ಬುಧವಾರ, ಡಿಸೆಂಬರ್ 28, 2011

ಅಮೂಲ್ಯ ರ ವಿದಾಯದ ನಡೆ ಅಮೌಲ್ಯ .


ಅಮುಲ್ಯರ  ನಡೆ -ನುಡಿಯನ್ನು ಗಮನಿಸುತ್ತಿದ್ದರೆ  ಖಂಡಿತ ಬಹಳ ಬೇಸರ ವೆಸುತ್ತಿದೆ .ನಟಿಸಿದ್ದು ಬೆರಳನಿಕೇಯ ಚಿತ್ರವಾದರೂ ಚಿಕ್ಕ ವಯಸ್ಸಿನಲ್ಲಿ  ಅದರಲ್ಲೂ ಓದಿನ ನಡುವೆಯೂ ಸಿನಿಮ ಕ್ಷೇತ್ರಕ್ಕೆ ಕಾಲಿಟ್ಟೂ. ಚೆಲುವಿನ ಚಿತ್ತಾರದ ಎಸ್ .ನಾರಾಯಣ್ ನಿರ್ದೇಶನದ ಈ ಚಿತ್ರದಲ್ಲಿ ತನಗೆ ತಕ್ಕುದಾದ  ಪಾತ್ರವನ್ನು ನಿರ್ವಹಿಸಿ ಹಿಟ್ ಆದ ಚೆಲುವಿನ ಕಣಿ ಅಮೂಲ್ಯ ,ಇನ್ನು ಮುಂದೆಯೂ ಸಾಕಷ್ಟೂ ಚಿತ್ರದಲ್ಲಿ ಅಭಿನಹಿಸಿ ರಂಗದಲ್ಲಿ ತಳವೂರ ಬೇಕಿತ್ತು ,ಅವಕಾಶಗಳ ಸರಮಾಲೆ ಆಕ್ರಮಿಸುವ ಸನಿಹದಲ್ಲಿ ಹೀಗೆ ಒಂದು ಪುಟ್ಟ ವಿಚಾರಕ್ಕೆ ಚಿತ್ರರಂಗಕ್ಕೆ ವಿದಾಯ ಹೇಳಬಾರದಿತ್ತು ಅಷ್ಟಕ್ಕೂ ಇದು ವಿದಾಯ ಹೇಳುವಷ್ಟು ಕಠಿಣ ಸವಾಲ್ ಅಂತೂ ಅಲವೇ ಅಲ್ಲ .

ಸಿನಿಮ ರಂಗವೇ ಹಾಗೆ ಎಲ್ಲ ಕ್ಷೇತ್ರ ಗಳಿಗಿಂತ ಸ್ವಲ್ಪ ಹೆಚ್ಚೇ ಹೆಸರು ಉಳಿಯುದು ಹೌದು  ಅಳಿಯೂದು ಹೌದು ..ಈ ಕ್ಷೇತ್ರಕ್ಕೆ ಅವಕಾಶಕ್ಕಾಗಿ ಹೆಚ್ಚಿನ ಜನ ಬಹಳಷ್ಟು ಕಸರತ್ತು ಗಳನ್ನೂ ಮಾಡುತ್ತಾರೆ .ಚಿತ್ರದಲ್ಲಿ ನಟಿಸಬೇಕು ಎಂಬ ಬಯಕೆ ಒಬ್ಬ್ಬರಲಿದ್ದರೆ ,ಕೆಲವರಿಗೆ ಹವ್ಯಾಸ ,ಇನ್ನು ಕೆಲವರಿಗೆ ಹೆಸರು ಗಳಿಸಬೇಕು ತಮ್ಮ ಪ್ರತಿಭೆಯನ್ನು ತೋರ್ಪದಿಸ್ಬೇಕು ಎಂಬ ಬಯಕೆ ಇರುತ್ತದೆ ..ಹೆಚ್ಚಿನವರು ದುಡ್ಡು ಮಾಡುವ ಇರಾದೆಯನ್ನು ಹೊಂದಿರುತ್ತಾರೆ .ಈ ಕ್ಷೇತ್ರದಲ್ಲಿ  ಹೆಸರು ಬರೂದು ಹಾಗೆ ಬೇಕಾಬಿಟ್ಟಿ
ಸುದ್ದಿಗಾಸಿಪ್ ಗಳಿಗೆ ಬರಗಾಲವಿಲ್ಲ.ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ .ಸಿನಿಮ ಕ್ಷೇತ್ರ ಕ್ಕೆ ಬರುವ ಮುಂಚೆ ಇದರ ಬಗ್ಗೆ ಆಲೋಚನೆ ಮುಖ್ಯ ಅಲ್ವೇ ?ಸಿನಿಮಾದಲ್ಲಿ ಎಷ್ಟೇ ಸಚ್ಚಾರಿತ್ರ್ಯ ,ಸನ್ನಡತೆ ಇಂದ ಕಾರ್ಯನಿರ್ವಹಿಸಿದರೂ, ತೆರೆಮರೆಯಲ್ಲಿ ಕುಹುಕು ವಾಗ್ವೈಖರಿ ಬೆನ್ನಿಂದೆ ತೇಲುತ್ತ ಇರುತ್ತದೆ .ಇದಕ್ಕಾಗಿ 'ನೀರಿದ್ದಲ್ಲಿ ಕೊಳಕು ಇದ್ದೆ ಇರುತ್ತದೆ ' ಎಂಬ ಊಕ್ತಿಯಂತೆ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ .ನಮಗಾದವರು ಹೊಗಳಿ ಅಟ್ಟಕ್ಕೆರಿಸಿದರೆ ,ನಮಗಾಗದವರು ವಿವಿಧ ರೀತಿಯಲ್ಲಿ ನಮ್ಮನ್ನು ದೂಷಿಸುತ್ತಾ,ಅವಹೇಳನಕಾರಿಯಾಗಿ ವಿಜರ್ಭಿಸುತ್ತಾರೆ .ಅದನ್ನು ನಾವು ಸಮಬಲವಾಗಿ ಪಡೆಯಬೇಕಾದ್ದು ನಮ್ಮ ಧರ್ಮ .ಹೆಸರು ಬಂದಾಗ ಹಿಗ್ಗದೆ ,ಅದೇ ಹೆಸರು ಕೆಟ್ಟಾಗ ಕುಗ್ಗುವ ಪ್ರಮೇಯಕ್ಕೆ ಒಳಗಾಗುದು ಅಸಮನಜಸ.ಅದೇನೇ ಇರಲಿ ಪೂರ್ಣ ಚಿತ್ರರಂಗಕ್ಕೆ ವಿದಾಯ ಹೇಳುವಷ್ಟು ನಡೆದ ಘಟನೆಯಾದರೂ ಏನಿತ್ತು ? ನಿರ್ದೇಶಕ ರತ್ನಜರ ಕಿಸಿಂಗ್ ಫೋಟೋ ? ಅದನ್ನು ಯಾರೂ ಬೇಕಾದರೂ ಹೇಗೆ ಬೇಕಾದರೂ  ಆಧುನಿಕ  ತಂತ್ರಜ್ನತೆ ಯೊಂದಿಗೆ ಮಾಡಬಹುದು .ಇನ್ನು  ಮೊನ್ನೆಯ ತಮಿಳು ಚಿತ್ರರಂಗದ ನಿರ್ಮಾಪಕ ಮಗನ ಜೊತೆ ಮದುವೆ ಆಗಿದೆ ಎಂಬ ವದಂತಿಯ ಮೇಲೆಯೇ ? ಈ ಪುಟ್ಟ ವಿಷಯಕ್ಕೆ ಶಾಶ್ವತ ರಾಜೀನಾಮೆ ನೀಡುವ ಇವರ ತೀರ್ಮಾನಕ್ಕೆ ಏನ್ ಹೇಳಬೇಕೋ ಅರ್ಥವಾಗುತ್ತಿಲ್ಲ ..ಇದಕಿಂತಲೂ ಎಷ್ತೆಷ್ಟೊಲೋ ಅಧಿಕ ಗಾಸಿಪ ಗಳನ್ನೂ ಸಹಿಸಿಕೊಂಡು ವ್ರತ್ತಿ ಜೀವನವನ್ನು ಮುಂದುವರಿಸಿದ ಬಹಳಷ್ಟು ಜನಪ್ರಿಯ ಕಲಾವಿದರು ನಮ್ಮಲಿದ್ದಾರೆ  ಅಲ್ವೇ ? ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತದೆಯೇ  ನಾವು ಯಾರಿಗೂ ಏನೂ ಹೇಳದೆ ಬಾಯಿ ಮುಚ್ಚಿಕೊಂಡು  ಕೂರ ಬಹುದು  ಆದ್ರೆ ಯಾರಿನ್ದಲ್ಲೋ ಏನೂ ಕೇಳದೆ ಕೂರಲೂ ಸಾಧ್ಯವಂತೂ ಖಂಡಿತ ಇಲ್ಲ .ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಲ್ಲಿ ಬಿಡುದು ಇದಕ್ಕಿರುವ ಸುಲಭ ಉಪಾಯವಷ್ಟೇ ..ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಇದ್ದರೆ ಅದೇ ಸಾಕು ಅನ್ನುದು ನನ್ನ ಅಭಿಪ್ರಾಯ .

ಸಿನಿಮ ಅವಕಾಶಕ್ಕಾಗಿ ನಿರ್ಮಾಪಕ ನಿರ್ದೇಶಕರ ಮನೆಯ ಕದ ತಟ್ಟುವವರ  ಮಧ್ಯೆ ತಮ್ಮನ್ನು ಹುಡುಕಿ ಬಂದ ;ಶೈಲೂ ','ಆಟ ','ಯೋಗರಾಜಭಟ್ಟರ ',ಸಿನಿಮಾಗಳಲ್ಲಿ ನ ಕಾಲ್ ಶೀಟ್ ಅನ್ನು ಸಾರಾಸಗಟಾಗಿ ತಳ್ಳಿ ಹಾಕಿ ಚಿತ್ರರಂಗಕ್ಕೆ ವಿದಾಯ ಹೇಳಿದ ಅಮುಲ್ಯರ ನಡೆ ನಿಜಕ್ಕೂ ಎಳ್ಳಷ್ಟು ಸಮಂಜಸ ವಲ್ಲ ......

ಶುಕ್ರವಾರ, ಡಿಸೆಂಬರ್ 16, 2011

ಮಡೆ-ಮಡೆ ಸ್ನಾನ -ಅನಗತ್ಯ ವಿವಾದ

ಮಡೆ-ಮಡೆ   ಸ್ನಾನ -ಅನಗತ್ಯ ವಿವಾದ 


ಶ್ರೀ ಕುಕ್ಕೆ ಸುಬ್ರಮ್ಹಣ್ಯ ದೇವಸ್ಥಾನ
 ಎಲ್ಲಿ ನೋಡಿದರೂ ,ಬಿಸಿ ಬಿಸಿ ಸುದ್ದಿ ,ದಿನ ಬೆಳಗಾದ್ರೆ ವ್ರತ್ತ ಪತ್ರಿಕೆ ಇಂದ ಹಿಡಿದು ದೃಶ್ಯ ಮಧ್ಯ ಮಗಳಲ್ಲಿ ವಿವಿಧ ಬಗೆಯ ಅವತಾರಗಳಿಂದ ವ್ಯಾಖ್ಯನಿಸಲ್ಪಡುತ್ತಿದೆ  ಮಡೆ-ಮಡೆ  ಸ್ನಾನ  ಕಥಾನಕ .ಕಾಲೇಜ್ ಕ್ಯಾಂಪಸ್ ನಿಂದ ,ವಿಧಾನ ಸಭೆ ಯವರೆಗೂ ಇದರ ಚರ್ಚೆ -ಸವ್ವಾದ.. ಹೌದು ವಿಚಾರದ ಅಲೆಯನ್ನು ಕೇಳುತ್ತಿದ್ದರೆ ನಗೆಯ ನಡಿಗೆಯನ್ನು ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ .ನಾಗನ ಪ್ರಸಿದ್ದ ಕ್ಷೇತ್ರ ವಾಗಿರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಚಂಪಾಸೃಷ್ಟಿಯ ಸಮಯದಲ್ಲಿ 3 ದಿನಗಳ ಕಾಲ ವಿಶೇಷ ಪೂಜೆಯ ನಡುವೆ ,ಮಡೆ-ಮಡೆ  ಸ್ನಾನ ಎನ್ನುವ ಒಂದು ವಿಶಿಷ್ಟ ಸೇವೆ (ಹರಕೆ) ಇಲ್ಲಿ ನೆದೆಯಲ್ಪದುತ್ತದೆ.ಬ್ರಾಹಣರು ಉಂಡ ಎಲೆಯ ಮೇಲೆ ಉರುಳು ಸೇವೆ ಮಾಡುದೆ ಮಡೆ-ಮಡೆ  ಸ್ನಾನ. ಇದರಿಂದ ನಾಗನ ಪ್ರಮುಖ ಅವಕ್ರಪಗೆ ಉಂಟಾಗುವ ಸಂತಾನ ಪ್ರಾಪ್ತಿ ಮತ್ತು ಚರ್ಮ ಸಂಬಂಧಿ ರೋಗಗಳಿಗೆ ಇದು ರಾಮಬಾಣ  ಎನ್ನುದು ಇದರ ಹರಕೆ ಹೊತ್ತ ಫಲಾನುಭವಿಗಳ ಅಭಿವ್ಯಕ್ತಿ .ಇದಕ್ಕೆ ಸುಮಾರು 500  ವರ್ಷಗಳ ಇತಿಹಾಸ ವಿದೆ . ಇಷ್ಟೊಂದು ವರ್ಷಗಳಿದ ನಡೆದು ಬರುತ್ತಿರುವ ಸಂಪ್ರದಾಯ ವರ್ಷ ವೇ ಯಾಕೆ ಬೆಳಕಿಗೆ ,ವಿಚಾರಣಿಗೆ,ದೊಡ್ಡ ಸುದ್ದಿ ಮಾಡಿದ್ದುದ್ದರ ಅರ್ಥವೇ ಗೊತ್ತಾಗುತ್ತಿಲ್ಲ .ದಿನಕೊಂದರಂತೆ ಹುಟ್ಟಿಕೊಳ್ಳುತ್ತಿರುವ ದೃಶ್ಯ ಮಾಧ್ಯಮಗಳ ಸ್ಪರ್ಥಾತ್ಮಕ ಭರ -ಭರಾಟೆಯ ನಡವಿನ ಸಂಘರ್ಷದ ಸ್ವಷ್ಟ ಸುದ್ದಿ ಅಷ್ಟೇ .ಹಾಗಂತ ಇದು ಇದು ಒಂದು ಉತ್ತಮವಾದ ಸಂಪ್ರದಾಯ/ಪದ್ಧತಿ  ಎಂಬುದು ಸರಿಯಲ್ಲ .ಇದನ್ನೇ ಕೇವಲ ನಿಷೇಧಿಸಬೇಕೆಂದು ಪಟ್ಟು ಹಿಡಿದು ಬೊಟ್ಟು ಮಡಿ ತೋರಿಸುತ್ತಿರುವ ಕೆಲವರ ವಾಖ್ವಗರಿಗೆ ಏನೆನ್ನಬೇಕೋ ಗೊತ್ತಾಗುತ್ತಿಲ್ಲ .
ಮಡೆ ಸ್ನಾನ  ಅಂದ್ರೆ ಇದೆ
ವಿರೋದಿಸುವವರ ವಿರುದ್ದ ಹಲ್ಲೆ
ಪ್ರಾಣಿ ಬಲಿ ಸೇರಿದಂತೆ ಹತ್ತು -ಹಲವು ಅನಿಷ್ಟ ಪದ್ಧತಿ ಗಳು ನಮ್ಮಲ್ಲಿ ರಾರಾಜಿಸುದನ್ನು ತಡೆಹಿಡಿಯುದನ್ನು ಬಿಟ್ಟು ಇದರ ಬೆನ್ನೇ ಹಿಡಿದಿರುದು ನಾಚಿಗೆ ಗೆಡಿತನ.ಒಬ್ಬೊಬ್ಬರ ಆಚರಣೆ ,ಅವರವರುಗಳ ಭಾವ -ಭಕ್ತಿಗೆ ತಕ್ಕಂತೆ ಹರಕೆ ,ಆರಾಧನೆಗೆಳು ವಿಚಿತ್ರ .ಒಂದೊಂದು ಭಾಗದಲ್ಲಿ ಒಂದೊಂದು ದೈವದ ಪ್ರಭಾವ ಹೆಚ್ಚು .ಕಷ್ಟ ಪರಿಹಾರಕ್ಕಾಗಿ ಹರಕೆ ಹೊತ್ತವರು ಸೇವೆಯನ್ನು ಮಾಡುತ್ತಾರೆ ..ಹಾಗಾಗಿ ಸಂಸೃತಿ ನಡೆದುಕೊಂಡು ಬಂದಿದೆ .ಹಾಗಂತ ಇದನ್ನು ಪ್ರತಿಯೊಬ್ಬರೂ ಮಾಡಲೇಬೇಕು ಎಂಬ ಕಟ್ಟಪ್ಪಣೆ ಏನೂ ಇಲ್ಲ ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಂಡವರು ಜಮಾನದಲ್ಲಿ ಯಾರೂ ಇಲ್ಲ . ಮಡೆ-ಮಡೆ   ಸ್ನಾನ  ದಲ್ಲಿ ಪಾಲ್ಗೊಂಡವರು /ನೆಚ್ಚಿಕೊಂಡವರು ಅನಕ್ಷರಿಸ್ತರಿಗಿತ ಬುದ್ದಿವನ್ಥರು ,ವಿದ್ಯಪರಿಣಿತರ   ಸಂಖ್ಯೆ ಯೇ ಹೆಚ್ಚಇದರಿಂದ ಅನುಕೂಲವಾದವರು ಅವಲಂಬಿಸಿಕೊಂಡುಬಂದಿದ್ದಾರೆ .ಆದುದರಿಂದ ಅವರವರುಗಳ ಭಿನ್ನ -ಭಿನ್ನ ನಂಬಿಕೆ ವಿಶ್ವಾಸದ ಪ್ರತಿಷ್ಠೆ ಅಷ್ಟೇ . ವಿರೋದಿಸುವವರ  ವಿರುದ್ದ ಹಲ್ಲೆ -ಹರತಾಳಕ್ಕೆ ಮೊನ್ನೆ  ಆಸ್ವಾಧ ಕೊಟ್ಟಿದು ಅನವಶ್ಯಕವಾಗಿತ್ತು ..ಇದು ಬುದ್ದಿವಂತರ ನಾಡಿನ ಲಕ್ಷಣವಲ್ಲ .


 ಚಿತ್ರ ಕೃಪೆ -ಗೂಗಲ್

ಸೋಮವಾರ, ಡಿಸೆಂಬರ್ 12, 2011

ರಾಜೇಶ್ ಕ್ರಷ್ಣನಿಗೆ ಮೂರನೆ ಮದುವೆ ತರವೇ ?

ರಾಜೇಶ್  ಕ್ರಷ್ಣನಿಗೆ ಮೂರನೆ  ಮದುವೆ ತರವೇ ?ಹೀಗೊಂದು ಮಾತು ರಾಜ್ಯಾದ್ಯಂತ ಗಲ್ಲಿ -ಗಲ್ಲಿ  ಯಲ್ಲಿ ಗುಲ್ಲೆಬ್ಬಿದೆ .ಮೊನ್ನೆ -ಮೊನ್ನೆ ಸೋಮವಾರ  ನ -ರ ದಿನದಂದು ರಾಜೇಶ್ ರಮ್ಯ ವಶಿಷ್ಟ ಅವರನ್ನು ಮದುವೆ ಆಗುದರ ಮೂಲಕ ಈ ಒಂದು ವಂಗ್ಯ ನುಡಿಗೆ ಆಹಾರವಾಗಿದ್ದಾರೆ .ಹೌದು ಕುಂದಾಪುರ ತಾಲೂಕಿನ ಕೊಲ್ಲೂರಿನ ಮೂಕಾಂಬಿಕ ದೇವಸ್ಥಾನದಲ್ಲಿ ರಾಜೇಶ್ ಸೀಮಿತ ಬಂಧು -ಮಿತ್ರರು ಮತ್ತು ಆಪ್ತರ ಸಮ್ಮುಖದಲ್ಲಿ ಮುಕ್ತ ಧಾರಾವಾಹಿ ಯಲ್ಲಿ ಅಭಿನೈಸಿದ್ದ  ರಮ್ಯ ವಶಿಷ್ಟ ಅವರನ್ನು ಮೂರನೆ ಬಾಳ ಸಂಗಾತಿ ಯನ್ನಾಗಿ ವರಿಸಿದರು .

ರಾಜೇಶ್ ಕೃಷ್ಣನ್ ರ ಪ್ರಥಮ ಧರ್ಮ ಪತ್ನಿ 'ಸೌಮ್ಯರಾವ್ '. ಸೌ ಮ್ಯರಿಗೆ ವಿಚ್ಚೆಧನ ಕೊಟ್ಟ ರಾಜೇಶ್ ನಂತರ ಎರಡನೆ ಮದುವೆ ಯಾಗಿದ್ದು ,'ಹರಿಪ್ರಿಯ ' ಎಂಬ ದಂತವೈದ್ಯ ಯನ್ನ .ಇದು ಮೊದಲ ಮದುವೆ ಗಿಂತಲೂ  ಅಲ್ಪವಧಿಯದ್ದು .ಕೆಲವೇ ಸಮಯದಲ್ಲಿ ಸಂಭಂದ ಮುರಿದು ಮುರಿದು ಬಿತ್ತು.ರಾಜೇಶ್ ಮತ್ತೆ ಏಕಾಂಗಿ ಯಾದರು .ವಿವಾಹದ ಹಾದಿಯ ಇಂತಜಾರ್ ನಲ್ಲಿದ್ದವರಿಗೆ ಸಿಕ್ಕಿದ್ದು ನಟಿ ,ಗಾಯಕಿ ರಮ್ಯ ವಶಿಷ್ಟ .ಈ ಟಿ.ವಿ  ಮುಕ್ತ ಸೇರಿದಂತೆ ಹಲವಾರು ಧಾರಾವಾಹಿ ಗಳಲ್ಲಿ ನಟಿಸಿದ್ದ ರಮ್ಯ ,ಸಂಗೀತ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು .ಹೀಗೆ ಅಲ್ಲಿ ಹುಟ್ಟಿ ಕೊಂದ ಲವ್ವಿ -ಡವ್ವಿ ಹಸೆಮಣೆ ಯೆರಿಸಿಬಿಟ್ಟಿದೆ ಎಂಬುದು ಬಲ್ಲವರ ಅಭಿಪ್ರಾಯ .ಕನ್ನಡ ಚಿತ್ರರಂಗದ ಖ್ಯಾತ ಹಿನ್ನಲೆ ಸಂಗೀತ ನಿರ್ಧೇಶಕ ಹಂಸಲೇಖ ಅವರ ಶಿಷ್ಯ ರಾದ ನಟ ,ಗಾಯಕ ,ರಾಜೇಶ್ ಕೃಷ್ಣನ್ ,ಮುಖಕ್ಕೆ ಬಣ್ಣ ಬಳಿದು ಕೆಲವಂದು ಸಿನಿಮಾಗಳಲ್ಲಿ ನಟಿಸಿದರೆ ,ಕನ್ನಡ ತೆಲುಗು ,ಹಿಂದಿ ಸೇರಿದಂತೆ  ಹಲವಾರು ಭಕ್ತಿ ಗೀತೆ ,ಜಾಹೀರಾತು ,ಅಲ್ಬಮ್  ಗಳಲ್ಲಿ ತಮ್ಮ ಧ್ವನಿ ಯನ್ನು ಮೊಳಗಿಸಿದ್ದಾರೆ .ಪರಕೀಯರ ದಾಂಗುಡಿ ಇದ್ದರೂ ,ತವರಿನಲ್ಲಿ ಉತ್ತಮ ನೆಲೆ ಯನ್ನು ಕಂಡು ಕಂಡಿದ್ದು  ಜನಪ್ರಿಯರಾಗಿದ್ದ  ರಾಜೇಶ್ ,ಹೀಗೆ ಮಾಡಬಾರದಿತ್ತು ಎಂಬುದು ಅಭಿಮಾನಿ ಗಳ ಅಂಬೋಣ ಏನೆ ಇರಲಿ ಸಿನಿಮ ಲೈಫ್ ಹಗೆ ಅಲ್ಲವೇ ?! ಬಹುತೇಕ ನಾಯಕ -ನಾಯಕಿಯರು ಸೇರಿದಂತೆ ತೆರೆಯ ಮುಂದಿನ ತಾರೆಯರು ರೀಲ್ ನ್ನಂತೆ ರಿಯಲ್ ನಲ್ಲಿ ಸೆರೆ ಯಾಗಿರುದು ನಾವು ಕಣ್ಣಾರೆ ಕಂಡಿದ್ದೇವೆ ಆದರೆ ಹಿನ್ನಲೆ ಗಾಯಕರೂ ಅವರ ಹಾದಿಯನ್ನೇ ಹಿಡಿದಿರುದು ಸರಿಯೇ ? ಸರಿಯೋ ?ತಪ್ಪೋ ?ಅವರವರ  ಭಾವ -ಬಕುತಿಗೆ ಬಿಟ್ಟ ವಿಚಾರ ..ಯಾರ್ಯಾರ ಪರ್ಸನಲ್ ಮ್ಯಾಟರ್ ನಮಗ್ಯಾಕೆ ಅನ್ನುವವರು ಇದ್ದಾರೆ ..ಅದೇನೇ ಇರಲಿ ಒಟ್ಟಾರೆ  "ಶುಭಾಶಯ ಮದು ಮಗಳಿಗೂ ,ಮದು ಮಗಳಿಗೂ ಶುಭಾಶಯ '' ಎನ್ನೋಣ ಅಲ್ಲವೇ ?!
ಚಿತ್ರ -ಸಂಗ್ರಹ