ಭಾನುವಾರ, ಅಕ್ಟೋಬರ್ 23, 2016
ಸವಾಲ್ ಗೆ ಜವಾಬ್ ಕೊಟ್ಟ ನ್ಯೂಸ್ ಚಾನೆಲ್ ಗಳು ! ಎಲ್ಲಿ ಯಶ್ ?ತಮ್ಮ ಬಿಸಿ ರಕ್ತದ ಪವರ್ ಇಷ್ಟೇನಾ ಯಶ್ ?!
ರಾಕಿಂಗ್ ಸ್ಟಾರ್ ಯಶ್ ಕನ್ನಡ ನಿನಿಮಾ ರಂಗದಲ್ಲಿ ಇತ್ತೀಚಿಗೆ (2007-08) ಕೇಳಿಬರುತ್ತಿರುವ ಹೆಸರು ಕಿರುತೆರೆ ಯಿಂದ ಹಿರಿ ತೆರೆಗೆ (ಬೆಳ್ಳಿ ತೆರೆಗೆ ) ನೇರವಾಗಿ ಬಡ್ತಿ ಪಡೆದು ಪಯಣವನ್ನು ಬೆಳಸಿದ ಯಶ್ ಮೊದಲ ಸಿನಿಮಾ 2007 ರಲ್ಲಿ ತೆರೆ ಕಂಡ “ಜಂಬದ ಹುಡುಗಿ”. ಮೊದಲ ಸಿನಿಮಾ ಆದರೂ ಅದು ಹೇಳ ಹೆಸರಿಲ್ಲದಂತೆ ನೆಲಕಚ್ಚಿತ್ತು ನಂತರ 2008 ರಲ್ಲಿ ತೆರಕಂಡ ಮೊಗ್ಗಿನ ಮನಸ್ಸು ಸಿನಿಮಾ ಗಾಂಧೀ ನಗರದಲ್ಲಿ ಕೊಂಚ ಸದ್ದು ಮಾಡಿದ್ದಲ್ಲದೇ ಹೆಸರು ಜೊತೆಗೆ ಉತ್ತಮ ಅಭಿನಯಕ್ಕೆ ಪ್ರಶಸ್ತಿಯನ್ನು ಅರಸಿಕೊಂಡು ಬಂದಿತ್ತು . ಇದರ ಮೂಲಕವೇ ಯಶಸ್ಸು ಕಂಡ ನಟ ಯಶ್ ತಂದ ನಂತರ ತಮ್ಮ ನಟನೆಯ ಬೆರಳಣಿಕೆಯ ಸಿನಿಮಾಗಳಲ್ಲಿ ಒಂದಷ್ಟು ಗಲ್ಲಪೆಟ್ಟಿಗೆಯಲ್ಲಿ ಹೆಸರ ಮಾಡಿದ್ದು ಸತ್ಯ. ಇಂತಿಪ್ಪ ಯಶ್ ಸಿನಿಮಾತ್ತೆರವಾಗಿಯೂ ಕಡಿಮೆ ಸಮಯದಲ್ಲೇ ಸಾಕಷ್ಟು ಕಾಂಟ್ವರ್ಸಿಯನ್ನು ಕ್ರೀಯೇಟ್ ಮಾಡಿದ ಮಹಾನುಭಾವನೂ ಹೌದು!. ತಮ್ಮ ಸಮಕಾಲೀನ ನಟರುಗಳ ವಿರುದ್ದ ತನ್ನ ಅಸಮಾಧಾನದ ಹೊ(ಹ)ಗೆಯನ್ನು ಹೊರ ಹಾಕಿದ್ದ ಯಶ್ ನಂತರ ವಿವಿಧ ಹೋರಾಟಗಳಿಗೆ ತಾನೂ ಸೈ ಎಂದು ಎಲ್ಲಿ ಏನೇ ನಡೆದರೂ ಎಲ್ಲರಿಗಿಂತ ಒಂದು ಸ್ಟೆಪ್ ಮುಂದೆ ಹೋಗಿ ಪ್ರತಿಭಟನಾ ನಿರತನಾಗಿ ಅಣ್ತಮ್ಮ ಎನ್ನುತ್ತಾ ಜನ ಮಾನಸದಲ್ಲಿ ಮಾಸ್ತರ್ ಪೀಸ್ ಎಂದು ಗುರುತಿಸಿಕೊಂಡಿದ್ದು ಎಲ್ಲರಿಗೂ ಗೊತ್ತಿರುವುವಂತ್ತದ್ದೆ!
ಯಶಸ್ಸು ಸಿಕ್ಕ ಯಶ್ ಜೊತೆಗೆ ನಟಿ ರಾಧಿಕಾಳ ಪಂಡಿತ್ ಮೊದಲ ಸಿನಿಮಾ ಮೊಗ್ಗಿನ ಮನಸ್ಸು. ಈ ಜೋಡಿಗಳು ಕೆಲವು ಸಿನಿಮಾಗಳಲ್ಲಿ ಕಪಲ್ಸ್ ಗಳಾಗಿ ಗುರುತಿಸಿ ಜೋಡಿ ಹಕ್ಕಿಗಳು ಎಂದು ಜನಪ್ರಿಯತೆ ಗೊಂಡಿದ್ದವು . ಇತ್ತೀಚಿಗಷ್ಟೇ ಮಿಷ್ಟ್ರ್ ಅಂಡ್ ಮಿಸೆಸ್ ರಾಮಾಚಾರಿ ನಿಶ್ಚಿತಾರ್ಥ ವಾಗಿ ಪಬ್ಲಿಕ್ಸಿಟಿ ಪಡೆದು ಅದರಲ್ಲೂ ಕರ್ನಾಟಕ ಬಿಟ್ಟು ಗೋವಾಕ್ಕೆ ಹೋಗಿ ಉಂಗುರ ಬದಲಾಯಿಸುವ ಅವಶ್ಯಕತೆ ಏನಿತ್ತು ಎಂದು ಸ್ವತ: ಆತನ ಅಭಿಮಾನಿಗಳೂ ಕೂಡಾ ದಂಗೆಗೆ ಎದ್ದಿದ್ದು ಹಳೆ ವಿಷಯ ! ಕಾವೇರಿ ವಿವಾದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು,ಮಹಾದಾಯಿ ವಿಚಾರದಲ್ಲೂ ಕೂಡಾ ಉಪಸ್ತಿತಿ ತೋರ್ಪಡಿಸಿದ್ದು ಎಲ್ಲಾವನ್ನೂ ನೆನಪಿಸಬಹುದು. ಕಾವೇರಿ ವಿವಾದ ಉತ್ತುಂಗಕ್ಕೆ ಏರುತ್ತಿದ್ದ ಸಂದರ್ಭ ,ಸಿನಿಮಾ ಶೂಟಿಂಗ್ ಅಂತ ವಿದೇಶ ಪ್ರಯಾಣದಲ್ಲಿದ್ದಾಗಲೂ ತಾವೇ ಸ್ವತ :ವೀಡಿಯೊ ಮೂಲಕವೇ ಡೈಲಾಗ್ (ನಿನಿಮಾ ) ಡೆಲಿವೆರಿ ಮಾಡುತ್ತಾ ಇದ್ದ ಯಶ್ ಬಗ್ಗೆ ಕೆಲವೊಂದು ಊಹಾ ಪೋಹಾ ಹೊರ ಬೀಳುತ್ತಿತ್ತು .. ಸ್ವಾಮೀ ಕಾರ್ಯದ ಜೊತೆ ಸ್ವ ಕಾರ್ಯವನ್ನು ಮಾಡಿ ಕೊಳ್ಳುವುದು ಅಂತಾರಲ್ಲ ಹಾಗೆ ! “ಈತ ಕೆಲವ ತಮ್ಮ ಸಿನಿಮಾದ ಕಾಂಟ್ವರ್ಸಿ ಗಾಗಿ ಹೀಗೆಲ್ಲಾ ಆಡುತ್ತಿದ್ದಾನೆ “ ಅಂತಾ ಪ್ರಜ್ಞಾವಂತರ ಆಡು ನುಡಿ ಹೊರಬಿಳಲಿಕ್ಕೆ ಪ್ರಾರಂಭವಾಯ್ತೋ ಆಗ ಕೆಲವು ಟಿವಿ ಚಾನೆಲ್ ಗಳು ಡೈರೆಕ್ಟ್ ಆಗಿ ಯಶ್ ನದ್ದು ಮೊಸಳೆ ಕಣ್ಣೀರು ಎಂಬಂತೆ ಅತೀರೇಕವಾಗಿ ರಂಜಿಸಿ ನ್ಯೂಸ್ ಮಾಡೇ ಬಿಟ್ಟವು.
ಅದರಲ್ಲೂ ಪಬ್ಲಿಕ್ ಟಿವಿ ಮುಂಚೂಣಿಯಲ್ಲಿತ್ತು ಇದರಿಂದ ಕುಪಿತ ಕೊಂಡ ಯಶ್ ನ ಬಿಸಿ ರಕ್ತ ಸೆಂಟಿ ಗ್ರೇಡ್ ದಾಟಿ ಹೋಗಿತ್ತು .. ಅದರಲ್ಲೂ ಕೆಲವೊಂದು ಗೂಗ್ಲಿ ವಿಷಯಗಳನ್ನು ತನ್ನ ಮೈ ಮೇಲೆ ವಿನಾ ಕಾರಣ ಹಾಕಿ ಕೊಳ್ಳುವುದರಲ್ಲಿ ನಿಸ್ಸಿಮನಾಗಿದ್ದ ಯಶ್ ಸಿಕ್ಕಿದ್ದೆ ಚಾನ್ಸ್ ಎನ್ನುತ್ತಾ ಎಲ್ಲೋ ಕುಳಿತು ರಾಜಾ ಹುಲಿಯಂತೆ ಘರ್ಜಿಸ ತೊಡಗಿದ
ನಿನಿಮಾದ ಡೈಲಾಗ್ ತರಹ ನ್ಯೂಸ್ ಚಾನೆಲ್ ಗಳಿಗೆ ಬಹಿರಂಗ ಸವಾಲ್ ಹಾಕ್ತಾನೆ !.. “ರೈತರಿಗೆ ಸಂಬಂದದಪಟ್ಟ ಕಾರ್ಯಕ್ರಮ ಮಾಡಿ ಅವರುಗಳ ಕಷ್ಟ ಕಾರ್ಪಣ್ಯ ನೆಲ ಜಲದ ವಿಚಾರ ಪ್ರೈಮ್ ಟೈಮ್ ನಲ್ಲಿ ನಡೆಯಬೇಕು ಅವರುಗಳ ಪರವಾಗಿ ಜಾಹೀರಾತು ದಿನವೀಡಿ ಪ್ರಸಾರವಾಗ ಬೇಕು ಈ ಸವಾಲ್ ಗೆ ಸೈ ಅಂದ್ರೆ ನಾನು ಯಾವುದೇ ಸಮಯದಲ್ಲಿ ಯಾದರೂ ಯವೋದೇ ಚಾನಲ್ ನಲ್ಲಿಯಾದರೂ ಪಾಲ್ಗೊಳ್ಳಲು ಶತ ಸಿದ್ದ” ಎಂದು ಇದ್ದ ವಿಡಿಯೋ ಸಂದೇಶವನ್ನು ನ್ಯೂಸ್ ಚಾನೆಲ್ ಒಪ್ಪಿದವು ಅವರುಗಳಿಗೆ ಬೇಕಾದದ್ದು ಅದೇ ! ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು !.
ಸೇರಿಗೆ ಸಾವ್ವಾ ಸೇರು :ಬಿಡ್ತಾವೆಯೇ ಟಿವಿ ಚಾನೆಲ್ ಗಳು ! ಈತನ ಸವಾಲ್ ಗೆ ಜವಾಬ್ ಕೊಡಲಿಕ್ಕೆ ಟೊಂಕ ಕಟ್ಟಿ ನಿಂತ್ತಿದ್ದು ಪಬ್ಲಿಕ್ ಟಿವಿ ಮತ್ತು ಪ್ರಜಾ ಟಿವಿ ! ವೇದಿಕೆ ಸಿದ್ದವಾಯಿತು ಬಗೆ ಬಗೆ ಟಿವಿ ಪ್ರೊಮೊಗಳು ದಿನವೀಡೀ ಟಿವಿ ಪರದೆ ಮೇಲೆ ಅಲ್ಲದೇ ಸೋಶಿಯಲ್ ನೆಟ್ವರ್ಕ್ ಗಳ ಮೂಲಕ ಹರಿದಾಡಿದವು. ಯಶ್ ಕಾದಿತ್ತು ಮಾರಿ ಹಬ್ಬ :ಹಬ್ಬ ತಪ್ಪಿದ್ದರೂ ಹೋಳಿಗೆ ತಪ್ಪಲ್ಲ !!
ಹೋಗಿ ಹೋಗಿ ನ್ಯೂಸ್ ಚಾನೆಲ್ ಗಳ ವಿರುದ್ದ ತೊಡೆ ತಟ್ಟುವುದೇ ? ನಿನಿಮಾ ರೀಲ್ , ನ್ಯೂಸ್ ರಿಯಲ್ !ಅರ್ಥೈಸಿ ಕೊಳ್ಳದೇ
ಸುಮ್ನೆ ಒಂದೆಡೆ ತಮ್ಮ ಕೆಲಸ ಕಂಡು ಕಣ್ಣು ಕೂರೂದು ಬಿಟ್ಟೂ ಅಧಿಕ ಪ್ರಸಂಗ ಮಾಡಲು ಹೋದ ಯಶ್ ಕೊಲು ಕೊಟ್ಟು ಪೆಟ್ಟು ತಿಂದ ಅವಸ್ತೆಗೆ ಜಾರಿ ಬಿಟ್ಟಿದ್ದ . ಪ್ರೊಗ್ರಾಮ್ ಶುರು ಆದರೂ ಸ್ಟುಡಿಯೋದೊಳಗೆ ಯಶ್ ನಾಪತ್ತೆ ! ಟಿವಿಯವರ ಫೋನ್ ಕಾಲ್ ಗೆ ಇನ್ನೊಂದು ರೀತಿಯ ಡೈಲಾಗ್ ಗಳ ಸುರಿಮಳೆ !
ಬೇಕಿತ್ತಾ ಇದೆಲ್ಲಾ ,? ಏನೇ ಇರಲಿ ಮುಂದೇನು ಕಾದು ನೋಡೋಣ ! ಎಂಜಾಯ್ ಮಾಡೋಣ !ಒಟ್ಟಾರೆ ಸೆಲೆಬ್ರಿಟಿ ಗಳು ಹೇಗೆ ಮಾಡಿದ್ದರೂ ಚೆಂದ ಅಲ್ವೇ ಅದನ್ನೆಲ್ಲಾ ವಿಮರ್ಶೆ ಮಾಡುವ ನಾವುಗಳು ಮಾತ್ರ ಇಂಗು ತಿಂದ ಮಂಗಗಳು ಅಷ್ಟೇ ! ಏನಂತೀರಿ ? ನನ್ನ ಓಡಲಧ್ವನಿಯ ಇದು -ಕೊನೆಯದಾಗಿ ಕಟ್ಟ ಕಡೆಯಲ್ಲಿ ಮೂಡುವುದು ಒಂದೇ ಪ್ರಶ್ನೆ “ತಮ್ಮ ಬಿಸಿ ರಕ್ತದ ಪವರ್ ಇಷ್ಟೇನಾ ಯಶ್ ?!”
ಶನಿವಾರ, ಅಕ್ಟೋಬರ್ 8, 2016
ತನ್ನ ತಲೆಯ ಮೇಲೆಯೇ ಚಪ್ಪಡಿ ಕಲ್ಲು ಹಾಕಿ ಕೊಂಡ್ರಾ ಪ್ರಕಾಶ್ ರೈ !
ಬಹು ಬಾಷಾ ಕಲಾವಿದ ಪ್ರಕಾಶ್ ರೈಯ “ಇದು ಒಳ್ಳೆ ರಾಮಾಯಣ” ನಿನಿಮಾದ ಪ್ರೊಮೋಷನ್ ನ ವಿಶೇಷ ರೆಕಾರ್ಡಿಂಗ್ ಕಾರ್ಯಕ್ರಮದ ಸಲುವಾಗಿ ಕನ್ನಡದ ಸುದ್ದಿ ವಾಹಿನಿಗಳ ಪೈಕಿ ಜನಶ್ರಿ ಸುದ್ದಿ ವಾಹಿನಿ ತಂಡದವರು ಅವರ ನಿವಾಸಕ್ಕೆ ತೆರಳಿದ್ದರು .ಕಾರ್ಯಕ್ರಮದ ಬಗೆಗಿನ ಪ್ರಶ್ನೆಗಳನ್ನೆಲ್ಲಾ ಕೇಳಿ ,ಇನ್ನೇನು ಕಾರ್ಯಕ್ರಮ ಮುಗಿಯುವ ಹಂತ ಬರುತ್ತಿದಂತೆ,ನಿರೂಪಕಿ ಕಾವೇರಿ ವಿವಾದಕ್ಕೆ ಸಂಬಂದಪಟ್ಟ ಒಂದು ಪ್ರಶ್ನೆಯನ್ನು ಕೇಳುತ್ತಾರೆ .ಪ್ರಶ್ನೆಯನ್ನು ಕೂಲ್ ಆಗಿ ನಿರೂಪಕಿ ಕೇಳುತ್ತಿದಂತೆ ಮೈ ಮೇಲೆ ಬೂತ ಬಂದವರ ರೀತಿಯಲ್ಲಿ ನಡತೆಯನ್ನು ಪ್ರದರ್ಶಿಸುತ್ತಾ ಪ್ರಕಾಶ್ ರೈ ,ಸಿನಿಮಾ ವಿಚಾರಕ್ಕೆ ಸಂಬoದಿಸಿದ ಈ ಕಾರ್ಯಕ್ರಮದಲ್ಲಿ ರಾಜಕೀಯದ ಪ್ರಶ್ನೆಯನ್ನು ಕೇಳ್ವುದು ತರವಲ್ಲ. ನಾನೇನು ತಪ್ಪು ಮಾಡಿದ್ದೆ .ಅದೂ ಇದೂ ಎಂದು ಇಲ್ಲ ಸಲ್ಲದ ವಿಚಾರವನ್ನು ಹಿಡಿದು ಅನಗತ್ಯವಾಗಿ ಎಗರಾಡಿ ಶರ್ಟ್ ಗೆ ಅಳವಡಿಸಿದ್ದ ಮೈಕ್ ತೆಗೆದು ಇನ್ನೂ ಯಾವೊತ್ತೂ ಬರಬೇಡಿ ಎಂದು ಷೋ ನಿಂದ ಹೊರೆಗೆ ನಡೆದೇ ಬಿಟ್ಟರು!!!
https://www.youtube.com/watch?v=_FbRSsXwfjU
ಆ ಪ್ರಶ್ನೆ ಇಲ್ಲಿ ಕೇಳಿದ್ದು ಸ್ವಲ್ಪ ಮಟ್ಟಿಗೆ ಸರಿಯಲ್ಲದೇ ಇದ್ದರೂ, ಪ್ರಸ್ತುತ ವಿಧ್ಯಮಾನಕ್ಕೆ ಅನುಗುಣವಾಗಿ ಕೇಳಿದ್ದರಲ್ಲಿ ತಪ್ಪಿಲ್ಲ . ಕಾವೇರಿಯ ವಿಚಾರದಲ್ಲಿ ಕನ್ನಡದ ಕೆಲವು ಸಿನಿಮಾ ಕಲಾವಿದರು ಹಾಗೂ ತಮಿಳು ಚಿತ್ರರಂಗದ ತಾರೆಯರೂ, ಸಹಾ ಕಾವೇರಿ ಕಳಾಕಳಿ ಯಲ್ಲಿ ಒಂದಿಷ್ಟು ಪರ ವಿರೋಧದ ಅಲೆಯಲ್ಲಿ ಪ್ರತಿಭಟನೆಗೆ ಇಳಿದದ್ದು ಎಲ್ಲರಿಗೂ ಗೊತ್ತೇ ಇರದ ವಿಚಾರವೆನಲ್ಲಾ .ತಾರೆಯರ ಬೆಂಬಲದಲ್ಲಿ ಪ್ರಕಾಶ್ ರೈ ಎರಡೂ ಚಿತ್ರರಂಗದ ಕಡೆಯಿಂದ ತಮ್ಮನ್ನು ತೋರ್ಪಡಿಸಿಕೊಳ್ಳ ದೇ ಇರುವುದು ಸಾಮಾನ್ಯ ವಾಗಿ ಎಲ್ಲರಲ್ಲೂ ಕುತೂಹಲ ಇದ್ದೇ ಇರುತ್ತೆ . ಬಹುಬಷಾ ನಟನಾಗಿ ,ಅದರಲ್ಲೂ ಕನ್ನಡಿಗನಾಗಿ ,ಕನ್ನಡದ ಹಲವು ಸಿನಿಮಾಗಳಲ್ಲಿ ಅಭಿನಯಿಸಿ ,ನಿರ್ದೇಶಿಸಿ, ನಿರ್ಮಾಪಿಸಿ , ಪ್ರಸಿದ್ದಿ ಪಡೆದವರು ಹಾಗಂತ ತಮಿಳು ನಾಡಿನಲ್ಲೂ ಚಿರಪರಿಚತ ವ್ಯಕ್ತಿಯೇ. ತಮಿಳು ಚಿತ್ರರಂಗದಲ್ಲೂ ಸಹಾ ಅಷ್ಟೇ ಜನಪ್ರಿಯತೆಯನ್ನು ಪಡೆದಿದ್ದವರು.ಉಭಯ ಚಿತ್ರರಂಗದ ತಾರೆಯರು ಕಾವೇರಿ ವಿವಾದದಲ್ಲಿ ತಮ್ಮನ್ನು ತಾವು ತೊಡಗಿ ಕೊಂಡಿರುವುದರ ಮಧ್ಯೆ ಪ್ರಕಾಶ್ ರೈ ಯಾವುದಕ್ಕೂ, ಸಾಥ್ ನೀಡದೇ ಸೈಲೆಂಟ್ ಮೂಡಿಗೆ ತೆರಳಿರುವುದರ ಮರ್ಮದ ಬಗ್ಗೆ ಈ ಪ್ರಶ್ನೆಯನ್ನು ಕೇಳಿದ್ದರಲ್ಲಿ ಖಂಡಿತವಾಗಿಯೂ ತಪ್ಪಿರಲಿಲ್ಲ .ಒಂದೊಮ್ಮೆ ತಪ್ಪು ಇತ್ತು ಏಣಿಸಿದರೆ, ಪ್ರಕಾಶ್ ರೈ ಪ್ರಶ್ನೆಗೆ ಸಮಾಧಾನ ದಿಂದ ಸವಾಕಾಶ ವಾಗಿ ಉತ್ತರಿಸ ಬಹುದ್ದಿತ್ತು ಅದಿಲ್ಲವೆಂದಾರೆ ಈ ಪ್ರಶ್ನೆಯನ್ನು ಕೇಳಬೇಡಿ ಎಂದು ವಿನಂತಿಸಿ ಕೊಂಡು, ಕಾರ್ಯಕ್ರಮ ಪೂರ್ಣಗೊಳಿಸುವಲ್ಲಿ ನೆರವಾಗಬೇಕಿತ್ತು . ಆದರೆ ಪ್ರಕಾಶ್ ರೈ ಮಾಡಿದ್ದು ಘೋರ ಅಪರಾಧ. ಮಗುಚಿ ಬಿದ್ದರೂ ಮುಗು ಮಣ್ಣಾಗಲಿಲ್ಲ ಎನ್ನುವಂತೆ ವಾಹಿನಿಯ ವಿರುದ್ದವೇ ಕಿಡಿಕಾರಿದ್ದು ತಮ್ಮ ಅಭಿಮಾನಿಗಳು ಮೆಚ್ಚುವಂತದ್ದಲ್ಲ .. ಅದೇ ಆ ಪ್ರಶ್ನೆಗೆ ಸoಯಮ ,ಸಮಚಿತ್ತದಿಂದ ಉತ್ತರಿದ್ದರೆ ನೀವು ಇಂದು ನಿಜ ಜೀವನದಲ್ಲಿ ಹೀರೋ ಆಗ್ತಾ ಇದ್ದಿದ್ದರಿ. ಅಭಿಮಾನ ಇನ್ನಷ್ಟು ಉಕ್ಕಿ ಹರಿಯುತ್ತಿತ್ತು .ಸಭ್ಯ ನಾಗರಿಕರಂತೆ ವರ್ತಿಸುವ ನಿಮ್ಮ ನಡಾವಳಿಗಳನ್ನ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಾವು ಗಮನಿಸಿದ್ದೇವೆ . ಆದರೆ ಇಲ್ಲಿ ಮಾತ್ರ ನಿಜ ವಿಚಾರದಲ್ಲಿ ಅಸಭ್ಯತೆ ಮಿತಿ ಮೀರಿತ್ತು. ತಮ್ಮ ಸಿನಿಮಗಳಲ್ಲೇ ಗಮನಿಸಿದಂತೆ ನೀವು ಹೆಚ್ಚಾಗಿ ಜನಪ್ರಿಯತೆ ಗೊoಡದ್ದು ಗೂಂಡಾ !,ವಿಲನ್ ಪಾತ್ರದಲ್ಲಿ ಅಲ್ವೇ ? ಅದನ್ನೇ ಇಲ್ಲಿ ಸಾಬೀತು ಪಡಿಸಿದ್ದಿರಿ. ಒಂದು ಜವಬ್ದಾರಿಯುತ ಸುದ್ದಿ ವಾಹಿನಿ ತಮ್ಮ ಪರವಾಗಿಯೇ ತಮ್ಮ ಚಿತ್ರದ ವಿಚಾರ ಜಗಜಹೀರಾತು ಮಾಡುವಲ್ಲಿ ತಮ್ಮ ಮನೆ ಬಾಗಿಲು ತನಕ ಬಂದವರನ್ನು ಈ ರೀತಿ ಉದ್ದಟತನವನ್ನು ತೋರಿ , ಅವರಿಗೆ ಅವಮಾನ ಮಾಡಿದ ತಾವು ,ಈ ಮಟ್ಟಕ್ಕೆ ಬೆಳೆಯಲು ತಮ್ಮ ಚಿತ್ರದ ಬಗ್ಗೆ ಗಲ್ಲಿ -ಗಲ್ಲಿ ಗಳಲ್ಲಿ ತಲುಪಿಸಿ, ತಮ್ಮ ಹೆಸರು ಬಾನೆತ್ತರಕ್ಕೆ ಬೆಳೆಸಲು ಈ ಮೀಡಿಯಾಗಳೇ ಪ್ರಮುಖ ಕಾರಣ ಎಂದು ಮರೆಯಬೇಡಿ . ಈ ಅಸಭ್ಯೇತೆ ಯಿಂದ ನಿಜಕ್ಕೂ ತಾವು ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವುದೂ ಬಿಡಿ , ಇನ್ನು ಮುಂದೆ ತಮ್ಮ ಸಂದರ್ಶನಕ್ಕೆ ಬೇರೆ ಮೀಡಿಯಾಗಳು ಹಿಂದೆ ಮುಂದೆ ನೋಡುವ ಅಥವಾ ಬರಲೇ ಬಾರದೆಂಬ ತೀರ್ಮಾಕ್ಕೆ ಬಂದರೂ ಅಚ್ಚರಿಯಿಲ್ಲ !! ತನ್ನ ಕೈಯಾರೆ ತಮ್ಮ ತಲೆಯ ಮೇಲೆ ತಾವೇ ಚಪ್ಪಡಿ ಕಲ್ಲು ಹಾಕಿ ಕೊಂಡಿದ್ದ್ರಿ .. !! ತಾವೇನೋ ಈ ಮಟ್ಟಕ್ಕೆ ಬೆಳೆದಾಯ್ತು ಇನ್ಯಾಕೆ ಮೀಡಿಯಾ ಎಂದು ಆಲೋಚನೆ ಯನ್ನು ಬಿಡಿ . ದಡ ಸೇರಿದ ಮೇಲೆ ಅಂಬಿಗನ ಹಂಗ್ಯಾಕೆ ಎಂಬ ಭ್ರಮೆ ದೂರವಾಗಲಿ ಪುನಾ: ದಡ ಸೇರುವುದಕ್ಕೆ ಅಂಬಿಗ ಬೇಕೇ ಬೇಕು !!
https://www.youtube.com/watch?v=Ml0xPNgS938
ಇನ್ನು ಈ ವಿಚಾರ ಜನಶ್ರೀ ಟಿವಿಯ ಪ್ರಧಾನ ಸಂಪಾದಕರಾದ ಅನಂತ ಜೀನಿವಾರ್ ,ರೈ ನಡವಳಿಕೆ ಬಗ್ಗೆ ಮರುದಿನ ಬಹಿರಂಗ ಪಡಿಸಿದ್ದೆ ತಡಾ ,ಕೆಲವು ಅವರ ಅಭಿಮಾನಿಗಳು ರೈ ಮಾಡಿದ್ದೇ ಸರಿ ಎಂದು ವಿವಿಧ ಟ್ರೋಲ್ಲೆರ್ ಗಳ ಮೂಲಕ ಸೋಶಿಯಲ್ ನೆಟ್ವರ್ಕ್ ಗಳ ಮೂಲಕ ವಾಹಿನಿಯ ವಿರುದ್ದ ,ನಿರೂಪಕಿ, ಸಂಪಾದಕರ ವಿರುದ್ದ ಜರಿದಿದ್ದೆ ಜರಿದಿದ್ದು ! ಇವರಿಗೇನು ಗೊತ್ತು ಕೇವಲ ಸಿನಿಮಾದ ನಾಟಕೀಯತೆಗೆ ಮಾತ್ರ ಮನ ಸೋತವರು ಇವರುಗಳು . ಒಂದಿಷ್ಟು ಪ್ರಜ್ನತೆಯನ್ನು ಇಟ್ಟು ಕೊಂಡಿದ್ದರೆ ಅರ್ಥವಾಗುತ್ತಿತ್ತು. ರೀಲ್ ಆಚೆಗೆ ಬಂದು ರಿಯಲ್ ಆಗಿ ಏನು ಮಾಡಿದ್ದಾರೆ ಮಹಾನ್ ರೈ ಅವರು? ಇವರುಗಳಿಗೆ ಸಿನಿಮಾ ಹಿಟ್ ಆಗಬೇಕೆಂದರೆ ಟಿವಿ ಚಾನೆಲ್ ಗಳು ಬೇಕು.. ಸಿನಿಮಾ ಹಂಡ್ರೆದ್ ದಿನ ಒಡ್ಬೇಕೆಂದರೆ ಮೂಕ ಪ್ರೇಕ್ಷಕ ಜನತೆ ಬೇಕು . ಈ ಜನತೆಯ ಉದ್ದಾರಕ್ಕೆ ಏನು ಮಾಡಿದ್ದಾರೆ ತಾರೆ ಯರು ?? ಅದೇ ಜನತೆಗೆ ಮೂಲ ಭೂತ ಸೌಕರ್ಯ ಗಳಲ್ಲಿ ಒಂದಾದ ನೀರು ಕೊಡಲಿಕ್ಕೂ ಲಾಯಕ್ಕಲ್ಲದ ನಾಲಾಯಕ್ ಗಳು ನಮಗೆ ಬೇಕಾ? ಇವರ ಮನೆಯಿಂದ ಏನೂ ನಮಗೆ ನೀರು ಕೊಡೋದು ಬೇಡ ಅಟ್ ಲಿಸ್ಟ್ ಹೋರಾಟದಲ್ಲಿ ಬಾಗವಹಿಸಿದ ತಾರೆಯರ ಜೊತೆ ಏನೋ ಹರಕೆ –ಬಲಿ ಎಂದು ಭಾವಿಸಿ ,ಮೊಸಳೆ ಕಣ್ಣೀರು ಹಾಕಿ ಕೈ ತೊಳೆದು ಕೊಳ್ಳುವಲ್ಲಿ ಆಗುವ ಅಡ್ಡಿಯಾದರೂ ಏನು .. ? ಮೊನ್ನೆ ಮೊನ್ನೆ ನಮ್ಮ ಕನ್ನಡತಿ ನಾಯಕಿ ರಮ್ಯಾ ವಿಚಾರವನ್ನೇ ನೋಡಿ ಪಾಕಿಸ್ತಾನ ನರಕ ಅಲ್ಲ ಎಂದು ಹೇಳಿಯೇ ಬಿಟ್ಟಳು ದೇಶ ದ್ರೋಹಿಗಳು ಇವರಿಗೆಲ್ಲಾ ನಮ್ಮ ದೇಶ ಬೇಕಾ ?ರಾಜಕೀಯ ಗೋಸ್ಕರ ತಮ್ಮ ಶೀಲವನ್ನು ಕೊಡಲಿ ಆದರೆ ತಮ್ಮ ದೇಶವನ್ನಲ್ಲ ! ಪಾಕಿಸ್ತಾನ ನರಕ ಅಲ್ಲ ಎಂದು ಉಸುರಿದ್ದ ರಮ್ಯ ಗೆ ಯಾವುದೋ ಒಂದು ಕಾರ್ಯಕ್ರಮದಲ್ಲಿ ಸಿಕ್ಕಾಗ ಪಬ್ಲಿಕ್ ಟೀವಿಯ ಪ್ರತಿನಿಧಿ ಕೇಳಿದ್ದಕ್ಕೆ ಪಾಕಿಸ್ತಾನ ವಲ್ಲ ನಮ್ಮ ಮಂಗಳೂರು ನರಕ ಎಂದು ಎಷ್ಟೊಂದು ಲೀಲಾ ಜಾಲವಾಗಿ ಹೇಳಿಲ್ವಾ ? ಇಂಥಹ ನೀಚ ಮನಸ್ಥಿತಿಯನ್ನು ಅರಸಿ ಅರಹುವುದಕ್ಕೆ ಮಾಧ್ಯಮ ಬೇಕು !! ಮೊಟ್ಟೆ ಅಬಿಷೇಕ ಮಾಡಿಸ್ಲಿಕ್ಕೆ ಮಾಧ್ಯಮ ಬೇಕು . ಅದೇ ಈ ಪ್ರಕಾಶ್ ರೈ ವಿಚಾರದಲ್ಲೂ ಅಷ್ಟೇ ಅವರ ಮನದಿಂಗಿತವನ್ನು ಹೊರಹಾಕು ವಲ್ಲಿ ಪ್ರಯತ್ನಿಸಿದ ಜನಶ್ರೀ ವಾಹಿನಿದು ತಪ್ಪಿತ್ತೆ ? ಕೇವಲ ಪ್ರಕಾಶ್ ರೈ ಪರವಾಗಿ ಮಾತಾಡುವ ಅಭಿಮಾನಿಗಳೇ ಯೋಚಿಸಿ ತಮ್ಮ ಬುದ್ದಿಯನ್ನು ಖರ್ಚು ಮಾಡಿ .ಅಭಿಮಾನ ಅತಿಯಾಗದಿರಲಿ .ಅದನ್ನು ಬದಿಗಿಡಿ ಪ್ರಜ್ಞಾವಂತ ಸಮಾಜದಲ್ಲಿ ಗ್ರಹಿಕೆ ಸಾಮರ್ಥ್ಯ ಇರುವ ಪ್ರತಿಯೊಬ್ಬರೂ ಕೂಡಾ ಸತ್ಯಕ್ಕೆ ಬೆಂಬಲ ಕೊಡುತ್ತಾರೆ .
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)



