ಚಿನ್ನ ಕ್ಕಿಂತ ಬೆಲೆ ಬಾಳುವ ದ್ರವ ಪೆಟ್ರೋಲ್ ?!
ಹೌದು ನಿಜಕ್ಕೂ ಇದು ಅರಗಿಸಿಕೊಳ್ಳಲಾಗದ ಬವಣೆ ಅಂತಲೇ ಹೇಳಬಹುದು ..ಕೇಂದ್ರ ಸರ್ಕಾರ ಜನ ಸಾಮಾನ್ಯರ ಯನ್ನು ಗುತ್ತಿಗೆ ಪಡೆದಂತೆ ವರ್ತಿಸುತ್ತಿದೆ .ದಿನೇ ದಿನೇ ತೈಲ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ .ಮೊದಲೇ ಹಗ್ಗ ಕಂಡರೆ ಹೆದರುವವನ ಮೇಲೆ ಪ್ರಸ್ತುತ ಪರಿಸ್ತಿತಿಯಲ್ಲಿ ಹಾವನ್ನೇ ಎಸದಂತೆ ಮಾಡಿದೆ .ಏನಿದು ಉದ್ದಟತನ? ಏನಿದು ಕರ್ತವ್ಯ ಶೀಲತೆ ?ಮೊದಲೆಲ್ಲ ತೈಲ
ಬೆಲೆ ಕೇವಲ ಪೈಸೆ ಗಳಷ್ಟೇ ಕಾಣುತ್ತಿತ್ತು .ಆದರೆ ಅಧುನಿಕ ದಿನಗಳಲ್ಲಿ ರೂಪಾಯ ಗಟ್ಟಲೆ ಅದೂ,ಕೇವಲ ೧-೨ ತಿಂಗಳ ಅಂತರದಲ್ಲಿ ಮನಸ್ಸಿಗೆ ಬಂದ ರೀತಿಯಲ್ಲಿ ನಾಗರಿಕರ ಮೇಲೆ ಹೊರಿಸುತ್ತಿರುದು ಅಕ್ಷಮ್ಯ ಕೃತ್ಯ ಕೇಂದ್ರಕ್ಕೆ ಅವ್ಯಾಹತ ಸಂಹಿತೆ ಇಲ್ಲದೆ ಇರುದು ಬೇಸರದ ವಿಚಾರ .ಇದ್ದನ್ನು ಪ್ರಜ್ಞಾವಂತ ಪ್ರಜೆಗಳು ಅಲ್ಲ ಗೆಳೆಯ ಬೇಕಾಗಿದೆ .ದೇಶಾದ್ಯಂತ ಉಗ್ರ ಹೋರಾಟವನ್ನೇ ಅಸ್ತ್ರ ವನ್ನಾಗಿಸಿ ಫುಲ್ ಸ್ಟಾಪ್ ಇಡಬೇಕಾಗಿದೆ .ಈ ನಿಟ್ಟಿನ ಒಂದು ಸುಸಂದರ್ಭಕ್ಕೆ ನೆರೆಯ ರಾಜ್ಯ ಕೇರಳ ಸ್ವಲ್ಪ ಎಚ್ಚೆತ್ತು ಗೊಂಡಿದೆ .ಕಳೆದ ಬಾರಿ ತೈಲ ಬೆಲೆ ಏರಿಕೆ ಕಂಡ ಕೂಡಲೇ ಒಂದಷ್ಟು ಪ್ರತಿಭಟನೆ ಹಾದಿಯನ್ನು ಹಿಡಿದಿತ್ತು .ಆದ್ರೆ ಒಂದೇ ಕೈ ಇಂದ ಚಪ್ಪಾಳೆ ತಟ್ಟಲು ಸಾದ್ಯವೇ?ಈ ಬಾರಿಯೂ ಬೆಲೆ ಏರಿಕೆ ಯಾ ವಿರುದ್ದ ಸೂಕ್ತ ಉತ್ತರವನ್ನು ಕೊಡುತ್ತಿದೆ ..ಇದು ಸ್ವಾಗತಾರ್ಹ ಇವರ ನೀತಿಯ ರೀತಿಯನ್ನು ಉಳಿದ ರಾಜ್ಯಗಳು ಅವಲಂಭಿಸಬೇಕಾಗಿದೆ . ಎಲ್ಲ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಸ್ವಲ್ಪ ತುಟ್ಟಿಯೇ ಆದ್ರೆ ಇದರ ವಿರುದ್ದ ಕಿಡಿಕಾರುವ ಅಭಿವ್ಯಕ್ತಿಯ ವೈಖರಿಯ ಶಕ್ತಿ ಇನ್ನು ಎದ್ದು ಬರುವ ಲಕ್ಷಣ ಕಾಣುತ್ತಿಲ್ಲ ಹತ್ತು ಹಲವು ಸಂಘ -ಸಂಸ್ಥೆ ಗಳಿದ್ದರೂ ಕಾರ್ಯಕ್ಕೆ ಬಾರದ ಸ್ಥಿತಿಯಲ್ಲಿದೆ ಇನ್ನೂ ,ಕೇವಲ ಬಣ -ಬಣ ಗಳ ನಡುವೆ ಕುರ್ಚಿ ಕದನ ರಾಜಕೀಯ ರಂಗಿನಾಟದಲ್ಲಿಯೇ ತೇಲಿ ಹೋಗಿದೆ ಬದಿಗಿರಿಸಿ ಹೊರಡಬೇಕಾಗಿದೆ ..ನೋವಿನೋಲೆಯ ದಾವಗ್ನಿಯನ್ನು ತಣಿಸಬೇಕಾಗಿದೆ ...



