ಅಮುಲ್ಯರ ನಡೆ -ನುಡಿಯನ್ನು ಗಮನಿಸುತ್ತಿದ್ದರೆ ಖಂಡಿತ ಬಹಳ ಬೇಸರ ವೆಸುತ್ತಿದೆ .ನಟಿಸಿದ್ದು ಬೆರಳನಿಕೇಯ ಚಿತ್ರವಾದರೂ ಚಿಕ್ಕ ವಯಸ್ಸಿನಲ್ಲಿ ಅದರಲ್ಲೂ ಓದಿನ ನಡುವೆಯೂ ಸಿನಿಮ ಕ್ಷೇತ್ರಕ್ಕೆ ಕಾಲಿಟ್ಟೂ. ಚೆಲುವಿನ ಚಿತ್ತಾರದ ಎಸ್ .ನಾರಾಯಣ್ ನಿರ್ದೇಶನದ ಈ ಚಿತ್ರದಲ್ಲಿ ತನಗೆ ತಕ್ಕುದಾದ ಪಾತ್ರವನ್ನು ನಿರ್ವಹಿಸಿ ಹಿಟ್ ಆದ ಚೆಲುವಿನ ಕಣಿ ಅಮೂಲ್ಯ ,ಇನ್ನು ಮುಂದೆಯೂ ಸಾಕಷ್ಟೂ ಚಿತ್ರದಲ್ಲಿ ಅಭಿನಹಿಸಿ ರಂಗದಲ್ಲಿ ತಳವೂರ ಬೇಕಿತ್ತು ,ಅವಕಾಶಗಳ ಸರಮಾಲೆ ಆಕ್ರಮಿಸುವ ಸನಿಹದಲ್ಲಿ ಹೀಗೆ ಒಂದು ಪುಟ್ಟ ವಿಚಾರಕ್ಕೆ ಚಿತ್ರರಂಗಕ್ಕೆ ವಿದಾಯ ಹೇಳಬಾರದಿತ್ತು ಅಷ್ಟಕ್ಕೂ ಇದು ವಿದಾಯ ಹೇಳುವಷ್ಟು ಕಠಿಣ ಸವಾಲ್ ಅಂತೂ ಅಲವೇ ಅಲ್ಲ .
ಸಿನಿಮ ರಂಗವೇ ಹಾಗೆ ಎಲ್ಲ ಕ್ಷೇತ್ರ ಗಳಿಗಿಂತ ಸ್ವಲ್ಪ ಹೆಚ್ಚೇ ಹೆಸರು ಉಳಿಯುದು ಹೌದು ಅಳಿಯೂದು ಹೌದು ..ಈ ಕ್ಷೇತ್ರಕ್ಕೆ ಅವಕಾಶಕ್ಕಾಗಿ ಹೆಚ್ಚಿನ ಜನ ಬಹಳಷ್ಟು ಕಸರತ್ತು ಗಳನ್ನೂ ಮಾಡುತ್ತಾರೆ .ಚಿತ್ರದಲ್ಲಿ ನಟಿಸಬೇಕು ಎಂಬ ಬಯಕೆ ಒಬ್ಬ್ಬರಲಿದ್ದರೆ ,ಕೆಲವರಿಗೆ ಹವ್ಯಾಸ ,ಇನ್ನು ಕೆಲವರಿಗೆ ಹೆಸರು ಗಳಿಸಬೇಕು ತಮ್ಮ ಪ್ರತಿಭೆಯನ್ನು ತೋರ್ಪದಿಸ್ಬೇಕು ಎಂಬ ಬಯಕೆ ಇರುತ್ತದೆ ..ಹೆಚ್ಚಿನವರು ದುಡ್ಡು ಮಾಡುವ ಇರಾದೆಯನ್ನು ಹೊಂದಿರುತ್ತಾರೆ .ಈ ಕ್ಷೇತ್ರದಲ್ಲಿ ಹೆಸರು ಬರೂದು ಹಾಗೆ ಬೇಕಾಬಿಟ್ಟಿ ಸುದ್ದಿಗಾಸಿಪ್ ಗಳಿಗೆ ಬರಗಾಲವಿಲ್ಲ.ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ .ಸಿನಿಮ ಕ್ಷೇತ್ರ ಕ್ಕೆ ಬರುವ ಮುಂಚೆ ಇದರ ಬಗ್ಗೆ ಆಲೋಚನೆ ಮುಖ್ಯ ಅಲ್ವೇ ?ಸಿನಿಮಾದಲ್ಲಿ ಎಷ್ಟೇ ಸಚ್ಚಾರಿತ್ರ್ಯ ,ಸನ್ನಡತೆ ಇಂದ ಕಾರ್ಯನಿರ್ವಹಿಸಿದರೂ, ತೆರೆಮರೆಯಲ್ಲಿ ಕುಹುಕು ವಾಗ್ವೈಖರಿ ಬೆನ್ನಿಂದೆ ತೇಲುತ್ತ ಇರುತ್ತದೆ .ಇದಕ್ಕಾಗಿ 'ನೀರಿದ್ದಲ್ಲಿ ಕೊಳಕು ಇದ್ದೆ ಇರುತ್ತದೆ ' ಎಂಬ ಊಕ್ತಿಯಂತೆ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ .ನಮಗಾದವರು ಹೊಗಳಿ ಅಟ್ಟಕ್ಕೆರಿಸಿದರೆ ,ನಮಗಾಗದವರು ವಿವಿಧ ರೀತಿಯಲ್ಲಿ ನಮ್ಮನ್ನು ದೂಷಿಸುತ್ತಾ,ಅವಹೇಳನಕಾರಿಯಾಗಿ ವಿಜರ್ಭಿಸುತ್ತಾರೆ .ಅದನ್ನು ನಾವು ಸಮಬಲವಾಗಿ ಪಡೆಯಬೇಕಾದ್ದು ನಮ್ಮ ಧರ್ಮ .ಹೆಸರು ಬಂದಾಗ ಹಿಗ್ಗದೆ ,ಅದೇ ಹೆಸರು ಕೆಟ್ಟಾಗ ಕುಗ್ಗುವ ಪ್ರಮೇಯಕ್ಕೆ ಒಳಗಾಗುದು ಅಸಮನಜಸ.ಅದೇನೇ ಇರಲಿ ಪೂರ್ಣ ಚಿತ್ರರಂಗಕ್ಕೆ ವಿದಾಯ ಹೇಳುವಷ್ಟು ನಡೆದ ಘಟನೆಯಾದರೂ ಏನಿತ್ತು ? ನಿರ್ದೇಶಕ ರತ್ನಜರ ಕಿಸಿಂಗ್ ಫೋಟೋ ? ಅದನ್ನು ಯಾರೂ ಬೇಕಾದರೂ ಹೇಗೆ ಬೇಕಾದರೂ ಆಧುನಿಕ ತಂತ್ರಜ್ನತೆ ಯೊಂದಿಗೆ ಮಾಡಬಹುದು .ಇನ್ನು ಮೊನ್ನೆಯ ತಮಿಳು ಚಿತ್ರರಂಗದ ನಿರ್ಮಾಪಕ ಮಗನ ಜೊತೆ ಮದುವೆ ಆಗಿದೆ ಎಂಬ ವದಂತಿಯ ಮೇಲೆಯೇ ? ಈ ಪುಟ್ಟ ವಿಷಯಕ್ಕೆ ಶಾಶ್ವತ ರಾಜೀನಾಮೆ ನೀಡುವ ಇವರ ತೀರ್ಮಾನಕ್ಕೆ ಏನ್ ಹೇಳಬೇಕೋ ಅರ್ಥವಾಗುತ್ತಿಲ್ಲ ..ಇದಕಿಂತಲೂ ಎಷ್ತೆಷ್ಟೊಲೋ ಅಧಿಕ ಗಾಸಿಪ ಗಳನ್ನೂ ಸಹಿಸಿಕೊಂಡು ವ್ರತ್ತಿ ಜೀವನವನ್ನು ಮುಂದುವರಿಸಿದ ಬಹಳಷ್ಟು ಜನಪ್ರಿಯ ಕಲಾವಿದರು ನಮ್ಮಲಿದ್ದಾರೆ ಅಲ್ವೇ ? ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತದೆಯೇ ನಾವು ಯಾರಿಗೂ ಏನೂ ಹೇಳದೆ ಬಾಯಿ ಮುಚ್ಚಿಕೊಂಡು ಕೂರ ಬಹುದು ಆದ್ರೆ ಯಾರಿನ್ದಲ್ಲೋ ಏನೂ ಕೇಳದೆ ಕೂರಲೂ ಸಾಧ್ಯವಂತೂ ಖಂಡಿತ ಇಲ್ಲ .ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಲ್ಲಿ ಬಿಡುದು ಇದಕ್ಕಿರುವ ಸುಲಭ ಉಪಾಯವಷ್ಟೇ ..ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಇದ್ದರೆ ಅದೇ ಸಾಕು ಅನ್ನುದು ನನ್ನ ಅಭಿಪ್ರಾಯ .
ಸಿನಿಮ ಅವಕಾಶಕ್ಕಾಗಿ ನಿರ್ಮಾಪಕ ನಿರ್ದೇಶಕರ ಮನೆಯ ಕದ ತಟ್ಟುವವರ ಮಧ್ಯೆ ತಮ್ಮನ್ನು ಹುಡುಕಿ ಬಂದ ;ಶೈಲೂ ','ಆಟ ','ಯೋಗರಾಜಭಟ್ಟರ ',ಸಿನಿಮಾಗಳಲ್ಲಿ ನ ಕಾಲ್ ಶೀಟ್ ಅನ್ನು ಸಾರಾಸಗಟಾಗಿ ತಳ್ಳಿ ಹಾಕಿ ಚಿತ್ರರಂಗಕ್ಕೆ ವಿದಾಯ ಹೇಳಿದ ಅಮುಲ್ಯರ ನಡೆ ನಿಜಕ್ಕೂ ಎಳ್ಳಷ್ಟು ಸಮಂಜಸ ವಲ್ಲ ......








