದರೆ, ವಾಹಿನಿಯ ನಿರೂಪಕಿ `ನಿಮ್ಮ ಮೊದಲನೇ ಹೆಂಡತಿಗೆ ಯಾಕೆ ಡಿವೋರ್ಸ್ ಕೊಟ್ರಿ? ಎರಡನೇ ಪತ್ನಿ ಪೋನಿ ವರ್ಮಾ ಹೇಗೆ ನಿಮಗೆ ತಗಲಾಕಿಕೊಂಡದ್ದು?’ ಎಂಬಿತ್ಯಾದಿಯಾಗಿ ಖಾಸಗೀ ಪ್ರಶ್ನೆಯನ್ನೇನಾದರೂ ಕೇಳಿದ್ದ ಪಕ್ಷದಲ್ಲಿ, ರೈ ಮೈಕು ಕಿತ್ತು, ಮೈಕೊಡವಿಕೊಂಡು ಎದ್ದೋಡಿ ಹೋಗಿದ್ದರೆ ಯಾರೂ ಪ್ರಶ್ನಿಸುತ್ತಿರಲಿಲ್ಲ. ಯಾಕೆಂದರೆ ಅದು ಅವರ ಪರ್ಸನಲ್ ಲೈಫು. ಆದರೆ ಒಂದು ರಾಜ್ಯದ ಜನರ ಬದುಕಾಗಿರುವ, ಈ ನಾಡು ಕಂಡ ಅತ್ಯಂತ ದೊಡ್ಡ ಸಮಸ್ಯೆಯೊಂದರ ಕುರಿತು ಪ್ರಶ್ನೆ ಕೇಳಿದರೆ, ಹಾಗಾ ಮುನಿಸಿಕೊಳ್ಳೋದು? ಕಡೆಗೆ, ಇಷ್ಟೆಲ್ಲಾ ಆದಮೇಲೆ ಅನಂತ್ ಚಿನಿವಾರ್, ಬಿ.ಕೆ.ಶಿವರಾಂ ರಂಥವರು ಕೂತು ನೇರಾನೇರ ಪ್ರಶ್ನೆ ಕೇಳಿದಾಗ ರೈ ಉತ್ತ್ತರಿಸಿದ ರೀತಿ ನೋಡಿದಿರಾ? ಬರೀ ಸೆಗಣಿ ಸಾರಿಸುವ ಮಾತುಗಳನ್ನಷ್ಟೇ ಆಡಿದರೇ ಹೊರತು ಉತ್ತರದಲ್ಲಿ ಕೂಡಾ ನಯಾಪೈಸೆಯ ಪ್ರಾಮಾಣಿಕತೆ ಕಾಣಲಿಲ್ಲ. `ತಾನೊಬ್ಬ ವ್ಯಾಪಾರಿ, ಈಗ ನನ್ನದು ವ್ಯಾಪಾರದ ಸಮಯ. ವಹಿವಾಟು ಮುಗಿಸಿ ಹೊರಡೋದಷ್ಟೇ ನನ್ನ ಕೆಲಸ’ ಎನ್ನುವಂತಿತ್ತು ಅವರ ವರ್ತನೆ!
    ಪ್ರಕಾಶ್ ರೈ ಥರದ ನಟರು ಬಯಸೋದೇನೆಂದರೆ, ತಮ್ಮ ಆತ್ಮಕ್ಕೆ ಖುಷಿ ಕೊಡುವ ಪ್ರಶ್ನೆಗಳನ್ನು ಮಾತ್ರ ಮಾಧ್ಯಮದವರು ಕೇಳಬೇಕು ಅನ್ನೋದು. ಯಾಕೆಂದರೆ, ತಾವೇ ಅರೇಂಜ್ ಮಾಡಿಕೊಂಡ ಸಭೆಗಳಲ್ಲಿ ಪರಾಕು ಹಾಕುವ ಪತ್ರಕರ್ತರ ನಡುವೆ ಕೂತು ಮಾತಾಡಿ, ತಮ್ಮಿಚ್ಚೆಯ ಬರಹಗಳನ್ನು ಪಬ್ಲಿಷ್ ಮಾಡಿಸಿಕೊಳ್ಳುವುದು ರೈ ಅವರಿಗೆ ಅಭ್ಯಾಸವಾಗಿದೆ. ತಾವು ಹೇಳಿದ್ದಕ್ಕೆಲ್ಲಾ `ವಾಹ್ ವಾಹ್’ ಎನ್ನುತ್ತಾ `ಭಲ್ಲೇ ಭಲ್ಲೇ’ ಡ್ಯಾನ್ಸು ಮಾಡೋದಕ್ಕೆ ಎಲ್ಲರಿಂದಲೂ ಸಾಧ್ಯವಿಲ್ಲ. ನಿಮ್ಮನ್ನು ಹೊಗಳೋದಕ್ಕೆಂದೇ ಇರುವ ಸಿಂಡಿಕೇಟುಗಳ ಹೊರತಾಗಿಯೂ ಇಲ್ಲಿ ಮಾಧ್ಯಮವೆನ್ನುವುದು ಜೀವಂತವಾಗಿದೆ ರೈ ಅವರೇ…

    ಪ್ರತ್ಯುತ್ತರಅಳಿಸಿ