ಸೋಮವಾರ, ನವೆಂಬರ್ 24, 2025
ಇದಕ್ಕೆ ಮಟ್ಟ ಹಾಕುವವರು ಯಾರು ??
ಇದೇ ನವೆಂಬರ್ ತಿಂಗಳಲ್ಲಿ ಎರಡು ಅತೀ ದೊಡ್ಡ ದೇಶ ದ್ರೋಹಿ ಘಟನೆ ನಮ್ಮ ದೇಶದಲ್ಲಿ ನಡೆಯಿತು. ಒಂದು ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದರೇ ಇನ್ನೊಂದು ದೇಶದ ರಾಜಧಾನಿ ದೆಹಲಿಯಲ್ಲಿ ನಡೆದು ಹೋಯಿತು.
ಆಗಾಗ ಬೆಳಕಿಗೆ ಬಂದು ಸದ್ದು ಮಾಡಿ ಸುದ್ದಿಯಾಗಿ ಸೈಡ್ ಗೆ ಸರಿಯುವ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿನರುವ ಖೈದಿಗಳಿಗೆ ರಾಜಾತಿಥ್ಯ! ಈ ಬಾರಿ ಇನ್ನು ಹೊಸತಾಗಿಯೇ ನವನವೀನ ರೀತಿಯಲ್ಲಿ ಪ್ರಸಾರಕ್ಕೆ ಬಂತು.ಕೈದಿಗಳ ಎಣ್ಣೆ ಪಾರ್ಟಿ ಡಾನ್ಸ್ ,ಪಾತಕಿಗಳ ಕೈಯಲ್ಲಿ ಸ್ಮಾರ್ಟ್ ಫೋನ್,ಟಿವಿ ,ಉಗ್ರ ಗ್ರಾಮಿ ಜುಹಾದ್ ಹಮೀದ್ ಶಕೀಲ್ ಮನ್ನಾ ,ವಿಕ್ರತ ಕಾಮಿ ಉಮೇಶ್ ರೆಡ್ಡಿಗಳ ರಾಜ ಭೋಗ ವೈಭವಗಳ ಚಿತ್ರಣ ವೈರಲ್ ಆದವು. ಇದು ಕ್ಯಾಮರಾದ ಕಣ್ಣಿಗೆ ಸಿಕ್ಕ ಕೆಲವು ಸ್ಯಾಂಪಲ್ ಉದಾಹರಣೆಗಳಾದರೇ, ಇನ್ನು ತೆರೆ ಮರೆಯಲ್ಲಿ ಅದೆಷ್ಟೋ ಆ ದೇವರೇ ಬಲ್ಲ !ಇವರುಗಳು ಕೈದಿಗಳೋ ಎಂಬುದೇ ಅರ್ಥವಾಗದ ಪ್ರಶ್ನೆ! ಜೈಲಿಗೆ ಬಂದು ಶಿಕ್ಷೆ ಅನುಭವಿಸ ಬೇಕಾದ ಆರೋಪಿಗಳು ಇಲ್ಲಿ ರಾಜಾಥಿತ್ಯವನ್ನು ಪಡೆಯುತ್ತಿದ್ದಾರೆ.ನಿಜಕ್ಕೂ ಈ ಪರಿಯ ಎಂಜೋಯ್ಮೆಂಟ್ ಅವರ ಮನೆಯಲ್ಲಿ ಅಥವಾ ಇನ್ಯಾವುದೋ ಪಾರ್ಟಿಯಲ್ಲಿ ಸಿಗಲಿಕ್ಕೆ ಇಲ್ಲವೇನೋ ಅಂತ ಮಜಾ,ಮೋಜು ,ಮಸ್ತಿ ಮನೋರಂಜನೆ ಜೈಲಿನಲ್ಲಿ ಸಿಗುತ್ತಿದೆ! ಇದನ್ನೆಲ್ಲಾ ಕಂಡೇ ಪ್ರಸ್ತುತ ಅಪರಾಧ ಜಗತ್ತು ಬೆಳೆಯುತ್ತಿರುವುದು, ಆರೋಪಿಗಳಿಗೆ ಶಿಕ್ಷೆ ನೀಡುವ ಬದಲು ಮಜಾ ಉಡಾಯಿಸುವ ಅಡ್ಡಗಳಾಗುತ್ತಿರುವ ಇಂತಹ ಉಚ್ಚ ಸ್ಥಿತಿಯ ಜೈಲ್ ಗಳ ಸ್ಥಿತಿ ಇಂತಿದ್ದರೇ ಇನ್ನುಳಿದವೋ ?? ಹೀಗಾಗಿಯೇ ಅಪರಾಧಗಳು ಹೆಚ್ಚುತ್ತಿವೆ ಪಾತಕಿಗಳು ಸಲೀಸ್ ಆಗಿ ಎಂಟ್ರಿ ಕೊಡುತ್ತಾರೆ.
ಇದಕ್ಕೆ ಹೊಣೆ ಯಾರು ? ನಮ್ಮ ವ್ಯವಸ್ಥೆ ಅಲ್ಲದೆ ಮತ್ತಿನ್ನೇನು ? ಈ ವ್ಯವಸ್ಥೆಗಳು ಲೀಲಾಜಾಲವಾಗಿ ಜರುಗುತ್ತಿದೆ ಅಂದ್ರೆ ಜೈಲ್ ಅಧಿಕಾರಿಗಳ ಪಾತ್ರವಲ್ಲದೆ ಮತ್ತಿನ್ನೇನು ?ಕೇವಲ ಹಣದ ದಾಹಕ್ಕೆ ಬಲಿಯಾಗೆ ಇಂತ ಕ್ರಿಮಿನಲ್ ಗಳಿಗೆ ಸಪೋರ್ಟ್ ಮಾಡುವ ಅಧಿಕಾರಿಗಳೇ ದೊಡ್ಡ ಕ್ರಿಮಿನಲ್ ಗಳು ಈ ಕ್ರಿಮಿಗಳನ್ನು ಕಿತ್ತು ಹೊಸಕಿ ಹಾಕುವವರು ಯಾರು ? ಗೊತ್ತಿಲ್ಲ !!ಗ್ರಹ ಮಂತ್ರಿಗಳದ್ದು ಅದೇ ಡೈಲಾಗ್ ವಿಚಾರಣೆ ಮಾಡುತ್ತೇವೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ,ಜನಾಕ್ರೋಶ ಹೆಚ್ಚಾದ ಕೂಡಲೇ ತಪ್ಪಿತಸ್ಥರನ್ನು ಒಂದಷ್ಟು ದಿನ ಸಸ್ಪೆಂಡ್ ಮಾಡಿ ಮತ್ತೆ ಬೇರೆ ಕಡೆ ಟ್ರಾನ್ಸ್ಫರ್ ಮಾಡಿ ಕೊಳ್ಳುದು ಬಿಟ್ಟರೇ ಬೇರೇನೂ ಇಲ್ಲ , ಅವರನ್ನು ಡಿಸ್ಮಿಸ್ ಮಾಡುವ ಯೋಗ್ಯತೆ ಅಥವಾ ಪವರ್ ನಮ್ಮಲ್ಲಿ ಇಲ್ಲವೇ ? ಅದಕ್ಕಾಗಿ ಈ ಪರಿಯಲ್ಲಿ ಈ ಘಟನೆಗಳು ಆಗಾಗ ಮರುಕಳಿಸುತ್ತಿರವುದು.
ಜನರು ದಂಗೆ ಏಳಬೇಕಾಗಿದೆ ಅಷ್ಟೇ ಇದಕ್ಕಿರುವ ಉಪಾಯ .
ಇದಕ್ಕೆ ಹೊಂದಿಕೆ ಯಾಗುವ ಇನ್ನೊಂದು ಘಟನೆ ನಡೆಯಿತು. ಅದು 10ನೇ ತಾರೀಕು ,ನವೆಂಬರ್ 2025, ಸರಿಸುಮಾರು ಸಂಜೆ 6:52ರ ಸಮಯ. ಸ್ಥಳ ದೆಹಲಿಯ ರೆಡ್ ಫೋರ್ಟ್ ಸಮೀಪ, Metro Gate No.1 ಬಳಿ ಹೈಂಡೈ i20 ಕಾರಿನಲ್ಲಿ ಸ್ಫೋಟ. ಅದು ಕಾರಿನಲ್ಲಿ ಆಕಸ್ಮಿಕವಾಗಿ ತಾಂತ್ರಿಕ ದೋಷದಿಂದ ಉಂಟಾದ ಸ್ಪೋಟವಲ್ಲ ಅದರ ಒಳಗಡೆ ತುಂಬಿತ್ತು ಬಾಂಬ್ !ಆತ್ಮಹತ್ಯೆ ದಾಳಿ. ಅದರ ಒಳಗಿದ್ದ ಚಾಲಕನಾಗಿ ಉಗ್ರ, ಡಾಕ್ಟರ್ ಪದವಿ ಪಡೆದ ಉಮರ್ ನಬಿ ಎಂಬ ದೇಶ ದ್ರೋಹಿ.ಸ್ಪೋಟದ ತೀವೃತೆ ಎಷ್ಟು ಇತ್ತೆಂದರೆ 8 ಮಂದಿ ಸಾವಿಗೀಡಾಗಿದ್ದರು ೨೦ ಕ್ಕೂ ಅಧಿಕ ಬಂದಿ ಗಂಭೀರ ಸ್ಥಿತಿಗೆ ತಲುಪಿದ್ದರು. ಸ್ಥಳದಲ್ಲಿದ್ದ ಇತರ ವಾಹನಗಳೂ ಸೇರಿದಂತೆ ಅಕ್ಕ ಪಕ್ಕದ ಹಲವಾರು ಸಂಪತ್ತುಗಳು ನಷ್ಟವಾದವು.ನಾಶ ಗೊಂಡವು.
ಇದು ಭಯೋತ್ಪಾದಕ ದಾಳಿ ಎಂಬುದನ್ನು ಒತ್ತಿ ಹೇಳಬೇಕಿಗಿಲ್ಲ.ಇದನ್ನು ಉಗ್ರರಲ್ಲದೇ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ.ಇದು ದೇಶದ ಅನ್ನ ತಿಂದ ರಕ್ತ ಪಿಪಾಸುಗಳ ಸಂಚಿನ ಕ್ರತ್ಯ.ದೇಶದ ಹೊರಗಿನ ಉಗ್ರರನ್ನು ಹೇಗೋ ಸದೆಬಡಿಯಬಹುದು ಆದ್ರೆ ಇಲ್ಲಿನ ಅನ್ನ ತಿಂದು ಜಲ ನೆಲದ ಋಣವನ್ನು ಮರೆತ ಪಾತಾಕಿಗಳನ್ನು ಪತ್ತೆಹಚ್ಚುವುದು ಹರ ಸಾಹಸ.ಇದೇನೂ ಹೊಸತಲ್ಲ ಆಗಾಗ ಶತ್ರು ರಾಷ್ಟ್ರಗಳಿಗಿಂತ ನಮ್ಮವರೇ ನಮಗೆ ದ್ರೋಹ ಬಗೆಯವ ಕೆಲಸವನ್ನು ಕಂಡಿರುತ್ತೇವೆ . ದೇಶದಲ್ಲಿನ ಒಂದೊಳ್ಳೆ ಆಡಳಿತ ಚುಕ್ಕಾಣಿ ಬಂದ ಪರಿಣಾಮ ಸುಮಾರು ಸಮಯವೇ ಕಳೆದಿದೆ ಈ ತರಹದ ಅಹಿತಕರ ಘಟನೆ ನಡೆಯದೇ.ಅಂತೂ ಮೊನ್ನೆ ಮೊನ್ನೇ ಬಾಂಬ್ ಸ್ಫೋಟ ಗೊಂಡೇ ಬಿಟ್ಟಿತು.ಇದನ್ನು ಮಟ್ಟ ಹಾಕುವುದು ಹೇಗೆ ಮಿಲಿಯನ್ ಡಾಲರ್ ಪ್ರಶ್ನೆ !
ಮಂಗಳವಾರ, ನವೆಂಬರ್ 4, 2025
ದರ್ಶನ್ ನ ಬೆಂಬಿಡದ ಕಾನೂನು ಕುಣಿಕೆ !
ರೇಣುಕಾ ಸ್ವಾಮಿಯ ಭೀಕರ ಕೊಲೆಗೆ ಸಂಬಂಧ ಪಟ್ಟಂತೆ ಸುಮಾರು ಒಂದೂವರೆ ವರ್ಷ ಕಳೆಯುತ್ತಾ ಬಂತು ಚಾಲೇಂಗಿಂಗ್ ಸ್ಟಾರ್ ಡಿ ಬಾಸ್ ಖ್ಯಾತಿಯ ದರ್ಶನ್ ತೂಗುದೀಪ್ ಸೆರೆ ಮನೆ ಸೇರಿ .ಇನ್ನೂ ಬಿಡುಗಡೆ ಭಾಗ್ಯ ಕೂಡಿ ಬಂದಿಲ್ಲ ಅಷ್ಟಕ್ಕೂ ಹಾಗೆ ಬಿಡುಗಡೆ ಹೊಂದಲಿಕ್ಕೆ ದರ್ಶನ್ ಅಂಡ್ ಗ್ಯಾಂಗ್ ಮಾಡಿದ ಕ್ರತ್ಯ ಸಣ್ಣದಲ್ಲ.
ಕಾನೂನಿನ ಮೇಲೆ ಗೌರವ ಇಮ್ಮಡಿಯಾಗುತ್ತಿದೆ ! ಉಳ್ಳವರ ಕಪಿ ಮುಷ್ಠಿಯಲ್ಲಿ ಕಾನೂನು ಬಂಧಿಯಾಗಿರುತ್ತದೆ ಎನ್ನುವುದನ್ನು ತಳ್ಳಿ ಹಾಕಿದ್ದು ಈ ದರ್ಶನ್ ಕೇಸ್ !
ಕಾನೂನು ಎಲ್ಲರಿಗೂ ಒಂದೇ ಕಾನೂನು ಕಾಯ್ದೆಯನ್ನು ಕೈ ತೆಗೆದು ಕೊಳ್ಳುವ ,ಅದನ್ನು ತಮಗೆ ಇಷ್ಟ ಪಟ್ಟಂತೆ ಬಳಿಸಿ ಕೊಳ್ಳುವವರ ನೈಜ ಉದಾರಹಣೆಗಳ ಮಧ್ಯೆ ಇದೊಂದು ದಿಫ್ಫ್ರೆಂಟ್ ಆಗಿ ಕಾಣ ಸಿಕ್ಕಿದ್ದು ಸುಳ್ಳಲ್ಲ. ಅಪರೂಪದ ಘಟನೆ !
ಸಿನಿಮಾ ಹೀರೊ ಆಗಿ ಮೆಜೆಸ್ಟಕ್ ಸಿನಿಮಾದ ಮೂಲಕ ತೆರೆಯ ಮೇಲೆ ಪರಿಚಯಗೊಂಡ ದರ್ಶನ್ ತೂಗುದೀಪ್ ಸಾಕಷ್ಟು ಫಿಲಂಗಳು ಹಿಟ್ ಮೇಲೆ ಹಿಟ್ ಕೊಟ್ಟು ಸ್ಯಾಂಡಲ್ವೋಡ್ ಸಿನಿ ಅಂಗಳದ ಬೆಳ್ಳಿತೆರೆಯ ರೀಲ್ ನಲ್ಲಿ ಉತ್ತಮ ನಾಯಕ ನಟನಾಗಿ ಕಾಣಿಸಿಕೊಂಡು, ರಿಯಲ್ ನಲ್ಲಿ ಅಕ್ಷರಸಃ ಖಳ ನಾಯಕನೇ .! ಅದನ್ನು ಒತ್ತಿ ಹೇಳುವ ಅಗತ್ಯವಿಲ್ಲಾ ನಾಡಿನ ಪ್ರಜ್ಞಾವಂತ ಜನೆತೆಗೆ ಗೊತ್ತಿರುವಂತದ್ದೇ. ಸುಮಾರು ಘಟನೆಗಳು ಅಚ್ಚರಿಸಿ ಮೂಡಿಸಿವೆ . ಕೆಲವೊಂದು ಬೆಳಕಿಗೆ ಬಂದರೇ ಹಲವೊಂದು ಅಲ್ಲಿಯೇ ಮುದುಡಿ ಹೋಗಿದೆ. ಸ್ವತಃ ಕಟ್ಟಿಕೊಂಡವಳಿಗೆ ಈತ ಕೊಟ್ಟ ಕಾಟ ಅಂತಿಂತ್ತದ್ದಲ್ಲ ಆ ವಿಚಾರದಲ್ಲಿ ಕಂಬಿ ಎಣಿಸಿಯೂ ಬಂದಿದ್ದ.
ತನ್ನ ದೀರ್ಘಕಾಲದ ಸಂಗಾತಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆಂದು ಕಾರಣದಿಂದ ದರ್ಶನ್ ಜೊತೆ ಆತನ ಸ್ನೇಹಿತರೊಂದಿಗೆ ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿಯನ್ನು ಅಪಹರಿಸಿ ಶೆಡ್ ನಲ್ಲಿ ಚಿತ್ರ ಹಿಂಸೆ ನೀಡಿ ಭಯಾನಕ, ಭೀಕರ, ಭೀಬತ್ಸವಾಗಿ ಕೊಲೆಗೈದು ಅದನ್ನು ತನ್ನ ಸ್ನೇಹಿತರಿಗೆ ತಾವೇ ಮಾಡಿದ್ದೂ ಎಂದು ಪೊಲೀಸರ ಮುಂದೆ ಶರಣಾಗುವಂತೆ ಮಾಡಿ ,ಒಳಸಂಚು, ಸಾಕ್ಷ್ಯನಾಶ ಎಂಬ ವಿಚಾರವನ್ನು ಇಟ್ಟುಕೊಂಡು 2024ರ ಜೂನ್ 11ರಂದು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಎಷ್ಟೋ ಹರ ಸಾಹಸ ಪಟ್ಟರೂ ಬೇಲ್ ಮರೀಚಿಕೆ ಯಾದಾಗ ಒಂದಷ್ಟು ದಿನ ನಾಟಕ ಅದೂ ಇದೂ ಮಾಡಿ ಆ ಜೈಲ್ ನಿಂದ ಇಲ್ಲಿಗೆ ಈ ಜೈಲ್ ನಿಂದ ಅಲ್ಲಿಗೆ ಶಿಫ್ಟ್ ಆಗಿ ಅಂತೂ ಒಂದಷ್ಟು ಸಮಯ, ಅನಾರೋಗ್ಯದ ಕಾರಣ ಒಡ್ಡಿ ಹೊರಗಡೆ ಬಂದಿದ್ದ ದರ್ಶನ್ ,ಮತ್ತೆ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇತ್ತ ಜಾಮೀನಿಗೆ ಅದೆಷ್ಟು ಅರ್ಜಿ ಗುಜರಾಯಿಸಿದರೂ ದರ್ಶನ್ ಗೆ ಬೆಲ್ ಸಿಗುತ್ತಿಲ್ಲ ಕಾನೂನು ನಿಜಕ್ಕೂ ಕಠಿಣವಾಗಿದ್ದು ಖಂಡಿತ ಸತ್ಯ. ಇದು ಎಲ್ಲರಿಗೂ ಮಾದರಿಯಬೇಕು.
ಹಲವರ ಅಭಿಪ್ರಾಯದಂತೆ ರೇಣುಕಾ ಸ್ವಾಮಿಯ ಈ ಪ್ರಕರಣವೂ ಸಹಾ ಎಲ್ಲೊ ಹಳ್ಳ ತಪ್ಪಿ ಹೋಗುತ್ತಿತ್ತು ಒಂದೊಳ್ಳೆ ನಾಣ್ಣುಡಿಯಂತೆ ಹತ್ತು ಸರಿ ಕದ್ದ ಕಳ್ಳ ಒಂದು ಸಾರಿ ಸಿಕ್ಕಿ ಹಾಕಿಕೊಳ್ಳೆಲೇ ಬೇಕು ಎನ್ನುವ ಹಾಗೆ ! ಹಾಗಂತ ಆತ ತುಂಬಾನೇ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಅಂಶವನ್ನು ನಾನು ಪ್ರಸ್ತಾಪ ಮಾಡುತ್ತಿಲ್ಲ, ಯಾವುದಾರಲ್ಲೂ ಸಿಕ್ಕಿ ಹಾಕಿ ಕೊಳ್ಳುತ್ತಿರಲಿಲ್ಲ ಎಂದೂ ನಾನು ಹೇಳುತ್ತಿಲ್ಲ ಹಲವರ ಬಾಯಿಯಲ್ಲಿ ಉದುರಿದ ಮಾತು ಅಷ್ಟೇ . ಅದಕ್ಕೆ ಪುಷ್ಟಿ ನೀಡುವಂತ ಘಟನೆಗಳು ನಡೆದಿವೆ ಬಿಡಿ ಅದು ಇಲ್ಲಿ ಅಪ್ರಸ್ತುತ .
ಸೊ ಇದೂ ಕೂಡಾ ಹಾಗೆ ಆಗುತ್ತಿತ್ತೇನೋ ಹೇಗೋ ಪೊಲೀಸರು ಪತ್ತೆ ಹಚ್ಚವಲ್ಲಿ ಯಶಸ್ವಿಯಾದರು. ಒಂದೊಳ್ಳೆ ಕಾಪ್ ಆ ತಂಡದಲ್ಲಿ ಇದ್ದುದ್ದರಿಂದ ಇದೀಗ ದರ್ಶನ ಮುದ್ದೆ ಮುರಿಯ ಬೇಕಾಗಿ ಬಂತು .
ರೇಣುಕಾ ಸ್ವಾಮೀ ಮಾಡಿದ್ದು ತಪ್ಪು ಅಲ್ವೇ ? ತಪ್ಪು ಮಹಾ ತಪ್ಪೇ! ಆದರೆ ಅದಕ್ಕೆ ಶಿಕ್ಷೆ ನೀಡುವ ವ್ಯವಸ್ಥೆ ನಮ್ಮಲ್ಲಿ ಇಲ್ಲವೇ? ಅದನ್ನು ಬಿಟ್ಟು ತಾವೇ ಕಾನೂನು ಕೈಗೆತ್ತಿ ಕೊಂಡರೇ ಪ್ರತಿಫಲ ಇಷ್ಟೇ. ! ಮಾಡಿದ್ದುಣ್ಣೋ ಮಹರಾಯ !! ಹಣ,ಜನ ಬಲ ರಾಜಕೀಯ ಬೆಂಬಲ ,ಇದೆ ಎಂಬ ಕಾರಣಕ್ಕೆ ಇಲ್ಲ ಸಲ್ಲದ ವಿಚಾರಕ್ಕೆ ಕೈ ಹಾಕುವ ಮುಂಚೆ ಆಲೋಚನೆ ಮುಖ್ಯ.ಸೆಲೆಬ್ರೆಟಿಯಾಗಿ ಸಮಾಜದಲ್ಲಿ ಮುನ್ನೋಟದಲ್ಲಿರುವವರು ಈ ತರಹದ ಕ್ರತ್ಯದಲ್ಲಿ ಭಾಗಿಯಾದರೇ ಯುವ ಪೀಳಿಗೆಗಳು ಯಾರನ್ನು ಮಾದರಿಯಾಗಿ ತೆಗದು ಕೊಳ್ಳಬೇಕು? ದರ್ಶನ್ ಉತ್ತಮ ವ್ಯಕ್ತಿ ಸಮಾಜದ ಹಿತಚಿಂತಕ ಸಾಕಷ್ಟು ಸಹಾಯ ಹಸ್ತವನ್ನು ಚಾಚಿದವರು ಎಂಬ ವಿಚಾರವಿದ್ದರೂ ಈ ಒಂದು ತಪ್ಪಿನಿಂದ ಅದ್ಯಾವುದು ಲೆಕ್ಕಕ್ಕೆ ಬರುವುದು ಇಲ್ಲ.ಮೊದಲಾಗಿ ಸಹವಾಸ ದಿಂದ ದೂರ ಇರುವುದೇ ಇದಕ್ಕಿರುವ ದೊಡ್ಡ ಮದ್ದು ಎನ್ನಬಹುದೇನೋ ? ಮಾಡಿದಕ್ಕೆ ಶಿಕ್ಷೆ ಅನುಭವಿಸಲಿ ಆದಷ್ಟು ಬೇಗ ಹೊರಬಂದು ತನ್ನ ತಪ್ಪಿನ ಅರಿವಾಗಿ ಮುಂದೆ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲಿ ಎಂಬ ಆಶಯದೊಂದಿಗೆ.
ಶನಿವಾರ, ಜೂನ್ 21, 2025
ಆನೆ ಬಂತೊಂದು ಆನೆ ..!!
ಸಿದ್ದಾಪುರ ವಾರದ ಸಂತೆ ಬಂದ್ ! ಶಾಲಾ ಕಾಲೇಜುಗಳಿಗೆ 3 ದಿನ ರಜೆ ! ಯಾರೂ ಮನೆಯಿಂದ ಹೊರಗೆ ಬರಬೇಡಿ ,ವಾಹನ ಸವಾರರೇ ಎಚ್ಚರ ವಹಿಸಿ,ಆನೆ ಕಂಡ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ, ಭಯಬೇಡ ಎನ್ನುವ ಅನ್ವಾಂಸ್ಮೆಂಟ್..!!
ಎಲ್ಲರಲ್ಲೂ ಆತಂಕ, ಕುತೂಹಲ ಊರಿಗೆ ಊರೇ ಭಯದ ವಾತಾವರಣದಲ್ಲಿತ್ತು. ಅಂತೂ ಮೂರು ದಿನಗಳ ಬಳಿಕ ಎಲ್ಲವೂ ಸಹಜ ಸ್ಥಿತಿ! ಸ್ಥಳೀಯರಲ್ಲಿ ಬೇಸರ, ಸಪ್ಪೆ ಮೊರೆ !
ಇದು ಕಾಡಿನ ಆನೆ ನಾಡಿಗೆ ಬಂದ ಕಥೆ
ಹಾಸನ ಜಿಲ್ಲೆಯ ದಟ್ಟ ಅರಣ್ಯವೊಂದರಲ್ಲಿ ಕಾಡಾನೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದ್ದರು. ಅದಕ್ಕೆ ಜಿಪಿಎಸ್ ನ್ನು ಅಳವಡಿಸಿ, 'ಹಡ್ಕ ಬಡ್ಕ' ಎಂಬ ನಾಮಧೆಯವನ್ನು ಮಾಡಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೀಸಲು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದರು.
ಅದೇನೋ ಗೊತ್ತಿಲ್ಲ ಒಂದೆರಡು ದಿನ ಅಷ್ಟೇ ತನ್ನ ಕಾಡು, ಬಂಧು-ಬಳಗದವರ ನೆನಪು ಆಯಿತೋ ಏನೋ ಹಡ್ಕ ಬಡ್ಕ ಅಲ್ಲಿಂದ ತಪ್ಪಿಸಿಕೊಂಡು ಬಿಟ್ಟ.ತನ್ನ ಕಾಡನ್ನು ಅರಸುತ್ತಾ,ಅರಸುತ್ತಾ ಬಾಳೆಬರೆ ಘಾಟಿ ಇಳಿದ.ಘಾಟಿ ಇಳಿಯುತ್ತಿದ್ದ ಸಂದರ್ಭ ಒಂದಶ್ಟು ವಾಹನ ಸವಾರರು ಅದನ್ನು ನೋಡಿದ್ದರು. ವೀಡಿಯೋ ಫೋಟೋ ತೆಗೆದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟದ್ದರು.
ಯಾರಿಗೂ ತೊಂದರೆ ಮಾಡದೇ ತನ್ನ ಪಾಡಿಗೆ ರಾಜ್ಯ ಹೆದ್ದಾರಿಯಲ್ಲೇ ತೆರಳುತ್ತಿದ್ದ ಹಡ್ಕ ಬಡ್ಕ, ಸಿದ್ದಾಪುರ ಸಮೀಪದ ಕೂಗಳತೆಯ ದೂರದಲ್ಲಿರುವ ಹೆನ್ನಾಬೈಲು ಅರಣ್ಯ ಸೇರಿ ಬಿಟ್ಟಿದ್ದ.ಇತ್ತ ಅರಣ್ಯ ಇಲಾಖೆಗೆ ಮಾಹಿತಿಯೂ ಹೋಗಿತ್ತು ಹಾಗೆ ಜಿಪಿಎಸ್ ತಂತ್ರಜ್ಞನ ಅಳವಡಿಸಿದ್ದರಿಂದ ಸ್ಥಳೀಯರ ನೆರವಿನಿಂದ ಆನೆಯನ್ನು ಅರಸುವಲ್ಲಿ ಹೆಚ್ಚಿನ ಸಮಯವೂ ಬೇಕಾಗಿಲ್ಲ.
ಒಂಟಿ ಸಲಗ ಬಹಳ ಅಪಾಯಕಾರಿ ಎನ್ನುವ ಮಾತನ್ನು ಸುಳ್ಳಾಗಿಸಿದ್ದ ಈ ಹಡ್ಕ ಬಡ್ಕ ಆನೆ ಸುಮಾರು 150 ಕಿಮೀ ದೂರ ಒಂದೇ ಸಮನೆ ನಡೆದು ಕೊಂಡು ಬಂದರೂ ಯಾರಿಗೂ,ಯಾವುದಕ್ಕೂ ಅನಾಹುತ ಮಾಡಿರಲಿಲ್ಲ. ಆತನ ಮೈಂಡ್ ನಲ್ಲಿ ಇದ್ದಿದ್ದು ತನ್ನ ಕಾಡು ಹಾಗೂ ಪರಿವಾರ ಮಾತ್ರ. ಎಲ್ಲೂ ಕೂಡಾ ವಿಶ್ರಾಂತಿ ಪಡೆಯದೇ ಹಸಿವು,ನಿದ್ರೆ ಬಾಯಾರಿಕೆಯನ್ನೂ ಬದಿಗೆ ಒತ್ತಿ ಆತ ಹಗಳು ಇರುಳು ಸಂಚಾರ ಮಾಡಿ ಸೇರಿದ್ದು ಹೆನ್ನಾ ಬೈಲು ಕಾಡನ್ನು ಅಲ್ಲಿ ಮಾತ್ರ ಆತ ಎರಡು ದಿನ ತಂಗಿದ್ದ ಬಟ್ ರೆಸ್ಟ್ ತೆಗೆದು ಕೊಳ್ಳಲು ನಮ್ಮವರು ಬಿಟ್ಟಿಲ್ಲ!
ಆನೆ ಬಂತು ಆನೆ ಎಂಬ ಕೂಗು ರಾಜ್ಯಾಧ್ಯಂತ ಹರಡಿತ್ತು. ಭಯದ ವಾತಾವರಣ ಮಡುಗಟ್ಟಿತ್ತು.ಆನೆಯನ್ನು ಮರಳಿ ಬಂಧಿಸುವ ಯೋಜನೆ ಸಿದ್ಧವಾಯಿತು.ಮಂಗಳೂರು ಚಿಕ್ಕಮಗಳೂರು ಶಿವಮೊಗ್ಗದ ಸೇರಿದಂತೆ ವಿವಿಧ ಸ್ಥಳಗಳಿಂದ ಸುಮಾರು 150 ಅರಣ್ಯ ಇಲಾಖೆ ಅಧಿಕಾರಿಗಳು,ಪಶು ವೈದ್ಯರು,15 ಜನ ಮಾವುತರು, ಏಕಲವ್ಯ,ಭೀಮ,ಮಹೇಂದ್ರ, ಸೊಮ್ಮಣ್ಣ ,ಬಾಬಣ್ಣ,ಬಹಾದ್ದೂರ್ ಎಂಬ 6 ಸಾಕು ಆನೆಗಳ ನೇತೃತ್ವದ ಕಾರ್ಯಾಚರಣೆ ಪ್ರಾರಂಭವಾಯಿತು.ಅಂತೂ ಹಡ್ಕ ಬಡ್ಕನಿಗೆ ಪಶು ವೈದ್ಯರು ಅರವಳಿಕೆ ಚುಚ್ಚುಮದ್ದು ಕೊಟ್ಟು ಪ್ರಜ್ಞೆ ತಪ್ಪಿಸಿದರು. ಕ್ರೇನ್ ಮೂಲಕ ದೊಡ್ಡ ಟ್ರಕ್ ಗೆ ಆನೆಯನ್ನು ಲೋಡ್ ಮಾಡಿ ಶಿವಮೊಗ್ಗ ಜಿಲ್ಲೆಯ ಸಕ್ರೀಬೈಲ್ ಆನೆ ಶಿಬಿರಕ್ಕೆ ಕೊಂಡುವಯ್ದ್ ಬಿಟ್ಟರು.ಮೊದ ಮೊದಲು ಆತಂಕ ,ಭಯದಲ್ಲಿದ್ದ ಅಲ್ಲಿನ ಸ್ಥಳೀಯರು ಆನೆಯನ್ನು ಲಾರಿಗೆ ಏರಿಸಿದ್ದು ಆನೆಯನ್ನು ಹಿಡಿದು ಇಂಜೆಕ್ಷನ್ ಕೊಟ್ಟುದ್ದನ್ನು ನೋಡಿ ಕೆಲವರ ದುಃಖ ಹೇಳ ತೀರದಾಗಿತ್ತು.ಗಳ ಗಳನೆ ಅತ್ತವರು ಕೂಡ ಇದ್ದಾರೆ.ಯಾರಿಗೂ ಯಾವುದಕ್ಕೂ ಏನೂ ಉಪದ್ರವ ತೊಂದರೆ ಕೊಡದ ಆನೆಯನ್ನು ಹೊತ್ತುವೊಯ್ದು ಮತ್ತೆ ಪಂಜರದಲ್ಲಿ ಕೂಡಿ ಹಾಕುತ್ತರಲ್ಲ ಆನೆಯ ತಪ್ಪಾದರೂ ಏನು ? ಹೆಚ್ಚಿನವರ ಸವಾಲ್ ಗೆ ಜವಾಬ್ ಇಲ್ಲದಾಗಿ ತ್ತು.ಆನೆಯ ಕಣ್ಣಿರು ಧಾರಾಕಾರವಾಗಿ ಇಳಿಯುತ್ತಿತ್ತು ಆನೆ ಮಾವುತ ಅದನ್ನು ಕರ್ಚಿಪ್ ನಿಂದ ಮುಚ್ಚಿಯೂ ಬಿಟ್ಟಿದ್ದ.!!
-shiವು
ಸೋಮವಾರ, ಮಾರ್ಚ್ 10, 2025
ಟೀಮ್ ಇಂಡಿಯಾ ವಿಶ್ವ ಚಾಂಪಿಯನ್ : ಕೀಪಿಂಗ್ ಗೂ ಸೈ.. ಫಿನಿಶಿಂಗ್ ಗೂ..... ನಮ್ಮ ಕೆ ಎಲ್ !
ಟೀಮ್ ಇಂಡಿಯಾ ಕ್ರಿಕೆಟ್ನಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಕಳೆದ ವರ್ಷ ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಸ್ವತಃ ನೇತೃತ್ವ ವಹಿಸಿಕೊಂಡ ವಿಶ್ವಕಪ್ ಒಂಡೇ ಫೈನಲ್ ಪಂದ್ಯದಲ್ಲಿ ಅಹಮದ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಕಣ್ಣೇರಿಟ್ಟ ಭಾರತಡಾ ಕಿಲಾಡಿಗಳು ತನ್ನ ತಪ್ಪನ್ನೆಲ್ಲಾ ಮನವರಿಕೆ ಮಾಡಿಕೊಂಡು ನಂತರ ಎಲ್ಲಾ ಮ್ಯಾಚ್ ನಲ್ಲೂ ಗೆಲುವಿನ ನಗೆ ಬೀರುತ್ತಾ ಬಂದಿದ್ದಾರೆ ಐಸಿಸಿ ಆಯೋಜನೆಯಲ್ಲಿ ಕೆಲವು ತಿಂಗಳ ಮೊದಲು ನಡೆದ ವರ್ಲ್ಡ್ ಕಪ್ ಟೀ20ಯ ಫೈನಲ್ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಮಣಿಸಿ ಕಪ್ಗೆ ಮುತ್ತಿಟ್ಟಿತ್ತು.ಅದೇ ಸತತ ಗೆಲುವಿನ ನಾಗಲೋಟ ಮುಂದುವರೆದು ವಿಶ್ವದಲ್ಲಿ ನಾವೇ ಬಲಶಾಲಿ ಎಂದು ಉಳಿದ ರಾಷ್ಟ್ರಗಳು ಒಪ್ಪಿಕೊಳ್ಳುವಂತೆ ಮಾಡಿತು. ಅಂತೂ ಇತ್ತೀಚಿಗೆ ಪ್ರಾರಭಗೊಂಡು ಐಸಿಸಿ ಆಯೋಜನೆಯ ಪಾಕಿಸ್ತಾನ ನೇತೃತ್ವದಲ್ಲಿ ಸುಮಾರು 12 ವರ್ಷಗಳ ಬಳಿಕ ನಡೆದ ಮಿನಿ ವಿಶ್ವಕಪ್ ಎಂದು ಕರೆಯಿಸಿ ಕೊಳ್ಳುವ ಚಾಂಪಿಯನ್ ಟ್ರೋಫಿಯನ್ನು ಇಂದು ನ್ಯೂಜಿಲ್ಯಾಂಡ್ ವಿರುದ್ದ ದುಬೈನಲ್ಲಿ ನಡೆದ ಜಿದ್ದಾ ಜಿದ್ದಿ ರೋಮಾಂಚನಕಾರಿ ಪಂದ್ಯಾಟದಲ್ಲಿ ಕಪ್ನ್ನ ಎತ್ತಿಕೊಂಡಿದೆ.
ಐದೂ ಮ್ಯಾಚ್ನಲ್ಲೂ ಸೋಲಿಲ್ಲಿದ ಸರದಾರರಂತೆ ಎದುರಾಳಿ ಬಾಂಗ್ಲಾದೇಶ ದಿಂದಲೇ ಮೊದಲ್ ಗೊಂಡು ಕಪ್ ಎತ್ತಿಕೊಳ್ಳುವವರೆಗೂ ಮುಂದುವರೆಯಿತು.ಬಾಲಿಂಗ್ ,ಬ್ಯಾಟಿಂಗ್ ಎರಡರಲ್ಲೂ ಮಿಂಚಿದ ಟೀಮ್ ಇಂಡಿಯಾದಲ್ಲಿ ಎಲ್ಲಾ ಆಟಗಾರರ ಪಾತ್ರವೂ ಪ್ರಮುಖ ವಾಗಿ ಕಾಣಿಸಿತು . ಒಂದೊಂದು ಮ್ಯಾಚ್ನಲ್ಲಿ ಒಬ್ಬೊಬ್ಬರು ಹೀರೊಗಳಾಗಿ ಕಂಡು ಬಂದರು. ಪಾಕಿಸ್ತಾನ ವಿರುದ್ಧ ಕಿಂಗ್ ಕೊಹ್ಲಿ ಗೆಲುವಿನ ರೂವಾರಿಯಾಗಿ ಸೆಂಚುರಿ ಸಿಡಿಸಿದರೇ ,ಅತಿಮೂಲ್ಯವಾದ ಇಂದಿನ ಪಂದ್ಯದಲ್ಲಿ ಒಂದಕ್ಕಿಗೆ ಸುತ್ತಿ ಹಿಂತುರಿಗಿದರು.ಯಾವುದೇ ಮ್ಯಾಚ್ ನಲ್ಲೂ ಅಷ್ಟೊಂದು ಕಾಣಿಕೆ ನೀಡದ ಕ್ಯಾಪ್ಟನ್ ರೋಹಿತ್ ಶರ್ಮಾ ಇಂದಿನ ಮ್ಯಾಚ್ ನಲ್ಲಿ ಹಿಟ್ ಮ್ಯಾನ್ ಆಗಿ ಅಕ್ಷರಸ ಕಂಡು ಬಂದರು,ಗೆಲುವಿಗೆ ಪ್ರಮುಖ ಕಾರಣರಾದರು.ಜೊತೆಗೆ ಮ್ಯಾನ್ ಆಪ್ ದಿ ಮಾಚ್ ಪ್ರಶಸ್ತಿಗೆ ಕೂಡ ಭಾಜನರಾದರು.ಇನ್ನು ಬಿಸಿಸಿಐ ಸೈಡ್ ಲೈನ್ ಮಾಡಿದ್ದ ಶ್ರೇಯಸ್ ಅಯ್ಯರ್ಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿ ಕೊಂಡರು ಪಂದ್ಯದ್ದುದ್ದಕ್ಕೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ಈತ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಸ್ಕೋರ್ ಲಿಸ್ಟ್ನಲ್ಲಿ ಟೀಮ್ ಇಂಡಿಯದ ಪರವಾಗಿ ಪ್ರಥಮ ಹಾಗೂ ಓವರ್ ಆಲ್ ಆಗಿ ಎರಡನೇ ಸ್ಥಾನನ್ನು ತಮ್ಮದಾಗಿಸಿಕೊಂಡರು.ಪ್ರಥಮ ಸ್ಥಾನ ನ್ಯೂಜಿಲ್ಯಾಂಡ್ ನ ರಚಿನ್ ರವೀಂದ್ರ 263 ರನ್ ಸಂಪಾದಿಸಿದ್ದರು ಹಾಗೂ 3 ವಿಕೆಟ್ ಪಡೆದು ಸರಾಸರಿ 4.6ನಲ್ಲಿ ಮ್ಯಾನ್ ಒಫ್ ದಿ ಸೀರಿಸ್ ಪಡೆದುಕೊಂಡರು.ನಮ್ಮ ಕನ್ನಡಿಗ ವರುಣ್ ಚಕ್ರವರ್ತಿ ವಿಕೆಟ್ ಪಡೆದ ಲಿಸ್ಟ್ ನಲ್ಲಿ ಎರಡನೇ ಸ್ಥಾನದಲ್ಲಿ ಕಂಡು ಬಂದರು.,ಮೊದಲ ಸ್ಥಾನ ನ್ಯೂಜಿಲ್ಯಾಂಡ್ ನ ಹೆನ್ರಿಯ ಪಾಲ್ ಆಗಿದ್ದರೇ ಎರಡನೇದು ನಮ್ಮ ಸ್ಪಿನ್ನಿಂಗ್ ಮಾಂತ್ರಿಕ ಚಕ್ರವರ್ತಿ. ಒಂದೇ ಮ್ಯಾಚ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 10 ಓವರ್ ಗೆ 42 ರನ್ ನೀಡಿ ಅಮೂಲ್ಯ ಐದು ವಿಕೆಟ್ ಕಬಳಿಸಿದ್ದರು ಇನ್ನು ಅದೇ ಮ್ಯಾಚ್ನಲ್ಲಿ ನ್ಯೂಜಿಲ್ಯಾಂಡ್ ನ ಫಾಸ್ಟ್ ಬೌಲರ್ ಹೆನ್ರಿ ಕೂಡ ಸೇಮ್ ಟು ಸೇಮ್ ದಾಖಲೆ ನಿರ್ಮಾಣ ಮಾಡಿದ್ದರು .
ಇನ್ನು ಎಲ್ಲಕಿಂತ ಹೆಚ್ಚಾಗಿ ನನ್ನ ಒಡಲಧ್ವನಿಗೆ ಕಾಡಿದ್ದು, ಬೇಡಿದ್ದು ನಮ್ಮ ಕೆ ಎಲ್ ರಾಹುಲ್!ಈತ ಮಾತ್ರ ಅದ್ಬುತ ಪ್ರತಿಭೆ ಎಂಬುದರಲ್ಲಿ ಎರಡು ಮಾತಿಲ್ಲ ಪೊಲಿಟಿಕ್ಸ್ ಹಾಗೂ ಮತ್ತಿತ್ಯಾದಿ ಕಾರಣಗಳಿಗೆ ತನ್ನನ್ನು ತ್ಯಾಗ ಮಾಡುವ ಕೆಎಲ್ಲ್ ಸಿಕ್ಕ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳದೇ ಇರಲಾರರು ಇದರ ಬಗ್ಗೆ ಹೆಚ್ಚು ಹೇಳುವ ಅಗತ್ಯ ಇಲ್ಲ.ಕ್ರಿಕೆಟ್ ನೋಡುಗರು ಕ್ರಿಕೆಟ್ ಪ್ರೇಮಿಗಳು ಖಂಡಿತವಾಗಿಯೂ ಅರಿತುಕೊಂಡಿರುತ್ತಾರೆ. ಟೀಮ್ ಇಂಡಿಯಾದ ಮೆನೇಜ್ಮೆಂಟ್ ಯಾವ ತರಹ ಅವರನ್ನು ಬಳಸಿ ಕೊಳ್ಳುತ್ತಿದ್ದಾರೆ ,ಬಲಿ ಕೊಡುತ್ತಿದ್ದಾರೆ ಎಂದು.! ಆದರೂ ಕಿಂಚಿತ್ ಅಸಮಾಧಾನ ತೋರದೇ ತನ್ನ ಪಾಡಿಗೆ ತಾನು ನ್ಯಾಯ ಒದಗಿಸುತ್ತಾ ಬರುತ್ತಿದ್ದಾರೆ.ನಿಜಕ್ಕೂ ಕ್ರಿಕೆಟ್ ಇತಿಹಾಸದಲ್ಲಿ ಈತನ ಸರಿ ಸಾಟಿ ಬೇರೆ ಯಾರು ಇರಲಿಕ್ಕಿಲ್ಲವೇನೋ ?ಓಪನಿಂಗ್ಗೂ ಸೈ . ಫಿನಿಶಿಂಗ್ಗೂ ಜೈ!! ಓಪನರ್ ಆಗಿ ಬ್ಯಾಟ್ ಬೀಸಬಲ್ಲರು ಐದನೇ,ಎಂಟನೇ ಕ್ರಮಾಂಕದಲ್ಲೂ ಕೂಡ ಬ್ಯಾಟ್ ಮಾಡಬಲ್ಲರು.ಎಲ್ಲಕಿಂತ ಹೆಚ್ಚಾಗಿ ಉತ್ತಮ ಕೀಪರ್ ! ಮೆನೇಜೆಮೆಂಟ್ ಅಪ್ಪಣೆಗನುಗುಣವಾಗಿ ಆಗಾಗ ಕೀಪರ್ , ಮ್ಯಾಚ್ ಫಿನಿಶರ್ ಆಗಿ ಕೂಡ ಕರ್ತವ್ಯ ನಿಭಾಯಿಸುವ ಕೆಲ್ ಉತ್ತಮ ಕ್ರಿಕೆಟಿಗ.ಸೆಮಿಫೈನಲ್ ಮತ್ತು ಫೈನಲ್ ಪಂದ್ಯದಲ್ಲಿ ಫಿನಿಶರ್ ಆಗಿ ತಮ್ಮ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಕೆಎಲ್ಲ್ ನಮ್ಮ ಹೆಮ್ಮೆ. ದಯಮಾಡಿ ಮೆನೇಜ್ಮೆಂಟ್ ಗಮನಹರಿಸಬೇಕು ಆತನ ಜೊತೆ ಬಿಟ್ಟ ಸ್ಥಳ ಭರ್ತಿ ಮಾಡಲು ಅಥವಾ ಕೆರೆಯರ್ ಹಾಳುಗೆಡುವ ರಾಜಕೀಯದಾಟ ಆಡದೇ ಆತನ ಸಾಮರ್ಥ್ಯವನ್ನು ಮನಗಾಣಿ.
-shiವು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)





